Tuesday, August 4, 2026
Tuesday, August 4, 2026
Home Blog Page 48

ಸಮಾಜಸೇವೆಯ ಹಾದಿಯಲ್ಲಿ ಮತ್ತೊಂದು ಗೌರವದ ಗರಿ: ಡಾ. ಮುಹಮ್ಮದ್ ಅಕಿಲ್ ಶಿವಮೊಗ್ಗ ಅವರಿಗೆ ಕರ್ನಾಟಕ ರಾಜ್ಯ ಸಮಾಜ ರತ್ನ ಪ್ರಶಸ್ತಿ

0

ಸಮಾಜದ ಒಳಿತಿಗಾಗಿ ಕೈಗೊಂಡ ಸೇವಾ ಕಾರ್ಯಗಳು ಮತ್ತು ಯುವ ಸಮುದಾಯದ ಅಭಿವೃದ್ಧಿಗೆ ಸಲ್ಲಿಸಿದ ಅಮೂಲ್ಯ ಕೊಡುಗೆಗೆ ಗೌರವವಾಗಿ ಯುವ ಉದ್ಯಮಿ ಹಾಗೂ ಸಮಾಜಸೇವಕರಾದ ಡಾ. ಮುಹಮ್ಮದ್ ಅಕಿಲ್ ಶಿವಮೊಗ್ಗ ಅವರಿಗೆ “ಕರ್ನಾಟಕ ರಾಜ್ಯ ಸಮಾಜ ರತ್ನ ಪ್ರಶಸ್ತಿ” ಪ್ರದಾನ ಮಾಡಲಾಗಿದೆ.

ದೇರಳಕಟ್ಟೆಯಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಮಾದಕ ದ್ರವ್ಯ ವಿರೋಧಿ ಕಾರ್ಯಾಗಾರ ಹಾಗೂ ಜಾಗೃತಿ ಸಮಾವೇಶದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಅವರಿಗೆ ನೀಡಿ ಸನ್ಮಾನಿಸಲಾಯಿತು. ಆಂಟಿ ಡ್ರಗ್ ಕೌನ್ಸಿಲ್ ಆಫ್ ಇಂಡಿಯಾ (ಭಾರತೀಯ ಮಾದಕ ದ್ರವ್ಯ ವಿರೋಧ ಮಂಡಳಿ) ವತಿಯಿಂದ ಸಮಾಜಮುಖಿ ಚಟುವಟಿಕೆಗಳು, ಯುವಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳು ಹಾಗೂ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಗಣ್ಯರನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಕರ್ನಾಟಕ ಸರ್ಕಾರದ ಆರೋಗ್ಯ ಸಚಿವರಾದ ಯು.ಟಿ. ಖಾದರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ, ಅವರ ಶಿಫಾರಸಿನ ಮೇರೆಗೆ ಡಾ. ಮುಹಮ್ಮದ್ ಅಕಿಲ್ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಸಮಾಜದ ನೈತಿಕ ಮೌಲ್ಯಗಳನ್ನು ಕಾಪಾಡುವ ಹಾಗೂ ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣದ ಆಶಯವನ್ನು ಮುಂದಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿರುವ ಯುವ ಉದ್ಯಮಿಯೊಬ್ಬರಿಗೆ ದೊರೆತ ಈ ಗೌರವವು ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು.

ಈ ಸಂದರ್ಭದಲ್ಲಿ ಭಾರತೀಯ ಮಾದಕ ದ್ರವ್ಯ ವಿರೋಧ ಮಂಡಳಿಯ ಜಿಲ್ಲಾಧ್ಯಕ್ಷರಾದ ಹನೀಫ್ ಸಾಹೇಬ್ ಪಾಜಪಳ್ಳ ಅವರು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

ಸಮಾಜ ಸೇವೆ, ಉದ್ಯಮಶೀಲತೆ ಮತ್ತು ಯುವಜನರ ಮಾರ್ಗದರ್ಶನ ಎಂಬ ಮೂರು ಕ್ಷೇತ್ರಗಳಲ್ಲಿ ಸಮಾನವಾಗಿ ತಮ್ಮ ಛಾಪು ಮೂಡಿಸಿರುವ ಡಾ. ಮುಹಮ್ಮದ್ ಅಕಿಲ್ ಅವರ ಸಾಧನೆಗೆ ದೊರೆತ ಈ ರಾಜ್ಯ ಮಟ್ಟದ ಗೌರವವು ಶಿವಮೊಗ್ಗ ಜಿಲ್ಲೆಯ ಜನತೆಗೆ ಹೆಮ್ಮೆ ತಂದಿದೆ. ಸಮಾಜಮುಖಿ ಕಾರ್ಯಗಳ ಮೂಲಕ ಯುವ ಸಮುದಾಯಕ್ಕೆ ಮಾದರಿಯಾಗಿರುವ ಅವರ ಸೇವಾ ಪಯಣ ಇನ್ನಷ್ಟು ಉನ್ನತ ಶಿಖರಗಳನ್ನು ತಲುಪಲಿ ಎಂಬ ಶುಭಾಶಯಗಳು ಕಾರ್ಯಕ್ರಮದಲ್ಲಿ ವ್ಯಕ್ತವಾದವು.

ರಾಯಲ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಬಂಕಿಮ್ ಚಂದ್ರ ಚಟರ್ಜಿ ಜನ್ಮದಿನಾಚರಣೆ

0

ಶಿವಮೊಗ್ಗ ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ರಾಯಲ್ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ, ಬಂಕಿಮ ಚಂದ್ರ ಚಟರ್ಜಿ ರವರ ಜನ್ಮ ಜಯಂತಿ ಪ್ರಯುಕ್ತ ಹಾಗೂ ವಂದೇ ಮಾತರಂ ಗೀತೆಗೆ 151 ವರ್ಷ ತುಂಬಿದ ಸವಿ ನೆನಪಿಗಾಗಿ, ಶಿವಮೊಗ್ಗದ ಖ್ಯಾತ ಗಾಯಕರದ ಪೃಥ್ವಿ ಗೌಡ, ಅವರು ವಂದೇ ಮಾತರಂ ಗೀತೆಯನ್ನು ಹಾಡುವುದರ ಮೂಲಕ ಬಂಕಿಮ್ ಚಂದ್ರ ಚಟರ್ಜಿ ಅವರ ಜನ್ಮ ಜಯಂತಿಯನ್ನು ಆಚರಿಸಲಾಯಿತು ಹಾಗೂ ಶಾಲೆಯ ವತಿಯಿಂದ ಪೃಥ್ವಿ ಗೌಡ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ ಪೂಜಾ ನಾಗರಾಜ್ ಪರಿಸರ , ಡಾ.ನಾಗರಾಜ್ ಪರಿಸರ, ಮುಖ್ಯೋಪಾಧ್ಯಾಯರಾದ ಮಂಜುನಾಥ್ ಎಲ್ ಎನ್, ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

JCI India ಜೆಸಿಐ ಇಂಡಿಯಾದ ವಲಯ 24 ರ ಮಧ್ಯ ವಾರ್ಷಿಕ ಸಮ್ಮೇಳನ: ಜೆಸಿಐ ಶಿವಮೊಗ್ಗ ವಿವೇಕ್‌ಗೆ ಪ್ರಶಸ್ತಿಗಳ ಸುರಿಮಳೆ

0

JCI India ಜೆಸಿಐ ಇಂಡಿಯಾದ ವಲಯ 24 ರ ಮಧ್ಯ ವಾರ್ಷಿಕ ಸಮ್ಮೇಳನ ವೈಭವ 2026 ರಲ್ಲಿ ಜೆಸಿಐ ಶಿವಮೊಗ್ಗ ವಿವೇಕ್ ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿ ಹಲವಾರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡು, ಘಟಕಕ್ಕೆ ಹೆಮ್ಮೆಯ ಕೀರ್ತಿಯನ್ನು ತಂದಿದೆ.
ಈ ಯಶಸ್ಸಿನ ಪಯಣಕ್ಕೆ ಸ್ಪೂರ್ತಿ, ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನೀಡಿದ ಜೆಸಿಐ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷರಾದ ಭರತ್ ಎನ್. ಆಚಾರ್ಯ ಹಾಗೂ ನಿರಂತರ ಬೆಂಬಲ ಮತ್ತು ಸಹಕಾರ ನೀಡಿದ ವಲಯ ಅಧ್ಯಕ್ಷರಾದ ಜೆಎಫ್‌ಎಸ್ ಮಧುಸೂಧನ ನಾವಡ ಮತ್ತು ವಲಯ ಉಪಾಧ್ಯಕ್ಷರಾದ ಜೆಸಿಐ ಸೆನೆಟರ್ ಕೆ.ಜಿ.ಆರ್. ಗಣೇಶ್ ಪೈ ಅವರಿಗೆ ವಿಶೇಷ ಧನ್ಯವಾದಗಳನ್ನು ಅರ್ಪಿಸಲಾಯಿತು.
ಎಲ್ಲಾ ಪ್ರಶಸ್ತಿಗಳು ಜೆಸಿಐ ಶಿವಮೊಗ್ಗ ವಿವೇಕ್‌ನ ಪ್ರತಿಯೊಬ್ಬ ಸದಸ್ಯರ ಸಮರ್ಪಣೆ, ಸೇವಾ ಮನೋಭಾವ, ನಾಯಕತ್ವ ಹಾಗೂ ತಂಡದ ಕಾರ್ಯಕ್ಷಮತೆಗೆ ಸಂದ ಗೌರವವಾಗಿದೆ.
ಈ ಯಶಸ್ಸಿನ ಹಿಂದೆ ಜೆಸಿಐ ಶಿವಮೊಗ್ಗ ವಿವೇಕ್‌ನ ಎಲ್ಲಾ ಪೂರ್ವಾಧ್ಯಕ್ಷರು, 2026ರ ಕಾರ್ಯಕಾರಿ ಮಂಡಳಿ ಸದಸ್ಯರು ಹಾಗೂ ಪ್ರತಿಯೊಬ್ಬ ಸದಸ್ಯರ ಅಮೂಲ್ಯ ಸಹಕಾರ, ಮಾರ್ಗದರ್ಶನ ಮತ್ತು ನಿರಂತರ ಬೆಂಬಲ ಪ್ರಮುಖ ಪಾತ್ರ ವಹಿಸಿದೆ. ಅವರೆಲ್ಲರ ಸಹಯೋಗ, ಸಂಘಟನೆಯ ಮೇಲಿನ ಬದ್ಧತೆ ಮತ್ತು ಸೇವಾ ಮನೋಭಾವದಿಂದಲೇ ಈ ಸಾಧನೆ ಸಾಧ್ಯವಾಗಿದೆ.
ಈ ಸಂದರ್ಭದಲ್ಲಿ ಅಧ್ಯಕ್ಷೆ ಜೆಸಿ ವಿಜಯಲಕ್ಷ್ಮಿ ಯು. ಕಡಂಬ ಹಾಗೂ ಜೆವಿಸಿ – ವಲಯ 24 ಉದಯ ಕಡಂಬ, ಜೆಕಾಮ್ ಚೇರ್ಮನ್ ಚಂದ್ರಹಾಸ ಶೆಟ್ಟಿ, ರೀಜನಲ್ ಸೆಕ್ರೆಟರಿ ಜೆಸಿ ಜಗದೀಶ್.ಬಿ.ಎನ್, ಪಾಸ್ಟ್ ಝೋನ್ ಆಫೀಸರ್ ಭಾರತೀ.ಹೆಚ್.ಡಿ, ಜೆಸಿ ಜಯಕುಮಾರ್, ಜೆಸಿ ರಾಘವೇಂದ್ರ ಶೆಟ್ಟಿ, ಜೆಸಿ ಶಾಮಲಾ ಶೆಟ್ಟಿ, ಜೆಸಿ ಅನನ್ಯ, ಜೂನಿಯರ್ ಜೆಸಿ ಆದ್ವಿಕ್ ಮತ್ತು ಆರ್ವಿಕ ಹಾಗೂ ಕಾರ್ಯಕಾರಿ ಮಂಡಳಿಯ ಎಲ್ಲಾ ಸದಸ್ಯರು ಈ ವೈಭವ ಅರ್ಧವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಿ ಸಂಭ್ರಮಕ್ಕೆ ಸಾಕ್ಷಿಯಾದರು.

JCI India ಸಮ್ಮೇಳನದಲ್ಲಿ ಜೆಸಿಐ ಶಿವಮೊಗ್ಗ ವಿವೇಕ್ ಈ ಕೆಳಕಂಡ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
ಪ್ರದೇಶ ಸಿ – ಝೆಡ್.ವಿ.ಪಿ. ಗುರುತಿಸುವಿಕೆ ಮನ್ನಣೆ ವಿಜೇತರಾದ ಅಧ್ಯಕ್ಷೆ ಜೆಸಿ ವಿಜಯಲಕ್ಷ್ಮಿ ಯು. ಕಡಂಬ (2026) ಸ್ಥಳೀಯ ಘಟಕದ ಕಾರ್ಯದರ್ಶಿಯ ಅತ್ಯುತ್ತಮ ಸೇವೆಗಾಗಿ.
ಝೆಡ್.ವಿ.ಪಿ. ಗುರುತಿಸುವಿಕೆ ಜೆಕಾಮ್ ಅಧ್ಯಕ್ಷ ವಿಶೇಷ ಮನ್ನಣೆ ಪ್ರಶಸ್ತಿ – ಜೆಸಿ ಚಂದ್ರಹಾಸ್ ಶೆಟ್ಟಿ (ಜೆಕಾಮ್ ಶಿವಮೊಗ್ಗ 1.0 ಟೇಬಲ್ ಅಧ್ಯಕ್ಷ)
ನಿರ್ವಹಣಾ ಪ್ರದೇಶ – ಅತ್ಯುತ್ತಮ ಸಾಧನೆ
ತರಬೇತಿ ಪ್ರದೇಶ – ವಿಶೇಷ ಗುರುತಿಸುವಿಕೆ
ಸಮುದಾಯ ಅಭಿವೃದ್ಧಿ – ವಿಶೇಷ ಮನ್ನಣೆ ಪ್ರಶಸ್ತಿ
ಬೆಳವಣಿಗೆ ಮತ್ತು ಅಭಿವೃದ್ಧಿ – ವಿಶೇಷ ಪ್ರಶಸ್ತಿ
ವ್ಯಾಪಾರ ವಿಭಾಗ – ವಿಶೇಷ ಪ್ರಶಸ್ತಿ
ಸಾರ್ವಜನಿಕ ಸಂಪರ್ಕಗಳು – ವಿಶೇಷ ಪ್ರಶಸ್ತಿ
ಅಂತರಾಷ್ಟ್ರೀಯತೆ ವಿಭಾಗ – ವಿಶೇಷ ಪ್ರಶಸ್ತಿ
ಲೇಡಿ ಜೆಸಿ ವಿಭಾಗ – ವಿಶೇಷ ಪ್ರಶಸ್ತಿ
ಜೆಸಿಐ ಇಂಡಿಯಾ ಆಯೋಜಿಸಿದ್ದ “ಜಾಸ್ಮಿನ್” (JASMINE) ಕಾರ್ಯಕ್ರಮದಲ್ಲಿ ಅತ್ಯುತ್ತಮ ಭಾಗವಹಿಸುವಿಕೆಗಾಗಿ ಹೇಮಾಂಗ್ ಪರಿಸರ, ಗಗನ್, ವಂಶಿಕ ಸಿ. ಶೆಟ್ಟಿ, ಸೃಜನ್, ಕೌಶಲ್ ಡಿ. ಪಟೇಲ್, ದಿಯಾ, ವರ್ದನ್ ಹಾಗೂ ಶಿಕ್ಷಕಿ ಜೆಸಿ ಭಾರತಿ ಹೆಚ್.ಡಿ ಅವರಿಗೆ ಸ್ಟಾರ್ ಪರ್ಫಾರ್ಮರ್ ಪ್ರಶಸ್ತಿಯನ್ನು ಪಡೆದು ಘಟಕಕ್ಕೆ ಮತ್ತೊಂದು ಹೆಮ್ಮೆಯ ಗರಿ ಮೂಡಿಸಿದರು.

B.Y. Raghavendra ಶ್ರೀ ಕೆಂಪೇಗೌಡರು ದೂರದೃಷ್ಟಿಯಿಂದ ನಾಡನ್ನು‌ ಕಟ್ಟಿ ಮಾದರಿಯಾಗಿದ್ದಾರೆ : ಬಿ.ವೈ.ರಾಘವೇಂದ್ರ

0

B.Y. Raghavendra ನಾಡಪ್ರಭು ಶ್ರೀ ಕೆಂಪೇಗೌಡರು ಓರ್ವ ದಕ್ಷ ಆಡಳಿತಗಾರ, ಅಪ್ರತಿಮ ವೀರ. ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಮಹಾನ್ ಪೋಷಕರಾಗಿದ್ದು ದೂರದೃಷ್ಟಿಯಿಂದ ಬೆಂಗಳೂರನ್ನು ಕಟ್ಟಿ ಜನ ಸಾಮಾನ್ಯರಿಗೆ ಅನುಕೂಲ ಮಾಡಿಕೊಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು
ಸಂಸದರಾದ ಬಿ.ವೈ.ರಾಘವೇಂದ್ರ ತಿಳಿಸಿದರು‌.
ಜಿಲ್ಲಾಡಳಿತ, ಜಿ.ಪಂ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಒಕ್ಕಲಿಗರ ಸಂಘ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು‌ ಮಾತನಾಡಿದರು.
ಬೆಂಗಳೂರು ನಗರ ನಿರ್ಮಾಣಕ್ಕೆ ದೂರದೃಷ್ಟಿವುಳ್ಳ ನೀಲಿ ನಕ್ಷೆ ತಯಾರಿಸಿ ವ್ಯವಸ್ಥಿತವಾದ, ಶಾಶ್ವತವಾದ ನಗರ ನಿರ್ಮಾಣ ಮಾಡಿದ್ದಾರೆ.
ಕೆರೆ ಕಟ್ಟೆಗಳು, ಮರಗಳನ್ನು ನೆಡುವ ಮೂಲಕ, ಕ್ರೂರ ಪದ್ದತಿ ನಿಷೇಧ, ಜಲಮೂಲಗಳ ರಕ್ಷಣೆ, ಪ್ರಕೃತಿ ರಕ್ಷಣೆ, ವೃತ್ತಿಪರರಿಗೆ ಪೇಟೆಗಳ ನಿರ್ಮಾಣ ಹಾಗೂ ಬಡ, ಮಧ್ಯಮ ವರ್ಗ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವ ಕಾರ್ಯ ಮಾಡಿ ಅಮರರಾಗಿದ್ದು ನಮ್ಮೆಲ್ಲರಿಗೆ ಇವರ ಬಗ್ಗೆ ಅಭಿಮಾನ ಇದೆ.
ಕೇವಲ‌ ೨ ಚದರ ಕಿ.ಮೀ ಇದ್ದ ಬೆಂಗಳೂರು‌ ಇಂದು ೮೦೦ ಚ.ಕಿ.ಮೀ‌ ಗಿಂತಲೂ ಹೆಚ್ಚು ಬೆಳೆದಿರುವುದಕ್ಕೆ ಅವರು ಹಾಕಿದ ಬುನಾದಿಯೇ ಕಾರಣವಾಗಿದ್ದು, ಅವರ ದಾರಿಯಲ್ಲಿ ‌ನಡೆಯೋಣ ಎಂದರು.
ಹೊಸನಗರದ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾರ ಪ್ರೊ. ಕೆ. ಶ್ರೀಪತಿ ಹಳಗುಂದ ವಿಶೇಷ ಉಪನ್ಯಾಸ ನೀಡಿ ಮಾತನಾಡಿ,
ಎಲ್ಲರನ್ನು ನೆಲೆ ನಿಲ್ಲಿಸಿದವರು‌ ನಾಡಪ್ರಭು ಕೆಂಪೇಗೌಡರು.‌ ಅತ್ಯಂತ
ದೂರ ದೃಷ್ಟಿವುಳ್ಳ ಮತ್ತು ಸರ್ವ ಜನಾಂಗಕ್ಕೂ ಒಳಿತಾಗುವ ಆಲೋಚನೆವುಳ್ಳ ವ್ಯಕ್ತಿತ್ವ ಅವರದು. ವೃತ್ತಿ ಆಧಾರಿತ ಪೇಟೆಗಳನ್ನು‌ ನಿರ್ಮಿಸಿದ ನಿಜವಾದ ಜಾತ್ಯಾತೀತ ನಾಯಕ.
ವಿಜಯನಗರದ ವೈಭವ ನೋಡಿ ಅದೇ ರೀತಿ ಕಟ್ಟಬೇಕು ಎಂದು ಯಲಹಂಕವನ್ನು ಕಟ್ಟಿದರು.
ವ್ಯಾಪಾರ ಮತ್ತು ವಾಣಿಜ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದ ಅವರು, ವಿವಿಧ ವೃತ್ತಿಪರರಿಗಾಗಿ ಪ್ರತ್ಯೇಕ ಪೇಟೆಗಳನ್ನು ನಿರ್ಮಿಸಿದರು. ಉದಾಹರಣೆಗೆ ಅಕ್ಕಿಪೇಟೆ, ರಾಗಿಪೇಟೆ, ಬಳೇಪೇಟೆ, ಚಿಕ್ಕಪೇಟೆ, ದೊಡ್ಡಪೇಟೆ ಮುಂತಾದವು ಇಂದಿಗೂ ಬೆಂಗಳೂರಿನ ಪ್ರಮುಖ ವಾಣಿಜ್ಯ ಕೇಂದ್ರಗಳಾಗಿವೆ.
B.Y. Raghavendra ಜೀವಪರವಾದ ಆಡಳಿತ ನಡಿಸಿದ ಅವರು ಆರ್ಕಾವತಿ, ವೃಷಭಾವತಿ ನದಿಗೆ ಅನೇಕ ಕೆರೆಯನ್ನು ಕಟ್ಟಿದ್ದಾರೆ.
500 ವರ್ಷದ ಹಿಂದೆಯೇ ಇಡೀ ಸಮಾಜದ ಅಭಿವೃದ್ದಿ ಆಲೋಚನೆ ಇತ್ತು ಅವರಿಗೆ.
ಒಕ್ಕಲಿಗ ಸಮುದಾಯಕ್ಕೂ ಮತ್ತು ನೆಲಕ್ಕೂ ಅವಿನಾಭಾವ ಸಂಬಂಧ ಇದ್ದು ಯಾರು ನೆಲೆದ ಮೇಲೆ ಅದಮ್ಯ ಪ್ರೀತಿ ಇಟ್ಟುಕೊಳ್ಳುತ್ತಾರೋ ಅವರಿಗೆ ಸಾವಿಲ್ಲ. ಇಂತಹ ಸಾವಿಲ್ಲದ ವ್ಯಕ್ತಿ ಸರ್ವ ಕ್ಷೇತ್ರಗಳಲ್ಲಿ ಜನರಿಗಾಗಿ‌ ಕೊಡುಗೆಗಳನ್ನು‌ ನೀಡಿದ್ದಾರೆ.
ಶಿವಭಕ್ತರಾದ ಅವರು ಶಿವನ ಹೆಸರಿನಲ್ಲಿ ಭೈರವ ನಾಣ್ಯ ಮುದ್ರಿಸುತ್ತಾರೆ. ಇದರಿಂದ ಅವರನ್ನು ೫ ವರ್ಷ ಕಾಲ ಆನೆಗುಂದಿ ಜೈಲಿಗೆ ಹಾಕಲಾಗುತ್ತದೆ. ಹಾಗೂ ಅಂತ್ಯದಲ್ಲಿ ಅವರ ದುರಂತ ಸಾವು ಬೇಸರದ ಸಂಗತಿಯಾಗಿದೆ ಎಂದರು.
ಕನ್ನಡ ಸೊಗಸಾದ, ಶ್ರೀಮಂತ ಭಾಷೆ. ಕೆಂಪೇಗೌಡರು ಅದರ ಮೆರಗನ್ನು ಹೆಚ್ಚಿಸಿದ್ದರು. ಎಂದ ಅವರು, ನಿಮ್ಮನ್ನು ನೀವು ಪ್ರೀತಿಸಲು, ಜಾಗೃತಗೊಳ್ಳಲು ಸಾಹಿತ್ಯ ಓದಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಶಾಸಕರಾದ ಎಸ್ ಎನ್ ಚನ್ನಬಸಪ್ಪ
ಮಾತನಾಡಿ, ಶ್ರೀ ಕೆಂಪೇಗೌಡರು ಕಟ್ಟುವ ಕೆಲಸ ಮಾಡಿರುವ ಕಾರಣ ಶಾಶ್ವತ ನಾಯಕರಾಗಿ‌ ಉಳಿದಿದ್ದಾರೆ. ಮುಂದಿನ ಪೀಳಿಗೆಗೆ, ಇಡೀ ಸಮಾಜಕ್ಕೆ ಅವಶ್ಯಕತೆ ಇರುವಂತಹ ಕೆಲಸಗಳನ್ನೇ ಮಾಡಿದ್ದಾರೆ. ಇವರ ಸ್ಮರಣಾರ್ಥ ಶಿವಮೊಗ್ಗದಲ್ಲಿ ಕೆರೆ, ಕಟ್ಟೆಗಳನ್ನು ಉಳಿಸುವ ಪ್ರಯತ್ನ ಮಾಡಿದರೆ ಕೆಂಪೇಗೌಡರಿಗೆ ಗೌರವ ತಂದಂತೆ ಆಗುತ್ತದೆ. ಸೂಡಾ,ಪಾಲಿಕೆ, ಸ್ಥಳೀಯ ಸಂಸ್ಥೆಗಳಿಂದ ಈ ಕೆಲಸ ಮಾಡೋಣ. ಪ್ರಕೃತಿ ಆರಾಧನೆ ಮಾಡೋಣ. ಹಸುರೀಕರಣ ಮಾಡಿ ಮುಂದಿನ ಪೀಳಿಗೆಗೆ ಉಳಿಸಿ ಹೋಗೋಣ ಎಂದರು.
ವಿಧಾನ ಪರಿಷತ್ ಶಾಸಕರಾದ ಬಲ್ಕೀಶ್ ಬಾನು ಮಾತನಾಡಿ, ಶ್ರೀ ಕೆಂಪೇಗೌಡರು ಎಲ್ಲರಿಗೂ ತಿಳಿದಿರುವ ಮಹಾನ್ ನಾಯಕ. ಸುಶಿಕ್ಷಿತರು, ದೂರದೃಷ್ಟಿವುಳ್ಳ ಸಾಹಸಿ. ತಂದೆ ಕೆಂಪನಂಜೇಗೌಡರ ಕಾರ್ಯಗಳನ್ನು ಹತ್ತಿರದಿಂದ ನೋಡಿದ ಅವರು ಅಭೂತಪೂರ್ವ, ದೂರದೃಷ್ಟಿವುಳ್ಳ‌ ನಗರ ನಿರ್ಮಾಣ ಮಾಡುವಲ್ಲಿ ಯಶಸ್ವಿಯಾದರು.‌ ಹೆಣ್ಣುಮಕ್ಕಳ‌ ಬೆರಳು ಕತ್ತರಿಸುವ ಕ್ರೂರ ಪದ್ದತಿಯನ್ನು ನಿಷೇಧಿಸಿದ ಅವರು ಹೆಣ್ಣು ಮಕ್ಕಳ ಬಗ್ಗೆ ಅಪಾರ ಗೌರವ ಹೊಂದಿದ್ದರು ಎಂದ ಅವರು ಇಂದು
ಬೆಂಗಳೂರಿನಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ೧೫ ಲಕ್ಷ ಮರಗಳನ್ನು ನೆಡಲಾಗುತ್ತಿದೆ. ಹೆಣ್ಣುಮಕ್ಕಳು ತಮಗೆ ಅವಶ್ಯಕತೆ ಇರುವ ಗಿಡ ಮರ ಬೆಳೆಯಬೇಕು ಆಗ ಕೆಂಪೇಗೌಡರ ವಿಚಾರಧಾರೆ ಅಳವಡಿಸಿಕೊಂಡಂತೆ ಆಗುತ್ತದೆ. ಯುವ ಪೀಳಿಗೆ ಅವರ ಚರಿತ್ರೆ, ಕೊಡುಗೆಗಳನ್ನು ಓದಿ ತಿಳಿಯಬೇಕು ಎಂದರು.
ಜವಳಿ‌ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಕೆ.ಚೇತನ್ ಮಾತನಾಡಿ, ವಿಶ್ವವೇ ತಿರುಗಿ‌ನೋಡುವಂತಹ ಬೆಂಗಳೂರಿಗೆ ಭದ್ರ ಬುನಾದಿ‌ ಹಾಕಿದವರು ಕೆಂಪೇಗೌಡರು. ಅವರ ದೂರದೃಷ್ಟಿಯಿಂದ ನಿರ್ಮಾಣವಾದ ನಗರ ಇಂದು ವೇಗವಾಗಿ ಬೆಳೆಯುತ್ತಿದೆ. ಎಲ್ಲ‌ ವರ್ಗದವರು ಬದುಕಲು ಅನುಕೂಲವಾಗುವಂತಹ ಪೇಟೆಗಳನ್ನು‌ ಕಟ್ಟಿಕೊಟ್ಟಿದ್ದಾರೆ. ಎಲ್ಲ ಕ್ಷೇತ್ರದಲ್ಲಿ ಸಾರ್ವಜನಿಕರ ಒಳಿತಿಗಾಗಿ ಕೊಡುಗೆ ನೀಡಿದ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳೋಣ ಎಂದು ಕರೆ ನೀಡಿದರು.
ಸೂಡಾ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್
ಮಾತನಾಡಿ, ೧೬ ನೇ ಶತಮಾನದಲ್ಲಿ ಕೆಂಪೇಗೌಡರು ನಮ್ಮ ಸಮಾಜಕ್ಕೆ ನೀಡಿದ ಕೊಡುಗೆಗಳು ಇಂದಿಗೂ ಮಾದರಿಯಾಗಿವೆ. ಕಲೆ, ಉದ್ಯೋಗ, ರಸ್ತೆ, ಕೆರೆ, ಕಟ್ಟೆ, ಜನಪರ ಕೆಲಸಗಳುನ್ನು ವಿಜಯನಗರ ಸಾಮ್ರಾಜ್ಯದಿಂದ ಪ್ರೇರಿತರಾಗಿ ತಜ್ಞತೆಯಿಂದ ಮಾಡಿದ ಕೆಲಸಗಳಾಗಿದ್ದು ಎಲ್ಲರೂ ಇಂತಹ ಮಹಾನ್ ವ್ಯಕ್ತಿಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರು.
ಶ್ರೀ ಕೆಂಪೇಗೌಡ ಜಯಂತಿಯ ಅಂಗವಾಗಿ ಏರ್ಪಡಿಸಲಾಗಿದ್ದ ಚರ್ಚಾ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ,
ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ರಮೇಶ್ ಹೆಗಡೆ, ತಾಲ್ಲೂಕು ಅಧ್ಯಕ್ಷರಾದ
ಎಸ್ ಚಂದ್ರಕಾಂತ್, ರಾಜ್ಯ ಸಂಘದ ನಿರ್ದೇಶಕ ಧರ್ಮೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್, ಅಧಿಕಾರಿಗಳು, ಸಮಾಜ ಬಾಂಧವರು ಉಪಸ್ಥಿತರಿದ್ದರು.

Samanvaya Trust ವಿ.ಚಂದ್ರಕಲಾ ಅವರಿಗೆ ಸಮನ್ವಯ ಪರಿಸರ ಕುಟುಂಬ ಪ್ರಶಸ್ತಿ

0

Samanvaya Trust ಪರಿಸರದ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ವಿನೋಬನಗರ ನಿವಾಸಿ ಎಸ್.ವಿ.ಚಂದ್ರಕಲಾ ಅವರಿಗೆ ಸಮನ್ವಯ ಟ್ರಸ್ಟ್ ವತಿಯಿಂದ ಪರಿಸರ ಕುಟುಂಬ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.
ಸಮನ್ವಯ ಟ್ರಸ್ಟ್ ನೇತೃತ್ವ ಹಾಗೂ ಐಎಎಸ್ ಅಧಿಕಾರಿ ಕೆ.ಎ.ದಯಾನಂದ ಮಾರ್ಗದರ್ಶನದಲ್ಲಿ ಶಿವಮೊಗ್ಗದ ಜಿಲ್ಲೆಯಲ್ಲಿನ ಪರಿಸರ ಸ್ನೇಹಿ ಕುಟುಂಬಗಳನ್ನು ಗುರುತಿಸಿ ಪರಿಸರ ಪ್ರಶಸ್ತಿ ನೀಡುವ ಮೂಲಕ ಗೌರವಿಸುವ ಕೆಲಸವನ್ನು ಟ್ರಸ್ಟ್ ವತಿಯಿಂದ ನಿರಂತರವಾಗಿ ಮಾಡಿಕೊಂಡು ಬರಲಾಗುತ್ತಿದೆ.
ಎಸ್.ವಿ.ಚಂದ್ರಕಲಾ ಅವರು ಮನೆ ಆವರಣದಲ್ಲಿ ಸುಂದರವಾದ ಪರಿಸರ ನಿರ್ಮಾಣ ಮಾಡಿಕೊಂಡಿದ್ದಾರೆ. ಮನೆ ಆವರಣದಲ್ಲಿ ಅತ್ಯಂತ ಉತ್ತಮ ಪರಿಸರ ನಿರ್ಮಿಸಿದ್ದಾರೆ. ಪಕ್ಷಿಗಳಿಗೆ ಅನುಕೂಲ ಆಗುವ ಹಣ್ಣಿನ ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ. ಆಯುರ್ವೇದ ಗಿಡಗಳನ್ನು ಬೆಳೆಸುತ್ತಿದ್ದಾರೆ.
ಚಂದ್ರಕಲಾ ಅವರು ಬೋನ್ಸಾಯ್ ಗಿಡಗಳನ್ನು ವರ್ಷಗಳಿಂದ ಬೆಳೆಸಿಕೊಂಡು ಬರುತ್ತಿದ್ದು, 35-40 ವರ್ಷದ ಆಲದ ಮರ ಸೇರಿದಂತೆ ವೈವಿಧ್ಯ ರೀತಿ ಬೋನ್ಸಾಯ್ ಗಿಡಗಳನ್ನು ಪಾಟ್‌ಗಳಲ್ಲಿ ಬೆಳೆಸಿ ಪೋಷಿಸುತ್ತಿದ್ದಾರೆ. ಬೋನ್ಸಾಯ್ ಗಿಡಗಳ ಬಗ್ಗೆ ಜನರಲ್ಲೂ ಜಾಗೃತಿ ಮೂಡಿಸಿ ಬೆಳೆಸಲು ಪ್ರೋತ್ಸಾಹಿಸುತ್ತಿದ್ದಾರೆ.
ಆಯುರ್ವೇದಿಕ್ ಗಿಡಗಳನ್ನು ಬೆಳೆಸುವ ಜತೆಯಲ್ಲಿ ಮಲೆನಾಡಿನ ಔಷಧೀಯ ಗಿಡಮೂಲಿಕೆಗಳ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಮನೆಯಲ್ಲಿ ಎಲ್ಲರಿಗೂ ಪರಿಸರದ ಬಗ್ಗೆ ವಿಶೇಷ ಪ್ರೀತಿ ಇದೆ. ಚಂದ್ರಕಲಾ ಅವರ ಪರಿಸರ ಕಾಳಜಿ ಗುರುತಿಸಿ ಸಮನ್ವಯ ಟ್ರಸ್ಟ್ ಪರಿಸರ ಪ್ರಶಸ್ತಿ ನೀಡಿ ಅಭಿನಂದಿಸಿದೆ.
Samanvaya Trust ಸಮನ್ವಯ ಟ್ರಸ್ಟ್ ಕಾರ್ಯನಿರ್ವಾಹಕ ನಿರ್ದೇಶಕ ಸಮನ್ವಯ ಕಾಶಿ ನೇತೃತ್ವದ ತಂಡವು ಶಿವಮೊಗ್ಗದ ಪರಿಸರ ಸ್ನೇಹಿ ಕುಟುಂಬಗಳನ್ನು ಗುರುತಿಸಿ ಗೌರವಿಸುವ ವಿಶೇಷ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸುತ್ತಿದೆ. ಪರಿಸರದ ಕಾಳಜಿಯನ್ನು ಮನೆಮನೆಗೆ ತಲುಪಿಸುವ ಆಶಯದಿಂದ ರಾಜ್ಯದಲ್ಲಿಯೇ ನಡೆಸುತ್ತಿರುವ ವಿಶೇಷ ಪ್ರಯತ್ನ ಇದಾಗಿದೆ.
ಉದ್ಯಮಿ ಅಬ್ದುಲ್ ಮುಜೀಬ್ ಅವರು ಪರಿಸರ ಕುಟುಂಬ ಪ್ರಶಸ್ತಿಯನ್ನು ಚಂದ್ರಕಲಾ ಅವರಿಗೆ ನೀಡಿ ಗೌರವಿಸಿದರು. ಸಮನ್ವಯ ಟ್ರಸ್ಟ್ ನ ಸಮನ್ವಯ ಕಾಶಿ, ಸಂಸ್ಥಾಪಕ ಸದಸ್ಯೆ ಸ್ಮಿತಾ ಇದ್ದರು.

Kuvempu University ಕಾರ್ಯಾಗಾರಗಳಿಂದ ವಿದ್ಯಾರ್ಥಿಗಳ ಜ್ಞಾನವೃದ್ಧಿ : ವಕೀಲ ಲಕ್ಷ್ಮೀಕಾಂತ್ ಚಿಮನೂರು

0

Kuvempu University ವಿದ್ಯಾರ್ಥಿಗಳಲ್ಲಿ ಜ್ಞಾನ ವಿನಿಮಯ, ಪರಿಕಲ್ಪನೆಗಳ ಆಳವಾದ ಅರಿವು ಹಾಗೂ ಪ್ರಾಯೋಗಿಕ ಅನುಭವ ಬೆಳೆಸಲು ಕಾರ್ಯಾಗಾರ ನೆರವಾಗುತ್ತದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ, ಹಿರಿಯ ವಕೀಲ ಲಕ್ಷ್ಮೀಕಾಂತ್ ಚಿಮನೂರು ಹೇಳಿದರು.
ಕುವೆಂಪು ವಿಶ್ವವಿದ್ಯಾಲಯದ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಪಾಥ್‌ವೇಸ್ ಟ್ರೈನಿಂಗ್ ಮತ್ತು ಪ್ಲೇಸ್‌ಮೆಂಟ್ ವಿಭಾಗದಿಂದ ಆಯೋಜಿಸಿದ್ದ 2025–26ನೇ ಸಾಲಿನ ಬೇಸಿಗೆ ಕಾರ್ಯಾಗಾರದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಆಸಕ್ತಿಯಿಂದ ಅಧ್ಯಯನ ನಡೆಸಿ ಉನ್ನತ ಸಾಧನೆ ಮಾಡಬೇಕು ಎಂದು ತಿಳಿಸಿದರು.
ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ, ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ವೆಂಕಟೇಶ ಅವರು ವಿದ್ಯಾರ್ಥಿಗಳ ಪ್ರತಿಭೆ, ಪರಿಶ್ರಮ ಮತ್ತು ನವೋತ್ಸಾಹವನ್ನು ಶ್ಲಾಘಿಸಿದರು.
ಅತಿಥಿಗಳು ವಿದ್ಯಾರ್ಥಿಗಳಿಂದ ನಿರ್ಮಿಸಲಾದ “ಹೈಪರ್‌ಲೂಪ್ ಸ್ಟೇಷನ್ ಮಾದರಿ”ಯನ್ನು ಅನಾವರಣಗೊಳಿಸಿದರು. ವಿದ್ಯಾರ್ಥಿಗಳ ತಂಡವು ಹೈಪರ್‌ಲೂಪ್ ತಂತ್ರಜ್ಞಾನದ ಆಧಾರಿತ ನವೀನ ಸಾರಿಗೆ ವ್ಯವಸ್ಥೆಯ ಮಾದರಿಯನ್ನು ಪರಿಚಯಿಸಿತು.
ಡಾಕ್ಯುಮೆಂಟರಿ ವಿಭಾಗದಲ್ಲಿ ಶಿವಮೊಗ್ಗದಿಂದ ರಾಣೆಬೆನ್ನೂರಿಗೆ ನಿರ್ಮಾಣಗೊಳ್ಳುತ್ತಿರುವ ಹೊಸ ರೈಲು ಮಾರ್ಗದ ಕುರಿತಾದ ಸಂಶೋಧನೆ, ಯಕ್ಷಗಾನದ ಸಾಂಸ್ಕೃತಿಕ ಪರಂಪರೆ ಮತ್ತು ವೈಶಿಷ್ಟ್ಯಗಳ ಅಧ್ಯಯನವನ್ನು ಪ್ರಸ್ತುತಪಡಿಸಲಾಯಿತು.
ಪುಸ್ತಕ ವಿಭಾಗದಲ್ಲಿ ‘ಅರಣ್ಯ ಅಸ್ಮಿತೆ’ ಮೂಲಕ ಡಾ. ರತ್ತಮ್ಮ ಅವರ ಬುಡಕಟ್ಟು ಹೋರಾಟದ ಬದುಕು ಮತ್ತು ‘ಗಾರ್ಗಿ ಇನ್ನೂ ಜೀವಂತವಾಗಿದ್ದಾಳೆ’ ಕೃತಿಯ ಮೂಲಕ ಬಾಲ್ಯ ವಿವಾಹ ಹಾಗೂ ಮೂಢನಂಬಿಕೆಗಳನ್ನು ಮೀರಿ ಆತ್ಮಗೌರವದಿಂದ ಬದುಕು ಕಟ್ಟಿಕೊಂಡ ಮಹಿಳೆಯ ಬದುಕಿನ ಪಯಣವನ್ನು ಪರಿಚಯಿಸಲಾಯಿತು.
ಪವರ್‌ಪಾಯಿಂಟ್ ವಿಭಾಗದಲ್ಲಿ ಕೃತಕ ಬುದ್ಧಿಮತ್ತೆ ಹಾಗೂ ತೆರೆಮರೆಯ ಸ್ವಾತಂತ್ರ‍್ಯ ಹೋರಾಟಗಾರರ ಕೊಡುಗೆ ಕುರಿತ ಚಿಂತನಾತ್ಮಕ ನಿರೂಪಣೆ ನಡೆಯಿತು. ಚಲನಚಿತ್ರ ವಿಭಾಗದಲ್ಲಿ ಗುಂಜನ್ ಸಕ್ಸೇನಾ ಮತ್ತು ಫ್ರಾಂಕೇನ್‌ಸ್ಟೈನ್ ವಿಷಯಗಳ ವಿಶ್ಲೇಷಣಾತ್ಮಕ ಪ್ರದರ್ಶನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
Kuvempu University ಕಾರ್ಯಾಗಾರವು ವಿದ್ಯಾರ್ಥಿಗಳಲ್ಲಿ ಜ್ಞಾನ, ಸಂಶೋಧನಾ ಮನೋಭಾವ, ನವೀನ ಚಿಂತನೆ ಹಾಗೂ ಭವಿಷ್ಯಮುಖಿ ದೃಷ್ಟಿಕೋನವನ್ನು ಬೆಳೆಸುವ ಸಾರ್ಥಕ ಮತ್ತು ಸ್ಮರಣೀಯ ವೇದಿಕೆಯಾಗಿ ಯಶಸ್ವಿಯಾಯಿತು.
ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಅವಿನಾಶ್ ಟಿ., ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಸಿರಾಜ್ ಅಹ್ಮದ್, ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲೆ ಪ್ರೊ. ರಾಜೇಶ್ವರಿ ಎನ್. ಹಾಗೂ ಪಾಥ್‌ವೇಸ್ ನಿರ್ದೇಶಕ ಪ್ರೊ. ಗಿರಿಧರ್ ಕೆ. ವಿ. ಉಪಸ್ಥಿತರಿದ್ದರು.

ಜಿಲ್ಲಾ ಒಕ್ಕಲಿಗರ ಯುವ ವೇದಿಕೆ ವತಿಯಿಂದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ

0

ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಯುವ ವೇದಿಕೆ ವತಿಯಿಂದ ನಾಡಪ್ರಭು ಕೆಂಪೇಗೌಡರ 517ನೇ ಜಯಂತಿಯ ಪ್ರಯುಕ್ತ ಶಿವಮೊಗ್ಗ ನಗರದ ಕೋರ್ಟ್ ಸರ್ಕಲ್ ನಲ್ಲಿ “ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ಸಾರ್ವಜನಿಕರಿಗೆ ಸಿಹಿ ಹಂಚುವ ಕಾರ್ಯಕ್ರಮ” ವನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಶಾಖಾಮಠದ ಗುರುಗಳಾದ ಪೂಜ್ಯ ಶ್ರೀ ನಾದಮಯಾನಂದನಾಥ ಸ್ವಾಮೀಜಿರವರು ದಿವ್ಯ ಸಾನಿಧ್ಯ ವಹಿಸಿದ್ದರು. ಇವರೊಂದಿಗೆ ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಚೇತನ್ ಗೌಡ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಶ್ರೀ ಬಿ.ಎ ರಮೇಶ್ ಹೆಗ್ಡೆ, ಒಕ್ಕಲಿಗರ ಯುವ ವೇದಿಕೆಯ ಉಪಾಧ್ಯಕ್ಷರಾದ ಶ್ರೀ ಗುರುರಾಜ್ ಗೌಡ, ಪ್ರಧಾನ ಕಾರ್ಯದರ್ಶಿ ಶ್ರೀ ರಘು ಗೌಡ, ಖಜಾಂಚಿ ಸುನಿಲ್ ಗೌಡ, ಸಹ ಕಾರ್ಯದರ್ಶಿ ಪ್ರಜ್ವಲ್ ಗೌಡ, ಮಲೆನಾಡು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ಶ್ರೀ ಕೆ.ಎನ್ ರಾಮಕೃಷ್ಣ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ರಾಘವೇಂದ್ರ, ಕೃಷಿ ವಿಶ್ವವಿದ್ಯಾನಿಲಯದ ನಿರ್ದೇಶಕರಾದ ಶ್ರೀ ಶಶಾಂಕ್ ಗೌಡ, ಒಕ್ಕಲಿಗರ ಯುವ ವೇದಿಕೆಯ ನಿರ್ದೇಶಕರಾದ ವೆಂಕಟೇಶ್, ಪ್ರಮೋದ್, ಅರುಣ್, ಧನರಾಜ್, ಗಗನ್, ಗೀತೇಂದ್ರ, ಶೋಭರಾಜ್, ಕಿರಣ್, ಪ್ರಮೋದ್, ವಿನಯ್, ವಿಜಯ್, ಕಿರಣ್, ರಂಗನಾಥ್, ಗಿರಿರಾಜ್, ವೈಭವ್, ಸಮರ್ಥ, ಮಣಿ, ಸಂಜಯ್, ಮಿಲನ್, ಶಶಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಯುವಕರು ಉಪಸ್ಥಿತರಿದ್ದರು.
[4:03 pm, 27/6/2026] Anju Madam: 02

Information and Public Relations Department ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನೂತನ ಆಯುಕ್ತರಾಗಿ ಎಂ.ಎನ್.ಅನುಚೇತ್ ಅಧಿಕಾರ ಸ್ವೀಕಾರ

0

Information and Public Relations Department ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನೂತನ ಆಯುಕ್ತರಾಗಿ ಐಪಿಎಸ್ ಅಧಿಕಾರಿ ಡಿಐಜಿ ಎಂ.ಎನ್.ಅನುಚೇತ್ ಅವರು ಗುರುವಾರ ಅಧಿಕಾರ ಸ್ವೀಕರಿಸಿದರು.

ಇದುವರೆಗೆ ಇಲಾಖೆಯ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹಿರಿಯ ಐಪಿಎಸ್ ಅಧಿಕಾರಿ,ಎಡಿಜಿಪಿ ಹೇಮಂತ್ ಎಂ ನಿಂಬಾಳ್ಕರ್ ಅವರು ಅಧಿಕಾರ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳು ನೂತನ ಆಯುಕ್ತರಿಗೆ ಶುಭಕೋರಿದರು.

ಎಂ.ಎನ್.ಅನುಚೇತ್ ಅವರಿಗೆ ವಾರ್ತಾ ಇಲಾಖೆಯ ಜೊತೆಗೆ ಯುವ ಜನ ಸೇವೆ ಹಾಗೂ ಕ್ರೀಡಾ ಇಲಾಖೆಯ ಆಯುಕ್ತರ ಹೆಚ್ಚುವರಿ ಪ್ರಬಾರದಲ್ಲೂ ಇವರನ್ನು ಇರಿಸಿ ಸರ್ಕಾರ ಆದೇಶಿಸಿದೆ.

ಎಂ.ಎನ್. ಅನುಚೇತ್ ಅವರು ಮೂಲತಃ ಕೋಲಾರ ಜಿಲ್ಲೆಯವರಾಗಿದ್ದಾರೆ. ಬೆಂಗಳೂರಿನ ಆರ್.ವಿ. ಇಂಜಿನಿಯರಿಂಗ್ ಕಾಲೇಜಿನಿಂದ 2006ರಲ್ಲಿ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವಿ ಮುಗಿಸಿರುವ ಇವರು ತಾಂತ್ರಿಕ ಹಿನ್ನೆಲೆಯನ್ನು ಹೊಂದಿದ್ದಾರೆ. ಆ ಬಳಿಕ ನಾಗರಿಕ ಸೇವೆಗೆ ಸೇರುವ ಆಕಾಂಕ್ಷೆಯೊಂದಿಗೆ ಶ್ರಮಿಸಿ, 2008ರ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಅತ್ಯುತ್ತಮ ಯಶಸ್ಸು ಸಾಧಿಸಿದರು. ತರುವಾಯ 2009ರ ಬ್ಯಾಚ್ ನ ಕರ್ನಾಟಕ ವೃಂದದ ಐಪಿಎಸ್ ಅಧಿಕಾರಿಯಾಗಿ ಇವರು ಆಯ್ಕೆಯಾದರು.

Information and Public Relations Department ವಾರ್ತಾ ಇಲಾಖೆಯ ಕಾರ್ಯವೈಖರಿಗೆ ಹೊಸ ವೇಗ ನೀಡಬಲ್ಲ ಸಾಮರ್ಥ್ಯ ಹೊಂದಿರುವ ಅನುಚೇತ್ ಅವರು, ಪೊಲೀಸ್ ಇಲಾಖೆಯಲ್ಲಿ ತಂತ್ರಜ್ಞಾನ ಆಧಾರಿತ ಪೊಲೀಸ್ ವ್ಯವಸ್ಥೆ ಹಾಗೂ ಸಮರ್ಥ ಆಡಳಿತಕ್ಕಾಗಿ ಹೆಸರಾಗಿದ್ದಾರೆ. ಈ ಹಿಂದೆ ಇವರು ಕೈಗೊಂಡ ಅತ್ಯುತ್ತಮ ತನಿಖಾ ಕಾರ್ಯಗಳನ್ನು ಗುರುತಿಸಿ ಕೇಂದ್ರ ಸರ್ಕಾರವು ಇವರಿಗೆ ಪ್ರತಿಷ್ಠಿತ “ಕೇಂದ್ರ ಗೃಹ ಸಚಿವರ ತನಿಖೆಗಾಗಿನ ಅತ್ಯುತ್ತಮ ಪದಕ ನೀಡಿ ಗೌರವಿಸಿದೆ.

2011ರಲ್ಲಿ ಪುತ್ತೂರಿನ ಸಹಾಯಕ ಪೊಲೀಸ್ ಅಧೀಕ್ಷಕರಾಗಿ (ASP) ತಮ್ಮ ವೃತ್ತಿಜೀವನ ಆರಂಭಿಸಿದ ಇವರು, ಆ ಬಳಿಕ ಸಿಐಡಿ (CID) ವಿಭಾಗದ ಎಸ್ಪಿ ಆಗಿ, ಬೆಂಗಳೂರು ನಗರದ ಕೇಂದ್ರ ವಿಭಾಗದ ಡಿಸಿಪಿ (DCP Central) ಆಗಿ ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಇತ್ತೀಚೆಗೆ ಬೆಂಗಳೂರು ನಗರದ ಜಂಟಿ ಪೊಲೀಸ್ ಕಮಿಷನರ್ (ಸಂಚಾರ) ಆಗಿ ಅತ್ಯಂತ ಯಶಸ್ವಿಯಾಗಿ ಸೇವೆ ಸಲ್ಲಿಸಿ, ನಗರದ ಸಂಚಾರ ನಿಯಂತ್ರಣಕ್ಕೆ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಅಳವಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಹುದ್ದೆಗೆ ಬರುವ ಮುನ್ನ ಇವರು ಪೊಲೀಸ್ ನೇಮಕಾತಿ ವಿಭಾಗದ ಡಿಐಜಿಪಿ (DIGP) ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಈ ಸಂದರ್ಭದಲ್ಲಿ ಇಲಾಖೆಯ ಜಂಟಿ ನಿರ್ದೇಶಕರಾದ ಮಂಜುನಾಥ ಡೊಳ್ಳಿನ್,ಸಿದ್ದೇಶ್ವರಪ್ಪ ಜಿಬಿ, ಸಿ.ಆರ್.ನವೀನ್, ಉಪನಿರ್ದೇಶಕರಾದ ಬಿ.ಕೆ.ರಾಮಲಿಂಗಪ್ಪ, ಶಫಿ ಸಾದುದ್ಧಿನ್ ಸೇರಿದಂತೆ ಇತರರರು ಇದ್ದರು.

ಜೂನ್ 30. ನವಿಲೆಯಲ್ಲಿ ರಸಗೊಬ್ಬರ ಕೊರತೆ ಬಳಕೆ ಮತ್ತು ಪರ್ಯಾಯ ಕ್ರಮಗಳ ಬಗ್ಗೆ ಮಾಹಿತಿ ಕಾರ್ಯಾಗಾರ

0

ರಸಗೊಬ್ಬರಗಳ ಕೊರತೆ, ಸಮರ್ಪಕ ಬಳಕೆ ಹಾಗೂ ಪರ್ಯಾಯ ವ್ಯವಸ್ಥೆಗಳ ಕುರಿತು ರೈತರಿಗೆ ಮಾಹಿತಿ ನೀಡುವ ಉದ್ದೇಶದಿಂದ ಜೂನ್ 30, ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಶಿವಮೊಗ್ಗದ ನವಿಲೆಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಶೇಷ ಕಾರ್ಯಾಗಾರ ಆಯೋಜಿಸಲಾಗಿದೆ.

ಕರ್ನಾಟಕ ಪ್ರದೇಶ ಕೃಷಿಕ ಸಮಾಜ, ಬೆಂಗಳೂರು ಹಾಗೂ ಜಿಲ್ಲಾ ಕೃಷಿಕ ಸಮಾಜದ ಆಶ್ರಯದಲ್ಲಿ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಮತ್ತು ಕೃಷಿ ತಂತ್ರಜ್ಞರ ಸಂಸ್ಥೆಯ ಸಹಯೋಗದಲ್ಲಿ ಈ ಕಾರ್ಯಾಗಾರ ನಡೆಯಲಿದೆ.

ಕಾರ್ಯಾಗಾರದಲ್ಲಿ ಕೃಷಿ ವಿಜ್ಞಾನಿಗಳು ಹಾಗೂ ತಂತ್ರಜ್ಞರು ರಸಗೊಬ್ಬರಗಳ ಲಭ್ಯತೆ, ಸಮರ್ಪಕ ಬಳಕೆ, ಪರ್ಯಾಯ ಪೋಷಕಾಂಶ ನಿರ್ವಹಣೆ ಸೇರಿದಂತೆ ರೈತರಿಗೆ ಅಗತ್ಯವಾದ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಲಿದ್ದಾರೆ.

ಜಿಲ್ಲೆಯ ರೈತರು ಹಾಗೂ ವಿವಿಧ ರೈತ ಸಂಘಟನೆಗಳ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನ ಪಡೆಯುವಂತೆ ಜಿಲ್ಲಾ ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ವಿಜಿ ಶ್ರೀಧರ (ವರದಾಮೂಲ) ಮನವಿ ಮಾಡಿದ್ದಾರೆ.

B.Y. Raghavendra ರೈತರು ಬರಗಾಲ ಎದುರಿಸಲು ಅಧಿಕಾರಿಗಳು ನೆರವಾಗಿ: ಬಿ.ವೈ.ರಾಘವೇಂದ್ರ

0

B.Y. Raghavendra ಕಳೆದ ಏಪ್ರಿಲ್, ಮೇ ಮಾಹೆಯಲ್ಲಿ ಜಿಲ್ಲೆಯ ಆಯ್ದ ಸ್ಥಳಗಳಲ್ಲಿ ಬಿದ್ದ ಭಾರೀ ಮಳೆಯಿಂದಾಗಿ ರೈತರು ತೋಟಗಳಲ್ಲಿ ಬೆಳೆದ ಅಡಿಕೆ ಮರಗಳು ಪ್ರಕೃತಿ ವಿಕೋಪದಿಂದಾಗಿ ಅವಸಾನಗೊಂಡಿದ್ದು, ಈ ಸಂಬಂಧ ಬಾಧಿತ ರೈತರಿಗೆ ಪರಿಹಾರ ಕ್ರಮವಾಗಿ ಸರ್ಕಾರಕ್ಕೆ ವಿಶೇಷ ಪ್ಯಾಕೇಜ್ನೀಡುವಂತೆ ಸಲ್ಲಿಸಲಾಗಿದ್ದ ಪ್ರಸ್ತಾವನೆ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳೊಂದಿಗೆ ಸಮಾಲೋಚನೆ ನಡೆಸಿ, ಸಂತ್ರಸ್ಥ ರೈತರಿಗೆ ಪರಿಹಾರದ ಮೊತ್ತ ದೊರಕಿಸಿಕೊಡಲು ಜಿಲ್ಲಾಧಿಕಾರಿಗಳು ತಕ್ಷಣದ ಕ್ರಮಗಳನ್ನು ಕೈಗೊಳ್ಳುವಂತೆ ಸಾಂಸದ ಬಿ.ವೈ.ರಾಘವೇಂದ್ರ ಅವರು ಸೂಚಿಸಿದರು.
ಅವರು ಇಂದು ಜಿಲ್ಲಾ ಪಂಚಾಯಿತಿಯ ಅಬ್ದುಲ್ನಜೀರ್ಸಾಭ್ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಬೆಳೆಹಾನಿ ಕುರಿತು ಜಿಲ್ಲಾಡಳಿತ ಈಗಾಗಲೇ ಬಾಧಿತ ರೈತರಿಂದ ಮಾಹಿತಿ ಸಂಗ್ರಹಿಸಿ, ಸರ್ಕಾರಕ್ಕೆ ನಿಯಮನಾನುಸಾರ ಪರಿಹಾರ ಧನ ಬಿಡುಗಡೆಗೊಳಿಸುವಂತೆ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಶೇ33ಕ್ಕಿಂತ ಮೇಲ್ಪಟ್ಟು ಹಾನಿಗೊಳಗಾದ ತೋಟಗಾರಿಕೆ ಬೆಳೆಗೆ ಪ್ರತಿ ಹೆಕ್ಟೇರ್ಬೆಳೆಗೆ 22,000/-ಗಳನ್ನು ಬಿಡುಗಡೆಗೊಳಿಸುವಂತೆಯೂ ಕೋರಿಕೆ ಸಲ್ಲಿಸಲಾಗಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲಾಗಿದ ಎಂದರು.
ಕಳೆದ ಏಪ್ರಿಲ್ಮಾಹೆಯಲ್ಲಿ ಬಿದ್ದ ಮಳೆಯಿಂದಾಗಿ ಹಾನಿಗೊಳಗಾದ ಒಟ್ಟು 592ಮನೆಗಳ ಪೈಕಿ 66ಮನೆಗಳು ಸಂಪೂರ್ಣ ನಾಶಗೊಂಡಿವೆ. 526ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಮೇ ಮಾಹೆಯಲ್ಲಿ 220ಮನೆಗಳು ಹಾನಿಗೊಳಗಾಗಿದ್ದು, 1ಮನೆ ಪೂರ್ಣಪ್ರಮಾಣದಲ್ಲಿ ಹಾಗೂ 219ಮನೆಗಳು ಭಾಗಶಃ ಹಾನಿಗೊಳಗಾಗಿದೆ. ಏಪ್ರಿಲ್ಮಾಹೆಯಲ್ಲಿ 514ಹೆ. ಮತ್ತು ಮೇ ಮಾಹೆಯಲ್ಲಿ 460ಹೆಕ್ಟೇರ್ಬೆಳೆನಾಶವಾಗಿದ್ದು, ಈ ಸಂಬಂಧ ಸಂತ್ರಸ್ಥ ಕುಟುಂಬಗಳಿಂದ ಮಾಹಿತಿ ಪಡೆದು, ಪರಿಹಾರ ಕ್ರಮಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದ ಅವರು, ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಇದ್ದಾಗ್ಯೂ ಸಂತ್ರಸ್ಥರಿಗೆ ಪರಿಹಾರ ಧನ ದೊರಕಿಸಿಕೊಡದಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಮಳೆಯಿಂದ ಹಾನಿಗೊಳಗಾಗಿರುವ ಅಧಿಕೃತ ಮನೆಗಳಿಗೆ ಪರಿಹಾರ ದೊರೆಯಲಿದೆ. ಅನಧಿಕೃತ ಮನೆಗಳಿಗೆ ಪರಿಹಾರಧನ ನೀಡಲು ಅವಕಾಶ ಇಲ್ಲವಾಗಿದ್ದು, ಸಂಬಂಧಿತ ಇಲಾಖಾ ಸಚಿವರ ಗಮನಸೆಳೆದು, ಸಂತ್ರಸ್ಥ ಕುಟುಂಬದವರೆಲ್ಲರಿಗೂ ಪರಿಹಾರ ಧನ ದೊರಕಿಸಿಕೊಡಲು ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯಪ್ರವೃತ್ತರಾಗುವಂತೆ ಸೂಚಿಸಿದರು.
B.Y. Raghavendra ಕಳೆದ ಸಾಲಿನಲ್ಲಿ 17446 ಹೆಕ್ಟೇರ್ಪ್ರದೇಶದಲ್ಲಿ ಬೆಳೆದ ಮೆಕ್ಕೆಜೋಳ ಬೆಳೆಗೆ ಜಿಲ್ಲೆಯ ರೈತರು ಬೆಳೆವಿಮೆಗಾಗಿ ಒಟ್ಟು 3.08ಕೋಟಿ ಮೊತ್ತವನ್ನು ಪಾವತಿಸಿದ್ದರು. ಆದರೆ, ಸರಿಯಾದ ಕ್ರಮದಲ್ಲಿ ಬೆಳೆಕಟಾವು ಮಾನದಂಡಗಳನ್ನು ಅನುಸರಿಸದಿರುವುದರಿಂದ ಸರಿಯಾಗಿ ಮೌಲ್ಯಮಾಪನ ನಡೆಯದೇ ಬಾದಿತ ರೈತರಿಗೆ ಸರಿಯಾದ ಮೊತ್ತ ಪಾವತಿಯಾಗಿರುವುದಿಲ್ಲ. ಅಂತಹ ಸಂತ್ರಸ್ಥ ರೈತರಿಗೆ ಸರಿಯಾದ ವಿಮಾ ಪರಿಹಾರ ಮೊತ್ತವನ್ನು ದೊರಕಿಸಿಕೊಡಲು ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಪ್ರತಿ ಪಂಚಾಯಿತಿಗೆ 4ಕಡೆ ಬೆಳೆಕಟಾವು ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಇದು ಸರಿಯಲ್ಲ. ಕನಿಷ್ಟ 10ಕಡೆಗಳಲ್ಲಾದರೂ ಬೆಳೆ ಕಟಾವು ಪ್ರಯೋಗಗಳು ನಡೆಯುವಂತಾಗಬೇಕು. ಅದಕ್ಕಾಗಿ ಸಂಬಂಧಿತ ಇಲಾಖಾ ಅಧಿಕಾರಿಗಳು ಮಾರ್ಪಡಿಸಿದ ಸೂಚನೆಗಳೊಂದಿಗೆ ಬೆಳೆಕಟಾವು ಪ್ರಯೋಗಗಳು ನಡೆಸುವಂತೆ ಸರ್ಕಾರಕ್ಕೆ ಮನವಿ ಮಾಡುವಂತೆ ಅವರು ಸೂಚಿಸಿದ ಅವರು, ಈ ವಿಷಯದಲ್ಲಿ ಕೃಷಿ ತಜ್ಞರ ಸಲಹೆ ಪಡೆದು ಹಲವು ಮಹತ್ವದ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ ಎಂದರು.
ಬೆಳೆ ವಿಮಾ ಮೊತ್ತ ಪಾವತಿಸಲು ಮೆಕ್ಕೆಜೋಳ ಬೆಳೆಗಾರರಿಗೆ ಜುಲೈ 31 ಹಾಗೂ ಭತ್ತ ಮತ್ತು ರಾಗಿ ಬೆಳೆಗಾರರಿಗೆ ಆಗಸ್ಟ್14ಕೊನೆಯ ದಿನವಾಗಿದೆ. ತೀವ್ರ ತರಹದ ಮಳೆಯ ಕೊರತೆಯಿಂದಾಗಿ ಈವರೆಗೆ ನಿರೀಕ್ಷಿತ ಪ್ರಮಾಣದ ಬಿತ್ತನೆ ಕಾರ್ಯ ನಡೆಯದಿರುವುದು, ರೈತರು ಚಿಂತಾಕ್ರಾಂತರಾಗಿರುವುದು ಆತಂಕವನ್ನುಂಟು ಮಾಡಿದೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ರೈತರಿಗೆ ಭರವಸೆ ನೀಡುವ, ಅವರು ಮುಂದಿನ ದಿನಗಳಲ್ಲಿ ಬರಬಹುದಾದ ಮಳೆಯ ಅಂದಾಜಿನಂತೆ ಬಿತ್ತನೆ ಮಾಡುವ ಹಾಗೂ ಮಾಡದಿರುವ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡುವಂತೆ ಹಾಗೂ ಬೆಳೆವಿಮಾ ಮೊತ್ತ ಪಾವತಿಸಲು ಪ್ರೇರೇಪಿಸುವಂತೆ ಅವರು ಸಲಹೆ ನೀಡಿದರು.
ಕಳೆದ ವರ್ಷದ ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಶೇ.60ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿತ್ತು. ಆದರೆ, ಪ್ರಸಕ್ತ ಸಾಲಿನಲ್ಲಿ ಬಿತ್ತನೆ ಕಾರ್ಯ ಆರಂಭವಾಗದಿರುವುದು ಆತಂಕಕಾರಿ ಸಂಗತಿಯಾಗಿದೆ. ಜಿಲ್ಲೆಯಲ್ಲಿ ಮಳೆಮಾಪನ ಕೇಂದ್ರಗಳು ಹಾಗೂ ಕೆಲವು ಕಡೆಗಳಲ್ಲಿ ಕೇಂದ್ರಗಳ ನೆರೆಯ ಮಳೆಮಾಪನ ಕೇಂದ್ರಗಳು ಹಾಳಾಗಿದ್ದು, ಸಂತ್ರಸ್ಥ ರೈತರಿಗೆ ಬೆಳೆವಿಮಾ ಪರಿಹಾರ ಮೊತ್ತ ಕೊಡುವಲ್ಲಿ ತೀವ್ರತರಹದ ಅನ್ಯಾಯವಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಸಂಬಂಧಿಸಿದ ಇಲಾಖೆಗಳು ಹಾಗೂ ವಿಮಾ ಕಂಪನಿಗಳು ನಿರ್ವಾಹಕರು ರೈತರಿಗೆ ಪರಿಹಾರಧನ ಕೊಡಿಸುವಂತೆ ಅವರು ಸೂಚಿಸಿದರು.
ಜಿಲ್ಲೆಯಲ್ಲಿರುವ 280 ಮಳೆಮಾಪನ ಕೇಂದ್ರಗಳಲ್ಲಿ 72ಕೇಂದ್ರಗಳು ಮಾತ್ರ ಕ್ರಿಯಾಶೀಲವಾಗಿದ್ದು, ಉಳಿದ ಕೇಂದ್ರಗಳು ದುರಸ್ತಿಯಲ್ಲಿರುವುದನ್ನು ಅಧಿಕಾರಿಗಳಿಂದ ತಿಳಿದಿದ್ದು, ಮಳೆ ಮಾಪನ ಕೇಂದ್ರಗಳ ಮೇಲ್ವಿಚಾರಕ್ಕೆ ವಿಚಾರಿಸಲಾಗಿ ಇನ್ನೂ ಒಂದು ವಾರದೊಳಗಾಗಿ ಸುಮಾರು 220ಕೇಂದ್ರಗಳು ಚಾಲ್ತಿಯಲ್ಲಿರುವಂತೆ ಹಾಗೂ ದುರಸ್ತಿ ಮಾಡಿದ ಕೇಂದ್ರಗಳಿಗೆ ಸಿಮ್ಅಳವಡಿಸಿ, ಕ್ರಿಯಾಶೀಲವಾಗಿರುವಂತೆ ಗಮನಹರಿಸಲಾಗುವುದು ಎಂದು ತಿಳಿಸಿರುವುದಾಗಿ ಅವರು ಹೇಳಿದರು. ಮಳೆಮಾಪನ ಕೇಂದ್ರಗಳ ಅಸಮರ್ಪಕ ದುರಸ್ತಿಯಿಂದಾಗಿ ದಾಖಲೆಗಳ ಸಮರ್ಪಕ ನಿರ್ವಹಣೆ ಆಗದೆ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ ಎಂದರು.
ಹಿಂದಿನ ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಬಿದ್ದ ಉತ್ತಮ ಮಳೆಯಿಂದಾಗಿ ಏತ ನೀರಾವರಿ ಸೌಲಭ್ಯವನ್ನು ಬಳಸಿಕೊಂಡಿರಲಿಲ್ಲ. ಆದರೆ, ಪ್ರಸಕ್ತ ಸಾಲಿನ ಮಳೆ ಕೊರತೆಯಿಂದಾಗಿ ಕೆರೆಕಟ್ಟೆ ಕಾಲುವೆಗಳನ್ನು ತುಂಬಿಸಿಕೊಳ್ಳುವುದು, ಏತನೀರಾವರಿ ಸೌಲಭ್ಯ ಬಳಸಿಕೊಳ್ಳುವುದು ಅನಿವಾರ್ಯವಾಗಲಿದೆ. ಅದಕ್ಕಾಗಿ ಸಣ್ಣ ಮತ್ತು ಭಾರೀ ನೀರಾವರಿ ಇಲಾಖೆ ಸನ್ನದ್ಧವಾಗಿದೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಜಿಲ್ಲೆಯ ಭಾರೀ ನೀರಾವರಿ ಇಲಾಖೆಯ ವ್ಯಾಪ್ತಿಗೊಳಪಡುವ ಏತ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಮೆಸ್ಕಾಂಗೆ ಒಟ್ಟು 32ಕೋಟಿ ರೂ.ಗಳ ವಿದ್ಯುತ್ಶುಲ್ಕ ಪಾವತಿಸುವುದು ಬಾಕಿ ಇದೆ. ಮುಂದಿನ ದಿನಗಳಲ್ಲಿ ಸೋಲಾರ್ನಿಂದ ಏತ ನೀರಾವರಿ ಯೋಜನೆಯನ್ನು ಬಳಸಿಕೊಳ್ಳುವ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಸರ್ಕಾರಕ್ಕೆ ಸಲಹೆ ನೀಡಲಾಗುವುದು ಎಂದರು.
ಜಿಲ್ಲೆಯಲ್ಲಿ ಮುಂಗಾರು ಬೆಳೆಗೆ ಅಗತ್ಯವಾಗಿರುವ ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಲಾಗಿದೆ. ವನವಾಸಿಗಳು ಹಾಗೂ ಬಗರ್ಹುಕುಂ ಸಾಗುವಳಿದಾರರಿಗೆ ರಸಗೊಬ್ಬರದ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ಪ್ರಸ್ತುತ ಸಂದರ್ಭದಲ್ಲಿ ರೈತರು ಸಂಭವನೀಯ ಸಮಸ್ಯೆಯಿಂದ ಪಾರಾಗಲು ಅಧಿಕಾರಿಗಳು ರೈತರಿಗೆ, ರೈತರ ಸಮಸ್ಯೆಗಳಿಗೆ ಮಾನವೀಯ ನೆಲೆಯಲ್ಲಿ ಸ್ಪಂದಿಸುವಂತೆ ಅವರು ಸಲಹೆ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್ಸೇರಿದಂತೆ ಕೃಷಿ, ತೋಟಗಾರಿಕೆ, ವಿಮೆ, ಕಂದಾಯ, ಪಂಚಾಯತ್ರಾಜ್ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.