Thursday, April 24, 2025
Thursday, April 24, 2025

Honnali Chandrasekhar ಶಿವಮೊಗ್ಗದ “ರಂಗಜೀವಿ” ಹೊನ್ನಾಳಿ ಚಂದ್ರಶೇಖರ್ ಅವರಿಗೆ ನಾಟಕ ಅಕಾಡೆಮಿ ಪ್ರಶಸ್ತಿ

Date:

Honnali Chandrasekhar ರಂಗ ಸಂಘಟಕ, ನಟ, ನಿರ್ದೇಶಕರೂ ಆಗಿರುವ ನಮ್ ಟೀಮ್ ರಂಗತಂಡದ ಪ್ರಧಾನ ಕಾರ್ಯದರ್ಶಿ, ಕಲಾವಿದರು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹೊನ್ನಾಳಿ ಚಂದ್ರಶೇಖರ್ ಅವರು ೨೦೨೪-೨೫ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಇವರು ಶಿವಮೊಗ್ಗದ ಕನ್ನಡ ಮೀಡಿಯಂ ೨೪x೭ ವಾಹಿನಿಯ ಪ್ರಧಾನ ಸಂಪಾದಕರೂ ಆಗಿದ್ದು, ಇವರಿಗೆ ಶಿವಮೊಗ್ಗ ಪ್ರೆಸ್ ಟ್ರಸ್ಟ್‌ನ ಅಧ್ಯಕ್ಷ ಎನ್. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ನಾಗರಾಜ ನೇರಿಗೆ, ಖಜಾಂಚಿ ಪಿ. ಜೇಸುದಾಸ್ ಹಾಗೂ ಎಲ್ಲಾ ಟ್ರಸ್ಟಿಗಳು, ಪತ್ರಕರ್ತರು ಅಭಿನಂದಿಸಿದ್ದಾರೆ.
ಬಾಲ ನಟನಾಗಿ ರಂಗಭೂಮಿಗೆ ಪ್ರವೇಶಿಸಿದ ಹೊನ್ನಾಳಿ ಚಂದ್ರಶೇಖರ್ ಅವರು ಮೂರು ದಶಕದಿಂದ ರಂಗಭೂಮಿಯಲ್ಲಿ ಕ್ರಿಯಾಶೀಲರಾಗಿದ್ದಾರೆ. ಹೊನ್ನಾಳಿಯ ಹೊಳೆರಂಗದ ಸಂಚಾಲಕರಾಗಿ, ಶಿವಮೊಗ್ಗ ನಮ್ ಟೀಮ್ ರಂಗತಂಡದ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿಯಾಗಿ, ಕಲಾವಿದರು ಒಕ್ಕೂಟದ ನಿರ್ದೇಶಕ, ಖಜಾಂಚಿ, ಪ್ರಧಾನ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಶಿವಮೊಗ್ಗದಲ್ಲಿ ನಡೆದ ರಂಗ ಸಹ್ಯಾದ್ರಿ, ಕಾಲೇಜು ರಂಗೋತ್ಸವ, ದೇಸಿ ರಂಗೋತ್ಸವ ಸೇರಿದಂತೆ ಹಲವು ನಾಟಕೋತ್ಸವಗಳು, ಶಿಬಿರಗಳ ಸಂಚಾಲಕರಾಗಿದ್ದರು.
Honnali Chandrasekhar ಕುವೆಂಪು ಅವರ ಶೂದ್ರ ತಪಸ್ವಿ, ಗಿರೀಶ್ ಕಾರ್ನಾಡರ ಯಯಾತಿ, ಶ್ರೀರಂಗರ ನೀ ಕೊಡೆ ನಾ ಬಿಡೆ, ಲಂಕೇಶರ ಕಲ್ಲು ಕರಗುವ ಸಮಯ, ಬಿ. ಚಂದ್ರೇಗೌಡರ ಕಡಿದಾಳು ಶಾಮಣ್ಣ, ಕೆ.ವೈ. ನಾರಾಯಣ ಸ್ವಾಮಿ ಅವರ ಪಂಪ ಭಾರತ ಸೇರಿದಂತೆ ಇದೂವರೆಗೆ ಒಟ್ಟು ೧೩ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಪಿ. ಲಂಕೇಶರ ಕಲ್ಲು ಕರಗುವ ಸಮಯ, ಕುವೆಂಪು ಅವರ ಕಥೆ ಆಧಾರಿತ ಮಾಯದ ಮನೆ ಸೇರಿದಂತೆ ಹಲವು ರಂಗರೂಪ ಮಾಡಿದ್ದಾರೆ.
ಕುವೆಂಪು ಅವರ ರಾಮಾಯಣ ದರ್ಶನಂ ಕೃತಿ ಆಧಾರಿದ ಎಸ್.ಆರ್. ವಿಜಯಲಕ್ಷ್ಮೀ ನಿರ್ದೇಶನದ “ಓ ಲಕ್ಷ್ಮಣಾ..”, ಬಿ. ಚಂದ್ರೇಗೌಡರ ರಚನೆ ಎಸ್.ಆರ್. ಗಿರೀಶ್ ನಿರ್ದೇಶನದ “ಬಯಲುಸೀಮೆ ಕಟ್ಟೆ ಪುರಾಣ”, ಪಿ. ಲಂಕೇಶ್ ರಚನೆ ಹಾಗೂ ನಟರಾಜ ಹೊನ್ನವಳ್ಳಿ ನಿರ್ದೇಶನದ “ಗುಣಮುಖ” ಸೇರಿದಂತೆ ಹಲವು ನಾಟಕಗಳಲ್ಲಿ ಪಾತ್ರ ನಿರ್ವಹಿಸಿದ್ದಾರೆ.
೨೪ ವರ್ಷದಿಂದ ನಮ್ ಟೀಮ್ ಅಧ್ಯಕ್ಷ – ಪ್ರಧಾನ ಕಾರ್ಯದರ್ಶಿಯಾಗಿ ಇದೂವರೆಗೆ ೩೭ ನಾಟಕೋತ್ಸವ ಆಯೋಜಿಸಿದ್ದಾರೆ. ೪೩ ಹೊಸ ನಾಟಕಗಳು ರಂಗದ ಮೇಲೆ ಬಂದಿವೆ. ಒಟ್ಟು ನಾಟಕಗಳ ೨೬೪ ಪ್ರದರ್ಶನ ಆಯೋಜಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Nalanda Chess Academy ನಳಂದ ಚೆಸ್ ಸಂಸ್ಥೆಯಿಂದ ಬೇಸಿಗೆ ಚೆಸ್ ತರಬೇತಿ ಶಿಬಿರ

Nalanda Chess Academy ಶಿವಮೊಗ್ಗ ರವೀಂದ್ರನಗರ 2ನೇ ತಿರುವಿನಲ್ಲಿರುವ ಯಾದವ...