Youth Hostels Association of India ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ನಾಮಕರಣ ಸದಸ್ಯರಾಗಿ ಶಿವಮೊಗ್ಗ ನಗರದ ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ತರುಣೋದಯ ಘಟಕದ ಸ್ಥಾಪಕರಲ್ಲೊಬ್ಬರಾದ ಅ.ನಾ.ವಿಜಯೇಂದ್ರ ರಾವ್ ಅವರನ್ನು 2024 ರಿಂದ 2027 ರ ಅವಧಿಗೆ ರಾಷ್ಟ್ರೀಯ ಪದಾಧಿಕಾರಿಗಳೊಂದಿಗೆ ಸಮಾಲೋಚಿಸಿ ರಾಷ್ಟ್ರೀಯ ಅಧ್ಯಕ್ಷರಾದ ಮನೋಜ್
ಜೋರಿಯವರು ನೇಮಿಸಿದ್ದಾರೆ.
ದೇಶದಲ್ಲಿ ಒಟ್ಟು 4 ಜನ ಸಾಧಕರನ್ನು ಈ ಹುದ್ದೆಗೆ ಆಯ್ಕೆ ಮಾಡುತ್ತಾರೆ.
Youth Hostels Association of India ಈ ಹಿಂದೆ ಅ.ನಾ.ವಿ. ಯವರು ವೈ.ಹೆಚ್.ಏ.ಐ. ಹಾಸ್ಟೆಲ್ ಡೆವೆಲಪ್ಮೆಂಟ್ ಸಮಿತಿಯ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಮೂರು ವರ್ಷ ಮತ್ತು ರಾಷ್ಟ್ರೀಯ ಸಮಿತಿಯ ಸದಸ್ಯರಾಗಿ 9 ವರ್ಷ ಸೇವೆ ಸಲ್ಲಿಸಿದ್ದು, ಇವರ ಕಾರ್ಯ ದಕ್ಷತೆಯನ್ನು ಗಮನಿಸಿ
ಈ ಹುದ್ದೆಯನ್ನು ನೀಡಿದ್ದಾರೆ.
ಇವರಿಗೆ ದೊರೆತ ಉನ್ನತ ಹುದ್ದೆಗೆ ವೈ.ಹೆಚ್.ಏ.ಐ. ತರುಣೋದಯ ಘಟಕದ ಅಧ್ಯಕ್ಷರಾದ ಎನ್.ಗೋಪಿನಾಥ್, ಕಾರ್ಯಾಧ್ಯಕ್ಷರಾದ ಎಸ್.ಎಸ್.ವಾಗೇಶ್ ಮತ್ತು ಕಾರ್ಯದರ್ಶಿ ಸುರೇಶ್ ಅಭಿನಂದನೆ ಸಲ್ಲಿದ್ದಾರೆ.