Friday, March 20, 2026
Friday, March 20, 2026
Home Blog Page 463

Madhu Bangarappa ಶಿಕಾರಿಪುರ ಸ.ಬಾಲಕಿಯರ ಪ್ರೌಢಶಾಲೆ & ಸರ್ಕಾರಿ ಸಹ ಶಿಕ್ಷಣ ಪ್ರೌಢಶಾಲೆಗಳಿಗೆ ಕೆಪಿಎಸ್ ಶಾಲೆಗಳಾಗಿ ಉನ್ನತೀಕರಣ- ಮಧುಬಂಗಾರಪ್ಪ

0

Madhu Bangarappa ಶಿಕಾರಿಪುರಸರ್ಕಾರಿ ಬಾಲಕಿಯರ ಪ್ರೌಢಶಾಲೆ ಹಾಗೂ‌ ಸರ್ಕಾರಿ ಸಹ ಶಿಕ್ಷಣ ಪ್ರೌಢಶಾಲೆಗಳನ್ನು ಕೆಪಿಎಸ್ ಶಾಲೆಗಳನ್ನಾಗಿ ಉನ್ನ ತೀಕರಿಸಲಾಗುವುದು‌ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ಹೇಳಿದರು.
ಶಿಕಾರಿಪುರ ಸರ್ಕಾರಿ ಬಾಲಿಕಿಯರ ಪ್ರೌಢಶಾಲೆಯ ಮಕ್ಕಳ ಶಾಲೆಗೆ ಭೇಟಿ ನೀಡಿ, ಪಾರಂಪರಿಕ ಕಟ್ಟಡ ವೀಕ್ಷಿಸಿ, ಬಾಲಕಿಯರ ಶಾಲೆ ಮತ್ತು‌ಪಕ್ಕದಲ್ಲಿರು ಪ್ರೌಢಶಾಲೆಯನ್ನು ಕೆಪಿಎಸ್ ಶಾಲೆಗಳನ್ನಾಗಿ ಉನ್ನತೀಕರಿಸುವ ಬಗ್ಗೆ ಡಿಡಿಪಿಐ, ಶಿಕ್ಷಣಾಧಿಕಾರಿಗಳು, ಮುಖ್ಯ ಶಿಕ್ಷಕರೊಂದಿಗೆ ಚರ್ಚಿಸಿ, ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಈ ಕುರಿತು ಮಾತನಾಡಿ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದ ಅವರು, ಕೆಪಿಎಸ್ ಶಾಲೆಗಳಗಾಗಿ‌ ಉನ್ನತೀಕರಣ ಮಾಡಿದಾಗ ಉತ್ತಮ‌ ಮೂಲಭೂತ ಸೌಕರ್ಯಗಳು, ಸೌಲಭ್ಯಗಳು‌ಲಭಿಸಲಿವೆ. ಇನ್ನು‌೨ ವರ್ಷದಲ್ಲಿ ಮೇಲ್ದರ್ಜೆಗೇರಿಸಲಾಗುವುದು ಎಂದರು.
Madhu Bangarappa ಈ ಶಾಲೆ ೧೮೬೮ ರಲ್ಲಿ ಆರಂಭವಾಗಿದ್ದು ಪ್ರಸ್ತುತ
೧೩೦೦ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮುಂದಿನ‌ ದಿನಗಳಲ್ಲಿ ಸುತ್ತಮುತ್ತಲಿನ ಗ್ರಾಮಗಳಿಂದ ಬರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಾರಿಗೆ ವ್ಯವಸ್ಥೆ ನೀಡಲಾಗುವುದು.
ಶಾಲೆಯಲ್ಲಿ ಸೌಲಭ್ಯಗಳು ಸಕಾಲದಲ್ಲಿ‌ದೊರಕುತಿತ್ತಿದೆಯೇ ಎಂದು‌ ವಿದ್ಯಾರ್ಥಿಗಳಲ್ಲಿ ವಿಚಾರಿಸಿದ ಅವರು, ಸರ್ಕಾರ ವಿದ್ಯಾರ್ಥಿಗಳು ಚೆನ್ನಾಗಿ ಓದಲೆಂದು ಉಚಿತ ಶಿಕ್ಷಣ, ಸಮವಸ್ತ್ರ, ಶೂ, ಸಾಕ್ಸ್, ಪುಸ್ತಕ, ಬಿಸಿಯೂಟ, ಹಾಲು , ರಾಗಿ ಮಾಲ್ಟ್, ಮೊಟ್ಟೆ ಇತರೆ ಸೌಲಭ್ಯ‌ನೀಡುತ್ತಿದೆ.
ಸರ್ಕಾರಿ‌ ಶಾಲೆಯಲ್ಲಿ‌ ಅತ್ಯುತ್ತಮ ಶಿಕ್ಷಕರಿದ್ದು, ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು . ಶಾಲೆ ವತಿಯಿಂದ ಶೌಚಾಲಯ ಸೇರಿದಂತೆ ಇತರೆ ಬೇಡಿಕೆಗಳಿದ್ದು ಈಡೇರಿಸಲಾಗುವುದು ಎಂದರು.
ಯಾರೂ ಅನುತ್ತೀರ್ಣರಾಗಬಾರದೆಂಬ ಉದ್ದೇಶದಿಂದ ಮೂರು ಪರೀಕ್ಷಾ ಮಾದರಿ ಜಾರಿಗೆ ತರಲಾಗಿದೆ. ಬೆಳಗಾವಿಗೆ ಮಹಾತ್ಮಾ ಗಾಂಧಿ ಭೇಟಿ ನೀಡಿ ೧೦೦ ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಗಾಂಧಿ ಭಾರತ ಕಾರ್ಯಕ್ರಮ ಪ್ರಯುಕ್ತ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ಉತ್ತಮ ಕಾರ್ಯಕ್ರಮ ಮಾಡಲಾಗುವುದು ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರ ತಾಲ್ಲೂಕು ಸಮಿತಿ ಅಧ್ಯಕ್ಷ ರಾದ ನಾಗರಾಜ ಗೌಡ ಮಾತನಾಡಿ, ಈ ಶಾಲೆ ಹಿಂದೆ ಬಾಲಕರ ಶಾಲೆ ಆಗಿತ್ತು. ಸಚಿವರು ಇಂದು‌ ಈ ಶಾಲೆಗೆ ಭೇಟಿ ನೀಡಿ ಕೆಪಿಎಸ್ ಶಾಲೆಯಾಗಿ ಮೇಲ್ದರ್ಜೆಗೇರಿಸುತ್ತಿರುವುದು ಸಂತಸದ ವಿಷಯ ಎಂದರು.
ಎಸ್ ಡಿಎಂಸಿ ಅಧ್ಯಕ್ಷೆ ಗೀತಾ ಮಾತನಾಡಿ, ಶಾಲೆಯ ವಿವಿಧ ಬೇಡಿಕೆಗಳನ್ನು ಈಡೇರಿಸಲು ಮನವಿ ಮಾಡಿದರು. ಡಿಡಿಪಿಐ ಮಂಜುನಾಥ್, ಶಿಕ್ಷಣಾಧಿಕಾರಿ‌ ಲೋಕೇಶಪ್ಪ ಮುಖ್ಯ ಶಿಕ್ಷಕರಾದ ನಾಗಾನಾಯ್ಕ್, ಎಸ್ ಡಿಎಂಸಿ ಸದಸ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು

Ashakirana Children’s School ಆಶಾಕಿರಣ ಮಕ್ಕಳ ಶಾಲೆಆಶಾಕಿರಣ ಶಾಲೆಯಲ್ಲಿ ಕೇಕ್ ಮತ್ತು ಹಣ್ಣುಗಳ ಉಚಿತ ವಿತರಣೆ

0

Ashakirana Children’s School ಶಿವಮೊಗ್ಗ ನಗರದಲ್ಲಿರುವ ವಿದ್ಯಾನಗರದ ಬುದ್ಧಿಮಾಂದ್ಯ ಆಶಾಕಿರಣ ಮಕ್ಕಳ ಶಾಲೆಗೆ ಕ್ರೈಸ್ತ ಮುಖಂಡ ಹಾಗೂ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚಿನ್ನಪ್ಪರವರು ಪ್ರತಿವರ್ಷದಂತೆ ಈ ವರ್ಷವೂ ಕೇಕ್ ಕತ್ತರಿಸಿ ಹಣ್ಣುಗಳನ್ನು ಹಂಚುವ ಮೂಲಕ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಹಬ್ಬವನ್ನು ಆಚರಿಸಲಾಯಿತು. Ashakirana Children’s School ಈ ಸಂದರ್ಭದಲ್ಲಿ ಸೆಕ್ರೆಡ್ ಹಾರ್ಟ್ ಕೆಥಡ್ರಲ್ ನ ಪ್ರಧಾನ ಗುರುಗಳಾದ ಫಾದರ್ ಸ್ಟ್ಯಾನಿ ಡಿಸೋಜ, ಸಹಾಯಕ ಗುರುಗಳಾದ ಫಾದರ್ ಪೌಲ್ ಆನಂದ್, ಆಲಯ ಮೇಲ್ವಿಚಾರಕರಾದ ಶ್ರೀ ಚಂದ್ರಯ್ಯ,ನಾದನ್ ಎಂಪಿಎಂ, ರೋಷನ್, ಮಾರ್ಕ್ ಡಿಸೋಜಾ, ಆರೋಗ್ಯ ಸ್ವಾಮಿ PWD, ಸ್ನೇಹ ಮಹಿ ಸಂಘದ ಸದಸ್ಯರಾದ ಪವನ್, ರವಿ ಇನ್ನಿತರರು ಉಪಸ್ಥಿತರಿದ್ದರು

Govt First Grade College ಸಾಹಿತ್ಯ, ಸಂಗೀತ ಕಲೆನೃತ್ಯ ನಾಟಕಾದಿಗಳು ಸುಸಂಸ್ಕೃತ ಸಮಾಜದ ಸಾಕ್ಷಿ ಪ್ರಜ್ಞೆಗಳು- ಡಾ.ಎಚ್ .ಬಿ.ಮಂಜುನಾಥ್

0

Govt First Grade College ಸಾಹಿತ್ಯ ಸಂಗೀತ ಕಲೆ ನೃತ್ಯ ನಾಟಕಾದಿಗಳು ಸುಸಂಸ್ಕೃತ ಸಮಾಜದ ಸಾಕ್ಷಿ ಪ್ರಜ್ಞೆಗಳಂತಿದ್ದು ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ಸ್ಥಳ ಇತಿಹಾಸ ಹಾಗೂ ದೇಶಕಾಲಗಳ ಮಾಹಿತಿಯೂ ಒಂದು ಪ್ರಕಾರವಾಗಿದೆ ಎಂದು ಹಿರಿಯ ಪತ್ರಕರ್ತ ಡಾ.ಎಚ್ ಬಿ ಮಂಜುನಾಥ ಅಭಿಪ್ರಾಯ ಪಟ್ಟರು.

ದಾವಣಗೆರೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಾಡಾಗಿದ್ದ ಸಾಹಿತಿ ಗಿರಿಜಾ ದತ್ತಿ ಉಪನ್ಯಾಸದಲ್ಲಿ ಗಿರಿಜಾರವರ ಸಾಹಿತ್ಯ ಸಾಧನೆ ಕುರಿತು ಮಾತನಾಡುತ್ತಾ ಭವಿಷ್ಯದ ಜಗತ್ತಿನ ಚಲಾವಣಾ ದ್ರವ್ಯವೆಂದರೆ ಜ್ಞಾನ ಸಾಮರ್ಥ್ಯ ಹಾಗೂ ಮಾಹಿತಿ ಆಗಲಿದ್ದು ಸ್ಥಳೀಯವಾದ ದೇಶಕಾಲಗಳ ಮಾಹಿತಿ ಗಳನ್ನು ಗ್ರಂಥ ರೂಪದಲ್ಲಿ ಒದಗಿಸಿಕೊಡುವುದು ಸುಲಭ ಸಾಧ್ಯವಲ್ಲ, ಟಿ ಗಿರಿಜಾ ರವರು ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯ ಕುರಿತಾಗಿ ಈ ಮಹತ್ಕಾರ್ಯ ಮಾಡಿದ್ದು ಆ ಗ್ರಂಥಗಳು ಇವತ್ತಿಗೂ ಎಲ್ಲರಿಗೂ ಆಕರ ಗ್ರಂಥಗಳಾಗಿವೆ ಎಂದರಲ್ಲದೆ ಕಾದಂಬರಿ ಕಥೆ ಕಾವ್ಯ ಕವನಗಳು ಮಾನುಷ ಭಾವನೆಗಳ ಮೇಲಾಟಗಳ ಪ್ರಧಾನವಾಗಿದ್ದರೆ ಇತಿಹಾಸ ಸಾಹಿತ್ಯವು ಸತ್ಯನಿಷ್ಠ ವಾಗಿರಬೇಕು, ಇತಿಹಾಸ ಸಾಹಿತ್ಯದಲ್ಲಿ ಸತ್ಯಕ್ಕೆ ಅಗ್ರ ಪೂಜೆ, ಸೌಂದರ್ಯಕ್ಕೆ ನಂತರದ ಅವಕಾಶ ಎಂಬ ಎಸ್ ಎಲ್ ಭೈರಪ್ಪನವರ ಮಾತನ್ನು ಉದಾಹರಿಸುತ್ತಾ ಇಲ್ಲಿ ಭಾಷಾ ಪ್ರೌಢಿಮೆಗಿಂತ ಅಲಂಕಾರ ಕ್ಕಿಂತ ವಸ್ತುನಿಷ್ಠ ಮಾಹಿತಿ ಮುಖ್ಯವಾಗಿರುತ್ತದೆ, ದೈನಂದಿನ ಬದುಕು ವ್ಯವಹಾರಗಳಿಗೆ ಬೇಕಾದ ಮಾಹಿತಿ ಒದಗಿಸುವ ಸಾಹಿತ್ಯವೂ ಅವಶ್ಯ, ಮಾಹಿತಿ ಇಲ್ಲದಿದ್ದರೆ ಮನುಷ್ಯ ಅಸಹಾಯಕನಾಗುತ್ತಾನೆ ಎಂಬ ಹಾ.ಮಾ. ನಾಯಕರ ಅಭಿಪ್ರಾಯವನ್ನೂ ಮಂಜುನಾಥ್ ಉಲ್ಲೇಖಿಸಿದರು. Govt First Grade College ಕಾದಂಬರಿ ಕಥೆ ನಾಟಕ ವೈಚಾರಿಕ ಲೇಖನ ವಿಮರ್ಶೆಗಳಿಗೂ ಸಿದ್ಧ ಹಸ್ತ ರಾಗಿದ್ದ ಗಿರಿಜಾ ರವರು ಮಾಹಿತಿಯುಕ್ತ ಗ್ರಂಥಗಳನ್ನು ಕೊಟ್ಟು ಸಮಾಜಕ್ಕೆ ಮಹದುಪಕಾರ ಮಾಡಿದ್ದಾರೆ ಎಂದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದತ್ತಿನಿಧಿ ಸ್ಥಾಪಕರು ಬರಹಗಾರ್ತಿಯೂ ಆದ ಟಿ ಎಸ್ ಶೈಲಜಾ ರವರು ಟಿ ಗಿರಿಜಾ ರವರ ‘ದಾವಣಗೆರೆ ಇದು ನಮ್ಮ ಜಿಲ್ಲೆ’ ಗ್ರಂಥಕ್ಕಿರುವ ಬೇಡಿಕೆ ಹಾಗೂ ಮೌಲ್ಯವನ್ನು ಗಮನಿಸಿ ಅದನ್ನು ತಾವು ಪರಿಷ್ಕರಿಸಿ ಮತ್ತಷ್ಟು ಪೂರಕ ಮಾಹಿತಿಗಳೊಂದಿಗೆ ಪುನರ್ ಪ್ರಕಟಿಸಿದ್ದಾಗಿ ಹೇಳಿದರು. ಮುಖ್ಯ ಅತಿಥಿಗಳಾಗಿ ಮಾತನಾಡಿದ ವನಿತಾ ಸಾಹಿತ್ಯ ವೇದಿಕೆ ಅಧ್ಯಕ್ಷರಾದ ಶ್ರೀಮತಿ ಮಲ್ಲಮ್ಮ ನಾಗರಾಜ ರವರು ಟಿ ಗಿರಿಜಾ ರವರ ಆಸಕ್ತಿ ಅಧ್ಯಯನ ಅವಿರತ ಪರಿಶ್ರಮ ಗಳಿಂದ ಹೊರಬಂದ ಅವರ 30ಕ್ಕೂ ಹೆಚ್ಚು ಕೃತಿಗಳು ಅವರ ಉದರದಿಂದ ಜನಿಸಿದ ಅಮೂಲ್ಯ ಶಿಶು ರತ್ನಗಳಂತೆ ಎಂದು ವರ್ಣಿಸಿದರು. ವಿದ್ಯಾರ್ಥಿ ಸೈಯದ್ ಅಲಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಕಿರಣ್ ಮತ್ತು ತಂಡದವರು ನಾಡಗೀತೆ ಹಾಡಿದರೆ ವೈಷ್ಣವಿ ಮತ್ತು ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು. ಕೀರ್ತನಾ ಸ್ವಾಗತ ಕೋರಿದರೆ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಪ್ರೊ. ಎಸ್ ಆರ್ ಆಂಜನಪ್ಪ ಪ್ರಾಸ್ತಾವಿಕ ನುಡಿಗಳ ನಾಡಿದರು. ಅತಿಥಿಗಳ ಪರಿಚಯವನ್ನು ಅಂಬಿಕಾ ಅನುಶ್ರೀ ವೈಷ್ಣವಿ ಮಾಡಿದರೆ ಪ್ರಾಂಶುಪಾಲ ಪ್ರೊ. ಕೆ ಎಂ ರುದ್ರಪ್ಪ ಅಧ್ಯಕ್ಷೀಯ ನುಡಿಗಳ ನಾಡಿದರು. ಕಾಲೇಜಿನ ಐಕ್ಯೂ ಸಂಚಾಲಕ ಡಾ. ಗುರುರಾಜ ಜೆ ಪಿ, ಕಚೇರಿ ಅಧೀಕ್ಷಕಿ ಶ್ರೀಮತಿ ಪ್ರತಿಭಾ, ವಾಣಿಜ್ಯಶಾಸ್ತ್ರ ವಿಭಾಗದ ಪ್ರೊ. ವೆಂಕಟೇಶ ಬಾಬು ಮುಂತಾದವರು ಉಪಸ್ಥಿತರಿದ್ದು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಂದನೆಗಳನ್ನು ಸಚಿನ್ ಕೊಗನೂರು ಸಮರ್ಪಿಸಿದರು. ಕಾಲೇಜು ಸಭಾಂಗಣದಲ್ಲಿ ಕಾರ್ಯಕ್ರಮ ನೆರವೇರಿತು.

ಭದ್ರಾವತಿ ರೈಸ್ ಮಿಲ್ ಬಾಯ್ಲರ್ ಸ್ಫೋಟ. ಒಂದು ಸಾವು

0

ಭದ್ರಾವತಿಯಲ್ಲಿ ಬಾಯ್ಲರ್ ಸ್ಪೋಟ ಪ್ರಕರಣ ಸಂಬಂಧಿಸಿದಂತೆ ಇಂದೂ ಕಾರ್ಯಚರಣೆ ಮುಂದುವರೆದಿದೆ.

ಕಾರ್ಯಚರಣೆಯಲ್ಲಿ ಬಾಯ್ಲರ್ ಅಪರೇಟರ್ ರಘು (48)ಮೃತ ದೇಹ ಪತ್ತೆಯಾಗಿದೆ.

ಕಳೆದ ೧೫ ವರ್ಷಗಳಿಂದ ಇದೇ ರೈಸ್ ಮಿಲ್ ನಲ್ಲಿ ಕೆಲಸ ಮಾಡುತ್ತಿದ್ದ ರಘು
ಇಬ್ಬರು ಮಕ್ಕಳನ್ನು ಹೊಂದಿದ್ದರು.

ರಘು ಸಾವಿನ ವಿಷಯ ತಿಳಿಯುತ್ತಿದಂತೆ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

Machenahalli Industrial Association ಸಂಸ್ಥೆಗಳಲ್ಲಿ ಕ್ರಿಯಾಶೀಲತೆ, ಪ್ರಾಮಾಣಿಕತೆ & ಶ್ರದ್ಧೆ ಮುಖ್ಯ- ಎಸ್.ರುದ್ರೇಗೌಡರು

0

Machenahalli Industrial Association ಸಂಸ್ಥೆಗಳು ಸದೃಢವಾಗಬೇಕಾದರೆ ಸಂಘಟನೆ ಮುಖ್ಯ. ಸಂಸ್ಥೆಗಳಲ್ಲಿ ಕ್ರಿಯಾಶೀಲತೆ, ಪ್ರಾಮಾಣಿಕತೆ ಹಾಗೂ ಶ್ರದ್ಧೆ, ಮುಂದಿನ ದೃಷ್ಟಿಕೋನ ಬಹಳ ಮುಖ್ಯ ಎಂದು ಶಾಂತಲಾ ಗ್ರೂಪ್ ಇಂಡಸ್ಟ್ರಿ ಚೇರ್ಮನ್, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ ಹೇಳಿದರು.
ಮಾಚೇನಹಳ್ಳಿ ಕೈಗಾರಿಕಾ ಅಸೋಸಿಯೇಷನ್ ನೂತನ ಅಧ್ಯಕ್ಷ ಡಿ.ಜಿ.ಬೆನಕಪ್ಪ ಅವರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿ, ಮಾಚೇನಹಳ್ಳಿ ಕೈಗಾರಿಕಾ ಸಂಸ್ಥೆ ಈಗಾಗಲೇ ಕೈಗಾರಿಕೆಗಳಿಗೆ ಪೂರಕವಾದ ಹಾಗೂ ಕಾರ್ಮಿಕರಿಗೆ ಮತ್ತು ಸದಸ್ಯರಿಗೆ ಬೇಕಾದ ಅಗತ್ಯವಾದ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ ಎಂದು ತಿಳಿಸಿದರು.
ಅಸೋಸಿಯೇಷನ್ ವತಿಯಿಂದ ಕೈಗಾರಿಕಾ ಸುರಕ್ಷತೆ ಬಗ್ಗೆ ಅಗತ್ಯವಾದ ಮಾಹಿತಿಗಳನ್ನು ನೀಡುವುದರ ಜೊತೆಗೆ ಅವರಿಗೆ ಕೌಶಲ್ಯ ಅಭಿವೃದ್ಧಿಯ ತರಬೇತಿಗಳನ್ನು ಸಹ ನೀಡುತ್ತಿದೆ. ಇದರಿಂದ ಸದಸ್ಯರ ಹಾಗೂ ಕಾರ್ಮಿಕರ ಸರ್ವತೋಮುಖ ಅಭಿವೃದ್ಧಿ ಆಗುತ್ತಿದೆ. ಸಂಸ್ಥೆ ಇನ್ನೂ ಎತ್ತರಕ್ಕೆ ಬೆಳೆದು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಬಳಸಿಕೊಂಡು ರಸ್ತೆ, ನೀರು ಹಾಗೂ ಲೈಟ್, ಮೂಲಸೌಕರ್ಯ ಉತ್ತಮಗೊಳಿಸುವುದರ ಮುಖಾಂತರ ಕೈಗಾರಿಕಾ ವಸಹಾತು ರಾಜ್ಯದಲ್ಲಿ ಮಾದರಿಯಾಗಿ ಅಭಿವೃದ್ಧಿಯಾಗಬೇಕು ಎಂದರು.
Machenahalli Industrial Association ಇದೇ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಎಂ.ರಾಜು ಅವರು ಮಾಚೇನಹಳ್ಳಿ ಕೈಗಾರಿಕಾ ಸಂಸ್ಥೆ ಬೆಳೆದು ಬಂದ ದಾರಿ ಹಾಗೂ ಆ ಸಂಸ್ಥೆಗೆ ದುಡಿದ ಹಲವಾರು ಮಾಜಿ ಅಧ್ಯಕ್ಷರ ಸಾಧನೆ ಮತ್ತು ಶ್ರಮದ ಬಗ್ಗೆ ವಿವರಿಸಿದರು. ಸಂಸ್ಥೆಯಿಂದ ಇನ್ನೂ ಹಲವಾರು ಅಭಿವೃದ್ಧಿ ಕಾರ್ಯಗಳು ಆಗುವುದು ಬಾಕಿ ಇದೆ. ಅವೆಲ್ಲವೂ ಸಕಾಲದಲ್ಲಿ ನೆರವೇರಬೇಕು ಎಂದರು.
ಮಾಜಿ ಅಧ್ಯಕ್ಷ ರಮೇಶ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು
ಡಿ.ಜಿ.ಬೆನಕಪ್ಪ ಅವರು ರಮೇಶ್ ಹೆಗಡೆ ಅವರಿಂದ ನೂತನ ತಂಡದೊಂದಿಗೆ ಅಧಿಕಾರ ಸ್ವೀಕರಿಸಿದರು. ಉಪಾಧ್ಯಕ್ಷರಾಗಿ ಚಂದ್ರಶೇಖರ್ ಎ.ಎಲ್., ಕಾರ್ಯದರ್ಶಿಯಾಗಿ ರಾಜೇಶ್.ಎಸ್.ಟಿ., ಖಜಾಂಚಿಯಾಗಿ ದಿನೇಶ್.ಹೆಚ್.ಎಲ್., ನಿರ್ದೇಶಕರಾಗಿ ನಂದನ್ ಮೂರ್ತಿ, ಸಂಜಯ್ ಪಾಟೀಲ್ ಎಂಜಿ, ಸಂತೋಷ್ ಎಂ, ಸೌರಭ ಡಿಕೆ, ಸುರೇಂದ್ರ ಎನ್., ವಿಶೇಷ ಆಹ್ವಾನಿತರಾಗಿ ಮದಕರ ಜೋಯಿಸ್, ಡಿಎಸ್ ಚಂದ್ರಶೇಖರ್, ಎಸ್ ರುದ್ರೇಗೌಡ, ಎಂ ಹಾಲಪ್ಪ ಅವರು ಅಧಿಕಾರ ವಹಿಸಿಕೊಂಡರು.
ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷ ಡಿ.ಜಿ.ಬೆನಕಪ್ಪ ಅವರು ಮುಂದಿನ ಕಾರ್ಯಯೋಜನೆಗಳ ಬಗ್ಗೆ ವಿವರಿಸಿದರು. ಇದೇ ಸಂದರ್ಭದಲ್ಲಿ ಹೊಸ ಸಮಿತಿಯಿಂದ ಎಲ್ಲ ಮಾಜಿ ಅಧ್ಯಕ್ಷರಿಗೆ ಸನ್ಮಾನಿಸಿ ಗೌರವ ಸಮರ್ಪಿಸಲಾಯಿತು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್, ಕಾರ್ಯದರ್ಶಿ ಎ.ಎಂ.ಸುರೇಶ್, ಉಪಾಧ್ಯಕ್ಷ ಜಿ.ವಿಜಯಕುಮಾರ್, ಖಜಾಂಚಿ ವಿ.ಮನೋಹರ್, ಮಾಜಿ ಅಧ್ಯಕ್ಷ ಎನ್.ಗೋಪಿನಾಥ್, ನಿರ್ದೇಶಕರಾದ ಲಕ್ಷ್ಮೀದೇವಿ ಗೋಪಿನಾಥ್, ಪ್ರದೀಪ್ ಎಲಿ ಶುಭಕೋರಿದರು. ಡಿ.ಎಂ.ಶಂಕರಪ್ಪ, ಕಿರಣ್ ಮತ್ತಿತರರು ಉಪಸ್ಥಿತರಿದ್ದರು

Rotary Club Shivamogga ನಿಸ್ವಾರ್ಥದಿಂದ ಮಾಡಿದ ದಾನ ವ್ಯರ್ಥವಾಗುವುದಿಲ್ಲ- ಜಿ.ಕಿರಣ್ ಕುಮಾರ್

0

Rotary Club Shivamogga ದಾನಗಳು ಎಂದು ವಿಫಲವಾಗುವುದಿಲ್ಲ ಮತ್ತು ದಾನ ನಿಸ್ವಾರ್ಥವಾಗಿರುತ್ತದೆ. ದಾನ ಮತ್ತು ಧರ್ಮ ಒಂದಕ್ಕೊಂದು ಅವಿನಾಭಾವ ಸಂಬಂಧ ಹೊಂದಿದೆ, ನೀವು ಯಾವುದೇ ವಸ್ತುವನ್ನು ದಾನವಾಗಿ ನೀಡುವುದರಿಂದ ಸಮಾಜದಲ್ಲಿ ಏಕತೆ ಮತ್ತು ಶಕ್ತಿ ಹೆಚ್ಚುತದೆ ಎಂದು ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಕಿರಣ್ ಕುಮಾರ್.ಜಿ ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ಏರ್ಪಡಿಸಿದ್ದ ವಸ್ತ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿ, ದಾನ ಮಾಡುವುದರಿಂದ ಆತ್ಮದ ಶುದ್ಧೀಕರಣ ಮತ್ತು ಸಂತೋಷ ಪಡೆಯಬಹುದು. ರಾಜು ಅವರು ಎರಡನೇ ಬಾರಿಗೆ ವಸ್ತ್ರದಾನ ಮಾಡುತ್ತಿದ್ದಾರೆ. ಕೈಗೆ ದಾನವೇ ಭೂಷಣ. ನಿರೀಕ್ಷೆ ಇಲ್ಲದೆ ಕೊಡುವುದು ಆರಾಧನೆ ಎಂದು ತಿಳಿಸಿದರು.
Rotary Club Shivamogga ವಸ್ತ್ರದಾನಕ್ಕೆ ತೂಕ ಮತ್ತು ಮಾಪನ ಇಲಾಖೆಯ ನಿರ್ದೇಶಕ ರಾಜು ಅವರು ನೆರವು ನೀಡಿದ್ದು, ರಾಜು ಅವರಂತಹ ದಾನಿಗಳು ಸಮಾಜದಲ್ಲಿ ಹೆಚ್ಚು ಹೆಚ್ಚು ಮುಂದೆ ಬರಬೇಕು. ರಾಜು ಅವರು ಮಾಡುತ್ತಿರುವ ಮಹತ್ಕಾರ್ಯ ಬೇರೆಯವರಿಗೆ ಸ್ಪೂರ್ತಿಯಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ಜನರು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.
ಸೇವಾಕಾರ್ಯಕ್ಕೆ ನೆರವು ನೀಡಿದ ರಾಜು ಮಾತನಾಡಿ, ದಾನ ಮಾಡುವುದರಿಂದ ಆತ್ಮ ತೃಪ್ತಿ ಸಿಗುತ್ತದೆ. ದಾನವನ್ನು ಯಾವುದೇ ಪ್ರತಿಫಲಕ್ಷೆ ಇಲ್ಲದೆ ನೀಡಬೇಕು. ಮುಂದಿನ ದಿನಗಳಲ್ಲಿ ರೋಟರಿ ಸಂಸ್ಥೆಯೊಂದಿಗೆ ಇನ್ನು ಹೆಚ್ಚು ಹೆಚ್ಚು ಸಮಾಜಮುಖಿ ಕಾರ್ಯಕ್ರಮ ಮಾಡಬೇಕು ಎಂಬ ಮಹಾದಾಸೆ ಇದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಕಾರ್ಯದರ್ಶಿ ಬಿ.ವಿ.ಈಶ್ವರ್, ಮಾಜಿ ಅಧ್ಯಕ್ಷ ರಮೇಶ್ ಎನ್ ಮತ್ತು ಕ್ಲಬ್ ಸದಸ್ಯರು ಉಪಸಿತರಿದ್ದರು.

Legal Services Authority ದೌರ್ಜನ್ಯಕ್ಕೊಳಗಾದ ಮಹಿಳೆ ಅಪರಾಧಿಯ ವಿರುದ್ಧ ಕಾಯ್ದೆಯಡಿ ಪ್ರಕರಣ ದಾಖಲಿಸಬಹುದು- ನ್ಯಾ. ಎಂ.ಎಸ್.ಸಂತೋಷ್

0

Legal Services Authority ಕೌಟುಂಬಿಕ ದೌರ್ಜನ್ಯ ಕಾಯ್ದೆಯಿಂದಾಗಿ ಮಹಿಳೆಯರ ರಕ್ಷಣೆ ಮತ್ತು ಕಾಯ್ದೆಯು ಸಿವಿಲ್ ಮತ್ತು ಕ್ರಿಮಿನಲ್ ನಿಬಂಧನೆಗಳನ್ನು ಹೊಂದಿದ್ದರೂ ಸಂತ್ರಸ್ಥ ಮಹಿಳೆಯರು 60ದಿನಗಳಲ್ಲಿ ತಕ್ಷಣದ ನಾಗರೀಕ ಪರಿಹಾರಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್ ಎಂ.ಎಸ್. ಅವರು ತಿಳಿಸಿದರು.

ಜಿಲ್ಲಾ ನ್ಯಾಯಾಂಗ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಹಿಳಾ ಸಬಲೀಕರಣ ಘಟಕ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಆಲ್ಕೊಳದ ಮಲ್ಟಿಪರ್ಪಸ್ ಸೋಶಿಯಲ್ ಸೊಸೈಟಿ ಸಭಾಂಗಣದಲ್ಲಿ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸುರಕ್ಷತಾ ಕಾಯ್ದೆ -2005ರ ಅನುಷ್ಠಾನದಲ್ಲಿ ಭಾಗೀದಾರ ಇಲಾಖೆಗಳ ಪಾತ್ರ ಎಂಬ ವಿಷಯದ ಕುರಿತು ವಿವಿಧ ತಾಲೂಕುಗಳ ಸಂಬಂಧಿತ ಇಲಾಖೆಗಳ ತಾಲೂಕು ಮಟ್ಟದ ಅನುಷ್ಠಾನಾಧಿಕಾರಿಗಳಿಗಾಗಿ ಏರ್ಪಡಿಸಲಾಗಿದ್ದ ಎರಡು ದಿನಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ದೌರ್ಜನ್ಯಕ್ಕೊಳಗಾದ ಮಹಿಳೆಯರು ತನ್ನೊಂದಿಗೆ ಕೌಟುಂಬಿಕ ಸಂಬಂಧ ಹೊಂದಿರುವ ಯಾವುದೇ ಪುರುಷ ವಯಸ್ಕ ಅಪರಾಧಿಯ ವಿರುದ್ಧ ಈ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಬಹುದಾಗಿದೆ ಎಂದವರು ತಿಳಿಸಿದರು.

ಬಹುಮುಖ್ಯವಾಗಿ ಈ ಕಾಯ್ದೆಯ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸುವ ವಿವಿಧ ಇಲಾಖೆಗಳ ತಾಲೂಕು ಮತ್ತು ಸ್ಥಳೀಯ ಮಟ್ಟದ ಅಧಿಕಾರಿಗಳಿಗೆ ಅರಿವು ಮತ್ತು ಅಧಿಕಾರಿಗಳ ನಡುವೆ ಸಮನ್ವಯತೆ ಅಗತ್ಯವಾಗಿದೆ. ಪ್ರಕರಣ ದಾಖಲಿಸುವ ಮುನ್ನ ವಿಷಯದ ಪ್ರಾಥಮಿಕ ಮಾಹಿತಿಯನ್ನು ಹೊಂದಿದ್ದು, ಪ್ರಕರಣ ಮತ್ತು ಅದರ ಸಂದರ್ಭವನ್ನು ತಿಳಿದುಕೊಳ್ಳಬೇಕು.

ಪ್ರಕರಣದ ಮುಕ್ತಾಯದ ನಂತರವೂ ಸಂತ್ರಸ್ಥ ವ್ಯಕ್ತಿಗೆ ನ್ಯಾಯ ಕೊಡಿಸಬೇಕಾದ ಬಗ್ಗೆಯೂ ಮಾಹಿತಿ ಹೊಂದಿರಬೇಕೆಂದವರು ನುಡಿದರು.

ಅಧಿಕಾರಿಗಳು ಕಾಯ್ದೆಯ ಅನುಷ್ಠಾನದಲ್ಲಿ ಎದುರಾಗುವ ಸಮಸ್ಯೆಗಳು ಹಾಗೂ ತಕ್ಷಣದ ಪರಿಹಾರ ಕ್ರಮಗಳ ಬಗ್ಗೆ ಮಾಹಿತಿ ಹೊಂದಿರಬೇಕಲ್ಲದೇ ಕಾಯ್ದೆಯ ಸ್ವರೂಪ, ಅನುಕೂಲ ಮತ್ತು ಅನುಸರಣಾ ಕ್ರಮಗಳ ಮಾಹಿತಿ ಹೊಂದಿದ್ದು, ದೌರ್ಜನ್ಯದ ಕುರಿತು ಸ್ಪಷ್ಟವಾದ ಮಾಹಿತಿಯನ್ನು ದೂರಿನಲ್ಲಿ ದಾಖಲಿಸಬೇಕು. ಅಂತೆಯೇ ನ್ಯಾಯಾಲಯಗಳೂ ಕೂಡ ಪ್ರಕರಣವನ್ನು ಬಹುಸೂಕ್ಷ್ಮವಾಗಿ ಪರಿಶೀಲಿಸಿ ತೀರ್ಪು ನೀಡಬೇಕು ಎಂದರು.

Legal Services Authority ದೇಶದಲ್ಲಿ ಕೌಟುಂಬಿಕ ಹಿಂಸೆಯಿಂದ ದಾಖಲಾಗಿರುವ ಪ್ರಕರಣಗಳಲ್ಲಿ ಕರ್ನಾಟಕ ರಾಜ್ಯವೇ ಮುಂಚೂಣಿಯಲ್ಲಿರುವುದು ಅತ್ಯಂತ ನೋವಿನ ಸಂಗತಿ. – ಸಂತೋಷ್ ಎಂ.ಎಸ್., ಹಿರಿಯ ಸಿವಿಲ್ ನ್ಯಾಯಾಧೀಶರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಸ್.ನಟರಾಜ್ ಅವರು ಮಾತನಾಡಿ, ಕ್ಷುಲ್ಲಕ ಕಾರಣಗಳಿಂದಾಗಿ, ಹೊಂದಾಣಿಕೆಯ ಕಾರಣಗಳಿಂದಾಗಿ ಅನೇಕ ಪ್ರಕರಣಗಳಲ್ಲಿ ಕೌಟುಂಬಿಕ ವಿಘಟನೆಗಳು ನಡೆಯುತ್ತಿವೆ. ಬಹುಸಂಖ್ಯಾತ ಮಹಿಳೆಯರು ಕೌಟುಂಬಿಕ ಹಿಂಸೆ ಅನುಭವಿಸುವಂತಾಗಿದೆ. ವರದಕ್ಷಿಣೆ, ಆಸ್ತಿ ಹಂಚಿಕೆ, ಮತ್ತಿತರ ಕಾರಣಗಳಿಂದಾಗಿ ಮಹಿಳೆಯರಿಗೆ ಸಕಾಲಕ್ಕೆ ಸೂಕ್ತ ಸಹಾಯಹಸ್ತ ದೊರೆಯದೇ ತೊಂದರೆಗೆ ಒಳಗಾಗುತ್ತಿದ್ದಾರೆ ಎಂದರು.

ಪ್ರತಿ ಕುಟುಂಬದಲ್ಲಿ ಹೊಂದಾಣಿಕೆ, ನಂಬಿಕೆ ಇರಬೇಕಾದ ಅಗತ್ಯವಿದೆ. ಅಲ್ಲದೇ ಕುಟುಂಬದಲ್ಲಿ ಕಂಡುಬರುವ ಅನೇಕ ಸಮಸ್ಯೆಗಳಿಗೆ ಪರಸ್ಪರರಲ್ಲಿ ಮುಕ್ತ ಸಮಾಲೋಚನೆಗಳಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ.
ಚರ್ಚೆ, ಸಮಾಲೋಚನೆಗಳು ಸಂಬಂಧವನ್ನು ಗಟ್ಟಿಗೊಳಿಸುವಲ್ಲಿ ಸಹಕಾರಿಯಾಗಿವೆ ಎಂದರು.

ಕೌಟುಂಬಿಕ ಹಿಂಸೆ ನಿಯಂತ್ರಿಸುವಲ್ಲಿ ಅಧಿಕಾರಿಗಳಿಗೆ ತರಬೇತಿಯ ಮೂಲಕ ಮಾಹಿತಿ ಮತ್ತು ಅರಿವು ಮೂಡಿಸುವುದು, ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕೌಟುಂಬಿಕ ಹಿಂಸೆತಡೆ ಕಾಯ್ದೆಯನ್ನು ಸಮರ್ಪಕ ಅನುಷ್ಠಾನಗೊಳಿಸಬಹುದಾಗಿದೆ. – ಬಿ.ಹೆಚ್.ಕೃಷ್ಣಪ್ಪ, ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿವಮೊಗ್ಗ.
ಕಾರ್ಯಾಗಾರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಶಶಿರೇಖಾ, ಮಹಿಳಾ ಪೊಲೀಸ್ ಇನ್ಸ್ಫೆಕ್ಟರ್ ಶ್ರೀಮತಿ ಕವಿತಾ ಸೇರಿದಂತೆ ಪೊಲೀಸ್, ಕಂದಾಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹಾಗೂ ಸ್ವಯಂಸೇವಾ ಸಂಸ್ಥೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.

Postal Life Insurance ಅಂಚೆ ಜೀವವಿಮೆ ಮಾರಾಟ ಪ್ರತಿನಿಧಿಗಳ ನಿಯುಕ್ತಿಗೆ ಜನವರಿ 7 & 8 ರಂದು ನೇರ ಸಂದರ್ಶನ

0

Postal Life Insurance ಶಿವಮೊಗ್ಗ ವಿಭಾಗದಲ್ಲಿ ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ಉತ್ಪನ್ನಗಳನ್ನು ಮಾರಾಟ ಮಾಡಲು ನೇರ ಪ್ರತಿನಿಧಿಗಳನ್ನು ನಿಯುಕ್ತಿಗಳೊಳಿಸಲು ನೇರ ಸಂದರ್ಶನ ಏರ್ಪಡಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ತಮ್ಮ ಇತ್ತೀಚಿನ ಭಾವಚಿತ್ರದೊಂದಿಗೆ ಸ್ವವಿವರ, ಶೈಕ್ಷಣಿಕ ಪ್ರಮಾಣಪತ್ರ ನಕಲುಗಳೊಂದಿಗೆ ದಿ: 07-01-2025 ಮತ್ತು 08-01-2025 ರಂದು ಬೆಳಿಗ್ಗೆ 11 ಗಂಟೆಗೆ ಅಂಚೆ ಅಧೀಕ್ಷಕರ ಕಚೇರಿ, ಕೋಟೆ ರಸ್ತೆ, ಶಿವಮೊಗ್ಗ ವಿಭಾಗ, ಶಿವಮೊಗ್ಗ-2 ಇಲ್ಲಿ ನಡೆಯಲಿರುವ ನೇರ ಸಂದರ್ಶನಕ್ಕೆ ಹಾಜರಾಗಬೇಕು.
ಅಭ್ಯರ್ಥಿಗಳು 10 ನೇ ತರಗತಿ ಉತ್ತೀರ್ಣರಾಗಿರಬೇಕು. ಕನಿಷ್ಟ 18 ವರ್ಷ ಮತ್ತು ಗರಿಷ್ಟ ಮಿತಿ ಇರುವುದಿಲ್ಲ. ನಿರುದ್ಯೋಗಿ ಹಾಗೂ ಸ್ವಯಂ ಉದ್ಯೋಗನಿರತ ಯುವಕರು, ವಿಮಾ ಕಂಪನಿಗಳ ಮಾಜಿ ಏಜೆಂಟರು ಹಾಗೂ ಸಲಹೆಗಾರರು, ಮಾಜಿ ಸೈನಿಕರು, ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಮಂಡಳದ ಕಾರ್ಯಕರ್ತೆಯರು, ನಿವೃತ್ತ ಪ್ರಧಾನ ಮತ್ತು ಗ್ರಾಮ ಪಂಚಾಯಿತಿಯ ಸದಸ್ಯರು ಹಾಗೂ ಅಂಚೆ ವಿಭಾಗದ ಮುಖ್ಯಸ್ಥರಿಗೆ ಸಮಂಜಸವೆAದು ಕಂಡುಬAದ ಯಾವುದೇ ಅಭ್ಯರ್ಥಿಗಳಿಗೆ ಆಯ್ಕೆಯಾದ ಪಕ್ಷದಲ್ಲಿ ಅವಕಾಶ ನೀಡಲಾಗುವುದು.
Postal Life Insurance ಆಯ್ಕೆಯಾದ ಅಭ್ಯರ್ಥಿಗಳು ರೂ.5000/- ಗಳನ್ನು ರಾಷ್ಟಿçÃಯ ಉಳಿತಾಯ ಪತ್ರ ಅಥವಾ ಕಿಸಾನ್ ವಿಕಾಸ ಪತ್ರದ ರೂಪದಲ್ಲಿ ಭದ್ರತಾ ಠೇವಣಿಯನ್ನು ಇಡಬೇಕಾಗುತ್ತದೆ. ಆಯ್ಕೆಯಾದ ನೇರ ಪ್ರತಿನಿಧಿಗಳಿಗೆ ಅವರು ಮಾಡಿದ ವ್ಯವಹಾರಕ್ಕೆ ತಕ್ಕಂತೆ ಇಲಾಖೆಯಿಂದ ಕಾಲಕಾಲಕ್ಕೆ ನಿಗದಿಪಡಿಸಿದ ಪ್ರೋತ್ಸಾಹಧನ ನೀಡಲಾಗುವುದು. ಇತರೆ ಟಿಎ/ಡಿಎ ಇತ್ಯಾದಿ ಭತ್ಯೆ ಇರುವುದಿಲ್ಲ.
ಹೆಚ್ಚಿನ ಮಾಹಿತಿಗೆ ಅಂಚೆ ಜೀವ ವಿಮಾ ಅಭಿವೃದ್ದಿ ಅಧಿಕಾರಿ ಮೊ.ಸಂ: 9620455929 ನ್ನು ಸಂಪರ್ಕಿಸಬಹುದೆAದು ಶಿವಮೊಗ್ಗ ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.

Congress BJP ಏಕಕಾಲದಲ್ಲಿ ಕಾಂಗ್ರೆಸ್- ಬಿಜೆಪಿ ಪ್ರತಿಭಟನೆ

0

Congress BJP ಶಿವಮೊಗ್ಗದಲ್ಲಿ ಒಂದು ಕಡೆ ಬಿಜೆಪಿ ಪ್ರತಿಭಟನೆ, ಇನ್ನೊಂದು ಭಾಗದಲ್ಲಿ ಕಾಂಗ್ರೇಸ್ ಪ್ರತಿಭಟನೆ ನಡೆದಿದೆ.

ಶಿವಮೊಗ್ಗದಲ್ಲಿ ಎರಡೂ ಪಕ್ಷಗಳಿಂದ ಹೈಡ್ರಾಮಾ ನಡೆದಿದ್ದು,ಕಾಂಗ್ರೇಸ್ ಕಾರ್ಯಕರ್ತರು ಗೂಂಡಾ ಅಮೀತ್ ಶಾ ಎಂದು ಘೋಷಣೆ ಕೂಗಿದ್ರೆ, ಇನ್ನೊಂದು ಕಡೆ ರಾಹುಲ್ ಗಾಂಧಿ ಗೂಂಡಾ ಎಂದು ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ.
ಈ ವೇಳೆ ಕಾಂಗ್ರೇಸ್ ಕಚೇರಿಗೆ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದರು.

ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Karnataka Dalitha Sangarsha Samiti ಶಿವಮೊಗ್ಗ ನಗರ ಪೋಲಿಸ್ ಇಲಾಖೆಗೆ ತುರ್ತು ಅಗತ್ಯ ಪೂರೈಸಲು ರಾಜ್ಯ ಗೃಹಸಚಿವರಿಗೆ ದಸಂಸ ಮನವಿ

0

Karnataka Dalitha Sangarsha Samiti ಕರ್ನಾಟಕದಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಡಾ. ಜಿ ಪರಮೇಶ್ವರ್ ರವರು ಗೃಹ ಮಂತ್ರಿ ಆಗಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದೀರಿ. ಆದಕಾರಣ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಅಭಿನಂದನೆಗಳನ್ನು ಸಲ್ಲಿಸುತ್ತದೆ.
ರಾಜ್ಯದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಶಿವಮೊಗ್ಗ ನಗರವೂ ಕೂಡ ಒಂದು. ಶಿವಮೊಗ್ಗ ಜಿಲ್ಲೆಯು ಅತೀ ಹೆಚ್ಚಿನ ಮತೀಯ ಸೂಕ್ಷ್ಮತೆಯಿಂದ ಕೂಡಿದ್ದಾಗಿರುವುದರಿಂದ ಪೊಲೀಸ್ ಇಲಾಖೆಗೆ ಸಂಬಂಧಿಸಿದ ಈ ಕೆಳಕಂಡ ಹಕ್ಕೊತ್ತಾಯಗಳನ್ನು ಈಡೇರಿಸ ಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಕೋರುತ್ತದೆ.
ಶಿವಮೊಗ್ಗ ನಗರದಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗುತ್ತವೆ. ಆರೋಪಿಗಳನ್ನು ಅರೆಸ್ಟ್ ಮಾಡಿದಾಗ ಅವರನ್ನು ಜೈಲಿಗೆ ಬಿಟ್ಟು ಬರಬೇಕೆಂದರೆ ಬೈಕ್‌ಗಳಲ್ಲಿ ಬಿಟ್ಟು ಬರುವುದು ಆಗುತ್ತಿದೆ. ಹಾಗೂ ಏನಾದರೂ ಇನ್ಸಿಡೆಂಟ್ ಆದರೆ ಸ್ಪಾಟ್ ಗೆ ಹೋಗಲು ಮತ್ತು ಸಿಬ್ಬಂದಿಗಳನ್ನ ಸ್ಪಾಟ್ ಗೆ ಕರೆದುಕೊಂಡು ಹೋಗಲು ವಾಹನಗಳ ಅವಶ್ಯಕತೆ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳನ್ನು ಪೂರೈಸಬೇಕು.
Karnataka Dalitha Sangarsha Samiti ಶಿವಮೊಗ್ಗ ಹೆಚ್ಚು ವಾಹನ ದಟ್ಟಣೆ ಇರುವಂತಹ ನಗರ. ಟ್ರಾಫಿಕ್ ಸ್ಟೇಷನ್ಗಳಲ್ಲಿ ಸಿಬ್ಬಂದಿಗಳ ಕೊರತೆ ಹೆಚ್ಚು ಇದೆ. ಟ್ರಾಫಿಕ್ ನಿಯಂತ್ರಣಕ್ಕಾಗಿ ಹೆಚ್ಚು ಇನ್ಸು÷್ಟçಮೆಂಟ್ಸ್, ಸೈನ್ ಬೋರ್ಡ್ ಇತ್ಯಾದಿಗಳನ್ನು ನೀಡಬೇಕು. ಶಿವಮೊಗ್ಗ ಜಿಲ್ಲೆಯಲ್ಲಿ ಕ್ರೈಂ ಸಂಖ್ಯೆ ಹೆಚ್ಚಿರುವುದರಿಂದ ಠಾಣೆಗಳಲ್ಲಿ ಕೆಲಸಗಳನ್ನು ನಿರ್ವಹಿಸಲು ಸಿಬ್ಬಂದಿಗಳ ಅಗತ್ಯ ಮತ್ತು ಅವಶ್ಯಕತೆ ಇರುವುದರಿಂದ ತಾವುಗಳು ಸಿಬ್ಬಂದಿಗಳನ್ನು ನೇಮಕ ಮಾಡಬೇಕು.
ಜಿಲ್ಲೆ ಗೊಂದು ಫಾರೆನ್ಸಿಕ್ ಟೀಮ್ ನೀಡಿದ್ದೀರಿ.ಅವರುಗಳ ಕೆಲಸ ನಿರ್ವಹಣೆಗೆ ಸುಸಜ್ಜಿತವಾದ ಕಟ್ಟಡದ ಅವಶ್ಯಕತೆ ಇರುವುದರಿಂದ ಮೇಲ್ಕಂಡ ಹಕ್ಕುತಾಯಗಳನ್ನು ತಾವುಗಳು ಈಡೇರಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಸರ್ಕಾರವನ್ನು ಒತ್ತಾಯಿಸಿದೆ.