Sharada Poorya nayak ಪಕ್ಷದ ನಾಯಕರು ಕೊಟ್ಟ ಚುನಾವಣೆಯ ಜವಾಬ್ದಾರಿಯನ್ನು ಸಮರ್ಪಕವಾಗಿ ಈಡೇರಿಸುವುದರ ಮೂಲಕ ಬಿಜೆಪಿ ಜೊತೆಗಿನ ಮೈತ್ರಿ ಯಶಸ್ವಿಯಾಗುವಂತೆ, ಶಿವಮೊಗ್ಗ ಕ್ಷೇತ್ರದಲ್ಲಿ ಜಯಶಾಲಿಯಾಗುವಂತೆ ಮಾಡಿದ್ದೇವೆ ಎಂದು ಶಾಸಕಿ ಶಾರದಾ ಪೂರ್ಯನಾಯ್ಕ ಹೇಳಿದರು.
ಸುದ್ದಿಗೋ಼ಷ್ಠಿಯಲ್ಲಿ ಮಾತನಾಡಿದ ಅವರು, ಶ್ರಮವಹಿಸಿ ಕಾರ್ಯಕರ್ತರು ಬಿಜೆಪಿ ಪರ ಕೆಲಸ ಮಾಡಿದ್ದಾರೆ. ರಾಘವೇಂದ್ರ ಗೆಲುವು ಖುಷಿ ತಂದುಕೊಟ್ಟಿದೆ. ರಾಜ್ಯದಲ್ಲೂ ಸಹ ಬಿಜೆಪಿ ಜೊತೆಗೆನ ಮೈತ್ರಿಯಿಂದ ಎರಡೂ ಪಕ್ಷಕ್ಕೆ ಅನುಕೂಲವಾಗಿದೆ ಎಂದರು.
ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಕೆ. ಬಿ. ಪ್ರಸನ್ನಕುಮಾರ್ ಮಾತನಾಡಿ, ಬಿಜೆಪಿ ಅಭ್ಯರ್ಥಿಯ ಉತ್ತಮ ಕೆಲಸದಿಂದ ಮತ್ತು ಜೆಡಿಎಸ್‌ನ ಸಹಕಾರದಿಂದ ಶಿವಮೊಗ್ಗ ಕ್ಷೇತ್ರದಲ್ಲಿ ಗೆಲುವು ಸುಲಭವಾಗಿದೆ. ರಾಜ್ಯ ಸರಕಾರ ಗ್ಯಾರಂಟಿ ಮೂಲಕ ಚುನಾವಣೆ ನಡೆಸಿದರೂ ಯಶಸ್ವಿಯಾಗಲಿಲ್ಲ. ಕಡಿಮೆ ಸ್ಥಾನ ಗಳಿಸಿದ ಹಿನ್ನೆಲೆಯಲ್ಲಿ ಗ್ಯಾರಂಟಿ ನಿಲ್ಲಿಸಬಾರದು. ಅಭಿವೃದ್ಧಿ ಕೆಲಸಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು. ಜಿಪಂ ಮತ್ತು ತಾಪಂ, ಪಾಲಿಕೆಯ ಚುನಾವಣೆಗೆೆ ಶೀಘ್ರ ಅಧಿಸೂಚನೆ ಹೊರಡಿಸಬೇಕೆಂದು ಆಗ್ರಹಿಸಿದರು.
Sharada Poorya nayak ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕಡಿದಾಳ ಗೋಪಾಲ್ ಮಾತನಾಡಿ, ರಾಘವೇಂದ್ರ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅದರೊಟ್ಟಿಗೆ ಜೆಡಿಎಸ್‌ನವರೊಂದಿಗೆ ಮೈತ್ರಿಯು ಅವರ ಗೆಲುವಿನಲ್ಲಿ ಫಲ ಕೊಟ್ಟಿದೆ. ಗೆದ್ದ ನಂತರ ಜೆಡಿಎಸ್ ಕಚೇರಿಗೆ ಬಂದು ಪಕ್ಷದವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ನಾವೂ ಸಹ ಅವರನ್ನು ಅಭಿನಂದಿಸಿದ್ದೇವೆ. ಜೆಡಿಎಸ್ ಪ್ರಾಬಲ್ಯವಿರುವ ಜಿಲ್ಲೆಗಳಲ್ಲಿ ವಿಶೇಷವಾಗಿ ಮೈಸೂರು ಭಾಗಗಳಲ್ಲಿ ಬಿಜೆಪಿಗೆ ಮೈತ್ರಿ ಅನುಕೂಲ ಕಲ್ಪಿಸಿಕೊಟ್ಟಿದೆ. ಇದರಿಂದ ಕಾಂಗ್ರೆಸ್‌ಗೆ ಪ್ರಬಲ ಪೆಟ್ಟು ಬಿದ್ದಿದೆ. ಮೈತ್ರಿಯಿಂದ ನಷ್ಟವೇನೂ ಆಗಿಲ್ಲ. ಹಾಸನದ ಸೋಲಿಗೆ ವಿಷಾದವಿದೆ ಎಂದರಾದರೂ ಸೋಲಿಗೆ ನಿರ್ದಿಷ್ಟ ಕಾರಣವನ್ನು ಹೇಳಲು ಅವರು ನಿರಾಕರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ದೀಪಕ್ ಸಿಂಗ್, ನರಸಿಂಹ ಗಂಧದಮನೆ, ವಿನಯ್, ಗೀತಾ ಪವಾರ್ ಮೊದಲಾದವರಿದ್ದರು.
Sharada Pooryanayak ಶಿವಮೊಗ್ಗ ಗ್ರಾಮಾಂತರದಲ್ಲೂ ರಾಘವೇಂದ್ರಗೆ ಲೀಡ್: ಜಿಲ್ಲೆಯಲ್ಲಿ ಮೈತ್ರಿ ಯಶಸ್ವಿ- ಶಾಸಕಿ ಶಾರದಾ ಪೂರ್ಯಾನಾಯಕ್
Date: