Kannada Medium 24×7 ಕನ್ನಡ ಮೀಡಿಯಂ 24×7 ಡಿಜಿಟಲ್ ವಾಹಿನಿಯು ವಿನೂತನ ಕಾರ್ಯಕ್ರಮಗಳನ್ನು ನಿರಂತರ ಪ್ರಸಾರ ಮಾಡುತ್ತಿದೆ. ಅದರ ಮುಂದಿನ ಭಾಗವಾಗಿ ಪ್ರಸ್ತುತ ಮೈಸೂರು ಸ್ಯಾಂಡಲ್ ಕನ್ನಡ ಕಹಳೆ – ಇದು ಕನ್ನಡ ಕಣ್ಮಣಿಗಳ ನೆಲೆ ಎಂಬ ವಿನೂತನ ರಿಯಾಲಿಟಿ ಶೋ ಕಾರ್ಯಕ್ರಮವನ್ನು ಆಯೋಜಿಸಿದೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ವಾಹಿನಿಯ ಮುಖ್ಯಸ್ಥ ಹೊನ್ನಾಳಿ ಚಂದ್ರಶೇಖರ್, ನಮ್ಮ ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ಬಂದು 50 ವರ್ಷವಾದ ಹಿನ್ನಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಿದೆ. ಇದು ಕನ್ನಡ ಮಾತನಾಡುವ ಸ್ಪರ್ಧೆ, ಶುದ್ಧ ಕನ್ನಡ ಮಾತನಾಡಬೇಕೆಂಬ ನಿಯಮವಿಲ್ಲ. ಆದರೆ ವಾತಾವರಣದ ಕನ್ನಡ ಮಾತನಾಡಬೇಕು. ಅನಗತ್ಯ ಬೇರೆ ಭಾಷೆಯ ಪದಗಳು ಇರಬಾರದು. ಒಬ್ಬರಿಗೆ ಗರಿಷ್ಠ 3 ನಿಮಿಷ ಅವಕಾಶವಿರುತ್ತದೆ ಎಂದರು.
ವೈಯಕ್ತಿಕ ನಿಂದೆ, ಕೋಮು ಸಾಮರಸ್ಯ ಹಾಳು ಮಾಡುವ, ಜನಾಂಗೀಯ ದ್ವೇಷಕ್ಕೆ ಕಾರಣವಾಗುವ, ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆಯಾಗುವ ವಿಷಯಗಳಿಗೆ ಅವಕಾಶ ಇರುವುದಿಲ್ಲ. ನವೆಂಬರ್ ಮೊದಲ ವಾರದ ವರೆಗೂ ಆಡಿಷನ್ ನಡೆಸಲಾಗುವುದು. ನಂತರ 20 ಸ್ಪರ್ಧಿಗಳನ್ನು ಆಯ್ಕೆ ಮಾಡಿ, ಇವರಿಗೆ 10 ಸುತ್ತುಗಳ ಸ್ಪರ್ಧೆ ತೀರ್ಪುಗಾರರ ಸಮ್ಮುಖದಲ್ಲಿ ನಡೆಯುವುದು ಎಂದರು.
ಅಂತಿಮ ಸುತ್ತಿನ ಸ್ಪರ್ಧೆಗಳು ಬಹಿರಂಗ ವೇದಿಕೆಯಲ್ಲಿ ನಡೆಯುವುದು. ವಿಜೇತರಿಗೆ ನಗದು ಪುರಸ್ಕಾರವಿರುತ್ತದೆ. ಸ್ಪರ್ಧೆಗೆ ತೀರ್ಪುಗಾರರಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ್, ರಂಗಕರ್ಮಿ . ಸಾಸ್ವೆಹಳ್ಳಿ ಸತೀಶ್ ಹಾಗೂ ನಿರೂಪಕ ಸಮನ್ವಯ ಕಾಶಿ ಕಾರ್ಯನಿರ್ವಹಿಸುವರು. ವಾರಕ್ಕೊಮ್ಮೆ ತೀರ್ಪುಗಾರರು ಆಡಿಷನ್ ಮಾಡಿದ ಅಭ್ಯರ್ಥಿಗಳ ವಿಶ್ಲೇಷಣೆ ನಡೆಸುವರು ಎಂದರು.
Kannada Medium 24×7 ಈ ಕಾರ್ಯಕ್ರಮದ ಆಡಿಷನ್ ದಿನಾಂಕಗಳನ್ನು ನಿಗದಿಪಡಿಸಲಾಗುವುದು. ಯಾವುದೇ ಸಂಘ ಸಂಸ್ಥೆ, ಶಾಲೆ ಅಥವಾ ಕಾಲೇಜಿನಲ್ಲಿ ಕನಿಷ್ಠ 30 ಅಭ್ಯರ್ಥಿಗಳು ಆಡಿಷನ್ ನೀಡಬಯಸಿದರೆ ಅವರು ಸೂಚಿಸಿದ ಸ್ಥಳದಲ್ಲಿಯೇ ಆಡಿಷನ್ ಮಾಡಲಾಗುವುದು.
ಕಾರ್ಯಕ್ರಮದ ವಿವರಕ್ಕಾಗಿ ಸಂಪರ್ಕಿಸಿ – 6366100394 ಎಂದು ಮನವಿ ಮಾಡಿದರು.
Kannada Medium 24×7 ಕನ್ನಡ ಮೀಡಿಯಂ ಟೀವಿಯಿಂದ ಕನ್ನಡ ಕಹಳೆ ಕಾರ್ಯಕ್ರಮ
Date: