Tuesday, August 4, 2026
Tuesday, August 4, 2026
Home Blog Page 47

Pace college Students Bus Accident ಅಂಗಡಿಗೆ ನುಗ್ಗಿದ ಕಾಲೇಜು ಬಸ್.!ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯ.

0

Pace college Students Bus Accident ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಜೆಡಿಕಟ್ಟೆಯಲ್ಲಿ ಕಳೆದ ಸಂಜೆ ದೊಡ್ಡ ಅನಾಹುತವೊಂದು ತಪ್ಪಿದೆ. ಎದರಿಗೆ ಬಂದ ಲಾರಿಗೆ ಡಿಕ್ಕಿಯಾಗವುದನ್ನು ತಪ್ಪಿಸಲು ಮಂದಾದ ಬಸ್ ಪಕ್ಕದಲ್ಲಿದ್ದ ಟೈಯರ್ ಅಂಗಡಿಗೆ ನುಗ್ಗಿದೆ. ಸಂಜೆ ವೇಳೆ ಕಾಲೇಜು ವಿದ್ಯಾರ್ಥಿಗಳನ್ನು ಕರೆದೊಯುತ್ತಿದ್ದ ಪೇಸ್ ಕಾಲೇಜಿನ ಬಸ್ ಒಂದು ಜೆಡಿಕಟ್ಟೆಗೆ ಬಂರುತ್ತಿದಂತ್ತೆ ಎದುರಿಗೆ ವೇಗವಾಗಿ ಬರುತ್ತಿದ್ದ ಲಾರಿವೊಂದಿಗೆ ಮುಖಾಮುಖಿಡಿಕ್ಕಿಯಾಗುವುದನ್ನು ತಪ್ಪಿಸಲು ಮುಂದಾದ ಬಸ್ ಚಾಲಕ ಎಡಗಡೆ ತೆಗೆದುಕೊಂಡಿದ್ದಾನೆ ಈ ವೇಳೆ, ಚಾಲಕನ ನಿಯಂತ್ರಣ ತಪ್ಪಿ ಪಕ್ಕದಲ್ಲಿ ಇದ್ದ ಅಂಗಡಿಗೆ ನುಗ್ಗಿದೆ. ಇದರ ಪರಿಣಾಮ ಬಸ್ ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಹಲವು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗೊಂಡ ವಿದ್ಯಾರ್ಥಿಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ಸಂಬಂಧ ಭದ್ರಾವತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

D.K. Shivakumar ತೆರಿಗೆ ಸೋರಿಕೆಗೆ ಅವಕಾಶ ಇರಬಾರದು.ಯಾವುದೇ ರೀತಿ ರಾಜಿ,ನಿರ್ಲಕ್ಷ್ಯಕ್ಕೆ ಆಸ್ಪದವಿರಬಾರದು- ಡಿ.ಕೆ.ಶಿವಕುಮಾರ್.

0

D.K. Shivakumar ವಿಧಾನಸೌಧದಲ್ಲಿ ಶುಕ್ರವಾರ ನಡೆದ ವಾಣಿಜ್ಯ ತೆರಿಗೆ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ನೀಡಿದ ಸ್ಪಷ್ಟ ಸೂಚನೆಗಳು:

ವಾಣಿಜ್ಯ ತೆರಿಗೆ ಅಧಿಕಾರಿಗಳು ಸರ್ಕಾರದ ಶಕ್ತಿ. ನೀವು ಶಕ್ತಿ ಕೊಡದಿದ್ದರೆ ಸರ್ಕಾರ ನಡೆಸುವುದು ಕಷ್ಟ. ವಾಣಿಜ್ಯ ತೆರಿಗೆ ಇಲಾಖೆಗೆ ಪ್ರಸ್ತುತ ಹಣಕಾಸು ವರ್ಷಕ್ಕೆ ನೀಡಿರುವ ತೆರಿಗೆ ಸಂಗ್ರಹದ ಗುರಿಯನ್ನು ಮೀರಿ ಸಾಧನೆ ತೋರಿಸುತ್ತೀರೆಂಬ ವಿಶ್ವಾಸ ನನಗಿದೆ.

“ಆರ್ಥಿಕ ಇಲಾಖೆ ಅಧಿಕಾರಿಗಳು, ಆರ್ಥಿಕ ಸಲಹೆಗಾರರಾದ ಎಲ್.ಕೆ. ಅತೀಕ್‌ ಅವರು ಹಾಗೂ ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಿತೇಶ್ ಕುಮಾರ್‌ ಅವರು ಇಲಾಖೆಯ ಕಾರ್ಯಕ್ಷಮತೆ ಹೆಚ್ಚಿಸಲು ಹಲವು ಸಲಹೆಗಳನ್ನು ನೀಡಿದ್ದಾರೆ. ಅವುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಜವಾಬ್ದಾರಿ ಈಗ ನಿಮ್ಮೆಲ್ಲರ ಮೇಲಿದೆ. ಅಧಿಕಾರಿಗಳ ಮೇಲೆ ನನಗೆ ಪೂರ್ತಿ ಭರವಸೆ ಇದೆ. ನೀವೆಲ್ಲಾ ನನ್ನ ನಿರೀಕ್ಷೆ ಈಡೇರಿಸಲು ಶ್ರಮಿಸುತ್ತೀರಿ ಎನ್ನುವ ವಿಶ್ವಾಸವೂ ಇದೆ.

ಯಾವುದೇ ಸರಕು ಸಾಗಣೆ ವಾಹನವು ಅಗತ್ಯ ದಾಖಲೆಗಳಿಲ್ಲದೆ ಚೆಕ್‌ಪೋಸ್ಟ್‌ ಅಥವಾ ರಾಜ್ಯದ ಗಡಿಯನ್ನು ದಾಟಬಾರದು. ತೆರಿಗೆ ಸೋರಿಕೆಗೆ ಯಾವುದೇ ಅವಕಾಶ ಇರಬಾರದು. ಇದರಲ್ಲಿ ಯಾವುದೇ ರೀತಿಯ ರಾಜಿ ಅಥವಾ ನಿರ್ಲಕ್ಷ್ಯಕ್ಕೆ ಅವಕಾಶವಿಲ್ಲ.

ನಾನು ಎಲ್ಲವನ್ನೂ ಗಮನಿಸುತ್ತಿದ್ದೇನೆ. ರಾಜ್ಯದ ಎಲ್ಲ ವಲಯಗಳಿಂದಲೂ ನನಗೆ ನಿರಂತರ ಮಾಹಿತಿ ಬರುತ್ತದೆ. ಚಿಕ್ಕಪೇಟೆಯಿಂದ ಗಾಂಧಿನಗರದವರೆಗೆ, ಗಡಿ ಜಿಲ್ಲೆಗಳಿಂದ ರಾಜ್ಯದ ಎಲ್ಲ ಭಾಗಗಳಲ್ಲೂ ನನ್ನದೇ ಆದ ಸಂಪರ್ಕಗಳಿವೆ. ಅಧಿಕಾರಿಗಳ ಕಾರ್ಯನಿರ್ವಹಣೆಯಲ್ಲಿ ಯಾವುದೇ ಲೋಪ ಅಥವಾ ನಿರ್ಲಕ್ಷ್ಯ ನಡೆದರೂ ಅದು ನನ್ನ ಗಮನಕ್ಕೆ ಬರುತ್ತದೆ. ಆದ್ದರಿಂದ ನನಗೆ ಬರುತ್ತಿರುವ ಮಾಹಿತಿಯೂ ನಿಮ್ಮ ಕಾರ್ಯಕ್ಷಮತೆಯ ವರದಿಯೂ ಒಂದಕ್ಕೊಂದು ಹೊಂದಿಕೆಯಾಗಬೇಕು.

ಪಕ್ಕದ ರಾಜ್ಯಗಳ ವಾಣಿಜ್ಯ ತೆರಿಗೆ ಇಲಾಖೆ ಮತ್ತು ಜಾರಿ ಸಂಸ್ಥೆಗಳೊಂದಿಗೆ ಉತ್ತಮ ಸಮನ್ವಯ ಸಾಧಿಸಿ. ಮಾಹಿತಿ ಹಂಚಿಕೆ ಮತ್ತು ಜಂಟಿ ಕಾರ್ಯಾಚರಣೆಗಳ ಮೂಲಕ ತೆರಿಗೆ ಸೋರಿಕೆಯನ್ನು ಪರಿಣಾಮಕಾರಿಯಾಗಿ ತಡೆಯಬೇಕು.

ಇಂದು ನಮ್ಮ ಬಳಿ ಸುಮಾರು 12 ಲಕ್ಷ ತೆರಿಗೆದಾರರ ಮಾಹಿತಿಯಿದೆ. ತಂತ್ರಜ್ಞಾನ ಮತ್ತು ಡೇಟಾ ಅನಾಲಿಟಿಕ್ಸ್ ಮೂಲಕ ಅವರನ್ನು 360 ಡಿಗ್ರಿ ದೃಷ್ಟಿಕೋನದಲ್ಲಿ ವಿಶ್ಲೇಷಿಸುವ ಸಾಮರ್ಥ್ಯ ನಿಮಗಿದೆ. ಈ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡರೆ ನಿಮಗೆ ನೀಡಿರುವ ಗುರಿಯನ್ನು ಸಾಧಿಸುವುದಷ್ಟೇ ಅಲ್ಲ, ಅದನ್ನು ಮೀರಿಸುವ ಸಾಮರ್ಥ್ಯವೂ ನಿಮ್ಮಿಂದ ಸಾದ್ಯವಿದೆ.

ನಮ್ಮ ಉದ್ದೇಶ ಯಾರಿಗೂ ಅನಗತ್ಯ ತೊಂದರೆ ನೀಡುವುದಲ್ಲ. ಪ್ರಾಮಾಣಿಕ ತೆರಿಗೆದಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ತೆರಿಗೆ ಪಾವತಿಸುವ ಪ್ರತಿಯೊಬ್ಬ ನಾಗರಿಕನನ್ನು ಘನತೆ ಮತ್ತು ಗೌರವದಿಂದ ನಡೆಸಿಕೊಳ್ಳಬೇಕು. ಜೊತೆಗೆ ಇಲಾಖೆಯ ಸಿಬ್ಬಂದಿಯನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಬುದ್ಧಿವಂತಿಕೆಯಿಂದ ಕಾರ್ಯನಿರ್ವಹಿಸಿದರೆ ಗುರಿಯನ್ನು ಮೀರಿದ ಸಾಧನೆ ಮಾಡುವುದು ಸಾಧ್ಯ.

ಆದರೆ ತೆರಿಗೆ ವಂಚನೆಗೆ ಮಾತ್ರ ಯಾವುದೇ ಅವಕಾಶ ಇರಬಾರದು. ತೆರಿಗೆ ಸೋರಿಕೆಯನ್ನು ಸಂಪೂರ್ಣವಾಗಿ ತಡೆಯುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಮುಂದಿನ ಪರಿಶೀಲನಾ ಸಭೆ ನಡೆಯುವ ವೇಳೆಗೆ ಇಂದು ನಾನು ನೀಡಿರುವ ಪ್ರತಿಯೊಂದು ಸೂಚನೆಯೂ ಜಾರಿಯಾಗಿರಬೇಕು. ಮುಂದಿನ ಸಭೆಯಲ್ಲಿ ನಾನು ಸ್ವತಃ ಅನೇಕ ನೈಜ ಉದಾಹರಣೆಗಳೊಂದಿಗೆ ನಿಮ್ಮ ಕಾರ್ಯಕ್ಷಮತೆಯನ್ನು ಪರಿಶೀಲಿಸುತ್ತೇನೆ.

ಮತ್ತೊಮ್ಮೆ ಸ್ಪಷ್ಟವಾಗಿ ಹೇಳುತ್ತೇನೆ. ಒಂದೇ ಒಂದು ಸರಕು ಸಾಗಣೆ ವಾಹನ ಕೂಡ ಸೂಕ್ತ ಲೆಕ್ಕಪತ್ರ, ದಾಖಲೆ ಮತ್ತು ಸಂಪೂರ್ಣ ಅಕೌಂಟಬಿಲಿಟಿ ಇಲ್ಲದೆ ಚೆಕ್‌ಪೋಸ್ಟ್‌ ಅಥವಾ ರಾಜ್ಯದ ಗಡಿಯನ್ನು ದಾಟಬಾರದು. ಇದು ನಮ್ಮ ಇಲಾಖೆಯ ಕಾರ್ಯವೈಖರಿಯ ಮೂಲ ತತ್ವವಾಗಬೇಕು.

ಎಲ್ಲಾ ಜಂಟಿ ಆಯುಕ್ತರುಗಳು ಆಯಾ ವಿಭಾಗಗಳಿಗೆ ಹಂಚಿಕೆ ಮಾಡಲಾದ ತೆರಿಗೆ ಸಂಗ್ರಹಣಾ ಗುರಿಯನ್ನು ಸಾಧಿಸಿ ತೋರಿಸಿ. ತೆರಿಗೆ ರಿಟರ್ನ್‌ಗಳನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸುವುದು ಹಾಗೂ ತೆರಿಗೆ ರಿಟರ್ನ್‌ ಸಲ್ಲಿಸದಿರುವುದನ್ನು ಗುರುತಿಸಿ ನಿಗದಿತ ಅವಧಿಯ ಒಳಗೆ ರಿಟರ್ನ್‌ಗಳನ್ನು ಸಲ್ಲಿಸುವಂತೆ ಮಾಡಲು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು.

ನಿಮ್ಮ ಗುರಿ ಮುಟ್ಟಿ. ನಿಮಗೆ ಈಗ ಬರುತ್ತಿರುವ ತೆರಿಗೆಯ ಎರಡರಷ್ಟು ಸಂಗ್ರಹ ಮಾಡುವ ಸಾಮರ್ಥ್ಯ ಇದೆ.

ಆದರೆ ಕಾನೂನು ಮೀರಿ, ಶೋಷಣೆ ಮಾಡಿ ಅಂತ ಹೇಳಲ್ಲ.

ಪ್ರಾಮಾಣಿಕ ತೆರಿಗೆದಾರರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು. ಅವರನ್ನು ಸುಲಿಗೆ ಮಾಡಬಾರದು.

ನಿಮ್ಮ ತೊಂದರೆಗಳು ಇದ್ದರೆ ಹೇಳಿ, ಅವು ನೈಜ ಇದ್ದರೆ ನಿವಾರಿಸೋಣ. ಪ್ರಾಮಾಣಿಕತೆ, ನಿಷ್ಠೆ, ಶ್ರಮಕ್ಕೆ ನನ್ನ ಬಳಿ ಗೌರವ, ಬೆಲೆ.

ಪ್ರಾಮಾಣಿಕತೆ ಇಲ್ಲದಿದ್ದರೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವೆ.

ಎಲ್ಲಾ ಹಂತಗಳ ಅಧಿಕಾರಿಗಳು ತೆರಿಗೆದಾರರ ನೈಜ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಬೇಕು.

ನನ್ನ ಸಾರ್ವಜನಿಕ ಜೀವನಕ್ಕೆ ಸುಮಾರು ಮೂವತ್ತೆಂಟು ವರ್ಷಗಳ ಅನುಭವವಿದೆ. ಈ ಅವಧಿಯಲ್ಲಿ ಹಲವು ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದೇನೆ. ಈಗ ಹಣಕಾಸು ಮತ್ತು ವಾಣಿಜ್ಯ ತೆರಿಗೆ ಇಲಾಖೆಯ ಕಾರ್ಯವೈಖರಿಯನ್ನು ಇನ್ನಷ್ಟು ಆಳವಾಗಿ ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ. ಕೇಳುವುದಕ್ಕೂ, ಕಲಿಯುವುದಕ್ಕೂ ನಾನು ಸದಾ ಸಿದ್ಧನಿದ್ದೇನೆ. ನಿರಂತರ ಕಲಿಕೆಯೇ ಉತ್ತಮ ಆಡಳಿತದ ಮೂಲ ಎಂದು ನಾನು ನಂಬುತ್ತೇನೆ.

D.K. Shivakumar ಆದ್ದರಿಂದ ಮುಂದಿನ ಸಭೆಯ ವೇಳೆಗೆ ಇಂದಿನ ವರದಿಗಿಂತ ಉತ್ತಮವಾದ ಕಾರ್ಯಕ್ಷಮತೆಯ ವರದಿಯನ್ನು ನಿಮ್ಮಿಂದ ನಿರೀಕ್ಷಿಸುತ್ತೇನೆ.

ರಜೆ ದಿನವಾಗಿದ್ದರೂ ಸಭೆಗೆ ಆಗಮಿಸಿ, ಇಲಾಖೆಯ ಅಭಿವೃದ್ಧಿಗೆ ಬದ್ಧತೆಯಿಂದ ಪಾಲ್ಗೊಂಡಿರುವ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ಕರ್ನಾಟಕದ ಅಭಿವೃದ್ಧಿಗೆ ಅಗತ್ಯವಾದ ಸಂಪನ್ಮೂಲಗಳನ್ನು ಸಂಗ್ರಹಿಸುವ ಈ ಮಹತ್ವದ ಜವಾಬ್ದಾರಿಯನ್ನು ನಾವು ಎಲ್ಲರೂ ಸೇರಿ ಯಶಸ್ವಿಯಾಗಿ ನಿರ್ವಹಿಸೋಣ.”

GST ಸಂಗ್ರಹದಲ್ಲಿ ರಾಜ್ಯ ಉತ್ತಮ ಪ್ರಗತಿ ಸಾಧಿಸಿದೆ. ಶೇ9ರಷ್ಟು ಪ್ರಗತಿ ಆಗಿದೆ. ಈ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ಉತ್ತಮ ಸಾಧನೆಯಾಗಿದೆ.

ಗುಜರಾತ್, ತಮಿಳುನಾಡು, ಹರಿಯಾಣ ರಾಜ್ಯಗಳಿಗಿಂತ ಹೆಚ್ಚು ಪ್ರಗತಿ ರಾಜ್ಯದಲ್ಲಿ ಆಗಿರುವುದು ಸಮಾಧಾನದ ಸಂಗತಿ.

ಹೈದರಾಬಾದ್ IIT ಸಹಯೋಗದಲ್ಲಿ GST ವಂಚನೆ ಮೇಲೆ ತೀವ್ರ ನಿಗಾ ಇಡಲಾಗಿದೆ.(GST analytical portal) ಇದರಿಂದಾಗಿ ಹಲವು ರೀತಿಯ ಜಿಸ್ಟ್ ವಂಚನೆಗಳನ್ನು ಪತ್ತೆಹಚ್ಚಲಾಗಿದ್ದರೂ ಇದರಲ್ಲಿ ಸಂಪೂರ್ಣ ಪ್ರಗತಿ ಸಾಧಿಸಿ.

GST ಸಂಗ್ರಹ, ಸೋರಿಕೆ, ವಂಚನೆ ಸೇರಿ ಸಮಗ್ರವಾಗಿ 360° ಯಲ್ಲಿ ನಿಗಾ ಇಡಬಹುದಾಗಿದೆ.

ನಕಲಿ ರಶೀದಿ ಮತ್ತು ನಕಲಿ ITC ಗಳು ದೊಡ್ಡ ಸವಾಲಾಗಿದೆ. ಈ ಸವಾಲನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದೇವೆ. ಬೋಗಸ್ ಕಂಪನಿಗಳನ್ನು ಪತ್ತೆ ಹಚ್ಚಿ 166 ಕೋಟಿ ಸಂಗ್ರಹಿಸಿದ್ದೇವೆ. ಬೋಗಸ್ ಕಂಪನಿ ಸ್ಥಾಪಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಪ್ರಮಾಣ ಹೆಚ್ಚಲಿ.

ಇಲ್ಲಿಯವರೆಗೆ ಬೋಗಸ್ ಮಾಡುವವರನ್ನು ಬಂಧಿಸುವ ಪ್ರಮಾಣ ಕಡಿಮೆ ಇತ್ತು. ಈಗ ಬಂಧನವನ್ನು ಹೆಚ್ಚಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ ಸಿಬ್ಬಂದಿಯಿಂದ ಲೋಪ ಕಂಡು ಬಂದಾಗಲೂ ಕಠಿಣ ಕ್ರಮಗಳ ಮೂಲಕ ಎಚ್ಚರಿಕೆ ನೀಡಲಾಗಿದೆ.

ವಿಭಾಗವಾರು ನೀಡಲಾಗಿದ್ದ0ಟಾರ್ಗೆಟ್ ತಲುಪುವಲ್ಲಿ ಹಿಂದುಳಿದಿರುವ ಬಗ್ಗೆ ಅಧಿಕಾರಿಗಳು ಸ್ಪಷ್ಟ ವಿವರಗಳನ್ನು ಕೊಡಬೇಕು.

“ತೆರಿಗೆದಾರರಿಗೆ ಅಗತ್ಯ ಸಲಹೆ, ಮಾರ್ಗದರ್ಶನ ಮತ್ತು ಸಹಕಾರ ಒದಗಿಸುವುದರ ಜೊತೆಗೆ, ಅವರ ತೆರಿಗೆ ಸಂಬಂಧಿತ ಗೊಂದಲಗಳನ್ನು ಆನ್‌ಲೈನ್‌ನಲ್ಲಿಯೇ ತ್ವರಿತವಾಗಿ ಬಗೆಹರಿಸುವ ಸಮಗ್ರ ವ್ಯವಸ್ಥೆಯನ್ನು ನಾವು ರಾಜ್ಯದಲ್ಲಿ ರೂಪಿಸಿದ್ದೇವೆ.”

“ತೆರಿಗೆದಾರರು ಕಚೇರಿಗಳಿಗೆ ಅಲೆದಾಡುವ ಅಗತ್ಯವಿಲ್ಲದಂತೆ, ಅವರಿಗೆ ಅಗತ್ಯ ಸಲಹೆ ಮತ್ತು ಸಹಕಾರವನ್ನು ನೀಡುವ ಹಾಗೂ ಅವರ ಎಲ್ಲಾ ತೆರಿಗೆ ಸಂಬಂಧಿತ ಗೊಂದಲಗಳನ್ನು ಆನ್‌ಲೈನ್‌ನಲ್ಲಿಯೇ ಪರಿಹರಿಸುವ ನಾಗರಿಕ ಸ್ನೇಹಿ ವ್ಯವಸ್ಥೆಯನ್ನು ಜಾರಿಗೆ ತಂದಿದ್ದೇವೆ.”

“ತೆರಿಗೆದಾರರಿಗೆ ಸಲಹೆ, ಸಹಕಾರ ಮತ್ತು ತೆರಿಗೆ ಸಂಬಂಧಿತ ಗೊಂದಲಗಳ ತ್ವರಿತ ಪರಿಹಾರವನ್ನು ಆನ್‌ಲೈನ್‌ನಲ್ಲಿಯೇ ಒದಗಿಸುವ ವ್ಯವಸ್ಥೆಯನ್ನು ರೂಪಿಸಿದ್ದೇವೆ.”

ಮೈಸೂರು ವಿಭಾಗದಲ್ಲಿ ಕಾರ್ಯಕ್ಷಮತೆ ಕುಸಿತ ಆಗಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಕಾರ್ಯಕ್ಷಮತೆ ಕುಸಿದಿರುವುದಕ್ಕೆ ನೆಪಗಳು, ಕಾರಣಗಳನ್ನು ಕೊಡುವುದು ಸರಿಯಲ್ಲ. ಫಲಿತಾಂಶ ಮುಖ್ಯ. ಏನೇ ತಾಂತ್ರಿಕ ತೊಂದರೆಗಳಿದ್ದರೂ ಬಗೆಹರಿಸಿಕೊಂಡು ಉತ್ತಮ ಕಾರ್ಯಕ್ಷಮತೆ ನಿರೀಕ್ಷಿಸುತ್ತೇನೆ.

ಮೇ 2026ರ ವರೆಗೆ ಜಿಎಸ್‌ಟಿ ಸಂಗ್ರಹದಲ್ಲಿ ತೆಲಂಗಾಣ ರಾಜ್ಯ ಶೇ10 ರಷ್ಟು ಪ್ರಗತಿ ಸಾಧಿಸಿದ್ದರೆ ರಾಜ್ಯ ಶೇ9 ರಷ್ಟು ಪ್ರಗತಿ ಸಾಧಿಸಿದೆ. ಮಹಾರಾಷ್ಟ್ರ ಶೇ5, ಗುಜರಾತ್‌ ಶೇ5, ತಮಿಳುನಾಡು ಶೇ -7, ಉತ್ತರಪ್ರದೇಶ ಶೇ8 ರಷ್ಟು ಜಿಎಸ್‌ಟಿ ಪ್ರಗತಿ ಸಾಧಿಸಿವೆ. ರಾಜ್ಯ ದೇಶದಲ್ಲೇ ಎರಡನೇ ಸ್ಥಾನದಲ್ಲಿ ಇದ್ದೇವೆ. ಮೊದಲ ಸ್ಥಾನಕ್ಕೆ ಬರುವ ಮಾರ್ಗಗಳನ್ನು ಶೋಧಿಸಿ.

ಬಾಕಿ ಇರುವ ಮೇಲ್ಮನವಿಗಳನ್ನು ತ್ವರಿತವಾಗಿ ನಿರ್ವಹಿಸದಿರುವುದನ್ನು ಸಹಿಸಲು ಸಾಧ್ಯವಿಲ್ಲ. ಮೇಲ್ಮನವಿಗಳ ವಿಲೇವಾರಿ ವಿಚಾರದಲ್ಲಿ ಹಿರಿಯ ಅಧಿಕಾರಿಗಳು ಹೆಚ್ಚಿನ ನಿಗಾ ಇಡಬೇಕು.

ತೆರಿಗೆದಾರ ಸ್ನೇಹಿಯಾಗಿ ವ್ಯವಸ್ಥೆಯನ್ನು ಇನ್ನಷ್ಟು ಸರಳೀಕರಿಸುವ ಅಗತ್ಯವಿದೆ.

B.Y. Raghavendra “ಖೇಲೋ ಇಂಡಿಯಾ “ಒಳಾಂಗಣ ಕ್ರೀಡಾಂಗಣದ ಕಾಮಗಾರಿ ಪರಿಶೀಲಿಸಿದ ಬಿ.ವೈ.ರಾಘವೇಂದ್ರ.

0

B.Y. Raghavendra ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಖೇಲೋ ಇಂಡಿಯಾ’ ಯೋಜನೆಯಡಿ ₹5 ಕೋಟಿ ವೆಚ್ಚದಲ್ಲಿ ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಇಂಡೋರ್ ಸ್ಟೇಡಿಯಂ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.

ಸದರಿ ಕ್ರೀಡಾಂಗಣದ ನಿರ್ಮಾಣ ಕಾರ್ಯವು ನಿರೀಕ್ಷಿತ ವೇಗದಲ್ಲಿ ನಡೆಯದೇ ಮಂದಗತಿಯಲ್ಲಿ ಸಾಗುತ್ತಿದ್ದ ಹಿನ್ನೆಲೆಯಲ್ಲಿ, ಇಂದು ಕುವೆಂಪು ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳೊಂದಿಗೆ ಕಾಲೇಜು ಆವರಣಕ್ಕೆ ಶಿವಮೊಗ್ಗ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಅವರು ಭೇಟಿ ನೀಡಿ, ಕಾಮಗಾರಿಯ ಪ್ರಸ್ತುತ ಸ್ಥಿತಿಗತಿಯನ್ನು ಖುದ್ದಾಗಿ ಪರಿಶೀಲಿಸಿದರು..

B.Y. Raghavendra ಸ್ಥಳದಲ್ಲೇ ಉಪಸ್ಥಿತರಿದ್ದ ಗುತ್ತಿಗೆದಾರರು, ಅಭಿಯಂತರರು ಹಾಗೂ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಬಿ.ವೈ.ರಾಘವೇಂದ್ರ ಅವರು ಚರ್ಚಿಸಿದರು.
ಕಾಮಗಾರಿಯಲ್ಲಿ ಎದುರಾಗುತ್ತಿರುವ ಅಡಚಣೆಗಳನ್ನು ತಕ್ಷಣ ನಿವಾರಿಸಲು ಸಂಸದ ಅಧಿಕಾರಿಗಳಿಗೆ ಸಂಸದರು ಸೂಚಿಸಿದರು .

ನಮ್ಮ ಜಿಲ್ಲೆಯ ಯುವ ಕ್ರೀಡಾ ಪ್ರತಿಭೆಗಳಿಗೆ ಜಾಗತಿಕ ಮಟ್ಟದ ಕ್ರೀಡಾ ಸೌಲಭ್ಯಗಳನ್ನು ಸ್ಥಳೀಯವಾಗಿಯೇ ಒದಗಿಸಿ, ಅವರನ್ನು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತೆ ಮಾಡಲು ನಮ್ಮ ಸರ್ಕಾರ ಸಂಪೂರ್ಣ ಬದ್ಧವಾಗಿದೆ.

DK Shivakumar ಪಲ್ಸ್ ಪೊಲಿಯೊ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸೀಎಂ ಡಿ.ಕೆ.ಶಿವಕುಮಾರ್.

0

DK Shivakumar ಸಿಎಂ ಡಿ ಕೆ ಶಿವಕುಮಾರ್ ಅವರು ಸದಾಶಿವನಗರದ ತಮ್ಮ ನಿವಾಸದಲ್ಲಿ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಮೂಲಕ ರಾಜ್ಯ ಮಟ್ಟದ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿ, ಮಾತನಾಡಿದರು. ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಇದ್ದರು.

Siddharamaiah ಮುಖ್ಯಮಂತ್ರಿ ಸಿಂಹಾಸನ ನಶ್ವರ.ಜನತೆಯ ಹೃದಯ ಸಿಂಹಾಸನ ಶಾಶ್ವತ- ಸಿದ್ಧರಾಮಯ್ಯ.

0

Siddharamaiah ರಾಜಕೀಯ ಅಧಿಕಾರ ಎನ್ನುವುದು ಜನರ ಸೇವೆ ಮಾಡಲು ಒದಗಿ ಬಂದ ಅವಕಾಶದ ಭಾಗ್ಯ ಎಂದು ನಾನು ತಿಳಿದುಕೊಂಡವನು.
ಮುಖ್ಯಮಂತ್ರಿಯ ಪದತ್ಯಾಗ ಮಾಡಿದ ದಿನದಿಂದ ಹೋದಲ್ಲಿ, ಬಂದಲ್ಲಿ ಜನತೆ ವ್ಯಕ್ತಪಡಿಸುತ್ತಿರುವ ಪ್ರೀತಿ, ಅಭಿಮಾನ, ವಿಶ್ವಾಸವನ್ನು ನೋಡಿದರೆ ಅಧಿಕಾರವನ್ನು ಬಳಸಿಕೊಂಡು ಜಗಮೆಚ್ಚುವ ರೀತಿಯಲ್ಲಿ ಜನಸೇವೆ ಮಾಡಿದ್ದೇನೆ ಎಂಬ ಸಾರ್ಥಕ್ಯದ ಭಾವನೆ ಮೂಡಿದೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.ಪದತ್ಯಾಗದ ನಂತರ ಮೊದಲಸಲ ಹುಟ್ಟೂರಿಗೆ ಕಾಲಿಟ್ಟಾಗ
ಅವರ ಪ್ರತಿಕ್ರಿಯೆ ಇದಾಗಿದೆ.
ಅಲ್ಲಿ ಸೇರಿದ್ದ ಜನಸಾಗರ, ಅವರು ತೋರಿದ ಪ್ರೀತಿ-ಅಭಿಮಾನ ಕಂಡು ಮೂಕವಿಸ್ಮಿತನಾಗಿದ್ದೇನೆ ಎಂದಿದ್ದಾರೆ.

Siddharamaiah ಅಧಿಕಾರ, ಸಂಪತ್ತು ಕಾಲ ಬದಲಾದಂತೆ ಕಳೆದು ಹೋಗಬಹುದು, ಜನರ ಪ್ರೀತಿ ನಿರಂತರ. ನನ್ನ ಸಾರ್ವಜನಿಕ ಬದುಕಿನಲ್ಲಿ ನನ್ನನ್ನು ಪ್ರೀತಿಸುವ ದೊಡ್ಡ ಜನಸಮೂಹವನ್ನೇ ಸಂಪಾದಿಸಿದ್ದೇನೆ ಎನ್ನುವ ಹೆಮ್ಮೆ ನನ್ನದು.
ಮುಖ್ಯಮಂತ್ರಿಯ ಸಿಂಹಾಸನ ನಶ್ವರ, ಜನತೆಯ ಹೃದಯ‌ಸಿಂಹಾಸನ ಶಾಶ್ವತ. ಅಲ್ಲಿಂದ ನನ್ನನ್ನು ಯಾರೂ ಕೆಳಗಿಳಿಸಲಾರರು. ಅದು ನನ್ನ ಮತ್ತು ನಾನು ನಂಬುವ ಜನತಾ ಜನಾರ್ಧನರ ನಡುವಿನ‌ ಶಾಶ್ವತ ಒಪ್ಪಂದ.

ನಾಡಿನ ಉದ್ದಗಲಕ್ಕೂ ಯಾವ ನಿರೀಕ್ಷೆಯೂ ಇಲ್ಲದೆ ಪ್ರೀತಿ – ಅಕ್ಕರೆ ತೋರುತ್ತಿರುವ ಪ್ರೀತಿಯ ಬಂಧುಗಳ ಸೇವೆಗೆ ನಾನು ಸದಾ ಬದ್ಧ. ಮತ್ತೊಮ್ಮೆ ಎಲ್ಲರಿಗೂ ನನ್ನ ತುಂಬು ಹೃದಯದ ಕೃತಜ್ಞತೆಗಳು ಎಂದು ಮಾಜಿ ಸೀಎಂ ಸಿದ್ಧರಾಮಯ್ಯ ಧನ್ಯತೆ ಅರ್ಪಿಸಿದ್ದಾರೆ

DK Shivakumar ಪ್ರಯಾಣದ ಸಮಯ ಕಡಿಮೆಮಾಡಿ ಪ್ರಯಾಣಿಕರ ಪ್ರಯಾಣ ಸುಗಮಗೊಳಿಸಲು ಸುರಂಗ ಮಾರ್ಗ ಸಹಕಾರಿ – ಡಿ.ಕೆ.ಶಿವಕುಮಾರ್.

0

DK Shivakumar ಹೆಬ್ಬಾಳ ಫ್ಲೈಓವರ್‌ನಿಂದ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದ ಮೂಲಕ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಿಬ್ಬಂದಿ ವಸತಿಗೃಹದವರೆಗೆ ನಿರ್ಮಿಸಲಿರುವ 3 ಪಥಗಳ ಅವಳಿ ಸುರಂಗ ಮಾರ್ಗಕ್ಕೆ ಇಂದು ಶಂಕುಸ್ಥಾಪನೆಯನ್ನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೆರವೇರಿಸಿದರು. ಸಚಿವರಾದ ಶ್ರೀ ಕೆ.ಜೆ. ಜಾರ್ಜ್, ಶ್ರೀ ಕೃಷ್ಣ ಬೈರೇಗೌಡ, ಶ್ರೀ ಬೈರತಿ ಸುರೇಶ್ ಅವರು ಮತ್ತು ಶಾಸಕರು ಹಾಗೂ ಬಿಡಿಎ ಅಧ್ಯಕ್ಷರಾದ ಶ್ರೀ ಎನ್. ಎ. ಹ್ಯಾರಿಸ್ ಅವರು ಜೊತೆಗಿದ್ದರು.‌

DK Shivakumar ಬೆಂಗಳೂರಿನ ಕ್ಷಿಪ್ರ ಬೆಳವಣಿಗೆಗೆ ಪೂರಕವಾಗಿ ಸುಸ್ಥಿರ ಮತ್ತು ಜನಸ್ನೇಹಿ ಮೂಲಸೌಕರ್ಯಗಳ ಅಗತ್ಯವಿದೆ. ಈ ಯೋಜನೆಯು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು, ಪ್ರಯಾಣದ ಸಮಯವನ್ನು ಉಳಿಸಲು ಹಾಗೂ ಲಕ್ಷಾಂತರ ಪ್ರಯಾಣಿಕರ ದೈನಂದಿನ ಪ್ರಯಾಣವನ್ನು ಸುಗಮಗೊಳಿಸಲು ಮಹತ್ವದ ಹೆಜ್ಜೆಯಾಗಿದೆ ಡಿ.ಕೆ.ಶಿವಕುಮಾರ್ ಈ ಸಂದರ್ಭದಲ್ಲಿ ಹೇಳಿದರು.

B.Y. Raghavendra ಶಿವಮೊಗ್ಗ ನಗರದ ಸುಗಮ ಸಂಚಾರಕ್ಕೆ ಮತ್ತೊಂದು ಮಹತ್ವದ ಹೆಜ್ಜೆ!

0

B.Y. Raghavendra ಶಿವಮೊಗ್ಗ ನಗರದ ವಿದ್ಯಾನಗರದ ರೈಲ್ವೆ ಗೇಟ್ (LC-46) ಬದಲಾಗಿ ನೂತನವಾಗಿ ನಿರ್ಮಾಣವಾಗಲಿರುವ ರೈಲ್ವೆ ಕೆಳ ಸೇತುವೆಯ (Limited Height Subway – LHS) ಭವ್ಯ ಗುದ್ದಲಿ ಪೂಜೆಯನ್ನು ಸಂಸದ ಬಿ.ವೈ.ರಾಘವೇಂದ್ರ ನೆರವೇರಿಸಿದರು.

B.Y. Raghavendra ಈ ಸಂದರ್ಭದಲ್ಲಿ ಶಿವಮೊಗ್ಗ ಶಾಸಕರಾದ ಶ್ರೀ ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಡಿ.ಎಸ್. ಅರುಣ್, ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಜಗದೀಶ್, ಪ್ರಮುಖ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಮಾದಕ ವಸ್ತುಗಳ ಸಾಗಾಣೆ ಮತ್ತು ಬಳಕೆ ನಿಯಂತ್ರಣಕ್ಕೆ ಪೊಲೀಸ್‌ ಇಲಾಖೆ ದಿಟ್ಟಕ್ರಮ : ಬಿ.ನಿಖಿಲ್

0

ಶಿವಮೊಗ್ಗ ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಸಾಗಾಣೆ, ಬಳಕೆ ಹಾಗೂ ನಿಯಂತ್ರಣಕ್ಕೆ ಜಿಲ್ಲಾ ಪೊಲೀಸ್‌ ಇಲಾಖೆಯು ಹಲವು ಮಹತ್ವದ ಕಾರ್ಯಕ್ರಮಗಳನ್ನು ರೂಪಿಸಿ, ವ್ಯವಸ್ಥಿತವಾಗಿ ಅನುಷ್ಟಾನಕ್ಕೆ ವಿಶೇಷ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಬಿ.ನಿಖಿಲ್‌ ಅವರು ಹೇಳಿದರು.
ಅವರು ಡಿ.ಎ.ಆರ್. ಸಭಾಂಗಣದಲ್ಲಿ ಅಂತರಾಷ್ಟ್ರೀಯ ಮಾಧಕ ದ್ರವ್ಯ ವಿರೋಧಿ ದಿನಾಚರಣೆಯ ಅಂಗವಾಗಿ ಜಿಲ್ಲಾ ಪೊಲೀಸ್‌ ವತಿಯಿಂದ ವಿವಿಧ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ವಶಪಡಿಸಿಕೊಂಡ ಕಳೆದ ಆರು ತಿಂಗಳ ಅವಧಿಯಲ್ಲಿ ಸುಮಾರು 25ಲಕ್ಷ ರೂ.ಗಳ ಮೌಲ್ಯದ 59ಕೆ.ಜಿ. ತೂಕದ ಮಾದಕ ವಸ್ತು ಗಾಂಜಾವನ್ನು ಮಾಧ್ಯಮದ ಪ್ರತಿನಿಧಿಗಳ ವೀಕ್ಷಣೆಗೆ ಇರಿಸಿ, ನಂತರ ವಶಪಡಿಸಿಕೊಂಡ ನಿಷೇಧಿತ ವಸ್ತುಗಳನ್ನು ಕಾನೂನುಬದ್ಧವಾಗಿ ಸಾರ್ವಜನಿಕವಾಗಿ ನಾಶಪಡಿಸಲು ಮಾಚೇನಹಳ್ಳಿಯ ಸುಶ್ರುತ ಬಯೋಮೆಡಿಕಲ್‌ ವೇಸ್ಟ್‌ ಮ್ಯಾನೇಜ್‌ಮೆಂಟ್‌ ಸೊಸೈಟಿಗೆ ಕಳುಹಿಸಿಕೊಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹೊರ ಜಿಲ್ಲೆಯ ಕೆಲವು ಮಾದಕ ವಸ್ತುಗಳ ಸಾಗಾಣಿಕೆದಾರರು ನೆರೆಯ ಆಂದ್ರ ಪ್ರದೇಶದ ವಿಜಯನಗರ ಮತ್ತು ಒಡಿಸ್ಸಾದ ಭುವನೇಶ್ವರದಿಂದ ಮೂರನೇ ವ್ಯಕ್ತಿಯ ಮೂಲಕ ಜಿಲ್ಲೆಗೆ ಸರಬರಾಜು ಮಾಡುತ್ತಿದ್ದ 08ಜನರನ್ನು ಇಲ್ಲಿನಿಂದಲೇ ಮಾಹಿತಿ ರವಾನಿಸಿ, ಅವರನ್ನು ಜೈಲಿಗೆ ಕಳುಹಿಸಿಕೊಡಲಾಗಿದ್ದು, ಇಂತಹ ಕುಕೃತ್ಯದಲ್ಲಿ ತೊಡಗಿರುವ ಇನ್ನಷ್ಟು ವ್ಯಕ್ತಿಗಳ ವಿರುದ್ಧ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಶೀಘ್ರದಲ್ಲಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಮಾದಕ ವಸ್ತುಗಳ ಬಳಕೆ ಮತ್ತು ಸಾಗಾಣಿಕೆಯಂತಹ ಕಾರ್ಯದಲ್ಲಿ 18-30ವಯೋಮಾನದ ಹದಿಹರೆಯದ ಯುವಕರೆ ಹೆಚ್ಚಿನ ಸಂಖ್ಯೆಯನ್ನು ಕಂಡುಬರುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದ ಅವರು, ಇದರ ನಿಯಂತ್ರಣಕ್ಕಾಗಿ ಜಿಲ್ಲೆಯ ಆಯ್ದ 21 ಶಾಲಾ-ಕಾಲೇಜುಗಳ ಆಡಳಿತ ಮಂಡಳಿಯ ಸಹಕಾರದೊಂದಿಗೆ 484 ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ತಪಾಸಿಸಲಾಗಿ, ಅದರಲ್ಲಿ ಗಾಂಜಾ ಸೇವಿಸಿದ ಮೂರು ವಿದ್ಯಾರ್ಥಿಗಳನ್ನು ಗುರುತಿಸಿ ಆಪ್ತ ಸಮಾಲೋಚನೆ ನಡೆಸಿ, ಗಾಂಜಾ ಸೇವನೆಯ ವಿರುದ್ಧ ಕೈಗೊಳ್ಳಲಾಗುವ ಕಾನೂನು ಕ್ರಮ ಹಾಗೂ ದುಷ್ಪರಿಣಾಮಗಳ ಬಗ್ಗೆ ತಿಳುವಳಿಕೆ ನೀಡಲಾಗಿದೆ. ಅಲ್ಲದೆ ಅವರ ಪೋಷಕರ ಗಮನಕ್ಕೆ ತರಲಾಗಿದೆ. ಮಾದಕ ವಸ್ತುಗಳ ಸಾಗಾಟ, ಮಾರಾಟ ಮತ್ತು ಸೇವನೆಯನ್ನು ತಡೆಯಲು ಮುಂದಿನ ದಿನಗಳಲ್ಲಿ ಶಾಲಾ-ಕಾಲೇಜು, ಹಾಸ್ಟೆಲ್‌ ಮತ್ತಿತರ ಕಡೆಗಳಲ್ಲಿ ಇಂತಹ ಇನ್ನಷ್ಟು ಕಾರ್ಯಾಚರಣೆ ನಡೆಸಲಾಗುವುದು ಎಂದ ಅವರು, ವ್ಯಸನಿಗಳಿಗೆ, ಮಾರಾಟಗಾರರಿಗೆ ಕಾನೂನಾತ್ಮಕವಾಗಿ ಶಿಕ್ಷೆ ನೀಡುವುದು ಮಾತ್ರವಲ್ಲ ಅವರ ಜೀವನ ಸುಧಾರಣೆಯೂ ಆಗಬೇಕಾದ ನಿಟ್ಟಿನಲ್ಲಿಯೂ ಪೊಲೀಸ್‌ ಇಲಾಖೆ ಕಾರ್ಯನಿರ್ವಹಿಸಲಿದೆ. ಸಮಾಜದಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ವ್ಯಾಪಕ ಅರಿವು ಮೂಡಿಸಿ, ಆರೋಗ್ಯಕರ ಜೀವನಶೈಲಿಯತ್ತ ಜನರನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ನಶೆಮುಕ್ತ ಶಿವಮೊಗ್ಗ ಎಂಬ ಪರಿಕಲ್ಪನೆಯಡಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.
ಅಲ್ಲದೇ ವರ್ಷಪೂರ್ತಿ ಜಿಲ್ಲೆಯಾದ್ಯಂತ ಜಾಗೃತಿ ಕಾರ್ಯಕ್ರಮಗಳು, ತಪಾಸಣೆ ಮತ್ತು ದೂರು ಸಲ್ಲಿಕೆಗೆ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ. ನಿರಂತರ ದಾಳಿ ಮತ್ತು ತಪಾಸಣೆ ಕಾರ್ಯಗಳನ್ನು ಮುಂದುವರೆಸಲಾಗುತ್ತಿದ್ದು, ಅಕ್ರಮವಾಗಿ ಮಾದಕ ವಸ್ತುಗಳ ಸಾಗಾಟ ಮಾಡುವವರ ಮೇಲೆ ದಾಳಿ ನಡೆಸಿ, ಕಾನೂನು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು. ವಿಶೇಷವಾಗಿ ಕಾಡಂಚಿನ ಗ್ರಾಮಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ, ಜನರಲ್ಲಿ ಮಾದಕ ವಸ್ತುಗಳ ಬಳಕೆ ಕುರಿತು ಅರಿವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಡ್ರಗ್ ಪೆಡ್ಲರ್‌ಗಳನ್ನು ಮತ್ತು ಅವರ ಜಾಲವನ್ನು ಪತ್ತೆ ಹಚ್ಚಲು ವಿಶೇಷ ತಾಂತ್ರಿಕ ಮತ್ತು ಸೈಬರ್ ತನಿಖೆಯನ್ನು ನಡೆಸಲಾಗುತ್ತದೆ. ಅಗತ್ಯವಿರುವಲ್ಲಿ ಡ್ರೋಣ್‌ ಕ್ಯಾಮರಾಗಳ ಕಣ್ಗಾವಲನ್ನು ಇರಿಸಲಾಗುತ್ತಿದೆ. ಸಾರ್ವಜನಿಕರು ಸುಲಭವಾಗಿ ಮಾಹಿತಿ ನೀಡಲು ಸಹಾಯವಾಣಿಯನ್ನು ಸ್ಥಾಪಿಸಲಾಗಿದೆ. ಮಾಹಿತಿ ನೀಡುವವರ ಹೆಸರನ್ನು ಗೌಪ್ಯವಾಗಿರಿಸುವ ಭರವಸೆ ನೀಡಲಾಗಿದೆ ಎಂದರು.
ಜಿಲ್ಲೆಯಲ್ಲಿ ದಿನೇ ದಿನೇ ತೀವ್ರವಾಗುತ್ತಿರುವ ಮಾದಕ ವಸ್ತು ಬಳಕೆ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕರ ಸಹಕಾರದೊಂದಿಗೆ ಇದನ್ನು ಸಂಪೂರ್ಣವಾಗಿ ನಿರ್ಮೂಲಗೊಳಿಸುವ ಸಂಕಲ್ಪ ವ್ಯಕ್ತಪಡಿಸಿದೆ. ಅದಕ್ಕಾಗಿ ಪಬ್ಲಿಕ್‌ಐ ಎಂಬ ವಾಟ್ಸಾಪ್‌ ಸೇವೆಯನ್ನು ಜಾರಿಗೊಳಿಸಲಾಗಿದೆ. ಮೊ.ನಂ.8277982900 ಸಂಖ್ಯೆಗೆ ಸಾರ್ವಜನಿಕರು ಪೊಲೀಸ್ ಇಲಾಖೆಯ ವಾಟ್ಸಾಪ್ ಸಂಖ್ಯೆಗೆ ಮಾದಕ ವಸ್ತು ಸೇವನೆ, ಮಾರಾಟ ಅಥವಾ ಸಾಗಾಟ ಮಾಡುವವರ ಬಗ್ಗೆ ನೇರವಾಗಿ ಮಾಹಿತಿ ಹಂಚಿಕೊಳ್ಳಬಹುದು. ಮಾಹಿತಿದಾರರ ವಿವರಗಳನ್ನು ಪೊಲೀಸ್ ಇಲಾಖೆ ಸಂಪೂರ್ಣ ಗೌಪ್ಯವಾಗಿಟ್ಟುಕೊಳ್ಳಲಿದೆ ಎಂದರು.
ಇತ್ತೀಚಿನ 6ತಿಂಗಳಲ್ಲಿ 31ಗಾಂಜಾ ಅಮಾನತ್ತು ಪ್ರಕರಣಗಳನ್ನು ದಾಖಲಿಸಲಾಗಿದೆ.64ಆರೋಪಿಗಳ ವಿರುದ್ಧ ಅಮಾನತ್ತು ಪ್ರಕರಣ ದಾಖಲಿಸಲಾಗಿದೆ. 1426 ವ್ಯಕ್ತಿಗಳಿಗೆ ಗಾಂಜಾ ಸೇವನೆ ಪರೀಕ್ಷೆಗೆ ಒಳಪಡಿಸಿ, 385 ವ್ಯಕ್ತಿಗಳು ಗಾಂಜಾ ಸೇವಿಸಿರುವುದನ್ನು ಖಚಿತಪಡಿಸಲಾಗಿದ್ದು, 349ಪ್ರಕರಣಗಳನ್ನು ದಾಖಲಿಸಲಾಗಿದೆ. ಅದರಲ್ಲೂ ವಿಶೇಷವಾಗಿ 352 ಮಂದಿ ಆಪ್ತ ಸಮಾಲೋಚನೆಯಲ್ಲಿ ಭಾಗವಹಿಸಿದ್ದರು. ಹೆಚ್ಚಿನ ಪ್ರಕರಣಗಳಲ್ಲಿ ಭದ್ರಾವತಿ ಮತ್ತು ಶಿವಮೊಗ್ಗದ ಆಯ್ದ ಸ್ಥಳಗಳನ್ನು ಕೇಂದ್ರೀಕರಿಸಲಾಗಿರುವುದು ವಿಶೇಷವಾಗಿದೆ. ಕಾರ್ಯಾಚರಣೆಯಲ್ಲಿ 116 ಆರೋಪಿಗಳನ್ನು ಗುರುತಿಸಿ ಅವರಿಗೆ ಅರಿವು ಮೂಡಿಸಲಾಗಿದೆ ಅವರಲ್ಲಿ ಸುಮಾರು 54ಮಂದಿ ವ್ಯಸನಮುಕ್ತರಾಗಿ, ಸಮಾಜದ ಮುಖ್ಯವಾಹಿನಿಗೆ ಬಂದಿರುವುದು ವಿಶೇಷವಾಗಿದೆ. ಶಾಲೆಗಳಲ್ಲಿ 396 ಅರಿವು ಕಾರ್ಯಕ್ರಮಗಳನ್ನು ಆಯೋಜಿಸಿದ್ದು, 26000ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗಿದೆ. ಕಾರ್ಯಗತಗೊಳಿಸಿದ ಎನ್.ಡಿ.ಪಿ.ಎಸ್. ವಾರೆಂಟ್‌ಗಳಲ್ಲಿ ತಲೆಮರೆಸಿಕೊಂಡು ಓಡಾಡುತ್ತಿದ್ದ 102 ವ್ಯಕ್ತಿಗಳನ್ನು ದಸ್ತಗಿರಿ ಮಾಡಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಕಾರಿಯಪ್ಪ ಸೇರಿದಂತೆ ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿ-ಸಿಬ್ಬಂಧಿಗಳು ಉಪಸ್ಥಿತರಿದ್ದರು.

ನಮ್ಮೂರ ಬಳಗದಿಂದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ

0

ರಾಜ್ಯದ ರಾಜಧಾನಿ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಜಯಂತೋತ್ಸವವನ್ನು ನಮ್ಮೂರ ಬಳಗದ ವತಿಯಿಂದ ಅಲ್ಲಮಪ್ರಭು ಮೈದಾನ, ಫ್ರೀಡಂ ಪಾರ್ಕ್ ನಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ , ಸಿಹಿ ವಿತರಿಸಿ ಆಚರಿಸಲಾಯಿತು

ಕಾರ್ಯಕ್ರಮವನ್ನು ಉದ್ದೇಶಿಸಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಮ್. ಶ್ರೀಕಾಂತ್ ರವರು ಮಾತನಾಡಿ ವಿಜಯನಗರ ಸಾಮ್ರಾಜ್ಯದ ಧೀಮಂತ ನಾಯಕ, ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರು ಎಲ್ಲಾ ಜಾತಿ, ಧರ್ಮ, ಮತ, ಪಂಥ, ಭಾಷೆಯ ಜನರಿಗೆ ಆಶ್ರಯ ನೀಡಿ, ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿರುವ ಬೆಂಗಳೂರು ನಾಡಪ್ರಭು ಕೆಂಪೇಗೌಡರ ದೂರದೃಷ್ಟಿಯ ಫಲ. ಕೆಂಪೇಗೌಡರ ಜನಪರವಾದ ಜಾತ್ಯತೀತ ಆಡಳಿತ ನಮಗೆ ಮಾದರಿ. ಇವರ ದೂರದೃಷ್ಟಿಯ ಮತ್ತು ಸಮುದಾಯ ಕೇಂದ್ರಿತ ಆಡಳಿತದ ವೈಭವ ಇಂದಿನ ಪೀಳಿಗೆಗೆ ಪ್ರೇರಣೆಯಾಗಿದೆ. ಭವ್ಯ ಪರಂಪರೆಯ ಗೌರವ ಹಾಗೂ ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ಮೂಡಿಸಲು ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದರು

ಈ ಸಂದರ್ಭದಲ್ಲಿ ನಮ್ಮೂರ ಬಳಗದ ಪ್ರಧಾನ ಸಂಚಾಲಕರಾದ ಕೆ .ರಂಗನಾಥ್, ಗೌರವ ಸಂಚಾಲಕರಾದ ಹೆಚ್ ಪಾಲಾಕ್ಷಿ ,ಸಿ ರವಿ ,ಜಿ.ಡಿ ಮಂಜುನಾಥ್, ಹಾಪ್ ಕಾಮ್ಸ್ ನಿರ್ದೇಶಕ ಶರತ್ ಮರಿಯಪ್ಪ, ಸಿಟಿ ಬ್ಯಾಂಕ್ ನಿರ್ದೇಶಕ ಬಿ ಲೋಕೇಶ್, ಸಂಚಾಲಕರಾದ ಹೆಚ್‌.ಪಿ ಗಿರೀಶ್, , ಚಂದ್ರು ಗೆಡ್ಡೆ, ಗುರುಪ್ರಸಾದ್, ಎಸ್ ಬಸವರಾಜ್, ವಿನಯ್, ಸುಬ್ರಮಣಿ,ಕುಮಾರ್, ಕೇಬಲ್ ಲೋಕೇಶ್, ಕೆ ಎಲ್ ಪವನ್, ರಾಜೇಶ್ ಮಂದಾರ, ಮಿಥುನ್, ಪುಷ್ಪಕ್ ಕುಮಾರ್ ,ಶಿವಮೊಗ್ಗ ವಿರೂಪಾಕ್ಷ, ಭವಾನಿ ರಾವ್, ಹಾಗೂ ಇತರರು ಇದ್ದರು.

Scouts and Guides ಮಕ್ಕಳ ವ್ಯಕ್ತಿತ್ವ ವಿಕಸನ ಮತ್ತು ಮಾನವೀಯ ಮೌಲ್ಯಗಳ ವೃದ್ಧಿಗೆ ಯುವ ಆಪತ್ ಮಿತ್ರ ಸಹಕಾರಿ: ಎಸ್.ಜಿ.ಆನಂದ್

0

Scouts and Guides ಯುವ ಆಪತ್ ಮಿತ್ರ ಕಾರ್ಯಕ್ರಮದಿಂದ ಮಕ್ಕಳಲ್ಲಿ ಆತ್ಮ ರಕ್ಷಣೆ, ಜೀವನ ಕೌಶಲ್ಯ ಹಾಗೂ ವ್ಯಕ್ತಿತ್ವ ವಿಕಸನ ಮತ್ತು ಮಾನವೀಯ ಮೌಲ್ಯಗಳ ವೃದ್ಧಿಗೆ ಸಹಕಾರಿಯಾಗಲಿದೆ ಎಂದು ಸ್ಕೌಟ್ಸ್ ಅಂಡ್ ಗೈಡ್ಸ್ ಆಯುಕ್ತರಾದ ಎಸ್.ಜಿ.ಆನಂದ್ ಹೇಳಿದರು.

ಶಿವಮೊಗ್ಗ ನಗರದ ಸ್ಕೌಟ್ಸ್ ಭವನದಲ್ಲಿ ನಡೆದ 7 ದಿನಗಳ ಯುವ ಆಪತ್ ಮಿತ್ರ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಆಗಮಿಸಿ ಮಾತನಾಡಿದ ಅವರು, ಇರುವಕ್ಕಿ ಅಗ್ರಿಕಲ್ಚರ್ ಯೂನಿವರ್ಸಿಟಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಯೋಜನೆ ಮತ್ತು ವಿವಿಧ ವಿಪತ್ತುಗಳ ತಿಳುವಳಿಕೆಯನ್ನು ಹೆಚ್ಚಿಸಿ ಮತ್ತು ವಿಪತ್ತುಗಳಿಗೆ ಪ್ರತಿಕ್ರಿಯೆಸಲು ಸಹಾಯಕಾರಿಯಾದ ಜೀವ ಉಳಿಸಲು ತಂತ್ರಗಳನ್ನು ಕಲಿಸಲು ಈ ತರಬೇತಿಯನ್ನು ರಾಷ್ಟ್ರೀಯ ಯುವ ಆಪತ್ ಮಿತ್ರ ಶಿಬಿರದಲ್ಲಿ ತಿಳಿಸಲಾಯಿತು ಎಂದರು.

ಮುಖ್ಯ ಆಯುಕ್ತರಾದ ಶಕುಂತಲಾ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೂ.20 ರಿಂದ ಜೂ.26 ರವರಗೆ ನಡೆದ ಈ ಶಿಬಿರದಲ್ಲಿ ವಿಪತ್ತು ನಿರ್ವಣೆಯ ಮೂಲ ಪರಿಕಲ್ಪನೆಗಳು, ವಿಪತ್ತು ಸನದ್ಧತೆ, ಭೂಕಂಪನ, ಭೂಕುಸಿತ, ಪ್ರವಾಹ, ಸುನಾಮಿ, ಪ್ರಾಥಮಿಕ ಮಟ್ಟದ ಶೋಧನೆ ಮತ್ತು ರಕ್ಷಣೆ ಆಧಾರಿತ ಆರೋಗ್ಯ ಪ್ರಥಮ ಚಿಕಿತ್ಸೆ, ರಕ್ತಸ್ರಾವ ನಿಯಂತ್ರಣ ಮತ್ತು ಗಾಯದ ಆರೈಕೆ, ಬಿ ಎಲ್ ಎಸ್ ಮತ್ತು ಸಿ ಪಿ ಆರ್, ರೋಗಿಗಳನ್ನು ಎತ್ತುವುದು ಮತ್ತು ಹೋಯುವುದು, ಹಾವು ಕಡಿತ, ಪ್ರಾಣಿ ಕಡಿತ, ಹಗ್ಗ ಬಳಸಿ ರಕ್ಷಣೆ ಮಾಡುವ ತಂತ್ರಗಳು, ಅಗ್ನಿ ಸುರಕ್ಷತೆ ಇನ್ನಿತರೇ ತರಬೇತಿಗಳನ್ನು ಕಲಿಸಲಾಯಿತು. ಇದರ ಜೊತೆಗೆ ಮಾನವೀಯ ಮೌಲ್ಯಗಳ, ವ್ಯಕ್ತಿತ್ವ ವಿಕಾಸನ ಬಗ್ಗೆ ಮಾತನಾಡಿದರು.

Scouts and Guides ಈ ಸಂದರ್ಭದಲ್ಲಿ ಆಯುಕ್ತರಾದ ಕೆ.ರವಿ ಮಾತನಾಡಿ ಮಾನವೀಯ ಮೌಲ್ಯಗಳ ಬಗ್ಗೆ ಹಾಗೂ ಏಳು ದಿನ ನಡೆದ ಶಿಬಿರದ ಕುರಿತು ಮಾತನಾಡಿದರು. ಲಕ್ಷ್ಮಿ ರವಿ ಸ್ವಾಗತಿಸಿದರು, ಕಾರ್ಯದರ್ಶಿ ಚಂದ್ರಶೇಖರಯ್ಯ ವಂದಿಸಿದರು, ಶಿಬಿರದ ವಿದ್ಯಾರ್ಥಿನಿ ಮಾನ್ಯತಾ ಪಾಟೀಲ್ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ತರಬೇತಿ ಮುಖ್ಯಸ್ಥರಾದ ಶಿವಶಂಕರ್, ಚೂಡಾಮಣಿ ಪವರ್, ಮಲ್ಲಿಕಾರ್ಜುನ ಕಾನೂರ್, ಅಗ್ರಿಕಲ್ಚರ್ ಯೂನಿವರ್ಸಿಟಿ ಕಾಲೇಜ್ ಉಪನ್ಯಾಸಕರು, 180 ವಿದ್ಯಾರ್ಥಿಗಳು ಉಪಸ್ಥಿತರಿದ್ದರು.