Sunday, May 3, 2026
Sunday, May 3, 2026

Aayanur Manjunatha ಬಿಎಸ್ ವೈ ಕುಟುಂಬದ ಭೂ ಹಗರಣಗಳನ್ನೂ ತನಿಖೆಗೆ ಒಳಪಡಿಸಬೇಕು- ಆಯನೂರು ಮಂಜುನಾಥ್

Date:

Aayanur Manjunatha ಶಿವಮೊಗ್ಗದ ಬಿ.ಎಸ್.ವೈ.ಕುಟುಂಬದ ಭೂ ಹಗರಣಗಳನ್ನೂ ತನಿಖೆಗಳಿಗೆ ಒಳಪಡಿಸಬೇಕು ಎಂದು ಕೆಪಿಸಿಸಿ ವಕ್ತಾರ, ಮಾಜಿ ಸಂಸದ ಆಯನೂರು ಮಂಜುನಾಥ್ ಆಗ್ರಹಿಸಿದರು.
ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿ.ವೈ.ವಿಜಯೇಂದ್ರ, ಬಿ.ವೈ.ರಾಘವೇಂದ್ರ ಮತ್ತು ಬಿಜೆಪಿಯ ಮುಖಂಡರು ಮೂಡಾ ಹಗರಣದ ಬಗ್ಗೆ ಮಾತನಾಡುತ್ತಾರೆ. ಪಾದಯಾತ್ರೆ ಮಾಡುತ್ತಾರೆ. ನೈತಿಕತೆ ಇದ್ದರೆ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎನ್ನುತ್ತಾರೆ. ಆದರೆ, ಇವರೇ ಭೂಗಳ್ಳರಾಗಿದ್ದಾರೆ, ಇವರಿಗೆ ರಾಜೀನಾಮೆ ಕೇಳುವ ಯಾವ ನೈತಿಕತೆ ಇದೆ ಎಂದು ಪ್ರಶ್ನೆ ಮಾಡಿದರು.
ತೀರ್ಥಹಳ್ಳಿ ರಸ್ತೆಗೆ ಹೋಗುವ ನ್ಯೂಮಂಡ್ಲಿ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಯಾರ ಆಸ್ಪತ್ರೆ ಇದೆ. ಸಹ್ಯಾದ್ರಿ ನಾರಾಯಣ ಹೃದಯಾಲಯ ಯಾರ ಒಡೆತನದ್ದು, ಅಲ್ಲಿ ೩೦ ಎಕರೆಗೂ ಹೆಚ್ಚು ಜಮೀನು ಇರುವುದು ಯಾರದ್ದು ಎಂದ ಅವರು, ೩೦ ಎಕರೆ ಜಮೀನು ಇದ್ದರೂ ಕೂಡ ಕೆಐಡಿಬಿಯವರು ಕೇವಲ ೪ ಎಕರೆ ಜಾಗವನ್ನು ಹೇಗೆ ವಶಪಡಿಸಿಕೊಂಡರು, ಕೈಗಾರಿಕಾ ಅಭಿವೃದ್ಧಿಗೆ ೪ ಎಕರೆ ಜಾಗ ಸಾಕೇ? ಹೀಗೆ ವಶಪಡಿಸಿಕೊಂಡ ಜಾಗ, ಏನಾಯಿತು, ಯಾರ ಬೇನಾಮಿ ಹೆಸರಿನಲ್ಲಿತ್ತು. ನಂತರ ಯಾರಿಗೆ ವರ್ಗಾವಣೆಯಾಗಿದೆ ಎಂಬುವುದನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಸಂಸದ ರಾಘವೇಂದ್ರ ಹೇಳಬೇಕು ಎಂದರು.
ಪತ್ರಕರ್ತರ ನಿವೇಶನಕ್ಕೆ ಸಂಬಂಧಿಸಿದಂತೆ ಮೂಡಾ ಹಗರಣದಂತೆ ಶಿವಮೊಗ್ಗದಲ್ಲಿಯೂ ಹಗರಣವಾಗಿದೆ. ಪತ್ರಕರ್ತರಲ್ಲದವರ ಹೆಸರಿಗೆ ನಿವೇಶನ ಪಡೆದುಕೊಂಡು ನಂತರ ಅದನ್ನು ಯಾರೂ ಪಡೆದರು, ಯಾರ ಮನೆಯ ಕೆಲಸಗಾರರಿಗೆ ಈ ನಿವೇಶನಗಳನ್ನು ಹಂಚಲಾಗಿದೆ.ಈ ಕುಟುಂಬಕ್ಕೆ ಕಾರ್ಮಿಕರ ಹೆಸರಿನಲ್ಲಿ ಸೈಟ್ ಪಡೆದು ನಂತರ ಬೇನಾಮಿಯಾಗಿ ಪಡೆಯಬೇಕಿತ್ತೆ ಇಂತಹ ಭ್ರಷ್ಟಚಾರದಲ್ಲಿ ಮುಳುಗಿರುವ ಇವರು ಯಾವ ನೈತಿಕತೆ ಇಟ್ಟುಕೊಂಡಿದ್ದಾರೆ ಎಂದರು.
ಇದಕ್ಕೆಲ್ಲ ಅವರು, ಉತ್ತರ ಹೇಳಬೇಕು. ಸತ ಹೊರಗೆ ಬರುತ್ತದೆ, ಇಲ್ಲದಿದ್ದರೆ ನಾವೇ ದಾಖಲೆ ಸಮೇತ ಹೇಳುತ್ತೇವೆ. ಭೂಮಿ ದಾಹದ ಆಸ್ತಿ ವ್ಯಾಮೋಹದ ಅಧಿಕಾರ ದುರುಪಯೋಗದ ಬಹುದೊಡ್ಡ ಹಗರಣಗಳು ಬಿಜೆಪಿಯ ಮುಖಂಡರ ಮೇಲಿದೆ. ಇವರು ಮೈಸೂರಿಗೆ ಪಾದಯಾತ್ರೆ ಮಾಡುವುದಲ್ಲ, ಶಿವಮೊಗ್ಗಕ್ಕೂ ಪಾದಯಾತ್ರೆ ಮಾಡಬೇಕು. ಕೆಎಡಿಬಿಯನ್ನು ದುರುಪಯೋಗ ಪಡಿಸಿಕೊಂಡ ಬೇನಾಮಿ ಹೆಸರಿನಲ್ಲಿ ಆಸ್ತಿ ಮಾಡಿಕೊಂಡ ಎಲ್ಲವೂ ತನಿಖೆಯಾಗಬೇಕು ಎಂದರು.
ಬಿಜೆಪಿಯ ಪ್ರತಿಭಟನೆಗಳು, ಪಾದಯಾತ್ರೆಗಳು, ನಡೆಯುತ್ತಿರುವುದು, ರೈತರ ಸಮಸ್ಯೆ ಅಲ್ಲ, ಅತಿವೃಷ್ಠಿ, ಅನಾವೃಷ್ಠಿ ಅಲ್ಲ, ಬಡವರ ಬಗ್ಗೆಕಾಳಜಿಯಿಂದನೂ ಅಲ್ಲ, ಕೇವಲ ಕಾಂಗ್ರೆಸ್ ನಾಯಕರಿಗೆ ಮಸಿ ಬಳಿಯುವುದು ಅಷ್ಟೇ ಆಗಿದೆ. ಮೂಡಾ ಹಗರಣವೇ ಇದಕ್ಕೆ ಸಾಕ್ಷಿ, ಅವರದೇ ಸರ್ಕಾರದಲ್ಲಿ ಅವರೇ ಮಂಜೂರು ಮಾಡಿದ ಸೈಟ್‌ನ ಬಗ್ಗೆ ಮಾತನಾಡುತ್ತಾರೆ. ಕಾಂಗ್ರೆಸ್ ಹೆಗಲ ಮೇಲೆ ಬಂದೂಕು ಹಿಡಿಯುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎಂಐಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಪ್ರಮುಖರಾದ ಎಸ್.ಕೆ.ಮರಿಯಪ್ಪ, ಡಾ|| ಶ್ರೀನಿವಾಸ್ ಕರಿಯಣ್ಣ, ಎಸ್.ರವಿಕುಮಾರ್, ವೈ.ಹೆಚ್.ನಾಗರಾಜ್, ಜಿ.ಡಿ.ಮಂಜುನಾಥ್, ಯು. ಶಿವಾನಂದ್, ಶಿವಣ್ಣ, ಧೀರರಾಜ್, ಲಕ್ಷ್ಮಣ್ಣಪ್ಪ, ಎಚ್ ಎಂ.ಮಧು, ಹಿರಣ್ಣಯ್ಯ ಮುಂತಾದವರಿದ್ದರು.

Aayanur Manjunatha ಕಾರ್ಕಳದಲ್ಲಿ ಯುವತಿಯ ಮೇಲೆ ಅತ್ಯಾಚಾರ ನಡೆದ ಘಟನೆಯನ್ನು ಖಂಡಿಸಿ ಶಿವಮೊಗ್ಗದಲ್ಲಿ ಬಿಜೆಪಿ ಮಹಿಳಾ ಮೋರ್ಚಾದವರು ಪ್ರತಿಭಟನೆ ಮಾಡಿರುವುದು ಸ್ವಾಗತಾರ್ಹ. ಅವರಿಗೆ ಅಭಿನಂದನೆಗಳು, ಹಾಗೆಯೇ ಅವರು ಹಾಸನದಲ್ಲಿ ನಡೆದ ಅತ್ಯಾಚಾರದ ಘಟನೆಗಳನ್ನು ಖಂಡಿಸಲಿ, ಹಾಸನದಲ್ಲಿ ಕೇವಲ ಮಹಿಳೆಯರ ಮೇಲೆ ಅಲ್ಲ, ಪುರುಷರ ಮೇಲೂ ಅತ್ಯಾಚಾರವಾಗಿದೆ. ಇದರ ವಿರುದ್ಧವೂ ಧ್ವನಿಯೆತ್ತಲಿ.
-ಆಯನೂರು ಮಂಜುನಾಥ

ಶಿಕಾರಿಪುರ ಬಳಿ ಟೋಲ್‌ಗೇಟ್ ಆಗಿದ್ದು, ಬಿಜೆಪಿ ಅಧಿಕಾರದಲ್ಲಿದ್ದಾಗ, ಬಿಜೆಪಿಯವರು ಆಗಲೇ ಟೋಲ್‌ಗೇಟ್ ಸ್ಥಾಪನೆಗೆ ಟೆಂಡರ್‌ನ್ನು ಕರೆದಿದ್ದರು. ಮತ್ತು ಅದಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರನಿಂದ ಕಮಿಷನ್ ಕೂಡ ಪಡೆದಿದ್ದಾರೆ. ಎಲ್ಲಾ ವ್ಯವಹಾರ ಮಾಡಿ, ಈಗ ಟೋಲ್‌ಗೇಟ್ ಬೇಡ ಎಂದು ಪ್ರತಿಭಟನೆ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga Police ಗಾಡಿಕೊಪ್ಪ ಸಂಚಾರ ನಿಯತ್ರಣ ಓಕೆ. ಆದರೆ ಮಿಕ್ಕ ಸಮಸ್ಯೆಗಳಿಗೆ ಪರಿಹಾರವಿಲ್ಲ ಯಾಕೆ?

Shivamogga Police ಗಾಡಿಕೊಪ್ಪ‌,ಶಿವಮೊಗ್ಗದ ಸೆಟಲೈಟ್ ಟೌನ್ ಎಂಬ ವ್ಯಾಪ್ತಿಗೆ ಬೆಳೆದುಬಿಟ್ಟಿದೆ. ಅಲ್ಕಿನ ವೃತ್ತಕ್ಕೆ...

Shivamogga Airport ಶಿವಮೊಗ್ಗಏರ್ ಪೋರ್ಟ್ ನಲ್ಲಿನೈಟ್ ಲ್ಯಾಂಡಿಂಗ್ಕಾಮಗಾರಿಯು ಜೂನ್ ತಿಂಗಳಲ್ಲಿ ಮುಗಿಯಲಿದೆ- ನಂಜಯ್ಯ‌ಮಠ

Shivamogga Airport ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ನಿಗಮ ಮಂಡಳಿಯ (ಕೆಎಸ್‌ಐಡಿಸಿ)...

B.Y. Raghavendra ಬಿಎಸ್ ವೈ ಅಭಿಮಾನೋತ್ಸವ ಕೇವಲ ಸಮಾರಂಭವಲ್ಲ.ನಮ್ಮನಾಯಕರಿಗೆ ಸಲ್ಲಿಸುವ ಗೌರವ- ಬಿ.ವೈ.ರಾಘವೇಂದ್ರ.

B.Y. Raghavendra ಇದೇ ಮೇ 9ರಂದು ಚಿತ್ರದುರ್ಗದಲ್ಲಿ ಆಯೋಜಿಸಲಾಗಿರುವ ರೈತ ನಾಯಕ, ಮಾಜಿ...