Monday, April 6, 2026
Monday, April 6, 2026
Home Blog Page 616

Government Pre-Graduation College for Girls ಕ್ಯಾಲ್ಸಿಯಂ ಮಾತ್ರೆ ಸೇವಿಸಿದ 15 ವಿದ್ಯಾರ್ಥಿನಿಯರು ಅಸ್ವಸ್ಥ

0

Government Pre-Graduation College for Girls ತೀರ್ಥಹಳ್ಳಿ ತಾಲೂಕಿನ ಸೊಪ್ಪುಗುಡ್ಡೆಯಲ್ಲಿರುವ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕ್ಯಾಲ್ಸಿಯಂ ಮಾತ್ರೆ ಸೇವಿಸಿ 15 ಜನ ವಿದ್ಯಾರ್ಥಿನಿಯರು ವಾಂತಿ ಭೇದಿ ಯಾಗಿ ಅಸ್ವಸ್ಥರಾದ ಘಟನೆ ನಡೆಸಿದೆ. ಪ್ರಿನ್ಸಿಪಾಲ್ ಶೇಷಗಿರಿಯವರಿಗೆ ವೈದ್ಯರು ಸೂಚಿಸಿದಂತೆ ಕ್ಯಾಲ್ಸಿಯಂ ಮಾತ್ರೆ ವಿದ್ಯಾರ್ಥಿಗಳಿಗೆ ನೀಡಲು ಹೇಳಿದ್ದು, ಅದರಂತೆ ಮದ್ಯಾಹ್ನದ ಊಟದ ನಂತರ ಸೇವಿಸಲು ಮೊದಲೆ ತಿಳಿಸಲಾಗಿತ್ತು.

ಆದರೆ ಪ್ರಸ್ತುತ ಕಾಲೇಜು ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಇಲ್ಲದಿರುವುದರಿಂದ ಊಟಕ್ಕೆ ಮೊದಲೇ ಮಾತ್ರೆ ಸೇವಿಸಿದ್ದು ಈ ಅನಾರೋಗ್ಯಕ್ಕೆ ಕಾರಣವಾಗಿದೆ.ಕೂಡಲೇ ವೈದ್ಯರನ್ನು ಸಂಪರ್ಕಿಸಿದ್ದು, ಟಿ. ಹೆಚ್. ಓ ಅನಿಕೇತನ್ ಅವರು ತಿಳಿಸಿದಂತೆ ಮಾತ್ರೆಗಳನ್ನು ಊಟದ ಮೊದಲೇ ಸೇವನೆ ಹಾಗೂ ಗ್ಯಾಸ್ಟ್ರಿಕ್ ಇರುವವರಿಗೆ ಈ ಸಮಸ್ಯೆ ಕಾಡುವುದು ಸಹಜ.

Government Pre-Graduation College for Girls ವಿದ್ಯಾರ್ಥಿನಿಯರು ಹಾಗೂ ಪೋಷಕರು ಈ ಬಗ್ಗೆ ಹೆದರುವ ಅವಶ್ಯಕತೆ ಇಲ್ಲ ಎಂದರು.

Kateel Ashok Pai College ಕಾಡುವ ಹುಡುಗನ ಹಾಡು” ಪುಸ್ತಕ ಸಾಹಿತ್ಯಕ್ಷೇತ್ರದಲ್ಲಿ ಹೊಸ ಬರಹಗಳಿಗೆ ನಾಂದಿಯಾಗಲಿ- ಡಾ.ಭಾರತಿ ದೇವಿ

0

Kateel Ashok Pai College ಮಾನಸ ಟ್ರಸ್ಟ್ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದ ವತಿಯಿಂದ ಉಪನ್ಯಾಸಕಿ ಅಂಜುಮ್
ಬಿ.ಎಸ್. ಅವರ ಕಾಡುವ ಹುಡುಗನ ಹಾಡು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವನ್ನು ಆಗಸ್ಟ್ 07 ಬುಧವಾರದಂದು ಬಹುಮುಖಿ ಸಭಾಂಗಣದಲ್ಲಿ ನಡೆಸಲಾಯಿತು.

ಹೊಳೆಹೊನ್ನೂರು ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕರಾಗಿರುವ ಭಾರತಿ ದೇವಿ ಅವರು ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು. ಅಂಜುಮ್ ಅವರ ಪುಸ್ತಕ ಅಕ್ಕಮಹಾದೇವಿಯವರ ಬರಹಗಳನ್ನ ಮತ್ತೊಮ್ಮೆ ನೆನಪಿಸುತ್ತದೆ. ಒಬ್ಬ ಹೆಣ್ಣು ಮಗಳು ದಿಟ್ಟವಾಗಿ ತನ್ನ ನಿಲುವನ್ನ ಪುಸ್ತಕದ ಮೂಲಕ ಹೇಳಿರುವುದು ಇಲ್ಲಿ ಕಾಣಸಿಗುತ್ತದೆ. ಕಾಡುವ ಹುಡುಗನ ಹಾಡು ಪುಸ್ತಕ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಬರಹಗಳ ಮೂಲಕ ನಾಂದಿ ಹಾಡಲಿ‌. ಮುಂಬರುವ ದಿನಗಳಲ್ಲಿ ಯುವ ಲೇಖಕಿಯಿಂದ ಇನ್ನಷ್ಟು ಪುಸ್ತಕ ಗಳನ್ನ ಹೊರಹೊಮ್ಮುಲಿ ಎಂದು ಆಶಿಸಿದರು.

ಕೀಳಂಬಿ ಸಮೂಹ ಉದ್ಯಮಗಳ ನಿರ್ದೇಶಕರಾದ ರಾಜೇಶ್ ಕೀಳಂಬಿ ಇವರು ಪುಸ್ತಕ ಪರಿಚಯಯನ್ನು ಮಾಡಿ ಕೊಟ್ಟು , ಹುಡುಗನ ಹಾಡು ಪುಸ್ತಕವನ್ನು ಓದಿದಾಗ ಹಳೆಯ ಕಾಲೇಜು ದಿನಗಳು ಮರುಕಳಿಸುತ್ತವೆ. ಒಬ್ಬ ಹೆಣ್ಣು ಮಗಳು ತನ್ನ ಪ್ರೀತಿಯನ್ನು ವ್ಯಕ್ತಪಡಿಸಿರುವ ರೀತಿ ವಿಭಿನ್ನವಾಗಿದೆ. ಕಾಡುವ ಹುಡುಗನ ಹಾಡು ಪುಸ್ತಕವು ಸಾಹಿತ್ಯ ಲೋಕದಲ್ಲಿ ಹೊಸ ಶಕೆಯನ್ನು ಸೃಷ್ಟಿಸಲಿದೆ. ಕನ್ನಡದಲ್ಲಿ ಇದೊಂದು ಹೊಸ ಪ್ರಯತ್ನವಾಗಿದ್ದು, ಪುಸ್ತಕವು ಹೆಚ್ಚು ಪ್ರಖ್ಯಾತಿ ಪಡೆಯಲಿ ಎಂದರು.

ಕಾಲೇಜಿನ ಶೈಕ್ಷಣಿಕ ಸಲಹೆಗಾರರು ಹಾಗೂ ಹಿರಿಯ ಸಾಹಿತಿಗಳಾದ ಡಾ.ರಾಜೇಂದ್ರ ಚೆನ್ನಿಯವರು ಮಾತನಾಡಿ, ಯುವ ಲೇಖಕರು ಕೇವಲ ಒಂದೇ ಪ್ರಕಾರದ ಪುಸ್ತಕಗಳನ್ನು ಬರೆಯದೇ ಎಲ್ಲಾ ರೀತಿಯ ಬರಹಗಳಿಗೆ ಒತ್ತು ನೀಡಬೇಕು ಎಂದರು.

Kateel Ashok Pai College ಸುವ್ವಿ ಪಬ್ಲಿಕೇಷನ್ಸ್ ಪ್ರಕಾಶನದ ಪ್ರಕಾಶಕರಾದ ಸುನೀಲ್.ಬಿ‌.ಎನ್‌. ಅವರು ಮಾತನಾಡಿ, ಇಂದಿನ ಯುವ ಪೀಳಿಗೆ ಕೇವಲ ವಾಟ್ಸಾಪ್, ಪೇಸ್ಬುಕ್ ನಲ್ಲಿಯೇ ಕಾಲಕಳೆಯುತ್ತಿರುವುದು ವಿಪರ್ಯಾಸ.. ವಿಧ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದರು.

ಶಿವಮೊಗ್ಗದ ಕೆ ಲೈವ್ ನ್ಯೂಸ್ ನ ಪ್ರಧಾನ ಸಂಪಾದಕರಾದ ಡಾ‌.ಸುಧೀಂದ್ರ ಅವರು ಮಾತನಾಡಿ, ಕಾಡುವ ಹುಡುಗನ ಹಾಡು ಪುಸ್ತಕ ಯುವ ಮನಸ್ಸುಗಳಿಗೆ ಇಷ್ಟವಾಗುವ ಪುಸ್ತಕವಾಗುವಲ್ಲಿ ಎರಡು ಮಾತಿಲ್ಲ. ಕವನವೂ ಅಲ್ಲದೇ , ಶಾಯರಿಯೂ ಆಗದೇ ಹೊಸ ರೀತಿಯ ಬರಹಗಳು ಇದಾಗಿದೆ. ಅನುಭವ, ಪ್ರೀತಿ ಎಲ್ಲವನ್ನೂ ಒಳಗೊಂಡಿರುವ ಪುಸ್ತಕ ಓದುಗರನ್ನು ಸೆಳೆದಿಟ್ಟುಕೊಳ್ಳುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಧ್ಯಾ ಕಾವೇರಿಯವರು ಮಾತನಾಡಿ , ಕಟೀಲ್ ಅಶೋಕ್ ಪೈ ಕಾಲೇಜಿನ ಉಪನ್ಯಾಸಕಿ ಯಾದ ಅಂಜುಮ್ ಇವರ ಚೊಚ್ಚಲ ಕೃತಿ ಕಾಲೇಜಿನಲ್ಲಿಯೇ ಲೋಕಾರ್ಪಣೆಗೊಂಡಿರುವುದು ಸಂತಸದ ವಿಷಯ. ಕಾಡುವ ಹುಡುಗನ ಹಾಡು ಪುಸ್ತಕ ಹಲವಾರು ಬಗೆಯಲ್ಲಿ ವಿಭಿನ್ನವಾಗಿ ನಿಲ್ಲುತ್ತದೆ. ಯುವ ಲೇಖಕಿಯ ಈ ಹೊಸ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಉಪನ್ಯಾಸಕ ವೃಂದ, ಗುರು ಹಿರಿಯರು, ಸಿಬ್ಬಂದಿಗಳು, ವಿಧ್ಯಾರ್ಥಿಗಳು ,ಹಾಗೂ ಅನೇಕರು ಉಪಸ್ಥಿತರಿದ್ದರು.

Rotary Biodiversity Park ಹೆಚ್ಚು ಗಿಡಮರ ಬೆಳೆಸಿ ಪರಿಸರ ಕಾಪಾಡಿ- ಜಿ.ಕಿರಣ್ ಕುಮಾರ್

0

Rotary Biodiversity Park ಪರಿಸರದಿಂದ ಉತ್ತಮ ಆಮ್ಲಜನಕ ಸಿಗುವುದರ ಜೊತೆಗೆ ವಾಯುಮಾಲಿನ್ಯ ಕಡಿಮೆ ಆಗುತ್ತದೆ. ಆದ್ದರಿಂದ ನಾವು ಹೆಚ್ಚುಹೆಚ್ಚು ಗಿಡ ಮರಗಳನ್ನು ಬೆಳೆಸುವುದರ ಮುಖಾಂತರ ಪರಿಸರವನ್ನು ಸಂರಕ್ಷಿಸುವುದು ಅನಿವಾರ್ಯವಾಗಿದೆ ಎಂದು ರೋಟರಿ ಕಿರಣ್ ಕುಮಾರ್.ಜಿ ಅಭಿಮತ ವ್ಯಕ್ತಪಡಿಸಿದರು.

ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ನಿಂದ ರೋಟರಿ ಬಯೋ ಡೈವರ್ಸಿಟಿ ಪಾರ್ಕ್ ನಲ್ಲಿ ಭಾನುವಾರ ನಡೆದ ಗಿಡ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಿಡ ನೆಡುವುದರ ಮೂಲಕ ಪರಿಸರವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಂಡರೆ ನಮಗೆ ಉತ್ತಮ ಆರೋಗ್ಯ ಕೂಡ ಲಭಿಸುತ್ತದೆ. ಆದರೆ ಇಂದು ಗ್ಲೋಬಲ್ ವಾರ್ಮಿಂಗ್ ನಿಂದ ಪರಿಸರ ವಿನಾಶ ಆಗುತ್ತಿದೆ ಎಂದರು.

ಮಾಜಿ ಜಿಲ್ಲಾ ಗವರ್ನರ್ ಜಿ.ಎನ್.ಪ್ರಕಾಶ್ ಮಾತನಾಡಿ, ನಗರೀಕರಣ ಹೆಚ್ಚಾದಂತೆ ಗಿಡಮರಗಳ ಕಡಿತ ಜಾಸ್ತಿ ಆಗುತ್ತಿದೆ ಎಂದ ಅವರು, ನಮ್ಮ ನಮ್ಮ ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವ ಸಂದರ್ಭದಲ್ಲಿ ನೆನಪಿಗೋಸ್ಕರ ಗಿಡ ಮರಗಳನ್ನು ಬೆಳೆಸುವುದರ ಮುಖಾಂತರ ಪರಿಸರಕ್ಕೆ ಒಂದು ಕೊಡುಗೆಯನ್ನು ಕೊಡೋಣ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಬಯೋ ಡೈವರ್ಸಿಟಿ ಪಾರ್ಕ್ 3 ವರ್ಷಗಳಿಂದ ನಡೆದು ಬಂದ ದಾರಿಯನ್ನು ಸಭೆಗೆ ತಿಳಿಸಿದರು. ಅಧ್ಯಕ್ಷ ಕಿರಣ್ ಕುಮಾರ್ ಅವರು ರೂ.5,000 ಗಳನ್ನು ದೇಣಿಗೆಯಾಗಿ ನೀಡಿದರು.

Rotary Biodiversity Park ಈ ವೇಳೆ ಗಿಡ ನೆಡುವ ಕಾರ್ಯಕ್ರಮಕ್ಕೆ ಬಂದ ಸದಸ್ಯರಿಂದ ಸುಮಾರು 50 ಸಸಿಗಳನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ ಕ್ಲಬ್ ನ ಅಧ್ಯಕ್ಷ ಕಿರಣ್ ಕುಮಾರ್.ಜಿ, ಕಾರ್ಯದರ್ಶಿ ಈಶ್ವರ್, ಆನ್ಸ್ ಕ್ಲಬ್ ನ ಅಧ್ಯಕ್ಷೆ ಗೀತಾ ಜಗದೀಶ್, ಕಾರ್ಯದರ್ಶಿ ಶುಭಾ ಚಿದಾನಂದ್, ರೋಟರಿ ಬಯೋ ಡೈವರ್ಸಿಟಿ ಪಾರ್ಕ್ ನ ಖಜಾಂಚಿ ಉಮೇಶ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ರೊ ಪಿಡಿಜಿ ಪ್ರಕಾಶ್.ಜಿ.ಎನ್ ಮತ್ತು ಕ್ಲಬ್ ನ ರೋಟೆರಿಯನ್ಸ್ ಗಳು ಆನ್ಸ್ ಗಳು ಹಾಗೂ ಮಕ್ಕಳು ಭಾಗವಹಿಸಿದ್ದರು.

Vinesh Phogat ಕೇವಲ 100gm ತೂಕದ ಹೆಚ್ಚುವರಿಯಲ್ಲಿ ಭಾರತ ವಿನೇಶ್ ಪೊಗಟ್ ಗೆ ಸುವರ್ಣ ಪದಕ ವಂಚಿತೆ ಅಲ್ಲದೇ ಅನರ್ಹತೆ

0

Vinesh Phogat ಕೇವಲ 100 ಗ್ರಾಂ ತೂಕ ಹೆಚ್ಚಾಗಿರುವ ಕಾರಣಕ್ಕಾಗಿ ಕುಸ್ತಿಪಟು ವಿನೇಶ್ ಫೋಗಟ್ ಅವರು ಪ್ಯಾರಿಸ್ ಒಲಿಂಪಿಕ್ಸ್‌ನ 50 ಕೆ.ಜಿ. ವಿಭಾಗದ ಕುಸ್ತಿ ಫೈನಲ್ಸ್‌ನಿಂದ ಹೊರಬಿದ್ದ ಬಗ್ಗೆ ಇಡೀ ದೇಶವೇ ಆಘಾತಕ್ಕೆ ಒಳಗಾಗಿದೆ.

ಖ್ಯಾತ ಯೂಟ್ಯೂಬರ್ ಧೃವ್ ರಾಠಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಉದ್ಯಮಿ ಆನಂದ್ ಮಹೇಂದ್ರ ಸೇರಿದಂತೆ ಹಲವರು ಈ ಬಗ್ಗೆ ಘಾತ ವ್ಯಕ್ತಪಡಿಸಿದ್ದಾರೆ.

“ಕೇವಲ 100 ಗ್ರಾಂಗೆ? ಇದು ತುಂಬಾ ನಂಬಲಾಗದಂತಿದೆ.. ತಲೆ ಬೋಳಿಸುವ ಮೂಲಕ ಅಷ್ಟು ತೂಕವನ್ನು ಕಡಿಮೆ ಮಾಡಬಹುದು” ಎಂದು ಧೃ ವ್ ರಾಠಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ವಿನೇಶಾ ಫೋಗಟ್ ಅನರ್ಹತೆಗೆ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, “ಭರವಸೆ ಕಳೆದುಕೊಳ್ಳಬೇಡಿ, ಧೃಡವಾಗಿ ಹಿಂತಿರುಗಿ” ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.
“ವಿನೇಶ್, ನೀವು ಚಾಂಪಿಯನ್‌ಗಳಲ್ಲಿ ಚಾಂಪಿಯನ್! ನೀವು ಭಾರತದ ಹೆಮ್ಮೆ ಮತ್ತು ಪ್ರತಿಯೊಬ್ಬ ಭಾರತೀಯರಿಗೂ ಸ್ಫೂರ್ತಿ. ಇಂದಿನ ಹಿನ್ನಡೆ ನೋವು ತಂದಿದೆ.

Vinesh Phogat ಪದಗಳು ನಾನು ಅನುಭವಿಸುತ್ತಿರುವ ಹತಾಶೆಯ ಅರ್ಥವನ್ನು ವ್ಯಕ್ತಪಡಿಸಬಹುದು ಎಂದು ನಾನು ಬಯಸುತ್ತೇನೆ. ಅದೇ ಸಮಯದಲ್ಲಿ, ನೀವು ಸ್ಥಿತಿಸ್ಥಾಪಕತ್ವವನ್ನು ಸಾರುತ್ತೀರಿ ಎಂದು ನನಗೆ ತಿಳಿದಿದೆ. ಸವಾಲುಗಳನ್ನು ಎದುರಿಸುವುದು ಯಾವಾಗಲೂ ನಿಮ್ಮ ಸ್ವಭಾವವಾಗಿದೆ. ಬಲವಾಗಿ ಹಿಂತಿರುಗಿ” ಎಂದು ಬರೆದುಕೊಂಡಿದ್ದಾರೆ.

ಭಾರತದ ಏಸ್ ಗ್ರಾಪ್ಲರ್ ವಿನೇಶ್ ಫೋಗಟ್ ಅವರನ್ನು ಪ್ಯಾರಿಸ್ ಒಲಿಂಪಿಕ್ ಗೇಮ್ಸ್‌ನಿಂದ ಅನರ್ಹಗೊಳಿಸಿರುವ ಬಗ್ಗೆ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಇಂದು ಪ್ರತಿಕ್ರಿಯಿಸಿದ್ದು, “ಇದು ಕೆಟ್ಟ ಕನಸು” ಎಂದು ಆಘಾತ ವ್ಯಕ್ತಪಡಿಸಿದ್ದಾರೆ.

Madhu Bangarappa ಹತ್ತು ವರ್ಷ ಸಂಸದರಾಗಿ ರಾಘವೇಂದ್ರ ಶರಾವತಿ ಸಂತ್ರಸ್ತರ ಬಗ್ಗೆ ಮಾತಾಡಿದ್ದಾರ?- ಮಧು ಬಂಗಾರಪ್ಪ

0

Madhu Bangarappa ಯಾರು ತಿಪ್ಪರಲಾಗ ಹೊಡೆದರೂ ಸಿದ್ದರಾಮಯ್ಯ ರಾಜೀನಾಮೆ ಕೊಡಲ್ಲ.ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ನಡೆಸುವ ಪ್ರಯತ್ನ ಸಂವಿಧಾನಕ್ಕೆ ವಿರುದ್ಧವಾಗಿದೆ.

ಹೊಟ್ಟೆ ಕಿಚ್ಚಿಗೆ ಬಿಜೆಪಿಯವರು ಶುರು ಮಾಡಿದ್ದಾರೆ ಅದಕ್ಕೆ ಜೆಡಿಎಸ್ ಅವರು ಸೇರಿದ್ದಾರೆ.ಬಿಜೆಪಿಯ 67 ಸೀಟು ಎಲ್ಲಿ ಕಾಂಗ್ರೆಸ್ ನ 137 ಎಲ್ಲಿ ಎಂದು ತಿರುಗೇಟು ನೀಡಿದರು.

ಯತ್ನಾಳ್ ಅವರು ಹಿರಿಯರು ಅಂತೆ, ಹಿರಿಯರ ಕೈಯಲ್ಲಿ ಬೈಯಸಿಕೊಳ್ಳಲು ನಾಚಿಕೆ ಆಗಲ್ವಾ?ಯಾರಾದ್ರೂ ವರ್ಗಾವಣೆಗೆ ಹಣ ಪಡೆದಿದ್ದಾರೆ ಎಂದರೆ ಅವನು ಏಜೆಂಟ್ ಇರಲಿ ಯಾರೇ ಇರಲಿ ಎರಡು ನಿಮಿಷದಲ್ಲಿ ಕಿತ್ತು ಬಿಸಾಕುತ್ತೇನೆ.

ಶಿಕ್ಷಕರ ಸಮಸ್ಯೆಗೆ ನಾವು ಸ್ಪಂದಿಸುತ್ತೇವೆ ಅವರ ಬೇಡಿಕೆಗಳ ಈಡೇರಿಕೆಗೆ ಪ್ರಯತ್ನ ನಡೆಸುತ್ತೇವೆ. ಶಿಕ್ಷಕರ ಬೇಡಿಕೆಗೆ ರಾಜ್ಯಮಟ್ಟದಲ್ಲಿ ಕಾನೂನಿನ ತಿದ್ದುಪಡಿಯ ಅಗತ್ಯವಿದೆ.ನಾವು ಯಾವುದೇ ವರ್ಗಾವಣೆ ಮಾಡುವುದಿಲ್ಲ ಎಲ್ಲವೂ ಕೌನ್ಸಿಲಿಂಗ್ ಮೂಲಕ ನಡೆಯುತ್ತದೆ ಎಂದರು.

ವಿಮಾನ ನಿಲ್ದಾಣಕ್ಕೆ ನೈಟ್ ಲ್ಯಾಂಡಿಂಗ್ ಬಗ್ಗೆ ಕುಮಾರಸ್ವಾಮಿಯವರಿಗೆ ಮನವಿ ನೀಡಿದ್ದಾರೆ. ಅವರಿಗೆ ಯಾಕೆ ಮನವಿ ಕೊಡುತ್ತಾರೆ ರಾಜ್ಯ ಸರ್ಕಾರದ ತೆರಿಗೆ ಹಣದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಿದೆ. ಒಂದು ವರ್ಷದಲ್ಲಿ ಸಚಿವರು ಜಿಲ್ಲೆಯಲ್ಲಿ ಅಭಿವೃದ್ಧಿ ಏನು ಮಾಡಿದ್ದಾರೆ ಎಂಬ ಬಿ ವೈ ರಾಘವೇಂದ್ರ ಪ್ರಶ್ನೆಗೆ ಆಕ್ರೋಶ ವ್ಯಕ್ತಪಡಿಸಿದರು.

ಗ್ಯಾರೆಂಟಿ ಯೋಜನೆಗಳ ಮೂಲಕ ಒಂದು ಗ್ರಾಮ ಪಂಚಾಯಿತಿಗೆ 9 ಕೋಟಿ ಹೋಗುತ್ತದೆ ಇದು ಅಭಿವೃದ್ಧಿ ಅಲ್ಲವಾ? ಬಡವರಿಗೆ ಹಣ ಕೊಡುತ್ತೇವೆ ಬಸ್ ನಲ್ಲಿ ಫ್ರೀ ಎಂಬುದು ಅವರಿಗೆ ಹೊಟ್ಟೆ ಉರಿ ಎಂದು ಉಲ್ಲೇಖಿಸಿದರು. ಪರಿಷತ್ ನಾಯಕ ನಾರಾಯಣಸ್ವಾಮಿ ಹೇಳಿಕೆಗಳಿಗೆ ಮಹತ್ವ ಕೊಡುವ ಅಗತ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿಯವರಿಂದ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿಸಿದರು.

Madhu Bangarappa ಆದರೆ ವಿಮಾನಗಳು ಲ್ಯಾಂಡಿಂಗ್ ಆರಂಭವಾಗಿದ್ದು ನಮ್ಮ ಸರ್ಕಾರ ಬಂದ ಮೇಲೆ ನಡೆದಿದೆ. ಲೋಕಸಭಾ ಅಧಿವೇಶನದಲ್ಲಿ 10 ವರ್ಷಗಳಲ್ಲಿ ಸಂಸದರಾಗಿ ರಾಘವೇಂದ್ರ ಶರಾವತಿ ಸಂತ್ರಸ್ತರ ಬಗ್ಗೆ ಮಾತನಾಡಿದ್ದಾರಾ? ಎಂದು ಪ್ರಶ್ನಿಸಿದರು.

ಖಾಸಗಿ ಶಿಕ್ಷಣ ಸಂಸ್ಥೆಗಳು ಆಗಸ್ಟ್ 15 ರಂದು ಕರಾಳ ದಿನಾಚರಣೆ ವಿಚಾರದ ಕುರಿತು ಮಾತನಾಡಿದ ಸಚಿವರು ಅವರು ಆಚರಣೆ ಮಾಡಲಿ ಆ ಹಕ್ಕು ಅವರಿಗಿದೆ. ಅವರ ಎಲ್ಲಾ ಮನವಿಗೆ ಸ್ಪಂದಿಸಿದ್ದೇವೆ. ಅವರ ಸಮಸ್ಯೆಗೆ ಪರಿಹರಿಸಿದ್ದೇವೆ ಎಂದರು.

Karnataka Women Lawyers Federation ಶಿವಮೊಗ್ಗದಲ್ಲಿ ಆಗಸ್ಟ್ 10, ದಕ್ಷಿಣ ಕರ್ನಾಟಕ ಮಹಿಳಾ ನ್ಯಾಯವಾದಿಗಳ ಸಮ್ಮೇಳನ

0

Karnataka Women Lawyers Federation ಶಿವಮೊಗ್ಗ ನಗರದಲ್ಲಿ ಎರಡನೇ ಬಾರಿಗೆ ದಕ್ಷಿಣ ಕರ್ನಾಟಕ ನ್ಯಾಯವಾದಿಗಳ ಸಮ್ಮೇಳನ ಆ. 10ರಂದು ನಡೆಯಲಿದೆ.

ಕರ್ನಾಟಕ ಮಹಿಳಾ ನ್ಯಾಯವಾದಿಗಳ ಒಕ್ಕೂಟ, ಶಿವಮೊಗ್ಗ ಜಿಲ್ಲಾ ನ್ಯಾಯವಾದಿಗಳ ಸಮಿತಿ ಹಾಗೂ ಶಿವಮೊಗ್ಗ ಜಿಲ್ಲಾ ನ್ಯಾಯವಾದಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ಈ ಸಮ್ಮೇಳನ ಆಯೋಜನೆಯಾಗಿದೆ ಎಂದು ಮಹಿಳಾ ನ್ಯಾಯವಾದಿಗಳ ಸಮಿತಿ ಜಿಲ್ಲಾ ಅಧ್ಯಕ್ಷೆ ಸರೋಜ ಪಿ.ಚಂಗೊಳ್ಳಿ ಹೇಳಿದರು.

ಪ್ರೆಸ್ ಟ್ರಸ್ಟಿನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು,ಪ್ರಸ್ತುತ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಜಿಲ್ಲಾ ವೇದಿಕೆಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲಾ ತಾಲ್ಲೂಕು ಮಟ್ಟದಲ್ಲೂ ಸಹ ಮಹಿಳಾ ವಕೀಲರ ವೇದಿಕೆಗಳು ಸ್ಥಾಪಿಸುವ ನಿಟ್ಟಿನಲ್ಲಿ ಫೆಡರೇಷನ್ ಪ್ರಯತ್ನಿಸುತ್ತಿದೆ.

2002ರಲ್ಲಿ ಆರಂಭವಾದ ಕರ್ನಾಟಕ ಫೆಡರೇಷನ್ ವಿಮೆನ್ ಲಾಯರ್ಸ್ ಸಂಸ್ಥೆಯು ಹಲವು ಅಡೆತಡೆಗಳನ್ನು ದಾಟಿ ಈಗ ಸಶಕ್ತವಾಗಿ ನಿಂತಿದೆ ಎಂದರು.
ಸಮ್ಮೇಳನದಲ್ಲಿ ೧೦ ಜಿಲ್ಲೆಗಳ ಸುಮಾರು 700ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ರಾಜ್ಯದಲ್ಲಿ ಮಹಿಳಾ ವಕೀಲರ ಸಂಖ್ಯೆ 20 ಸಾವಿರಕ್ಕೂ ಹೆಚ್ಚಿದ್ದು, ಮಹಿಳಾ ವಕೀಲರ ಹಿತರಕ್ಷಣೆ, ಅವರ ಕಾರ್ಯದಕ್ಷತೆ ಹೆಚ್ಚಿಸುವುದು. ಅವರಿಗೆ ಸಿಗಬೇಕಾದ ಸ್ಥಾನಮಾನ, ಅವಕಾಶ ನೋಡಿಕೊಳ್ಳುವುದು ಫೆಡರೇಶನ್ ಆದ್ಯತೆಯಾಗಿದೆ ಎಂದು ಹೇಳಿದರು.
ಆಗಸ್ಟ್ 10ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆಯ ವರೆಗೆ ಆರ್‌ಟಿಓ ಕಚೇರಿ ರಸ್ತೆಯಲ್ಲಿರುವ ಸರ್ಕಾರಿ ನೌಕರರ ಭವನದಲ್ಲಿ ನಡೆಯುವುದು. ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಶಿವಮೊಗ್ಗ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರಾದ ಬಿ.ಎಂ. ಶ್ಯಾಮ್‌ಪ್ರಸಾದ್ ಸಮ್ಮೇಳನ ಉದ್ಘಾಟಿಸಲಿದ್ದು, ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಎಂ.ಜಿ. ಉಮಾ ಮುಖ್ಯ ಅತಿಥಿಗಳಾಗಿ ಆಗಮಿಸುವರು.

Karnataka Women Lawyers Federation ಅಖಿಲ ಭಾರತ ಮಹಿಳಾ ನ್ಯಾಯವಾದಿಗಳ ಒಕ್ಕೂಟದ ಅಧ್ಯಕ್ಷೆ ಹೇಮಲತಾ ಮಹಿಷಿ ಅಧ್ಯಕ್ಷತೆ ವಹಿಸುವರು ಎಂದರು.

ಇದೇ ಸಂದರ್ಭದಲ್ಲಿ ಎರಡು ವಿಚಾರಗೋಷ್ಠಿಗಳು ನಡೆಯುವವು. ಬೆಳಿಗ್ಗೆ 12ರಿಂದ 1:30ರ ವರೆಗೆ ನಡೆಯುವ ಮೊದಲ ವಿಚಾರ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ನಿವೃತ್ತ ಸರ್ಕಾರಿ ಅಭಿಯೋಜಕ, ಕಾನೂನು ತಜ್ಞ ಹೆಚ್.ಡಿ. ಆನಂದಕುಮಾರ್ ಹೊಸ ಕಾನೂನುಗಳ ಬಗ್ಗೆ ವಿಷಯ ಮಂಡಿಸುವರು.

ಮಧ್ಯಾಹ್ನ 1ರಿಂದ 2:30ರವರೆಗೆ ನಡೆಯುವ ಗೋಷ್ಠಿಯಲ್ಲಿ ಮಹಿಳಾ ವಕೀಲರ ವೃತ್ತಿಪರತೆಯ ಸಮಸ್ಯೆಗಳು, ಸವಾಲು ಗಳು ಮತ್ತು ಪರಿಹಾರೋಪಯಳ ಕುರಿತು ಒಕ್ಕೂಟದ ಅಧ್ಯಕ್ಷೆ ಶೀಲಾ ಅನೀಶ್ ಮಾತನಾಡಲಿದ್ದಾರೆ ಎಂದರು.

ಸಂಜೆ 4 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ ಮಿಥುನ್ ಕುಮಾರ್, ಮಹಾನಗರ ಪಾಲಿಕೆ ಆಯುಕ್ತೆ ಡಾ|| ಕವಿತಾ ಯೋಗಪ್ಪನವರ್ ಆಗಮಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ವಕೀಲರ ಸಂಘದ ಅಧ್ಯಕ್ಷ ಜಿ.ಆರ್.ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ, ಜಿಲ್ಲಾ ಮಹಿಳಾ ನ್ಯಾಯವಾದಿಗಳ ಒಕ್ಕೂಟದ ಪದಾಧಿಕಾರಿಗಳಾದ ಹೆಚ್.ಎಂ.ರೇಣುಕಾ ನಂದಿನಿ ದೇವಿ, ಕಿಲಕಾ ಮಧುಸೂದನ್, ಪೂರ್ಣಿಮಾ, ಪ್ರಮಿಳಾ, ಅಶ್ವಿನಿ, ರೇಖಾ ಸತ್ಯನಾರಾಯಣ, ವಿದ್ಯಾರಾ ಮೊದಲಾದವರಿದ್ದರು.

Bridge collapses ಸೇತುವೆ ಕುಸಿತ. ಸಾಗುತ್ತಿದ್ದ ಟ್ರಕ್ ನದಿಗೆ ಬಿದ್ದು ಚಾಲಕ ಗಾಯಾಳು. ಮೀನುಗಾರರಿಂದ ರಕ್ಷಣೆ

0

Bridge collapses ಆಘಾತಕಾರಿ ಘಟನೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸದಾಶಿವಗಡದಿಂದ ಕಾರವಾರಕ್ಕೆ ಸಂಪರ್ಕ ಕಲ್ಪಿಸುವ ಹಳೆಯ ಕಾಳಿ ಸೇತುವೆ ಕುಸಿದು ಒಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ. ಆದರೆ, ಬೇರೆ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಭೂಕುಸಿತ ಮತ್ತು ಮಳೆ ಹಾನಿಯ ಆಘಾತದಿಂದ ಚೇತರಿಸಿಕೊಳ್ಳುತ್ತಿರುವಾಗಲೇ, ಗೋವಾ ಮತ್ತು ಕರ್ನಾಟಕವನ್ನು ಸಂಪರ್ಕಿಸುವ ಕಾಳಿ ನದಿಗೆ ಅಡ್ಡಲಾಗಿರುವ 40 ವರ್ಷಗಳ ಹಳೆಯ ಸೇತುವೆ ಕುಸಿದಿದ್ದು, ಟ್ರಕ್ ಚಾಲಕ ಗಾಯಗೊಂಡಿದ್ದಾರೆ.
ಬುಧವಾರ ನಸುಕಿನ 1 ಗಂಟೆ ಸುಮಾರಿಗೆ ಟ್ರಕ್ ಸೇತುವೆ ಮೇಲೆ ಹಾದು ಹೋಗುತ್ತಿದ್ದಾಗ ಸೇತುವೆ ಕುಸಿದಿದೆ. ಟ್ರಕ್ ಕಾರವಾರದ ಮಾರ್ಗವಾಗಿ ಮನೆಗೆ ಹೋಗುತ್ತಿದ್ದಾಗ ನದಿಗೆ ಅಡ್ಡಲಾಗಿ ಸೇತುವೆಯ ಹೆಚ್ಚಿನ ಭಾಗವು ನೀರಿನಲ್ಲಿ ಮುಳುಗಿತ್ತು. ರಾತ್ರಿ ಗಸ್ತು ಸಿಬ್ಬಂದಿ ಘಟನೆಯನ್ನು ಗಮನಿಸಿ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
“ಚಿತ್ತಾಕುಲ ಪೊಲೀಸ್ ಠಾಣೆಯ ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರು ಸೇತುವೆ ಕುಸಿದಿರುವುದನ್ನು ಗಮನಿಸಿ ನಿಯಂತ್ರಣ ಕೊಠಡಿಗೆ Bridge collapses ಎಚ್ಚರಿಕೆ ನೀಡಿದರು. ನದಿಯಲ್ಲಿ ಟ್ರಕ್ ಇತ್ತು ಮತ್ತು ಗಾಯಗೊಂಡ ವ್ಯಕ್ತಿ ಅದರ ಮೇಲಿದ್ದರು. ಸ್ಥಳೀಯ ಮೀನುಗಾರರು ತಮಿಳುನಾಡಿನ ಬಾಲ ಮುರುಗನ್ ಎಂದು ಗುರುತಿಸಲಾದ ವ್ಯಕ್ತಿಯನ್ನು ರಕ್ಷಿಸಿದ್ದಾರೆ. ಪ್ರಸ್ತುತ ಅವರನ್ನು ಕಾರವಾರ ವೈದ್ಯಕೀಯ ವಿಜ್ಞಾನ ಮತ್ತು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ” ಎಂದು ಎಸ್‌ಪಿ ನಾರಾಯಣ್ ತಿಳಿಸಿದ್ದಾರೆ.
“ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಬದಲಿ ಮಾರ್ಗ ಸೂಚಿಸಲಾಗಿದೆ” ಎಂದರು.
ಚಾಲಕ ಗಾಯಗೊಂಡಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಗಜಾನನ ನಾಯ್ಕ ತಿಳಿಸಿದ್ದಾರೆ. ಈ ಸೇತುವೆಯನ್ನು ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ.

Madhu Bangarappa ಜನಪರ ಯೋಜನೆಗಳನ್ನ ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಿದ ಮೊದಲ ರಾಜ್ಯ ನಮ್ಮದು- ಮಧು ಬಂಗಾರಪ್ಪ

0

Madhu Bangarappa ಆಗಸ್ಟ್ ೦೭ : (ಕರ್ನಾಟಕ ವಾರ್ತೆ) : ಆಡಳಿತಾರೂಢ ಸರ್ಕಾರವು ಚುನಾವಣಾ ಪೂರ್ವದಲ್ಲಿ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಸರ್ಕಾರಿ ನೌಕರರ ಏಳನೇ ವೇತನ ಆಯೋಗದ ಅನುಷ್ಠಾನ ಮಾತ್ರವಲ್ಲದೇ ಅನ್ನಭಾಗ್ಯ, ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮಿ‌ ಮತ್ತು ಯುವನಿಧಿ ಸೇರಿದಂತೆ ಒಟ್ಟು ಐದು ಜನಪ್ರಿಯ ಗ್ಯಾರಂಟಿ ಯೋಜನೆಗಳನ್ನು ಕಾಲಮಿತಿಯೊಳಗಾಗಿ ಅನುಷ್ಠಾನಗೊಳಿಸಿ ನುಡಿದಂತೆ ನಡೆದು, ರಾಜ್ಯದ ಜನಸಾಮಾನ್ಯರ ಹಿತಕಾಯುವಲ್ಲಿ ಸಕ್ರಿಯವಾಗಿದೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್.ಬಂಗಾರಪ್ಪ ಅವರು ಹೇಳಿದರು.
ಅವರು ಇಂದು ಜಿಲ್ಲಾ ಪಂಚಾಯಿತಿ ಕಟ್ಟಡದಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಘಟಕವನ್ನು ಉದ್ಘಾಟಿಸುವ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ರಾಜ್ಯದ ಅತಿ ಹೆಚ್ಚಿನ ಜನರು ಈ ಯೋಜನೆಗಳ ಲಾಭ ಪಡೆದು ನೆಮ್ಮದಿಯ ಜೀವನ ನಡೆಸುತ್ತಿರುವುದು ಎಲ್ಲರಿಗೂ ಹರ್ಷದ ಸಂಗತಿಯಾಗಿದೆ ಎಂದ ಅವರು, ಇಂತಹ ಜನಪರ ಯೋಜನೆಗಳನ್ನು ವ್ಯವಸ್ಥಿತವಾಗಿ ಅನುಷ್ಟಾನಗೊಳಿಸಿದ ದೇಶದ ಮೊದಲ ರಾಜ್ಯ ಇದಾಗಿದೆ ಎಂದ ಅವರು, ಅನೇಕ ಸಮಸ್ಯೆ-ಸವಾಲುಗಳ ನಡುವೆಯೂ ಸರ್ಕಾರ ಜನರ ಅಹವಾಲುಗಳಿಗೆ ಕಿವಿಯಾಗಿದೆ ಮಾತ್ರವಲ್ಲದೇ ಜನಸಾಮಾನ್ಯರ ನೆರವಿಗೆ ಧಾವಿಸುತ್ತಿದೆ, ಅಭಿವೃದ್ಧಿ ಕಾರ್ಯಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿದೆ ಎಂದರು.
ರಾಜ್ಯದ ಖಾಸಗಿ ಶಾಲೆಗಳ ಬೇಕು-ಬೇಡಗಳನ್ನು ಸರ್ಕಾರದ ವತಿಯಿಂದ ಚರ್ಚಿಸಲು ನಾಳೆ ಬೆಂಗಳೂರಿನಲ್ಲಿ ಸಭೆ ಆಯೋಜಿಸಲಾಗಿದೆ. ಈಗಾಗಲೇ ಅವರು ನೀಡಿರುವ ಮನವಿಯನ್ನು ಗಮನಿಸಲಾಗಿದ್ದು, ಅವರ ಬೇಡಿಕೆಯನ್ನು ಮಾನ್ಯ ಮುಖ್ಯಮಂತ್ರಿಗಳು ಸೇರಿದಂತೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ನಿರ್ಣಯ ಕೈಗೊಳ್ಳಲಾಗುವುದು ಎಂದರು.
ಶಿವಮೊಗ್ಗದ ವಿಮಾನ ನಿಲ್ದಾಣವನ್ನು ರಾಜ್ಯ ಸರ್ಕಾರದಿಂದ ನಿರ್ವಹಿಸಲಾಗುತ್ತಿದ್ದು, ಅಲ್ಲಿನ ಇನ್ನಷ್ಟು ರಚನಾತ್ಮಕ ಕಾರ್ಯಕ್ರಮಗಳು, ಯೋಜನೆಗಳ ಅನುಷ್ಠಾನಕ್ಕಾಗಿ ಸರ್ಕಾರ ಬದ್ದವಾಗಿದೆ ಎಂದ ಅವರು, ರಾಜ್ಯದ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರವು ಪ್ರತಿ ಗ್ರಾಮ ಪಂಚಾಯಿತಿಗಳಿಗೆ ವಾರ್ಷಿಕವಾಗಿ ೯ಕೋಟಿ ಅನುದಾನ ವ್ಯಯ ಮಾಡಲಾಗುತ್ತಿದೆ ಎಂದರು.
Madhu Bangarappa ಶರಾವತಿ ಸಂತ್ರಸ್ಥರ ನೆರವಿಗೆ ಸರ್ಕಾರ ಬದ್ಧವಾಗಿದ್ದು, ಸಂತ್ರಸ್ಥರ ಹಿತಕಾಯಲು ದೇಶದ ಸರ್ವೋಚ್ಛ ನ್ಯಾಯಾಲಯದಲ್ಲಿ ಅಗತ್ಯ ಮಾಹಿತಿಯೊಂದಿಗೆ ಮೊಕದ್ದಮೆಯನ್ನು ಹೂಡಿ, ರಾಜ್ಯದ ಪರವಾಗಿ ಸಮರ್ಥವಾಗಿ ವಾದ ಮಂಡಿಸಲು ಹಿರಿಯ ವಕೀಲರೊಬ್ಬರನ್ನು ನೇಮಿಸಲು ಸರ್ಕಾರ ಕ್ರಮ ಕೈಗೊಂಡಿದೆ ಎಂದರು.
ನಂತರ ಸಚಿವರು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಘಟಕವನ್ನು ಉದ್ಘಾಟಿಸಿ, ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಚಂದ್ರಭೂಪಾಲ್ ಅವರಿಗೆ ಪುಷ್ಪಗುಚ್ಚ ನೀಡಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಸೂರಜ್ ಎಂ.ಎನ್.ಹೆಗಡೆ, ವಿಧಾನ ಪರಿಷತ್ ಸದಸ್ಯೆ ಶ್ರೀಮತಿ ಬಲ್ಕಿಷ್‌ಬಾನು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್ ಮತ್ತಿತರರು ಉಪಸ್ಥಿತರಿದ್ದರು.

Chitradurga News ಮಕ್ಕಳು ಬಾಲ್ಯವನ್ನ ಸ್ಚಚ್ಛಂದ ಅನುಭವಿಸಬೇಕು-ಎಸ್.ನಾಗಭೂಷಣ್

0

Chitradurga News ಚಿತ್ರ ಡಾನ್‌ ಬೋಸ್ಕೊ ಸಂಸ್ಥೆಯಲ್ಲಿ ಚಿತ್ರದುರ್ಗ ತಾಲ್ಲೂಕಿನ ಆಯ್ದ ಪ್ರೌಢಶಾಲೆಯ ಮಕ್ಕಳ ಹಕ್ಕುಗಳ ಪ್ರತಿನಿಧಿಗಳಿಗೆ ನಾಯಕತ್ವ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಸ್‌.ನಾಗಭೂಷಣ್‌ ರವರು ಮಾತನಾಡಿ “ನಮ್ಮ ದೇಶದಲ್ಲಿ ಸ್ವಾತಂತ್ರ್ಯ ಬಂದಮೇಲೆ ಅಂದಿನಿಂದ ಇಂದಿನವರೆಗೂ ಸಂವಿದಾನಾತ್ಮಕವಾಗಿ ಮೂಲಭೂತ ಹಕ್ಕುಗಳನ್ನು ಕೊಟ್ಟಿದ್ದು, ವಿಶೇಷವಾಗಿ ಮಕ್ಕಳಿಗೆ ಹಕ್ಕುಗಳನ್ನು ಕೊಟ್ಟಿದ್ದು, ಮಕ್ಕಳು ಬಾಲ್ಯಾವಸ್ಥೆಯಲ್ಲಿ ಸ್ವಚ್ಛಂದವಾದ ಬಾಲ್ಯವನ್ನು ಅನುಭವಿಸಬೇಕು. ಪ್ರಸ್ತುತ ದಿನಗಳಲ್ಲಿ ಮಕ್ಕಳು ಸಮಸ್ಯೆಗಳಿಗೆ ಒಳಗಾಗುತ್ತಿದ್ದು, ಶಾಲೆಯಿಂದ ಹೊರಗುಳಿಯುವುದು, ಬಾಲ್ಯ ವಿವಾಹದಂತಹ ಅನಿಷ್ಠ ಪದ್ಧತಿಗಳಿಂದ ಮಕ್ಕಳನ್ನು ರಕ್ಷಣೆ ಮಾಡಬೇಕಾಗಿದೆ. ಮಕ್ಕಳಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವ ಮೂಲಕ ಜಾಗೃತರಾಗಬೇಕಾಗಿದೆ. ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಸರ್ಕಾರಗಳ ಪಾತ್ರ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮತ್ತು ಸಂಘಸಂಸ್ಥೆಗಳು ತನ್ನದೇ ಆದ ಕರ್ತವ್ಯಗಳನ್ನು ಮಾಡುತ್ತಿದ್ದು, ಸರ್ಕಾರದ ವ್ಯವಸ್ಥೆಗಳ ಜೊತೆಯಲ್ಲಿ ಸಮನ್ವಯದಿಂದ ಮಕ್ಕಳಲ್ಲಿ ಜಾಗೃತಿಯನ್ನು ಮೂಡಿಸುವಲ್ಲಿ ಚಿತ್ರ ಡಾನ್‌ ಬೋಸ್ಕೊ ಸಂಸ್ಥೆಯು ಪ್ರಮುಖ ಪಾತ್ರ ವಹಿಸಿದೆ” ಎಂದು ಹೇಳಿದರು.

ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿಗಳಾದ ಶ್ರೀಯುತ ಸಂಪತ್‌ ಕುಮಾರ್‌ ರವರು ಮಾತನಾಡಿ “ಸಾಮಾನ್ಯವಾಗಿ ಮಕ್ಕಳಿಗೆ ಮೂಲಭೂತವಾಗಿ ಸಿಗಬೇಕಾಗಿರುವ ಹಕ್ಕುಗಳನ್ನು ಮಕ್ಕಳು ಅನುಭವಿಸಬೇಕು. ಶಾಲಾ ಹಂತದಲ್ಲಿ ದೈಹಿಕ ಮತ್ತು ಮಾನಸಿಕ ಶೋಷಣೆಗಳು, ಲೈಂಗಿಕ ದೌರ್ಜನ್ಯಗಳನ್ನು ತಡೆಹಿಡಿಯುವ ನಿಟ್ಟಿನಲ್ಲಿ ಪ್ರತಿ ಶಾಲೆಗಳಲ್ಲಿ ದೂರು ಮತ್ತು ಸಲಹಾ ಪೆಟ್ಟಿಗೆಗಳನ್ನು ಇಡಬೇಕು. ಮಕ್ಕಳ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಹೊಣೆ” ಎಂದು ತಿಳಿಸಿದರು.

Chitradurga News “ಮಕ್ಕಳಲ್ಲಿ ಜಾಗೃತಿ ಮೂಡಿಸುವ ಇಂತಹ ತರಬೇತಿಗಳನ್ನು ಮಕ್ಕಳು ಪಡೆದಾಗ ಮಾತ್ರ ಸಮಾಜ ಸುಧಾರಣೆಯಾಗುತ್ತದೆ” ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ತಿಮ್ಮಾರೆಡ್ಡಿಯವರು ತಿಳಿಸಿದರು.
ತರಬೇತಿ ಕಾರ್ಯಾಗಾರದಲ್ಲಿ ಬಾಲ್ಯ ಮತ್ತು ಕಿಶೋರಾವಸ್ಥೆ ಕಾರ್ಮಿಕ ನಿಷೇಧ ಕಾಯ್ದೆ ಬಗ್ಗೆ ಕುರಿತು ಕಾರ್ಮಿಕ ಇಲಾಖೆಯಿಂದ ಬಾಲಕಾರ್ಮಿಕ ಯೋಜನಾ ನಿರ್ದೇಶಕರಾದ ಸತೀಶ್ ಕುಮಾರ್‌ ರವರು ಮಕ್ಕಳಿಗೆ ಮಾಹಿತಿ ನೀಡಿದರು.
ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪಾತ್ರ ಮತ್ತು ಕರ್ತವ್ಯಗಳು ಹಾಗೂ ಇಲಾಖೆಯಿಂದ ಮಕ್ಕಳಿಗೆ ಸಿಗುವ ಸೌಲಭ್ಯಗಳ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪರೀವಿಕ್ಷಣಾಧಿಕಾರಿಗಳಾದ ಶ್ರೀಮತಿ ಮಂಜುಳರವರು ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಡಾನ್‌ ಬೋಸ್ಕೊ ಸಂಸ್ಥೆಯ ಆಡಳಿತಾಧಿಕಾರಿಗಳಾದ ಫಾದರ್‌ ವಿ.ಎಮ್‌ ಮ್ಯಾಥ್ಯೂ, ನಿರ್ದೇಶಕರಾದ ಡಿ.ಸಿ.ಅಂತೋಣಿರಾಜ್‌, ಸಂಸ್ಥೆಯ ಸಿಬ್ಬಂದಿ ವರ್ಗ, ಶಾಲಾ ಶಿಕ್ಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.

Phone Hacking News ಮಹಿಳೆಯರೇ ಮೊಬೈಲ್ ಕರೆಗೆ ಮೋಸಹೋಗಿ ವಂಚನೆಗೆ ಸಿಲುಕ ಬೇಡಿ

0

Phone Hacking News ನಗರದ ಮಹಿಳೆಯೊಬ್ಬರಿಗೆ ಮುಂಬೈ ಪೊಲೀಸರೆಂದು ನಂಬಿಸಿ ೭೯,೧೩೯ ರೂ. ವಂಚಿಸಿರುವ ಘಟನೆ ನಡೆದಿದೆ.
ಶಿವಮೊಗ್ಗದ ಮಹಿಳೆಗೆ ಅಪರಿಚಿತನೊಬ್ಬ ಮೊಬೈಲ್ ಗೆ ಕರೆಮಾಡಿ, ಅಪರಿಚಿತ ವ್ಯಕ್ತಿಯು ನಿಮಗೆ ಕೋರಿಯರ್ ಬಂದಿದೆ. ೫ ಕೆಜಿ ಬಟ್ಟೆ, ೪ ಪೆನ್ ಡ್ರೈವ್ ಮತ್ತು ಎಟಿಎಂ ಬಂದಿದೆ ಎಂದು ತಿಳಿಸಿದ್ದಾನೆ. ನಮಗೆ ಯಾವ ಕೋರಿಯರ್ ಮಾಡಿಲ್ಲ ಎಂದು ಮಹಿಳೆ ಉತ್ತರಿಸಿದ್ದಾರೆ.
ಅದು ಕಾನೂನು ಬಾಹಿರ ಕೋರಿಯರ್ ಆಗಿದೆ. ನೀವು ಪೊಲೀಸ್ ಠಾಣೆಗೆ ಭೇಟಿ ಮಾಡಬೇಕು. ಎಂದು ಆತನೇ ಪೊಲೀಸರಿಗೆ ಕರೆ ಮಾಡುವುದಾಗಿ ಹೇಳಿ ಮುಂಬೈ ಪೊಲೀಸ್ ಎನ್ ಸಿಬಿಗೆ ಕರೆ ಮಾಡುವುದಾಗಿ ಹೇಳಿ ಯಾವನೋ ಪೊಲೀಸರೆಂದು ಮಾತನಾಡಿಸಿದ್ದಾನೆ. ಪ್ರದೀಪ್ ಪೊಲೀಸ್ ಎಂಬ ಐಡಿ ಕಾರ್ಡ್ ಕಳುಹಿಸಿ ವಿಡಿಯೋ ಕಾಲ್ ಮಾಡಿದ್ದಾನೆ
ಪೊಲೀಸ್ ಎಂದು ಹೇಳಿಕೊಂಡವ ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿ ಕಾನೂನುಬಾಹಿರ ಚಟುವಟಿಕೆ ನಡೆದಿದೆ. ನಿಮಗೆ ಈತ ಗೊತ್ತ ಎಂದು ಯಾವನದೋ ಫೊಟೊ ತೋರಿಸಿದ್ದಾರೆ. ಆತ ಪರಿಚಯವಿಲ್ಲವೆಂದು ಮಹಿಳೆ ತಿಳಿಸಿದ್ದಾರೆ. ಈತನಿಂದಲೇ ಕಾನೂನು ಬಾಹಿರ ಚಟುವಟಿಕೆ ನಡೆದಿದೆ ಎಂದು ಮಹಿಳೆಗೆ ನಂಬಿಸಿ ಅಕೌಂಟ್ ಗೆ ೭೯,೧೩೨ ರೂ ಕಳುಹಿಸಿ ಎಂದು ಹೇಳಿ ಅಕೌಂಟ್ ಗೆ ಹಣಹಾಕಿಸಿಕೊಂಡಿದ್ದಾರೆ.
Phone Hacking News ಹಣ ಹಾಕಿದ ಮಹಿಳೆಗೆ ಅನುಮಾನ ಬಂದು ವಾಪಾಸ್ ಮೊಬೈಲ್ ಗೆ ಬಂದ ಅಪರಿಚಿತನ ನಂಬರ್ ಗೆ ಕರೆ ಮಾಡಿದಾಗ ಕರೆಹೋಗದೆ ಇದ್ದಕಾರಣ ಮಹಿಳೆ ತುಂಗಾ ನಗರ ಪೊಲೀಸ್‌ಗೆ ದೂರು ನೀಡಿದ್ದಾರೆ.