Monday, April 6, 2026
Monday, April 6, 2026
Home Blog Page 614

Honnali Chandrasekhar ಶಿವಮೊಗ್ಗದ “ರಂಗಜೀವಿ” ಹೊನ್ನಾಳಿ ಚಂದ್ರಶೇಖರ್ ಅವರಿಗೆ ನಾಟಕ ಅಕಾಡೆಮಿ ಪ್ರಶಸ್ತಿ

0

Honnali Chandrasekhar ರಂಗ ಸಂಘಟಕ, ನಟ, ನಿರ್ದೇಶಕರೂ ಆಗಿರುವ ನಮ್ ಟೀಮ್ ರಂಗತಂಡದ ಪ್ರಧಾನ ಕಾರ್ಯದರ್ಶಿ, ಕಲಾವಿದರು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹೊನ್ನಾಳಿ ಚಂದ್ರಶೇಖರ್ ಅವರು ೨೦೨೪-೨೫ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಇವರು ಶಿವಮೊಗ್ಗದ ಕನ್ನಡ ಮೀಡಿಯಂ ೨೪x೭ ವಾಹಿನಿಯ ಪ್ರಧಾನ ಸಂಪಾದಕರೂ ಆಗಿದ್ದು, ಇವರಿಗೆ ಶಿವಮೊಗ್ಗ ಪ್ರೆಸ್ ಟ್ರಸ್ಟ್‌ನ ಅಧ್ಯಕ್ಷ ಎನ್. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ನಾಗರಾಜ ನೇರಿಗೆ, ಖಜಾಂಚಿ ಪಿ. ಜೇಸುದಾಸ್ ಹಾಗೂ ಎಲ್ಲಾ ಟ್ರಸ್ಟಿಗಳು, ಪತ್ರಕರ್ತರು ಅಭಿನಂದಿಸಿದ್ದಾರೆ.
ಬಾಲ ನಟನಾಗಿ ರಂಗಭೂಮಿಗೆ ಪ್ರವೇಶಿಸಿದ ಹೊನ್ನಾಳಿ ಚಂದ್ರಶೇಖರ್ ಅವರು ಮೂರು ದಶಕದಿಂದ ರಂಗಭೂಮಿಯಲ್ಲಿ ಕ್ರಿಯಾಶೀಲರಾಗಿದ್ದಾರೆ. ಹೊನ್ನಾಳಿಯ ಹೊಳೆರಂಗದ ಸಂಚಾಲಕರಾಗಿ, ಶಿವಮೊಗ್ಗ ನಮ್ ಟೀಮ್ ರಂಗತಂಡದ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿಯಾಗಿ, ಕಲಾವಿದರು ಒಕ್ಕೂಟದ ನಿರ್ದೇಶಕ, ಖಜಾಂಚಿ, ಪ್ರಧಾನ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಶಿವಮೊಗ್ಗದಲ್ಲಿ ನಡೆದ ರಂಗ ಸಹ್ಯಾದ್ರಿ, ಕಾಲೇಜು ರಂಗೋತ್ಸವ, ದೇಸಿ ರಂಗೋತ್ಸವ ಸೇರಿದಂತೆ ಹಲವು ನಾಟಕೋತ್ಸವಗಳು, ಶಿಬಿರಗಳ ಸಂಚಾಲಕರಾಗಿದ್ದರು.
Honnali Chandrasekhar ಕುವೆಂಪು ಅವರ ಶೂದ್ರ ತಪಸ್ವಿ, ಗಿರೀಶ್ ಕಾರ್ನಾಡರ ಯಯಾತಿ, ಶ್ರೀರಂಗರ ನೀ ಕೊಡೆ ನಾ ಬಿಡೆ, ಲಂಕೇಶರ ಕಲ್ಲು ಕರಗುವ ಸಮಯ, ಬಿ. ಚಂದ್ರೇಗೌಡರ ಕಡಿದಾಳು ಶಾಮಣ್ಣ, ಕೆ.ವೈ. ನಾರಾಯಣ ಸ್ವಾಮಿ ಅವರ ಪಂಪ ಭಾರತ ಸೇರಿದಂತೆ ಇದೂವರೆಗೆ ಒಟ್ಟು ೧೩ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಪಿ. ಲಂಕೇಶರ ಕಲ್ಲು ಕರಗುವ ಸಮಯ, ಕುವೆಂಪು ಅವರ ಕಥೆ ಆಧಾರಿತ ಮಾಯದ ಮನೆ ಸೇರಿದಂತೆ ಹಲವು ರಂಗರೂಪ ಮಾಡಿದ್ದಾರೆ.
ಕುವೆಂಪು ಅವರ ರಾಮಾಯಣ ದರ್ಶನಂ ಕೃತಿ ಆಧಾರಿದ ಎಸ್.ಆರ್. ವಿಜಯಲಕ್ಷ್ಮೀ ನಿರ್ದೇಶನದ “ಓ ಲಕ್ಷ್ಮಣಾ..”, ಬಿ. ಚಂದ್ರೇಗೌಡರ ರಚನೆ ಎಸ್.ಆರ್. ಗಿರೀಶ್ ನಿರ್ದೇಶನದ “ಬಯಲುಸೀಮೆ ಕಟ್ಟೆ ಪುರಾಣ”, ಪಿ. ಲಂಕೇಶ್ ರಚನೆ ಹಾಗೂ ನಟರಾಜ ಹೊನ್ನವಳ್ಳಿ ನಿರ್ದೇಶನದ “ಗುಣಮುಖ” ಸೇರಿದಂತೆ ಹಲವು ನಾಟಕಗಳಲ್ಲಿ ಪಾತ್ರ ನಿರ್ವಹಿಸಿದ್ದಾರೆ.
೨೪ ವರ್ಷದಿಂದ ನಮ್ ಟೀಮ್ ಅಧ್ಯಕ್ಷ – ಪ್ರಧಾನ ಕಾರ್ಯದರ್ಶಿಯಾಗಿ ಇದೂವರೆಗೆ ೩೭ ನಾಟಕೋತ್ಸವ ಆಯೋಜಿಸಿದ್ದಾರೆ. ೪೩ ಹೊಸ ನಾಟಕಗಳು ರಂಗದ ಮೇಲೆ ಬಂದಿವೆ. ಒಟ್ಟು ನಾಟಕಗಳ ೨೬೪ ಪ್ರದರ್ಶನ ಆಯೋಜಿಸಿದ್ದಾರೆ.

Bagar Hukum ಬಗರ್ ಹುಕುಂ ಪರ ಚಳವಳಿಯಲ್ಲಿ ಹಿರಿಯ ಕಾಗೋಡು ಅವರಿಗೆ ಭಾಗವಹಿಸುವಂತೆ ಹೋರಾಟಗಾರರ ಮನವಿ

0

Bagar Hukum ಸಂವಿಧಾನದ ಬಗ್ಗೆ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗದ ಬಗ್ಗೆ ರಾಜ್ಯ ಸರ್ಕಾರಕ್ಕೆ ಬಗರ್‌ಹುಕುಂ ಜಮೀನು, ಅರಣ್ಯ ವ್ಯಾಪ್ತಿಯ ಜಮೀನ ಸಾಗುವಳಿದಾರರ ಬಗ್ಗೆ ತಿಳುವಳಿಕೆ ನೀಡಲು ಶ್ರೀ ಕಾಗೋಡು ತಿಮ್ಮಪ್ಪ ರವರನ್ನು ರೈತರ ಹೋರಾಟದಲ್ಲಿ ಭಾಗವಹಿಸಲು ಮನವಿ ಮಾಡಲು ಆಗಸ್ಟ್-15 ರಂದು ಕಾಗೋಡು ತಿಮ್ಮಪ್ಪನವರನ್ನು ಅವರ ಮನೆಯಲ್ಲಿ ಕಂಡು ಸನ್ಮಾನಿಸಲಾಗುವುದು ಮತ್ತು ಹೋರಾಟಕ್ಕೆ ಮನವಿ ಮಾಡಲಾಗುವುದು ಎಂದು ಭದ್ರಾವತಿಯ ಮಾನವ ಹಕ್ಕುಗಳ ಹೋರಾಟ ಸಮಿತಿಯ ಅಧ್ಯಕ್ಷ ಬಿ ಎನ್ ರಾಜು ಹೇಳಿದರು.
ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೋರಾಟ ಸಮಿತಿಯು ಅವರನ್ನು ಗೌರವದಿಂದ ಸನ್ಮಾನಿಸಿ ರೈತರ ಹೋರಾಟಕ್ಕೆ ಆಹ್ವಾನಿಲಸಿದೆ. ಸರ್ಕಾರಕ್ಕೆ ಎಚ್ಚರಿಕೆ ನೀಡಲು ರಾಜ್ಯದಲ್ಲಿ ಗಂಡೆದೆಯ ರಾಜಕಾರಣಿ ಕಾಗೋಡು ಮಾತ್ರ ಆಗಿದ್ದಾರೆ ಎಂದರು.
Bagar Hukum ಜಿಲ್ಲೆಯಲ್ಲಿ ಬಗರ್‌ಹುಕ್ಕುಂ ರೈತರ ಮತ್ತು ಅರಣ್ಯ ವ್ಯಾಪ್ತಿ ರೈತರ ಪರವಾಗಿ ಅಂದಿನ ಮಾಜಿ ನಾಯಕರಾದ ಎಸ್ ಬಂಗಾರಪ್ಪ, ಮತ್ತು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಯಡಿಯೂರಪ್ಪ ಹೋರಾಡಿದರು. ಇಂದಿನ ಜಿಲ್ಲಾ ಉಸ್ತುವಾಲಿ ಸಚಿವ ಎಸ್ ಮಧು ಬಂಗಾರಪ್ಪ ಪದೇ ಪದೇ ಪಾದಯಾತ್ರೆಗಳನ್ನು ಮಾಡುತ್ತ ಅಧಿಕಾರವನ್ನು ಪಡೆದುಕೊಳ್ಳುತ್ತ ಬಂದಿದ್ದಾರೆ. ಆದರೆ ಅರಣ್ಯ ಸಚಿವರಿಗೆ ಮತ್ತು ಕಂದಾಯ ಸಚಿವರಿಗೆ ಶಿವಮೊಗ್ಗ ಜಿಲ್ಲೆಯ ಸಾಗುವಳಿದಾರರ ಸಮಸ್ಯೆಗಳ ಬಗ್ಗೆ ವಿಚಾರ ತಿಳಿಸುವಲ್ಲಿ ಅವರು ಮತ್ತು ಸಂಸದ ರಾಘವೇಂದ್ರ ನಿರ್ಲಕ್ಷ್ಯ ವಹಿಸುತ್ತಿರುವುದಾಗಿ ಆರೋಪಿಸಿದರು.

Krishna Bhairegowda ಅಧಿಕಾರದ ದಾಹದಿಂದ ವಿಪಕ್ಷಗಳ ಪಾದಯಾತ್ರೆ. ಸಚಿವ ಕೃಷ್ಣ ಭೈರೇಗೌಡ ವ್ಯಂಗ್ಯ

0

Krishna Bhairegowda ಬಿಜೆಪಿ-ಜೆಡಿಎಸ್ ಅಧಿಕಾರದ ದಾಹದಿಂದ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣೇಬೈರೇಗೌಡ ದೂರಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು,ರಾಜಕೀಯ ಮೇಲಾಟ ಮಾಡುವ ಪ್ರಯತ್ನ ನಡೆದಿದೆ. ಮಳೆಯಿಂದ ಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ.

ಅವರ ಬಗ್ಗೆ ಕಾಳಜಿ ಇಲ್ಲ. 135 ಜನರನ್ನ ಆಯ್ಕೆಯಾದ ಸರ್ಕಾರವನ್ನ‌ ಕೆಡವಲು ಯತ್ನಿಸಲಾಗುತ್ತದೆ. ಅಧಿಕಾರಕ್ಕಾಗಿ ಹಂಬಲಿಸುತ್ತಿದ್ದಾರೆ ಎಂದು ದೂರಿದರು.

ಈಗ ರಾಜ್ಯಪಾಲರನ್ನ ದಾಳವನ್ನಾಗಿ ಮಾಡಿಕೊಳ್ಳಲಾಗಿದೆ. ವಾಲ್ಮೀಕಿ ಹಗರಣದಲ್ಲಿ ಕಲ್ಲೇಶ ಎಂಬ ಅಧಿಕಾರಿಗೆ ಸಿಎಂ ವಿರುದ್ಧ ಹೇಳಿಕೆಕೊಟ್ಟರೆ ಇಡಿ ಬಿಡುತ್ತದೆ ಎಂದು ಬೆದರಿಸಿದ ಉದಹರಣೆಯಿದೆ. ಇದೇ ರೀತಿ ರಾಜ್ಯಪಾಲರ ದುರ್ಬಳಕೆ ಮಾಡಿಕೊಳ್ಳಲು ಬಿಜೆಪಿ ಮುಂದಾಗಿದೆ ಎಂದು ದೂರಿದರು.

ಜಾರ್ಖಂಡ್, ಪ.ಬಂಗಾಳ, ಪಂಜಾಬ್ ಕೇರಳ, ತಮಿಳುನಾಡು ಮೊದಲಾದ ಕಡೆಗಳಲ್ಲಿ ರಾಜ್ಯಪಾರನ್ನ ಬಳಸಿಕೊಂಡು ಜನಾದೇಶದ ವಿರುದ್ಧ ಹೋದ ಪ್ರಕರಣ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಇದು ಕರ್ನಾಟಕದಲ್ಲಿ ಮುಂದುವರೆದಿದೆ. ನಾವು ಬಗ್ಗೊಲ್ಲ. ..ಸುಪ್ರೀಂ ಕೋರ್ಟ್ ಗೆ ಹೋಗುತ್ತೇವೆ. ಬೀದಿಗಳಿದು ಹೋರಾಟ ಮಾಡುತೇವೆ.
ಲೋಕಾಯುಕ್ತರ ಮುಂದೆ ಈ ಹಿಂದೆ ಸಚಿವರಾಗಿದ್ದ ಶಶಿಕಲಾ ಜೊಲ್ಲೆ, ಮುರಗೇಶ್ ನಿರಾಣಿ, ಜನಾರ್ಧನ ರೆಡ್ಡಿ ಅವರ ಆದಾಯಕ್ಕಿಂತ ಶೇ.25% ರಷ್ಟು ಹೆಚ್ಚಿಗೆ ಆರೋಪವಿದೆ. ಇವರ ವಿರುದ್ಧ ವಿಚಾರಣೆಗೆ ಅನುಮತಿ ಬೇಕೆಂದು ಲೋಕಾಯುಕ್ತರು 2021ರಲ್ಲಿ ರಾಜ್ಯಪಾರ ಮುಂದೆಯಿದೆ.

ಇಡಿ ಬಂದು ಸಿಎಂ ವಿರುದ್ಧ ವಿಚಾರಣೆ ಕೇಳಿದ ತಕ್ಷಣ ರಾಜ್ಯಪಾಲರು ವಿಚಾರಣೆಗೆ ಮುಂದಾಗುತ್ತಾರೆ. ಪ್ರಜಾಪ್ರಭುತ್ವದಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವನ್ನ ಉರುಳಿಸಲು ವಿಪಕ್ಷಗಳು ರಾಜ್ಯಪಾಲರನ್ನ ದಾಳವಾಗಿ ಮಾಡಿಕೊಳ್ಳಲು ಮುಂದಾಗಿದ್ದಾರೆ. ಎಂದು ದೂರಿದರು.

Krishna Bhairegowda ಬಿಜೆಪಿ ಸರ್ಕಾರ ಇಲ್ಲದ ರಾಜ್ಯಗಳಲ್ಲಿ ಎಲ್ಲಾಕಡೆ ಇದೇ ಪರಿಸ್ಥಿತಿ ಇದೆ. ಗವರ್ನರ್ ಕಚೇರಿಯನ್ನ ರಾಜಕೀಯ ಶಕ್ತಿಯನ್ನಾಗಿ ಬಳಸಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು. ಶಶಿಕಲಾ ಜೊಲ್ಲೆ ನಿರಾಣಿ ಮತ್ತು ಜನಾರ್ಧನ್ ರೆಡ್ಡಿ ವಿಚಾರದಲ್ಲಿ ಯಾಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಆಕ್ಷೇಪಿಸಿದರು.
ಕುಮಾರಸ್ವಾಮಿ ಅವರು 10 ತಿಂಗಳಲ್ಲಿ ಸರ್ಕಾರ ಉರುಳುತ್ತದೆ ಎಂದು ಹೇಳುತ್ತಿದ್ದಾರೆ. ಇವರಿಗೆ ಮತ್ತು ವಿಜೇಂದ್ರರಿಗೆ ಅಧಿಕಾರ ಬೇಕಿದೆ. ಮಳೆಯಿಂದ ಜನ ತೊಂದರೆಯಲ್ಲಿದ್ದಾರೆ.

ಅವರ ಬಗ್ಗೆ ಈ ನಾಯಕರಿಗೆ ಗಮನವಿಲ್ಲ. ಆದರೆ ಸರ್ಕಾರ ಬೀಳಿಸುವ ಯತ್ನದಲ್ಲಿದ್ದಾರೆ ಎಂದು ಲೇವಡಿ ಮಾಡಿದರು.

Director Hemant Hegde ” ನಾ ನಿನ್ನ ಬಿಡಲಾರೆ” ಹಾರರ್ ಚಿತ್ರ ಸದ್ಯದಲ್ಲೇ ಸೆಟ್ ಏರಲಿದೆ- ನಿರ್ದೇಶಕ ಹೇಮಂತ್ ಹೆಗಡೆ

0

Director Hemant Hegde ’ನಾ ನಿನ್ನ ಬಿಡಲಾರೆ’ ಎಂಬ ಹಾರರ್ ಚಿತ್ರ ಸದ್ಯದಲ್ಲಿಯೇ ಸೆಟ್ಟೇರಲಿದ್ದು ಅದರ ಪ್ರಚಾರ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಚಿತ್ರ ತಂಡದಿಂದ ಸಿನಿ ಸಂಭ್ರಮ ಎಂಬ ಬಹುದೊಡ್ಡ ಈವೆಂಟ್‌ನ್ನು ಆ.17ರಂದು ಬೆಳಿಗ್ಗೆ 9ರಿಂದ ರಾತ್ರಿ 9 ರವರೆಗೆ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದೆ ಎಂದು ನಟ ಹಾಗೂ ನಿರ್ದೆಶಕ ಹೇಮಂತ್ ಹೆಗಡೆ ಹೇಳಿದರು.
ಪ್ರೆಸ್ ಟ್ರಸ್ಟಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿನಿಸಂಭ್ರಮ ಒಂದು ಬಹುದೊಡ್ಡ ಇವೆಂಟ್ ಆಗಲಿದೆ. ಇದರ ಅಂಗವಾಗಿ ಶ್ರೀಮತಿ ಶಿವಮೊಗ್ಗ ಸೌಂದರ್ಯ ಸ್ಪರ್ಧೆ, ಅಂತರಕಾಲೇಜು ಫ್ಯಾಷನ್ ಡ್ರಾಮಾ ಜ್ಯೂನಿಯರ್, ಡ್ರಾಮಾ ಸೀನಿ, ಸಿನಿಮಾ ಡ್ಯಾನ್ಸರ್‌ಗಳಿಂದ ನೃತ್ಯ ಪ್ರದರ್ಶನವನ್ನು ಆಯೋಜಿಸಲಾಗಿದೆ. ಜೊತೆಗೆ ವಾಸಕಿ ವೈಭವ ಮತ್ತು ತಂಡದವರಿಂದ ಸಂಗೀತ ಸಂಜೆ ಏರ್ಪಡಿಸಲಾಗಿದೆ ಎಂದರು.
Director Hemant Hegde ಕಾರ್ಯಕ್ರಮದಲ್ಲಿ ಸುಮಾರು30 ಕೋಟಿ ರೂ. ಬೆಲೆಬಾಳುವ ಒಂದು ಶ್ವಾನದ ಪ್ರದರ್ಶನವು ಇರುತ್ತದೆ. ನಟಿಯರಾದ ಭಾವನಾ, ಕಿಶೋರ್, ಅಪೂರ್ವ, ಶರತ್ ಲೋಹಿತಾಶ್ವ ಸೇರಿದಂತೆ ಹಲವು ನಟ ನಟಿಯರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ನಾ ನಿನ್ನ ಬಿಡಲಾರೆ ಚಿತ್ರ ನಿರ್ಮಾ ಣಕ್ಕೆ ಈಗಾಗಲೇ ಮೂಹೂರ್ತ ನಡೆದಿದ್ದು, ಶೀರ್ಷಿಕೆ ಮಾತ್ರ 1989ರಲ್ಲಿ ತೆರೆಕಂಡ ನಾ ನಿನ್ನ ಬಿಡಲಾರೆ ಸಿನಿಮಾದ್ದಾಗಿದೆ. ಆದರೆ ಕಥೆಗೂ ಮತ್ತು ಚಿತ್ರಕ್ಕೂ ಸಂಬಂಧವಿಲ್ಲ. ಇದೊಂದು ಕೊಲೆಯ ಸುತ್ತ ಇರುವ ಭಯಾನಕ ಚಿತ್ರವಾಗಿದೆ. ಡಿಸೆಂಬರ್‌ನಲ್ಲಿ ಚಿತ್ರ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಟ ರೇವಣಸಿದ್ದಯ್ಯ ಮತ್ತಿತರರಿದ್ದರು.

CM Siddharamaih ಶೋಷಿತ ವರ್ಗಗಳ ಮಹಾ ಒಕ್ಕೂಟದ ಕಾರ್ಯಕರ್ತರಿಂದ ಬಿ.ವೈ.ವಿಜಯೇಂದ್ರ ನಿವಾಸಕ್ಕೆ ಮುತ್ತಿಗೆ

0

CM Siddharamaih ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸುತ್ತಿರುವ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಶಿವಮೊಗ್ಗದ ನಂಜಪ್ಪ ಬಡಾವಣೆಯ ಮನೆಗೆ ಗುರುವಾರ ಕರ್ನಾಟಕ ರಾಜ್ಯ ಶೋಷಿತ ವರ್ಗಗಳ ಮಹಾ ಒಕ್ಕೂಟ ಮುತ್ತಿಗೆ ಹಾಕಿ ಪ್ರತಿಭಟನೆಗೆ ಯತ್ನಿಸಿತು.
ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಎಲ್ಲಾ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆಗೊಳಿಸಿದರು.

ಪ್ರತಿಭಟನಾಕಾರರು ಸಿದ್ದರಾಮಯ್ಯ ಅವರ ಭಾವಚಿತ್ರ ಹಿಡಿದು ವಿಜಯೇಂದ್ರ ಸೇರಿದಂತೆ ಬಿಜೆಪಿ- ಜೆಡಿಎಸ್ ನಾಯಕರ ವಿರುದ್ಧ ಹಾಗೂ ಸಿದ್ದರಾಮಯ್ಯ ಪರ ಘೋಷಣೆ ಕೂಗಿದರು. ವಿಜಯೇಂದ್ರ ಮನೆಗೆ ಮುತ್ತಿಗೆ ಹಾಕದಂತೆ ಪೊಲೀಸರು ಬ್ಯಾರಿಕೇಡ್ ಹಾಕಿ ತಡೆದರು.

ಬ್ಯಾರಿಕೇಡ್ ನೂಕಿ ಪ್ರತಿಭಟನಾಕಾರರು ಮುಂದೆ ಸಾಗಿದರು. ಎರಡನೇ ಬ್ಯಾರಿಕೇಡ್‌ನಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ತಡೆದರೂ ಬ್ಯಾರಿಕೇಡ್ ಮೇಲೆ ಹತ್ತಿ ಒಳ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಎಲ್ಲಾ ಪ್ರತಿಭಟನಗಾರರನ್ನು ಬಂಧಿಸಿ, ತಮ್ಮ ವಾಹನದಲ್ಲಿ ಕರೆದುಕೊಂಡು ಹೋದರು.

ಈ ವೇಳೆ ಮಾತನಾಡಿದ ಒಕ್ಕೂಟದ ಸಂಚಾಲಕ ಕೆ.ರಂಗನಾಥ್, “ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು, ಸಿಎಂ ಸಿದ್ದರಾಮಯ್ಯ ಮೇಲೆ ಮುಡಾದ ವಿಚಾರದಲ್ಲಿ ಸುಳ್ಳು ಆರೋಪ ಮಾಡಿ, ಪಾದಯಾತ್ರೆ ನಡೆಸುತ್ತಿದ್ದಾರೆ. ಇವರ ಮೇಲೆಯೇ ಸಾಕಷ್ಟು ಆರೋಪಗಳು ಇರುವಾಗ ಯಾವುದೇ ತಪ್ಪು ಮಾಡದ ಸಿದ್ದರಾಮಯ್ಯ ಅವರ ಮೇಲೆ ಆರೋಪ ಮಾಡುತ್ತಿರುವುದು ಖಂಡನೀಯ. ಇದರಿಂದ ನಾವು ವಿಜಯೇಂದ್ರ ಮನೆಗೆ ಮುತ್ತಿಗೆ ಹಾಕುವ ಯತ್ನ ಮಾಡಿದ್ದೇವೆ” ಎಂದು ತಿಳಿಸಿದರು.

CM Siddharamaih ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಶೋಷಿತ ವರ್ಗಗಳ ಮಹಾ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎಂ.ಶರತ್ ಪಾಲಕ್ಷ, ಉಮೇಶ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

Kumsi Police ದೊಡ್ಡದಾವನಂದಿ ಗ್ರಾಮದ ಕೆರೆಗೆ ಜಾರಿ ಯುವಕನ ಮರಣ

0

Kumsi Police ಶಿವಮೊಗ್ಗ ತಾಲೂಕಿನ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡದಾವನಂದಿ ಗ್ರಾಮದ ಕೆರೆಯಲ್ಲಿ ಯುವಕನೋರ್ವನ ಶವವೊಂದು ಪತ್ತೆಯಾಗಿದ್ದು ಆತನನ್ನು ಸ್ಥಳೀಯ ನಿವಾಸಿ ನಿತಿನ್ ಎಂದು ಗುರುತಿಸಲಾಗಿದೆ.

ಅಂಗವಿಕಲನಾಗಿದ್ದ ನಿತಿನ್ (29) ತುದಿಗಾಲಿನಲ್ಲಿ ನಡೆಯುತ್ತಿದ್ದ.ಗ್ರಾಮದ ಬಸ್ ನಿಲ್ದಾಣದಲ್ಲಿ ಚಹದಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದನು. ಇವರ ತಾಯಿ ಕೃಷಿ ಕೂಲಿ ಕೆಲಸ ಮಾಡಿಕೊಂಡಿದ್ದರು.

Kumsi Police ಆ.06 ರಂದು ಗ್ರಾಮದಲ್ಲಿನ ಕೆರೆಯಲ್ಲಿ ಅಂಗಾತ ಬಿದ್ದು ಎರಡು ಕಾಲುಗಳು ಕೆರೆಯಹೊರಭಾಗದಲ್ಲಿ ಬಿದ್ದು ಸಾವನ್ನಪ್ಪಿದ್ದನು.
ನಿತಿನ್ ಮತ್ತು ಅವರ ತಾಯಿ ಇಬ್ಬರೇ ಇದ್ದು ಕೆರೆಯಲ್ಲಿ ಆಯತಪ್ಪಿ ಅಥವಾ ಕಾಲು ಜಾರಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ ಸಂಜೆ ಅಂಗಡಿ ಕಡೆ ಬಂದ ತಾಯಿಗೆ ಶೌಚಕ್ಕೆ ಹೋಗಿ ಬರುವುದಾಗಿ ಹೇಳಿ ಆಕೆಗೆ ಮನೆಗೆ ತೆರಳಲು ಸೂಚಿಸಿದ್ದನು.

ಆದರೆ ಮನೆಗೆ ಎಷ್ಟು ಹೊತ್ತು ಕಳೆದರೂ ಮನೆಗೆ ಬಾರದ ನಿತಿನ್‌ನನ್ನು ಹುಡುಕಿಕೊಂಡು ಹೋದಾಗ ಶವ ಕಂಡುಬಂದಿದೆ.

Actor Shantokhan ಬಾಂಗ್ಲಾದೇಶದಲ್ಲಿ ಮುಜಿಬುರ್ ಬಗ್ಗೆ ಚಿತ್ರ ನಿರ್ಮಿಸಿದ ಸಲೀಮ್ ಖಾನ್ ಮತ್ತು ನಟ ಶಾಂತೋಖಾನ್ ಹತ್ಯೆ

0

Actor Shantokhan ಬಾಂಗ್ಲಾದೇಶದಲ್ಲಿ ಯುವಕರು ಬೀದಿಗಿಳಿದಿದ್ದಾರೆ. ಮೀಸಲಾತಿ ವಿರೋಧಿ ಹೋರಾಟ ಹಿಂಸಾಚಾರಕ್ಕೆ ತಿರುಗಿದೆ. ಈ ವರೆಗೆ ಸುಮಾರು 200 ಕ್ಕೂ ಹೆಚ್ಚು ಜನ ಜೀವ ಹೋಗಿದೆ. ಜನರು ಅದೆಷ್ಟು ಹುಚ್ಚಾಟಕ್ಕಿಳಿದಿದ್ದಾರೆಂದು ಆಗಸ್ಟ್ 05 ರಂದು ಸಿನಿಮಾ ನಿರ್ಮಾಪಕ ಮತ್ತು ಸ್ಟಾರ್ ನಟನಾಗಿರುವ ಆತನ ಮಗನನ್ನು ನಡು ರಸ್ತೆಯಲ್ಲಿ ಹೊಡೆದು ಕೊಂದು ಹಾಕಿದ್ದಾರೆ.

ಪೊಲೀಸರಿಗೆ ವಿಷಯ ತಿಳಿದರೂ ಸಹ ಹೋಗಿ ಕಾಪಾಡಲು ಆಗಲಿಲ್ಲ ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಬಾಂಗ್ಲಾದೇಶದಲ್ಲಿನ ಹಿಂಸಾಚಾರದಲ್ಲಿ ನಟ ಶಾಂತೊ ಖಾನ್‌ ಹಾಗೂ ಅವರ ತಂದೆ, ನಿರ್ಮಾಪಕ ಸಲೀಮ್ ಖಾನ್ ಅವರನ್ನು ಹತ್ಯೆ ಮಾಡಲಾಗಿದೆ.

ಬಾಲಿಯಾ ಯೂನಿಯನ್‌ನಲ್ಲಿರುವ ಫರಕ್ಕಾಬಾದ್ ಬಜಾರ್‌ಗೆ ಸೆಲಿಮ್ ಮತ್ತು ಶಾಂಟೊ ತಮ್ಮ ಹಳ್ಳಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು ಎಂದು ತಿಳಿಸಿವೆ. ಸ್ಥಳೀಯರು ಅವರನ್ನು ತಡೆಯಲು ಪ್ರಯತ್ನಿಸಿದಾಗ, ಅವರು ತಪ್ಪಿಸಿಕೊಳ್ಳಲು ಗುಂಡು ಹಾರಿಸಿದರು. ಆದರೆ, ಸಮೀಪದ ಬಗರಬಜಾರ್ ಪ್ರದೇಶವನ್ನು ತಲುಪಿದಾಗ, ಆಕ್ರೋಶಗೊಂಡ ಗುಂಪು ಅವರನ್ನು ಹಿಡಿದು ಕೊಂದಿತು ಎಂದು ಹೇಳಲಾಗಿದೆ.

Actor Shantokhan ಪಶ್ಚಿಮ ಬಂಗಾಳದ ಚಿತ್ರೋದ್ಯಮದ ಸದಸ್ಯರು ಈ ಹತ್ಯೆಯನ್ನು ಖಚಿತಪಡಿಸಿದ್ದು ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಶಾಂತೊ ಖಾನ್‌ ಜೊತೆ ಕೆಲಸ ಮಾಡಿದ್ದ ಬಂಗಾಳದ ನಟರು ಹತ್ಯೆಯ ಕಾರಣಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದು ಅವು ಬೇರೆ ದೇಶದ ಆಂತರಿಕ ವಿಷಯಗಳಾಗಿವೆ ಎಂದು ಹೇಳಿದ್ದಾರೆ.

Belur Gopalakrishna ತಾಕತ್ತಿದ್ದರೆ ಕಾಂಗ್ರೆಸ್ ಸರ್ಕಾರ ಬೀಳಿಸಿ- ಶಾಸಕ ಬೇಳೂರು ಗೋಪಾಲಕೃಷ್ಣ ವಿಪಕ್ಷಗಳಿಗೆ ಸವಾಲು

0

Belur Gopalakrishna ಬಿಜೆಪಿ ಮತ್ತವರ ಮೈತ್ರಿ ಪಕ್ಷದ ನಾಯಕರಿಗೆ ತಾಕತ್ತು ಮತ್ತು ದಮ್ಮಿದ್ದರೆ ಕಾಂಗ್ರೆಸ್ ಸರಕಾರ ಬೀಳಿಸಲಿ ಎಂದು ಶಾಸಕರು ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮ ದ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ ಸವಾಲೆಸೆದಿದ್ದಾರೆ.

ಪ್ರೆಸ್ ಟ್ರಸ್ಟಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಎಸ್‌ಐ ನೇಮಕಾತಿ ಹಗರಣದ ತನಿಖೆ ಸರಿಯಾಗಿ ನಡೆದರೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಜೈಲಲ್ಲಿರಬೇಕಾಗುತ್ತದೆ. ಚೆಕ್‌ನಲ್ಲಿ ಲಂಚ ಪಡೆದ ದಾಖಲೆ ಇವರ ಹೆಸರಿಗಿದೆ. ಭ್ರಷ್ಟಾಚಾರದ ರೂವಾರಿಗಳ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದೆ. ಜನರಿಗೆ ಈ ಮೈತ್ರಿ ನಾಯಕರ ನಾಟಕ ಗೊತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಚ್ಛ ಆಡಳಿತ ನಡೆಸುತ್ತಿದ್ದಾರೆ.

ಇದನ್ನು ಸಹಿಸದ ಬಿಜೆಪಿ ನಾಯಕರು ಇಲ್ಲದ ಆರೋಪ ಮಾಡಿದ್ದಾರೆ. ರಾಜ್ಯ ಪಾಲರು ಸತ್ಯದ ಪರ ಇರಬೇಕು. ರಾಜಭವನವನ್ನು ಬಿಜೆಪಿ ಕಚೇರಿ ಮಾಡಿಕೊಂಡರೆ ಈ ರೀತಿಯ ಪ್ರಕರಣಗಳಿಗೆ ಬೆಂಬಲ ನೀಡುತ್ತಾರೆ ಎಂದು ಹೇಳಿದರು.

ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿನ ಅಕ್ರಮ ನೇಮಕಾತಿಗಳಲ್ಲಿ ಯಡಿಯೂರಪ್ಪರ ಪುತ್ರ ರಾಘವೇಂದ್ರರ ಕೈವಾಡವಿದೆ. ಪ್ರಕರಣ ತನಿಖೆಯಾಗಬೇಕೆಂದು ಈಗಾಗಲೇ ಪತ್ರ ಅರ್ಜಿ ಕೊಟ್ಟಿದ್ದೇನೆ. ಶಿವಮೊಗ್ಗ ಜಿಲ್ಲೆಯಲ್ಲಿ ಇವರುಗಳು ಮಾಡಿರುವ ಅಕ್ರಮಗಳ ತನಿಖೆ ಆಗುತ್ತದೆ.
ಮಾಚೇನಹಳ್ಳಿಯಲ್ಲಿ ಕೈಗಾರಿಕೋದ್ಯಮಿಗಳಿಗೆ ಅಗ್ಗದ ದರದಲ್ಲಿ ಭೂಮಿ ನೀಡಿದ್ದಾರೆ. ಈ ಎಲ್ಲ ಪ್ರಕರಣಗಳನ್ನು ತನಿಖೆ ಮಾಡಿಸುತ್ತೇವೆ ಎಂದು ಬೇಳೂರು ಹೇಳಿದರು.

Belur Gopalakrishna ವಿರೋಧಿಗಳ ಪಿತೂರಿ:
ಕೆಪಿಟಿಸಿಎಲ್ ಎಂಜಿನೀಯರ್ ಶಾಂತಕುಮಾರ್ ನನ್ನ ಮೇಲೆ ಮಾಡಿರುವ ಆರೋಪ ನಿರಾಧಾರವಾಗಿದೆ. ನಾನು ಅವರ ಹಿಂದೆ ನನ್ನ ರಾಜಕೀಯ ವಿರೋಧಿಗಳಿರುವ ಅನುಮಾನ ಇದೆ. ಕೋರ್ಟ್‌ನಲ್ಲಿ ನಡೆದ ವಿಚಾರಣೆಯ ವಿಡಿಯೊ ತುಣಕನ್ನು ಮಾಜಿ ಶಾಸಕರು ಎಲ್ಲರಿಗೂ ಕಳಿಸುತ್ತಿದ್ದಾರೆ. ಪರಿಷತ್ ಸದಸ್ಯ ಸಿ.ಟಿ.ರವಿ ನನ್ನ ರಾಜೀನಾಮೆ ಕೇಳಿದ್ದಾರೆ. ಮಂತ್ರಿಯಾದವರು ರವಿ ಈ ರೀತಿ ಹಗುರವಾಗಿ ಮಾತನಾಡಬಾರದು ಎಂದರು.

D. Devaraja Arasu ಆಗಸ್ಟ್ 20 ರಂದು ದೇವರಾಜ ಅರಸು & ನಾರಾಯಣ ಗುರು ಜಯಂತಿ ಆಚರಣೆಗೆ ಜಿಲ್ಲಾಡಳಿತ ಸಜ್ಜು- ಡೀಸಿ ಗುರುದತ್ತ ಹೆಗಡೆ

0

D. Devaraja Arasu ಡಿ.ದೇವರಾಜ ಅರಸುರವರ 109 ನೇ ಜನ್ಮ ದಿನಾಚರಣೆ ಸಮಾರಂಭವನ್ನು ಆಗಸ್ಟ್ 20 ರಂದು ಜಿಲ್ಲೆಯಲ್ಲಿ ಆಚರಿಸಲಾಗುವುದು. ಜಯಂತಿಯು ಅರ್ಥಪೂರ್ಣವಾಗಿ ಮತ್ತು ಯಶಸ್ವಿಯಾಗಿ ನಡೆಯಲು ಅಗತ್ಯವಾದ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚನೆ ನೀಡಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಡಿ.ದೇವರಾಜ ಅರುಸುರವರ ಜನ್ಮ ದಿನಾಚರಣೆ ಸಮಾರಂಭದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆ ಮುದ್ರಿಸಿ ಆಹ್ವಾನಿಸಲು ಸೂಚಿಸಿದ ಅವರು, ಡಿ.ದೇವರಾಜ ಅರಸು ಮತ್ತು ನಾರಾಯಣ ಗುರುರವರ ಜಯಂತಿಗಳು ಒಂದೇ ದಿನ ಇರುವ ಕಾರಣ ವಿವಿಧ ಸಂಘಟನೆಗಳು ತಮ್ಮ ಪೂರ್ವಭಾವಿ ಸಭೆ ಮುಗಿದ ಬಳಿಕೆ ಎಲ್ಲಿ ಮತ್ತು ಯಾವ ಸಮಯದಲ್ಲಿ ಜಯಂತಿಗಳನ್ನು ಆಚರಿಸಬೇಕೆಂದು ಸಲಹೆ ನೀಡುವಂತೆ ತಿಳಿಸಿದರು.

ಹಾಗೂ ಮುಖಂಡರು ಉಲ್ಲೇಖಿಸಿದ ಉಪನ್ಯಾಸಕರಿಂದ ಅರಸು ಕುರಿತು ಉಪನ್ಯಾಸ ನೀಡಲು ವ್ಯವಸ್ಥೆ ಮಾಡಲಾಗುವುದು ಎಂದರು.
ಎರಡೂ ಜಯಂತಿಗಳು ಒಂದೇ ದಿನ ಇರುವ ಕಾರಣ ಒಂದೇ ವೇದಿಕೆಯಲ್ಲಿ ಎರಡು ಜಯಂತಿಗಳನ್ನು ಆಚರಿಸಬಹುದು ಎಂದು ಸಲಹೆ ನೀಡಿದರು.

2023-24 ನೇ ಸಾಲಿನಲ್ಲಿ ಜಿಲ್ಲಾ ಮಟ್ಟದಲ್ಲಿ ಅತ್ಯಂತ ಹೆಚ್ಚು ಅಂಕ ಗಳಿಸಿದ ನಿಯಲಾರ್ಥಿಗಳನ್ನು ಗುರುತಿಸಿ ಸನ್ಮಾನಿಸುವಂತೆ ಹಾಗೂ ಹಿಂದುಳಿದ ವರ್ಗಗಳ ಏಳ್ಗೆಗಾಗಿ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಸನ್ಮಾನಿಸುವಂತೆ ಮನವಿ ಮಾಡಿದರು.
ಅರ್ಧಕ್ಕೆ ನಿಂತಿರುವ ಡಿ.ದೇವರಾಜ ಅರಸು ಭವನ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನವನ್ನು ಸರ್ಕಾರದಿಂದ ತರಿಸಿಕೊಂಡು ಕಾಮಗಾರಿ ಪೂರ್ಣಗೊಳಿಸುವಂತೆ ಹಾಗೂ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಅರಸುರವರ ಕುರಿತಾದ ಕಿರು ಪುಸ್ತಕಗಳನ್ನು ವಿತರಿಸುವಂತೆ ಮನವಿ ಮಾಡಿದರು.

ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಶೋಭಾ ಮಾತನಾಡಿದರು.. ಜಿಲ್ಲಾಧಿಕಾರಿಗಳು, ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಹಿಂದುಳಿದ ವರ್ಗಗಳಿಗಾಗಿ ಸೇವೆ ಸಲ್ಲಿಸಿದವರಿಗೆ ಸನ್ಮಾನ ಮಾಡಲಾಗುವುದು.

D. Devaraja Arasu ಸಭೆಯಲ್ಲಿ ದಲಿತ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರಾದ ಬಿ.ರಾಜು, ಶ್ರೀಧರ್, ಎಸ್ ಪಿ ಶೇಷಾದ್ರಿ, ರಾಜ್‌ಕುಮಾರ್, ವೆಂಕಟೇಶ್, ಏಳುಕೋಟಿ, ಮೂರ್ತಿ, ಷಣ್ಮುಗಂ, ರವಿಕುಮಾರ್, ವಿಜಯಕುಮಾರ್, ಮಹಾಲಿಂಗಪ್ಪ, ಲೋಕೇಶ್, ಹನುಮಂತಪ್ಪ, ಚನ್ನವೀರಪ್ಪ, ಪ್ರಕಾಶ್ ಇತರರು ಹಾಜರಿದ್ದರು.

Power Ouatage ಆಗಸ್ಟ್ 20. ಆಲ್ಕೊಳ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

0

Power Ouatage ಶಿವಮೊಗ್ಗದ ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್ -03 ರಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಆ.10 ರಂದು ಬೆಳಗ್ಗೆ 9.00 ರಿಂದ ಸಂಜೆ 05:30 ರ ವರೆಗೆ ಎಸ್.ವಿ.ಬಡಾವಣೆ, Power Ouatage ಎ, ಬಿ ಮತ್ತು ಎಫ್ ಬ್ಲಾಕ್, ಗುಡ್‌ಲಕ್ ಸರ್ಕಲ್, ಅಮ್ಮ ನಿಲಯ, ಸ್ನೇಹ ಅಪಾರ್ಟ್ಮೆಂಟ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.