Madhu Bangarappa ಯಾರು ತಿಪ್ಪರಲಾಗ ಹೊಡೆದರೂ ಸಿದ್ದರಾಮಯ್ಯ ರಾಜೀನಾಮೆ ಕೊಡಲ್ಲ.ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ನಡೆಸುವ ಪ್ರಯತ್ನ ಸಂವಿಧಾನಕ್ಕೆ ವಿರುದ್ಧವಾಗಿದೆ.
ಹೊಟ್ಟೆ ಕಿಚ್ಚಿಗೆ ಬಿಜೆಪಿಯವರು ಶುರು ಮಾಡಿದ್ದಾರೆ ಅದಕ್ಕೆ ಜೆಡಿಎಸ್ ಅವರು ಸೇರಿದ್ದಾರೆ.ಬಿಜೆಪಿಯ 67 ಸೀಟು ಎಲ್ಲಿ ಕಾಂಗ್ರೆಸ್ ನ 137 ಎಲ್ಲಿ ಎಂದು ತಿರುಗೇಟು ನೀಡಿದರು.
ಯತ್ನಾಳ್ ಅವರು ಹಿರಿಯರು ಅಂತೆ, ಹಿರಿಯರ ಕೈಯಲ್ಲಿ ಬೈಯಸಿಕೊಳ್ಳಲು ನಾಚಿಕೆ ಆಗಲ್ವಾ?ಯಾರಾದ್ರೂ ವರ್ಗಾವಣೆಗೆ ಹಣ ಪಡೆದಿದ್ದಾರೆ ಎಂದರೆ ಅವನು ಏಜೆಂಟ್ ಇರಲಿ ಯಾರೇ ಇರಲಿ ಎರಡು ನಿಮಿಷದಲ್ಲಿ ಕಿತ್ತು ಬಿಸಾಕುತ್ತೇನೆ.
ಶಿಕ್ಷಕರ ಸಮಸ್ಯೆಗೆ ನಾವು ಸ್ಪಂದಿಸುತ್ತೇವೆ ಅವರ ಬೇಡಿಕೆಗಳ ಈಡೇರಿಕೆಗೆ ಪ್ರಯತ್ನ ನಡೆಸುತ್ತೇವೆ. ಶಿಕ್ಷಕರ ಬೇಡಿಕೆಗೆ ರಾಜ್ಯಮಟ್ಟದಲ್ಲಿ ಕಾನೂನಿನ ತಿದ್ದುಪಡಿಯ ಅಗತ್ಯವಿದೆ.ನಾವು ಯಾವುದೇ ವರ್ಗಾವಣೆ ಮಾಡುವುದಿಲ್ಲ ಎಲ್ಲವೂ ಕೌನ್ಸಿಲಿಂಗ್ ಮೂಲಕ ನಡೆಯುತ್ತದೆ ಎಂದರು.
ವಿಮಾನ ನಿಲ್ದಾಣಕ್ಕೆ ನೈಟ್ ಲ್ಯಾಂಡಿಂಗ್ ಬಗ್ಗೆ ಕುಮಾರಸ್ವಾಮಿಯವರಿಗೆ ಮನವಿ ನೀಡಿದ್ದಾರೆ. ಅವರಿಗೆ ಯಾಕೆ ಮನವಿ ಕೊಡುತ್ತಾರೆ ರಾಜ್ಯ ಸರ್ಕಾರದ ತೆರಿಗೆ ಹಣದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಿದೆ. ಒಂದು ವರ್ಷದಲ್ಲಿ ಸಚಿವರು ಜಿಲ್ಲೆಯಲ್ಲಿ ಅಭಿವೃದ್ಧಿ ಏನು ಮಾಡಿದ್ದಾರೆ ಎಂಬ ಬಿ ವೈ ರಾಘವೇಂದ್ರ ಪ್ರಶ್ನೆಗೆ ಆಕ್ರೋಶ ವ್ಯಕ್ತಪಡಿಸಿದರು.
ಗ್ಯಾರೆಂಟಿ ಯೋಜನೆಗಳ ಮೂಲಕ ಒಂದು ಗ್ರಾಮ ಪಂಚಾಯಿತಿಗೆ 9 ಕೋಟಿ ಹೋಗುತ್ತದೆ ಇದು ಅಭಿವೃದ್ಧಿ ಅಲ್ಲವಾ? ಬಡವರಿಗೆ ಹಣ ಕೊಡುತ್ತೇವೆ ಬಸ್ ನಲ್ಲಿ ಫ್ರೀ ಎಂಬುದು ಅವರಿಗೆ ಹೊಟ್ಟೆ ಉರಿ ಎಂದು ಉಲ್ಲೇಖಿಸಿದರು. ಪರಿಷತ್ ನಾಯಕ ನಾರಾಯಣಸ್ವಾಮಿ ಹೇಳಿಕೆಗಳಿಗೆ ಮಹತ್ವ ಕೊಡುವ ಅಗತ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿಯವರಿಂದ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿಸಿದರು.
Madhu Bangarappa ಆದರೆ ವಿಮಾನಗಳು ಲ್ಯಾಂಡಿಂಗ್ ಆರಂಭವಾಗಿದ್ದು ನಮ್ಮ ಸರ್ಕಾರ ಬಂದ ಮೇಲೆ ನಡೆದಿದೆ. ಲೋಕಸಭಾ ಅಧಿವೇಶನದಲ್ಲಿ 10 ವರ್ಷಗಳಲ್ಲಿ ಸಂಸದರಾಗಿ ರಾಘವೇಂದ್ರ ಶರಾವತಿ ಸಂತ್ರಸ್ತರ ಬಗ್ಗೆ ಮಾತನಾಡಿದ್ದಾರಾ? ಎಂದು ಪ್ರಶ್ನಿಸಿದರು.
ಖಾಸಗಿ ಶಿಕ್ಷಣ ಸಂಸ್ಥೆಗಳು ಆಗಸ್ಟ್ 15 ರಂದು ಕರಾಳ ದಿನಾಚರಣೆ ವಿಚಾರದ ಕುರಿತು ಮಾತನಾಡಿದ ಸಚಿವರು ಅವರು ಆಚರಣೆ ಮಾಡಲಿ ಆ ಹಕ್ಕು ಅವರಿಗಿದೆ. ಅವರ ಎಲ್ಲಾ ಮನವಿಗೆ ಸ್ಪಂದಿಸಿದ್ದೇವೆ. ಅವರ ಸಮಸ್ಯೆಗೆ ಪರಿಹರಿಸಿದ್ದೇವೆ ಎಂದರು.