Wednesday, August 12, 2026
Wednesday, August 12, 2026

Karnataka Sanga ಕರ್ನಾಟಕ ಸಂಘ ಏರ್ಪಡಿಸಿದ್ದ ಗಾಯನ ಸ್ಪರ್ಧೆ. ಬಹುಮಾನ ವಿತರಣೆಗೆ ಸುಪ್ರಿಯಾ ರಘುನಂದನ್ ಅತಿಥಿ

Date:

Karnataka Sanga ದಿನಾಂಕ 14-12-2024 ಶನಿವಾರ ಸಂಜೆ 5:30ಕ್ಕೆ ಕರ್ನಾಟಕ ಸಂಘದ ಭವನದಲ್ಲಿ ಭಾವಗೀತೆ ಗಾಯನ ಸ್ಪರ್ಧೆ ವಿಜೇತರಿಗೆ ‘ಬಹುಮಾನ ವಿತರಣೆ’ ಹಾಗೂ ‘ಭಾವ ಸಂಧ್ಯಾ’ ಆಯ್ದ ಭಾವಗೀತೆಗಳ ಗಾಯನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಡಾ. ಶಿವಮೊಗ್ಗ ಸುಬ್ಬಣ್ಣ, ಅವರ ಸಹೋದರರು ಮತ್ತು ಸಹೋದರಿ ಸ್ಥಾಪಿಸಿರುವ ದಿ|| ರಂಗನಾಯಕಮ್ಮ ಗಣೇಶರಾವ್ ದತ್ತಿನಿಧಿ ಪ್ರಾಯೋಜಿತ ದಿ: 30-11-2024ರಂದು ಪ್ರೌಢಶಾಲಾ ಮತ್ತು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಅಯೋಜಿಸಿದ್ದ ಕನ್ನಡ ಭಾವಗೀತೆ ಗಾಯನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಶಿವಮೊಗ್ಗ ಸುಬ್ಬಣ್ಣನವರ ೮೬ನೇ ಹುಟ್ಟುಹಬ್ಬದ ದಿನವಾದ ಡಿಸೆಂಬರ್ 14ರಂದು ಬಹುಮಾನ ವಿತರಣೆ ಸಮಾರಂಭ ಇರುತ್ತದೆ.

ಮುಖ್ಯ ಅತಿಥಿಗಳಾಗಿ ಶ್ರೀಮತಿ ಸುಪ್ರಿಯಾ ರಘುನಂದನ್, ಪ್ರಸಿದ್ಧ ಗಾಯಕರು, ಬೆಂಗಳೂರು ಇವರು ಭಾಗವಹಿಸಲಿದ್ದಾರೆ.

ಸುಪ್ರಿಯಾ ರಘುನಂದನ್ (ಸುಪ್ರಿಯಾ ಆಚಾರ್ಯ) ಕನ್ನಡ ಸುಗಮ ಸಂಗೀತ ಕ್ಷೇತ್ರದ ಯುವ ಕಲಾವಿದರ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಹೆಸರು.

Karnataka Sanga ಸಂಗೀತ ಕ್ಷೇತ್ರದ ಪ್ರಸಿದ್ಧ ಕಲಾವಿದರಾದ ಎಸ್.ಪಿ. ಬಾಲಸುಬ್ರಮಣ್ಯಂ, ವಾಣಿ ಜಯರಾಂ, ಪಿ. ಸುಶೀಲ, ಶಿವಮೊಗ್ಗ ಸುಬ್ಬಣ್ಣ, ರಾಜು ಅನಂತಸ್ವಾಮಿ, ರತ್ನಮಾಲ ಪ್ರಕಾಶ್ ಹಾಗೂ ಪುತ್ತೂರು ನರಸಿಂಹ ನಾಯಕ್ ಅವರೊಂದಿಗೆ ಹಲವಾರು ಪ್ರತಿಷ್ಠಿತ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿರುವ ಸುಪ್ರಿಯಾ ಅವರಿಗೆ ಸಿ. ಅಶ್ವಥ್ ಅವರ ಪರಿಕಲ್ಪನೆಯಲ್ಲಿ ನಡೆದ ಐತಿಹಾಸಿಕ ಕಾರ್ಯಕ್ರಮ “ಕನ್ನಡವೇ ಸತ್ಯ” ಕಾರ್ಯಕ್ರಮದಲ್ಲಿ ಹಾಡಿರುವ ಹೆಗ್ಗಳಿಕೆ ಇದೆ.

ಅಮೇರಿಕದ “ಅಕ್ಕ” ಕನ್ನಡ ಸಮ್ಮೇಳನ, ಹಾಂಕಾಂಗ್ ಕನ್ನಡ ಕೂಟ ಸೇರಿದಂತೆ ಹಲವಾರು ಪ್ರಮುಖ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿರುವ ಸುಪ್ರಿಯಾ ಅವರು ಕನ್ನಡ ಚಲನಚಿತ್ರಗಳಿಗೆ (ಅಮೃತಧಾರೆ, ರಂಗಿ ತರಂಗ, ಮೆರವಣಿಗೆ, ಮೀರ ಮಾಧವ) ಹಿನ್ನೆಲೆ ಗಾಯಕಿಯಾಗಿಯೂ ಜನಪ್ರಿಯರಾಗಿದ್ದಾರೆ.

ಸಂಘದ ಅಧ್ಯಕ್ಷರಾದ ಪ್ರೊ. ಹೆಚ್.ಆರ್. ಶಂಕರನಾರಾಯಣ ಶಾಸ್ತಿç ಅಧ್ಯಕ್ಷತೆಯನ್ನು ವಹಿಸಲಿದ್ದಾರೆ,

ಆಸಕ್ತರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳ ಬೇಕೆಂದು ಈ ಮೂಲಕ ವಿನಂತಿಸಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive special Article ಆಧ್ಯಾತ್ಮದ ಆನಂದ ಹಂಚಿದ ದಾವಣಗೆರೆಯ ಶ್ರೀಶಿವಾನಂದ ತೀರ್ಥರು ...

"ಅಧ್ಯಾತ್ಮಾನಂದ ನೀಡುತ್ತಿದ್ದ ದಾವಣಗೆರೆಯ ಶ್ರೀ ಶಿವಾನಂದ ತೀರ್ಥರು" ( ಅವರ ಜಯಂತ್ಯೋತ್ಸವ ತನ್ನಿಮಿತ್ತಈವಿಶೇಷಲೇಖನ) -Klive...

Kuvempu University ಆಗಸ್ಟ್ 13 & 14. ರಂದು ಕುವೆಂಪು ವಿವಿಯ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿ

2026-27ನೇ ಸಾಲಿಗೆ ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ ಕ್ಯಾಂಪಸ್, ಮತ್ತು ವಿವಿ...