Thursday, June 18, 2026
Thursday, June 18, 2026

Geetha Shivarajkumar ಟ್ರ್ಯಾಕ್ಟರ್ ಗೆ ಟ್ರ್ಯಾಕ್ಟರೇ ಸವಾಲ್.ರಾಘವೇಂದ್ರ ಗೆಲ್ತಾರ? ಗೀತಾ ಶಿವರಾಜ್ ಕುಮಾರ್ ಗೆಲ್ತಾರ?

Date:

Geetha Shivarajkumar ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಗೆಲ್ಲುವ ಅಭ್ಯರ್ಥಿಗಳ ಬಗ್ಗೆ ಟ್ರ್ಯಾಕ್ಟರ್‌ ಪಣಕ್ಕಿಡುವ ಚಾಲೆಂಜ್‌ ಹೆಚ್ಚಾಗುತ್ತಿದೆ.
ನಾಲ್ಕು ದಿನದಹಿಂದೆ ಶಿಕಾರಿಪುರ ತಾಲೂಕಿನ ಕಲ್ಮನೆಯ ರವೀಂದ್ರ ಎಂಬವರು ವಿಡಿಯೋ ಹರಿಬಿಟ್ಟು ಶಿವಮೊಗ್ಗದಲ್ಲಿ ಗೀತಾ ಶಿವರಾಜ್‌ ಕುಮಾರ್‌ ಗೆಲ್ಲುತ್ತಾರೆ ಈ ಮಾತಿಗೆ ಸವಾಲಿದ್ದರೆ ಅವರ ವಿರುದ್ದ ಟ್ರ್ಯಾಕ್ಟರ್‌ ಪಣಕಿಟ್ಟು ಚಾಲೆಂಜ್‌ ಮಾಡಲು ನಾನು ಸಿದ್ಧ ಎಂದಿದ್ದರು.
Geetha Shivarajkumar ಇದರ ಬೆನ್ನಲ್ಲೆ ಟ್ರ್ಯಾಕ್ಟರ್‌ ಚಾಲೆಂಜ್‌ ಬಗ್ಗೆ ಪ್ರತಿಕ್ರಿಯಿಸಿದ್ದ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ, ಸವಾಲನ್ನು ಸ್ವೀಕರಿಸಿ ಹೊಸ ಟ್ರ್ಯಾಕ್ಟರ್‌ನ್ನೇ ಪಣಕ್ಕಿಡೋಣ ಎಂದಿದ್ದರು.
ಈ ಬೆಳವಣಿಗೆ ಬಳಿಕ ಶಿಕಾರಿಪುರದ ಇನ್ನೊಬ್ಬ ರೈತ ಬಿ ವೈ ರಾಘವೇಂದ್ರ ಪರವಾಗಿ ಟ್ರ್ಯಾಕ್ಟರ್‌ ಚಾಲೆಂಜ್‌ ಹಾಕಿದ್ದಾರೆ.
ಜಮೀನ್ದಾರ್‌ ಮಂಜುನಾಥ್‌ ಎಂಬವರು, ಶಿವಮೊಗ್ಗದಲ್ಲಿ ರಾಘವೇಂದ್ರ ಗೆಲ್ಲುತ್ತಾರೆ. ಇದಕ್ಕಾಗಿ ಶಿಕಾರಿಪುರದ ಹುಚ್ಚರಾಯ ಸ್ವಾಮಿ ದೇವಸ್ಥಾನದ ಮುಂದೆ ಟ್ರ್ಯಾಕ್ಟರ್‌ ಕೀ ಕೊಟ್ಟು ಸವಾಲು ಹಾಕಲು ಸಿದ್ಧವಿರುವುದಾಗಿ ಘೋಷಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...