Wednesday, August 5, 2026
Wednesday, August 5, 2026
Home Blog Page 67

ಶಿವಮೊಗ್ಗದಿಂದ ಈರ್ವರು ವ್ಯಕ್ತಿಗಳ ನಾಪತ್ತೆ .ಸುಳಿವು ನೀಡಲು ದೊಡ್ಡಪೇಟೆ ಪೊಲೀಸ್ ಠಾಣೆ ಪ್ರಕಟಣೆ

0

ನಜೀರ್ ಅಹಮ್ಮದ್, 38 ವರ್ಷಗಳು ಶಿವಮೊಗ್ಗ ಇವರು 21-08-2025 ರಂದು ಸೂಳೆಬೈಲಿನ ಮನೆಯಿಂದ ಕೆಲಸಕ್ಕೆಂದು ಕಾರ್ಕಳಕ್ಕೆ ಹೋದವರು ಮನೆಗೆ ವಾಪಸ್ಸು ಬಂದಿರುವುದಿಲ್ಲ.
ಕಾಣೆಯಾದ ವ್ಯಕ್ತಿಯು ಸುಮಾರು 5 ಅಡಿ ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ಕೋಲು ಮುಖ ಹೊಂದಿದ್ದು ಕನ್ನಡ ಹಾಗೂ ಉರ್ದು ಭಾಷೆ ಮಾತನಾಡುತ್ತಾನೆ.

ಕಾಣೆಯಾದ ವೇಳೆ ನೀಲಿ ಬಣ್ಣದ ಪ್ಯಾಂಟ್ ಹಾಗೂ ಕಪ್ಪು ಬಣ್ಣದ ಜರ್ಕಿನ್ ಧರಿಸಿರಿರುತ್ತಾರೆ.
ರುಸ್ತುಂ ಪಾಷ, 31 ವರ್ಷ, ಶಿವಮೊಗ್ಗ ಇವರು ಅಡುಗೆ ಕೆಲಸಕ್ಕೆಂದು ದಿ: 12-12-2024 ರಂದು ಮನೆಯಿಂದ ಹೋದವರು ಮನೆಗೆ ವಾಪಸ್ಸಾಗಿರುವುದಿಲ್ಲ.
ಕಾಣೆಯಾದ ರುಸ್ತುಂ 5.5 ಅಡಿ ಎತ್ತರ, ಕೋಲು ಮುಖ, ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು, ಕನ್ನಡ ಹಾಗೂ ಹಿಂದಿ ಹಾಗೂ ಉರ್ದು ಭಾಷೆಯನ್ನು ಮಾತನಾಡುತ್ತಾರೆ. ಮನೆಯಿಂದ ಕಾಣೆಯಾದ ವೇಳೆ ಬಿಳಿ ಬಣ್ಣದ ಪ್ಯಾಂಟ್‌ನ್ನು ಧರಿಸಿರುತ್ತಾರೆ.

ಮೇಲ್ಕಂಡ ಕಾಣೆಯಾದ ವ್ಯಕ್ತಿಗಳ ಮಾಹಿತಿ ಸಿಕ್ಕಲ್ಲಿ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆ, ದೂ.ಸಂಖ್ಯೆ 08182-2611414, 9480803345 ಗೆ ಕರೆ ಮಾಡಿ ಮಾಹಿತಿ ನೀಡಬೇಕೆಂದು ಪ್ರಕಟಣೆ ತಿಳಿಸಿದೆ.

ಸನಾತನರ ಆಧ್ಯಾತ್ಮಿಕ ಮೌಲ್ಯಗಳನ್ನ ಇಂದಿನ ಪೀಳಿಗೆಗೂ ತಿಳಿಸುವುದು ಅವಶ್ಯ- ಡಾ.ಹೆಚ್.ಬಿ.ಮಂಜುನಾಥ್, ದಾವಣಗೆರೆ

0

ನಮ್ಮ ಸನಾತನರ ಅಧ್ಯಾತ್ಮಿಕ ಚಿಂತನಾ ಮೌಲ್ಯಗಳ ಅರಿವು ಇಂದಿನ ಹೊಸ ಪೀಳಿಗೆಗೂ ಅವಶ್ಯವಾಗಿದೆ ಎಂದು ಹಿರಿಯ ಪತ್ರಕರ್ತ, ಚಿಂತಕ ಡಾ. ಎಚ್ ಬಿ ಮಂಜುನಾಥ ಹೇಳಿದರು.

ಅವರು ನಿಟುವಳ್ಳಿಯ ಶ್ರೀ ಶಿವ ಚಿದಂಬರ ಸೇವಾ ಸಂಘ ಭಕ್ತ ಮಂಡಳಿ ವತಿಯಿಂದ ಏರ್ಪಾಡಾಗಿದ್ದ ಸಹಸ್ರ ಮೋದಕ ಶ್ರೀ ಮಹಾಗಣಪತಿ ಹೋಮದ ಕಾರ್ಯಕ್ರಮದಲ್ಲಿ ಆಧ್ಯಾತ್ಮಿಕ ಉಪನ್ಯಾಸ ನೀಡುತ್ತಾ ಸಾರ್ವಕಾಲಿಕವಾದ ಸರ್ವೋತ್ತಮವಾದ ಜೀವನ ಮೌಲ್ಯಗಳು ನಮ್ಮ ಪುರಾಣ ಮಹಾಕಾವ್ಯಾದಿಗಳಲ್ಲಿ ಕಥಾ ರೂಪವಾಗಿ ಸ್ವಾರಸ್ಯಕರವಾಗಿ ಹೇಳಲಾಗಿದೆ, ಕೇವಲ ಕಥಾ ಭಾಗವನ್ನಷ್ಟೇ ಓದಿ, ಕೇಳಿ, ನೋಡಿದರೆ ಸಾಲದು, ಅದರ ಹಿಂದಿರುವ ವಿಚಾರ ಮತ್ತು ಮೌಲ್ಯಗಳನ್ನು ಅರಿತುಕೊಂಡು ಮನೆಯಲ್ಲಿ ಪೋಷಕರು ಮಕ್ಕಳಿಗೆ ಸ್ವಾರಸ್ಯಕರವಾಗಿ ಹೇಳಬೇಕು ಎಂದ ಎಚ್ . ಬಿ. ಮಂಜುನಾಥ್ ಸನಾತನ ಎಂದರೆ ಅತ್ಯಂತ ಪ್ರಾಚೀನವಾದದ್ದು ಮತ್ತು ನಾಶವಾಗದೆ ಸದಾ ಕಾಲ ಇರುವಂತದ್ದು ಎಂದರ್ಥ, ಇದನ್ನು ಅರ್ಥಮಾಡಿಕೊಳ್ಳದೆ ಒಟ್ಟಾರೆ ತಿರಸ್ಕರಿಸಿದವರು ಕೊನೆಗೊಂದು ದಿನ ಇದಕ್ಕೇ ಶರಣಾದ ಉದಾಹರಣೆಗಳನ್ನು ಕಥಾ ರೂಪದಲ್ಲಿ ವಿವರಿಸಿದರು. ಹಾವೇರಿ ಜಿಲ್ಲೆ ಅಗಡಿ ಆನಂದವನದ ವೇದ ಪಾಠಶಾಲಾ ನಿವೃತ್ತ ಪ್ರಾಚಾರ್ಯ ಶ್ರೀ ಶಂಕರ ಭಟ್ಟರು ಮತ್ತು ಋತ್ವಿಜರು ಸಹಸ್ರ ಮೋದಕ ಶ್ರೀ ಮಹಾಗಣಪತಿ ಹೋಮದ ನೇತೃತ್ವ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಸೇರಿದ ಅಪಾರ ಭಕ್ತ ಸಮೂಹದ ಪರವಾಗಿ ಶ್ರೀ ಶಿವ ಚಿದಂಬರ ಸೇವಾ ಸಂಘದ ಉಮೇಶ ಕುಲಕರ್ಣಿ, ಸೋಮನಾಥ ಕುಲಕರ್ಣಿ, ವಿಜಯಕುಮಾರ್ ಜೋಶಿ, ವಿನಾಯಕ ಕುಲಕರ್ಣಿ, ರಾಘವೇಂದ್ರ ಆಚಾರ್ಯ ಮುಂತಾದವರು ಡಾ ಎಚ್ ಬಿ ಮಂಜುನಾಥರನ್ನು ಶ್ರೀ ಶಿವಚಿದಂಬರ ಫಲ ಮಾಲಿಕಾ ಸಹಿತ ಸನ್ಮಾನಿಸಿದರು.

Karnataka State Road Transport Corporation ಇನ್ನುಮುಂದೆ ” ಶಕ್ತಿ” ಭಾಗ್ಯ ಪಡೆಯಲು “ಶಕ್ತಿ ಸ್ಮಾರ್ಟ್ ಕಾರ್ಡ್ “- ಸಾರಿಗೆ ಸಚಿವ ಭೈರತಿ ಸುರೇಶ್

0

Karnataka State Road Transport Corporation ರಾಜ್ಯದ ನೂತನ ಸಾರಿಗೆ ಸಚಿವರಾಗಿ ಬೈರತಿ ಸುರೇಶ್ ಅವರು ವಿಧಾನಸೌಧದ ಕೊಠಡಿಯಲ್ಲಿ ಸೋಮವಾರ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು, ಹಿತೈಷಿಗಳು, ಅಭಿಮಾನಿಗಳು ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದರು.
ಬಳಿಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಚೇರಿಗೆ ಭೇಟಿ ನೀಡಿ ಕೆಎಸ್ಸಾರ್ಟಿಸಿ, ಬಿಎಂಟಿಸಿ, ಕೆಕೆಆರ್ ಟಿಸಿ ಮತ್ತು ವಾಯವ್ಯ ಸಾರಿಗೆ ನಿಗಮಗಳ ಮುಖ್ಯಸ್ಥರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಇಲಾಖೆಗಳ ಬಗ್ಗೆ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳ ಮೂಲಕ ಜನತೆಯ ಬದುಕು ಹಸನಾಗುವಂತೆ ಮಾಡಲಾಗಿದೆ. ಶಕ್ತಿ ಯೋಜನೆಯನ್ನು ಕೋಟ್ಯಂತರ ಮಹಿಳೆಯರು ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಈ ಯೋಜನೆ ಜಾರಿಯಾದ ಬಳಿಕ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.40 ರಷ್ಟು ಹೆಚ್ಚಳವಾಗಿದೆ ಎಂದರು.
ಶಕ್ತಿಗೆ ಬರಲಿದೆ ಸ್ಮಾರ್ಟ್ ಕಾರ್ಡ್ಈ ಶಕ್ತಿ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡುವ ಉದ್ದೇಶದಿಂದ ರಾಜ್ಯದ ಮಹಿಳೆಯರಿಗೆ ಸಾರಿಗೆ ನಿಗಮಗಳ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಸ್ಮಾರ್ಟ್ ಕಾರ್ಡ್ ಗಳನ್ನು ವಿತರಣೆ ಮಾಡಲು ನಿರ್ಧರಿಸಲಾಗಿದೆ ಎಂದು ಸಚಿವರು ತಿಳಿಸಿದರು.
ರಾಜ್ಯದ ಮೂರು ಕೋಟಿಗೂ ಅಧಿಕ ಜನರಿಗೆ ಈ ಸ್ಮಾರ್ಟ್ ಕಾರ್ಡನ್ನು ವಿತರಿಸುವ ನಿರೀಕ್ಷೆಯಿದೆ. ಮಹಿಳೆಯರಿಗೆ ಉಚಿತವಾಗಿ ಸ್ಮಾರ್ಟ್ ಕಾರ್ಡ್ ಸಿಗಲಿದ್ದು, ಪುರುಷರು ಮೆಟ್ರೋ ಕಾರ್ಡ್ ರೀತಿಯಲ್ಲಿ ಹಣ ಪಾವತಿಸಿ ಸ್ಮಾರ್ಟ್ ಕಾರ್ಡನ್ನು ಪಡೆದುಕೊಳ್ಳಬಹುದಾಗಿದೆ. ಈ ಕಾರ್ಡನ್ನು ಅದರಲ್ಲಿ ಹಣ ಖಾಲಿಯಾದ ನಂತರ ರೀಚಾರ್ಜ್ ಮಾಡಬೇಕಾಗುತ್ತದೆ.
ಸುಮಾರು 3 ಕೋಟಿ ಸ್ಮಾರ್ಟ್ ಕಾರ್ಡುಗಳನ್ನು ವಿತರಿಸುವ ಅಗತ್ಯವಿರುವುದರಿಂದ ಸ್ಮಾರ್ಟ್ ಕಾರ್ಡ್ ಸಿದ್ಧಪಡಿಸಲು ಜಾಗತಿಕ ಟೆಂಡರ್ ಕರೆದು ಸದ್ಯದಲ್ಲಿಯೇ ಸ್ಮಾರ್ಟ್ ಕಾರ್ಡ್ ಗಳನ್ನು ವಿತರಿಸುವ ಪ್ರಕ್ರಿಯೆಯನ್ನು ಪೈಲಟ್ ಯೋಜನೆಯಡಿ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
Karnataka State Road Transport Corporation 1000 ಬಸ್ ಖರೀದಿ ರಾಜ್ಯ ಸರ್ಕಾರದ ಅನುದಾನದಡಿಯಲ್ಲಿ 1000 ಸಾವಿರ ಬಸ್ ಗಳನ್ನು ಖರೀದಿಸಲಾಗುತ್ತದೆ. ಇದೇ ವೇಳೆ, ಕೇಂದ್ರ ಸರ್ಕಾರದ ಅನುದಾನದಲ್ಲಿ 4 ಸಾವಿರ ಎಲೆಕ್ಟ್ರಿಕ್ ಬಸ್ ಗಳನ್ನು ಖರೀದಿಸಲು ನಿರ್ಧರಿಸಲಾಗಿದೆ. ಹಂತಹಂತವಾಗಿ ಬಸ್ ಗಳನ್ನು ಖರೀದಿಸಿ ನಾಲ್ಕೂ ನಿಗಮಗಳಿಗೆ ಹಂಚಿಕೆ ಮಾಡಲಾಗುತ್ತದೆ ಎಂದು ಬೈರತಿ ಸುರೇಶ್ ಹೇಳಿದರು.
ನಿರ್ಭಯಕ್ಕೆ ಹೆಚ್ಚು ಆದ್ಯತೆ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಸುರಕ್ಷತೆಗೆ ಆದ್ಯತೆಯನ್ನು ನೀಡಲಾಗುತ್ತಿದೆ. ಖಾಸಗಿ ಪ್ರಯಾಣಿಕರ ವಾಹನಗಳು ಅಂದರೆ, ವಾಣಿಜ್ಯ ಕಾರುಗಳು, ಟ್ಯಾಕ್ಸಿಗಳು ಸೇರಿದಂತೆ ಇನ್ನಿತರೆ ವಾಹನಗಳಿಗೆ ವೆಹಿಕಲ್ ಲೊಕೇಶನ್ ಟ್ರ್ಯಾಕಿಂಗ್ ಸಿಸ್ಟಂ ಅಳವಡಿಕೆಯನ್ನು ಕ್ಷಿಪ್ರಗತಿಯಲ್ಲಿ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದುವರೆಗೆ 1 ಲಕ್ಷಕ್ಕೂ ಅಧಿಕ ವಾಹನಗಳಿಗೆ ಈ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಇನ್ನುಳಿದ 4-5 ಲಕ್ಷ ವಾಹನಗಳಿಗೆ ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಅಳವಡಿಸಬೇಕೆಂದು ಅಧಿಕಾರಿಗಳಿಗೆ ಆದೇಶ ನೀಡಿದರು.
ಸಭೆಯಲ್ಲಿ ಸಾರಿಗೆ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್, ಆಯುಕ್ತ ಸೆಲ್ವಮಣಿ ಸೇರಿದಂತೆ ನಾಲ್ಕೂ ನಿಗಮಗಳ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಲ್ಯಾಟರಲ್ ಎಂಟ್ರಿ ಮೂಲಕ ಡಿಪ್ಲೊಮಾ ಕೋರ್ಸುಗಳಿಗೆ ಅರ್ಜಿ ಆಹ್ವಾನ

0

2026-27 ನೇ ಸಾಲಿನ ವಿ.ಐ.ಎಸ್.ಎಸ್.ಜಿ. ಸರ್ಕಾರಿ ಪಾಲಿಟೆಕ್ನಿಕ್, ಭದ್ರಾವತಿ ಇಲ್ಲಿ ಲ್ಯಾಟರಲ್ ಎಂಟ್ರಿ ಮುಖಾಂತರ 2ನೇ ವರ್ಷ/3ನೇ ಸೆಮಿಸ್ಟರ್ ಡಿಪ್ಲೊಮಾ ಕೋರ್ಸ್ಗಳಿಗೆ ಪ್ರವೇಶ ಪಡೆಯಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ,
ಸಿವಿಲ್ ಇಂಜಿನಿಯರಿAಗ್, ಎಲೆಕ್ಟಿçಕಲ್ ಆಂಡ್ ಎಲೆಕ್ಟಾçನಿಕ್ ಇಂಜಿನಿಯರಿಂಗ್, ಮೆಕ್ಯಾನಿಕಲ್ ಇಂಜಿನಿಯರಿAಗ್ ಮತ್ತು ಮೆಟಲರ್ಜಿ ಇಂಜಿನಿಯರಿAಗ್ ವಿಭಾಗಗಳಿಗೆ 02 ವರ್ಷಗಳ ಐಟಿಐ/ದ್ವಿತೀಯ ಪಿಯುಸಿ(ವಿಜ್ಞಾನ/ದ್ವಿತೀಯ ಪಿಯುಸಿ(ತಾಂತ್ರಿಕ ವಿಷಯಗಳಲ್ಲಿ) ಉತ್ತೀರ್ಣರಾಗಿರುವ ಅರ್ಹ ಅಭ್ಯರ್ಥಿಗಳಿಗೆ ಲ್ಯಾಟರಲ್ ಎಂಟ್ರಿ ಮುಖಾಂತರ 2ನೇ ವರ್ಷ/3ನೇ ಸೆಮಿಸ್ಟರ್ ಡಿಪ್ಲೊಮಾ ಕೋರ್ಸ್ಗಳಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಈಗಾಗಲೇ ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು, ಜೂ. 20 ರೊಳಗಾಗಿ ಸಂಸ್ಥೆಗೆ ಖುದ್ದಾಗಿ ಬಂದು ಪ್ರವೇಶ ಅರ್ಜಿಯನ್ನು ಸಲ್ಲಿಸುವಂತೆ ಪ್ರಾಚಾರ್ಯರು ತಿಳಿಸಿರುತ್ತಾರೆ.
ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗೆ ಮೊ.ಸಂ: 8762717968/8861931539/ 7975041134/ 9986406941/ 7259344203/ 9731283868/ 8277044910 ಗಳನ್ನು ಸಂಪರ್ಕಿಸಬಹುದು.

ಡಾ.ದೀಪಕ್ ಕಿತ್ತೂರು ಸಾಧನೆ! ತಂಬಾಕು ಸೇವನೆಗೆ ತುತ್ತಾಗಿ ಬಾಯಿ ತೆರೆಯಲು ಅಸಾಧ್ಯವಾಗಿದ್ದ ರೋಗಿಗೆ ಚಿಕಿತ್ಸೆ ಫಲಕಾರಿ

0

ಕ್ಯಾನ್ಸರ್ ಪೂರ್ವ ಬೆಳವಣಿಗೆಯಿಂದಾಗಿ (precancerous growth) ಸರಿಸುಮಾರು 14 ತಿಂಗಳುಗಳಿಂದ ಬಾಯಿ ತೆರೆಯಲು ಸಾಧ್ಯವಾಗದೆ ನರಳುತ್ತಿದ್ದ 30 ವರ್ಷದ ಮಹಿಳೆಯೊಬ್ಬರಿಗೆ ಹೊಸ ಬದುಕು ಸಿಕ್ಕಿದೆ.

ತಲೆ ಮತ್ತು ಕುತ್ತಿಗೆ ಕ್ಯಾನ್ಸರ್ನ ಶಸ್ತ್ರವೈದ್ಯ, ಹಾಗೂ ಬಾಯಿ, ಮುಖ, ದವಡೆಯ ಶಸ್ತ್ರ ವೈದ್ಯ ಡಾ. ದೀಪಕ್ ಕಿತ್ತೂರು ನೇತೃತ್ವದಲ್ಲಿ, ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರ ತಂಡ ನಡೆಸಿದ ಸಕಾಲಿಕ ಶಸ್ತ್ರಚಿಕಿತ್ಸೆಯಿಂದಾಗಿ ಇದು ಸಾಧ್ಯವಾಗಿದೆ.

ತಂಬಾಕು ಮತ್ತು ಅಡಿಕೆ ಜಗಿಯುವ ಅಭ್ಯಾಸ ಹೊಂದಿದ್ದ ಈ ಮಹಿಳೆ ಕ್ರಮೇಣ ತನ್ನ ದವಡೆಯ ಚಲನೆಯನ್ನು ಕಳೆದುಕೊಂಡಿದ್ದರು. ಹಲವು ವರ್ಷಗಳ ಕಾಲ ನಿರಂತರವಾಗಿ ಈ ಮಿಶ್ರಣವನ್ನು ಸೇವಿಸಿದ್ದರಿಂದ ಬಾಯಿಯೊಳಗೆ ಕ್ಯಾನ್ಸರ್ ಪೂರ್ವ ಹಂತದ ಗಟ್ಟಿಯಾದ ಫೈಬ್ರೋಟಿಕ್ ಬ್ಯಾಂಡ್ಗಳು (ಮಾಂಸಖಂಡದ ಬಿಗಿಯಾದ ಪಟ್ಟಿಗಳು) ಬೆಳೆದಿದ್ದವು. ಇದರಿಂದಾಗಿ ಕನಿಷ್ಠ ಅರ್ಧ ಬೆರಳಿನಷ್ಟೂ ಬಾಯಿ ತೆರೆಯಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ.

ಸುಮಾರು 14 ತಿಂಗಳ ಹಿಂದೆ ಈ ಸಮಸ್ಯೆ ಕಾಣಿಸಿಕೊಂಡಿತಾದರೂ, ದವಡೆಯು ಶೀಘ್ರದಲ್ಲೇ ಸಹಜ ಸ್ಥಿತಿಗೆ ಮರಳಬಹುದೆಂಬ ನಂಬಿಕೆಯಿಂದ ಅವರು ಆರಂಭದಲ್ಲಿ ಚಿಕಿತ್ಸೆ ಪಡೆಯುವುದನ್ನು ಮುಂದೂಡಿದ್ದರು. ಆದರೆ ತೊಂದರೆ ಕಡಿಮೆಯಾಗಲಿಲ್ಲ. ಆಹಾರವನ್ನು ಜಗಿದು ತಿನ್ನಲು ಬಾಯಿ ತೆರೆಯಲಾಗದ ಸ್ಥಿತಿ ತಲುಪಿದಾಗ, ಅವರು ಸಂಪೂರ್ಣವಾಗಿ ದ್ರವ ಆಹಾರವನ್ನೇ ಅವಲಂಬಿಸಬೇಕಾಯಿತು. ಪೌಷ್ಟಿಕಾಂಶದ ಕೊರತೆಯಿಂದಾಗಿ ಅವರ ಆರೋಗ್ಯ ಕ್ಷೀಣಿಸತೊಡಗಿತು. ಅತಿಯಾದ ಸುಸ್ತು ಕಾಣಿಸಿಕೊಂಡಾಗ ಅವರು ತಮ್ಮ ಮನೆಯ ಸಮೀಪದ ಸ್ಥಳೀಯ ಕ್ಲಿನಿಕ್ ಹಾಗೂ ದಂತ ವೈದ್ಯರನ್ನು ಸಂಪರ್ಕಿಸಿದರು. ಅಲ್ಲಿನ ವೈದ್ಯರಿಗೆ ನಿಖರವಾದ ಸಮಸ್ಯೆ ಏನೆಂದು ಪತ್ತೆಹಚ್ಚಲಾಗದ ಕಾರಣ, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು.

ಡಾ. ಕಿತ್ತೂರು ಮತ್ತು ಅವರ ತಂಡ ನಡೆಸಿದ ಆರಂಭಿಕ ತಪಾಸಣೆಗಳಿಂದ, ಇದು ಉಲ್ಬಣಗೊಂಡಿದ್ದ ‘ಓರಲ್ ಸಬ್ಮ್ಯೂಕಸ್ ಫೈಬ್ರೋಸಿಸ್’ (OSMF – ಬಾಯಿಯೊಳಗೆ ಕಾಣಿಸಿಕೊಳ್ಳುವ ಮತ್ತು ಕ್ಯಾನ್ಸರ್ ಆಗಿ ಬದಲಾಗುವ ಸಾಧ್ಯತೆಯಿರುವ ದೀರ್ಘಕಾಲದ ಕಾಯಿಲೆ) ಎಂಬುದು ದೃಢಪಟ್ಟಿತು. ಬಾಯಿಯನ್ನು ಬಿಗಿಯಾಗಿ ಹಿಡಿದಿಟ್ಟುಕೊಂಡಿರುವ ರಬ್ಬರ್ ಬ್ಯಾಂಡ್ಗಳಂತೆ ಈ ಫೈಬ್ರೋಟಿಕ್ ಬ್ಯಾಂಡ್ಗಳು ಗಟ್ಟಿಯಾಗಿದ್ದ ಕಾರಣ, ವೈದ್ಯರ ತಂಡವು ‘ಲೋಕಲ್ ಫ್ಲಾಪ್ ರೀಕನ್ಸ್ಟ್ರಕ್ಷನ್’ನೊಂದಿಗೆ ‘ಬೈಲ್ಯಾಟರಲ್ ಫೈಬ್ರೋಟಮಿ’ ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಿತು.

ಈ ಬಗ್ಗೆ ಮಾತನಾಡಿದ ಡಾ. ದೀಪಕ್ ಕಿತ್ತೂರು, “ರೋಗಿಯು ಆಸ್ಪತ್ರೆಗೆ ಬಂದಾಗ, ಅವರಿಗೆ ಊಟ ಮಾಡಲು, ಮಾತನಾಡಲು ಅಥವಾ ಕನಿಷ್ಠ ಬಾಯಿಯ ಸ್ವಚ್ಛತೆ ಕಾಪಾಡಿಕೊಳ್ಳಲು ಕೂಡ ಸಾಧ್ಯವಾಗುತ್ತಿರಲಿಲ್ಲ. ಇದೆಲ್ಲವೂ ಅವರ ಜೀವನದ ಗುಣಮಟ್ಟದ ಮೇಲೆ ತೀವ್ರ ಪರಿಣಾಮ ಬೀರಿತ್ತು. ಶಸ್ತ್ರಚಿಕಿತ್ಸೆಯ ಸಮಯದಲ್ಲಿ, ದವಡೆಯ ಬಿಗಿತವನ್ನು ಸಡಿಲಗೊಳಿಸಲು ನಾವು ಆ ಬಿಗಿಯಾದ ಬ್ಯಾಂಡ್ಗಳನ್ನು ಬಹಳ ಎಚ್ಚರಿಕೆಯಿಂದ ಕತ್ತರಿಸಿದೆವು. ನಂತರ ಬಾಯಿಯ ಒಳಗಿನ ಗಾಯವು ಸರಿಯಾಗಿ ಗುಣಮುಖವಾಗಲು ಮತ್ತು ಮತ್ತೆ ಬಿಗಿತ ಬಾರದಂತೆ ತಡೆಯಲು ‘ಫ್ಲಾಪ್’ (ಆರೋಗ್ಯಕರ ಅಂಗಾಂಶದ ತುಣುಕು) ಬಳಸಿ ಆ ಜಾಗವನ್ನು ಮುಚ್ಚಿದೆವು” ಎಂದು ವಿವರಿಸಿದರು.

ಶಸ್ತ್ರಚಿಕಿತ್ಸೆಯು ಸಂಪೂರ್ಣ ಯಶಸ್ವಿಯಾಗಿದೆ. ರೋಗಿಯು ಇದೀಗ ಮೂರು ಬೆರಳುಗಳಿಗಿಂತ ಹೆಚ್ಚು ಅಗಲವಾಗಿ ಬಾಯಿ ತೆರೆಯಲು ಶಕ್ತರಾಗಿದ್ದಾರೆ. ಶಸ್ತ್ರಚಿಕಿತ್ಸೆಯ ಬಳಿಕ, ಗುಣಮುಖವಾಗುವ ಹಂತದಲ್ಲಿ ಬಾಯಿಯ ಸ್ನಾಯುಗಳ ನಮ್ಯತೆಯನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯವಾಗಿದ್ದರಿಂದ ರೋಗಿಯು ಫಿಸಿಯೋಥೆರಪಿ (ದವಡೆಯ ವ್ಯಾಯಾಮ) ಚಿಕಿತ್ಸೆಗೂ ಬದ್ಧರಾಗಿದ್ದಾರೆ.

ಓರಲ್ ಸಬ್ಮ್ಯೂಕಸ್ ಫೈಬ್ರೋಸಿಸ್ (OSMF) ಎಂಬುದು ಅಡಿಕೆ, ಗುಟ್ಕಾ ಮತ್ತು ಇತರ ತಂಬಾಕು ಉತ್ಪನ್ನಗಳನ್ನು ಜಗಿಯುವುದರಿಂದ ಬಾಯಿಯೊಳಗೆ ಉಂಟಾಗುವ ಗಾಯದ ಕಲೆಗಳ ದೀರ್ಘಕಾಲದ ಕಾಯಿಲೆಯಾಗಿದೆ ಎಂದು ಡಾ. ಕಿತ್ತೂರು ವಿವರಿಸಿದರು. “ಮಹಿಳೆಯರು ಸೇರಿದಂತೆ ಯುವಜನರಲ್ಲಿ ಈ ಕಾಯಿಲೆ ಹೆಚ್ಚಾಗಿ ಕಂಡುಬರುತ್ತಿದ್ದು, ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡದಿದ್ದರೆ ಕ್ಯಾನ್ಸರ್ ಆಗಿ ಬದಲಾಗುವ ಅಪಾಯವನ್ನು ಹೊಂದಿರುತ್ತದೆ. ಖಾರವಾದ ಆಹಾರವನ್ನು ತಿಂದಾಗ ಬಾಯಿಯಲ್ಲಿ ಉರಿಯುವುದು, ಬಾಯಿಯ ಒಳಗಿನ ಪದರವು ಬಿಳಿ ಅಥವಾ ಅಮೃತಶಿಲೆಯಂತೆ (mucosal blanching) ಕಾಣಿಸಿಕೊಳ್ಳುವುದು ಹಾಗೂ ಬಾಯಿ ತೆರೆಯುವಿಕೆ ಕಡಿಮೆಯಾಗುವುದು ಇದರ ಆರಂಭಿಕ ಲಕ್ಷಣಗಳಾಗಿವೆ. ಕಾಯಿಲೆ ಮುಂದುವರಿದ ಹಂತಗಳಲ್ಲಿ ದವಡೆ ಸಂಪೂರ್ಣವಾಗಿ ಲಾಕ್ ಆಗಿಬಿಡುತ್ತದೆ, ಇದರಿಂದ ರೋಗಿಗಳು ಪೌಷ್ಟಿಕಾಂಶದ ಕೊರತೆಯಿಂದ ಬಳಲುವಂತಾಗುತ್ತದೆ” ಎಂದು ಅವರು ಮಾಹಿತಿ ನೀಡಿದರು.

ಶಸ್ತ್ರಚಿಕಿತ್ಸೆಯ ಮಹತ್ವ

ಆರಂಭಿಕ ಹಂತದಲ್ಲಿ ಕೇವಲ ಔಷಧೋಪಚಾರಗಳಿಂದಲೇ ಇದನ್ನು ಗುಣಪಡಿಸಬಹುದಾದರೂ, ಮುಂದುವರಿದ ಹಂತದಲ್ಲಿರುವ OSMF ಕಾಯಿಲೆಗೆ ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ. ಬೈಲ್ಯಾಟರಲ್ ಫೈಬ್ರೋಟಮಿ ಮತ್ತು ಫ್ಲಾಪ್ ಕವರೇಜ್ನಂತಹ ಶಸ್ತ್ರಚಿಕಿತ್ಸೆ ಹಾಗೂ ಅದರ ನಂತರದ ಕಟ್ಟುನಿಟ್ಟಾದ ಫಿಸಿಯೋಥೆರಪಿಯು ಬಾಯಿ ತೆರೆಯುವಿಕೆಯನ್ನು ಮರುಸ್ಥಾಪಿಸುವಲ್ಲಿ ಮತ್ತು ಇಂತಹ ರೋಗಿಗಳ ಜೀವನಮಟ್ಟವನ್ನು ಸುಧಾರಿಸುವಲ್ಲಿ ಬಹುಮಟ್ಟಿಗೆ ಯಶಸ್ವಿಯಾಗಿದೆ.

ಈ ರೀತಿಯ ಕಾಯಿಲೆಗಳನ್ನು ವೈದ್ಯಕೀಯವಾಗಿ ಗುಣಪಡಿಸಬಹುದಾದರೂ, ಜನರಲ್ಲಿ ಮತ್ತು ವೈದ್ಯಕೀಯ ವಲಯದಲ್ಲಿ ಇದರ ಬಗ್ಗೆ ಜಾಗೃತಿಯ ಕೊರತೆಯಿದೆ ಎನ್ನುತ್ತಾರೆ ಡಾ. ಕಿತ್ತೂರು. ಆಸ್ಪತ್ರೆಯು ಕಳೆದ ಒಂದು ದಶಕದಿಂದ ಅತ್ಯುತ್ತಮ ಫಲಿತಾಂಶಗಳೊಂದಿಗೆ ಇಂತಹ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಮಾಡುತ್ತಾ ಬಂದಿದೆ. “ನಮ್ಮ ರೋಗಿಗಳ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರುವಂತಹ ವಿಶ್ವದರ್ಜೆಯ ಶಸ್ತ್ರಚಿಕಿತ್ಸಾ ಪರಿಣತಿಯನ್ನು ಒದಗಿಸುವುದೇ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಧ್ಯೇಯವಾಗಿದೆ” ಎಂದರು.

ಆಸ್ಪತ್ರೆಯ ಫೆಸಿಲಿಟಿ ಡೈರೆಕ್ಟರ್ ಡಾ. ಉತ್ತಮ ಶರ್ಮಾ ಮಾತನಾಡಿ, “ಸಕಾಲಿಕ ವೈದ್ಯಕೀಯ ನೆರವು ಕೇವಲ ರೋಗಿಗಳ ಆರೋಗ್ಯವನ್ನು ಮಾತ್ರವಲ್ಲ, ಬದಲಾಗಿ ಅವರ ಘನತೆ ಮತ್ತು ಜೀವನದ ಗುಣಮಟ್ಟವನ್ನೂ ಮರುಸ್ಥಾಪಿಸುತ್ತದೆ ಎಂಬುದಕ್ಕೆ ಅಡ್ವಾನ್ಸ್ಡ್ OSMF ನ ಈ ಪ್ರಕರಣವೇ ಒಂದು ಅತ್ಯುತ್ತಮ ಉದಾಹರಣೆ. ಇಂತಹ ಯಾವುದೇ ಸಮಸ್ಯೆಗಳಿಂದ ಬಳಲುತ್ತಿರುವವರು ಮುಕ್ತವಾಗಿ ಮುಂದೆ ಬಂದು ತಜ್ಞರಿಂದ ಸಕಾಲಿಕ ಚಿಕಿತ್ಸೆ ಪಡೆಯಬೇಕು ಎಂದು ನಾನು ವಿನಂತಿಸುತ್ತೇನೆ” ಎಂದರು.

Shivamogga Municipal Corporation ಅತಿವೃಷ್ಠಿ ತುರ್ತು ನಿರ್ವಹಣೆಗೆ ನಗರಪಾಲಿಕೆಯಿಂದ ಜನರ ಉಪಯೋಗಕ್ಕೆ ಸಹಾಯವಾಣಿ ಸೌಲಭ್ಯ.

0

Shivamogga Municipal Corporation ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾಗುವ ಸೂಕ್ಷ್ಮ ಪ್ರದೇಶ ಹಾಗೂ ಇತರೆ ಕಾರಣಗಳಿಂದ ಸಂಭವಿಸಬಹುದಾದ ಅನಾಹುತಗಳನ್ನು ತುರ್ತಾಗಿ ನಿರ್ವಹಿಸಲು ಹಾಗೂ ಮುಂದೆ ಸಂಭವಿಸಬಹುದಾದ ಪ್ರಾಣ/ಆಸ್ತಿ ಹಾನಿಯನ್ನು ತಪ್ಪಿಸಲು ಮುಂಜಾಗ್ರತಾ ಕ್ರಮವಹಿಸಲು ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ಸಿಬ್ಬಂದಿ ನೌಕರರನ್ನು ಒಳಗೊಂಡ ನಿರ್ವಹಣಾ ತಂಡಗಳನ್ನು ರಚಿಸಿ, 24 ಗಂಟೆ ಕಾರ್ಯನಿರ್ವಹಿಸುವ ಸಹಾಯವಾಣಿ ಕೇಂದ್ರವನ್ನು ಪ್ರಾರಂಭಿಸಲಾಗಿದೆ.
Shivamogga Municipal Corporation ಸಾರ್ವಜನಿಕರು ಯಾವುದೇ ಅನಾಹುತ ಅಥವಾ ತುರ್ತು ಸಹಾಯ ಬೇಕಾದಲ್ಲಿ ಪಾಲಿಕೆಯ ಸಹಾಯವಾಣಿ ಸಂಖ್ಯೆ 1800-4257677 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಶಿವಮೊಗ್ಗ ಮಹಾನಗರ ಪಾಲಿಕೆ ಉಪ ಆಯುಕ್ತರು (ಆಡಳಿತ) ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Prahlad Joshi ಸಾಗರದ ಎಲ್.ಬಿ.ಕಾಲೇಜಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಭೇಟಿ.

0

Prahlad Joshi ಮಾನ್ಯ ಕೇಂದ್ರ ಸರ್ಕಾರದ ಮಂತ್ರಿ ಗಳಾದ ಪ್ರಹ್ಲಾದ್ ಜೋಷಿ, ಲೋಕಸಭಾ ಸದಸ್ಯ ರಾದ,ಬಿ.ವೈ. ರಾಘವೇಂದ್ರ, ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಸಭಾ ಸದಸ್ಯ ರಾದ ಜ್ಞಾನೆಂದ್ರ, ವಿಧಾನ ಪರಿಷತ್ ಸದಸ್ಯ ರಾದ ಅರುಣ್, ಹಾಗೂ ಗಣ್ಯರು ಸಾಗರದ ಎಲ್.ಬಿ.ಕಾಲೇಜಿಗೆ ಆಗಮಿಸಿದ್ದರು.

ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ ಪರವಾಗಿ ಸಚಿವರಿಗೆ ಮನವಿ ನೀಡಿ ಸನ್ಮಾನಿಸಲಾಯಿತು.

Prahlad Joshi ಮಾನ್ಯ ಲಾಲ್ ಬಹದ್ದೂರ್ ಶಾಸ್ತ್ರಿಯವರು ಅಡಿಗಲ್ಲು ಸಮಾರಂಭ ದಲ್ಲಿ ಉಪಯೋಗಿಸಿ ದ ಬೆಳ್ಳಿಯ ಕರಣಿಯನ್ನು ಮುಟ್ಟಿ ಸಚಿವ ಪ್ರಹ್ಲಾದ ಜೋಷಿ ಅವರು ನಮಸ್ಕರಿಸಿ ಸಂಭ್ರಮಿಸಿದರು.

Pencak silat ಪೆಂಕಾಕ್ ಸಿಲಾಟ್ ಕ್ರೀಡಾಕೂಟದಲ್ಲಿ ಕು‌.ತ್ರಿಶಿಕಾ,ಮತ್ತು ಜಿ.ಭಾರ್ಗವ್ ಗೆ ಚಿನ್ನದ ಪದಕ.

0

Pencak silat ದಿನಾಂಕ 7 ಜೂನ್ 2026 ರಂದು ಡಾ, ಅಂಬೇಡ್ಕರ್ ಸ್ಟೇಡಿಯಂ ಬೆಂಗಳೂರು ಇಲ್ಲಿ ಕರ್ನಾಟಕ ಪೆಂಕಾಕ್ ಸಿಲಾಟ್ ಅಸೋಸಿಯೇಷನ್, ಹಾಗೂ ದೊಡ್ಡವಾಡ ಸ್ಪೋರ್ಟ್ಸ್ ಫೌಂಡೇಶನ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜನೆಗೊಂಡಿದ್ದ 12 ನೆಯ ಕರ್ನಾಟಕ ರಾಜ್ಯ ಪೆಂಕಾಕ್ ಸಿಲಾಟ್ ಕ್ರೀಡಾ ಕೂಟ 2026 ರಲ್ಲಿ ಮಕ್ಕಳ ವಿಭಾಗವಾದ 6 ವರ್ಷ ಮೇಲ್ಪಟ್ಟ 9 ವರ್ಷ್ದೊಳಗಿನ ಬಾಲಕಿಯರ ವಿಭಾಗದಲ್ಲಿ ಶ್ರೀ ಗೌರೀಶ ಭಾರ್ಗವ ಮತ್ತು ಮಾಧುರಿ ಇವರ ಪುತ್ರಿ ಕು.ತ್ರಿಶಿಕಾ. ಜಿ. ಭಾರ್ಗವ್ ಚಿನ್ನದ ಪದಕವನ್ನು Pencak silat ಪಡೆದು ಶಿವಮೊಗ್ಗ ಜಿಲ್ಲೆಗೆ ಕೀರ್ತಿ ತಂದಿರುತ್ತಾಳೆ. ಇವಳು ಶಿವಮೊಗ್ಗ ಜಿಲ್ಲಾ ಪೆಂಕಾಕ್ ಸಿಲಾಟ್ ಸ್ಪೋರ್ಟ್ಸ್ ಅಸೋಸಿಯೇಷನ್ (ರಿ ) ಶ್ರೀ. ಚಂದ್ರಕಾಂತ G ಭಟ್ ಇವರಲ್ಲಿ ತರಬೇತಿ ಪಡೆಯುತ್ತಿದ್ಧು , ಈ ಸಾಧನೆಗೆ ಸಂಸ್ಥೆಯು ಅಭಿನಂಧಿಸುತ್ತದೆ.

Chamber of Commerce Shivamogga ಕಾನೂನಿನ ಅರಿವಿನಿಂದ ತೆರಿಗೆ ಸಂಗ್ರಹದಲ್ಲಿ ಗಣನೀಯ ಹೆಚ್ಚಳವಾಗುತ್ತದೆ- ವಿ.ಕುಮಾರ್.

0

Chamber of Commerce Shivamogga ದಾಖಲೆ ಪ್ರಮಾಣದಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆ ಸರ್ಕಾರದ ಬೊಕ್ಕಸಕ್ಕೆ ಸಂಗ್ರಹವಾಗುತ್ತಿದ್ದು, ತೆರಿಗೆ ಸಲಹೆಗಾರರ ಪಾತ್ರ ಮಹತ್ತರವಾಗಿದೆ ಎಂದು ಶಿವಮೊಗ್ಗದ ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ (ಪ್ರಭಾರ ಜಾರಿ–ಆಡಳಿತ) ವಿ.ಕುಮಾರ್ ಹೇಳಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಪೇರೋ ಕಾಸ್ಟ್ ಸಭಾಂಗಣದಲ್ಲಿ ಜಿಲ್ಲಾ ಟ್ಯಾಕ್ಸ್ ಬಾರ್ ಅಸೋಸಿಯೇಷನ್ ಸಂಘದ ವತಿಯಿಂದ ಏರ್ಪಡಿಸಿದ್ದ ನೂತನ ಆದಾಯ ತೆರಿಗೆ ಕಾಯ್ದೆ 2025 ಕುರಿತು ವಿಚಾರ ವಿಮರ್ಶೆ ಕಾರ್ಯಾಗಾರದಲ್ಲಿ ಮಾತನಾಡಿದರು.

ತೆರಿಗೆ ಸಲಹೆಗಾರರು ತೆರಿಗೆ ಪಾವತಿದಾರರು ಮತ್ತು ಇಲಾಖೆ ಮಧ್ಯೆ ಪ್ರಮುಖ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುತ್ತಿದ್ದಾರೆ. ನೂತನ ಆದಾಯ ತೆರಿಗೆ ಕಾಯ್ದೆ ಬಗ್ಗೆ ಕಾರ್ಯಗಾರ ಏರ್ಪಡಿಸಿರುವುದು ತುಂಬಾ ಪ್ರಯೋಜನವಾಗಲಿದೆ. ಇದರಿಂದ ಕಾನೂನಿನ ಅರಿವು ಹೆಚ್ಚಾಗಿ ತೆರಿಗೆ ವ್ಯಾಪ್ತಿ ಮತ್ತು ತೆರಿಗೆ ಸಂಗ್ರಹವು ಸಹ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತದೆ ಎಂದು ತಿಳಿಸಿದರು.

ಆದಾಯ ತೆರಿಗೆ ಅಧಿಕಾರಿ ಕೆ.ಶ್ರೀನಿವಾಸ ರಾವ್ ಮಾತನಾಡಿ, ಆದಾಯ ತೆರಿಗೆ ಕಾಯ್ದೆಗಳು ಅನೇಕ ಬದಲಾವಣೆ ಆಗಿದ್ದು, ಹೊಸ ಕಾಯ್ದೆ ತುಂಬಾ ಸರಳವಾಗಿ ಸಾಮಾನ್ಯ ಕರದಾತನಿಗೂ ಅರ್ಥವಾಗುವಂತೆ ಇದೆ ಎಂದು ಹೇಳಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಮಾತನಾಡಿ, ಏಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ಕಾಯ್ದೆ-2025 ದೇಶದಲ್ಲಿ ಜಾರಿಗೆ ಬಂದಿದ್ದು, ಕರ್ನಾಟಕ ಆದಾಯ ತೆರಿಗೆ, ಸರಕು ಮತ್ತು ಸೇವಾ ತೆರಿಗೆ ಸಂಗ್ರಹಣೆಯಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಇದಕ್ಕೆ ಪ್ರಾಮಾಣಿಕ ತೆರಿಗೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಕಾರಣ ಎಂದು ತಿಳಿಸಿದರು.
ತೆರಿಗೆ ಸಂಗ್ರಹಣೆಯಲ್ಲಿ ದಾಖಲೆಯಾಗಲು ತೆರಿಗೆ ಸಲಹೆಗಾರರು ಹಾಗೂ ಸನ್ನದು ಲೆಕ್ಕ ಪರಿಶೋಧಕರ ಸಹಕಾರ ಮತ್ತು ಶ್ರಮ ಅಪಾರ. ಕಾರ್ಪೊರೇಟ್ ಟ್ಯಾಕ್ಸ್ 11 ಲಕ್ಷ ಕೋಟಿ ರೂ., ವೈಯುಕ್ತಿಕ ಆದಾಯ ತೆರಿಗೆ 14 ಲಕ್ಷ ಕೋಟಿ ರೂ.ಗೆ ಏರಿಕೆ ಆಗಿದೆೆ. ಇಂತಹ ಸೆಮಿನಾರ್ ಕಾರ್ಯಕ್ರಮಗಳಿಗೆ ಮುಂದೆಯೂ ಸಹ ಜಿಲ್ಲಾ ಟ್ಯಾಕ್ಸ್ ಬಾರ್ ಅಸೋಸಿಯೇಷನ್ ಜತೆಗೆ ಸಂಘವು ಕೈಜೋಡಿಸುತ್ತದೆ ಎಂದರು.

Chamber of Commerce Shivamogga ಜಿಲ್ಲಾ ಟ್ಯಾಕ್ಸ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ವಿ.ಮಂಜುನಾಥ ಮಾತನಾಡಿ, ಆದಾಯ ತೆರಿಗೆ 2025ಕ್ಕೆ ಆದ ತಿದ್ದುಪಡಿಗಳ ಬಗ್ಗೆ ಸೆಮಿನಾರ್ ಏರ್ಪಡಿಸಿರುವುದು ಸೂಕ್ತವಾಗಿದೆ. ಸರಕು ಮತ್ತು ಸೇವಾ ತೆರಿಗೆ ಕಾಯ್ದೆ ಬಗ್ಗೆ ಇದ್ದಂತ ಗೊಂದಲ, ಆಸ್ಪಷ್ಟತೆ ನಿವಾರಣೆ ಬಗ್ಗೆ ಸಂಘವು ಅನೇಕ ಸೆಮಿನಾರ್ ಏರ್ಪಡಿಸಿದೆ ಎಂದು ತಿಳಿಸಿದರು.

ಸನ್ನದು ಲೆಕ್ಕ ಪರಿಶೋಧಕ ಸಿಎ ತರುಣ್ ಕೊಠಾರಿ ರವರು ಹೊಸ ಆದಾಯ ತೆರಿಗೆ 2025ರ ಬಗ್ಗೆ ವಿವರವಾಗಿ ಉಪನ್ಯಾಸ ನೀಡಿ ಕೊನೆಯಲ್ಲಿ ತೆರಿಗೆ ಸಲಹೆಗಾರರ ಎಲ್ಲಾ ಸಂದೇಹಗಳನ್ನು ನಿವಾರಿಸಿ ಸಮರ್ಪಕವಾದ ಮಾಹಿತಿಯನ್ನು ನೀಡಿದರು

ಜಿಲ್ಲಾ ಟ್ಯಾಕ್ಸ್ ಬಾರ್ ಅಸೋಸಿಯೇಷನ್ ಕಾರ್ಯದರ್ಶಿ ಆರ್.ಮನೋಹರ, ತೆರಿಗೆ ಸಲಹಾ ಸಮಿತಿ ಅಧ್ಯಕ್ಷ ಎಸ್.ಬಿ.ಹನುಮಂತಪ್ಪ, ಖಜಾಂಚಿ ಸುರೇಶ್, ಸಹ ಕಾರ್ಯದರ್ಶಿ ಸುರೇಶ್ ಬಾಬು, ಗಂಗಾಧರ ಗೌಡ, ನಿರ್ದೇಶಕರುಗಳಾದ ಜಿ.ಕೇಶವ, ಶಶಿಧರ್, ಸೇತುರಾಮ್, ಜನಾರ್ಧನ್, ಹಿರಿಯ ತೆರಿಗೆ ಸಲಹೆಗಾರ ಮಧುಸೂದನ ಐತಾಳ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ್ ಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ನಿರ್ದೇಶಕ ಎಸ್.ಎಸ್.ಉದಯ್ ಕುಮಾರ್, ಅನೇಕ ತೆರಿಗೆ ಸಲಹೆಗಾರರು ಇದ್ದರು.

World Environment Day ಶಿವಮೊಗ್ಗ ಜೆಸಿಐ ವಿವೇಕ್ ಸಂಸ್ಥೆಯಿಂದವಿಭಿನ್ನವಾಗಿ ನಡೆದ ಪರಿಸರ ದಿನಾಚರಣೆ.

0

World Environment Day ಇತ್ತೀಚಿನ ದಿನಗಳಲ್ಲಿ ಜಾಗತಿಕ ಉಷ್ಣಾಂಶ ಹೆಚ್ಚಾಗುತ್ತಿದ್ದು, ಆಮ್ಲಜನಕದ ಕೊರತೆಯಾಗುತ್ತಿದೆ. ನಾವು ಪ್ರಕೃತಿಯನ್ನು ಹಾಳು ಮಾಡುತ್ತಿರುವುದರಿಂದ ಮುಂದಿನ ಪೀಳಿಗೆಗೆ ಭಾರಿ ತೊಂದರೆಯಾಗುವ ಆತಂಕ ಎದುರಾಗಿದೆ. ಈ ನಿಟ್ಟಿನಲ್ಲಿ ಕೇವಲ ಪರಿಸರ ದಿನಾಚರಣೆಯ ಒಂದು ದಿನ ಗಿಡ ನೆಟ್ಟು, ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರೆ ಸಾಲದು, ಪ್ರತಿಯೊಬ್ಬರೂ ಪ್ರತಿದಿನ ಕನಿಷ್ಠ ಅರ್ಧ ಗಂಟೆಯನ್ನಾದರೂ ಪರಿಸರ ಸಂರಕ್ಷಣೆಗಾಗಿ ಮುಡುಪಾಗಿಡಬೇಕು ಎಂದು ಜೆಸಿಐ ಶಿವಮೊಗ್ಗ ವಿವೇಕ್ ಸಂಸ್ಥೆ ಸಮಾಜಕ್ಕೆ ಕರೆ ನೀಡಿದೆ.

ನಗರದ ಹೆಮ್ಮೆಯ ಹಾಗೂ ಮಾದರಿ ಪಾರ್ಕ್ ಆದ ಸ್ವಾಮಿ ವಿವೇಕಾನಂದ ಪಾರ್ಕ್‌ನಲ್ಲಿ ಜೆಸಿಐ ಶಿವಮೊಗ್ಗ ವಿವೇಕ್ ಘಟಕದ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಅತ್ಯಂತ ವಿನೂತನ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಪುಟಾಣಿಗಳಿಂದ ಹಸಿರು ಕ್ರಾಂತಿ ಕಾರ್ಯಕ್ರಮದಲ್ಲಿ ಅಶ್ವತ್ ನಗರ ಕಿಡ್ಸ್ ಸ್ಕೂಲ್‌ನ ಪುಟಾಣಿ ಮಕ್ಕಳು ಹಸಿರು ಬಣ್ಣದ ಉಡುಪನ್ನು ಧರಿಸಿ ಬಂದು ಪಾರ್ಕಿನ ಸೌಂದರ್ಯವನ್ನು ಇಮ್ಮಡಿಗೊಳಿಸಿದರು. ಮಕ್ಕಳು ಪಾರ್ಕ್‌ನಲ್ಲಿ ಕುಣಿದು ಕುಪ್ಪಳಿಸುತ್ತಾ, ತಮ್ಮ ಮುದ್ದಾದ ಕೈಗಳಿಂದ ಮಣ್ಣನ್ನು ಮುಟ್ಟಿ ಸುಂದರವಾದ ಹೂವಿನ ಗಿಡಗಳನ್ನು ನೆಡುವ ಮೂಲಕ ಪರಿಸರ ಪ್ರೇಮ ಮೆರೆದರು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ಪರಿಸರ ಸಂರಕ್ಷಣೆಯ ಸಣ್ಣಪುಟ್ಟ ಘೋಷಣೆಗಳನ್ನು (ಸ್ಲೋಗನ್) ಹೇಳಿಕೊಡಲಾಯಿತು.

ಮಕ್ಕಳು ಬರುವ ಮುನ್ನವೇ ಗಿಡ ನೆಡಲು ಅಗತ್ಯವಿದ್ದ ಸಣ್ಣಪುಟ್ಟ ಕೊಂಡಗಳನ್ನು (ಗುಂಡಿಗಳನ್ನು) ಸಿದ್ಧಪಡಿಸಿ, ಮಕ್ಕಳನ್ನು ಹೆಮ್ಮೆಯಿಂದ ಬರಮಾಡಿಕೊಳ್ಳಲು ಘಟಕದ ಪರಿಸರ ಸ್ನೇಹಿ ಸದಸ್ಯರಾದ ಜೆಸಿ ಸತೀಶ್ ಕುಮಾರ್.ಎಸ್.ಎಸ್ ಹಾಗೂ ಜೆಸಿ ಜಗದೀಶ್ (ಕಾಟನ್ ಜಾವ ವರ್ಲ್ಡ್) ಪ್ರೀತಿಯಿಂದ ಶ್ರಮಿಸಿದರು.

ಈ ನಿಟ್ಟಿನಲ್ಲಿ ಮಾತನಾಡಿದ ಸಂಸ್ಥೆಯ ಪೂರ್ವಾಧ್ಯಕ್ಷರು (ಪಾಸ್ಟ್ ಪ್ರೆಸಿಡೆಂಟ್), “ಮಕ್ಕಳ ಹುಟ್ಟುಹಬ್ಬದ ಸಂದರ್ಭದಲ್ಲಿ ಕೇಕ್ ಕತ್ತರಿಸಿ ಆಚರಿಸುವ ಬದಲು, ಆ ದಿನವನ್ನು ಒಂದು ಸಣ್ಣ ಹೂವಿನ ಗಿಡ ಅಥವಾ ಯಾವುದಾದರೂ ಉಪಯುಕ್ತ ಗಿಡ ನೆಡುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಬೇಕು. ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಬಾಲ್ಯದಲ್ಲಿಯೇ ಪರಿಸರದ ಅರಿವು ಮೂಡಿಸುವುದು ಅತ್ಯಂತ ಅಗತ್ಯ ಎಂದು ಮಕ್ಕಳಿಗೆ ಹಾಗೂ ಶಿಕ್ಷಕ ವರ್ಗದವರಿಗೆ ತಿಳಿಹೇಳಿದರು.

World Environment Day ಹಿರಿಯರಾದ ನಾವೆಲ್ಲರೂ ಇಂದಿನಿಂದಲೇ ಮನೆ ಹಾಗೂ ಶಾಲೆಗಳಲ್ಲಿ ಮಕ್ಕಳಿಗೆ ದಿನಕ್ಕೆ ಕನಿಷ್ಠ ಅರ್ಧ ಗಂಟೆಯಾದರೂ ಪರಿಸರದ ಅರಿವು ಮೂಡಿಸುವ ಸಂಕಲ್ಪ ತೊಡಬೇಕು ಎಂದು ಅವರು ಮನವಿ ಮಾಡಿದರು.

ಕಾರ್ಯಕ್ರಮದ ನೇತೃತ್ವವನ್ನು ಜೆಸಿಐ ಶಿವಮೊಗ್ಗ ವಿವೇಕ್ ಘಟಕದ 2026ರ ಪ್ರಸಕ್ತ ಸಾಲಿನ ಅಧ್ಯಕ್ಷರಾದ ಜೆಸಿ ವಿಜಯಲಕ್ಷ್ಮಿ ಯು. ಕದಂಬ ಅವರು ವಹಿಸಿ, ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುನ್ನಡೆಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶುಭಂ ಹೋಟೆಲ್ ಮಾಲೀಕರು ಹಾಗೂ ಝೆಡ್.ವಿ.ಸಿ. ಜೆಸಿ ಉದಯ್ ಕದಂಬ ಅವರು ಆಗಮಿಸಿದ್ದ ಎಲ್ಲಾ ಪುಟಾಣಿ ಮಕ್ಕಳಿಗೆ ಪ್ರೀತಿಯಿಂದ ಸಿಹಿತಿಂಡಿ ಹಾಗೂ ಹಣ್ಣುಹಂಪಲುಗಳನ್ನು ವಿತರಿಸಿದರು.

ಕಾರ್ಯಕ್ರಮದಲ್ಲಿ ಅಶ್ವತ್ ನಗರ ಕಿಡ್ಸ್ ಸ್ಕೂಲ್‌ನ ಮುಖ್ಯಸ್ಥರಾದ ಅಕ್ಷತಾ ಮೇಡಂ ಎಲ್ಲಾ ಶಿಕ್ಷಕ ವೃಂದದವರು, ಜೆಸಿಐ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಹಾಗೂ ಸ್ಥಳೀಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪರಿಸರ ಸಂರಕ್ಷಣೆಯ ಈ ಮಹತ್ಕಾರ್ಯಕ್ಕೆ ಸಾಕ್ಷಿಯಾದರು