Kolara Police ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಚಂಬರಸನಹಳ್ಳಿಯಲ್ಲಿ ಮದುವೆಯಾದ ಕೆಲವೇ ಗಂಟೆಗಳಲ್ಲಿ ನವದಂಪತಿ ಪರಸ್ಪರ ಹೊಡೆದಾಡಿಕೊಂಡಿದ್ದು, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಧು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಮತ್ತು ವರನ ಸ್ಥಿತಿ ಗಂಭೀರವಾಗಿದೆ.
27 ವರ್ಷದ ನವೀನ್ ಹಾಗೂ 20 ವರ್ಷದ ಲಿಖಿತ ಅವರು ಇಂದು ಸಪ್ತಪದಿ ತುಳಿದಿದ್ದಾರೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಲವೇ ಗಂಟೆಗಳಲ್ಲಿ ಅದೇನಾಯ್ತೋ ಏನೋ ರೂಮ್ಗೆ ಹೋಗಿ ಇಬ್ಬರೂ ಹೊಡೆದಾಡಿಕೊಂಡಿದ್ದಾರೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ವಧು ಲಿಖಿತ ಅವರು ಸಾವನ್ನಪ್ಪಿದ್ದಾರೆ.
Kolara Police ನವೀನ್ ಹಾಗೂ ಲಿಖಿತಾ ಇಬ್ಬರು ಇಂದು ಬೆಳಗ್ಗೆ ಮದುವೆಯಾಗಿದ್ದು, ನಂತರ ಇಬ್ಬರೂ ಜಗಳವಾಡಿದ್ದಾರೆ. ಕೋಪದ ಭರದಲ್ಲಿ ನವೀನ್, ಪತ್ನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಬಳಿಕ ಅದೇ ಚಾಕುವಿನಿಂದ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುವುದಾಗಿ ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ. ಶಾಂತರಾಜು ಅವರು ತಿಳಿಸಿದ್ದಾರೆ.
Kolara Police ನವದಂಪತಿಗಳ ಜಗಳ. ವಧುವಿಗೆ ಚಾಕು ಇರಿದು ಕೊಲೆ.ವರ ಆತ್ಮಹತ್ಯೆಗೆ ಯತ್ನ
Date: