Shri Veereshwara Punya Ashram ನಗರದ ಸಾಗರ ರಸ್ತೆಯ ವೀರೇಶ್ವರ ಪುಣ್ಯಾಶ್ರಮ ಸಂಸ್ಕತ ಪಾಠ ಶಾಲೆಯಲ್ಲಿ ಗಾನಲಹರಿ 120ನೇ ಅಮಾವಾಸ್ಯೆಯ ಸಂಗೀತ ಸಂಜೆ ಕಾರ್ಯಕ್ರಮವನ್ನು ಜೂ. 15ರ ಸೋಮವಾರ ಸಂಜೆ 6.30ಕ್ಕೆ ಆಯೋಜಿಸಲಾಗಿದೆ.
Shri Veereshwara Punya Ashram ರಾಜ್ಯ ಪ್ರಶಸ್ತಿ ಪುgಸ್ಕತ ಆರ್.ಬಿ. ಸಂಗಮೇಶ್ವರ ಗವಾಯಿಗಳೂ ಅಧ್ಯಕ್ಷತೆ ವಹಿಸುವರು.ನಗರದ ಸೋಮಿನಕೊಪ್ಪದ ಭಜನಾ ಮಂಡಳಿಯಿಂದ ಭಜನಾ ಸೇವೆ ಮತ್ತು ಆಶ್ರಮದ ಅಂಧ ಮಕ್ಕಳು ಪ್ರಾರ್ಥಿಸಲಿದ್ದಾರೆ. ಧಾರವಾಡದ ಹಿಂದೂಸ್ಥಾನಿ ಗಾಯಕರಾದ ದಿನೇಶ್ ಪಿ. ಗೌಡ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ರಾಜ್ಯ ಪ್ರಶಸ್ತಿ ಪುರಸ್ಕತ ರಾಮಣ್ಣ ಭಜಂತ್ರಿ, ವೀರಭದ್ರಶಾಸ್ತ್ರಿ ವೇದ ಘೋಷ, ತುಕಾರಾಮ್ ರಂಗಧೋಳ್, ವಿನಾಯಕ ಭಟ್ ತಬಲ, ಸಿದ್ದಣ್ಣ ಬಡಿಗೇರ್ ಹಾರ್‍ಮೋನಿಯಂ ಜೊತೆ ಸಾಥ್ ನೀಡಲಿದ್ದಾರೆ. ರೇವಣ್ಣ ಸಿದ್ದಯ್ಯ ಶಾಸ್ತ್ರಿಗಳು ನಿರೂಪಿಸಲಿದ್ದಾರೆ.
