Sharada Poorya nayak ಪಕ್ಷದ ನಾಯಕರು ಕೊಟ್ಟ ಚುನಾವಣೆಯ ಜವಾಬ್ದಾರಿಯನ್ನು ಸಮರ್ಪಕವಾಗಿ ಈಡೇರಿಸುವುದರ ಮೂಲಕ ಬಿಜೆಪಿ ಜೊತೆಗಿನ ಮೈತ್ರಿ ಯಶಸ್ವಿಯಾಗುವಂತೆ, ಶಿವಮೊಗ್ಗ ಕ್ಷೇತ್ರದಲ್ಲಿ ಜಯಶಾಲಿಯಾಗುವಂತೆ ಮಾಡಿದ್ದೇವೆ ಎಂದು ಶಾಸಕಿ ಶಾರದಾ ಪೂರ್ಯನಾಯ್ಕ ಹೇಳಿದರು.
ಸುದ್ದಿಗೋ಼ಷ್ಠಿಯಲ್ಲಿ ಮಾತನಾಡಿದ ಅವರು, ಶ್ರಮವಹಿಸಿ ಕಾರ್ಯಕರ್ತರು ಬಿಜೆಪಿ ಪರ ಕೆಲಸ ಮಾಡಿದ್ದಾರೆ. ರಾಘವೇಂದ್ರ ಗೆಲುವು ಖುಷಿ ತಂದುಕೊಟ್ಟಿದೆ. ರಾಜ್ಯದಲ್ಲೂ ಸಹ ಬಿಜೆಪಿ ಜೊತೆಗೆನ ಮೈತ್ರಿಯಿಂದ ಎರಡೂ ಪಕ್ಷಕ್ಕೆ ಅನುಕೂಲವಾಗಿದೆ ಎಂದರು.
ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಕೆ. ಬಿ. ಪ್ರಸನ್ನಕುಮಾರ್ ಮಾತನಾಡಿ, ಬಿಜೆಪಿ ಅಭ್ಯರ್ಥಿಯ ಉತ್ತಮ ಕೆಲಸದಿಂದ ಮತ್ತು ಜೆಡಿಎಸ್‌ನ ಸಹಕಾರದಿಂದ ಶಿವಮೊಗ್ಗ ಕ್ಷೇತ್ರದಲ್ಲಿ ಗೆಲುವು ಸುಲಭವಾಗಿದೆ. ರಾಜ್ಯ ಸರಕಾರ ಗ್ಯಾರಂಟಿ ಮೂಲಕ ಚುನಾವಣೆ ನಡೆಸಿದರೂ ಯಶಸ್ವಿಯಾಗಲಿಲ್ಲ. ಕಡಿಮೆ ಸ್ಥಾನ ಗಳಿಸಿದ ಹಿನ್ನೆಲೆಯಲ್ಲಿ ಗ್ಯಾರಂಟಿ ನಿಲ್ಲಿಸಬಾರದು. ಅಭಿವೃದ್ಧಿ ಕೆಲಸಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು. ಜಿಪಂ ಮತ್ತು ತಾಪಂ, ಪಾಲಿಕೆಯ ಚುನಾವಣೆಗೆೆ ಶೀಘ್ರ ಅಧಿಸೂಚನೆ ಹೊರಡಿಸಬೇಕೆಂದು ಆಗ್ರಹಿಸಿದರು.
Sharada Poorya nayak ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕಡಿದಾಳ ಗೋಪಾಲ್ ಮಾತನಾಡಿ, ರಾಘವೇಂದ್ರ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅದರೊಟ್ಟಿಗೆ ಜೆಡಿಎಸ್‌ನವರೊಂದಿಗೆ ಮೈತ್ರಿಯು ಅವರ ಗೆಲುವಿನಲ್ಲಿ ಫಲ ಕೊಟ್ಟಿದೆ. ಗೆದ್ದ ನಂತರ ಜೆಡಿಎಸ್ ಕಚೇರಿಗೆ ಬಂದು ಪಕ್ಷದವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ನಾವೂ ಸಹ ಅವರನ್ನು ಅಭಿನಂದಿಸಿದ್ದೇವೆ. ಜೆಡಿಎಸ್ ಪ್ರಾಬಲ್ಯವಿರುವ ಜಿಲ್ಲೆಗಳಲ್ಲಿ ವಿಶೇಷವಾಗಿ ಮೈಸೂರು ಭಾಗಗಳಲ್ಲಿ ಬಿಜೆಪಿಗೆ ಮೈತ್ರಿ ಅನುಕೂಲ ಕಲ್ಪಿಸಿಕೊಟ್ಟಿದೆ. ಇದರಿಂದ ಕಾಂಗ್ರೆಸ್‌ಗೆ ಪ್ರಬಲ ಪೆಟ್ಟು ಬಿದ್ದಿದೆ. ಮೈತ್ರಿಯಿಂದ ನಷ್ಟವೇನೂ ಆಗಿಲ್ಲ. ಹಾಸನದ ಸೋಲಿಗೆ ವಿಷಾದವಿದೆ ಎಂದರಾದರೂ ಸೋಲಿಗೆ ನಿರ್ದಿಷ್ಟ ಕಾರಣವನ್ನು ಹೇಳಲು ಅವರು ನಿರಾಕರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ದೀಪಕ್ ಸಿಂಗ್, ನರಸಿಂಹ ಗಂಧದಮನೆ, ವಿನಯ್, ಗೀತಾ ಪವಾರ್ ಮೊದಲಾದವರಿದ್ದರು.
Sharada Pooryanayak ಶಿವಮೊಗ್ಗ ಗ್ರಾಮಾಂತರದಲ್ಲೂ ರಾಘವೇಂದ್ರಗೆ ಲೀಡ್: ಜಿಲ್ಲೆಯಲ್ಲಿ ಮೈತ್ರಿ ಯಶಸ್ವಿ- ಶಾಸಕಿ ಶಾರದಾ ಪೂರ್ಯಾನಾಯಕ್
B.Y. Raghavendra ಬಂಗಾರಪ್ಪ ದಾಖಲೆ ಸರಿಗಟ್ಟಿದ ಬಿ.ವೈ.ರಾಘವೇಂದ್ರ
B.Y. Raghavendra ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿ.ವೈ. ರಾಘವೇಂದ್ರ ನಾಲ್ಕನೇ ಬಾರಿ ಗೆಲುವು ಸಾಧಿಸುವ ಮೂಲಕ ಬಂಗಾರಪ್ಪ ಅವರ ದಾಖಲೆ ಸರಿಗಟ್ಟಿದ್ದಾರೆ. ಅಷ್ಟೇ ಅಲ್ಲದ ಅತಿ ಹೆಚ್ಚು ಅಂತರದ ಗೆಲುವು ಸಾಧಿಸುವ ಮೂಲಕ ಹಿಂದಿನ ರೆಕಾರ್ಡ್ ಮುರಿದಿದ್ದಾರೆ.
ರಾಘವೇಂದ್ರ ಈ ಸಲ ಪ್ರಮುಖ ಸಾಧನೆಗಳನ್ನ ದಾಖಲಿಸಿದ್ದಾರೆ. ೨೦೦೯ ರಲ್ಲಿ ಅವರು ಮೊದಲ ಸಲ ಚುನಾವಣೆಗೆ ಸ್ಪರ್ಧಿಸಿ ೪೮೨,೭೮೩ ಮತಗಳನ್ನು ಪಡೆದಿದ್ದು ಒಟ್ಟಾರೆ ಮತದಾನದ ಪ್ರಮಾಣದಲ್ಲಿ ಶೇಕಡಾ ೫೦ ಕ್ಕಿಂತ ಹೆಚ್ಚು ಮತ ಪಡೆದಿದ್ದರು. ಆನಂತರ ೨೦೧೪ ರಲ್ಲಿ ಬಿಎಸ್ ಯಡಿಯೂರಪ್ಪ ಸಂಸದರಾಗಿ ಆಯ್ಕೆಯಾಗಿದ್ದರು, ಅದಾದ ಬಳಿಕ ೨೦೧೮ ರಲ್ಲಿ ನಡೆದ ಉಪಚುನಾವಣೆ ಸಂದರ್ಭದಲ್ಲಿ ಬಿವೈಆರ್ ಮತ್ತೆ ಸ್ಪರ್ಧಿಸಿ ೫೪೩,೩೦೬ ಮತಗಳನ್ನ ಪಡೆದಿದ್ದರು. ಆಗಲು ಸಲ ಅವರು ೫೦.೭೩ ಶೆಕಡಾವಾರು ಮತ ಪಡೆದಿದ್ದರು. ಹಿಂದಿನ ಚುನಾವಣೆಗೆ ಹೋಲಿಸಿದ್ದರೇ ಶೇಕಡಾವಾರು ಮತಗಳಲ್ಲಿ ತುಸು ಕಡಿಮೆಯಾಗಿತ್ತು.
ಇನ್ನೂ ೨೦೧೯ ರಲ್ಲಿ ನಡೆದ ಚುನಾವಣೆಯಲ್ಲಿ ೭೨೯,೮೭೨ ಮತ ಪಡೆದಿದ್ದ ರಾಘವೇಂದ್ರ ಶೇಕಡಾ ವಾರು೫೬.೮೬ ರಷ್ಟು ಮತಪಡೆದು ತಮ್ಮ ಗ್ರಾಫ್ ಏರಿಸಿಕೊಂಡಿದ್ದರು. ಇನ್ನೂ ಈ ಸಲ ಅಂದರೆ ೨೦೨೪ ರ ಚುನಾವಣೆಯಲ್ಲಿ ೭,೭೮,೭೨೧ ಮತಗಳನ್ನ ಪಡೆದು ನಾಲ್ಕನೇ ಸಲ ಸಂಸದರಾಗಿ ಆಯ್ಕೆಯಾಗಿದ್ದಾರೆ. ಇನ್ನೂ ಈ ಸಲ ರಾಘವೇಂದ್ರರವರು ತಮ್ಮ ಮತಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದು ೧೫ ವರ್ಷದಲ್ಲಿ ಅವರಿಗೆ ಬಿದ್ದ ಮತಗಳ ಪ್ರಮಾಣ ಎರಡುವರೆ ಲಕ್ಷಕ್ಕಿಂತಲೂ ಹೆಚ್ಚಾಗಿದೆ.
B.Y. Raghavendra ನಾಲ್ಕನೆ ಬಾರಿಗೆ ಆಯ್ಕೆಯಾಗುವ ಮೂಲಕ ಶಿವಮೊಗ್ಗದಲ್ಲಿ ಅತಿಹೆಚ್ಚು ಬಾರಿ ಸಂಸದರಾದ ವ್ಯಕ್ತಿ ಎಂಬ ದಾಖಲೆ ಬರೆದಿದ್ದಾರೆ. ಶಿವಮೊಗ್ಗದಲ್ಲಿ ಟಿವಿ ಚಂದ್ರಶೇಖರಪ್ಪ ಎರಡು ಸಲ ಎಂಪಿಯಾಗಿದ್ದರು. ಆ ಬಳಿಕ ಮಾಜಿ ಸಿಎಂ ಬಂಗಾರಪ್ಪ ೧೯೯೬, ೧೯೯೯, ೨೦೦೪, ಮತ್ತು ೨೦೦೫ ಸಂಸದರಾಗಿದ್ದರು. ಈ ಮೂಲಕ ಅವರು ನಾಲ್ಕು ಸಲ ಸಂಸದರಾಗಿ ಆಯ್ಕೆಯಾದ ಸಾಧನೆ ಮಾಡಿದ್ದರು.. ಇನ್ನೂ ೨೦೦೯ರಲ್ಲಿ ಬಿ.ವೈ. ರಾಘವೇಂದ್ರ ವಿರುದ್ಧ ಎಸ್ ಬಂಗಾರಪ್ಪ ಬಳಿಕ ಸೋಲು ಕಂಡಿದ್ದರು. ೨೦೦೯ರಲ್ಲಿ ಮೊದಲ ಬಾರಿ ಸಂಸದರಾಗಿ ಆಯ್ಕೆಯಾದ ಬಿ.ವೈ.ರಾಘವೇಂದ್ರ, ೨೦೧೮ರ ಉಪ ಚುನಾವಣೆ, ೨೦೧೯ ಜನರಲ್ ಎಲೆಕ್ಷನ್ ನಲ್ಲಿ ಗೆದ್ದಿದ್ದರು. ಇದೀಗ ಅಂದರೆ, ೨೦೨೪ರ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಬಂಗಾರಪ್ಪರವರ ಸಾಲಿನಲ್ಲಿ ಸೇರಿದ್ದಾರೆ. ಬಂಗಾರಪ್ಪ, ಮಧು ಬಂಗಾರಪ್ಪ, ಗೀತಾ ಶಿವರಾಜಕುಮಾರ್ ಹೀಗೆ ಸಾರೆಕೊಪ್ಪ ಬಂಗಾರಪ್ಪರವರು ಹಾಗೂ ಅವರ ಮಕ್ಕಳನ್ನ ಸೋಲಿಸಿದ ದಾಖಲೆಯನ್ನು ಸಹ ಬಿವೈ ರಾಘವೇಂದ್ರ ತಮ್ಮದಾಗಿಸಿಕೊಂಡಿದ್ದಾರೆ.
Indian Mountaineering Foundation ಉತ್ತರಾಖಂಡ್ ಚಾರಣದಲ್ಲಿದ್ದ ಕರ್ನಾಟದ ನಾಲ್ವರ ಮರಣ
Indian Mountaineering Foundation ಚಾರಣಕ್ಕೆಂದು ತೆರಳಿದ್ದ ಕರ್ನಾಟಕದ ನಾಲ್ವರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಈ ಹಿನ್ನೆಲೆ ತಂಡದ ನೆರವಿಗಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಉತ್ತರಾಖಂಡಕ್ಕೆ ಪ್ರಯಾಣ ಬೆಳೆಸಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ನೀಡಿರುವ ಸಚಿವ ಕೃಷ್ಣ ಬೈರೇಗೌಡ, “ಕರ್ನಾಟಕದ 20 ಜನ ಚಾರಣಿಗರು ಹಾಗೂ ಓರ್ವ ಗೈಡ್ ಒಳಗೊಂಡ ತಂಡ ಉತ್ತರಾಖಂಡದ ಎತ್ತರದ ಶಾಸ್ತ್ರತಾಳ್ ಮಯಳಿ ಎಂಬ ಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆ ಚಾರಣ ಆರಂಭಿಸಿದ್ದರು. ಗಮ್ಯಸ್ಥಾನ ತಲುಪಿದ ತಂಡ ಮತ್ತೆ ಶಿಬಿರಕ್ಕೆ ಹಿಂತಿರುಗಲು ಯತ್ನಿಸಿದೆ. ಆದರೆ, ಹಿಂತಿರುಗುವ ಮಾರ್ಗ ಮಧ್ಯೆ ನಿನ್ನೆ ಮಧ್ಯಾಹ್ನ 2 ಗಂಟೆಗೆ ಹಿಮಗಾಳಿಯಿಂದಾಗಿ ಹವಾಮಾನ ಸಂಪೂರ್ಣ ಹದಗೆಟ್ಟಿದೆ. ಹೀಗಾಗಿ ಎಲ್ಲಾ ಚಾರಣಿಗರು ಅದೇ ಸ್ಥಳದಲ್ಲಿ ಅಪಾಯಕ್ಕೆ ಸಿಲುಕಿದ್ದರು” ಎಂದು ತಿಳಿಸಿದ್ದಾರೆ.
Indian Mountaineering Foundation “ಕರ್ನಾಟಕದ ಚಾರಣಿಗರು ಪ್ರತಿಕೂಲ ವಾತಾವರಣದಿಂದಾಗಿ ಅಪಾಯಕ್ಕೆ ಸಿಲುಕಿದೆ ಎಂಬ ಮಾಹಿತಿ ನಿನ್ನೆ ರಾತ್ರಿ ನಮಗೆ ತಿಳಿದು ಬಂದಿತ್ತು. ಕೂಡಲೇ ಜಿಲ್ಲಾಡಳಿತದ ಮುಖಾಂತರ ಉತ್ತರಾಖಂಡ ಸರ್ಕಾರ, ಭಾರತೀಯ ಪರ್ವತಾರೋಹಣ ಒಕ್ಕೂಟ ಮತ್ತು ಕೇಂದ್ರ ಸರ್ಕಾರದ ಗೃಹ ಇಲಾಖೆಯನ್ನು ಸಂಪರ್ಕಿಸಲಾಯಿತು. ಅವರ ಸಹಾಯದಿಂದ ಕರ್ನಾಟಕದ ಚಾರಣಿಗರ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ” ಎಂದು ಸಚಿವರು ತಿಳಿಸಿದ್ದಾರೆ.
Rotary Club Shivamogga ಆಶಾಕಿರಣ ಶಾಲೆಗೆ ಪ್ರವೇಶಾತಿಗೆ ಅರ್ಜಿ ಆಹ್ವಾನ
Rotary Club Shivamogga ರೋಟರಿ ಕ್ಲಬ್ 75ನೇ ವಾರ್ಷಿಕ ದತ್ತಿನಿಧಿ ಇವರ ಪ್ರಾಯೋಜಕತ್ವದ ಅಂಗವಿಕಲರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಹಾಗೂ ಜಿ.ಪಂ. ಇವರ ಅನುದಾನದಲ್ಲಿ ನಡೆಸುತ್ತಿರುವ ವಿದ್ಯಾನಗರದ ಆಶಾಕಿರಣ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆ ಪ್ರಸಕ್ತ ಸಾಲಿನ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಿದೆ.
Rotary Club Shivamogga ಉಚಿತ ವಸತಿ ಹಾಗೂ ವಿದ್ಯಾಭ್ಯಾಸ ನೀಡಲಾಗುವ ಈ ಪ್ರತಿಷ್ಠಿತ ಸಂಸ್ಥೆಗೆ ೬ರಿಂದ ೧೮ವರ್ಷದ ಒಳಗಿನ ಬುದ್ಧಿ ಮಾಂಧ್ಯ ಮಕ್ಕಳನ್ನು ಪೋಷಕರು ಸೇರಿಸಬಹುದಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗೆ ಶಾಲೆಯ ಅಧ್ಯಕ್ಷೆ ಡಾ| ರಜನಿ ಪೈ ಮೊ. ೯೪೪೮೨೮೮೪೮೭, ಕಾರ್ಯದರ್ಶಿ ಎ. ಮಂಜುನಾಥ್ ಮೊ. ೯೮೪೪೦೫೫೨೬೭, ಮುಖ್ಯೋ ಪಾಧ್ಯಾಯ ಎಂ. ಚಂದ್ರಯ್ಯ ಮೊ. ೯೯೪೫೭೯೭೧೨೦ರಲ್ಲಿ ಸಂಪರ್ಕಿಸಲು ಕೋರಲಾಗಿದೆ.
Rotary Shivamogga ಪರಿಸರ ಶುದ್ಧವಾಗಿದ್ದರೆ ನಮ್ಮ ಬದುಕು ಹಸನು ಚಂದ್ರಶೇಖರಯ್ಯ
Rotary Shivamogga ನಮ್ಮ ಸುತ್ತಮುತ್ತ ಇರುವ ನೆಲ, ಜಲ, ಗಿಡ, ಮರ, ಗಾಳಿ, ಬೆಳಕು, ಶಬ್ದ, ನದಿ ದಂಡೆ ಹಾಗೂ ಖಾಲಿ ಜಾಗ ಇವುಗಳನ್ನು ಒಟ್ಟಾರೆಯಾಗಿ ಪರಿಸರ ಎಂದು ಕರೆಯಲಾಗುತ್ತಿದ್ದು, ಈ ಪರಿಸರ ಶುದ್ಧವಾಗಿದ್ದಾಗ ಮಾತ್ರ ನಮ್ಮ ಬದುಕು ಹಸನಾಗಿರುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಮಾನವ ಕುಲವು ತನ್ನ ದುರಾಸೆಯಿಂದ ಸುತ್ತಮುತ್ತಲಿನ ಸಂಪನ್ಮೂಲಗಳನ್ನು ಬೇಕಾಬಿಟ್ಟಿಯಾಗಿ ಬಳಸಿಕೊಂಡು, ನಮ್ಮ ಪರಿಸರವನ್ನು ಹಾಳು ಮಾಡುತ್ತಿದ್ದಾರೆ ಎಂದು ರೋಟರಿ ಶಿವಮೊಗ್ಗ ಪೂರ್ವ ಎಜುಕೇಷನಲ್ & ಛಾರಿಟಬಲ್ ಟ್ರಸ್ಟ್ (ರಿ.,)ನ ಮ್ಯಾನೇಜಿಂಗ್ ಟ್ರಸ್ಟಿ & ನಿವೃತ್ತ ಡಿ.ಪಿ.ಐ. ಆದ ರೊ. ಚಂದ್ರಶೇಖರಯ್ಯ ಎಂ. ಇವರು ಹೇಳಿದರು.
ನಾವು ಉಸಿರಾಡುವ ಗಾಳಿ, ಕುಡಿಯುವ ನೀರು, ಸೇವಿಸುವ ಆಹಾರ, ನೋಡುವ ಬೆಳಕು, ಕೇಳುವ ಶಬ್ಧ ಹಾಗೂ ವಾಸಿಸುವ ಮನೆಯ ಸುತ್ತಲಿನ ಪರಿಸರ ಮಲೀನವಾಗಿದ್ದು, ಜನಜೀವನ ದುಸ್ತರವಾಗಿದೆ. ಎಲ್ಲಿಯವರೆಗೆ ಪ್ರಕೃತಿ ಮತ್ತು ಮನುಷ್ಯನ ನಡುವೆ ಸಮತೋಲನ ಇರುವುದಿಲ್ಲವೋ ಅಲ್ಲಿಯವರೆಗೆ ಈ ವಿಶ್ವದಲ್ಲಿ ಮಾನವನ ಜೀವನ ಅತ್ಯಂತ ಕಷ್ಟಕರವಾಗುತ್ತದೆ. ಮಕ್ಕಳಲ್ಲಿ ಹವಮಾನ ಬದಲಾವಣೆ, ಅರಣ್ಯ ನಾಶ, ಹಾಗೂ ಜೀವ ವೈವಿಧ್ಯಗಳ ನಷ್ಟಗಳ ಬಗ್ಗೆ ಜಾಗೃತಿ ಮೂಢಿಸುವ ಉದ್ದೇಶದಿಂದ ವಿಶ್ವ ಪರಿಸರ ದಿನಾಚರಣೆಯನ್ನು ಶಾಲೆಯಲ್ಲಿ ಆಚರಿಸಲಾಗುತ್ತಿದೆ ಎಂದರು.
ಟ್ರಸ್ಟ್ ನ ಉಪಾಧ್ಯಕ್ಷರಾದ ಡಾ|| ಪರಮೇಶ್ವರ್ ಡಿ ಶಿಗ್ಗಾಂವ್ ಮಾತನಾಡಿ ನಮ್ಮ ಸುತ್ತ ಗಿಡ ಮರಗಳನ್ನು ನೆಡುವುದರಿಂದ, ಅವು ಬೆಳೆದು ದೊಡ್ಡದಾದಾಗ ಪರಿಸರವನ್ನು ತಣ್ಣಗೆ ಮಾಡುವುದರ ಜೊತೆಗೆ ದ್ಯುತಿ ಸಂಶ್ಲೇಷಣೆ ಪ್ರಕ್ರಿಯೆಯ ಮೂಲಕ ನಮ್ಮ ಉಸಿರಾಟಕ್ಕೆ ಬೇಕಾದ ಶುದ್ಧ ಆಮ್ಲಜನಕವನ್ನು ಬಿಡುಗಡೆ ಮಾಡಿ ಇಂಗಾಲದ ಡೈ ಆಕ್ಸೈಡ್‌ನ್ನು ಬಳಸಿಕೊಳ್ಳುತ್ತೇವೆ. ಹಾಗಾಗಿ ಗಿಡಗಳನ್ನು ಬೆಳೆಸುವುದರ ಬಗ್ಗೆ ಮಕ್ಕಳು ವಿಶೇಷ ಆಸಕ್ತಿ ವಹಿಸಬೇಕೆಂದು ಕರೆಕೊಟ್ಟರು.
Rotary Shivamogga ಈ ಸಂದರ್ಭದಲ್ಲಿ ಮಾತನಾಡಿದ ಪ್ರೌಢ ಶಾಲಾ ಶಿಕ್ಷಕಿ ಶ್ರೀಮತಿ ಕಾವ್ಯ ಬಿ.ಎಸ್., ಇವರು ವಿಶ್ವ ಪರಿಸರ ದಿನದ ‘ಥೀಮ್’ ಆದ ಭೂಮಿಯ ಪುನರ್ ಸ್ಥಾಪನೆ, ಮರುಭೂಮಿಗಳಲ್ಲಿ ಸಸ್ಯ ಸಂವರ್ಧನೆ ಮಾಡುವುದು ಹಾಗೂ ‘ಬರ’ ಸ್ಥಿತಿ ಸ್ಥಾಪಕತ್ವ ಆಗಿದ್ದು, ಇದನ್ನು ಎಲ್ಲ ರಾಷ್ಟçಗಳ ಮುಖಂಡರು ಮನನ ಮಾಡಿಕೊಂಡು ಈ ಥೀಮ್‌ನ್ನು ಕಾರ್ಯರೂಪಕ್ಕೆ ತರಲು ಅಗತ್ಯವಾದ ಯೋಜನೆಗಳನ್ನು ಸರ್ಕಾರದ ಹಂತದಲ್ಲಿ ರೂಪಿಸಿ ಅನುಷ್ಠಾನಗೊಳಿಸಬೇಕಾಗಿದೆ ಎಂದರು.ಪರಿಸರ ದಿನಾಚರಣೆ ಅಂಗವಾಗಿ ಶಾಲಾ ಆಟದ ಮೈದಾನದ ಸುತ್ತ ಗಿಡನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದರಲ್ಲಿ ಮ್ಯಾನೇಜಿಂಗ್ ಟ್ರಸ್ಟಿ, ರೊ. ಚಂದ್ರಶೇಖರಯ್ಯ ಎಂ., ಉಪಾಧ್ಯಕ್ಷರಾದ ಡಾ|| ಪರಮೇಶ್ವರ್ ಡಿ ಶಿಗ್ಗಾಂವ್, ಖಜಾಂಚಿಯಾದ ರೊ. ವಿಜಯ್ ಕುಮಾರ್ ಜಿ., ಪ್ರಾಂಶುಪಾಲರಾದ ಸೂರ್ಯನಾರಾಯಣ್ ಆರ್., ಮುಖ್ಯ ಶಿಕ್ಷಕಿ ಜಯಶೀಲಾ ಬಾಯಿ ಎಸ್. ಹಾಗೂ ಎಲ್ಲ ಶಿಕ್ಷಕ ವೃಂದ & ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡರು.
Chamber Of Commerce Shivamogga ಪ್ರತಿಯೊಬ್ಬರೂ ಕಸ ವಿಲೇವಾರಿಗೆ ಪ್ರಾಮುಖ್ಯತೆ ನೀಡಬೇಕು- ಜಿ.ವಿಜಯ್ ಕುಮಾರ್
Chamber Of Commerce Shivamogga ಪುಸ್ತಕಗಳು ಜ್ಞಾನ ಭಂಡಾರವನ್ನು ವೃದ್ಧಿಸುವುದರ ಜತೆಗೆ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ, ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಹೇಳಿದರು.
ಹೊಸಮನೆಯ ಶ್ರೀ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನ ಮತ್ತು ಪ್ರೊ. ಸತ್ಯನಾರಾಯಣ ಅವರ ಕೃತಿ ಭಾವತರಂಗ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈಗಾಗಲೇ ಸಾಕಷ್ಟು ಪುಸ್ತಕಗಳನ್ನ ರಚನೆ ಮಾಡಿರುವ ಪ್ರೊ. ಸತ್ಯನಾರಾಯಣ ಅವರ ಸಾಧನೆ ಅನನ್ಯ. ಸಮಾಜಮುಖಿ ಸೇವೆಗಳ ಜತೆಗೆ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕವನಗಳನ್ನ ರಚನೆ ಮಾಡಿ ಇಂದಿಗೂ ಸಹ ವಾಚಿಸುತ್ತಿರುವ ಆಶು ಕವಿಗಳಲ್ಲಿ ಸತ್ಯನಾರಾಯಣ ಒಬ್ಬರು ಎಂದು ತಿಳಿಸಿದರು.
ಪ್ರತಿಯೊಬ್ಬರೂ ಕಸ ವಿಲೇವಾರಿಯಲ್ಲಿ ಪ್ರಾಮುಖ್ಯತೆ ವಹಿಸಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ಸಮರ್ಪಕವಾಗಿ ಕಸ ವಿಲೇವಾರಿ ಮಾಡದೇ ಇದ್ದರೆ ಪರಿಸರಕ್ಕೆ ಇನ್ನಷ್ಟು ತೊಂದರೆಯಾಗುತ್ತದೆ. ಪರಿಸರದ ಬಗ್ಗೆ ಕಾಳಜಿ ವಹಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ. ಸತ್ಯನಾರಾಯಣ ಮಾತನಾಡಿ, ಪರಿಸರ ಸಂರಕ್ಷಣೆಯು ನಮ್ಮೆಲ್ಲರ ಹೊಣೆಯಾಗಿದ್ದು, ಪ್ರತಿಯೊಬ್ಬರೂ ಸಸಿಗಳನ್ನು ನೆಡುವ ಮೂಲಕ ಪೋಷಣೆ ಮಾಡಬೇಕು. ಉತ್ತಮ ಪರಿಸರ ನಿರ್ಮಾಣ ಮಾಡುವಲ್ಲಿ ಎಲ್ಲರೂ ಮಹತ್ತರ ಪಾತ್ರ ವಹಿಬೇಕು ಎಂದು ತಿಳಿಸಿದರು.
Chamber Of Commerce Shivamogga ಇದೇ ಸಂದರ್ಭದಲ್ಲಿ ರೋಟರಿ ಜಿ.ವಿಜಯ್ ಕುಮಾರ್, ನಾಗರಾಜ್ ಅರ್ಕಾಚಾರ್ ಹಾಗೂ ಪ್ರೊ. ಸತ್ಯನಾರಾಯಣ ಅವರನ್ನು ಸನ್ಮಾನಿಸಲಾಯಿತು. ನಾಗರಾಜ್ ಅರ್ಕಾಚಾರ್ ಕಥೆ ಕವನ ವಾಚಿಸಿದರು. ಭಾವ ತರಂಗ ಕವನ ಸಂಕಲನ ಪುಸ್ತಕವನ್ನು ಜಿ.ವಿಜಯಕುಮಾರ್ ಲೋಕಾರ್ಪಣೆಗೊಳಿಸಿದರು.
ಉಪ ಪ್ರಾಚರ್ಯೆ ಲಕ್ಷ್ಮಿ, ಚುಟುಕು ಸಾಹಿತ್ಯ ಪರಿಷತ್ತಿನ ಖಜಾಂಚಿ ರಮೇಶ್ ಕೌಟೇಕರ್, ಅಕ್ಷತಾ ನಿಶ್ಚಿತ, ಡಾ. ರಾಜಶೇಖರಯ್ಯ, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
J.N.N Engineering College ಯುವ ಸಮೂಹ ನಮ್ಮ ಪರಿಸರ ರಕ್ಷಣೆಮಾಡಬೇಕಿದೆ- ಎ.ವಿ.ಸುಬ್ರಹ್ಮಣ್ಯ
J.N.N Engineering College ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ತಮ್ಮ ಬದುಕಿನಲ್ಲಿ ಒಂದು ಗಿಡ ನೆಟ್ಟು ಪೋಷಿಸುವ ಜವಾಬ್ದಾರಿ ಮೂಡಬೇಕಿದೆ ಎಂದು ವಲಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎ.ವಿ.ಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು.
ಶಿವಮೊಗ್ಗ ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಅರಣ್ಯ ಇಲಾಖೆ, ಜಿಲ್ಲಾ ಜೈವಿಕ ಇಂಧನ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರ, ಎನ್.ಎಸ್.ಎಸ್ ಘಟಕ, ರೆಡ್ ಕ್ರಾಸ್ ಘಟಕದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪರಿಸರ ಮತ್ತು ನೀರಿನ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಯುವ ಸಮೂಹ ತಮ್ಮ ಪರಿಸರವನ್ನು ಕಾಪಾಡಿಕೊಳ್ಳಬೇಕಿದೆ. ಆಧುನಿಕತೆ ವ್ಯಾಮೋಹ ಎಂದಿಗೂ ನಮ್ಮ ಪರಿಸರವನ್ನು ಹಾಳು ಮಾಡದಿರಲಿ ಎಂದು ಹೇಳಿದರು.
ಅರಣ್ಯ ವಲಯ ಸಂರಕ್ಷಣಾಧಿಕಾರಿ ಸುಧಾಕರ್ ಮಾತನಾಡಿ, ಮರ ಗಿಡಗಳಿಲ್ಲದೆ ಭೂಮಿ ಮರುಭೂಮಿಯಾಗುತ್ತಿದೆ. ಹವಾಮಾನ ವೈಪರಿತ್ಯ ಜಗತ್ತನ್ನು ತಲ್ಲಣಗೊಳಿಸುತ್ತಿದೆ ಎಂದು ಹೇಳಿದರು.
ಕಾಲೇಜಿನ ಎಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥರಾದ ಡಾ.ಹೆಚ್.ಬಿ.ಸುರೇಶ್ ಮಾತನಾಡಿ, ಜಿಲ್ಲಾ ಜೈವಿಕ ಇಂಧನ ಮಾಹಿತಿ ಮತ್ತು ಪ್ರಾತ್ಯಕ್ಷಿತ ಕೇಂದ್ರವು ಕಳೆದ ೧೫ ವರ್ಷದಿಂದ ಪರಿಸರ ಸಂರಕ್ಷಣೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿ ರೈತರಿಗೆ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಪರಿಸರ ಸಂರಕ್ಷಣೆಯಲ್ಲಿ ಅರಿವು ಮೂಡಿಸುತ್ತಿದೆ. ೨೦,೦೦೦ ಲೀಟರ್ ಜೈವಿಕ ಇಂಧನ ಉತ್ಪಾದನೆ ಮಾಡಿ ಮಾರಾಟ ಮಾಡುತ್ತಾ ಬಂದಿದೆ ಎಂದು ವಿವರಿಸಿದರು.
J.N.N Engineering College ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಶೈಕ್ಷಣಿಕ ಡೀನ್ ಡಾ.ಪಿ.ಮಂಜುನಾಥ, ಜಿಲ್ಲಾ ಜೈವಿಕ ಇಂಧನ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರದ ಸಂಚಾಲಕರಾದ ಡಾ.ಚೇತನ್.ಎಸ್.ಜಿ, ಪ್ರಾತ್ಯಕ್ಷಿಕೆ ಕೇಂದ್ರದ ಡಾ.ರವಿಕುಮಾರ್, ರೆಡ್ ಕ್ರಾಸ್ ಘಟಕ ಸಂಚಾಲಕರಾದ ಅರುಣ್ ಕುಮಾರ್ ಮತ್ತು ಎನ್.ಎಸ್.ಎಸ್ ಘಟಕ ಸಂಚಾಲಕರಾದ ಆನಂದ್ ರಾಜ್ ಉಪಸ್ಥಿತರಿದ್ದರು.
B.Y. Raghavendra ಸಂಸದ ರಾಘವೇಂದ್ರರಿಗೆ ಸಚಿವ ಸ್ಥಾನ ಲಭಿಸಲೆಂದು ಚಂದ್ರಗುತ್ತಿಯಲ್ಲಿ ಅಭಿಮಾನಿಗಳಿಂದ ವಿಶೇಷ ಪೂಜೆ
B.Y. Raghavendra ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನ ಲಭಿಸಲಿ ಎಂದು ಪ್ರಾರ್ಥಿಸಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಬುಧವಾರ ತಾಲೂಕಿನ ಪುರಾಣ ಹಾಗೂ ಐತಿಹಾಸಿಕ ಪ್ರಸಿದ್ಧ ಕ್ಷೇತ್ರ ಚಂದ್ರಗುತ್ತಿ ಗ್ರಾಮದ ಶಕ್ತಿ ದೇವತೆ ಶ್ರೀ ರೇಣುಕಾಂಬ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ರಾಜು ಮಾವಿನಬಳ್ಳಿಕೊಪ್ಪ ಮಾತನಾಡಿ, ಬಿ.ವೈ. ರಾಘವೇಂದ್ರ ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಜನತೆ ಅಪೂರ್ವ ಬೆಂಬಲ ಸೂಚಿಸಿ ಪುನಃ ಸಂಸದರಾಗಿ ಆಯ್ಕೆ ಮಾಡಿದ್ದಾರೆ. ಈ ಹಿಂದೆಯೂ ಚುನಾವಣೆ ಪೂರ್ವದಲ್ಲಿ ರಾಘವೇಂದ್ರ ಅವರು ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಿಯ ದರ್ಶನಾಶೀರ್ವಾದ ಪಡೆದಿದ್ದರು. ಅವರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ದೊರೆಯಲಿ ಎಂದು ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು ಎಂದರು.
B.Y. Raghavendra ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಆಶೀಕ್ ನಾಗಪ್ಪ ಮಾತನಾಡಿ, ಸಂಸದ ಬಿ.ವೈ. ರಾಘವೇಂದ್ರ ಅವರು ಲೋಕಸಭಾ ಚುನಾವಣೆಯಲ್ಲಿ ೨.೫ ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಜಿಲ್ಲೆಯ ಅಭಿವೃದ್ಧಿ ಶಕೆಗೆ ಮುನ್ನುಡಿ ಬರೆದು ಸತತ ನಾಲ್ಕನೇ ಬಾರಿ ಜಯ ಸಾಧಿಸಿರುವ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟದಲ್ಲಿ ರೈಲ್ವೆ ಅಥವಾ ವಿಮಾನಯಾನ ಖಾತೆ ಲಭಿಸಲಿ. ಈ ಮೂಲಕ ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಗಳು ನಡೆಯಲಿ ಎಂದರು.
ತಾಲೂಕು ಗೋ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್. ಚಿದಾನಂದ ಗೌಡ, ಬಿಜೆಪಿ ಯುವ ಮೋರ್ಚಾ ಜಿಲ್ಲಾ ವಿಶೇಷ ಆಹ್ವಾನಿತ ಗುರುಮೂರ್ತಿ ದೇವತಿಕೊಪ್ಪ, ತಾಲೂಕು ಪ್ರಧಾನ ಕಾರ್ಯದರ್ಶಿ ಹರೀಶ್ ವಿದ್ಯುತ್ ನಗರ, ಚಂದ್ರಗುತ್ತಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಶೇಟ್ ಸೇರಿದಂತೆ ಇತರರಿದ್ದರು.
Sagar Khandre ಅತ್ಯಂತ ಕಿರಿಯ ಸಂಸದ, ಕರ್ನಾಟಕದ ಸಾಗರ್ ಖಂಡ್ರೆ
Sagar Khandre ಬೀದರ್ ಲೋಕಸಭಾಕ್ಷೇತ್ರ ದಿಂದ ಸಂಸತ್ತಿಗೆ ಸಾಗರ್ ಖಂಡ್ರೆ ಆಯ್ಕೆಯಾಗಿದ್ದಾರೆ.
ಕೇಂದ್ರ ಸಚಿವ ಭಗವಂತ ಖೂಬ ಅವರನ್ನ ಮಣಿಸಿದ ಯುವಕನಿಗೆ ವಯಸ್ದು ಇಪ್ಪತ್ತಾರು ವರ್ಷ
ಹದಿನೆಂಟನೇಯ ಲೋಕಸಭಾ ರಚನೆಯಾದ ಬಳಿಕ ಅತ್ಯಂತ ಕಿರಿಯ ಸದಸ್ಯನೆಂಬ ಹೆಗ್ಲಳಿಕೆ
ಇವರದ್ದು.
Sagar Khandre ರಾಜ್ಯದ ಅರಣ್ ಸಚಿವ ಈಶ್ವರ ಖಂಡರೆ ಅವರ ಸುಪುತ್ರ. ಹಾಗೂ ಮಾಜಿ ಸಚಿವ ದಿವಂಗತ ಭೀಮಣ್ಣಖಂಡ್ರೆ ಅವರ ಮೊಮ್ಮಗ.
ಎಲ್ ಎಲ್ ಬಿ ಪದವೀಧರ.
MESCOM ಜೂನ್ 7 ರಂದು ಎಂ.ಆರ್ .ಎಸ್ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ
MESCOM ಎಂ.ಆರ್.ಎಸ್. ಶಿವಮೊಗ್ಗದ 110 ಕೆವಿ ವಿ.ವಿ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಇರುವುದರಿಂದ ಜೂನ್ 07 ರಂದು ಬೆಳಗ್ಗೆ 09.00 ರಿಂದ ಸಂಜೆ 5.00ರವರೆಗೆ ಚಿಕ್ಕಲ್ಲು, ಗುರುಪುರ, ಪರುಲೆ, ಸಿದ್ದೇಶ್ವರನಗರ, ಶಾಂತಮ್ಮ ಲೇಔಟ್, ವೆಂಕಟೇಶನಗರ, ವಿದ್ಯಾನಗರ, ಗಣಪತಿ ಲೇಔಟ್, ಕಂಟ್ರಿಕ್ಲಬ್ ರಸ್ತೆ, ಎಂ.ಆರ್.ಎಸ್. ವಾಟರ್ ಸಪ್ಲೈ, ಎಂ.ಆರ್.ಎಸ್. ಕಾಲೋನಿ, ಹರಿಗೆ, ಮಲವಗೊಪ್ಪ, ವಡ್ಡಿನಕೊಪ್ಪ, ನಂಜಪ್ಪ ಲೇಔಟ್, ಪ್ರಿಯಾಂಕ ಲೇಔಟ್, ಬಿ.ಹೆಚ್.ರಸ್ತೆ (ಗಾಯತ್ರಿ ಕಲ್ಯಾಣ ಮಂಟಪದಿಂದ ಅಮೀರ್ ಅಹ್ಮದ್ ಸರ್ಕಲ್‍ವರೆಗೆ), ನೆಹರು ರಸ್ತೆ, ದುರ್ಗಿಗುಡಿ ಮುಖ್ಯರಸ್ತೆ, ಪಾರ್ಕ್ ಬಡಾವಣೆ, ಸರ್.ಎಂ.ವಿ.ರಸ್ತೆ, ಬಾಲ್‍ರಾಜ್‍ಅರಸ್ ರಸ್ತೆ, ಗಾಂದಿಪಾರ್ಕ್, ಲೂರ್ದು ನಗರ, ಕಾನ್ವೆಂಟ್ ರಸ್ತೆ, ಬಾಪೂಜಿನಗರ, ಚರ್ಚ್ ಕಾಂಪೌಂಡ್, ಟಿ.ಜಿ.ಎನ್.ಬಡಾವಣೆ,
MESCOM ಜೋಸೆಫ್‍ನಗರ, ಟ್ಯಾಂಕ್‍ಬೌಂಡ್ ರಸ್ತೆ, ಕುವೆಂಪು ರಂಗಮಂದಿರ ಮತ್ತು ಮಹಾನಗರ ಪಾಲಿಕೆ ಕಚೇರಿ ಸುತ್ತಮುತ್ತ, ಮೀನಾಕ್ಷಿಭವನ, ಶಂಕರಮಠ ರಸ್ತೆ, ಹಳೆ ಹೊನ್ನಾಳಿ ರಸ್ತೆ, ಬಾಲರಾಜ್‍ಅರಸ್ ರಸ್ತೆ, ಮೆಹಂದಿನಗರ, ಬಸವನಗುಡಿ ವಿನಾಯಕ ಪಾರ್ಕ್, ವಿನಾಯಕ ನಗರ, ಅಮೀರ್ ಅಹ್ಮದ್ ಕಾಲೋನಿ, ಸೋಮಯ್ಯ ಬಡಾವಣೆ, ಟ್ಯಾಂಕ್ ಮೊಹಲ್ಲಾ, ಕೋರ್ಟ್ ಕಚೇರಿ, ಆರ್.ಟಿ.ಓ. ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.
