Tuesday, April 7, 2026
Tuesday, April 7, 2026
Home Blog Page 617

Rotary Club Shimoga ಶರಣ್ಯ ಸಂಸ್ಥೆಯಿಂದ ನಿರಾಶ್ರಿತ ರೋಗಿಗಳ ಆರೈಕೆ ಶ್ಲಾಘನೀಯ- ಕಿರಣ್ ಕುಮಾರ್

0

Rotary Club Shimoga ಶರಣ್ಯ ಸಂಸ್ಥೆಯು ನಿರಾಶಿತ ರೋಗಿಗಳಿಗೆ ವೈದ್ಯಕೀಯ ಸೌಲಭ್ಯಗಳೊಂದಿಗೆ ಸೇವೆ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಕಿರಣ್ ಕುಮಾರ್ ಅಭಿಪ್ರಾಯ ಪಟ್ಟರು.
ಗಾಜನೂರಿನಲ್ಲಿರುವ ಶರಣ್ಯ ಆರೈಕೆ ಕೇಂದ್ರಕ್ಕೆ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಹಾಗೂ ಆನ್ಸ್ ಕ್ಲಬ್ ಸದಸ್ಯರು ಭೇಟಿ ನೀಡಿ, ಶರಣ್ಯ ಸಂಸ್ಥೆಯು ರೋಗಿಗಳನ್ನು ಆರೈಕೆ ಮಾಡುತ್ತಿರುವವರ ಜೊತೆ ಇದ್ದು ಸಾಂತ್ವಾನಿಸಿ ಶರಣ್ಯ ಸಂಸ್ಥೆಯ ಅಧ್ಯಕ್ಷರು ಹಾಗೂ ಸಿಬ್ಬಂದಿಗಳೊಂದಿಗೆ ಸಂಸ್ಥೆ ನೀಡುತ್ತಿರುವ ಸೇವೆಗಳ ಬಗ್ಗೆ ಮಾಹಿತಿ ತಿಳಿಸಿದರು.
ಅನುಭವಿ ವೈದ್ಯರು ಹಾಗೂ ವೈದಿಕೀಯ ತಂಡ ಇಲ್ಲಿರುವುದು, ರೋಗಿಗಳಿಗೆ ಮನೆಯ ವಾತಾವರಣದೊಂದಿಗೆ ನೋಡಿಕೊಳ್ಳುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.
ಶರಣ್ಯ ಸಂಸ್ಥೆಯ ಅಧ್ಯಕ್ಷ ಮಂಜುನಾಥ್, ಸಂಸ್ಥೆ ನೀಡುತ್ತಿರುವ ಎಲ್ಲಾ ಸೌಕರ್ಯಗಳ ಬಗ್ಗೆ ರೋಟರಿ ಸಂಸ್ಥೆಯ ಸದಸ್ಯರಿಗೆ ತಿಳಿಸಿ, ಶುಭ ಸಮಾರಂಭಗಳನ್ನು ರೋಗಿಗಳೊಂದಿಗೆ ಆಚರಿಸುವುದು ರೋಗಿಗಳಿಗೂ ಒಂದು ಉತ್ಸಾಹ ನೀಡುತ್ತದೆ. ಆದ್ದರಿಂದ ಯಾವುದೇ ಶುಭ ಸಂದರ್ಭಗಳಿಗೆ ನಮ್ಮ ಸಂಸ್ಥೆ ಕಾರ್ಯಕ್ರಮ ನಡೆಸಿಕೊಡುವುದಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಸಂಸ್ಥೆಯ ವೈದ್ಯ ಡಾ|| ತಾನಾಜಿ ಮಾತನಾಡಿ, ರೋಗಿಗಳನ್ನು ನೋಡಿಕೊಳ್ಳಲಾಗದ ಸ್ಥಿತಿಯಲ್ಲಿ ನಮ್ಮ ಸಂಸ್ಥೆಗೆ ತರುತ್ತಾರೆ, ಆಗ ತುಂಬಾ ಕಾಳಜಿಯಿಂದ ನೋಡಿಕೊಳ್ಳುತ್ತೇವೆ. ತುಂಬಾ ಜನರು ಗುಣಮುಖರಾಗಿ ಮತ್ತೆ ಮನೆಗೆ ಹೋಗಿದ ಉದಾಹರಣೆಗಳೂ ಕೂಡ ಸಾಕಷ್ಟಿದೆ ಎಂದರು.
Rotary Club Shimoga ಇದೇ ಸಂದರ್ಭದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ಶರಣ್ಯ ಆರೈಕೆ ಕೇಂದ್ರಕ್ಕೆ ರೋಟರಿಯನ್ ಕಿರಣ್ ಕುಮಾರ್ ಹಾಗೂ ರೋಟರಿಯನ್ ಧರ್ಮೇಂದ್ರ ಸಿಂಗ್ ಆರ್ಥಿಕ ನೆರವು ಮತ್ತು ಗಣೇಶ್ ಎಂ ಅಂಗಡಿಯವರಿಂದ ವಾಕರ್‌ನ್ನು ಕೊಡುಗೆಯಾಗಿ ನೀಡಿದರು. ರಾಜಶ್ರೀ ಬಸವರಾಜ್ ಮತ್ತು ದೀಪಾ ಜಯಶೀಲ ಶೆಟ್ಟಿ, ಜ್ಯೋತಿ ಶ್ರೀರಾಮ್ ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಲಘು ಉಪಹಾರ ನೀಡಿದರು. ಆನ್ಸ್ ಕ್ಲಬ್ ನ ಅಧ್ಯಕ್ಷೆ ಗೀತಾ ಅವರು ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವರಿಗೆ ಬಟ್ಟೆಗಳನ್ನು ನೀಡಿದರು.
ಈ ವೇಳೆ ಕಾರ್ಯದರ್ಶಿ ಈಶ್ವರ್.ಬಿ.ವಿ, ಬಸವರಾಜ್, ಅಸಿಸ್ಟೆಂಟ್ ಗವರ್ನರ್ ರವಿ ಕೋಟೋಜಿ, ಜೋನಲ್ ಲೆಫ್ಟಿನೆಂಟ್ ಮಂಜುನಾಥ್ ಕದಂ, ಜೈಷೀಲ್ ಶೆಟ್ಟಿ , ಗುರುರಾಜ್, ಮಂಜುನಾಥ್ ಹೆಗಡೆ, ಬಲರಾಮ್, ಸಂತೋಷ್, ಗಣೇಶ್ ಅಂಗಡಿ, ರಾಜಶ್ರೀ ಬಸವರಾಜ್, ದೀಪ ಜೈಷೀಲ್ ಶೆಟ್ಟಿ, ಜ್ಯೋತಿ ಶ್ರೀರಾಮ್, ಆನ್ಸ್ ಕ್ಲಬ್ ಅಧ್ಯಕ್ಷೆ ಗೀತಾ ಜಗದೀಶ್, ಕಾರ್ಯದರ್ಶಿ ಶುಭ ಚಿದಾನಂದ್ ಹಾಗೂ ಶರಣ್ಯ ಸಿಬ್ಬಂದಿ ವರ್ಗದವರು ಆಡಳಿತ ಮಂಡಳಿಯ ಸದಸ್ಯರು ಇತರೆ ಸದಸ್ಯರು ಉಪಸ್ಥಿತರಿದ್ದರು.

Shimoga News ಶಾಸಕಿ ಬಲ್ಕೀ಼ಷ್ ಬಾನು ಅವರಿಗೆ ಹಾಡೋನಹಳ್ಳಿ ಗ್ರಾಮಸ್ಥರಿಂದ ಸನ್ಮಾನ

0

Shimoga News ಶಿವಮೊಗ್ಗ ತಾಲೂಕು ಹಾಡೋನಹಳ್ಳಿ ಗ್ರಾಮದಲ್ಲಿರುವ ತುಂಗಭದ್ರಾ ನದಿಯ ಸೋಪಾನಕಟ್ಟೆ ಹಾಗೂ ಗ್ರಾಮದಿಂದ ನದಿಗೆ ಹೋಗುವ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು ಅದನ್ನು ಸಿದ್ಧಪಡಿಸಿಕೊಡಲು ಅನುದಾನ ಬಿಡುಗಡೆ ಮಾಡಿಸುವಂತೆ
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಶಿವಮೊಗ್ಗ ತಾಲೂಕ್ ಗ್ಯಾರಂಟಿ ಸಮಿತಿ ಸದಸ್ಯ ಡಿಸಿ ಜಗದೀಶ್ವರ್ ನೂತನ ವಿಧಾನ ಪರಿಷತ್ ಸದಸ್ಯರಾದ ಬಲ್ಕಿಶ್ ಬಾನು ಅವರಿಗೆ ಮಾನವಿ ಸಲ್ಲಿಸಿದ್ದಾರೆ.
ಇದೇ ಸಂದರ್ಭದಲ್ಲಿ ನೂತನ ಶಾಸಕರಿಗೆ ಸನ್ಮಾನಿಸಿದ ಅವರು ಸುಮಾರು ವರ್ಷಗಳಿಂದ ಹಾಡೋನಹಳ್ಳಿ ಗ್ರಾಮದ ಜನತೆ ತುಂಗಭದ್ರ ನದಿಯ ಸೋಪಾನಕಟ್ಟೆಯನ್ನು ಬಳಸಿಕೊಳ್ಳಲು ಆಗುತ್ತಿಲ್ಲ. ರಸ್ತೆ ಸಂಪೂರ್ಣವಾಗಿ ಹಾಳಾಗಿದೆ.
Shimoga News ಮೆಟ್ಟಿಲು ಮಾರ್ಗದ ಈ ರಸ್ತೆಯ ಸಮಗ್ರ ದುರವಸ್ತಿ ಹಾಗೂ ಹೊಸ ಮಾರ್ಗ ನಿರ್ಮಾಣ ಮಾಡುವ ಜೊತೆಗೆ ಸೋಪಾನಕಟ್ಟೆಯನ್ನು ಗ್ರಾಮದ ಜನತೆ ಬಳಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲು ಕೋರಿದರು. ಸಕಾರಾತ್ಮಕವಾಗಿ
ಸ್ಪಂದಿಸಿದ ವಿಧಾನ ಪರಿಷತ್ ಶಾಸಕರಾದ ಬಲ್ಕೀಷ್ ಭಾನು ಅವರು ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸರ್ಕಾರದ ಮಟ್ಟದಲ್ಲಿ ಕಾಮಗಾರಿ ಕೈಗೊಳ್ಳಲು ವಿನಂತಿಸುವುದಾಗಿ ಹಾಗೂ ಕ್ರಮ ಕೈಗೊಳ್ಳುವುದಾಗಿ ಸೂಚಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಕೆ. ಎಸ್. ಈಶ್ವರಪ್ಪ, ಹೆಎಚ್.ಎಂ. ಮಧು ಉಪಸ್ಥಿತರಿದ್ದರು.

Kuvempu University ಕುವೆಂಪು ವಿವಿಗೆ ಶಿಕ್ಷಣ ಸಂಸ್ಥೆಗಳ ಶ್ರೇಣಿ ಪಟ್ಟಿಯಲ್ಲಿ 3೦ ನೇ ಸ್ಥಾನ

0

Kuvempu University ಔಟ್ ಲುಕ್ ಮ್ಯಾಗಜೀನ್‌ನ ಪ್ರಕಟಿಸಿರುವ ಭಾರತದ ಸಾರ್ವಜನಿಕ ವಲಯದ ಅತ್ಯುತ್ತಮ ಉನ್ನತ ಶಿಕ್ಷಣ ಸಂಸ್ಥೆಗಳ ರ‍್ಯಾಂಕಿಂಗ್ ನಲ್ಲಿ ಕುವೆಂಪು ವಿವಿ 30ನೇ ಸ್ಥಾನ ಪಡೆದಿದೆ.
ದೇಶದ ಮುದ್ರಣ ಮಾಧ್ಯಮದಲ್ಲಿ ಪ್ರಸಿದ್ಧ ನಿಯತಕಾಲಿಕೆಯಾದ ಔಟ್ಲುಕ್ ಮ್ಯಾಗಜಿನ್ ವಿವಿಧ ಮಾನದಂಡಗಳನ್ನು ಪರಿಗಣಿಸಿ ಭಾರತದ ಸಾರ್ವಜನಿಕ ವಲಯದ ಅತ್ಯುತ್ತಮ ಉನ್ನತ ಶಿಕ್ಷಣ ಸಂಸ್ಥೆಗಳ ರ‍್ಯಾಂಕಿAಗ್ ಅನ್ನು ಆ. 03ರಂದು ಪ್ರಕಟಿಸಿದೆ. ಇದರಲ್ಲಿ ಒಟ್ಟು ದೇಶದ 75 ಸಂಸ್ಥೆಗಳಿದ್ದು ಕರ್ನಾಟಕದ ಗ್ರಾಮೀಣ ಭಾಗದ ವಿವಿಯಾದ ಕುವೆಂಪು ವಿವಿ ಅಗ್ರ 30ನೇ ಸ್ಥಾನ ಪಡೆದಿದೆ.

Kuvempu University ನಿಯತಕಾಲಿಕೆಯು ಶೈಕ್ಷಣಿಕ ವಾತಾವರಣ, ಸಂಶೋಧನೆ ಮೂಲಭೂತ ಸೌಕರ್ಯಗಳು, ಆಡಳಿತ ಮತ್ತು ವಿಸ್ತರಣಾ ಕಾರ್ಯಕ್ರಮಗಳ ಐದು ಮಾನದಂಡಗಳ ಆಧಾರದಲ್ಲಿ ರ‍್ಯಾಂಕಿAಗ್ ಪಟ್ಟಿ ಸಿದ್ಧಪಡಿಸಿದೆ. ಕುವೆಂಪು ವಿಶ್ವವಿದ್ಯಾಲಯವು ಒಟ್ಟು ಸಾವಿರ ಅಂಕಗಳಿಗೆ 877 ಪಾಯಿಂಟ್ ಗಳಿಸಿದೆ. ಇದೇ ಪಟ್ಟಿಯಲ್ಲಿ ಮೈಸೂರು ವಿಶ್ವವಿದ್ಯಾಲಯವು ಎಂಟನೇ ಸ್ಥಾನ ಗಳಿಸಿದ್ದರೆ, ಬೆಂಗಳೂರು ವಿಶ್ವವಿದ್ಯಾಲಯವು 24ನೇ ಸ್ಥಾನದಲ್ಲಿದೆ. ಹಾಗೂ ಈ ಪಟ್ಟಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಕೃಷಿ ವಿಶ್ವವಿದ್ಯಾಲಯ, ಧಾರವಾಡ ಮತ್ತು ತುಮಕೂರು ವಿವಿಗಳು ಕರ್ನಾಟಕದಿಂದ ಸ್ಥಾನ ಪಡೆದಿವೆ.

ನಿಯತಕಾಲಿಕೆಯು ಪರಿಗಣಿಸಿರುವ ಮಾನದಂಡಗಳು ಇಂತಿವೆ: ಶೈಕ್ಷಣಿಕ ಮತ್ತು ಸಂಶೋಧನಾ ಉತ್ಕೃಷ್ಟತೆ, ಔದ್ಯಮಿಕ ವಲಯ ಮತ್ತು ಉದ್ಯೋ ಗ ಕಲ್ಪಿಸುವಿಕೆ, ಮೂಲಭೂತ ಶೈಕ್ಷಣಿಕ ಸೌಲಭ್ಯಗಳು, ಆಡಳಿತ ಮತ್ತು ವಿಸ್ತರಣಾ ಕಾರ್ಯಕ್ರಮಗಳು ಹಾಗೂ ವೈವಿಧ್ಯತೆಯನ್ನು ಒಳಗೊಳ್ಳುವ ಸಾಮರ್ಥ್ಯವನ್ನು ಪರಿಗಣನೆಗೆ ತೆಗೆದುಕೊಂಡು ಒಟ್ಟು ಸಾವಿರ ಅಂಕಗಳಿಗೆ ಮೌಲ್ಯಮಾಪನ ಮಾಡಲಾಗಿದೆ.

Shivamogga Airport News ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ರಾತ್ರಿ ಲ್ಯಾಂಡಿಂಗ್ ಕೆಲಸದ ಪುನರಾರಂಭಕ್ಕೆ ಅನುಮೋದನೆ

0

Shivamogga Airport News ಜನವರಿ 2024 ರಲ್ಲಿ ಸ್ಥಗಿತಗೊಂಡ ರಾತ್ರಿ ಲ್ಯಾಂಡಿಂಗ್ ಕೆಲಸದ ಪುನರಾರಂಭವನ್ನು DGCA ಅನುಮೋದಿಸಿದೆ. KPWD ಎಕ್ಸಿಕ್ಯೂಟಿಂಗ್ ಏಜೆನ್ಸಿಯಾಗಿದೆ ಮತ್ತು DGCA ರೇಖಾಚಿತ್ರಗಳು, ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಿ ಪರಿಕಲ್ಪನೆ/ವಿನ್ಯಾಸ ಮತ್ತು ಕಾರ್ಯಗತಗೊಳಿಸುವಿಕೆಯ ಮಟ್ಟದ ಅನುಮೋದನೆಯನ್ನು ನೀಡಿದೆ.

ಜನವರಿ 2024 ರ ಹೊತ್ತಿಗೆ ಸುಮಾರು 65 ಪ್ರತಿಶತದಷ್ಟು ಕೆಲಸ ಪೂರ್ಣಗೊಂಡಿದೆ; ಉಳಿದ ಕೆಲಸವು ಕನಿಷ್ಠ ಎರಡು ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಎಲ್ಲಾ ಹವಾಮಾನ ಕಾರ್ಯಾಚರಣೆಯನ್ನು ಸಕ್ರಿಯಗೊಳಿಸುವ ಮೊದಲು DGCA ಪೂರ್ಣಗೊಂಡ ಯೋಜನೆಯನ್ನು ಮರುಪರಿಶೀಲಿಸುತ್ತದೆ.

Shivamogga Airport News ಈ ಎಲ್ಲಾ ಪ್ರಕ್ರಿಯೆಗಳು 3-4 ತಿಂಗಳುಗಳನ್ನು ತೆಗೆದುಕೊಳ್ಳಬಹುದು. ಈ ಚಳಿಗಾಲದ ಋತುವಿನ ಆಗಮನದ ಮೊದಲು, ಶಿವಮೊಗ್ಗ ವಿಮಾನ ನಿಲ್ದಾಣವನ್ನು ಎಲ್ಲಾ ಹವಾಮಾನ ಕಾರ್ಯಾಚರಣೆಗೆ ನವೀಕರಿಸಲಾಗುತ್ತದೆ ಮತ್ತು ಈ ವಿಮಾನ ನಿಲ್ದಾಣದಲ್ಲಿ ಪ್ರತಿಕೂಲ ಹವಾಮಾನ, ಮಳೆ, ರಾತ್ರಿ ಮುಂತಾದ ಅನಿರೀಕ್ಷಿತ ವಿಮಾನ ಕಾರ್ಯಾಚರಣೆ ಮತ್ತು ಪ್ರಯಾಣಿಕರ ಅನಾನುಕೂಲತೆಗಳನ್ನು ನಿವಾರಿಸಲಾಗುತ್ತದೆ.

P. Lankesh ಪಿ.ಲಂಕೇಶ್ ಕೃತಿಗಳ ಅಧ್ಯಯನ ಶಿಬಿರ: ಅರ್ಜಿ ಆಹ್ವಾನ

0

P. Lankesh ಆಗಸ್ಟ್ 07 : (ಕರ್ನಾಟಕ ವಾರ್ತೆ): ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕನ್ನಡ ಜಾಣ-ಜಾಣೆಯರ ವೇದಿಕೆ, ಬೆಂಗಳೂರು ಇವರ ಸಹಯೋಗದೊಂದಿಗೆ 2024ರ ಸೆಪ್ಟಂಬರ್ ಕೊನೆಯ ವಾರದಲ್ಲಿ ಹಾಸನ ಜಿಲ್ಲೆಯಲ್ಲಿ ರಾಜ್ಯಮಟ್ಟದ ಮೂರು ದಿನಗಳ “ ಪಿ. ಲಂಕೇಶ್ ಕೃತಿಗಳ ಅಧ್ಯಯನ ಶಿಬಿರ ”ವನ್ನು ಆಯೋಜಿಸಿದ್ದು, ರಾಜ್ಯ ಎಲ್ಲಾ ಭಾಗದ 20-40 ವರ್ಷ ವಯಸ್ಸುಳ್ಳ ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.
P. Lankesh ಆಸಕ್ತರು ಅರ್ಜಿ ನಮೂನೆ ಮತ್ತು ವಿವರಗಳನ್ನು ಅಕಾಡೆಮಿಯ ವೆಬ್‌ಸೈಟ್ http://karnatakasahithyaacademy.org ಯ ಮೂಲಕ ಪಡೆದುಕೊಂಡು, ಭರ್ತಿ ಮಾಡಿದ ಅರ್ಜಿಯನ್ನು ಆ.17 ರೊಳಗಾಗಿ ಸಲ್ಲಿಸುವಂತೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಕರಿಯಪ್ಪ ಎನ್. ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿಯ ದೂ.ಸಂ.: 080-22211730/ 29601730/ 22106460 ಗಳನ್ನು ಸಂಪರ್ಕಿಸುವುದು.

Hiroshima Day 2024 ಮಾನವ ಜಗತ್ತಿನ ಇತಿಹಾಸದ ಕರಾಳ ನೆನಪು…

Hiroshima Day 2024 ● ಪ್ರತಿ ಆಗಸ್ಟ್ 6 ರಂದು ಹಿರೋಷಿಮಾ ದಿನವನ್ನು ಶಾಂತಿ ರಾಜಕಾರಣಕ್ಕಾಗಿ ಪ್ರತಿಪಾದಿಸಲು ಮತ್ತು ಹಿರೋಷಿಮಾದ ಮೇಲಿನ ಪರಮಾಣು ಬಾಂಬ್ ದಾಳಿಯ ದುರಂತ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಒಂದು ಗಂಭೀರ ಸಂದರ್ಭವಾಗಿ ಆಚರಿಸಲಾಗುತ್ತದೆ. ಎರಡನೆಯ ಮಹಾಯುದ್ಧದ ಸಮಯದಲ್ಲಿ ಯುನೈಟೆಡ್ ಸ್ಟೇಟ್ಸ್ ಜಪಾನಿನ ನಗರವಾದ ಹಿರೋಷಿಮಾದ ಮೇಲೆ 6 ಆಗಸ್ಟ್ 1945 ರಂದು ಪರಮಾಣು ಬಾಂಬ್ ಅನ್ನು ಬೀಳಿಸಿತು, ಇದು 20,000 ಕ್ಕೂ ಹೆಚ್ಚು ಸೈನಿಕರು ಮತ್ತು ಸುಮಾರು 70,000-126,000 ನಾಗರಿಕರ ಸಾವಿಗೆ ಕಾರಣವಾಯಿತು. ಮೂರು ದಿನಗಳ ನಂತರ ಜಪಾನಿನ ಮತ್ತೊಂದು ನಗರ ನಾಗಸಾಕಿಯ ಮೇಲೆ ಇದೇ ರೀತಿಯ ಬಾಂಬ್ ಅನ್ನು ಬೀಳಿಸಲಾಯಿತು, ಇದು ಇನ್ನೂ 80000 ಸಾವುಗಳಿಗೆ ಕಾರಣವಾಯಿತು. ಇದು ವಿಶ್ವದಲ್ಲಿ ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯ ಮೊದಲ ಮತ್ತು ಏಕೈಕ ನಿದರ್ಶನವಾಗಿದೆ.

● ಗುರಿ ಮತ್ತು ಉದ್ದೇಶ:- ಈ ದಿನವು ಸಂಗೀತ, ನೃತ್ಯ ಮತ್ತು ಹಾಡುಗಳನ್ನು ಒಳಗೊಂಡಂತೆ ಹಲವಾರು ಕಾರ್ಯಕ್ರಮಗಳನ್ನು ಒಳಗೊಂಡಿದೆ, ಎಲ್ಲವೂ ಶಾಂತಿ ರಾಜಕೀಯವನ್ನು ಉತ್ತೇಜಿಸುವ ಮತ್ತು ಬಾಂಬ್ ದಾಳಿಯಲ್ಲಿ ತಮ್ಮ ಪ್ರಾಣ ಕಳೆದುಕೊಂಡವರ ಸ್ಮರಣೆಯನ್ನು ಗೌರವಿಸುವ ಗುರಿಯನ್ನು ಹೊಂದಿದೆ.

● ಇತಿಹಾಸ:-
1) ಐತಿಹಾಸಿಕ ಸನ್ನಿವೇಶವು 1945 ರಲ್ಲಿ, ಯುನೈಟೆಡ್ ಸ್ಟೇಟ್ಸ್ ಎರಡು ಪರಮಾಣು ಬಾಂಬ್‌ಗಳನ್ನು ‘ದಿ ಲಿಟಲ್ ಬಾಯ್’ ಮತ್ತು ‘ದಿ ಫ್ಯಾಟ್ ಮ್ಯಾನ್’ ಎಂದು ಹೆಸರಿಸಿದ್ದು, ಹಿರೋಷಿಮಾ ಮತ್ತು ನಾಗಸಾಕಿಯಲ್ಲಿ ಕ್ರಮವಾಗಿ ಆಗಸ್ಟ್ 6 ಮತ್ತು 9 ರಂದು ಸ್ಥಾಪಿಸಿತು.
2) ಹಿರೋಷಿಮಾದ ಬಾಂಬ್ ದಾಳಿಯು ನಗರದ ನಾಗರಿಕ ಜನಸಂಖ್ಯೆಯ 39 ಪ್ರತಿಶತದಷ್ಟು ನಷ್ಟಕ್ಕೆ ಕಾರಣವಾಯಿತು.
3) ಈ ದಿನಾಂಕವು 1945 ರಲ್ಲಿ ಪರಮಾಣು ಶಸ್ತ್ರಾಸ್ತ್ರದ ಸ್ಫೋಟದಿಂದಾಗಿ ಕ್ಷಣಾರ್ಧದಲ್ಲಿ ಸಾವಿರಾರು ಜೀವಗಳ ದುರಂತ ನಷ್ಟವನ್ನು ಗುರುತಿಸಿತು, ಹಿರೋಷಿಮಾ ಅಂತಹ ವಿನಾಶಕಾರಿ ಪರಮಾಣು ದಾಳಿಯನ್ನು ಅನುಭವಿಸಿದ ಮೊದಲ ನಗರವಾಗಿದೆ. ಇಂದು ನಾವು ಈ ಘಟನೆಯ ವಾರ್ಷಿಕೋತ್ಸವವನ್ನು ಅಗಷ್ಟ 6 ರಂದು ಸ್ಮರಿಸುತ್ತೇವೆ.
4) 1945 ರಲ್ಲಿ ಯುನೈಟೆಡ್ ಸ್ಟೇಟ್ಸ್ ಹಿರೋಷಿಮಾ ಮತ್ತು ನಾಗಾಸಾಕಿಯ ಪರಮಾಣು ಬಾಂಬ್ ಸ್ಫೋಟಗಳ ಸ್ಮರಣಾರ್ಥವಾಗಿ, ಐರ್ ಸ್ಕ್ವೇರ್‌ನಲ್ಲಿ ಗಾಲ್ವೇ ಅಲೈಯನ್ಸ್ ವಾರ್‌ನಲ್ಲಿ ವಾರ್ಷಿಕ ಕಾರ್ಯಕ್ರಮವನ್ನು ನಡೆಸಲಾಗುತ್ತದೆ.

Hiroshima Day 2024 ● ವಿಮರ್ಶೆಯ ಆತ್ಮಾವಲೋಕನ:- 6ನೇ ಅಗಷ್ಟ 1945 ವಿಶ್ವದ ಚರಿತ್ರೆಯಲ್ಲೊಂದು ಕರಾಳ ದಿನ. ವಿಜ್ಞಾನಿಯ ಸಾಮರ್ಥ್ಯ ವಿನಾಶದ ಹಾದಿ ಹಿಡಿದ ದಿನ. ಯಾವನೋ ಒಬ್ಬ ಅಧಿಕಾರ ಶಾಹಿ ಯುದ್ಧ ಬೇಕೇ ಬೇಕು ಎಂದು ಪಟ್ಟು ಹಿಡಿದದ್ದಕ್ಕೆ ಒಂದು ದೇಶ ಮತ್ತು ಇಡೀ ಜನಾಂಗವೇ ಬೆಲೆ ತೆತ್ತ ದಿನ. ಮನುಷ್ಯನ ಕೈನಲ್ಲಿ ವಿನಾಶಕಾರಕವಾದ ಅಸ್ತ್ರ ಇದ್ದರೆ ಅದನ್ನು ಹೆಚ್ಚು ದಿನ ಪ್ರಯೋಗಿಸದೆ ಆತ ಸುಮ್ಮನಿರಲಾರ ಎಂಬುದು ದೃಢಪಟ್ಟ ದಿನ.

ಮಹಾಯುದ್ಧವನ್ನು ಮುಗಿಸುವ ಅಮೆರಿಕಾದ ಅಧ್ಯಕ್ಷ ಟ್ರೂಮನ್ನನ ಆಶಯ ಮತ್ತು ಮಿತ್ರರಾಷ್ಟ್ರಗಳ ಆಗ್ರಹವನ್ನು ಅಂದಿನ ಜಪಾನಿನ ಪ್ರಧಾನಿ ಕಂಟಾಕೋ ಸುಜೂಕಿ ನಿರ್ಲಕ್ಷಿಸಿಬಿಟ್ಟ. ಹಾಗಾಗಿ ಅಮೆರಿಕಾ ತನ್ನ ಬಾಂಬ್ ದಾಳಿಗಾಗಿ ಒಂದು ಲಕ್ಷಕ್ಕೂ ಹೆಚ್ಚು ಸೈನಿಕರನ್ನು ಹೊಂದಿದ್ದು, ಅಗಾಧ ಮದ್ದು ಗುಂಡುಗಳನ್ನು ಶೇಖರಿಸಿದ್ದ ಜಪಾನಿನ ಮಿಲಿಟರಿ ಕೇಂದ್ರವಾದ ಹಿರೋಷಿಮಾ ನಗರವನ್ನು ಆಯ್ಕೆ ಮಾಡಿಕೊಂಡಿತು.

ಆಗಸ್ಟ್ 6, 1945ರ ಬೆಳಿಗ್ಗೆ 8.16ರ ಸಮಯದಲ್ಲಿ ಭೀಕರ ಶಬ್ದದೊಂದಿಗೆ 20,000 ಟನ್ನಿಗೂ ಅಧಿಕ ಶಕ್ತಿಯೊಂದಿಗೆ ಸ್ಪೋಟ ವಿಚ್ಛಿದ್ರಕಾರಕ ರೂಪದಲ್ಲಿ ಸಂಭವಿಸಿತು. ಕ್ಷಣಾರ್ಧದಲ್ಲೇ ರಾಕ್ಷಸ ಗಾತ್ರದ ಹಣಬೆಯಾಕಾರದ 40,000 ಅಡಿ ಎತ್ತರದ ಮೋಡ ಸೃಷ್ಟಿಯಾಗಿ ಹಿರೋಷಿಮಾದ ಸುಮಾರು 10 ಚದರ ಮೈಲಿ ಸುತ್ತಳತೆಯ ಪ್ರದೇಶದಲ್ಲಿದ್ದ ಯಾವ ಮನೆಯೂ ಉಳಿಯಲಿಲ್ಲ. 68,000 ಮಂದಿ ಒಮ್ಮೆಗೆ ಬೆಂದು ಹೋದರು. ಅಗಾಧ ಉಷ್ಣತೆಯ ಪರಿಣಾಮದಿಂದಾಗಿ ಕೆಲಕಾಲದಲ್ಲೇ ಕರಿ ನೀರಿನ ಮಳೆ ಹಿರೋಷಿಮಾದಲ್ಲಿ ಸುರಿಯಿತು.

ಈ ದಾಳಿಯ ನಂತರ ಟ್ರೂಮನ್ನನ ದಾಹಾಗ್ನಿಯೇನೂ ಹಿಂಗಲಿಲ್ಲ. ಹಿರೋಷಿಮಾ ಬೆಂಕಿಯ ಜೊತೆಯಲ್ಲಿನ ಆಂತರಿಕ ಬೇಗೆಯಲ್ಲಿ ಬೇಯುತ್ತಿದ್ದ ಜಪಾನ್ ಶರಣಾಗತಿ ಪ್ರಕಟಿಸಲಿಲ್ಲ ಎಂಬ ಕಾರಣಕ್ಕಾಗಿ ಅಮೆರಿಕ, ನಾಗಸಾಕಿ ಪಟ್ಟಣದ ಮೇಲೆ ಆಗಸ್ಟ್ 9ರಂದು ದಾಳಿ ನಡೆಸಿ ಮತ್ತೆ 60,000 ಜನರನ್ನು ಭಸ್ಮ ಮಾಡಿ ಹಾಕಿತು. ಈ ಘಟನೆಗಳಲ್ಲಿ ಒಟ್ಟಾರೆಯಾಗಿ ಅಣು ವಿಕಿರಣಕ್ಕೆ ಸಿಕ್ಕಿ ತೊಂದರೆಗೊಳಪಟ್ಟವರು ಸುಮಾರು ಒಂದು ಲಕ್ಷ ನಲವತ್ತು ಸಾವಿರ ಜನಕ್ಕೂ ಹೆಚ್ಚು.

ಈ ಘಟನೆಯ ನಂತರದಲ್ಲಿ ಎರಡನೆಯ ಮಹಾಯುದ್ಧವೇನೋ ಮುಕ್ತಾಯವಾಯಿತು. ಆದರೆ ಮನುಷ್ಯ ಮತ್ತು ರಾಷ್ಟ್ರಗಳು ಇದರಿಂದ ಪಾಠವನ್ನೇನೂ ಕಲಿತಿಲ್ಲ. ಅಂದು ಬಾಂಬ್ ಹಾಕಿದ ಅಮೆರಿಕಾ, ನಾನು ನಿಮಗೆಲ್ಲಾ ಮಾನಿಟರ್. ನಾನು ಬಾಂಬ್ ಇಟ್ಕೋಬಹುದು. ನೀವೆಲ್ಲಾ ಜವಾಬ್ಧಾರಿ ಇರೋವ್ರಲ್ಲ, ನೀವು ಇಟ್ಕೋಬೇಡಿ ಅಂತ ಬಾಯಿ ಮಾತಲ್ಲಿ ಹೇಳ್ಕೊಂಡು ಕ್ಷುದ್ರವಾಗಿ ಬದುಕ್ತಾ, ಹಿಂದಿನ ಬಾಗಿಲಿನಿಂದ ತನ್ನ ಬಾಂಬ್ ತಂತ್ರಜ್ಞಾನವನ್ನು ಮಾರಿ ಕಾಸು ಮಾಡೋ ಹೀನ ಬುದ್ಧಿಯನ್ನು ಮುಂದುವರೆಸುತ್ತಲೇ ಇದೆ. ಜಪಾನ್ ಕೆಲವರ್ಷದ ಹಿಂದೆ ಸುನಾಮಿ ಸಂದರ್ಭದಲ್ಲಿ ಸುನಾಮಿ ಕಷ್ಟ ತಡೆಯೋದಕ್ಕಿಂತ ಹೆಚ್ಚಿಗೆ ಅಣುವಿಕಿರಣ ಸೋರಿಕೆ ತಡೆಯೋಕೆ ತಿಪ್ಪರಲಾಗ ಹಾಕಿದ್ದು ಜಗಜ್ಜಾಹೀರಾಗಿದೆ. ಚಿಂದಿ ಚಿಂದಿಯ ರಾಷ್ಟ್ರವಾದರೂ ಸೋವಿಯತ್ ರಷ್ಯಾ ಇನ್ನೂ ತನ್ನ ಯುದ್ಧ ತಂತ್ರಜ್ಞಾನದ ಪೊಗರು ಬಿಟ್ಟಿಲ್ಲ. ಮಧ್ಯ ಪ್ರಾಚ್ಯ ದೇಶಗಳು ತಮಗೆ ಪ್ರಕೃತಿ ದಯಪಾಲಿಸಿರುವ ಶ್ರೀಮಂತಿಕೆಯಿದ್ದೂ ಯಾವುದೋ ಮಣ್ಣುಹಂಟೆಯ ದುರಾಸೆಯಲ್ಲಿ ತಮ್ಮ ಮೇಲೆ ತಾವೇ ಬಾಂಬ್ ಹಾಕಿಕೊಳ್ಳತೊಡಗಿವೆ. ಯಾರನ್ನೂ ನಂಬದ ಚೀಣಾ ತನಗೆ ಲಭ್ಯವಾದ ಶ್ರೀಮಂತಿಕೆಯನ್ನು ಒಳಿತಿಗಾಗಿ ಉಪಯೋಗಿಸಿಕೊಳ್ಳದೆ ಪುಟ್ಟ ಪುಟ್ಟ ದೇಶಗಳಿಗೆ ಅಭಿವೃದ್ಧಿ ಮಾಡುವೆ ಎಂದು ವ್ಯಾಪಾರ ವಿಸ್ತರಿಸುತ್ತಾ, ತನಗೆ ಯಾರಾದರೂ ಪ್ರತಿಸ್ಪರ್ಧಿ ಹುಟ್ಟಿ ತನ್ನ ದೇಶಕ್ಕೆ ಪ್ರಜಾಪ್ರಭುತ್ವ ಬಂದುಬಿಟ್ರೆ ಎಂಬ ಭಯದಲ್ಲಿ ದಿನಾ ಹೊಸ ಹೊಸ ರೀತಿಯ ಕರೋನಾವನ್ನು ವಿಶ್ವಕ್ಕೆ ಬಿತ್ತುತ್ತಾ ಸಾಗಿದೆ. ಪಾಕಿಸ್ಥಾನದಂತಹ ದೇಶದ ಸರ್ಕಾರಗಳಿಗೆ ತನ್ನ ಜನರಿಗೆ ಕುಡಿಯೋ ನೀರು ಸರಿಯಾಗಿ ಸಿಗದಿದ್ರೂ ಪರಮಾಣು ಅಸ್ತ್ರ ಮಾಡೋ ಷೋಕಿ ಮಾತ್ರ ನಿಲ್ಲೋದೇ ಇಲ್ಲ.

● ಬಾಂಬ್ ದಾಳಿಯ ಪರಿಣಾಮ – ಹಿರೋಷಿಮಾ ದಿನ:-
1) ಹಿರೋಷಿಮಾದಲ್ಲಿ 90000 ಮತ್ತು 146000 ಜನರು ಸತ್ತರು. ಬಾಂಬ್ ಸ್ಫೋಟದ ನಂತರ ನಗರವು ತಕ್ಷಣವೇ ನಾಶವಾಯಿತು.
2) ಬಾಂಬ್ ದಾಳಿಯ ನಂತರ ತಿಂಗಳುಗಳವರೆಗೆ ವಿಕಿರಣ ಕಾಯಿಲೆ, ಸುಟ್ಟಗಾಯಗಳು ಮತ್ತು ಇತರ ಗಾಯಗಳಿಂದಾಗಿ ಜನರು ಸಾಯುವುದನ್ನು ಮುಂದುವರೆಸಿದರು.
3) ಅಪೌಷ್ಟಿಕತೆ ಮತ್ತು ಅನಾರೋಗ್ಯವು ಸಹ ವಿಷಯಗಳನ್ನು ಸಂಕೀರ್ಣಗೊಳಿಸಿತು. ಬಲಿಪಶುಗಳಲ್ಲಿ ಹೆಚ್ಚಿನವರು ನಾಗರಿಕರಾಗಿದ್ದರು, ಕೆಲವು ಮಿಲಿಟರಿ ಸಿಬ್ಬಂದಿ ಕೂಡ ಕೊಲ್ಲಲ್ಪಟ್ಟರು.

● ಕೊನೆಯ ಮಾತು:- ಈ ಹುಚ್ಚಾಟಕ್ಕೆ ಎಂದಾದರೂ ಕೊನೆ ಬರುತ್ತದೆಯೇ? “ವಿಶ್ವದ ಇತಿಹಾಸ ತುಂಬಿರೋದು ಎರಡೇ ಎರಡರಿಂದ. ಒಂದು ಯುದ್ಧದಿಂದ, ಮತ್ತೊಂದು ಯುದ್ಧದ ಸಿದ್ಧತೆಗಳಿಂದ”. ಈ ಮಧ್ಯೆ ಈ ಸುಡುಬೂದಿಗಳಿಂದ ಮೈದಳೆದು ಮಹೋನ್ನತವಾಗಿ ಬದುಕನ್ನು ನಡೆಸಿ ತೋರಿರುವ ಜಪಾನಿನ ಸಾಮರ್ಥ್ಯ ಅಭಿನಂದನೀಯ ಕೂಡಾ. ಆದರೆ ವಿಶ್ವದಲ್ಲಿನ ಬಾಂಬ್ ಕರಾಳತೆಯ ನೆರಳು ಕರಗುವವರೆಗೆ ಎಲ್ಲವೂ ಕ್ಷಣಿಕ. ಅದು ಎಲ್ಲಾ ದೇಶಗಳೂ ತಮ್ಮ ಅಹಂ ಅನ್ನು ಬಿಸಾಕಿ ಒಮ್ಮೆಲೆ ಮಾಡಬೇಕಿರುವ ಅನಿವಾರ್ಯ ಕಾಯಕ. ಪರಮಾಣು ಬಳಕೆಯ ಕರಾಳ ಮುಖದ ನಿದರ್ಶನ ನೆನೆದಾಗ, ಅದೇ ಅಂತಿಮವಾಗಲಿ ಎಂದು ಆ ದೇವರಲ್ಲಿ ಬೇಡಿಕೊಳ್ಳೋಣ. ಮೂರನೇ ಮಹಾಯುದ್ಧ ಬೇಡವೆಂಬ ನಿರ್ಧಾರ ಮಾಡಿ ವಿಶ್ವಶಾಂತಿಗಾಗಿ ಪ್ರಾರ್ಥಿಸೋಣ….

Koppal News ಕಿರ್ಲೋಸ್ಕರ್ ಫೆರಸ್ ಕಾರ್ಖಾನೆಯ ಪ್ರಸ್ತಾವಿತ ವಿಸ್ತರಣೆ ಬಗ್ಗೆ ಸಾರ್ವಜನಿಕರೊಂದಿಗೆ ಸಂವಾದ-ಸಮ್ಮತಿ ಸಭೆ

0

Koppal News ಕಿರ್ಲೋಸ್ಕರ್ ಫೆರಸ್ ಕಾರ್ಖಾನೆಯು ಕೊಪ್ಪಳದ ಬೇವಿನಹಳ್ಳಿ ಗ್ರಾಮದ ಹತ್ತಿರ ಸುಮಾರು ೩೦ ವರ್ಷಗಳ ಹಿಂದೆ ಬೀಡು ಕಬ್ಬಿಣ ಮತ್ತು ಫೌಂಡ್ರಿ ಘಟಕಗಳನ್ನು ಸ್ಥಾಪಿಸಿದ್ದು. ಶ್ರೇಷ್ಠ ಮಟ್ಟದ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಬೀಡು ಕಬ್ಬಿಣ ಮತ್ತು ಕ್ಯಾಸ್ಟಿಂಗ್ಸ್ಗಳ ಉತ್ಪಾದನೆಯಲ್ಲಿ ಮುಂಚೂಣಿ ಯಲ್ಲಿದೆ. ಈ ಕಾರ್ಖಾನೆಯು ಉತ್ಪಾದನೆಯನ್ನು ಮಾಡುವುದರ ಜೊತೆಗೆ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸುತ್ತಾ ಬಂದಿದ್ದು, ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯ ಹಾಗೂ ಸಮುದಾಯದ ಅಭಿವೃದ್ಧಿಗಾಗಿ ಅನೇಕ ಚಟುವಟಿಕೆಗಳನ್ನು ಮಾಡುತ್ತಾ ಬಂದಿದ್ದು ಈ ವಲಯದಲ್ಲಿ ಅತ್ಯುತ್ತಮ ಸಂಸ್ಥೆಯಾಗಿ ಹೊರಹೊಮ್ಮಿದೆ.

ಗ್ರಾಹಕರ ಅತ್ಯಗತ್ಯ ಬೇಡಿಕೆಗಳನ್ನು ಪೂರೈಸಲು ಈ ಕಾರ್ಖಾನೆಯು ಪ್ರಸ್ತುತ ಇರುವ ಬೀಡು ಕಬ್ಬಿಣ ಮತ್ತು ಫೌಂಡ್ರಿಯ ಪ್ರಸ್ತಾವಿತ ವಿಸ್ತರಣೆ ಹಾಗೂ ಹೊಸ ಯೋಜನೆಗಳ ಅನುಮತಿಗಾಗಿ ದಿನಾಂಕ ೦೬-೦೮-೨೦೨೪ ರಂದು ಯೋಜನೆಯ ಪ್ರಸ್ತಾವಿತ ಪ್ರದೇಶದಲ್ಲಿ ಪರಿಸರ ಸಾರ್ವಜನಿಕ ಆಲಿಕೆ ಸಭೆಯನ್ನು ಕರೆಯಲಾಗಿತ್ತು.

Koppal News ಈ ಸಭೆಗೆ ಕೊಪ್ಪಳದ ಜಿಲ್ಲಾಡಳಿತದ ವತಿಯಿಂದ ಶ್ರೀ ಸಿದ್ದರಾಮೇಶ್ವರ, ಅಪರ ಜಿಲ್ಲಾಧಿಕಾರಿಗಳು ಹಾಗೂ ಅಪರ ಜಿಲ್ಲಾ ದಂಡಾಧಿಕಾರಿಗಳು, ಕೊಪ್ಪಳ ಜಿಲ್ಲೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವಿಜಯನಗರದ ವಲಯದ ಹಿರಿಯ ಪರಿಸರ ಅಧಿಕಾರಿಗಳಾದ ಶ್ರೀ ಬಿ. ಎಸ್. ಮುರಳೀಧರ್, ಕೊಪ್ಪಳದ ಪ್ರಾದೇಶಿಕ ಕಛೇರಿಯ ಪರಿಸರ ಅಧಿಕಾರಿಗಳಾದ ಶ್ರೀ. ವೈ.ಎಸ್. ಹರಿಶಂಕರ್, ಕಾರ್ಖಾನೆಯ ಉನ್ನತ ಅಧಿಕಾರಿಗಳು, ಜಿಲ್ಲಾಡಳಿತ ಸಿಬ್ಬಂದಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳಿಂದ ಬಂದ ಪ್ರತಿನಿಧಿಗಳು, ಸ್ಥಳಿಯ ಗ್ರಾಮಗಳ ವಿವಿಧ ನಾಗರೀಕರು, ಸಾರ್ವಜನಿಕರು ಹಾಜರಿದ್ದರು. ಶ್ರೀ ವೈ.ಎಸ್. ಹರಿಶಂಕರ್ ಇವರು ಪ್ರಸ್ತಾವಿಕ ಭಾಷಣ ಮಾಡಿ ಕಾರ್ಖಾನೆ ವಿಸ್ತರಣೆಯ ಕುರಿತು ವಿವರಿಸಿದರು. ಕಾರ್ಖಾನೆಯ ಪರಿಸರ ಅಧಿಕಾರಿಗಳಾದ ಶ್ರೀ ಮಹಮದ್ ಅಜೀಜ್ ವiತ್ತು ತಾಂತ್ರಿಕ ಅಧಿಕಾರಿಯಾದ ಶ್ರೀಕಾಂತ್ ಇವರುಗಳು ಯೋಜಿತ ವಿಸ್ತರಣೆಯ ಕುರಿತು ಸಭೆಗೆ ಮಾಹಿತಿಯನ್ನು ಅಂಕಿ-ಅಂಶಗಳ ಸಹಿತ ವಿವರಿಸಿದರು.

ಯೋಜನೆಯ ವಿಸ್ತರಣೆಯ ಮಾಹಿತಿಯನ್ನು ತಿಳಿಸಿದ ನಂತರ ಪರಿಸರ ಅಧಿಕಾರಿಗಳು ಸಾರ್ವಜನಿಕರಿಂದ ಮನವಿ ಮತ್ತು ಸಲಹೆಗಳನ್ನು ನೀಡಲು ಅವಕಾಶ ಮಾಡಿಕೊಟ್ಟರು.

ಈ ಸಂದರ್ಭದಲ್ಲಿ ಹಾಜರಿದ್ದ ಅನೇಕ ಸಂಘ-ಸAಸ್ಥೆಗಳ ಪ್ರತಿನಿಧಿಗಳು, ಸಾರ್ವಜನಿಕರು ಮಾತನಾಡಿ ಉದ್ದೇಶಿತ ಯೋಜನೆಗಳಿಗೆ ತಮ್ಮ ಸಹಮತಿ ಇದೆ, ಕಾರಣ ಈ ಯೋಜನೆಗಳು ಅನುಸ್ಠಾನಗೊಂಡಲ್ಲಿ ಈ ಭಾಗದಲ್ಲಿ ಉದ್ಯೋಗಗಳು ಸೃಷ್ಠಿಯಾಗುತ್ತವೆ, ಯುವಕರಿಗೆ ಉದ್ಯೋಗಗಳು ಸಿಗುತ್ತವೆ, ಕಾರ್ಖಾನೆಯ ಸಮುದಾಯದ ಅಭಿವೃದ್ಧಿಗಾಗಿ ಮಾಡುವ ಕೆಲಸಗಳಿಂದ ಜನರ ಆರ್ಥಿಕ ಮಟ್ಟ ಹೆಚ್ಚುತ್ತದೆ, ಕಾರಣ ನಮ್ಮ ಸಮ್ಮತಿ ಇದೆ ಎಂದು ತಿಳಿಸಿದರು. ಇದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಕೊಪ್ಪಳ ಜಿಲ್ಲೆಯಿಂದ ಹೆಚ್ಚಿನ ಅನೂಕೂಲವಾಗಲಿದೆ, ಕೊಪ್ಪಳ ಜಿಲ್ಲೆಯ ಸರ್ವಾಂಗೀಣಾ ಅಭಿವೃದ್ಧಿಗೆ ಸಹಾಯಕವಾಗುತ್ತದೆ ಎಂದು ತಿಳಿಸಿದರು.

ಕಾಳಿದಾಸ ಶಿಕ್ಷಣ ಸಂಸ್ಥೆ ಕೊಪ್ಪಳ, ಶ್ರೀ ಗ್ರಾಮದೇವತೆ ಸೇವಾ ಸಮಿತಿ, ಹಳೆಕನಕಾಪುರ, ಬಹುಗ್ರಾಮ ಪಂಚಾಯಿತಿಗಳ ತ್ಯಾಜ್ಯ ಸಂಸ್ಕರಣಾ ಘಟಕ ಜಂಟಿ ಸಮಿತಿ, ನೀರು ಬಳಕೆದಾರರ ಸಂಘ, ಹುಲಿಗಿ, ಪರಿಸರ ಹಿತರಕ್ಷಣಾ ಸಂಸ್ಥೆಯಾದ ವನಲೋಕ, ಬೆಂಗಳೂರು, ಸರ್ವೋದಯ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಕೊಪ್ಪಳ, ಮಾರಿಕಾಂಬ ಗ್ರಾಮೀಣ ಅಭಿವೃದ್ಧಿ ಮತ್ತು ಮಹಿಳಾ ಶಕ್ತಿ ಸಂಘ, ಹೊಸಪೇಟೆ ಕರ್ನಾಟಕ ರಕ್ಷಣಾ ವೇದಿಕೆ, ಪ್ರಣತಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಬಣವಿಕಲ್ಲು, ದೀಪಾ ಸಂಜೀವಿನಿ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆ, ವಿಜಯನಗರ ಜಿಲ್ಲಾ ಪರಿಸರ ಸಂರಕ್ಷಣಾ ಸಮಿತಿ, ಧ್ರವ ಪರಿಸರ ಮಾಲಿನ್ಯ ನಿಯಂತ್ರಣ ಸಂರಕ್ಷಣಾ ಸಂಸ್ಥೆ, ಕೊಪ್ಪಳ ಶ್ರೀ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿ, ಮುಂಡರಗಿ ಶ್ರೀ ಮಾರುತೇಶ್ವರ ಸೇವಾ ಸಮಿತಿ, ಬೇವಿನಹಳ್ಳಿ ಹಾಗೂ ಹಿಟ್ನಾಳ್ ಗ್ರಾಮ ಪಂಚಾಯತಿಗಳು ಇತ್ಯಾದಿ ಅನೇಕ ಸಂಘ-ಸಂಸ್ಥೆಗಳು ಸಾರ್ವಜನಿಕರು ಪ್ರಸ್ತಾವಿತ ಯೋಜನೆಗಳಿಗೆ ಸಮ್ಮತಿ ಸೂಚಿಸಿ ಮನವಿ ಪತ್ರಗಳನ್ನು ಈ ಸಭೆಯಲ್ಲಿ ನೀಡಿದರು ಹಾಗೂ ಕೆಲವರು ಮಾತನಾಡಿದರು. ಹಾಜರಿದ್ದ ಇನ್ನೂ ಕೆಲವು ಜನ ಹ¯ವಾರು ಬೇಡಿಕೆಗಳಿಗಾಗಿ ಆಗ್ರಹಿಸಿದರು. ಒಟ್ಟಾರೆ ಆಯೋಜಿಸಿದ ಸಭೆಯು ಸಂಪನ್ನವಾಗಿ ಜರುಗಿತು.

ಈ ಕಾರ್ಯಕ್ರಮವನ್ನು ಕಂಪನಿಯ ಮಾನವ ಸಂಪನ್ಮೂಲ, ಆಡಳಿತ, ಇಹೆಚ್‌ಎಸ್ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಶ್ರೀ ಪಿ ನಾರಾಯಣರವರು ಅಚ್ಚು ಕಟ್ಟಾಗಿ ರೂಪಿಸಿದ್ದರು.

Shivamogga Cosmo Politene Lions Club ಶಿವಮೊಗ್ಗ ಕಾಸ್ಮೋಪಾಲಿಟಿನ್ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಎನ್.ಪರಮೇಶ್ವರಪ್ಪಆಯ್ಕೆ

0

Shivamogga Cosmo Politene Lions Club ಶಿವಮೊಗ್ಗ ಕಾಸ್ಮೋ ಪಾಲಿಟಿನ್ ಲಯನ್ಸ್ ಕ್ಲಬ್‌ನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಕಾರ್ಯಕ್ರಮ ನಗರದ ಲಯನ್ಸ್ ಭವನ ಸಭಾಂಗಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ 2024-25ನೇ ಸಾಲಿನ ನೂತನ ಅಧ್ಯಕ್ಷರಾಗಿ ಎನ್. ಪರಮೇಶ್ವರಪ್ಪ, ಕಾರ್ಯದರ್ಶಿಯಾಗಿ ಸುರೇಶ್ ಶೆಟ್ಟಿ ಅಽಕಾರ ವಹಿಸಿಕೊಂಡರು. ಸಂಸ್ಥೆಯ ಸುರೇಶ್ ಪ್ರಭುರವರು ಪದಗ್ರಹಣ ನಡೆಸಿಕೊಟ್ಟರು.
ಸಂಸ್ಥೆಯ ಸಾಮಾಜಿಕ ಸೇವೆಯ ಅಂಗವಾಗಿ, ಅನುಪಿನ ಕಟ್ಟೆ ಸರಕಾರಿ ಪ್ರಾಥಮಿಕ ಶಾಲೆಯ ೫೦ ವಿದ್ಯಾರ್ಥಿಗಳಿಗೆ ಸಮವಸ್ತçವನ್ನು ವಿತರಿಸಲಾಯಿತು.

Shivamogga Cosmo Politene Lions Club ಭರತನಾಟ್ಯ ಕಲಾವಿದೆ, ಇಂಜಿನಿಯರಿಂಗ್ ವಿದ್ಯಾರ್ಥಿನಿ ಶರದಿ ಹಾಗೂ ಭಾರತ ಮತ್ತು ಶ್ರೀಲಂಕಾ ನಡುವಿನ ಅಥ್ಲೆಟಿಕ್ ನಲ್ಲಿ 2024ರ ಚಾಂಪಿಯನ್ ಶಿಪ್ ಆಗಿ ಹೊರಹೊಮ್ಮಿದ ಕಲ್ಯಾಣ ಅವರನ್ನು ಗೌರವಿಸಲಾಯಿತು.
ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷರಾದ ಎಂ. ಜಯದೇವ, ಕಾರ್ಯದರ್ಶಿ ಪರ್ಸಿ ಡಿಸೋಜಾ ಹಾಗೂ ವಿ. ರಾಜು, ಸಿ. ಹೊನ್ನಪ್ಪ, ಟಿ. ರಾಜೇಶ್, ಯೋಗೇಶ, ಟಿ. ಎನ್. ಶಶಿಧರ್, ಐರಿನ್ ಡಿಸೋಜ, ಗಿರೀಶ್ ಬಂಡಿಗಡಿ, ಏಸುದಾಸ್, ಎಸ್. ಎಂ. ಪ್ರಭಾಕರ್ ಹಾಗೂ ಇತರ ಪದಾಽಕಾರಿಗಳು ಉಪಸ್ಥಿತರಿದ್ದರು.

Department of Education ಲೇಖಕ ಎನ್.ಎಸ್.ಕುಮಾರ್ ಅವರ ” ನನ್ನವ್ವ ನನ್ನ ಪ್ರಪಂಚ” ಕೃತಿ ಲೋಕಾರ್ಪಣೆ

0

Department of Education ಲೇಖಕ ಎನ್.ಎಸ್.ಕುಮಾರ್, ಶಿಕ್ಷಣ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಅವರದ್ದು ಬಹುಮುಖೀ ಸೇವೆ.
ಬರವಣಿಗೆ, ಬೋಧನೆ ಮತ್ತು ಶಿಕ್ಷಣ ಕ್ಷೇತ್ರದ ಸುಧಾರಣೆ.
ಸದ್ಯ ಕುಮಾರ್ ಅವರು ನಿವೃತ್ತರಾದರೂ ಬರವಣಿಗೆ ಪ್ರವೃತ್ತಿಯಲ್ಲಿ ತೊಡಗಿಸಿ ಕೊಂಡಿದ್ದಾರೆ.

ತಾಯಿಗಿಂತ ಮಿಗಿಲಾದ ದೇವರಿಲ್ಲ ಎಂಬ ಮಾತಿದೆ. ನಮ್ಮ ಬದುಕಿನ ಪ್ರತೀ ಹಂತದಲ್ಲೂ ತಂದೆತಾಯಿಯರ ಪತ್ರ ಪ್ರಮುಖ ಪಾತ್ರ ವಹಿಸಿದೆ.
Department of Education ಮಾತೃವಾತ್ಸಲ್ಯಕ್ಕೆ ಕುಮಾರ್ ಅವರು ಪ್ರತಿ ಕಾಣಿಕೆಯಾಗಿ
” ನನ್ನವ್ವ ನನ್ನ ಪ್ರಪಂಚ” ಎಂಬ ಕೃತಿಯನ್ನ ರಚಿಸಿದ್ದಾರೆ.
ಆಗಸ್ಟ್ 10 ರಂದು ಕೃತಿಯ ಲೋಕಾರ್ಪಣೆ.
ಹಿರಿಯ ಲೇಖಕಿ ,ದಾರ್ಶನಿಕ ಚಿಂತಕಿ ಡಾ.ವಿಜಯಾದೇವಿ ಅವರಿಂದ ಕೃತಿ ಬಿಡುಗಡೆಯಾಗಲಿದೆ.
ವಿಶೇಷವೆಂದರೆ ಸ್ವಗೃಹದಲ್ಲೇ ಕೃತಿಯ ಬಿಡುಗಡರ ಸಮಾರಂಭ.
ಆತ್ಮೀಯರೆಲ್ಲರಿಗೂ ಲೇಖಕ ಎನ್.ಎಸ್.ಕುಮಾರ್
ಕಾರ್ಯಕ್ರಮಕ್ಕೆ ಸ್ವಾಗತ ಕೋರಿದ್ದಾರೆ.

Tiger Lion Safar ಹುಲಿಸಿಂಹಧಾಮದ”ಆರ್ಯ” ಹೆಸರಿನ ಸಿಂಹ ವಯೋಸಹಜ ಕಾಯಿಲೆಯಿಂದ ಮರಣ

0

Tiger Lion Safar ವಯೋ ಸಹಜ ಕಾಯಿಲೆಯಿಂದ ತೀವ್ರ ಅಸ್ವಸ್ಥಗೊಂಡಿದ್ದ ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿಸಿಂಹ ಧಾಮದ ಗಂಡು ಸಿಂಹ ಆರ್ಯ ಮೃತಪಟ್ಟಿದೆ.

ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಆರ್ಯನಿಗೆ ಹುಲಿ-ಸಿಂಹಧಾಮದ ವೈದ್ಯ ಡಾ|| ಮುರಳಿ ಮನೋಹರ್ ನೇತೃತ್ವದಲ್ಲಿ ಮೂರು ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು.

ಆರ್ಯ ಹುಲಿಸಿಂಹ ಧಾಮದಲ್ಲಿರುವ ಸಿಂಹಗಳಲ್ಲಿಯೇ ಅತ್ಯಂತ ಹಿರಿಯ. 2008ರಲ್ಲಿ ಮೈಸೂರು ಮೃಗಾಲಯದಿಂದ ಆರ್ಯನನ್ನು ಶಿವಮೊಗ್ಗಕ್ಕೆ ಕರೆತರಲಾಗಿತ್ತು.

Tiger Lion Safar ’ವಯಸ್ಸಿನ ಕಾರಣಕ್ಕೆ ಆರ್ಯ ಚಿಕಿತ್ಸೆಗೆ ನಿರೀಕ್ಷಿತ ಮಟ್ಟದಲ್ಲಿ ಸ್ಪಂದಿಸುತ್ತಿರಲಿಲ್ಲ. ಆಹಾರ ಸೇವಿಸುವುದು ನಿಲ್ಲಿಸಿತ್ತು’ ಎಂದು ಹುಲಿ-ಸಿಂಹಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಅಮರಾಕ್ಷರ ಹೇಳಿದ್ದಾರೆ.