Yatnal News ಬೆಂಗಳೂರು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಪತ್ನಿ ತಬು ರಾವ್ (ತಬಸ್ಸುಮ್ ದಿನೇಶ್ ರಾವ್) ದಾಖಲಿಸಿದ್ದ ಖಾಸಗಿ ದೂರು ವಿಚಾರಣೆ ನಡೆಸಿದ ಬೆಂಗಳೂರಿನ ಜನ ಪ್ರತಿನಿಧಿಗಳ ನ್ಯಾಯಾಲಯ, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಲು ನಿರ್ದೇಶಿಸಿದೆ ಎಂದು ವರದಿಯಾಗಿದೆ.
ಲೋಕಸಭೆ ಚುನಾವಣೆಯ ಸಂದರ್ಭ ಏಪ್ರಿಲ್ 4ರಂದು ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಯತ್ನಾಳ್ “ಹೆಚ್ಚು ಕಡಿಮೆ ಗುಂಡೂರಾವ್ ಅವರ ಮನೆಯಲ್ಲಿ ಅರ್ಧ ಪಾಕಿಸ್ತಾನ ಇದೆ. ದೇಶದ ವಿರುದ್ದ ಹೇಳಿಕೆ ಕೊಡುವುದು ಗುಂಡೂರಾವ್‌ಗೆ ಚಟ ಆಗಿಬಿಟ್ಟಿದೆ” ಎಂದಿದ್ದರು.
Yatnal News ಯತ್ನಾಳ್ ಹೇಳಿಕೆಯ ವಿರುದ್ದ ತಬು ರಾವ್ ಬೆಂಗಳೂರಿನ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಲ್ಲದೆ, ಪತ್ರಿಕಾ ವರದಿಗಳು ಸೇರಿದಂತೆ ಹಲವು ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಅದನ್ನು ಪರಿಗಣಿಸಿದ ನ್ಯಾಯಾಲಯ ಯತ್ನಾಳ್‌ಗೆ ಸಮನ್ಸ್ ಜಾರಿಗೊಳಿಸಿದೆ ಎಂದು ತಿಳಿದು ಬಂದಿದೆ. ಯತ್ನಾಳ್ ವಿರುದ್ದ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 499 ಮತ್ತು 500 (ಮಾನನಷ್ಟ) ಅಡಿ ಪ್ರಕರಣ ದಾಖಲಿಸಲು ತಬು ರಾವ್ ಕೋರಿದ್ದರು.
Yatnal News ಶಾಸಕ ಯತ್ನಾಳ್ ವಿರುದ್ಧ ಮಾನನಷ್ಷ ದಾವೆ ದಾಖಲಿಸಲು ಅನುಮತಿ
Shimoga News ಸೆ.1 ರಂದು ರಾಜ್ಯಮಟ್ಟದ 34 ನೇ ಸಂಸ್ಕೃತ ಭಾಷಣ ಸ್ಪರ್ಧೆ
Shimoga News ಶಿವಮೊಗ್ಗ ನಗರದ ಸಂಸ್ಕೃತ ಭಾರತೀ ಮತ್ತು ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ವತಿಯಿಂದ ಸಂಸ್ಕೃತೋತ್ಸವದ ಪ್ರಯುಕ್ತ ದಿನಾಂಕ: ೦೧.೦೯.೨೦೨೪ ರ ಭಾನುವಾರ ಬೆಳಿಗ್ಗೆ ೯.೩೦ಕ್ಕೆ ಸಂಸ್ಕೃತ ಮಹಾ ವಿದ್ಯಾಲಯದ ವಿದ್ಯಾರ್ಥಿಗಳಿಗೆ ದೇವತಾತ್ಮ ಹಿಮಾಲಯ-ಭಾರತಾತ್ಮ ಸಂಸ್ಕೃತಮ್ ಎಂಬ ವಿಷಯದ ಬಗ್ಗೆ ಕರ್ನಾಟಕ ರಾಜ್ಯ ಮಟ್ಟದ “೩೪ ನೇ ಸಂಸ್ಕೃತ ಭಾಷಣ ಸ್ಪರ್ಧೆ” ಯನ್ನು ಶಿವಮೊಗ್ಗ ನಗರದ ಸಂಸ್ಕೃತ ಭವನದಲ್ಲಿ ಏರ್ಪಡಿಸಲಾಗಿದೆ.
ರಾಜ್ಯದ ವಿವಿದ ಪಾಠಶಾಲಾಗಳಿಂದ ೨೫ ಜನ ಸ್ಪರ್ಧಿಗಳು ಭಾಗವಹಿಸಿ ಸಂಸ್ಕೃತದಲ್ಲಿ ಭಾಷಣ ಮಾಡಲಿದ್ದಾರೆ. ಆಸಕ್ತ ಸಂಸ್ಕೃತ ವಿದ್ಯಾರ್ಥಿಗಳು, ನಾಗರೀಕರು, ಸಂಸ್ಕೃತ ಉಪನ್ಯಾಸಕರು, ಪಂಡಿತರು ಕಾರ್ಯಕ್ರಮದಲ್ಲಿ ಮುಕ್ತವಾಗಿ ಭಾಗವಹಿಸಬಹುದು ಎಂದು ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ಅಧ್ಯಕ್ಷ ಟಿ.ವಿ.ನರಸಿಂಹಮೂರ್ತಿ ತಿಳಿಸಿದ್ದಾರೆ.
ಸಂಜೆ ೪.೩೦ ಕ್ಕೆ ಸಮಾರೋಪ ಸಮಾರಂಭ:
Shimoga News ಸಂಸ್ಕೃತ ಬಾರತೀ ಹಾಗೂ ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ವತಿಯಿಂದ ಒಂದು ತಿಂಗಳುಕಾಲ ನಡೆಸುತ್ತಿರುವ ಸಂಸ್ಕೃತ ಉತ್ಸವದ ಸಮಾರೋಪ ಸಮಾರಂಭವು ದಿನಾಂಕ ೦೧.೦೯.೨೪ ರ ಸಂಜೆ ೪.೩೦ ಕ್ಕೆ ಭಾನುವಾರ ಶಿವಮೊಗ್ಗ ನಗರದ ಬಿ.ಬಿ.ರಸ್ತೆಯಲ್ಲಿರುವ ಸಂಸ್ಕೃತ ಭವನದಲ್ಲಿ ನಡೆಯಲಿದೆ. ಸಮಾರಂಭದಲ್ಲಿ ಪಿ.ಯು.ಸಿ. ಮತ್ತು ಹತ್ತನೇ ತರಗತಿಯಲ್ಲಿ ಸಂಸ್ಕೃತದಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಆಸಕ್ತ ವಿದ್ಯಾರ್ಥಿಗಳು, ನಾಗರೀಕರು, ಸಂಸ್ಕೃತ ಉಪನ್ಯಾಸಕರು, ಪಂಡಿತರು ಕಾರ್ಯಕ್ರಮದಲ್ಲಿ ಮುಕ್ತವಾಗಿ ಭಾಗವಹಿಸಬಹುದು ಎಂದು ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ಅಧ್ಯಕ್ಷ ಟಿ.ವಿ.ನರಸಿಂಹಮೂರ್ತಿ ತಿಳಿಸಿದ್ದಾರೆ.
Ganja Seize ಕುಂಸಿ ಹೋಬಳಿ ದೊಡ್ಡದಾನವಂದಿಯಲ್ಲಿ ಗಾಂಜಾ ಮಾರಾಟ ಪತ್ತೆ. ಯುವಕನ ಸೆರೆ
Ganja Seize ಶಿವಮೊಗ್ಗ ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡದಾನವಂದಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ವ್ಯಕ್ತಿಯೊಬ್ಬನು ಬೈಕ್ ನಿಲ್ಲಿಸಿಕೊಂಡು ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತಿದ್ದ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ ಶಿವಮೊಗ್ಗ ಸೂಳೆಬೈಲಿನ ಯುವಕನನ್ನು ಬಂಧಿಸಿದ್ದಾರೆ.
ಸೈಯ್ಯದ್ ಸದ್ದಾಂ (೩೩) ಬಂಧಿತ ವ್ಯಕ್ತಿ. ಇವನನ್ನು ದಸ್ತಗಿರಿ ಮಾಡಿ, ಅಂದಾಜು ಮೌಲ್ಯ ೩,೫೦೦ ರೂ ಗಳ ೧೨೦ ಗ್ರಾಂ ತೂಕದ ಒಣ Ganja Seize ಗಾಂಜಾ ಹಾಗೂ ಅಂದಾಜು ಮೌಲ್ಯ ೨೫,೦೦೦ ರೂಗಳ ಕೃತ್ಯಕ್ಕೆ ಬಳಸಿದ ದ್ವಿ ಚಕ್ರ ವಾಹನವನ್ನು ಅಮಾನತ್ತುಪಡಿಸಿಕೊಂಡು, ಕುಂಸಿ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ ೦೧೭೯/೨೦೨೪ ಕಲಂ ೨೦(ಬಿ), ೮(ಸಿ) ಕಾಯ್ದೆ ರೀತ್ಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಸಿಪಿಐ ಹರೀಶ್ ಕೆ ಪಟೇಲ್, ಎಸ್ ಐ ತೊಳಚಾ ನಾಯ್ಕ್ ಹಾಗೂ ಸಿಬ್ಬಂದಿಗಳ ತಂಡ ಸ್ಥಳಕ್ಕೆ ಹೋಗಿ ದಾಳಿ ನಡೆಸಿದೆ.
KH Srinivasa ಜಿಲ್ಲೆಯ ಹಿರಿಯ ರಾಜಕಾರಿಣಿ,ಮಾಜಿಸಚಿವ ಕೆ.ಎಚ್.ಶ್ರೀನಿವಾಸ್ ನಿಧನ
K H Srinivasa ಶಿವಮೊಗ್ಗಹಾಗೂ ಸಾಗರ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವ, ಹಿರಿಯ ರಾಜಕಾರಣಿ ಕೆಎಚ್‌ಶ್ರೀನಿವಾಸ್( KH Srinivas) ನಿಧನರಾಗಿದ್ದಾರೆ. ಸಾಗರ ತಾಲ್ಲೂಕು ಕಾನುಗೋಡು ಗ್ರಾಮದವರಾದ ಶ್ರೀನಿವಾಸ್ ಜನತಾಪರಿವಾರದಲ್ಲಿ( Janata parivar leader) ಗುರುತಿಸಿಕೊಂಡಿದ್ದರು. ಆನಂತರ ಕಾಂಗ್ರೆಸ್‌ನಲ್ಲೂ ಇದ್ದರು. ಮಾಜಿ ಸಿಎಂ ರಾಮಕೃಷ್ಣ ಹೆಗಡೆ ( Rama Krishna Hegde) ಅವರ ಆಪ್ತರಾಗಿದ್ದ ಶ್ರೀನಿವಾಸ್ ಸಾಂಸ್ಕೃತಿಕ ವಲಯದಲ್ಲೂ ಗುರುತಿಸಿಕೊಂಡಿದ್ದರು. ವಕೀಲರಾಗಿ. ಕೃಷಿಕರೂ ಆಗಿದ್ದರು. ಕವನ ಸಂಕಲನಗಳನ್ನೂ ರಚಿಸಿದ್ದ ಅವರು ಸಿನೆಮಾದಲ್ಲೂ ಅಭಿನಯಿಸಿದ್ದರು.ಶ್ರೀನಿವಾಸ್ ಅವರಿಗೆ 86 ವರ್ಷ ವಯಸ್ಸಾಗಿತ್ತು.ಕೆಲ ದಿನಗಳಿಂದ ಅನಾರೋಗ್ಯ ಪೀಡಿತರಾಗಿದ್ದ ಅವರು ಬೆಂಗಳೂರನಲ್ಲಿಯೇ ನೆಲೆಸಿದ್ದರು. ಕೆ ಎಚ್. ಶ್ರೀನಿವಾಸ್ ನಿಧನದ ಬಗ್ಗೆ ಪುತ್ರಿ ವೈಶಾಲಿ ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.
ನನ್ನ ತಂದೆ ಕೆ.ಎಚ್. ಶ್ರೀನಿವಾಸ್ ಅವರು ಇನ್ನಿಲ್ಲ. ಅವರು ಇಂದು ಬೆಳಗ್ಗೆ 11 ಗಂಟೆಗೆ ನಮ್ಮ ನಿವಾಸದಲ್ಲಿ ನಿಧನರಾದರು. ಅಪಾರ ದುಃಖದಿಂದ ನನಗಾದ ದೊಡ್ಡ ನಷ್ಟದ ಬಗ್ಗೆ ನಾನು ನಿಮಗೆ ತಿಳಿಸುತ್ತೇನೆ ಎಂದು ಶ್ರೀನಿವಾಸ್ ಪುತ್ರಿ ವೈಶಾಲಿ ದುಃಖ ಹಂಚಿಕೊಂಡಿದ್ದಾರೆ.
K H Srinivasa ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಕಾನುಗೋಡು ಗ್ರಾಮದಲ್ಲಿ1938ರ ಫೆಬ್ರವರಿ 5ರಂದು ಜನಿಸಿದರು ಕೆ.ಎಚ್.ಶ್ರೀನಿವಾಸ್. ಸಾಗರ, ಶಿವಮೊಗ್ಗದಲ್ಲಿ ಶಿಕ್ಷಣ ಪಡೆದಿದ್ದರು.ಕೃಷಿಕರಾಗಿ, ವಕೀಲರಾಗಿದ್ದುಕೊಂಡೇ ರಾಜಕೀಯ ಪ್ರವೇಶಿಸಿದ್ದರು. ಕೆಲವು ದಿನಗಳ ಕಾಲ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಹೈಕೋರ್ಟ್‌ನಲ್ಲಿ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ವಕೀಲರಾಗಿಯೂ ಸೇವೆ ಸಲ್ಲಿಸಿದ್ದರು. ಹಲವಾರು ಸಾಮಾಜಿಕ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಕಾನೂನು ಸಲಹೆಗಾರರಾಗಿ ನೇಮಕಗೊಂಡು ಸಾಮಾಜಿಕವಾಗಿ ಗುರುತಿಸಿಕೊಂಡರು ಶ್ರೀನಿವಾಸ್. ಸಾಗರ ತಾಲೂಕು ಮತ್ತು ಸುತ್ತಮುತ್ತ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದಲ್ಲಿ ಅಧ್ಯಕ್ಷರಾಗಿ ಹಾಗೂ ಶಿವಮೊಗ್ಗದ ಸಹ್ಯಾದ್ರಿ ಶಿಕ್ಷಣ ಟ್ರಸ್ಟ್‌ನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಅವರು 6, 7 ಮತ್ತು 8 ನೇ ವಿಧಾನಸಭೆಯ ಸದಸ್ಯರಾಗಿದ್ದರು. ಸಾಗರ ಹಾಗೂ ಶಿವಮೊಗ್ಗ ಕ್ಷೇತ್ರಗಳಿಂದ ಗೆದ್ದಿದ್ದರು.1978-80 ರ ಅವಧಿಯಲ್ಲಿ ಅವರು ಮಾಹಿತಿ, ಯುವಜನ ಸೇವೆಗಳು ಮತ್ತು ಇಂಧನ, ಯೋಜನೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದರು. ಅವರು ಇಂಧನ ಮತ್ತು ಮಾಹಿತಿ ಇಲಾಖೆಯ ಕ್ಯಾಬಿನೆಟ್ ಸಚಿವರಾಗಿಯೂ ಸೇವೆ ಸಲ್ಲಿಸಿದರು. 1987-88ರಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರಾಗಿದ್ದರು. ಆನಂತರ ವಿಧಾನಪರಿಷತ್‌ಗೂ ಆಯ್ಕೆಯಾಗಿ ಪ್ರತಿಪಕ್ಷ ನಾಯಕರಾಗಿ ಕೆಲಸ ಮಾಡಿದ್ದರು. ವಾಗ್ಮಿಯಾಗಿ ಗುರುತಿಸಿಕೊಂಡಿದ್ದರು. ರಾಜಕೀಯದಲ್ಲಿ ಈ ರೀತಿ ವೈವಿಧ್ಯಮಯ ವ್ಯಕ್ತಿತ್ವ ಇರುವವರು ಕಡಿಮೆ.
ಕನ್ನಡ ಬರಹಗಾರರಾಗಿದ್ದ ಅವರು ಕಾನುಗೋಡು ಮನೆ ಹಾಗೂ ಒಳಸೊನ್ನೆ ಹೊರಸೊನ್ನೆ ಕವನ ಸಂಕಲನವನ್ನು ಪ್ರಕಟಿಸಿದರು ಮತ್ತು ಜೀನ್ ಪಾಲ್ ಸಾರ್ತ್ರ ಅವರ ನಾಟಕವನ್ನು ಕನ್ನಡ ಭಾಷೆಗೆ ಅನುವಾದಿಸಿದರು. 1972 ರಲ್ಲಿ ಅವರು ರೋಟರಿ ಕ್ಲಬ್ ಆಫ್ ಇಂಡಿಯಾದ ಪ್ರಾಯೋಜಕತ್ವದಲ್ಲಿ ಅಮೆರಿಕದ ಮ್ಯಾಂಚೆಸ್ಟರ್‌ನಲ್ಲಿ ಅಧ್ಯಯನ ಪ್ರವಾಸವನ್ನು ಕೈಗೊಂಡರು. ಅವರು 1978-80ರ ಅವಧಿಯಲ್ಲಿ ರಾಜ್ಯ ಸರ್ಕಾರದ ಪರವಾಗಿ ಯುರೋಪ್, ಜಪಾನ್, ಮಲೇಷಿಯಾ, ಸಿಂಗಾಪುರದಲ್ಲಿ ಪ್ರವಾಸ ಮಾಡಿದ್ದು ಅವರ ವಿಶೇಷ. ಇತ್ತೀಚಿನ ವರ್ಷಗಳಲ್ಲಿ ರಾಜಕೀಯದಿಂದ ದೂರವಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಬೆಂಗಳೂರಿನಲ್ಲಿ ಪತ್ನಿ ಹಾಗೂ ಪುತ್ರನೊಂದಿಗೆ ನೆಲೆಸಿದ್ದರು. ಮೂವರು ಪುತ್ರಿಯರೂ ಶ್ರೀನಿವಾಸ್ ಅವರಿಗೆ ಇದ್ದಾರೆ. ಇವರೂ ಚಿತ್ರದಲ್ಲಿ ಅಭಿನಯಿಸಿದ್ದರೆ, ಅವರ ಪುತ್ರಿ ವೈಶಾಲಿ ಕೂಡ ಅಭಿಯಿಸಿದ್ದರು.
Aayanur Manjunatha ಬಿಎಸ್ ವೈ ಕುಟುಂಬದ ಭೂ ಹಗರಣಗಳನ್ನೂ ತನಿಖೆಗೆ ಒಳಪಡಿಸಬೇಕು- ಆಯನೂರು ಮಂಜುನಾಥ್
Aayanur Manjunatha ಶಿವಮೊಗ್ಗದ ಬಿ.ಎಸ್.ವೈ.ಕುಟುಂಬದ ಭೂ ಹಗರಣಗಳನ್ನೂ ತನಿಖೆಗಳಿಗೆ ಒಳಪಡಿಸಬೇಕು ಎಂದು ಕೆಪಿಸಿಸಿ ವಕ್ತಾರ, ಮಾಜಿ ಸಂಸದ ಆಯನೂರು ಮಂಜುನಾಥ್ ಆಗ್ರಹಿಸಿದರು.
ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿ.ವೈ.ವಿಜಯೇಂದ್ರ, ಬಿ.ವೈ.ರಾಘವೇಂದ್ರ ಮತ್ತು ಬಿಜೆಪಿಯ ಮುಖಂಡರು ಮೂಡಾ ಹಗರಣದ ಬಗ್ಗೆ ಮಾತನಾಡುತ್ತಾರೆ. ಪಾದಯಾತ್ರೆ ಮಾಡುತ್ತಾರೆ. ನೈತಿಕತೆ ಇದ್ದರೆ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎನ್ನುತ್ತಾರೆ. ಆದರೆ, ಇವರೇ ಭೂಗಳ್ಳರಾಗಿದ್ದಾರೆ, ಇವರಿಗೆ ರಾಜೀನಾಮೆ ಕೇಳುವ ಯಾವ ನೈತಿಕತೆ ಇದೆ ಎಂದು ಪ್ರಶ್ನೆ ಮಾಡಿದರು.
ತೀರ್ಥಹಳ್ಳಿ ರಸ್ತೆಗೆ ಹೋಗುವ ನ್ಯೂಮಂಡ್ಲಿ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಯಾರ ಆಸ್ಪತ್ರೆ ಇದೆ. ಸಹ್ಯಾದ್ರಿ ನಾರಾಯಣ ಹೃದಯಾಲಯ ಯಾರ ಒಡೆತನದ್ದು, ಅಲ್ಲಿ ೩೦ ಎಕರೆಗೂ ಹೆಚ್ಚು ಜಮೀನು ಇರುವುದು ಯಾರದ್ದು ಎಂದ ಅವರು, ೩೦ ಎಕರೆ ಜಮೀನು ಇದ್ದರೂ ಕೂಡ ಕೆಐಡಿಬಿಯವರು ಕೇವಲ ೪ ಎಕರೆ ಜಾಗವನ್ನು ಹೇಗೆ ವಶಪಡಿಸಿಕೊಂಡರು, ಕೈಗಾರಿಕಾ ಅಭಿವೃದ್ಧಿಗೆ ೪ ಎಕರೆ ಜಾಗ ಸಾಕೇ? ಹೀಗೆ ವಶಪಡಿಸಿಕೊಂಡ ಜಾಗ, ಏನಾಯಿತು, ಯಾರ ಬೇನಾಮಿ ಹೆಸರಿನಲ್ಲಿತ್ತು. ನಂತರ ಯಾರಿಗೆ ವರ್ಗಾವಣೆಯಾಗಿದೆ ಎಂಬುವುದನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಸಂಸದ ರಾಘವೇಂದ್ರ ಹೇಳಬೇಕು ಎಂದರು.
ಪತ್ರಕರ್ತರ ನಿವೇಶನಕ್ಕೆ ಸಂಬಂಧಿಸಿದಂತೆ ಮೂಡಾ ಹಗರಣದಂತೆ ಶಿವಮೊಗ್ಗದಲ್ಲಿಯೂ ಹಗರಣವಾಗಿದೆ. ಪತ್ರಕರ್ತರಲ್ಲದವರ ಹೆಸರಿಗೆ ನಿವೇಶನ ಪಡೆದುಕೊಂಡು ನಂತರ ಅದನ್ನು ಯಾರೂ ಪಡೆದರು, ಯಾರ ಮನೆಯ ಕೆಲಸಗಾರರಿಗೆ ಈ ನಿವೇಶನಗಳನ್ನು ಹಂಚಲಾಗಿದೆ.ಈ ಕುಟುಂಬಕ್ಕೆ ಕಾರ್ಮಿಕರ ಹೆಸರಿನಲ್ಲಿ ಸೈಟ್ ಪಡೆದು ನಂತರ ಬೇನಾಮಿಯಾಗಿ ಪಡೆಯಬೇಕಿತ್ತೆ ಇಂತಹ ಭ್ರಷ್ಟಚಾರದಲ್ಲಿ ಮುಳುಗಿರುವ ಇವರು ಯಾವ ನೈತಿಕತೆ ಇಟ್ಟುಕೊಂಡಿದ್ದಾರೆ ಎಂದರು.
ಇದಕ್ಕೆಲ್ಲ ಅವರು, ಉತ್ತರ ಹೇಳಬೇಕು. ಸತ ಹೊರಗೆ ಬರುತ್ತದೆ, ಇಲ್ಲದಿದ್ದರೆ ನಾವೇ ದಾಖಲೆ ಸಮೇತ ಹೇಳುತ್ತೇವೆ. ಭೂಮಿ ದಾಹದ ಆಸ್ತಿ ವ್ಯಾಮೋಹದ ಅಧಿಕಾರ ದುರುಪಯೋಗದ ಬಹುದೊಡ್ಡ ಹಗರಣಗಳು ಬಿಜೆಪಿಯ ಮುಖಂಡರ ಮೇಲಿದೆ. ಇವರು ಮೈಸೂರಿಗೆ ಪಾದಯಾತ್ರೆ ಮಾಡುವುದಲ್ಲ, ಶಿವಮೊಗ್ಗಕ್ಕೂ ಪಾದಯಾತ್ರೆ ಮಾಡಬೇಕು. ಕೆಎಡಿಬಿಯನ್ನು ದುರುಪಯೋಗ ಪಡಿಸಿಕೊಂಡ ಬೇನಾಮಿ ಹೆಸರಿನಲ್ಲಿ ಆಸ್ತಿ ಮಾಡಿಕೊಂಡ ಎಲ್ಲವೂ ತನಿಖೆಯಾಗಬೇಕು ಎಂದರು.
ಬಿಜೆಪಿಯ ಪ್ರತಿಭಟನೆಗಳು, ಪಾದಯಾತ್ರೆಗಳು, ನಡೆಯುತ್ತಿರುವುದು, ರೈತರ ಸಮಸ್ಯೆ ಅಲ್ಲ, ಅತಿವೃಷ್ಠಿ, ಅನಾವೃಷ್ಠಿ ಅಲ್ಲ, ಬಡವರ ಬಗ್ಗೆಕಾಳಜಿಯಿಂದನೂ ಅಲ್ಲ, ಕೇವಲ ಕಾಂಗ್ರೆಸ್ ನಾಯಕರಿಗೆ ಮಸಿ ಬಳಿಯುವುದು ಅಷ್ಟೇ ಆಗಿದೆ. ಮೂಡಾ ಹಗರಣವೇ ಇದಕ್ಕೆ ಸಾಕ್ಷಿ, ಅವರದೇ ಸರ್ಕಾರದಲ್ಲಿ ಅವರೇ ಮಂಜೂರು ಮಾಡಿದ ಸೈಟ್‌ನ ಬಗ್ಗೆ ಮಾತನಾಡುತ್ತಾರೆ. ಕಾಂಗ್ರೆಸ್ ಹೆಗಲ ಮೇಲೆ ಬಂದೂಕು ಹಿಡಿಯುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎಂಐಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಪ್ರಮುಖರಾದ ಎಸ್.ಕೆ.ಮರಿಯಪ್ಪ, ಡಾ|| ಶ್ರೀನಿವಾಸ್ ಕರಿಯಣ್ಣ, ಎಸ್.ರವಿಕುಮಾರ್, ವೈ.ಹೆಚ್.ನಾಗರಾಜ್, ಜಿ.ಡಿ.ಮಂಜುನಾಥ್, ಯು. ಶಿವಾನಂದ್, ಶಿವಣ್ಣ, ಧೀರರಾಜ್, ಲಕ್ಷ್ಮಣ್ಣಪ್ಪ, ಎಚ್ ಎಂ.ಮಧು, ಹಿರಣ್ಣಯ್ಯ ಮುಂತಾದವರಿದ್ದರು.
Aayanur Manjunatha ಕಾರ್ಕಳದಲ್ಲಿ ಯುವತಿಯ ಮೇಲೆ ಅತ್ಯಾಚಾರ ನಡೆದ ಘಟನೆಯನ್ನು ಖಂಡಿಸಿ ಶಿವಮೊಗ್ಗದಲ್ಲಿ ಬಿಜೆಪಿ ಮಹಿಳಾ ಮೋರ್ಚಾದವರು ಪ್ರತಿಭಟನೆ ಮಾಡಿರುವುದು ಸ್ವಾಗತಾರ್ಹ. ಅವರಿಗೆ ಅಭಿನಂದನೆಗಳು, ಹಾಗೆಯೇ ಅವರು ಹಾಸನದಲ್ಲಿ ನಡೆದ ಅತ್ಯಾಚಾರದ ಘಟನೆಗಳನ್ನು ಖಂಡಿಸಲಿ, ಹಾಸನದಲ್ಲಿ ಕೇವಲ ಮಹಿಳೆಯರ ಮೇಲೆ ಅಲ್ಲ, ಪುರುಷರ ಮೇಲೂ ಅತ್ಯಾಚಾರವಾಗಿದೆ. ಇದರ ವಿರುದ್ಧವೂ ಧ್ವನಿಯೆತ್ತಲಿ.
-ಆಯನೂರು ಮಂಜುನಾಥ
ಶಿಕಾರಿಪುರ ಬಳಿ ಟೋಲ್‌ಗೇಟ್ ಆಗಿದ್ದು, ಬಿಜೆಪಿ ಅಧಿಕಾರದಲ್ಲಿದ್ದಾಗ, ಬಿಜೆಪಿಯವರು ಆಗಲೇ ಟೋಲ್‌ಗೇಟ್ ಸ್ಥಾಪನೆಗೆ ಟೆಂಡರ್‌ನ್ನು ಕರೆದಿದ್ದರು. ಮತ್ತು ಅದಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರನಿಂದ ಕಮಿಷನ್ ಕೂಡ ಪಡೆದಿದ್ದಾರೆ. ಎಲ್ಲಾ ವ್ಯವಹಾರ ಮಾಡಿ, ಈಗ ಟೋಲ್‌ಗೇಟ್ ಬೇಡ ಎಂದು ಪ್ರತಿಭಟನೆ ಮಾಡುತ್ತಿದ್ದಾರೆ.
SN Channabasappa ಕೈಗಾರಿಕಾ ಪ್ರದೇಶದಲ್ಲಿನ ಬೀದಿದೀಪ & ನೀರು ಸರಬರಾಜು,ನಿರ್ಮಲೀಕರಣಗಳ ಬಗ್ಗೆ ಶಾಸಕ ಚೆನ್ನಿ ಸಭೆ
SN Channabasappa ಕೈಗಾರಿಕಾ ಪ್ರದೇಶದಲ್ಲಿನ ಬೀದಿದೀಪ & ನೀರು ಸರಬರಾಜು,ನಿರ್ಮಲೀಕರಣಗಳ ಬಗ್ಗೆ ಶಾಸಕ ಚೆನ್ನಿ ಸಭೆ ಶಿವಮೊಗ್ಗ ನಗರದ ಸಾಗರ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಕೈಗಾರಿಕಾ ಪ್ರದೇಶದಲ್ಲಿರುವ ಬೀದಿ ದೀಪಗಳ ಸಮಸ್ಯೆ, 24/7 ನೀರು ಸರಬರಾಜಿನ ಸಮಸ್ಯೆ ಹಾಗೂ ಕೈಗಾರಿಕಾ ಪ್ರದೇಶದ ನಿರ್ಮಲೀಕರಣ ಹಾಗೂ ನಿವಾರಣೆಯ ಕುರಿತು ಶಿವಮೊಗ್ಗ ಇಂಡಸ್ಟ್ರಿಯಲ್ ಎಸ್ಟೇಟ್ ಇಂಡಸ್ಟ್ರಿಯಲಿಸ್ಟ್ಸ್
SN Channabasappa ಕೈಗಾರಿಕಾ ಪ್ರದೇಶದಲ್ಲಿನ ಬೀದಿದೀಪ & ನೀರು ಸರಬರಾಜು,ನಿರ್ಮಲೀಕರಣಗಳ ಬಗ್ಗೆ ಶಾಸಕ ಚೆನ್ನಿ ಸಭೆ ಅಸೋಸಿಯೇಷನ್ ನ ಪದಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಶಿವಮೊಗ್ಗ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಸಭೆ ನಡೆಸಿ, ಅನೇಕ ವಿಷಯಗಳ ಕುರಿತು ಚರ್ಚಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸಿದರು.
Bharat Scouts and Guides Shivamogga ಕೊರೊನಾ ಸಮಯದಲ್ಲಿ ಸ್ಕೌಟ್ಸ್ & ಗೈಡ್ಸ್ ಸೇವೆ ಅವಿಸ್ಮರಣೀಯ- ಎಸ್.ಆರ್.ಮಂಜುನಾಥ್
Bharat Scouts and Guides Shivamogga ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ, ಶಿವಮೊಗ್ಗ.
ಕರೋನಾ ಸಮಯದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸೇವೆ ಅವಿಸ್ಮರಣೀಯ”-ಮಂಜುನಾಥ್.ಎಸ್.ಆರ್
ಜಿಲ್ಲಾ ಉಪನಿರ್ದೇಶಕರು. ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ನೂತನ ಜಿಲ್ಲಾ ಉಪನಿರ್ದೇಶಕರಾಗಿ ಕರ್ತವ್ಯಕ್ಕೆ ಹಾಜರಾದ ಮೊದಲದಿನದ ಮೊದಲ ಸ್ಕೌಟ್ ಗೈಡ್ ಕಾರ್ಯಕ್ರಮವಾಗಿ ೭ ದಿನಗಳ ಜಿಲ್ಲಾ ಮಟ್ಟದ ಮೂಲತರಬೇತಿ ಶಿಬಿರವನ್ನು ಶಿವಮೊಗ ಸ್ಕೌಟ್ಸ್ಭವನದ ಆವರಣದಲ್ಲಿ ಉದ್ಘಾಟಿಸುತ್ತಾ,
ಸ್ಕೌಟ್ ಗೈಡ್ ಸಂಸ್ಥೆಯು ಮಕ್ಕಳಲ್ಲಿ ಶಿಸ್ತು ಸೇವಾಮನೋಭಾವನೆಯನ್ನು ರೂಢಿಸಲು ಸಹಕಾರಿ ಯಾಗಿದೆ. ಹಾಗೂ ಕರೋನಾ ವಿಷಮ ಕಾಲದಲ್ಲಿ ತುರ್ತು ಸೇವೆಗಳನ್ನು ಸ್ಕೌಟ್ ಗೈಡ್ಸ್ ಸ್ವಯಂ ಸೇವಕರು ನಿರ್ವಹಿಸಿದರು. ಇಂಥಹ ಅಮೂಲ್ಯ ಸೇವೆಗಳು ಸ್ವಯಂಸೇವಕರಿAದ ಜಿಲ್ಲಾದ್ಯಂತ ಅಗತ್ಯ ವಸ್ತುಗಳನ್ನು, ಮಾಸ್ಕ್ ಗಳನ್ನು, ಆಹಾರ, ಔಷಧಗಳನ್ನು ತಲುಪಿಸಿದ್ದಾರೆ. ಎಂದು ಅಭಿಮತ ವ್ಯಕ್ತಪಡಿಸಿದರು.
ಶಾಲೆಯ ಸಂಚಿತ ನಿಧಿಯ ಬಳಕೆ ಮಾಡಿಕೊಂಡು ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳನ್ನು ನಡೆಸಲು ಅವಕಾಶÀವಿರುವುದನ್ನು ತಿಳಿಸಿದರು. ತಮ್ಮ ಶಾಲೆಯ ಚಟುವಟಿಕೆಗಳ ವರದಿ ಭಾವಚಿತ್ರಗಳನ್ನು ಇಲಾಖೆಯೊಂದಿಗೆ ಹಂಚಿಕೊಳ್ಳಲು ತಿಳಿಸಿದರು.
ತಾಲ್ಲೂಕಿ ಕ್ಷೆತ್ರಶಿಕ್ಷಣಾಧಿಕಾರಿಗಳಾದ ಶ್ರೀ. ರಮೇಶ್ ರವರು ಶಿಕ್ಷಕರು ತರಬೇತಿಯಲ್ಲಿ ಪೂರ್ಣ ಪ್ರಮಾಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕಲಿತು ತಮ್ಮ ತಮ್ಮ ಶಾಲೆಯ ವ್ಯಾಪ್ತಿಯಲ್ಲಿ ಶಿಸ್ತು ಅದರ್ಶ ಗುಣಗಳನ್ನು ಅನ್ವಯ ಮಾಡಿಕೊಂಡು ಶಾಲೆಯ ವಾತಾವರಣವನ್ನು ಕ್ರಿಯಾಶೀಲವಾಗಿಡುವಂತೆ ತಿಳಿಸಿದರು.
Bharat Scouts and Guides Shivamogga ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳಾದ ಶ್ರೀ ಪ್ರಕಾಶ್ ರವರು ಮಾತನಾಡುತ್ತಾ ಮಕ್ಕಳನ್ನು ಇಂದು ಮೊಬೈಲ್ ಗೀಳಿನಿಂದ ಹೊರತರುವುದು ಅತೀ ಅವಶ್ಯಕವಾಗಿದೆ ಇದಕ್ಕೆ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳು ಅತ್ಯಂತ ಪೂರಕವಾಗಿವೆಎಂದು ತಿಳೀಸಿದರು. ಹಾಗೂ ತಮ್ಮ ಶಾಲೆಗಳಲ್ಲಿ ಕಡ್ಡಾಯವಾಗಿ ಸ್ಕೌಟ್ಸ್ ಮತ್ತು ಗೈಡ್ಸ್ ದಳಗಳನ್ನು ತೆರೆಯಲು ತಿಳಿಸಿದರು. ತಾವೂ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯೊAದಿಗೆ ಬೆಳೆದು ಮಕ್ಕಳನ್ನೂ ಬೆಳೆಸಿ ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಕರೆನೀಡಿದರು. ಶ್ರೀ ಚಂದ್ರ ಶೇಖರ್ ಪ್ರೌಢಶಾಲಾ ಮುಖ್ಯ ಶಿಕ್ಷಕರು ಚಿಕ್ಕಮಗಳೂರು ಉಪಸ್ಥಿತರಿದ್ದರು.
ಜಿಲ್ಲಾ ಮುಖ್ಯ ಆಯುಕ್ತರಾದ ಶ್ರೀ ಕೆ.ಪಿ. ಬಿಂದುಕುಮಾರ್ ಅವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ನಮ್ಮ ಶಿವಮೊಗ್ಗ ಜಿಲ್ಲಾ ತರಬೇತಿ ತಂಡವು ಅತ್ಯಂತ ಹಿರಿಯ ಅನುಭವಿ ಸಂಪನ್ಮೂಲ ವ್ಯಕ್ತಿಗಳನ್ನು ಹೊಂದಿದೆ ಎಂದು ಹಷÀðವ್ಯಕ್ತ ಪಡಿಸಿದರು. ಸ್ಕೌಟ್ ಗೈಡ್ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮಕ್ಕಳು ಮಾನಸಿಕವಾಗಿ,ದೈಹಿಕವಾಗಿ, ಸಧೃಢವಾಗಿ ಸಮಾಜಮುಖಿಯಾಗಿ ಬೆಳೆಯುತ್ತಾರೆಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು. ಸ್ಕೌಟ್ಸ್ ಗೈಡ್ ಚಳುವಳಿಯನ್ನು ಮನೆಮನೆಗೂ ತಲುಪಿಸಲು ಜಿಲ್ಲಾ ಶಿಕ್ಷಕ ಶಿಕ್ಷಕಿಯರು ತಮ್ಮನ್ನು ತೊಡಗಿಸಿಕೊಳ್ಳ ಬೇಕೆಂದು ಕರೆ ನೀಡಿದರು.
ತರಬೇತಿಯಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ೧೪೦ ಶಿಕ್ಷಕ/ಶಿಕ್ಷಕಿಯರಯ ಭಾಗವಹಿಸಿದ್ದಾರೆ, ಕಾರ್ಯಕ್ರಮದ ಸ್ವಾಗತವನ್ನು ಅತಿಥಿಗಳಿಗೆ ಸ್ಕಾರ್ಫ್ ಧರಿಸುವ ಮೂಲಕ ಜಿಲ್ಲಾ ರೋವರ್ ಆಯುಕ್ತರು ಕೆ.ರವಿ ಯವರು ಸ್ವಾಗತಿಸಿದರು, ಶಿಬಿರದ ವರದಿ ಹೆಚ್. ಶಿವಶಂಕರ್ ಜಿಲ್ಲಾ ತರಬೇತಿ ಆಯುಕ್ತರು ಸ್ಕೌಟ್, ರವರಿಂದ, ವಂದನಾರ್ಪಣೆ ಜಿ.ವಿಜಯ ಕುಮಾರ್ ಕೇಂದ್ರ ಸ್ಥಾನಿಕ ಆಯುಕ್ತರು, ನಿರೂಪಣೆ ರಾಜೇಶ್ ಅವಲಕ್ಕಿ. ರೋವರ್ ಲೀಡರ್. ಕರ‍್ಯಕ್ರಮದಲ್ಲಿ ಜಿಲ್ಲಾ ಗೈಡ್ ಆಯುಕ್ತೆ ಶಕುಂತಲಾ ಚಂದ್ರ ಶೇಖರ್, ಶ್ರೀ.ಎಸ್.ಜಿ.ಆನಂದ್ ಜಿಲ್ಲಾ ಸ್ಕೌಟ್ ಆಯುಕ್ತರು, ಶ್ರೀಮತಿ ಗೀತಾ ಚಿಕ್ಕಮಠ ಜಿಲ್ಲಾ ತರಬೇತಿ ಆಯುಕ್ತರುಗೈಡ್, ಶ್ರೀ ವೀರೇಶಪ್ಪ ವೈ ಆರ್. ಸಹ ಕಾರ್ಯದರ್ಶಿ, ಶ್ರೀ ಕೃಷ್ಣಸ್ವಾಮಿ, ಶ್ರೀ ಸಿ.ಎಂ. ಪರಮೇಶ್ವರಯ್ಯ, ಶ್ರೀ.ವಿನಯಭೂಷಣ್ ,ಶ್ರೀ ಅಶೋಕ್ ಕುಮಾರ್, ಶ್ರೀ ಪುಟ್ಟಪ್ಪ ಗೌಳೇರ್, ಶ್ರೀಮಲ್ಲಿಕಾರ್ಜುನ ಕಾನೂರ್, ಶ್ರೀಮತಿ ಹೇಮಲತಾ,ಶ್ರೀಮತಿ ಮೀನಾಕ್ಷಮ್ಮ, ಶ್ರೀಮತಿ ಜ್ಯೋತಿ, ಶ್ರೀಮತಿ ಪರಿಮಳ, ಶ್ರೀಮತಿಶಾರದಮ್ಮ, ತರಬೇತಿ ತಂಡದ ನಾಯಕರು ಜಿಲ್ಲಾ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
Gopala Krishna Beluru ಕಾಂಗ್ರೆಸ್ ಪಕ್ಷದ ವಶವಾದ ಹೊಸನಗರ ಪಟ್ಟಣ ಪಂಚಾಯತ್
Gopala Krishna Beluru ಹೊಸನಗರ ಪಟ್ಟಣ ಪಂಚಾಯತಿ ಎರಡನೇ ಆಡಳಿತ ಅವಧಿಗೆ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ನಾಗಪ್ಪ(ರೆಡ್ಡಿ) ಹಾಗೂ ಉಪಾಧ್ಯಕ್ಷೆ ಯಾಗಿ ಅವಿರೋಧ ಆಯ್ಕೆ ಆಗಿದ್ದಾರೆ. ಒಟ್ಟು 11 ಸದಸ್ಯ ಬಲದ ಈ ಪಂಚಾಯತಿಯಲ್ಲಿ ತಲಾ ನಾಲ್ಕು ಬಿಜೆಪಿ, ಕಾಂಗ್ರೆಸ್ ಹಾಗು ಮೂರು ಬಿಜೆಪಿ ಚುನಾಯಿತ ಸದಸ್ಯರಿದ್ದರು. 29 ರಂದು ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಜೆಡಿಎಸ್ ಪಕ್ಷದ ಚುನಾಯಿತ ಸದಸ್ಯ ಹಾಲಗದ್ದೆ ಉಮೇಶ್, ಬಿಜೆಪಿಯ ಗುರುರಾಜ್ ಹಾಗು ಗುಲಾಬಿ ಮರಿಯಪ್ಪ ಗೈರು ಹಾಜರಾಗಿದ್ದು ಸಾರ್ವಜನಿಕರಲ್ಲಿ ಕುತೂಹಲ ಸೃಷ್ಟಿಸಿತ್ತು. ಶಾಸಕ ಬೇಳೂರು ಗೋಪಾಲಕೃಷ್ಣ ಕೃಷ್ಣ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್. ಎಂ.ಮಂಜುನಾಥ್ ಗೌಡ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಈ ಚುನಾವಣಾ ತಂತ್ರರೂಪಿಸಿ ತಮ್ಮ ಅಭ್ಯರ್ಥಿಗಳ ಗೆಲುವು ಸಾಧಿಸುವಂತೆ ಕಾಯ್ದುಕೊಂಡರು. ಚುನಾವಣೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಪರ ಐದು ಸದಸ್ಯರು ಹಾಗೂ ಬಿಜೆಪಿ ಪರ ಮೂರು ಸದಸ್ಯರು ಹಾಜರಿದ್ದರು. Gopala Krishna Beluru ಹಾಲಗದ್ದೆ ಉಮೇಶ್, ಗುಲಾಬಿ ಮರಿಯಪ್ಪ ಹಾಗೂ ಗುರುರಾಜ್ ಗೈರು ಹಾಜರು ಆಗುವ ಮೂಲಕ ಚುನಾವಣಾ ಪ್ರಕ್ರಿಯೆಯಿಂದ ದೂರವೇ ಉಳಿದರು. ನೂತನ ಅಧ್ಯಕ್ಷ, ಉಪಾಧ್ಯಕ್ಷೆಗೆ ಅಭಿನಂದನೆ ಸಲ್ಲಿಸಿದರು. ಬಳಿಕ ಮಾತನಾಡಿದ ಶಾಸಕ ಬೇಳೂರು, ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಭದ್ರ ನೆಲೆ ಕಂಡಿದೆ. ಇತ್ತೀಚಿನ ಡಿಸಿಸಿ ಬ್ಯಾಂಕ್, ಶಿಮೊಲ್ ಹಾಗೂ ಕಾರ್ಗಲ್ ಪಟ್ಟಣ ಪಂಚಾಯತಿ ಚುನಾವಣೆಗಳೇ ಇದಕ್ಕೆ ಸಾಕ್ಷಿ ಎಂದರು. ಹೊಸನಗರ ಪಟ್ಟಣದ ಸಮಗ್ರ ಅಭಿವೃದ್ಧಿಗೆ ತಾವು ಈಗಲೂ ಕಟಿಬದ್ದರಾಗಿದ್ದು ನೂತನ ಆಡಳಿತ ಸಮಿತಿ ಜೊತೆ ಚರ್ಚಿಸಿ ಪಟ್ಟಣ ಪಂಚಾಯತಿಯ ಸುಸಜ್ಜಿತ ನೂತನ ಕಟ್ಟಡ ಸೇರಿದಂತೆ ಹಲವಾರು ಜನಪರ ಯೋಜನೆಗಳನ್ನು ಜಾರಿಗೊಳಿಸಲು ಸರ್ಕಾರದಿಂದ ಅಗತ್ಯ ಅನುದಾನ ಬಿಡುಗಡೆಗೆ ಪ್ರಾಮಾಣಿಕ ಪ್ರಯತ್ನ ಮಾಡುವ ಜೊತೆಯಲ್ಲಿ ನೂತನ ಆಡಳಿತ ಸಮಿತಿಗೆ ನೈತಿಕ ಬೆಂಬಲ ನೀಡಲು ಸದಾಸಿದ್ದ ಇರುವುದಾಗಿ ತಿಳಿಸಿದರು. ಪರಸ್ಪರ ಹೊಂದಾಣಿಕೆ ರಾಜಕಾರಣದಿಂದ ಮಾತ್ರವೇ ಪಕ್ಷ ಸಂಘಟನೆ ಸಾಧ್ಯ ಎಂಬುದನ್ನು ಈ ಗೆಲುವು ಪುಷ್ಠಿಕರಿಸಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಲಗೋಡು ರತ್ನಾಕರ್ ತಿಳಿಸಿದರು
SN Channabasappa ಮಾನವ ಕುಲವು ದುರಾಸೆಯಿಂದ ಪರಿಸರ ಸಂಪನ್ಮೂಲ ಹಾಳು ಮಾಡುತ್ತಿದೆ- ಶಾಸಕ ಚೆನ್ನಿ
SN Channabasappa ಪರಿಸರ ಶುದ್ಧವಾಗಿದ್ದಾಗ ಮಾತ್ರ ನಮ್ಮ ಬದುಕು ಹಸನಾಗಿರುತ್ತದೆ
ಶಿವಮೊಗ್ಗ: ನಮ್ಮ ಮನ ಶುದ್ಧವಾಗಿರುವಂತೆ ಪರಿಸರವನ್ನು ಶುದ್ಧವಾಗಿ ಕಾಪಾಡಿಕೊಂಡಾಗ ಸ್ವಸ್ಥ ಸಮಾಜವನ್ನು ರೂಪಿಸಲು ಸಾಧ್ಯ. ಪರಿಸರ ಶುದ್ಧವಾಗಿದ್ದಾಗ ಮಾತ್ರ ನಮ್ಮ ಬದುಕು ಹಸನಾಗಿರುತ್ತದೆ ಎಂದು ಶ್ರೀ ಜನಸ್ಪಂದನ ಟ್ರಸ್ಟ್ ಅಧ್ಯಕ್ಷರಾದ ಚನ್ನಬಸಪ್ಪ (ಚೆನ್ನಿ) ಹೇಳಿದರು.
ಅವರು ವಿಕಾಸ್ ಟ್ರಸ್ಟ್ ಮತ್ತು ಶ್ರೀ ಜನಸ್ಪಂದನ ಟ್ರಸ್ ವತಿಯಿಂದ ಕೃಷ್ಣ ಜನ್ಮಾಷ್ಮಮಿ ಅಂಗವಾಗಿ ಹಮ್ಮಿಕೊಂಡಿದ್ದ ಶ್ರೀಕೃಷ್ಣಾ ವೇಷಭೂಷಣ ಕಾರ್ಯಕ್ರಮ ಮತ್ತು ಶಿವಮೊಗ್ಗ ಬಾಲಗೋಕುಲದ ಮನೆಗೊಂದು ಗಿಡ, ಗಿಡಕ್ಕೊಂದು ರಕ್ಷೆ ಎಂಬ ಘೋಷವಾಕ್ಯದೊಂದಿಗೆ ಇಂದು ಬಿದರೆ ಸರ್ಕಾರಿ ಹಿರಿಯ ಪ್ರಾಥಮಿ ಶಾಲೆ ಮತ್ತು ಹೊನ್ನವಿಲೆ ಸರ್ಕಾರಿ ಶಾಲೆ ಹಮ್ಮಿಕೊಂಡಿದ್ದ ಸಸಿ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮಾನವ ಕುಲವು ತನ್ನ ದುರಾಸೆಯಿಂದ ಸುತ್ತಮುತ್ತಲಿನ ಸಂಪನ್ಮೂಲಗಳನ್ನು ಬೇಕಾಬಿಟ್ಟಿಯಾಗಿ ಬಳಸಿಕೊಂಡು, ನಮ್ಮ ಪರಿಸರವನ್ನು ಹಾಳು ಮಾಡುತ್ತಿದ್ದಾರೆ ಎಂದರು.
ಎಲ್ಲಿಯವರೆಗೆ ಪ್ರಕೃತಿ ಮತ್ತು ಮನುಷ್ಯನ ನಡುವೆ ಸಮತೋಲನ ಇರುವುದಿಲ್ಲವೋ ಅಲ್ಲಿಯವರೆಗೆ ಈ ವಿಶ್ವದಲ್ಲಿ ಮಾನವನ ಜೀವನ ಅತ್ಯಂತ ಕಷ್ಟಕರವಾಗುತ್ತದೆ. ಅಂತೆಯೇ ಪ್ರಕೃತಿ ಪ್ರಾಣಿ, ಪಕ್ಷಿ ಸಂಕುಲವನ್ನು ಹಾಗೂ ಅರಣ್ಯವನ್ನು ರಕ್ಷಿಸುವ ಹೊಣೆಗಾರಿಗೆ ನಮ್ಮದಾಗಿರುತ್ತದೆ ಎಂದು ಹೇಳಿದರು.
ಪರಿಸರ ರಕ್ಷಣೆಗಾಗಿ ಪ್ರತಿ ಮಗು ತನ್ನ ಮನೆ ಮುಂದೆ ಗಿಡ ನೆಟ್ಟು ರಕ್ಷೆ ಕಟ್ಟುವ ಮೂಲಕ ಪರಿಸರ ಸಂರಕ್ಷಣೆ ಸಂಕಲ್ಪ ಮಾಡಲಾಯಿತು.
SN Channabasappa ಸಸಿ ನಿರ್ವಾಹಣೆ ಬೇಕಾದ ವೆಚ್ಚವನ್ನು ಶ್ರೀ ಜನಸ್ಪಂದನ ಟ್ರಸ್ಟ್ ಭರಿಸಲಿದೆ ಎಂದರು. ಸಸಿಗಳನ್ನು ಮೂರು ವರ್ಷಗಳ ಕಾಲ ಸರಿಯಾಗಿ ನೋಡಿಕೊಂಡು ಕಾಪಾಡುವ ವಿದ್ಯಾರ್ಥಿ ಆಕರ್ಷಕ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಇಂತಹ ಕಾರ್ಯಕ್ರಮಗಳಿಗೆ ಸಹಕಾರ ನೀಡುವವರು ಮೊಬೈಲ್ ನಂ.೯೫೯೧೭೭೯೯೭೦ ಸಹಕರಿಸಬಹುದು.
ಸಂದರ್ಭದಲ್ಲಿ ಬಾಲಗೋಕುಲದ ಶಿವಮೊಗ್ಗ-ಹಾಸನ ವಿಭಾಗದ ವಿಶ್ವಸ್ಥರರಾದ ಪಾಂಡುರಂಗ ಪರಾಂಡೆ ಶಿಕ್ಷಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
Gurudatta Hegde ಮಲೆನಾಡಿನಲ್ಲಿನ ಗುಡ್ಡರಸ್ತೆ ಭೂಕುಸಿತದ ಬಗ್ಗೆ ದುರಸ್ತಿಗೊಳಿಸಲು ಕ್ರಿಯಾಯೋಜನೆ ಸಿದ್ಧಪಡಿಸಿ- ಗುರುದತ್ತ ಹೆಗಡೆ
Gurudatta Hegde ಶಿವಮೊಗ್ಗ : ಆಗಸ್ಟ್ ೨೯ : (ಕರ್ನಾಟಕ ವಾರ್ತೆ) : ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಲೋಕೋಪಯೋಗಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ವ್ಯಾಪ್ತಿಗೊಳಪಡುವ ನಗರ ಮತ್ತು ಗ್ರಾಮೀಣ ರಸ್ತೆಗಳು ಹಾಗೂ ಮಲೆನಾಡಿನ ಆಯ್ದ ಗುಡ್ಡಗಾಡು ಮತ್ತು ಕಡಿದಾದ ತಿರುವುಗಳಿರುವ ಪ್ರದೇಶಗಳಲ್ಲಿ ಆಗಾಗ್ಗೆ ಸಂಭವಿಸುವ ಭೂಕುಸಿತ ಮತ್ತಿತರ ಕಾರಣಗಳಿಂದಾಗಿ ಹಾಳಾಗಿರುವ ಪ್ರಮುಖ ರಸ್ತೆಗಳನ್ನು ದುರಸ್ತಿಗೊಳಿಸಲು ಕ್ರಿಯಾಯೋಜನೆ ತಯಾರಿಸಿ, ಮುಂದಿನ ಒಂದು ವಾರದೊಳಗಾಗಿ ಸಮಗ್ರ ಮಾಹಿತಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಅವರು ಸಂಬAಧಿಸಿದ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ವಿಪತ್ತು ನಿರ್ವಹಣೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಸಲ್ಲಿಸುವ ಪ್ರಸ್ತಾವನೆಗಳನ್ನು ತಯಾರಿಸುವ ಪೂರ್ವದಲ್ಲಿ ಆಯಾ ಇಲಾಖೆಗಳ ಅಭಿಯಂತರರು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಛಾಯಾಚಿತ್ರಗಳೊಂದಿಗೆ ಕ್ರಿಯಾಯೋಜನೆ ತಯಾರಿಸಿ. ವಿಶೇಷವಾಗಿ ಅಹಿತಕರ ಘಟನೆಗಳು ಸಂಭವಿಸುವ ಸ್ಥಳಗಳು, ಸಂಚಾರ ದಟ್ಟಣೆಯಿಂದ ಅಡಚಣೆಗೊಳಗಾಗುತ್ತಿರುವ ರಸ್ತೆಗಳ ಸಮಸ್ಯೆಯ ಶಾಶ್ವತ ಪರಿಹಾರ ಕೈಗೊಳ್ಳಬಹುದಾದ ಸ್ಥಳಗಳು, ವರ್ತುಲಗಳು, ಕಡಿದಾದ ತಿರುವುಗಳು, ನಿರ್ಮಿಸಲೇ ಬೇಕಾದ ತಡೆಗೋಡೆಗಳು, ಪರ್ಯಾಯ ಮಾರ್ಗಗಳು, ಅಗಲೀಕರಣ ಮುಂತಾದವುಗಳನ್ನು ಪರಿಗಣಿಸುವಂತೆ ಅವರು ಸಲಹೆ ನೀಡಿದ ಅªರು, ಪ್ರಸ್ತಾವನೆ ಸಲ್ಲಿಸುವ ಪೂರ್ವದಲ್ಲಿ ಸಂಬAಧಿಸಿದ ಪೊಲೀಸ್ ಠಾಣಾಧಿಕಾರಿಗಳ ಸಲಹೆ-ಮಾರ್ಗದರ್ಶನ ಪಡೆದುಕೊಳ್ಳುವಂತೆಯೂ ಅವರು ಸಲಹೆ ನೀಡಿದರು.
ಕೊನೆಯ ದಿನಾಂಕದವರೆಗೆ ವಿರಮಿಸದೇ ಕೂಡಲೇ ಸ್ಥಳ ಪರಿಶೀಲಿಸಿ ಪ್ರಸ್ತಾವನೆ ಸಲ್ಲಿಸಲು ಮುಂದಾಗುವAತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಈಗಾಗಲೇ ಜಿಲ್ಲೆಯಲ್ಲಿ ಅಂತಹ ಸಂಭಾವ್ಯ ೩೫೬ಸ್ಥಳಗಳನ್ನು ಗುರುತಿಸಲಾಗಿದೆ. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ರಾಜ್ಯದಲ್ಲಿ ಭೂಕುಸಿತ ತಡೆಗಟ್ಟುವ ನಿಟ್ಟಿನಲ್ಲಿ ಕ್ರಿಯಾಯೋಜನೆಗಳ ಗುಚ್ಚಗಳನ್ನು ಸಿದ್ಧಪಡಿಸುವ, ಕ್ರಿಯಾಯೋಜನೆಯ ಗುಚ್ಚಗಳನ್ನು ಸಿದ್ಧಪಡಿಸುವ ಸಮಯದಲ್ಲಿ ಜಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ ಅವರು ಭೂಕುಸಿತ ಅಧ್ಯಯನ ವರದಿಗಳಲ್ಲಿ ಸೂಚಿಸಿರುವಂತೆ ಮಾರ್ಗಸೂಚಿಗಳನ್ನು ಹಾಗೂ ತಜ್ಞರ ವರದಿ ಮತ್ತು ಅಭಿಪ್ರಾಯಗಳನ್ನು ಗಮನದಲ್ಲಿಟ್ಟುಕೊಂಡು ಅದಕ್ಕನುಗುಣವಾಗಿ ೧೦೦ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆಗೊಳಿಸಲು ಉದ್ದೇಶಿಸಿದೆ. ಆದ್ದರಿಂದ ಸಂಬAಧಿತ ಇಲಾಖೆಗಳ ಅಧಿಕಾರಿಗಳು ತ್ವರಿತವಾಗಿ ಕ್ರಿಯಾಯೋಜನೆಗಳನ್ನು ತಯಾರಿಸಿ, ಸಲ್ಲಿಸುವಂತೆ ಅವರು ಸೂಚಿಸಿದರು.
Gurudatta Hegde ಇದಕ್ಕೆ ಪೂರಕವಾಗಿ ಸರ್ಕಾರವು ರಾಜ್ಯದ ಕರಾವಳಿ ವiತ್ತು ಮಲೆನಾಡು ಜಿಲ್ಲೆಗಳಲ್ಲಿ ಭೂಕುಸಿತ ತಡೆಗಟ್ಟುವ ಬಗ್ಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸಮಿತಿಯನ್ನು ರಚಿಸಲು ಮಾರ್ಗಸೂಚಿ ಹೊರಡಿಸಿದೆ. ಈ ಸಮಿತಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು, ಅರಣ್ಯಾಧಿಕಾರಿಗಳು ಸೇರಿದಂತೆ ೧೩ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳನ್ನು ಸದಸ್ಯರನ್ನಾಗಿ ನೇಮಿಸುವಂತೆ ಕಂದಾಯ ಇಲಾಖೆ ವಿಪತ್ತು ನಿರ್ವಹಣೆ ವಿಭಾಗದ ಆಯುಕ್ತರು ಆದೇಶ ಹೊರಡಿಸಿದ್ದಾರೆ ಎಂದರು.
ಜಿಲ್ಲಾ ಮಟ್ಟದ ಸಂಬAಧಿತ ಇಲಾಖೆಗಳ ಅಧಿಕಾರಿಗಳು ಈ ಸಂದರ್ಭದಲ್ಲಿ ತುರ್ತು ಕೈಗೊಳ್ಳಬಹುದಾದ ಕಾರ್ಯಗಳ ಕುರಿತು ವಿಶೇಷ ಗಮನಹರಿಸಿ, ಕ್ರಿಯಾಯೋಜನೆ ಸಲ್ಲಿಸಿ, ಜಿಲ್ಲೆಯ ಅಭಿವೃದ್ದಿಗೆ ಹಾಗೂ ಸಂಚಾರಕ್ಕೆ ಅನುಕೂಲವಾಗುವಂತೆ ಕ್ರಿಯಾಯೋಜನೆ ರೂಪಿಸಿ ಸಕಾಲದಲ್ಲಿ ಸಲ್ಲಿಸಬೇಕು. ಅಲ್ಲದೇ ತಮ್ಮ ಮಾತೃ ಇಲಾಖೆಯಿಂದ ಅನುದಾನದ ಲಭ್ಯವಿದ್ದಲ್ಲಿ ಆ ಅನುದಾನವನ್ನು ಬಳಸಿಕೊಂಡು ಕಾರ್ಯಯೋಜನೆ ರೂಪಿಸಲು ಕ್ರಮ ಕೈಗೊಳ್ಳುವಂತೆ ಅವರು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೇಮಂತ್ ಎನ್., ಹೆಚ್ಚುವರಿ ಪೊಲೀಸ್ ರಕ್ಷಣಾಧಿಕಾರಿ ಎ.ಎಸ್.ಕಾರಿಯಪ್ಪ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
