Tuesday, March 31, 2026
Tuesday, March 31, 2026
Home Blog Page 581

Kempegowda International Airport ವಿದೇಶಿ ಉದ್ಯೋಗ ವ್ಯಾಮೋಹ. ಯುವತಿಗೆ ವಂಚಿಸಿದ ಪ್ರಕರಣ

0

Kempegowda International Airport ವಿದೇಶದಲ್ಲಿ ಉದ್ಯೋಗದ ನೆಪಹೇಳಿ ಹೆತ್ತವರು, ಗೆಳತಿಯರನ್ನು ಯಾಮಾರಿಸಿ ಸುಳ್ಯದ ಯುವತಿಯೊಬ್ಬಳು ಅನ್ಯಧರ್ಮದ ತನ್ನ ಪ್ರಿಯತಮನೊಂದಿಗೆ ಪರಾರಿಗೆ ಯತ್ನಿಸಿದ ಘಟನೆ ಸುಳ್ಯದಲ್ಲಿ ನಡೆದಿದೆ.

ಸುಳ್ಯ ಕೊಲ್ಲಮೊಗ್ರದ ಯುವತಿ ಈ ವರ್ಷವಷ್ಟೇ ದ್ವಿತೀಯ ಪಿಯುಸಿ ತೇರ್ಗಡೆ ಹೊಂದಿದ್ದಳು ಬಡತನದಲ್ಲಿಯೇ ಇದ್ದ ಕುಟುಂಬಕ್ಕೆ ಮಗಳಿಗೆ ವಿದೇಶದಲ್ಲಿ ಕೆಲಸ ಸಿಕ್ಕ ಸುದ್ದಿಕೇಳಿ ಸಂಭ್ರಮ ಮುಗಿಲು ಮುಟ್ಟಿತ್ತು.

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ವತಃ ಈಕೆಯನ್ನು ಬಿಟ್ಟು, ಒಳ್ಳೆಯದಾಗಲಿ ಎಂದು ಹರಸಿ ಟಾಟಾ ಹೇಳಿ ಬಂದಿದ್ದಾರೆ.
ಪೋಷಕರು ಮಗಳಿಗೆ ಏನೋ ಒಳ್ಳೆಯದಾಗುತ್ತದೆ ಎಂದುಕೊಂಡು ನೆಮ್ಮದಿಯಿಂದ ಮನೆಗೆ ಹೊರಟಿದ್ದಾರೆ. ಮಗಳನ್ನು ವಿಮಾನ ನಿಲ್ದಾಣಕ್ಕೆ ಬಿಟ್ಟು ಮನೆಗೆ ಬಂದ ಕುಟುಂಬದವರು, ತಮ್ಮ ವಾಟ್ಸಾಪ್ ಸ್ಟೇಟಸ್‌ಗಳಲ್ಲಿ ಇದರ ಮಾಹಿತಿಗಳನ್ನೂ ಕೂಡ ಹಂಚಿಕೊಂಡಿದ್ದಾರೆ. ಇನ್ನೇನು ಮಗಳು ವಿದೇಶಕ್ಕೆ ಹೊರಟು ಕಷ್ಟಪರಿಹಾರವಾಗಿ ನೆಮ್ಮದಿಯ ಕನಸು ಕಂಡ ಪೋಷಕರಿಗೆ ದಿಗಿಲು ಬಡಿದಂತಾಗಿದೆ.

Kempegowda International Airport ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇನ್ನೇನು ವಿಮಾನ ಹೊರಟಿರಬಹುದೆಂದು ಕರೆಮಾಡಿದ್ದಾಗ ಆಕೆಯ ಫೋನ್ ರಿಂಗ್ ಆಗಿದೆ. ಫೋನ್ ರಿಂಗ್ ಆಗಿದ್ದರಿಂದ ಮನೆಯವರಿಗೆ ಅನುಮಾನ ಶುರುವಾಗಿದೆ. ಈಗಾಗಲೇ ವಿಮಾನ ಹೊರಟ ಸಮಯವಾಗಿದೆ. ಹಾಗಿದ್ದರೂ ಆಕೆಯ ಮೊಬೈಲ್ ರಿಂಗ್ ಆಗೋದಕ್ಕೆ ಹೇಗೆ ಸಾಧ್ಯ ಎನ್ನುವ ಅನುಮಾನ ಬಂದಿದೆ. ಆ ಬಳಿಕ ಕೆಲ ದಿನಗಳ ಬಳಿಕ ಆಕೆಯನ್ನು ಧರ್ಮಸ್ಥಳ ಬಸ್ಸಿನಲ್ಲಿ ನೋಡಿರುವುದಾಗಿ ಕೆಲವರು ತಿಳಿಸಿದ್ದಾರೆ. ವಿಮಾನ ನಿಲ್ದಾಣದ ಒಳಹೊಕ್ಕು ಹೈ ಡ್ರಾಮಾ ಮಾಡಿದ್ದ ಪುತ್ರಿ ಆ ಬಳಿಕ ಅಲ್ಲಿಂದ ಅನ್ಯಕೋಮಿನ ಯುವಕನ ಜೊತೆಗೆ ಕಾಣೆ ಆಗಿರುವ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಪೋಷಕರು ಬಂದರೆ, ಅವರನ್ನು ಬೆಂಗಳೂರಿನಲ್ಲೇ ದೂರು ನೀಡಬೇಕೆಂದು ಪೊಲೀಸರು ಕಳುಹಿಸಿಕೊಟ್ಟಿದ್ದಾರೆ. ಹಿಂದೂ ಸಂಘಟನೆಗಳು ಕೂಡ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿವೆ. ಇದೀಗ ಯುವತಿಯ ಪೋಷಕರು ಮತ್ತೆ ಬೆಂಗಳೂರಿಗೆ ತೆರಳಿ ಮಗಳು ನಾಪತ್ತೆಯಾಗಿರುವ ದೂರು ದಾಖಲು ಮಾಡಿದ್ದಾರೆ.

Prahlad Joshi ಕಾಂಗ್ರೆಸ್ ಪಕ್ಷವು ರಾಜ್ ಭವನ್ ಚಲೋ ಬದಲಿಗೆ ಮೂಡಾ ಚಲೋ ನಡೆಸಲಿ. ಸಚಿವ ಜೋಷಿ ಟೀಕೆ

0

Prahlad Joshi ಕಾಂಗ್ರೆಸ್ ಪಕ್ಷದವರು ರಾಜಭವನ ಚಲೋ ಅಲ್ಲ, ಮುಡಾ ಚಲೋ ನಡೆಸಲಿ. ಮುಡಾಕ್ಕೆ ತೆರಳಿ ನಿವೇಶನ ತೆಗೆದುಕೊಂಡದ್ದು, ಆಪ್ತರಿಗೆ ಕೊಡಿಸಿದ್ದು ತಪ್ಪಾಯಿತು ಎಂದು ಮುಡಾಕ್ಕೆ ಕೈ ಮುಗಿದು ಕ್ಷಮೆ ಕೇಳಿ ಬರಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಲೇವಡಿ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ ಕಾಂಗ್ರೆಸ್‌ನವರು ರಾಜಭವನ ಚಲೋ ಏಕೆ ಮಾಡುತ್ತಾರೆ? ತಪ್ಪಿಗೆ ಕ್ಷಮೆ ಕೇಳಲು ಮುಡಾ ಚಲೋ ಮಾಡಲಿ ಎಂದರು.
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತನಿಖೆಗೆ ಏಕೆ ಹೆದರುತ್ತಾರೆ? ಅರ್ಥವಾಗುತ್ತಿಲ್ಲ. ಹಿಂದೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರ ಮೇಲೂ ಖಾಸಗಿ ದೂರಿನ ಮೇರೆಗೆ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿದ್ದರು.

Prahlad Joshi ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಲಿಲ್ಲವೇ? ಬಿಎಸ್‌ವೈ ಶುದ್ಧ ಹಸ್ತರಾಗಿ ಬಂದ ಮೇಲೆ ಸಿದ್ದರಾಮಯ್ಯ ಕ್ಷಮೆ ಕೇಳಿದ್ರೆ ಎಂದು ಜೋಶಿ ಪ್ರಶ್ನಿಸಿದರು. ಮುಡಾ ಹಗರಣದಲ್ಲಿ ಖಾಸಗಿಯವರು ದೂರು ನೀಡಿದ್ದರಿಂದ ಈಗ ರಾಜ್ಯಪಾಲರು ತನಿಖೆಗೆ ಅನುಮತಿ ಕೊಟ್ಟಿದ್ದಾರೆ. ಬಿಎಸ್‌ವೈ ಪ್ರಕರಣಕ್ಕೂ, ಸಿದ್ದರಾಮಯ್ಯ ಪ್ರಕರಣಕ್ಕೂ ವ್ಯತ್ಯಾಸವೇನಿಲ್ಲ. ಸಿಎಂ ಮೊದಲು ತನಿಖೆ ಎದುರಿಸಲಿ. ಮುಡಾ ಹಗರಣದಲ್ಲಿ ತನಿಖೆಗೆ ಅನುಮತಿ ನೀಡಿದ ಕಾರಣಕ್ಕೆ ರಾಜಭವನ ಚಲೋ ಮೂಲಕ ರಾಜ್ಯಪಾಲರನ್ನ ಬೆದರಿಸುವ, ಹೆದರಿಸುವ ತಂತ್ರ ಅನುಸರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಡೆಯನ್ನು ಖಂಡಿಸಿದರು.

ಮುಖ್ಯಮಂತ್ರಿ ಭ್ರಷ್ಟಾಚಾರದಲ್ಲಿ ತೊಡಗಿಲ್ಲ, ಮುಡಾ ಹಗರಣದಲ್ಲಿ ತಪ್ಪು ಮಾಡಿಲ್ಲ ಎಂದ ಮೇಲೆ ರಾಜ್ಯಪಾಲರನ್ನು ಬೆದರಿಸುವಂತಹ ರಾಜಭವನ ಚಲೋ ದಂತಹ ಡ್ರಾಮಾ ಏಕೆ ಮಾಡುತ್ತಿದ್ದಾರೆ. ಮುಡಾ ಭ್ರಷ್ಟಾಚಾರದಲ್ಲಿ ಸಹಾಯ ಮಾಡಿದ ಅಧಿಕಾರಿಗೆ ರಜಿಸ್ಟ್ರಾರ್ ಆಗಿ ಪ್ರಮೋಶನ್ ಮಾಡಿದ್ದೀರಿ. ಅದೇ ತಪ್ಪು ನಡೆದಿದೆ ಎಂದು ಪತ್ರ ಬರೆದ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಿದ್ದೀರಿ. ಈಗ ತನಿಖೆಗೆ ಅನುಮತಿ ನೀಡಿದರೆಂದು ರಾಜ್ಯಪಾಲರಿಗೆ ಬೆದರಿಕೆ ಹಾಕುತ್ತಿದ್ದೀರಿ ಎಂದು ಸಿಎಂ, ಡಿಸಿಎಂ ವಿರುದ್ಧ ಜೋಶಿ ಹರಿಹಾಯ್ದರು.

Hariyana Assembly election ಶಂಭುಗಡಿಯಲ್ಲಿನ ಪ್ರತಿಭಟನಾ ನಿರತ ರೈತರಿಗೆ ಬೆಂಬಲಿಸಿದ ಕುಸ್ತಿಪಟು ವಿನೇಶಾ ಪೊಗಟ್

0

Hariyana Assembly election ಹರಿಯಾಣ ವಿಧಾನಸಭೆ ಚುನಾವಣೆಗೆ ಒಂದು ತಿಂಗಳ ಬಾಕಿ ಇರುವಾಗ, ಒಲಿಂಪಿಕ್ ಕುಸ್ತಿಪಟು ವಿನೇಶಾ ಫೋಗಟ್ ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಗಡಿಯಲ್ಲಿ ಪ್ರತಿಭಟನಾ ನಿರತ ರೈತರಿಗೆ ತನ್ನ ನಿರಂತರ ಬೆಂಬಲ ನೀಡುವ ವಾಗ್ದಾನ ನೀಡಿದ್ದಾರೆ. ಅವರು ಅಲ್ಲಿ ರೈತರ ಆಂದೋಲನದ 200 ನೇ ದಿನದ ಆಚರಣೆಯಲ್ಲಿ ಭಾಗವಹಿಸಿದ್ದರು. “ನಿಮ್ಮ ಮಗಳು ನಿಮ್ಮೊಂದಿಗಿದ್ದಾಳೆ” ಎಂದು ಅವರು ಹೇಳಿದರು.
ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ವ್ಯವಸ್ಥೆಗೆ ಕಾನೂನು ಖಾತರಿ ನೀಡುವಂತೆ ಒತ್ತಾಯಿಸಿ ರೈತರು ‘ದೆಹಲಿ ಚಲೋ’ ಆಂದೋಲನ ನಡೆಸುತ್ತಿದ್ದು, ದೆಹಲಿಗೆ ಆಗಮಿಸುತ್ತಿದ್ದ ಅವರನ್ನು ಶಂಭು ಗಡಿಯಲ್ಲಿ ತಡೆಯಲಾಗಿದೆ.

50 ಕೆಜಿ ಫ್ರೀ ಸ್ಟೈಲ್ ಕುಸ್ತಿ ವಿಭಾಗದಲ್ಲಿ 100 ಗ್ರಾಂ ಅಧಿಕ ತೂಕ ಹೊಂದಿದ್ದ ಕಾರಣ ಪ್ಯಾರಿಸ್ ಒಲಿಂಪಿಕ್ಸ್ ಫೈನಲ್‌ನಿಂದ ಅನರ್ಹಗೊಂಡ ಫೋಗಟ್ ಅವರನ್ನು ರೈತರು ಇದೇ ಸಂದರ್ಭದಲ್ಲಿ ಅಭಿನಂದಿಸಿದರು.

ರೈತರ ಬೇಡಿಕೆಗಳು ನ್ಯಾಯಸಮ್ಮತವಾಗಿವೆ ಎಂದು ಒತ್ತಿ ಹೇಳಿದ ವಿನೇಶಾ, “ನಿಮ್ಮ ಮಗಳು ನಿಮ್ಮೊಂದಿಗಿದ್ದಾಳೆ ಎಂದು ನಾನು ನಿಮಗೆ ಹೇಳಲು ಬಯಸುತ್ತೇನೆ. ರೈತರ ಸಮಸ್ಯೆಗಳು ಬಗೆಹರಿಯದೆ ಉಳಿದಿವೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

Hariyana Assembly election “ನೀವೆಲ್ಲರೂ ಇಷ್ಟು ದಿನ ಪ್ರತಿಭಟನೆ ನಡೆಸುತ್ತಿರುವುದನ್ನು ನೋಡಲು ನೋವಾಗುತ್ತದೆ. ಕೆಲವೊಮ್ಮೆ ನಾವು ನಿಮಗಾಗಿ ಏನನ್ನೂ ಮಾಡಲು ಸಾಧ್ಯವಾಗದೆ ಅಸಹಾಯಕರಾಗುತ್ತೇವೆ. ನಾವು ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುತ್ತೇವೆ. ಆದರೆ, ನಮ್ಮ ಸ್ವಂತ ಕುಟುಂಬಕ್ಕಾಗಿ ಏನನ್ನೂ ಮಾಡಲು ಸಾಧ್ಯವಾಗುತ್ತಿಲ್ಲ. ಅವರ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಬೇಕೆಂದು ನಾನು ಸರ್ಕಾರವನ್ನು ಕೋರುತ್ತೇನೆ” ಎಂದು ಅವರು ಹೇಳಿದರು.

ರಾಜಕೀಯ ರಂಗಕ್ಕೆ ಬರುತ್ತೀರಾ ಮತ್ತು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ವಿನೇಶಾ ಪ್ರತಿಕ್ರಿಯಿಸಲು ನಿರಾಕರಿಸಿದರು. “ನನಗೆ ರಾಜಕೀಯದ ಬಗ್ಗೆ ತಿಳಿದಿಲ್ಲ” ಎಂದು ಅವರು ಹೇಳಿದರು.

Actor Darshan ಬಳ್ಳಾರಿ ಜೈಲಿನಲ್ಲಿ ಪತಿ ದರ್ಶನ್ ಭೇಟಿ ಮಾಡಿದ ಪತ್ನಿ ವಿಜಯಲಕ್ಷ್ಮೀ

0

Actor Darshan ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಸೆಂಟ್ರಲ್ ಜೈಲಿಗೆ ಶಿಫ್ಟ್ ಆಗಿರುವ ಕೊಲೆ ಆರೋಪಿ ದರ್ಶನ್ ಭೇಟಿಗೆ ಪತ್ನಿ ವಿಜಯಲಕ್ಷ್ಮೀ ಆಗಮಿಸಿ ಭೇಟಿಯಾದರು.

ಸಂಜೆ 4 ಗಂಟೆಗೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ವಕೀಲರ ಜತೆಗೂಡಿ ಜೈಲಿಗೆ ಆಗಮಿಸಿದರು. ಸುಮಾರು ಅರ್ಧಗಂಟೆಗೂ ಅಧಿಕ ಕಾಲ ಪೊಲೀಸ್ ಅಧಿಕಾರಿಗಳ ಜತೆ ಭೇಟಿಗೆ ಅವಕಾಶ ಕೊಡುವಂತೆ ಮನವಿ ಮಾಡಿಕೊಂಡರು. ಜೈಲು ನೀತಿ ನಿಯಮಗಳನ್ನು ಪರಿಶೀಲಿಸಿ ವಿಜಯಲಕ್ಷ್ಮೀ ಅವರಿಗೆ ಪತಿ ದರ್ಶನ್ ಭೇಟಿಗೆ ಅವಕಾಶ ನೀಡಲಾಯಿತು.

Actor Darshan ವಿಶೇಷ ಭದ್ರತಾ ಸೆಲ್‌ನಲ್ಲಿದ್ದ ದರ್ಶನ್‌ನನ್ನು ಪೊಲೀಸರು ಸ್ವತಃ ತೆರಳಿ ಜೈಲು ವಿಸಿಟರ್ಸ್ ಆವರಣಕ್ಕೆ ಕರೆ ತಂದರು. ದರ್ಶನ್ ಅವರನ್ನು ಹೊರಗಡೆ ತಂದ ಬಳಿಕ ಪತ್ನಿ ಮತ್ತು ಲಾಯರ್ ಜತೆ ಮಾತುಕತೆ ನಡೆಸಲು ಅವಕಾಶ ನೀಡಲಾಯಿತು

Bannerghatta ಹುಲಿಯನ್ನ ದತ್ತು ಪಡೆದ ಕನ್ನಡತಾರೆ ಸಂಯುಕ್ತಾ

0

Bannerghatta ಕನ್ನಡ ನಟಿ ಸಂಯುಕ್ತಾ ಹೊರನಾಡು ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿನ ಹುಲಿಯೊಂದನ್ನು ದತ್ತು ಪಡೆದಿದ್ದಾರೆ.

ಈ ವಿಷಯವನ್ನು ನಟಿ ಸಂಯುಕ್ತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್‌ನಲ್ಲಿರುವ ಹೆಣ್ಣು ಹುಲಿಯೊಂದನ್ನು ದತ್ತು ಪಡೆದಿದ್ದಾರೆ. ಸಂಯುಕ್ತಾ, ನರದೌರ್ಬಲ್ಯ ಇರುವ ಸಿಂಚನ ಹೆಸರಿನ ಹೆಣ್ಣು ಹುಲಿಯನ್ನು ದತ್ತು ಪಡೆದುಕೊಂಡಿದ್ದಾರೆ. ಸಿಂಚನಾಗೆ 28 ತಿಂಗಳಾಗಿದೆ.

Bannerghatta ಆರೋಗ್ಯ ಸಮಸ್ಯೆ ಇರುವ ಕಾರಣ, ಅದು ಸ್ವತಂತ್ರ್ಯವಾಗಿ ಕಾಡಿನಲ್ಲಿ ಸುತ್ತಲು ಸಾಧ್ಯವಿಲ್ಲ. ಅದೇ ಕಾರಣಕ್ಕೆ ಬನ್ನೇರುಘಟ್ಟ ಜೈವಿಕ ಉದ್ಯಾನವನ ಅದಕ್ಕೆ ಉದ್ಯಾನವನದಲ್ಲಿ ಆಸರೆ ನೀಡಿದೆ.

ಈಗ ಸಂಯುಕ್ತಾ ಅದರ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.

Tirthahalli Court ಜಿಂಕೆ ಬೇಟೆ ಪ್ರಕರಣದಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ನಾಲ್ಕು ಮಂದಿಗೆ ಶಿಕ್ಷೆ

0

Tirthahalli Court ಜಿಂಕೆ ಬೇಟೆಯಾಡಿದ ಆರೋಪ ಹಾಗೂ ಅದರ ಮಾಂಸ ಸಾಗಣೆಗೆ ಆರೋಪಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿ ಕೋರ್ಟ್‌ ಆರೋಪಿಗಳಿಗೆ ಮೂರು ವರ್ಷ ಶಿಕ್ಷೆ ವಿಧಿಸಿದೆ.

ಪ್ರಕರಣ ಸಂಬಂಧ ಒಟ್ಟು ನಾಲ್ವರಿಗೆ ತೀರ್ಥಹಳ್ಳಿಯ ಒಂದನೇ ಹೆಚ್ಚುವರಿ ನ್ಯಾಯಾಲಯ ಮೂರು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹ 10,000 ದಂಡ ವಿಧಿಸಿ ಆದೇಶ ಮಾಡಿದೆ.
ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಸಮೀಪದ ಮಕ್ಕಿಬೈಲು ಗ್ರಾಮದ ಪ್ರಕಾಶ ಗೌಡ , ಹರೀಶ ಗೌಡ , ಎಸ್.ಅಂಬರೀಷ ಹಾಗೂ ಸಿಂಗನಬಿದಿರೆ ಸಮೀಪದ ಶೆಡ್ಗಾರು ಗ್ರಾಮದ ದಯಾನಂದ ಗೌಡ ಶಿಕ್ಷೆಗೊಳಗಾದವರು ಎಂದು ತಿಳಿದು ಬಂದಿದೆ.

Tirthahalli Court 2018ರ ಆಗಸ್ಟ್ 2ರಂದು ಸಕ್ರೆಬೈಲು ವನ್ಯಜೀವಿ ವಲಯದ ಅರಣ್ಯಾಧಿಕಾರಿಗಳು ಶೆಡ್ಗಾರು ರಸ್ತೆಯಲ್ಲಿ ಬರುತ್ತಿದ್ದ ಕಾರೊಂದನ್ನು ತಡೆದು ಪರಿಶೀಲನೆ ನಡೆಸಿದಾಗ, ಅದರಲ್ಲಿ ಬೇಟೆ ಪತ್ತೆಯಾಗಿತ್ತು. ಅದರಲ್ಲಿದ್ದ ಚೀಲವೊಂದರಲ್ಲಿ 15 ಕೆ.ಜಿ. ಜಿಂಕೆ ಮಾಂಸ, ಕತ್ತಿ ಹಾಗೂ ಚೂರಿ ಪತ್ತೆಯಾಗಿತ್ತು.
ಈ ಸಂಬಂಧ ಪ್ರಕರಣ ದಾಖಲಿಸಿದ್ದ ಅರಣ್ಯ ಇಲಾಖೆ ಸಿಬ್ಬಂದಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ಮುಗಿದು ಕೋರ್ಟ್‌ ಆರೋಪಿಗೆ ಮೂರು ವರ್ಷ ಶಿಕ್ಷೆ ವಿಧಿಸಿದೆ.

Shivamogga Police ಸೆ.10 ರೊಳಗೆ ವಾಹನಗಳ ವಿಮೆ ರಿನ್ಯೂವಲ್ ಪ್ರಕ್ರಿಯೆ ಪೂರೈಸಲು ಮಾಲೀಕರಿಗೆ ಪೊಲೀಸ್ ಇಲಾಖೆ ಮನವಿ

0

Shivamogga Police ಸೆಪ್ಟೆಂಬರ್‌ 10 ರ ಒಳಗಾಗಿ ಎಲ್ಲಾ ವಾಹನಗಳ ಸವಾರರು ತಮ್ಮ ವೆಹಿಕಲ್‌ಗಳ ಇನ್ಸುರೆನ್ಸ್‌ನ್ನ ರಿನಿವಲ್‌ ಮಾಡಿಕೊಳ್ಳಬೇಕು ಎಂದು ಎಸ್‌ಪಿ ಮಿಥುನ್‌ ಕುಮಾರ್‌ ತಿಳಿಸಿದ್ದಾರೆ. ಆನಂತರ ಶಿವಮೊಗ್ಗದಲ್ಲಿ ಇನ್ಸುರೆನ್ಸ್‌ ಇಲ್ಲದ ವಾಹನಗಳಿಗೆ ದಂಡ ವಿಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕಳೆದ 2-3 ವರ್ಷಗಳಲ್ಲಿ ಸಂಭವಿಸಿದ ಅಪಘಾತ ಪ್ರಕರಣಗಳಲ್ಲಿ ಹಲವು ವಾಹನಗಳಿಗೆ ಇನ್ಸುರೆನ್ಸ್‌ ಇಲ್ಲದೇ ಇರುವ ವಿಚಾರೆ ಬೆಳಕಿಗೆ ಬಂದಿದೆ. ಇದೇ ಕಾರಣದಿಂದ ಅಪಘಾತದಲ್ಲಿ ಸಂತ್ರಸ್ತರಾದ ಕುಟುಂಬಸ್ಥರಿಗೆ ಪರಿಹಾರ ಸಿಕ್ಕಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಇದೀಗ ಇನ್ಸುರೆನ್ಸ್‌ ರಿನಿವಲ್‌ ಸಂಬಂಧ ಅಭಿಯಾನ ಆರಂಭಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.

Shivamogga Police ಸದ್ಯ ಈ ವಿಡಿಯೋ ಸಂದೇಶವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹರಿಬಿಡಲಾಗಿದ್ದು, ಎಸ್‌ಪಿ ಮಿಥುನ್‌ ಕುಮಾರ್‌ ವಿಡಿಯೋದಲ್ಲಿ ಇನ್ಸುರೆನ್ಸ್‌ ರಿನಿವಲ್‌ಗೆ ಸೆಪ್ಟೆಂಬರ್‌ 10 ರ ಡೆಡ್‌ಲೈನ್‌ ನೀಡಿದ್ದಾರೆ

Bekkina Kalmatha “ಶ್ರಾವಣ ಚಿಂತನ” ನ ಸಾರ್ಥಕ ಸಂಪನ್ನ

0

Bekkina Kalmatha ಶಿವಮೊಗ್ಗ ನಗರದ ತುಂಗಾ ತೀರದ ಶ್ರೀ ಬೆಕ್ಕಿನಕಲ್ಮಠವು ಮಲೆನಾಡಿನ ಸರ್ವಜನಾಂಗದ ಸೌಹಾರ್ದ ಪೀಠವಾಗಿದೆ. ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಶರಣರ ಆಶಯಗಳಾದ ಕಾಯಕ, ದಾಸೋಹ, ಅನುಭಾವದ ಮೂಲಕ ಜನಮುಖಿ ಕಾರ್ಯಕ್ರಮಗಳನ್ನು ಕಾಲ ಕಾಲಕ್ಕೆ ಯೋಜನಾ ಬದ್ಧವಾಗಿ ಹಮ್ಮಿಕೊಂಡು ಬರುತ್ತಿದೆ.

ಪೂಜ್ಯರು ಕಳೆದ ನಾಲ್ಕುವರೆ ದಶಕಗಳಿಂದ ಆನಂದಪುರ ಮುರುಘರಾಜೇದ್ರ‍್ರ ಮಹಾಸಂಸ್ಥಾನ ಮಠದಲ್ಲಿ ಪ್ರತಿ ಅಮವಾಸೆಯಂದು ಮಾಸಿಕ ಶಿವಾನುಭವ ಗೋಷ್ಠಿಗಳನ್ನು ನಡೆಸುತ್ತಾ ಬರುತ್ತಿದಾರೆ. ಇದುವರೆಗೂ ೫೮೧ ಮಾಸಿಕ ಶಿವಾನುಭವ ಗೋಷ್ಠಿಗಳು ನಿರಂತರವಾಗಿ ನಡೆದಿವೆ. ಶಿವಮೊಗ್ಗ ಬೆಕ್ಕಿನಕಲ್ಮಠದಲ್ಲಿ ಪ್ರತಿ ಹುಣ್ಣಿಮೆಯಂದು ಇದುವರೆಗೂ ೫೩೯ ಮಾಸಿಕ ಶಿವಾನುಭವ ಗೋಷ್ಠಿಗಳು ನಡೆದಿವೆ. ನಾಡಿನ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ, ವಚನ ಸಂಗೀತ, ಪೂಜ್ಯರ ಆಶೀರ್ವಚನ, ದಾಸೋಹ ನಡೆಯುತ್ತದೆ. ಶರಣ ಸಾಹಿತ್ಯ ಸಮ್ಮೇಳನ ಹಾಗೂ ಭಾವೈಕ್ಯ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಸಾಧಕರಿಗೆ ಗುರುಬಸವಶ್ರೀ ಪ್ರಶಸ್ತಿ, ಶರಣ ಸಾಹಿತ್ಯ ಅಧ್ಯಯನದಲ್ಲಿ ತೊಡಗಿಸಿಕೊಂಡ ವಿದ್ವಾಂಸರಿಗೆ ಅಲ್ಲಮಪ್ರಭು ಪ್ರಶಸ್ತಿ, ಅಪ್ರತಿಮ ಸಾಧನೆ ಮಾಡಿದ ಸಾಧಕಿಯರಿಗೆ ಕೆಳದಿರಾಣ ಚನ್ನಮ್ಮ ಪ್ರಶಸ್ತಿ ನೀಡಿ ಗೌರವಿಲಾಗುತ್ತಿದೆ.
ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು. ಡಾ. ಶ್ರೀ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಆಶಯದಂತೆ ಶ್ರಾವಣ ಮಾಸವನ್ನು ಕಳೆದ ೪೫ ವರ್ಷಗಳಿಂದ ಅರ್ಥಪೂರ್ಣ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಪ್ರತಿದಿನ ವಚನ ಸಂಗೀತ, ಉಪನ್ಯಾಸ, ಸಂವಾದ, ಆಶೀರ್ವಚನಗಳ ಮೂಲಕ ಶರಣರ ವೈಚಾರಿಕ ಚಿಂತನೆಗಳನ್ನು ಶಿವಮೊಗ್ಗ ನಗರದ ವಿವಿಧ ಬಡಾವಣೆಗಳ ಮನೆ-ಮನಗಳಿಗೆ ತಲುಪಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಈ ಶ್ರಾವಣ ಚಿಂತನ ನಾಡಿನ ಮಾದರಿ ಕಾರ್ಯಕ್ರಮವಾಗಿ ಜನಮೆಚ್ಚುಗೆ ಗಳಿಸಿದೆ.
Bekkina Kalmatha ಶರಣರ ಮೌಲಿಕ ಚಿಂತನೆ ಉಪನ್ಯಾಸ ಮಾಲಿಕೆ ಮನೆ-ಮನಗಳಲ್ಲಿ ಶ್ರಾವಣ ಚಿಂತನ ಕಾರ್ಯಕ್ರಮ ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಶ್ರಾವಣ ಚಿಂತನ ದಿ:೫ -೮- ೨೦೨೪ ರಂದು ವಿದ್ಯುತ್ ಇಲಾಖೆ ವೀರಶೈವ -ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ ಸಹಯೋಗದಲ್ಲಿ ಶ್ರೀ ಬೆಕ್ಕಿನಕಲ್ಮಠದಲ್ಲಿ ಉದ್ಘಾಟನೆಯಾದ ಶ್ರಾವಣ ಚಿಂತನದ ಅರಿವಿನ ತೇರು ಶಿವಮೊಗ್ಗ ನಗರ ಗ್ರಾಮಾಂತರ ಪ್ರದೇಶದ ಸಂಘಸಂಸ್ಥೆಗಳು ಹಾಗೂ ಭಕ್ತರ ಮನೆಗಳಲ್ಲಿ ಸಂಚರಿಸಿತು. ನಾಡು-ನುಡಿ, ಸಮಾಜಕ್ಕೆ ಅಮೂಲ್ಯ ಸೇವೆ ಸಲ್ಲಿಸಿದ ಮಹನೀಯರ ತ್ಯಾಗ ಅವರ ಕೊಡುಗೆಯನ್ನು ಸ್ಮರಿಸುವ`ಸ್ಮರಣೀಯ ಸಾಧಕರು’ ಮೌಲಿಕ ಚಿಂತನ ಉಪನ್ಯಾಸ ಮಾಲಿಕೆಯ ೩೩ ಚಿಂತನಗಳನ್ನು ಆಯೋಜಿಸಲಾಗಿತ್ತು.ನಾಡಿನ ಖ್ಯಾತ ಸಾಹಿತಿಗಳು,ಪತ್ರಕರ್ತರು, ಉಪನ್ಯಾಸಕರು ಉಪನ್ಯಾಸ ನೀಡಿದರು. ಸುಮಾ ವಿ ಹೆಗಡೆ ಅವರಿಂದ ವಚನ ಸಂಗೀತ ನಡೆಯಿತು. ಎಡ್ವರ್ಡ್ ಪಿಂಟೋ ಅವರ ನಿವಾಸ, ಆರ್ಯ ವೈಶ್ಯ ಮಹಾಜನ ಸಭಾ ಕನ್ನಿಕಾ ಪರಮೇಶ್ವರಿ ದೇವಾಲಯ , ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರ ನಿವಾಸ, ವಿಶ್ವಕರ್ಮ ಸಮಾಜದ ಪಿ.ಸತೀಶ್ , ಡಿಸಿಸಿ ಬ್ಯಾಂಕ್ ನಿರ್ದೇಶಕ ಮಹಾಲಿಂಗಯ್ಯ ಶಾಸ್ತಿç, ಬಿ.ಎಂ. ಲೋಕೇಶಾರಾಧ್ಯ ಅವರ ಮನೆಯಲ್ಲಿ ಶ್ರಾವಣ ಚಿಂತನ ಅತ್ಯಂತ ಶ್ರದ್ದೆ -ಭಕ್ತಿಯಿಂದ ಆಯೋಜಿಸಿದ್ದರು. ಸೃಷ್ಠಿ ಮಹಿಳಾ ಸಮಾಜ, ವಿನೋಬನಗರ ಶಿವಾಲಯ ವೀರಶೈವ ಸೇವಾಸಮಿತಿ, ಜಂಗಮ ಮಹಿಳಾ ಸಮಾಜ, ಸಿದ್ದೇಶ್ವರನಗರ ಶಿವರಾತ್ರಿ ಸೇವಾ ಸಮಿತಿ, ಶಿವಗಂಗಾ ಯೋಗಕೇಂದ್ರ ಕೃಷಿನಗರ ಶಾಖೆ , ಯಲವಟ್ಟಿ ಬೆಕ್ಕಿನಕಲ್ಮಠ, ಕನ್ನಡ ಸಾಯಿತ್ಯ ಪರಿಷತ್, ಕದಳಿ ಮಹಿಳಾ ಸಮಾಜ, ವಿಜಯನಗೆ ಸಿದ್ದಿವಿನಾಯಕ ದೇವಾಲಯ, ,ಕೆಂಜಿಗಾಪುರ ಹಾಗೂ ಗುಡ್ಡದ ಅರಕೆರೆ ವೀರಭದ್ರದೇವಾಲಯದಲ್ಲಿ ಚಿಂತನ ಗೋಷ್ಠಿ ಆಯೋಜಿಸಲಾಗಿತ್ತು
ಸೆಪ್ಟೆಂಬರ್ ೧ ರಂದು ಶಿವಮೊಗ್ಗ ಜಿಲ್ಲಾ ಕೈಗಾರಿಕಾ ಮತ್ತು ತರಬೇತಿ ಕೇಂದ್ರದ ಪದಾಧಿಕಾರಿಗಳ ಸಹಯೋಗದಲ್ಲಿ ಶ್ರಾವಣ ಚಿಂತನ ೨೦೨೪ ಸಂಪನ್ನಗೊಳ್ಳಲಿದೆ.

SN Channabasappa ಗಣೇಶ ಚತುರ್ಥಿ & ಈದ್ ಮಿಲಾದ್ ಹಬ್ಬ ಆಚರಣೆ ಬಗ್ಗೆ ಶಾಂತಿ ಸಮಿತಿ ಸಭೆಯಲ್ಲಿ ಶಾಸಕ ಚೆನ್ನಿ ಭಾಗಿ

0

SN Channabasappa ಮುಂಬರಲಿರುವ ‘ಶ್ರೀ ಗಣೇಶ ಚತುರ್ಥಿ’ ಹಾಗೂ ‘ಈದ್ ಮಿಲಾದ್’ ಹಬ್ಬಗಳ ಅಂಗವಾಗಿ ಇಂದು ಡಿ ಆರ್ ಪೊಲೀಸ್ ಸಭಾಂಗಣದಲ್ಲಿ ಇಂದು ನಡೆದ ಶಾಂತಿ ಸಭೆಯಲ್ಲಿ ಶಿವಮೊಗ್ಗ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಭಾಗವಹಿಸಿ, ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸುವ ನಿಟ್ಟಿನಲ್ಲಿ ಅನೇಕ ವಿಷಯಗಳ ಕುರಿತು ಚರ್ಚಿಸಿದರು.

SN Channabasappa ಈ ಸಂದರ್ಭದಲ್ಲಿ ಸಂಘ ಪರಿವಾರದ ಪ್ರಮುಖರು, ಮಾನ್ಯ ಜಿಲ್ಲಾ ರಕ್ಷಣಾಧಿಕಾರಿಗಳಾದ ಜಿ.ಕೆ ಮಿಥುನ್ ಕುಮಾರ್, ಹೆಚ್ಚುವರಿ SP ಕರಿಯಪ್ಪ, ಪೊಲೀಸ್ ಉಪ ಅಧೀಕ್ಷಕರಾದ ಸುರೇಶ್ ಮತ್ತು ಬಾಬು ಅಂಜನಪ್ಪ ಸೇರಿದಂತೆ ಹಿಂದೂ ಮತ್ತು ಮುಸಲ್ಮಾನ್ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.

Gurudutt Hegde ಎಲ್ಲಾ ಅರ್ಹ ಮಕ್ಕಳಿಗೆ ಲಸಿಕೆಯನ್ನ ಕಾಲಕ್ಕೆ ಸರಿಯಾಗಿ ನೀಡಬೇಕು- ಗುರುದತ್ತ ಹೆಗಡೆ

0

Gurudutt Hegde ಲಸಿಕಾಕರಣ ಗುರಿ ಸಾಧನೆ-ಆರ್‌ಬಿಎಸ್‌ಕೆ ಅನುಸರಣೆ ಕೈಗೊಳ್ಳಲು ಸೂಚನೆ : ಗುರುದತ್ತ ಹೆಗಡೆ
ಶಿವಮೊಗ್ಗ, ಆ.30( ಕರ್ನಾಟಕ ವಾರ್ತೆ)
ಎಲ್ಲ ಅರ್ಹ ಮಕ್ಕಳಿಗೆ ಮೀಸಲ್ಸ್ ರುಬೆಲ್ಲಾ ಮತ್ತು ಇತರೆ ಲಸಿಕೆಗಳನ್ನು ಕಾಲ ಕಾಲಕ್ಕೆ ನೀಡಬೇಕು. ಲಸಿಕಾ ವಂಚಿತ ಹಾಗೂ ಬಿಟ್ಟುಹೋದ ಮಕ್ಕಳನ್ನು ತಾಲ್ಲೂಕುಗಳ ಹಂತದಲ್ಲೇ ಗುರುತಿಸಿ, ಪಟ್ಟಿ ಮಾಡಿ ಲಸಿಕೆ ನೀಡುವ ಮೂಲಕ ನಿಗದಿತ ಗುರಿಯನ್ನು ಸಾಧಿಸಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಜಿಲ್ಲಾ ಆರೋಗ್ಯ ಸಂಘ ಹಾಗೂ ವಿವಿಧ ಆರೋಗ್ಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಮೀಸಲ್ಸ್, ರುಬೆಲ್ಲಾ ಮತ್ತು ಇತರೆ ಲಸಿಕೆಗಳನ್ನು ಸರಿಯಾದ ವೇಳೆಗೆ ನೀಡದಿದ್ದರೆ ರೋಗ ನಿರ್ಮೂಲನೆ ನಿಗದಿತ ಸಮಯದೊಳಗೆ ಸಾಧ್ಯವಾಗುವುದಿಲ್ಲ. ಆದ್ದರಿಂದ ತಾಲ್ಲೂಕು ವೈದ್ಯಾಧಿಕಾರಿಗಳು ಸೇರಿದಂತೆ ಎಲ್ಲ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸೂಚನೆ ನೀಡಿದರು
ಡಬ್ಲುö್ಯಹೆಚ್‌ಓ ಕನ್ಸಲ್ಟೆಂಟ್ ಡಾ.ಹರ್ಷಿತ್ ಹೆಚ್, ಜಿ ಮಾತನಾಡಿ, ಮೀಸಲ್ಸ್ ರುಬೆಲ್ಲಾ ಲಸಿಕೆಯನ್ನು ಶೇ.95 ಹಾಕಬೇಕೆಂದು ಗುರಿಯನ್ನು ನೀಡಲಾಗಿದ್ದು ಜಿಲ್ಲೆಯಲ್ಲಿ ಶೇ. 89 ಲಸಿಕೆ ನೀಡಲಾಗಿದೆ. ಮುಖ್ಯವಾಗಿ ಶಿವಮೊಗ್ಗ ನಗರ ಭಾಗದಲ್ಲಿ ಲಸಿಕೆ ವಂಚಿತರನ್ನು ಹೆಚ್ಚಾಗಿ ಕಾಣಬಹುದು. ಲಸಿಕಾ ವಂಚಿತರು, ಡೋಸ್‌ಗಳ ನಡುವಿನ ವ್ಯತ್ಯಾಸವನ್ನು ಗುರುತಿಸಿ ಸರಿಪಡಿಸಲು ಕ್ರಮ ಕೈಗೊಳ್ಳಬೇಕು. ಹಾಗೂ ಶೇ.80 ಜ್ವರ ಮತ್ತು ದದ್ದು ಪ್ರಕರಣಗಳನ್ನು ಮೀಸಲ್ಸ್ ರುಬೆಲ್ಲಾ ಪರೀಕ್ಷೆಗಾಗಿ 5 ದಿನಗಳ ಒಳಗೆ ಮಾದರಿಯನ್ನು ವೈರಾಲಜಿಗೆ ಕಳುಹಿಸಕೊಡಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಲಸಿಕಾಕರಣ ನಿಗದಿತ ಗುರಿಗಿಂತ ಶೇ.6 ಕೊರತೆಯಾಗಿದ್ದು, ಇದನ್ನು ಸರಿಪಡಿಸಲು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು. ಖಾಸಗಿ ಆಸ್ಪತ್ರೆ/ನರ್ಸಿಂಗ್ ಹೋಂ ಗಳಲ್ಲಿ ಎಂಆರ್ ಲಸಿಕೆಗಳ ಕೊರತೆಯಿಂದ ನೀಡಿಲ್ಲವೆಂದು ಹೇಳಲಾಗುತ್ತಿದ್ದು, ಖಾಸಗಿ ಆಸ್ಪತ್ರೆಗಳು ಸರ್ಕಾರಿ ಆಸ್ಪತ್ರೆಯಿಂದ ಉಚಿತವಾಗಿ ಲಸಿಕೆ ಪಡೆಯಬಹುದು. ತಾಲ್ಲೂಕುಗಳ ಹಂತದಲ್ಲೇ ಖಾಸಗಿ ಆಸ್ಪತ್ರೆಗಳೊಂದಿಗೆ ಸಭೆ ನಡೆಸಿ ಈ ವ್ಯತ್ಯಾಸವನ್ನು ಸರಿಪಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಖಾಸಗಿ ನರ್ಸಿಂಗ್ ಹೋಂ ಗಳಿಗೆ ನೋಟಿಸ್ ಜಾರಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ ಅವರು ತಾಲ್ಲೂಕು ವೈದ್ಯಾಧಿಕಾರಿಗಳು ಈ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕೆಂದರು.
ಅಂಗನವಾಡಿಗಳಲ್ಲಿ ಮತ್ತು ಶಾಲೆಗಳಲ್ಲಿ 1 ರಿಂದ 10 ವರ್ಷದೊಳಗಿನ ಮಕ್ಕಳಿಗೆ ನಿಗದಿಪಡಿಸಲಾದ ಲಸಿಕೆಗಳನ್ನು ಹಾಕಲಾಗಿದೆಯೇ ಎಂದು ಪರೀಕ್ಷಿಸಿ ಆರೋಗ್ಯ ಇಲಾಖೆಗೆ ವರದಿ ನೀಡಬೇಕು. ಹಾಗೂ ಲಸಿಕಾಕರಣದ ಕುರಿತು ಸ್ಥಳೀಯರಿಂದ ಅರಿವು ಮತ್ತು ಎಲ್ಲೆಡೆ ಜಾಗೃತಿ ಮೂಡಿಸುವ ಕೆಲಸ ಇನ್ನೂ ಪರಿಣಾಮಕಾರಿ ಆಗಬೇಕು. ಪ್ರಸ್ತುತ ಹೆಚ್‌ಎಂಐಎಸ್ ಅಂತಹ ಆನ್‌ಲೈನ್ ಪೋರ್ಟಲ್ ಮೂಲಕ ಲಸಿಕಾವಂಚಿತ ಮಕ್ಕಳ ವಿವರ ಸುಲಭವಾಗಿ ಲಭ್ಯವಿದ್ದು, ಅನುಸರಣೆ ಮೂಲಕ ಆ ಮಕ್ಕಳಿಗೆ ಲಸಿಕೆ ನೀಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
Gurudutt Hegde ಹಾಗೂ ಮೀಸಲ್ಸ್ ರುಬೆಲ್ಲಾ ಪ್ರಕರಣ ಪತ್ತೆ ಹಚ್ಚಲು ಎಲ್ಲ ರೀತಿಯ ಜ್ವರ ಮತ್ತು ದದ್ದು ಪ್ರಕರಣಗಳಲ್ಲಿ ಸ್ಯಾಂಪಲ್‌ನ್ನು ವೈರಾಲಜಿಗೆ 5 ದಿನಗಳ ಒಳಗಾಗಿ ಕಳುಹಿಸಿಕೊಡಬೇಕೆಂದು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಶೇ.64 ಹೆರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ, ಶೇ 36 ಖಾಸಗಿ ಆಸ್ಪತ್ರೆಗಳಲ್ಲಿ ಆಗುತ್ತಿದೆ. ಶೇ.47 ಸಿಸೇರಿಯನ್ ಹೆರಿಗೆಗಳು ಆಗುತ್ತಿದ್ದು ಜನನದಲ್ಲಿ 958 ಲಿಂಗಾನುಪಾತವಿದೆ. ಕಳೆದ ವರ್ಷಕ್ಕೆ ಹೋಲಿಸಿದಿದರೆ ಸಿಸೇರಿಯನ್ ಪ್ರಮಾಣ ಕಡಿಮೆ ಆಗಿದೆ. ಹೆರಿಗೆ ಮಾಡಿಸಲು ಎಲ್ಲ ಅನುಕೂಲಗಳನ್ನು ಹೊಂದಿರುವ ಪಿಹೆಚ್‌ಸಿ ಮತ್ತು ಸಿಹೆಚ್‌ಸಿಗಳಲ್ಲಿ ಹೆಚ್ಚಿನ ಹೆರಿಗೆ ಮಾಡಿಸಲು ಕ್ರಮ ವಹಿಸಬೇಕು. ಹಾಗೂ ನಿಯಮಿತವಾಗಿ ಗರ್ಭಿಣಿ ದಾಖಲಾತಿಯನ್ನು, ತಾಯಿ ಕಾರ್ಡ್ ಇತರೆ ವ್ಯವಸ್ಥೆಯನ್ನು ಆಶಾ, ಅಂಗನವಾಡಿ ಸೇರಿದಂತೆ ಸಂಬAಧಿಸಿದ ಅಧಿಕಾರಿಗಳು ನಿಯಮಿತವಾಗಿ ಪರಿಶೀಲಿಸಬೇಕು. ಹಾಗೂ ಗರ್ಭಪಾತಕ್ಕೆ ಇರುವ ಕಾರಣಗಳನ್ನು ತಿಳಿದು ಗರ್ಭಪಾತ ಪ್ರಮಾಣವನ್ನು ತಗ್ಗಿಸಲು ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.
ಆರ್‌ಬಿಎಸ್‌ಕೆ ಕಾರ್ಯಕ್ರಮದಡಿ ಅಂಗನವಾಡಿ ಮತ್ತು ಶಾಲಾ ಮಕ್ಕಳ ಆರೋಗ್ಯ ತಪಾಸಣೆ ಶೇ.99 ಆಗಿದೆ. ಆದರೆ ತಪಾಸಣೆ ವೇಳೆ ಪಟ್ಟಿ ಮಾಡಲಾದ ಮಕ್ಕಳಿಗೆ ಅಗತ್ಯವಾದ ಆಪ್ತಸಮಾಲೋಚನೆ, ಚಿಕಿತ್ಸೆ, ಶಸ್ತçಚಿಕಿತ್ಸೆ ಇತರೆ ಉಲ್ಲೇಖಿಸಲಾದ ಚಿಕಿತ್ಸೆಗಳನ್ನು ನೀಡಲಾಗುತ್ತಿದೆಯೇ ಎಂದು ಆರ್ ಸಿಹೆಚ್‌ಓ ಅನುಸರಣೆ ಕೈಗೊಂಡು ಪಟ್ಟಿ ಮಾಡಲಾದ ಎಲ್ಲ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಬೇಕೆಂದು ತಿಳಿಸಿದರು.
ನವಜಾತ ಶಿಶು ಮರಣ ಪ್ರಮಾಣವನ್ನು ಪ್ರತಿ ತಿಂಗಳು ಕಟ್ಟುನಿಟ್ಟಾಗಿ ಪರಿಶೀಲಿಸಿ ಸೂಕ್ತ ಕ್ರಮಗಳನ್ನು ಕೈಗೊಂಡು ಮರಣ ಪ್ರಮಾಣವನ್ನು ತಗ್ಗಿಸಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ನಿಯಮಿತವಾಗಿ ಕೋಟ್ಪಾ ಕಾಯ್ದೆಯಡಿ ತಂಬಾಕು ದಾಳಿ ಹಾಗೂ ತಂಬಾಕು ಮುಕ್ತ ಶಾಲೆಯನ್ನಾಗಿ ಘೋಷಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳು ನಡೆಯುತ್ತಿದೆ. ಗೋಪಾಳ ಮತ್ತು ತೀರ್ಥಹಳ್ಳಿ ಎರಡು ಕಡೆ ಅನಧಿಕೃತ ಹುಕ್ಕಾಬಾರ್ ಇದ್ದು ಅದನ್ನು ಮುಚ್ಚಿಸಲು ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ತಾಯಿ ಮರಣ ಆಡಿಟ್ ಮಾಡಿದ ಜಿಲ್ಲಾಧಿಕಾರಿಗಳು ವೈದ್ಯಕೀಯ ನೆರವು ಮತ್ತು ವೈದ್ಯರ ನಿರ್ಲಕ್ಷö್ಯದಿಂದ ಯಾವುದೇ ತಾಯಿ ಮರಣ ಸಂಭವಿಸದAತೆ ಎಲ್ಲ ಆಸ್ಪತ್ರೆಗಳಲ್ಲಿ ಎಚ್ಚರಿಕೆ ವಹಿಸಿ ಸೂಕ್ತ ಕ್ರಮಗಳನ್ನು ಹಾಗೂ ತಾಯಿ ಮರಣ ಪ್ರಮಾಣ ತಗ್ಗಿಸಲು ಕ್ರಮ ಕೈಗೊಳ್ಳಬೇಕೆಂದು ಸೂಚನೆಗಳನ್ನು ನೀಡಿದರು.
ಜಿಲ್ಲಾ ಕೇಂದ್ರ ಸೇರಿದಂತೆ ತಾಲ್ಲೂಕುಗಳಲ್ಲಿನ ಸರ್ಕಾರಿ ಆಸ್ಪತ್ರೆಯ ಬಯೋ ಮೆಡಿಕಲ್ ತ್ಯಾಜ್ಯ ನಿರ್ವಹಿಸುತ್ತಿರುವ ಸುಶೃತ ಸಂಸ್ಥೆಗೆ ಹೊಸ ನಿಯಮದಿಂದಾಗಿ ಯಾವುದೇ ಆರ್ಥಿಕ ಹೊರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲಾ ಅಂಧತ್ವ ನಿವಾರಣೆ, ಕುಷ್ಟರೋಗ ಕಾರ್ಯಕ್ರಮ ಸೇರಿದಂತೆ ರಾಷ್ಟಿçÃಯ ಆರೋಗ್ಯ ಅಭಿಯಾನದ ಪ್ರಗತಿ ಪರಿಶೀಲನೆ ನಡೆಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಎನ್.ಹೇಮಂತ್, ಡಿಹೆಚ್‌ಓ ಡಾ.ನಟರಾಜ್, ಸಿಮ್ಸ್ ನಿರ್ದೇಶಕ ಡಾ.ವಿರೂಪಾಕ್ಷಪ್ಪ, ಮೆಗ್ಗಾನ್ ಬೋಧನಾ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ತಿಮ್ಮಪ್ಪ, ಆರ್‌ಸಿಹೆಚ್‌ಓ ಡಾ.ನಾಗರಾಜ ನಾಯ್ಕ್, ಡಾ.ಗುಡುದಪ್ಪ, ಡಾ.ಕಿರಣ್ ಸೇರಿದಂತೆ ವಿವಿಧ ಕಾರ್ಯಕ್ರಮ ಅನುಷ್ಟಾನ ಅಧಿಕಾರಿಗಳು, ತಾಲ್ಲೂಕುಗಳ ಟಿಹೆಚ್‌ಓ ಗಳು, ಆರ್‌ಬಿಎಸ್‌ಕೆ ವೈದ್ಯರು ಸೇರಿದಂತೆ ಇತರೆ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು