Wednesday, August 5, 2026
Wednesday, August 5, 2026
Home Blog Page 66

ಸೊರಬದ ಕುಂಟಗಳಲೆ ಅರಣ್ಯದಲ್ಲಿ ಚಿರತೆ ಸಾವು: ವಿದ್ಯುತ್ ಹರಿಸಿ ಕೊಂದಿರುವ ಶಂಕೆ

0

ಸೊರಬ ತಾಲ್ಲೂಕು ಚಂದ್ರಗುತ್ತಿ ಹೋಬಳಿ ಕುಂಟಗಳಲೆ ಅರಣ್ಯದಲ್ಲಿ ಸುಮಾರು ೧೦ ವರ್ಷ ಪ್ರಾಯದ ಚಿರತೆಯೊಂದು ಅಸು ನೀಗಿದೆ. ಬಹುಷಃ ವಿದ್ಯುತ್ ಹರಿಸಿ ಕೊಲ್ಲಲಾಗಿದೆ ಎಂದು ಆರೋಪ ಕೇಳಿ ಬರುತ್ತಿದ್ದು ಅರಣ್ಯ ಇಲಾಖೆಯವರು ಸ್ಥಳಕ್ಕೆ ಧಾವಿಸಿ ತನಿಖೆ ಕೈಗೊಂಡಿದ್ದಾರೆ. ಈ ಭಾಗದಲ್ಲಿ ಈ ಹಿಂದೆ ಕಾಡುಕೋಣಗಳ, ಕಡವೆ, ಜಿಂಕೆಗಳ ಸಾವು ಕಾಣಿಸಿದ್ದು ಎಲ್ಲವನ್ನೂ ವಿದ್ಯುತ್ ಹರಿಸಿ ಕೊಲ್ಲಲಾಗಿದೆ ಎಂದು ಸ್ಥಳೀಯರು ಅನುಮಾನಿಸಿದ್ದಾರೆ. ಕಾಡು ಪ್ರಾಣಿಗಳನ್ನು ಕೊಂದು ಮಾರುವ ಜಾಲವೊಂದು ಈ ಭಾಗದಲ್ಲಿದ್ದು ಪ್ರಭಾವಿಗಳಿಂದಾಗಿ ಬೆಳಕಿಗೆ ಬರುತ್ತಿಲ್ಲ. ಅರಣ್ಯ ಇಲಾಖೆಯವರಿಗೆ ತಿಳಿದಿದ್ದರೂ ಹತಾಶೆಯಿಂದ ಕೈಚೆಲ್ಲಿಕುಳಿತಿದ್ದಾರೆಯೆ, ಪ್ರಾಣಿ ಹತ್ಯೆಗೆ ಕಡಿವಾಣ ಇಲ್ಲವೇ ಎಂಬ ಆತಂಕ ಸ್ಥಳೀಯರದ್ದಾಗಿದೆ.

DC Shivamogga ಜೂನ್ 15 ರಿಂದ ಮಳೆಗಾಲ ಪೂರ್ಣದವರೆಗೆ ಆಗುಂಬೆ ಘಾಟಿಯಲ್ಲಿ ಭಾರೀ ವಾಹನ ಸಂಚಾರಕ್ಕೆ ನಿರ್ಬಂಧ- ಡೀಸಿ ಪ್ರಭುಲಿಂಗ ಕವಳಿಕಟ್ಟಿ

0

DC Shivamogga ರಾಷ್ಟ್ರೀಯ ಹೆದ್ದಾರಿ169ಎ ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ (ಜಲ್ಲಿ ಮತ್ತು ಸರಕು ಸಾಗಾಣೆ ತುಂಬಿದ ವಾಹನಗಳ) ಸಂಚಾರವನ್ನು ದಿ: 15/06/2026 ರಿಂದ ಮಳೆಗಾಲ ಮುಗಿಯುವವರೆಗೂ ನಿಷೇಧಿಸಿ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ ನೀಡಿರುತ್ತಾರೆ.
ಶಿವಮೊಗ್ಗದಿಂದ ಹೊಸನಗರ-ಮಾಸ್ತಿಕಟ್ಟೆ ಮಾರ್ಗವಾಗಿ ಕುಂದಾಪುರ ಮತ್ತು ಉಡುಪಿಗೆ ಸಂಪರ್ಕ ಕಲ್ಪಿಸುವ ಹುಲಿಕಲ್ ಘಾಟಿಯಲ್ಲಿ ಭೂಕುಸಿತ ಸಂಭವಿಸಿದ ನಂತರ ತಾತ್ಕಾಲಿಕ ರಕ್ಷಣಾತ್ಮಕ ಕಾಮಗಾರಿ ಪೂರ್ಣಗೊಳ್ಳದಿರುವುದರಿಂದ ರಾಷ್ಟ್ರೀಯ ಹೆದ್ದಾರಿ 169ಎ ತೀರ್ಥಹಳ್ಳಿ-ಮಲ್ಪೆ-ಉಡುಪಿ ರಸ್ತೆಯ ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ಹೆಚ್ಚಿನ ಓಡಾಟವಿದ್ದು, ಮುಂದಿನ ದಿನಗಳಲ್ಲಿಯೂ ಇದು ಮುಂದುವರಿದಲ್ಲಿ ಅಲ್ಲಲ್ಲಿ ರಸ್ತೆಯ ಬದಿಯ ಭೂಕುಸಿತ ಆಗುವ, ಅಫಘಾತವಾಗುವ ಮತ್ತು ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುವ ಸಂಭವ ಇರುತ್ತದೆ. ಹಾಗೂ ಅರೋಗ್ಯ ಸಮಸ್ಯೆಯ ಕುರಿತು ಮಣಿಪಾಲ್, ಉಡುಪಿ, ಮಂಗಳೂರಿಗೆ ಹೋಗುವ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಮತ್ತು ಹಾವೇರಿ ಜಿಲ್ಲೆಯ ನಾಗರಿಕರಿಗೆ ಇರುವ ಸಂಪರ್ಕ ಬಂದ್ ಆದರೆ ನಾಲ್ಕು ಜಿಲ್ಲೆಯ ನಾಗರೀಕರಿಗೆ ತುಂಬಾ ತೊಂದರೆಯಾಗುವ ಹಿನ್ನಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ.
DC Shivamogga ಪರ್ಯಾಯ ಸಂಚಾರ ಮಾರ್ಗಗಳಾದ ತೀರ್ಥಹಳ್ಳಿ –ಉಡುಪಿ ಕಡೆಗೆ ಹೋಗುವ ವಾಹನಗಳು ತೀರ್ಥಹಳ್ಳಿ-ನಗರ-ನಾಗೋಡಿ-ಕೊಲ್ಲೂರು-ಕುಂದಾಪುರ-ಉಡುಪಿ ಮತ್ತು ತೀರ್ಥಹಳ್ಳಿ-ಶೃಂಗೇರಿ-ಕೆರೆಕಟ್ಟೆ-ಬಜಗೋಳಿ-ಕಾರ್ಕಳ-ಉಡುಪಿ ಮಾರ್ಗವಾಗಿ ಸಂಚರಿಸುವುದು. ಉಡುಪಿ- ತೀರ್ಥಹಳ್ಳಿ ಕಡೆಗೆ ಹೋಗುವ ವಾಹನಗಳು ಉಡುಪಿ-ಕುಂದಾಪುರ-ಕೊಲ್ಲೂರು-ನಾಗೋಡಿ-ನಗರ-ತೀರ್ಥಹಳ್ಳಿ ಮತ್ತು ಕಾರ್ಕಳ-ಬಜಗೋಳಿ-ಕೆರೆಕಟ್ಟೆ-ಶೃಂಗೇರಿ- ತೀರ್ಥಹಳ್ಳಿ ಮಾರ್ಗವಾಗಿ ಸಂಚರಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

ವಾಜಪೇಯಿ ಬಡಾವಣೆಯಿಂದ ರಿಂಗ್ ರಸ್ತೆ ನಿರ್ಮಾಣ- ಹೆಚ್.ಎಸ್.ಸುಂದರೇಶ್

0

ಸೂಡಾ ವತಿಯಿಂದ ವಾಜಪೇಯಿ ಬಡಾವಣೆಯಿಂದ ರೂ.3.70 ಕೋಟಿ ವೆಚ್ಚದಲ್ಲಿ ಸುಮಾರು 1200ಮೀಟರ್ ಉದ್ದದ ರಿಂಗ್ ರಸ್ತೆ ನಿರ್ಮಾಣ ಮಾಡಲಾಗುತ್ತಿದ್ದು ಗೆಜ್ಜೇನಹಳ್ಳಿ-ಸೋಮಿನಕೊಪ್ಪ ರಸ್ತೆಗೆ ಲಿಂಕ್ ಮಾಡಲಾಗುವುದು ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ತಿಳಿಸಿದರು.
ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ ಗುರುವಾರ 60.00 ಮೀ ಅಗಲದ ಮಹಾಯೋಜನೆಯ ಹೊರ ವರ್ತುಲ ರಸ್ತೆ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ವಾಜಪೇಯಿ ಬಡಾವಣೆಯ ರಿಂಗ್ ರಸ್ತೆ ಅಭಿವೃದ್ದಿ ಕಾಮಗಾರಿಗೆ ಸುಮಾರು ರೂ.5 ಕೋಟಿ ಮೊತ್ತದ ಟೆಂಡರ್ ಕರೆಯಲಾಗಿದ್ದು ರೂ.3.70 ಕೋಟಿ ಕರಾರು ಮೊತ್ತದಲ್ಲಿ ಕಾಮಗಾರಿ ಆರಂಭವಾಗಲಿದೆ. 34 ಕಿ.ಮೀ. ರಿಂಗ್ ರಸ್ತೆ ನಿರ್ಮಾಣಕ್ಕೆ ಮಾಸ್ಟರ್ ಪ್ಲಾನ್ ಸಿದ್ದಪಡಿಸಲಾಗಿದ್ದು, ಹಂತ ಹಂತವಾಗಿ ರಸ್ತೆ ನಿರ್ಮಾಣ ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು.
ಅಪಾರ್ಟ್ಮೆಂಟ್ ನಿರ್ಮಾಣ : ನಗರ ವೇಗವಾಗಿ ಬೆಳೆಯುತ್ತಿದ್ದು, ನಿವೇಶನ, ಜಾಗಗಳು ದುಬಾರಿಯಾಗಿವೆ. ಸಾಮಾನ್ಯ ಜನರಿಗೆ ನಿವೇಶನ ಕೊಂಡು ಮನೆ ಕಟ್ಟಿಸುವುದು ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಊರಗಡೂರಿನಲ್ಲಿ 4 ಎಕರೆ ಜಾಗದಲ್ಲಿ 1, 2 ಮತ್ತು 3 ಬಿಹೆಚ್‌ಕೆಯ ಸುಮಾರು 1000 ಫ್ಲಾಟ್‌ಗಳನ್ನು ನಿರ್ಮಿಸುವ ಯೋಜನೆಯು ಆಡಳಿತಾತ್ಮಕ ಮಂಜೂರಾತಿಗೆ ಹೋಗಿದ್ದು ಇನ್ನು 15 ರಿಂದ 20 ದಿನಗಳಲ್ಲಿ ಮಂಜೂರಾತಿ ದೊರೆತು ಕಾಮಗಾರಿ ಪ್ರಕ್ರಿಯೆ ಆರಂಭಿಸಲಾಗುವುದು.
ಹಾಗೂ ಜೆಹೆಚ್ ಪಟೇಲ್ ಬಡಾವಣೆಯ ಒಂದೂಕಾಲು ಎಕರೆಯಲ್ಲಿ ಅಪಾರ್ಟ್ಮೆಂಟ್ ನಿರ್ಮಿಸುವ ಯೋಜನೆಯಿದ್ದು ಖಾಸಗಿ ಅಪಾರ್ಟ್ಮೆಂಟ್‌ನಲ್ಲಿರುAವತೆ ಸ್ವಿಮ್ಮಿಂಗ್ ಪೂಲ್, ಪಾರ್ಕ್, ಕ್ಲಬ್ ಹೌಸ್, ಸಭಾಂಗಣ ಇತರೆ ಎಲ್ಲ ಸೌಲಭ್ಯ ಹೊಂದಿರುವ ಅಪಾರ್ಟ್ಮೆಂಟ್‌ಗಳನ್ನು ನಿರ್ಮಿಸಲಾಗುವುದು.
ಮಾಲ್‌ಗಳ ನಿರ್ಮಾಣ : ಸಾಮಾನ್ಯ ಜನರ ಅನುಕೂಲಕ್ಕಾಗಿ ಗೋಪಾಲಗೌಡ ಬಡಾವಣೆಯ ವಿವೇಕಾನಂದ ಬಡಾವಣೆಯಲ್ಲಿ ಒಂದೂಕಾಲು ಎಕರೆ ಜಾಗದಲ್ಲಿ 01 ಮಾಲ್ ಮತ್ತು ಸೋಮಿನಕೊಪ್ಪ 200 ಮೀ ರಸ್ತೆಯಲ್ಲಿ 01 ಒಟ್ಟು 02 ಮಾಲ್‌ಗಳನ್ನು ನಿರ್ಮಿಸುವ ಉದ್ದೇಶವಿದೆ. ಹಾಗೂ ವಾಜಪೇಯಿ ಲೇಔಟಿನಲ್ಲಿ ಪ್ರಾಧಿಕಾರದ ಕಚೇರಿ ನಿರ್ಮಾಣ ಮಾಡುವ ಯೋಜನೆಯಿದೆ ಎಂದರು.
ಶಿವಮೊಗ್ಗ ನಗರವನ್ನು ಸುಂದರಗೊಳಿಸಲು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಸೂಡಾ ವತಿಯಿಂದ ಪಾರ್ಕುಗಳ ಅಭಿವೃದ್ದಿ, ಕೆರೆಗಳ ಅಭಿವೃದ್ದಿ, ಅಪಾರ್ಟ್ಮೆಂಟ್ ನಿರ್ಮಾಣ ಹೀಗೆ ಹಲವಾರು ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು, ಪಾರ್ಕುಗಳಲ್ಲಿ, ರಸ್ತೆ ಬದಿಗಳಲ್ಲಿ ಗಿಡಗಳನ್ನು ನೆಡಲು ಒತ್ತು ನೀಡಲಾಗುತ್ತಿದೆ ಎಂದರು.
ನಗರದ ನಾಗರೀಕರು, ಹಿರಿಯ ನಾಗರೀಕರು, ಮಹಿಳೆಯರು ಮತ್ತು ಮಕ್ಕಳ ಆರೋಗ್ಯದ ದೃಷ್ಟಿಯಿಂದ 100 ಪಾರ್ಕುಗಳನ್ನು ಅಭಿವೃದ್ದಿಪಡಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಈಗಾಗಲೇ ವಾಕಿಂಗ್ ಪಾಥ್, ಲೈಟಿಂಗ್, ಗಿಡ ನೆಡಲು ಸ್ಥಳಾವಕಾಶ ಸೇರಿದಂತೆ ಸಾರ್ವಜನಿಕರ ಬೇಡಿಕೆಗೆ ತಕ್ಕಂತೆ 50 ಪಾರ್ಕ್ಗಳನ್ನು ಅಭಿವೃದ್ದಿಪಡಿಸಲಾಗಿದೆ ಎಂದು ತಿಳಿಸಿದರು.
ಶಾಸಕರಾದ ಎಸ್ ಎನ್ ಚನ್ನಬಸಪ್ಪ ಮಾತನಾಡಿ, ಸೂಡಾ ವತಿಯಿಂದ ಜನ ಸಾಮಾನ್ಯರಿಗೆ ಕಡಿಮೆ ಬೆಲೆಯಲ್ಲಿ ನಿವೇಶನ ಹಂಚಿಕೆ ಮಾಡುವ ಆಗುತ್ತಿದೆ. ಜೊತೆಗೆ ಮೂಲಭೂತ ಸೌಕರ್ಯಗಳ ಅಭಿವೃದ್ದಿ, ಕೆರೆಗಳು, ಪಾರ್ಕ್ಗಳ ಅಭಿವೃದ್ದಿ ಕಾರ್ಯವೂ ಆಗುತ್ತಿದೆ. ರಾಜ್ಯ ಸರ್ಕಾರವು ನಗರಾಭಿವೃದ್ದಿ ಕಾಮಗಾರಿಗಳಿಗೆ ಹೆಚ್ಚಿನ ಒತ್ತು ನೀಡಬೇಕೆಂದು ಈ ಮೂಲಕ ಮನವಿ ಮಾಡಿದರು.
ನಗರದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ 12 ಎಕರೆ ಜಾಗ ಮಂಜೂರಾಗಿದ್ದು, ವೇಗವಾಗಿ ಕಾಮಗಾರಿ ನಡೆಯಬೇಕಿದೆ .ಜೊತೆಗೆ ಫುಟ್‌ಬಾಲ್ ಕ್ರೀಡಾಂಗಣ ಮಂಜೂರಾತಿ ಬಗ್ಗೆಯೂ ಕ್ರೀಡಾ ಸಚಿವರ ಬಳಿ ಮಾತನಾಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸೂಡಾ ಸದಸ್ಯರಾದ ಪ್ರವೀಣ್, ಸೂಡಾ ಆಯುಕ್ತರಾದ ಬಿ.ಆರ್ ಮಂಜುನಾಥ್, ಎಇ ಗಂಗಾಧರ್, ಎಇಇ ಬಸವರಾಜಪ್ಪ, ಟಿಪಿಎಂ ಅಭಿಲಾಷ್, ಸ್ಥಳೀಯ ನಿವಾಸಿಗಳು, ಸಾರ್ವಜನಿಕರು ಹಾಜರಿದ್ದರು.

ಲ್ಯಾಟರಲ್ ಎಂಟ್ರಿ ಮೂಲಕ ಡಿಪ್ಲೊಮಾ ಕೋರ್ಸುಗಳಿಗೆ ಅರ್ಜಿ ಆಹ್ವಾನ

0

2026-27 ನೇ ಸಾಲಿನ ವಿ.ಐ.ಎಸ್.ಎಸ್.ಜಿ. ಸರ್ಕಾರಿ ಪಾಲಿಟೆಕ್ನಿಕ್, ಭದ್ರಾವತಿ ಇಲ್ಲಿ ಲ್ಯಾಟರಲ್ ಎಂಟ್ರಿ ಮುಖಾಂತರ 2ನೇ ವರ್ಷ/3ನೇ ಸೆಮಿಸ್ಟರ್ ಡಿಪ್ಲೊಮಾ ಕೋರ್ಸ್ಗಳಿಗೆ ಪ್ರವೇಶ ಪಡೆಯಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ,
ಸಿವಿಲ್ ಇಂಜಿನಿಯರಿಂಗ್ , ಎಲೆಕ್ಟಿçಕಲ್ ಆಂಡ್ ಎಲೆಕ್ಟಾçನಿಕ್ ಇಂಜಿನಿಯರಿಂಗ್, ಮೆಕ್ಯಾನಿಕಲ್ ಇಂಜಿನಿಯರಿಂಗ್ ಮತ್ತು ಮೆಟಲರ್ಜಿ ಇಂಜಿನಿಯರಿಂಗ್ ವಿಭಾಗಗಳಿಗೆ 02 ವರ್ಷಗಳ ಐಟಿಐ/ದ್ವಿತೀಯ ಪಿಯುಸಿ(ವಿಜ್ಞಾನ/ದ್ವಿತೀಯ ಪಿಯುಸಿ(ತಾಂತ್ರಿಕ ವಿಷಯಗಳಲ್ಲಿ) ಉತ್ತೀರ್ಣರಾಗಿರುವ ಅರ್ಹ ಅಭ್ಯರ್ಥಿಗಳಿಗೆ ಲ್ಯಾಟರಲ್ ಎಂಟ್ರಿ ಮುಖಾಂತರ 2ನೇ ವರ್ಷ/3ನೇ ಸೆಮಿಸ್ಟರ್ ಡಿಪ್ಲೊಮಾ ಕೋರ್ಸ್ಗಳಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಈಗಾಗಲೇ ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು, ಜೂ. 20 ರೊಳಗಾಗಿ ಸಂಸ್ಥೆಗೆ ಖುದ್ದಾಗಿ ಬಂದು ಪ್ರವೇಶ ಅರ್ಜಿಯನ್ನು ಸಲ್ಲಿಸುವಂತೆ ಪ್ರಾಚಾರ್ಯರು ತಿಳಿಸಿರುತ್ತಾರೆ.
ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗೆ ಮೊ.ಸಂ: 8762717968/8861931539/ 7975041134/ 9986406941/ 7259344203/ 9731283868/ 8277044910 ಗಳನ್ನು ಸಂಪರ್ಕಿಸಬಹುದು.

Rotary Shimoga ರೋಟರಿ ನಿರಂತರವಾಗಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸೇವಾನಿರತ- ಕಿಶೋರ್ ಕುಮಾರ್

0

Rotary Shimoga ರೋಟರಿ ಸದಸ್ಯರು ಜನ್ಮದಿನದಂದು ವಿಶೇಷ ಸಮಾಜಮುಖಿ ಚಟುವಟಿಕೆಗಳನ್ನು ಆಯೋಜಿಸಿ ಸೇವಾ ಕಾರ್ಯ ನಡೆಸುವುದು ಶ್ಲಾಘನೀಯ ಸಂಗತಿ ಎಂದು ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಕಿಶೋರ್‌ಕುಮಾರ್ ಹೇಳಿದರು.

ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಿಸಿ ಮಾತನಾಡಿ, ರೋಟರಿ ಸಂಸ್ಥೆಯು ನಿರಂತರ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದ್ದು, ಸರ್ಕಾರಿ ಶಾಲೆ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ನೆರವಾಗುವ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

75ನೇ ವರ್ಷದ ಜನ್ಮದಿನ ಆಚರಿಸಿಕೊಂಡ ರೋಟರಿ ಶಿವಮೊಗ್ಗ ಪೂರ್ವ ಸದಸ್ಯ ಡಾ. ಪರಮೇಶ್ವರ್ ಶಿಗ್ಗಾವ್ ಮಾತನಾಡಿ, ಮಕ್ಕಳು ಉತ್ತಮ ಶಿಕ್ಷಣ ಪಡೆಯಲು ಪೂರಕವಾದ ವಾತಾವರಣ ನಿರ್ಮಾಣ ಮಾಡುವುದು ಅತ್ಯಂತ ಅವಶ್ಯಕ. ಚೆನ್ನಾಗಿ ಅಧ್ಯಯನ ಮಾಡುವ ಜೊತೆಯಲ್ಲಿ ಉನ್ನತ ಸಾಧನೆ ಮಾಡಬೇಕು ಎಂದು ಶುಭಕೋರಿದರು.

ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಬಿ.ಆರ್.ಧನಂಜಯ ಮಾತನಾಡಿ, ರೋಟರಿ ಸದಸ್ಯರು ವಿಶೇಷ ಸಂರ್ದರ್ಭಗಳಲ್ಲಿ ಸಮಾಜಮುಖಿ ಕಾರ್ಯಗಳನ್ನು ನಡೆಸುವುದು ಮತ್ತಷ್ಟು ಸಂತೋಷವನ್ನು ಹೆಚ್ಚಿಸುತ್ತದೆ. ಎಲ್ಲ ಸದಸ್ಯರು ಜನ್ಮದಿನ ಸೇರಿದಂತೆ ಜೀವನ ವಿಶೇಷ ದಿನಗಳನ್ನು ಸೇವಾ ಕಾರ್ಯಗಳೊಂದಿಗೆ ಆಚರಿಸಬೇಕು ಎಂದು ಹೇಳಿದರು.

Rotary Shimoga ಮುಖ್ಯಶಿಕ್ಷಕ ನಾಗರಾಜಪ್ಪ ಮಾತನಾಡಿ, ಶಾಲಾ ಮಕ್ಕಳಿಗೆ ಅಗತ್ಯವಿರುವ ನೋಟ್‌ಬುಕ್, ಲೇಖನ ಸಾಮಾಗ್ರಿ ಇನ್ನಿತರ ವಸ್ತುಗಳನ್ನು ನೀಡುವುದರಿಂದ ಕಲಿಕೆಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ವಿಶ್ವ ಪರಿಸರ ದಿನದ ಹಿನ್ನೆಲೆಯಲ್ಲಿ ಸಸಿ ನೆಡುವುದರ ಜತೆ ವನಮಹೋತ್ಸವ ಆಚರಿಸಲಾಯಿತು. ಉಷಾ ಪರಮೇಶ್ವರ್ ಶಿಗ್ಗಾವ್, ಮೀನಾಕ್ಷಿ, ದೇವೆಂದ್ರಪ್ಪ, ಆರತಿ, ಶಿಕ್ಷಕಿಯರು, ಮಕ್ಕಳು ಹಾಜರಿದ್ದರು.

ಅಧಿಕ ಮಾಸದ ವಿಶೇಷ ಸಂಗೀತ ಸಭೆ: ವಿದ್ವಾನ್ ವಸುಧೇಂದ್ರ ಎಲ್.ವೈದ್ಯ ರ ಹಿಂದೂಸ್ತಾನಿ ಗಾಯನ

0

ಶಿವಮೊಗ್ಗ ನಗರದ ಬ್ರಾಹ್ಮಣ ಸೇವಾ ಸಂಘ (ರಿ), ಗೋಪಾಳದವತಿಯಿಂದ ಜೂ:14ರ ಭಾನುವಾರ ಸಂಜೆ:5 ಗಂಟೆಗೆ ಸರಿಯಾಗಿ ಅಧಿಕ ಜೇಷ್ಟ- ಮಾಧುರ್ಯಲಹರಿ- 2026 ಎಂಬ ದಾಸರವಾಣಿಗಳ ಹಿಂದುಸ್ತಾನಿ ಗಾಯನ ಕಾರ್ಯಕ್ರಮ ಸಂಜೆ:5 ಗಂಟೆಗೆ ಸರಿಯಾಗಿ ಏರ್ಪಡಿಸಲಾಗಿದೆ.

ಅಂಗವಾಗಿ ಅಂದು ಚಾಲುಕ್ಯನಗರ,ಕೆ.ಹೆಚ್.ಬಿ.ಕಾಲೋನಿಯ ಸುರಭಿ ಸಮುದಾಯ ಭವನದಲ್ಲಿ ಬೆಂಗಳೂರಿನ ಹೆಸರಾಂತ ಗಾಯಕರಾದ ವಿದ್ವಾನ್.ವಸುಧೇಂದ್ರ.ಎಲ್.ವೈದ್ಯ ಮತ್ತು ತಂಡದವರಿಂದ ದಾಸರವಾಣಿಗಳ ಗಾಯನ
ಕಾರ್ಯಕ್ರಮ ನಡೆಯಲಿದೆ.

ಹೆಚಿನ ಮಾಹಿತಿಗಾಗಿ ಖಜಾಂಚಿ ಬಾಲಾಜಿರಾವ್‌ರನ್ನು ಮೊಬೈಲ್ ಸಂಖ್ಯೆ: 9449943222 ರಲ್ಲಿ
ಸಂಪರ್ಕಿಸಬಹುದು .

ಕಲಾಭಿಮಾನಿಗಳು ಸಮಯಕ್ಕೆ ಸರಿಯಾಗಿ ಪಾಲ್ಗೊಂಡು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘದ ಅಧ್ಯಕ್ಷ ಸುರೇಶ್ ಉಮರಾಣಿ ಮತ್ತು ಕಾರ್ಯದರ್ಶಿ ಶ್ರೀಧರಮೂರ್ತಿ ಪ್ರಕಟಣೆಯಲ್ಲಿ ಕೋರಿದ್ದಾರೆ.

ಜೂನ್ 13, ಶಿವಮೊಗ್ಗದಲ್ಲಿ ಡಾ.ಡಿ‌.ವಿ‌.ಗುರುಪ್ರಸಾದ್ ಕೃತಿ” ನಮ್ಮ ಧುರಂಧರರು,” ಬಿಡುಗಡೆ

0

ಡಾ.ಡಿ.ವಿ.ಗುರುಪ್ರಸಾದ್ ಇವರ ಪುಸ್ತಕ ಪಾಕ್ ನಲ್ಲಿ ನಮ್ಮ ಧುರಂಧರರು ಪುಸ್ತಕ ಬಿಡುಗಡೆ ಕಾರ್ಯಕ್ರಮ ಜೂ. 13ರ ಶನಿವಾರ ಸಂಜೆ 05:30ಕ್ಕೆ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಹಾಲ್‌ನಲ್ಲಿ ಆಯೋಜನೆಗೊಂಡಿದೆ.

ಪ್ರಜ್ಞಾ ಪುಸ್ತಕ ಮಳಿಗೆ ಸಹಯೋಗದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಲೇಖಕ ವಿಶ್ರಾಂತ ಡಿಐಜಿ ಡಾ.ಡಿ.ವಿ.ಗುರುಪ್ರಸಾದ್ ಪಾಲ್ಗೊಂಡು ಕೃತಿ ಕುರಿತು ಮಾತನಾಡಲಿದ್ದಾರೆ.

1976ರಲ್ಲಿ ಪೊಲೀಸ್ ಸೇವೆಗೆ ಸೇರಿದ ಗುರು ಪ್ರಸಾದ್, 2011ರಲ್ಲಿ ಡಿಐಜಿ ಆಗಿ ನಿವೃತ್ತ ರಾಗುವ ಮುಂಚೆ ಮೂರು ಅತಿ ಸೂಕ್ಷ್ಮ ಜಿಲ್ಲೆಗಳ ವರಿಷ್ಠಾಧಿಕಾರಿಗಳಾಗಿ ಅಲ್ಲದೆ ಹುಬ್ಬಳ್ಳಿ- ಧಾರವಾಡ ಕಮಿಷನರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.

ಭಾರತ ಸರ್ಕಾರದ ಸಿಐಎಸ್‌ಎ- ಹಾಗೂ ರಾಜ್ಯ ಸಿಐಡಿ ಮತ್ತು ಇಂಟೆಲಿಜೆನ್ಸ್ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ರಾಜ್ಯ ವಾರ್ತಾ ಮತ್ತು ಪ್ರಚಾರ ಇಲಾಖೆಯ ನಿರ್ದೇಶಕರಾಗಿ ಹಾಗೂ ರಾಜ್ಯ ಸಾರಿಗೆ ಸಂಸ್ಥೆಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸಿಐಡಿ ವಿಭಾಗದ ಡಿಜಿಪಿ ಆಗಿಯೂ ಇವರು ಕಾರ್ಯನಿರ್ವಹಿಸಿ, ಹಲವು ಅಪರಾಧಗಳ ತನಿಖೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಇಂಗ್ಲೆಂಡ್ ಮತ್ತು ಇಸ್ರೇಲ್ ನಲ್ಲಿ ಸುರಕ್ಷತೆ ಮತ್ತು ತನಿಖೆ ತಂತ್ರಗಳ ಬಗ್ಗೆ ವಿಶೇಷ ತರಬೇತಿ ಪಡೆದಿರುತ್ತಾರೆ.

ಇಲಾಖೆಯಲ್ಲಿ ಯೂನಿಸೆ- ಸಹಕಾರದೊಂದಿಗೆ ಲಿಂಗಸೂಕ್ಮ್ಮತೆ ಬಗ್ಗೆ ಕಾರ್ಯನಿರ್ವಹಿಸಿದ್ದಾರೆ.

ಹಲವು ಉನ್ನತ ಸಂಸ್ಥೆಗಳಿಗೆ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಸ್ಪರ್ಧಾತ್ಮಕ ಪರೀಕ್ಷೆ ಆಕಾಂಕ್ಷಿಗಳಿಗೆ ತರಬೇತಿ ನೀಡಿ ಕಳೆದ ಎಂಟು ವರ್ಷಗಳಲ್ಲಿ 40 ಕ್ಕೂ ಹೆಚ್ಚು ಆಕಾಂಕ್ಷಿಗಳು ಯಶಸ್ವಿಯಾಗಿ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಸಾವಿರಾರು ಲೇಖನಗಳು ಮಾಯನಗರಿ ಪುಸ್ತಕಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಮಾತ್ರವಲ್ಲದೆ ಹಲವು ಸಾಹಿತ್ಯ ಹಬ್ಬಗಳಲ್ಲಿ ಮುಖ್ಯ ಉಪನ್ಯಾಸಕರಾಗಿ ಹಲವು ವಿಚಾರಗಳನ್ನು ಮಂಡಿಸಿದ್ದಾರೆ. ಪ್ರವಾಸ ಇವರ ಮುಖ್ಯ ಹವ್ಯಾಸವಾಗಿದ್ದು 55ಕ್ಕೂ ಹೆಚ್ಚು ದೇಶಗಳಿಗೆ ಪ್ರವಾಸ ಮಾಡಿದ್ದಾರೆ. ತಮ್ಮ 35 ವರ್ಷಗಳ ಅನನ್ಯಸೇವೆಗಾಗಿ ರಾಷ್ಟçಪತಿಗಳ ಪದಕ ಕೂಡ ಪಡೆದುಕೊಂಡಿದ್ದಾರೆ.

ನೂರಾರು ಪುಸ್ತಕಗಳನ್ನು ರಚಿಸಿರುವ ಇವರಿಗೆ ಮಾಯಣ್ಣನ ಮಹಾನಗರಿ ಪುಸ್ತಕಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
ಡಿ. ವಿ. ಗುರಪ್ರಸಾದ್‌ರವರು ಸಾಹಿತ್ಯ ಹಬ್ಬಗಳಲ್ಲಿ, ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ, ವಿಷಯ ಮಂಡಿಸಿ ಗಮನ ಸೆಳೆದಿದ್ದಾರೆ. ವಿಶೇಷವಾಗಿ ಶಾಲಾ ಕಾಲೇಜು ಮಕ್ಕಳಿಗೆ ಸೂರ್ತಿದಾಯಕ ಉಪನ್ಯಾಸ ನೀಡುವಲ್ಲಿಯೂ ನಿರತರಾಗಿದ್ದಾರೆ.

ಅಪರೂಪದ ಈ ಕಾರ್ಯಕ್ರಮಕ್ಕೆ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಲಾಗಿದ್ದು ಮಾಹಿತಿಗಾಗಿ 9449284495, 9845014229, 95380 20367ರಲ್ಲಿ ಸಂಪರ್ಕಿಸಬಹುದು.

ವಿದ್ಯುತ್ ತಂತಿ ತಗುಲಿ ಕೃಷಿಕ ಮತ್ತು ಕ್ರಿಕೆಟ್ ಪಟು ಪ್ರವೀಣ್ ಹೆಗಡೆ ಸಾವು

0

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕೆಳದಿ ಸಮೀಪದ ಹಾರೆಗೊಪ್ಪ ಗ್ರಾಮದಲ್ಲಿ ತಂತಿಗಳಿಗೆ ಅಡ್ಡಲಾಗಿ ಬೆಳೆದಿದ್ದ ಕೊಂಬೆಗಳನ್ನು ಕತ್ತರಿಸಲು ಹೋಗಿ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ಸ್ಥಳೀಯವಾಗಿ ಅತ್ಯಂತ ಜನಪ್ರಿಯರಾಗಿದ್ದ ಕ್ರಿಕೆಟ್ ಆಟಗಾರ ಸಾವನ್ನಪ್ಪಿದ್ದಾರೆ.

ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ತಾರಗೋಡು ಗ್ರಾಮದವರಾದ ಪ್ರವೀಣ ಹೆಗಡೆ (36 ವರ್ಷ) ವಿದ್ಯುತ್ ಅವಘಡಕ್ಕೆ ಬಲಿಯಾದ ದುರ್ದೈವಿ . ಇವರು ಕೆಲವು ವರ್ಷಗಳ ಹಿಂದಷ್ಟೇ ಹಾರೆಗೊಪ್ಪದಲ್ಲಿ ಕೃಷಿ ಭೂಮಿಯನ್ನು ಖರೀದಿಸಿ ಅಲ್ಲಿಯೇ ನೆಲೆಸಿದ್ದರು.

ಭಾನುವಾರ ತಂತಿಗಳಿಗೆ ಅಡ್ಡ ಬಂದಿದ್ದ ಕೊಂಬೆಗಳನ್ನು ಕತ್ತರಿಸಲು ಮುಂದಾಗಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ಈ ದುರಂತ ಸಂಭವಿಸಿದೆ. ಘಟನೆಗೆ ಸಂಬಂಧಿಸಿದಂತೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಪ್ರವೀಣ ಹೆಗಡೆ ಅವರು ಕೇವಲ ಕೃಷಿಕರಷ್ಟೇ ಅಲ್ಲದೆ ಉತ್ತಮ ಕ್ರಿಕೆಟ್ ಆಟಗಾರರಾಗಿಯೂ ಮಲೆನಾಡು ಭಾಗದಲ್ಲಿ ಹೆಸರು ಮಾಡಿದ್ದರು.

ಇವರು ಕೆಎಸ್‌ಸಿಎ ಶಿವಮೊಗ್ಗ ವಲಯದ ಕ್ರಿಕೆಟ್ ಲೀಗ್‌ನಲ್ಲಿ ನಿಸರಾಣಿ ಕ್ಲಬ್ ಪರವಾಗಿ ಕಣಕ್ಕಿಳಿದು ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಇದರೊಂದಿಗೆ ಹವ್ಯಕ ಕ್ರಿಕೆಟ್ ಲೀಗ್ ಸೇರಿದಂತೆ ಈ ಭಾಗದ ಅನೇಕ ಪ್ರಮುಖ ಕ್ರಿಕೆಟ್ ಟೂರ್ನಿಗಳಲ್ಲೂ ಆಡಿ ಕ್ರೀಡಾಭಿಮಾನಿಗಳನ್ನು ಸಂಪಾದಿಸಿದ್ದರು.

Department of Posts ಜೂನ್ 23. ಶಿವಮೊಗ್ಗದಲ್ಲಿ ತ್ರೈಮಾಸಿಕ ” ಡಾಕ್ ಅದಾಲತ್ “

0

Department of Posts ಶಿವಮೊಗ್ಗ ಕೋಟೆ ರಸ್ತೆ ಅಂಚೆ ಇಲಾಖೆಯ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ಜೂ. 23 ರಂದು ಬೆಳಗ್ಗೆ 11.00ಕ್ಕೆ ತ್ರೈಮಾಸಿಕ ಡಾಕ್ ಅದಾಲತ್ ಆಯೋಜಿಸಲಾಗಿದೆ.

ಸಾರ್ವಜನಿಕರು ಅಂಚೆ ಇಲಾಖೆಯ ಸೇವೆಗಳ ಕುರಿತು ಯಾವುದೇ ಕುಂದುಕೊರತೆಗಳು ಅಥವಾ ಸಲಹೆಗಳಿದ್ದಲ್ಲಿ ಸಂಪೂರ್ಣ ವಿವರಗಳೊಂದಿಗೆ ಲಿಖಿತವಾಗಿ ಜೂ. 22 ರೊಳಗಾಗಿ ಸಲ್ಲಿಸುವುದು.

ಸ್ವೀಕರಿಸಲಾದ ಕುಂದುಕೊರತೆಗಳು ಹಾಗೂ ಸಲಹೆಗಳನ್ನು ಡಾಕ್ ಅದಾಲತ್‌ನಲ್ಲಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಈ ಅದಾಲತ್‌ನಲ್ಲಿ ಭಾಗವಹಿಸುವಂತೆ ಅಂಚೆ ಅಧೀಕ್ಷಕರಾದ ಎಂ. ಕುಮಾರಸ್ವಾಮಿ ತಿಳಿಸಿದ್ದಾರೆ.

ಮಾಜಿ ಡೀಸಿಎಂ ಕೆ.ಎಸ್.ಈಶ್ವರಪ್ಪ ಹುಟ್ಟಿದ ಹಬ್ಬ: ಶುಭ ಕೋರಿದ ಜಿಲ್ಲಾ ವಾಣಿಜ್ಯ & ಕೈಗಾರಿಕಾ ಸಂಘದ ಪದಾಧಿಕಾರಿಗಳು

0

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರ ಜನ್ಮದಿನದಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪದಾಧಿಕಾರಿಗಳು ಶುಭಕೋರಿದರು.

ಮಾಜಿ ಡಿಸಿಎಂ, ರಾಷ್ಟ್ರಭಕ್ತ ಬಳಗದ ಮುಖ್ಯಸ್ಥ ಕೆ.ಎಸ್.ಈಶ್ವರಪ್ಪ ಅವರ 78ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಶುಭಾಶಯ ಕೋರಲಾಯಿತು.

ಕೆ.ಎಸ್.ಈಶ್ವರಪ್ಪ ಅವರಿಗೆ ದೇವರು ಆರೋಗ್ಯ, ಆಯಸ್ಸು ಕೊಟ್ಟು ಸಮಾಜ ಸೇವೆ ಮಾಡಲಿ ಎಂದು ಆಶಿಸಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್, ಉಪಾಧ್ಯಕ್ಷ ಜಿ.ವಿಜಯ್ ಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್.ಮನೋಹರ, ನಿರ್ದೇಶಕರಾದ ಗಣೇಶ್ ಎಂ.ಅಂಗಡಿ, ಪ್ರದೀಪ್ ಎಲಿ, ಲಕ್ಷ್ಮಿದೇವಿ ಗೋಪಿನಾಥ್ ಹಾಜರಿದ್ದರು.