Monday, April 6, 2026
Monday, April 6, 2026
Home Blog Page 615

Rotary Club Shivamogga ಪ್ರತಿಭಾವಂತರು ಬಹಳ ಜನ ಸರ್ಕಾರಿ ಶಾಲೆಗಳಲ್ಲೇ ಓದ್ದಿದ್ದಾರೆ-ರೂಪಾ ಪುಣ್ಯಕೋಟಿ

0

Rotary Club Shivamogga ಹೆಚ್ಚು ಪ್ರತಿಭಾವಂತರು ಹೊರಹೊಮ್ಮಿರುವುದು ಸರಕಾರಿ ಶಾಲೆಗಳಿಂದಲೇ. ಅದ್ದರಿಂದ ಸರಕಾರಿ ಶಾಲೆ, ಕಾಲೇಜು ಎಂಬ ಕೀಳಿರಿಮೆಯನ್ನು ಬಿಟ್ಟು ಅಧ್ಯಯನದ ಕಡೆಗೆ ಹೆಚ್ಚಿನ ಗಮನ ನೀಡಿದರೆ ಸಾಧನೆ ಮಾಡಲು ಎಲ್ಲರಿಂದಲೂ ಸಾಧ್ಯ ಎಂದು ರೋಟರಿ ಕ್ಲಬ್ ಶಿವಮೊಗ್ಗ ಜ್ಯೂಬಿಲಿ ಅಧ್ಯಕ್ಷೆ ರೋ.ರೂಪಾಪುಣ್ಯಕೋಟಿ ಅಭಿಪ್ರಾಯಪಟ್ಟರು.
ಶ್ರಾವಣಮಾಸದ ಹಿನ್ನೆಲೆಯಲ್ಲಿ ಕ್ಲಬ್ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ೮ ಸೇವಾ ಕಾರ್ಯಕ್ರಮಗಳಲ್ಲಿ ಒಂದಾದ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಕಕ ಪರೀಕ್ಷೆಗಳ ಪುಸ್ತಕಗಳನ್ನು ಉಚಿತವಾಗಿ ವಿತರಣೆ ಮಾಡಿ ಮಾತನಾಡಿದರು.
ದೇಶದಲ್ಲಿ ಸಾಧನೆಗೈದ ಹಿರಿಯರೆಲ್ಲರೂ ಸರಕಾರಿ ಶಾಲೆಗಳಲ್ಲಿಯೇ ಕಲಿತರು ಎಂಬುದನ್ನು ಯಾರೂ ಮರೆಯಬಾರದು. ಸರಕಾರದಿಂದಲೂ ಉತ್ತಮ ಸೌಲಭ್ಯಗಳನ್ನು ಕಲ್ಪಿಸಿ ಕಲಿಯುವ ವಾತವರಣವನ್ನು ಸ್ಪಷ್ಟಿ ಮಾಡಲಾಗಿದೆ. ಅದನ್ನು ನಾವು ಸಮರ್ಥವಾಗಿ ಸದುಪಯೋಗ ಮಾಡಿಕೊಳ್ಳಬೇಕಾಗಿದೆ. ಆ ನಿಟ್ಟಿನಲ್ಲಿ ಎಲ್ಲ ವಿದ್ಯಾರ್ಥಿನಿಯರು ಚೆನ್ನಾಗಿ ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು.
ವಿಜ್ಞಾನ ವಿಭಾಗದಲ್ಲಿ ಸರಕಾರಿ ಶಾಲೆಯ ಉಪನ್ಯಾಸಕರು ಅತ್ಯಂತ ಸಮರ್ಥವಾಗಿ ಪಾಠ ಪ್ರವಚನಗಳನ್ನು ಮಾಡುತ್ತಾರೆ. ನಗರದಲ್ಲಿರುವ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಉತ್ತಮ ಉಪನ್ಯಾಸಕರು ಇದ್ದಾರೆ. ಆದರೆ, ಅವರ ಜ್ಞಾನದ ಸದುಪಯೋಗ ಪಡೆಯಲು ಮಕ್ಕಳು ಮುಂದಾಗಬೇಕು. ಯಾವುದೇ ಉಪನ್ಯಾಸಕರ ಸಮರ್ಥ ಜ್ಞಾನವನ್ನು ವಿದ್ಯಾರ್ಥಿಗಳು ಉಪಯೋಗಿಸಿಕೊಂಡರೆ ಮಾತ್ರ ಉತ್ತಮ ಫಲಿತಾಂಶ ಬರಲು ಸಾಧ್ಯ ಎಂದು ಹೇಳಿದರು.
Rotary Club Shivamogga ಈ ಸಂದರ್ಭದಲ್ಲಿ ಕ್ಲಬ್‌ನ ಮಾಜಿ ಅಧ್ಯಕ್ಷ ರೋ.ಎಸ್.ಆರ್.ಲಕ್ಷ್ಮೀನಾರಾಯಣ ಮಾತನಾಡಿ, ವಿದ್ಯಾರ್ಥಿಗಳ ಅಧ್ಯಯನ ಆಸಕ್ತಿಯನ್ನು ಇನ್ನಷ್ಟು ಹುರುದುಂಬಿಸಲು ರೋಟರಿ ಉಚಿತ ಪುಸ್ತಕ ವಿತರಣೆ ಮಾಡಿದೆ. ಮುಂದಿನ ದಿನಗಳಲ್ಲಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ಇನ್ನಷ್ಟು ಅಗತ್ಯ ಸೌಲಭ್ಯ ನೀಡಲು ರೋಟರಿ ಕ್ಲಬ್ ಸದಾ ಸಿದ್ಧವಾಗಿರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಎಸ್.ಜಯಂತ್ ಅವರು ಮಾತನಾಡಿ, ರೋಟರಿ ಸಂಸ್ಥೆಗಳು ಸರಕಾರಿ ಶಾಲೆ ಹಾಗೂ ಕಾಲೇಜುಗಳಿಗೆ ಅನೇಕ ಕೊಡುಗೆಗಳನ್ನು ನೀಡುತ್ತಿವೆ. ಅದರಲ್ಲೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಹಲವು ಯೋಜನೆಗಳನ್ನು ನೀಡುತ್ತಿದ್ದಾರೆ. ಇದನ್ನು ವಿದ್ಯಾರ್ಥಿನಿಯರು ಉಪಯೋಗಿಸಿಕೊಂಡು ಉತ್ತಮ ಫಲಿತಾಂಶ ತರಲು ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರೋ.ಡಾ.ಪ್ರಕೃತಿ, ರೋ.ಭಾರದ್ವಾಜ್, ರೋ.ಸತ್ಯನಾರಾಯಣ್, ರೋ.ವಾಗೀಶ್, ರೋ.ಸತೀಶ ಹಾಗೂ ಇತರರು ಹಾಜರಿದ್ದರು.

Kannada Medium 24×7 ಕನ್ನಡ ಮೀಡಿಯಂ ಟೀವಿಯಿಂದ ಕನ್ನಡ ಕಹಳೆ ಕಾರ್ಯಕ್ರಮ

0

Kannada Medium 24×7 ಕನ್ನಡ ಮೀಡಿಯಂ 24×7 ಡಿಜಿಟಲ್ ವಾಹಿನಿಯು ವಿನೂತನ ಕಾರ್ಯಕ್ರಮಗಳನ್ನು ನಿರಂತರ ಪ್ರಸಾರ ಮಾಡುತ್ತಿದೆ. ಅದರ ಮುಂದಿನ ಭಾಗವಾಗಿ ಪ್ರಸ್ತುತ ಮೈಸೂರು ಸ್ಯಾಂಡಲ್ ಕನ್ನಡ ಕಹಳೆ – ಇದು ಕನ್ನಡ ಕಣ್ಮಣಿಗಳ ನೆಲೆ ಎಂಬ ವಿನೂತನ ರಿಯಾಲಿಟಿ ಶೋ ಕಾರ್ಯಕ್ರಮವನ್ನು ಆಯೋಜಿಸಿದೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ವಾಹಿನಿಯ ಮುಖ್ಯಸ್ಥ ಹೊನ್ನಾಳಿ ಚಂದ್ರಶೇಖರ್, ನಮ್ಮ ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ಬಂದು 50 ವರ್ಷವಾದ ಹಿನ್ನಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಿದೆ. ಇದು ಕನ್ನಡ ಮಾತನಾಡುವ ಸ್ಪರ್ಧೆ, ಶುದ್ಧ ಕನ್ನಡ ಮಾತನಾಡಬೇಕೆಂಬ ನಿಯಮವಿಲ್ಲ. ಆದರೆ ವಾತಾವರಣದ ಕನ್ನಡ ಮಾತನಾಡಬೇಕು. ಅನಗತ್ಯ ಬೇರೆ ಭಾಷೆಯ ಪದಗಳು ಇರಬಾರದು. ಒಬ್ಬರಿಗೆ ಗರಿಷ್ಠ 3 ನಿಮಿಷ ಅವಕಾಶವಿರುತ್ತದೆ ಎಂದರು.
ವೈಯಕ್ತಿಕ ನಿಂದೆ, ಕೋಮು ಸಾಮರಸ್ಯ ಹಾಳು ಮಾಡುವ, ಜನಾಂಗೀಯ ದ್ವೇಷಕ್ಕೆ ಕಾರಣವಾಗುವ, ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆಯಾಗುವ ವಿಷಯಗಳಿಗೆ ಅವಕಾಶ ಇರುವುದಿಲ್ಲ. ನವೆಂಬರ್ ಮೊದಲ ವಾರದ ವರೆಗೂ ಆಡಿಷನ್ ನಡೆಸಲಾಗುವುದು. ನಂತರ 20 ಸ್ಪರ್ಧಿಗಳನ್ನು ಆಯ್ಕೆ ಮಾಡಿ, ಇವರಿಗೆ 10 ಸುತ್ತುಗಳ ಸ್ಪರ್ಧೆ ತೀರ್ಪುಗಾರರ ಸಮ್ಮುಖದಲ್ಲಿ ನಡೆಯುವುದು ಎಂದರು.
ಅಂತಿಮ ಸುತ್ತಿನ ಸ್ಪರ್ಧೆಗಳು ಬಹಿರಂಗ ವೇದಿಕೆಯಲ್ಲಿ ನಡೆಯುವುದು. ವಿಜೇತರಿಗೆ ನಗದು ಪುರಸ್ಕಾರವಿರುತ್ತದೆ. ಸ್ಪರ್ಧೆಗೆ ತೀರ್ಪುಗಾರರಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಿ. ಮಂಜುನಾಥ್, ರಂಗಕರ್ಮಿ . ಸಾಸ್ವೆಹಳ್ಳಿ ಸತೀಶ್‌ ಹಾಗೂ ನಿರೂಪಕ ಸಮನ್ವಯ ಕಾಶಿ ಕಾರ್ಯನಿರ್ವಹಿಸುವರು. ವಾರಕ್ಕೊಮ್ಮೆ ತೀರ್ಪುಗಾರರು ಆಡಿಷನ್ ಮಾಡಿದ ಅಭ್ಯರ್ಥಿಗಳ ವಿಶ್ಲೇಷಣೆ ನಡೆಸುವರು ಎಂದರು.
Kannada Medium 24×7 ಈ ಕಾರ್ಯಕ್ರಮದ ಆಡಿಷನ್ ದಿನಾಂಕಗಳನ್ನು ನಿಗದಿಪಡಿಸಲಾಗುವುದು. ಯಾವುದೇ ಸಂಘ ಸಂಸ್ಥೆ, ಶಾಲೆ ಅಥವಾ ಕಾಲೇಜಿನಲ್ಲಿ ಕನಿಷ್ಠ 30 ಅಭ್ಯರ್ಥಿಗಳು ಆಡಿಷನ್ ನೀಡಬಯಸಿದರೆ ಅವರು ಸೂಚಿಸಿದ ಸ್ಥಳದಲ್ಲಿಯೇ ಆಡಿಷನ್ ಮಾಡಲಾಗುವುದು.
ಕಾರ್ಯಕ್ರಮದ ವಿವರಕ್ಕಾಗಿ ಸಂಪರ್ಕಿಸಿ – 6366100394 ಎಂದು ಮನವಿ ಮಾಡಿದರು.

Kolara Police ನವದಂಪತಿಗಳ ಜಗಳ. ವಧುವಿಗೆ ಚಾಕು ಇರಿದು ಕೊಲೆ.ವರ ಆತ್ಮಹತ್ಯೆಗೆ ಯತ್ನ

0

Kolara Police ಕೋಲಾರ ಜಿಲ್ಲೆಯ ಕೆಜಿಎಫ್​​ ತಾಲೂಕಿನ ಚಂಬರಸನಹಳ್ಳಿಯಲ್ಲಿ ಮದುವೆಯಾದ ಕೆಲವೇ ಗಂಟೆಗಳಲ್ಲಿ ನವದಂಪತಿ ಪರಸ್ಪರ ಹೊಡೆದಾಡಿಕೊಂಡಿದ್ದು, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಧು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಮತ್ತು ವರನ ಸ್ಥಿತಿ ಗಂಭೀರವಾಗಿದೆ.
27 ವರ್ಷದ ನವೀನ್ ಹಾಗೂ 20 ವರ್ಷದ ಲಿಖಿತ ಅವರು ಇಂದು ಸಪ್ತಪದಿ ತುಳಿದಿದ್ದಾರೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಲವೇ ಗಂಟೆಗಳಲ್ಲಿ ಅದೇನಾಯ್ತೋ ಏನೋ ರೂಮ್​ಗೆ ಹೋಗಿ ಇಬ್ಬರೂ ಹೊಡೆದಾಡಿಕೊಂಡಿದ್ದಾರೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ವಧು ಲಿಖಿತ ಅವರು ಸಾವನ್ನಪ್ಪಿದ್ದಾರೆ.
Kolara Police ನವೀನ್ ಹಾಗೂ ಲಿಖಿತಾ ಇಬ್ಬರು ಇಂದು ಬೆಳಗ್ಗೆ ಮದುವೆಯಾಗಿದ್ದು, ನಂತರ ಇಬ್ಬರೂ ಜಗಳವಾಡಿದ್ದಾರೆ. ಕೋಪದ ಭರದಲ್ಲಿ ನವೀನ್, ಪತ್ನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಬಳಿಕ ಅದೇ ಚಾಕುವಿನಿಂದ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುವುದಾಗಿ ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ. ಶಾಂತರಾಜು ಅವರು ತಿಳಿಸಿದ್ದಾರೆ.

ಲೋಕ ಚುನಾವಣೆ ಹಿನ್ನಡೆ ಕಾಂಗ್ರೆಸ್ ಪಕ್ಷದ ಸತ್ಯಶೋಧನಾ ಸಮಿತಿ ಅಧ್ಯಯನ ಪ್ರವಾಸ

0

ಲೋಕಸಭಾ ಚುನಾವಣೆಗಳಲ್ಲಿ ಏರುಪೇರುಗಳಾದ ಕಾರಣ ಈ ಬಗ್ಗೆ ಪಕ್ಷ ಕಮಿಟಿ ಮಾಡಿ ನನಗೆ ಮಂಗಳೂರು, ಚಿಕ್ಕಮಗಳೂರು, ಉಡುಪಿ ಕಾರವಾರ ಮತ್ತು ಶಿವಮೊಗ್ಗದಲ್ಲಿ ಸತ್ಯಶೋಧನ ಸಭೆ ನಡೆಸಲು ತಿಳಿಸಲು ಜವಬ್ದಾರಿ ನೀಡಿರುವುದಾಗಿ ಕೆಪಿಸಿಸಿ ವಕ್ತಾರ ಉಗ್ರಪ್ಪ ತಿಳಿಸಿದರು.

ಮಾಧ್ಯಮಗಳಿಗೆ ಮಾತನಾಡಿ, ಚಿಕ್ಕಮಗಳೂರು, ಮಂಗಳೂರು ಉಡುಪಿ ಮತ್ತು ಕಾರವಾರ ಜಿಲ್ಲೆಯಲ್ಲಿ ಸತ್ಯಶೋಧನ ಸಭೆ ಮುಗಿಸಲಾಗಿದೆ. ಇಂದು ಶಿವಮೊಗ್ಗಕ್ಕೆ ಬಂದಿದ್ದೇವೆ. ಚುನಾವಣೆಯಲ್ಲಿ 20 ಕ್ಷೇತ್ರ ನಿರೀಕ್ಷಿಸಿದ್ದೆವು.

ಬಿಜೆಪಿ 28 ನಿರೀಕ್ಷೆ ಮಾಡಿದ್ದರು. ರಾಷ್ಟ್ರದಲ್ಲಿ 300 ಸ್ಥಾನವನ್ನ ಪಡೆಯುವ ನಿರೀಕ್ಷೆ ಕೂಟಕ್ಕೆ ಬರಲಿದೆ ಎಂದು ತಿಳಿಯಲಾಗಿತ್ತು. ಆದರೆ ಎಲ್ಲವೂ ಉಲ್ಟಾ ಆಗಿವೆ. ಹಾಗಾಗಿ ಸಭೆ ನಡೆಸಲಾಗುತ್ತಿದೆ. ವೈಯುಕ್ತಿಕ ಗುಪ್ತ ಮಾಹಿತಿ ಸಂಗರ್ಹಿಸಿ ಹೈಕಮಾಂಡ್ ಗೆ ನೀಡಲಾಗುತ್ತಿದೆ ಎಂದರು.

10 ವರ್ಷದ ನಂತರ ಪ್ರಧಾನಿ ಮೋದಿ 400 ಸ್ಥಾನ‌ನಿರೀಕ್ಷಿಸಿದ್ದರು. ಆದರೆ ನಿರೀಕ್ಷೆ ಮುಟ್ಟಲಾಗಲಿಲ್ಲ 1957-77 ರ ವರೆಗೆ ಕಾಂಗ್ರೆಸ್ ಇತ್ತು. 1980 ರಲ್ಲಿ ದರ ಏರಿಕೆ ಮೇಲೆ ಚುನಾವಣೆ ನಡೆಯಿತು. 1984 ರಲ್ಲಿ ಇಂದಿರಾ ಹತ್ಯೆ ಮೇಲೆ ನಡೆಯಿತು. ನಂತರ ನಡೆದ ಚುನಾವಣೆ ಭೋಪರ್ಸ್ ಮೇಲೆ, 1990 ರಲ್ಲಿ ರಾಜೀವ್ ಹತ್ಯೆ, 1992 ರಲ್ಲಿ ರಾಮಮಂದಿರದ ವಿಷಯದ ಮೇಲೆ ಚುನಾವಣೆ ನಡೆದಿದೆ‌.

2004 ರವರೆಗೆ ಅಟಲ್ ಜೀ ಸರ್ಕಾರ ನಂತರ ಇಂಡಿಯಾ ಶೈನಿಂಗ್ ನಿಂದ ಆ ಪಕ್ಷಕ್ಕೆ ಸೋಲಾಯಿತು. 2014 ರಲ್ಲಿ ಕಾಂಗ್ರೆಸ್ ವಿರುದ್ಧ ಭ್ರಷ್ಠಾಚಾರದ ಆರೋಪ ಮಾಡಿದ ಬಿಜೆಪಿ ಗದ್ದುಗೆಗೆ ಏರಿತು, 2019 ರಲ್ಲಿ ಪುಲ್ಬಾಮಾ ದಾಳಿ, 2024 ರಲ್ಲಿ 5 ಜಿಯಲ್ಲಿ 12 ಸಾವಿರ ಕೋಟಿಗೆ ಹರಾಜಾಗಿದೆ.

ಬಿಜೆಪಿಗೆ ಕಿಕ್ ಬ್ಯಾಕ್ ಎಷ್ಟು ಹೋಗಿದೆ.ರಫೇಲ್ ಖರೀದಿಯಲ್ಲಿ 40 ಸಾವಿರ ಕೋಟಿ ಹಣ ಹಗರಣ ನಡೆದ ಆರೋಪ ಬಂದವು. ಯಾವುದೂ ಚುನಾವಣೆಯಲ್ಲಿ ಪರಿಗಣನೆಗೆ ಬರಲಿಲ್ಲ ಎಂದರು.
ಮೋದಿ ಬರುವ ವರೆಗೆ ದೇಶದ 52 ಲಕ್ಷ ಕೋಟಿ ಸಾಲವಿತ್ತು. ಮೋದಿ ಕಾಲದಲ್ಲಿ 185 ಲಕ್ಷ ಕೋಟಿ ಸಾಲವಾಯಿತು.

ಮೋದಿಯನ್ನ ಮನೆಕಳುಹಿಸಲು ಎಲ್ಲಾ ಆಯಾಮವಿತ್ತು. ನಮ್ಮಲ್ಲಿ ಆದ ಲೋಪದಿಂದ ಸಾಧ್ಯವಾಗಲಿಲ್ಲ. ಅದನ್ನ ತಿದ್ದಿಕೊಳ್ಳಲು ಪಕ್ಷ ಬದ್ಧವಾಗಿದೆ. ಪೆಟಿ ಪೊಲಿಟಿಷನ್ ನೀತಿಯನ್ನ ಮೋದಿ ಇನ್ನೂ ಬಿಟ್ಟಿಲ್ಲ. ರಾಜ್ಯದಲ್ಲಿ ಪ್ರವಾಹ ಬಂದಿದೆ. ಕೇಂದ್ರದ ಸಹಾಯವೇನು ಎಂದು ತರಾಟೆಗೆ ತೆಗೆದುಕೊಂಡರು.

1500 ಕೋಟಿ ಅನುದಾನವನ್ನ 2009 ರ ಪ್ರವಾಹ ಬಂದಾಗ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ರಾಜ್ಯಕ್ಕೆ ಬಂದು ಸಮೀಕ್ಷೆ ಮಾಡಿ ಸ್ಥಳದಲ್ಲಿ ಹಣ ಬಿಡುಗಡೆ ಮಾಡಿದ್ದರು. ಈಗ ಪ್ರಧಾನಿ ಎಲ್ಲಿ? ರಾಜ್ಯದ ಬಗ್ಗೆ ಬಿಜೆಪಿಗೆ ಒಲವಿದ್ದರೆ 10 ಸಾವಿರ ಕೋಟಿ ಹಣ ಬಿಡುಗಡೆಗೆ ಸಹಕರಿಸಬೇಕು ಎಂದು ಅಗ್ರಹಿಸಿದರು.

ಸೌತ್ ನಲ್ಲಿ ನಡೆದ ಪ್ರವಾಹವನ್ನ ಮತ್ತು ಬರ ತಡೆಗೆ 1 ಲಕ್ಚಕೋಟಿ ರೂ.ಗಳನ್ನ ಕೇಂದ್ರ ಬಿಡುಗಡೆ ಮಾಡಬೇಕು. ಸತ್ಯಶೋಧನಾ ಸಭೆಯಲ್ಲಿ ಮಾಹಿತಿಗಳು ಗುಪ್ತವಾಗಿರುತ್ತವೆ. ಪಕ್ಷ ವಿರೋಧಿ ಚಟುವಟಿಕೆ ಮತ್ತು ಬೇರೆ ಅಂಶಗಳ ಮೇಲೆ ಕ್ರಮ ಕೈಗೊಳ್ಳುವುದು ಎಂದರು.
ನಾಯಕರ ನಡುವೆ ಆಸ್ತಿಪೈಟ್ ಸರಿಯಲ್ಲ. ಬಂಗ್ಲೆ ಮಹಲುಗಳು, ಆಸ್ತಿ ಅಳೆಯುವ ಮಾನದಂಡಗಳಲ್ಲ. ಜನಬೆಂಬಲವೇ ದೊಡ್ಡ ಆಸ್ತಿಯಾಗಿದೆ.

ರಾಜ್ಯಪಾಲರ ಅಂಗಳದಲ್ಲಿ ಸಿಎಂ ಪ್ರಾಸಿಕ್ಯೂಷನ್ ಗೆವಿರುವ ಪ್ರಶ್ನೆ ಬಗ್ಗೆ ಮಾತನಾಡಿದ ಉಗ್ರಪ್ಪ, ಬೆಂಗಳೂರಿನ ರಾಜಭವನ ಪಕ್ಷದ ಕಾರ್ಯಪಾಲಕರಾದಂತೆ ಕಾಣುತ್ತಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವೆ ಸೇತುವೆಯಾಗಬೇಕಾದವರು ಇಂದು ಬೇರೆ ರೀತಿ ನಡೆಯುತ್ತಿದ್ದಾರೆ ಎಂದರು.
ಹತಾಶರಾಗಿ ಬಿಜೆಪಿ-ಜೆಡಿಎಸ್ ಭ್ರಷ್ಠಾಚಾರದ ಆರೋಪ ಮಾಡುತ್ತಿದ್ದಾರೆ.

ಆರ್ ಟಿ ಐ ಕಾರ್ಯಕರ್ತ ಟಿ ಜೆ ಅಬ್ರಹಂ ಯಡಿಯೂರಪ್ಪನವರ ವಿರುದ್ಧ ದೂರು ದಾಖಲಿಸಿದ್ದರು‌. ಯಡಿಯೂರಪ್ಪನವರ ವಿರುದ್ಧ ಪ್ರಕರಣ ಬಾಕಿ ಇದೆ. ರಾಜ್ಯಾಪಾಲರು ಬಿಜೆಪಿಯ ಏಜಂಟಾಗಿ ವರ್ತಿಸ ಬಾರದು. ರಾಜ್ಯ ಪಾಲರ ಮೂರು ನೋಟೀಸ್ ಗೆ ಸಿಎಂ ಕಾರ್ದರ್ಶಿಗಳು ಉತ್ತರ ನೀಡಿದ್ದಾರೆ.

ನೋಟೀಸ್ ಕೊಡಲು ಕಾರಣವೇನು? ಉದ್ದೇಶವೇನು? ಎಂದು ರಾಜ್ಯಪಾಲರ ಕರ್ತವ್ಯವನ್ನ ಪ್ರಶ್ನಿಸಿದ್ದಾರೆ.

Independence Day ಸ್ವಾತಂತ್ರ್ಯೋತ್ಸವದ ಅಂಗವಾಗಿ ರಸ್ತೆ ಓಟದ ಸ್ಪರ್ಧೆ

0

Independence Day 77 ನೇ ಸ್ವಾತಂತ್ರ್ಯೋತ್ಸವದ ಹಾಗೂ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ಸುವರ್ಣ ಮಹೋತ್ಸವದ ಅಂಗವಾಗಿ ನಗರದ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಮತ್ತು ಚುಂಚಾದ್ರಿ ಸ್ಪೋರ್ಟ್ಸ್ ಕ್ಲಬ್ ನ ವತಿಯಿಂದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಬಾಲಕಿಯರಿಗೆ ಆ.14 ರಂದು ನೆಹರು ಕ್ರೀಡಾಂಗಣದಿಂದ ರಸ್ತೆ ಓಟದ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಬೆಳಿಗ್ಗೆ ಸ್ಥಳದಲ್ಲಿಯೇ ನೊಂದಣಿ ಮಾಡಿಕೊಳ್ಳಬಹುದು. ಅಂದು 6 ಗಂಟೆಗೆ ನೆಹರೂ ಕ್ರೀಡಾಂಗಣದಿಂದ ಪ್ರಾರಂಭವಾಗುವ ಓಟದ ಸ್ಪರ್ಧೆ ಶರಾವತಿ ನಗರದ ಬಿಜಿಎಸ್ ವಸತಿ ಶಾಲೆಯ ಆವರಣದಲ್ಲಿ ಕೊನೆಗೊಳ್ಳಲಿದೆ. ಭಾಗವಹಿಸಿದ ಎಲ್ಲಾ ಕ್ರೀಡಾ ಪಟುಗಳಿಗೂ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದೆ.
Independence Day ಪ್ರಾಥಮಿಕ ಶಾಲಾ ಬಾಲಕ, ಬಾಲಕಿಯರಿಗೆ ಹಾಗೂ ಪ್ರೌಢಶಾಲಾ ಬಾಲಕಿಯರಿಗೆ 3 ಕಿ.ಮೀ, ಪ್ರೌಢಶಾಲಾ ಬಾಲಕರಿಗೆ 5 ಕಿ.ಮೀಟರ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಎಂದು ಪ್ರಾಂಶುಪಾಲರಾದ ದಿವ್ಯ ಕರಣಮ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Bhadravati sanchi Honnamma Girls Government Pre-Graduation College ಸಂಚಿಹೊನ್ನಮ್ಮ ಪ.ಪೂ.ಕಾಲೇಜಿನಲ್ಲಿ ಕಂಪ್ಯೂಟರ್ ವಿಭಾಗ ಆರಂಭ-ಡಾ.ಸಿದ್ಧಲಿಂಗ ಮೂರ್ತಿ

0

Bhadravatisanchi Honnamma Girls Government Pre-Graduation College ಭದ್ರಾವತಿಯ ಸಂಚಿಯ ಹೊನ್ನಮ್ಮ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 2024-25 ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಕಂಪ್ಯೂಟರ್ ಸೈನ್ಸ್ ಸಂಯೋಜನೆಯನ್ನು ನೂತನವಾಗಿ ಆರಂಭಿಸಿದೆ. ವಿದ್ಯಾರ್ಥಿಗಳು ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಗಣಿತ ವಿಷಯಗಳೊಂದಿಗೆ ಕಂಪ್ಯೂಟರ್‌ ಸೈನ್ಸ್ ನ್ನು ಐಚ್ಛಿಕ ವಿಷಯವಾಗಿ ವ್ಯಾಸಂಗ ಮಾಡಲಿದ್ದಾರೆ. ನೂತನವಾಗಿ ಆರಂಭಿಸಿರುವ ಈ Bhadravatisanchi Honnamma Girls Government Pre-Graduation College ಸಂಯೋಜನೆಗೆ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತ ವಾಗಿದ್ದು ಮುಂದಿನ ಶೈಕ್ಷಣಿಕ ವರ್ಷದಲ್ಲಿ ದಾಖಲಾತಿ ಹೆಚ್ಚಾಗುವ ನಿರೀಕ್ಷೆಯಿದೆ. ಇಂದು ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ಇವರ ಸಹಯೋಗದೊಂದಿಗೆ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಪಠ್ಯಪುಸ್ತಕಗಳನ್ನು ವಿತರಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಡಾ.ಸಿದ್ಧಲಿಂಗ ಮೂರ್ತಿಯವರು ಭದ್ರಾವತಿಯ ನಾಗರೀಕರು ಈ ಹೊಸ ಸಂಯೋಜನೆಯ ಸದುಪಯೋಗ ಪಡೆಯಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಕ್ಲಬ್ ನ ಅಧ್ಯಕ್ಷರಾದ ರೊ.ಮುಸ್ತಾಕ್ ಅಲಿಶಾ ಹಾಗೂ ಕಾಲೇಜಿನ ಉಪನ್ಯಾಸಕ ಸಿಬ್ಬಂದಿ ಉಪಸ್ಥಿತರಿದ್ದರು.

Grihajyoti Yojana ರಾಜ್ಯದಲ್ಲಿ 1.65 ಕೋಟಿ ಜನ ಗೃಹಜ್ಯೋತಿ ಯೋಜನೆ ಫಲಾನಭವಿಗಳು- ಇಂಧನ ಸಚಿವ ಕೆ.ಜೆ.ಜಾರ್ಜ್

0

Grihajyoti Yojana ರಾಜ್ಯದ 1.65 ಕೋಟಿ ಜನರು ಗೃಹಜ್ಯೋತಿ ಯೋಜನೆ ಲಾಭ ಪಡೆದಿದ್ದಾರೆ. ವಿಶೇಷವಾಗಿ ಮಧ್ಯಮ ವರ್ಗದ ಜನರಿಗೆ ಹೆಚ್ಚಿನ ಅನುಕೂಲವಾಗಿದ್ದು ಹರ್ಷ ವ್ಯಕ್ತಪಡಿಸಿದ್ದಾರೆ. ವಿದ್ಯುತ್‌ ಬಿಲ್‌ನ ಹಣವನ್ನು ಮಕ್ಕಳ ಟ್ಯೂಷನ್‌ ಫೀಸ್‌, ಹಿರಿಯರ ಔಷಧೋಪಚಾರಕ್ಕೆ ಬಳಸಿರುವುದಾಗಿ ಹೇಳಿಕೊಂಡಿದ್ದಾರೆ. ನುಡಿದಂತೆ ನಡೆದಿದ್ದೇವೆ ಎಂಬ ಸಾರ್ಥಕ ಭಾವ ನಮ್ಮಲ್ಲಿದೆ. ಜೊತೆಗೆ ಡಿ-Grihajyoti Yojana ಲಿಂಕ್‌ ಸೌಲಭ್ಯ ಬೇಕೆಂದು ಜನ ಕೋರಿದ್ದರು. ಈಗ ಈ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ತಿಳಿಸಿದ್ದಾರೆ.

Wayanad landslide ಮೃತ ಮಗಳ ದೇಹ‌ ಸಿಗಲಿಲ್ಲ. ಕೇವಲ‌ ಕೈ ಸಿಕ್ಕಿತು. ಪುತ್ರಿಯ ಕೈಯೆಂದು ಪತ್ತೆ ಹಚ್ಚಿ ಅಂತ್ಯೇಷ್ಠಿ ನಡೆಸಿದ ತಂದೆ

0

Wayanad landslide ಕೇರಳದ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಭೂಕುಸಿತದ ಸಂದರ್ಭದಲ್ಲಿ ಮುದ್ದಿನ ಮಗಳು, ಮಗನಂತಹ ಅಳಿಯ, ಮುದ್ದಾದ ಮೊಮ್ಮಗ, ತನ್ನ ಮಡದಿ ಎಲ್ಲರೂ ಈತನ ಕಣ್ಣೆದುರೇ ಜಲ ಪ್ರವಾಹದಲ್ಲಿ ಕಣ್ಮರೆಯಾಗಿ ಬಿಟ್ಟರು.

ತನ್ನ ಕುಟುಂಬದವರಿಗಾಗಿ ಆತ ಹುಡುಕಾಡದ ಸ್ಥಳವಿಲ್ಲ. ಕೊನೆಗೆ ದೂರದಲ್ಲಿ ಉಕ್ಕಿ ಹರಿಯುತ್ತಿದ್ದ ಚಲಿಯಾರ್ ನದಿಯಲ್ಲಿ

ಮಹಿಳೆಯೊಬ್ಬರ ಕೈಯೊಂದು ಸಿಕ್ಕಿದೆ. ಇದು ಯಾರ ಕೈ? ಅವರ ಕಡೆಯವರು ಯಾರಾದರೂ ಗುರುತಿಸಬಹುದಾ ಎಂದುಕೊಂಡು ರಕ್ಷಣಾ ಕಾರ್ಯಪಡೆಯ ಸದಸ್ಯರು ಅದನ್ನು ಇಟ್ಟಿದ್ದರು. ಏಕೆಂದರೆ, ಗುರುತಿಸಲು ಸಾಧ್ಯವಾಗುವಂತಹ ಕುರುಹು ಅ ಕೈಯಲ್ಲಿತ್ತು. ಅದೆಂದರೆ, ಅದರ ಬೆರಳಲ್ಲಿ ಒಂದು ಉಂಗುರವಿತ್ತು.

ಅದನ್ನು ನೋಡಿದ ಒಬ್ಬ ವ್ಯಕ್ತಿ ಈ ಕೈ ನನ್ನ ಮಗಳದ್ದು ಎಂದು ದುಃಖಿಸಿದ್ದಾನೆ. ಮಗಳ ಕೈಯನ್ನು ತನ್ನ ಕೈಯಲ್ಲಿ ಎತ್ತಿಕೊಂಡು ಅತ್ತುಬಿಟ್ಟಿದ್ದಾನೆ . ಈ ಸಾವು ಯಾರಿಗೂ ಯಾವ ತಂದೆಯ ಎದುರು ನೆಡೆಯದಿರಲಿ ಎಂದು ಎದೆಬಡಿದುಕೊಂಡು ತನ್ನ ಮನದಾಳದ ನೋವನ್ನೆಲ್ಲ ಹೊರಹಾಕಿದ್ದಾನೆ.

ಮಗಳ ದೇಹ ಸಿಗದ ಕಾರಣಕ್ಕೆ ತಾನು ಕೈಹಿಡಿದು ಸಾಕಿದ ಮಗಳು ತನ್ನ ಕೈಯಷ್ಟನ್ನೆ ಮಗಳಿಗೆ ಅಂತಿಮ ವಿದಾಯ ಹೇಳಿದ್ದಾನೆ ಆತ. ಅವನು ಬೇರಾರೂ ಅಲ್ಲ. ಅವಳ ತಂದೆ. ಸಿಕ್ಕ ಒಂದು ಕೈಯನ್ನಷ್ಟೇ ಚಿತೆಯ ಮೇಲೆ ಇಟ್ಟು ಅಗ್ನಿ ಸ್ಪರ್ಶಿಸಿ ದುಃಖಿಸುತ್ತಲೆ ಮಗಳ ಅಂತ್ಯಕ್ರಿಯೆ ಮುಗಿಸಿದ

ಈ ಘಟನೆಯಲ್ಲಿ ಸಿಕ್ಕ ಮಗಳ ಕೈಯೊಂದನ್ನೆ ಚಿತೆಗಿಟ್ಟು ಅಗ್ನಿಸ್ಪರ್ಶ ಮಾಡಿದ ನತದೃಷ್ಟ ತಂದೆಯ ಹೆಸರು ರಾಮಸ್ವಾಮಿ. ಇತನ ಪುತ್ರಿ ಜೀಶಾ. ತಂದೆಯ ಕೈ ಹಿಡಿದೇ ಬೆಳೆದ ಮುದ್ದಾದ ಮಗಳು. ರಾಮಸ್ವಾಮಿ ಅವರು ತನ್ನ ಮಗನ ಸಮಾನನಾದ ಮುರುಗನ್ ಎನ್ನುವವನಿಗೆ ಪುತ್ರಿ ಜೀಶಾಳನ್ನು ಕೈ ಹಿಡಿದು ಧಾರೆ ಎರೆದುಕೊಟ್ಟಿದ್ದರು. ಆದರೆ ಭೂಕುಸಿತದಲ್ಲಿ ಮಗಳು, ಅಳಿಯ, ಮೊಮ್ಮಗ ಅಕ್ಷಯ್ ಹಾಗೂ ರಾಮಸ್ವಾಮಿಯ ಮಡದಿ ತೆಂಕಮ್ಮ ಎಲ್ಲರೂ ಕಣ್ಮರೆಯಾಗಿಬಿಟ್ಟರು.

Wayanad landslide ಭೂಕುಸಿತ ಜಲಪ್ರವಾಹಕ್ಕೆ ಅವರೆಲ್ಲಾ ಕೊಚ್ಚಿ ಹೋಗಿದ್ದರು. ರಾಮಸ್ವಾಮಿ ಅದು ಹೇಗೋ ಬಚಾವಾಗಿ ಬಿಟ್ಟಿದ್ದರು. ಕಣ್ಮರೆಯಾದ ಕುಟುಂಬದವರಲ್ಲಿ ಮುದ್ದಾದ ಮೊಮ್ಮಗ ಅಕ್ಷಯ್ ಶವ ಮಾತ್ರ ಸಿಕ್ಕಿತ್ತು. ಉಳಿದವರ ಸುಳಿವೆ ಇಲ್ಲ. ಮೃತ ದೇಹಗಳ ಹುಡುಕಾಟಕ್ಕೆ ಮುಂದಾಗಿದ್ದ ರಕ್ಷಣಾ ಪಡೆಗೆ ಚಲಿಯಾರ್ ನದಿಯಲ್ಲಿ ಮಹಿಳೆಯೊಬ್ಬರ ಒಂದು ಕೈ ಸಿಕ್ಕಿತ್ತು. ಅದರ ಬೆರಳಲ್ಲಿ ಉಂಗುರ ಇತ್ತು.ಉಂಗುರದಲ್ಲಿ ’ಮುರುಗನ್’ ಎಂಬ ಹೆಸರಿದ್ದರಿಂದ ಅದನ್ನು ನೋಡಿದ ರಾಮಸ್ವಾಮಿ ದುಃಖ ತಡೆಯಲಾಗದೆ ನನ್ನ ಮಗಳು, ನನ್ನ ಮಗಳು.ಎಂದು ಎದೆ

ಬಡಿದುಕೊಂಡು ಅಳಲಾರಂಭಿಸಿದ್ದ. ಕಣ್ಣೀರಿಡುತ್ತಲೇ ಮಗಳ ಅಂತ್ಯಕ್ರಿಯೆಗಾಗಿ ಸಣ್ಣ ಚಿತೆಯನ್ನು ಮಾಡಿ ರೋಧಿಸುತ್ತಾ, ತಲೆಯನ್ನು ಚಚ್ಚಿಕೊಳ್ಳುತ್ತಾ, ಕೈಹಿಡಿದು ಬೆಳೆಸಿದ ಮಗಳ ಚಿತೆಯಲ್ಲಿಟ್ಟು ಅಗ್ನಿ ಸ್ಪರ್ಶಮಾಡಿದ.

Shivraj Singh Chauhan ರಸಗೊಬ್ಬರಗಳಿಗೆ ಸಬ್ಸಿಡಿ. ಮೋದಿ ಸರ್ಕಾರದ ಕೊಡುಗೆ-ಸಚಿವ ಶಿವರಾಜ್ ಸಿಂಗ್ ಚೌಹಾನ್.

0

Shivraj Singh Chauhan 45 ಕೆಜಿ ಯೂರಿಯಾದ ಒಂದು ಬ್ಯಾಗ್‌ಗೆ ಕೇಂದ್ರ ಸರ್ಕಾರ ಸರ್ಕಾರ 2,100 ರೂ. ಸಬ್ಸಿಡಿ ನೀಡುತ್ತಿದೆ. ಇದರಿಂದ ರೈತರಿಗೆ ಕೇವಲ 266 ರೂ.ಗಳಿಗೆ ಯೂರಿಯಾ ಸಿಗುತ್ತಿದೆ. ಡಿಎಪಿ 50 ಕೆಜಿ ಬ್ಯಾಗ್‌ಗೆ ಸರ್ಕಾರ 1083 ರೂ.ಗಳ ಸಬ್ಸಿಡಿ ನೀಡುತ್ತಿದೆ. ಇದರಿಂದ ಅನ್ನದಾತರಿಗೆ ಡಿಎಪಿ ಸಿಗುವುದು ಕೇವಲ 1350 ರೂ.ಗಳಿಗೆ. ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ರೈತರಿಗೆ ನೀಡಿದ ಕೊಡುಗೆ ಇದು ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾನ್ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.

Youth Hostels Association of India ವೈಎಚ್ಎಐ ರಾಷ್ಟ್ರೀಯ ಕಾರ್ಯಕಾರಿಣಿಗೆ ಶಿವಮೊಗ್ಗದ ಅ.ನಾ.ವಿಜೇಂದ್ರರಾವ್ ನಾಮಕರಣ ಸದಸ್ಯ

0

Youth Hostels Association of India ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ನಾಮಕರಣ ಸದಸ್ಯರಾಗಿ ಶಿವಮೊಗ್ಗ ನಗರದ ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ತರುಣೋದಯ ಘಟಕದ ಸ್ಥಾಪಕರಲ್ಲೊಬ್ಬರಾದ ಅ.ನಾ.ವಿಜಯೇಂದ್ರ ರಾವ್ ಅವರನ್ನು 2024 ರಿಂದ 2027 ರ ಅವಧಿಗೆ ರಾಷ್ಟ್ರೀಯ ಪದಾಧಿಕಾರಿಗಳೊಂದಿಗೆ ಸಮಾಲೋಚಿಸಿ ರಾಷ್ಟ್ರೀಯ ಅಧ್ಯಕ್ಷರಾದ ಮನೋಜ್
ಜೋರಿಯವರು ನೇಮಿಸಿದ್ದಾರೆ.

ದೇಶದಲ್ಲಿ ಒಟ್ಟು 4 ಜನ ಸಾಧಕರನ್ನು ಈ ಹುದ್ದೆಗೆ ಆಯ್ಕೆ ಮಾಡುತ್ತಾರೆ.

Youth Hostels Association of India ಈ ಹಿಂದೆ ಅ.ನಾ.ವಿ. ಯವರು ವೈ.ಹೆಚ್.ಏ.ಐ. ಹಾಸ್ಟೆಲ್ ಡೆವೆಲಪ್ಮೆಂಟ್ ಸಮಿತಿಯ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಮೂರು ವರ್ಷ ಮತ್ತು ರಾಷ್ಟ್ರೀಯ ಸಮಿತಿಯ ಸದಸ್ಯರಾಗಿ 9 ವರ್ಷ ಸೇವೆ ಸಲ್ಲಿಸಿದ್ದು, ಇವರ ಕಾರ್ಯ ದಕ್ಷತೆಯನ್ನು ಗಮನಿಸಿ
ಈ ಹುದ್ದೆಯನ್ನು ನೀಡಿದ್ದಾರೆ.

ಇವರಿಗೆ ದೊರೆತ ಉನ್ನತ ಹುದ್ದೆಗೆ ವೈ.ಹೆಚ್.ಏ.ಐ. ತರುಣೋದಯ ಘಟಕದ ಅಧ್ಯಕ್ಷರಾದ ಎನ್.ಗೋಪಿನಾಥ್, ಕಾರ್ಯಾಧ್ಯಕ್ಷರಾದ ಎಸ್.ಎಸ್.ವಾಗೇಶ್ ಮತ್ತು ಕಾರ್ಯದರ್ಶಿ ಸುರೇಶ್ ಅಭಿನಂದನೆ ಸಲ್ಲಿದ್ದಾರೆ.