Rotary Shivamogga ನಮ್ಮ ಸುತ್ತಮುತ್ತ ಇರುವ ನೆಲ, ಜಲ, ಗಿಡ, ಮರ, ಗಾಳಿ, ಬೆಳಕು, ಶಬ್ದ, ನದಿ ದಂಡೆ ಹಾಗೂ ಖಾಲಿ ಜಾಗ ಇವುಗಳನ್ನು ಒಟ್ಟಾರೆಯಾಗಿ ಪರಿಸರ ಎಂದು ಕರೆಯಲಾಗುತ್ತಿದ್ದು, ಈ ಪರಿಸರ ಶುದ್ಧವಾಗಿದ್ದಾಗ ಮಾತ್ರ ನಮ್ಮ ಬದುಕು ಹಸನಾಗಿರುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಮಾನವ ಕುಲವು ತನ್ನ ದುರಾಸೆಯಿಂದ ಸುತ್ತಮುತ್ತಲಿನ ಸಂಪನ್ಮೂಲಗಳನ್ನು ಬೇಕಾಬಿಟ್ಟಿಯಾಗಿ ಬಳಸಿಕೊಂಡು, ನಮ್ಮ ಪರಿಸರವನ್ನು ಹಾಳು ಮಾಡುತ್ತಿದ್ದಾರೆ ಎಂದು ರೋಟರಿ ಶಿವಮೊಗ್ಗ ಪೂರ್ವ ಎಜುಕೇಷನಲ್ & ಛಾರಿಟಬಲ್ ಟ್ರಸ್ಟ್ (ರಿ.,)ನ ಮ್ಯಾನೇಜಿಂಗ್ ಟ್ರಸ್ಟಿ & ನಿವೃತ್ತ ಡಿ.ಪಿ.ಐ. ಆದ ರೊ. ಚಂದ್ರಶೇಖರಯ್ಯ ಎಂ. ಇವರು ಹೇಳಿದರು.
ನಾವು ಉಸಿರಾಡುವ ಗಾಳಿ, ಕುಡಿಯುವ ನೀರು, ಸೇವಿಸುವ ಆಹಾರ, ನೋಡುವ ಬೆಳಕು, ಕೇಳುವ ಶಬ್ಧ ಹಾಗೂ ವಾಸಿಸುವ ಮನೆಯ ಸುತ್ತಲಿನ ಪರಿಸರ ಮಲೀನವಾಗಿದ್ದು, ಜನಜೀವನ ದುಸ್ತರವಾಗಿದೆ. ಎಲ್ಲಿಯವರೆಗೆ ಪ್ರಕೃತಿ ಮತ್ತು ಮನುಷ್ಯನ ನಡುವೆ ಸಮತೋಲನ ಇರುವುದಿಲ್ಲವೋ ಅಲ್ಲಿಯವರೆಗೆ ಈ ವಿಶ್ವದಲ್ಲಿ ಮಾನವನ ಜೀವನ ಅತ್ಯಂತ ಕಷ್ಟಕರವಾಗುತ್ತದೆ. ಮಕ್ಕಳಲ್ಲಿ ಹವಮಾನ ಬದಲಾವಣೆ, ಅರಣ್ಯ ನಾಶ, ಹಾಗೂ ಜೀವ ವೈವಿಧ್ಯಗಳ ನಷ್ಟಗಳ ಬಗ್ಗೆ ಜಾಗೃತಿ ಮೂಢಿಸುವ ಉದ್ದೇಶದಿಂದ ವಿಶ್ವ ಪರಿಸರ ದಿನಾಚರಣೆಯನ್ನು ಶಾಲೆಯಲ್ಲಿ ಆಚರಿಸಲಾಗುತ್ತಿದೆ ಎಂದರು.
ಟ್ರಸ್ಟ್ ನ ಉಪಾಧ್ಯಕ್ಷರಾದ ಡಾ|| ಪರಮೇಶ್ವರ್ ಡಿ ಶಿಗ್ಗಾಂವ್ ಮಾತನಾಡಿ ನಮ್ಮ ಸುತ್ತ ಗಿಡ ಮರಗಳನ್ನು ನೆಡುವುದರಿಂದ, ಅವು ಬೆಳೆದು ದೊಡ್ಡದಾದಾಗ ಪರಿಸರವನ್ನು ತಣ್ಣಗೆ ಮಾಡುವುದರ ಜೊತೆಗೆ ದ್ಯುತಿ ಸಂಶ್ಲೇಷಣೆ ಪ್ರಕ್ರಿಯೆಯ ಮೂಲಕ ನಮ್ಮ ಉಸಿರಾಟಕ್ಕೆ ಬೇಕಾದ ಶುದ್ಧ ಆಮ್ಲಜನಕವನ್ನು ಬಿಡುಗಡೆ ಮಾಡಿ ಇಂಗಾಲದ ಡೈ ಆಕ್ಸೈಡ್‌ನ್ನು ಬಳಸಿಕೊಳ್ಳುತ್ತೇವೆ. ಹಾಗಾಗಿ ಗಿಡಗಳನ್ನು ಬೆಳೆಸುವುದರ ಬಗ್ಗೆ ಮಕ್ಕಳು ವಿಶೇಷ ಆಸಕ್ತಿ ವಹಿಸಬೇಕೆಂದು ಕರೆಕೊಟ್ಟರು.
Rotary Shivamogga ಈ ಸಂದರ್ಭದಲ್ಲಿ ಮಾತನಾಡಿದ ಪ್ರೌಢ ಶಾಲಾ ಶಿಕ್ಷಕಿ ಶ್ರೀಮತಿ ಕಾವ್ಯ ಬಿ.ಎಸ್., ಇವರು ವಿಶ್ವ ಪರಿಸರ ದಿನದ ‘ಥೀಮ್’ ಆದ ಭೂಮಿಯ ಪುನರ್ ಸ್ಥಾಪನೆ, ಮರುಭೂಮಿಗಳಲ್ಲಿ ಸಸ್ಯ ಸಂವರ್ಧನೆ ಮಾಡುವುದು ಹಾಗೂ ‘ಬರ’ ಸ್ಥಿತಿ ಸ್ಥಾಪಕತ್ವ ಆಗಿದ್ದು, ಇದನ್ನು ಎಲ್ಲ ರಾಷ್ಟçಗಳ ಮುಖಂಡರು ಮನನ ಮಾಡಿಕೊಂಡು ಈ ಥೀಮ್‌ನ್ನು ಕಾರ್ಯರೂಪಕ್ಕೆ ತರಲು ಅಗತ್ಯವಾದ ಯೋಜನೆಗಳನ್ನು ಸರ್ಕಾರದ ಹಂತದಲ್ಲಿ ರೂಪಿಸಿ ಅನುಷ್ಠಾನಗೊಳಿಸಬೇಕಾಗಿದೆ ಎಂದರು.ಪರಿಸರ ದಿನಾಚರಣೆ ಅಂಗವಾಗಿ ಶಾಲಾ ಆಟದ ಮೈದಾನದ ಸುತ್ತ ಗಿಡನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದರಲ್ಲಿ ಮ್ಯಾನೇಜಿಂಗ್ ಟ್ರಸ್ಟಿ, ರೊ. ಚಂದ್ರಶೇಖರಯ್ಯ ಎಂ., ಉಪಾಧ್ಯಕ್ಷರಾದ ಡಾ|| ಪರಮೇಶ್ವರ್ ಡಿ ಶಿಗ್ಗಾಂವ್, ಖಜಾಂಚಿಯಾದ ರೊ. ವಿಜಯ್ ಕುಮಾರ್ ಜಿ., ಪ್ರಾಂಶುಪಾಲರಾದ ಸೂರ್ಯನಾರಾಯಣ್ ಆರ್., ಮುಖ್ಯ ಶಿಕ್ಷಕಿ ಜಯಶೀಲಾ ಬಾಯಿ ಎಸ್. ಹಾಗೂ ಎಲ್ಲ ಶಿಕ್ಷಕ ವೃಂದ & ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡರು.