Monday, April 13, 2026
Monday, April 13, 2026
Home Blog Page 705

Adichunchanagiri PU College ನೀಟ್ ಪರೀಕ್ಷೆಯಲ್ಲಿ ಸಾಧನೆಗೈದ ಆದಿಚುಂಚನಗಿರಿ ಪಿಯು ಕಾಲೇಜಿನ ವಿದ್ಯಾರ್ಥಿವೃಂದ

0

Adichunchanagiri PU College 2024-NEET ಪರೀಕ್ಷೆಯಲ್ಲಿ ಶಿವಮೊಗ್ಗ ನಗರದ ಶ್ರೀ ಆದಿಚುಂಚನಗಿರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಸಾಧನೆ
ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲೆಯಲ್ಲಿಯೇ ಅತ್ಯುತ್ತಮ ಫಲಿತಾಂಶವನ್ನು ನೀಡಿ ಕಾಲೇಜಿಗೆ ಕೀರ್ತಿಯನ್ನು ತಂದಿರುತ್ತಾರೆ.

ಇದರಲ್ಲಿ ಜೆ.ಎನ್.ಅದಿತ್ಯ 720 ಕ್ಕೆ 695 ಅಂಕಗಳು, ಪೂರ್ವಿಕ ಎಸ್.ಎಂ. 720 ಕ್ಕೆ 668 ಅಂಕಗಳು, ಸಾಕ್ಷಿತ್ ಕೆ.ಆರ್. 720 ಕ್ಕೆ 627 ಅಂಕಗಳು, ಅಭಿಷೇಕ ಎಸ್. 720 ಕ್ಕೆ 625 ಅಂಕಗಳು ರಕ್ಷಿತ ಜಿ.ಎಸ್. 720 ಕ್ಕೆ 623 ಅಂಕಗಳು ಸುದರ್ಶನ್ ಡಿ.ವೈ. 720ಕ್ಕೆ 612 ಅಂಕಗಳು, ನಿಕ್ಷಿತ್ ಸಿ. 720ಕ್ಕೆ 612 ಅಂಕಗಳು, ಶರತ್ ವಿ.ಕೆ. 720ಕ್ಕೆ 611 ಅಂಕಗಳು, ಶಿವಕುಮಾರ್ ಬಿ. 720ಕ್ಕೆ 610 ಅಂಕಗಳು, Adichunchanagiri PU College ಪ್ರಣತ ಎಂ.ಆರ್. 720ಕ್ಕೆ 602 ಅಂಕಗಳು, ಬಸವಂತ್ ಎಸ್. 720ಕ್ಕೆ 585 ಅಂಕಗಳು, ಉತ್ಸವ್ ಆರ್. 720ಕ್ಕೆ 561 ಅಂಕಗಳನ್ನು ಪಡೆದು ಕಾಲೇಜಿಗೆ ಕೀರ್ತಿಯನ್ನು ತಂದಿರುತ್ತಾರೆ. ಇವರಿಗೆ ಹಾಗೂ ಇವರ ಪೋಷಕರುಗಳಿಗೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು, ಶಿವಮೊಗ್ಗ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ನ ಆಡಳಿತ ಮಂಡಳಿಯ ನಿರ್ದೇಶಕರು, ಕಾಲೇಜಿನ ಪ್ರಾಚಾರ್ಯರು ಹಾಗೂ ಎಲ್ಲಾ ಸಿಬ್ಬಂದಿವರ್ಗದವರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.

Nehru Youth Centre ಪರಿಸರವನ್ನ ಅರ್ಥಮಾಡಿಕೊಳ್ಳೋಣ- ಕೆ.ಟಿ.ಕೆ.ಉಲ್ಲಾಸ್

0

Nehru Youth Centre ಭಾರತ ಸರ್ಕಾರ, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ, ನೆಹರು ಯುವ ಕೇಂದ್ರ, ಶಿವಮೊಗ್ಗ ಮತ್ತು ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ,ಗೋಪಾಳ, ಮುಖಾ ಮುಖಿ ರಂಗತಂಡದ ಸಹಯೋಗದೊಂದಿಗೆ ದಿನಾಂಕ 05.06.2024 ರಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಕ್ಕಳಿಗೆ ಪರಿಸರದ ಬಗ್ಗೆ ,ಗಿಡಗಳನ್ನು ಏಕೆ ನೆಡಬೇಕು ಅದರಿಂದಾಗುವ ಪ್ರಯೋಜನಗಳು, ಗಿಡ,ಮರಗಳು ನಮಗೆ ನೀಡಿರುವ ಕೊಡುಗೆಗಳು ಹಾಗೂ ಪರಿಸರವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದರ ಬಗ್ಗೆ ಸವಿವರವಾಗಿ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿಗಳಾದ ಶ್ರೀ.ಉಲ್ಲಾಸ್‌ ಕೆ.ಟಿ.ಕೆ ರವರು ತಿಳಿಸಿದರು.

Nehru Youth Centre ಮಕ್ಕಳು ಪರಿಸರದ ಬಗ್ಗೆ ತಮಗೆ ತಿಳಿದ ವಿಚಾರಗಳನ್ನು ಮಾತನಾಡಿದರು. ಕಾರ್ಯಕ್ರಮದಲ್ಲಿ ವಿದ್ಯಾನಿಕೇತನ ಶಾಲೆಯ ಮುಖ್ಯೋಪಾಧ್ಯಾಯರು,ಮುಖಾಮುಖಿ ರಂಗತಂಡದ ಮಹೇಂದ್ರ,ರಂಗಾಯಣ ಮಂಜು, ಶಿಕ್ಷಕ ವೃಂದದವರು, ಆಡಳಿತ ಮಂಡಳಿಯವರು,ಶಾಲಾಮಕ್ಕಳು ಉಪಸ್ಥಿತರಿದ್ದರು ಹಾಗೂ ಎಲ್ಲರೂ ಜೊತೆಗೂಡಿ ಶಾಲೆಯ ಸುತ್ತಮುತ್ತ ಗಿಡಗಳನ್ನು ನೆಡುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.

B.Y. Raghavendra ಅಪಪ್ರಚಾರಕ್ಕೆ ಕಿವಿಗೊಡದೇ ಮತದಾರ ತಕ್ಕ ಉತ್ತರ ನೀಡಿದ್ದಾನೆ- ಬಿ.ವೈ.ರಾಘವೇಂದ್ರ

0

B.Y. Raghavendra ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಎರಡು ಲಕ್ಷಕ್ಕಿಂತಲೂ ಹೆಚ್ಚಿನ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ವೈಯಕ್ತಿಕವಾಗಿ ಕುಟುಂಬದ ಬಗ್ಗೆ ಪಕ್ಷದ ಬಗ್ಗೆ ಮಾಡಿದ ಅಪಪ್ರಚಾರಗಳಿಗೆ ಮತದಾರ ತಕ್ಕ ಉತ್ತರ ನೀಡಿದ್ದಾನೆ ಅಪಪ್ರಚಾರಕ್ಕೆ ಕಿವಿಗೊಡದೆ ಬಿಜೆಪಿಗೆ ಮತ ಹಾಕುವ ಮೂಲಕ ಬೆಂಬಲ ನೀಡಿದ್ದಾರೆ.
ಈ ಗೆಲವು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ಗೆಲುವು ಪ್ರಧಾನಿ ಮೋದಿ ಅವರ ಚಿಂತನೆಗೆ ಶಕ್ತಿ ತುಂಬುವ ಕಾರ್ಯವನ್ನು ಜನತೆ ಈ ಚುನಾವಣೆ ಮೂಲಕ ಮಾಡಿದ್ದಾರೆ.
2 ಲಕ್ಷಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಲು ಮತದಾನ ಮಾಡಿದ ಎಲ್ಲರಿಗೂ ನನ್ನ ಹೃದಯಪೂರ್ವಕ ವಂದನೆ ಸಲ್ಲಿಸುತ್ತೇನೆ.ಮತದಾರರ ವಿಶ್ವಾಸ ಉಳಿಸಿಕೊಂಡು ಪಕ್ಷದ ಜನಪ್ರತಿನಿಧಿಗಳ ವಿಶ್ವಾಸ ಗಳಿಸಿ ಕೆಲಸ ಮಾಡುತ್ತೇನೆ.
B.Y. Raghavendra ಕನ್ಯಾಕುಮಾರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶ ಯಾವ ದಿಕ್ಕಿನಲ್ಲಿ ಹೋಗಬೇಕೆಂದು ಮಾಡಿದ ಸಂಕಲ್ಪಕ್ಕೆ ಜನತೆ ಶಕ್ತಿ ತುಂಬಿದ್ದಾರೆ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿದ ಪಕ್ಷದ ಕಾರ್ಯಕರ್ತರು, ಮಾಜಿ ಸಿ ಎಂ ಬಿ ಎಸ್ ವೈ , ಬಿಜೆಪಿ ರಾಜ್ಯಾಧ್ಯಕ್ಷ ರಾಜ್ಯಾಧ್ಯಕ್ಷ ಬಿ ಬೈ ವಿಜಯೇಂದ್ರ ರಿಗೆ ವಂದನೆ ತಿಳಿಸುತ್ತೇನೆ.
ನನ್ನ ಕೊನೆ ಉಸಿರಿರುವರೆಗೂ ಜನರ ಋಣವನ್ನು ತೀರಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

Lok Sabha Election ಯುಪಿ ಲೋಕಾಸಭಾ ಚುನಾವಣೆ: ಮಕಾಡೆ ಮಲಗಿದ ‘ಮಾಯಾ’ ಬಿಎಸ್ ಪಿ ಪಕ್ಷ

0

Lok Sabha Election ಒಂದು ಕಾಲದಲ್ಲಿ ಉತ್ತರ ಪ್ರದೇಶದ ಪ್ರಬಲ ಪಕ್ಷವಾಗಿದ್ದ ಬಹುಜನ ಸಮಾಜವಾದಿ ಪಕ್ಷ ಈ ಸಲದ ಲೋಕಸಭಾ ಚುನಾವಣೆಯಲ್ಲಿ ಹೇಳ ಹೆಸರಿಲ್ಲದಂತಾಗಿದೆ. ಎಷ್ಟೆಂದರೆ, ಯುಪಿಯಲ್ಲಿ ಸ್ಪರ್ಧೆ ಮಾಡಿದ್ದ 79 ಕ್ಷೇತ್ರಗಳಲ್ಲಿಯೂ ಮಕಾಡೆ ಮಲಗಿದೆ. ದೇಶಾದ್ಯಂತ 424 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೂ ಒಂದರಲ್ಲೂ ಮುನ್ನಡೆ ಸಾಧಿಸಿಲ್ಲ.

Lok Sabha Election ಉತ್ತರ ಪ್ರದೇಶದಲ್ಲಿ ಬಿಜೆಪಿ 33, ಸಮಾಜವಾದಿ ಪಕ್ಷ 37, ಕಾಂಗ್ರೆಸ್​ 6 , ಆರ್​ಎಲ್​ಡಿ 2 ಹಾಗೂ ಇತರರು 2 ಕ್ಷೇತ್ರಗಳಲ್ಲಿ ಗೆಲುವು ದಕ್ಕಿಸಿಕೊಂಡಿವೆ. ಒಂದೂ ಸ್ಥಾನವನ್ನು ಗೆಲ್ಲದ ಕಾರಣ ಬಿಎಸ್​ಪಿ ಯುಗ ಅಂತ್ಯವಾಯಿತು ಎನ್ನಲಾಗುತ್ತಿದೆ. ಖುಷಿಯ ವಿಚಾರವೆಂದರೆ ಆ ಸ್ಥಾನಕ್ಕೆ ಮತ್ತೊಬ್ಬ ದಲಿತ ನಾಯಕ ಆಗಮಿಸಿದ್ದಾರೆ. ಯಾವುದೇ ಪಕ್ಷದ ಬೆಂಬಲ ಪಡೆಯದೇ ಸ್ವತಂತ್ರವಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಯುಪಿಯಲ್ಲಿ ಮಾಯಾವತಿ ಯುಗಾಂತ್ಯವಾಗಿದೆಯೆಂದು ವಿಶ್ಲೇಷಿಸಲಾಗಿದೆ.

Pradeep Eshwar ಶಾಸಕ ಪ್ರದೀಪ್ ಈಶ್ವರ್ ಹೇಳಿಕೆ ವಿವಾದ: ಮನೆ ಮೇಲೆ ಕಿಡಿಗೇಡಿಗಳಿಂದ ಕಲ್ಲು ತೂರಾಟ

0

Pradeep Eshwar ಲೋಕಸಭೆ ಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ನಿನ್ನೆ ರಾತ್ರಿ ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ ಮನೆ ಮೇಲೆ ಕಲ್ಲು ತೂರಾಟ ನಡೆದಿದೆ.
ಚಿಕ್ಕಬಳ್ಳಾಪುರ ನಗರದ ಕಂದವಾರದಲ್ಲಿರುವ ಶಾಸಕ ಪ್ರದೀಪ್ ಮನೆಯ ಮೇಲೆ ಕಿಡಿಗೇಡಿಗಳು ನಡೆಸಿದ ಕಲ್ಲುತೂರಾಟದಲ್ಲಿ ಕಿಟಕಿ ಗಾಜು ಒಡೆದಿದೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಪೊಲೀಸ್ ಉಪಾಧೀಕ್ಷಕ ಎಸ್. ಶಿವಕುಮಾರ್, ಪೊಲೀಸ್ ಇನ್ಸ್ಪೆಕ್ಟರ್ ಎಂ.ಮಂಜುನಾಥ ಹಾಗೂ ಸಿಬ್ಬಂದಿ ಶಾಸಕರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮನೆಯ ಸಿಸಿಟಿವಿ ಪರಿಶೀಲನೆ ನಡೆಸಲಾಗಿದ್ದು ಮನೆಯಲ್ಲಿದ್ದ ಸಿಬ್ಬಂದಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಡಾ.ಕೆ.ಸುಧಾಕರ್ ಗೆಲುವು ಹಿನ್ನಲೆ ಕಲ್ಲು ತೂರಾಟ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಶಾಸಕ ಪ್ರದೀಪ್ ಈಶ್ವರ್ ಅವರ ತಮ್ಮ ಚೇತನ್, ಲೋಕಸಭಾ ಚುನಾವಣೆಯಲ್ಲಿ ಡಾ.ಕೆ.ಸುಧಾಕರ್ ಗೆದ್ದ ಕಾರಣ ಅವರ ಬೆಂಬಲಿಗರೆ ಕೃತ್ಯ ಎಸಗಿದ್ದಾಗಿ ಶಂಕೆ ವ್ಯಕ್ತಪಡಿಸಿದ್ದಾರೆ.
Pradeep Eshwar ಶಾಸಕರಾದ ಪ್ರದೀಪ್ ಈಶ್ವರ್ ಮನೆಯ ಮೇಲೆ ಕಲ್ಲು ತೂರಾಟ ಪ್ರಕರಣ ಸಂಬಂಧ ಮನೆಯ ಸಿಬ್ಬಂದಿ ಮುನಿಕೃಷ್ಣ ಮಾಹಿತಿ ನೀಡಿ, ರಾತ್ರಿ 10.15 ಸಮಯದಲ್ಲಿ ನಾಲ್ಕು ಜನ ಹುಡುಗರು ಕಲ್ಲು ತೂರಾಟ ನಡೆಸಿದ್ದಾರೆ. ಸಿಸಿಟಿವಿ ಕ್ಯಾಮೆರಾ ಸೆನ್ಸರ್ ಆನ್ ಆಗ್ತಿದ್ದಂತೆ ಹುಡುಗರು ಓಡಿ ಹೋದರು. ನಾಲ್ಕೈದು ಕಲ್ಲುಗಳನ್ನು ಎಸೆದಿದ್ದಾರೆ. ಮನೆಯ ಕಿಟಕಿ ಪುಡಿ ಪುಡಿ ಆಗಿದೆ. ಕಲ್ಲಿನ ಶಬ್ದ ಕೇಳಿ ಆಚೆ ಬಂದೆವು ಭಯ ಆಯಿತು. ಅಭಿ, ತಾರಕ್ ನಾನು ರೂಮ್ ನಲ್ಲಿ ಇದ್ದೆವು. ಮನೆ ಮಾಡಿ ಒಂದು ವರ್ಷ ಆಗಿದೆ. ಇದೇ ಮೊದಲ ಬಾರಿಗೆ ಈ ರೀತಿಯ ಘಟನೆ ನಡೆದಿದೆ ಎಂದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ಡಾ ಕೆ.ಸುಧಾಕರ್‌ ಅವರು ಕಾಂಗ್ರೆಸ್ ನ ರಕ್ಷಾ ರಾಮಯ್ಯ ಅವರನ್ನು 1,12,866 ಮತಗಳ ಅಂತರದಿಂದ ಸೋಲಿಸಿ ಲೋಕಸಭೆ ಪ್ರವೇಶಿಸುತ್ತಿದ್ದಾರೆ.ಈ ಹಿನ್ನೆಲೆಯಲ್ಲಿ‌ ಘಟನೆ ನಡೆದಿದೆ ಎನ್ನಲಾಗಿದೆ.

Klive Special Article ಹಿಂದುಳಿದ ವರ್ಗಗಳಿಗೆ ರಾಜಕೀಯ ವೇದಿಕೆ ಕಲ್ಪಿಸಿದ ನಾಲ್ವಡಿ ಕೃಷ್ಣರಾಜ ಒಡೆಯ ಲೇ:ಎನ್.ಅನಂತ ನಾಯಕ್.ಬೆಂಗಳೂರು

0

Klive Special Article ಬಂಜಾರರಿಗೆ ಬೆಳಕಿನ ದಾರಿ ತೋರಿದ ನಾಲ್ವಡಿ ಕೃಷ್ಣರಾಜ ಒಡೆಯರ್

ಭಾರತದಲ್ಲಿದ್ದ ಚಾತುವರ್ಣ ವ್ಯವಸ್ಥೆ ಮತ್ತು ಬ್ರಿಟಿಷರ ದಬ್ಬಾಳಿಕೆಯಿಂದ ನಲುಗಿ ಹೋಗಿದ್ದ ಮೂಲ ನಿವಾಸಿ ಬಹುಜನರ ಅಭಿವೃದ್ಧಿಗಾಗಿ ಪಣ ತೊಟ್ಟವರು ಮೈಸೂರಿನ ಒಡೆಯ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್. ಸವರ್ಣಿಯರು ಅಂದರೆ ಮೇಲ್ ಜಾತಿಗರು ಎನಿಸಿಕೊಂಡವರ ಊರಗಳಲ್ಲಿ ವಾಸಿಸಲು ಅವಕಾಶ ಇಲ್ಲದೆ, ಕಾಡು ಮೇಡುಗಳಲ್ಲಿ ಅಪರಾಧಿ ಬುಡಕಟ್ಟುಗಳೆಂದು ಕರೆಸಿಕೊಂಡು ದೇಶವ್ಯಾಪಿ ಅಲೆಮಾರಿಗಳಾಗಿ ಛಿದ್ರರಾಗಿದ್ದ ಬಂಜಾರರನ್ನು ಗುರುತಿಸಿ ರಕ್ಷಣೆ ಮತ್ತು ಅವಕಾಶ ನೀಡಿ ಮುಖ್ಯವಾಹಿನಿಗೆ ಬರಲು ಆಹ್ವಾನ ನೀಡಿದವರು ಈ ನಾಲ್ವಡಿ ಕೃಷ್ಣರಾಜ ಒಡೆಯರ್.

ಮೊಟ್ಟಮೊದಲ ಬಾರಿ ಬಂಜಾರರಿಗೆ ಮೈಸೂರು ರಾಜ್ಯದಲ್ಲಿ ರಾಜಕೀಯ ಸ್ಥಾನಮಾನ ನೀಡಿ ಗೌರವಿಸಿದವರು ಈ ನಾಲ್ವಡಿ. ಮೈಸೂರು ಪ್ರಜಾಪ್ರತಿನಿಧಿ ಸಭೆಗೆ ಸದಸ್ಯರಾಗಿ (ಇಂದಿನ‌ ಶಾಸಕರಂತೆ) ಬಂಜಾರ ಸಮುದಾಯದ ಮುಖಂಡರಾದ

೧.ಜಾತ್ರನಾಯಕ್ (21 ವರ್ಷ ಅವದಿ)
ಬಬ್ಬೂರು ಫಾರಂ, ಹಿರಿಯೂರು

೨.ಸಣ್ಣರಾಮನಾಯ್ಕ
ಕೆಂಗ್ಲಾಪುರ, ಚಿಕ್ಕನಾಯ್ಕನಹಳ್ಳಿ

೩.ಖಿರ್ಯಾನಾಯ್ಕ
ಕುಡಿನೀರ ಕಟ್ಟೆ, .ಹೊಳಲ್ಕೆರೆ

೪.ಚಂದ್ರನಾಯ್ಕ
ಕೊಡದ ಗುಡ್ಡ, ಜಗಳೂರು

೫.ಹನಿಯಾನಾಯ್ಕ
ಚಿಕ್ಕ ಬಾಸೂರು ತಾಂಡ, ಹೊನ್ನಾಳಿ

೬.ತೋತ್ಯಾನಾಯ್ಕ
ಗಂಟಾಪುರ, ಚನ್ನಗಿರಿ ದಾವಣಗೆರೆ

೭.ಭೀಮನಾಯ್ಕ
ಕೆರೆ ಹಾಗಲಹಳ್ಳಿ, ಚಳ್ಳಕೆರೆ

೮.ಸೇವ್ಯಾನಾಯ್ಕ
ಆಯನೂರು, ಶಿವಮೊಗ್ಗ
ಇವರುಗಳನ್ನು ನೇಮಕ ಮಾಡಿದರು. ಇದು ಬಂಜಾರ ಜನಾಂಗದ ಮೊದಲು ‌ರಾಜಕೀಯ ಪ್ರವೇಶ.‌ ಇದಕ್ಕಾಗಿ ಬಂಜಾರ ಸಮುದಾಯ ಒಡೆಯರ್ ಅವರಿಗೆ ಕೃತಜ್ಞತೆ ಸಲ್ಲಿಸಬೇಕು.

Klive Special Article ರಾಜ್ಯದ ವಿವಿಧ ಪ್ರದೇಶಗಳಲ್ಲಿ ಬಂಜಾರ (ಲಂಬಾಣಿ) ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ಗಳ ಪ್ರಾರಂಭಿಸಲು ಶಕ್ತಿಯಾದವರು ಈ ನಾಲ್ವಡಿ. ಹಾಸ್ಟೆಲ್ ಆರಂಭಿಸಲು ಭೂಮಿ ಮತ್ತು ಹಣಕಾಸು ನೆರವು ನೀಡಿದ್ದರು. ಈ ಹಾಸ್ಟೆಲ್ ಗಳಿಂದ ಬಂಜಾರ ಸಮುದಾಯ ಮೊದಲು ಶಿಕ್ಷಣ ಅವಕಾಶ ಪಡೆಯಿತು. ನಾಲ್ವಡಿ ಅವರು ಆರಂಭಿಸಿದ ಬಂಜಾರರ ಹಾಸ್ಟೆಲ್ ಇವತ್ತು ಏನಾಗಿವೆ ? ಬಂಜಾರರಿಗೆ ಶಿಕ್ಷಣ ಸಂಸ್ಥೆ, ಹಾಸ್ಟೆಲ್ ಪ್ರಾರಂಭಿಸಲು ರಾಜ್ಯದ ಕೆಲ ಜಿಲ್ಲೆಗಳಲ್ಲಿ ನಾಲ್ವಡಿ ಅವರು ನೀಡಿದ್ದ ಭೂಮಿ ಇವತ್ತು ಯಾರ ಪಾಲಾಗಿವೆ ? ಪತ್ತೆ ಹಚ್ಚಬೇಕಿದೆ.

ಮೂಲನಿವಾಸಿ ಸಮುದಾಯಗಳಲ್ಲಿ ಸಾಮಾಜಿಕ, ಸಾಂಸ್ಕೃತಿಕ ಘನತೆ ಹೆಚ್ಚಿಸಲು ದುಡಿದವರು ಈ ನಾಲ್ವಡಿ. ಮೂಡನಂಬಿಕೆಗಳ ಹೆಸರಿನಲ್ಲಿ ತಳ ಸಮುದಾಯಗಳ ಮೋಸ ಮಾಡುತ್ತಿರುವವರನ್ನು ನಿರ್ಬಂಧಿಸಲು ದುಡಿದರು. ಅನಿಷ್ಟ ದೇವದಾಸಿ ಪದ್ದತಿ, ಸತಿ ಪದ್ದತಿ, ಗೆಜ್ಜೆ ಪೂಜೆ, ಅಸ್ಪೃಶ್ಯತೆ ಆಚರಣೆ ನಿರ್ಬಂಧಿಸುವ ಕಾನೂನು ತಂದವರು ನಾಲ್ವಡಿ.

ನಾಡಿನ ವಂಚಿತ ಸಮುದಾಯಗಳ ಏಳಿಗೆಗಾಗಿ ಮೀಸಲಾತಿ ಕಲ್ಪಿಸಲು ‘ಶೋಷಿತ ವರ್ಗಗಳ ಪಟ್ಟಿ’ (ಡಿಪ್ರೆಸ್ಡ್ ಕ್ಲಾಸ್ ಲಿಸ್ಟ್) ಮಾಡಿ ಅದರಲ್ಲಿ ಲಂಬಾಣಿಗರನ್ನು ಸೇರಿಸಿ ಸಾಮಾಜಿಕ ನ್ಯಾಯ ನೀಡಿದವರು ಇದೆ ನಾಲ್ವಡಿ. ಇದು ಬಂಜಾರರು ಮುಖ್ಯವಾಹಿನಿಗೆ ಬರುವಂತಾಗಲು ಸಹಕಾರಿಯಾದ ಮೊದಲ ಹೆಜ್ಜೆಯಾಗಿತ್ತು. ಸ್ವಾತಂತ್ರ್ಯ ನಂತರ ಡಾ‌ ಬಿ ಅರ್ ಅಂಬೇಡ್ಕರ್ ಅವರು ಇದೇ ಪಟ್ಟಿಯನ್ನು ಪರಿಗಣಿಸಿ ಕರ್ನಾಟಕದ ಮೊದಲ ಪರಿಶಿಷ್ಟ ಜಾತಿಗಳ ಪಟ್ಟಿಯನ್ನು ಅನುಮೋದನೆ ಮಾಡಿದ್ದರು.

1926 ರಲ್ಲಿ ಚಿತ್ರದುರ್ಗ ದಲ್ಲಿ ನಡೆದ ಬಂಜಾರರ ಪ್ರಥಮ ಅಧಿವೇಶನಕ್ಕೆ ನಾಲ್ವಡಿಯವರು ಒಂದು ನೂರು ರೂಪಾಯಿ ಗಳನ್ನು ದೇಣಿಗೆ ನೀಡಿದ್ದರು. ಸಮಾವೇಶದ ಯಶಸ್ವಿಗಾಗಿ ಅಧಿಕಾರಿಗಳಿಗೆ ಜವಾಬ್ದಾರಿ ನೀಡಿದ್ದರು. ನಾಲ್ವಡಿ ಯವರು ಖುದ್ದಾಗಿ ಕೆಲ ಲಂಬಾಣಿ ತಾಂಡಗಳಿಗೆ ಭೇಟಿ ಮಾಡಿದ್ದಾರೆ. ತುಳಿತಕ್ಕೊಳಗಾದ ಬಂಜಾರರ ಬದುಕನ್ನು ಕಣ್ಣಾರೆ ಕಂಡಿದ್ದರು. ಬಂಜಾರರ ಶ್ರೀಮಂತ ಸಂಸ್ಕೃತಿ ಮತ್ತು ಬಡತನವನ್ನು ಕಣ್ಣಾರೆ ಕಂಡು ಅವುಗಳನ್ನು ಪರಿಹರಿಸಲು ಮುಂದಾಗಿದ್ದರು.

ಸ್ವಾತಂತ್ರ ಪೂರ್ವದಲ್ಲಿ ಅಂದರೆ 1921 ರಲ್ಲಿ ನಾಲ್ವಡಿ ಯವರು ಜಸ್ಟಿಸ್ ಮಿಲ್ಲರ್ ಆಯೋಗದ ವರದಿಯನ್ನು ಅನುಮೋದಿಸಿದರು. ಆ ಮೂಲಕ ಬ್ರಾಹ್ಮಣೇತರ ಸಮುದಾಯಗಳಿಗೆ 75% ಮೀಸಲಾತಿ ಜಾರಿ ಮಾಡಿ ಕಾನೂನು ಮಾಡಿದರು. ಇದರಿಂದಾಗಿ ಬಂಜಾರರಿಗೆ ಆದ ಲಾಭ ಸಾಕಷ್ಟು.

ನಾಲ್ವಡಿ ಯವರ ಈ ‘ಡಿಪ್ರೆಸ್ಡ್ ಕ್ಲಾಸ್ ಲಿಸ್ಟ್’ ಅನ್ನು ಪರಿಗಣಿಸಿಯೇ 1950 ರಲ್ಲಿ 6 ಜಾತಿಗಳು ಅಂದರೆ ೧. ಆದಿ ಕರ್ನಾಟಕ, ೨. ಆದಿ ದ್ರಾವಿಡ, ೩.ಬಂಜಾರ-ಲಂಬಾಣಿ, ೪. ಭೋವಿ, ೫ಕೊರಚ, ೬. ಕೊರಮ ಜಾತಿಗಳುಳ್ಳ ರಾಜ್ಯದ ಮೊದಲ ಪರಿಶಿಷ್ಟ ಜಾತಿಗಳ ಪಟ್ಟಿ ಯನ್ನು ಕೇಂದ್ರ ಸರ್ಕಾರ ಅಧಿಕೃತ ನೋಟಿಪೀಕೇಷನ್ ಮಾಡಿತು.‌ ಮಹಾನಾಯಕ ಡಾ ಬಿ ಆರ್ ಅಂಬೇಡ್ಕರ್ ಅವರು ಈ ಪಟ್ಟಿಯನ್ನು ಅನುಮೋದಿಸಿದರು. ಈ ಮೊದಲ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಬಂಜಾರರಿಗೆ ಸೂಕ್ತ ಸ್ಥಾನ, ಅವಕಾಶ, ಪ್ರಾತಿನಿಧ್ಯ ಸಿಕ್ಕಿರುವುದಕ್ಕೆ ನಾಲ್ವಡಿಯವರೇ ಮುಖ್ಯ ಕಾರಣ. ಇದಕ್ಕಾಗಿ ನಾವು ಅವರಿಗೆ ಚಿರಋಣಿ ಆಗಿರಬೇಕು. ಮೈಸೂರು ರಾಜ್ಯದಲ್ಲಿ ಎಲ್ಲಾ ಹುದ್ದೆಗಳಲ್ಲಿ ನೂರಕ್ಕೆ ನೂರರಷ್ಟು ತುಂಬಿಕೊಂಡಿದ್ದ ಬ್ರಾಹ್ಮಣರ ಪ್ರಾಬಲ್ಯ ಕಡಿಮೆ ಮಾಡಿ ಡಿಪ್ರೆಸ್ಡ್ ಕ್ಲಾಸ್ ಅಂದರೆ ಬಂಜಾರರನ್ನು ಒಳಗೊಂಡಂತೆ ದಮನಿತ ಸಮುದಾಯಗಳಿಗೆ ಶೇಕಡಾ 75% ಮೀಸಲಾತಿ ಕಲ್ಪಿಸಿ ಹೊಸ ಚರಿತ್ರೆ ಬರೆದವರು ಇದೇ ನಾಲ್ವಡಿ.

ಶಿಕ್ಷಣ, ಕೃಷಿ, ನೀರಾವರಿ, ಆರೋಗ್ಯ ಹೀಗೆ ಹಲವಾರು ಕ್ಷೇತ್ರಗಳಲ್ಲಿ ನಾಲ್ವಡಿಯವರ ಕೊಡುಗೆ ಅಪಾರವಾದದ್ದು. ದುರ್ಬಲ ವರ್ಗಗಳ ಧ್ವನಿ ಈ ಮನುಷ್ಯ. ಶಿಕ್ಷಣ, ಆರೋಗ್ಯ,ಕೈಗಾರಿಕೆಗಳ ಕನಸುಗಾರ ಇವರು. ಸಾಮಾಜಿಕ ಅನಿಷ್ಟಗಳ ಸಂಹಾರ ಮಾಡಿದವರು ಈ ನಾಲ್ವಡಿ. ಸಮಾನತೆಯ ಪ್ರತಿಪಾದಕ ಈ ನಾಲ್ವಡಿ.

ಈ ಎಲ್ಲಾ ಕಾರಣಗಳಿಂದಾಗಿ ನಾವು, ನಮ್ಮಂತ ವಂಚಿತ ಸಮುದಾಯಗಳು ಇವತ್ತು ಒಂದಷ್ಟು ಬೆಳಕಿನತ್ತ, ಪ್ರಗತಿಯತ್ತ ಸಾಗಿತ್ತಿರುವುದನ್ನು ಮರೆಯಲಾಗದು. ನಮ್ಮಂತ ಅನೇಕ ಶೋಷಿತ ಸಮುದಾಯಗಳ ಧ್ವನಿಯಾಗಿದ್ದ ಈ ನಾಲ್ವಡಿಯವರ ಕೊಡುಗೆಯನ್ನು ಯಾವತ್ತೂ ಸ್ಮರಿಸುತ್ತೇನೆ‌. ನಾನಂತೂ ನಮ್ಮ ಮನೆ, ಮನದಲ್ಲಿ ನಾಲ್ವಡಿ ಅವರನ್ನು ನಿರಂತರವಾಗಿ ಪೂಜಿಸುತ್ತಲೇ ಇರುತ್ತೇನೆ. ಅವರ ಸಾಧನೆಗಳನ್ನು ಪ್ರಚಾರ ಮಾಡುತ್ತೇನೆ.

ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರನ್ನು ನೆನೆಯೋಣ.

ಬರಹ : ಅನಂತನಾಯಕ್.ಎನ್, ನ್ಯಾಯವಾದಿಗಳು, ಹೈಕೋರ್ಟ್, ಬೆಂಗಳೂರು

Annamalai ಪ್ರಬಲ ಹಣಾಹಣಿಯಲ್ಲಿ’ಸಿಗಂ’ಅಣ್ಣಾಮಲೈ ಸೋಲು: ತೀವ್ರ ಪೈಪೋಟಿ ನೀಡಿದ ಸಮಾಧಾನ

0

Annamalai ಲೋಕಸಭೆ ಚುನಾವಣೆ ಹಿನ್ನೆಲೆ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಎನ್‌ಡಿಎ 292 ಕ್ಷೇತ್ರಗಳಲ್ಲಿ ಮತ್ತು ಇಂಡಿಯಾ ಮೈತ್ರಿಕೂಟ 233 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಸಾಧಿಸಿದ್ದಾರೆ. ಇತರರು 19 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಸಾಧಿಸಿದ್ದಾರೆ.
Annamalai ಕೊಯಮತ್ತೂರಿನಲ್ಲಿ ಬಿಜೆಪಿ ಅಭ್ಯರ್ಥಿ ಅಣ್ಣಾಮಲೈ ಸೋಲನ್ನು ಕಂಡಿದ್ದು, ಡಿಎಂಕೆ ಅರ್ಭರ್ಥಿ ಗಣಪತಿ ರಾಜಕುಮಾರ್‌ ಅವರು ಗೆಲುವನ್ನು ಸಾಧಿಸಿದ್ದಾರೆ. ಅಣ್ಣಾಮಲೈ ವಿರುದ್ಧ 18,000ಕ್ಕೂ ಅಧಿಕ ಮತಗಳಿಂದ ಗಣಪತಿ ರಾಜಕುಮಾರ್‌ ಗೆಲುವನ್ನು ಸಾಧಿಸಿದ್ದಾರೆ.

Shivaganga Yoga Centre ಪರಿಸರ ನಾಶದಿಂದ ಮನುಕುಲವೇ ನಾಶ. ಪ್ಲಾಸ್ಡಿಕ್ ಬಳಕೆ ಕಡಿಮೆ ಮಾಡಿ-ಜಿ.ಎಸ್.ಓಂಕಾರ್

0

Shivaganga Yoga Centre ಪರಿಸರ ಸಂರಕ್ಷಣೆ ನಮ್ಮ ನಿಮ್ಮೆಲ್ಲರ ಹೊಣೆಯಾಗಿದ್ದು, ಪರಿಸರದ ರಕ್ಷಣೆಗಾಗಿ ನಾವೆಲ್ಲರೂ ಕೆಲಸ ಮಾಡಬೇಕಿದೆ ಎಂದು ಶಿವಗಂಗಾ ಯೋಗ ಕೇಂದ್ರದ ರಾಘವ ಶಾಖೆಯ ಯೋಗಶಿಕ್ಷಕ ಜಿ.ಎಸ್.ಓಂಕಾರ್ ಹೇಳಿದರು.

ಶಿವಮೊಗ್ಗ ನಗರದ ಶಿವಗಂಗಾ ಯೋಗಕೇಂದ್ರದ ರಾಘವ ಶಾಖೆಯಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಗಿಡಕ್ಕೆ ನೀರೇರೆಯುವದರ ಮುಖಾಂತರ ಚಾಲನೆ ನೀಡಿ ಮಾತನಾಡಿ, ಪರಿಸರ ವಿನಾಶದಿಂದ ಮನುಕುಲವೇ ನಾಶವಾಗುತ್ತದೆ. ಪರಿಸರವನ್ನು ನಾವು ಆದಷ್ಟು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು ಎಂದು ತಿಳಿಸಿದರು.

ಇಂದು ನೀರು ಸಾಕಷ್ಟು ಕಡೆ ಕಲುಷಿತವಾಗುತ್ತಿದೆ. ನೀರಿನ ದುರ್ಬಳಕೆ ಸಲ್ಲದು. ಪರಿಸರ ದಿನಾಚರಣೆ ಆ ದಿನಕ್ಕೆ ಸೀಮಿತವಾಗದೆ ಪ್ರತಿನಿತ್ಯ ಎಲ್ಲರ ಮನೆಗಳಲ್ಲೂ ಸಹ ಜನ್ಮದಿನ ಹಾಗೂ ವಿವಾಹ ವಾರ್ಷಿಕೋತ್ಸವ ಸಂದರ್ಭದಲ್ಲಿ ಗಿಡಗಳನ್ನು ನೆಡುವುದರ ಮುಖಾಂತರ ಪರಿಸರಕ್ಕೆ ಒಂದು ಸಣ್ಣ ಕೊಡುಗೆಯನ್ನು ನಾವು ನೀಡಬೇಕಾಗಿದೆ ಎಂದರು.

ಶಿಕ್ಷಕ ಹರೀಶ್ ಮಾತನಾಡಿ, ಇಂದು ಈ-ತ್ಯಾಜ್ಯ ವಸ್ತುವನ್ನು ಸರಿಯಾಗಿ ವಿಲೇವಾರಿ ಮಾಡದೇ ಇರುವುದರಿಂದ ಭೂಮಿ ಸಾಕಷ್ಟು ಹಾಳಾಗುತ್ತಿದೆ. ನಾವು ಮನೆಯಲ್ಲಿ ಬಳಸಿದ ಕಂಪ್ಯೂಟರ್ ಶೆಲ್ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳನ್ನ ಸರಿಯಾಗಿ ವಿಲೇವಾರಿ ಮಾಡಬೇಕು ಎಂದು ಹೇಳಿದರು.

ಪರಿಸರವನ್ನ ಸುಂದರವಾಗಿ ಸ್ವಚ್ಛವಾಗಿ ಇಟ್ಟುಕೊಳ್ಳಲು ಪ್ರಯತ್ನಿಸಬೇಕು. ನಗರೀಕರಣದಿಂದ ಮರ ಗಿಡಗಳ ನಾಶವಾಗುತ್ತಿದೆ. ನಾವು ಬರುವ ದಿನಗಳಲ್ಲಿ ಹೆಚ್ಚು ಹೆಚ್ಚು ಮರ ಗಿಡಗಳನ್ನು ಬೆಳೆಸುವುದರ ಮುಖಾಂತರ ಒಳ್ಳೆಯ ಆಮ್ಲಜನಕವನ್ನು ಪಡೆಯುವುದರ ಮುಖಾಂತರ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಬೇಕು ಎಂದು ತಿಳಿಸಿದರು.

Shivaganga Yoga Centre ಇದೇ ಸಂದರ್ಭದಲ್ಲಿ ಡಾ. ಯಶ್ವಂತ್ ಮಾತನಾಡಿ, ಇಂದು ನಮ್ಮ ತುಂಗಾ ನದಿ ಸಾಕಷ್ಟು ಮಲಿನವಾಗುತ್ತಿದೆ. ಅದರಲ್ಲಿ ಸಿಲಿಕಾನ್ ಹೆಚ್ಚು ಹೆಚ್ಚು ತುಂಬಿ ನೀರು ಸಾಕಷ್ಟು ಕಲುಷಿತಗೊಳ್ಳುತ್ತಿದೆ. ಆದ್ದರಿಂದ ನಾವು ನದಿ ಪಾತ್ರವನ್ನು ಆದಷ್ಟು ಸ್ವಚ್ಚವಾಗಿಟ್ಟುಕೊಳ್ಳಬೇಕು. ಬೇಡವಾದ ಕಸವನ್ನು ನದಿಗೆ ಎಸೆಯುವುದರ ಮುಖಾಂತರ ನದಿಗಳನ್ನು ಹಾಳು ಮಾಡುತ್ತಿದ್ದೇವೆ. ನದಿಗಳು ನಮ್ಮ ಮೂಲ ಸಂಪತ್ತು. ಈ ನಿಟ್ಟಿನಲ್ಲಿ ನಾವು ನದಿಗಳನ್ನು ಕಾಪಾಡಬೇಕು ಎಂದು ನುಡಿದರು.

ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕರಾದ ನರಸೋಜಿ ರಾವ್, ಶ್ರೀನಿವಾಸ್, ರೋಟರಿ ಜಿ.ವಿಜಯ್ ಕುಮಾರ್, ಸತೀಶ್, ಅರುಣ್, ಮಹೇಶ್, ಗಾಯಿತ್ರಿ, ಶೋಭಾ, ಶೈಲಾ ವಿಕ್ರಂ, ಶಂಕರ್, ಶಶಿಧರ್, ಮಾಲತಿ, ಸುಮಾ,
ಹಾಗೂ ಯೋಗ ಬಂಧುಗಳು ಉಪಸ್ಥಿತರಿದ್ದರು. ಇದರೊಂದಿಗೆ ಪರಿಸರ ಗೀತೆಗಳನ್ನು ಹಾಡಲಾಯಿತು.

B.Y.Raghavendra ಬಿ.ವೈ.ರಾಘವೇಂದ್ರ 2 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು: ನಾಲ್ಕನೇ ಬಾರಿಗೆ ಸಂಸದರಾದ ಸಂಭ್ರಮ

0

B.Y.Raghavendra ಶಿವಮೊಗ್ಗ ಲೋಕಸಭಾ ಚುನಾವಣೆ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಭರ್ಜರಿ ಗೆಲುವು ಸಾಧಿಸಿ ನಾಲ್ಕನೇ ಬಾರಿಗೆ ಸಂಸತ್ ಪ್ರವೇಶ ಮಾಡಲಿದ್ದಾರೆ. ಅವರು ತಮ್ಮ ಸಮೀಪ ಸ್ಪರ್ಧಿ ಕಾಂಗ್ರೆಸ್‌ನ ಗೀತಾ ಶಿವರಾಜ್ ಕುಮಾರ್ ಅವರಿಗಿಂತ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಪ್ರಾರಂಭಿಕ ಹಂತದಿಂದಲೂ ಕೂಡ ಬಿ.ವೈ. ರಾಘವೇಂದ್ರ ಅವರು ಮುನ್ನಡೆ ಗಳಿಸಿದ್ದರು.

ಅಂಚೆ ಮತಗಳಿಂದಲೂ ಕೂಡ ಲೀಡ್ ಪಡೆದಿದ್ದ ಅವರು ಇವಿಎಂಗಳ ಮತ ಎಣಿಕೆ ಆರಂಭವಾಗುತ್ತಿದ್ದಂತೆಯೆ ಪ್ರತಿ ಸುತ್ತಿನಲ್ಲಿಯೂ ಗೆಲುವಿನ ಅಂತರವನ್ನು ಹೆಚ್ಚಿಸುತ್ತಾ ಹೋದರು. ಬೆಳಗ್ಗೆ 11ಗಂಟೆಗೆ 11,380 ಮತಗಳಿಂದ ಮುಂದಿದ್ದರೆ 12 ಗಂಟೆಗೆ 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರ ಕಾಯ್ದುಕೊಂಡರು. 12.20 ಕ್ಕೆ ರಾಘವೇಂದ್ರ ಅವರು ಸುಮಾರು 5 ಲಕ್ಷ 20 ಸಾವಿರ ಮತಗಳನ್ನು ಪಡೆದು 1.50 ಲಕ್ಷ ಮತಗಳ ಅಂತರ ಕಾಪಾಡಿಕೊಂಡರು. 1 ಗಂಟೆಗೆ 1.86 ಲಕ್ಷ ಮತಗಳ ಅಂತರ ಕಾಯ್ದುಕೊಂಡಿದ್ದರು. ಮಧ್ಯಾಹ್ನ 3ಗಂಟೆ ಹೊತ್ತಿಗೆ ರಾಘವೇಂದ್ರ 754381 ಮತ ಪಡೆದರೆ, ಗೀತಾ ಶಿವರಾಜ್ ಕುಮಾರ್ ಅವರು 522674 ಮತ ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಅವರು 29123 ಮತ ಪಡೆದಿದ್ದಾರೆ.
ಹೀಗೆ ಪ್ರತಿ ಸುತ್ತಿನಲ್ಲಿಯೂ ಬಿ.ವೈ. ರಾಘವೇಂದ್ರ ಅವರು ತಮ್ಮ ಸಮೀಪ ಸ್ಪರ್ಧಿ ಗೀತಾ ಶಿವರಾಜ್ ಕುಮಾರ್ ಅವರಿಗಿಂತ ಹೆಚ್ಚು ಮತಗಳನ್ನು ಕಾಯ್ದುಕೊಂಡು ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಗೀತಾ ಶಿವರಾಜ್ ಕುಮಾರ್ 5,20 ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.
ಆದರೆ, ಬಿಜೆಪಿಯಿಂದ ಬಂಡಾಯವೆದ್ದು ರಾಷ್ಟ್ರ ಭಕ್ತರ ಬಳಗದಿಂದ ಸ್ಪರ್ಧಿಸಿ ರಾಷ್ಟ್ರದ ಗಮನಸೆಳೆದಿದ್ದ ಕೆ.ಎಸ್. ಈಶ್ವರಪ್ಪನವರಿಗೆ ಈ ಚುನಾವಣೆ ಭಾರಿ ಮುಖಭಂಗ ತಂದಿದೆ. ಪ್ರತಿ ಸುತ್ತಿನಲ್ಲಿಯೂ ಅವರು ಅತ್ಯಂತ ಅಲ್ಪ ಮತಗಳನ್ನು ಪಡೆದು ಹಿನ್ನಡೆ ಸಾಧಿಸುತ್ತಲೇ ಹೋದರು.
B.Y.Raghavendra ರಾಘವೇಂದ್ರ ಅವರ ಗೆಲುವಿನಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ರಾಜಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಮತ್ತಷ್ಟು ಶಕ್ತಿ ಬಂದಂತಾಗಿದೆ. ಜಿಲ್ಲೆಯಲ್ಲಿ ಬಿಜೆಪಿ ಪ್ರಬಲವಾಗುವುದಕ್ಕೆ ಇದು ಸಹಾಯಕವಾಗುತ್ತದೆ. ರಾಘವೇಂದ್ರ ಅವರು ಅಭಿವೃದ್ಧಿಯನ್ನೇ ಮುಂದಿಟ್ಟುಕೊಂಡು ಮತ ಯಾಚಿಸಿದ್ದರು. ಅದಕ್ಕೆ ತಕ್ಕ ಪ್ರತಿಫಲ ಸಿಕ್ಕಂತಾಗಿದೆ. ಮತ ಎಣಿಕೆ ಪೂರ್ಣಗೊಂಡ ನಂತರ ಅಂಕಿ ಸಂಖ್ಯೆಗಳಲ್ಲಿ ಬದಲಾವಣೆ ಆಗಲಿದೆ.

ಬಿಜೆಪಿ ಕಛೇರಿಯಲ್ಲಿ ವಿಜಯೋತ್ಸವ :

ಸಂಸದ ಬಿ.ವೈ. ರಾಘವೇಂದ್ರ ಇನ್ನೂ ಒಂದು ಲಕ್ಷ ಮತಗಳ ಎಣಿಕೆ ಬಾಕಿ ಇರುವಾಗಲೇ 224404 ಲಕ್ಷ ಲೀಡ್ ಪಡೆದು ಬಿಜೆಪಿ ಕಚೇರಿಯಲ್ಲಿ ವಿಜಯೋತ್ಸವ ಆಚರಿಸಿದರು. ಇದು ಮಹಿಳಾ ಮತ್ತು ಯುವಶಕ್ತಿಯ ಗೆಲುವಾಗಿದೆ. ಅಪಪ್ರಚಾರದಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ರಾಘವೇಂದ್ರ ಹೇಳಿದರು.
ನಮ್ಮ ಕುಟುಂಬದ, ಕಾರ್ಯಕರ್ತರು ಪಕ್ಷದ ಬಗ್ಗೆ ಹಗುರ ಮಾತನಾಡಿದರು. ದ್ವೇಷದ ಅಪಪ್ರಚಾರ ಮಾಡಿದವರಿಗೆ ಯಾವ ಜಗ ತೋರಿಸಬೇಕೋ ಅದನ್ನು ಜನ ತೋರಿಸಿದ್ದಾರೆ ಎಂದು ಪರೋಕ್ಷವಾಗಿ ಈಶ್ವರಪ್ಪ ಅವರಿಗೆ ಅವರು ಟಾಂಗ್ ಕೊಟ್ಟರು.
ಜನರ ಅಪೇಕ್ಷೆ ಮೇರೆಗೆ ಕೆಲಸ ಮಾಡುತ್ತೇನೆ. ಜನರ ನಿರೀಕ್ಷೆಗೆ ಅನುಗುಣವಾಗಿ ಅಭಿವೃದ್ಧಿ ಕಾರ್ಯ ಮುಂದುವರೆಸುತ್ತೇನೆ. ಅಣ್ಣಾಮಲೈ ಸೋತಿರಬಹುದು. ತಮಿಳುನಾಡಿನಲ್ಲಿ ಉತ್ತಮ ಜನಾಭಿಪ್ರಾಯ ಮೂಡಿಸಿದ್ದಾರೆ. ಶಿವಮೊಗ್ಗಕ್ಕೂ ಬಂದು ನಮ್ಮ ಗೆಲುವಿಗೆ ಶಕ್ತಿ ತುಂಬಿದ್ದಾರೆ. ನನಗೆ ಮತ ಹಾಕಲು ಯುವಕರು ಬೇರೆ ಬೇರೆ ಜಿಲ್ಲೆ ರಾಜ್ಯಗಳಿಂದ ಬಂದು ಮತ ಹಾಕಿದ್ದಾರೆ. ಜೆಡಿಎಸ್ ಬೆಂಬಲ ಕೂಡ ನನ್ನ ಗೆಲುವಿಗೆ ಕಾರಣವಾಗಿದೆ ಎಂದರು.
ದೇವರು ಮೆಚ್ಚುವ ರೀತಿಯಲ್ಲಿ ಜನರ ಅಪೇಕ್ಷೆಗೆ ತಕ್ಕಂತೆ ಕೆಲಸ ಮಾqಡುತ್ತೇನೆ, ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಹೆಚ್ಚು ಸ್ಥಾನ ಗಳಿಸಿದೆ.
ಶಿವಮೊಗ್ಗ ನಗರದಿಂದ 50 ಸಾವಿರ ಲೀಡ್, ಸೊರಬದಿಂದ 18 ಸಾವಿರ, ಸಾಗರ 20, ಶಿಕಾರಿಪುರ 12 ಸಾವಿರ, ಶಿವಮೊಗ್ಗ ಗ್ರಾಮಾಂತರ 30 ಸಾವಿರ, ತೀರ್ಥಹಳ್ಳಿ 24 ಸಾವಿರ, ಬೈಂದೂರು 51 ಸಾವಿರ, ಭದ್ರಾವತಿಯಲ್ಲಿ 6 ಸಾವಿರ ಲೀಡ್ ಬಂದಿದೆ ಎಂದರು.

Klive Special Article ಕೆ ಲೈವ್ ವಿಶೇಷ ಮೆಚ್ಚುವಂಥ ಮತದಾರನ ಬುದ್ಧಿಮತ್ತೆ

0

Klive Special Article ಹದಿನೆಂಟನೇ ಲೋಕಸಭೆ ರಚನೆಗೆ ನಡೆದ ಚುನಾವಣೆ ಭಾರತದ ಎಚ್ಚೆತ್ತ ಮತದಾರರ ಸಂಕೇತವಾಗಿದೆ.

ನರೇಂದ್ರ ಮೋದೀಜಿ ಅವರ “ಚಾರ್ ಸೌ ಪಾರ್ ” ಸ್ಲೋಗನ್
ಬಗ್ಗೆ ಅದೊಂದು ಮೈಂಡ್ ಗೇಮ್ ಅಂತ ವಿಶ್ಲೇಷಕರ ಅಂಬೋಣ.

ಆದರೂ ಕಳೆದೆರಡು ಸಾರ್ವತ್ರಿಕ ಚುನಾವಣೆಗಳಲ್ಲಿ
ಅಭೂತಪೂರ್ವ ಮುನ್ನಡೆ ಪಡೆದ ನರೇಂದ್ರ ಮೋದಿ ಅವರ. ಚರಿಶ್ಮಾ ಈ ಬಾರಿ ಕೆಲಸ ಮಾಡಲಿಲ್ಲ.

ಸುಮಾರು 293 -5 ರ ನಡುವೆಯೇ ಲೋಲಕದಂತಿರುವ ಸಂಖ್ಯೆ “ತೀನ್ ಸೌ ಪಾರ್ ” ಕೂಡ ಆಗಿಲ್ಲ.

ಮೋದಿ ಮೊದಲಿಗೆ ‘ಹಿಂದುತ್ವ”ಪ್ಲೆ ಕಾರ್ಡ್
ಹಿಡಿದರು. ಗೆದ್ದರು.
ನಂತರ “ಮಂದಿರ’ ಗೆದ್ದರು. ಈ ಅವಧಿಯಲ್ಲಿ ಅನೇಕ
ತಲ್ಲಣ,ಆತಂಕಗಳನ್ನ
‘ಕೋವಿಡ್ ‘ ನಿಂದಾಗಿ ದೇಶದ ಜನ ಅನುಭವಿಸುವಂತಾಯಿತು.
ಈ ಸಂಕಷ್ಟ ಪರಿಸ್ಥಿತಿಯನ್ನ ತುಂಬಾ ಗಂಭೀರವಾಗಿಯೇ ಮೋದಿ ನಿರ್ವಹಿಸಿದರು.
ತಾವು ಭಾರತ ಪ್ರಜಾಪ್ರಭುತ್ವದ ಚೌಕಿದಾರ್ ಎಂದು ಕರೆದುಕೊಂಡರು.

ವಿರೋಧಿಗಳಿಗೆ ಇಲ್ಲಿಯವರೆಗೂ ಬಿಜೆಪಿಯ ಹಿಂದುತ್ವ ವಾದವೊಂದೇ ಕೋಮುವಾದವಾಗಿ
ಅವರ ಪ್ರಣಾಳಿಕೆಯಾಗಿರುತ್ತಿತ್ತು.

ಆದರೆ ತ್ರಿವಳಿ ತಲಾಖ್ ನಂತಹ ಪದ್ಧತಿಯನ್ನ ಅಮಾನ್ಯ, ಜಮ್ಮು ಕಾಶ್ಮೀರ 370 ನೇ ವಿಧಿ ರದ್ದು ಇತ್ಯಾದಿ ಪ್ರಮುಖ ಸುಧಾರಣೆಗಳನ್ನ ಕೈಗೊಂಡಾಗ ವಿಪಕ್ಷಗಳು‌ ಮಾತಿಲ್ಲದೇ ಮೂಕವಾದವು.
ಶ್ರೀನಗರದ ಲಾಲ್ ಚೌಕದಲ್ಲಿ ತ್ರಿವರ್ಣ ರಂಜಿತ ಧ್ವಜ ಹಾರಾಡಿತು.

ಜಮ್ಮುಕಾಶ್ಮೀರ ಚುನಾವಣೆಯಲ್ಲಿ ಅನಭಿಷಕ್ತ ನಾಯಕ ಓಮರ್ ಅಬ್ದುಲ್ಲಾ ಈ ಬಾರಿಯ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ್ದಾರೆ. ಅವರ ವಿರುದ್ಧ ರಶೀದ್ ಎಂಬ
ಪಕ್ಷೇತರ ಅಭ್ಯರ್ಥಿ ಜಯಗಳಿಸಿದ್ದಾರೆ.

ಇವೆಲ್ಲಾ ಭಾವನಾತ್ಮಕ ಒಂದೇ ಅಲ್ಲ. ಸಾಮಾಜಿಕವಾಗಿ ಆಗಬೇಕಾದ ಬದಲಾವಣೆಗಳಾಗಿದ್ದವು.
ಪುಲ್ವಾಮ ದಾಳಿ ನಿರ್ವಹಣೆ. ಚಂದ್ರಯಾನದ ಯಶಸ್ಸು ಹೀಗೆ ಒಂದೇ ಎರಡೆ?
ಮೋದಿ ಅವರನ್ನ ಮತ್ತೆ ಓರ್ವ ಸ್ಫುಟ ನಾಯಕ ಮಣಿಯಂತೆ ಮಾಡಿದವು.

ವಿಪಕ್ಷಗಳು ಟೀಕಾಸ್ತ್ರಕ್ಕಾಗಿ‌ ಕಾಯುತ್ತಿದ್ದವು. ಸಿಕ್ಕದ್ದೇ ಅದಾನಿ ಅಂಬಾನಿ.

ಈ ಬಾರಿಯ ಚುನಾವಣೆಯಲ್ಲಿ
ದೇಶದ ಇತರ ಬಿಜೆಪಿ ವಿರೋಧ ಪಕ್ಷಗಳನಗನ ಕಲೆಹಾಕಿ ಮುಖ್ಯ ಭೂಮಿಕೆಯನ್ನ ಕಾಂಗ್ರೆಸ್ ರಚಿಸಿತು.
ಇಂಡಿ ತಂಡವು ಆರಂಭ ಶೂರತ್ವ ಅನಿಸಿತು.
ಕಾಂಗ್ರೆಸ್ ನಾಯಕರಲ್ಲಿ ಅನುಭವಿ ಮಲ್ಲಿಕಾರ್ಜುನ ಖರ್ಗೆ ಒಬ್ಬರೇ ಅಧಿಕಾರಯುತವಾಗಿ
ಬಿಜೆಪಿಯ ಮೇಲೆ ಮೋದೀಜಿಯ ಮೇಲೆ ವಾಗ್ದಾಳಿ ನಡೆಸಿದರು.
ರಾಹುಲ್ ಭಾಷಣಗಳೆಲ್ಲವೂ
ಅರೆಬರೆ ವಿಷಯಗಳ‌ಅಗಿದ್ದು ಆಳವೇ ಇರಲಿಲ್ಲ.
ಕೊನೆಗೆ ಮೋದಿವರ
ಉಡುಪು, ಭಾಷಣ ಮಾತಿನ ವಾಕ್ಯಗಳು
ಮುಖಭಂಗಿ‌ ಇವೆ ರಾಹುಲ್ ಗರ ಅಣಕು‌ ಮಾಡುವ ವಸ್ತುಗಳಾದವು.
ಜೊತೆಗೆ ಗ್ಯಾರಂಟಿ ಹೇಳುವಾಗ ಕೈಯಲ್ಲಿ ಅಧಿಕಾರ ಸಿಕ್ಕೇಬಿಟ್ಟಿದೆ ಎಂದು
ವರ್ಷಕ್ಕೆ ಕುಟುಂಬದ ಓರ್ವ ಮಹಿಳೆಗೆ ಒಂದು ವರ್ಷಕ್ಕೆ ಲಕ್ಷರೂಪಾಯಿಯನಗನ ಟಕಾಟಕ್ ಬ್ಯಾಂಕ್ ಖಾತೆಗೆ ಹಾಕುವುದಾಗಿ ಪ್ರಣಾಳಿಕೆ ಮಾತನ್ನೇ ಭಾಣವನ್ನಾಗಿಸಿದರು.
ಸಾಲದಾದರೆ ಒಂದಲ್ಲ ಎರಡು ಲಕ್ಷ ಹಾಕುತ್ತೇವೆ ಎಂದೂ ಹಿಂದೆಮುಂದೆ ನೋಡದೇ ಭರವಸೆ ನೀಡಿದರು.
ಅಧಿಕಾರ ಹಿಡಿದ ಮಾರನೇ ದಿನವೇ ಹಣ‌ ಬ್ಯಾಂಕ್ ಖಾತೆಗೆ ಹಾಕುವುದಾಗಿ ಹೇಳಿಬಿಟ್ಟರು. ಇಂದಿನ ಫಲಿತಾಂಶ ನೋಡಿದರೆ ನಮ್ಮ ಮತದಾರ ಪಕ್ಷಗಳ ಪ್ರಣಾಳಿಕೆಗಿಂತ ಬುದ್ದಿಮತ್ತೆ ತೋರಿದ್ದಾರೆ.

Klive Special Article ಭಾವನಾತ್ಮಕ ವಿಷಯಗಳನ್ನ ಸಾಕು ಮಾಡಿ. ಉಚಿತ ಕೊಡುಗೆಗಳನ್ನ ನೀಡಿ
ಪರಾವಲಂಬಿಗಳನ್ನಾಗಿ ಮಾಡಬೇಡಿ. ಸಾಮಾಜಿಕ ಸಮಸ್ಯೆಗಳು,ದೇಶದ
ಅಭಿವೃದ್ಧಿ , ಅಂತಾರಾಷ್ಟ್ರೀಯ ಅಗತ್ಯಗಳ ಬಗ್ಗೆ ‌ಕೆಲಸಮಾಡಿ .
ಒಂದೇ ಪಕ್ಷಕ್ಕೆ ಪೂರ್ಣ ಬಹುಮತ ಬೇಡ. ಆಡಳಿತ ಮತ್ತು ವಿರೋಧ ಪಕ್ಷಗಳು ಆದಷ್ಟೂ ಸಮವಲ್ಲದಿದ್ದರೂ ಸಮರ್ಥವಾಗಿರಲಿ ಎಂದು ‌ಮತ ತೀರ್ಪು ನೀಡಿದಂತಿದೆ.