Wednesday, August 5, 2026
Wednesday, August 5, 2026
Home Blog Page 62

ಶಿವಮೊಗ್ಗದಲ್ಲಿ ರೌಡಿಶೀಟರ್ ಹನುಮಂತು ಅಲಿಯಾಸ್ ಮಧು ಕಾಲಿಗೆ ಗುಂಡೇಟು

0

ಶಿವಮೊಗ್ಗದಲ್ಲಿ ರೌಡಿಶೀಟರ್ ಹನುಮಂತು ಅಲಿಯಾಸ್ ಮಧುಗೆ ಪೊಲೀಸರು ಗುಂಡೇಟು ನೀಡಿರುವ ಘಟನೆ ನಡೆದಿದೆ. ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸಿ ಕರೆತರುತ್ತಿದ್ದ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಹಿನ್ನೆಲೆ ಆತ್ಮರಕ್ಷಣೆಗಾಗಿ ಕಾಲಿಗೆ ಗುಂಡು ಹಾರಿಸಲಾಗಿದೆ.

ಶಿವಮೊಗ್ಗ ಹೊರವಲಯದ ಸುಬ್ಬಯ್ಯ ಮೆಡಿಕಲ್ ಕಾಲೇಜು ಸಮೀಪ ಈ ಘಟನೆ ನಡೆದಿದೆ. ನರಸಿಂಹ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಹನುಮಂತು ಅಲಿಯಾಸ್ ಮಧುವನ್ನು ಬಂಧಿಸಿ ಕರೆತರುತ್ತಿದ್ದ ವೇಳೆ ಆತ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ.

ಮೂಲಗಳ ಪ್ರಕಾರ, ಚೈನ್ ಬಳಸಿ ಪೊಲೀಸರ ಮೇಲೆ ದಾಳಿ ನಡೆಸಲು ಯತ್ನಿಸಿದ ಮಧು, ಪೇದೆ ಅಂಜಿನಪ್ಪ ಅವರ ಮೇಲೂ ಹಲ್ಲೆ ನಡೆಸಿದ್ದಾನೆ. ಈ ವೇಳೆ ಆರೋಪಿಗೆ ಹಲವು ಬಾರಿ ಎಚ್ಚರಿಕೆ ನೀಡಲಾಗಿದೆ.

ಕೋಟೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಹರೀಶ್ ಪಟೇಲ್ ಎಚ್ಚರಿಕೆ ನೀಡಿದ ಬಳಿಕವೂ ಮಧು ಹಲ್ಲೆಗೆ ಮುಂದಾದ ಹಿನ್ನೆಲೆಯಲ್ಲಿ, ಆತ್ಮರಕ್ಷಣೆಗಾಗಿ ಆರೋಪಿಯ ಬಲಗಾಲಿಗೆ ಗುಂಡು ಹಾರಿಸಲಾಗಿದೆ.

ಗುಂಡೇಟಿನಿಂದ ಗಾಯಗೊಂಡ ಮಧುವನ್ನು ತಕ್ಷಣವೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆಯ ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ B. Nikhil ಆಸ್ಪತ್ರೆಗೆ ಭೇಟಿ ನೀಡಿ ಆರೋಪಿಯ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ಪಡೆದಿದ್ದಾರೆ.

ನರಸಿಂಹ ಕೊಲೆ ಪ್ರಕರಣದ ಹಿಂದಿನ ಪ್ರಮುಖ ರೂವಾರಿಯಾಗಿರುವ ಮಧು, ಕೊಲೆ ಸಂಚು ರೂಪಿಸಿದ್ದ ಆರೋಪ ಎದುರಿಸುತ್ತಿದ್ದಾನೆ. ಖಚಿತ ಮಾಹಿತಿ ಆಧರಿಸಿ ಆರೋಪಿಯ ಬಂಧನಕ್ಕೆ ತೆರಳಿದ್ದ ಪೊಲೀಸರ ಕಾರ್ಯಾಚರಣೆಯ ವೇಳೆ ಈ ಘಟನೆ ನಡೆದಿದೆ.

ಇದೇ ವೇಳೆ, ಆರೋಪಿಯ ಹಲ್ಲೆಯಿಂದ ಗಾಯಗೊಂಡ ಪೇದೆ ಅಂಜಿನಪ್ಪ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

D.K. Shivakumar ರಾಜ್ಯದ ಎಲ್ಲಾ ಅಧಿಕಾರಿಗಳು “ಟೀಮ್ ಕರ್ನಾಟಕ” ಮನೋಭಾವದಿಂದ ಕಾರ್ಯನಿರ್ವಹಿಸಬೇಕು: ಡಿ.ಕೆ. ಶಿವಕುಮಾರ್

0

D.K. Shivakumar ರಾಜ್ಯದ ಅಭಿವೃದ್ಧಿ, ಭ್ರಷ್ಟಾಚಾರ ನಿರ್ಮೂಲನೆ, ಶಿಕ್ಷಣ, ಕಾನೂನು ಸುವ್ಯವಸ್ಥೆ ಹಾಗೂ ಯುವಕರ ಉದ್ಯೋಗ ಸೃಷ್ಟಿಗೆ ಒತ್ತು ನೀಡುವ ಮಹತ್ವದ ನಿರ್ದೇಶನಗಳನ್ನು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಜಿಲ್ಲಾಧಿಕಾರಿಗಳು, ಎಸ್‌ಪಿ, ಸಿಇಒ, ಡಿಎಫ್‌ಒ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ನೀಡಿದರು. ಬಳಿಕ ಮಾಧ್ಯಮಗೋಷ್ಠಿಯಲ್ಲಿ ಅವರು ಹಲವು ಪ್ರಮುಖ ಘೋಷಣೆಗಳನ್ನು ಹಂಚಿಕೊಂಡರು.

ರಾಜ್ಯದ ಎಲ್ಲಾ ಅಧಿಕಾರಿಗಳು “ಟೀಮ್ ಕರ್ನಾಟಕ” ಮನೋಭಾವದಿಂದ ಕಾರ್ಯನಿರ್ವಹಿಸಬೇಕು ಎಂದು ಡಿ.ಕೆ. ಶಿವಕುಮಾರ್ ಸೂಚಿಸಿದರು. ಸಮಸ್ಯೆಗಳೊಂದಿಗೆ ಕಚೇರಿಗಳಿಗೆ ಬರುವ ಸಾರ್ವಜನಿಕರಿಗೆ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಬೇಕು ಹಾಗೂ ಆಡಳಿತದಲ್ಲಿ ಸಾಮಾಜಿಕ ನ್ಯಾಯದ ತತ್ವವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದರು.

ಭ್ರಷ್ಟಾಚಾರ ನಿರ್ಮೂಲನೆಗೆ ಆದ್ಯತೆ ನೀಡಿರುವ ಅವರು, ಸರ್ಕಾರಿ ಕಚೇರಿಗಳಲ್ಲಿ ಒಂದು ರೂಪಾಯಿ ಕೂಡ ಲಂಚಕ್ಕೆ ಅವಕಾಶ ಇರಬಾರದು ಎಂದು ಎಚ್ಚರಿಕೆ ನೀಡಿದರು. ಕಾನೂನುಬಾಹಿರ ಕೆಲಸಗಳಿಗೆ ಒತ್ತಡ ಹೇರುವವರ ಬಗ್ಗೆ ತಕ್ಷಣ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ರಾಜ್ಯವನ್ನು ರೌಡಿಸಂ, ಡ್ರಗ್ಸ್ ಹಾಗೂ ಸೈಬರ್ ಅಪರಾಧಗಳಿಂದ ಮುಕ್ತಗೊಳಿಸಲು ಕಠಿಣ ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ. ಪ್ರತಿ ಪೊಲೀಸ್ ಠಾಣೆಯಲ್ಲಿ ಐದು ಸದಸ್ಯರ ವಿಶೇಷ ತಂಡ ರಚಿಸಿ ರೌಡಿಸಂ ನಿಯಂತ್ರಣಕ್ಕೆ ಒತ್ತು ನೀಡಲಾಗಿದೆ. ಜೊತೆಗೆ ನಕಲಿ ಹಣಕಾಸು ಸಂಸ್ಥೆಗಳ ವಿರುದ್ಧವೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿರುವ ಸರ್ಕಾರ, ವಿದ್ಯಾರ್ಥಿಗಳಿಗೆ ಸಮವಸ್ತ್ರ, ಶೂ ಹಾಗೂ ಪಠ್ಯಪುಸ್ತಕಗಳ ವಿತರಣೆಯನ್ನು ಮುಂದಿನ ಒಂದು ತಿಂಗಳೊಳಗೆ ಪೂರ್ಣಗೊಳಿಸಲು ಸೂಚಿಸಿದೆ. ಗ್ರಾಮೀಣ ಶಾಲೆಗಳ ಅಭಿವೃದ್ಧಿಗೆ ಹೊಸ CSR ನೀತಿಯನ್ನು ಜಾರಿಗೆ ತರಲಾಗುವುದು ಎಂದರು.

ಮಳೆ ಕೊರತೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳಿಗೂ ಸೂಚನೆ ನೀಡಲಾಗಿದೆ. ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು. ಎಲ್ ನಿನೋ ಪರಿಣಾಮ ಮತ್ತು ಮಳೆ ಕೊರತೆಯ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಮೇವಿನ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಗೃಹಲಕ್ಷ್ಮಿ ಸೇರಿದಂತೆ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪುವ ಉದ್ದೇಶದಿಂದ ಗೃಹಲಕ್ಷ್ಮಿ ಯೋಜನೆಗೆ ಮರು ಅರ್ಜಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಹೇಳಿದರು.

ಮತದಾನದ ಹಕ್ಕು ರಕ್ಷಣೆಗೆ ಒತ್ತು ನೀಡಿದ ಡಿ.ಕೆ. ಶಿವಕುಮಾರ್, ಪ್ರತಿಯೊಬ್ಬ ಮತದಾರರು ಬಿಎಲ್ಒಗಳು ನೀಡುವ ಎನ್ಯುಮರೇಷನ್ ಅರ್ಜಿಯನ್ನು ಕಡ್ಡಾಯವಾಗಿ ಸಲ್ಲಿಸಿ ತಮ್ಮ ಮತದಾರರ ಹಕ್ಕು ಉಳಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ವಾಸ ಪ್ರಮಾಣ ಪತ್ರ ಇಲ್ಲದವರಿಗೆ ತ್ವರಿತವಾಗಿ ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

D.K. Shivakumar ಯುವಕರ ಉದ್ಯೋಗಾವಕಾಶ ಹೆಚ್ಚಿಸಲು ಖಾಸಗಿ ಉದ್ಯೋಗ ವಿನಿಮಯದ ಮೂಲಕ ಹೊಸ ಕಾರ್ಯಕ್ರಮ ಆರಂಭಿಸಲಾಗುತ್ತಿದೆ. ಜೊತೆಗೆ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ರಾಜಕೀಯೇತರ “ಭಾರತ್ ಜೋಡೋ ಯುವಕರ ಸಂಘ” ರಚಿಸಿ ವಾರ್ಷಿಕ 10 ಲಕ್ಷ ರೂಪಾಯಿ ಅನುದಾನ ನೀಡಲಾಗುವುದು ಎಂದು ಘೋಷಿಸಿದರು.

ಸಂಚಾರ ದಟ್ಟಣೆ ನಿವಾರಣೆಗಾಗಿ ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿ ವರ್ತುಲ ರಸ್ತೆ ನಿರ್ಮಾಣ ಹಾಗೂ ರಸ್ತೆ ಜಾಲದ ಗ್ರಿಡ್ ವ್ಯವಸ್ಥೆ ರೂಪಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

Prithvi Trust ಶಿವಮೊಗ್ಗ ಜಿಲ್ಲೆಯಲ್ಲಿ ಶೇ 64 ಅರಣ್ಯ ಭೂಮಿಯಿದೆ, ಪಶ್ಚಿಮಘಟ್ಟಗಳಲ್ಲಿ ಸಾಮರಸ್ಯಕಿಂತ ಸಂಘರ್ಷವೇ ಹೆಚ್ಚಾಗಿದೆ: ಎ.ಎಂ.ಅಣ್ಣಯ್ಯ

0

Prithvi Trust ಕೃಷಿ ಮತ್ತು ಅರಣ್ಯ ಎರಡೂ ದೇಶದ ಪ್ರಗತಿಗೆ ಹಾಗೂ ಜೀವಸಂಕುಲದ ಉಳಿವಿಗೆ ಅತ್ಯಗತ್ಯವಾಗಿದ್ದು ಎರಡರ ನಡುವಿನ ಸಾಮರಸ್ಯ ಮತ್ತು ಸಹಬಾಳ್ವೆ ಇಂದಿನ ತುರ್ತಾಗಿದೆ. ಹಾಗೂ ಇದಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಕೃಷಿ ಆರ್ಥಿಕ ತಜ್ಞರು ಹಾಗೂ
ನಿವೃತ್ತ ಪ್ರಧಾನ ಮುಖ್ಯ ಅರಣ್ಯ ಮತ್ತು ಅರಣ್ಯ ಸಂಪನ್ಮೂಲ ನಿರ್ವಹಣಾ ಸಂರಕ್ಷಣಾಧಿಕಾರಿಗಳಾದ ಎ.ಎಂ. ಅಣ್ಣಯ್ಯ ಹೇಳಿದರು.
ಬೆಂಗಳೂರಿನ ‘ಪೃಥ್ವಿ’ ಟ್ರಸ್ಟ್ ಹಾಗೂ ಶಿವಮೊಗ್ಗದ ಪರಿಸರ ಅಧ್ಯಯನ ಕೇಂದ್ರ ಮಲೆನಾಡಿನ ರೈತ, ಬುಡಕಟ್ಟು ಮತ್ತು ಪರಿಸರ ಸಂಘಟನೆಗಳ ಸಹಯೋಗದೊಂದಿಗೆ ಹಾಗೂ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಸಹಕಾರದಲ್ಲಿ ಶನಿವಾರದಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಮಲೆನಾಡು ಕೃಷಿ-ಅರಣ್ಯ ಸಂಘರ್ಷ ಮತ್ತು ಸಾಮರಸ್ಯ’ ಎಂಬ ವಿಷಯದ ಕುರಿತಾದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಶೇ. ೬೪ ಅರಣ್ಯ ಭೂಮಿ‌ ಇದೆ. ಆದರೆ ಪಶ್ಚಿಮ ಘಟ್ಟಗಳಲ್ಲಿ ಸಾಮರಸ್ಯಕ್ಕಿಂತ ಸಂಘರ್ಷವೇ ಹೆಚ್ಚಾಗಿದೆ. ಈ ಸಂಘರ್ಷವನ್ನು ತಗ್ಗಿಸಿ ಸಾಮರಸ್ಯದಿಂದ ಬದುಕುವ ಕ್ರಮಗಳನ್ನು ಹೆಚ್ಚಿಸಬೇಕು.
ಪರಿಸರ ನಮ್ಮ‌ಹಕ್ಕಾಗಿರುವ ರೀತಿಯಲ್ಲಿ ಈ ನಿಟ್ಟಿನಲ್ಲಿ ನಮ್ಮ ಕರ್ತವ್ಯಗಳೂ ಇದ್ದು, ಅದನ್ನು ನಾವು‌ ಪಾಲಿಸಬೇಕು.
ಮನುಷ್ಯ ಮಾತ್ರ ಈ ಪರಿಸರದಲ್ಲಿ ಬದುಕಲು ಸಾಧ್ಯವಿಲ್ಲ. ಎಲ್ಲ ಪ್ರಾಣಿ, ಜೀವ ಸಂಕುಲವೂ ಬದುಕಬೇಕು.‌ ಸಹಬಾಳ್ವೆ ನಡೆಸಬೇಕು ಎಂದರು.
Prithvi Trust ಕಾಯ್ದೆ ಕಾನೂನು ಅರಣ್ಯ ಉಳಿಸುವಲ್ಲಿ ಮುಖ್ಯ ಪಾತ್ರ ವಹಿಸಿವೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯು ಪ್ರಕೃತಿ ಮತ್ತು ವನ್ಯಜೀವಿಗಳ ರಕ್ಷಣೆಗೆ ಕಟ್ಟುನಿಟ್ಟಾದ ಚೌಕಟ್ಟನ್ನು ಒದಗಿಸುತ್ತದೆ. ಕೃಷಿ-ಅರಣ್ಯ ಸಂಘರ್ಷದ ಸಂದರ್ಭದಲ್ಲಿ ಇದರ ಪಾತ್ರ ಪ್ರಮುಖವಾಗಿದೆ.
ಅರಣ್ಯ ಹಕ್ಕುಗಳ ಕಾಯ್ದೆಯು ಕೃಷಿ ಮತ್ತು ಅರಣ್ಯದ ನಡುವಿನ ಅನ್ಯಾಯವನ್ನು ಸರಿಪಡಿಸಲು ಜಾರಿಗೆ ಬಂದ ಅತ್ಯಂತ ಪ್ರಮುಖ ಕಾನೂನು.
ಅರಣ್ಯ ಸಂರಕ್ಷಣಾ ಕಾಯ್ದೆಯು ಕೃಷಿ ಭೂಮಿ ವಿಸ್ತರಣೆಯ ಹೆಸರಿನಲ್ಲಿ ಅರಣ್ಯ ನಾಶವಾಗುವುದನ್ನು ತಡೆಯುತ್ತದೆ‌ ಎಂದು ಕಾಯ್ದೆಗಳ ಬಗ್ಗೆ ವಿವರಿಸಿದ ಅವರು ಅರಣ್ಯ ಮತ್ತು ಕೃಷಿ‌ ಕುರಿತು
ಸಂವಿಧಾನ ಏನು ಹೇಳುತ್ತದೆ, ಕಾಯ್ದೆ ಕಾನೂನುಗಳು ಹಾಗೂ
ಕೇಸ್ ಲಾ ಗಳು ಏನು ಹೇಳುತ್ತದೆ ಎಂದು ಪಿಪಿಟಿ ಪ್ರದರ್ಶನದ ಮೂಲಕ ತಿಳಿಸಿಕೊಟ್ಟರು.
ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಸದಸ್ಯರಾದ ಡಾ. ಪ್ರಕಾಶ್ ಕಮ್ಮರಡಿ ಅವರು ಪ್ರಾಸ್ತಾವಿಕವಾಗಿ‌ ಮಾತನಾಡಿ ಪಶ್ಚಿಮ ಘಟ್ಟಗಳು ಪ್ರಸ್ತುತ ಜೀವ ವೈವಿಧ್ಯತೆಯ ಮಹಾತಾಣವಾಗಿಲ್ಲ. ಬದಲಾಗಿ ಸಂಘರ್ಷಗಳ ಹಾಟ್ ಸ್ಪಾಟ್ಟ್ ಆಗಿದೆ. ಒಕ್ಕಲೆಬ್ಬಿಸುವ ಕಾರ್ಯವು ಜನ ವಿರೋಧಿಯಾಗಿದೆ. ಪಂಪ್ಡ್ ಸ್ಟೋರೇಜ್ ವಿರುದ್ದ ಜನರು ಗಟ್ಟಿಯಾದ ಹೋರಾಟ ಮಾಡುತ್ತಿದ್ದಾರೆ.
ಒಂದು‌ ಕಡೆ ಅರಣ್ಯ ಇಲಾಖೆಯು ಪರಿಸರ ಉಳಿಸಲು ಕಾನೂನಾತ್ಮಕವಾಗಿ ಕೆಲಸ ಮಾಡುತ್ತಿದ್ದರೆ, ಜನರು ಜೀವನೋಪಾಯಕ್ಕಾಗಿ ಅರಣ್ಯ ಭೂಮಿ ಮೇಲೆ ಅವಲಂಬಿತರಾಗಿದ್ದು ವಿರೋಧಾಭಾಸಗಳನ್ನು ಕಾಣಬಹುದಾಗಿದೆ.
ವನ್ಯಜೀವಿ ಮತ್ತು ಮಾನವ ನಡುವೆ ಸಂಘರ್ಷ ಇದೆ. ಜನರ ನಡುವೆ ಸಹ ಸಂಘರ್ಷ ಇದೆ. ಕೃಷಿ‌ ಮತ್ತು ಅರಣ್ಯ ನಡುವಿನ ಬಾಂಧವ್ಯ ನಾಶವಾಗಿ ಸಂಘರ್ಷ ಆರಂಭವಾಗಿದೆ.
ವೈವಿಧ್ಯಮಯ ತೋಟಗಳು, ಹಿತ್ತಲು, ಸೊಪ್ಪಿನ ‌ಬೆಟ್ಟಗಳು ಸೇರಿದಂತೆ ಕಾಡು ಮತ್ತು ನಾಡಿನ ಜೀವ ವೈವಿಧ್ಯಗಳು, ಪರಿಸರ ಸಂಕ್ರಮಣ ನಾಶವಾಗ್ತಾ ಇದೆ. ಬ್ರಿಟಿಷರ ಅರಣ್ಯ ಧೋರಣೆಗಳು ಮುಂದುವರೆದಿವೆ. ಅಡಿಕೆ, ಕಾಫಿ ಮತ್ತು ಅಕೇಶಿಯ ದಂತಹ ವಾಣಿಜ್ಯ ಏಕಬೆಳೆ ತೋಟಗಳು ಪಾರಂಪರಿಕ ಬಫರ್ ವ್ಯವಸ್ಥೆಯನ್ನು ಧ್ವಂಸಗೊಳಿಸಿವೆ.
ಪಶ್ಚಿಮ ಘಟ್ಟಗಳು ಉಳಿಯಲೇಬೇಕಿದ್ದು, ಸಾಮರಸ್ಯ ಬದುಕನ್ನು ಹುಡುಕಬೇಕಿದೆ. ಕೃಷಿ ಮತ್ತು ಅರಣ್ಯದ ನಡುವಿನ ಸಂಘರ್ಷ ದೂರ ಮಾಡಿ ಸಹಬಾಳ್ವೆ ಮಾಡಬೇಕಿದೆ ಎಂದ ಅವರು ಇಂದಿನ ಕಾರ್ಯಾಗಾರದಲ್ಲಿ ಈ‌ ಎಲ್ಲದರ ಬಗ್ಗೆ ಚರ್ಚಿಸೋಣ. ರೈತರೊಂದಿಗೆ ಸಂವಾದ ನಡೆಸೋಣ, ಕಾಯ್ದೆ ಅನುಷ್ಟಾನ ಬಗ್ಗೆ ತಿಳಿದುಕೊಳ್ಳೋಣ ಎಂದರು.
ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿದ್ದ ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಕುಲಸಚಿವರಾದ ಟಿ.ಎಸ್.ಹೂವಯ್ಯಗೌಡ ಮಾತನಾಡಿ, ಎಲ್ಲ ಜೀವಿಗಳು, ಪ್ರಾಣಿಗಳಿಗೂ ಬದುಕುವ ಹಕ್ಕು ಇದ್ದು, ಇವುಗಳ‌ ಬಗ್ಗೆ ಯೋಚಿಸಬೇಕಿದೆ. ಕೃಷಿ‌ ಮತ್ತು ಅರಣ್ಯ‌ ವಿಷಯಗಳಲ್ಲಿ ಹಲವಾರು ಕಾನೂನು ತೊಡಕು ಇವೆ. ಯಾಂತ್ರಿಕ ಅಭಿವೃದ್ಧಿಯಿಂದ ಪರಿಸರ ನಾಶವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾಮರಸ್ಯದ ಕ್ರಮಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದರು.
ಉದ್ಘಾಟನೆಯ ನಂತರ ನಡೆದ ತಾಂತ್ರಿಕ ಗೋಷ್ಠಿಯಲ್ಲಿ ಮಲೆನಾಡಿನ ಪ್ರಮುಖ ವಿಷಯಗಳ ಕುರಿತು ಸಂವಾದಗಳು ನಡೆದವು.
ಅರಣ್ಯ ನೀತಿಗಳು ಇತಿಹಾಸ, ವರ್ತಮಾನ ಹಾಗೂ ಭವಿಷ್ಯ ವಿಷಯ ಕುರಿತು ಜನಾರ್ದನ ಜಿ.ಎಲ್., ನಿರ್ದೇಶಕರು, ಪರಿಸರ ಅಧ್ಯಯನ ಕೇಂದ್ರ ಮತ್ತು ರೇಡಿಯೋ ಶಿವಮೊಗ್ಗ 90.8 ಎಫ್.ಎಂ.
ಅಭಿವೃದ್ಧಿ ಯೋಜನೆಗಳು ಮತ್ತು ಸಂಘರ್ಷ ವಿಷಯ ಕುರಿತು ಅಖಿಲೇಶ್ ಚಿಪ್ಲಿ , ಪರಿಸರ ಹೋರಾಟಗಾರರು, ಸಾಗರ.
ಅರಣ್ಯ ಕಾಯಿದೆಗಳು ಮತ್ತು ಅವಾಂತರಗಳು‌ ವಿಷಯ ಕುರಿತು ರಮೇಶ್ ಹೆಗಡೆ , ಮಾಜಿ ಮಹಾಪೌರರು, ಶಿವಮೊಗ್ಗ ಮಹಾನಗರಪಾಲಿಕೆ ಹಾಗೂ ಅಡಿಕೆ ಬೆಳೆಗಾರರ ಸಂಘಟನೆ.
ರಕ್ಷಿತಾರಣ್ಯ ಮತ್ತು ವನ್ಯಜೀವಿ ರೈತ ಸಂಘರ್ಷ ವಿಷಯ ಕುರಿತು ಡಾ. ವಿಜಯಕುಮಾರ್ , ವನ್ಯಜೀವಿ ಸಂರಕ್ಷಣಾ ಅಧ್ಯಯನ ವಿಭಾಗ, ಕುವೆಂಪು ವಿಶ್ವವಿದ್ಯಾನಿಲಯ ಇವರು ಸಂಪನ್ಮೂಲ‌ ವ್ಯಕ್ತಿಗಳಾಗಿ ಪಾಲ್ಗೊಂಡು ವಿಷಯ ಮಂಡನೆ ಮಾಡಿದರು. ಈ ಗೋಷ್ಠಿಯ ಅಧ್ಯಕ್ಷತೆಯನ್ನು ಶಿವಮೊಗ್ಗದ ರೈತ ಸಂಘಟನೆಯ ಮುಖಂಡರಾದ ಕೆ.ಟಿ. ಗಂಗಾಧರ್ ವಹಿಸಿದ್ದರು.
ಕಾರ್ಯಾಗಾರದ ಸಮಾರೋಪ ಹಾಗೂ ‘ಮುಂದಿನ ಹೆಜ್ಜೆ’ಯ ಕುರಿತಾದ ಕೊನೆಯ ಗೋಷ್ಠಿಯ ಅಧ್ಯಕ್ಷತೆಯನ್ನು ಅಡಿಕೆ ಬೆಳೆಗಾರರ ಸಂಘಟನೆಯ ಬಿ.ಆರ್. ಜಯಂತ್ ವಹಿಸಿದ್ದು, ಡಾ. ಪ್ರಕಾಶ್ ಕಮ್ಮರಡಿ ಅವರು ಇದರ ನಿರ್ವಹಣೆ ಮಾಡಿದರು.
ಇದೇ ಸಂದರ್ಭದಲ್ಲಿ ರೈತ ಮುಖಂಡರಾದ ಹೆಚ್.ಆರ್. ಬಸವರಾಜಪ್ಪ, ಬುಡಕಟ್ಟು ಸಂಘಟನೆಯ ಮುಖಂಡರಾದ ರಾಮಣ್ಣ ಹಸಲರ್, ಪರಿಸರ ಸಂಘಟನೆಯ ಶೈಲೇಂದ್ರ ಬಂದಗದ್ದೆ ಹಾಗೂ ತಾಳಗುಪ್ಪದ ರೈತ ಮಹಿಳೆ ಪೂರ್ಣಿಮಾ ಅವರು ತಮ್ಮ ಅನಿಸಿಕೆ ಹಾಗೂ ಅಭಿಪ್ರಾಯ ಮಂಡಿಸಿದರು. ಕವಿತಾ ಹಾಗೂ ಇನ್ನಿತರರು ಹಾಜರಿದ್ದರು.

B.Y. Raghavendra ಕೆರೆ ಬಸವಣ್ಣ ಶೇಡಿನ ಕೆರೆ” ಲೋಕಾರ್ಪಣೆ!

0

B.Y. Raghavendra ಶ್ರೀ ಡಿ. ಯೇಸು ಪ್ರಕಾಶ್ ಅವರ ಸ್ಮರಣಾರ್ಥ, ಸಾರಾ ಸಂಸ್ಥೆ, ಕೆರೆ ಬಸವಣ್ಣ ಶೇಡಿನ ಕೆರೆ ಬಳಕೆದಾರರ ಸಂಘ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಸಕ್ರಿಯ ಸಹಯೋಗದೊಂದಿಗೆ ಸುಂದರವಾಗಿ ಪುನಶ್ಚೇತನಗೊಳಿಸಲಾದ “ಕೆರೆ ಬಸವಣ್ಣ ಶೇಡಿನ ಕೆರೆ”ಯ ಭವ್ಯ ಉದ್ಘಾಟನಾ ಸಮಾರಂಭದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಭಾಗವಹಿಸಿದ್ದರು.

ಕೆರೆಯನ್ನು ಸಂಸದರು ಲೋಕಾರ್ಪಣೆಗೊಳಿಸಿದರು.

ಜಲಮೂಲಗಳ ಸಂರಕ್ಷಣೆ ಮತ್ತು ಅಂತರ್ಜಲ ವೃದ್ಧಿಯ ಆಶಯದೊಂದಿಗೆ ಹಮ್ಮಿಕೊಳ್ಳಲಾದ ಈ ಜಲಕ್ರಾಂತಿ ಯೋಜನೆಯು ಈ ಭಾಗದ ರೈತ ಬಾಂಧವರಿಗೆ ಹಾಗೂ ಸಾರ್ವಜನಿಕರಿಗೆ ಮುಂಬರುವ ದಿನಗಳಲ್ಲಿ ವರದಾನವಾಗಲಿದೆ ಎಂದು ಬಿ.ವೈ.ರಾಘವೇಂದ್ರ ನುಡಿದರು.

ಗ್ರಾಮೀಣ ಭಾಗದ ಕೆರೆಗಳನ್ನು ಇಂತಹ ಜನಾಂದೋಲನದ ಮೂಲಕ ಜೀರ್ಣೋದ್ಧಾರ ಮಾಡುವುದು ನಮ್ಮ ಮಲೆನಾಡಿನ ಸುಸ್ಥಿರ ಅಭಿವೃದ್ಧಿಗೆ ಅತ್ಯಂತ ಪೂರಕವಾಗಿದೆ ಎಂದು
ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮವು ಹೊಸನಗರ ತಾಲ್ಲೂಕಿನ ಮೂಲೇಗದ್ದೆಯ ಸದಾನಂದ ಶಿವಯೋಗಾಶ್ರಮದ ಶ್ರೀ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳವರ ಪವಿತ್ರ ದಿವ್ಯ ಸಾನಿಧ್ಯದಲ್ಲಿ ಅತ್ಯಂತ ಮಂಗಲಮಯವಾಗಿ ನೆರವೇರಿತು

B.Y. Raghavendra ಸಮಾರಂಭದಲ್ಲಿ ಮಾಜಿ ಸಚಿವರಾದ ಶ್ರೀ ಹರತಾಳು ಹಾಲಪ್ಪನವರು, ಹೊಸನಗರ ಟಿಎಪಿಸಿಎಂಎಸ್ ಅಧ್ಯಕ್ಷರಾದ ಶ್ರೀ ವಾಟಗೋಡು ಸುರೇಶ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳು, ಸಾರಾ ಸಂಸ್ಥೆಯ ಪದಾಧಿಕಾರಿಗಳು, ಕೆರೆ ಬಳಕೆದಾರರ ಸಂಘದ ಪ್ರಮುಖರು ಮತ್ತು ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕ ಬಂಧುಗಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಬೀchi ಎಂಬ ಉತ್ತರ ಭೂಪನ ನೆನೆಯುತ್ತಾ ಕಾರ್ಯಕ್ರಮ

0

ನಗುವುದು ಮತ್ತು ನಗಿಸುವುದು ಒಂದು ಪರಮ ಕಲೆ. ಕನ್ನಡ ಸಾಹಿತ್ಯ ಲೋಕದಲ್ಲಿ ಹಾಸ್ಯದ ಮೂಲಕ ವಿಶಿಷ್ಟ ಸ್ಥಾನ ಪಡೆದ ಮಹಾನ್ ಸಾಹಿತಿ ರಾಯಸಂ ಭೀಮಸೇನ ರಾವ್ (ಬೀಚಿ) ಅವರ ಸಾಹಿತ್ಯ ಮತ್ತು ಜೀವನ ಮೌಲ್ಯಗಳನ್ನು ಸ್ಮರಿಸುವ ವಿಶೇಷ ಕಾರ್ಯಕ್ರಮವನ್ನು ಕರ್ನಾಟಕ ಸಂಘ ಆಯೋಜಿಸಿದೆ.

ಜೂನ್ 20ರಂದು ಶನಿವಾರ ಸಂಜೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕನ್ನಡದ ಅಪ್ರತಿಮ ಹಾಸ್ಯ ಸಾಹಿತಿ ಬೀಚಿಯವರ ಸಾಹಿತ್ಯದ ವೈಶಿಷ್ಟ್ಯ, ಜೀವನ ಪ್ರೀತಿ ಹಾಗೂ ಅವರ ಹಾಸ್ಯ ಬರಹಗಳ ಸಾಮಾಜಿಕ ಮಹತ್ವವನ್ನು ಚರ್ಚಿಸಲಾಗುತ್ತದೆ.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ನಾಡಿನ ಖ್ಯಾತ ಹಾಸ್ಯ ಸಾಹಿತಿ ಹಾಗೂ ಆಕರ್ಷಕ ವಾಗ್ಮಿ ವೈ. ವಿ. ಗುಂಡುರಾವ್ ಭಾಗವಹಿಸಲಿದ್ದು, “ಬೀಚಿ ಸಾಹಿತ್ಯದಲ್ಲಿ ಜೀವನ ಪ್ರೀತಿ” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಇಂದಿನ ಕಾಲಘಟ್ಟದಲ್ಲಿ ಹಾಸ್ಯ ಎಂದರೆ ಅನುಕರಣೆ, ಅಶ್ಲೀಲತೆ ಅಥವಾ ತೇಜೋವಧೆ ಎಂಬ ಭಾವನೆಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ, ಬೀಚಿಯವರ ಸಾಹಿತ್ಯ ನೀಡುವ ನಿಜವಾದ ಹಾಸ್ಯರಸ, ತಿಳಿನಗು ಮತ್ತು ಜೀವನೋತ್ಸಾಹವನ್ನು ನೆನಪಿಸಿಕೊಳ್ಳುವ ಅಪೂರ್ವ ಅವಕಾಶ ಇದಾಗಿದೆ.

ಸಾಹಿತ್ಯಾಸಕ್ತರು ಹಾಗೂ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಹಾಸ್ಯರಸ ಋಷಿಗೆ ಗೌರವ ನಮನ ಸಲ್ಲಿಸುವಂತೆ ಕರ್ನಾಟಕ ಸಂಘದ ಕಾರ್ಯದರ್ಶಿ ವಿನಯ್ ಶಿವಮೊಗ್ಗ ಮನವಿ ಮಾಡಿದ್ದಾರೆ.

D.K. Shivakumar ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಸಭೆ

0

D.K. Shivakumar ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಎಲ್ಲಾ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಭೆ ನಡೆಯಿತು.

ಈ ಸಭೆಯಲ್ಲಿ ರಾಮಲಿಂಗಾರೆಡ್ಡಿ , ಕೆ.ಎಚ್. ಮುನಿಯಪ್ಪ, ಕೆ.ಜೆ.ಜಾರ್ಜ್, ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ, ಎಂ.ಬಿ.ಪಾಟೀಲ್, ಪ್ರಿಯಾಂಕ್ ಖರ್ಗೆ, ಕೃಷ್ಣ ಭೈರೇಗೌಡ, ಶರಣ್ ಪ್ರಕಾಶ್ ಪಾಟೀಲ್, ಯು.ಟಿ. ಖಾದರ್, ಭೈರತಿ ಸುರೇಶ್, ಯತೀಂದ್ರ ಸಿದ್ದರಾಮಯ್ಯ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸೇರಿದಂತೆ , ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದರು.

Veerendra Heggade ಕೂಡ್ಲಿಯಲ್ಲಿ ಸಾಮಾಜಿಕಜಾಗೃತಿ ಮೂಡಿಸುವ ಬೀದಿ ನಾಟಕದ ಯಶಸ್ವಿ ಪ್ರದರ್ಶನ

0

Veerendra Heggade ಶಿವಮೊಗ್ಗ ತಾಲೂಕಿನಲ್ಲಿ ಶ್ರೀ ಕ್ಷೇತ್ರ ಧರ‍್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ), ವತಿಯಿಂದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆ ಯವರ ಮಾರ್ಗದರ್ಶನದಂತೆ ದಿನಾಂಕ ೧೦.೦೬.೨೦೨೬ ರಂದು ಕೂಡ್ಲಿ ಗ್ರಾಮದಲ್ಲಿ ಜ್ಞಾನವಿಕಾಸ ಮಹಿಳಾ ಕಾರ‍್ಯಕ್ರಮದಡಿಯಲ್ಲಿ ಬೀದಿ ನಾಟಕ ಪ್ರದರ್ಶನ ನಡೆಯಿತು.

Veerendra Heggade ಶ್ರೀ ಶ್ರೀನಿವಾಸ್ ಪಿಡಿಒ ಗ್ರಾಮ ಪಂಚಾಯಿತಿ ಕೂಡ್ಲಿ ಇವರು ಕಾರ‍್ಯಕ್ರಮವನ್ನು ಉದ್ಘಾಟಿಸಿದರು. ಹಾಗೂ ಶ್ರೀಮತಿ ನಾಗರತ್ನ ಇವರು ಅಧ್ಯಕ್ಷತೆ ವಹಿಸಿದ್ದರು.
. ಶ್ರೀಯುತ ಜಗದೀಶ್ ಡಾ. ಬಿ ಆರ್ ಅಂಬೇಡ್ಕರ್ ಕಲಾತಂಡ ಭದ್ರಾವತಿ. ಇವರು ಕುಟುಂಬದ ನಿರ‍್ವಹಣೆ, ಮಕ್ಕಳ ಶಿಕ್ಷಣ, ಮನೆಯ ಹಾಗೂ ಪರಿಸರದ ಸ್ವಚ್ಛತೆ, ಮೂಢನಂಬಿಕೆ, ದುಶ್ಚಟದ ದುಷ್ಪರಿಣಾಮ, ರಸ್ತೆ ನಿಯಮಗಳ ಪಾಲನೆ, ಸಾರ‍್ವಜನಿಕ ಸ್ಥಳಗಳ ರಕ್ಷಣೆ. ಮುಂತಾದ ವಿಷಯಗಳ ಕುರಿತು ಪ್ರದರ್ಶನವನ್ನು ನೀಡಿದರು. ಜ್ಞಾನವಿಕಾಸ ಸಂಯೋಜಕಿ ಶ್ರೀಮತಿ ರೇಖಾ ಉಪಸ್ಥಿತರಿದ್ದರು.
ಕಾರ‍್ಯಕ್ರಮದಲ್ಲಿ ಮುಖ್ಯ ಅತಥಿಗಳಾಗಿ ಶ್ರೀಮತಿ ಚೇತನ ಜ್ಞಾನವಿಕಾಸ ಸಮನ್ವಯ ಅಧಿಕಾರಿ ಶಿವಮೊಗ್ಗ. ಇವರು ಕಾರ‍್ಯಕ್ರಮದಲ್ಲಿ ಜ್ಞಾನವಿಕಾಸ ಮತ್ತು ಯೋಜನೆಯ ಎಲ್ಲಾ ಕಾರ‍್ಯಕ್ರಮಗಳ ಕುರಿತು ಮಾಹಿತಿ ನೀಡಿದರು.

Chess ಜುಲೈ 4 ರಿಂದ ದೀರ್ಘ ಆವಧಿಯ ಚೆಸ್ ತರಬೇತಿ ಆರಂಭ.

0

Chess ನಗರದ ಯಾದವ ಸ್ಕೂಲ್ ಆಫ್ ಚೆಸ್ ಸಂಸ್ಥೆಯು ಶಿವಮೊಗ್ಗ ನಗರದ ವಿವಿಧ ಬಡಾವಣೆಗಳಲ್ಲಿ ಜು. ೪ರಿಂದ ೨೦೨೭ರ ಫ್ರೆಬ್ರವರಿವರೆಗೆ ದೀರ್ಘ ಅವಧಿಯ ಚೆಸ್ ತರಬೇತಿ ಪ್ರಾರಂಭ ಮಾಡುತ್ತಿದ್ದು. ಪ್ರತಿ ಸೋಮವಾರ, ಮಂಗಳವಾರ, ಕೃಷಿನಗರದಲ್ಲಿ ಪ್ರತಿ ಬುಧವಾರ -ಗುರುವಾರ ಮತ್ತು ವಿನೋಬನಗರದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಚೆಸ್ ತರಬೇತಿಗಳು ನಡೆಯಲಿವೆ.

Chess ಹೆಚ್ಚಿನ ಮಾಹಿತಿಗೆ ಯಾದವ ಸ್ಕೂಲ್ ಆಫ್ ಚೆಸ್ ಸಂಸ್ಥೆಯ ಸಂಸ್ಥಾಪಕರು ಹಾಗೂ ರಾಷ್ಟ್ರಮಟ್ಟದ ಚೆಸ್ ತೀರ್ಪುಗಾರರಾದ ಕೆ. ಪ್ರಾಣೇಶ್ ಯಾದವ್ ಅವರ ಮೊ. 9242401702, 9743819678, 8618108601 ರಲ್ಲಿ ಸಂಪರ್ಕಿಸಿ.

Shri Veereshwara Punya Ashram ಜೂನ್ 15. ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಧಾರವಾಡದ ದಿನೇಶ್ ಪಿ .ಗೌಡ ಅವರಿಂದ ಹಿಂದೂಸ್ತಾನಿ ಗಾಯನ

0

Shri Veereshwara Punya Ashram ನಗರದ ಸಾಗರ ರಸ್ತೆಯ ವೀರೇಶ್ವರ ಪುಣ್ಯಾಶ್ರಮ ಸಂಸ್ಕತ ಪಾಠ ಶಾಲೆಯಲ್ಲಿ ಗಾನಲಹರಿ 120ನೇ ಅಮಾವಾಸ್ಯೆಯ ಸಂಗೀತ ಸಂಜೆ ಕಾರ್ಯಕ್ರಮವನ್ನು ಜೂ. 15ರ ಸೋಮವಾರ ಸಂಜೆ 6.30ಕ್ಕೆ ಆಯೋಜಿಸಲಾಗಿದೆ.

Shri Veereshwara Punya Ashram ರಾಜ್ಯ ಪ್ರಶಸ್ತಿ ಪುgಸ್ಕತ ಆರ್.ಬಿ. ಸಂಗಮೇಶ್ವರ ಗವಾಯಿಗಳೂ ಅಧ್ಯಕ್ಷತೆ ವಹಿಸುವರು.ನಗರದ ಸೋಮಿನಕೊಪ್ಪದ ಭಜನಾ ಮಂಡಳಿಯಿಂದ ಭಜನಾ ಸೇವೆ ಮತ್ತು ಆಶ್ರಮದ ಅಂಧ ಮಕ್ಕಳು ಪ್ರಾರ್ಥಿಸಲಿದ್ದಾರೆ. ಧಾರವಾಡದ ಹಿಂದೂಸ್ಥಾನಿ ಗಾಯಕರಾದ ದಿನೇಶ್ ಪಿ. ಗೌಡ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ರಾಜ್ಯ ಪ್ರಶಸ್ತಿ ಪುರಸ್ಕತ ರಾಮಣ್ಣ ಭಜಂತ್ರಿ, ವೀರಭದ್ರಶಾಸ್ತ್ರಿ ವೇದ ಘೋಷ, ತುಕಾರಾಮ್ ರಂಗಧೋಳ್, ವಿನಾಯಕ ಭಟ್ ತಬಲ, ಸಿದ್ದಣ್ಣ ಬಡಿಗೇರ್ ಹಾರ್‍ಮೋನಿಯಂ ಜೊತೆ ಸಾಥ್ ನೀಡಲಿದ್ದಾರೆ. ರೇವಣ್ಣ ಸಿದ್ದಯ್ಯ ಶಾಸ್ತ್ರಿಗಳು ನಿರೂಪಿಸಲಿದ್ದಾರೆ.

KSRTC ಶಿವಮೊಗ್ಗದ ಸಾರಿಗೆ ಬಸ್ ಡಿಪೋ ಹಿಂಭಾಗವಿಶಾಲ ಜಾಗದಲ್ಲಿ ಉದ್ಯಾನವನ ನಿರ್ಮಿಸಲು ಮನವಿ

0

KSRTC ನಗರದ ಕೆಎಸ್‌ಆರ್‌ಟಿಸಿ ಡಿಪ್ಪೋ ಹಿಂಭಾಗ ಉದ್ಯಾನವನಕ್ಕೆಂದೆ ಮೀಸಲಿಟ್ಟಿರುವ ೨ವರೆ ಎಕರೆ ಪ್ರದೇಶವನ್ನು ಅಭಿವೃದ್ಧಿ ಪಡಿಸಿ ಉದ್ಯಾನವನ ನಿರ್ಮಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಇಂದು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿತು.
ನಗರದ ವಾರ್ಡ್ ನಂ. ೨೭ರಲ್ಲಿ ಮಂಜುನಾಥ ಬಡಾವಣೆಯಲ್ಲಿ ಪಾಲಿಕೆಗೆ ಸೇರಿದ ಸುಮಾರು ೨ವರೆ ಎಕರೆ ಜಾಗದಲ್ಲಿ ಸುತ್ತಲೂ ಪೆನ್ಸಿಂಗ್ ಮಾಡಿ ಉದ್ಯಾನವನ ನಿರ್ಮಿಸಲು ಕಾಯ್ದಿರಿಸಲಾಗಿದೆ. ಆದರೆ ಉದ್ಯಾನವನ ನಿರ್ಮಿಸಲು ವಿಳಂಬ ಮಾಡಲಾಗುತ್ತಿದೆ.
ಮಂಜುನಾಥ ಬಡಾವಣೆ, ಮಿಳ್ಳಗಟ್ಟ, ಬುದ್ಧನಗರ, ಅಣ್ಣಾನಗರ, ಆನಂದರಾವ್ ಬಡಾವಣೆ ಭಾಗದಲ್ಲಿ ಒಂದೂ ಉದ್ಯಾನವನವಿಲ್ಲ. ಇದರಿಂದ ಈ ಭಾಗಗಳ ಹಿರಿಯ ನಾಗರೀಕರು, ಮಕ್ಕಳು ಹಾಗೂ ಮಹಿಳೆಯರು ವಾಯು ವಿಹಾರ, ವ್ಯಾಯಾಮ ಮಕ್ಕಳ ಆಟಿಕೆಗಳು ಇತ್ಯಾದಿಗಳಿಗೆ ಅವಕಾಶವಿಲ್ಲದಂತಾಗಿದೆ.
KSRTC ಪ್ರಸ್ತುತ ಪಾಲಿಕೆ ಮೀಸಲಿಟ್ಟಿರುವ ೨ವರೆ ಜಾಗದಲ್ಲಿ ಉದ್ಯಾನವನ ನಿರ್ಮಿಸುವ ಮೂಲಕ ಈ ಭಾಗದ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಮನವಿಯಲ್ಲಿ ಕೋರಲಾಗಿದೆ.
ಮನವಿ ಸಲ್ಲಿಕೆ ಸಂದರ್ಭದಲ್ಲಿ ಟ್ರಸ್ಟ್‌ನ ಪ್ರಮುಖರಾದ ಕಲ್ಲೂರು ಮೇಘರಾಜ್, ಮಂಜಪ್ಪಗೌಡ, ಎಂ. ಸಂಗಯ್ಯ, ಶಿವಣ್ಣ, ರಾಮಣ್ಣ, ಹಾಲೇಶ್ ಆರ್, ಹಿರಿಯಣ್ಣಗೌಡ, ಗುರುನಾಥ್, ವಿಜಯ ಮತ್ತಿತರರಿದ್ದರು.