Saturday, April 26, 2025
Saturday, April 26, 2025

Kannada Sahitya Parishat ಯುವಜನತೆಗೆ ಭಾಷಾಭಿಮಾನ ಮೂಡಿಸುವುದು ಅತ್ಯಗತ್ಯ – ಸೋಮಶೇಖರ್

Date:

Kannada Sahitya Parishat ಪುರಾತನ ಇತಿಹಾಸ ಹೊಂದಿರುವ ಕನ್ನಡ ಭಾಷೆಯ ಕಂಪನ್ನು ಪ್ರಸ್ತುತ ಯುವಜನತೆಯ ಮನಸ್ಸಿನಲ್ಲಿ ಹೆಚ್ಚು ನೆರೆಯೂರುವಂತೆ ಮಾಡುವುದು ಅತ್ಯಗತ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್ ಹೇಳಿದರು.

ಚಿಕ್ಕಮಗಳೂರು, ತಾಲ್ಲೂಕಿನ ಮುಗುಳುವಳ್ಳಿ ಗ್ರಾಮದ ವ್ಯವಸಾಯೋತ್ಪನ್ನ ಭವನದಲ್ಲಿ ಕಸಾಪ ತಾಲ್ಲೂಕು ಹಾಗೂ ಹೋಬಳಿ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ‘ಹಸಿರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಎಂಬ ನುಡಿನಿತ್ಯೋತ್ಸವ ಸಂಭ್ರಮದ ಐದನೇ ದಿನದ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಮೊದಲ ಶಾಸನ ಖ್ಯಾತಿ ಪಡೆದಿರುವ ಹಲ್ಮ್ಮಿಡಿ ಶಾಸನದಲ್ಲಿ ಮುಗುಳುವಳ್ಳಿ ಗ್ರಾಮದ ಇತಿಹಾಸವಿರು ವುದು ಕೆಲವರಿಗೆ ತಿಳಿಯದ ವಿಚಾರವಾಗಿದೆ. ಕನ್ನಡ ನಾಡು, ನುಡಿ, ಸಂಸ್ಕೃತಿ ಹಾಗೂ ಕಲೆ ಅಮೂಲ್ಯವಾಗಿದ್ದು ಪ್ರತಿಯೊಬ್ಬರಿಗೂ ತಿಳುವಳಿಕೆ ಮೂಡಿಸುವಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಸಲಹೆ ಮಾಡಿದರು.

ನಾಡಿನ ಭಾಷೆಯು ಪ್ರತಿಯೊಬ್ಬರ ಉಸಿರು ಹಾಗೂ ಜೀವನವಿದ್ದಂತೆ. ಅನೇಕ ಕವಿಗಳು ಕನ್ನಡ ಸಾಹಿತ್ಯದ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿರುವ ಪರಿಣಾಮ ಬರ‍್ಯಾವ ರಾಜ್ಯಕ್ಕೆ ಸಿಗದ ಎಂಟು ಜ್ಞಾನಪೀಠ ಪ್ರಶಸ್ತಿ ಮೊದಲ ಬಾರಿ ಕರ್ನಾಟಕ್ಕೆ ಲಭಿಸಿರುವುದು ಕನ್ನಡಿಗರು ಹೆಮ್ಮೆಪಡುವಂತದದ್ದು ಎಂದು ಹೇಳಿದರು.

ಕನ್ನಡ ಭಾಷಾ ಶಿಕ್ಷಕಿ ಎ.ಪಿ.ಚೈತ್ರ ಉಪನ್ಯಾಸ ನೀಡಿ ಮಾತನಾಡಿ ದೇಶದಲ್ಲಿ ನೂರಾರು ಭಾಷೆಗಳಿದ್ದು ಅವುಗಳದೇಯಾದ ವಿಶೇಷತೆ ಹೊಂದಿದೆ. ರಾಜ್ಯದ ಕನ್ನಡ ಭಾಷೆಯ ಇತರೆ ಭಾಷೆಗಳಿಗಿಂತ ಸಮೃದ್ದವಾಗಿ ಹರಡಿ ಕೊಂಡಿರುವ ಪರಿಣಾಮ ನಟರು, ಗಾಯಕರು ಹಾಗೂ ಸಾಮಾನ್ಯ ವ್ಯಕ್ತಿ ಸೇರಿದಂತೆ ಹಲವಾರು ಮಂದಿ ರಾಜ್ಯ ದಿಂದ ಬದುಕು ರೂಪಿಸಿಕೊಂಡಿದ್ದಾರೆ ಎಂದರು.

ಸ್ವಾತಂತ್ರ್ಯ ಪೂರ್ವದ ಮೊದಲಿನಿಂದಲೂ ಕನ್ನಡ ಏಕಿಕರಣಕ್ಕಾಗಿ ಹಲವಾರು ಹೋರಾಟಗಳನ್ನು ಮಾಡಲಾ ಗುತ್ತಿದೆ. ಅಂದಿನ ಸಮಯದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1915ರಲ್ಲಿ ಕಸಾಪ ಸ್ಥಾಪಿಸಿ ಭಾಷೆಯ ಬೆಳವಣಿಗೆಗೆ ಒತ್ತು ನೀಡಿದ್ದು ಇಂದಿನವರೆಗೂ ಕಸಾಪ ಸಾಹಿತ್ಯಾತ್ಮಕ ಚಟುವಟಿಕೆಗಳನ್ನು ರೂಪಿಸಿ ಭಾಷಾಭಿಮಾನ ವನ್ನು ಎಲ್ಲೆಡೆ ಪಸರಿಸುತ್ತಿದೆ ಎಂದರು.

ಮೂಲತ ಕನ್ನಡ ಭಾಷೆಗೆ 2008ರಲ್ಲಿ ಶಾಸ್ತ್ರೀಯ ಸ್ಥಾನಮಾನ ದೊರೆಯಿತು. ಇದಕ್ಕೂ ಮೊದಲು 1956ರಲ್ಲಿ ಮೈಸೂರು ರಾಜ್ಯ ಸ್ಥಾಪನೆಗೊಂಡು ಕನ್ನಡ ಭಾಷೆ ಉದಯವಾಯಿತು. ಬಳಿಕ ಕಾಲಕ್ರಮೇಣ ಅಕ್ಕಪಕ್ಕದ ಕನ್ನಡಿಗರ ರಾಜ್ಯಗಳನ್ನು ಒಟ್ಟುಗೂಡಿಸಿ 1973ರಲ್ಲಿ ಮೈಸೂರು ರಾಜ್ಯವನ್ನು ಕರ್ನಾಟಕವೆಂದು ಪರಿವರ್ತಿಸಿದ ಪರಿಣಾಮ 50ರ ಸುವರ್ಣ ಮಹೋತ್ಸವ ಹಾಗೂ 68ರ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ ಎಂದರು.

ಕಸಾಪ ತಾಲ್ಲೂಕು ಸಂಚಾಲಕ ಎಂ.ಯು.ಹಾಲಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ಕನ್ನಡ ಹಬ್ಬವಾದ ರಾಜ್ಯೋ ತ್ಸವನ್ನು ಕೇವಲ ನವೆಂಬರ್ ತಿಂಗಳಿಗೆ ಸೀಮಿತಗೊಳಿಸದೇ ವರ್ಷಪೂರ್ತಿ ಆಚರಿಸುವಂತಾಗಬೇಕು. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಕನ್ನಡ ಬಳಕೆಗೆ ಹೆಚ್ಚು ಒತ್ತು ನೀಡಿದರೆ ಭಾಷೆ ಉಳಿಸಿ ಎನ್ನುವ ಬದಲು ಬೆಳೆಸುವಂತಾಗಲೀ ಎಂದು ಕರೆ ನೀಡಿದರು.

Kannada Sahitya Parishat ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಸಾಪ ಅಂಬಳೆ ಹೋಬಳಿ ಘಟಕದ ಅಧ್ಯಕ್ಷ ಎಂ.ಆರ್. ಚಂದ್ರಶೇಖರ್ ಮುಗುಳುವಳ್ಳಿ ಶಾಲೆಯಲ್ಲಿ ಕನ್ನಡ ವಿಷಯದಲ್ಲಿ ಹೆಚ್ಚು ಅಧ್ಯಯನ ನಡೆಸಿ ಚೈತ್ರ ಸೇರಿದಂತೆ ಅನೇಕ ಮಂದಿ ಉನ್ನತ ಮಟ್ಟದಲ್ಲಿ ಯಶಸ್ಸು ಗಳಿಸಿದ್ದಾರೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಆಂಗ್ಲಭಾಷೆಯ ಜೊತೆಗೆ ಹೆಚ್ಚು ಆದ್ಯತೆಯನ್ನು ಕನ್ನಡಕ್ಕೆ ನೀಡಿದರೆ ಮುಂದಿನ ಬದುಕು ಹಸನಾಗುವುದರಲ್ಲೇ ಸಂಶಯವಿಲ್ಲ ಎಂದರು.
ಈ ಸಂದರ್ಭದಲ್ಲ ಕಸಾಪ ಪ್ರಧಾನ ಕಾರ್ಯದರ್ಶಿ ಕಾಂರಾಜ್, ಹಾಲು ಒಕ್ಕೂಟದ ಸಂಘದ ನಿರ್ದೇಶಕ ಎಂ.ಎಸ್.ದಿನೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಪರಮೇಶ್ವರಪ್ಪ, ಗ್ರಾ.ಪಂ. ಮಾಜಿ ಅಧ್ಯಕ್ಷ ರಘು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

National Defense University ಪಠ್ಯಕ್ರಮದ ರಚನೆ & ಕೌಶಲ್ಯಾಭಿವೃದ್ಧಿಗೆಒತ್ತು-ರಾಷ್ಟ್ರೀಯ ರಕ್ಷಾ ವಿವಿಯಲ್ಲಿ ವೃತ್ತಿ ಸಮಾಲೋಚನೆ ಯಶಸ್ವಿ

National Defense University ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ (RRU), ಶಿವಮೊಗ್ಗ ಕ್ಯಾಂಪಸ್ನಲ್ಲಿ,...

Digital library ಹೊಸ ವಿಷಯ ಕಲಿಕೆ ಸಂಗಡ ಮಕ್ಕಳು ದೈಹಿಕ & ಮಾನಸಿಕ ದೃಢತೆ ಸಾಧಿಸಬೇಕು- ವೀರೇಶ್ ಕ್ಯಾತನಕೊಪ್ಪ

Digital library ಮಕ್ಕಳಿಗೆ ಬೇಸಿಗೆ ಶಿಬಿರಗಳು ಅತ್ಯಂತ ಅವಶ್ಯಕ ಎಂದು ಸೂಗುರು...

CM siddharamaih ಪಹಲ್ಗಾಮ್ ದುರ್ಘಟನೆ‌ ಗುಪ್ತಚರ ವ್ಯವಸ್ಥೆಯ ವೈಫಲ್ಯ- ಮುಖ್ಯಮಂತ್ರಿ ಸಿದ್ಧರಾಮಯ್ಯ

CM siddharamaih ಕರ್ನಾಟಕದಲ್ಲಿ ಅವಧಿ ಮೀರಿ ನೆಲೆಸಿರುವ ವಿದೇಶಿಗರ ಬಗ್ಗೆ...