Wednesday, August 5, 2026
Wednesday, August 5, 2026
Home Blog Page 61

ಆಹಾರ ಮತ್ತು ಕುಡಿಯುವ ನೀರಿನಲ್ಲಿ ಸೀಸದ (Lead) ಮಾಲಿನ್ಯ, ಮಕ್ಕಳಲ್ಲಿ ಸೀಸದ ವಿಷಬಾಧೆಯ ದುಷ್ಪರಿಣಾಮಗಳು ಹಾಗೂ ತಡೆಗಟ್ಟುವ ಕ್ರಮಗಳ ಕುರಿತು ಶಿಕ್ಷಕರಿಗೆ ಮಾಹಿತಿ ಕಾರ್ಯಾಗಾರ

0

ಶಿವಮೊಗ್ಗ ಜಿಲ್ಲೆಯಲ್ಲಿ ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಯ ಕುರಿತು ಮಹತ್ವದ ಜಾಗೃತಿ ಕಾರ್ಯಕ್ರಮವೊಂದು ಇಂದು ನಡೆಯಲಿದೆ. ಆಹಾರ ಮತ್ತು ಕುಡಿಯುವ ನೀರಿನಲ್ಲಿ ಕಂಡುಬರುವ ಸೀಸದ ಮಾಲಿನ್ಯ ಹಾಗೂ ಅದರ ದುಷ್ಪರಿಣಾಮಗಳ ಬಗ್ಗೆ ಶಿಕ್ಷಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ವಿಶೇಷ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿವಮೊಗ್ಗ ಜಿಲ್ಲೆ, ಸುಬ್ಬಯ್ಯ ಸಂಶೋಧನಾ ಸಂಸ್ಥೆ ಹಾಗೂ ರೋಟರಿ ಕ್ಲಬ್ ಆಫ್ ಶಿವಮೊಗ್ಗ ಈಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದ ಮಹತ್ವದ ಜಾಗೃತಿ ಕಾರ್ಯಕ್ರಮ ಇಂದು, ಜೂನ್ 15 ರಂದು ಬೆಳಿಗ್ಗೆ 11 ಗಂಟೆಗೆ ಶಿವಮೊಗ್ಗ ನಗರದ ದುರ್ಗಿಗುಡಿಯ ಸರ್ಕಾರಿ ಶಾಲೆಯಲ್ಲಿ ನಡೆಯಲಿದೆ.

“ಆಹಾರ ಮತ್ತು ಕುಡಿಯುವ ನೀರಿನಲ್ಲಿ ಸೀಸದ ಮಾಲಿನ್ಯ, ಮಕ್ಕಳಲ್ಲಿ ಸೀಸದ ವಿಷಬಾಧೆಯ ದುಷ್ಪರಿಣಾಮಗಳು ಹಾಗೂ ತಡೆಗಟ್ಟುವ ಕ್ರಮಗಳು” ಎಂಬ ವಿಷಯದಡಿ ನಡೆಯಲಿರುವ ಈ ಕಾರ್ಯಾಗಾರದಲ್ಲಿ ಖ್ಯಾತ ಪರಿಸರ ವಿಜ್ಞಾನಿ ಮತ್ತು ಸಾರ್ವಜನಿಕ ಆರೋಗ್ಯ ತಜ್ಞರಾದ ಡಾ. ತುಪ್ಪಿಲ್ ವೆಂಕಟೇಶ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ. “ಭಾರತದ ಲೀಡ್ ಮ್ಯಾನ್” ಎಂದೇ ಖ್ಯಾತರಾಗಿರುವ ಅವರು, ಮಕ್ಕಳ ಆರೋಗ್ಯದ ಮೇಲೆ ಸೀಸದ ಮಾಲಿನ್ಯ ಬೀರುವ ಪರಿಣಾಮಗಳ ಕುರಿತು ಸಮಗ್ರ ಮಾಹಿತಿ ನೀಡಲಿದ್ದಾರೆ.

ಕಾರ್ಯಾಗಾರದಲ್ಲಿ ಆಹಾರ ಮತ್ತು ಕುಡಿಯುವ ನೀರಿನಲ್ಲಿನ ಸೀಸದ ಮಾಲಿನ್ಯದ ಮೂಲಗಳು, ಮಕ್ಕಳಲ್ಲಿ ಕಾಣಿಸಿಕೊಳ್ಳುವ ವಿಷಬಾಧೆಯ ಲಕ್ಷಣಗಳು, ಅದರ ದುಷ್ಪರಿಣಾಮಗಳು, ತಡೆಗಟ್ಟುವ ಕ್ರಮಗಳು ಹಾಗೂ ಶಾಲೆ ಮತ್ತು ಮನೆಯ ಮಟ್ಟದಲ್ಲಿ ಕೈಗೊಳ್ಳಬಹುದಾದ ಮುನ್ನೆಚ್ಚರಿಕೆಗಳ ಕುರಿತು ವಿವರವಾಗಿ ಚರ್ಚಿಸಲಾಗುತ್ತದೆ. ಜೊತೆಗೆ ಮಕ್ಕಳ ಆರೋಗ್ಯ ಸಂರಕ್ಷಣೆಯಲ್ಲಿ ಶಿಕ್ಷಕರ ಪಾತ್ರದ ಮಹತ್ವವನ್ನೂ ವಿವರಿಸಲಾಗುತ್ತದೆ.

ಮಕ್ಕಳ ಬುದ್ಧಿವಿಕಾಸ, ಕಲಿಕಾ ಸಾಮರ್ಥ್ಯ, ನಡವಳಿಕೆ ಹಾಗೂ ಒಟ್ಟಾರೆ ಆರೋಗ್ಯದ ಮೇಲೆ ಸೀಸದ ಮಾಲಿನ್ಯವು ಗಂಭೀರ ಪರಿಣಾಮ ಬೀರುವ ಹಿನ್ನೆಲೆಯಲ್ಲಿ, ಜಿಲ್ಲೆಯ ಎಲ್ಲಾ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.

MESCOM ಜೋಗ : ಮೆಸ್ಕಾಂ ಜನ ಸಂಪರ್ಕ ಸಭೆ

0

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜೂ. 16 ರಂದು ಬೆಳಿಗ್ಗೆ 11.00 ರಿಂದ 01.00 ರವರೆಗೆ ಜನಸಂಪರ್ಕ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದು, ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ. ಮಾಹಿತಿಗಾಗಿ ದೂ. ಸಂ.,-9448289520 ನ್ನು ಸಂಪರ್ಕಿಸುವುದು.

Shri S.N. Channabasappa ಶಿವಮೊಗ್ಗದ ವಿವಿಧ ಬಡಾವಣೆಗಳಲ್ಲಿ ಪಾರ್ಕ್ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಶ್ರೀ ಎಸ್.ಎನ್. ಚನ್ನಬಸಪ್ಪ ಚಾಲನೆ

0

Shri S.N. Channabasappa “ಶಿವಮೊಗ್ಗ ನಗರದ ಪ್ರತಿಯೊಂದು ಬಡಾವಣೆಯಲ್ಲೂ ಸುಸಜ್ಜಿತ ಉದ್ಯಾನವನಗಳನ್ನು (Parks) ಅಭಿವೃದ್ಧಿಪಡಿಸುವ ಮೂಲಕ ಸಾರ್ವಜನಿಕರಿಗೆ ಸ್ವಚ್ಛ, ಮಾಲಿನ್ಯಮುಕ್ತ ಮತ್ತು ಆಹ್ಲಾದಕರ ವಾತಾವರಣ ಕಲ್ಪಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ,” ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಅವರು ತಿಳಿಸಿದ್ದಾರೆ.

ನಗರದ ಯೋಜಿತ ಹಸಿರೀಕರಣ ಹಾಗೂ ಮೂಲಸೌಕರ್ಯ ಸುಧಾರಣೆಯ ಅಂಗವಾಗಿ ಶಾಸಕರು ಕ್ಷೇತ್ರ ವ್ಯಾಪ್ತಿಯ ಗುರುಪುರದ ಅಪೂರ್ವ ಬಡಾವಣೆಯಲ್ಲಿರುವ ಉದ್ಯಾನವನ, ವಿನೋಬನಗರದ ನರಸಿಂಹ ಬಡಾವಣೆಯಲ್ಲಿರುವ
ಪಾರ್ಶ್ವನಾಥ ಹಾಗೂ ನಾಗರಕಟ್ಟೆ ಪಾರ್ಕ್ ಹಾಗೂ ಗೋಪಾಳದ ಆಲ್ ಅರಿಂ ಲೇಔಟ್ ಪಾರ್ಕ್‌ಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸ್ತ್ರೋಕ್ತವಾಗಿ ಗುದ್ದಲಿ ಪೂಜೆ ನೆರವೇರಿಸಿ ಅಧಿಕೃತವಾಗಿ ಚಾಲನೆ ನೀಡಿದರು.

ಬಳಿಕ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡ ಶಾಸಕರು, “ಬಡಾವಣೆಗಳಲ್ಲಿ ಪಾರ್ಕ್‌ಗಳ ಸುಧಾರಣೆಯು ಸಾರ್ವಜನಿಕರ ಮತ್ತು ಮಕ್ಕಳ ಆರೋಗ್ಯಕರ ಜೀವನಶೈಲಿಗೆ ಅತ್ಯಗತ್ಯವಾಗಿದೆ. ಕಾಮಗಾರಿಗಳನ್ನು ಯಾವುದೇ ಲೋಪದೋಷಗಳಿಲ್ಲದೆ ಅತ್ಯಂತ ಗುಣಮಟ್ಟದಿಂದ ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಸಂಬಂಧಪಟ್ಟ ಇಲಾಖೆಯ ಇಂಜಿನಿಯರ್‌ಗಳು ಹಾಗೂ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ,” ಎಂದು ಹೇಳಿದರು.

Shri S.N. Channabasappa ಇದೇ ಸಂದರ್ಭದಲ್ಲಿ ಬಡಾವಣೆಯ ನಾಗರಿಕರೊಂದಿಗೆ ಸಮಾಲೋಚನೆ ನಡೆಸಿದ ಶಾಸಕರು, ಸ್ಥಳೀಯ ಇತರ ನಾಗರಿಕ ಬೇಡಿಕೆಗಳನ್ನು ಆಲಿಸಿ ಹಂತ-ಹಂತವಾಗಿ ಈಡೇರಿಸುವ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ನಗರ ಬಿಜೆಪಿ ಅಧ್ಯಕ್ಷರಾದ ಶ್ರೀ ಮೋಹನ್ ರೆಡ್ಡಿ,
ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಎನ್ ಜಿ ನಾಗರಾಜ್, ವಾರ್ಡಿನ ಅಧ್ಯಕ್ಷರುಗಳು, ಮಹಾಶಕ್ತಿಕೇಂದ್ರದ ಪ್ರಮುಖರು, ಮಹಾನಗರ ಪಾಲಿಕೆಯ ಅಧಿಕಾರಿಗಳು ಹಾಗೂ ಬಡಾವಣೆಗಳ ಸಾರ್ವಜನಿಕ ಬಂಧುಗಳು ಉಪಸ್ಥಿತರಿದ್ದರು.

ಜೂ. 17 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ

0

ಆಯನೂರು ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮೊದಲನೇ ತ್ರೈಮಾಸಿಕ ನಿರ್ವಹಣೆ ಕಾರ್ಯ ಹಾಗೂ ತುರ್ತು ಕಾಮಗಾರಿಯನ್ನು ನಿರ್ವಹಿಸುವುದರಿಂದ ಜೂ. 17 ರಂದು ಬೆಳಗ್ಗೆ 9-00 ರಿಂದ ಸಂಜೆ 6-00 ಆಯನೂರು, ಮಂಡಘಟ್ಟ ಸಿರಿಗೆರೆ. ಸೂಡೂರು, ಕೂಡಿ, ಮಲೆಶಂಕರ, ದೊಡ್ಡಮತ್ತಲಿ, ತಮ್ಮಡಿಹಳ್ಳಿ, ಮೈಸವಳ್ಳಿ, ಸೇವಾಲಾಲ್ ನಗರ, ವೀರಣ್ಣನಬೆನವಳ್ಳಿ, ಚನ್ನಹಳ್ಳಿ, ಇಟ್ಟಿಗೇಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

District Women and Child Development Department ಭದ್ರಾವತಿ: ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ; ಆಕ್ಷೇಪಣೆಗೆ ಅಹ್ವಾನ

0

District Women and Child Development Department ಶಿವಮೊಗ್ಗ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಭದ್ರಾವತಿ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿಯಿರುವ ಅಂಗನವಾಡಿ ಕಾರ್ಯಕರ್ತೆಯರ 19 ಹುದ್ದೆಗಳಿಗೆ ಹಾಗೂ 59 ಸಹಾಯಕಿಯರ ಹುದ್ದೆಗಳಿಗೆ ತಾತ್ಕಾಲಿಕ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಭದ್ರಾವತಿ ಹಾಗೂ ಸಂಬAಧಿಸಿದ ಅಂಗನವಾಡಿ ಕೇಂದ್ರಗಳಲ್ಲಿ ಪ್ರಕಟಿಸಲಾಗಿದೆ. ಈ ಪಟ್ಟಿಗೆ ಆಕ್ಷೇಪಣೆಗಳಿದ್ದಲ್ಲಿ ಜೂ. 20 ರೊಳಗಾಗಿ ಸಲ್ಲಿಸುವಂತೆ ಹಾಗೂ ಆಯ್ಕೆಯಾದ ಅಭ್ಯರ್ಥಿಗಳು ಜೂ. 23 ರಂದು ಬೆಳಗ್ಗೆ 10.00ಕ್ಕೆ ದಾಖಲಾತಿಗಳ ಪರಿಶೀಲನೆಗೆ ಅರ್ಜಿಯೊಂದಿಗೆ ಸಲ್ಲಿಸಿದ್ದ ಮೂಲ ದಾಖಲೆಗಳೊಂದಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಹಾಜರಾಗುವಂತೆ ಭದ್ರಾವತಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಿಳಿಸಿದ್ದಾರೆ.

ಸೀಸದಿಂದ ಮಕ್ಕಳ ಮೆದುಳಿಗೆ ಹಾನಿ, ಸೀಸದ ವಿಷಬಾಧೆ ತಡೆಯಲು ಎಲ್ಲರೂ ಸಹಕರಿಸಬೇಕು : ಡಾ.ತುಪ್ಪಿಲ್ ವೆಂಕಟೇಶ್

0

Department of Health and Family Welfare ಮಕ್ಕಳಲ್ಲಿ ಸೀಸದ(ಲೆಡ್)ಅಂಶ ಹೆಚ್ಚಾಗುವುದು ಅವರ ಮೆದುಳಿನ ವಿಕಾಸದ ಮೇಲೆ ಅತ್ಯಂತ ಗಂಭೀರ ಪರಿಣಾಮ ಬೀರುವುದರಿಂದ ಇದನ್ನು ಸೀಸದ ವಿಷ ಬಾಧೆ ಎಂದು ಕರೆಯಲಾಗುತ್ತದೆ. ಇದನ್ನು ತಡೆಯಲು ಎಲ್ಲರೂ ಸಹಕರಿಸಬೇಕು ಎಂದು ‘ಭಾರತದ ಲೆಡ್ ಮ್ಯಾನ್’ ಎಂದೇ ಪ್ರಸಿದ್ಧರಾಗಿರುವ ಖ್ಯಾತ ಪರಿಸರ ವಿಜ್ಞಾನಿ ಹಾಗೂ ಸಾರ್ವಜನಿಕ ಆರೋಗ್ಯ ತಜ್ಞರಾದ ಡಾ. ತುಪ್ಪಿಲ್ ವೆಂಕಟೇಶ್ ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶಿವಮೊಗ್ಗ ಜಿಲ್ಲೆ, ಸುಬ್ಬಯ್ಯ ಸಂಶೋಧನಾ ಸಂಸ್ಥೆ ಹಾಗೂ ರೋಟರಿ ಕ್ಲಬ್ ಆಫ್ ಶಿವಮೊಗ್ಗ ಈಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ ಸೋಮವಾರ ನಗರದ ದುರ್ಗಿಗುಡಿ ಸರ್ಕಾರಿ ಶಾಲೆಯಲ್ಲಿ ಆಹಾರ ಮತ್ತು ಕುಡಿಯುವ ನೀರಿನಲ್ಲಿ ಸೀಸದ ಮಾಲಿನ್ಯ, ಮಕ್ಕಳಲ್ಲಿ ಸೀಸದ ವಿಷಬಾಧೆಯ ದುಷ್ಪರಿಣಾಮಗಳು ಹಾಗೂ ತಡೆಗಟ್ಟುವ ಕ್ರಮಗಳ ಕುರಿತು ಶಿಕ್ಷಕರಿಗಾಗಿ ಏರ್ಪಡಿಸಲಾಗಿದ್ದ ವಿಶೇಷ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಮೆದುಳು ಬೆಳವಣಿಗೆಯ ಹಂತದಲ್ಲಿರುವುದರಿAದ ಸೀಸದ ಅಂಶವು ಅವರ ನರಮಂಡಲದ ಮೇಲೆ ತೀವ್ರವಾದ ಪರಿಣಾಮ ಬೀರುತ್ತದೆ. ಮೆದುಳಿನ ಜೀವಕೋಶಗಳಿಗೆ ಹಾನಿ ಮಾಡುತ್ತದೆ. ಸೀಸದ ಪ್ರಮಾಣ ಹೆಚ್ಚಾದಂತೆ ಮಗುವಿನ ಬುದ್ದಮತ್ತೆ(ಐಕ್ಯೂ) ಮಟ್ಟ ಕುಸಿಯುತ್ತದೆ. ಕಲಿತದ್ದು ನೆನಪಿಟ್ಟುಕೊಳ್ಳುವುದು ಕಷ್ಟವಾಗುತ್ತದೆ. ವರ್ತನೆಯಲ್ಲಿ ಬದಲಾವಣೆಯನ್ನು ಸಹ ಕಾಣಬಹುದಾಗಿದ್ದು ಈ ಬಗ್ಗೆ ಶಿಕ್ಷಕರು, ಪೋಷಕರಲ್ಲಿ ಅರಿವು ಮೂಡಿಸುವುದು ಅತ್ಯಗತ್ಯವಾಗಿದೆ.
ಬಣ್ಣಗಳು, ಆಟಿಕೆಗಳು, ಆಹಾರ, ತರಕಾರಿ, ಕಲುಷಿತ ನೀರು, ಪೆನ್ಸಿಲ್, ನ್ಯೂಸ್ ಪೇಪರ್ ಪೊಟ್ಟಣಗಳು, ಹೇರ್ ಡೈ ಹೀಗೆ ವಿವಿಧ ಪದಾರ್ಥಗಳಲ್ಲಿ ಸೀಸವನ್ನು ಕಾಣಬಹುದಾಗಿದ್ದು ಇವುಗಳ ಬಳಕೆ ಬಗ್ಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಅತ್ಯಗತ್ಯ. ಸ್ವಚ್ಚತೆ ಕಾಪಾಡುವುದು, ಪೌಷ್ಟಿಕ ಆಹಾರ ಸೇವನೆ ಸೇರಿದಂತೆ ಸೀಸ ಅಂಶ ಇರುವ ವಸ್ತುಗಳಿಂದ ದೂರ ಇರಬೇಕು. ಹಾಗೂ ಮಗುವಿನ ಬೆಳವಣಿಗೆಯಲ್ಲಿ ಕುಂಠಿತ ಕಂಡು ಬಂದರೆ ವೈದ್ಯರನ್ನು ಭೇಟಿಯಾಗಿ ರಕ್ತದಲ್ಲಿನ ಸೀಸದ ಪ್ರಮಾಣ ಪರೀಕ್ಷೆ ಮಾಡಿಸಬೇಕು.
ಈ ರಕ್ತ ಪರೀಕ್ಷೆಗೆ ಸುಮಾರು 1200 ಖರ್ಚು ಮಾಡಬೇಕಾಗುತ್ತದೆ. ಆದರೆ ಇಂದು ದುರ್ಗಿಗುಡಿ ಸರ್ಕಾರಿ ಶಾಲೆಯಲ್ಲಿ ಉಚಿತವಾಗಿ ರಕ್ತದ ಪರೀಕ್ಷೆ ಮೂಲಕ ಸೀಸದ ಅಂಶವನ್ನು ಪರೀಕ್ಷಿಸಲಾಗುತ್ತಿದೆ ಇದರ ಸದ್ಬಳಕೆ ಮಾಡಿಕೊಳ್ಳಬೇಕು. ಪೋಷಕರು ಸೇರಿದಂತೆ ಎಲ್ಲರೂ ಸಹಕರಿಸಬೇಕು. ಇದನ್ನು ತಡೆಗಟ್ಟುವಲ್ಲಿ ಶಿಕ್ಷಕರ ಪಾತ್ರ ಬಹು ಮುಖ್ಯವಾಗಿದ್ದು ಈವರೆಗೆ ಸುಮಾರು 50 ರಿಂದ 60 ಸಾವಿರ ಶಿಕ್ಷಕರಿಗೆ ಸೀಸದ ಬಗ್ಗೆ ಶಿಕ್ಷಣ ನೀಡಿ ಅರಿವು ಮೂಡಿಸಲಾಗಿದೆ. ಶಿಕ್ಷಕರು ಮಕ್ಕಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕು. ಸಿಟಿ ಸ್ಮಾರ್ಟ್ ಆದರೆ ಸಾಲದು, ಜೊತೆಗೆ ಎಲ್ಲರೂ ಸ್ಮಾರ್ಟ್ ಪೀಪಲ್ ಮತ್ತು ಸ್ಮಾರ್ಟ್ ಚಿಲ್ಡçನ್ ಆಗಬೇಕೆಂದು ಕರೆ ನೀಡಿದ ಅವರು ಮಕ್ಕಳ ಭವಿಷ್ಯ ಹಾಗೂ ಆರೋಗ್ಯದ ದೃಷ್ಟಿಯಿಂದ ಈ ಕಾರ್ಯಕ್ರಮವು ಅತ್ಯಂತ ಮಹತ್ವದ್ದಾಗಿದೆ ಎಂದರು.
Department of Health and Family Welfare ಡಾ.ಶಶಿಧರ್ ಮಾತನಾಡಿ, ಸೀಸವು ಮಕ್ಕಳ ಬುದ್ದಿಶಕ್ತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ತಾವು ಒಮ್ಮೆ ಲಕ್ನೋ ಮೆಡಿಕಲ್ ಕಾಲೇಜಿಗೆ ಹೋದಾಗ, ಒಂದು ಮುದ್ದಾದ ಚಿಕ್ಕ ಮಗುವನ್ನು ಆಸ್ಪತ್ರೆಗೆ ಕರೆತಂದಿದ್ದರು. ಮಗು ತುಂಬಾ ಚೆನ್ನಾಗಿದ್ದರೂ ಮಂದವಾಗಿತ್ತು. ಆ ಮಗುವಿನ ರಕ್ತದಲ್ಲಿ ಸೀಸದ ಪ್ರಮಾಣ ಹೆಚ್ಚಾಗಿದ್ದು ಮಗುವಿನ ಮೆದುಳಿನ ವಿಕಾಸ ಕುಂಠಿತವಾಗಿತ್ತು. ಸೀಸದ ಕುರಿತು ಎಲ್ಲರಲ್ಲಿ ಅರಿವು ಮೂಡಿಸುವುದು ಅತ್ಯಗತ್ಯವಾಗಿದ್ದು ಸ್ವಚ್ಚತೆ, ಪೌಷ್ಟಿಕತೆ ಕಡೆ ಗಮನ ಕೊಡಬೇಕು. ನ್ಯೂಸ್ ಪೇಪರ್‌ಲ್ಲಿ ಆಹಾರ ಪೊಟ್ಟಣ ಕಟ್ಟಬಾರದು ಎಂದು ತಿಳಿಸಿದರು.
ದಲ್ಲಾಸ್‌ನ ವೈದ್ಯಕೀಯ ವಿದ್ಯಾರ್ಥಿನಿ ಸೌಮ್ಯ ಮಾತನಾಡಿ, ಸೀಸವು ಮೆದುಳಿನ ಜೀವಕೋಶಗಳಿಗೆ ಹಾನಿ ಮಾಡುವುದರಿಂದ ಮಗುವಿನ ಜ್ಞಾಪಕ ಶಕ್ತಿ, ಗಮನ, ಐಕ್ಯೂ ಮೇಲೆ ಪರಿಣಾಮ ಬೀರಿ ಕಲಿಕಾ ನ್ಯೂನ್ಯತೆ ಮತ್ತು ಇತರೆ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಈ ಬಗ್ಗೆ ಮುಖ್ಯವಾಗಿ ಪೋಷಕರು, ಶಿಕ್ಷಕರು ಮತ್ತು ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕಿದೆ. ಸೀಸ ದೇಹ ಪ್ರವೇಶಿಸುವದನ್ನು ತಡೆಯಲು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು. ಈ ನಿಟ್ಟಿನಲ್ಲಿ ಇದೊಂದು ಬಹು ಪ್ರಮುಖವಾದ ಕಾರ್ಯಕ್ರಮವಾಗಿದೆ. ಇಂತಹ ಕಾರ್ಯಕ್ರಮದಲ್ಲಿ ತಾವು ಪಾಲ್ಗೊಳ್ಳುತ್ತಿರುವುದು ಸಂತಸದ ವಿಚಾರವಾಗಿದೆ ಎಂದು ತಿಳಿಸಿದರು.
ದುರ್ಗಿಗುಡಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಭಾರತಿ ಅಧ್ಯಕ್ಷತೆ ವಹಿಸಿದ್ದರು. ಡಿಎಸ್‌ಓ ಡಾ.ನಾಗರಾಜ್ ನಾಯ್ಕ್, ಕೆಎಫ್‌ಡಿ ನೋಡಲ್ ಅಧಿಕಾರಿ ಡಾ.ಹರ್ಷವರ್ಧನ್, ಸುಬ್ಬ್ಬಯ್ಯ ಮೆಡಿಕಲ್ ಕಾಲೇಜಿನ ಪ್ರೊಫೆಸರ್ ಡಾ.ಬಾಲು, ರೋಟರಿ ಸಂಸ್ಥೆಯ ಕಾರ್ಯದರ್ಶಿ ಧನಂಜಯ ರಾಂಪುರ್, ವಿಜಯಕುಮಾರ್, ಮಹೇಶ್ ಮತ್ತು ಶಿಕ್ಷಕರು ಪಾಲ್ಗೊಂಡಿದ್ದರು. ಎನ್‌ವಿಬಿಡಿಸಿಪಿ ಅಧಿಕಾರಿ ಡಾ.ಗುಡದಪ್ಪ ಕಸಬಿ ಕಾರ್ಯಕ್ರಮ ನಿರ್ವಹಿಸಿದರು.

ರಕ್ತದಾನ ಜೀವ ಉಳಿಸುವ ಶ್ರೇಷ್ಠ ಕಾರ್ಯ ರಕ್ತದಾನಕ್ಕಿಂತ ಬೇರೆ ದಾನ ಮತ್ತೊಂದಿಲ್ಲ

0

ರಕ್ತದಾನ ಜೀವ ಉಳಿಸುವ ಶ್ರೇಷ್ಠ ಕಾರ್ಯವಾಗಿದ್ದು, ರಕ್ತದಾನದಿಂದ ಮಾನಸಿಕ ಹಾಗೂ ದೈಹಿಕ ಸದೃಢತೆ ಹೊಂದಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದರು.
ಲ್ಯಾಂಡ್ ಕಾರ್ಲ್ ಸ್ಟೀನರ್ ಜನ್ಮದಿನ ಮತ್ತು ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಶಿವಮೊಗ್ಗ ಜಿಲ್ಲಾ ವಿತರಕರ ಸಂಘದ ವತಿಯಿಂದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಪೇರೋಕ್ಯಾಸ್ಟ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಸಕಾಲದಲ್ಲಿ ರಕ್ತ ಸಿಗದೇ ಸಾಕಷ್ಟು ಜನ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ರಕ್ತದ ಬೇಡಿಕೆ ಹೆಚ್ಚಿದ್ದು, ಯುವಕರು ರಕ್ತದಾನ ಮಾಡುವುದರ ಮುಖಾಂತರ ಪವಿತ್ರವಾದ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಆಗುವುದಿಲ್ಲ. ದಾನಿಗಳ ದೇಹದಿಂದ ಸಂಗ್ರಹಿಸಿ ಅದನ್ನು ಪರೀಕ್ಷಿಸಿ ಇನ್ನೊಬ್ಬರಿಗೆ ದಾನ ಮಾಡುವ ಪ್ರಕ್ರಿಯೆ ಆಗಿದೆ. ಯುವಜನರು ಮೂಢನಂಬಿಕೆಯಿಂದ ಹೊರಬಂದು ರಕ್ತದಾನ ಮಾಡುವುದರ ಜೊತೆಗೆ ಮತ್ತೊಬ್ಬರನ್ನು ಸಹ ಪ್ರೇರೇಪಿಸಿ ರಕ್ತದಾನಿಗಳನ್ನಾಗಿ ಮಾಡಬೇಕು ಎಂದು ಕರೆ ನೀಡಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ, ರಕ್ತದಾನಿ ಜಿ.ವಿಜಯ್ ಕುಮಾರ್ ಮಾತನಾಡಿ, ಪ್ರತಿಯೊಬ್ಬ ಆರೋಗ್ಯವಂತ ಮನುಷ್ಯ ವರ್ಷದಲ್ಲಿ ಮೂರು ಬಾರಿ ರಕ್ತದಾನ ಮಾಡಬೇಕು. ಸಮಾಜದಲ್ಲಿ ನಿಜವಾದ ಹೀರೋಗಳು ಎಂದರೆ ರಕ್ತದಾನಿಗಳು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗ ಜಿಲ್ಲಾ ವಿತರಕರ ಸಂಘದ ಅಧ್ಯಕ್ಷ ಸಿಎಂ ದೇವರಾಜ್ ಮಾತನಾಡಿ, ನಮ್ಮ ಸಂಸ್ಥೆ ಈಗಾಗಲೇ ತಮ್ಮ ವೃತ್ತಿಯ ಜೊತೆಗೆ ಹಲವಾರು ಸಮಾಜಮುಖಿ ಸೇವಾ ಕಾರ್ಯಗಳನ್ನು ಮಾಡುವುದರ ಮುಖಾಂತರ ಇಂತಹ ಪವಿತ್ರ ಕಾರ್ಯಗಳನ್ನು ಸಹ ಮಾಡುತ್ತಿದೆ. ಸದಸ್ಯರು ರಕ್ತದಾನ ಮಾಡುವುದರ ಮುಖಾಂತರ ಪವಿತ್ರವಾದ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ ಎಂದರು.
ವೇದಿಕೆಯಲ್ಲಿ ರೋಟರಿ ಬ್ಲಡ್ ಬ್ಯಾಂಕಿನ ಮುಖ್ಯಸ್ಥರಾದ ಆನಂದ್. ರಕ್ತದಾನದ ಮಹತ್ವ ಹಾಗೂ ದಾನಿಗಳು , ಪಾಲಿ ಸಬಹುದಾದ ನಿಯಮಗಳ ಬಗ್ಗೆ ತಿಳಿಸಿದರು ..ವಿತರಕರ ಸಂಘದ ಉಪಾಧ್ಯಕ್ಷ ಬದ್ರಿನಾಥ್, ಗೌರವ ಕಾರ್ಯದರ್ಶಿ ಶ್ರೀನಿವಾಸ್.ಗಿರೀಶ್, ಪ್ರಶಾಂತ್, ಶಿವರಾಜ್ ಉಡುಗಣಿ, ಖಜಾಂಚಿ ಚಂದ್ರು, ರಮೇಶ್. ಕುಮಾರ್.. ಮೋಹನ್. ನವೀನ್ ಜವಳಿ.. ರಾಘವೇಂದ್ರ.. ಮಹರುದ್ರಪ್ಪ.ಸಂಘದ ಎಲ್ಲಾ ನಿರ್ದೇಶಕರು ಸದಸ್ಯರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ಪ್ರಾಯೋಜಕತ್ವವನ್ನು. ಕೆಎಂಎಫ್ (ನಂದಿನಿ) ಬೆಂಗಳೂರು. ಹಾಗೂ ಅಕ್ಷಯ ವಿವಿಧೋದ್ದೇಶ. ಸಹಕಾರಿ ನಿಯಮಿತ ಶಿವಮೊಗ್ಗ ಇವರು ವಹಿಸಿಕೊಂಡಿದ್ದಾರೆ

Chamber Of Commerce Shivamogga ಹೊಸ ಕಾಯ್ದೆಯಿಂದ ತೆರಿಗೆದಾರ ಸ್ನೇಹಿ ವ್ಯವಸ್ಥೆ ನಿರ್ಮಾಣ : ಪಿ.ವಿಮಲ್ ರಾಜ್

0

Chamber Of Commerce Shivamogga ಭಾರತದ ಆದಾಯ ತೆರಿಗೆ ಇಲಾಖೆಯು ಪ್ರಾರಂಭ್-2026 ಆರಂಭಿಸಿದ್ದು, ಇದು ದೇಶವ್ಯಾಪಿ ಜಾಗೃತಿ ಅಭಿಯಾನವಾಗಿದೆ. ನಾಗರಿಕರು, ವ್ಯವಹಾರಗಳು ಮತ್ತು ತೆರಿಗೆ ವೃತ್ತಿಪರರಿಗೆ ಹೊಸ ಆದಾಯ ತೆರಿಗೆ ಕಾಯ್ದೆ 2025ರ ಬಗ್ಗೆ ಶಿಕ್ಷಣ ನೀಡಲು ಪ್ರಾರಂಭಿಸಿದೆ ಎಂದು ಬೆಂಗಳೂರು ವಿಭಾಗದ ಆದಾಯ ತೆರಿಗೆ (ಎಸಿಐಟಿ) ಹೆಚ್ಚುವರಿ ಆಯುಕ್ತ ಪಿ.ವಿಮಲ್ ರಾಜ್ ಹೇಳಿದರು.

ಆದಾಯ ತೆರಿಗೆ ಇಲಾಖೆ ಶಿವಮೊಗ್ಗದ ವತಿಯಿಂದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಜಿಲ್ಲಾ ಚಾರ್ಟಡ್ ಅಕೌಂಟೆಂಟ್, ಜಿಲ್ಲಾ ಟ್ಯಾಕ್ಸ್ ಬಾರ್ ಅಸೋಸಿಯೇಷನ್ ಸಹಯೋಗದೊಂದಿಗೆ ಸಂಘದ ಶಾಂತಲಾ ಸ್ಪೇರೋಕಾಸ್ಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಾರಂಭ್-2026 ಹೊಸ ಆದಾಯ ತೆರಿಗೆ ಕಾಯ್ದೆ 2025 ಕಾಯ್ದೆ ಬದಲಾವಣೆ ಬಗ್ಗೆ ಅರಿವು ಮೂಡಿಸುವ ಕಾರ್ಯಗಾರದಲ್ಲಿ ಮಾತನಾಡಿದರು.

ಹೊಸ ಕಾಯ್ದೆ ತುಂಬಾ ಸರಳವಾಗಿ ಸಾಮಾನ್ಯ ಕರದಾತನಿಗೂ ಅರ್ಥವಾಗುವಂತೆ ಇದೆ. ಸಾಕಷ್ಟು ಬದಲಾವಣೆ ತಂದು ಪ್ರಮುಖ ತಿದ್ದುಪಡಿಗಳನ್ನು ತಂದಿರುವುದು ಕಾಯ್ದೆ ಬಗ್ಗೆ ಸಾಕಷ್ಟು ಗೊಂದಲ ಪರಿಹರಿಸಲು ಸಹಾಯವಾಗುತ್ತದೆ ಎಂದು ತಿಳಿಸಿದರು.

ಆದಾಯ ತೆರಿಗೆ ಅಧಿಕಾರಿ ಕೆ.ಶ್ರೀನಿವಾಸ ರಾವ್ ಮಾತನಾಡಿ, ಸರ್ಕಾರವು ಆದಾಯ ತೆರಿಗೆ ವೆಬ್‌ಸೈಟ್ 2.0 ಬಿಡುಗಡೆ ಮಾಡಿದೆ. ಸುಧಾರಿತ ಸಂಚರಣೆ ಮತ್ತು ಸೇವಾ ವಿತರಣೆಗಾಗಿ ಹೆಚ್ಚುವರಿಯಾಗಿ ಇಲಾಖೆಯು ಟಿಡಿಎಸ್, ತೆರಿಗೆ ಪಾವತಿಗಳು ಮತ್ತು ರಿಟರ್ನ್ ಫೈಲಿಂಗ್ ಸಂಬಂಧಿಸಿದಂತೆ ತೆರಿಗೆದಾರರಿಗೆ ನೈಜ ಸಮಯದ ಮಾರ್ಗದರ್ಶನ ಒದಗಿಸಲು ವಿನ್ಯಾಸಗೊಳಿಸಲಾಗಿದೆ ಎಂದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಮಾತನಾಡಿ, ಕರ್ನಾಟಕ ಆದಾಯ ತೆರಿಗೆಯಲ್ಲಿ ಮಾತ್ರವಲ್ಲ, ಸರಕು ಮತ್ತು ಸೇವಾ ತೆರಿಗೆ ಸಂಗ್ರಹಣೆಯಲ್ಲೂ ಸಹ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ತೆರಿಗೆ ಸಂಗ್ರಹಣೆಯಲ್ಲಿ ದಾಖಲೆಯಾಗಲು ತೆರಿಗೆ ಸಲಹೆಗಾರರು ಹಾಗೂ ಸನ್ನದು ಲೆಕ್ಕ ಪರಿಶೋಧಕರ ಸಹಕಾರ ಮತ್ತು ಶ್ರಮ ಅಪಾರ ಎಂದು ಹೇಳಿದರು.

ಶಿವಮೊಗ್ಗ ಜಿಲ್ಲಾ ಚಾರ್ಟರ್ಡ್ ಅಕೌಂಟೆಂಟ್ ಸಂಘದ ಅಧ್ಯಕ್ಷ ಎನ್.ಎಲ್.ಪ್ರಸಾದ್ ಮಾತನಾಡಿ, ಹೊಸ ಕಾನೂನು ಅಂತರರಾಷ್ಟ್ರೀಯ ತೆರಿಗೆ, ವರ್ಗಾವಣೆ ಬೆಲೆ ನಿಗದಿ ಮತ್ತು ಪರಿವರ್ತನೆಯ ಅನುಸರಣೆಗೆ ಸಂಬಂಧಿಸಿದವು, ತೆರಿಗೆ ಸಲ್ಲಿಕೆಯನ್ನು ಹೆಚ್ಚು ಪಾರದರ್ಶಕ ಮಾಡುತ್ತದೆ ಎಂದರು.

ವಮೊಗ್ಗ ಜಿಲ್ಲಾ ಟ್ಯಾಕ್ಸ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ವಿ ಮಂಜುನಾಥ ಮಾತನಾಡಿ, ಹತ್ತು ವರ್ಷಗಳಿಂದ ಆದಾಯ ತೆರಿಗೆ ಇಲಾಖೆಯು ಕೈಗೊಂಡಿರುವ ಅನೇಕ ಸುಧಾರಣೆ ಕ್ರಮಗಳಿಂದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿರುವವರ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿದರು.

Chamber Of Commerce Shivamogga ಸನ್ನದು ಲೆಕ್ಕ ಪರಿಶೋಧಕ ಜೆ.ಸುಜನ್ ಹಾಗೂ ಆದಾಯ ತೆರಿಗೆ ಸಲಹೆಗಾರ ಮಧುಸೂದನ್ ಐತಾಳ್, ಅವರು ಹೊಸ ಆದಾಯ ತೆರಿಗೆ ಕುರಿತು ಮಾತನಾಡಿದರು.

ಜಿಲ್ಲಾ ಟ್ಯಾಕ್ಸ್ ಬಾರ್ ಅಸೋಸಿಯೇಷನ್ ಕಾರ್ಯದರ್ಶಿ ಆರ್.ಮನೋಹರ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ್ ಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ನಿರ್ದೇಶಕರಾದ ಪ್ರದೀಪ್ ಎಲಿ, ರವಿಪ್ರಕಾಶ್ ಜೆನ್ನಿ, ಗಣೇಶ್ ಎಂ.ಅಂಗಡಿ, ಕೆ.ಎನ್.ರಾಜಶೇಖರ್, ಮಾಜಿ ಅಧ್ಯಕ್ಷ ಕೆ.ವಿ.ವಸಂತ್ ಕುಮಾರ್ ಇತರರಿದ್ದರು.

Chamber of Commerce Shivamogga ರಕ್ತ ನೀಡಿ, ಜೀವಗಳನ್ನು ಉಳಿಸಿ : ಜಿ.ವಿಜಯ್ ಕುಮಾರ್

0

Chamber of Commerce Shivamogga ಆರೋಗ್ಯವಂತ ವ್ಯಕ್ತಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಬೇಕು. ರಕ್ತದಾನ ಮಾಡುವುದರಿಂದ ಜೀವ ಉಳಿಸುವ ಶ್ರೇಷ್ಠ ಕಾರ್ಯದಲ್ಲಿ ಕೈಜೋಡಿಸಬಹುದು ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ್ ಕುಮಾರ್ ಹೇಳಿದರು.

ನಗರದ ಹಳೆ ಜೈಲು ವಿನೋಬನಗರದ ಆವರಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ ವಿಶೇಷ ಸಹಕಾರದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವಿಶೇಷ ಕಾರ್ಯಪಡೆ, ಸಿಮ್ಸ್, ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆ, ರಕ್ತ ನಿಧಿ ಕೇಂದ್ರ ಸಹಯೋಗದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿ, ಸ್ವಯಂಪ್ರೇರಿತ ರಕ್ತದಾನಿಗಳನ್ನು ಗೌರವಿಸಲು, ಸುರಕ್ಷಿತ ರಕ್ತ ಮತ್ತು ಪ್ಲಾಸ್ಮಾದ ನಿರಂತರ ಅಗತ್ಯತೆಯ ಬಗ್ಗೆ ಜಾಗತಿಕ ಜಾಗೃತಿ ಮೂಡಿಸಲು ವಾರ್ಷಿಕವಾಗಿ ಜೂನ್ 14 ರಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಲಾಗುತ್ತದೆ. ಈ ದಿನವ ರಕ್ತದ ಗುಂಪನ್ನು ಕಂಡುಹಿಡಿದ ವಿಜ್ಞಾನಿ ಕಾರ್ಲ್ ಲ್ಯಾಂಡ್ಸ್ಟೈನರ್‌ ಅವರ ಜನ್ಮ ವಾರ್ಷಿಕೋತ್ಸವವನ್ನು ಸ್ಮರಿಸುತ್ತದೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಪೊಲೀಸ್ ಮೀಸಲು ಪಡೆ ಪೊಲೀಸ್ ಇನ್ಸಪೆಕ್ಟರ್ ಕೀರ್ತಿ ಕುಮಾರ್ ಮಾತನಾಡಿ, ರಕ್ತವನ್ನು ಕೃತಕವಾಗಿ ಉತ್ಪಾದಿಸಲಾಗುವುದಿಲ್ಲ. ಅದು ನೀಡಲು ಸಿದ್ಧರಿರುವ ಆರೋಗ್ಯವಂತ ಮಾನವ ದಾನಿಗಳಿಂದ ಮಾತ್ರ ಬರಬಹುದು. ನಿಯಮಿತವಾಗಿ ರಕ್ತದಾನ ಮಾಡುವಂತೆ ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಬಿ.ಆರ್.ಧನಂಜಯ್ ಮಾತನಾಡಿ, ಒಬ್ಬ ದಾನಿ ಮೂರು ಜೀವಗಳನ್ನು ಉಳಿಸಬಹುದು. ರಕ್ತದ ಬೇಡಿಕೆ ನಿರಂತರವಾಗಿ ಮತ್ತು ಅಗಾಧವಾಗಿದ್ದು, ಅನೇಕ ದೈನಂದಿನ ಮತ್ತು ತುರ್ತು ವೈದ್ಯಕೀಯ ಅಗತ್ಯಗಳಲ್ಲಿ ಕಂಡುಬರುತ್ತದೆ. ಭಾರತಕ್ಕೆ ವಾರ್ಷಿಕವಾಗಿ ಲಕ್ಷಾಂತರ ಯೂನಿಟ್ ರಕ್ತ ಬೇಕಾಗುತ್ತದೆ ಎಂದು ತಿಳಿಸಿದರು.

Chamber of Commerce Shivamogga ವೈದ್ಯಾಧಿಕಾರಿ ಡಾ. ಡೋನಾ ರೆಮ್ಯಾ ಮಾತನಾಡಿ, ಅಪಘಾತಕ್ಕೊಳಗಾದವರು, ಅಕಾಲಿಕ ಶಿಶು ಅಥವಾ ಕಿಮೊಥೆರಪಿಗೆ ಒಳಗಾಗುವ ರೋಗಿಗೆ ರಕ್ತದ ಅವಶ್ಯಕತೆ ಇರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ರಕ್ತದಾನ ಮಾಡಬೇಕು ಎಂದರು.

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವಿಶೇಷ ಕಾರ್ಯಪಡೆ ಸಿಬ್ಬಂದಿ ರಕ್ತದಾನ ಮಾಡಿದರು. ಆರ್‌ಎಸ್‌ಐ ಗಣೇಶ್, ಆರ್‌ಎಸ್‌ಐ ನವೀನ್, ಎಚ್‌ಸಿ ಡಿ.ಎನ್.ರವೀಂದ್ರ, ನಾಗರಾಜ್ ಸಚಿನ್, ಲೆಕ್ಕ ಪರಿಶೋಧಕ ಆರ್.ಮನೋಹರ, ಸಿಮ್ಸ್, ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆ, ಮೆಗ್ಗಾನ್ ರಕ್ತ ಕೇಂದ್ರದ ಸಿಬ್ಬಂದಿ ಇದ್ದರು.

Shivamogga Narayana Super Specialty Clinic ನಾರಾಯಣ ಸೂಪರ್ ಸ್ಪೆಷಾಲಿಟಿ ಕ್ಲಿನಿಕ್‌ನಲ್ಲಿ ಎಂಡೋಸ್ಕೋಪಿ ಮತ್ತು ಕೀಮೋಥೆರಪಿ ಸೇವೆಗಳಿಗೆ ಸಂಸದರಿಂದ ಚಾಲನೆ – ರೋಗಿಗಳಿಗೆ ಮಾನಸಿಕ ಧೈರ್ಯ ತುಂಬುವಂತೆ ವೈದ್ಯರಿಗೆ ಕಿವಿಮಾತು

0

Shivamogga Narayana Super Specialty Clinic ಶಿವಮೊಗ್ಗ ನಗರದ ನಾರಾಯಣ ಸೂಪರ್ ಸ್ಪೆಷಾಲಿಟಿ ಕ್ಲಿನಿಕ್‌ನಲ್ಲಿ ನೂತನವಾಗಿ ಆರಂಭಿಸಲಾದ ಎಂಡೋಸ್ಕೋಪಿ ಮತ್ತು ಕೀಮೋಥೆರಪಿ ಡೇ-ಕೇರ್ ಸೇವೆಗಳಿಗೆ ಶಿವಮೊಗ್ಗ ಸಂಸದರಾದ ಶ್ರೀ ಬಿ ವೈ ರಾಘವೇಂದ್ರ ಅವರು ಅಧಿಕೃತವಾಗಿ ಚಾಲನೆ ನೀಡಿದರು. ಈ ನೂತನ ಸೇವೆಗಳ ಸೇರ್ಪಡೆಯಿಂದ ಶಿವಮೊಗ್ಗದ ವೈದ್ಯಕೀಯ ಕ್ಷೇತ್ರಕ್ಕೆ ಮತ್ತೊಂದು ಗರಿಮೆ ಒದಗಿದಂತಾಗಿದೆ ಎಂದು ಅವರು ಬಣ್ಣಿಸಿದರು.

ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಸಂಸದರು, ಪ್ರಸ್ತುತ ದಿನಗಳಲ್ಲಿ ದೇಶದಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸರಾಸರಿ ಪ್ರತಿ ಕುಟುಂಬದಲ್ಲೂ ಇಂತಹ ಸಮಸ್ಯೆಗಳು ಕಂಡುಬರುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು. ಕೀಮೋಥೆರಪಿ ಚಿಕಿತ್ಸೆ ಪಡೆಯುವ ರೋಗಿಗಳು ನಿಯಮಿತವಾಗಿ ಆಸ್ಪತ್ರೆಗೆ ಭೇಟಿ ನೀಡಬೇಕಿರುವುದರಿಂದ, ನಗರದ ಮಧ್ಯಭಾಗದಲ್ಲಿಯೇ ಡೇ-ಕೇರ್ ಸೆಂಟರ್ ಆರಂಭಿಸಿರುವುದು ರೋಗಿಗಳಿಗೆ ತ್ವರಿತ ಹಾಗೂ ಸುಲಭ ಚಿಕಿತ್ಸೆ ಪಡೆಯಲು ಹೆಚ್ಚು ಅನುಕೂಲಕರವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕ್ಯಾನ್ಸರ್ ರೋಗಿಗಳಿಗೆ ಕೇವಲ ವೈದ್ಯಕೀಯ ಚಿಕಿತ್ಸೆ ನೀಡುವುದು ಮಾತ್ರವಲ್ಲದೆ, ಅವರಲ್ಲಿ ಮಾನಸಿಕ ಧೈರ್ಯ ಮತ್ತು ಜೀವನದ ಬಗ್ಗೆ ವಿಶ್ವಾಸ ತುಂಬುವ ಕೆಲಸವನ್ನು ವೈದ್ಯರು ಮಾಡಬೇಕು.

ಸಾರ್ವಜನಿಕರು ವೈದ್ಯರನ್ನು ತಮ್ಮ ಮನೆಗಳಲ್ಲಿ ದೇವರಂತೆ ಕಾಣುತ್ತಾರೆ; ಆ ಪವಿತ್ರ ನಂಬಿಕೆ ಮತ್ತು ಸ್ಥಾನಮಾನವನ್ನು ಉಳಿಸಿಕೊಂಡು ಹೋಗುವ ದೊಡ್ಡ ಜವಾಬ್ದಾರಿ ವೈದ್ಯಕೀಯ ತಂಡದ ಮೇಲಿದೆ.

ನಾರಾಯಣ ಹೆಲ್ತ್ ಸಂಸ್ಥಾಪಕ ಡಾ. ದೇವಿ ಶೆಟ್ಟಿ ಅವರ ಸೇವೆಯನ್ನು ಶ್ಲಾಘಿಸಿದ ಸಂಸದರು, ಕೋವಿಡ್ ಸಂಕಷ್ಟದ ಸಮಯದಲ್ಲಿ ಇಡೀ ದೇಶಕ್ಕೆ ಮತ್ತು ಸರ್ಕಾರಕ್ಕೆ ಅವರು ನೀಡಿದ ಮಾರ್ಗದರ್ಶನವನ್ನು ಸ್ಮರಿಸಿದರು. ಇದೇ ವೇಳೆ, ಈ ಹೊಸ ಸೇವೆಗಳ ವಿಸ್ತರಣೆಗೆ ಕಾರಣರಾದ ಕರ್ನಾಟಕ ಕ್ಲಸ್ಟರ್‌ನ ನಿರ್ದೇಶಕ ಡಾ. ವಿಜಯ್ ಸಿಂಗ್ ಮತ್ತು ಫೆಸಿಲಿಟಿ ನಿರ್ದೇಶಕ ಡಾ. ಉತ್ತಮ ಶರ್ಮ ಅವರನ್ನು ಸಂಸದರು ಅಭಿನಂದಿಸಿದರು.

ಮಧ್ಯ ಕರ್ನಾಟಕದ ವೈದ್ಯಕೀಯ ಕೇಂದ್ರವಾಗಿ ಶಿವಮೊಗ್ಗ:
“ಹಿಂದೆಲ್ಲಾ ಯಾವುದೇ ಗಂಭೀರ ಆರೋಗ್ಯ ಸಮಸ್ಯೆಗಳಿದ್ದರೂ ಚಿಕಿತ್ಸೆಗಾಗಿ ಬೆಂಗಳೂರು ಅಥವಾ ಮಣಿಪಾಲಕ್ಕೆ ಹೋಗಬೇಕಾದ ಅನಿವಾರ್ಯತೆ ಇತ್ತು. ಆದರೆ, ಇಂದು ಗುಣಮಟ್ಟದ ಯುವ ವೈದ್ಯರ ದಕ್ಷತೆಯಿಂದಾಗಿ ಶಿವಮೊಗ್ಗವು ಇಡೀ ಮಧ್ಯ ಕರ್ನಾಟಕದ ಜನರನ್ನು ಆಕರ್ಷಿಸುವ ಪ್ರಮುಖ ಹೆಲ್ತ್‌ಕೇರ್ ಕೇಂದ್ರವಾಗಿ ಬೆಳೆಯುತ್ತಿದೆ” ಎಂದು ರಾಘವೇಂದ್ರ ಅವರು ಹರ್ಷ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿ ಅವರಿಗೆ ನೂತನ ಸೇವೆ ಸಮರ್ಪಣೆ

Shivamogga Narayana Super Specialty Clinic ನೂತನವಾಗಿ ಉದ್ಘಾಟನೆಗೊಂಡ ಈ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯವನ್ನು ಸಂಸದರು ನೆಚ್ಚಿನ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಸಮರ್ಪಿಸಿದರು. ಪ್ರಧಾನಿ ಮೋದಿಯವರ ‘ಸ್ವಸ್ಥ ಭಾರತ’ ಪರಿಕಲ್ಪನೆ ಹಾಗೂ ಪ್ರತಿಯೊಬ್ಬ ಜನಸಾಮಾನ್ಯನಿಗೂ ಕೈಗೆಟುಕುವ ದರದಲ್ಲಿ ಅತ್ಯುತ್ತಮ ಗುಣಮಟ್ಟದ ಆರೋಗ್ಯ ಸೇವೆಗಳು ದೊರೆಯಬೇಕು ಎಂಬ ಅವರ ಮಹತ್ವಾಕಾಂಕ್ಷೆಯ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಈ ನೂತನ ಕೇಂದ್ರವು ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ಬಣ್ಣಿಸಿದರು. ದೇಶದ ಮೂಲೆಮೂಲೆಗೂ ಸುಸಜ್ಜಿತ ವೈದ್ಯಕೀಯ ಸೌಲಭ್ಯಗಳನ್ನು ತಲುಪಿಸುವ ಪ್ರಧಾನಮಂತ್ರಿಯವರ ದೂರದೃಷ್ಟಿಯ ಗುರಿಗೆ ಪೂರಕವಾಗಿ ಈ ನೂತನ ಕೀಮೋಥೆರಪಿ ಮತ್ತು ಎಂಡೋಸ್ಕೋಪಿ ಡೇ-ಕೇರ್ ಕ್ಲಿನಿಕ್ ಜನಸೇವೆಗೆ ಮುಡಿಪಾಗಿರಲಿದೆ ಎಂದು ರಾಘವೇಂದ್ರ ಅವರು ಇದೇ ಸಂದರ್ಭದಲ್ಲಿ ಹೆಮ್ಮೆಯಿಂದ ನುಡಿದರು.