Monday, April 13, 2026
Monday, April 13, 2026
Home Blog Page 702

World Environment Day ಪರಿಸರ ಕಾಪಾಡಿ ಮುಂದಿನ ಪೀಳಿಗೆಗೆ ವರ್ಗಾಯಿಸುವ ಹೊಣೆ ನಮ್ಮೆಲ್ಲರದು- ಬಿ.ಹೆಚ್.ಕೃಷ್ಣಪ್ಪ

0

World Environment Day ಮಾನವರಿಗೆ ಹೇಗೆ ಜೀವಿಸುವ ಹಕ್ಕಿದಿಯೋ ಹಾಗೆಯೇ ಮರ-ಗಿಡಗಳಿಗೂ ಜೀವಿಸುವ ಹಕ್ಕಿದ್ದು, ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕರಾದ ಬಿ ಹೆಚ್ ಕೃಷ್ಣಪ್ಪ ನುಡಿದರು.
ಜೂ.5 ರಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಆವರಣದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾನವ ಹಕ್ಕುಗಳ ಉಲ್ಲಂಘನೆಯಾದಲ್ಲಿ ನ್ಯಾಯಾಲಯದಲ್ಲಿ ದಾವೆ ಹಾಕುತ್ತೇವೆ. ಹಾಗೆಯೇ ಪರಿಸರ ಸಂರಕ್ಷಣೆ ಕಾರ್ಯವನ್ನು ನಮ್ಮಗಳ ಕರ್ತವ್ಯಗಳಲ್ಲಿ ಒಂದೆಂದು ಮಾಡಬೇಕು. ಪರಿಸರ ರಕ್ಷಿಸುವುದು ಸಮಾಜದ ಪ್ರತಿ ನಾಗರೀಕನ ಜವಾಬ್ದಾರಿಯಾಗಿದೆ. ಪ್ರಾಕೃತಿಕ ಸಂಪನ್ಮೂಲಗಳಾದ ನೆಲ, ಜಲ, ವಾಯುವನ್ನು ಶುದ್ಧವಾಗಿ ಸೇವಿಸುವ, ಸಂಸ್ಕರಿಸುವ ಹಾಗೂ ಮುಂದಿನ ಪೀಳಿಗೆಗೆ ವರ್ಗಾಯಿಸುವ ಮಹತ್ತರ ಜವಾಬ್ದಾರಿ ನಮ್ಮಗಳ ಮೇಲಿದೆ. ಪರಿಸರ ಸಂರಕ್ಷಣೆ ಕೇವಲ ಅರಣ್ಯ ಇಲಾಖೆಯ ಜವಾಬ್ದಾರಿ ಮಾತ್ರ ಆಗಿರದೇ ಭೂಮಿಯ ಮೇಲೆ ಜೀವಿಸುವ ಪ್ರತಿಯೊಬ್ಬ ಮಾನವನ ಕರ್ತವ್ಯ ಕೂಡ ಆಗಿದೆ.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾ ನಿರೂಪಣಾಧಿಕಾರಿ ಡಾ.ಸಂತೋ ಕುಮಾರ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಯುವಜನತೆ ತಮ್ಮ ಹುಟ್ಟು ಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿಕೊಳ್ಳುತ್ತಿದ್ದಾರೆ. ಇದರ ಬದಲಾಗಿ ಪ್ರತಿಯೊಬ್ಬರೂ ತಮ್ಮ ಹುಟ್ಟಿದ ದಿನದ ಪ್ರಯುಕ್ತವಾಗಿ ಒಂದೊಂದು ಗಿಡವನ್ನು ನೆಡುವುದರ ಮೂಲಕ ಆಚರಿಸಿದರೆ ಅರ್ಥಪೂರ್ಣವಾಗುತ್ತದೆ. ಅರಣ್ಯ ಇಲಾಖೆಯ ಕಾಯ್ದೆ ಪ್ರಕಾರ ಭಾರತದ ಭೂಪ್ರದೇಶಕ್ಕೆ ಶೇಕಡಾ 33 ರಷ್ಟು ಅರಣ್ಯದ ಅವಶ್ಯಕತೆ ಇದೆ. ಆದರೆ ಒಂದು ವರದಿಯ ಪ್ರಕಾರ 21% ಮಾತ್ರ ಇರುವುದು ಖೇದಕರ. ಕಾಡನ್ನು ಉಳಿಸಿ ನಾಡನ್ನು ಬೆಳೆಸಿ ಎಂಬ ಘೋಷವಾಕ್ಯದ ಬದಲಾಗಿ ಕಾಡನ್ನು ಬೆಳೆಸಿ ಪ್ರಾಣವನ್ನು ಉಳಿಸಿ ಎಂಬ ಸ್ಥಿತಿಗೆ ತಲುಪಿದ್ದೇವೆ. ಹಾಗಾಗಿ ಪರಿಸರ ದಿನಾಚರಣೆ ಕೇವಲ ಈ ಒಂದು ದಿನಕ್ಕೆ ಸೀಮಿತವಾಗದೆ ವರ್ಷಪೂರ್ತಿ ಆಚರಣೆ ಆಗಲಿ ಎಂದು ಆಶಿಸಿದರು.
World Environment Day ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶಶಿರೇಖಾ ಮಾತನಾಡಿ, ಪರಿಸರ ಎಂದರೆ ಕೇವಲ ಮರ ಗಿಡಗಳನ್ನು ಬೆಳೆಸುವುದು ಮಾತ್ರವಲ್ಲ ಇದರೊಂದಿಗೆ ತನ್ನ ಸುತ್ತಮುತ್ತಲಿನ ಪರಿಸರ, ಮನೆ ಕಛೇರಿ ತಾನು ವಾಸಿಸುತ್ತಿರುವ ಸ್ಥಳದ ಸುತ್ತಮುತ್ತ ಸ್ವಚ್ಚವಾಗಿಟ್ಟುಕೊಳ್ಳುವುದು. ಜಲ, ನೆಲ ವಾಯುವನ್ನು ಮಿತವಾಗಿ ಬಳಸುವುದು. ಅನಾವಶ್ಯಕವಾಗಿ ವಾಹನಗಳನ್ನು ಚಲಾಯಿಸದಿರುವುದು ಹಾಗೂ ತನ್ನ ನಡವಳಿಕೆಯಲ್ಲಿ ಕೂಡ ಅದನ್ನು ಶಾಶ್ವತವಾಗಿ ಅಳವಡಿಸಿಕೊಳ್ಳುವುದರ ಮೂಲಕ ಪರಿಸರವನ್ನು ಸಂರಕ್ಷಿಸಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಎಲ್ಲಾ ಅಧೀನ ಕಚೇರಿಗಳ ಸಿಬ್ಬಂದಿ ವರ್ಗದವರು ಭಾಗವಹಿಸಿ ಗಿಡ ನೀಡುವುದರ ಮೂಲಕ ಸಂಭ್ರಮದಿಂದ ಪರಿಸರ ದಿನಾಚರಣೆಯನ್ನು ಆಚರಿಸಿದರು.

Klive News Special Article ಶಿವಮೊಗ್ಗಕ್ಕೆ ಪ್ರಗತಿಯ ಸ್ಪರ್ಶ ನೀಡಿದ -ಬಿ.ವೈ.ರಾಘವೇಂದ್ರ

0

ಲೇಖಕರು:ಲಕ್ಷೀನಾರಾಯಣ ಕಾಶಿ. ಹಿರಿಯ ಸಾಹಿತಿ ಶಿವಮೊಗ್ಗ.

Klive News Special Article ಲೋಕಸಭೆ ಚುನಾವಣೆ ಮುಗಿದಿದೆ . ಅತಿ ದೀರ್ಘಾವಧಿ ಚುನಾವಣಾ ಪ್ರಕ್ರಿಯೆ ದೊಡ್ಡ ಆಪತ್ತುಗಳಿಲ್ಲದೆ ಸುಗಮವಾಯಿತು. ಕರ್ನಾಟಕದಲ್ಲಿ 4-6 ಸೀಟ್ ಕಡಿಮೆಯಾದರೂ ಶ್ರೀ ವಿಜೇಂದ್ರರ ನೇತೃತ್ವದ ನೀ ಚೆನ್ನಾಗಿಯೇ ಫಲಿತಾಂಶ ಬಂದಿದೆ. ಶಿವಮೊಗ್ಗ ನಿರೀಕ್ಷಿತ ರೀತಿಯಲ್ಲಿ ಬಿ ವೈ ರಾಘವೇಂದ್ರ ನಾಲ್ಕನೇ ಬಾರಿ ಚುನಾಯಿತರಾದರು. ಜಾತಿ ಲೆಕ್ಕಾಚಾರ, ಗ್ಯಾರೆಂಟಿ ಬೆಂಬಲ, ಪಕ್ಷದೊಳಗೆ ಭಿನ್ನರಾಗ ಎತ್ತಿದ ಹಿರಿಯ ಮುಖಂಡ ಹೀಗೆ ಹಲವು ರೀತಿಯ ಅಡಚಣೆಗಳಿದ್ದರೂ ರಾಘಣ್ಣನವರ ಅಪ್ರತಿಮ ಸಾಧನಾ ಬಲ ಜಿಲ್ಲೆಯ ಜನರ ಬೆಂಬಲದ ಮುಂದೆ ಎಂಥ ಅಡ್ಡ ಗೋಡೆ ನಿಲ್ಲಲಾಗದೆ ಹೋದವು.

ಕಾರಣ ಇಷ್ಟೇ ಬಡವ ಭೇದ ಭಾವವಿಲ್ಲದೆ ಎಲ್ಲಾ ವರ್ಗದವರ ಧ್ವನಿಯಾಗಿ ಜಿಲ್ಲೆಯ ಅಗತ್ಯತೆಗಳ ಬಗ್ಗೆ ಚಿಂತನೆ ಇಟ್ಟುಕೊಂಡು ಅಭಿವೃದ್ಧಿ ಕೆಲಸ ಮಾಡುತ್ತಾ ಬಂದಿದ್ದು, ಅಷ್ಟೋತ್ತರಗಳಿಗೆ ಕಿವಿ ಕೊಡದೆ, ಸಂಘಟನೆಯ ಶಕ್ತಿ, ಕ್ಷೇತ್ರಾದ್ಯಂತ ಬೆಳೆಸಿ ತೋರಿಸಿದ್ದು ಎಲ್ಲವೂ ರಾಘಣ್ಣನವರನ್ನು ಅಜೇಯರನ್ನಾಗಿಸಿತು.

ಈ ಚುನಾವಣೆಯ ವಿಶೇಷತೆ ಎಂದರೆ ಬಿಜೆಪಿ (ರಾಘಣ್ಣ) ಎದುರು ಬಿಜೆಪಿ ಕಟ್ಟಿದ ಈಶ್ವರಪ್ಪನವರೇ ಒಂದು ಅಡ್ಡಿಯಾದರು ಸ್ವತಃ ಮಾಜಿ ಮುಖ್ಯಮಂತ್ರಿ ಮಗಳಾಗಿ , ತಮ್ಮ ಮಿನಿಸ್ಟರಾಗಿ ಅಧಿಕಾರ ಹೊಂದಿದ್ದ ಪಕ್ಷದ ಮುಖಂಡರಾಗಿದ್ದ ಗೀತಾ, ಅವರ ಪ್ರಬಲ ಪೈಪೋಟಿ ಜಾತಿ ಸಮೀಕರಣದಲ್ಲೂ ಹಿಂದುಳಿದವರು, ದೀವರು ಮುಸ್ಲಿಂ ಮತಗಳಿಂದ ಕಾಂಗ್ರೆಸ್ ಅಧಿಕಾರ ಬಳಸಿ ಗೆಲ್ಲಬಹುದೆಂಬ ಭ್ರಮೆಯಾಗಿತ್ತು. ಈಶ್ವರಪ್ಪನವರ ಹಿಂದೆ ಬೆಂಬಲಿಗರ ಅಬ್ಬರ ಸಂಘಟನೆ ಬಲ ಸಿಗುತ್ತದೆ ಎಂಬುದು ಎಲ್ಲವೂ ಹುಸಿಯಾಯಿತು.

ಸನ್ಮಾನ್ಯ ಮೋದಿ ಅವರ ಭೇಟಿ ಹಲವು ಕಡೆ ಬಿಜೆಪಿ ಗೆಲ್ಲಲು ಕಾರಣವಾಗಿದ್ದ ಶಿವಮೊಗ್ಗ ಕ್ಷೇತ್ರಕ್ಕೆ ಅದರಿಂದ ವಿಶೇಷ ಬಲ ಅಗತ್ಯವು ಇದೆ. ಯಾಕೆಂದರೆ ಇಲ್ಲಿ ರಾಘಣ್ಣನವರ ನಡೆ-ನುಡಿ ಕಾರ್ಯ, ಸಂಘಟನಾ ಚಾತುರ್ಯ ಎದುರಿಸಲು ಸಾಧಾರಣದವರಿಗೆ ಸಾಧ್ಯವಿರಲಿಲ್ಲ ‌. ಒಂದು ಕಾಲದಲ್ಲಿ ಬಂಗಾರಪ್ಪನವರನ್ನು ಸೋಲಿಸಿದ ಸರದಾರ ನಮ್ಮ ರಾಘಣ್ಣ.

ಶಿವಮೊಗ್ಗ ಕ್ಷೇತ್ರದಲ್ಲಿ ಬೇರೆ ಯಾವ ಸೂತ್ರ ನಡೆಯಲಿಲ್ಲ. ಹಿಂದಿನ ಬಾರಿ ಅಷ್ಟೇ ಸರಾಸರಿ ಎಷ್ಟು ಮತಗಳನ್ನು ಬಿಜೆಪಿ ಪಡೆದಿದೆ. ಕುರುಬರು ಮುಸ್ಲಿಂ ಧೀವರು ಮತ ಬಿಜೆಪಿಗೆ ಬರುವುದಿಲ್ಲ ಎಂಬ ಮಾತೇ ಸುಳ್ಳಾಯಿತು.

ಗೀತಾ ಮಧು ಅವರ ಸ್ವಕ್ಷೇತ್ರ ಸೊರಬದಲ್ಲೇ ಬಿಜೆಪಿ ಜಾಸ್ತಿ ಮತಗಳಿಸಿತು . ಧೀವರ ಜನಸಂಖ್ಯೆ ಜಾಸ್ತಿ ಇರುವ ಸರ್ಕಾರದಲ್ಲೂ ಬಿಜೆಪಿ ಲೀಡ್ ಪಡೆದಿದ್ದು ನೋಡಿದರೆ , ರಾಘಣ್ಣನವರ ಕ್ಷೇತ್ರದಾದ್ಯಂತ ಇರುವ ಬಿಗು ಹಿಡಿತ ಸಾಬೀ ತಾಗುತ್ತದೆ.

ಕಾರ್ಯವೈಖರಿ, ಕರ್ತವ್ಯ ನಿಷ್ಠೆ, ಛಲ ಬಿಡದ ನಡೆಗಳು ಮಾನ್ಯ ಶ್ರೀ ಯಡಿಯೂರಪ್ಪ ನವರದ್ದಾದರೂ, ರಾಘಣ್ಣನವರ ನಡೆಯೇ ಬೇರೆ. ಜಿಲ್ಲೆಗೆ ಅಗತ್ಯ ಇರುವ ಅಭಿವೃದ್ಧಿಯ ಅನ್ವೇಷಣಾ ಶಕ್ತಿ ಬೇರೆ. ಹಾಗಾಗಿ ರಾಘಣ್ಣ ವೈಯಕ್ತಿಕ ಮನಸ್ಸೇ ಹೆಚ್ಚು ಪಾಲು ಜಯತಂದಿದೆ. ಮೋದಿ ಬಲ, ಯಡಿಯೂರಪ್ಪನವರ ಬೆಂಬಲಗಳೆಲ್ಲವೂ ಸಹಾಯಕ ವಿನಹ ಅದೇ ಕಾರಣವಲ್ಲ. ವೈಯಕ್ತಿಕವಾಗಿ ರಾಘಣ್ಣ ಗಳಿಸಿದ ಜನರೊಲುಮೆಯೇ ಮುಖ್ಯ ಕಾರಣ ಎಂಬುದನ್ನು ಗಮನಿಸಬೇಕು.

ಈ ಚುನಾವಣೆ ಹಿರಿಯ ರಾಜಕಾರಣಿ, ಅಧಿಕಾರಸ್ತರು, ಜಾತಿ ಬೆಂಬಲ ಜಾಸ್ತಿ ಇರುವವರು ಎಂಬುದು ನೋಡದೆ ಕೇವಲ ರಾಘಣ್ಣ ನವರು ಮಾಡಿದ ಅಭಿವೃದ್ಧಿ ಕಾರ್ಯಗಳೇ ಶಕ್ತಿಯಾಗಿ ನಿಂತವು. ಇದು ಕಲಿಯುವ ಮನಸ್ಸುಗಳಿಗೆ ಒಳ್ಳೆಯ ಪಾಠವು ಹೌದು.

Klive News Special Article ಬಿಜೆಪಿ ರಾಷ್ಟ್ರಮಟ್ಟದಲ್ಲಿ ಹೆಚ್ಚು ಸೀಟು ಪಡೆಯುಲಿಲ್ಲ. ಅದಕ್ಕೆ ಕಾರಣ ಹಲವಾರು ಇರಬಹುದು. ನನ್ನ ದೃಷ್ಟಿಯಲ್ಲಿ ಮುಖ್ಯವಾಗಿ ಬಿಜೆಪಿಯಲ್ಲಿ ನಾಯಕರು, ಮರಿ ನಾಯಕರು, ಪುಡಿ ನಾಯಕರು ಗಳು ಜಾಸ್ತಿಯಾಗಿ ಕಾರ್ಯಕರ್ತರ ಪಡೆ ಕಡಿಮೆಯಾಗಿದೆ . ರಾಘಣ್ಣನವರು ಜಿನಾನುರಾಗಿದ್ದಕ್ಕೆ ಮುಖ್ಯ ಕಾರಣ ಅವರು ಮೀಡಿಯಾ ಬಳಸಿ ಕಾಲಕಾಲಕ್ಕೆ ತಮ್ಮ ಕಾರ್ಯವೈಖರಿ ಮೋದಿಜೀಯವರ ಕನಸಿನ ಕಾರ್ಯಕ್ರಮಗಳು , ಯೋಜನೆಗಳು ಜನ ಸ್ಪೂರ್ತಿ ಕಲ್ಯಾಣಗಳ ಬಗ್ಗೆ ಜನರಿಗೆ ತಿಳಿಸುತ್ತಿದ್ದರು. ಆದರೆ ಹೆಚ್ಚಿನ ಕಡೆ ಕಾರ್ಯಕರ್ತರು ಮೋದಿ ಕಾರ್ಯಕ್ರಮಗಳನ್ನ ಕನಸು ಕಾಮಗಾರಿಗಳನ್ನ ಜನರಿಗೆ ತಲುಪಿಸುವ ಕಾರ್ಯಕರ್ತರ ಪಡೆ ಕಡಿಮೆ ಆದದ್ದೆ ಕಾರಣ.

ಮುಖ್ಯವಾಗಿ ಒಬ್ಬ ಪಿಎಮ್ ಮಾಡಲಾರದ ಕಾರ್ಯಗಳನ್ನ ರಾಘಣ್ಣ ಸಾಧಿಸಿದರು. ರಸ್ತೆ ನೀರು ಮುಂತಾದ ಅಭಿವೃದ್ಧಿ ಜೊತೆ ಪ್ರವಾಸೋದ್ಯಮ ವಿಮಾನ ರೈಲು ಸಂಪರ್ಕ ಸೇತುವೆ ಮುಂತಾದ ಹಲವು ದೊಡ್ಡ ಕಾರ್ಯ ಮಾಡಿ ಸೈ ಎನಿಸಿಕೊಂಡರು.

ಮಾನ್ಯ ಮೋದಿಜಿಯವರ ಕನಸಿನ ಭಾರತದ ಕಲ್ಪನೆ ಜನರಿಗೆ ತಲುಪುವಲ್ಲಿ ರಾಘಣ್ಣ ಯಶಸ್ವಿಯಾದದ್ದು ಅವರ ಗೆಲುವಿಗೊಂದು ಕಾರಣ.
ಚುನಾವಣೆ ಗೆದ್ದಾಯಿತು. ಬಿಜೆಪಿ ಸ್ವಯಂ ಬಲದಿಂದ ರಾಷ್ಟ್ರ ಆಳುವಾಗಿನ ಮಾತು.

ಈಗ ಸಮ್ಮಿಶ್ರ ಸರ್ಕಾರದ ನಡಾವಳಿ ಬೇರೆ. ಈಗ ಮಿನಿಸ್ಟರ್ ಗಳು ಮನವಲಿಸಿದರೆ ಪ್ರಾಜೆಕ್ಟ್ ಸ್ಯಾಂಕ್ಷನ್ ಗಳು ಕಷ್ಟ . ಜೊತೆಗೆ ಜನ ಈಗ ರಾಘಣ್ಣನವರಿಂದ ಇನ್ನೂ ಹೆಚ್ಚು ನಿರೀಕ್ಷಿಸುತ್ತಾರೆ . ಸಾಧ್ಯಸಾಧ್ಯತೆಗಳ ಅರಿವು ಜನರಿಗಿಲ್ಲ . ರಾಘಣ್ಣ ಮನಸ್ಸು ಮಾಡಿದರೆ ಸಿಗಬಹುದೆಂಬ ಭ್ರಮೆಯಲ್ಲಿ ಜನರಿರುತ್ತಾರೆ. ಸ್ಥಳೀಯ ಸರ್ಕಾರ ಬೆಂಬಲಿಸುವುದಿಲ್ಲ.

ಈ ಎಲ್ಲಾ ಸಂಕಟಗಳ ನಡುವೆ ರಾಘಣ್ಣ ಹೆಚ್ಚು ಸಾಧನೆ ಮಾಡಿ ಜನಾನುರಾಗಿಯಾಗಿ ಮುಂದುವರಿಯಬೇಕು.

ಸಂಘಟನೆಯ ಬಲ, ಕ್ರಿಯಾಶೀಲ ಸನ್ನಡತೆ, ಅಭಿವೃದ್ಧಿಪರ ಚಿಂತನೆ ಇರುವ ಸಾಧಕತನ ಇದ್ದವರು ಎಷ್ಟೇ ಅಡ್ಡಿ ಆತಂಕಗಳಿದ್ದರೂ ಗೆಲ್ಲುತ್ತಾರೆ ಎನ್ನಲು ರಾಘಣ್ಣನವರ ಗೆಲುವೇ ಸಾಕ್ಷಿ .

ಲಕ್ಷ್ಮೀನಾರಾಯಣ ಕಾಶಿ
ನಿರ್ದೇಶಕರು
ಜನ ಶಿಕ್ಷಣ ಸಂಸ್ಥಾನ

Home Department ಹಮಾರೆ ಬಾರಾ ಸಿನಿಮಾ ನಿಷೇಧ

0

Home Department ವಿವಾದಿತ ಹಿಂದಿ ಚಲನಚಿತ್ರ ‘ಹಮಾರೆ ಬಾರಹ್’ ಬಿಡುಗಡೆಗೆ ಒಂದು ದಿನ ಮುನ್ನ, ಕರ್ನಾಟಕದಲ್ಲಿ ಅದರ ಪ್ರದರ್ಶನವನ್ನು ಸರ್ಕಾರ ನಿಷೇಧಿಸಿದೆ.
ವಿವಿಧ ಮುಸ್ಲಿಂ ಸಂಘಟನೆಗಳ ಮನವಿ ಮೇರೆಗೆ ಗೃಹ ಇಲಾಖೆ ಸಿನಿಮಾ ಪ್ರದರ್ಶನಕ್ಕೆ ನಿಷೇಧ ಹೇರಿ ಆದೇಶ ಹೊರಡಿಸಿದೆ. ಹಿರಿಯ ನಟ ಅಣ್ಣು ಕಪೂರ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಚಿತ್ರ ಇಂದು (ಜೂನ್ 7, ಶುಕ್ರವಾರ) ಬಿಡುಗಡೆಯಾಗಲಿದೆ.
ವಿವಿಧ ಜಿಲ್ಲೆಗಳು ಮತ್ತು ತಾಲೂಕುಗಳ ಮುಸ್ಲಿಂ ಗುಂಪುಗಳು ಸಿನಿಮಾ ಪ್ರದರ್ಶನ ನಿಷೇಧಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು. ಸಿನಿಮಾದ ನಿರ್ಮಾಪಕರು ಮುಸ್ಲಿಂ ಸಮುದಾಯದವನ್ನು ಅವಮಾನಿಸಿದ್ದಾರೆ. ಕುರಾನ್‌ನ ಸೂರಾ ಅಲ್-ಬಕರಾದಲ್ಲಿನ ಶ್ಲೋಕಗಳನ್ನು ತಪ್ಪಾಗಿ ವಿವರಿಸಿದ್ದಾರೆ. ಚಿತ್ರ ಬಿಡುಗಡೆಯಾದರೆ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ, ಕೋಮು ಸೌಹಾರ್ದತೆಗೆ ಧಕ್ಕೆ ಉಂಟಾಗಬಹುದು ಎಂದು ಮನವಿಯಲ್ಲಿ ಕಳವಳ ವ್ಯಕ್ತಪಡಿಸಿತ್ತು.
ಗುರುವಾರ ಗೃಹ ಇಲಾಖೆ ಅಧೀನ ಕಾರ್ಯದರ್ಶಿ ಬಿ ಕೆ ಭುವನೇಂದ್ರ ಕುಮಾರ್ ಅವರು, ವಿದ್ಯುನ್ಮಾನ ಮಾಧ್ಯಮಗಳು, ಸಾಮಾಜಿಕ ಮಾಧ್ಯಮಗಳು, ಸಿನಿಮಾ ಥಿಯೇಟರ್‌ಗಳು, ಖಾಸಗಿ ಟೆಲಿವಿಷನ್ ಚಾನೆಲ್‌ಗಳು ಮತ್ತು ಇತರ ಮಾಧ್ಯಮಗಳಲ್ಲಿ ‘ಹಮಾರೆ ಬಾರಹ್’ ಸಿನಿಮಾ ಮತ್ತು ಅದರ ಟ್ರೇಲರ್ ಬಿಡುಗಡೆಯನ್ನು ಎರಡು ವಾರಗಳವರೆಗೆ ಅಥವಾ ಮುಂದಿನ ಸೂಚನೆ ಬರುವವರೆಗೆ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
Home Department ಕರ್ನಾಟಕ ಸಿನಿಮಾಗಳ ನಿಯಂತ್ರಣ ಕಾಯಿದೆ, 1964 ರ ಸೆಕ್ಷನ್ 15(1) ಮತ್ತು 15(5) ಅಡಿಯಲ್ಲಿ ನಿಷೇಧ ಹೇರಲಾಗಿದೆ.
ಕಾಯ್ದೆಯ ಸೆಕ್ಷನ್ 15(2) ರ ಪ್ರಕಾರ ನಿಷೇಧ ಹೇರುವ ಮುನ್ನ ಚಿತ್ರ ನಿರ್ಮಾಪಕರಿಗೆ ಸರ್ಕಾರ ನೋಟಿಸ್ ಜಾರಿ ಮಾಡಬೇಕಾಗಿದ್ದರೂ, ಈ ಅಗತ್ಯವನ್ನು ಪೂರೈಸಲು ಸಾಕಷ್ಟು ಸಮಯವಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಏಕೆಂದರೆ ಚಿತ್ರದ ನಿರ್ದೇಶಕ ಕಮಲ್ ಚಂದ್ರ ಮತ್ತು ನಿರ್ಮಾಪಕರಾದ ಬೀರೇಂದ್ರ ಭಗತ್, ರವಿ ಎಸ್ ಗುಪ್ತಾ, ಶಿಯೋ ಬಾಲಕ್ ಸಿಂಗ್, ಸಂಜಯ್ ನಾಗ್ಪಾಲ್ ಮತ್ತು ಇತರರು ಕರ್ನಾಟಕದ ಹೊರಗೆ ನೆಲೆಸಿದ್ದಾರೆ.

Dharmasthala Rural Development Project  ಧೂಮಪಾನ & ಮದ್ಯಪಾನ ದುಷ್ಪರಿಣಾಮದ ಬಗ್ಗೆ ಜಾಗೃತಿ

0

Dharmasthala Rural Development Project  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ, ಜ್ಞಾನ ವಿಕಾಸ ಕಾರ್ಯಕ್ರಮದಡಿ ತುಮರಿ ಕಾರ್ಯಕ್ಷೇತ್ರದಲ್ಲಿ ಕರೂರು ಮತ್ತು ತುಮರಿ ಜ್ಞಾನವಿಕಾಸ ಕೇಂದ್ರಗಳ ಆತ್ಮೀಯ ಸದಸ್ಯರುಗಳು ಒಟ್ಟಾಗಿ ಸೇರಿ ಶ್ರುತಿ ಕಲಾ ತಂಡದವರು ಬೀದಿನಾಟಕ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಿದರು, ಈ ಕಾರ್ಯಕ್ರಮದಲ್ಲಿ ಮಕ್ಕಳ ವಿದ್ಯಾಭ್ಯಾಸ ಮತ್ತು ನಿರ್ಗತಿಕರಿಗೆ ವಸತಿಯನ್ನು ನೀಡುವುದು, ಮತ್ತು ಮದ್ಯಪಾನ ಮತ್ತು ಧೂಮಪಾನ ವಿರುದ್ಧ ಕಿರುನಾಟಕ ಹಾಗೂ ನೀರನ್ನು ಮಿತವಾಗಿ ಬಳಸುವುದನ್ನು ಅಭಿನಯ ಮಾಡುವುದರ ಮೂಲಕ ಜನರಲ್ಲಿ ಜಾಗೃತಿಯನ್ನು ಮೂಡಿಸುವಲ್ಲಿ ಶ್ರೀ ಕ್ಷೇತ್ರದ Dharmasthala Rural Development Project  ಯಶಸ್ವಿ ಕಾರ್ಯಕ್ರಮ ಆಗುವುದರ ಜೊತೆಗೆ ಗ್ರಾಮಸ್ಥರಲ್ಲಿ ಯೋಜನೆಯ ಲಾಭ ಗಳ ಕುರಿತು ಮನದಟ್ಟು ಮಾಡಲಾಯಿತು… ಇನ್ನು ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಮತ್ತು ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕರದ ಬಂಗಾರಮ್ಮ ಮತ್ತು ವಲಯದ ಮೇಲ್ವಿಚಾರಕರು ಮತ್ತು ಸಾಗರ ತಾಲೂಕಿನ ಸಮನ್ವಯ ಅಧಿಕಾರಿಯಾದ ಗೌರಮ್ಮ ಹಾಗೂ ಸೇವಾಪ್ರತಿನಿಧಿ ಗೋವಿಂದ್ ಇವರುಗಳು ಉತ್ತಮವಾದ ಸಂದೇಶವನ್ನು ಜನರಿಗೆ ನೀಡುವಲ್ಲಿ ಯಶಸ್ವಿಯಾದರು… ಯೋಜನೆಯ ಕಾರ್ಯಕ್ರಮ ಜನತೆಯಲ್ಲಿ ನಂಬಿಕೆಯನ್ನು ಸಾದಾ ಕಾಲ ಗಳಿಸುವಲ್ಲಿ ಮೊದಲನೇ ಸ್ಥಾನದಲ್ಲಿದೆ.

Sahyadri Ranga Taranga ಜೂನ್ 9 ರಂದು” ಡೈರೆಕ್ಟ್ ಆಕ್ಷನ್” ನಾಟಕ ಪ್ರದರ್ಶನ

0

Sahyadri Ranga Taranga ಸಹ್ಯಾದ್ರಿ ರಂಗತರಂಗ, ರೈತ ಸಂಘ ಮತ್ತು ಹಸಿರು ಸೇನೆ ಇವರ ಸಹಯೋಗದಲ್ಲಿ ರೈತ ಹೋರಾಟಗಾರ ಎಂ ಡಿ ನಂಜುಡಸ್ವಾಮಿ ಅವರ ಜೀವನಾಧಾರಿತ ನಾಟಕ ಡೈರೆಕ್ಟ್ ಆಕ್ಷನ್ ಜೂನ್ ೯ರಂದು ಕುವೆಂಪು ರಂಗಮಂದಿರದಲ್ಲಿ ಅಭಿನಯಿಸಲ್ಪಡಲಿದೆ.
ಪತ್ರಿಕಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ನಾಟಕದ ನಿರ್ದೇಶಕ ಕಾಂತೇಶ್ ಕದರಮಂಡಲಗಿ, ನಾಟಕವನ್ನು ಪ್ರೊ. ನಟರಾಜ ಹುಳಿಯಾರ್ ರಚಿಸಿದ್ದು, ತಾನು ನಿರ್ದೇಶಿಸಿದ್ದೇನೆ. ರಾಘವೇಂಧ್ರ ಪ್ರಭು ಅವರ ಸಂಗೀತವಿದೆ. ಮಂಜುನಾಥ ಕೂದುವಳ್ಳಿ ಬೆಳಕಿನ ನಿರ್ದೇಶನ ಮಾಡಿದ್ದಾರೆ. ನಂಜುಂಡಸ್ವಾಮಿಯವರ ಹೋರಾಟ, ರೈತ ಸಂಘವನ್ನು ರಾಜ್ಯದ ಮೂಲೆಮೂಲೆಯವರೆಗೆ ತಿರುಗಿ ಕಟ್ಟಿದ್ದು, ಡಬ್ಲ್ಯುಟಿಓ, ವಿರುದ್ಧ ಹೋರಾಟ, ರೈತರ ಬದುಕನ್ನು ಹಸನುಗೊಳಿಸಲು ಮಾಡಿದ ಯತ್ನ, ಕಿವುಡು ವ್ಯವಸ್ಥೆಯ ವಿರುದ್ಧ್ದ ಸಿಡಿದೆದ್ದಿದ್ದನ್ನು ನಾಟಕದಲ್ಲಿ ತೋರಿಲಾಗಿದೆ ಎಂದರು.
ಡೈರೆಕ್ಟ ಆಕ್ಷನ್ ಎನ್ನುವ ಪದ ಬಳಕೆ ನೇರ ಕ್ರಮ ಎನ್ನುವ ಅರ್ಥಕ್ಕೆ ಸಂಬಂಧಿಸಿದ್ದಾಗಿದೆ. ಈ ಪದವನ್ನು ನಂಜುಂಡಸ್ವಾಮಿಯವರು ಜಡ್ಡುಗಟ್ಟಿದ ಸರಕಾರಿ ವ್ಯವಸ್ಥೆಯ ವಿರುದ್ಧ ಬಳಸಿದರು.. ಶೇ. ೭೫ರಷ್ಟು ರೈತರು ಈ ನಾಡಿನಲ್ಲಿದ್ದರೂ ಸರಕಾರಗಳು ಅವರ ನೋವುಗಳಿಗೆ ಸ್ಪಂದಿಸದೆ ಉದ್ಯಮಿಗಳನ್ನು ಓಲೈಸುವ ಹಿನ್ನೆಲೆಯಲ್ಲಿ ಬಳಸುತ್ತಿದ್ದರು ಎಂದರು.
Sahyadri Ranga Taranga ಅಂದು ಸಂಜೆ ೬ ಗಂಟೆಗೆ ನಾಟಕ ಆರಂಭವಾಗಲಿದೆ. ಇದರಲ್ಲಿ ನಂಜುಂಡಸ್ವಾಮಿಯ ಪಾತ್ರವನ್ನು ನಿವೃತ್ತ ಪ್ರಾಚಾರ್ಯ ನಾಗಭೂಷಣ ನಿರ್ವಹಿಸುವರು. ಎಚ್ ಎಸ್ ರುದ್ರಪ್ಪ ಪಾತ್ರವನ್ನು ದಿನೇಶ್ ಬಾಯಾರ್, ಶಾಮಣ್ಣನ ಪಾತ್ರವನ್ನು ಆರ್. ನಿಖಿಲ್, ಸುಂದರೇಶ್ ಪಾತ್ರವನ್ನು ವೇದಮೂರ್ತಿ ಮತ್ತು ಗಂಗಾಧರ ಪಾತ್ರವನ್ನು ಗಂಗಾಧರ್ ಅವರೇ ನಿರ್ವಹಿಸುವರು. ನಾಟಕಕ್ಕೆ ೫೦ ರೂ. ಗೌರವ ಪ್ರವೇಶವಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸಹಕರಿಸಬೇಕೆಂದು ಕೋರಿದರು.
ಪತ್ರಿಕಾಗೋಷ್ಟಿಯಲ್ಲಿ ನಾಗಭೂಷಣ, ಕೆ ಟಿ ಗಂಗಾಧರ್, ತಿಪ್ಪಣ್ಣ, ಚಂದ್ರೇಗೌಡ, ಕೆ ಜಿ ವೆಂಕಟೇಶ್ ಮೊದಲಾದವರಿದ್ದರು.

S.L. Bhoje Gowda ಎಸ್.ಎಲ್.ಭೋಜೇ ಗೌಡ ಭಾರೀ ಅಂತರದ ಗೆಲುವು

0

S.L. Bhoje Gowda ಮೊದಲ ಪ್ರಾಶಸ್ತ್ಯ ಮತದಲ್ಲೇ ಗೆಲುವು ಸಾಧಿಸಿದ ಎಸ್.ಎಲ್.ಭೋಜೇಗೌಡ.
ಮತ ಎಣಿಕೆ ಪ್ರಕ್ರಿಯೆ ಸಂಪೂರ್ಣ ಮುಕ್ತಾಯ.
5267 ಮತಗಳ ಭಾರಿ ಅಂತರದಿಂದ ಗೆಲುವು ಸಾಧಿಸಿದ ಭೋಜೇಗೌಡ.
ಒಟ್ಟು ಚಲಾವಣೆ ಆಗಿದ್ದ ಮತ 19479.

S.L. Bhoje Gowda ಕುಲಗೆಟ್ಟ ಮತಗಳ ಸಂಖ್ಯೆ 821.
18658 ಸಿಂಧು ಮತಗಳು.
9,330 ಖೋಟಾ ನಿಗಧಿಯಾಗಿತ್ತು.
9,829 ಮತಗಳ ಮೊದಲ ಪ್ರಾಶಸ್ತ್ಯ ಮತಗಳಲ್ಲೇ ಗೆಲುವು ಸಾಧಿಸಿದ ಭೋಜೇಗೌಡ.
ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ. ಮಂಜುನಾಥ್ ಗೆ 4562 ಮತಗಳು‌

Shivamogga Police ಹೋಟೆಲ್ ನಲ್ಲಿ ಗ್ರಾಹಕರು ಮರೆತು ಬಿಟ್ಟ ಹಣದ ಬ್ಯಾಗ್ ಲಪಟಾಯಿಸಿ ಓಡಿದ ಸರ್ವರ್,‌ಪೊಲೀಸರ ವಶ

0

Shivamogga Police ಶಿವಮೊಗ್ಗ ನಗರದ ಬ್ರೈಟ್ ಹೊಟೆಲಿನಲ್ಲ್ಲಿ ಗ್ರಾಹಕ ಬಿಟ್ಟು ಹೋದ 4 ಲಕ್ಷ ರೂ. ಇದ್ದ ಹಣದ ಚೀಲವನ್ನು ಅಲ್ಲಿನ ಸರ್ವರ್ ಎತ್ತಿಕೊಂಡು ಹೋದ ಘಟನೆ ಸಂಭವಿಸಿದ್ದು, ಆತನನ್ನು ಬಂಧಿಸಿ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಾಗರ ತಾಲೂಕು ಜಂಬಾನಿ ಗ್ರಾಮದ ವಾಸಿ ಲೋಕೇಶ್ ಎನ್ನುವವರು ತನ್ನ ಸ್ನೇಹಿತನೊಂದಿಗೆ ಹೋಟೇಲ್ ನಲ್ಲಿ ಊಟ ಮಾಡುತ್ತಿದ್ದಾಗ 4 ಲಕ್ಷ ರೂ. ಇದ್ದ ಚೀಲವನ್ನು ಟೇಬಲ್ ಮೇಲೆ ಇಟ್ಟಿದ್ದರು.

ಅವಸರದಲ್ಲಿ ಚೀಲವನ್ನು ಅಲ್ಲಿಯೇ ಬಿಟ್ಟು ಹೋಗಿದ್ದರು. ಸ್ವಲ್ಪ ಸಮಯದ ನಂತರ ಕಾರಿನಲ್ಲಿ ಬ್ಯಾಗ್ ಇಲ್ಲದೇ ಇರುವುದು ಕಂಡುಬಂದಿದ್ದು, ವಾಪಾಸ್ ಹೋಟೇಲ್ ಗೆ ಬಂದು ಸಿಸಿ ಕ್ಯಾಮರಾ ಪರಿಶೀಲನೆ ಮಾಡಿದಾಗ ಹೋಟೇಲ್ ನಲ್ಲಿ ಸರ್ವರ್ ಕೆಲಸ ಮಾಡುವ ಹೇಮಂತ್ ಕುಮಾರ್ ಎಂಬುವವನು ಬ್ಯಾಗ್ ನ್ನು ತೆಗೆದು ನೋಡಿ ಸ್ಟೋರ್ ರೂಮಿನಲ್ಲಿ ಇಡುವ ದೃಶ್ಯಾವಳಿ ಕಂಡುಬಂದಿತು.

ಪೋನ್ ಮಾಡಿ ಆತನಿಗೆ ಹಣದ ಬ್ಯಾಗ್ ನ ಬಗ್ಗೆ ವಿಚಾರ ಮಾಡಿದಾಗ ಯಾವುದೇ ಬ್ಯಾಗ್, ನಗದು ಹಣ ನಾನು ತೆಗೆದುಕೊಂಡಿಲ್ಲವೆಂದು ಹೇಳಿ ಪೋನ್ ಕಟ್ ಮಾಡಿದ್ದನು. ಅಲ್ಲದೆ ಬೆಳಿಗ್ಗೆ ಹೊಟೇಲ್ ನ ಕೆಲಸಕ್ಕೂ ಕೂಡ ಬಂದಿಲಯರಲಿಲ್ಲ. ಆದ್ದರಿಂದ ನಗದು ಹಣ ಕಳ್ಳತನ ಮಾಡಿಕೊಂಡು ಹೋದ ಹೇಮಂತ್ ಕುಮಾರ್ ಈತನ ಮೇಲೆ ಪ್ರಕರಣ ದಾಖಲಿಸಿದ್ದರು.

Shivamogga Police ಪೊಲೀಸರ ತಂಡವು ಪ್ರಕರಣದ ಆರೋಪಿತ ಹೇಮಂತ್ ಕುಮಾರ್ ಅಲಿಯಾಸ್ ಹೇಮಂತ್ (40) ಈತ ವಾಸವಿರುವ ಅಶೋಕನಗರ ದ ಮನೆಗೆ ತೆರಳಿ ದಸ್ತಗಿರಿ ಮಾಡಿ, ಆತನಿಂದ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.

Kumar Bangarappa ಚುನಾವಣೆಯಲ್ಲಿ ದಿ.ಬಂಗಾರಪ್ಪ &ವರನಟ ಡಾ.ರಾಜ್ ಅವರ ಹೆಸರು ದುರುಪಯೋಗ ಮಾಡಿದ್ದಾರೆ. ಕುಮಾರ ಬಂಗಾರಪ್ಪ ‘ಗರಂ ಗರಂ’

0

ಲೋಕಸಭಾ ಚುನಾವಣೆಯಲ್ಲಿ ಇಲ್ಲಿನ ಶಾಸಕರು ಮತ್ತು ಕಾಂಗ್ರೆಸ್ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಮತ್ತು ರಾಜ್‌ಕುಮಾರ್ ಅವರ ಹೆಸರನ್ನು ದುರುಪಯೋಗ ಪಡಿಸಿಕೊಂಡು ಪ್ರಚಾರ ನಡೆಸಿ ಅಪಮಾನ ಮಾಡಿದ್ದಾರೆ ಮಾಜಿ ಶಾಸಕ ಕುಮಾರ ಬಂಗಾರಪ್ಪ ಕಿಡಿಕಾರಿದರು.

ಬಿಜೆಪಿ ಕಾರ್ಯಾಲಯದ ಸಭಾಂಗಣದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ರಾಜಕಾರಣ ಎನ್ನುವುದು ಒಂದ ಜಾತಿ, ವರ್ಗ ಹಾಗೂ ಒಬ್ಬ ವ್ಯಕ್ತಿಗೆ ಸೀಮಿತವಾಗಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನೆಡೆದರೆ ಯಶಸ್ಸು ಸಾಧ್ಯವಾಗುತ್ತದೆ. ಆದರೆ ಇಲ್ಲಿನ ಶಾಸಕರು ಜಾತಿ ರಾಜಕಾರಣ ಮಾಡುವ ಮೂಲಕ ಒಂದು ವರ್ಗದ ಮತಗಳನ್ನು ಸೆಳೆಯಲು ಹೋಗಿ ಮುಗ್ಗರಿಸಿದ್ದಾರೆ ಎಂದು ಹೇಳಿದರು.

ಚುನಾವಣಾ ಕಾಲದಲ್ಲಿ ನಡೆದ ತೀಕ್ಷ್ಣವಾದ ಟೀಕೆಗಳು ಏನೇ ಇರಲಿ. ಅವೆಲ್ಲವೂ ಚುನಾವಣಾ ಕಾಲಕ್ಕೆ ಮಾತ್ರ ಸೀಮಿತವಾಗಿರಲಿ. ಈಗಾಗಲೇ ಜನತೆ ತೀರ್ಪು ನೀಡಿದ್ದಾರೆ. ಟೀಕೆಗಳು ಮುಂದಿನ ರಾಜಕೀಯ ನಡೆಯಲ್ಲಿ ಅವಶ್ಯಕತೆ ಇಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೊರಬ ಕ್ಷೇತ್ರದಿಂದ ಕಾಂಗ್ರೆಸ್‌ನ 37 ಸಾವಿರ ಮತಗಳ ಅಂತರದ ಗೆಲುವಿಗೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಜಯಗಳಿಸಿಕೊಡುವುದರ ಮೂಲಕ ಮತದಾರ ಪ್ರತ್ಯುತ್ತರ ನೀಡಿದ್ದಾರೆ.

Kumar Bangarappa ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿ 18 ಸಾವಿರ ಅಧಿಕ ಮತಗಳು ಸೊರಬದಿಂದ ಚಲಾವಣೆಯಾಗಿರುವುದು ದಾಖಲೆಯಾಗಿದೆ. ಈ ಹಿಂದೆ ಯಾವ ಅಭ್ಯರ್ಥಿ ಕೂಡಾ ಅಷ್ಟೊಂದು ಅಂತರದ ಮತಗಳನ್ನು ಪಡೆದಿಲ್ಲ. ಇದು ಅಭಿವೃದ್ಧಿ ಎಂದರೆ ಏನು ಎನ್ನುವುದನ್ನು ತಿಳಿಯದ ಮತ್ತು ದುರಹಂಕಾರಿಗೆ ನೀಡಿದ ಉತ್ತರವಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಅವರ ಹೆಸರು ಹೇಳದೇ ತರಾಟೆಗೆ ತೆಗೆದುಕೊಂಡರು.

ಸಧ್ಯದಲ್ಲಿಯೇ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸೊರಬ ಮತ್ತು ಆನವಟ್ಟಿಯಲ್ಲಿ ಅಭಿನಂದನಾ ಸಭೆ ಹಮ್ಮಿಕೊಳ್ಳಲಾಗುವುದು ಎಂದರು.

Agumbe ಆಗುಂಬೆ ಬಳಿ ಸಿಡಿಲು ಬಡಿದು ವ್ಯಕ್ತಿಯ ದುರ್ಮರಣ

0

Agumbe ಆಗುಂಬೆ ಬಳಿ ಸಿಡಿಲು ಬಡಿದು ಓರ್ವ ವ್ಯಕ್ತಿ ದುರ್ಮರಣ ಹೊಂದಿದ್ದಾರೆ.

ಮೃತ ನಾಗೇಂದ್ರ ಬಿನ್ ಸೀನ ಪೂಜಾರಿ ಇವರು ಮುತ್ತೊಳ್ಳಿ ವಾಸಿ ಬಿದರಗೋಡು ಗ್ರಾಮದವರು. ಬಾಳೆಹಳ್ಳಿ ಗ್ರಾಮದ ಗುಜುಗೊಳ್ಳಿ ಕೇಶವ ಕಿಣಿ ಬಿನ್ ವಿಠಲ್ ಕಿಣಿ ಇವರ ಸರ್ವೆ ನಂಬರ್ 186/2 ಅಡಿಕೆ ತೋಟದಲ್ಲಿ ತೋಟದ ಕಳೆ ತೆಗೆಯುವ ಸಂದರ್ಭದಲ್ಲಿ ಸಿಡಿಲು ಬಡಿದು ಮೃತಾರಾಗಿದ್ದಾರೆ.

Agumbe ಕಂದಾಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಮಹಜರು ಮಾಡಿದ್ದಾರೆ.

Karnataka Public Service Commission ಜಿಲ್ಲೆಯಲ್ಲಿ ಇಲಾಖಾ ಪರೀಕ್ಷೆಗಳಿಗೆ ಸರ್ವ ಸಿದ್ಧತೆ- ಬಸವರಾಜ್

0

Karnataka Public Service Commission ಕರ್ನಾಟಕ ಲೋಕಸೇವಾ ಆಯೋಗದಿಂದ 2024 ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆ ಕುರಿತು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪೂರ್ವ ಸಿದ್ಧತಾ ಸಭೆಯಲ್ಲಿ ಡಯಟ್ ಪ್ರಾಂಶುಪಾಲರಾದ ಬಸವರಾಜ್ ಅವರು ಮಾಹಿತಿ ನೀಡಿದರು.

ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ ಹೊಸದಾಗಿ ನೇಮಕಗೊಂಡಿರುವ ಸಿಬ್ಬಂದಿಗಳಿಗೆ ನಡೆಸಲಾಗುವ ಇಲಾಖಾ ಪರೀಕ್ಷೆಗಳು ಇದಾಗಿದ್ದು, ವೇಳಾಪಟ್ಟಿ ಸಮಯ ಪ್ರತಿ ಪತ್ರಿಕೆಗಳಿಗೂ ಬೇರೆ ಬೇರೆ ಇರುತ್ತದೆ.

ದಿನಾಂಕ 07-06-2024 ರಿಂದ 09-06-2024 ಮತ್ತು 11-06-2024 ರಿಂದ 23-06-2024 ರವರೆಗೆ (10-06-2024 ಮತ್ತು 15-06-2024 ರಿಂದ 18-06-2024 ದಿನಗಳನ್ನು ಹೊರತುಪಡಿಸಿ) ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲೆಯ ಒಟ್ಟು 8 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಪರೀಕ್ಷೆ ಮೇಲ್ವಿಚಾರಣೆಗಾಗಿ 2 ಜನ ವೀಕ್ಷಕರನ್ನು, ಮಾರ್ಗಾಧಿಕಾರಿಗಳು, ಸ್ಥಳೀಯ ನಿರೀಕ್ಷಣಾದಿಕಾರಿ ಸೇರಿದಂತೆ ಅಗತ್ಯ ಸಿಬ್ಬಂದಿಗಳನ್ನು ನೇಮಿಸಲಾಗಿದೆ.

ವಿಶೇಷ ಚೇತನರಿಗೆ, ದೃಷ್ಟಿಮಾಂದ್ಯ ಅಭ್ಯರ್ಥಿಗಳಿಗೆ ಕೆಪಿಎಸ್‍ಸಿ ನಿಯಮಾನುಸಾರ ಪರೀಕ್ಷೆ ನಡೆಸಲಾಗುವುದು. ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 144 ಸೆಕ್ಷನ್ ಜಾರಿ ಮಾಡಿ ಆದೇಶಿಸಲಾಗಿದೆ.

ಪರೀಕ್ಷಾ ಕೊಠಡಿಯಲ್ಲಿ ಮೊಬೈಲ್ ಫೋನ್, ಸ್ಮಾರ್ಟ್ ವಾಚ್ ಹಾಗೂ ಇತರೆ ಡಿಜಿಟಲ್ ಸಾಧನಗಳಿಗೆ ಅವಕಾಶವಿರುವುದಿಲ್ಲ. ಪೋಲಿಸ್ ಸಿಬ್ಬಂದಿಗಳು, ಆರೋಗ್ಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಸೂಕ್ತ ಆಸನ ವ್ಯವಸ್ಥೆ ಸೇರಿದಂತೆ ಮೂಲಭೂತ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಪರೀಕ್ಷೆಗಳು ಶಾಂತಯುತವಾಗಿ ನಡೆಯಲು ಅನುವಾಗುವಂತೆ ಪರೀಕ್ಷೆಗೆ ನಿಯೋಜಿತ ಅಧಿಕಾರಿಳು ಮತ್ತು ಹಾಗೂ ಸಿಬ್ಬಂದಿಗಳು ಎಚ್ವರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

Karnataka Public Service Commission ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಹಾಯಕರಾದ ಶಿವಕುಮಾರ್, ಡಿಹೆಚ್‍ಓ ಡಾ.ನಟರಾಜ್ ಹಾಗೂ ಪರೀಕ್ಷೆಗೆ ನಿಯೋಜಿಸಲಾದ ಅಧಿಕಾರಿಗಳು ಉಪಸ್ಥಿತರಿದ್ದರು.