Tuesday, March 31, 2026
Tuesday, March 31, 2026
Home Blog Page 579

Gauri Ganesh festival ಗೌರಿಗಣೇಶ ಹಬ್ಬದ ಮುನ್ನ ಜನಕ್ಕೆ ವಾಣಿಜ್ಯ ಎಲ್ ಪಿ ಜಿ ಸಿಲಿಂಡರ್ ದರ ಏರಿಕೆ ಶಾಕ್!

0

Gauri Ganesh festival ದೇಶದಲ್ಲಿ ವಾಣಿಜ್ಯ ಎಲ್​ಪಿಜಿ ಸಿಲಿಂಡರ್​ ಬೆಲೆ ಮತ್ತೆ ಏರಿಕೆಯಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು 19 ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್ ದರವನ್ನು 39ರೂ. ಹೆಚ್ಚಿಸಿವೆ. 14 ಕೆಜಿ ಗೃಹಬಳಕೆಯ ಗ್ಯಾಸ್​ ಸಿಲಿಂಡರ್​ನ ಬೆಲೆಗಳು ಯಥಾ ಸ್ಥಿತಿ ಕಾಯ್ದುಕೊಂಡಿವೆ. ದೆಹಲಿಯಲ್ಲಿ ವಾಣಿಜ್ಯ ಎಲ್​ಪಿಜಿ ಸಿಲಿಂಡರ್​ ಬೆಲೆ 39ರೂ. ಹೆಚ್ಚಾಗಿದೆ.
ಸೆಪ್ಟೆಂಬರ್ 1 ರಿಂದ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ 1691.50 ರೂ.ಗೆ ಲಭ್ಯವಾಗಲಿದೆ. ಹೊಸ ದರಗಳ ಪ್ರಕಾರ ಇಂದಿನಿಂದ ವಾಣಿಜ್ಯ ಸಿಲಿಂಡರ್ ಬೆಲೆ 39 ರೂ. ಈಗ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 1691.50 ರೂ. IOCL Gauri Ganesh festival ವೆಬ್‌ಸೈಟ್ ಪ್ರಕಾರ, ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಹೆಚ್ಚಳವು ಸೆಪ್ಟೆಂಬರ್ 1 ರಿಂದ ಜಾರಿಗೆ ಬಂದಿದೆ.
ಮುಂಬೈನಲ್ಲಿ ಇದರ ಬೆಲೆ 1644 ರೂ. ಈ ಮೊದಲು ಈ ಸಿಲಿಂಡರ್ ಮುಂಬೈನಲ್ಲಿ 1605 ರೂ.ಗೆ ಲಭ್ಯವಿತ್ತು. ಕೋಲ್ಕತ್ತಾದಲ್ಲಿ ಈ ಸಿಲಿಂಡರ್ ಬೆಲೆ 1764.50 ರೂ.ನಿಂದ 1802.50 ರೂ.ಗೆ ಏರಿಕೆಯಾಗಿದೆ. ಆದರೆ ಚೆನ್ನೈನಲ್ಲಿ ಈ ಸಿಲಿಂಡರ್ ಈಗ 1855 ರೂ.ಗೆ ಲಭ್ಯವಾಗಲಿದೆ. ಈ ಹಿಂದೆ ಚೆನ್ನೈನಲ್ಲಿ 19 ಕೆಜಿ ಸಿಲಿಂಡರ್ 1817 ರೂ.ಗೆ ಮಾರಾಟವಾಗಿತ್ತು.
ಆಗಸ್ಟ್‌ನಲ್ಲಿ ಎಲ್‌ಪಿಜಿ ಗ್ಯಾಸ್‌ನ ಬೆಲೆಯನ್ನು ಹೆಚ್ಚಿಸಲಾಗಿತ್ತು ಆಗ ಕಂಪನಿಗಳು 8.50 ರೂಪಾಯಿ ಏರಿಕೆ ಮಾಡಿದ್ದವು ಆದರೆ ಈ ಬಾರಿ ನೇರವಾಗಿ 39 ರೂಪಾಯಿ ಹೆಚ್ಚಿಸಿವೆ.
ಜುಲೈನಲ್ಲಿ ಪ್ರತಿ ಸಿಲಿಂಡರ್‌ ಗೆ 30 ರೂ., ಜೂನ್‌ನಲ್ಲಿ 69.50 ಮತ್ತು ಮೇನಲ್ಲಿ 19 ರೂ. ಹೆಚ್ಚಳ ಮಾಡಲಾಗಿತ್ತು. ಎಲ್‌ಪಿಜಿ ಬೆಲೆಗಳಲ್ಲಿನ ಹಠಾತ್ ಹೆಚ್ಚಳವು ರೆಸ್ಟೋರೆಂಟ್‌ ಗಳು ಮತ್ತು ಹೋಟೆಲ್‌ಗಳಿಂದ ಹಿಡಿದು ಸಣ್ಣ-ಪ್ರಮಾಣದ ಕೈಗಾರಿಕೆಗಳವರೆಗೆ ವಿವಿಧ ವಲಯಗಳ ವ್ಯವಹಾರಗಳ ಮೇಲೆ ಪರಿಣಾಮ ಬೀರಬಹುದು.

Shivamogga Police ಗೋಪಾಳದಲ್ಲಿ ನಡೆಸುತ್ತಿದ್ದ ಹುಕ್ಕಾಬಾರ್ ಮೇಲೆ ದಾಳಿ

0

Shivamogga Police ಕರ್ನಾಟಕ ಸರ್ಕಾರದ ಆದೇಶ ಹಾಗೂ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಗೋಪಾಳದಲ್ಲಿ ನಡೆಸಲಾಗುತ್ತಿದ್ದ ಹುಕ್ಕಾಬಾರ್ ಮೇಲೆ ಪೊಲೀಸ್ ಇಲಾಖೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿಗಳು ದಾಳಿ ನಡೆಸಿ ತೆರವುಗೊಳಿಸಿದ್ದಾರೆ.
ಈ ಸಂದರ್ಭದಲ್ಲಿ ಉಪ ಪೋಲಿಸ್ ನಿರೀಕ್ಷಕರಾದ ರಘುನಾಥ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರರಾದ ಹೇಮಂತ್ ರಾಜ್ ಅರಸ್, ಮಹಾನಗರ ಪಾಲಿಕೆ ಅಧಿಕಾರಗಳು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳು ಭಾಗವಹಿಸಿದ್ದರು.

Kirloskar Ferrous ಬೀಡುಕಬ್ಬಿಣ ಕೈಗಾರಿಕೆಗಳಲ್ಲಿ ಸುರಕ್ಷತೆ ಬಗ್ಗೆ 120 ಉದ್ಯೋಗಿಗಳಿಗೆ ಕೊಪ್ಪಳದಲ್ಲಿ ತರಬೇತಿ

0

Kirloskar Ferrous ದಿನಾಂಕ 28 -8- 2018 ರಂದು ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ಆಡಿಟೋರಿಯಂ ನಲ್ಲಿ ಸೆಮಿನಾರ್ ಕಾರ್ಯಕ್ರಮವನ್ನು ಆಯೋಜಿಸುವುದರ ಮೂಲಕ ಯಶಸ್ವಿಗೊಳಿಸಲಾಯಿತು, ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ನಾ ಸುತ್ತಮುತ್ತಲು ಇರುವ ಬಳ್ಳಾರಿ ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಯ 30 ಕಾರ್ಖಾನೆಗಳ ಮೈಂಟೇನೆನ್ಸ್ ಮತ್ತು ಸುರಕ್ಷತಾ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಯೋಜನವನ್ನು ಪಡೆದರು.

ವರ್ಕಿಂಗ್ ಅಟ್ ಹೈಟ್ ಮತ್ತು ಕಂಪೈನ್ಡ್ ಸ್ಪೇಸ್ ಎಂಟ್ರಿ ವಿಷಯದ ಮೇಲೆ ಸೆಮಿನಾರ್ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಬೆಂಗಳೂರಿನ ಕರಂ ಸೇಫ್ಟಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆಹಾಗೂ ಕಾರ್ಖಾನೆಗಳು ಮತ್ತು ಬಾಯ್ಲರ್ ಗಳ ಇಲಾಖೆಯ ಸಹಕಾರದೊಂದಿಗೆ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ, 120 ಉದ್ಯೋಗಿಗಳಿಗೆ ತರಬೇತಿಯನ್ನು ನೀಡುವುದರ ಮೂಲಕ ಅಣುಕು ಪ್ರದರ್ಶನವನ್ನು ಆಯೋಜನೆ ಮಾಡಿ ತಿಳಿಸಿಕೊಡಲಾಯಿತು.

ಕೆಲಸದ ಸಂದರ್ಭದಲ್ಲಿ ಮೇಲಿನಿಂದ ಅಪಘಾತವಾದ ವ್ಯಕ್ತಿಯನ್ನು ಕೆಳಗಡೆ ಸುರಕ್ಷಿತವಾಗಿ ತರುವಂತಹ ವಿಧಾನ ಮತ್ತು ಒಳ ಭಾಗದಲ್ಲಿ ( ಕಂಫೈಂಡ್ ಸ್ಪೇಸ್) ನಲ್ಲಿ ಅಪಘಾತವಾದಂತಹ ವ್ಯಕ್ತಿಯನ್ನು ಸುರಕ್ಷಿತವಾಗಿ ಹೊರಗಡೆ ತರುವಂತಹ ವಿಧಾನವನ್ನು ತಿಳಿಸಿಕೊಟ್ಟರು.

Kirloskar Ferrous ಪ್ರಾರಂಭದಲ್ಲಿ ಬೆಳಿಗ್ಗೆ 9:30ಕ್ಕೆ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಆರ್ ವಿ ಗುಮಾಸ್ತೆ, ಕರ್ನಾಟಕ ಸರ್ಕಾರದ ಹುಬ್ಬಳ್ಳಿ ವಿಭಾಗದ ಕಾರ್ಖಾನೆಗಳ ಜಂಟಿ ನಿರ್ದೇಶಕರಾದ ಶ್ರೀ ರವೀಂದ್ರನಾಥ್ ರಾಥೋಡ್ ಹಾಗೂ ನ್ಯಾಷನಲ್ ಸೇಫ್ಟಿ ಕೌನ್ಸಿಲ್ ಸೆಕ್ರೆಟರಿ ಶ್ರೀ ಪಿ ವೆಂಕಟೇಶ್ವರಲು, ಬಳ್ಳಾರಿ ವಿಭಾಗದ ಕಾರ್ಖಾನೆಗಳ ಹಿರಿಯ ಸಹಾಯಕ ನಿರ್ದೇಶಕರಾದ ಶ್ರೀ ವರುಣ್, ಕೊಪ್ಪಳ ವಿಭಾಗದ ಕಾರ್ಖಾನೆಗಳ ಸಹಾಯಕ ನಿರ್ದೇಶಕರಾದ ಶ್ರೀ ವಿಜಯಕುಮಾರ್ ಹಾಗೂ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಮಾನವ ಸಂಪನ್ಮೂಲ ಮತ್ತು ಆಡಳಿತ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಶ್ರೀ ಪಿ ನಾರಾಯಣ್ ಹಾಗೂ ಬೀಡು ಕಬ್ಬಿಣ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಶ್ರೀ ಎಂಜಿ ನಾಗರಾಜ್ ಇವರಿಂದ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವು ಉದ್ಘಾಟನೆಯಾಯಿತು,

ನ್ಯಾಷನಲ್ ಸೇಫ್ಟಿ ಕೌನ್ಸಿಲ್ ಬೆಂಗಳೂರು ಕರ್ನಾಟಕ ಚಾಪ್ಟರ್ ಇವರು ಈ ಕಾರ್ಯಕ್ರಮ ಆಯೋಜನೆ ಮಾಡಿ ಸೆಮಿನಾರ್ ಕಾರ್ಯಕ್ರಮದಲ್ಲಿ ನ್ಯಾಷನಲ್ ಸೇಫ್ಟಿ ಕೌನ್ಸಿಲ್ ಸೆಕ್ರೆಟರಿ ಶ್ರೀ ಪಿ ವೆಂಕಟೇಶ್ವರಲು ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಸುರಕ್ಷತಾ ವಿಭಾಗದ ಮ್ಯಾನೇಜರ್ ಶ್ರೀ ಎಂಎಂ ನಾಡಿಗೇರ್, ಹೊಸಪೇಟೆ ಸ್ಟೀಲ್ ಲಿಮಿಟೆಡ್, ಗಿಣಿಗೇರಾ ಕಾರ್ಖಾನೆಯ ಸುರಕ್ಷತಾ ವಿಭಾಗದ ಜನರಲ್ ಮ್ಯಾನೇಜರ್ ಶ್ರೀ ಚಂದ್ರಶೇಖರ ಬೆಲ್ಲದ್, ನ್ಯಾಷನಲ್ ಸೇಫ್ಟಿ ಕೌನ್ಸಿಲ್ ಉಪಾಧ್ಯಕ್ಷರಾದ, ಶ್ರೀ ಹರಿದಾಸ ಉಪಾಧ್ಯಾಯ, ನ್ಯಾಷನಲ್ ಸೇಫ್ಟಿ ಕೌನ್ಸಿಲ್ ಜಂಟಿ ಕಾರ್ಯದರ್ಶಿಗಳಾದ ಶ್ರೀ ಚಂದ್ರಶೇಖರ ಶಾಸ್ತ್ರಿ ಮತ್ತು ಕರಂ ಸೇಫ್ಟಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವಿಭಾಗೀಯ ಅಧಿಕಾರಿಯದ ಶ್ರೀ ಆವಿಷ್ಕಾರ್ ಇವರುಗಳಿಂದ ಸುರಕ್ಷತಾ ವಿಷಯಗಳ ಮೇಲೆ ಉಪನ್ಯಾಸವನ್ನು ನೀಡಿದರು.

ಮಧ್ಯಾಹ್ನ ಕರಂ ಸೇಫ್ಟಿ ಪ್ರವೇಟ್ ಲಿಮಿಟೆಡ್ ವಿಭಾಗಿಯ ಅಧಿಕಾರಿಯದ ಶ್ರೀ ಆವಿಷ್ಕಾರ್ ಮತ್ತು ಅವರ ತಂಡದೊಂದಿಗೆ ವರ್ಕಿಂಗ್ ಅಟ್ ಹೈಟ್ ಮತ್ತು ಕಂಫೈನ್ಡ್ ಸ್ಪೇಸ್ ಬಗ್ಗೆ ಅಣುಕು ಪ್ರದರ್ಶನವನ್ನು ಮಾಡುವುದರ ಮೂಲಕ ತಿಳುವಳಿಕೆಯನ್ನು ನೀಡಿದರು. ಅಚ್ಚುಕಟ್ಟಾಗಿ ಆಯೋಜನೆ ಮಾಡಲಾದಂತಹ ಕಾರ್ಯಕ್ರಮದ ಕೊನೆಗೆ ಸೆಮಿನಾರ್ ಪ್ರೋಗ್ರಾಂನಲ್ಲಿ ಭಾಗವಹಿಸಿದವರಿಗೆ ಸರ್ಟಿಫಿಕೇಟ್ ನೀಡುವುದರ ಮೂಲಕ ಅವರ ಅನುಭವವನ್ನು ಹಂಚಿಕೊಳ್ಳುವಂತಹ ವ್ಯವಸ್ಥೆ ಮಾಡಲಾಗಿತ್ತು. ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ .

ಮರುಳಿಧರ ನಾಡಿಗೇರ್
ಮ್ಯಾನೇಜರ್ ಸುರಕ್ಷತಾ ವಿಭಾಗ

CM Siddharamaih ಕೆಪಿಎಸ್ ಸಿ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಆಯ್ಕೆ ಮರು ಪರೀಕ್ಷೆಗೆ ಸಿಎಂ ಸೂಚನೆ

0

CM Siddharamaih ಕೆಪಿಎಸ್‌ಸಿ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ಪರೀಕ್ಷೆಯಲ್ಲಿ ಕನ್ನಡಕ್ಕೆ ಅನುವಾದ ಮಾಡಲ್ಪಟ್ಟ ಪ್ರಶ್ನೆಗಳು ಅಸಮರ್ಪಕವಾಗಿದ್ದವೆಂಬ ವಿಚಾರ ನನ್ನ ಗಮನಕ್ಕೆ ಬಂದ ತಕ್ಷಣ, ಪರೀಕ್ಷಾರ್ಥಿಗಳಿಗೆ ಅನ್ಯಾಯವಾಗಬಾರದೆಂಬ ಉದ್ದೇಶದಿಂದ ಮುಂದಿನ ಎರಡು ತಿಂಗಳುಗಳ ಒಳಗೆ ಮರುಪರೀಕ್ಷೆ ಮಾಡುವಂತೆ ಕೆಪಿಎಸ್‌ಸಿಗೆ ಸೂಚನೆ ನೀಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯನವರು ತಿಳಿಸಿದ್ದಾರೆ.

ಕರ್ತವ್ಯ ಲೋಪವೆಸಗಿದ ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಮುಂಬರುವ ಪರೀಕ್ಷೆಗಳನ್ನು ಅತ್ಯಂತ ಜವಾಬ್ದಾರಿಯುತವಾಗಿ, ಸಮರ್ಪಕವಾಗಿ ನಡೆಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದಿದ್ದಾರೆ.

CM Siddharamaih ನಾವು ನೇಮಕಾತಿ ಪ್ರಕ್ರಿಯೆಗಳ ಸಮಗ್ರತೆ ಮತ್ತು ವಿಶ್ವಾಸಾರ್ಹತೆಯನ್ನು ಎತ್ತಿಹಿಡಿದು, ಪರೀಕ್ಷಾರ್ಥಿಗಳ ಹಿತರಕ್ಷಿಸಲು ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.

Forest Department ಕೆಳದಿಯ ಮರಸ ಗ್ರಾಮದಲ್ಲಿನ ಸರ್ಕಾರಿ ಭೂಮಿಯಲ್ಲಿಟ್ಟಿದ್ದ ಬೀಟೆ ಮರದ ದಿಮ್ಮಿಗಳನ್ನ ವಶಪಡಿಸಿಕೊಂಡ ಅರಣ್ಯ ಇಲಾಖೆ

0

Forest Department ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಬೀಟೆ ಮರದ ತುಂಡುಗಳನ್ನು ಸಾಗರ ವಿಭಾಗದ ಅರಣ್ಯಾಧಿಕಾರಿಗಳು ಭಾನುವಾರ ವಶಪಡಿಸಿಕೊಂಡಿದ್ದಾರೆ. ಸಾಗರ ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಕುಮಾರ್ ಸೂಚನೆಯ ಮೇರೆಗೆ, ಕೆಳದಿಯ ಮರಸ ಗ್ರಾಮದ ಸರ್ಕಾರಿ ಜಾಗದಲ್ಲಿದ್ದ ಬೀಟೆ ದಿಮ್ಮಿಗಳನ್ನು ವಶಕ್ಕೆ ಪಡೆಯಲಾಗಿದೆ.
Forest Department ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವಿ ಮಾರ್ಗದರ್ಶನದಲ್ಲಿ, ವಲಯ ಅರಣ್ಯಾಧಿಕಾರಿ ಅಣ್ಣಪ್ಪ ಬಿ. ಹಾಗೂ ಸಿಬ್ಬಂದಿ ದಾಳಿ ಮಾಡಿದ್ದಾರೆ. 1.569 ಘನ ಮೀಟರ್ ಅಕ್ರಮ ಬೀಟೆ ಜಪ್ತಿ ಮಾಡಲಾಗಿದೆ. ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿರುವ ಸಂಬಂಧ ಪ್ರಕರಣ ದಾಖಲಾಗಿದೆ. ದಾಸ್ತಾನು ಮಾಡಿದ್ದು ಯಾರು ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ. ಆರೋಪಿಗಳನ್ನು ಶೀಘ್ರವೇ ಬಂಧಿಸುವುದಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಕೆಳದಿ ಉಪವಲಯ ಅರಣ್ಯಾಧಿಕಾರಿ ವಿಜಯಕುಮಾರ್ ಜೆ, ಸಾಗರ ಶಾಖೆಯ ಅಶೋಕ ಅಯ್ಯನಹಳ್ಳಿ, ಗಸ್ತು ಅರಣ್ಯ ಪಾಲಕ ಯುವರಾಜ ಕೆ.ಆರ್., ಮಹೇಶ್ ಜಕ್ಕಳ್ಳಿ, ಶಿವನಗೌಡ ದಾಳಿಯಲ್ಲಿ ಭಾಗವಹಿಸಿದ್ದರು.

Red Cross Sanjeevini Blood Bank 55 ನೇ ಬಾರಿಗೆ ರಕ್ತದಾನ ಮಾಡಿದ ಅಲ್ಲಾಬಕಾಸ್

0

Red Cross Sanjeevini Blood Bank ಜೀವನ ಸಾರ್ಥಕವಾಗಬೇಕಾದರೆ ನಮ್ಮ ಕೈಲಾದಷ್ಟು ಸೇವಾ ಕಾರ್ಯಗಳನ್ನು ನಡೆಸಬೇಕು ಎಂದು ಲ್ಯಾಬ್ ಟೆಕ್ನಿಷಿಯನ್ ಅಲ್ಲಾಬಕಾಸ್ ಹೇಳಿದರು.
ಸಂಜೀವಿನಿ ರೆಡ್‌ಕ್ರಾಸ್ ರಕ್ತನಿಧಿಯಲ್ಲಿ ಸೇವೆ ಸಲ್ಲಿಸುತ್ತಿರುವ ಅಲ್ಲಾಬಕಾಸ್ ತಮ್ಮ ಜನ್ಮದಿನದ ಹಿನ್ನೆಲೆಯಲ್ಲಿ 55ನೇ ಬಾರಿ ರಕ್ತದಾನ ಮಾಡಿದ ಅವರು ಮಾತನಾಡಿ, ನನ್ನಿಂದ ರಕ್ತದಾನ ಮಾಡಲು ಶಕ್ತಿ ಇರುವವರೆಗೂ ರಕ್ತದಾನ ಮಾಡುತ್ತೇನೆ. ಇದರಿಂದ ತುರ್ತು ಸಂದರ್ಭದಲ್ಲಿ ಅವಶ್ಯಕತೆ ಇರುವವರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
Red Cross Sanjeevini Blood Bank ಇದೇ ಸಂದರ್ಭದಲ್ಲಿ ಸ್ವಯಂಪ್ರೇರಿತ ರಕ್ತದಾನಿಗಳ ಸೇವಾ ಸಂಸ್ಥೆ ಮಾಜಿ ಅಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ನಾನು ಈವರೆಗೂ 47 ಬಾರಿ ರಕ್ತದಾನ ಮಾಡಿದ್ದು, ಎಲ್ಲ ದಾನಗಳಿಗಿಂತಲೂ ರಕ್ತದಾನ ತುಂಬಾ ಶ್ರೇಷ್ಠ. ರಕ್ತದ ಮಹತ್ವವನ್ನು ಅರಿತುಕೊಂಡು ಆರೋಗ್ಯವಂತ ಯುವಜನತೆ ರಕ್ತದಾನ ಮಾಡಲು ಮುಂದಾಗಬೇಕು. ಇದರಿಂದ ನಮಗೂ ಅನೇಕ ಉಪಯೋಗಗಳಿವೆ ಎಂದರು.
ಪ್ರಸ್ತುತ ಬೇಡಿಕೆಗೆ ಅನುಗುಣವಾಗಿ ರಕ್ತ ಲಭ್ಯವಾಗುತ್ತಿಲ್ಲ. ರಕ್ತದ ಕೊರತೆ ಎದುರಾಗುವುದನ್ನು ಕಾಣುತ್ತೇವೆ. ಆದ್ದರಿಂದ ಪ್ರತಿಯೊಬ್ಬರೂ ರಕ್ತದಾನ ಮಾಡಿ ಜೀವ ಉಳಿಸುವ ಶ್ರೇಷ್ಠ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.
ಡಾ. ದಿನಕರ್ ಮಾತನಾಡಿ, ರಕ್ತದಾನ ಆರೋಗ್ಯ ಕಾಪಾಡುವುದರ ಜತೆಗೆ ನಮ್ಮ ದೇಹದಲ್ಲಿರುವ ಕೊಬ್ಬಿನಾಂಶ ಕಡಿಮೆ ಮಾಡುತ್ತದೆ. ಸದಾ ಲವಲವಿಕೆಯಿಂದ ಇರಲು ಸಾಧ್ಯವಾಗುತ್ತದೆ. ಉತ್ತಮ ಜೀವನಶೈಲಿ ಹಾಗೂ ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯ ಎಂದು ತಿಳಿಸಿದರು.
ಅಲ್ಲಾಬಕಾಸ್ ಪತ್ನಿ ಕೂಡ ಇದೇ ಸಂದರ್ಭದಲ್ಲಿ ರಕ್ತದಾನ ಮಾಡಿದರು. ದಂಪತಿಯನ್ನು ಅಭಿನಂದಿಸಲಾಯಿತು. ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಬಿಂದು ವಿಜಯಕುಮಾರ್, ರಕ್ತನಿಧಿಯ ಪೂಜಾ, ಡಾ. ದಿನಕರ್, ಸುಲ್ತಾನ್, ಧರಣೇಂದ್ರ ದಿನಕರ್, ಉಮೈಸಲ್ಮಾ, ಕವಿತಾ, ಶಿಲ್ಪಾ ಇತರರಿದ್ದರು.

Acharya Tulsi National College ನಾವು ಪಡೆದ ಶಿಕ್ಷಣದಿಂದ ಉತ್ತಮ ಸೇವೆ ಮಾಡಲು ಸಾಧ್ಯ- ಶಾಸಕ ಡಿ.ಎಸ್.ಅರುಣ್

0

Acharya Tulsi National College ಸಾವಿರಾರು ವಿದ್ಯಾರ್ಥಿಗಳ ಬದುಕಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಟ್ಟ ಸಂಸ್ಥೆ ರಾಷ್ಟ್ರೀಯ ಶಿಕ್ಷಣ ಸಮಿತಿ ಎಂದು ವಿಧಾನ ಪರಿಷತ್ ಸದಸ್ಯ, ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಹಳೆಯ ವಿದ್ಯಾರ್ಥಿ ಡಿ.ಎಸ್.ಅರುಣ್ ಹೇಳಿದರು.
ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಕಾಲೇಜಿನ ಕಟ್ಟಡ ಕಂಡ ತಕ್ಷಣ ಕಾಲೇಜಿನಲ್ಲಿ ಕಳೆದ ಅದ್ಭುತ ಕ್ಷಣಗಳು ನೆನಪಾಗುತ್ತವೆ ಎಂದು ತಿಳಿಸಿದರು.
ಮನೆಯಲ್ಲಿ ರಾಜಕೀಯ ವಾತಾವರಣ ಇದ್ದರೂ ನಾನು ರಾಜಕಾರಣಿ ಆಗುತ್ತೇನೆ ಎಂದುಕೊಂಡಿರಲ್ಲಿಲ್ಲ. ನನ್ನ ವಿಧಾನ ಪರಿಷತ್ ಸ್ಥಾನದಲ್ಲಿ ಶೇ 100 ಹಾಜರಾತಿ ಇದೆ. ನಾವು ಪಡೆದ ಶಿಕ್ಷಣದಿಂದ ಉತ್ತಮ ಸೇವೆ ಮಾಡಲು ಸಾಧ್ಯವಾಗುತ್ತಿದೆ ಎಂದರು.
ಮಾಜಿ ಶಾಸಕ, ಕಾಲೇಜಿನ ಹಳೆಯ ವಿದ್ಯಾರ್ಥಿ ಕೆ.ಬಿ.ಪ್ರಸನ್ನಕುಮಾರ್ ಮಾತನಾಡಿ, ನಮ್ಮ ಕಾಲೇಜಿನ ಪ್ರತಿಭೆಗಳನ್ನು ಗುರುತಿಸಿ ಕ್ಯಾಂಪಸ್‌ಗೆ ಬರಲು ಅನುವು ಮಾಡಿಕೊಟ್ಟ ಎಲ್ಲರಿಗೂ ಧನ್ಯವಾದಗಳು. ವಿದ್ಯೆ ಇಲ್ಲದೆ ಏನನ್ನೂ ಮಾಡಲು ಸಾಧ್ಯವಿಲ್ಲ. ಉತ್ತಮವಾಗಿ ಬದುಕಲು, ರಾಜಕೀಯ ಮಾಡಲು ವಿದ್ಯೆ ಬೇಕೆ ಬೇಕು ಎಂದು ತಿಳಿಸಿದರು.
Acharya Tulsi National College ಕಬ್ಬು ಬೆಳೆಗಾರರ ಸಂಘದ ರಾಜ್ಯ ಉಪಾಧ್ಯಕ್ಷ ದೇವಿಕುಮಾರ್ ಸನ್ಮಾನ ಸ್ವೀಕರಿಸಿ ಮಾತನಾಡಿ, ಸ್ನೇಹಿತರನ್ನು ಎಂದೂ ಮರೆಯಬೇಡಿ. ಕಾಲೇಜಿನ ಒಡನಾಟವಿದ್ದರೆ ಅಭ್ಯಾಸ ಮಾಡಿದ ಅಧಿಕಾರಿಗಳಿಂದ ಸುಲಭ ಸಹಾಯ ದೊರಕುತ್ತದೆ ಎಂದರು.
ಪ್ರೊ. ಮಮತಾ ಮಾತನಾಡಿ, ನಿಮ್ಮ ಸ್ನೇಹಿತರಿಂದ ಪ್ರತಿಭಾವಂತ ಬಡ ಮಕ್ಕಳಿಗೆ ದೇಣಿಗೆ ಪಡೆಯಿರಿ. ವ್ಯಾಟ್ಸ್ಆಪ್ ಗ್ರೂಪ್ ಮಾಡಿಕೊಂಡು ಎಲ್ಲರೊಂದಿಗೆ ಸ್ನೇಹದಿಂದ ಇರಬೇಕು. ಪ್ರತಿ ವರ್ಷ ಹತ್ತು ರ‍್ಯಾಂಕ್ ಹೊಂದುತ್ತಿದ್ದೇವೆ. ಹಳೆಯ ವಿದ್ಯಾರ್ಥಿಗಳು ನಮ್ಮ ಕಾಲೇಜ್ ವಿದ್ಯಾರ್ಥಿಗಳಿಗೆ ಉದ್ಯೋಗ ಕೊಡಿಸಲು ಅನುಕೂಲವಾಗುವಂತ ವಾತಾವರಣ ಸೃಷ್ಟಿಸಬೇಕು ಎಂದು ತಿಳಿಸಿದರು.
ವೈಷ್ಣವಿ ಪ್ರಾರ್ಥನೆ ಶಾಂಭವಿ ಸ್ವಾಗತಿಸಿದರು. ಅಧ್ಯಕ್ಷ ಎಸ್.ಎಸ್.ವಾಗೇಶ್ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಶಿವಾನಂದ ಸಾನು, ಜಿ.ವಿಜಯಕುಮಾರ್ ಹಾಗೂ ಹಳೆಯ ವಿದ್ಯಾರ್ಥಿಗಳು ಸಾಂಸೃತಿಕ ಕಾರ್ಯಕ್ರಮ ನಡೆಸಿದರು. ಉಷಾದೇವಿ ನಿರೂಪಿಸಿದರು. ಸತಿದೇವಿ ವಂದಿಸಿದರು.

Rotary Club Shivamogga ನೂರು ಮಂದಿ ಸೈಕಲ್ ಸವಾರರಿಂದ ಮಾನ್ಸೂನ್ ಡೆಕಾಥ್ಲಾನ್ ಸೈಕಲ್ ಜಾಥಾ

0

Rotary Club Shivamogga ಪರಿಸರ ಜಾಗೃತಿಗಾಗಿ ಮಾನ್ಸೂನ್ ಸೈಕಲ್ ಜಾಥ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಮತ್ತು ಡೆಕಾಥ್ಲಾನ್ ಸಂಸ್ಥೆಯ ಸಹಯೋಗದೊಂದಿಗೆ ಹಸಿರಿನ ಉಳಿವುಗಾಗಿ ಸೈಕಲ್ ಜಾಥವನ್ನು ಭಾನುವಾರ ಬೆಳಗ್ಗೆ ಸೆಂಟ್ರಲ್ ಮಾಲ್ ನಿಂದ 30 ಕಿಲೋ ಮೀಟರ್ ಸೈಕಲ್ ಜಾಥ ನಡೆಯಿತು.

ಜಾಥ ಕಾರ್ಯಕ್ರಮವನ್ನು ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ ನ ಅಧ್ಯಕ್ಷರಾದ ಕಿರಣ್ ಕುಮಾರ್ ಉದ್ಘಾಟಿಸಿದರು. ಸುಮಾರು ನೂರು ಜನ ಸೈಕ್ಲಿಸ್ಟ್ ಗಳು ಭಾಗವಹಿಸಿದ್ದರು ಕಾರ್ಯಕ್ರಮದ ಉದ್ಘಾಟನೆಯನ್ನು ಅವರು ಮಾಡಿದರು.

ಡೆಕಾಥ್ಲಾನ್ ಸಂಸ್ಥೆಯ ಮ್ಯಾನೇಜರ್ ಅಮೃತ ಮಾತನಾಡಿ, ಸಂಸ್ಥೆಯಿಂದ ಇನ್ನು ಮುಂದೆ ಇದೇ ರೀತಿ ಹೆಚ್ಚೆಚ್ಚು ಕಾರ್ಯಕ್ರಮ ನಡೆಯುತ್ತದೆ ಹಾಗೂ ಇದೇ ರೀತಿ ರೋಟರಿ ಕ್ಲಬ್ ಸೆಂಟ್ರಲ್ ನ ಸಹಕಾರವನ್ನು ಬಯಸುತ್ತೇವೆ ಎಂದು ತಿಳಿಸಿದರು.

Rotary Club Shivamogga ಜಾಥಾ ಕಾರ್ಯಕ್ರಮದಲ್ಲಿ ಡೆಕಾಥ್ಲಾನ್ ಸಂಸ್ಥೆಯ ಮ್ಯಾನೇಜರ್ ಅಮೃತ್ ಮತ್ತು ಸ್ಪೋರ್ಟ್ಸ್ ಲೀಡರ್ಗಳಾದ ನಿಖಿಲ್ ಮತ್ತು ಅಮಿತ್ ಉಪಸ್ಥಿತರಿದ್ದರು.

ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ನಿಂದ ಸುಮಾರು 20 ಕ್ಕೂ ಹೆಚ್ಚು ಸದಸ್ಯರು ಈ ಸೈಕಲ್ ಜಾಥದಲ್ಲಿ ಭಾಗವಹಿಸಿದ್ದು, ವಿಶೇಷ ಪಾಸ್ ಅಸಿಸ್ಟೆಂಟ್ ಗೌರ್ನರ್ ರವಿ ಕೋಟೋಜಿ ರಮೇಶ್ ಸಂತೋಷ್ ಬಸವರಾಜ್ ಇನ್ನು ಹಲವಾರು ಸದಸ್ಯರು ಭಾಗವಹಿಸಿದ್ದರು.

Inner Wheel Shivamogga ಪಂಚಾಕ್ಷರಿ ಗವಾಯಿಗಳ‌ ಅಂಧರ ಶಾಲೆಗೆ ಸಂಗೀತ ಪರಿಕರಗಳ ಕೊಡುಗೆ

0

Inner Wheel Shivamogga ನಾವು ಮಾಡಿದ ಸೇವೆ ಸಾರ್ಥಕತೆಗೊಳ್ಳಬೇಕಾದರೆ ಅಗತ್ಯವಿದ್ದಲ್ಲಿ ಮಾತ್ರ ಮಾಡಬೇಕು. ಹೊಟ್ಟೆ ತುಂಬಿದ ಸ್ಥಳದಲ್ಲಿ ನಮ್ಮ ಸೇವೆ ಸಾರ್ಥಕವಾಗುವುದಿಲ್ಲ ಎಂದು ನಿವೃತ್ತ ಸರ್ಕಾರಿ ನೌಕರರು ಹಾಗೂ ಇನ್ನರ್ ವೀಲ್ ಶಿವಮೊಗ್ಗ ಪೂರ್ವ ಸದಸ್ಯರಾದ ವೇದಾವತಿ ಅಭಿಮತ ವ್ಯಕ್ತಪಡಿಸಿದರು.

ಸಾಗರ ರಸ್ತೆಯ ಹಾನಗಲ್ ಶ್ರೀ ಕುಮಾರ ಸ್ವಾಮಿಗಳ ಸಭಾಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕ್ರದಲ್ಲಿ ಪಂಚಾಕ್ಷರಿ ಗವಾಯಿಗಳ ಅಂಧರ ಶಾಲೆಗೆ ಸಂಗೀತ ಪರಿಕರಗಳಾದ ತಬಲಾ, ಹಾರ್ಮೋನಿಯಂ ಹಾಗೂ ವಸ್ತು ವಿತರಿಸಿ ಮಾನಾಡಿದ ಅವರು, ಇಂತಹ ಸಂಸ್ಥೆಗಳಿಗೆ ಅಗತ್ಯ ನೆರವು ನೀಡಿದರೆ ಅಂಧ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಸಿಕ್ಕಾಗ, ಸಂಗೀತಕ್ಕೆ ಹೆಚ್ಚು ಸಹಕಾರ ನೀಡಿದಂತಾಗುತ್ತದೆ ಎಂದರು.

ಇನ್ನರ್ ವೀಲ್ ಶಿವಮೊಗ್ಗ ಪೂರ್ವ ನೂತನ ಸದಸ್ಯೆ ಸವಿತಾ ಪಾಲಕರವರು, ಆಶ್ರಮದ ಮಕ್ಕಳಿಗೆ ಟವಲ್, ಬ್ರಷ್, ಸೋಪು ಹಾಗೂ ಅಗತ್ಯ ವಸ್ತುಗಳನ್ನು ನೀಡಿದರು.

Inner Wheel Shivamogga ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇನ್ನರ್ ವೀಲ್ ಶಿವಮೊಗ್ಗ ಪೂರ್ವ ಸಂಸ್ಥೆಯ ಅಧ್ಯಕ್ಷರಾದ ವಾಗ್ದೇವಿ ಬಸವರಾಜ್ ವಹಿಸಿ, ಪಂಚಾಕ್ಷರಿಗಳ ಸಂಗೀತ ಸೇವೆ ಅಜರಾಮರ, ಸಾವಿರಾರು ಆಂಧ ವಿದ್ಯಾರ್ಥಿಗಳು ಗದುಗಿನ ಗದುಗಿನ ಪುಣ್ಯಾಶ್ರಮದಲ್ಲಿ ಸಂಗೀತ ಅಭ್ಯಾಸ ಮಾಡಿ, ಈ ನಾಡಿನ ಶ್ರೇಷ್ಠ ಸಂಗೀತಗಾರರಾಗಿದ್ದಾರೆ. ಇಲ್ಲಿನ ಶಿಷ್ಯರು ದೇಶದಲ್ಲಿ ದೊಡ್ಡ ಮಟ್ಟದ ವಿದ್ವಾಂಸರಾಗಿ, ಹಾಡುಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಸೇವೆಯನ್ನು ಸ್ಮರಿಸಿದರು.ಕಾರ್ಯಕ್ರದಲ್ಲಿ ಇನ್ನರ್ ವೀಲ್ ಕ್ಲಬ್ ನ ಮಾಜಿ ಅಧ್ಯಕ್ಷರಾದ ಬಿಂದು ವಿಜಯ್ ಕುಮಾರ್, ಕಾರ್ಯದರ್ಶಿ ಲತಾ ಸೋಮಣ್ಣ, ಸತ್ಯ ಹಾಗೂ ಬಂಧುಗಳ ಸಂಗಮೇಳ ಗವಾಯಿಗಳಿಗೆ ಅಭಿನಂದಿಸಿ ಸನ್ಮಾನಿಸಿದರು.

Delhi Word School ಚಲನ ಚಿತ್ರೋತ್ಸವದಲ್ಲಿ ಸೃಜನಶೀಲ ಪ್ರತಿಭೆಗಳನ್ನ ಪ್ರದರ್ಶಿಸುವ ಗುರಿ ಸಾಧನೆ-ದಿವ್ಯಾ ಶೆಟ್ಟಿ

0

Delhi Word School ಶಿವಮೊಗ್ಗ ನಗರದ ಡೆಲ್ಲಿ ವರ್ಡ್ ಶಾಲೆಯಲ್ಲಿ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಚಲನಚಿತ್ರ ನಿರ್ಮಾಪಕರು ಮತ್ತು ಸೃಜನಾಶೀಲ ಪ್ರತಿಭೆಗಳನ್ನು ಹೊರ ಹಾಕುವ ಮತ್ತು ಪ್ರದರ್ಶಿಸುವ ಗುರಿಯೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ಶಾಲೆಯ ಪ್ರಾಚಾರ್ಯೆ ದಿವ್ಯ ಶೆಟ್ಟಿ ಹೇಳಿದರು.

Delhi Word School ಶಿವಮೊಗ್ಗ ನಗರದ ಪ್ರತಿಷ್ಠಿತ ಶಾಲೆಯ ಸುಮಾರು 15ಕ್ಕೂ ಹೆಚ್ಚು ಖಾಸಗಿ ಶಾಲೆ ಮತ್ತು ಸರ್ಕಾರಿ ಶಾಲೆ ಮಕ್ಕಳು ಸೇರಿದಂತೆ ಒಟ್ಟು 2,000 ಕ್ಕೂ ಹೆಚ್ಚು ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಶಿಕ್ಷಕರು, ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.