Tuesday, March 31, 2026
Tuesday, March 31, 2026
Home Blog Page 580

B.Y. Raghavendra ಅರಣ್ಯ ಒತ್ತುವರಿ ಸಂತ್ರಸ್ತರನ್ನ ಒಕ್ಕಲೆಬ್ಬಿಸ ಬೇಡಿ- ಸಂಸದ ರಾಘವೇಂದ್ರ

0

B.Y. Raghavendra ಸಂಸದ ಶ್ರೀ ಬಿ.ವೈ. ರಾಘವೇಂದ್ರರವರು ಮಾಜಿ ಗೃಹ ಸಚಿವರೂ ಹಾಗೂ ತೀರ್ಥಹಳ್ಳಿ ಶಾಸಕರು ಆದ ಶ್ರೀ ಅರಗ ಜ್ಞಾನೇಂದ್ರರವರ ಸಮಕ್ಷಮದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಇತರೆ ಉಪ ಅರಣ್ಯ ಸಂರಕ್ಷಾಣಾಧಿಕಾರಿಗಳೊಂದಿಗೆ ಸಭೆ ನಡೆಸಿ ಸುದೀರ್ಘವಾಗಿ ಚರ್ಚಿಸಿ ಈ ಕೆಳಕಂಡಂತೆ ಜಿಲ್ಲಾಡಳಿತಕ್ಕೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಂಸದರಾದ ಶ್ರೀ ಬಿ. ವೈ. ರಾಘವೇಂದ್ರರವರು ಸೂಚನೆ ನೀಡಿದರು.
ಅನುಸೂಚಿತ ಜಾತಿ ಮತ್ತು ಬುಡಕಟ್ಟು ಮತ್ತು ಪರಾಂಪರಿಕ ಅರಣ್ಯವಾಸಿಗಳು (ಅರಣ್ಯ ಹಕ್ಕುಗಳನ್ನು ಮಾನ್ಯ ಮಾಡುವ ಕಾಯಿದೆ – 2006 ಮತ್ತು ನಿಯಮ 2008 ರ ಕಲಂ 5 ರನ್ವಯ) ಅರ್ಜಿ ಸಲ್ಲಿಸಿದ್ದಲ್ಲಿ ಈ ಅರ್ಜಿ ವಿಲೇ ಆಗುವವರೆಗೂ ಯಾರಿಗೂ ಒತ್ತುವರಿಗೆ ಸಂಬಂಧಿಸಿದ ನೋಟೀಸ್ ನೀಡುವಂತಿಲ್ಲವೆಂದು ಅದೇ ರೀತಿ ಅರಣ್ಯ (ಸಂರಕ್ಷಣಾ) ಕಾಯಿದೆಯಡಿ ಪ್ರಮುಖ ಯೋಜನೆಗಳಡಿ ಪುನರ್ವಸತಿಗೆ ಅರಣ್ಯ ಬಿಡುಗಡೆ ಆಗಿ ಡಿ-ನೋಟಿಫೈ ಆಗದೇ ಇರುವ ಫಲಾನುಭವಿಗಳಿಗೆ ಯಾವುದೇ ನೋಟೀಸ್ ಮತ್ತು ಒತ್ತುವರಿ ತೆರವುಗೊಳಿಸುವಂತೆ ಕ್ರಮ ವಹಿಸಬೇಕೆಂದು ತಿಳಿಸಿದರು.
B.Y. Raghavendra 1996 ರ ಸುಪ್ರಿಂ ಕೋರ್ಟ್ ತೀರ್ಪಿನ (ಶ್ರೀ ಗೋಧಾವರ್ಮನ್ ಪ್ರಕರಣ) ಪ್ರಕಾರ 27-04-1978 ಕ್ಕಿಂತ ಹಿಂದೆ ಪೂರ್ವ ಒತ್ತುವರಿ ಆಗಿರುವ ಜಮೀನುಗಳನ್ನು ಮಾನ್ಯ ಜಿಲ್ಲಾಧಿಕಾರಿಗಳಿಂದ ಅನುಮೋದಿತ ಫಲಾನುಭವಿಗಳನ್ನು ಗುರುತಿಸಿ ಅವರನ್ನು ಒಕ್ಕಲೆಬ್ಬಿಸದಿರಲು, ನೋಟೀಸ್ ನೀಡದಿರಲು ಹಾಗೂ ಸದರಿ ಒತ್ತುವರಿದಾರರನ್ನು ಒಕ್ಕಲೆಬ್ಬಿಸಬಾರದೆಂದು ಹಾಗೂ ವಾಸವಾಗಿರುವ ಮನೆಗಳನ್ನು ತೆರವುಗೊಳಿಸ ಬಾರದೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

Goodluck Care Center ವಿದ್ಯೆ ವೃತ್ತಿ ನೀಡಿದರೆ ಸಂಸ್ಕಾರ ಉತ್ತಮ ವ್ಯಕ್ತಿತ್ವ ನೀಡುತ್ತದೆ- ಎಸ್.ಆರ್.ನಾಗರಾಜ್

0

Goodluck Care Center ವಿದ್ಯೆಯ ಜತೆಗೆ ಮಕ್ಕಳಲ್ಲಿ ಮಾನವೀಯ ಮೌಲ್ಯ ಹಾಗೂ ಸಂಸ್ಕಾರ ಮನೋಭಾವ ಬೆಳೆಸಬೇಕು ಎಂದು ರೋಟರಿ ವಲಯ 10ರ ಸಹಾಯಕ ಗವರ್ನರ್ ಎಸ್.ಆರ್.ನಾಗರಾಜ್ ಹೇಳಿದರು.

ಗುಡ್‌ಲಕ್ ಆರೈಕೆ ಕೇಂದ್ರದ ಭೇಟಿ ನೀಡಿದ ಜ್ಞಾನದೀಪ ಶಾಲೆಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ವಿದ್ಯೆಯು ನಮಗೆ ವೃತ್ತಿ ನೀಡುತ್ತದೆ. ಸಂಸ್ಕಾರ ಮನೋಭಾವ ನಮ್ಮಲ್ಲಿ ಉತ್ತಮ ವ್ಯಕ್ತಿತ್ವವನ್ನು ನಿರ್ಮಾಣ ಮಾಡಿ ಸಮಾಜದಲ್ಲಿ ಉನ್ನತ ಸ್ಥಾನಮಾನ ಒದಗಿಸುತ್ತದೆ. ಬಾಲ್ಯದಿಂದಲೇ ಮಕ್ಕಳಿಗೆ ಸಂಸ್ಕಾರ ತುಂಬಾ ಅಗತ್ಯ ಎಂದು ತಿಳಿಸಿದರು.

ಮಕ್ಕಳು ಗುಡ್‌ಲಕ್ ಆರೈಕೆ ಕೇಂದ್ರಕ್ಕೆ ಭೇಟಿ ಮಾಡಿ ಅಲ್ಲಿರುವ ನಿವಾಸಿಗಳನ್ನು ಸಂತೈಸಿ ಅವರಿಗೆ ಹಣ್ಣು ಹಾಗೂ ಅಗತ್ಯ ಸಾಮಾಗ್ರಿಗಳನ್ನು ನೀಡಿ ಅವರೊಂದಿಗೆ ಕಾಲ ಕಳೆದರು. ಇಂತಹ ಕಾರ್ಯಕ್ರಮಗಳಿಂದ ಮಕ್ಕಳಿಗೆ ಸಮಾಜದ ಪರಿಸ್ಥಿತಿ ಅರಿವಾಗುತ್ತದೆ. ಮಕ್ಕಳಿಗೆ ಸಮಾಜಮುಖಿ ಸೇವೆ ಹಾಗೂ ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ನೀಡುವುದರ ಮುಖಾಂತರ ಮಾನವೀಯತೆ ಮೆರೆಯಬೇಕು ಎಂದರು.

Goodluck Care Center ಮನುಕುಲದ ಸೇವೆಯಲ್ಲಿ ಗುಡ್ ಲಕ್ ಆರೈಕೆ ಕೇಂದ್ರ ತನ್ನದೇ ಆದ ಚಾಪನ್ನು ಮೂಡಿಸಿದೆ. ಈ ನಿಟ್ಟಿನಲ್ಲಿ ಜ್ಞಾನದೀಪ ಶಾಲೆಯಿಂದ 200 ವಿದ್ಯಾರ್ಥಿಗಳು ಕೇಂದ್ರಕ್ಕೆ ಆಗಮಿಸಿ ಆಶ್ರಮ ವಾಸಿಗಳೊಂದಿಗೆ ಕಾಲ ಕಳೆದು ಸಂತೈಸಿದರು. ಆರೈಕೆ ಕೇಂದ್ರಕ್ಕೆ ದೇಣಿಗೆ ನೀಡಿ ಗೌರವಿಸಿದರು.
ಕಾರ್ಯದರ್ಶಿ ಪಂಚಾಕ್ಷರಿ ಹಿರೇಮಠ ಮಾತನಾಡಿ, ಮಕ್ಕಳು ಇಂತಹ ಅನಾಥಾಶ್ರಮಗಳಿಗೆ ಭೇಟಿ ನೀಡಿದಾಗ ಮನಸ್ಸಿನಲ್ಲಿ ಒಳ್ಳೆಯ ಭಾವನೆ ಉಂಟಾಗುತ್ತದೆ. ನಾವು ನಮ್ಮ ಪಾಲಕರನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ತಿಳಿಯುತ್ತದೆ ಎಂದರು.

ರೋಟರಿ ರಿವರ್ ಸೈಡ್ ಮಾಜಿ ಅಧ್ಯಕ್ಷ ಕೆ.ಪಿ.ಶೆಟ್ಟಿ ಆಶ್ರಮವಾಸಿಗಳನ್ನು ಸಂತೈಸಿದರು. ವಿ.ಎನ್.ಭಟ್, ಶಿವಪ್ಪ ಗೌಡ, ಜ್ಞಾನದೀಪ ವಿದ್ಯಾಸಂಸ್ಥೆಯ 200 ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Sahachetana Natyalaya ನಾಟ್ಯಾರಾಧನಾ-13 ಉತ್ಸವದಲ್ಲಿ ರಾಷ್ಟ್ರ & ರಾಜ್ಯದ ಕಲಾವಿದರಿಗೆ ಸನ್ಮಾನ

0

Sahachetana Natyalaya ಶಿವಮೊಗ್ಗದ ಪ್ರತಿಷ್ಠಿತ ಸಹಚೇತನ ನಾಟ್ಯಾಲಯ (ರಿ)., ವತಿಯಿಂದ ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ಮೂರು ದಿನಗಳ ಕಾಲ ಅತ್ಯಂತ ವಿಜ್ರಂಬಣೆ ಹಾಗೂ ವಿಶಿಷ್ಟತೆಗಳಿಂದ ನಡೆದ ‘ನಾಟ್ಯಾರಾಧನ-13 ರಾಷ್ಟ್ರೀಯ ಮಹೋತ್ಸವ’ದಲ್ಲಿ ಶಿವಮೊಗ್ಗ ನಗರದ ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅವರು ಪಾಲ್ಗೊಂಡು ಸಭಾ ಕಾರ್ಯಕ್ರಮದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಕಲಾವಿದರನ್ನು ಸನ್ಮಾನಿಸಲಾಯಿತು.

Sahachetana Natyalaya ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕರಾದ ಡಿ ಎಸ್ ಅರುಣ್, ಸಹಚೇತನ ನಾಟ್ಯಾಲಯದ ಸಹನಾ ಚೇತನ್ ಸೇರಿದಂತೆ ಸಂಸ್ಥೆಯ ಪ್ರಮುಖರು ಹಾಗೂ ಶಿವಮೊಗ್ಗದ ಕಲರಸಿಕರು ಉಪಸ್ಥಿತರಿದ್ದರು.

Rotary Shivamogga ಬಾಲ್ಯದಿಂದಲೇ ಮಕ್ಕಳಿಗೆ ಪರಿಸರ ಪ್ರೀತಿ ಮೂಡಿಸಬೇಕು- ಜಿ.ವಿಜಯ ಕುಮಾರ್

0

Rotary Shivamogga ಪರಿಸರ ನಾಶ ಮಾಡುವುದನ್ನು ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಪರಿಸರ ರಕ್ಷಿಸುವ ಕಾಯಕದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಹೇಳಿದರು.

ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಹಾಗೂ ಅಬ್ಬಲಗೆರೆ ಸರ್ಕಾರಿ ಪ್ರೌಢಶಾಲೆ ಇಂಟರ‍್ಯಾಕ್ಟ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಹಸಿರೀಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಬಾಲ್ಯದಿಂದಲೇ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸಬೇಕು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ತಿಳಿಸಿದರು.

ಉತ್ತಮ ಪರಿಸರ ನಿರ್ಮಾಣ ಮಾಡಲು ಹೆಚ್ಚು ಗಿಡಗಳನ್ನು ನೆಟ್ಟು ಪೋಷಣೆ ಮಾಡುವ ಕೆಲಸ ಮಾಡಬೇಕು. ಪರಿಸರಕ್ಕೆ ಹಾನಿಯಾಗುವ ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ನಿಲ್ಲಿಸಬೇಕು ಎಂದರು.

ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಅಧ್ಯಕ್ಷ ಅರುಣ್ ದೀಕ್ಷಿತ್ ಮಾತನಾಡಿ, ಸಂಸ್ಥೆ ವತಿಯಿಂದ ನಿರಂತರವಾಗಿ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದು, ಪ್ರಸ್ತಕ ಸಾಲಿನಲ್ಲಿ ಹೆಚ್ಚು ಸಸಿಗಳನ್ನು ನೆಡುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.

Rotary Shivamogga ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಕಾರ್ಯದರ್ಶಿ ಶಶಿಕಾಂತ್ ನಾಡಿಗ್ ಮಾತನಾಡಿ, ಸಸಿಗಳನ್ನು ನೆಡುವ ಜತೆಯಲ್ಲಿ ಕಾಲ ಕಾಲಕ್ಕೆ ಗಮನಿಸಿ ಚೆನ್ನಾಗಿ ಬೆಳೆಯುವಂತೆ ಪೋಷಿಸುವ ಕೆಲಸ ಮಾಡಬೇಕು. ಪ್ರತಿಯೊಬ್ಬರೂ ಜನ್ಮದಿನ ಹಾಗೂ ವಿಶೇಷ ಸಂದರ್ಭಗಳಲ್ಲಿ ಸಸಿಗಳನ್ನು ನೆಟ್ಟು ಪೋಷಣೆ ಮಾಡುವ ಸಂಕಲ್ಪ ಮಾಡಬೇಕು ಎಂದು ಅನಿಸಿಕೆ ವ್ಯಕ್ತಪಡಿಸಿದರು.

ಇಂಟರ‍್ಯಾಕ್ಟ್ ಚೇರ್ಮನ್ ಶೇಷಗಿರಿ, ಎಲ್ಲರಿಗೂ ಸಸಿಗಳನ್ನು ವಿತರಿಸಿ ಜಾಗೃತಿ ಮೂಡಿಸಿದರು. ಕಾರ್ಯಕ್ರಮದಲ್ಲಿ ಡಾ. ಧನಂಜಯ, ಕಿಶೋರ್‌ಕುಮಾರ್, ಮುಖ್ಯಶಿಕ್ಷಕ ಮುರಳೀಧರ್ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

B.Y. Raghavendra ಜಿಲ್ಲೆಗೆ ಮಂಜೂರಾಗಿರುವ ವಿವಿಧ 13 ಹೆದ್ದಾರಿ ಕಾಮಗಾರಿಗಳ ಅನುಷ್ಠಾನ ಸಮಸ್ಯೆಗಳ ಸಭೆಯಲ್ಲಿ ಸಂಸದ ರಾಘವೇಂದ್ರ ಭಾಗಿ

0

B.Y. Raghavendra ಶ್ರೀ ಬಿ.ವೈ. ರಾಘವೇಂದ್ರರವರಿಂದ ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿಗಳ ಅನುಷ್ಠಾನಗೊಳಿಸುವ ಕುರಿತು ಆಗಿರು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಬಿ.ವೈ. ರಾಘವೇಂದ್ರರವರು ಕೇಂದ್ರ ಭೂ ಸಾರಿಗೆ ಮಂತ್ರಾಲಯದಿಂದ ಶಿವಮೊಗ್ಗ ಜಿಲ್ಲೆಗೆ ಮಂಜೂರಾದ ವಿವಿಧ ೧೩ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಅನುಷ್ಠಾನದಲ್ಲಾಗುತ್ತಿರುವ ವಿಳಂಬ, ಭೂ ಸ್ವಾದೀನ ಮತ್ತು ಅರಣ್ಯ ಭೂಮಿ ಬಿಡುಗಡೆಯ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸಂಬಂದಪಟ್ಟ ಅಧಿಕಾರಿಗಳ ಸಭೆ ನಡೆಸಲಾಗಿದ್ದು ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಭೂಸ್ವಾದೀನದಲ್ಲಾಗುತ್ತಿರುವ ಸಮಸ್ಯೆಗಳ ಹಾಗೂ ಅರಣ್ಯ ಭೂಮಿ ಬಿಡುಗಡೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಗಿದ್ದು ಮಾನ್ಯ ಸಂಸದರು ಶೀಘ್ರ ಭೂಸ್ವಾದೀನ ಪ್ರಕ್ರಿಯೆ ಪೂರ್ಣಗೊಳಿಸಲು ಹಾಗೂ ಅರಣ್ಯ ಬಿಡುಗಡೆ ಪ್ರಕ್ರಿಯೆಯನ್ನು ಸಹ ಶೀಘ್ರ ಪೂರ್ಣ ಗೊಳಿಸಲು ಸೂಚಿಸಿರುವ ಮೇರೆಗೆ ಅಧಿಕಾರಿಗಳು ಕಾಮಗಾರಿಗಳ ಭೂ ಸ್ವಾದೀನ ಪ್ರಕ್ರಿಯೆ ಹಾಗೂ ಅರಣ್ಯ ಬಿಡುಗಡೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದಾಗಿ ಸಭೆಗೆ ಭರವಸೆ ನೀಡಿದರು.

ಕಾಮಗಾರಿಗಳಿಗೆ ಸಂಬಂಧಿಸಿದ ಅರಣ್ಯ ಬಿಡುಗಡೆಗೆ ಅಗತ್ಯವಿರುವ ಸಿ.ಎ ಭೂಮಿ ಬಿಡುಗಡೆಯ ಬಗ್ಗೆ ಎನ್.ಓ.ಸಿ ಪತ್ರವನ್ನು 07 ದಿನದೊಳಗೆ ನೀಡುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.

B.Y. Raghavendra ಕಾಮಗಾರಿಗೆ ಅಗತ್ಯವಿರುವ ಹೈ ಟೆನ್‌ಷನ್ ಟವರ್ ಮತ್ತು ವಿದ್ಯುತ್ ಕಂಬಗಳನ್ನು 15 ದಿನದೊಳಗೆ ಸ್ಥಳಾಂತರಿಸಲು ಅಗತ್ಯ ಕ್ರಮ ವಹಿಸಲು ಸಭೆಯಲ್ಲಿದ್ದ ಹಾಜರಿದ್ದ ಕೆ.ಪಿ.ಟಿ.ಸಿ.ಎಲ್ ಕಾರ್ಯಪಾಲಕ ಇಂಜಿನಿಯರ್‌ರವರಿಗೆ ಸೂಚಿಸಲಾಯಿತು.

ಸಭೆಯಲ್ಲಿ ಹಾಜರಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮ್ಯಾನೇಜರ್ ಮತ್ತು ಇಂಜಿನಿಯರ್ ರವರಿಗೆ ಶಿವಮೊಗ್ಗ ಬೈಪಾಸ್ ರಸ್ತೆಯಲ್ಲಿ ಕೈಬಿಡಲಾಗಿದ್ದ 5.38 ಕಿ.ಮೀ ಉದ್ದದ ರಸ್ತೆ ನಿರ್ಮಾಣಕ್ಕೆ ಅಗತ್ಯವಿರುವ ಸೂಕ್ತ ಪಥ ನಕ್ಷೆಯನ್ನು 15 ದಿನದೊಳಗೆ ತಯಾರಿಸಿ ಮಂಜೂರಾತಿ ಪಡೆದು ಕಾಮಗಾರಿ ಪ್ರಾರಂಭಿಸಲು ಕ್ರಮವಹಿಸಲು ಹಾಗು ಶಿವಮೊಗ್ಗ ವಿಶೇಷ ಭೂಸ್ವಾದೀನಾಧಿಕಾರಿಗಳು ಸಲ್ಲಿಸಿರುವ 20 ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಸೂಚಿಸಲಾಯಿತು.

ಶಿವಮೊಗ್ಗ ವಿಶೇಷ ಭೂಸ್ವಾಧೀನಾಧಿಕಾರಿಗಳಿಗೆ ಬಾಕಿ ಇರುವ 15 ಪ್ರಕರಣಗಳನ್ನು 15 ದಿನದೊಳಗೆ ಪೂರ್ಣಗೊಳಿಸಲು ಸಹ ಸೂಚಿಸಲಾಯಿತು. ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯಪಾಲಕ ಇಂಜಿನಿಯರ್‌ರವರಿಗೆ ಚಿತ್ರದುರ್ಗ – ಶಿವಮೊಗ್ಗ ರಸ್ತೆಯ ಬಾಕಿ ಉಳಿದ ರಸ್ತೆ ಹಾಗು ರೈಲ್ವೇ ಮೇಲ್ಸೇತುವೆ ಕಾಮಗಾರಿಗಳನ್ನು ಶೀಘ್ರ ಪ್ರಾರಂಭಿಸಲು ಸೂಚಿಸಲಾಯಿತು .

ಸಭೆಯಲ್ಲಿ ಮಾನ್ಯ ಸಂಸದರೊಂದಿಗೆ ಜಿಲ್ಲಾಧಿಕಾರಿಗಳಾದ ಶ್ರೀ ಗುರುದತ್ತ ಹೆಗ್ಗಡೆ, ಪೋಲೀಸ್ ಅದೀಕ್ಷಕರಾದ ಶ್ರೀ ಮಿಥುನ್‌ಕುಮಾರ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳದ ಶ್ರೀ ಹನುಮಂತಪ್ಪ, ಸಾಗರ ಮತ್ತು ಶಿವಮೊಗ್ಗ ಉಪ ವಿಭಾಗಾಧಿಕಾರಿಗಳು, ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯಪಾಲಕ ಇಂಜಿನಿಯರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪೀರ್‌ಪಾಷ ಕೆ.ಪಿ.ಟಿ.ಸಿ.ಎಲ್ ಕಾರ್ಯಪಾಲಕ ಇಂಜಿನಿಯರ್ ಹಾಗೂ ಸಂಬಂದಪಟ್ಟ ಇಲಾಖೆಯ ಅಧಿಕಾರಿಗಳು ಮೇಲ್ಕಂಡ ಸಭೆಯಲ್ಲಿ ಹಾಜರಿದ್ದರು .

Dhananjaya Sarji ಮಕ್ಕಳ ಜೀವನದಲ್ಲಿ ಗುರುಗಳು ಸುಜ್ಞಾನದ ಬೆಳಕನ್ನು ಬೀರುತ್ತಾರೆ – ಡಾ.ಧನಂಜಯ ಸರ್ಜಿ

0

Dhananjaya Sarji ಗುರು ಎಂದರೇ ಪ್ರೀತಿಯ ಆಗರ, ಅಜ್ಞಾನದ ಅಂಧಕಾರವನ್ನು ತೊಲಗಿಸಿ ಸುಜ್ಞಾನದ ಜ್ಯೋತಿಯನ್ನು ಬೆಳಗಿಸುವವರು ಎಂದು ವಿಧಾನಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಹೇಳಿದ್ದಾರೆ.

ಶಿವಮೊಗ್ಗ ನಗರದ ಸರ್ಜಿ ಕನ್ವ್ಷನ್ ಹಾಲ್‌ನಲ್ಲಿ ಸಿಬಿಎಸ್ಸ್ಸಿ ಶಾಲೆಗಳ ಒಕ್ಕೂಟವಾದ ಸಹ್ಯಾದ್ರಿ ಸಹೋದಯ ಸ್ಕೂಲ್ಸ್ ಕಾಂಪ್ಲೆಕ್ಸ್ ವತಿಯಿಂದ ಹಮ್ಮಿಕೊಂಡಿದ್ದ ಅಧ್ಯಯನ-೫ ಶಿಕ್ಷಕರ ಒಂದು ದಿನದ ವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಸೂರ್ಯನ ಬೆಳಕು ಭೂಮಿಗೆ ಬಂದ ಹಾಗೆ ಲಕ್ಷಾಂತರ ಮಕ್ಕಳ ಜೀವನದಲ್ಲಿ ಗುರುಗಳು ಸುಜ್ಞಾನದ ಬೆಳಕನ್ನು ಬೀರುತ್ತಾರೆ. ಸಮಾಜದಲ್ಲಿ ವೈದ್ಯರಿಗೆ ಮತ್ತು ಗುರುಗಳಿಗೆ ಬಹಳ ಮಹತ್ವವಿದೆ. ಶ್ವಾಸ ನಿಂತರೆ ಜೀವ ಹೋಗುತ್ತದೆ, ಆದರೆ ವಿಶ್ವಾಸ ಮತ್ತು ನಂಬಿಕೆ ಹೋದರೆ ಜೀವನವೇ ಹೋಗುತ್ತದೆ. ರೋಗಿಗಳು ವೈದ್ಯರನ್ನು ನಂಬುತ್ತಾರೆ. ವಿದ್ಯಾರ್ಥಿಗಳು ಗುರುಗಳನ್ನು ನಂಬುತ್ತಾರೆ. ಹಿಂದಿನ ಕಾಲದ ಶಿಕ್ಷಣ ಹೀಗಿಲ್ಲ, ಈಗಿನ ಶಿಕ್ಷಣ ಗೂಗಲ್ ಆಧಾರಿತವಾಗಿದೆ ಎಂದರು.

ವಿದ್ಯಾರ್ಥಿಗಳಿಗೆ ಒಳ್ಳೆಯ ವ್ಯಕ್ತಿತ್ವ ಮತ್ತು ಸಂಸ್ಕಾರ ನೀಡಬೇಕು. ಅವರಲ್ಲಿ ದೊಡ್ಡ ದೊಡ್ಡ ಕನಸುಗಳನ್ನು ಬಿತ್ತಬೇಕು. ಬೆಳಗಿನ ಜಾವ ನಿದ್ದೇಗೇಡಿಸುವ ಹಾಗೆ ಕನಸುಗಳು ಇರಬೇಕು ಮತ್ತು ಆ ಕನಸ್ಸನ್ನು ನೆನಸು ಮಾಡುವ ದೃಢ ಸಂಕಲ್ಪ ಹಾಗೂ ಆತ್ಮವಿಶ್ವಾಸ ತುಂಬಿಸುವ ಕೆಲಸ ಮಾಡಬೇಕು. ಅವರಲ್ಲಿ ಪರಿವರ್ತನೆಯನ್ನು ತರಬೇಕು. ಭಾವನೆಯನ್ನು ಸದ್ಭಾವನೆಯನ್ನಾಗಿ ಮೂಡಿಸಬೇಕು. ನಿರಂತರ ಪ್ರಯತ್ನ ಮಾಡಿ ಗುರಿ ಮುಟ್ಟುವ ಹಾಗೆ ವಿದ್ಯಾರ್ಥಿಯನ್ನು ಹುರಿದುಂಬಿಸಬೇಕು, ಉತ್ತಮ ಸಂಸ್ಕಾರ ನೀಡಿ, ಸತ್ಪçಜೆಯನ್ನಾಗಿ ಮಾಡಬೇಕು ಎಂದರು.

Dhananjaya Sarji ವಿದ್ಯಾರ್ಥಿಗಳಲ್ಲಿ ಮುಂದಿನ ಭವಿಷ್ಯಕ್ಕೆ ಪರಿಸರ ಪ್ರಜ್ಞೆ ಮೂಡಿಸಬೇಕು. ಶುದ್ಧ ತುಂಗೆ ಮಲೀನವಾಗಿದ್ದು, ಅಲ್ಯೂಮಿನಿಯಂ ಇರುವುದು ಖಾತರಿಯಾಗಿದೆ, ಇದು ದೇಹಕ್ಕೆ ಅಪಾಯಕಾರಿ ಶುದ್ಧ ತುಂಗೆಗಾಗಿ ನಿರ್ಮಲ ತುಂಗಾ ಅಭಿಯಾನ ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳನ್ನು ಇದರಲ್ಲಿ ಜೋಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಅಭಿಮನ್ಯು ಅಕಾಡೆಮಿಯ ಸಿಇಓ ಅರ್ಜುನ್ ದೇವಯ್ಯ ಮಾತನಾಡಿ, ಶಿಕ್ಷಕರನ್ನು ನಗಿಸುವುದು ಸುಲಭವಲ್ಲ, ವಿಚಾರಗಳು ಮತ್ತು ತತ್ವಗಳು ಮಾತ್ರ ಜೀವನವನ್ನು ಬದಲಾಯಿಸುವುದಿಲ್ಲ, ಅನುಭವ ಎಂಬುವುದು ಅತ್ಯಮೂಲ್ಯ ಅದನ್ನು ವಿದ್ಯಾರ್ಥಿಗಳಿಗೆ ದಾರೆಯೇರೆಯಬೇಕು ಎಂದರು.

ಬೆಸ್ಟ್ ಟೀಚರ್ ಅವಾರ್ಡ್ ಪಡೆದ ಎಸ್.ಹರ್ಷ, ಹೊಂಗಿರಣ ಸ್ವತಂತ್ರ ಪಿಯು ಕಾಲೇಜಿನ ಪ್ರಾಂಶುಪಾಲರಾದ ರೋಹಿತ್ ವಿ., ಸುಖೇಶ್ ಶೇರಿಗಾರ್, ಶ್ರೀಕಾಂತ್ ಹೆಗಡೆ, ರವೀಂದ್ರ, ಅರುಣಾಜ್ಯೋತಿ, ಡಾ. ದ್ರಾಕ್ಷಾಯಿಣ ಸಿ.ಎಲ್., ಶೃತಿ ಆರ್.ಸ್ವಾಮಿ, ಶೋಭಾರವೀಂದ್ರ, ಕಿರಣ್ ಮತ್ತಿತರರು ಇದ್ದರು.

Rotary Club Shivamogga ಪಿಎಂಇಜಿಪಿ ಯೋಜನೆಯ ಲಾಭವನ್ನ ಸಮಾಜದ ಎಲ್ಲ ವರ್ಗದವರೂ ಪಡೆಯಬಹುದು- ಸುರೇಶ್

0

Rotary Club Shivamogga ಶಿವಮೊಗ್ಗ ನಗರದ ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ವತಿಯಿಂದ ರಾಷ್ಟ್ರೀಯ ಸಣ್ಣ ಕೈಗಾರಿಕೆಗಳ ದಿನವನ್ನು ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಾಣಿಜ್ಯ ಹಾಗೂ ಕೈಗಾರಿಕೆಗಳ ಇಲಾಖೆಯ ಉಪನಿರ್ದೇಶಕ ಸುರೇಶ್ ಮಾತನಾಡಿ, ಸಣ್ಣ ಕೈಗಾರಿಕೆ ಹಾಗೂ ಉದ್ಯಮಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಕೇಂದ್ರ ಸರ್ಕಾರವು 2008 ರಲ್ಲಿ ಜಾರಿಗೊಳಿಸಿದ ಯೋಜನೆಯಾದ ಪಿಎಂಈಜಿಪಿ (ಪ್ರೇಮ್ ಮಿನಿಸ್ಟರ್ಸ್ ಎಂಪ್ಲಾಯ್ ಮೆಂಟ್ ಜನರೇಶನ್ ಪ್ರೋಗ್ರಾಂ) ಕುರಿತಾದ ವಿಸ್ತೃತ ಮಾಹಿತಿ ನೀಡಿದರು.

ಈ ಯೋಜನೆಯ ಫಲಾನುಭವಿಗಳಾಗಲು ಅನುಸರಿಸಬೇಕಾದ ನಿಯಮಗಳು, ಕಾರ್ಯ ಯೋಜನೆ, ಬ್ಯಾಂಕ್ ಗಳ ಪಾತ್ರ, ಇಲಾಖೆಯ ಜವಾಬ್ದಾರಿಗಳ ಕುರಿತಾಗಿ ಸವಿವರವಾದ ಮಾಹಿತಿಯನ್ನು ಹಂಚಿಕೊಂಡ ಅವರು, ಈ ಯೋಜನೆಯು ಸಾಲಾಧಾರಿತ ಸಬ್ಸಿಡಿ ಯೋಜನೆಯಾಗಿದ್ದು ಸಮಾಜದ ಎಲ್ಲಾ ವರ್ಗದ ಜನರು ಇದರ ಸದುಪಯೋಗ ಪಡೆಯಬಹುದೆಂದು ತಿಳಿಸಿದರು.

ಈ ಯೋಜನೆ ಕುರಿತಾದ ಯಾವುದೇ ಮಾಹಿತಿ ಹಾಗೂ ಮಾರ್ಗದರ್ಶನದ ಅವಶ್ಯಕತೆ ಇರುವವರು ನಗರದ ಎ.ಎ ವೃತ್ತ ಸಮೀಪದ ಸ್ಮಾರ್ಟ್ ಸಿಟಿ ಕಚೇರಿಯ ಮೇಲ್ಭಾಗದಲ್ಲಿ ಇರುವ ಇಲಾಖೆಯ ಕಚೇರಿಗೆ ಆಗಮಿಸಿಬಹುದೆಂದು ಸಹ ತಿಳಿದರು.

Rotary Club Shivamogga ಈ ಸಂದರ್ಭದಲ್ಲಿ ಉಪನಿರ್ದೇಶಕ ಸುರೇಶ್ ಅವರನ್ನು ಸನ್ಮಾನಿಸಿ ಮಾತನಾಡಿದ ಕ್ಲಬ್ ಅಧ್ಯಕ್ಷ ರೊ.ಮುಸ್ತಾಕ್, ತಾವೂ ಸಹ ಕೈಗಾರಿಕೋದ್ಯಮಿಯಾಗಿದ್ದು, ಸರ್ಕಾರದ ಹಲವಾರು ಯೋಜನೆಗಳು ಸಣ್ಣ ಹಾಗೂ ಮಧ್ಯಮ ಗಾತ್ರದ ಕೈಗಾರಿಕೆಗಳ ಪ್ರೋತ್ಸಾಹಕ್ಕೆಂದೇ ಜಾರಿಯಲ್ಲಿದ್ದು, ಆನ್ ಲೈನ್ ನಲ್ಲಿ ಈ ಯೋಜನೆಗಳ ಬಹುತೇಕ ಪ್ರಕ್ರಿಯೆಗಳು ನಡೆಯುವುದರಿಂದ ಸೇವೆಗಳು ಪಾರದರ್ಶಕವಾಗಿ ಹಾಗೂ ಸಮಯಕ್ಕೆ ಸರಿಯಾಗಿ ಜನರಿಗೆ ಲಭಿಸುತ್ತಿವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕ್ಲಬ್ ಕಾರ್ಯದರ್ಶಿ ರೊ.ಶ್ರೀಕಾಂತ್.ಎ.ವಿ, ಜೋನಲ್ ಲೆಫ್ಟಿನೆಂಟ್ ರೊ. ಮಂಜುಳಾ ರಾಜು, ಕ್ಲಬ್ ಕಲಿಕಾ ಮಾರ್ಗದರ್ಶಿ ರೊ. ಹೆಚ್.ಎಲ್.ರವಿ, ಮಾಜಿ ಅಧ್ಯಕ್ಷ ರೊ. ರಾಜು.ಸಿ ಹಾಗೂ ಕ್ಲಬ್ ಸದಸ್ಯರು ಪಾಲ್ಗೊಂಡಿದ್ದರು.

Shivamogga Police ಜಿಲ್ಲಾ ಪೊಲೀಸ್ ಇಲಾಖೆಯಲ್ಲಿನ ವರ್ಗಾವರ್ಗಿ ಮಾಹಿತಿ

0

Shivamogga Police ಪೊಲೀಸ್ ಇಲಾಖೆಯಲ್ಲಿ ಮತ್ತೆ ವರ್ಗಾವಣೆ ಪರ್ವ ಶುರುವಾಗಿದೆ ಇಂದು ಬಂದ ಪಟ್ಟಿಯಲ್ಲಿ ಶಿವಮೊಗ್ಗದ ಇಬ್ಬರು ಇನ್ಸ್ಪೆಕ್ಟರ್ಗಳು ಹಾಗೂ ಲೋಕಾಯುಕ್ತದಲ್ಲಿ ಡಿವೈಎಸ್ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದ ಉಮೇಶ್ ಈಶ್ವರ್ ನಾಯ್ಕ್ ವರ್ಗಾವಣೆ ಆಗಿದೆ.

ಶಿವಮೊಗ್ಗದ ಸಿ ಇ ಎನ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೋಟೆ ಪೊಲೀಸ್ ಠಾಣೆಯಲ್ಲಿ ಹೆಚ್ಚುವರಿಯಾಗಿ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ದೀಪಕ್ ಎಂಎಸ್ ಅವರನ್ನು ಕುಂಸಿ ಠಾಣೆಗೆ ಕುಂಸಿ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹರೀಶ್ ಪಟೇಲ್ ಅವರನ್ನು ಕೋಟೆ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.

Shivamogga Police ಹಾಗೆ ಲೋಕಾಯುಕ್ತದಲ್ಲಿ ಡಿವೈಎಸ್ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದ ಉಮೇಶ್ ಈಶ್ವರ್ ನಾಯ್ಕ್ ಅವರನ್ನು ಗುಪ್ತಚರ ಇಲಾಖೆಗೆ ವರ್ಗಾವಣೆ ಮಾಡಲಾಗಿತ್ತು ಆದರೆ ಅವರನ್ನು ಚಿತ್ರದುರ್ಗದ ಸಿಇಎನ್ ವರ್ಗಾವಣೆ ಮಾಡಲಾಗಿದೆ

CM Siddharamaih ಪ್ರಾಸಿಕ್ಯೂಷನ್ ಅನುಮತಿ ಪ್ರಶ್ನಿಸಿದ ಸಿದ್ದರಾಮಯ್ಯ ಅರ್ಜಿ ವಿಚಾರಣೆ ಸೆ.2 ಕ್ಕೆ ಮುಂದೂಡಿಕೆ

0

CM Siddharamaih ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರ ಅನುಮತಿ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನ ಹೈಕೋರ್ಟ್ ಸೆಪ್ಟಂಬರ್ 2ಕ್ಕೆ ಮುಂದೂಡಿಕೆ ಮಾಡಿದೆ.

ಹೈಕೋರ್ಟ್ ನ್ಯಾ. ನಾಗಪ್ರಸನ್ನ ಅವರ ಏಕಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಿತು. ಸ್ನೇಹಮಯಿ ಕೃಷ್ಣ ಪರ ಹಿರಿಯ ವಕೀಲ ಕೆಜಿ ರಾಘವನ್ ಅವರು ವಾದ ಮಂಡನೆಗೆ ಅವಕಾಶ ಕೋರಿದ ಹಿನ್ನೆಲೆ ವಿಚಾರಣೆಯನ್ನ ಸೆಪ್ಟಂಬರ್ 2(ಸೋಮವಾರ)ರ ಮಧ್ಯಾಹ್ನ 2.30ಕ್ಕೆ ಮುಂದೂಡಿಕೆ ಮಾಡಿದೆ.
ಇಂದು ಸಿಎಂ ಸಿದ್ದರಾಮಯ್ಯ ಪರ ವಕೀಲರ ರವಿವರ್ಮಕುಮಾರ್, ರಾಜ್ಯಪಾಲರ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಪ್ರದೀಪ್ ಕುಮಾರ್ ಪರ ಪ್ರಭುಲಿಂಗ ನಾವದಗಿ, ಹಾಗೂ ಟಿಜೆ ಅಬ್ರಾಹಂ ಪರ ರಂಗನಾಥ ರೆಡ್ಡಿ ಸುದೀರ್ಘ ವಾದ ಮಂಡಿಸಿದರು.

CM Siddharamaih ಅಂತಿಮವಾಗಿ ವಾದ ಆಲಿಸಿದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠವು ಮುಖ್ಯಮಂತ್ರಿ ಸಿದ್ಧರಾಮಯ್ಯ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 2 ಕ್ಕೆ ಮುಂದೂಡಿಕೆ ಮಾಡಿದೆ.

Thirahalli Police ತೀರ್ಥಹಳ್ಳಿಯ ತುಂಗಾ ದಡದಲ್ಲಿ ಬೈಕ್ ಬಿಟ್ಟು ಯುವಕ ಕಣ್ಮರೆ

0

Thirahalli Police ತೀರ್ಥಹಳ್ಳಿಯಲ್ಲಿ ಪದವಿ ಓದುತ್ತಿದ್ದ ಯುವಕನೊಬ್ಬ ತುಂಗಾ ನದಿಯ ದಡದಲ್ಲಿ ಬೈಕ್ ಬಿಟ್ಟು ಕಣ್ಮರೆಯಾಗಿದ್ದಾನೆ. ಯುವಕ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನುವ ಸಂಶಯ ವ್ಯಕ್ತವಾಗುತ್ತಿದೆ.

ತೀರ್ಥಹಳ್ಳಿ ಸಮೀಪದ ಇಂದಾವರ ಗ್ರಾಮದ ಜಯದೀಪ್ (೨೪ ವರ್ಷ) ನಾಪತ್ತೆಯಾಗಿದ್ದು, ಆತನ ವಾಟ್ಸಾಪ್ ಸ್ಟೇಟಸ್ ನೋಡಿದರೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಬಲವಾಗುತ್ತಿದೆ. ಆತ್ಮಹತ್ಯೆಗೆ ಪ್ರೇಮ ವೈಫಲ್ಯ ಕಾರಣ ಎಂದು ಮಾಧ್ಯಮಗಳು ವರದಿ ಮಾಡಿವೆ.

ಜಯದೀಪ್ ತನ್ನ ವಾಟ್ಸಾಪ್ ಸ್ಟೇಟಸ್ಸಿನಲ್ಲಿ “ಇನ್ನು ಸ್ವಲ್ಪ ದಿನದಲ್ಲಿ ಡಿಗ್ರಿ ಮುಗಿಯುತ್ತಿತ್ತು. ನಾನು ಒಳ್ಳೆಯ ವಿದ್ಯಾರ್ಥಿ ಕೂಡ, ಬ್ಯಾಂಕ್ ಪರೀಕ್ಷೆ ಬರೆಯುವ ಚಾನ್ಸ್ ಕೂಡ ಇತ್ತು. ಆದರೆ ಅದು ನೆನಪು ಮಾತ್ರ.

ಅಪ್ಪ ಅಮ್ಮ ಸಂಜಯ್ ನನ್ನನ್ನು ಕ್ಷಮಿಸಿ ಬಿಡಿ ನಿಮ್ಮ ಆಸೆ ನಂಬಿಕೆ ಎಲ್ಲಾ ಹಾಳು ಮಾಡುತ್ತಿದ್ದೀನಿ ಅಂತ ಬೇಜಾರಾಗಬೇಡಿ, ನನ್ನಸಾಲ ನಿಮ್ಮ ಮೇಲೆ ಹಾಕುತ್ತಿದ್ದೀನಿ ಅಂತ ಸಿಟ್ಟು ಮಾಡಿಕೊಳ್ಳಬೇಡಿ. ನನ್ನ ಬೈಕ್ ಮಾರಿ ಸ್ವಲ್ಪ ಅಡ್ಡಸ್ಟ್ ಮಾಡಿ ಎಲ್ಲರಿಗೂ ಕೊಡಿ.
ಒನ್ ಸೈಡ್ ಲವ್ ಮಾಡಿದ್ದೆ, ಅವಳು ಒಪ್ಪಿಲ್ಲ. ಒಂದು ಸಣ್ಣ ತಪ್ಪು ಇವತ್ತು ನನ್ನನ್ನು ಸಾವಿನ ಕಡೆ ತಳ್ಳುತ್ತಿದೆ.

Thirahalli Police ಒಳ್ಳೆ ಕೆಲಸ ಹುಡುಕುವುದರಲ್ಲೂ ವಿಫಲನಾದೆ. ಇತ್ತೀಚಿನ ದಿನಗಳಲ್ಲಿ ಬರಿ ಸಾಲ, ಮಾನಸಿಕ ಖಿನ್ನತೆ ನನ್ನ ಎಲ್ಲಾದರೂ ದೂರ ಹೋಗುವಂತೆ ಪ್ರೇರೇಪಿಸಿತು. ಊರು ಬಿಡೋಣ ಅಂತ ಮಾಡಿದೆ ಆದರೆ ಊರು ಬಿಡೊದಕ್ಕಿಂತ ಸಾವೇ ಮುನ್ನುಗ್ಗಿ ಕರೆಯಿತು.

ಎಲ್ಲರಿಗೂ ಸಾರಿ, ಪ್ಲೀಸ್ ಕ್ಷಮಿಸಿ ಬಿಡಿ, ನನ್ನ ಸಾವಿಗೆ ನನ್ನ ಕೆಟ್ಟ ನಿರ್ಧಾರಗಳೇ ಕಾರಣ” ಎಂದು ವಾಟ್ಸಪ್ ಸ್ಟೇಟಸ್‌ನಲ್ಲಿ ಬರೆದಿರುವುದಾಗಿ ತಿಳಿದು ಬಂದಿದೆ.
ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿರುವ ಕಾರಣ ಹುಡುಕುವ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ಸ್ಥಳೀಯ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಶವ ಹುಡುಕುವಲ್ಲಿ ನಿರತವಾಗಿದೆ. ತೀರ್ಥಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.