Monday, March 30, 2026
Monday, March 30, 2026
Home Blog Page 578

Supreme Court ಅಪರಾಧಿಗಳ ಮನೆಗೆ “ಬುಲ್ಡೋಜರ್ ಆಪರೇಷನ್” ಬಗ್ಗೆ ಕೋರ್ಟ್ ಅಸಮಾಧಾನ. ಮಾರ್ಗಸೂಚಿ ರೂಪಿಸಲು ಸೂಚನೆ

0

Supreme Court ಏನಾದರು ಘಟನೆ ನಡೆದಾಗ ಏಕಾಏಕಿ ಆರೋಪಿಗಳ ಮನೆ ಕೆಡವುವ ರಾಜ್ಯ ಸರ್ಕಾರಗಳ ಕ್ರಮದ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಸಂಬಂಧ ರಾಷ್ಟ್ರ ಮಟ್ಟದಲ್ಲಿ ಏಕರೂಪದ ಮಾರ್ಗಸೂಚಿ ರೂಪಿಸಲು ಮುಂದಾಗಿದೆ.
ಆರೋಪಿಗಳ ಮನೆಗಳನ್ನು ಕೆಡವುವ ‘ಬುಲ್ಡೋಝರ್ ಕಾರ್ಯಾಚರಣೆ’ಯ ವಿರುದ್ದ ಸಲ್ಲಿಕೆಯಾಗಿರುವ ವಿವಿಧ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಮತ್ತು ಕೆವಿ ವಿಶ್ವನಾಥನ್ ಅವರ ಪೀಠ, ರಾಷ್ಟ್ರ ಮಟ್ಟದಲ್ಲಿ ಮಾರ್ಗಸೂಚಿಗಳನ್ನು ರೂಪಿಸಲು ನ್ಯಾಯಾಲಯವು ಪರಿಗಣಿಸಬಹುದಾದ ಕರಡು ಸಲಹೆಗಳನ್ನು ಸಲ್ಲಿಸುವಂತೆ ಕಕ್ಷಿದಾರರನ್ನು ಕೇಳಿದೆ. ಸಲಹೆಗಳನ್ನು ಹಿರಿಯ ವಕೀಲ ನಚಿಕೇತ ಜೋಶಿ ಅವರಿಗೆ ಸಲ್ಲಿಸಬೇಕಿದ್ದು, ಅವರು ಅವುಗಳನ್ನು ಕ್ರೋಡೀಕರಿಸಿ ನ್ಯಾಯಾಲಯಕ್ಕೆ ನೀಡಬೇಕು ಎಂದು ಆದೇಶಿಸಿದೆ.
Supreme Court ವಿಚಾರಣೆಯನ್ನು ಎರಡು ವಾರದ ಅವಧಿಗೆ ಮುಂದೂಡಿರುವ ನ್ಯಾಯಪೀಠ, ನಾವು ರಾಷ್ಟ್ರ ಮಟ್ಟದಲ್ಲಿ ಈ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸೋಣ ಎಂದಿದೆ.
“ಆರೋಪಿಯಾದ ಮಾತ್ರಕ್ಕೆ ಮನೆ ಕೆಡವಲು ಹೇಗೆ ಸಾಧ್ಯ? ಅಪರಾಧಿಯಾಗಿದ್ದರೂ ಮನೆ ಕೆಡವಲು ಸಾಧ್ಯವಿಲ್ಲ. ನ್ಯಾಯಾಲಯವು ಅನಧಿಕೃತ ನಿರ್ಮಾಣಗಳನ್ನು ರಕ್ಷಿಸುವುದಿಲ್ಲ. ಆದರೆ, ಅದನ್ನು ಕೆಡವಲು ಕೆಲವು ಮಾರ್ಗಸೂಚಿಗಳು ಅಗತ್ಯವಿದೆ” ಎಂದು ನ್ಯಾಯಮೂರ್ತಿ ಗವಾಯಿ ಹೇಳಿದ್ದಾರೆ.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ದುಶ್ಯಂತ್ ದವೆ, ದೇಶದಾದ್ಯಂತ ‘ಬುಲ್ಡೋಝರ್ ಕಾರ್ಯಚರಣೆ’ ನಡೆಯದಂತೆ ನ್ಯಾಯಾಲಯ ನಿರ್ದೇಶನ ನೀಡಬೇಕು ಎಂದು ಕೋರಿದರು.

Rotary Shivamogaga ವೈದ್ಯೆ ವಿದ್ಯಾರ್ಥಿನಿ ‘ ಹತ್ಯಾಚಾರ.’ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕೊಡಲು ಆಗ್ರಹಿಸಿದ ಮಹಿಳಾ ಸಂಘಟನೆಗಳು

0

Rotary Shivamogaga ಕಲ್ಕತ್ತಾದ ಟ್ರೈನಿ ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ರೋಟರಿ ಸೇರಿದಂತೆ ವಿವಿಧ ‌ಸಂಘ ಸಂಸ್ಥೆಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದವು.

ಶಿವಮೊಗ್ಗ ನಗರದ ಎಂಟು ರೋಟರಿ ಕ್ಲಬ್ ಹಾಗೂ 5 ಇನ್ನರ್ ವ್ಹೀಲ್ ಸಂಸ್ಥೆಗಳು, ಒಕ್ಕಲಿಗರ ಮಹಿಳಾ ವೇದಿಕೆ, ಕದಳಿ ಸಮಾಜ, ದೈವಜ್ಞ ಮಹಿಳಾ ಮಂಡಳಿ, ಪ್ರೇರಣ ಮಹಿಳಾ ಮಂಡಳಿ, ಭೂಮಿಕಾ ಮಹಿಳಾ ಸಂಘ, ಅನ್ಸ್ ಕ್ಲಬ್, ಶರಾವತಿ ಮಹಿಳಾ ಸಂಘ, ಮಹಿಳಾ ಒಕ್ಕಲಿಗರ ಹಾಗೂ ತಾಲೂಕು ಮಹಿಳಾ ಒಕ್ಕಲಿಗರ ವೇದಿಕೆ ಭದ್ರಾವತಿ ಸೇರಿದಂತೆ ವಿವಿಧ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ನಗರದ ಅಮೀರ್ ಅಹ್ಮದ್ ಸರ್ಕಲ್ ಇಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೌನ ಮೆರವಣಿಗೆ ಭಿತ್ತಿ ಪತ್ರದೊಂದಿಗೆ ಪ್ರತಿಭಟನೆ ಮುಖಾಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಪ್ರತಿನಿಧಿ ತಹಸೀಲ್ದಾರ್ ಪ್ರದೀಪ್ ಅವರ ಮುಖಾಂತರ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿಯನ್ನ ಸಲ್ಲಿಸಲಾಯಿತು.

ರೋಟರಿ ವಲಯ ಹನ್ನೊಂದರ ಸಹಾಯಕ ಗವರ್ನರ್ ಸುರೇಶ್ ಎಚ್ ಎಂ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಅತ್ಯಾಚಾರದ ಪ್ರಕರಣಗಳು ನಿರಂತರವಾಗಿ ನಡೆಯುತ್ತಿರುವುದು ಮನುಕುಲಕ್ಕೆ ಹೇಸಿಗೆಯಾಗಿದೆ. ಈ ನಿಟ್ಟಿನಲ್ಲಿ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯನ್ನು ನೀಡುವುದರ ಮುಖಾಂತರ ಪ್ರಕರಣಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ರೋಟರಿ ಶಿವಮೊಗ್ಗ ಪೂರ್ವದ ಅಧ್ಯಕ್ಷ ಅರುಣ್ ದೀಕ್ಷಿತ್ ಮಾತನಾಡಿ, ಇಂಥ ಹೀನಾಯ ಕೃತ್ಯಗಳಿಗೆ ನಮ್ಮ ರೋಟರಿ ಸಂಸ್ಥೆಗಳು ಸದಾ ಖಂಡಿಸುತ್ತವೆ. ಈ ನಿಟ್ಟಿನಲ್ಲಿ ಸರ್ಕಾರಗಳು ಇಂತಹ ಆರೋಪಿಗಳಿಗೆ ಉಗ್ರ ಶಿಕ್ಷೆ ನೀಡುವುದರ ಮುಖಾಂತರ ಇಂತಹ ಪ್ರಕರಣಗಳು ನಿಲ್ಲಿಸಬೇಕು ಎಂದರು.

Rotary Shivamogaga ಮೆರವಣಿಗೆಯಲ್ಲಿ ರೋಟರಿ ಕ್ಲಬ್ ಸೆಂಟ್ರಲ್ ಅಧ್ಯಕ್ಷ ಕಿರಣ್ ಕುಮಾರ್ , ರೋಟರಿ ಶಿವಮೊಗ್ಗ ಪೂರ್ವ ಇನ್ನರ್ ವ್ಹೀಲ್ ಕ್ಲಬ್ಬಿನ ಅಧ್ಯಕ್ಷೆ ವಾಗ್ದೇವಿ ಬಸವರಾಜ್, ಶಿವಮೊಗ್ಗ ಕ್ಲಬ್ಬಿನ ಸೂರ್ಯನಾರಾಯಣ ಉಡುಪ, ರೋಟರಿ ಉತ್ತರದ ಅಧ್ಯಕ್ಷ ಸುಂದರ್ ರಾಮ್, ಮಲ್ನಾಡ್ ಕ್ಲಬ್ಬಿನ ಅಧ್ಯಕ್ಷ ಮುಸ್ತಾಕ್ ಅಲಿ, ಸುರೇಶ್ ಕುಮಾರ್. ರಿವರ್ಸ್ ಸೈಡ್ ಕ್ಲಬ್ಬಿನ ಬಸವರಾಜ್, ಕೋಣಂದೂರು ಕ್ಲಬ್ಬಿನ ಗಿರೀಶ್ , ಕೆಪಿ ಶೆಟ್ಟಿ , ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಶಶಿಕಾಂತ್ ನಾಡಿಗ್ , ಮಾಜಿ ಸಹಾಯಕ ಗವರ್ನರ್ ಜಿ ವಿಜಯಕುಮಾರ್, ಜಿ ರವಿ, ಮಾಜಿ ಜಿಲ್ಲಾ ಗವರ್ನರ್ ಪ್ರೊಫೆಸರ್ ಎ ಎಸ್ ಚಂದ್ರಶೇಖರ್, ಎಚ್ ಎಲ್ ರವಿ ಇನ್ನರ್ವೇಲ್ ಮಾಜಿ ಜಿಲ್ಲಾ ಚೇರ್ಮನ್ ಭಾರತಿ ಚಂದ್ರಶೇಖರ್, ವಾರಿಜಾ ಜಗದೀಶ್, ಫ್ರೆಂಡ್ಸ್ ಸೆಂಟರ್ ಅಧ್ಯಕ್ಷ , ಬಿಜಿ ಧನರಾಜ್ ಇನ್ನರ್ವಿಲ್ ಮಾಜಿ ಅಧ್ಯಕ್ಷರೇ ಬಿಂದು ವಿಜಯ ಕುಮಾರ್. ಇನ್ನರ್ ವೀಲ್ ಜಿಲ್ಲಾ ವೈಸ್ ಚೇರ್ಮನ್ ಶಬರಿ ಕಡಿದಾಳ್. ಮಂಜುನಾಥ್ ರಾವ್ ಕದಂ ಹಾಗೂ ಎಲ್ಲಾ ಮಹಿಳಾ ಸಂಘಟನೆಗಳ ಇನ್ನೂರಕ್ಕೂ ಹೆಚ್ಚು ರೋಟರಿ ಸದಸ್ಯರು , ಇನ್ನರ್ವಿಲ್ ಸದಸ್ಯನೀಯರು
ಪಾಲ್ಗೊಂಡು ಮನವಿ ನೀಡಿದರು.

Madhu Bangarappa ಪಾರಂಪರಿಕ ಸಾಗುವಳಿ ಮಾಡುತ್ತಿರುವ ರೈತರನ್ನ ಒಕ್ಕಲೆಬ್ಬಿಸಬೇಡಿ. ಮಾನವೀಯ ನೆಲೆಯಲ್ಲಿ ನೋಡಿ- ಮಧು ಬಂಗಾರಪ್ಪ

0

Madhu Bangarappa ಕಾನು ಸೊಪ್ಪಿನ ಬೆಟ್ಟ ಹುಲ್ಲು ಚಾಡಿ ಪ್ರದೇಶಗಳಲ್ಲಿ ಹಲವು ದಶಕಗಳಿಂದ ಪಾರಂಪರಿಕವಾಗಿ ಸಾಗುವಳಿ ಮಾಡಿಕೊಂಡು ಜೀವನ ನಿರ್ವಹಿಸುತ್ತಿರುವ ಕೃಷಿ ಕಾರ್ಮಿಕರನ್ನು ಒಕ್ಕಲಿಸುವುದು ಸರಿಯಲ್ಲ. ಅಧಿಕಾರಿಗಳು ಮಾನವೀಯ ನೆಲೆಯಲ್ಲಿ ಕಾರ್ಯ ನಿರ್ವಹಿಸುವಂತೆ ರಾಜ್ಯ ಶಾಲಾ ಶಿಕ್ಷಣ ಮತ್ತು ಶಾಸಕರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್ ಬಂಗಾರಪ್ಪ ಅವರು ಹೇಳಿದರು.

ಸೊರಬ ಪಟ್ಟಣದ ತಾಲೂಕು ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಬಗರ್ ಹುಕುಂ ಸಮಿತಿಯ ಮೊದಲ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.

ಬಗರ್ ಹುಕುಂ ಸಾಗುವಳಿದಾರರ ಸಮಸ್ಯೆಯು ಬಹು ದಿನಗಳಿಂದ ಇತ್ತು. ಈ ಸಮಸ್ಯೆಯ ಕುರಿತು ರಾಜ್ಯದ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಹಲವು ದಶಕಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿರುವ ರೈತರನ್ನು ಒಮ್ಮೆಲೇ ಒಕ್ಕಲೆಬ್ಬಿಸುವುದರಿಂದ ಅನೇಕ ಕುಟುಂಬಗಳ ಬದುಕು ಶೋಚನೀಯವಾಗಲಿದೆ ಆದ್ದರಿಂದ ಅಧಿಕಾರಿಗಳು ಮಾನವೀಯ ನೆಲೆಯಲ್ಲಿ ಹಾಗೂ ಕಾನೂನಿನ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸುವಂತೆ ಸಲಹೆ ನೀಡಿದರು.

ಬಗರ್ ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸುವ ವಿಷಯದಲ್ಲಿ ಕ್ರಮ ಕೈಗೊಳ್ಳುವ ಅಧಿಕಾರಿಗಳ ದುರ್ವರ್ತನೆಯನ್ನು ಸಹಿಸಿಕೊಳ್ಳಲಾಗುವುದಿಲ್ಲ. ಅಂತಹವರ ವಿರುದ್ಧ ಕಠಿಣ ಕ್ರಮ ಅನಿವಾರ್ಯವಾಗಲಿದೆ ಎಂದವರು ಎಚ್ಚರಿಸಿದರು.

Madhu Bangarappa ಅರಣ್ಯ ಮತ್ತು ಕಂದಾಯ ಭೂಮಿಗೆ ಸಂಬಂಧಿಸಿದಂತೆ ಹಲವು ದಶಕಗಳಿಂದ ಅನೇಕ ಸಮಸ್ಯೆಗಳು ಇತ್ಯರ್ಥಗೊಳ್ಳದೆ ಹಾಗೆಯೇ ಬಾಕಿ ಉಳಿದಿದೆ. ಅವುಗಳನ್ನು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಇತ್ಯರ್ಥಪಡಿಸಲಾಗುವುದು ಎಂದವರು ನುಡಿದರು.

ಅರಣ್ಯ ಇಲಾಖೆಯ ಅರಣ್ಯ ರಕ್ಷಕರು ಅಥವಾ ವನಪಾಲಕರು ಬಗರ್ ಹುಕುಂ ಸಾಗುವಳಿದಾರರ ವಿರುದ್ಧ ಮಾನವೀಯತೆ ಮರೆತು ವರ್ತಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿವೆ. ಇಲಾಖೆಯ ಜವಾಬ್ದಾರಿಯುತ ಅಧಿಕಾರಿಗಳು ಮುಂದಿನ ದಿನಗಳಲ್ಲಿ ದೂರುಗಳು ಬರದಂತೆ ಗಮನ ಹರಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಬಗುರ್ ಹುಕುಂ ಸಾಗುವಳಿ ಜಮೀನು ಮಂಜೂರಾತಿಗೆ ಸಂಬಂಧಿಸಿದಂತೆ ಬಗರ್ ಹುಕುಂ ಸಮಿತಿಯಲ್ಲಿ ಅರ್ಜಿಗಳನ್ನು ತಿರಸ್ಕರಿಸುವ ಮುನ್ನ ಸಚಿವರ ಗಮನಕ್ಕೆ ತರುವಂತೆ ಸೂಚಿಸಿದವರು. ಕೆಲವು ಸಂದರ್ಭಗಳಲ್ಲಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಪಕ್ಷಾತೀತವಾಗಿ ಚರ್ಚಿಸಿ ಪರಿಶೀಲಿಸಿದ ನಂತರ ಕ್ರಮ ಕೈಗೊಳ್ಳುವಂತೆ ಅವರು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ತಹಸಿಲ್ದಾರ್ ಮಂಜುಳಾ ಹೆಗಡಾಳ ಅವರು ಮಾತನಾಡಿ ಬಗರ್ ಹುಕುಂ ಜಮೀನು ಮಂಜುರಾತಿಗೆ ಸಂಬಂಧಿಸಿದಂತೆ ಈಗಾಗಲೇ ಆನ್ಲೈನ್ ಮೂಲಕ 5113 ಅರ್ಜಿಗಳು ದಾಖಲಾಗಿದ್ದು, ಅವುಗಳನ್ನು ಶೀಘ್ರದಲ್ಲಿ ಬಗರ್ ಹುಕುಂ ಸಮಿತಿಗೆ ಮಂಡಿಸಲಾಗುವುದು. 91 ಅರ್ಜಿದಾರರಿಗೆ ಹಕ್ಕುಪತ್ರ ವಿತರಣೆ, 166 ಜನರಿಗೆ ನೋಂದಣಿ ಮಾಡಿಸಿಕೊಡಬೇಕಾದ ಕಾರ್ಯ ಪ್ರಗತಿಯಲ್ಲಿದೆ ಎಂದ ಅವರು ನೂತನ ಸಮಿತಿ ಸದಸ್ಯರು ಇ-ಕೆವೈಸಿ ಮಾಡಿಸಿದ ನಂತರ ಸಾಗುವಳಿದಾರರ ಅರ್ಜಿಗಳನ್ನು ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.

ಸಭೆಯಲ್ಲಿ ಬಗರ್ ಹುಕುಂ ಸಮಿತಿಯ ನೂತನ ಅಧ್ಯಕ್ಷ ಎಂ. ಡಿ. ಶೇಖರ್ ಸೇರಿದಂತೆ ಸಮಿತಿಯ ನೂತನ ಸದಸ್ಯರು ಹಾಗೂ ಅರಣ್ಯಾಧಿಕಾರಿಗಳು ಉಪಸ್ಥಿತರಿದ್ದರು.

Abhishek Singhvi ರಾಜ್ಯಪಾಲರ ಹುದ್ದೆ & ಕಾರ್ಯನಿರ್ವಹಣೆ ಬಗ್ಗೆ ಕಾಂಗ್ರೆಸ್ ನಾಯಕ ಅಭಿಷೇಕ್ ಸಿಂಘ್ವಿ ಪ್ರತಿಕ್ರಿಯೆ

0

Abhishek Singhvi ದೇಶದ ಬಹುತೇಕ ರಾಜ್ಯಗಳ ರಾಜ್ಯಪಾಲರು ಮತ್ತು ಪ್ರತಿಪಕ್ಷಗಳ ಆಡಳಿತದ ರಾಜ್ಯ ಸರ್ಕಾರಗಳ ನಡುವಿನ ಘರ್ಷಣೆಯು ತಾರಕಕ್ಕೇರುತ್ತಿರುವ ನಿದರ್ಶನಗಳ ನಡುವೆ, “ರಾಜ್ಯಪಾಲರ ಹುದ್ದೆಯನ್ನೇ ರದ್ದುಗೊಳಿಸಬೇಕು ಅಥವಾ ಕ್ಷುಲ್ಲಕ ರಾಜಕೀಯದಲ್ಲಿಲ್ಲದ ವ್ಯಕ್ತಿಯನ್ನು ಒಮ್ಮತದಿಂದ ನೇಮಿಸಬೇಕು” ಎಂದು ಹಿರಿಯ ಕಾಂಗ್ರೆಸ್ ನಾಯಕ ಅಭಿಷೇಕ್ ಸಿಂಘ್ವಿ ಹೇಳಿದ್ದಾರೆ.

ಈ ಬಗ್ಗೆ ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಅವರು, ಸಂಸತ್ತಿನ ಉಭಯ ಸದನಗಳಲ್ಲಿ ಅಧ್ಯಕ್ಷರು ಮತ್ತು ಪ್ರತಿಪಕ್ಷಗಳ ನಡುವಿನ ಪುನರಾವರ್ತಿತ ಘರ್ಷಣೆಯ ಬಗ್ಗೆ ಮಾತನಾಡಿದರು. ಅಧ್ಯಕ್ಷರು ಪಕ್ಷಪಾತವಲ್ಲ ಎಂದು ಖಚಿತಪಡಿಸಿಕೊಳ್ಳಲು ಸೂಕ್ತ ಸುಧಾರಣೆಗಳಿಗೆ ಕರೆ ನೀಡಿದರು.

“ಈ ಸರ್ಕಾರದ ಅತ್ಯಂತ ದೊಡ್ಡ ವೈಫಲ್ಯವೆಂದರೆ, ಅದು ಪ್ರತಿ ಸಂಸ್ಥೆಯನ್ನು ಅವಮಾನ, ಅಪಮೌಲ್ಯಗೊಳಿಸುವಿಕೆ ಮತ್ತು ಕುಗ್ಗಿಸುತ್ತಿರುವುದು. ರಾಜ್ಯಪಾಲರು ಎರಡನೇ ಮುಖ್ಯ ಕಾರ್ಯನಿರ್ವಾಹಕ ಅಥವಾ ಎರಡನೇ ಕತ್ತಿಯಾಗಿ ಕಾರ್ಯನಿರ್ವಹಿಸಿದ ಹಲವಾರು ನಿದರ್ಶನಗಳಿವೆ” ಎಂದು ಹೇಳಿದರು.

“ರಾಜ್ಯಪಾಲರ ಹುದ್ದೆಯನ್ನು ರದ್ದುಗೊಳಿಸಬೇಕು ಅಥವಾ ಒಮ್ಮತದ ಮೂಲಕ ಕ್ಷುಲ್ಲಕ ರಾಜಕೀಯದಲ್ಲಿಲ್ಲದ ವ್ಯಕ್ತಿಯನ್ನು ನೇಮಿಸಬೇಕು” ಎಂದು ಸಿಂಘ್ವಿ ಪ್ರತಿಪಾದಿಸಿದರು.
“ಗೋಪಾಲಕೃಷ್ಣ ಗಾಂಧಿಯಂತಹವರು ಇಂತಹ ಕೆಲಸವನ್ನು ಮಾಡುತ್ತಾರೆಯೇ? ಉಪರಾಷ್ಟ್ರಪತಿ ಸ್ಥಾನಕ್ಕೆ ನಮ್ಮ ಪಕ್ಷದಿಂದ ಸೂಚಿಸಲ್ಪಟ್ಟಿದ್ದರೂ ನಾನು ಅವರ ಹೆಸರನ್ನು ತೆಗೆದುಕೊಳ್ಳುತ್ತಿದ್ದೇನೆ. ಆದರೆ, ಮಿತಿ ಮೀರಿದ ಮತ್ತು ತಪ್ಪು ಮಾಡದ ಅಂತಹ ಜನರು, (ಅವರನ್ನು ನೇಮಿಸಿ) ಅಥವಾ ರಾಜ್ಯಪಾಲರ ಹುದ್ದೆಯನ್ನು ರದ್ದುಪಡಿಸಿ” ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರು ಆಗ್ರಹಿಸಿದ್ದಾರೆ.

ರಾಜ್ಯಪಾಲರು ಮುಖ್ಯಮಂತ್ರಿಗೆ ಸವಾಲು ಅಥವಾ ಬೆದರಿಕೆಯಾಗಿದ್ದರೆ, ರಾಜ್ಯಪಾಲರು ಅಲ್ಲಿಂದ ತೆರಳಬೇಕಾಗುತ್ತದೆ. ಏಕೆಂದರೆ, ಚುನಾವಣೆ ನಡೆಯುವುದು ರಾಜ್ಯಪಾಲರಿಗಾಗಿ ಅಲ್ಲ ಎಂದು ಸಿಂಘ್ವಿ ಹೇಳಿದರು.
“ಇಂದು ಏನಾಗುತ್ತಿದೆ ಎಂದರೆ ನಾನು 8-10 ಬಾರಿ ಮಸೂದೆಯನ್ನು ಅಂಗೀಕರಿಸುವುದಿಲ್ಲ ಎಂದು ರಾಜ್ಯಪಾಲರು ಹೇಳುತ್ತಾರೆ.

ಅಂತಿಮವಾಗಿ ನಾನು ನ್ಯಾಯಾಲಯಕ್ಕೆ ಹೋಗಿ ನೀವು ಮಸೂದೆಯನ್ನು ಅಂಗೀಕರಿಸಬೇಕು ಎಂದು ಖಚಿತಪಡಿಸಿಕೊಂಡಾಗ, ನೀವು ಅದನ್ನು ರಾಷ್ಟ್ರಪತಿಗಳಿಗೆ ಉಲ್ಲೇಖಿಸುತ್ತೀರಿ. ಆಡಳಿತವು ನರಳುತ್ತಿದೆ, ವಾಸ್ತವ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ, ರಾಜ್ಯಪಾಲರು ಅದೇ ಕತ್ತಿಯಲ್ಲಿ ಎರಡನೇ ಕತ್ತಿಯಂತೆ ಇನ್ನೊಬ್ಬ ಮುಖ್ಯ ಕಾರ್ಯನಿರ್ವಾಹಕರಂತೆ ವರ್ತಿಸುತ್ತಿದ್ದಾರೆ” ಎಂದು ಹೇಳಿದರು.

ಅಂಬೇಡ್ಕರ್ ಅವರು ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳಿಗೆ ಒಂದೇ ಕತ್ತಿಯಲ್ಲಿ ಎರಡು ಕತ್ತಿಗಳನ್ನು ಹೊಂದಿರಬಾರದು ಎಂಬ ತತ್ವವನ್ನು ಸರ್ಕಾರವು “ನಾಚಿಕೆಯಿಲ್ಲದೆ” ಉಲ್ಲಂಘಿಸುತ್ತಿದೆ ಎಂದು ಸಿಂಘ್ವಿ ಅಸಮಾಧಾನ ಹೊರಹಾಕಿದರು.

Abhishek Singhvi ಆದರೆ, ಕರ್ನಾಟಕದ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಒಪ್ಪಿಗೆ ನೀಡಿರುವ ಕರ್ನಾಟಕದ ಬಗ್ಗೆ ತಾವು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಹಿರಿಯ ವಕೀಲರು, ವಿಷಯ ಉಪನ್ಯಾಯಾಲಯದಲ್ಲಿರುವ ಕಾರಣ ಈಗ ಮಾತನಾಡುವುದಿಲ್ಲ ಎಂದರು.
ಲೋಕಸಭೆ-ರಾಜ್ಯಸಭೆ ಎರಡರಲ್ಲೂ ಅಧ್ಯಕ್ಷರು ಮತ್ತು ಪ್ರತಿಪಕ್ಷಗಳ ನಡುವೆ ಆಗಾಗ್ಗೆ ನಡೆಯುವ ಘರ್ಷಣೆ ಕುರಿತು ಮಾತನಾಡಿದ ಅವರು, ಸಂಸದೀಯ ಸೌಹಾರ್ದತೆಯನ್ನು ಗೌರವಿಸದೇ ಇರುವುದು ನನಗೆ ತುಂಬಾ ದುಃಖವಾಗಿದೆ ಎಂದು ಹೇಳಿದರು.

“ಸೆಂಟ್ರಲ್ ಹಾಲ್ ಒಂದು ಸ್ಥಳವಲ್ಲ, ಇದು ಒಂದು ಪರಿಕಲ್ಪನೆ ಎಂದು ನಾನು ನಂಬುತ್ತೇನೆ. ನಾನು ದೊಡ್ಡ-ಹೃದಯ, ಉದಾತ್ತತೆಯನ್ನು ನಂಬುತ್ತೇನೆ. ಎ ಬಿ ವಾಜಪೇಯಿ ಮತ್ತು (ಭೈರೋನ್ ಸಿಂಗ್) ಶೇಖಾವತ್ ಅವರಂತಹ ಜನರ ಗುಣಲಕ್ಷಣಗಳನ್ನು ನಾನು ಪ್ರಾಮಾಣಿಕವಾಗಿ ನಂಬುತ್ತೇನೆ” ಎಂದು ಅವರು ಹೇಳಿದರು.
“ಆದ್ದರಿಂದ ಆ ಎಲ್ಲ ನಿಜವಾದ ನಂಬಿಕೆಗಳೊಂದಿಗೆ, ನಾನು ದುಃಖಿತನಾಗಿದ್ದೇನೆ, ನಾನು ತುಂಬಾ ವ್ಯಥೆಪಡುತ್ತೇನೆ. ‘ಬಲವಾದ ಭಿನ್ನಾಭಿಪ್ರಾಯದ ಕಾರಣ, ನಾನು 140 ಕ್ಕೂ ಹೆಚ್ಚು ಜನರನ್ನು ಅಮಾನತುಗೊಳಿಸುತ್ತೇನೆ’ ಎಂದು ಹೇಳುವ ಮೂಲಕ ನೀವು ಪ್ರಜಾಪ್ರಭುತ್ವವನ್ನು ನಿರಾಕರಿಸಲು ಸಾಧ್ಯವಿಲ್ಲ. ಪ್ರತಿಪಕ್ಷವು ತನ್ನ ಅಭಿಪ್ರಾಯವನ್ನು ಹೊಂದಿರಬೇಕು ಮತ್ತು ಅಂತಿಮವಾಗಿ ಸರ್ಕಾರವು ಅದನ್ನು ಹೊಂದಿರುತ್ತದೆ” ಎಂದು ಕಾಂಗ್ರೆಸ್ ವಕ್ತಾರರು ಹೇಳಿದರು.

ಗಟ್ಟಿಮುಟ್ಟಾದ ಮತ್ತು ದನಿಯೆತ್ತಿದ ಜನರನ್ನು ಸದನದಿಂದ ಹೊರಹಾಕಿದ ನಿದರ್ಶನಗಳಿವೆ ಎಂದು ಅವರು ಹೇಳಿದರು.

Department-of-disabled-and-senior-citizens ಸೆ,5 ರಂದು ಹಿರಿಯ ನಾಗರೀಕರಿಗೆ ಕ್ರೀಡೆ & ಸಾಂಸ್ಕೃತಿಕ ಸ್ಪರ್ಧೆಗಳ ವ್ಯವಸ್ಥೆ

0

Department-of-disabled-and-senior-citizens ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಅ. 01 ರ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಸೆ. 05 ರ ಗುರುವಾರದಂದು ನಗರದ ನೆಹರು ಕ್ರೀಡಾಂಗಣದಲ್ಲಿ ಹಿರಿಯ ನಾಗರಿಕರಿಗೆ ಜಿಲ್ಲಾ ಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

ಪುರುಷರಿಗೆ ಕ್ರೀಡಾ ಸ್ಪರ್ಧೆಗಳು:- 60-70 ವರ್ಷದವರಿಗೆ ಮ್ಯೂಸಿಕಲ್ ಚೇರ್, 60-69 ವರ್ಷದವರಿಗೆ – ಬಿರುಸಿನ ನಡಿಗೆ, ಬಕೆಟ್‌ನಲ್ಲಿ ಬಾಲ್ ಎಸೆಯುವುದು. 70 ವರ್ಷದವರಿಗೆ ಹಾಗೂ ಮೇಲ್ಪಟ್ಟವರಿಗೆ – ಬಿರುಸಿನ ನಡಿಗೆ, ಬಕೆಟ್‌ನಲ್ಲಿ ಬಾಲ್ ಎಸೆಯುವುದು.

ಮಹಿಳೆಯರಿಗೆ ಕ್ರೀಡಾ ಸ್ಪರ್ಧೆಗಳು:- 60-70 ವರ್ಷದವರಿಗೆ ಮ್ಯೂಸಿಕಲ್ ಚೇರ್. 60-69 ವರ್ಷದವರಿಗೆ ಬಿರುಸಿನ ನಡಿಗೆ, ಬಕೆಟ್‌ನಲ್ಲಿ ಬಾಲ್ ಎಸೆಯುವುದು.70 ವರ್ಷ ಹಾಗೂ ಮೇಲ್ಪಟ್ಟವರಿಗೆ- ಬಿರುಸಿನ ನಡಿಗೆ, ಬಕೆಟ್‌ನಲ್ಲಿ ಬಾಲ್ ಎಸೆಯುವುದು.
ಪುರುಷರಿಗೆ ಸಾಂಸ್ಕೃತಿಕ ಸ್ಪರ್ಧೆಗಳು :-60-69 ವರ್ಷದವರಿಗೆ – ಗಾಯನ ಸ್ಪರ್ಧೆ, ಏಕ ಪಾತ್ರಾಭಿನಯ, 70 ವರ್ಷ ಹಾಗೂ ಮೇಲ್ಪಟ್ಟವರಿಗೆ ಗಾಯನ ಸ್ಪರ್ಧೆ, ಏಕ ಪಾತ್ರಾಭಿನಯ.
ಮಹಿಳೆಯರಿಗೆ ಸಾಂಸ್ಕೃತಿಕ ಸ್ಪರ್ಧೆಗಳು :-60-69 ವರ್ಷದವರಿಗೆ – ಗಾಯನ ಸ್ಪರ್ಧೆ, ಏಕ ಪಾತ್ರಾಭಿನಯ,

Department-of-disabled-and-senior-citizens 70 ವರ್ಷ ಹಾಗೂ ಮೇಲ್ಪಟ್ಟವರಿಗೆ ಗಾಯನ ಸ್ಪರ್ಧೆ, ಏಕ ಪಾತ್ರಾಭಿನಯ.
ಆಸಕ್ತ ಹಿರಿಯ ನಾಗರಿಕರು 60 ವರ್ಷ ಮೇಲ್ಪಟ್ಟವರಾಗಿರಬೇಕು, ಆಧಾರ್ ಕಾರ್ಡ್ ಮತ್ತು ಹಿರಿಯ ನಾಗರಿಕರ ಗುರುತಿನ ಚೀಟಿಯೊಂದಿಗೆ ದಿನಾಂಕ:04-09-2024ರ ಒಳಗಾಗಿ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ, ಡಿ.ವೈ.ಎಸ್.ಪಿ ಕಛೇರಿ ಆವರಣ ಶಿವಮೊಗ್ಗ ಇಲ್ಲಿ ನೊಂದಣಿ ಮಾಡಿಸಿಕೊಳ್ಳತಕ್ಕದ್ದು.

ನೊಂದಣಿಗಾಗಿ ದೂ,ಸಂ : ರವೀಂದ್ರ-9164444370, ಯುವರಾಜ- 9632570371 ಮತ್ತು ಕಚೇರಿ ದೂ,ಸಂ -08182-221188/260424 ಸಂಪರ್ಕಿಸುವAತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಶಿವಮೊಗ್ಗ ಇವರು ತಿಳಿಸಿದ್ದಾರೆ.

Shivamogga Youth Hostel Association ಯೂತ್ ಹಾಸ್ಟೆಲ್ಸ್ ನಿಂದ ಲಕ್ಷಾಂತರ ಜನ ಸುರಕ್ಷಿತ ಪ್ರವಾಸ & ಚಾರಣದ ಅನುಭವ ಪಡೆದಿದ್ದಾರೆ- ಜಿ.ವಿಜಯ ಕುಮಾರ್

0

Shivamogga Youth Hostel Association ವಿಶ್ವಾದ್ಯಂತ ಪ್ರವಾಸಿಗರು ಕಡಿಮೆ ಖರ್ಚಿನಲ್ಲಿ ರಾಜ್ಯ, ದೇಶ ಮತ್ತು ವಿದೇಶಗಳನ್ನು ಸುರಕ್ಷಿತವಾಗಿ ವೀಕ್ಷಿಸಲು ಸಾಧ್ಯವಾಗಿರುವುದಕ್ಕೆ ಯೂತ್ ಹಾಸ್ಟೆಲ್ ಪ್ರಮುಖ ಕಾರಣ ಎಂದು ಯೂತ್ ಹಾಸ್ಟೆಲ್ ಅಸೋಸಿಯೇಷನ್ ರಾಜ್ಯ ಘಟಕದ ಮಾಜಿ ಉಪಾಧ್ಯಕ್ಷ ಜಿ.ವಿಜಯಕುಮಾರ್ ಹೇಳಿದರು.

ಶಿವಮೊಗ್ಗ ಯೂತ್ ಹಾಸ್ಟೆಲ್ ಜಿಲ್ಲಾ ಘಟಕದ ವತಿಯಿಂದ ಮಂಜುನಾಥ ಬಡಾವಣೆಯಲ್ಲಿ ಆಯೋಜಿಸಿದ್ದ ಸಂಸ್ಥಾಪಕರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿ, ಯೂತ್ ಹಾಸ್ಟೆಲ್ ಅನ್ನು ರಿಚರ್ಡ್ ಶಿರ‍್ಮಾನ್ ಸ್ಥಾಪಿಸಿದ್ದು, ಅವರ ಕನಸು ನನಸಾದ ದಿನ. ಯೂತ್ ಹಾಸ್ಟೆಲ್‌ನಿಂದ ಲಕ್ಷಾಂತರ ಜನರು ಸುರಕ್ಷಿತ ಪ್ರವಾಸ ಹಾಗೂ ಚಾರಣದ ಅನುಭವ ಹೊಂದಿದ್ದಾರೆ. ಚಾರಣದಿಂದ ದೇಹ, ಮನಸ್ಸು ಸದೃಢವಾಗುತ್ತದೆ ಎಂದು ತಿಳಿಸಿದರು.

ಈವರೆಗೂ 25ಕ್ಕೂ ಹೆಚ್ಚು ಚಾರಣ ಹಾಗೂ ಒಂದು ಅಂತರಾಷ್ಟ್ರೀಯ ಚಾರಣ ಮಾಡಿದ್ದು, ಎಲ್ಲ ಚಾರಣವು ವಿಶೇಷ ಅನುಭವ ನೀಡಿದೆ. ಪ್ರತಿಯೊಬ್ಬರೂ ಚಾರಣ ಪ್ರವಾಸಗಳಲ್ಲಿ ಪಾಲ್ಗೊಳ್ಳಬೇಕು. ಇದರಿಂದ ತುಂಬಾ ಅನುಕೂಲವಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಘಟಕದ ಹಿರಿಯ ಸದಸ್ಯ, ಮಾಜಿ ಚೇರ್ಮನ್ ಮನು ಪವಾರ್ ಮಾತನಾಡಿ, ಜರ್ಮನ್‌ನಲ್ಲಿ ಆರಂಭಗೊಂಡ ಯೂತ್ ಹಾಸ್ಟೆಲ್ ಇಂದು ಪ್ರಪಂಚಾದ್ಯಂತ ಕಾರ್ಯ ನಿರ್ವಹಿಸುತ್ತಿದ್ದು, ನಮ್ಮ ಘಟಕದಿಂದ 25 ರಾಜ್ಯಮಟ್ಟದ ಚಾರಣ ಮಾಡಿದ್ದು, ನವೆಂಬರ್‌ನಲ್ಲಿ 26ನೇ ಚಾರಣವನ್ನು ಕುಪ್ಪಳ್ಳಿಯಲ್ಲಿ ಹಮ್ಮಿಕೊಂಡಿದ್ದು, ಚಾರಣಗಳ ಜತೆಯಲ್ಲಿ ಸೇವಾ ಕಾರ್ಯಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.

Shivamogga Youth Hostel Association ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷ ಡಿ.ಜಿ.ಸುನೀಲ್‌ಕುಮಾರ್ ಮಾತನಾಡಿ, ಚಾರಣದಲ್ಲಿ ಮಕ್ಕಳು, ಮಹಿಳೆಯರು ಸೇರಿ ಎಲ್ಲರೂ ಭಾಗವಹಿಸುತ್ತಾರೆ. ನಮ್ಮ ಸಂಸ್ಥೆಯಲ್ಲಿ ಹೆಚ್ಚು ಸದಸ್ಯರು ಇದ್ದಾರೆ ಎಂದರು.

ಡಾ. ಪುನೀತ್ ರಾಜ್‌ಕುಮಾರ್ ರಾಜರತ್ನ ಪ್ರಶಸ್ತಿ ಪುರಸ್ಕೃತ ಜಿ.ವಿಜಯಕುಮಾರ್ ಅವರನ್ನು ಸನ್ಮಾನಿಸಲಾಯಿತು. ಚೇರ್ಮನ್ ಹರೀಶ್ ಪಂಡಿತ್, ಕಾರ್ಯದರ್ಶಿ ಪ್ರಶಾಂತ್ ವಸಿಷ್ಠ, ದಯಾನಂದ್, ನಾಗರಾಜ ಶೇಠ್, ನವೀನ್ ಜವಳಿ, ಪೃಥ್ವಿ ಗಿರಿಮಾಜಿ, ಡಿ.ಜಿ.ಮಂಜುನಾಥ, ಕೆ.ರಾಘವೇಂದ್ರ, ಕೆ.ಎ.ಮಹೇಶ್, ಉಮೇಶ್ ಅಕ್ಕಸಾಲಿ, ಶ್ರೀಪಾದ ಭಟ್, ವೀಣಾರಾವ್, ಈಶ್ವರ್, ಟಿ.ಎಸ್.ಬದರೀನಾಥ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

Rotary Shivamogga ನಿರಂತರ ಅಭ್ಯಾಸ, ಛಲ ಬಿಡದ ಪ್ರಯತ್ನ ಇತ್ಯಾದಿ ಗುರಿ ಸಾಧನೆಯ ಕೀಲಿ- ಸೌಮ್ಯ ಹರಳಪ್ಪ

0

Rotary Shivamogga ವಿದ್ಯಾರ್ಥಿಗಳು ತಮ್ಮ ಗುರಿ ಸಾಧನೆಗೆ ಸಮಯದ ಪರಿಪಾಲನೆ, ನಿರಂತರ ಅಭ್ಯಾಸ, ಛಲ ಬಿಡದ ಪ್ರಯತ್ನ, ಓದುವ ಸಮಯದ ನಿಗಧಿ, ಕಲಿಕಾ ಕೊಠಡಿಯ ವಾತಾವರಣ, ಅಭ್ಯಾಸದ ವೇಳಾ ಪಟ್ಟಿಯ ಸಿದ್ಧತೆ & ಅದರ ಪಾಲನೆ ಎಲ್ಲವನ್ನು ಅವಲಂಬಿಸಿದ್ದು, ಅವುಗಳನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ಶಿವಮೊಗ್ಗ ನಗರದ ರೋಟರಿ ಪೂರ್ವ ಆಂಗ್ಲ ಶಾಲೆಯಲ್ಲಿ ನಡೆದ ‘ಅಧ್ಯಯನ ಕೌಶಲ ಹಾಗೂ ಸಮಯ ನಿರ್ವಹಣೆ’ ಉಪನ್ಯಾಸ ಮಾಲಿಕೆಯಲ್ಲಿ ಮುಖ್ಯ ತರಬೇತುದಾರರಾಗಿ ಮಾತನಾಡಿದ ಜೆ.ಸಿ.ಐ. ವಲಯ ತರಬೇತುದಾರರಾದ ಶ್ರೀಮತಿ ಸೌಮ್ಯ ಹರಳಪ್ಪ ಇವರು ಪ್ರತಿಪಾದಿಸಿದರು.

Rotary Shivamogga ಇದೇ ಸಂದರ್ಭದಲ್ಲಿ ಮಾತನಾಡಿದ ಶರಾವತಿ ಜೆ.ಸಿ.ಐ.ನ ಅಧ್ಯಕ್ಷರಾದ ಶ್ರೀಮತಿ ಸ್ವಪ್ನ ಸಂತೋಷ್ ಇವರು ವಿದ್ಯಾರ್ಥಿಗಳ ಪ್ರೌಢ ಶಿಕ್ಷಣವು ವ್ಯಕ್ತಿತ್ವ ನಿರ್ಮಾಣದ ಹಾಗೂ ಭವಿಷ್ಯದ ಜೀವನವನ್ನು ರೂಪಿಸುವ ಪ್ರಮುಖ ಘಟ್ಟವಾಗಿದ್ದು, ಈ ಹಂತದಲ್ಲಿ ವಿದ್ಯಾರ್ಥಿಗಳು ಸಮಯದ ಸರಿಯಾದ ನಿರ್ವಹಣೆ ಮಾಡುವುದರ ಜೊತೆಗೆ ಬೋಧಕರು ಹಾಗೂ ಪೋಷಕರ ಸಲಹೆ ಸೂಚನೆಯನ್ನು ಪಾಲಿಸಿದಾಗ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಬಹುದು ಎಂದರು. ಉಪನ್ಯಾಸ ಮಾಲಿಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ರೋಟರಿ ಶಿವಮೊಗ್ಗ ಪೂರ್ವ ಎಜುಕೇಷನಲ್ & ಛಾರಿಟನಲ್ ಟ್ರಸ್ಟ್ (ರಿ.,) ಇದರ ಮ್ಯಾನೇಜಿಂಗ್ ಟ್ರಸ್ಟಿ ಶ್ರೀ ಚಂದ್ರಶೇಖರಯ್ಯ ಎಂ., ಇವರು ಮಾತನಾಡಿ ವಿದ್ಯಾರ್ಥಿಗಳು ಪರೀಕ್ಷೆ ಸಮೀಪಿಸಿದಾಗ ರಾತ್ರಿ ಇಡೀ ಓದಿ ಆರೋಗ್ಯವನ್ನು ಹಾಳು ಮಾಡಿಕೊಳ್ಳುವ ಬದಲಾಗಿ ಶೈಕ್ಷಣಿಕ ವರ್ಷದ ಪ್ರಾರಂಭದಿಂದ ಅತಿಥಿ ಉಪನ್ಯಾಸಕರು ಸೂಚಿಸಿದಂತೆ ಅಭ್ಯಾಸದ ವೇಳಾಪಟ್ಟಿಯನ್ನು ರೂಪಿಸಿಕೊಂಡು ಅದರಂತೆ ಪ್ರತಿದಿನ ಓದಿ ಆಗಿಂದಾಗ್ಗೆ ಬರುವ ಕಿರು ಪರೀಕ್ಷೆ, ಘಟಕ ಪರೀಕ್ಷೆಗಳನ್ನು ಗಂಭೀರವಾಗಿ ತೆಗೆದುಕೊಂಡಾಗ ವರ್ಷದ ಕೊನೆಯಲ್ಲಿ ಲೀಲಾಜಾಲವಾಗಿ ಎದುರಿಸಬಹುದೆಂದರು.

ಈ ಕಾರ್ಯಕ್ರಮದಲ್ಲಿ ಟ್ರಸ್ಟ್ನ ಉಪಾಧ್ಯಕ್ಷರಾದ ಡಾ|| ಪರಮೇಶ್ವರ್ ಡಿ. ಶಿಗ್ಗಾಂವ್, ಕಾರ್ಯದರ್ಶಿ ರಾಮಚಂದ್ರ ಎಸ್.ಸಿ., ಖಜಾಂಚಿ ಜಿ. ವಿಜಯ್ ಕುಮಾರ್, ಪ್ರಾಂಶುಪಾಲ ಸೂರ್ಯನಾರಾಯಣ್ ಆರ್., ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Kote Anjaneya Swamy Temple ಇಡೀ ಭದ್ರಾವತಿ ತಾಲ್ಲೂಕನ್ನು ಜೂಜು ದಂಧೆ ಮುಕ್ತ ಮಾಡಲು ಕಂಕಣತೊಟ್ಟ ಕಾರ್ಯಪಡೆ

0

Kote Anjaneya Swamy Temple ಭದ್ರಾವತಿಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮವನ್ನು ನೆರವೇರಿಸುವ ಮೂಲಕ ಕಾರ್ಯಕರ್ತರು ಕೈಗಳಿಗೆ ಕಂಕಣವನ್ನು ಕಟ್ಟಿ ಭದ್ರಾವತಿ ಅಕ್ರಮ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಲ್ಲಿಸುವ ಪಣತೊಟ್ಟಿದ್ದಾರೆ.

ಮುಂದುವರೆದು ಈ ದಿನ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿಗಳಿಗೂ ಮತ್ತು ಜಿಲ್ಲಾಧಿಕಾರಿಗಳಿಗೂ ಆಗ್ರಹ ಪತ್ರವನ್ನು ನೀಡಿದ್ದಾರೆ. ಭದ್ರಾವತಿ ತಾಲೂಕಿನಲ್ಲಿ ಅಕ್ರಮ ಕಾನೂನುಬಾಹಿರ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿದೆ.

ಉಕ್ಕಿನ ನಗರಿ ಎಂದು ಪ್ರಸಿದ್ದಿ ಯಾಗಿದ್ದ ಭದ್ರಾವತಿ ನಗರವು ಅಕ್ರಮ ಕಾನೂನುಬಾಹಿರ ಚಟುವಟಿಕೆಗಾರರ ಅಡಗು ತಾಣವಾಗಿದೆ. ಭದ್ರಾವತಿ ಮತ್ತು ಸುತ್ತಮುತ್ತಲಿನ ಭದ್ರಾವತಿ ತಾಲೂಕಿಗೆ ಸಂಬಂಧಪಟ್ಟ ಹಳ್ಳಿಗಳಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ದಿನನಿತ್ಯದ ಬಳಕೆಯ ಹಾಲು ತರಕಾರಿ ಕೈಗೆಟುಕುವಂತೆ, ಓಸಿ ಮಟ್ಕಾ ಬರೆಯುವವರು ಸಹ ಸಿಗುತ್ತಿದ್ದಾರೆ.

ಎಂದರೆ ಎಷ್ಟು ಬಿಗಿ ಕಾನೂನಿನ ವ್ಯವಸ್ಥೆ ಭದ್ರಾವತಿಯಲ್ಲಿ ಇದೆ ಎಂದು ಸಾರ್ವಜನಿಕರು ಯೋಚಿಸುವಂತಗಿದೆ. ಭದ್ರಾವತಿಯ ಬಹುತೇಕ ಕಡೆಗಳಲ್ಲಿ ಇಸ್ಪೀಟ್ ದಂಧೆಯು ಜೋರಾಗಿ ನಡೆಯುತ್ತಿದೆ. ನಂಜಾಪುರ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ, ಉಬ್ರಾಣಿ ರಸ್ತೆಯ ಅರಣ್ಯ ಭಾಗದಲ್ಲಿ, ದಾನವಾಡಿ ಮತ್ತು ಕಲ್ಲಾಪುರ ಭಾಗಕ್ಕೆ ಸೇರಿದ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಮತ್ತು ಮುಂತಾದ ಸ್ಥಳಗಳಲ್ಲಿ ಇಸ್ಪೀಟ್ ದಂಧೆಯು ನಡೆಯುತ್ತಿದ್ದು. ಕೆಲವು ಅಧಿಕಾರಿಗಳು ಇಸ್ಪೀಟ್ ದಂಧೆ ನಿಂತಿದೆ ಎಂದು ಹೇಳಿದರು ಸಹ ನೆಪ ಮಾತ್ರಕ್ಕೆ ಹೇಳಿಕೆಯಾಗಿದೆ ಹೊರತು ಭದ್ರಾವತಿಯಲ್ಲಿ ಇಸ್ಪೀಟ್ ದಂಧೆ ನಿಲ್ಲುತ್ತಿಲ್ಲ. ಬೇರೆ ಬೇರೆ ಜಿಲ್ಲೆಗಳಿಂದ ಬಂದು ಭದ್ರಾವತಿಯ ಅರಣ್ಯ ಭಾಗಗಳಲ್ಲಿ ಇಸ್ಪೀಟ್ ಆಡುವ ಮಟ್ಟಿಗೆ ಭದ್ರಾವತಿಯಲ್ಲಿ ಇಸ್ಪೀಟ್ ದಂದೆ ಬೆಳೆದು ನಿಂತಿದೆ.

Kote Anjaneya Swamy Temple ಇಸ್ಪೀಟ್ ದಂಧೆಯಲ್ಲಿ ಸಾಲ ಮಾಡಿಕೊಂಡು ಜೀವವನ್ನು ಕಂಠಿ ಎಂಬ ವ್ಯಕ್ತಿ ಕಳೆದುಕೊಂಡಿರುವ ಪ್ರಕರಣವು ಸಹ ಭದ್ರಾವತಿಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಹಲವಾರು ಯುವಕರು ಆನ್ಸೆನ್ ಗೇಮ್ನಲ್ಲಿ ಹಣ ಕಳೆದುಕೊಂಡು ಬದುಕನ್ನು ತೊರೆಯುವ ಮಟ್ಟಿಗೆ ಪರಿಸ್ಥಿತಿ ಎದ್ದು ನಿಂತಿದೆ. ಭದ್ರಾವತಿಯಲ್ಲಿ ಗಾಂಜಾ ದಂಧೆಯೂ ಸಹ ಹೇರಳವಾಗಿ ನಡೆಯುತ್ತಿದ್ದು. ಬಹುತೇಕ ಯುವಕರು ಗಾಂಜಾ ಸೇವನೆಗೆ ತುತ್ತಾಗಿದ್ದಾರೆ.

ಹಲವಾರು ಪ್ರಕರಣಗಳು ದಾಖಲಾದರೂ ಸಹ ಗಾಂಜಾ ಸೇದುವ ಯುವಕರ ಗುಂಪು ಕಡಿಮೆ ಆಗಿಲ್ಲ. ವಾರದ ಬಡ್ಡಿಗೆ ಹಣವನ್ನು ಪಡೆದು ಜೂಜಾಟಕ್ಕೆ ಯುವಕರು ಮುಗಿಬಿದ್ದು ಜೀವನವನ್ನು ಕಳೆದುಕೊಳ್ಳುತ್ತಿದ್ದಾರೆ. ಸದರಿ ವಿಚಾರಗಳಂತೆ ಭದ್ರಾವತಿಯ ಯುವ ಪೀಳಿಗೆಯು ಬಹುತೇಕ ದಾರಿ ತಪ್ಪುತಿದ್ದು. ಯುವಕನರನ್ನು ಹೆತ್ತ ತಂದೆ ತಾಯಿಯಂದಿರ ಜೀವನ ಚಿಂತಾ ಜನಕವಾಗಿದೆ.

ಈ ಕೂಡಲೇ ತಾವುಗಳು ಗಮನ ಹರಿಸಿ ಸಂಬಂಧ ಪಟ್ಟ ಇಲಾಖೆಗೆ ಕಠಿಣ ಕಾನೂನು ಕ್ರಮವನ್ನು ತೆಗೆದುಕೊಳ್ಳುವ ಮೂಲಕ ಭದ್ರಾವತಿ ತಾಲೂಕಿನಲ್ಲಿ ಸಂಪೂರ್ಣ ಅಕ್ರಮ ಕಾನೂನುಬಾಹಿರ ಚಟುವಟಿಕೆಗಳು ನಿಲ್ಲಿಸಲು ಮುಂದಾಗ ಬೇಕೆಂದು ತಮ್ಮಲ್ಲಿ ವಿನಂತಿಸುತ್ತೇವೆ. ಮುಂದಿನ ಏಳು ದಿನಗಳಲ್ಲಿ ಭದ್ರಾವತಿ ತಾಲೂಕಿನಲ್ಲಿ ಅಕ್ರಮ ಕಾನೂನುಬಾಹಿರ ಚಟುವಟಿಕೆಗಳು ನಿಲ್ಲದೆ ಹೋದರೆ ಮುಂದಿನ ಪೀಳಿಗೆಗೆ ಸುಭದ್ರ ಭದ್ರಾವತಿಯನ್ನು ನೀಡುವ ನಿಟ್ಟಿನಲ್ಲಿ ಭದ್ರಾವತಿ ಹಿತ ರಕ್ಷಣಾ ವೇದಿಕೆಯ ಕಾರ್ಯಕರ್ತರಾದ ನಾವುಗಳು ಅಕ್ರಮ ಚಟುವಟಿಕೆಗಳು ನಡೆಯುವ ಸ್ಥಳ ದಲ್ಲೇ ನಿಂತು ಅಕ್ರಮ ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಕಾನೂನಾತ್ಮಕವಾಗಿ ಸಂಬಂಧಪಟ್ಟ ಇಲಾಖೆಯವರನ್ನು ಸ್ಥಳಕ್ಕೆ ಕರೆಸಿ ಹೋರಾಟ ನಡೆಸಲಾಗುತ್ತದೆ ಎಂದು ಆಗ್ರಹ ಪತ್ರವನ್ನು ನೀಡಿದರು.

ಇದೇ ಸಮಯದಲ್ಲಿ ಭದ್ರಾವತಿ ಹಿತ ರಕ್ಷಣ ವೇದಿಕೆ ಅಧ್ಯಕ್ಷರಾದ ಯೇಸುಕುಮಾರ್ ಮತ್ತು ಉಪಾಧ್ಯಕ್ಷರಾದ ತೀರ್ಥೇಶ್, ಭರತ್ ಕುಮಾರ್, ಸಾಮಾಜಿಕ ಹೋರಾಟಗಾರರಾದ ದೇವರಾಜ್ ಅರಳಿಹಳ್ಳಿ, ಪ್ರಸನ್ನ ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು.

Karnataka State Commission for Women ಬಿಎಸ್ ವೈ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ಪ್ರಕರಣಕ್ಕೆ ಮತ್ತೊಂದು ತಿರುವು

0

Karnataka State Commission for Women ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಮ್ಮ ಅಪ್ರಾಪ್ತ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ’ ಎಂದು ಆರೋಪಿಸಿದ್ದ ಮಹಿಳೆಯ ಸಾವಿನ ಕುರಿತು ತನಿಖೆ ನಡೆಸುವಂತೆ ಕರ್ನಾಟಕ ರಾಜ್ಯ ಮಹಿಳಾ ಆಯೋಗವು ಬೆಂಗಳೂರು ಪೊಲೀಸರಲ್ಲಿ ಆಗ್ರಹಿಸಿದೆ.

‘ಮಹಿಳೆಯ ಸಾವು ಮತ್ತು ಸಮಾಧಿ’ ಮಹಿಳಾ ಸಂಘಟನೆಗಳು ಅನುಮಾನ ವ್ಯಕ್ತಪಡಿಸಿದ ನಡುವೆ ಮಹಿಳಾ ಆಯೋಗವು ಬೆಂಗಳೂರು ಪೊಲೀಸರಿಂದ ವರದಿಯನ್ನು ಕೇಳಿದೆ.

ಈ ವರ್ಷದ ಫೆಬ್ರವರಿಯಲ್ಲಿ ಬೆಂಗಳೂರಿನ ನಿವಾಸದಲ್ಲಿ ಬಿಜೆಪಿ ಮುಖಂಡ ತನ್ನ 17 ವರ್ಷದ ಮಗಳಿಗೆ ಕಿರುಕುಳ ನೀಡಿದ್ದಾರೆ ಎಂದು ದೂರು ನೀಡಿದ್ದ ಮಹಿಳೆ ಮೇ ತಿಂಗಳಲ್ಲಿ ಸಾವನ್ನಪ್ಪಿದ್ದರು. ಶ್ವಾಸಕೋಶದ ಕ್ಯಾನ್ಸರ್ ನಿಂದ ಆಕೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.

Karnataka State Commission for Women ಮಹಿಳಾ ಆಯೋಗವು ಆಕೆಯ ಸಾವು ಮತ್ತು ಆಕೆಯ ದೇಹವನ್ನು ಸಮಾಧಿ ಮಾಡಿರುವ ಸುತ್ತಲಿನ ಸಂದರ್ಭಗಳ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿತು. ಮರಣೋತ್ತರ ಪರೀಕ್ಷೆ ನಡೆಸದೆ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ಮೇ ತಿಂಗಳಲ್ಲಿ ದೂರು ದಾಖಲಾಗಿತ್ತು.
ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದು, ಪ್ರಕರಣದ ಕುರಿತು ತ್ವರಿತ ಮತ್ತು ಸಮಗ್ರ ತನಿಖೆ ನಡೆಸುವಂತೆ ಕೋರಿದ್ದಾರೆ.

DC Shivamogga ಹಬ್ಬಗಳನ್ನ ಎಲ್ಲರೂ ಸಡಗರ, ಸಂಭ್ರಮ & ಆತಂಕ ರಹಿತವಾಗಿ ಆಚರಿಸಬೇಕು-‌ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

0

DC Shivamogga ಹಬ್ಬಗಳನ್ನು ಎಲ್ಲರೂ ಸಡಗರ ಸಂಭ್ರಮದಿಂದ ಆತಂಕ ರಹಿತವಾಗಿ ಆಚರಿಸಬೇಕು ಎಂದು ಜಿಲ್ಲಾಧಿಕಾರಿ ಗುರದತ್ತ ಹೆಗೆಡೆ ತಿಳಿಸಿದರು.
ಅವರು ಸೋಮವಾರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೋಲಿಸ್ ಇಲಾಖೆ, ಮಹಾನಗರ ಪಾಲಿಕೆ ವತಿಯಿಂದ ಗಣೇಶ ಹಾಗೂ ಹಿದ್ ಮಿಲಾದ್ ಹಬ್ಬಗಳ ಪ್ರಯುಕ್ತ ಸರ್ವಧರ್ಮದ ಮುಖಂಡರ ಶಾಂತಿಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅವರು ಶಿವಮೊಗ್ಗ ಜಿಲ್ಲೆ ಅತ್ಯಂತ ಶಾಂತಿಪ್ರಿಯರು. ವಿಶ್ವಮಾನವ ಸಂದೇಶ ಸಾರಿದ ಕುವೆಂಪು ಜನ್ಮತಾಳಿದ ಜಿಲ್ಲೆಯಾಗಿದ್ದು, ಜಿಲ್ಲೆಯಲ್ಲಿ ಸಜ್ಜನರು ಜೀವಿಸುತ್ತಿದ್ದಾರೆ. ಆದರೆ ಈಗ ಕೋಮು ಸೂಕ್ಷö್ಮ ಪ್ರದೇಶ ಎನ್ನುವ ಹೆಸರು ಬಂದಿದ್ದು, ಕೆಲವು ಕಿಡಿಗೇಡಿಗಳಿಂದ ಶಾಂತಿಗೆ ಭಂಗ ತರುವ ಕೆಲಸ ಮಾಡುವುದರಿಂದ ಇಡೀ ಜಲ್ಲೆಗೆ ಕೆಟ್ಟ ಹೆಸರು ಬರುತ್ತದೆ. ಜಿಲ್ಲಾಡಳಿತ ಈ ರೀತಿಯ ವ್ಯಕ್ತಿಗಳನ್ನು ಗುರುತಿಸಿ ಗಡಿಪಾರು ಮಾಡುವುದು ಹಾಗೂ ಕಾನೂನುಕ್ರಮ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು.
ಹಬ್ಬಗಳಲ್ಲಿ ಎರಡು ಧರ್ಮವರು ತಮ್ಮ ಕುಟುಂಬದ ಜೊತೆಯಲ್ಲಿ ಪ್ರೀತಿವಿಶ್ವಾಸದಿಂದ ಸಡಗರ ಸಂಭ್ರಮದಿಂದ ಆಚರಿಸುವ ವಾತಾವಾರಣವನ್ನು ನಿರ್ಮಾಣ ಮಾಡಬೇಕೆ ಹೊರತು ಆತಂಕದಿಂದ ಭಯಬೀತರಾಗಿ ಆಚರಿಸುವಂತೆ ಅಲ್ಲ. ಈ ನಿಟ್ಟಿನಲ್ಲಿ ಯೋಚಿಸಿ ಯುವಜನರಿಗೆ ಕಾನೂನು ಉಲ್ಲಂಘನೆ ಮಾಡದಂತೆ ಹಿರಿಯರು ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ನೀಡಿ ಎರಡು ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸೊಣ. ಎರಡು ಹಬ್ಬಗಳಲ್ಲೂ ಪರಿಸರ ಸ್ನೇಹಿಯಾಗಿ ಪಟಾಕಿ ಹಾಗೂ ಧ್ವನಿ ವರ್ಧಕ ಇನ್ನಿತರ ವಸ್ತುಗಳನ್ನು ಬಳಸಬೇಕು ಮತ್ತು ಯಾವುದೇ ಸುದ್ಧಿಗಳನ್ನು ಪ್ರಸಾರ ಮಾಡುವಾಗ ಮಾಧ್ಯಮದವರು ಅಧಿಕೃತ ಮಾಹಿತಿ ಇಲ್ಲದೇ ಸಮಾಜದಲ್ಲಿ ಸಮಸ್ಯೆಗಳ ವೈಭವಿಕರಿಸುವ ಸುದ್ಧಿಯನ್ನು ಪ್ರಸಾರ ಮಾಡುವುದು ಬೇಡ ಎಂದು ಮನವಿ ಮಾಡಿದರು.
ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಅವರು ಮಾತನಾಡಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳು ಒಟ್ಟಿಗೆ ಬಂದಿರುವುದರಿAದ ಜಿಲ್ಲಾ ಪೋಲಿಸ್ ಇಲಾಖೆಯ ವತಿಯಿಂದ ಈಗಾಗಲೇ ಜಿಲ್ಲೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಶಾಂತಿಸಭೆಗಳನ್ನು ನಡೆಸಲಾಗಿದೆ. ಇಡೀ ಜಿಲ್ಲಾದ್ಯಂತ 3500 ಕ್ಕೂ ಹೆಚ್ಚು ಕಡೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಹಾಗೂ ಈದ್ ಮಿಲಾದ್ ಹಬ್ಬ ಆಚರಣೆಯೂ ಎಲ್ಲಾ ಕಡೆ ನಡೆಯುತ್ತಿರುವುರಿಂದ ಎರಡು ಸಮುದಾಯದ ಮುಖಂಡರು ಹಾಗೂ ಯುವಕರಿಗೆ ಹಬ್ಬವನ್ನು ಉತ್ತಮವಾಗಿ ಶಾಂತಿಯುತವಾಗಿ ಆಚರಿಸುವಂತೆ ಸೂಚನೆ ನೀಡಲಾಗಿದೆ.
ಮೆರವಣಿಗೆಯ ವೇಳೆಯಲ್ಲಿ ಆಕ್ರೋಶಭರಿತವಾಗಿ ಇನ್ನೊಂದು ಧರ್ಮವನ್ನು ಗುರಿಯಾಗಿಸಿಕೊಂಡು ಘೋಷಣೆಗಳನ್ನು ಕೂಗುವ, ಪ್ರಚೋಧಿಸುವ 560 ಕ್ಕೂ ಹೆಚ್ಚು ಜನರನ್ನು ಈಗಾಗಲೇ ಗುರುತಿಸಲಾಗಿದೆ ಮತ್ತು ಸಮಾಜದಲ್ಲಿ ಕೆಟ್ಟ ಪರಿಣಾಮವನ್ನು ಬಿರುವ 1000 ಕ್ಕೂ ಹೆಚ್ಚು ಜನರಿಗೆ ಸಂಬAಧಿಸಿದ ಪೋಲಿಸ್ ಠಾಣೆಯಲ್ಲಿ ಎಚ್ಚರಿಕೆಯನ್ನು ನೀಡಲಾಗಿದ್ದು ಕೆಲವು ವ್ಯಕ್ತಿಗಳನ್ನು ಗಡಿಪಾರು ಸಹ ಮಾಡಲಾಗುವುದು.
DC Shivamogga ಹಬ್ಬಗಳು ತೋರಿಕೆಗಾಗಿ ಮಾಡದೆ ಶ್ರದ್ಧಾಭಕ್ತಿಯಿಂದ ಆಚರಿಸಬೇಕು. ಎಲ್ಲಾ ಧರ್ಮದವರಿಗೂ ಹಬ್ಬಗಳನ್ನು ಆಚರಣೆ ಮಾಡಲು ಜಿಲ್ಲಾಡಳಿತ ಅವಕಾಶವನ್ನು ನೀಡುತ್ತದೆ. ಕಾನೂನಿನ ಕೆಲವು ನಿಯಮವನ್ನು ಸರಿಯಾಗಿ ಪಾಲಿಸಿ ಆಚರಿಸುವಂತೆ ಸೂಚಿಸಲಾಗುತ್ತದೆ. ಯಾರು ಕೂಡ ನಿರ್ಭಂದ ಎಂದುಕೊಳ್ಳಬೇಡಿ. ಹಬ್ಬಗಳ ಆಚರಣೆ ವೇಳೆ ಲಕ್ಷಾಂತರ ಜನರು ಸೇರುತ್ತಾರೆ. ಯಾರೋ ಹತ್ತು ಜನ ಕಿಡಿಗೇಡಿಗಳು ಮಾಡುವ ಕೃತ್ಯದಿಂದ ಲಕ್ಷಾಂತರ ಜನರ ನೆಮ್ಮದಿಯನ್ನು ಹಾಳು ಮಾಡುತ್ತಾರೆ. ಅದ್ದರಿಂದ ಎರಡು ಧರ್ಮದ ಮುಖಂಡರು, ಯುವಕರು ಸಮಾಜದಲ್ಲಿ ಶಾಂತಿಯನ್ನು ಕಾಪಾಡುವಲ್ಲಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಹೆಚ್ಚುವರಿ ಪೋಲಿಸ್ ರಕ್ಷಣಾಧಿಕಾರಿ ಅನಿಲ್ ಕುಮಾರ್ ಬೊಮ್ಮರಡಿ ಮಾತನಾಡಿ ಇಂದಿನ ದಿನಗಳಲ್ಲಿ ಯುವಕರಲ್ಲಿ ಭಕ್ತಿ -ಭಾವದಲ್ಲಿ ಹಬ್ಬಗಳ ಆಚರಣೆ ಕಾಣುತ್ತಿಲ್ಲ. ಪೈಪೋಟಿ ಬಿಳುವುದು, ನಾವೆ ಶ್ರೇಷ್ಠ ಎನ್ನುವುದು ಈ ರೀತಿ ಮನೋಭಾವದಿಂದ ಸಮಾಜದಲ್ಲಿ ಗಲಭೆ ಸೃಷ್ಠಿಯಾಗುತ್ತದೆ. ಅದ್ದರಿಂದ ಸಮಾಜದ ಹಿರಿಯರು ಎರಡು ಹಬ್ಬಗಳ ಕುರಿತು ಯುವಕರಿಗೆ ಮಾರ್ಗದರ್ಶನ ಮಾಡಿ ಸರಿಯಾದ ರೀತಿಯಲ್ಲಿ ಹಬ್ಬಗಳು ಮಾದರಿಯಾಗಿ ಆಚರಿಸಬೇಕಾಗಿದೆ. ಅನ್ಯ ಧರ್ಮದ ಕುರಿತು ಅವಹೇಳನ ಮಾಡುವ ಪೋಸ್ಟ್ಗಳು ಬ್ಯಾನರ್‌ಗಳು ಹಾಕಬೇಡಿ. ಎಲ್ಲರು ನಿಯಮ ಕಾನೂನು ಪಾಲಿಸಿ ಹಬ್ಬಗಳು ಉತ್ತಮವಾಗಿ ನಡೆಸಿ ಎಂದರು.
ವಿಧಾನ ಪರಿಷತ್ ಸದಸ್ಯೆ ಬಲ್ಕಿಷ್ ಬಾನು ಅವರು ಮಾತನಾಡಿ ಯಾವ ಧರ್ಮಗಳು ಗಲಭೆಯನ್ನು ಪ್ರಚೋದಿಸುವುದಿಲ್ಲ. ಎಲ್ಲಾ ಧರ್ಮಗಳು ಶಾಂತಿಯನ್ನು ಸಾರುತ್ತವೆ. ಮನುಷ್ಯರಾದ ನಾವು ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಬಸವಣ್ಣನವರು ತತ್ವದಂತೆ ಮಾನವೀಯತೆ ಶ್ರೇಷ್ಠ ಎನ್ನುವುದನ್ನು ಅರಿಯಬೇಕಾಗಿದೆ. ಈ ಹಿಂದೆ ನಡೆದಿರುವ ಘಟನೆಗಳನ್ನು ಇಟ್ಟುಕೊಂಡು ಯಾರು ಕೂಡ ಗಲಭೆಗಳನ್ನು ಸೃಷ್ಠಿಸುವ ಮತ್ತು ಸಮಾಜದಲ್ಲಿ ಶಾಂತಿಗೆ ಭಂಗ ತರುವ ಕೆಲಸ ಮಾಡಬಾರದು. ಮುಖಂಡರು, ನಾಯಕರಾದ ನಾವುಗಳು ನಮ್ಮ ಸಮಾಜದಲ್ಲಿನ ಯುವಕರನ್ನು ನಿಯಂತ್ರಿಸುವ ಮತ್ತು ಸರಿ ತಪ್ಪುಗಳನ್ನು ತಿದ್ದುವ ಕೆಲಸವನ್ನು ಮಾಡಬೇಕು. ಎಲ್ಲಾ ಹಬ್ಬಗಳ ಆಚರಣೆಯಲ್ಲಿ ಪ್ರೀತಿ ವಿಶ್ವಾಸ ಶಾಂತಿಯಿಂದ ಎರಡು ಧರ್ಮದವರು ಪರಸ್ಪರ ಭಾಗವಹಿಸಬೇಕು ಎಂದರು.
ಶಿವಮೊಗ್ಗ ನಗರ ಶಾಸಕ ಎಸ್. ಎನ್. ಚನ್ನಬಸಪ್ಪ ಅವರು ಮಾತನಾಡಿ ಎರಡು ಸಮುದಾಯದ ಹಬ್ಬಗಳು ಕಳೆದ ಎರಡು ವರ್ಷಗಳಿಂದ ಒಟ್ಟಿಗೆ ಆಗಮಿಸುತ್ತಿದ್ದು, ಶಾಂತಿ ಸಹಬಾಳ್ವೆಯಿಂದ ಎಲ್ಲರು ಒಟ್ಟಾಗಿ ಹೋಗಬೇಕು. ಜಿಲ್ಲೆಯನ್ನು ಶಾಂತಿಯುತವಾಗಿ ಇಟ್ಟುಕೊಳ್ಳಬೇಕು. ಆತಂಕವಾದಿಗಳನ್ನು ನಿಯಂತ್ರಿಸಬೇಕು. ಕಾನೂನು ರೀತಿಯಲ್ಲಿ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಳ್ಳಬೇಕು. ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಈ ಹಿಂದೆ ಶಿವಮೊಗ್ಗದಲ್ಲಿ ನಡೆದಿರುವ ಅಹಿತಕರ ಘಟನೆಗಳು ಹೊರ ಜಿಲ್ಲೆ ರಾಜ್ಯಗಳಿಂದ ಬಂದು ಮಾಡಿದ್ದಾರೆ ಎಂದು ತನಿಖೆಗಳು ಹೇಳುತ್ತಿದೆ. ಅದ್ದರಿಂದ ಜಿಲ್ಲಾ ಪೋಲಿಸ್ ಗಡಿಗಳಲ್ಲಿ ಚೆಕ್ ಪೋಸ್ಟ್ಗಳನ್ನು ನಿರ್ಮಿಸಿ ಪರಿಶೀಲನೆ ಮಾಡಬೇಕಾಗಿದೆ. ನಿಬಂಧನೆಗಳಿಂದ ಹಬ್ಬಗಳನ್ನು ಆಚರಿಸುವಂತೆ ಆಗಬಾರದು. ಸಂಭ್ರಮದಿAದ ಆಚರಣೆ ನಡೆಸಲು ಅವಕಾಶವನ್ನು ಜಿಲ್ಲಾಡಳಿತ ನೀಡಬೇಕು ಎಂದು ಸಲಹೆ ನೀಡಿದರು.

ಬಾಕ್ಸ್-
ಪ್ರತಿಬಾರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬಗಳು ಬಂದಾಗ ಗೊಂದಲಗಳು ಸೃಷ್ಠಿಯಾಗುತ್ತದೆ ಯಾವುದೋ ದೇಶ ರಾಜ್ಯದಲ್ಲಿ ನಡೆದ ಘಟಣೆಗಳಿಗೆ ಇಲ್ಲಿ ಪ್ರತಿಕಾರದ ಮಾತುಗಳು ಬರಬಾರದು. ಎಲ್ಲರು ಸಮಾನರು ಎನ್ನುವ ತತ್ವ ಪಾಲಿಸಿದರೆ ಯಾವುದೇ ಅಹಿತರ ಘಟನೆ ನಡೆಯುವುದಿಲ್ಲ. ನಾವೆಲ್ಲ ಮೊದಲು ಮಾನವರಾಗೋಣ. ಯಾವುದೆ ದುರ್ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸೊಣ.

  • ರಮೇಶ್ ಬಾಬು, ವಿಶ್ವ ಹಿಂದು ಪರಿಷತ್ ಮುಖಂಡ
    ಬಾಕ್ಸ್ 2
    ಎರಡು ಸಮುದಾಯದ ಮುಖಂಡರು ಮೆರವಣಿಗೆಗಳಲ್ಲಿ ಯುವಜನರನ್ನು ಶಾಂತಿಯುತವಾಗಿ ಹಬ್ಬಗಳು ನಡೆಸುವಂತೆ ಮಾರ್ಗದರ್ಶನ ನೀಡಬೇಕು. ಈದ್ ಮಿಲಾದ್, ಗಣೇಶ ಹಬ್ಬದಿನದಂದು ಎಲ್ಲರು ಒಟ್ಟಾಗಿ ಎರಡು ಸಮುದಾಯದ ಮುಖಂಡರು ಭಾಗವಹಿಸಿ ನಾವೆಲ್ಲ ಒಂದೆ ಭಾರತೀಯರು ಎನ್ನುವ ಸಂದೇಶವನ್ನು ನೀಡಬೇಕಾಗಿದೆ.
  • ಅಸ್ತಾಪ್ ಪರ್ವಿಜ್ , ಮುಸ್ಲಿಂ ಮುಖಂಡ ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್ ಅರುಣ್, ಡಾ.ಧನಂಜಯ ಸರ್ಜಿ, ಕರ್ನಾಟಕ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ರವಿಕುಮಾರ್, ಮಹಾನಗರ ಪಾಲಿಕೆ ಆಯುಕ್ತರಾದ ಕವಿತಾ ಯೋಗಪ್ಪನವರ್, ಎಡಿಸಿ ಸಿದ್ದಲಿಂಗಪ್ಪ, ಪ್ರೋಬೆಷನರಿ ಐಎಎಸ್ ಅಧಿಕಾರಿ ದೃಷ್ಠಿ ಜೈಸ್ವಾಲ್, ಡಿಎಸ್ ಪಿ ಕೆ.ಕಾರ್ಯಾಯಪ್ಪ, ಪೋಲಿಸ್ ಅಧಿಕಾರಿಗಳು ಸಿಬ್ಬಂದಿಗಳು ಜಿಲ್ಲಾ ಎಲ್ಲಾ ತಾಲೂಕುಗಳ ಅಂಜುಮಾನ್ ಕಮಿಟಿ, ಹಿಂದೂ ಸಂಘಟನೆಗಳ ಮುಖಂಡರುಗಳು ಉಪಸ್ಥಿತರಿದ್ದರು.