Monday, April 13, 2026
Monday, April 13, 2026
Home Blog Page 706

Shivaganga Yoga Centre ಪರಿಸರ ನಾಶದಿಂದ ಮನುಕುಲವೇ ನಾಶ. ಪ್ಲಾಸ್ಡಿಕ್ ಬಳಕೆ ಕಡಿಮೆ ಮಾಡಿ-ಜಿ.ಎಸ್.ಓಂಕಾರ್

0

Shivaganga Yoga Centre ಪರಿಸರ ಸಂರಕ್ಷಣೆ ನಮ್ಮ ನಿಮ್ಮೆಲ್ಲರ ಹೊಣೆಯಾಗಿದ್ದು, ಪರಿಸರದ ರಕ್ಷಣೆಗಾಗಿ ನಾವೆಲ್ಲರೂ ಕೆಲಸ ಮಾಡಬೇಕಿದೆ ಎಂದು ಶಿವಗಂಗಾ ಯೋಗ ಕೇಂದ್ರದ ರಾಘವ ಶಾಖೆಯ ಯೋಗಶಿಕ್ಷಕ ಜಿ.ಎಸ್.ಓಂಕಾರ್ ಹೇಳಿದರು.

ಶಿವಮೊಗ್ಗ ನಗರದ ಶಿವಗಂಗಾ ಯೋಗಕೇಂದ್ರದ ರಾಘವ ಶಾಖೆಯಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಗಿಡಕ್ಕೆ ನೀರೇರೆಯುವದರ ಮುಖಾಂತರ ಚಾಲನೆ ನೀಡಿ ಮಾತನಾಡಿ, ಪರಿಸರ ವಿನಾಶದಿಂದ ಮನುಕುಲವೇ ನಾಶವಾಗುತ್ತದೆ. ಪರಿಸರವನ್ನು ನಾವು ಆದಷ್ಟು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು ಎಂದು ತಿಳಿಸಿದರು.

ಇಂದು ನೀರು ಸಾಕಷ್ಟು ಕಡೆ ಕಲುಷಿತವಾಗುತ್ತಿದೆ. ನೀರಿನ ದುರ್ಬಳಕೆ ಸಲ್ಲದು. ಪರಿಸರ ದಿನಾಚರಣೆ ಆ ದಿನಕ್ಕೆ ಸೀಮಿತವಾಗದೆ ಪ್ರತಿನಿತ್ಯ ಎಲ್ಲರ ಮನೆಗಳಲ್ಲೂ ಸಹ ಜನ್ಮದಿನ ಹಾಗೂ ವಿವಾಹ ವಾರ್ಷಿಕೋತ್ಸವ ಸಂದರ್ಭದಲ್ಲಿ ಗಿಡಗಳನ್ನು ನೆಡುವುದರ ಮುಖಾಂತರ ಪರಿಸರಕ್ಕೆ ಒಂದು ಸಣ್ಣ ಕೊಡುಗೆಯನ್ನು ನಾವು ನೀಡಬೇಕಾಗಿದೆ ಎಂದರು.

ಶಿಕ್ಷಕ ಹರೀಶ್ ಮಾತನಾಡಿ, ಇಂದು ಈ-ತ್ಯಾಜ್ಯ ವಸ್ತುವನ್ನು ಸರಿಯಾಗಿ ವಿಲೇವಾರಿ ಮಾಡದೇ ಇರುವುದರಿಂದ ಭೂಮಿ ಸಾಕಷ್ಟು ಹಾಳಾಗುತ್ತಿದೆ. ನಾವು ಮನೆಯಲ್ಲಿ ಬಳಸಿದ ಕಂಪ್ಯೂಟರ್ ಶೆಲ್ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳನ್ನ ಸರಿಯಾಗಿ ವಿಲೇವಾರಿ ಮಾಡಬೇಕು ಎಂದು ಹೇಳಿದರು.

ಪರಿಸರವನ್ನ ಸುಂದರವಾಗಿ ಸ್ವಚ್ಛವಾಗಿ ಇಟ್ಟುಕೊಳ್ಳಲು ಪ್ರಯತ್ನಿಸಬೇಕು. ನಗರೀಕರಣದಿಂದ ಮರ ಗಿಡಗಳ ನಾಶವಾಗುತ್ತಿದೆ. ನಾವು ಬರುವ ದಿನಗಳಲ್ಲಿ ಹೆಚ್ಚು ಹೆಚ್ಚು ಮರ ಗಿಡಗಳನ್ನು ಬೆಳೆಸುವುದರ ಮುಖಾಂತರ ಒಳ್ಳೆಯ ಆಮ್ಲಜನಕವನ್ನು ಪಡೆಯುವುದರ ಮುಖಾಂತರ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಬೇಕು ಎಂದು ತಿಳಿಸಿದರು.

Shivaganga Yoga Centre ಇದೇ ಸಂದರ್ಭದಲ್ಲಿ ಡಾ. ಯಶ್ವಂತ್ ಮಾತನಾಡಿ, ಇಂದು ನಮ್ಮ ತುಂಗಾ ನದಿ ಸಾಕಷ್ಟು ಮಲಿನವಾಗುತ್ತಿದೆ. ಅದರಲ್ಲಿ ಸಿಲಿಕಾನ್ ಹೆಚ್ಚು ಹೆಚ್ಚು ತುಂಬಿ ನೀರು ಸಾಕಷ್ಟು ಕಲುಷಿತಗೊಳ್ಳುತ್ತಿದೆ. ಆದ್ದರಿಂದ ನಾವು ನದಿ ಪಾತ್ರವನ್ನು ಆದಷ್ಟು ಸ್ವಚ್ಚವಾಗಿಟ್ಟುಕೊಳ್ಳಬೇಕು. ಬೇಡವಾದ ಕಸವನ್ನು ನದಿಗೆ ಎಸೆಯುವುದರ ಮುಖಾಂತರ ನದಿಗಳನ್ನು ಹಾಳು ಮಾಡುತ್ತಿದ್ದೇವೆ. ನದಿಗಳು ನಮ್ಮ ಮೂಲ ಸಂಪತ್ತು. ಈ ನಿಟ್ಟಿನಲ್ಲಿ ನಾವು ನದಿಗಳನ್ನು ಕಾಪಾಡಬೇಕು ಎಂದು ನುಡಿದರು.

ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕರಾದ ನರಸೋಜಿ ರಾವ್, ಶ್ರೀನಿವಾಸ್, ರೋಟರಿ ಜಿ.ವಿಜಯ್ ಕುಮಾರ್, ಸತೀಶ್, ಅರುಣ್, ಮಹೇಶ್, ಗಾಯಿತ್ರಿ, ಶೋಭಾ, ಶೈಲಾ ವಿಕ್ರಂ, ಶಂಕರ್, ಶಶಿಧರ್, ಮಾಲತಿ, ಸುಮಾ,
ಹಾಗೂ ಯೋಗ ಬಂಧುಗಳು ಉಪಸ್ಥಿತರಿದ್ದರು. ಇದರೊಂದಿಗೆ ಪರಿಸರ ಗೀತೆಗಳನ್ನು ಹಾಡಲಾಯಿತು.

B.Y.Raghavendra ಬಿ.ವೈ.ರಾಘವೇಂದ್ರ 2 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು: ನಾಲ್ಕನೇ ಬಾರಿಗೆ ಸಂಸದರಾದ ಸಂಭ್ರಮ

0

B.Y.Raghavendra ಶಿವಮೊಗ್ಗ ಲೋಕಸಭಾ ಚುನಾವಣೆ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಭರ್ಜರಿ ಗೆಲುವು ಸಾಧಿಸಿ ನಾಲ್ಕನೇ ಬಾರಿಗೆ ಸಂಸತ್ ಪ್ರವೇಶ ಮಾಡಲಿದ್ದಾರೆ. ಅವರು ತಮ್ಮ ಸಮೀಪ ಸ್ಪರ್ಧಿ ಕಾಂಗ್ರೆಸ್‌ನ ಗೀತಾ ಶಿವರಾಜ್ ಕುಮಾರ್ ಅವರಿಗಿಂತ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಪ್ರಾರಂಭಿಕ ಹಂತದಿಂದಲೂ ಕೂಡ ಬಿ.ವೈ. ರಾಘವೇಂದ್ರ ಅವರು ಮುನ್ನಡೆ ಗಳಿಸಿದ್ದರು.

ಅಂಚೆ ಮತಗಳಿಂದಲೂ ಕೂಡ ಲೀಡ್ ಪಡೆದಿದ್ದ ಅವರು ಇವಿಎಂಗಳ ಮತ ಎಣಿಕೆ ಆರಂಭವಾಗುತ್ತಿದ್ದಂತೆಯೆ ಪ್ರತಿ ಸುತ್ತಿನಲ್ಲಿಯೂ ಗೆಲುವಿನ ಅಂತರವನ್ನು ಹೆಚ್ಚಿಸುತ್ತಾ ಹೋದರು. ಬೆಳಗ್ಗೆ 11ಗಂಟೆಗೆ 11,380 ಮತಗಳಿಂದ ಮುಂದಿದ್ದರೆ 12 ಗಂಟೆಗೆ 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರ ಕಾಯ್ದುಕೊಂಡರು. 12.20 ಕ್ಕೆ ರಾಘವೇಂದ್ರ ಅವರು ಸುಮಾರು 5 ಲಕ್ಷ 20 ಸಾವಿರ ಮತಗಳನ್ನು ಪಡೆದು 1.50 ಲಕ್ಷ ಮತಗಳ ಅಂತರ ಕಾಪಾಡಿಕೊಂಡರು. 1 ಗಂಟೆಗೆ 1.86 ಲಕ್ಷ ಮತಗಳ ಅಂತರ ಕಾಯ್ದುಕೊಂಡಿದ್ದರು. ಮಧ್ಯಾಹ್ನ 3ಗಂಟೆ ಹೊತ್ತಿಗೆ ರಾಘವೇಂದ್ರ 754381 ಮತ ಪಡೆದರೆ, ಗೀತಾ ಶಿವರಾಜ್ ಕುಮಾರ್ ಅವರು 522674 ಮತ ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಅವರು 29123 ಮತ ಪಡೆದಿದ್ದಾರೆ.
ಹೀಗೆ ಪ್ರತಿ ಸುತ್ತಿನಲ್ಲಿಯೂ ಬಿ.ವೈ. ರಾಘವೇಂದ್ರ ಅವರು ತಮ್ಮ ಸಮೀಪ ಸ್ಪರ್ಧಿ ಗೀತಾ ಶಿವರಾಜ್ ಕುಮಾರ್ ಅವರಿಗಿಂತ ಹೆಚ್ಚು ಮತಗಳನ್ನು ಕಾಯ್ದುಕೊಂಡು ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಗೀತಾ ಶಿವರಾಜ್ ಕುಮಾರ್ 5,20 ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.
ಆದರೆ, ಬಿಜೆಪಿಯಿಂದ ಬಂಡಾಯವೆದ್ದು ರಾಷ್ಟ್ರ ಭಕ್ತರ ಬಳಗದಿಂದ ಸ್ಪರ್ಧಿಸಿ ರಾಷ್ಟ್ರದ ಗಮನಸೆಳೆದಿದ್ದ ಕೆ.ಎಸ್. ಈಶ್ವರಪ್ಪನವರಿಗೆ ಈ ಚುನಾವಣೆ ಭಾರಿ ಮುಖಭಂಗ ತಂದಿದೆ. ಪ್ರತಿ ಸುತ್ತಿನಲ್ಲಿಯೂ ಅವರು ಅತ್ಯಂತ ಅಲ್ಪ ಮತಗಳನ್ನು ಪಡೆದು ಹಿನ್ನಡೆ ಸಾಧಿಸುತ್ತಲೇ ಹೋದರು.
B.Y.Raghavendra ರಾಘವೇಂದ್ರ ಅವರ ಗೆಲುವಿನಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ರಾಜಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಮತ್ತಷ್ಟು ಶಕ್ತಿ ಬಂದಂತಾಗಿದೆ. ಜಿಲ್ಲೆಯಲ್ಲಿ ಬಿಜೆಪಿ ಪ್ರಬಲವಾಗುವುದಕ್ಕೆ ಇದು ಸಹಾಯಕವಾಗುತ್ತದೆ. ರಾಘವೇಂದ್ರ ಅವರು ಅಭಿವೃದ್ಧಿಯನ್ನೇ ಮುಂದಿಟ್ಟುಕೊಂಡು ಮತ ಯಾಚಿಸಿದ್ದರು. ಅದಕ್ಕೆ ತಕ್ಕ ಪ್ರತಿಫಲ ಸಿಕ್ಕಂತಾಗಿದೆ. ಮತ ಎಣಿಕೆ ಪೂರ್ಣಗೊಂಡ ನಂತರ ಅಂಕಿ ಸಂಖ್ಯೆಗಳಲ್ಲಿ ಬದಲಾವಣೆ ಆಗಲಿದೆ.

ಬಿಜೆಪಿ ಕಛೇರಿಯಲ್ಲಿ ವಿಜಯೋತ್ಸವ :

ಸಂಸದ ಬಿ.ವೈ. ರಾಘವೇಂದ್ರ ಇನ್ನೂ ಒಂದು ಲಕ್ಷ ಮತಗಳ ಎಣಿಕೆ ಬಾಕಿ ಇರುವಾಗಲೇ 224404 ಲಕ್ಷ ಲೀಡ್ ಪಡೆದು ಬಿಜೆಪಿ ಕಚೇರಿಯಲ್ಲಿ ವಿಜಯೋತ್ಸವ ಆಚರಿಸಿದರು. ಇದು ಮಹಿಳಾ ಮತ್ತು ಯುವಶಕ್ತಿಯ ಗೆಲುವಾಗಿದೆ. ಅಪಪ್ರಚಾರದಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ರಾಘವೇಂದ್ರ ಹೇಳಿದರು.
ನಮ್ಮ ಕುಟುಂಬದ, ಕಾರ್ಯಕರ್ತರು ಪಕ್ಷದ ಬಗ್ಗೆ ಹಗುರ ಮಾತನಾಡಿದರು. ದ್ವೇಷದ ಅಪಪ್ರಚಾರ ಮಾಡಿದವರಿಗೆ ಯಾವ ಜಗ ತೋರಿಸಬೇಕೋ ಅದನ್ನು ಜನ ತೋರಿಸಿದ್ದಾರೆ ಎಂದು ಪರೋಕ್ಷವಾಗಿ ಈಶ್ವರಪ್ಪ ಅವರಿಗೆ ಅವರು ಟಾಂಗ್ ಕೊಟ್ಟರು.
ಜನರ ಅಪೇಕ್ಷೆ ಮೇರೆಗೆ ಕೆಲಸ ಮಾಡುತ್ತೇನೆ. ಜನರ ನಿರೀಕ್ಷೆಗೆ ಅನುಗುಣವಾಗಿ ಅಭಿವೃದ್ಧಿ ಕಾರ್ಯ ಮುಂದುವರೆಸುತ್ತೇನೆ. ಅಣ್ಣಾಮಲೈ ಸೋತಿರಬಹುದು. ತಮಿಳುನಾಡಿನಲ್ಲಿ ಉತ್ತಮ ಜನಾಭಿಪ್ರಾಯ ಮೂಡಿಸಿದ್ದಾರೆ. ಶಿವಮೊಗ್ಗಕ್ಕೂ ಬಂದು ನಮ್ಮ ಗೆಲುವಿಗೆ ಶಕ್ತಿ ತುಂಬಿದ್ದಾರೆ. ನನಗೆ ಮತ ಹಾಕಲು ಯುವಕರು ಬೇರೆ ಬೇರೆ ಜಿಲ್ಲೆ ರಾಜ್ಯಗಳಿಂದ ಬಂದು ಮತ ಹಾಕಿದ್ದಾರೆ. ಜೆಡಿಎಸ್ ಬೆಂಬಲ ಕೂಡ ನನ್ನ ಗೆಲುವಿಗೆ ಕಾರಣವಾಗಿದೆ ಎಂದರು.
ದೇವರು ಮೆಚ್ಚುವ ರೀತಿಯಲ್ಲಿ ಜನರ ಅಪೇಕ್ಷೆಗೆ ತಕ್ಕಂತೆ ಕೆಲಸ ಮಾqಡುತ್ತೇನೆ, ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಹೆಚ್ಚು ಸ್ಥಾನ ಗಳಿಸಿದೆ.
ಶಿವಮೊಗ್ಗ ನಗರದಿಂದ 50 ಸಾವಿರ ಲೀಡ್, ಸೊರಬದಿಂದ 18 ಸಾವಿರ, ಸಾಗರ 20, ಶಿಕಾರಿಪುರ 12 ಸಾವಿರ, ಶಿವಮೊಗ್ಗ ಗ್ರಾಮಾಂತರ 30 ಸಾವಿರ, ತೀರ್ಥಹಳ್ಳಿ 24 ಸಾವಿರ, ಬೈಂದೂರು 51 ಸಾವಿರ, ಭದ್ರಾವತಿಯಲ್ಲಿ 6 ಸಾವಿರ ಲೀಡ್ ಬಂದಿದೆ ಎಂದರು.

Klive Special Article ಕೆ ಲೈವ್ ವಿಶೇಷ ಮೆಚ್ಚುವಂಥ ಮತದಾರನ ಬುದ್ಧಿಮತ್ತೆ

0

Klive Special Article ಹದಿನೆಂಟನೇ ಲೋಕಸಭೆ ರಚನೆಗೆ ನಡೆದ ಚುನಾವಣೆ ಭಾರತದ ಎಚ್ಚೆತ್ತ ಮತದಾರರ ಸಂಕೇತವಾಗಿದೆ.

ನರೇಂದ್ರ ಮೋದೀಜಿ ಅವರ “ಚಾರ್ ಸೌ ಪಾರ್ ” ಸ್ಲೋಗನ್
ಬಗ್ಗೆ ಅದೊಂದು ಮೈಂಡ್ ಗೇಮ್ ಅಂತ ವಿಶ್ಲೇಷಕರ ಅಂಬೋಣ.

ಆದರೂ ಕಳೆದೆರಡು ಸಾರ್ವತ್ರಿಕ ಚುನಾವಣೆಗಳಲ್ಲಿ
ಅಭೂತಪೂರ್ವ ಮುನ್ನಡೆ ಪಡೆದ ನರೇಂದ್ರ ಮೋದಿ ಅವರ. ಚರಿಶ್ಮಾ ಈ ಬಾರಿ ಕೆಲಸ ಮಾಡಲಿಲ್ಲ.

ಸುಮಾರು 293 -5 ರ ನಡುವೆಯೇ ಲೋಲಕದಂತಿರುವ ಸಂಖ್ಯೆ “ತೀನ್ ಸೌ ಪಾರ್ ” ಕೂಡ ಆಗಿಲ್ಲ.

ಮೋದಿ ಮೊದಲಿಗೆ ‘ಹಿಂದುತ್ವ”ಪ್ಲೆ ಕಾರ್ಡ್
ಹಿಡಿದರು. ಗೆದ್ದರು.
ನಂತರ “ಮಂದಿರ’ ಗೆದ್ದರು. ಈ ಅವಧಿಯಲ್ಲಿ ಅನೇಕ
ತಲ್ಲಣ,ಆತಂಕಗಳನ್ನ
‘ಕೋವಿಡ್ ‘ ನಿಂದಾಗಿ ದೇಶದ ಜನ ಅನುಭವಿಸುವಂತಾಯಿತು.
ಈ ಸಂಕಷ್ಟ ಪರಿಸ್ಥಿತಿಯನ್ನ ತುಂಬಾ ಗಂಭೀರವಾಗಿಯೇ ಮೋದಿ ನಿರ್ವಹಿಸಿದರು.
ತಾವು ಭಾರತ ಪ್ರಜಾಪ್ರಭುತ್ವದ ಚೌಕಿದಾರ್ ಎಂದು ಕರೆದುಕೊಂಡರು.

ವಿರೋಧಿಗಳಿಗೆ ಇಲ್ಲಿಯವರೆಗೂ ಬಿಜೆಪಿಯ ಹಿಂದುತ್ವ ವಾದವೊಂದೇ ಕೋಮುವಾದವಾಗಿ
ಅವರ ಪ್ರಣಾಳಿಕೆಯಾಗಿರುತ್ತಿತ್ತು.

ಆದರೆ ತ್ರಿವಳಿ ತಲಾಖ್ ನಂತಹ ಪದ್ಧತಿಯನ್ನ ಅಮಾನ್ಯ, ಜಮ್ಮು ಕಾಶ್ಮೀರ 370 ನೇ ವಿಧಿ ರದ್ದು ಇತ್ಯಾದಿ ಪ್ರಮುಖ ಸುಧಾರಣೆಗಳನ್ನ ಕೈಗೊಂಡಾಗ ವಿಪಕ್ಷಗಳು‌ ಮಾತಿಲ್ಲದೇ ಮೂಕವಾದವು.
ಶ್ರೀನಗರದ ಲಾಲ್ ಚೌಕದಲ್ಲಿ ತ್ರಿವರ್ಣ ರಂಜಿತ ಧ್ವಜ ಹಾರಾಡಿತು.

ಜಮ್ಮುಕಾಶ್ಮೀರ ಚುನಾವಣೆಯಲ್ಲಿ ಅನಭಿಷಕ್ತ ನಾಯಕ ಓಮರ್ ಅಬ್ದುಲ್ಲಾ ಈ ಬಾರಿಯ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ್ದಾರೆ. ಅವರ ವಿರುದ್ಧ ರಶೀದ್ ಎಂಬ
ಪಕ್ಷೇತರ ಅಭ್ಯರ್ಥಿ ಜಯಗಳಿಸಿದ್ದಾರೆ.

ಇವೆಲ್ಲಾ ಭಾವನಾತ್ಮಕ ಒಂದೇ ಅಲ್ಲ. ಸಾಮಾಜಿಕವಾಗಿ ಆಗಬೇಕಾದ ಬದಲಾವಣೆಗಳಾಗಿದ್ದವು.
ಪುಲ್ವಾಮ ದಾಳಿ ನಿರ್ವಹಣೆ. ಚಂದ್ರಯಾನದ ಯಶಸ್ಸು ಹೀಗೆ ಒಂದೇ ಎರಡೆ?
ಮೋದಿ ಅವರನ್ನ ಮತ್ತೆ ಓರ್ವ ಸ್ಫುಟ ನಾಯಕ ಮಣಿಯಂತೆ ಮಾಡಿದವು.

ವಿಪಕ್ಷಗಳು ಟೀಕಾಸ್ತ್ರಕ್ಕಾಗಿ‌ ಕಾಯುತ್ತಿದ್ದವು. ಸಿಕ್ಕದ್ದೇ ಅದಾನಿ ಅಂಬಾನಿ.

ಈ ಬಾರಿಯ ಚುನಾವಣೆಯಲ್ಲಿ
ದೇಶದ ಇತರ ಬಿಜೆಪಿ ವಿರೋಧ ಪಕ್ಷಗಳನಗನ ಕಲೆಹಾಕಿ ಮುಖ್ಯ ಭೂಮಿಕೆಯನ್ನ ಕಾಂಗ್ರೆಸ್ ರಚಿಸಿತು.
ಇಂಡಿ ತಂಡವು ಆರಂಭ ಶೂರತ್ವ ಅನಿಸಿತು.
ಕಾಂಗ್ರೆಸ್ ನಾಯಕರಲ್ಲಿ ಅನುಭವಿ ಮಲ್ಲಿಕಾರ್ಜುನ ಖರ್ಗೆ ಒಬ್ಬರೇ ಅಧಿಕಾರಯುತವಾಗಿ
ಬಿಜೆಪಿಯ ಮೇಲೆ ಮೋದೀಜಿಯ ಮೇಲೆ ವಾಗ್ದಾಳಿ ನಡೆಸಿದರು.
ರಾಹುಲ್ ಭಾಷಣಗಳೆಲ್ಲವೂ
ಅರೆಬರೆ ವಿಷಯಗಳ‌ಅಗಿದ್ದು ಆಳವೇ ಇರಲಿಲ್ಲ.
ಕೊನೆಗೆ ಮೋದಿವರ
ಉಡುಪು, ಭಾಷಣ ಮಾತಿನ ವಾಕ್ಯಗಳು
ಮುಖಭಂಗಿ‌ ಇವೆ ರಾಹುಲ್ ಗರ ಅಣಕು‌ ಮಾಡುವ ವಸ್ತುಗಳಾದವು.
ಜೊತೆಗೆ ಗ್ಯಾರಂಟಿ ಹೇಳುವಾಗ ಕೈಯಲ್ಲಿ ಅಧಿಕಾರ ಸಿಕ್ಕೇಬಿಟ್ಟಿದೆ ಎಂದು
ವರ್ಷಕ್ಕೆ ಕುಟುಂಬದ ಓರ್ವ ಮಹಿಳೆಗೆ ಒಂದು ವರ್ಷಕ್ಕೆ ಲಕ್ಷರೂಪಾಯಿಯನಗನ ಟಕಾಟಕ್ ಬ್ಯಾಂಕ್ ಖಾತೆಗೆ ಹಾಕುವುದಾಗಿ ಪ್ರಣಾಳಿಕೆ ಮಾತನ್ನೇ ಭಾಣವನ್ನಾಗಿಸಿದರು.
ಸಾಲದಾದರೆ ಒಂದಲ್ಲ ಎರಡು ಲಕ್ಷ ಹಾಕುತ್ತೇವೆ ಎಂದೂ ಹಿಂದೆಮುಂದೆ ನೋಡದೇ ಭರವಸೆ ನೀಡಿದರು.
ಅಧಿಕಾರ ಹಿಡಿದ ಮಾರನೇ ದಿನವೇ ಹಣ‌ ಬ್ಯಾಂಕ್ ಖಾತೆಗೆ ಹಾಕುವುದಾಗಿ ಹೇಳಿಬಿಟ್ಟರು. ಇಂದಿನ ಫಲಿತಾಂಶ ನೋಡಿದರೆ ನಮ್ಮ ಮತದಾರ ಪಕ್ಷಗಳ ಪ್ರಣಾಳಿಕೆಗಿಂತ ಬುದ್ದಿಮತ್ತೆ ತೋರಿದ್ದಾರೆ.

Klive Special Article ಭಾವನಾತ್ಮಕ ವಿಷಯಗಳನ್ನ ಸಾಕು ಮಾಡಿ. ಉಚಿತ ಕೊಡುಗೆಗಳನ್ನ ನೀಡಿ
ಪರಾವಲಂಬಿಗಳನ್ನಾಗಿ ಮಾಡಬೇಡಿ. ಸಾಮಾಜಿಕ ಸಮಸ್ಯೆಗಳು,ದೇಶದ
ಅಭಿವೃದ್ಧಿ , ಅಂತಾರಾಷ್ಟ್ರೀಯ ಅಗತ್ಯಗಳ ಬಗ್ಗೆ ‌ಕೆಲಸಮಾಡಿ .
ಒಂದೇ ಪಕ್ಷಕ್ಕೆ ಪೂರ್ಣ ಬಹುಮತ ಬೇಡ. ಆಡಳಿತ ಮತ್ತು ವಿರೋಧ ಪಕ್ಷಗಳು ಆದಷ್ಟೂ ಸಮವಲ್ಲದಿದ್ದರೂ ಸಮರ್ಥವಾಗಿರಲಿ ಎಂದು ‌ಮತ ತೀರ್ಪು ನೀಡಿದಂತಿದೆ.

Teachers And Graduates Election ಪದವಿಧರರ ಕ್ಷೇತ್ರ ಚುನಾವಣೆ: ಸಾಗರದಲ್ಲಿ ಶೇ 85.05 ಮತದಾನ

0

Teachers And Graduates Election ವಿಧಾನ ಪರಿಷತ್‌ನ ನೈಋತ್ಯ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರಕ್ಕೆ ಸೋಮವಾರ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಾಂತಿಯುತ ಮತದಾನ ನಡೆದಿದ್ದು ಪದವೀಧರ ಕ್ಷೇತ್ರದಲ್ಲಿ ಶೇ. 85.05%ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ ಶೇ. 85.12%ರಷ್ಟು ಮತದಾನವಾಗಿದೆ.
ಉಭಯ ಕ್ಷೇತ್ರಗಳಿಗೂ ಅರ್ಹ ಮತದಾರರು ಸೋಮವಾರ ಬೆಳಗ್ಗೆಯಿಂದಲೇ ಉತ್ಸಾಹದಿಂದ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. ಪದವೀಧರರ ಕ್ಷೇತ್ರಕ್ಕೆ ಎರಡೂ ಪಕ್ಷಗಳಿಂದ ಬಂಡಾಯವೂ ಸೇರಿ ನಾಲ್ವರು ಅಭ್ಯರ್ಥಿಗಳು ಕಣದಲ್ಲಿದ್ದು, ಕಡೆಯ ಕ್ಷಣದವರೆಗೂ ಮತದಾರರ ಮನಗೆಲ್ಲಲು ಎಲ್ಲರೂ ಹರಸಾಹಸ ಪಡುತ್ತಿದ್ದುದು ಕಂಡು ಬರುತ್ತಿತ್ತು. ಕಾಂಗ್ರೆಸ್ ಅಭ್ಯರ್ಥಿ ಪರವಾರಿ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು, ಮತ್ತು ಎನ್‌ಡಿಎ ಬೆಂಬಲಿತ ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಎಸ್.ಎಲ್. ಭೋಜೇಗೌಡ, ಮಾಜಿ ಸಚಿವ ಹರತಾಳು ಹಾಲಪ್ಪ ಮತಗಟ್ಟೆ ಆವರಣದ ಹೊರಗೆ ಬಂದು ತಮ್ಮ ಅಭ್ಯರ್ಥಿಗಳ ಪರ ಮತ ಚಲಾಯಿಸುವಂತೆ ಕೋರಿಕೊಂಡರು.
Teachers And Graduates Election ತಾಲೂಕಿನಲ್ಲಿ ಪದವೀಧರರ ಕ್ಷೇತ್ರಕ್ಕೆ 1607 ಮತದಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದು, ಇದರಲ್ಲಿ 1607 ಮತಗಳು ಚಲಾವಣೆಗೊಂಡಿದ್ದು, ಶೇ. ಶೇ86-02%. ರಷ್ಟು ಮತದಾನ ನಡೆದಿದ್ದರೆ, ಶಿಕ್ಷಕರ ಕ್ಷೇತ್ರದಲ್ಲಿ 87.06 ಮತದಾರರಿದ್ದು 449 ಮತಗಳು ಕಣದಲ್ಲಿರುವ ಅಭ್ಯರ್ಥಿಗಳಿಗೆ ಬಿದ್ದಿದ್ದು, ಶೇ. 95.12%ರಷ್ಟು ಮತದಾನ ನಡೆದಿದೆ ಎಂದು ಸಹಾಯಕ ಚುನಾವಣಾಧಿಕಾರಿ ಆರ್. ಯತೀಶ್ ತಿಳಿಸಿದ್ದಾರೆ.
ಪರಿಷತ್‌ನ ಎರಡು ಸ್ಥಾನಗಳ ಚುನಾವಣೆಯ ಹಿನ್ನೆಲೆಯಲ್ಲಿ ಆಯೋಗವು ಸಾಗರ ಪೇಟೆಯಲ್ಲಿ 2 ಹಾಗೂ ತಾಲೂಕಿನ ಕಾರ್ಗಲ್ ಮತ್ತು ಆನಂದಪುರದಲ್ಲಿ ತಲಾ ಒಂದು ಮತಗಟ್ಟೆಯನ್ನು ತೆರೆದು ಸುಗಮ ಮತದಾನಕ್ಕೆ ಅವಕಾಶ ಕಲ್ಪಿಸಿಕೊಟ್ಟಿತ್ತು.

Spoorti Cultural Service Association ಗ್ರಾಮೀಣ ಕಲಾವಿದರನ್ನ ಪ್ರೋತ್ಸಾಹಿಸುವಿಕೆ ಸುಸಂಸ್ಕೃತಿಯ ಲಕ್ಷಣ- ಡಾ.ಎಚ್.ಬಿ.ಮಂಜುನಾಥ್

0

Spoorti Cultural Service Association ಆಧುನಿಕ ಸಾಧನ ಸಲಕರಣೆಗಳ ಗಳಿಕೆ ಮತ್ತು ಬಳಕೆಯೇ ಸಂಸ್ಕೃತಿಯ ಲಕ್ಷಣ ಎಂದು ಭಾವಿಸುವ ಈ ಕಾಲದಲ್ಲೂ ಎಲೆಮರೆಯ ಕಾಯಿಯಂತಿರುವ ಗ್ರಾಮೀಣ ಕಲಾವಿದರು ಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ನಿಜವಾಗಿಯೂ ಸುಸಂಸ್ಕೃತಿಯ ಲಕ್ಷಣ ಎಂದು ಹಿರಿಯ ಪತ್ರಕರ್ತ ಡಾ. ಎಚ್ ಬಿ ಮಂಜುನಾಥ ಅಭಿಪ್ರಾಯ ಪಟ್ಟರು.

ಸ್ಪೂರ್ತಿ ಸಾಂಸ್ಕೃತಿಕ ಸೇವಾ ಸಂಘದ ನೂತನ ಕಚೇರಿಯ ಉದ್ಘಾಟನಾ ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ಮಾತನಾಡುತ್ತಾ ಪತ್ನಿ ವಿಯೋಗದಿಂದ ಧೃತಿಗೆಡದ ಎನ್ ಎಸ್ ರಾಜು ರವರು ಪ್ರಚಾರವಿಲ್ಲದ ಪ್ರತಿಭೆಗಳಾದ ಗ್ರಾಮೀಣ ಪ್ರದೇಶದ ಜಾನಪದ ಕಲಾವಿದರು ರಂಗಭೂಮಿ ಕಲಾವಿದರು ಮುಂತಾದವರನ್ನು ಗುರುತಿಸಿ ಗೌರವಿಸುವ, ಅವರಿಗೆ ಸರ್ಕಾರ ಹಾಗೂ ಸಂಘ ಸಂಸ್ಥೆಗಳಿಂದ ದೊರಕಬೇಕಾದ ಕಾರ್ಯಕ್ರಮ ಅವಕಾಶ, ಪ್ರಶಸ್ತಿ ಪುರಸ್ಕಾರ ಮಾಸಾಶನಾದಿಗಳನ್ನು ಕೊಡಿಸುವ ಸಂಕಲ್ಪವನ್ನು ಮಾಡಿ ಆರಂಭಿಸಿದ ಸ್ಪೂರ್ತಿ ಸಾಂಸ್ಕೃತಿಕ ಸೇವಾ ಸಂಘವು ಮೂರು ದಶಕಗಳಿಂದ ಕಾರ್ಯ ಗೈಯುತ್ತಿದ್ದು ಅರ್ಹ ಕಲಾವಿದರ ಸಂಪರ್ಕದ ಅನುಕೂಲಕ್ಕಾಗಿ ನಗರ ಮಧ್ಯಭಾಗದ ಪ್ರದೇಶವಾದ ನಿಟ್ಟುವಳ್ಳಿ ರಸ್ತೆಯಲ್ಲಿ ಬಾಡಿಗೆ ಕಟ್ಟಡದಲ್ಲಿ ಕಚೇರಿ ಸ್ಥಳಾಂತರಿಸಿರುವುದು ಎನ್ ಎಸ್ ರಾಜು ರವರ ಸೇವಾ ಕಳಕಳಿಯ ದ್ಯೋತಕವಾಗಿದೆ ಎಂದರು
ಸ್ವತಃ ಕಲಾವಿದರೂ, ಬರಹಗಾರರೂ ಆಗಿರುವ ರಾಜುರವರು ಗೌತಮ ಬುದ್ಧ, ಬಸವೇಶ್ವರ, ಸ್ವಾಮಿ ವಿವೇಕಾನಂದ, ಅಂಬೇಡ್ಕರ್ ರವರ ತತ್ವ ಚಿಂತನೆಗಳ ತಳಹದಿಯ ಮೇಲೆ ತಮ್ಮ ಸಾಂಸ್ಕೃತಿಕ ಸೇವಾ ಚಟುವಟಿಕೆಗಳನ್ನು ನಡೆಸುವ ಮನೋಭಾವ ಹೊಂದಿರುವುದು ಶ್ಲಾಘನೀಯ ಎಂದರು.

ಆಹ್ವಾನಿತರಾಗಿ ಮಾತನಾಡಿದ ಎಂ ಎಸ್ ನಾಗರಾಜಪ್ಪನವರು ಡಿಜಿಟಲ್ ಯುಗದಲ್ಲಿ ಜಾನಪದವು ಮಾಸಬಾರದು ಎಂದರು. ಕೆ ಸಿ ಲಿಂಗರಾಜ್ ಮಾತನಾಡಿ ವಿದ್ಯಾರ್ಥಿಗಳಿಗೂ ಜಾನಪದ ಕಲೆಗಳ ಪರಿಚಯವಾಗಬೇಕು ಎಂದರೆ ಶಶಿಕಲಾ ಮೂರ್ತಿಯವರು ಮಾತನಾಡಿ ಗ್ರಾಮೀಣ ಕಲಾವಿದರು ಗಳಿಗೆ ಲಕ್ಷ ರೂಪಾಯಿಗಿಂತಾ ಅವರ ಕಲೆಗಳ ಬಗ್ಗೆ ನಾವು ಲಕ್ಷ್ಯ ಕೊಡುವುದು ಅವಶ್ಯ ಎಂದರು. ಹೊನ್ನೂರು ಮುನಿಯಪ್ಪ ಮಾತನಾಡಿ ಗ್ರಾಮೀಣ ಕ್ರೀಡೆಗಳು ನಶಿಸಬಾರದು ಎಂದರು.

ಪಲ್ಲಾಗಟ್ಟೆ ಚೆನ್ನಪ್ಪ, ಅರುಣ್ ಕುಮಾರ್ ಕುರುಡಿ, ಎಸ್ ಸಿದ್ದೇಶ ಕುರ್ಕಿ,ಡಾ.ಎ ಶಿವನಗೌಡರು ಮುಂತಾದವರು ಮಾತನಾಡಿ ಸಂಘಕ್ಕೆ ಶುಭ ಕೋರಿದರು. ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಎಲ್ ಹೆಚ್ ಅರುಣ್ ಕುಮಾರ್ ಸತ್ಸಂಗಗಳು ಎಲ್ಲಿ ನಡೆಯುತ್ತವೆಯೋ ಅಲ್ಲಿ ಸದ್ವಿಚಾರಗಳ ವಿನಿಮಯವಾಗುತ್ತದೆ, ಅಲಕ್ಷಿತ ಕಲಾವಿದರು ಗಳಿಗೆ ಕಾರ್ಯಕ್ರಮ ಒದಗಿಸಿ ಕೊಡುವುದು ಸಹಾ ಸತ್ಸಂಗದಷ್ಟೇ ಶ್ರೇಷ್ಠ ಎಂದರು.

Spoorti Cultural Service Association ಬಿ.ಟಿ. ಪ್ರಕಾಶ್,ಹಿರಿಯಪತ್ರಕರ್ತ ಐರಣಿ ಬಸವರಾಜ್, ಕೂಲಂಬಿ ಜಗದೀಶ್, ಅವರಗೆರೆ ಚಂದ್ರು, ಶ್ರೀ ಕುಮಾರ ಆನೆಕೊಂಡ, ಕೂಲಂಬಿ ಜಗದೀಶ್, ಅವರಗೆರೆ ರುದ್ರಮುನಿ, ತಿಪ್ಪಣ್ಣ ಕತ್ತಲಗೆರೆ, ಮಾರ್ಥಂಡಪ್ಪ, ಬಿ ಈ ತಿಪ್ಪೇಸ್ವಾಮಿ, ಆರ್ ಸಿದ್ದೇಶಪ್ಪ, ಮಹಾನಗರ ಪಾಲಿಕಾ ಸದಸ್ಯ ಲತೀಫ್ ಸಾಬ್ ಮುಂತಾದವರು ಆಗಮಿಸಿದ್ದರು.
ಎನ್ ಎಸ್ ರಾಜು ಎಲ್ಲರನ್ನೂ ಸ್ವಾಗತಿಸಿ ವಂದನೆ ಸಮರ್ಪಿಸಿದರು

Sigandhur Choudeshwari ಸಿಗಂದೂರು ದೇವಿಯ ದರ್ಶನ ಪಡೆದ ಸುಪ್ರೀಂ ಕೋರ್ಟಿನ ನ್ಯಾ.ಬಿ.ವಿ.ನಾಗರತ್ನ

0

Sigandhur Choudeshwari ಸಾಗರ ತಾಲ್ಲೂಕು ಪ್ರಸಿದ್ದ ಸಿಗಂಧೂರು ಚೌಡೇಶ್ವರಿ ದೇವಸ್ಥಾನಕ್ಕೆ ನ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಬಿವಿ. ನಾಗರತ್ನರವರು ಭೇಟಿಕೊಟ್ಟು ವಿಶೇಷ ಪೂಜೆ ಸಲ್ಲಿಸಿದ್ದಾರೆ.

Sigandhur Choudeshwari ಅವರು ತುಮರಿ ಸಮೀಪದ ಸಿಂಗದೂರು ಚೌಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು..
ಈ ವೇಳೆ ದೇವಸ್ಥಾನದ ಧರ್ಮಾಧಿಕಾರಿ ಎಸ್‌ ರಾಮಪ್ಪ ಅವರು ದೇವಸ್ಥಾನದ ಪೂಜಾ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.
ನ್ಯಾಯಮೂರ್ತಿಯವರ ಜೊತೆ ಅವರ ಕಾರ್ಯದರ್ಶಿ ಪಾರ್ವತಿ, ಪುತ್ರಿ ಲಾವಣ್ಯ, ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಎಚ್‌ಆರ್, ಜಿಲ್ಲಾ ಹಾಗೂ ತಾಲ್ಲೂಕು ನ್ಯಾಯಾಧೀಶರು, ಕಂದಾಯ ಇಲಾಖೆ ಅಧಿಕಾರಿಗಳು ಜೊತೆಯಲ್ಲಿದ್ದರು

Meteorological Department ಮತದಾನದ ವೇಳೆ ತೀವ್ರಶಾಖದ ಗಾಳಿಗೆ ಬಲಿಯಾದ ಮತಗಟ್ಟೆಯ ಸಿಬ್ಬಂದಿ

0

Meteorological Department ಉತ್ತರಪ್ರದೇಶದಲ್ಲಿ 7ನೇ ಹಾಗೂ ಅಂತಿಮ ಹಂತದ ಮತದಾನದ ಸಂದರ್ಭ ಉಷ್ಣಾಘಾತದಿಂದ 33 ಚುನಾವಣಾ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಉತ್ತರಪ್ರದೇಶದ ಮುಖ್ಯ ಚುನಾವಣಾಧಿಕಾರಿ ನವದೀಪ್ ರಿನ್ವಾ ಹೇಳಿದ್ದಾರೆ.

ಮತದಾನದ ಕೊನೆಯ ದಿನದಂದು ಕೇವಲ ಒಂದು ರಾಜ್ಯದಲ್ಲಿ ಬಿಸಿಲ ಹೊಡೆತದಿಂದ ಸಾವನ್ನಪ್ಪಿರುವ ಈ ಅಂಕಿ-ಅಂಶಗಳು ಅಚ್ಚರಿ ಮೂಡಿಸಿದೆ. ಮೃತರಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿ, ನೈರ್ಮಲ್ಯ ಸಿಬ್ಬಂದಿ ಮತ್ತು ಮತಗಟ್ಟೆ ಸಿಬ್ಬಂದಿಗಳು ಸೇರಿದ್ದಾರೆ. ಮೃತರ ಕುಟುಂಬಗಳಿಗೆ ಸೂಕ್ತವಾದ ಹಣಕಾಸು ಪರಿಹಾರವನ್ನು ಒದಗಿಸಲಾಗುವುದು ಎಂದು ರಿನ್ವಾ ಹೇಳಿದ್ದಾರೆ.
45 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನದಿಂದ ಅನೇಕ ಸ್ಥಳಗಳಲ್ಲಿ ತೀವ್ರವಾದ ಶಾಖದ ಅಲೆಯಿಂದ ಅನೇಕ ಸಾವುಗಳ ವರದಿಯಾಗಿದೆ. ಬಲ್ಲಿಯಾ ನಗರದಲ್ಲಿ ಮತದಾನ ಮಾಡಲು ಸರತಿ ಸಾಲಿನಲ್ಲಿದ್ದ ಮತದಾರ ರಾಮ್ ಬದಾನ್ ಚೌಹಾಣ್ ಅವರು ಬಿದ್ದು ಪ್ರಜ್ಞೆ ಕಳೆದುಕೊಂಡರು. ಅವರನ್ನು ಕೂಡಲೇ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.

Meteorological Department ಆಯಾ ಕ್ಷೇತ್ರಗಳಲ್ಲಿ ಮೃತಪಟ್ಟ ಚುನಾವಣಾ ಸಿಬ್ಬಂದಿ ಕುರಿತು ವರದಿ ಸಲ್ಲಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಲಾಗಿದೆ. ಜಿಲ್ಲಾಡಳಿತ ಮೃತಪಟ್ಟ ಚುನಾವಣಾ ಸಿಬ್ಬಂದಿಯ ಮರಣೋತ್ತರ ಪರೀಕ್ಷೆಯ ವರದಿಯನ್ನು ಕೂಡ ಸಲ್ಲಿಸಲಿದ್ದಾರೆ ಎಂದು ರಿನ್ವಾ ತಿಳಿಸಿದ್ದಾರೆ.

Department Of KSRTC ಸಾರಿಗೆ ಬಸ್ ಸಾಗುವಲ್ಲಿ ನಡುವೆ ಪ್ರಯಾಣಿಕರು ಊಟೋಪಚಾರ ಸೌಲಭ್ಯ ನೀಡುವ ಹೋಟೆಲ್ ಸೇವೆ ಬಗ್ಗೆ ದೂರು ನೀಡಬಹುದು

0

Department Of KSRTC ಕೆಎಸ್ಆರ್‌ಟಿಸಿ ಬಸ್‌ಗಳು ದೂರದ ಮಾರ್ಗದಲ್ಲಿ ಸಂಚಾರ ನಡೆಸುವಾಗ ಪ್ರಯಾಣಿಕರಿಗೆ ನೈಸರ್ಗಿಕ ಕರೆ, ಲಘು ವಿಶ್ರಾಂತಿ ಮತ್ತು ಊಟೋಪಚಾರಕ್ಕಾಗಿ ನಿಗದಿತ ಸ್ಥಳದಲ್ಲಿ ನಿಲುಗಡೆ ಮಾಡುತ್ತವೆ. ಬಸ್ ನಿಲುಗಡೆ ಮಾಡಲು ಮಾರ್ಗಸೂಚಿ, ನಿಯಮಗಳಿವೆ. ದೂರು ನೀಡಬಹುದು, ಹೋಟೆಲ್‌ಗಳಿಗೆ ದಂಡ ಹಾಕಲು ಸಹ ಅವಕಾಶವಿದೆ.

ಈ ಕುರಿತು ಕೆಎಸ್ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ಆದೇಶದಲ್ಲಿ ಮಾಹಿತಿ ನೀಡಿದ್ದಾರೆ. ದೂರ ಸಂಚಾರದ ಬಸ್‌ಗಳು ಮಾರ್ಗಮಧ್ಯೆ 10 ರಿಂದ 15 ನಿಮಿಷಗಳ ಕಾಲ ಲಘು ವಿಶ್ರಾಂತಿ, ನೈಸರ್ಗಿಕ ಕರೆ ಮತ್ತು ಊಟೋಪಚಾರಕ್ಕಾಗಿ, ನಿಲ್ಲಿಸಬೇಕು. ಇದಕ್ಕಾಗಿ ಉತ್ತಮ ಸೌಲಭ್ಯ ಹೊಂದಿರುವ ಫಲಹಾರ ಮಂದಿರಗಳನ್ನು ನಿಗದಿ ಮಾಡಲಾಗಿರುತ್ತದೆ.
ಬಸ್ ನಿಲ್ಲಿಸುವ ಫಲಹಾರ ಮಂದಿರದೊಂದಿಗೆ ವಿಭಾಗೀಯ ಕಛೇರಿ ಒಪ್ಪಂದ ಮಾಡಿಕೊಂಡಿರುತ್ತದೆ. ಒಂದು ವೇಳೆ ಅಲ್ಲಿ ಹೆಚ್ಚು ಹಣ ವಸೂಲಿ ಮಾಡಿದರೆ, ಶೌಚಾಲಯಕ್ಕೆ ಹಣ ಪಡೆದರೆ, ಊಟ-ಉಪಹಾರದ ಗುಣಮಟ್ಟ ಕಳಪೆಯಾಗಿದ್ದರೆ ಒಪ್ಪಂದವನ್ನು ರದ್ದುಗೊಳಿಸಿ, ಬಸ್ ನಿಲುಗಡೆ ನೀಡದಂತೆ ಕ್ರಮ ಕೈಗೊಳ್ಳಬಹುದು, ಅವರಿಗೆ ದಂಡ ಹಾಕಬಹುದು.

Department Of KSRTC ಪ್ರಯಾಣಿಕರು ದೂರು ನೀಡಿ:
ಫಲಹಾರ ಮಂದಿರಗಳ ಪರವಾನಗಿಯ ನವೀಕರಣದ ಸಂದರ್ಭದಲ್ಲಿ, ವಿಭಾಗದ ವತಿಯಿಂದ ಪರಿವೀಕ್ಷಣೆ ನಡೆಸಿ, ಫಲಹಾರ ಮಂದಿರದ ಶುಚಿತ್ವ, ಊಟೋಪಚಾರದ ಗುಣಮಟ್ಟ ಮತ್ತು ಇತರೆ ಮೂಲಭೂತ ಸೌಕರ್ಯಗಳು ತೃಪ್ತಿಕರವಿದ್ದಲ್ಲಿ ಮಾತ್ರ ಪರಿವೀಕ್ಷಣಾ ವರದಿಯನ್ನು ಸಲ್ಲಿಸಿ, ಕೇಂದ್ರ ಕಛೇರಿಯಿಂದ ಅನುಮೋದನೆ ಪಡೆದು ನಂತರ ಫಲಹಾರ ಮಂದಿರದ ಮಾಲೀಕರೊಂದಿಗೆ ಕರಾರು ಒಪ್ಪಂದ ನವೀಕರಿಸಬೇಕು.
ಊಟ, ಉಪಹಾರಕ್ಕೆ ಬಸ್ ನಿಲುಗಡೆ, ದರ ಪಟ್ಟಿ
ಪ್ರತಿ ತಿಂಗಳು ವಿಭಾಗೀಯ ನಿಯಂತ್ರಣಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಫಲಹಾರ ಮಂದಿರಗಳನ್ನು ವಿಭಾಗದ ಅಧಿಕಾರಿಗಳಿಂದ ಪರಿವೀಕ್ಷಣೆ ನಿಬಂಧನೆಗಳಿಗನುಗುಣವಾಗಿ ಫಲಹಾರ ಮಂದಿರಗಳಲ್ಲಿನ ವ್ಯವಸ್ಥೆ ಸಮರ್ಪಕವಾಗಿರುವ ಬಗ್ಗೆ ದೃಢೀಕರಿಸಿಕೊಳ್ಳುವುದು.
ಸಾರ್ವಜನಿಕ ಪ್ರಯಾಣಿಕರಿಂದ ಫಲಹಾರ ಮಂದಿರಗಳ ಕುರಿತು ದೂರುಗಳು ಬಂದಲ್ಲಿ ಕೂಡಲೇ ಸ್ಪಂದಿಸಿ, ಪರಿಶೀಲಿಸಿ ಕ್ರಮ ಕೈಗೊಳ್ಳುವುದು ಹಾಗೂ ಫಲಹಾರ ಮಂದಿರದ ಮಾಲೀಕರಿಗೆ ಸೂಕ್ತವಾಗಿ ಎಚ್ಚರಿಸುವುದು. ಪರಿವೀಕ್ಷಣೆ ನಡೆಸುವ ಅಧಿಕಾರಿಗಳು ಫಲಹಾರ ಮಂದಿರದಲ್ಲಿನ ರಿಜಿಸ್ಟರ್‌ ಅನ್ನು ತಪಾಸಣೆ ನಡೆಸುವುದು. ವಿಭಾಗಗಳ ವತಿಯಿಂದ ತನಿಖಾ ಸಿಬ್ಬಂದಿಗಳನ್ನು ನಿಯೋಜಿಸಿ, ಅನಧಿಕೃತ ಹೋಟೆಲ್/ ಡಾಬಾಗಳಲ್ಲಿ ನಿಲುಗಡೆ ನೀಡುವ ಚಾಲನಾ ಸಿಬ್ಬಂದಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳುವುದು.
50 ವಾಹನಕ್ಕಿಂತ ಕಡಿಮೆ ನಿಲುಗಡೆ ಹೊಂದಿರುವ ಫಲಹಾರ ಮಂದಿರಗಳನ್ನು ಪ್ರತಿ ತಿಂಗಳಿಗೊಮ್ಮೆ ಹಾಗೂ 50ಕ್ಕಿಂತ ಹೆಚ್ಚಿನ ವಾಹನಗಳನ್ನು ಹೊಂದಿರುವ ಫಲಹಾರ ಮಂದಿರಗಳನ್ನು ಪ್ರತಿ 15 ದಿನಕ್ಕೊಮ್ಮೆ ವಿಭಾಗೀಯ ಸಂಚಾರ ಅಧಿಕಾರಿ ಮತ್ತು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಜಂಟಿ ಪರಿಶೀಲನೆ ಮಾಡಿ, ನ್ಯೂನ್ಯತೆಗಳು ಕಂಡು ಬಂದಲ್ಲಿ ದಂಡ ವಿಧಿಸುವುದು. ದೂರುಗಳು ಪದೇ-ಪದೇ ಮರುಕಳಿಸಿದಲ್ಲಿ, ಕರಾರನ್ನು ರದ್ದುಗೊಳಿಸಬಹುದು.
ಪರಿವೀಕ್ಷಣೆ ಮಾಡುವ ಅಧಿಕಾರಿಗಳು ಫಲಹಾರ ಮಂದಿರದಲ್ಲಿ ಪ್ರದರ್ಶಿಸಿರುವ ದರಪಟ್ಟಿ, ನಿಗಮದ ವತಿಯಿಂದ ಮಾನ್ಯತೆ ಪಡೆದಿರುವುದಾಗಿ ಪ್ರದರ್ಶಿಸಿರುವ ಫಲಕ ಮತ್ತು ದೂರು ಮತ್ತು ಸಲಹೆಗಳಿಗಾಗಿ ಸಂಪರ್ಕಿಸಲು ಒದಗಿಸಿರುವ ಮಾಹಿತಿ ಫಲಕಗಳ ಛಾಯಾಚಿತ್ರಗಳನ್ನು ತೆಗೆದು ಕೇಂದ್ರ ಕಛೇರಿಗೆ ಕಳುಹಿಸಬೇಕು.
Department Of KSRTC ಫಲಹಾರ ಮಂದಿರವು ಕರಾರು ಒಪ್ಪಂದದ ಸಮಯದಲ್ಲಿ ಸಲ್ಲಿಸಿದ ದರಪಟ್ಟಿಯನ್ನು ಪಾಲಿಸುತ್ತಿದ್ದಾರೆಯೇ? ಎಂಬುದರ ಬಗ್ಗೆ ಪರಿವೀಕ್ಷಣಾ ಅಧಿಕಾರಿಯು ಖಾತರಿಪಡಿಸಿಕೊಳ್ಳುವುದು. ಫಲಹಾರ ಮಂದಿರದ ಮಾಲೀಕರು ತಿಂಡಿ-ತಿನಿಸುಗಳ ದರ ಪರಿಷ್ಕರಿಸುವ ಸಂದರ್ಭದಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿಗಳ ಸಹಮತಿಯನ್ನು ಪಡೆಯುವುದು ಕಡ್ಡಾಯವಿರುತ್ತದೆ.
ಫಲಹಾರ ಮಂದಿರಗಳ ಪರಿಶೀಲನೆ/ ಪರಿವೀಕ್ಷಣೆ ಮಾಡುವ ನಮೂನೆಯನ್ನು ನೀಡಲಾಗಿದೆ. ಪ್ರತಿ ತಿಂಗಳು 10 ತಾರೀಖಿನೊಳಗೆ ಫಲಹಾರ ಮಂದಿರಗಳ ಪರವಾನಗಿದಾರರು ಪಾವತಿಸುವ ಶುಲ್ಕದ ಮಾಹಿತಿಯನ್ನು ಕೇಂದ್ರ ಕಛೇರಿಗೆ ನೀಡಬೇಕಿದೆ.
ವಿಭಾಗೀಯ ಮಟ್ಟದಲ್ಲಿ ಫಲಹಾರ ಮಂದಿರಗಳನ್ನು ಆಯ್ಕೆಗೊಳಿಸಿದಂತಹ ಸಂದರ್ಭದಲ್ಲಿ ಫಲಹಾರ ಮಂದಿರದ ಸಂಪೂರ್ಣ ವಿವರ ನೀಡಿ ಕೇಂದ್ರ ಕಛೇರಿಯಿಂದ ಅನುಮತಿ ಪಡೆದು ನಂತರವಷ್ಟೇ ಕರಾರು ಒಪ್ಪಂದವನ್ನು ವಿಭಾಗದ ಮಟ್ಟದಲ್ಲಿ ಮಾಡಿಕೊಳ್ಳುವುದು.
ಆಸನ ಕಾಯ್ದಿರಿಸುವ ವ್ಯವಸ್ಥೆಯುಳ್ಳ ವಾಹನಗಳ ಸಂಬಂಧ ವಿತರಿಸಲಾಗುವ ಮುಂಗಡ ಟಿಕೆಟ್‌ನಲ್ಲಿ ಊಟೋಪಹಾರಕ್ಕಾಗಿ ನಿಲುಗಡೆ ಮಾಡಲಾಗುವ ಫಲಹಾರ ಮಂದಿರದ ಹೆಸರನ್ನು ನಮೂದಿಸುವುದು.

Klive Special Article ಮನೆಮದ್ದು ಅಶೋಕ ವೃಕ್ಷದ ಆಯುರ್ವೇದೀಯ ಗುಣ ಪರಿಚಯ: ಸುಮನಾ, ಮಳಲಗದ್ದೆ

0

Klive Special Article ಅಶೋಕ ಮರ ಚನ್ನಾಗಿ ಬೆಳೆದರೆ ಇಪ್ಪತ್ತೈದು ಮುವತ್ತು ಅಡಿ ಎತ್ತರ ಬೆಳೆಯಬಲ್ಲ ಹೆಸರೇ ಸೂಚಿಸುವಂತೆ ಶೋಕ ನಾಶಮಾಡುವ ಔಷಧಿಯ ಅಳಿವಿನಂಚಿನ ಪಟ್ಟಿಯಲ್ಲಿ ಇದೆ.ಈ ಮರ ಜನವರಿ ತಿಂಗಳಿನಿಂದ ಆರಂಭವಾಗಿ ಮಾರ್ಚ್ ತನಕವೂ ಹೂಗಳನ್ನು ಪಡೆಯಬಹುದು. ಹೂ ಬಿಟ್ಟಾಗ ಮಾತ್ರ ಪತ್ತೆ ಹಚ್ಚಬಹುದಾದ ಎರಡು ಜಾತಿಯ ಗಿಡ ಇದರಲ್ಲಿ ಇದೆ ಒಂದು ಕೆಂಪು ಒಂದು ಬಿಳಿ.ಶಿವರಾತ್ರಿ ಯಲ್ಲಿ ಶಿವನಪೂಜೆ ಗೆ ಸಲ್ಲುವ ಹೂ.
ಸ್ವಲ್ಪ ಕಹಿ ಮತ್ತು ಒಗರು ರುಚಿ ಶೀತವೀರ್ಯ.
ಇದರ ಬೇರು, ಚಕ್ಕೆ, ಹೂವು, ಬೀಜ ಔಷಧಿ ಯಾಗಿ ಉಪಯೋಗ.
ವೇದನಾಹರ,ಮೂಳೆಕುಡಿಸುವ ಗುಣವುಳ್ಳ, ತ್ರಿದೋಷಹರ,ದಾಹ,ಕ್ರಿಮಿ,ಬಾವು,ಶ್ರಮ,ಶೂಲೆ, ಉದರವ್ಯಾದಿ,ವಿಷ ಮೂಲವ್ಯಾಧಿ, ರಕ್ತ ವಿಕಾರ, ಪ್ರದರ ರೋಗಗಳು ನ್ನು ಪರಿಹರಿಸುತ್ತದೆ.
1) ಮರದ ತೊಗಟೆಯಿಂದ ಕಷಾಯ ಮಾಡಿ ಸೇವನೆಯಿಂದ ಶ್ವೇತ ಪ್ರದರ ಮತ್ತು ರಕ್ತ ಪ್ರದರ ಗುಣವಾಗುತ್ತದೆ.
2) ತೊಗಟೆ ಅಥವಾ ಎಲೆಗಳನ್ನು ಅರೆದು ಪೇಸ್ಟ್ ಮಾಡಿ ಪಟ್ಟು ಕಟ್ಟಿದರೆ ಊತ ಮತ್ತು ನೋವು ಗುಣಮಾಡುತ್ತದೆ.
3)ತೊಗಟೆ ಕಷಾಯ ಸೇವನೆಯಿಂದ ರಕ್ತ ಶುದ್ಧ ಮಾಡುತ್ತದೆ.
4) ತೊಗಟೆ ಯ ಪುಡಿಯ ಸೇವನೆಯಿಂದ ರಕ್ತ ಮೂಲವ್ಯಾಧಿ ಗುಣವಾಗುತ್ತದೆ.
5) ಹೂಗಳನ್ನು ಅರೆದು ಪೇಸ್ಟ್ ಮಾಡಿ ಸೇವಿಸುವುದರಿಂದ ರಕ್ತ ಭೇದಿ ಗುಣವಾಗುತ್ತದೆ.
6) ಹೂ ಗಳನ್ನು ಒಣಗಿಸಿ ಪುಡಿ ಮಾಡಿ ಇನ್ನಿತರ ಕೆಲವು ಗಿಡಮೂಲಿಕೆಗಳನ್ನು ಸೇರಿಸಿ ನಾನು ತಯಾರಿಸುವ ಶುಗರ್ ಔಷಧಿ ಒಳ್ಳೆಯ ರೀಜರ್ಟ ಕೊಟ್ಟಿದೆ.
7) ಬೀಜದ ಚೂರ್ಣ ಸೇವನೆಯಿಂದ ಮೂತ್ರದ ತಡೆ ಮತ್ತು ಮೂತ್ರಪಿಂಡ ಶುದ್ಧಿ ಆಗುತ್ತದೆ.
8) ಇದರ ಚಕ್ಕೆಯ ಕಷಾಯದಲ್ಲಿ ಬಾಯಿ ಮುಕ್ಕಳಿಸುವುದರಿಂದ ಬಾಯಿಹುಣ್ಣು ಗುಣವಾಗುತ್ತದೆ.
9) ಇದರ ಹೂವು ಮತ್ತು ಜೀರಿಗೆ ಪುಡಿ ಸೇರಿಸಿ ನುಣ್ಣಗೆ ಅರೆದು ಆಗತಾನೆ ಕರೆದ ಹಾಲಿನಲ್ಲಿ ಕುಡಿಯುವುದರಿಂದ ಅತಿಯಾದ ರಕ್ತ ಸ್ರಾವ ಗುಣವಾಗುತ್ತದೆ.
10) ಚಕ್ಕೆಯ ಪುಡಿ ಅರ್ಧ ಚಮಚ ವನ್ನು ಹಾಲಿನ ಜೊತೆಗೆ ಸೇರಿಸಿ ಕುಡಿದು ಚಕ್ಕೆ ನೀರಿನಲ್ಲಿ ತೈದು ಹಚ್ಚಿದರೆ ಮುರಿದ ಮೂಳೆ ಬೇಗನೆ ಕೂಡುತ್ತದೆ.ವೇದನೆ ಶಾಂತವಾಗುತ್ತದೆ.
11) ಇದರ ಚಕ್ಕೆ,ಲೋಂದ್ರ,ಪುತ್ರಜೀವಿ……..ಇನ್ನಿತರ ಮೂಲಿಕೆ ಸೇರಿಸಿ ಕೆಂಪು ಸಕ್ಕರೆ ಮತ್ತು ಹಾಲು ಸೇರಿಸಿ ಮಕ್ಕಳಾಗಲು ನಾನು ಕೊಡುವ ಔಷಧಿ ಸೇವಿಸುವ ಅನೇಕ ತಾಯಂದಿರ ಮಡಿಲು ತುಂಬಿಸಿದೆ.

Klive Special Article ಬರಹ : ಸುಮನಾ ಮಳಲಗದ್ದೆ, ಪಾರಂಪರಿಕ ವೈದ್ಯೆ, ಸೊರಬ

CM Siddharamaih ಸಚಿವ ನಾಗೇಂದ್ರ ಅವರ ರಾಜಿನಾಮೆಯನ್ನ ಇನ್ನೂ ಕೇಳಿಲ್ಲ. ಎಸ್ ಐ ಟಿ ವರದಿಗೆ ಕಾಯುತ್ತಿದ್ದೇವೆ- ಸಿದ್ಧರಾಮಯ್ಯ

0

CM Siddharamaih ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಪ್ರಕರಣದಲ್ಲಿ ಸಚಿವ ನಾಗೇಂದ್ರ ಅವರ ರಾಜಿನಾಮೆಯನ್ನು ಕೇಳಿಲ್ಲ.
ಪ್ರಕರಣದ ಬಗ್ಗೆ ಈಗಾಗಲೇ ಎಸ್.ಐ.ಟಿ ತನಿಖೆ ನಡೆಸುತ್ತಿದೆ. ಪ್ರಾಥಮಿಕ ವರದಿ ಪಡೆದು ನಂತರ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಒಳ್ಳೆ ಮಳೆಯಾಗಿದ್ದು, ಮಳೆಗೆ ಸಂಬಂಧಿಸಿದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಈಗಾಗಲೇ ಸೂಚಿಸಲಾಗಿದೆ. ಮಳೆ ಜಾಸ್ತಿಯಾದಾಗ ಸಮಸ್ಯೆಗಳು ಉಂಟಾಗುತ್ತದೆ. ರಸ್ತೆ ಗುಂಡಿಗಳನ್ನು ಮುಚ್ಚಲು ಕ್ರಮ ತೆಗೆದುಕೊಳ್ಳಲಾಗಿದೆ.

CM Siddharamaih ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿ ಅವರು ಚುನಾವಣೋತ್ತರ ಸಮೀಕ್ಷೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ನಾವು ಕನಿಷ್ಠ 15 ಸ್ಥಾನಗಳನ್ನು ಗೆಲ್ಲುತ್ತೇವೆ, ಇದು ವಾಸ್ತವ. ಆದರೆ ಸಮೀಕ್ಷಾ ವರದಿ ಇದಕ್ಕೆ ವ್ಯತಿರಿಕ್ತವಾಗಿದೆ. ಈ ಸಮೀಕ್ಷೆಯನ್ನು ನಾವು ಸಂಪೂರ್ಣ ತಳ್ಳಿಹಾಕುತ್ತೇವೆ ಎಂದು ಸಿದ್ಧರಾಮಯ್ಯನವರು ತಮ್ಮ x ಖಾತೆಯ ಮೂಲಕ ಸಂದೇಶ ನೀಡಿದ್ದಾರೆ.