Monday, April 13, 2026
Monday, April 13, 2026
Home Blog Page 703

K.S. Eshwarappa ಮಗನಿಗೆ ಟಿಕೆಟ್ ಏಕೆ ಕೊಡಲಿಲ್ಲ? ಎಂಬ ಪ್ರಶ್ನೆ ಬಿಡದೇ ಕೇಳುತ್ತಿರುವ ನಾಯಕ ಈಶ್ವರಪ್ಪ

0

K.S. Eshwarappa ಬಿಜೆಪಿಗೆ ಲಿಂಗಾಯಿತರು ಬೆಂಬಲಿಸಿದರೆ ಸಾಕೇ? ಹಿಂದುಳಿದ ನಾಯಕರಿಗೆ ಎಂಎಲ್ ಸಿ ಸ್ಥಾನವನ್ನಾದರೂ ಕೊಡಿ. ಅವರನ್ನು ತುಳಿಯುವುದು ಎಷ್ಟರ ಮಟ್ಟಿಗೆ ಸರಿ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಪ್ರಶ್ನಿಸಿದ್ದಾರೆ.

ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನನಗೆ ಬಿಎಸ್ ವೈ ವಿರುದ್ಧ ದ್ವೇಷವಿಲ್ಲ. ಆದರೆ ಪಕ್ಷ ಹಾಳಾಗುತ್ತಿರುವುದು ನೋಡಲಾಗುತ್ತಿಲ್ಲ. ಯಡಿಯೂರಪ್ಪನವರಿಗೆ ಎಂಎಲ್ ಎ, ಎಂಪಿ ಟಿಕೆಟ್ ಕೊಡಲು ಅವಕಾಶ ಇರುವ ಕಡೆ ಕೊಡಿ. ಬಿಎಸ್ ವೈ ಗೆ ಪ್ರಾರ್ಥಿಸುವೆ. ನೀವು ಕೇಂದ್ರದಲ್ಲೇ ಇರಿ, ಮಗ ಕೇಂದ್ರ ಸಚಿವ ಮತ್ತು ಸಿಎಂ ಆಗಲಿ, ಅಭ್ಯಂತರವಿಲ್ಲ. ಆದರೆ ಒಂದೇ ಕುಟುಂಬಕ್ಕೆ ಎಲ್ಲವೂ ಸಿಗುವುದು ಎಷ್ಟು ಸರಿ? ಉಳಿದವರ ಗತಿ ಏನು? ಬಿಜೆಪಿಯಲ್ಲಿ ಶುದ್ದೀಕರಣವಾಗಬೇಕೆಂಬ ಅಭಿಲಾಷೆ ಇದೆಯಲ್ಲ ಅದಕ್ಕೆ ಉತ್ತರವೇನು? ಲಿಂಗಾಯಿತ ಸಮಾಜದ ಪ್ರಭಾವಿ ಆದ ನೀವು ಹಿಂದುಳಿದ ನಾಯಕರನ್ನು ಯಾಕೆ ಬೆಳೆಸುತ್ತಿಲ್ಲ ಎಂದು ಪ್ರಶ್ನಿಸಿದರು.

ಈ ವಿಷಯವನ್ನು ಅಮಿತ್ ಶಾ, ಮೋದಿ ಬಳಿ ಸುಮಾರು ಒಂದು ಗಂಟೆ ಹೇಳಿರುವೆ. ಆದರೆ ಏನೂ ಆಗಲಿಲ್ಲ ಎಂಬ ಕಾರಣಕ್ಕೆ ನಾನು ಲೋಕಸಭೆ ಚುನಾವಣೆ ಸ್ಪರ್ಧಿಸಿದೆ. ಗೆಲ್ಲಲಿಲ್ಲ, ಆದರೆ ಚರ್ಚೆ ಆಗಿದೆ. ಇದಕ್ಕೆ ಸರಿಯಾದ ದಿಕ್ಕು ಸಿಗಲಿದೆ. ೩೫ ವರ್ಷ ಈ ಪಕ್ಷಕ್ಕಾಗಿ ದುಡಿದಿರುವೆ. ಹಲವಾರು ಜನ ಚುನಾವಣೆ ಸೋತ ಮೇಲೂ ಜನ ಬೆಂಬಲಿಸುತ್ತಿದ್ದಾರೆ ಎಂದರು.

ಈ ಬಾರಿ ಒಬ್ಬ ಕುರುಬರಿಗೂ ಪಕ್ಷದಿಂದ ಟಿಕೆಟ್ ಸಿಗಲಿಲ್ಲ. ಈ ಬಗ್ಗೆ ಚರ್ಚೆ ಆಗಲಿ ಎಂದು ನಾನು ಸ್ಪರ್ಧಿಸಿದ್ದೆ. ಆದರೆ ರಾಜ್ಯದಲ್ಲಿ ಬಿಜೆಪಿ ಗೆದ್ದಿದೆ. ಕಳೆದ ಬಾರಿ ಬಿಜೆಪಿ ೨೫ ಸ್ಥಾನ ಗೆದ್ದಿತ್ತು. ಈ ಬಾರಿ ೧೭ ಕ್ಕೆ ಕುಸಿದಿದೆ. ಇದಕ್ಕೆ ಯಾರು ಕಾರಣ? ವಿಧಾನ ಸಭೆ ಚುನಾವಣೆಯಲ್ಲಿ ದಲಿತ ಮತ್ತು ಹಿಂದುಳಿದ ಸಮಾಜ ಪಕ್ಷವನ್ನ ತಿರಸ್ಕರಿಸಿದ್ದಕ್ಕೆ ೬೬ಕ್ಕೆ ಕುಸಿದೆವು ಎಂದು ಆರೋಪಿಸಿದರು.

ನಿರ್ದೋಷಿ ಆದರೂ ಸಚಿವ ಸ್ಥಾನ ಕೊಡಲಿಲ್ಲ:
ಸಂತೋಷ್ ಎಂಬ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಾಗ ನನ್ನಮೇಲೆ ಆರೋಪ ಬಂತು. ಆದರೆ ರಾಜೀನಾಮೆ ನೀಡಿದೆ. ಸರ್ಕಾರದ ಅವಧಿ ಮುಗಿಯುವ ಮುಂಚೆ ೮ ತಿಂಗಳು ಉಳಿದಾಗ ನನ್ನ ಆರೋಪದ ಬಗ್ಗೆ ನಿರ್ದೋಷಿ ಎಂದು ಬಂದರೂ ಮತ್ತೆ ಸ್ಥಾನ ಸಿಗಲಿಲ್ಲ. ಯಾಕೆ ಎಂದು ಪ್ರಶ್ನಿಸಿದ ಅವರು, ವಿಧಾನ ಸಭಾ ಚುನಾವಣೆಯ ವೇಳೆ ಟಿಕೆಟ್ ಕೈತಪ್ಪಿಹೋಯಿತು. ಮನೆಗೆ ಬಂದ ನಾಯಕರು ನಿಮಗೆ ಮತ್ತು ಪುತ್ರನಿಗೆ ಏನಾದರೂ ಮಾಡಲಾಗುತ್ತದೆ ಎಂಬ ಭರವಸೆ ನೀಡಿದರು. ನನಗೆ ಸಂಘಟನೆಯಲ್ಲಿ ಜವಬ್ದಾರಿ ಕೇಳಿದಾಗ ಕೊಡುವುದಾಗಿ ಹೇಳಿ ಪುತ್ರ ಕಾಂತೇಶ್ ಗೆ ಹಾವೇರಿಯ ಲೋಕಸಭಾ ಟಿಕೆಟ್ ಕೊಡುವುದಾಗಿ ಭರವಸೆ ನೀಡಿದ್ದರು.

K.S. Eshwarappa ಬ್ರಿಗೇಡ್ ಬೇಡ ಎಂದ್ರು, ನಿರ್ದೋಷಿ ಎಂದು ಬಂದರೂ ಸಚಿವ ಸ್ಥಾನ ನೀಡಲಿಲ್ಲ. ಪುತ್ರನಿಗೆ ಟಿಕೇಟ್ ಕೊಡುವುದಾಗಿ ಹೇಳಿ ಯಾಕೆ ಕೊಡಲಿಲ್ಲ ಎಂದು ಕೇಳಿದರು.

Keladi Shivappa Nayaka University of Agricultural ಜೂನ್ 8 & 9 ರಂದು ಅಪರೂಪದ ದೇಸೀ ಬೀಜೋತ್ಸವ- ಬಿ.ಎಂ.ಮಲ್ಲಿಕಾರ್ಜುನಪ್ಪ

0

Keladi Shivappa Nayaka University of Agricultural ಸಹಜ ಸಮೃದ್ಧ ಸಂಸ್ಥೆ, ಕೆಳದಿ ಶಿವಪ್ಪನಾಯಕ ಕೃಷಿ ವಿ.ವಿ. ಆಶ್ರಯದಲ್ಲಿ ಜೂ. 8 ಮತ್ತು 9ರಂದು ವೀರಶೈವ ಕಲ್ಯಾಣ ಮಂಟಪ್ಪದಲ್ಲಿ ದೇಸೀ ಬೀಜೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಬಿ.ಎಂ. ಮಲ್ಲಿಕಾರ್ಜುನ ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಇಂದು ದೇಸೀಯ ತಳಿಗಳನ್ನು ಉಳಿಸಿಕೊಳ್ಳುವುದೇ ಕಷ್ಟವಾಗಿದೆ. ಹೈಬ್ರಿಡ್ ಬೀಜಗಳು ಬಂದ ಮೇಲೆ ಅನಿವಾರ್ಯವಾಗಿ ಕೀಟ ನಾಶಕ, ರಾಸಾಯನಿಕ ಕ್ರಿಮಿ ನಾಶಕಗಳನ್ನು ಬಳಸಬೇಕಾಗಿದೆ. ಇದರಿಂದ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಲವು ಸಂಸ್ಥೆಗಳು ಸಾವಯವ ಕೃಷಿಕರು ಸೇರಿಕೊಂಡು ದೇಸಿ ಬೀಜಕ್ಕೆ ಆದ್ಯತೆ ನೀಡಿ, ನಮ್ಮ ರೈತರಿಗೆ ಮತ್ತು ತೋಟಗಾರಿಕೆ ಬೆಳೆಗಾರರಿಗೆ ತಲುಪಿಸುವ ಉದ್ದೇಶವನ್ನು ಇಟ್ಟುಕೊಂಡು ಈ ಬೀಜಮೇಳವನ್ನು ಆಯೋಜಿಸಿದ್ದೇವೆ ಎಂದರು.

ಉಳಿವು ಪೌಂಡೇಶ್‌ನ್‌ನ ಡಾ.ಸೀಮಾ ಮಾತನಾಡಿ, ಸಾವಯವ ಕೃಷಿಗೆ ನಾವು ಆದ್ಯತೆ ನೀಡಬೇಕಾಗಿದೆ. ನಮ್ಮ ಎಲ್ಲಾ ಆಹಾರ ಇಂದು ವಿಷಭರಿತವಾಗಿದೆ. ಅದನ್ನು ವಿಷಮುಕ್ತ ಮಾಡಬೇಕಾಗಿದೆ. ಭೂಮಿಯನ್ನೇ ವಿಷವನ್ನಾಗಿ ಮಾಡಲಾಗುತ್ತಿದೆ. ಇದು ತಪ್ಪಾಬೇಕಾಗಿದೆ. ಮಾನವರಿಗೆ ಒಳ್ಳೆಯ ಆಹಾರ ಸಿಗಬೇಕಾಗಿದೆ. ಈ ಎಲ್ಲಾ ಹಿನ್ನಲೆಯಲ್ಲಿ ಸಾವಯವ ಕೃಷಿ ಮತ್ತು ದೇಸಿಯ ಬೀಜಕ್ಕೆ ಆದ್ಯತೆ ನೀಡಲಾಗಿದೆ. ಆ ಬಗ್ಗೆ ಜನಜಗೃತಿ ಮೂಡಿಸುವ ಉದ್ದೇಶವನ್ನು ಸಾವಯವ ಕೃಷಿಕರು ಮತ್ತು ಅನೇಕ ಸಂಘ ಸಂಸ್ಥೆಗಳು ಒಟ್ಟಾಗಿ ಈ ಕೆಲಸ ಮಾಡುತ್ತಿದ್ದೇವೆ ಎಂದರು.

ನಿವೃತ್ತ ಪ್ರೊಫೆಸರ್ ಎ.ವಿ. ಪ್ರದೀಪ್ ಮಾತನಾಡಿ, ಜೂ.೮ರಿಂದ ಎರಡು ದಿನಗಳ ಕಾಲ ನಡೆಯುವ ದೇಸಿ ಬೀಜೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಬಸವಕೇಂದ್ರದ ಶ್ರೀ ಮರುಳಸಿದ್ದಸ್ವಾಮೀಜಿ, ಕೃಷಿ ವಿ.ವಿ. ಉಪಕುಲಪತಿ ಡಾ. ಜಗದೀಶ್ ಆರ್.ಸಿ., ಸಹಜ ಸಮೃದ್ಧದ ನಿರ್ದೇಶಕ ಜಿ.ಕೃಷ್ಣಪ್ರಸಾದ್, ಸಾವಯವ ಸಂಶೋಧನ ಕೇಂದ್ರದ ಸಂಯೋಜಕ ಡಾ. ಎಸ್.ಪ್ರದೀಪ್, ಧಾನ್ಯ ಸಂಸ್ಥೆಯ ಮಲ್ಲಿಕಾರ್ಜುನ ಹೊಸಪಾಳ್ಯ, ಐಕಾಂತಿಕ ಸಂಸ್ಥೆಯ ರಾಘವ, ಸಾವಯವ ಪೌಷ್ಠಿಕ ಶಂಕರ ಎಂ.ದೇವೇಂದ್ರಪ್ಪ, ನಂದೀಶ್ ಉಪಸ್ಥಿತರಿರುವರು ಎಂದರು.
Keladi Shivappa Nayaka University of Agricultural ಮೇಳದಲ್ಲಿ ಸುಮಾರು 15ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗುತ್ತದೆ. ರಾಜ್ಯದ ವಿವಿಧ ಕಡೆಗಳಿಂದ ರೈತರು ತಾವೇ ನಿರ್ಮಿಸಿದ ದೇಸಿ ಬೀಜಗಳನ್ನು ಪ್ರದರ್ಶನ ಮಾಡುವುದಲ್ಲದೆ ಮಾರಾಟ ಕೂಡ ಮಾಡುತ್ತಾರೆ. ಭತ್ತ, ತರಕಾರಿ, ಸಿರಿದಾನ್ಯ ಬೀಜಗಳು, ಹಣ್ಣುಗಳ ಬೀಜಗಳು ಇಲ್ಲಿ ದೊರೆಯುತ್ತವೆ, ಜೊತೆಗೆ ಆಹಾರ ಮಳಿಗೆಗಳನ್ನು ಕೂಡ ತೆರೆಯಲಾಗುತ್ತದೆ. ಎಲ್ಲವೂ ದೇಸಿತನದಲ್ಲಿ ಇರುತ್ತದೆ ಎಂದರು.

ಗೋಷ್ಟಿಯಲ್ಲಿ ಕುಮಾರ ನಾಯ್ಡು, ದಿನೇಶ್ ಹೊಸನಗರ, ಸಂತೋಷ್ ಮುಂತಾದವರು ಇದ್ದರು.

B. Nagendra ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿರುವೆ- ಸಚಿವ ಬಿ.ನಾಗೇಂದ್ರ

0

B. Nagendra ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದಲ್ಲಿ ಅವ್ಯವಹಾರ ನಡೆದ ಆರೋಪ ಕೇಳಿ ಬಂದಿರುವ ಹಿನ್ನೆಲೆ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸಚಿವ ಬಿ.ನಾಗೇಂದ್ರ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ನನ್ನ ಮೇಲೆ ಯಾರೂ ಒತ್ತಡ ಹಾಕಿಲ್ಲ. ನನ್ನ ಆತ್ಮ ಸಾಕ್ಷಿಯಾಗಿ, ಸ್ವ ಇಚ್ಚೆಯಿಂದ ರಾಜೀನಾಮೆ ನೀಡಲು ಮುಂದಾಗಿದ್ದೇನೆ. ಮುಖ್ಯಮಂತ್ರಿಗಳನ್ನು ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

ಪಕ್ಷ, ಸರ್ಕಾರಕ್ಕೆ ಮುಜುರಗ ಆಗಬಾರದು ಎಂಬ ಕಾರಣಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ಎಸ್‌ಐಟಿ ನಿಷ್ಪಕ್ಷಪಾತವಾಗಿ ಪ್ರಕರಣದ ತನಿಖೆ ನಡೆಸುತ್ತಿದೆ. ನಾನು ಮಂತ್ರಿ ಸ್ಥಾನದಲ್ಲಿದ್ದರೆ ತನಿಖೆಗೆ ತೊಂದರೆಯಾಗಬಹುದು. ಹಾಗಾಗಿ, ಈಗ ರಾಜೀನಾಮೆ ನೀಡಿ ಆರೋಪ ಮುಕ್ತನಾದ ಬಳಿಕ ಸಚಿವ ಸ್ಥಾನಕ್ಕೆ ಮರಳುತ್ತೇನೆ ಎಂದಿದ್ದಾರೆ.

B. Nagendra “ಆತ್ಮಹತ್ಯೆ ಮಾಡಿಕೊಂಡಿರುವ ನಿಗಮದ ಅಧೀಕ್ಷರಾಗಿದ್ದ ಚಂದ್ರಶೇಖರನ್ ಅವರ ಡೆತ್ ನೋಟ್‌ನಲ್ಲಿ ನಿಮ್ಮ ಹೆಸರಿದೆ ಎಂದು ಹೇಳಲಾಗ್ತಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ನಾಗೇಂದ್ರ, ಇಲ್ಲ ನನ್ನ ಹೆಸರು ಉಲ್ಲೇಖಿಸಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

Shivamogga Police ಚಿಕಿತ್ಸೆ ಫಲಕಾರಿಯಾಗದೇ ಅಪರಿಚಿತ ವ್ಯಕ್ತಿಯ ಸಾವು, ಪೋಲೀಸ್ ಮಾಹಿತಿ

0

Shivamogga Police ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಎನ್.ಟಿ.ರಸ್ತೆ ಉರ್ದುಶಾಲೆಯ ಹತ್ತಿರ ಸುಸ್ತಾಗಿ ಮಲಗಿದ್ದ ಸುಮಾರು ೪೦-೪೫ ವರ್ಷ ವಯಸ್ಸಿನ ಪ್ರಜ್ವಲ್ ಎಂಬ ಅಪರಿಚಿತ ವ್ಯಕ್ತಿಯನ್ನು ಸಾರ್ವಜನಿಕರು ಅಂಬುಲೆನ್ಸ್ ಮೂಲಕ ಮೆಗ್ಗಾನ್ ಆಸ್ಪತ್ರೆಗೆ ದಾಖಲೆಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಜೂನ್ ೦೨ರಂದು ಮೃತಪಟ್ಟಿರುತ್ತಾನೆ. ಮೃತ ದೇಹವನ್ನು ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.
Shivamogga Police ಈ ವ್ಯಕ್ತಿಯ ಚಹರೆ ೫.೧೧ ಅಡಿ ಎತ್ತರ, ಕಪ್ಪು ಮೈಬಣ್ಣ, ಕೋಲುಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಮೃತನ ಬಲಗೈನ ಮುಂಗೈ ಒಳಭಾಗದಲ್ಲಿ ಪಿ.ಆರ್. ಎಂಬ ಆಂಗ್ಲ ಅಕ್ಷರದಲ್ಲಿ ಹಚ್ಚೆ ಗುರುರು ಇರುತ್ತದೆ. ಮೈಮೇಲೆ ಕಪ್ಪು ಬಿಳಿ ಕೆಂಪು ಮಿಶ್ರಿತ ಅರ್ಧ ತೋಳಿನ ಟೀಶರ್ಟ್ ಮತ್ತು ಕಪ್ಪು ಬಿಳಿ ಚೆಕ್ಸ್ನ ತುಂಬ ತೋಳಿನ ಶರ್ಟ್ ಇರುತ್ತದೆ.
ಈ ವ್ಯಕ್ತಿಯ ವಾರಸ್ಸುದಾರರು ಪತ್ತೆಯಾದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.: 08182-261414 /9611761255 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ತಿಳಿಸಿದೆ.

District Consumer Disputes Redressal Commission ಸೇವಾ ನ್ಯೂನ್ಯತೆ: ಮೊಬೈಲ್ ರಿಪೇರಿ ಅಸಮರ್ಪಕ, ಗ್ರಾಹಕರಿಗೆ ಪರಿಹಾರ ನೀಡಲು ಆಯೋಗ ಸೂಚನೆ

0

District Consumer Disputes Redressal Commission ಅರ್ಜಿದಾರರಾದ ಶಶಿಕುಮಾರ್ ಸಿ.ಎಸ್. ಎಂಬುವವರು ನ್ಯಾಷನಲ್ ಡಿಜಿಟಲ್, ನ್ಯಾಷನಲ್ ಎನ್‌ಕ್ಲೇವ್- ತೀರ್ಥಹಳ್ಳಿ, ಶಿವಮೊಗ್ಗ ಮತ್ತು ಕ್ಸಿಯಾಮಿ ಟೆಕ್ನಾಲಜಿ ಪ್ರೈ.ಲಿ., ಬೆಂಗಳೂರು ಹಾಗೂ ಕ್ಸಿಯಾಮಿ ಪೋನಿನ ಆಥರೈಸ್ಡ್ ಸರ್ವಿಸ್ ಸೆಂಟರ್, ಉಡುಪಿ ಇವರುಗಳ ವಿರುದ್ದ ಸೇವಾನ್ಯೂನ್ಯತೆ ಕುರಿತು ದಾಖಲಿಸಿದ್ದ ಪ್ರಕರಣದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಅರ್ಜಿದಾರರಿಗೆ ಪರಿಹಾರ ಪಾವತಿಸುವಂತೆ ಎದುರುದಾರರಿಗೆ ಆದೇಶಿಸಿದೆ.
ಶಶಿಕುಮಾರ್ ಸಿ.ಎಸ್. ಎಂಬುವವರು ಕ್ಸಿಯಾಮಿ ಕಂಪನಿಯ ಫೋನ್‌ನ್ನು ೨೦೨೨ರಲ್ಲಿ ರೂ. ೪೦,೦೦೦/- ಗಳಿಗೆ ಖರೀದಿಸಿರುತ್ತಾರೆ. ಖರೀದಿಯ ವಾರಂಟಿ ಅವಧಿಯಲ್ಲಿ ಫೋನಿನ ಮೈಕ್ ಸರಿಯಾಗಿ ಕಾರ್ಯನಿರ್ವಹಿಸದಿರುವುದರಿಂದ ಎದುರುದಾರರಲ್ಲಿ ರಿಪೇರಿಗೆ ನೀಡಿದಾಗ ಮದರ್ ಬೋರ್ಡ್ ಸಮಸ್ಯೆಯೆಂದು ಮದರ್‌ಬೋರ್ಡ್ನ್ನು ಬದಲಾಯಿಸಿ ಕೊಟ್ಟಿರುತ್ತಾರೆ. ನಂತರವೂ ಅದೇ ಸಮಸ್ಯೆ ಮುಂದುವರೆದಾಗ ಮತ್ತೆ ರಿಪೇರಿಗಾಗಿ ಕೊಟ್ಟಿರುತ್ತಾರೆ. ಆದರೆ ಎದರುದಾರರು ಫೋನ್‌ನ್ನು ರಿಪೇರಿ ಮಾಡಿ ವಾಪಸ್ಸು ಮಾಡುವುದಾಗಲಿ, ಅದರ ಬದಲು ಹೊಸ ಫೋನ್ ನೀಡುವುದಾಗಲಿ ಮಾಡಿರುವುದಿಲ್ಲವೆಂದು ಆಪಾದಿಸಿರುತ್ತಾರೆ.
ಆಯೋಗವು ಪ್ರಕರಣದ ಅಂಶಗಳು, ಪಿರ್ಯಾದಿದಾರರು ಹಾಜರುಪಡಿಸಿದ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ಎದುರುದಾರರ ಫೋನಿನಲ್ಲಿರುವ ದೋಷವನ್ನು ಸರಿಪಡಿಸುವಲ್ಲಿ ವಿಫಲರಾಗಿರುತ್ತಾರೆಂದು ಹಾಗೂ ಅರ್ಜಿದಾರರು ಖರೀದಿಸಿದ ಫೋನ್ ಉತ್ಪಾದನ ದೋಷವನ್ನು ಹೊಂದಿದ್ದು, ಎದುರುದಾರರಿಂದ ಸೇವಾ ನ್ಯೂನ್ಯತೆಯಾಗಿದೆ ಎಂದು ಪರಿಗಣಿಸಿ ಪ್ರಕರಣವನ್ನು ಭಾಗಶಃ ಪುರಸ್ಕರಿಸಿರುತ್ತದೆ.
District Consumer Disputes Redressal Commission ಈ ಪ್ರಕಾರ ಫೋನ್ ಮಾರಾಟಗಾರರಾದ ನ್ಯಾಷನಲ್ ಡಿಜಿಟಲ್, ನ್ಯಾಷನಲ್ ಎನ್‌ಕ್ಲೇವ್ – ತೀರ್ಥಹಳ್ಳಿ ಇವರು ಅರ್ಜಿದಾರರಿಗೆ ಪೋನ್ ಖರೀದಿಯ ಮೊತ್ತ ರೂ. ೪೦.೦೦೦/- ಗಳಲ್ಲಿ ಜಿ.ಎಸ್.ಟಿ. ಯನ್ನು ಕಡಿತಗೊಳಿಸಿ ರೂ. ೩೩,೮೯೭/-ಗಳನ್ನು ಶೇ.೯% ವಾರ್ಷಿಕ ಬಡ್ಡಿಯೊಂದಿಗೆ ಲೀಗಲ್ ನೋಟೀಸ್ ನೀಡಿದ ದಿನಾಂಕದಿAದ ಪಾವತಿಸುವುದು. ಹಾಗೂ ತಮ್ಮ ಸೇವಾ ನ್ಯೂನತೆಯಿಂದಾಗಿ ಉಂಟಾದ ಮಾನಸಿಕ ಹಿಂಸೆ ಮತ್ತು ಹಾನಿಗಳಿಗೆ ಸಂಬAಧಿಸಿದAತೆ ಪರಿಹಾರ ರೂ.೧೫,೦೦೦/- ಗಳನ್ನು ಮತ್ತು ವ್ಯಾಜ್ಯದ ಖರ್ಚು-ವೆಚ್ಚಗಳ ಬಾಬ್ತಾಗಿ ರೂ. ೧೦,೦೦೦/-ಗಳನ್ನು ಪಾವತಿಸಬೇಕೆಂದು ನಿರ್ದೇಶಿಸಿ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ, ಸದಸ್ಯರಾದ ಶ್ರೀಮತಿ ಸವಿತಾ ಬಿ.ಪಟ್ಟಣಶೆಟ್ಟಿ, ಬಿ.ಡಿ.ಯೋಗಾನಂದ ಬಾಂಡ್ಯ ಇವರ ಪೀಠವು ಜೂನ್ ೦೩ ರಂದು ಆದೇಶಿಸಿದೆ.

Annamalai ಸೋಲು ಕೊನೆಯಲ್ಲ. ಒಂದೊಂದೇ ಮೆಟ್ಟಿಲೇರುತ್ತೇನೆ- ಕರ್ನಾಟಕ ” ಸಿಂಗಂ” ಅಣ್ಣಾಮಲೈ

0

Annamalai ನಮ್ಮಪ್ಪ ಕುಪ್ಪುಸ್ವಾಮಿ, ಕರುಣಾನಿಧಿ ಅಲ್ಲ. ನಾವು ಗೆಲ್ಲೋಕೆ ಸ್ವಲ್ಪ ಟೈಮ್ ಬೇಕು ಎಂದು ತಮಿಳುನಾಡಿನಲ್ಲಿ ಪಕ್ಷದ ಸೋಲಿನ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಪ್ರತಿಕ್ರಿಯಿಸಿದ್ದಾರೆ.

ನಾನು ಕರುಣಾನಿಧಿ ಮಗನಾಗಿದ್ದರೆ ಚುನಾವಣೆಯಲ್ಲಿ ಗೆದ್ದು ಬಿಡುತ್ತಿದ್ದೆ. ಹಾಗಾಗಿ ನಾನು ಗೆಲ್ಲಲು ಸಮಯ ಹಿಡಿಯುತ್ತೆ. ನನ್ನಂತವರು ಒಂದೊಂದೇ ಮೆಟ್ಟಿಲು ಹತ್ತಿ ಗೆಲುವನ್ನು ಕಾಣಬೇಕಾಗುತ್ತದೆ. ನನ್ನ ತಂದೆ ಕುಪ್ಪಾಸ್ವಾಮಿ ನನಗೆ ಅದನ್ನೇ ಹೇಳಿಕೊಟ್ಟಿದ್ದಾರೆ. ನಿಧಾನಕ್ಕೆ ಹೋಗು, ಒಂದೊಂದೇ ಮೆಟ್ಟಿಲು ಹತ್ತು, ನ್ಯಾಯವಾದ ದಾರಿಯಲ್ಲಿ ನಡಿ ಎಂದು ಹೇಳಿಕೊಟ್ಟಿದ್ದಾರೆ ಎಂದು ಅಣ್ಣಾಮಲೈ ಸುದ್ದಿಗೋಷ್ಠಿಯಲ್ಲಿ ಹೇಳಿದರು..

Annamalai ಲೋಕಸಭೆ ಚುನಾವಣೆಯಲ್ಲಿ ಅನುಭವಿಸಿದ ನಷ್ಟವನ್ನು ರಾಜ್ಯ ಘಟಕವು ಆತ್ಮಾವಲೋಕನ ಮಾಡಿಕೊಳ್ಳುತ್ತದೆ ಎಂದು ಹೇಳಿದರು. ಅಣ್ಣಾಮಲೈ ಅವರು ಕೊಯಮತ್ತೂರು ಲೋಕಸಭಾ ಕ್ಷೇತ್ರದಲ್ಲಿ ಡಿಎಂಕೆಯ ಗಣಪತಿ ಪಿ. ರಾಜ್‌ಕುಮಾರ್ ವಿರುದ್ಧ ಸೋತಿದ್ದಾರೆ.

Rotary Biodiversity Park ಮನುಷ್ಯನ ದುರಾಸೆಯಿಂದ ಪರಿಸರ ನಾಶ-ಪ್ರೊ.ಎ.ಎಸ್.ಚಂದ್ರಶೇಖರ್

0

Rotary Biodiversity Park ಇಂದು ನಗರೀಕರಣ ಹಾಗೂ ಮನುಷ್ಯನ ದುರಾಸೆಯಿಂದ ಪರಿಸರ ವಿನಾಶದತ್ತ ಸಾಗುತ್ತಿದೆ ಎಂದು ಪ್ರೊ. ಎ.ಎಸ್.ಚಂದ್ರಶೇಖರ್ ಅಭಿಪ್ರಾಯಪಟ್ಟರು.
ಶಿವಮೊಗ್ಗ ನಗರದ ಹೊರವಲಯದಲ್ಲಿರುವ ರೋಟರಿ ಬಯೋಡೈವರ್ಸಿಟಿ ಪಾರ್ಕ್ ನಲ್ಲಿ ನಗರದ ಎಲ್ಲ ರೋಟರಿ ಕ್ಲಬ್‌ಗಳ ಸಹಯೋಗದಲ್ಲಿ ಹಾಗೂ ಇಂಡೋ ಕಿಡ್ಸ್ ಮಕ್ಕಳು ಹಾಗೂ ಶಿಕ್ಷಕರು ಆಡಳಿತ ಮಂಡಳಿ ಸಹಕಾರದಲ್ಲಿ ಆಯೋಜಿಸಿದ್ದ ಗಿಡ ನೆಡುವುದು ಹಾಗೂ ಸ್ವಚ್ಛತೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪರಿಸರದಿಂದ ಸಕಲವನ್ನು ಪಡೆದ ನಾವು ಕಾಡುಗಳನ್ನು ಕಡಿದು ಪರಿಸರವನ್ನ ಹಾನಿ ಮಾಡುತ್ತಿದ್ದೇವೆ. ಕಾಡು ಕಡಿತದಿಂದ ಕಾಡಿನಲ್ಲಿ ಇರುವ ಪ್ರಾಣಿಗಳು ನಾಡಿಗೆ ಬರುತ್ತಿವೆ. ಅದರಿಂದ ಮನುಕುಲಕ್ಕೆ ತೊಂದರೆಯಾಗುತ್ತಿದೆ ಎಂದು ತಿಳಿಸಿದರು.
ವಾಯುಮಾಲಿನ್ಯ ಮತ್ತು ಜಲಮಾಲಿನ್ಯದಿಂದ ಭೂಮಿ ತನ್ನ ಫಲವತ್ತತೆ ಕಳೆದುಕೊಳ್ಳುತ್ತಿದೆ. ಅತಿಯಾದ ಪ್ಲಾಸ್ಟಿಕ್ ಬಳಕೆ ಮನುಕುಲವನ್ನ ವಿನಾಶದತ್ತ ಕರೆದೊಯ್ಯುತ್ತಿದೆ. ಇಂದು ಗಿಡಗಳನ್ನ ಬೆಳೆಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಸ್ವಲ್ಪ ಜಾಗ ಸಿಕ್ಕರೂ ಸಹ ವಾಣಿಜ್ಯ ಬಳಕೆಗೆ ಬಳಸುತ್ತಾರೆ ಎಂದರು.
ಹವಾಮಾನ ವೈಪರೀತ್ಯದಿಂದ ಹಾಗೂ ಅತಿಯಾದ ತಾಪಮಾನದಿಂದ ಮನುಷ್ಯ ಜೀವಿಸುವುದು ಕಷ್ಟಕರವಾಗಿದೆ. ಜಲ ಮಾಲಿನ್ಯದಿಂದ ನೀರನ್ನು ಕಲುಷಿಗೊಳಿಸುವುದರಿಂದ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದೇವೆ. ಆದ್ದರಿಂದ ಪರಿಸರ ಸಂರಕ್ಷಣೆಯು ಮುಖ್ಯ. ಸಸಿಗಳನ್ನು ನೆಟ್ಟು ಪೋಷಣೆ ಮಾಡಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಹಾಯಕ ಗವರ್ನರ್ ಕೋಟೋಜಿ ರವಿ ಮಾತನಾಡಿ, ಪರಿಸರಕ್ಕೆ ನಮ್ಮ ಕೊಡುಗೆ ಏನು ಎಂಬುದನ್ನು ಚಿಂತಿಸಬೇಕು. ಶುದ್ಧವಾದ ಆಮ್ಲಜನಕದ ಕೊರತೆ ಇದೆ. ವಿವಾಹ ವಾರ್ಷಿಕೋತ್ಸವ ಹಾಗೂ ಜನ್ಮದಿನ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಗಿಡಗಳನ್ನ ನೆಡುವುದರ ಮುಖಾಂತರ ಪರಿಸರ ಸಂರಕ್ಷಣೆ ಮಾಡಬೇಕು ಎಂದು ತಿಳಿಸಿದರು.
Rotary Biodiversity Park ಇದೇ ಸಂದರ್ಭದಲ್ಲಿ ವಲಯ 10ರ ನಿಯೋಜಿತ ಸಹಾಯಕ ಗವರ್ನರ್ ನಾಗರಾಜ್ ಎಸ್ಸಾರ್ ಮಾತನಾಡಿ, ಕಲುಷಿತ ವಾತಾವರಣ, ಗ್ಲೋಬಲ್ ವಾರ್ಮಿಂಗ್‌ನಿಂದ ಯಾವಾಗ ಬೇಕಾದರೂ ಆವಾಗ ಮಳೆ ಬರುವುದು ಹಾಗೂ ತಾಪಮಾನ ಹೆಚ್ಚುವುದು ಆಗುತ್ತಿದೆ. ಪರಿಸರ ಸಂರಕ್ಷಣೆ ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಪಾಲಿಸಬೇಕು ಎಂದರು.
ಪ್ರತಿಯೊಬ್ಬ ಮಕ್ಕಳು ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಸಹಾಯಕ ಗೌವರ್ನರ್ ಎಂ.ಪಿ.ಆನಂದಮೂರ್ತಿ, ಭಾರತಿ ಚಂದ್ರಶೇಖರ್, ಕೆ.ಪಿ.ಶೆಟ್ಟಿ, ಗುರುರಾಜ್, ಎಂ.ಎಸ್.ಬಸವರಾಜ್ ಹಾಗೂ ರೋಟರಿ ಬಯೋ ಡೈವರ್ಸಿಟಿ ಪಾರ್ಕಿನ ಮುಖ್ಯ ರೂವಾರಿ ಉಮೇಶ್, ಸೋಮಶೇಖರ್, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು, ರೋಟರಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

World Environment Day ಶಾಲಾ ಶೈಕ್ಷಣಿಕ ವರ್ಷವು ಮಕ್ಕಳ ಮನಸ್ಸನ್ನು ಅರಳಿಸಲಿ- ಚೇತನ್

0

World Environment Day ಶಾಲಾ ಶೈಕ್ಷಣಿಕ ವರ್ಷವು ಮಕ್ಕಳಲ್ಲಿ ನವಚೇತನ ಮೂಡಲಿ, ಶೈಕ್ಷಣಿಕ ಚಟುವಟಿಕೆಗಳು ಮಕ್ಕಳ ಮನಸ್ಸಿನಲ್ಲಿ ಅರಳುವಂತಾಲಿ ಎಂದು ಟೈಮ್ಸ್ ಸ್ಪೂರ್ತಿ ಇಂಟರ್‌ನ್ಯಾಷನಲ್ ಸ್ಕೂಲ್‌ನ ಪ್ರಾಂಶುಪಾಲ ಕೆ. ಚೇತನ್ ಮಕ್ಕಳನ್ನು ಹರಸಿ ಸ್ವಾಗತಿಸಿ ಬರಮಾಡಿಕೊಂಡರು.
ಅವರು ಭದ್ರಾವತಿ ನಗರದ ಸಿದ್ದಾಪುರ ಬೈಪಾಸ್ ಬಿ.ಹೆಚ್.ರಸ್ತೆಯಲ್ಲಿರುವ ಶಾಲಾ ಪ್ರಾರಂಭೋತ್ಸವವು ಸಡಗರ ಸಂಭ್ರಮದಿಂದ ಆಚರಿಸಿದ ಕಾರ್ಯಕ್ರಮದಲ್ಲಿ ಮಾತನಾಡಿ ಶಾಲೆಯ ನೂತನ ಆಡಳಿತ ಮಂಡಳಿಯು ಶಾಲಾ ಕಟ್ಟಡವನ್ನು ವಿಶಿಷ್ಟವಾಗಿ ನೋಡುಗರನ್ನು ಆಕರ್ಷಿಸುವಂತೆ ಉತ್ತಮ ಪರಿಸರದಲ್ಲಿ ವಿದ್ಯಾ ಸಂಸ್ಥೆಯನ್ನು ಅಭಿವೃದ್ದಿ ಪಡಿಸಿದೆ. ವಿನೂತನ ಶೈಕ್ಷಣಿಕ ಚಟುವಟಿಕೆಗಳ ಮೂಲಕ ಮಕ್ಕಳ ಬುದ್ದಿ ವಿಕಾಸಕ್ಕೆ ಹಾಗೂ ಜ್ಞಾನಾರ್ಜನೆಗಾಗಿ ಹಲವು ಅಭಿವೃದ್ದಿ ಯೋಜನೆಗಳನ್ನು ಶಿಸ್ತಿನಿಂದ ಆಯೋಜಿಸಿದೆ. ಸುತ್ತಮುತ್ತಲ ಪ್ರದೇಶದ ಪೋಷಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದರು.
World Environment Day ಶಿಕ್ಷಣ ಸಂಯೋಜಕಿ ಬಿ.ಮಮತಾ ನವೀನ್ ಶಾಲಾ ಮಕ್ಕಳ ಚಟುವಟಿಕೆಗಳ ಅರಿವು ಮೂಡಿಸಿದರು. ಶಿಕ್ಷಕಿಯರು ಮಕ್ಕಳಿಗೆ ಆರತಿ ಬೆಳಗಿ ಪುಷ್ಪಾರ್ಚನೆ ಮಾಡಿ ಸ್ವಾಗತಿಸಿ ಹಬ್ಬದ ವಾತಾವರಣ ಮೂಡಿಸಿದ್ದರು. ಕಾರ್ಯಕ್ರಮದಲ್ಲಿ ಮಕ್ಕಳ ಪೋಷಕರು ಶಿಕ್ಷಕಿಯರು ಸಿಬ್ಬಂದಿಗಳು ಭಾಗವಹಿಸಿದ್ದರು. ಮಕ್ಕಳಿಂದ ಸಾಮೂಹಿಕ ಪ್ರಾರ್ಥನೆ ನೆರವೇರಿದರೆ ಶಿಕ್ಷಕಿಯರಿಂದ ಸ್ವಾಗತ, ವಂದನೆ, ನಿರೂಪಣೆ ನಡೆಯಿತು.

Election Commission ಕಾರಾಗೃಹ ಬಂದಿಗಳಿದ್ದರೂ ಚುನಾವಣೆಯಲ್ಲಿ ಗೆದ್ದು ಬೀಗಿದರು

0

Election Commission ಭಯೋತ್ಪಾದನೆಗೆ ಸಂಬಂಧಿಸಿದ ಆರೋಪದಲ್ಲಿ ಪ್ರಸ್ತುತ ಜೈಲು ಸೇರಿರುವ ಇಬ್ಬರು ಅಭ್ಯರ್ಥಿಗಳು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ವಿಶಿಷ್ಟ ಸನ್ನಿವೇಶವನ್ನು ಸೃಷ್ಟಿಸಿದ್ದಾರೆ. ಭಾರತದಲ್ಲಿ 18 ನೇ ಸಾರ್ವತ್ರಿಕ ಚುನಾವಣೆಯ ಪ್ರಕ್ರಿಯೆಗಳಲ್ಲಿ ಭಾಗವಹಿಸದಂತೆ ಕಾನೂನು ಅವರನ್ನು ತಡೆಯುತ್ತದೆಯಾದರೂ, ಅವರು ಸಂಸತ್ತಿನ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಂವಿಧಾನಿಕ ಹಕ್ಕನ್ನು ಹೊಂದಿದ್ದಾರೆ.
ಚುನಾವಣಾ ಆಯೋಗದ ಮಂಗಳವಾರದ ಪ್ರಕಟಣೆಯ ಪ್ರಕಾರ, ಜೈಲಿನಲ್ಲಿರುವ ಸಿಖ್ ಧರ್ಮ ಬೋಧಕ ಅಮೃತಪಾಲ್ ಸಿಂಗ್ ಅವರು ಪಂಜಾಬ್‌ನ ಖಾದೂರ್ ಸಾಹಿಬ್ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಪ್ರಸ್ತುತ ಜೈಲುವಾಸದಲ್ಲಿರುವ “ಇಂಜಿನಿಯರ್ ರಶೀದ್” ಎಂದು ಕರೆಯಲ್ಪಡುವ ಶೇಖ್ ಅಬ್ದುಲ್ ರಶೀದ್ ಅವರು ಜಮ್ಮು-ಲಾಶ್ಮೀರದ ಬಾರಾಮುಲ್ಲಾ ಕ್ಷೇತ್ರದಲ್ಲಿ ಗೆದ್ದಿದ್ದಾರೆ.

ಇಂಜಿನಿಯರ್ ರಶೀದ್ ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಆರೋಪದ ಮೇಲೆ ಆಗಸ್ಟ್ 9, 2019 ರಿಂದ ತಿಹಾರ್ ಜೈಲಿನಲ್ಲಿದ್ದರೆ, ಸಿಂಗ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯಿದೆಯಡಿ ಪ್ರಕರಣ ದಾಖಲಿಸಿ ಅಸ್ಸಾಂನ ದಿಬ್ರುಗಢ ಜೈಲಿಗೆ ಕಳುಹಿಸಲಾಗಿದೆ. ಈ ಜೈಲಿನಲ್ಲಿರುವ ಅಭ್ಯರ್ಥಿಗಳಿಗೆ ಜೈಲು ಸೇರಲು ಅನುಮತಿ ನೀಡಬಹುದೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಪ್ರಮಾಣವಚನ ಸ್ವೀಕಾರ ಯಾವ ಕಾರ್ಯವಿಧಾನಗಳು ಒಳಗೊಂಡಿರುತ್ತವೆ ಎಂಬ ಸಂವಿಧಾನ ತಜ್ಞ ಮತ್ತು ಮಾಜಿ ಲೋಕಸಭೆಯ ಪ್ರಧಾನ ಕಾರ್ಯದರ್ಶಿ ಮಾತನಾಡಿದ್ದು, ‘ಅಂತಹ ಸಂದರ್ಭಗಳಲ್ಲಿ ಸಾಂವಿಧಾನಿಕ ನಿಬಂಧನೆಗಳಿಗೆ ಬದ್ಧವಾಗಿರುವುದು. ಸಂಸತ್ತಿನ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುವುದು ಸಾಂವಿಧಾನಿಕ ಹಕ್ಕು’ ಎಂದು ರಾ‍ಷ್ಟ್ರೀಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಆದರೆ, ಇಂಜಿನಿಯರ್ ರಶೀದ್ ಮತ್ತು ಸಿಂಗ್ ಅವರು ಪ್ರಸ್ತುತ ಜೈಲುವಾಸದಲ್ಲಿರುವ ಕಾರಣ, ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಂಸತ್ತಿಗೆ ಬೆಂಗಾವಲು ಮಾಡಲು ಅಧಿಕಾರಿಗಳಿಂದ ಅನುಮತಿ ಪಡೆಯಬೇಕು. ಪ್ರಮಾಣ ವಚನ ಸ್ವೀಕರಿಸಿದ ನಂತರ, ಅವರು ಜೈಲಿಗೆ ಮರಳಬೇಕಾಗುತ್ತದೆ. ಆಚಾರಿ ಅವರು ಸಂವಿಧಾನದ 101 (4) ನೇ ವಿಧಿಯನ್ನು ಉಲ್ಲೇಖಿಸುವ ಮೂಲಕ ಕಾನೂನು ಅಂಶಗಳನ್ನು ಸ್ಪಷ್ಟಪಡಿಸಿದರು, ಇದು ಸಂಸತ್ತಿನ ಉಭಯ ಸದನಗಳ ಸದಸ್ಯರ ಗೈರುಹಾಜರಿಯನ್ನು ಅಧ್ಯಕ್ಷರ ಪೂರ್ವಾನುಮತಿಯಿಲ್ಲದೆ ತಿಳಿಸುತ್ತದೆ. ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸದನದ ಕಲಾಪಕ್ಕೆ ಹಾಜರಾಗಲು ಸಾಧ್ಯವಾಗದಿರುವ ಬಗ್ಗೆ ಸ್ಪೀಕರ್‌ಗೆ ಲಿಖಿತವಾಗಿ ತಿಳಿಸಲಾಗುವುದು ಎಂದು ವಿವರಿಸಿದರು.
Election Commission ನಂತರ, ಸ್ಪೀಕರ್ ಅವರು ಸದಸ್ಯರ ಗೈರುಹಾಜರಿಯ ಮೇಲಿನ ಸದನ ಸಮಿತಿಗೆ ತಮ್ಮ ಮನವಿಗಳನ್ನು ರವಾನಿಸುತ್ತಾರೆ. ನಂತರ ಸಮಿತಿಯು ಸದಸ್ಯರು ಸದನದ ಕಲಾಪಗಳಿಗೆ ಗೈರುಹಾಜರಾಗಲು ಅವಕಾಶ ನೀಡಬೇಕೆ ಎಂಬುದರ ಕುರಿತು ಶಿಫಾರಸು ಮಾಡುತ್ತದೆ. ಸ್ಪೀಕರ್ ನಂತರ ಸದನದಲ್ಲಿ ಶಿಫಾರಸನ್ನು ಮತಕ್ಕೆ ಹಾಕುತ್ತಾರೆ. ಇಂಜಿನಿಯರ್ ರಶೀದ್ ಅಥವಾ ಸಿಂಗ್ ತಪ್ಪಿತಸ್ಥರಾಗಿದ್ದರೆ ಮತ್ತು ಕನಿಷ್ಠ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಪಡಿಸಿದರೆ, ಅವರು ತಕ್ಷಣವೇ ಲೋಕಸಭೆಯಲ್ಲಿ ತಮ್ಮ ಸ್ಥಾನಗಳನ್ನು ಕಳೆದುಕೊಳ್ಳುತ್ತಾರೆ.
2013 ರ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ಈ ನಿರ್ಧಾರವು ಪ್ರಜಾಪ್ರತಿನಿಧಿ ಕಾಯಿದೆಯ ಸೆಕ್ಷನ್ 8(4) ಅನ್ನು ಅಸಿಂಧುಗೊಳಿಸಿತು. ಈ ಹಿಂದೆ ಶಿಕ್ಷೆಗೊಳಗಾದ ಸಂಸದರು ಮತ್ತು ಶಾಸಕರು ತಮ್ಮ ಅಪರಾಧಗಳ ವಿರುದ್ಧ ಮೇಲ್ಮನವಿ ಸಲ್ಲಿಸಲು ಮೂರು ತಿಂಗಳ ಅವಧಿಯನ್ನು ಅನುಮತಿಸಿದರು.

Devendra Fadnavis ಚುನಾವಣೆಯಲ್ಲಿ‌ ಬಿಜೆಪಿಗೆ ಕಳಪೆ ಫಲಿತಾಂಶ:’ಮಹಾ’ ಉಪಮುಖ್ಯಮಂತ್ರಿ ಫಡ್ನವಿಸ್ ರಾಜಿನಾಮೆ?

0

Devendra Fadnavis ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ ಕಳಪೆ ಪ್ರದರ್ಶನದ ಹಿನ್ನೆಲೆ ನೈತಿಕ ಹೊಣೆಯನ್ನು ಹೊತ್ತ ಡಿಸಿಎಂ ದೇವೇಂದ್ರ ಪಡ್ನಾವೀಸ್‌ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಲು ಮುಂದಾಗಿದ್ದಾರೆ.

ನಾನು ಹೈಕಮಾಂಡ್‌ನ ಯಾವುದೇ ನಿರ್ಧಾರಕ್ಕೆ ಬದ್ಧ, ನನ್ನನ್ನು ಸರ್ಕಾರದ ಜವಾಬ್ದಾರಿಯಿಂದ ಮುಕ್ತಗೊಳಿಸುವಂತೆ ಬಿಜೆಪಿ ಹೈಕಮಾಂಡ್‌ಗೆ ಮನವಿ ಮಾಡುತ್ತಿದ್ದೇನೆ. ಮುಂಬರುವ ಚುನಾವಣೆಯಲ್ಲಿ ಪಕ್ಷಕ್ಕಾಗಿ ಶ್ರಮಿಸಲು ನನಗೆ ಅದು ಸಹಾಯ ಮಾಡಲಿದೆ ಎಂದು ಹೇಳಿದ್ದಾರೆ.
ಮಹರಾಷ್ಟ್ರದಲ್ಲಿ ಏಕನಾಥ್‌ ಶಿಂಧೆ ನೇತೃತ್ವದ ಶಿವಸೇನೆ, ಬಿಜೆಪಿ, ಅಜಿತ್‌ ಪವಾರ್‌ ನೇತೃತ್ವದ ಸಮ್ಮಿಶ್ರ ಸರಕಾರವಿದೆ. ಆದರೆ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು ಕಳಪೆ ಪದರ್ಶನವನ್ನು ಮಾಡಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ 23 ಸ್ಥಾನಗಳನ್ನು ಗಳಿಸಿದ್ದ ಬಿಜೆಪಿ ಈ ಬಾರಿ ರಾಜ್ಯದಲ್ಲಿ ಕೇವಲ 9 ಸ್ಥಾನಗಳಲ್ಲಿ ಮಾತ್ರ ಗೆಲುವನ್ನು ಸಾಧಿಸಿದೆ. ಎನ್‌ಡಿಎ ಮೈತ್ರಿ ಪಕ್ಷಗಳಾದ ಏಕನಾಥ್‌ ಶಿಂಧೆ ಶಿವಸೇನೆ 7, ಎನ್‌ಸಿಪಿ ಅಜಿತ್‌ ಪವಾರ್‌ ಬಣ 1 ಕ್ಷೇತ್ರಗಳಲ್ಲಿ ಮಾತ್ರ ಗೆಲುವನ್ನು ಕಂಡಿದೆ. ಇದು ಎನ್‌ಡಿಎ ಮೈತ್ರಿಕೂಟಕ್ಕೆ ದೊಡ್ಡ ಹೊಡೆತವನ್ನು ನೀಡಿದೆ. ಮಹರಾಷ್ಟ್ರದಲ್ಲಿ ಇಂಡಿಯಾ ಮೈತ್ರಿಕೂಟವು 30 ಕ್ಷೇತ್ರಗಳಲ್ಲಿ ಗೆಲುವನ್ನು ಸಾಧಿಸಿದೆ.
Devendra Fadnavis ಲೋಕಸಭೆ ಚುನಾವಣೆಯ ಟಿಕೆಟ್‌ ಹಂಚಿಕೆಯ ವೇಳೆ ಮಹರಾಷ್ಟ್ರದಲ್ಲಿ ಎನ್‌ಡಿಎ ಮೈತ್ರಿ ಪಕ್ಷಗಳಲ್ಲಿ ಭಾರೀ ಅಸಮಾಧಾನ ಭುಗಿಲೆದ್ದಿತ್ತು. ಕುದ್ದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮಹಾರಾಷ್ಟ್ರಕ್ಕೆ ತೆರಳಿ ಪರಿಸ್ಥಿತಿ ನಿಯಂತ್ರಿಸಲು ಪ್ರಯತ್ನಿಸಿದ್ದರು. ಇದಲ್ಲದೆ ಮರಾಠ ಮೀಸಲಾತಿ ಹೋರಾಟ ದೊಡ್ಡ ಮಟ್ಟದಲ್ಲಿ ನಡೆದಿತ್ತು. ಇನ್ನೊಂದು ಕಡೆ ಮರಾಠರಿಗೆ ಒಬಿಸಿಯಡಿ ಮೀಸಲಾತಿಗೆ ಒಬಿಸಿಗಳು ವಿರೋಧವನ್ನು ವ್ಯಕ್ತಪಡಿಸಿದ್ದರು. ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಮಹಾರಾಷ್ಟ್ರ ಸರಕಾರಕ್ಕೆ ಎಚ್ಚರಿಕೆ ನೀಡಿದ್ದರು. ಮರಾಠರಿಗೆ ಕುಂಬಿ ಜಾತಿ ಪ್ರಮಾಣಪತ್ರಗಳನ್ನು ನೀಡುವ ಸರ್ಕಾರದ ಉದ್ದೇಶಿತ ಕ್ರಮದ ವಿರುದ್ಧ ನ್ಯಾಯಾಲಯದ ಮೊರೆ ಹೋಗುವುದಾಗಿ ಕೂಡ ಹೇಳಿದ್ದರು.