Friday, April 25, 2025
Friday, April 25, 2025

H.D. Revanna 40 ವರ್ಷದ ಕೆರಿಯರ್ ನಲ್ಲಿ ಇದೇ ಮೊದಲ ಕೇಸ್- ಮಾಜಿ ಸಚಿವ ರೇವಣ್ಣ ಫಸ್ಟ್ ಪ್ರತಿಕ್ರಿಯೆ

Date:

H.D. Revanna ಮಹಿಳೆ ಕಿಡ್ನ್ಯಾಪ್ ಆರೋಪ ಪ್ರಕರಣದಲ್ಲಿ ಜೈಲಿನಿಂದ ಹೊರಬಂದ ಬಳಿಕ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಮಾಧ್ಯಮಗಳಿಗೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. 40 ವರ್ಷದ ರಾಜಕೀಯದಲ್ಲಿ ನನ್ನ ಮೇಲೆ ಇದೇ ಫಸ್ಟ್ ಕೇಸ್ ಆಗಿರುವುದು ಎಂದು ಹೇಳಿದ್ದಾರೆ.
ಜೈಲಿನಿಂದ ಹೊರಬಂದ ಬಳಿಕ ಹೆಚ್.ಡಿ.ರೇವಣ್ಣ ಟೆಂಪಲ್ ರನ್ನ ಮಾಡಿದರು. ಮೈಸೂರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ರೇವಣ್ಣಗೆ ಮಾಜಿ ಸಚಿವ ಸಾ.ರಾ.ಮಹೇಶ್ ಸಾಥ್ ನೀಡಿದರು. ಈ ವೇಳೆ ನೆಚ್ಚಿನ ನಾಯಕನನ್ನು ಭೇಟಿ ಮಾಡಲು ಜೆಡಿಎಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಸಾ.ರಾ.ಮಹೇಶ್ ಜೊತೆ ಚಾಮುಂಡಿ ತಾಯಿ ದರ್ಶನ ಪಡೆದ ರೇವಣ್ಣ ವಿಶೇಷ ಪೂಜೆ ಸಲ್ಲಿಸಿದರು.
H.D. Revanna ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಹೆಚ್.ಡಿ.ದೇವೇಗೌಡರ ಕುಟುಂಬಕ್ಕೆ ಅರ್ಚನೆ ಮಾಡಿಸಿದರು. ಹೆಚ್.ಡಿ.ದೇವೇಗೌಡ, ಚನ್ನಮ್ಮ, ಹೆಚ್.ಡಿ.ರೇವಣ್ಣ, ಭವಾನಿ ರೇವಣ್ಣ, ಸೂರಜ್ ರೇವಣ್ಣ, ಪ್ರಜ್ವಲ್ ರೇವಣ್ಣ, ಹೆಚ್.ಡಿ.ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಹೆಸರು ಹೇಳಿ ಅರ್ಚನೆ ಮಾಡಿಸಿದರು. ಗರ್ಭಗುಡಿಯಲ್ಲಿ ನಿಂತು ಕುಟುಂಬ ನೆನಪಿಸಿಕೊಂಡರು. ಸುಮಾರು 20 ನಿಮಿಷ ಚಾಮುಂಡಿಗೆ ಪಾರ್ಥನೆ ಮಾಡಿದರು. ನಂತರ ಬಲಗೈಗೆ ರಕ್ಷಾ ಸೂತ್ರ ಕಟ್ಟಿಸಿಕೊಂಡು ದೇಗುಲದಿಂದ ನಿರ್ಗಮಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನ್ಯಾಯಾಂಗದ ಬಗ್ಗೆ ನನಗೆ ಗೌರವ ಇದೆ. ನಾನು ತಾಯಿ ಚಾಮುಂಡೇಶ್ವರಿ ದರ್ಶನ ಪಡೆದಿದ್ದೇನೆ. ದೇವರು ಹಾಗೂ ರಾಜ್ಯದ ಜನರ ಮೇಲೆ ನಂಬಿಕೆ ಇದೆ. 40 ವರ್ಷದ ರಾಜಕೀಯದಲ್ಲಿ ನನ್ನ ಮೇಲೆ ಇದೇ ಫಸ್ಟ್ ಕೇಸ್ ಆಗಿರುವುದು ಎಂದರು.
ನ್ಯಾಯಾಂಗದ ಮೇಲೆ ನಂಬಿಕೆ ಇದೆ. ತಾಯಿ
ಏನು ಕರುಣೆ ತೋರಿಸುತ್ತಾಳೆ ನೋಡೋಣ. ಉದ್ದೇಶಪೂರ್ವಕವಾಗಿ ಮಾಡಿದ್ದರೆ ಅದನ್ನು ತಾಯಿಗೆ ಬಿಟ್ಟಿದ್ದೇನೆ. ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ನಾನು ಏನು ಮಾತನಾಡಲ್ಲ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Acharya Tulsi National College of Commerce ರಕ್ತದಾನಿಗಳು ಸಮಾಜದ ನೈಜ ಹೀರೋಗಳು- ಡಾ.ಪಿ.ನಾರಾಯಣ್

Acharya Tulsi National College of Commerce ಎಲ್ಲಾ ದಾನಗಳಿಗಿಂತ ರಕ್ತದಾನ...