Wednesday, August 5, 2026
Wednesday, August 5, 2026
Home Blog Page 77

D.K. Sivakumar ನೂತನ ಸೀಎಂ ಆಗಿ ಡಿ.ಕೆ.ಶಿವಕುಮಾರ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದ ನೇರ ಪ್ರಸಾರ.

0

D.K. Sivakumar ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಇಂದು ಸಂಜೆ 4 ಗಂಟೆಗೆ ಲೋಕಭವನದಲ್ಲಿ ಅಧಿಕಾರ ಸ್ವೀಕರಿಸಲಿರುವ ಸನ್ಮಾನ್ಯ ಡಿ.ಕೆ.ಶಿವಕುಮಾರ್ ಅವರ ಪ್ರಮಾಣ ವಚನ ಕಾರ್ಯಕ್ರಮವನ್ನು 230 ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ನೇರ ಪ್ರಸಾರದಲ್ಲಿ ಸಾರ್ವಜನಿಕರು ವೀಕ್ಷಣೆ ಮಾಡಬಹುದಾಗಿದೆ.

ಬೆಂಗಳೂರಿನ ಲೋಕ ಭವನದ ಗಾಜಿನ ಮನೆಯಲ್ಲಿ ಇಂದು ಸಂಜೆ 4.05ಕ್ಕೆ ಆಯೋಜಿಸಲಾಗಿರುವ ಭವ್ಯ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಹಾಗೂ ಅವರ ಸಂಪುಟದ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಐತಿಹಾಸಿಕ ಮತ್ತು ಮಹತ್ವದ ಕ್ಷಣವನ್ನು ಸಾರ್ವಜನಿಕರು ಕಣ್ತುಂಬಿಕೊಳ್ಳಲು ರಾಜ್ಯದ ಆಯ್ದ 230 ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿದೆ.

ರಾಜ್ಯದ ಜನತೆಗೆ ಈ ಮಹತ್ವದ ಕಾರ್ಯಕ್ರಮವನ್ನು ತಲುಪಿಸುವ ಉದ್ದೇಶದಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ‘ವೃತ್ತಿ ಸೊಲ್ಯೂಷನ್ಸ್ ಲಿಮಿಟೆಡ್’ ಸಂಸ್ಥೆಯ ಸಹಯೋಗದಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ.

D.K. Sivakumar ರಾಜ್ಯಾದ್ಯಂತ ಇರುವ ಪ್ರಮುಖ 230 ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಅಳವಡಿಸಲಾಗಿರುವ ಡಿಜಿಟಲ್ ಡಿಸ್‍ಪ್ಲೇ ಪರದೆಗಳ ಮೂಲಕ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸಂಪೂರ್ಣ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಾಗುತ್ತದೆ.

ದೂರದ ಊರುಗಳಿಗೆ ಪ್ರಯಾಣಿಸುವ ಸಾರ್ವಜನಿಕರು ಹಾಗೂ ಸಾಮಾನ್ಯ ಜನರು ಈ ಐತಿಹಾಸಿಕ ಸಮಾರಂಭದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಈ ತಂತ್ರಜ್ಞಾನ ಆಧಾರಿತ ಉಪಕ್ರಮವನ್ನು ಕೈಗೊಳ್ಳಲಾಗಿದೆ. ಇದರಿಂದಾಗಿ ಸಾರ್ವಜನಿಕರು ತಮ್ಮ ಹತ್ತಿರದ ಬಸ್ ನಿಲ್ದಾಣಗಳಲ್ಲೇ ನಿಂತು ಮುಖ್ಯಮಂತ್ರಿಗಳು ಹಾಗೂ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಉಚಿತವಾಗಿ ಕಣ್ತುಂಬಿಕೊಳ್ಳಬಹುದಾಗಿದೆ.

ಲೋಕ ಭವನದಲ್ಲಿ ನಡೆಯಲಿರುವ ಈ ಅದ್ಧೂರಿ ಕಾರ್ಯಕ್ರಮಕ್ಕೆ ಈಗಾಗಲೇ ಎಲ್ಲಾ ರೀತಿಯ ಸಿದ್ಧತೆಗಳು ಪೂರ್ಣಗೊಂಡಿದ್ದು, ಇಡೀ ರಾಜ್ಯದ ಕಣ್ಣು ಇಂದು ಸಂಜೆ ಬಸ್ ನಿಲ್ದಾಣಗಳ ಡಿಜಿಟಲ್ ಪರದೆಗಳತ್ತ ನೆಡಲಿವೆ.

Keelambi next ಲಿಂಕ್ ಮೂಲಕ ಶಿವಮೊಗ್ಗದ ಕೆ ಲೈವ್
ನ್ಯೂಸ್ ನೇರ ಪ್ರಸಾರ ಮಾಡಲಿದೆ.

Department of Fisheries ಮೀನುಮರಿ ಪಾಲನೆಗಾಗಿ ಸಹಾಯಧನ ಪಡೆಯಲು ಆಸಕ್ತರಿಂದ ಅರ್ಜಿ ಆಹ್ವಾನ.

0

Department of Fisheries ಮೀನುಗಾರಿಕೆ ಇಲಾಖೆಯ ಇಲ್ಲಾ ಪಂಚಾಯತ್ ಯೋಜನೆಯಡಿ ಜಲಾಶಯ/ ಕೆರೆ ಅಂಚಿನಲ್ಲಿ ಕೊಳ ನಿರ್ಮಾಣ ಮಾಡಿಕೊಂಡು ಮೀನುಮರಿ ಪಾಲನೆಗಾಗಿ ಸಹಾಯಧನ ಪಡೆಯಲು ಅಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

Department of Fisheries ಈ ಯೋನೆಯಡಿ ಶಿವಮೊಗ್ಗ-0.20, ಭದ್ರಾವತಿ-0.10, ಸಾಗರ-1.60, ಸೊರಬ-0.20 ಮತ್ತು ಶಿಕಾರಿಪುರ – 0.10 ಹೆಕ್ಟರ್ ಇಲಾಖೆಯಿಂದ ಕೆರೆ ಪಡೆದಿರುವ/ ಲೈಸೆನ್ಸ್ ನೀಡಲಾಗಿರುವ ಜಲಾಶಯಗಳಲ್ಲಿ ನಿಯಮಾನುಸಾರ ಹೂಡಿಕೆಗಳಿಗೆ ಸಹಾಯಧನ ನೀಡಲಾಗುತ್ತಿದ್ದು, ಆಸಕ್ತರು ಜೂ. 16 ರೊಳಗಾಗಿ ಆಯಾ ತಾಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರುಗಳನ್ನು ಸಂಪರ್ಕಿಸಿ ಪೂರ್ಣ ದಾಖಲೆಗಳೊಂದಿಗೆ ಅರ್ಜಿ ನೀಡುವಂತೆ ಮೀನುಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.

Prabhuling Kavalikatti ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ ಸಹಕರಿಸಿ- ಪ್ರಭುಲಿಂಗ ಕವಳಿಕಟ್ಟಿ.

0

Prabhuling Kavalikatti ಭಾರತ ಚುನಾವಣಾ ಆಯೋಗವು ದೇಶದ 16ರಾಜ್ಯಗಳು ಮತ್ತು 03 ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಂತ-ಹಂತವಾಗಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision – SIR) ಮಾಡಲು ಉದ್ದೇಶಿಸಿದ್ದು, ಮತದಾರರು ತಮ್ಮ ಹೆಸರನ್ನು ಹೊಸದಾಗಿ ಸೇರಿಸಲು, ತಿದ್ದುಪಡಿ ಮಾಡಲು ಅಥವಾ ತೆಗೆದುಹಾಕಲು ಈ ಪರಿಷ್ಕರಣೆ ಸದವಕಾಶವಾಗಿದ್ದು, ಅರ್ಹರು ಮಾಹಿತಿ ನೀಡಿ ಸಹಕರಿಸುವಂತೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ತಿಳಿಸಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಮಾತನಾಡಿದ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿ ಮಾತನಾಡುತ್ತಿದ್ದರು. ಜಿಲ್ಲೆಯಲ್ಲಿ ಮತದಾರರ ಪಟ್ಟಿಯನ್ನು ದೋಷರಹಿತವಾಗಿ ಮಾಡುವುದು ಮತ್ತು 18 ವರ್ಷ ಪೂರ್ಣಗೊಳಿಸಿದ ಪ್ರತಿಯೊಬ್ಬ ಅರ್ಹ ಯುವ ಮತದಾರರನ್ನು ಪಟ್ಟಿಗೆ ಸೇರಿಸುವುದು ಪರಿಷ್ಕರಣೆಯ ಮುಖ್ಯ ಉದ್ದೇಶವಾಗಿದೆ ಎಂದ ಅವರು ರಾಷ್ಟ್ರೀಯ ಮತ್ತು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಮುಖಂಡರು ಜಿಲ್ಲೆಯ ಎಲ್ಲಾ ಮತಗಟ್ಟೆಗಳಿಗೆ ಮತಗಟ್ಟೆ ಏಜೆಂಟರನ್ನು ನೇಮಿಸಿ, ಜಿಲ್ಲಾ ಚುನಾವಣಾ ಶಾಖೆಗೆ ಅವರ ವಿವರಗಳನ್ನು ಒದಗಿಸುವಂತೆ ಹಾಗೂ ಪರಿಷ್ಕರಣೆ ಸಂದರ್ಭದಲ್ಲಿ ಮತಗಟ್ಟೆ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ನೀಡಿ ಸಹಕರಿಸುವಂತೆ ಅವರು ಮನವಿ ಮಾಡಿದರು.
ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಕೈಗೊಳ್ಳಲು ಈಗಾಗಲೇ ಅಗತ್ಯವಿರುವ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ ಎಂದ ಅವರು 01.10.2026ನ್ನು ಅರ್ಹತಾ ದಿನಾಂಕವನ್ನಾಗಿ ಪರಿಗಣಿಸಿ ಪರಿಷ್ಕರಣೆ ನಡೆಸಲಾಗುವುದು. ಅದಕ್ಕಾಗಿ ಜೂನ್‌ 20ರಿಂದ 29ರವರೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುವುದಲ್ಲದೇ ಪರಿಷ್ಕರಣಾ ಕಾರ್ಯಕ್ಕೆ ನಿಯೋಜಿತ ಅಧಿಕಾರಿ-ಸಿಬ್ಬಂಧಿಗಳಿಗೆ ತರಬೇತಿಗಳನ್ನು ಆಯೋಜಿಸಲಾಗುವುದು. ಜೂನ್‌ 30ರಿಂದ ಜುಲೈ 29ರವರೆಗಿನ ಒಂದು ತಿಂಗಳ ಅವಧಿಯಲ್ಲಿ ಮತಗಟ್ಟೆ ಅಧಿಕಾರಿಗಳು ಪ್ರತಿ ಮತದಾರರ ಮನೆಗೂ ಹೋಗಿ ಮತದಾರರ ಗುರುತಿನ ಚೀಟಿ ಪರಿಶೀಲಿಸಲಿದ್ದಾರೆ. ಇದೇ ಸಂದರ್ಭದಲ್ಲಿ 2002ರ ಮತದಾರರ ವಿಶೇಷ ಪರಿಷ್ಕರಣೆ ಪಟ್ಟಿ ಹಾಗೂ 2025ರ ಮತದಾರರ ಪಟ್ಟಿಯಲ್ಲಿನ ವ್ಯತ್ಯಾಸಗಳನ್ನು ಪರಿಶೀಲಿಸಲಾಗುವುದು. ಬಿಎಲ್‍ಒಗಳು ಮನೆ ಭೇಟಿಯ ವೇಳೆ ಪ್ರತಿ ಮನೆಗೂ ಎರಡು ನಮೂನೆಗಳನ್ನು ದ್ವಿಪ್ರತಿಯಲ್ಲಿ ನೀಡಿ, ಹೊಸ ಮಾಹಿತಿಯನ್ನು ಹಿಂಪಡೆದು, ಅದರಲ್ಲಿ ಒಂದು ನಮೂನೆಯನ್ನು ಅಧಿಕಾರಿಗಳು ಸಹಿ ಮಾಡಿ ಮತದಾರರಿಗೆ ಹಿಂದಿರುಗಿಸಲಿದ್ದಾರೆ. ಈ ಸಂದರ್ಭದಲ್ಲಿ ಚುನಾವಣಾ ಆಯೋಗವು ಸೂಚಿಸಿದ 12 ರೀತಿಯ ಮಾಹಿತಿಯಲ್ಲಿ ಯಾವುದಾದರೊಂದನ್ನು ಪುರಾವೆಯಾಗಿ ಪಡೆದುಕೊಳ್ಳುವರು ಎಂದರು.
Prabhuling Kavalikatti ಮತದಾರರ ಪಟ್ಟಿಯ ಕರಡನ್ನು ಆಗಸ್ಟ್‌ 05 ಪ್ರಕಟಿಸಲಾಗುವುದು. ಈ ಕರಡು ಪ್ರತಿಯ ಕುರಿತು ಮತದಾರರು ತಮ್ಮ ಆಕ್ಷೇಪಣೆ-ಅಹವಾಲುಗಳನ್ನು ಸೆಪ್ಟಂಬರ್‌ 04ರೊಳಗಾಗಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಈ ಆಕ್ಷೇಪಣೆಗಳನ್ನು ಅಕ್ಟೋಬರ್‌ 03ರೊಳಗಾಗಿ ಇತ್ಯರ್ಥಗೊಳಿಸಲಾಗುವುದು. ಅಕ್ಟೋಬರ್‌ 10ರಂದು ಮತದಾರರ ಪಟ್ಟಿಯ ಅಂತಿಮ ಕರಡನ್ನು ಪ್ರಕಟಿಸಲಾಗುವುದು ಎಂದರು.
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕುರಿತಂತೆ ಎಲ್ಲ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿ ತಿಳಿಸಿದ್ದು, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ ಸಹಕಾರ ಕೋರಿರುವುದಾಗಿ ತಿಳಿಸಿದ ಅವರು, ಮತದಾರರ ಪಟ್ಟಿಯ ಪರಿಷ್ಕರಣೆ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರನ್ನು ಬೂತ್ ಮಟ್ಟದ ಅಧಿಕಾರಿಗಳನ್ನಾಗಿ ಬಳಸಿಕೊಳ್ಳಲಾಗುವುದು. ಪ್ರತಿ ಬೂತ್‌ಗೆ ಏಜೆಂಟ್‌ಗಳನ್ನು ನೇಮಕ ಮಾಡುವಂತೆ ರಾಜಕೀಯ ಪಕ್ಷಗಳ ಮುಖಂಡರಿಗೆ ಸೂಚಿಸಲಾಗಿದೆ ಎಂದರು.
ಶಿವಮೊಗ್ಗ ಜಿಲ್ಲೆಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ ಕೈಗೊಳ್ಳಲು 1793 ಮತಗಟ್ಟೆ ಮಟ್ಟದ ಅಧಿಕಾರಿಗಳು ಪರಿಷ್ಕರಣೆ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. 01.06.2026 ರಂತೆ ಜಿಲ್ಲೆಯಲ್ಲಿ ಒಟ್ಟು 15,26,829 ಮತದಾರರನ್ನು ಈ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಒಳಪಡಿಸಲಾಗಿದೆ. ವಿಶೇಷ ಸಮಗ್ರ ಪರಿಷ್ಕರಣೆಯು ಮತದಾರರು, ರಾಜಕೀಯ ಪಕ್ಷಗಳು ಹಾಗೂ ಚುನಾವಣಾ ಆಯೋಗದ ಎಲ್ಲಾ ಹಂತಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಒಳಗೊಂಡಿರುವ ಪಾರದರ್ಶಕ ಪ್ರಕ್ರಿಯೆಯಾಗಿದೆ ಎಂದ ಅವರು, ಪ್ರಸ್ತುತ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಂದ 4376 ಬೂತ್ ಮಟ್ಟದ ಏಜೆಂಟರನ್ನು ನೇಮಕ ಮಾಡಲಾಗಿದೆ. ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ್‌, ರಾಜಕೀಯ ಪಕ್ಷಗಳ ಮುಖಂಡರಾದ ಮಾಲತೇಶ್‌, ಜಗದೀಶ್‌, ಶಿವಾನಂದ್‌, ದೇವರಾಜ್‌, ಎಸ್.ಕೆ.ಪ್ರಭು, ಷಣ್ಮುಖಪ್ಪ, ಎಂ.ನಾರಾಯಣ್‌, ದೀಪಕ್‌ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.

Akashavani Bhadravati ಆಕಾಶವಾಣಿ-90″ಬಾನುಲಿ ಬರಹ” ಕುರಿತು ಭದ್ರಾವತಿ ಬಾನುಲಿ ಕೇಂದ್ರದಲ್ಲಿ ವಿಶೇಷ ಕಾರ್ಯಾಗಾರ .

0

Akashavani Bhadravati ಆಕಾಶವಾಣಿಗೆ 90 ವರ್ಷ ತುಂಬುತ್ತಿದ್ದು, ದೇಶದ ಪ್ರಥಮ ಎಲೆಕ್ಟ್ರಾನಿಕ್ ಮಾಧ್ಯಮವಾಗಿ ಆರಂಭವಾದ ಆಕಾಶವಾಣಿ ಹತ್ತು ಹಲವು ಪ್ರತಿಭೆಗಳನ್ನು ಹೊರತಂದಿದೆ ಎಂದು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥ ಎಸ್.ಆರ್.ಭಟ್ ಹೇಳಿದರು.

ಆಕಾಶವಾಣಿಗೆ 90ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಆಕಾಶವಾಣಿ ಭದ್ರಾವತಿ ಹಾಗೂ ಕುವೆಂಪು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಸಹಯೋಗದಲ್ಲಿ “ಬಾನುಲಿ ಬರಹ” ವಿಶೇಷ ಕಾರ್ಯಾಗಾರದಲ್ಲಿ ಮಾತನಾಡಿ, ಪ್ರತಿ ದಿನ ವಿವಿಧ ರೀತಿಯ ಕಾರ್ಯಕ್ರಮ ನೀಡುತ್ತಿದೆ. ಪ್ರತಿಕೋದ್ಯಮದ ವಿದ್ಯಾರ್ಥಿಗಳು ಸಂಶೋಧಕರಾಗಿ ವಸ್ತುನಿಷ್ಟ ವರದಿ ಮಾಡಿದರೆ ಜನಮನಗೆಲ್ಲಲು ಸಾಧ್ಯ ಎಂದು ತಿಳಿಸಿದರು.

ಕುವೆಂಪು ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಸತೀಶ್ ಕುಮಾರ್ ಅಂಡಿಂಜಿ ಅವರು ಪತ್ರಿಕೆ ಮತ್ತು ಆಕಾಶವಾಣಿ ಬರಹದ ವ್ಯತ್ಯಾಸ ತಿಳಿಸುಸುವುದರೊಂದಿಗೆ ಆಕಾಶವಾಣಿ ನಿಖರ ಹಾಗೂ ಸತ್ಯನಿಷ್ಟೆಗೆ ಹೆಸರಾಗಿದೆ ಮತ್ತು ತನ್ನ ಬಾಲ್ಯದ ಗೆಳೆಯ ಆಕಾಶವಾಣಿ ಆಗಿತ್ತು ಎಂದರು.

ಆಕಾಶವಾಣಿಯ ತಾಂತ್ರಿಕ ವಿಭಾಗದ ಮುಖ್ಯಸ್ಥ ಎಸ್.ಎಸ್.ಕೃಷ್ಣಪ್ಪ ಮಾತನಾಡಿ, ಇಂದು ರೇಡಿಯೋ ಕೇವಲ ರೇಡಿಯೋದಲ್ಲಿ ಅಷ್ಟೇ ಅಲ್ಲದೆ ಮೊಬೈಲ್ ಆ್ಯಪ್ ಹಾಗು ಡಿಜಿಟಲ್ ಮಿಡಿಯಾದಲ್ಲಿ ಜಗತ್ತಿನಾದ್ಯಂತ ಕೇಳಬಹುದು ಎಂದರು.

ನಾಟಕ ರಚನೆ, ಉದ್ಘೋಷಕರ ಬರವಣಿಗೆ, ಕೃಷಿ ಬರವಣಿಗೆ, ಜಾನಪದ ಬರವಣಿಗೆ ಬಗ್ಗೆ ಎಂ.ಕೆ.ಶಿವಕುಮಾರ್, ಎಸ್.ಎಂ.ಸುಧಾಕರ್ ಹಾಗೂ ಜಾನಪದ ತಜ್ಞ ಬಸವರಾಜ ನೆಲ್ಲಿಸರ ಅವರು ಚರ್ಚಿಸಿದರು. ಜಿ ವಿಜಯಕುಮಾರ್ ಕೇಳುಗರ ಬರವಣಿಗೆ ಬಗ್ಗೆ ಮಾಹಿತಿ ನೀಡಿದರು.

Akashavani Bhadravati ಡಾ. ಬಸವರಾಜ ಗುಬ್ಬಿ ಅವರ ನಿರೂಪಣೆ ಹಾಗು ವಿದ್ಯಾದೇವಿ ಕಾರಂತ್ ಅವರು ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ಭದ್ರಾವತಿ ಹಾಗೂ ಚಿತ್ರದುರ್ಗ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥ ಎಸ್.ಆರ್.ಭಟ್ ಅಧ್ಯಕ್ಷತೆ ವಹಿಸಿದ್ದರು.

ಬಾನುಲಿ ನಾಟಕದದಲ್ಲಿ ಪಿ.ಹೆಚ್.ಡಿ ಪಡೆದಿರುವ ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥ ಡಾ. ಎನ್.ಸುಧೀಂದ್ರ ಅವರು ರೇಡಿಯೊ ನಾಟಕ ರಚನೆಯ ಮೂಲ ಪರಿಕರಗಳ ಬಗ್ಗೆ ಸೋದಾಹರಣ ಪರಿಚಯಿಸಿದರು.
ಕತೆ, ಪಾತ್ರಗಳು, ನಿರೂಪಣೆ,ಸನ್ನಿವೇಶಗಳ ಸಂಯೋಜನೆ,
ಸಾಮಾಜಿಕ ಸ್ವಾಸ್ಥ್ಯ ಕಲಕದ ರೀತಿಯ ಸಂಭಾಷಣೆ , ವಸ್ತು ಸಂಘರ್ಷದ ಬೆಳವಣಿಗೆಯ‌ ಮೂಲಕ ಕೇಳುಗರ ಆಸಕ್ತಿಯನ್ನ ,ಕಲ್ಪನಾ ಸಾಮರ್ಥ್ಯ ಬೆಳೆಸುತ್ತಾ ಸಾಗುವ ಬರಹ,ಶೈಲಿಯಿಂದ ರೇಡಿಯೊ ನಾಟಕ ಕೇಳುಗರ ಮನಸ್ಸಿನಾಳಕ್ಕೆ ಪರಿಣಾಮ ಬೀರುತ್ತದೆ ಎಂದರು.

ಹಿರಿಯ ಉದ್ಘೋಷಕ ಎಂ.ಕೆ.ಶಿವಕುಮಾರ್, ರೋಟರಿಯ ಜಿ.ವಿಜಯಕುಮಾರ್, ಡಾ. ಎಸ್.ಎಂ.ಸುಧಾಕರ್ ಅವರು ಬಾನುಲಿಯ ವಿವಿಧ ಪ್ರಕಾರದ ಬರವಣಿಗೆ ಬಗ್ಗೆ ಮಾಹಿತಿ ನೀಡಿದರು.

Shivamogga News ಕಿರ್ಲೋಸ್ಕರ್ ಫೆರಸ್ ಇಂಡಸ್ಡ್ರೀಸ್ ನಲ್ಲಿ ವಯೋನಿವೃತ್ತಿಹೊಂದಿದ ಅಧಿಕಾರಿಗಳಿಗೆ ಬೀಳ್ಕೊಡುಗೆ.

0

Shivamogga News ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಆವರಣದಲ್ಲಿ ದಿನಾಂಕ 01-06-2026 ರಂದು ವಯೋನಿವೃತ್ತಿ ಹೊಂದಿದ ಕಾರ್ಮಿಕರಾದ ಶ್ರೀ ಅರ್ಜುನ್ ವಜಂತ್ರಿ ಹಾಗೂ ಶ್ರೀ ಎಸ್. ಎನ್. ಗುರುರಾಜ ಅವರ ಗೌರವಾರ್ಥವಾಗಿ ವಿದಾಯ ಸಮಾರಂಭವನ್ನು ಆಯೋಜಿಸಲಾಗಿತ್ತು.

ಶ್ರೀ ಅರ್ಜುನ್ ವಜಂತ್ರಿ ಅವರು ಮೌಲ್ಡಿಂಗ್ ವಿಭಾಗದಲ್ಲಿ ಆಪರೇಟರ್ ಆಗಿ 31 ವರ್ಷ 8 ತಿಂಗಳುಗಳ ಕಾಲ ಸಂಸ್ಥೆಗೆ ಸೇವೆ ಸಲ್ಲಿಸಿದ್ದು, ಪೌಂಡ್ರಿ ವಿಭಾಗದ ವಿವಿಧ ಘಟಕಗಳಲ್ಲಿ ಕಾರ್ಯನಿರ್ವಹಿಸಿ ತಮ್ಮ ಅನುಭವ ಮತ್ತು ಕಾರ್ಯನಿಷ್ಠೆಯಿಂದ ಗುರುತಿಸಿಕೊಂಡಿದ್ದರು. ವಿಶೇಷವಾಗಿ ಕೋರ್ ಸೆಟ್ಟಿಂಗ್ ಹಾಗೂ ಕೋರ್ ಹ್ಯಾಂಡ್ಲಿಂಗ್ ಕಾರ್ಯಗಳಲ್ಲಿ ಪರಿಣತಿ ಹೊಂದಿದ್ದ ಅವರು, ಗುಣಮಟ್ಟದ ಕೋರ್‌ಗಳನ್ನು ಸಮಯಕ್ಕೆ ಸರಿಯಾಗಿ ಮೌಲ್ಡಿಂಗ್ ವಿಭಾಗಕ್ಕೆ ಒದಗಿಸುವ ಮೂಲಕ ಉತ್ಪಾದನಾ ಪ್ರಕ್ರಿಯೆಯಲ್ಲಿ ಗಮನಾರ್ಹ ಕೊಡುಗೆ ನೀಡಿದ್ದರು.

ಅದೇ ರೀತಿ, ಶ್ರೀ ಎಸ್. ಎನ್. ಗುರುರಾಜ ಅವರು ಯುಟಿಲಿಟಿ ವಿಭಾಗದಲ್ಲಿ 31 ವರ್ಷ 10 ತಿಂಗಳುಗಳ ಕಾಲ ಸೇವೆ ಸಲ್ಲಿಸಿದ್ದು, ಕಂಪ್ರೆಸರ್‌ಗಳ ನಿರ್ವಹಣೆ ಮತ್ತು ದುರಸ್ತಿಯಲ್ಲಿ ತಮ್ಮ ಪರಿಣತಿಯನ್ನು ತೋರಿದ್ದರು. ತಮ್ಮ ತಾಂತ್ರಿಕ ಜ್ಞಾನ ಹಾಗೂ ಸಮರ್ಪಿತ ಸೇವೆಯಿಂದ ವಿಭಾಗದ ಕಾರ್ಯಕ್ಷಮತೆಯನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದರು.

Shivamogga News ಕಾರ್ಖಾನೆಯ ಮಾನವ ಸಂಪನ್ಮೂಲ ಮತ್ತು ಸಾಮಾನ್ಯ ಆಡಳಿತ ವಿಭಾಗವು ಈ ಸಮಾರಂಭವನ್ನು ಆಯೋಜಿಸಿತ್ತು. ಸಮಾರಂಭದಲ್ಲಿ ಪೌಂಡ್ರಿ ವಿಭಾಗದ ಹಿರಿಯ ಉಪಾಧ್ಯಕ್ಷರಾದ ಶ್ರೀ ಜಿ.ಎಸ್. ಕೃಷ್ಣಮೂರ್ತಿ, ಬೀಡುಕಬ್ಬಿಣ ವಿಭಾಗದ ಉಪಾಧ್ಯಕ್ಷರಾದ ಶ್ರೀ ಚಂದ್ರಶೇಖರ ಚಾರಿ, ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷರಾದ ಶ್ರೀ ಶಿವಯ್ಯ ಸ್ವಾಮಿ ಹಾಗೂ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಬಸವರಾಜ ಕಂಠಿ ಅವರು ನಿವೃತ್ತ ಉದ್ಯೋಗಿಗಳ ಸೇವೆ, ಸಾಧನೆ ಹಾಗೂ ಸಂಸ್ಥೆಯ ಬೆಳವಣಿಗೆಯಲ್ಲಿ ಅವರ ಕೊಡುಗೆಯನ್ನು ಸ್ಮರಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳಾದ ಶ್ರೀ ಜೆ.ಎಸ್. ಸತೀಶ್, ಶ್ರೀ ಕಿರಣ್ ಶೇಜೇಕರ್, ಕಾರ್ಮಿಕ ಸಂಘದ ಪದಾಧಿಕಾರಿಗಳು, ವಿವಿಧ ವಿಭಾಗಗಳ ಅಧಿಕಾರಿಗಳು ಹಾಗೂ ಸಹೋದ್ಯೋಗಿಗಳು ಉಪಸ್ಥಿತರಿದ್ದು, ನಿವೃತ್ತಿ ಹೊಂದಿದ ಇಬ್ಬರು ಉದ್ಯೋಗಿಗಳಿಗೆ ಗೌರವ ಸಲ್ಲಿಸಿ ಅವರ ಮುಂದಿನ ಜೀವನ ಸುಖ, ಶಾಂತಿ ಮತ್ತು ಆರೋಗ್ಯದಿಂದ ಕೂಡಿರಲೆಂದು ಶುಭ ಹಾರೈಸಿದರು.

“ಕರ್ತವ್ಯದಲ್ಲಿ ತೋರಿದ ನಿಷ್ಠೆಯೇ ವ್ಯಕ್ತಿಯ ನಿಜವಾದ ಸಂಪತ್ತು; ನಿವೃತ್ತಿ ಸೇವೆಗೆ ಅಂತ್ಯವಾದರೂ, ಸಾಧನೆಗಳ ನೆನಪು ಎಂದೆಂದಿಗೂ ಜೀವಂತವಾಗಿರುತ್ತದೆ.”

ಮುರುಳೀಧರ್ ನಾಡಿಗೇರ್

ಜಿಲ್ಲೆಯಾದ್ಯಂತ ಮಳೆ ಆರಂಭ.ಭತ್ತ ಮತ್ತು ಮುಸುಕಿನ ಜೋಳ, ದ್ವಿದಳಧಾನ್ಯ, ಎಣ್ಣೆಕಾಳು ಬೆಳೆ ಬಿತ್ತನೆಗೆ ಸಕಾಲ. ಕೃಷಿ ಇಲಾಖೆಯಿಂದ ಮಾರ್ಗದರ್ಶಿ ಮಾಹಿತಿ.

0

2026 ರ ಮುಂಗಾರು ಜಿಲ್ಲೆಯಾದ್ಯಂತ ಪ್ರಾರಂಭವಾಗಿದ್ದು, ಜಿಲ್ಲೆಯಲ್ಲಿ ಪ್ರಮುಖ ಕೃಷಿ ಬೆಳೆಗಳಾದ ಭತ್ತ ಮತ್ತು ಮುಸುಕಿನ ಜೋಳ ಹಾಗೂ ಅಲ್ಪ ಪ್ರಮಾಣದಲ್ಲಿ ದ್ವಿದಳ ಧಾನ್ಯ ಮತ್ತು ಎಣ್ಣೆಕಾಳು ಬೆಳೆಗಳ ಬಿತ್ತನೆ ಕಾರ್ಯ ಪ್ರಾರಂಭವಾಗಿದೆ.

ಈ ಸಮಯದಲ್ಲಿ ಜಿಲ್ಲೆಯ ರೈತರಿಗೆ ಪ್ರಮುಖವಾಗಿ ಬಿತ್ತನೆ ಬೀಜಗಳು ಹಾಗೂ ರಸಗೊಬ್ಬರಗಳ ದಾಸ್ತಾನುಗೊಳಿಸಲಾಗಿದ್ದು ಬಿತ್ತನೆಗೆ ಮುನ್ನ ರೈತರು ಈ ಕೆಳಕಂಡ ಕ್ರಮಗಳನ್ನು ಅನುಸರಿಸುವಂತೆ ಜಂಟಿ ಕೃಷಿ ನಿರ್ದೇಶಕರು ಸಲಹೆ ನೀಡಿರುತ್ತಾರೆ.

ಬೆಳೆಗಳಿಗೆ ಅನುಗುಣವಾಗಿ ಕ್ರಮಬದ್ಧವಾಗಿ ಭೂಮಿ ಸಿದ್ಧತೆ ಕೈಗೊಳ್ಳುವುದು. ಬೀಜ, ಗೊಬ್ಬರ, ಕೀಟನಾಶಕ ಅಥವಾ ಇನ್ನತರೆ ಯಾವುದೇ ಕೃಷಿ ಪರಿಕರಗಳನ್ನು ಅಧೀಕೃತ ಮಾರಾಟ ಮಳಿಗೆಗಳಿಂದಲೇ ಖರೀದಿಸುವುದು. 2026 ರ ಮುಂಗಾರಿನಲ್ಲಿ ಹವಾಮಾನ ವರದಿಗಳ ಮುನ್ಸೂಚನೆಯಂತೆ ಎಲ್-ನಿನೋ ಕಾರಣದಿಂದ ವಾಡಿಕೆಗಿಂತ ಮಳೆಯ ಪ್ರಮಾಣ ಶೇ.90 ರಿಂದ 92 ರಷ್ಟು ಕಡಿಮೆಯಾಗುವ ಸಾಧ್ಯತೆಯಿದ್ದು ರೈತರು ಹವಾಮಾನ ವರದಿಗಳನ್ನು ಗಮನಿಸಿ ಬಿತ್ತನೆ ಹಾಗೂ ಇತರೆ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವುದು.

ಬೀಜಗಳನ್ನು ಬಿತ್ತುವ ಮುನ್ನ ಬೆಳೆಗನುಣವಾಗಿ ಸಾಕಷ್ಟು ತೇವಾಂಶವಿರುವುದನ್ನು ಖಾತರಿ ಪಡಿಸಿಕೊಂಡು ಬಿತ್ತನೆ ಮಾಡುವುದು. ತೇವಾಂಶ ಕಡಿಮೆ ಇದ್ದಲ್ಲಿ ಬೀಜವು ಮೊಳಕೆ ಬಂದು ಮಣ್ಣಿನಿಂದ ಹೊರಗೆ ಬರಲಾಗದೇ ಭೂಮಿಯಲ್ಲಿಯೇ ಮುರುಟಿ ಹೋಗುವ ಸಾಧ್ಯತೆಯಿರುತ್ತದೆ.

ಜಿಲ್ಲೆಯಲ್ಲಿ ರೈತರು ಬೆಳೆಗಳಿಗೆ ಅತಿಯಾದ ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಿದ್ದು, ಸಾಮಾನ್ಯವಾಗಿ ಸಾರಜನಕ (ಯೂರಿಯಾ) ಹಾಗೂ ರಂಜಕಯುಕ್ತ ಕಾಂಪ್ಲೆಕ್ಸ್ ರಸಗೊಬ್ಬರ ಬಳಕೆ ಹೆಚ್ಚಾಗಿ ಮಾಡುತ್ತಿದ್ದು ಈ ರಸಗೊಬ್ಬರದಲ್ಲಿ ಪೊಟ್ಯಾಷ್ ಅಂಶವಿರುವುದಿಲ್ಲ. ಪೊಟ್ಯಾಷ್ ಪೋಷಕಾಂಶವು ಬೆಳೆಗಳಿಗೆ ರೋಗ ಹಾಗೂ ಕೀಟ ಬಾಧೆಯನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ ಕಾಳುಗಳನ್ನು ಸದೃಢಗೊಳಿಸಿ ಹೆಚ್ಚು ತೂಕ ಬರುವಂತೆ ಮಾಡುತ್ತದೆ. ಇದರಿಂದ ಇಳುವರಿಯು ಹೆಚ್ಚಾಗುವುದು.

ಕಾರಣ ರೈತರು ಬಿತ್ತನೆ ಸಮಯದಲ್ಲಿ ಸಾರಜನಕ, ರಂಜಕ ಹಾಗೂ ಪೊಟ್ಯಾಷ್ ಪೋಷಕಾಂಶಗಳನ್ನು ಹೊಂದಿರುವ ಕಾಂಪ್ಲೆಕ್ಸ್ ರಸಗೊಬ್ಬರಗಳನ್ನು 10:26:26, 15:15:15, 12:36:16, 14:35:14, 17:17:17, 14:28:14, 19:19:19, 20:10:10 ರಂತೆ ಬಳಸುವುದು ಸೂಕ್ತ.
ಇದಲ್ಲದೇ ಬೆಳೆಗಳ ಬೆಳವಣಿಗೆ ಹಂತದಲ್ಲಿ ರೈತರು ಯಥೇಚ್ಛವಾಗಿ ಸಾರಜನಕ (ಯೂರಿಯಾ) ರಸಗೊಬ್ಬರವನ್ನು ಮೇಲುಗೊಬ್ಬರವಾಗಿ ಬಳಸುತ್ತಿದ್ದು, ಇದರಿಂದ ಬೆಳೆಗಳಿಗೆ ರೋಗ ಮತ್ತು ಕೀಟ ಬಾಧೆಗಳು ಹೆಚ್ಚಾಗುವ ಸಾಧ್ಯತೆಗಳಿರುತ್ತದೆ ಕಾರಣ, ರೈತರು ಹವಾಮಾನ ಆಧರಿಸಿ ಶಿಫಾರಸ್ಸು, ಪ್ರಮಾಣದಲ್ಲಿ ಯೂರಿಯಾ ರಸಗೊಬ್ಬರ ಬಳಸಲು ಕ್ರಮವಹಿಸುವುದು. ಮೇಲು ಗೊಬ್ಬರ ಬಳಸುವಾಗ ಹರಳು ರೂಪದ ಯೂರಿಯಾ ಗೊಬ್ಬರದ ಬದಲು ನವೀನ ತಾಂತ್ರಕತೆಯ, ಸಿಂಪರಣೆ ಮಾಡಬಹುದಾದ, ದ್ರವರೂಪದ ನ್ಯಾನೊ ಪ್ಲಸ್ ಯೂರಿಯಾ ಅಥವಾ ನ್ಯಾನೋ ಡಿ.ಎ.ಪಿ. ಗಳನ್ನು ಬಳಸುವುದು. ಇವುಗಳನ್ನು ಬಳಸುವುದರಿಂದ ನೇರವಾಗಿ ಎಲೆಗಳ ಮೇಲೆ ಸಿಂಪರಣೆ ಮಾಡುವುದರಿಂದ ಬೆಳೆಗಳು ನೇರವಾಗಿ ಪೋಷಕಾಂಶಗಳನ್ನು ಹೀರಿಕೊಂಡು ಶೀಘ್ರವಾಗಿ ಬೆಳೆಯುತ್ತವೆ ಹಾಗೂ ಪರಿಸರಕ್ಕೆ ಆಗುವ ಹಾನಿ ಕಡಿಮೆ ಮಾಡಬಹುದು.
ಯೂರಿಯಾ ಗೊಬ್ಬರಕ್ಕೆ ಪರ್ಯಾಯವಾಗಿ ಅಮೋನಿಯಮ್ ಸಲ್ಪೇಟ್ ಗೊಬ್ಬರ ಹಾಗೂ ಡಿ.ಎ.ಪಿ ಗೊಬ್ಬರಕ್ಕೆ (ರಂಜಕ) ಪರ್ಯಾಯವಾಗಿ ಸಿಂಗಲ್ ಸೂಪರ್ ಫಾಸ್ಪೇಟ್ ಅಥವಾ ಟ್ರಿಪಲ್ ಸೂಪರ್ ಫಾಸ್ಪೇಟ್ ಬಳಸುವುದು. ಭೂಮಿಗೆ Fermented Organic Manure/Liquid Fermented Organic Manure ಅಥವಾ ಇನ್ನತರೆ ಸಾವಯವ ಗೊಬ್ಬರಗಳನ್ನು ಭೂಮಿಗೆ ಸೇರಿಸುವುದು. ಜೈವಿಕ ಗೊಬ್ಬರಗಳ ಬಳಕೆ ಹಾಗೂ ವಿವೇಚನಾತ್ಮಕ ರಸಗೊಬ್ಬರಗಳ ಬಳಕೆಗೆ ಉತ್ತೇಜಿಸುವುದು. ಈಗಾಗಲೇ ಮಣ್ಣಿನಲ್ಲಿ ದೊರೆಯದ ಸ್ಥಿತಿಯಲ್ಲಿರುವ ರಂಜಕವನ್ನು ಬೆಳೆಗಳಿಗೆ ಲಭ್ಯವಾಗುವಂತೆ ಮಾಡುವ ರಂಜಕ ಕರಗಿಸುವ ಹಾಗೂ ಮೈಕೋರೈಝಾ ಜೈವಿಕ ಗೊಬ್ಬರಗಳನ್ನು ಸೇರಿಸಲು ಕ್ರಮವಹಿಸುವುದು. ಅಧಿಕೃತ ಮಾರಾಟಗಾರರಿಂದ ಬಿಲ್ ಪಡೆದು ಕೃಷಿ ಪರಿಕರಗಳನ್ನು ಖರೀದಿಸುವುದು ಹಾಗೂ ನಕಲಿ ಬಿತ್ರನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳ ಮಾರಾಟ ಕಂಡುಬಂದಲ್ಲಿ ಕೂಡಲೇ ಇಲಾಖೆಗೆ ದೂರು ಸಲ್ಲಿಸುವುದು.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯನ್ನು ಭೇಟಿ ಮಾಡುವುದು.

ಜೂನ್ 3. ಶಿವಮೊಗ್ಗದ ಭಾರತಿ ಕಾಲೋನಿ,ಪಂಚವಟಿ ಕಾಲೋನಿ, ಬಿ.ಹೆಚ್.ರಸ್ತೆ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ.

0

ಶಿವಮೊಗ್ಗ ನಗರ ಉಪವಿಭಾಗ-2ರ ಘಟಕ-5ರ ವ್ಯಾಪ್ತಿಯ ಬಿ.ಹೆಚ್.ರಸ್ತೆಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿದ್ದು, ಜೂ. 03 ರಂದು ಬೆಳಗ್ಗೆ 6.00 ರಿಂದ 10.00ರವರೆಗೆ ಭಾರತಿ ಕಾಲೋನಿ, ಪಂಚವಟಿ ಕಾಲೋನಿ, ಬಿ.ಹೆಚ್.ರಸ್ತೆ, ಎನ್.ಟಿ.ರಸ್ತೆ, ಜೆ.ಸಿ.ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

ಜೂನ್ 5. ಶಿವಮೊಗ್ಗಎಪಿಎಂಸಿ ಪ್ರಾಂಗಣದಲ್ಲಿ “ಹಣ್ಣಿನ ಮೇಳ”. ಫಲಪ್ರಿಯರಿಗೆ ಸುಗ್ಗಿ

0

ಶಿವಮೊಗ್ಗ ಜಿಲ್ಲಾ ತೋಟಗಾರಿಕೆ ಬೆಳೆಗಾರರ ಉತ್ಪನ್ನ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘವು ಜೂ. 05 ರಂದು ಬೆಳಗ್ಗೆ 10.00ಕ್ಕೆ ನಗರದ ವಿನೋಬನಗರ 100 ಅಡಿ ರಸ್ತೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದ ಹಾಪ್ ಕಾಮ್ಸ್ ಜಾಗದಲ್ಲಿ ಹಣ್ಣಿನ ಮೇಳ ಆಯೋಜಿಸಿದ್ದು, ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಮತ್ತು ನಿಗಮ ಮಂಡಳಿಯ ಅಧ್ಯಕ್ಷರುಗಳ ಭಾಗವಹಿಸಿ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಹಾಪ್‌ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

ಆಶಾಕಿರಣ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಗೆ ಪ್ರವೇಶಾತಿಗೆ ಅರ್ಜಿ ಆಹ್ವಾನ

0

ಮಧ್ಯಮ ದರ್ಜೆಯ ಬುದ್ಧಿಮಾಂದ್ಯ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಉಚಿತವಾಗಿ ತರಬೇತಿ ಹಾಗೂ ಪುನಶ್ಚೇತನ ಕಾರ್ಯಕ್ರಮವನ್ನು ಕಳೆದ 45ವರ್ಷಗಳಿಂದ ತೊಡಗಿಸಿಕೊಂಡು ಬಂದಿರುವ ವಿದ್ಯಾನಗರದ ಆಶಾಕಿರಣ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಪ್ರಸಕ್ತ ಸಾಲಿಗೆ ಪ್ರವೇಶಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಇಲ್ಲಿಯವರೆಗೆ ಸುಮಾರು 2ಸಾವಿರಕ್ಕೂ ಹೆಚ್ಚು ಬುದ್ಧಿಮಾಂದ್ಯ ವಿದ್ಯಾರ್ಥಿಗಳು ತಮ್ಮ ಸ್ವಂತಿಗೆಯಿಂದ ಮತ್ತೊಬ್ಬರಿಗೆ ಹೊರೆಯಾಗದಂತೆ ಸಮಾಜದಲ್ಲಿ ಭಾಳ್ವೆ ಮಾಡುತ್ತಿದ್ದಾರೆ. ಹಾಗೂ ಶಾಲೆಯಲ್ಲಿನ ಮಕ್ಕಳು ರಾಷ್ಟ್ರ ಮಟ್ಟದಲ್ಲಿ ಕ್ರೀಡೆ ಹಾಗೂ ಸಾಂಸ್ಕತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ.

ಪ್ರವೇಶಕ್ಕೆ 6ರಿಂದ 18ವರ್ಷದ ಒಳಗಿನ ಬುದ್ಧಿಮಾಂದ್ಯ ಮಕ್ಕಳು ಅರ್ಹರಾಗಿದ್ದು, ದಾಖಲಾತಿ ಪ್ರಾರಂಭವಾಗಿದೆ. ಅರ್ಜಿಯನ್ನು ಜೂ. 30ರೊಳಗೆ ಶಾಲೆಯ ಕಛೇರಿಯಲ್ಲಿ ಪಡೆಯಲು ಪ್ರಾಂಶುಪಾಲರು ಹಾಗೂ ಕಾರ್ಯದರ್ಶಿಗಳಾದ ಎ. ಮಂಜುನಾಥ್ ಕೋರಿದ್ದಾರೆ.

ರೋಟರಿ 75ನೇ ವಾರ್ಷಿಕ ದತ್ತಿ ನಿದಿ, ರೋಟರಿಕ್ಲಬ್ ಅವರ ಪ್ರಾಯೋಜಕತ್ವ ಹಾಗೂ ಜಿ.ಪಂ. ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅನುದಾನದೊಂದಿಗೆ ನಡೆಸಲಾಗುತ್ತಿರುವ ಈ ಸಂಸ್ಥೆಗೆ ಬುದ್ದಿ ಮಾಂಧ್ಯ ಮಕ್ಕಳನ್ನು ಸೇರಬಯಸುವವರು ಮಾಹಿತಿಗೆ ಅಧ್ಯಕ್ಷರಾದ ಡಾ| ರಜನಿ.ಎ.ಪೈ, ಮೊ. 94482 88487, ಎ. ಮಂಜುನಾಥ್ ಮೊ. 98440 55267, ಮುಖ್ಯೋಪಾಧ್ಯಾಯ ಎಂ. ಚಂದ್ರಯ್ಯ ಮೊ. 99457 97120ರಲ್ಲಿ ಸಂಪರ್ಕಿಸಿ.

ರಾಜ್ಯಮಟ್ಟದ ಮೊದಲನೇ ರ್ಯಾಕಿಂಗ್ ಸ್ಪರ್ಧೆ:ಶಿವಮೊಗ್ಗದ ಮೂವರಿಗೆ ಪದಕ ಗೌರವ

0

ತುಮಕೂರಿನ ಚಿಕ್ಕಹಳ್ಳಿ ಸ್ಪೂರ್ತಿ ಸ್ಮಾರ್ಟ್ ಸಿಟಿ ಲೇ ಔಟ್ ನಲ್ಲಿ ನಡೆದ ರಾಜ್ಯಮಟ್ಟದ ಸೀಜನ್ ನ ಮೊದಲನೇ ರ್ಯಾಕಿಂಗ್ (ranking) ಪಂದ್ಯಾವಳಿಯಲ್ಲಿ ನಮ್ಮ ಶಿವಮೊಗ್ಗ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ನ ಮೂವರು ಕ್ರೀಡಾಪಟುಗಳು ಮೂರು ಚಿನ್ನ, ಒಂದು ಬೆಳ್ಳಿ ಹಾಗೂ ಎರಡು ಕಂಚಿನ ಪದಕ ಪಡೆಯುವಲ್ಲಿ ಯಶಸ್ವಿಯಾಗಿ, ಸಂಸ್ಥೆಗೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ನಮ್ಮ ಶಿವಮೊಗ್ಗ ರೋಲರ್ ಸ್ಕೇಟಿಂಗ್ ಸಂಸ್ಥೆಯ ಅದ್ವಿಕಾ ನಾಯರ್ ಅವರು ರೋಡ್ 1, ರೋಡ್ 2 ನಲ್ಲಿ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಒಂದು ಚಿನ್ನ ಹಾಗೂ ಬೆಳ್ಳಿ ಪದಕ ಪಡೆದಿದ್ದಾರೆ. ಅದ್ವಿಕಾ ಅವರು ಆರ್. ಎಲ್. ರಂಜಿತ್ ಹಾಗೂ ಗಾಯತ್ರಿ ಅವರ ಪುತ್ರಿ.

ಅಂತೆಯೇ ವೇದಾಂಶ್ ಗಣೇಂದ್ರ ಪರಡಿ ಅವರು ರೋಡ್ 2, ರೋಡ್ 3 ರೇಸ್ ನಲ್ಲಿ ಎರಡು ಚಿನ್ನದ ಪದಕ ಪಡೆದಿದ್ದಾರೆ. ವೇಧಾಂಶವು ಅವರು ಗಣೇಂದ್ರ ಪರಡಿ ಹಾಗೂ ಶಾಲಿನಿ ಪರಡಿ ಅವರ ಪುತ್ರ.
ಈ ಇಬ್ಬರು ಕ್ರೀಡಾಟುಗಳು ಪೋದಾರ್ ಇಂಟರ್ ನ್ಯಾಷನಲ್ ಸಂಸ್ಥೆಯ ವಿದ್ಯಾರ್ಥಿಗಳಾಗಿದ್ದಾರೆ.
ಆರು ವರ್ಷದೊಳಗಿನ ವಯೋಮಿತಿಯ ರೋಡ್1, ರೋಡ್2 ಪಂದ್ಯದಲ್ಲಿ ಪುನರ್ವಿಕ ಪ್ರವೀಣ್ ಅವರು ಎರಡು ಕಂಚಿನ ಪದಕ ಪಡೆದಿದ್ದಾರೆ. ಪುನರ್ವಿಕ ಪ್ರವೀಣ್ ಕುಮಾರ್ ಹೆಚ್, ಪ್ರಿಯಾಂಕಾ ಎಂ.ಎಸ್. ಅವರ ಪುತ್ರಿ. ಜ್ಣಾನದೀಪ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿ.
ಈ ಮೂವರು ಕ್ರೀಡಾಪಟುಗಳು ತರಬೇತುದಾರರಾದ ವಿಶ್ವಾಸ್ ಹಾಗೂ ಆತೀಶ್ ಗರಡಿಯಲ್ಲಿ ಕಲಿಯುತ್ತಿದ್ದಾರೆ.
ಅಭಿನಂದನೆ:
ಜಿಲ್ಲೆಗೆ ಕೀರ್ತಿ ತಂದುಕೊಟ್ಟ ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷ ಮೋಹನ್ ಕುಮಾರ್, ಕಾರ್ಯದರ್ಶಿ ಎಂ ರವಿ, ಪದಾದಿಕಾರಿ ಎಸ್. ಕೆ. ಗಜೇಂದ್ರ ಸ್ವಾಮಿ, ಪಾಲಿಕೆ ಮಾಜಿ ಸದಸ್ಯ ಇ.ವಿಶ್ವಾಸ್ ಅಭಿನಂದಿಸಿದ್ದಾರೆ.