National Mathematics Day ಶ್ರೀನಿವಾಸ ರಾಮಾನುಜನ್, ಗಣಿತ ಶಾಸ್ತ್ರಜ್ಞರು ಇವರ ಹುಟ್ಟುಹಬ್ಬದ ಸವಿನೆನಪಿಗಾಗಿ ಡಿಸೆಂಬರ್ 22 ರಂದು ದೇಶಾದ್ಯಂತ ರಾಷ್ಟ್ರೀಯ ಗಣಿತ ದಿನಾಚರಣೆಯಾಗಿ ಆಚರಣೆ ಮಾಡಲಾಗುತ್ತಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಬೆಂಗಳೂರು ಇವರ ಸಹಯೋಗದೊಂದಿಗೆ ಡಿ.೨೩ ರಂದು ಬೆಳಗ್ಗೆ ೧೦.೩೦ ಯಿಂದ ಮದ್ಯಾಹ್ನ ೧.೦೦ಗಂಟೆಯವರೆಗೆ ನಗರದ ದುರ್ಗಿಗುಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಅಂದು ಕೇಶವ ಪ್ರಸಾದ್ ಎಸ್. ಸಹ ಶಿಕ್ಷಕರು (ಗಣಿತ), ಡಿವಿಎಸ್ ಸಂಯುಕ್ತ ಪದವಿಪೂರ್ವ ಕಾಲೇಜು (ಪ್ರೌಡಶಾಲಾ ವಿಭಾಗ), National Mathematics Day ಶಿವಮೊಗ್ಗ ಶ್ರೀಮತಿ ಪೂರ್ಣಿಮಾ, ಸಹ ಶಿಕ್ಷಕರು (ಗಣಿತ), ಸಿಲ್ವರ್ ಜ್ಯೂಬಲಿ ಸರ್ಕಾರಿ ಸರ್ಕಾರಿ ಪ್ರೌಡಶಾಲೆ, ಭದ್ರಾವತಿ ಗಣಿತದ ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಉತ್ತಮ ಕೌಶಲ್ಯ. ಹೊಸ ಕಲಿಕಾ ಅಭ್ಯಾಸ ಮತ್ತು ಗಣಿತದಬಗ್ಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಮಾರ್ಗದರ್ಶನ ನೀಡಲಿದ್ದಾರೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ತಿಳಿಸಿರುತ್ತಾರೆ
National Mathematics Day ಡಿಸೆಂಬರ್ 23. ಶಿವಮೊಗ್ಗದಲ್ಲಿ ‘ ಗಣಿತ ದಿನಾಚರಣೆ’
Bharat Gaurav Yatra ಭಾರತ್ ಗೌರವ್ ಯಾತ್ರೆ ಆಸಕ್ತರಿಗೆ ಪೂರ್ಣ ಮಾಹಿತಿ
Bharat Gaurav Yatra ಧಾರ್ಮಿಕ ದತ್ತಿ ಇಲಾಖೆಯು ಕರ್ನಾಟಕ ಭಾರತ್ ಗೌರವ್ ಯೋಜನೆಯಡಿ ದಕ್ಷಿಣ ಕ್ಷೇತ್ರಗಳ ಯಾತ್ರೆ, ದ್ವಾರಕಾ ಯಾತ್ರೆ ಮತ್ತು ಪುರಿಜಗನ್ನಾಥ ದರ್ಶನ ಯಾತ್ರೆಗಳಿಗೆ ಪ್ರವಾಸ ಕೈಗೊಳ್ಳಲು ಇಚ್ಛಿಸುವ ಸಾರ್ವಜನಿಕರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಮತ್ತು ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಪ್ರವರ್ಗ-ಸಿ ಅಧಿಸೂಚಿತ ದೇವಸ್ಥಾನಗಳಲ್ಲಿ/ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು/ನೌಕರರನ್ನು ಉಚಿತವಾಗಿ ಕಳುಹಿಸಲು ಹಾಗೂ ಇದಕ್ಕೆ ತಗುಲುವ ವೆಚ್ಚವನ್ನು ಸಾಮಾನ್ಯ ಸಂಗ್ರಹಣ ನಿಧಿಯಿಂದ ಭರಿಸಲು ತೀರ್ಮಾನಿಸಲಾಗಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ
ದಕ್ಷಿಣ ಕ್ಷೇತ್ರಗಳ ಯಾತ್ರಾ: ರಾಮೇಶ್ವರ-ಕನ್ಯಾಕುಮಾರಿ-ಮಧುರೈ-ತಿರುವನಂತಪುರಂ ಕ್ಷೇತ್ರಗಳನ್ನು ಒಳಗೊಂಡ 6 ದಿನಗಳ ಯಾತ್ರಾ ಪ್ಯಾಕೇಜ್‌ಗೆ ಒಟ್ಟು ರೂ. 25000/- ಗಳು ತಗುಲಲಿದ್ದು, ಕರ್ನಾಟಕ ಸರ್ಕಾರದ ವತಿಯಿಂದ ಅಂದಾಜು ರೂ. 10,000/- ಗಳನ್ನು ಭರಿಸಲಾಗುವುದು. ಇದರಲ್ಲಿ ಫಿಕ್ಸೆಡ್ ಹ್ಯೂಲೇಜ್, ಆರ್‌ಯು ಚಾರ್ಚ್, ಸ್ಟೇಬಲಿಂಗ್ ಚಾರ್ಚ್, ವೈದ್ಯಕೀಯ ವೆಚ್ಚ, ಇತರೆ ವೆಚ್ಚ ಹಾಗೂ ಸಹಾಯ ಧನ ರೂ. 5000/-ಗಳು ಒಳಗೊಂಡಿರುತ್ತದೆ.
ಯಾತ್ರಾರ್ಥಿಗಳು ಬುಕ್ಕಿಂಗ್ ಮೊತ್ತವಾಗಿ ರೂ. 10,000/-ಗಳನ್ನು ಮಾತ್ರ ಪಾವತಿಸಬೇಕಾಗಿರುತ್ತದೆ.
Bharat Gaurav Yatra ರೈಲು ಹತ್ತುವ ಮತ್ತು ಇಳಿಯುವ ಸ್ಥಳ: ಬೆಳಗಾವಿ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಬೀರೂರು, ತುಮಕೂರು, ಬೆಂಗಳೂರು.
ದ್ವಾರಕಾ ಯಾತ್ರೆ: ದ್ವಾರಕಾ-ನಾಗೇಶ್ವರ-ಸೋಮನಾಥ-ತ್ರಯಂಬಕೇಶ್ವರ ಕ್ಷೇತ್ರಗಳನ್ನು ಒಳಗೊಂಡ ೮ ದಿನಗಳ ಯಾತ್ರಾ ಪ್ಯಾಕೇಜ್
ಪುರಿ ಜಗನ್ನಾಥ ದರ್ಶನ: ಪುರಿ-ಕೊನಾರ್ಕ್-ಗಂಗಾಸಾಗರ್- ಕೊಲ್ಕತಾ ಒಳಗೊಂಡ ೮ ದಿನಗಳ ಯಾತ್ರಾ ಪ್ಯಾಕೇಜ್. ಈ ಪ್ಯಾಕೇಜ್‌ಗೆ ಒಟ್ಟು ರೂ.32500/-ಗಳು ತಗುಲಲಿದ್ದು, ಕರ್ನಾಟಕ ಸರ್ಕಾರದಿಂದ ರೂ. 17,500/-ಗಳನ್ನು ಭರಿಸಲಾಗುತ್ತದೆ. ಫಿಕ್ಸೆಡ್ ಹ್ಯೂಲೇಜ್, ಆರ್‌ಯು ಚಾರ್ಚ್, ಸ್ಟೇಬಲಿಂಗ್ ಚಾರ್ಚ್, ವೈದ್ಯಕೀಯ ವೆಚ್ಚ, ಇತರೆ ವೆಚ್ಚ ಹಾಗೂ ಸಹಾಯ ಧನ ರೂ. 7500/-ಗಳು ಒಳಗೊಂಡಿರುತ್ತದೆ.
ಯಾತ್ರಾರ್ಥಿಗಳು ಬುಕ್ಕಿಂಗ್ ಮೊತ್ತವಾಗಿ ರೂ. 15,000/-ಗಳನ್ನು ಮಾತ್ರ ಪಾವತಿಸಬೇಕಾಗುತ್ತದೆ.
ರೈಲು ಹತ್ತುವ ಮತ್ತು ಇಳಿಯುವ ಸ್ಥಳ: ಬೆಳಗಾವಿ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಬೀರೂರು, ತುಮಕೂರು, ಬೆಂಗಳೂರು.
ಪ್ರಯಾಣಿಸುವಾಗ ಆಧುನಿಕ ಪ್ಯಾಂಟ್ರಿ ಕಾರಿನಲ್ಲಿ ತಯಾರಿಸಿದ ತಾಜಾ ಸ್ಥಳೀಯ ಆಹಾರವನ್ನು ನೀಡಲಾಗುತ್ತದೆ. ಈ ಪ್ಯಾಕೇಜಿನಲ್ಲಿ 03 ಟೈರ್ ಎ.ಸಿ.ರೈಲಿನಲ್ಲಿ ಪ್ರಯಾಣ, ಊಟ ವಸತಿ, ಸ್ಥಳೀಯ ಸಾರಿಗೆ ಮತ್ತು ದರ್ಶನ ವ್ಯವಸ್ಥೆ ಇರುತ್ತದೆ. ಯಾತ್ರಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ವೈದ್ಯಕಿಐ ಸಹಾಯ ವ್ಯವಸ್ಥೆ ಇರುತ್ತದೆ.
ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಮುಜರಾಯಿ ತಹಶೀಲ್ದಾರ್‌ರವರು ತಿಳಿಸಿದ್ದಾರೆ.
District Organization of Bharat Scouts and Guides ಭಾರತ್ ಗೌರವ್ ಯಾತ್ರೆ. ಆಸಕ್ತರಿಗೆ ಪೂರ್ಣ ಮಾಹಿತಿ
District Organization of Bharat Scouts and Guides ವಿದ್ಯಾರ್ಥಿಗಳಲ್ಲಿ ಉತ್ತಮ ವ್ಯಕ್ತಿತ್ವ ರೂಪುಗೊಳ್ಳಲು ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೆಪಿಸಲು ಸ್ಕೌಟ್ಸ್ ಮತ್ತು ಗೈಡ್ಸ್ ಸಹಕಾರಿ ಎಂದು ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ಉಪನಿರ್ದೇಶಕ ಚಂದ್ರಪ್ಪ ಎಸ್.ಗುಂಡುಪಲ್ಲ ಹೇಳಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ವತಿಯಿಂದ ರೋರ‍್ಸ್, ರೇಂರ‍್ಸ್ಗಳಿಗೆ ಆಯೋಜಿಸಿದ್ದ ಜಿಲ್ಲಾಮಟ್ಟದ ದಳ ನಿರ್ವಹಣೆ ಹಾಗೂ ಚಾರಣ ಶಿಬಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಣದ ಜತೆಯಲ್ಲಿ ಮಕ್ಕಳಲ್ಲಿ ಕ್ರೀಯಾಶೀಲ ಚಿಂತನೆ ಬೆಳೆಸುವ ಇಂತಹ ಕಾರ್ಯಕ್ರಮಗಳ ಅವಶ್ಯಕತೆ ಹೆಚ್ಚಿದೆ. ಸದೃಢ ಸಮಾಜ ನಿರ್ಮಾಣ ಮಾಡುವಲ್ಲಿ ವಿದ್ಯಾರ್ಥಿಗಳು ಮಹತ್ತರ ಪಾತ್ರ ವಹಿಸಬೇಕು. ಪರಿಸರ ಸಂರಕ್ಷಣೆ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
District Organization of Bharat Scouts and Guides ಪ್ರಾಂಶುಪಾಲರ ಸಂಘದ ಅಧ್ಯಕ್ಷ, ಕಾಚಿನಕಟ್ಟೆ ಕಾಲೇಜಿನ ಪ್ರಾಂಶುಪಾಲ ಪಂಡರೀನಾಥ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಸೇವೆಯು ಎಲ್ಲೆಡೆ ವಿಸ್ತರಿಸಿ ಮಕ್ಕಳಲ್ಲಿ ಆತ್ಮವಿಶ್ವಾಸ ವೃದ್ಧಿಸುವ ಹಾಗೂ ಜೀವನದಲ್ಲಿ ಸಾಧನೆ ಮಾಡುವ ಮನೋಭಾವ ಬೆಳೆಸುತ್ತಿದೆ ಎಂದರು.
ಮೂರು ದಿನಗಳ ಶಿಬಿರದ ಅಧ್ಯಕ್ಷತೆಯನ್ನು ಗೈಡ್ಸ್ ಆಯುಕ್ತೆ ಶಕುಂತಲಾ ಚಂದ್ರಶೇಖರ್ ವಹಿಸಿದ್ದು, ಶಿಬಿರದಲ್ಲಿ ತರಬೇತಿ ಪಡೆದು ಬರುವ ದಿನಗಳಲ್ಲಿ ಉನ್ನತ ಹಂತಕ್ಕೆ ತಲುಪಬೇಕು. ವಿದ್ಯಾರ್ಥಿಗಳು ಕಾಲೇಜಿಗೆ ಉತ್ತಮ ಹೆಸರು ತರಬೇಕು ಎಂದು ಹೇಳಿದರು.
ರೋವರ್ ವಿಭಾಗ ಜಿಲ್ಲಾ ಆಯುಕ್ತ ಕೆ.ರವಿ ಮಾತನಾಡಿ, ಶಿಬಿರದ ಉದ್ದೇಶ ಹಾಗೂ ಸ್ಕೌಟ್ಸ್ ಗೈಡ್ಸ್ ನಡೆದು ಬಂದ ಹಾದಿ ಬಗ್ಗೆ ವಿವರಿಸಿದರು. ಕೇಂದ್ರ ಸ್ಥಾನಿಕ ಆಯುಕ್ತ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಜಿ.ವಿಜಯಕುಮಾರ್, ಜಿಲ್ಲಾ ಕಾರ್ಯದರ್ಶಿ ಕೆ.ವಿ.ಚಂದ್ರಶೇಖರಯ್ಯ, ತರಬೇತಿ ಆಯುಕ್ತ ಶಿವಶಂಕರ್, ಜಂಟಿ ಕಾರ್ಯದರ್ಶಿ ವೈ.ಆರ್.ವೀರೇಶಪ್ಪ, ಲಕ್ಷಿö್ಮÃ ರವಿ, ಮಲ್ಲಿಕಾರ್ಜುನ ಕಾನೂರು, ಎಂ.ಕೆ.ಕೃಷ್ಣಸ್ವಾಮಿ, ಘನಶಾಮ್ ಗಿರಿಮಾಜಿ, ಪರಮೇಶ್ವರಯ್ಯ, ಪರಿಮಳಾ ಇತರರಿದ್ದರು.
Shivaganga Yoga Centre ಯೋಗ ,ಪ್ರಾಣಾಯಾಮ, ಧ್ಯಾನಗಳಿಂದ ನಾವು ಸದಾ ಹಸನ್ಮುಖಿ- ಸಿ.ವಿ.ರುದ್ರಾರಾಧ್ಯ
Shivaganga Yoga Centre ಯೋಗ ಪ್ರಾಣಾಯಾಮ ಧ್ಯಾನ ಸದಾ ನಮ್ಮನ್ನು ಹಸನ್ಮುಖಿ ಗಳಿಸುವುದರ ಜೊತೆಗೆ ದೈಹಿಕ ಹಾಗೂ ಮಾನಸಿಕ ಸದೃಢತೆ ಒದಗಿಸುತ್ತದೆ. ನಮ್ಮ ದೇಹದಲ್ಲಿ ಇರುವ ಪ್ರತಿಯೊಂದು ಅಂಗಾಂಗಗಳು ಸಮಾತೋಲನದಿಂದ ಹಾಗೂ ನೆಮ್ಮದಿಯಿಂದ ಇರಬೇಕಾದರೆ ಧ್ಯಾನವು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ ತಂತ್ರಜ್ಞಾನ ಯುಗದಲ್ಲಿ ಇಂದು ಪ್ರಪಂಚದ 197 ದೇಶಗಳಲ್ಲಿ ಧ್ಯಾನ ಪ್ರಾಣಾಯಾಮಕ್ಕೆ ವಿಶೇಷ ಮಹತ್ವ ದೊರಕಿದೆ ಎಂದು ರಾಜ್ಯ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಶಿವಗಂಗಾ ಯೋಗ ಕೇಂದ್ರದ ಯೋಗ ಆಚಾರ್ಯ ಸಿವಿ ರುದ್ರಾರಾಧ್ಯ ಅವರು ಅಭಿಮತ ವ್ಯಕ್ತಪಡಿಸಿದರು.
ಅವರು ಕಲ್ಲಹಳ್ಳಿಯ ಶಿವಗಂಗಾ ಯೋಗ ಕೇಂದ್ರದಲ್ಲಿ ವಿಶ್ವ ಧ್ಯಾನ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾದ ವಿಶೇಷ ಧ್ಯಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು ಯೋಗ ಎಂದರೆ ಈಗ ಸಾಮಾನ್ಯರ ಗ್ರಹಿಕೆಯಲ್ಲಿ ಆಸನಗಳು ಮಾತ್ರ ಆದರೆ ಯೋಗ ದರ್ಶನದ ವ್ಯಾಪ್ತಿ ಇನ್ನೂ ವಿಸ್ತಾರ ಹಾಗೂ ಆಳವು ಆಗಿದೆ. ಯಮ. ನಿಯಮ. ಆಸನ. ಪ್ರಾಣಾಯಾಮ.ಪ್ರತ್ಯಾಹಾರ. ಧಾರಣ.ಧ್ಯಾನ.ಮತ್ತು ಸಮಾಧಿ ಈ 8 ಸಾಧನೆಗಳನ್ನು ಒಳಗೊಂಡಿರುವುದೇ
ಹಟವಾದ ಯೋಗ.ಇವು ಬೌದ್ಧಿಕ ಶಾರೀರಿಕ ಮತ್ತು ಮಾನಸಿಕ ಸಾಧನೆಗೆ ಒದಗಿಸಿರುವ ಮೆಟ್ಟಿಲುಗಳು ಎಂದು ನುಡಿದ ಅವರು ಡಿಸೆಂಬರ್ 21ನ್ನು ವಿಶ್ವ ಧ್ಯಾನ ದಿನವನ್ನಾಗಿ ಘೋಷಿಸಿದ ಭಾರತ ಸರ್ಕಾರಕ್ಕೆ ವಿಶೇಷ ಧನ್ಯವಾದಗಳು ಸಮರ್ಪಿಸಿದರು.
Shivaganga Yoga Centre ಈ ನಿಟ್ಟಿನಲ್ಲಿ ಯೋಗ ಹಾಗೂ ಧ್ಯಾನಕ್ಕೆ ಜಾಗತಿಕ ಮಟ್ಟದಲ್ಲಿ ಮನ್ನಣೆ ಸಿಕ್ಕಂತಾಗಿದೆ ಎಂದು ನುಡಿದರು.ನಗರದ ಶಿವಗಂಗಾ ಯೋಗ ಕೇಂದ್ರದ 32 ಶಾಖೆಗಳಿಂದ ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡು 45 ನಿಮಿಷಕ್ಕೂ ಹೆಚ್ಚು ವಿವಿಧ ಬಗೆಯ ಪ್ರಾಣಾಯಾಮ ಹಾಗೂ ಧ್ಯಾನ ಮಾಡಿದರು ಈ ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕರಾದ ಚಂದ್ರಶೇಖರಯ್ಯ ಜಗದೀಶ್. ವೀಣಾ ಕೇಶವ್ ಜಿ ವಿಜಯಕುಮಾರ್ ಹಾಗೂ ಯೋಗ ಬಂಧುಗಳು ಉಪಸ್ಥಿತರಿದ್ದರು.
MESCOM ಡಿಸೆಂಬರ್ 22 . ಗಾಜನೂರು ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ
MESCOM ಶಿವಮೊಗ್ಗ ಗಾಜನೂರು ಶಾಖಾ ವ್ಯಾಪ್ತಿಯ ವಿದ್ಯುತ್ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಇರುವುದರಿಂದ ಈ ಮಾರ್ಗಗಳಿಂದ ವಿದ್ಯುತ್ ಸರಬರಾಜಾಗುವ ಗ್ರಾಮಗಳಾದ ಗಾಜನೂರು, ಕ್ಯಾಂಪ್ ಮತ್ತು ಡ್ಯಾಂ, ಸಕ್ಕರೆ ಬೈಲು, ನವೋದಯ ಶಾಲೆ, ಶಿವಮೊಗ್ಗ ಕುಡಿಯುವ ನೀರಿನ ಸ್ಥಾವರ, ಹಾಲಲಕ್ಕವಳ್ಳಿ, ಕಡೆಕಲ್, ಯರಗನಾಳ್, ಕುಸ್ಕೂರು, ಶ್ರೀಕಂಠಪುರ, ವೀರಾಪುರ, ತಟ್ಟಿಕೆರೆ, ಹೊಸಕೊಪ್ಪ, ಇಂದಿರಾನಗರ, ಹೊಸಹಳ್ಳಿ, ಮುಳ್ಕೆರೆ, ಆನೆಬಿಡಾರ, ತಿಮ್ಕಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಡಿ.22 ರಂದು ಬೆಳಗ್ಗೆ 10.00 ರಿಂದ ಸಂಜೆ 6.00ರವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕ ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.
Indian Medical Association Shivamogga ಪರೀಕ್ಷೆ ಹತ್ತಿರ ಬರುವಾಗ ರಾತ್ರಿ ಇಡೀ ನಿದ್ದೆ ಬಿಟ್ಟು ಓದಬೇಡಿ- ಪಾಸಿಟಿವ್ ಮೈಂಡ್ಡಾ. ಎಸ್.ಟಿ.ಅರವಿಂದ
Indian Medical Association Shivamogga ಪ್ರೌಢ ಶಾಲಾ ಹಂತದಲ್ಲಿ ವ್ಯಾಸಂಗ ಮಾಡುತ್ತಿರುವ ಹದಿಹರೆಯದ ವಿದ್ಯಾರ್ಥಿ/ನಿಯರಲ್ಲಿ ಅವರ ವಯೋಮಾನಕ್ಕನುಗುಣವಾಗಿ ಏಕಾಗ್ರತೆಯ ಕೊರತೆಯಿಂದ, ಒಂದೇ ವಿಷಯದ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸುವ ಸಾಮರ್ಥ್ಯ ಕಡಿಮೆಯಿದ್ದು, ಅದನ್ನು ನಿವಾರಿಸಿಕೊಂಡು ವಿವಿಧ ವಿಷಯಗಳನ್ನು ಅಭ್ಯಾಸ ಮಾಡಲು ತಯಾರಿಸಿಕೊಂಡ ವೇಳಾಪಟ್ಟಿಗನುಗುಣವಾಗಿ ವರ್ಷದ ಪ್ರಾರಂಭದಿಂದಲೂ ನಿರಂತರವಾಗಿ ಪರಿಶ್ರಮ ಪಟ್ಟು ಓದಿ ವಿವಿಧ ಪರಿಕಲ್ಪನೆಗಳನ್ನು ಮೈಗೂಡಿಸಿಕೊಂಡಲ್ಲಿ ಎಂತಹ ಪರೀಕ್ಷೆಯನ್ನಾದರೂ ಎದುರಿಸಿ, ಅದರಲ್ಲಿ ಯಶಸ್ಸನ್ನು ಸಾಧಿಸಬಹುದು ಎಂದು ಶಿವಮೊಗ್ಗ ನಗರದ ಖ್ಯಾತ ಮನೋವೈದ್ಯ ಹಾಗೂ ಪಾಸಿಟಿವ್ ಮೈಂಡ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ|| ಅರವಿಂದ್ ಅವರು ಅಭಿಪ್ರಾಯ ಪಟ್ಟರು.
ಅವರು ರೋಟರಿ ಆಂಗ್ಲ ಪ್ರೌಢ ಶಾಲೆ ಹಾಗೂ ಭಾರತೀಯ ವೈದ್ಯಕೀಯ ಸಂಘ ಶಿವಮೊಗ್ಗ ಶಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಭಾರತೀಯ ವೈದ್ಯಕೀಯ ಸಂಘದ ಅಮೃತ ಮಹೋತ್ಸವದ ಅಂಗವಾಗಿ ಪ್ರೌಢ ಶಾಲಾ ಮಕ್ಕಳಿಗೆ ಏರ್ಪಡಿಸಿದ ಪರೀಕ್ಷೆಯನ್ನು ನಿರ್ಭಯದಿಂದ ಎದುರಿಸುವುದು ಹೇಗೆೆ ಎಂಬ ವಿಷಯದ ಮೇಲೆ ಏರ್ಪಡಿಸಿದ ಕಾರ್ಯಕ್ರಮವನ್ನು ಉದ್ಘಾಟಿಸಿ ಉಪನ್ಯಾಸ ಮಾಡುತ್ತಿದ್ದರು. ತಮ್ಮ ಮಾತನ್ನು ಮುಂದುವರೆಸಿದ ಶ್ರೀಯುತರು ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ಹೆಚ್ಚುತ್ತಿದ್ದು, ಆತಂಕಗೊಳಗಾಗುತ್ತಿದ್ದಾರೆ. ಇದಕ್ಕೆ ಮೂಲ ಕಾರಣ ವಿದ್ಯಾರ್ಥಿಗಳು ಮೊಬೈಲ್‌ನ ಗೀಳಿಗೆ ಅಂಟಿಕೊAಡು ಪರೀಕ್ಷಾ ವಿಷಯಗಳನ್ನು ಸತತವಾಗಿ ಅಭ್ಯಾಸ ಮಾಡದೆ ಪರೀಕ್ಷೆ ಹತ್ತಿರ ಬರುವಾಗ ರಾತ್ರಿ ಇಡೀ ನಿದ್ದೆ ಬಿಟ್ಟು ಓದುವುದರಿಂದ ಈ ಸಮಸ್ಯೆ ಉದ್ಭವಿಸುತ್ತದೆ. ಹಾಗಾಗಿ, ಮಕ್ಕಳು ಪೌಷ್ಠಿಕವಾದ ಆಹಾರವನ್ನು ಸೇವಿಸುವುದರ ಜೊತೆಗೆ ಓದಿನಲ್ಲಿ ಸಮಯ ಪಾಲನೆ ಮಾಡಿಕೊಂಡು ವಿಶ್ರಾಂತಿಯ ಜೊತೆಗೆ ನಿರ್ದಿಷ್ಟ ಸಮಯದಲ್ಲಿ ನಿದ್ದೆ ಮಾಡಿ ತಮ್ಮ ಮನಸ್ಸನ್ನು ಉಲ್ಲಾಸಕರವಾಗಿ ಇಟ್ಟುಕೊಳ್ಳುವುದು ಅತ್ಯಗತ್ಯ ಎಂದರು.
Indian Medical Association Shivamogga ಭಾರತೀಯ ವೈದ್ಯಕೀಯ ಸಂಘದ ಶಿವಮೊಗ್ಗ ಶಾಖೆಯ ಅಧ್ಯಕ್ಷರು ಹಾಗೂ ಸಿಮ್ಸ್ನ ಇ.ಎನ್.ಟಿ. ವಿಭಾಗದ ಮುಖ್ಯಸ್ಥರಾದ ಡಾ|| ಶ್ರೀಧರ್ ಹಾಗೂ ಐ.ಎಂ.ಎ. ಶಿವಮೊಗ್ಗ ಘಟಕದ ಕಾರ್ಯದರ್ಶಿ & ಸುಬ್ಬಯ್ಯ ಆಸ್ಪತ್ರೆ ಡೈರೆಕ್ಟರ್ ಆದ ಡಾ|| ವಿನಯ ಶ್ರೀನಿವಾಸ್ ಇವರು ಈ ವಿಷಯದ ಕುರಿತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸಮಗ್ರ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಈ ಶಾಲೆಯ ವಿದ್ಯಾರ್ಥಿಗಳ ರಕ್ತದ ಗುಂಪನ್ನು ಗುರುತಿಸುವ ಕಾರ್ಯವನ್ನು ಸುಬ್ಬಯ್ಯ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂಧಿ ವರ್ಗದವರಿಂದ ಮಾಡಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಟ್ರಸ್ಟ್ನ ಅಧ್ಯಕ್ಷರು ಹಾಗೂ ನಿವೃತ್ತ ಡಿ.ಪಿ.ಐ. ರೊ. ಚಂದ್ರಶೇಖರಯ್ಯ ಎಂ., ಇವರು ಮಾತನಾಡುತ್ತಾ, ಪರೀಕ್ಷೆಯಲ್ಲಿ ಶೇ.೫೦ ಪ್ರಶ್ನೆಗಳು ಸಾಧಾರಣ ಬುದ್ಧಿಮತ್ತೆ ಮಕ್ಕಳಿಗೂ, ಶೇ.೨೫ ಪ್ರಶ್ನೆಗಳು ಕಡಿಮೆ ಬುದ್ಧಿಮತ್ತೆ ಮಕ್ಕಳಿಗೂ ಹಾಗೂ ಶೇ.೨೫ ಪ್ರಶ್ನೆಗಳು ಮಾತ್ರ ಹೆಚ್ಚು ಬುದ್ಧಿಮತ್ತೆ ಮಕ್ಕಳಿಗಾಗಿ (ಂveಡಿಚಿge ಟeಚಿಡಿಟಿeಡಿs, sಟoತಿ ಟeಚಿಡಿಟಿeಡಿs, ಉiಜಿಣeಜ ಟeಚಿಡಿಟಿeಡಿs) ರೂಪಿಸುವುದರಿಂದ ಯಾರೂ ಪರೀಕ್ಷಾ ಭಯವನ್ನು ಹೊಂದದೆ, ಲೀಲಾಜಾಲವಾಗಿ ಎದುರಿಸಬಹುದು ಎಂದು ತಿಳಿಸಿದರು.
ಪ್ರಾರಂಭದಲ್ಲಿ ಈ ಕಾರ್ಯಕ್ರಮದ ಪ್ರಾಸ್ತಾವಿಕ ಮಾತುಗಳನ್ನಾಡಿದ ಟ್ರಸ್ಟ್ನ ಉಪಾಧ್ಯಕ್ಷ ರೊ. ಡಾ|| ಪರಮೇಶ್ವರ್ ಡಿ. ಶಿಗ್ಗಾಂವ್ ಇವರು ಪರೀಕ್ಷೆಯನ್ನು ಎದುರಿಸುವಲ್ಲಿ ಮಕ್ಕಳಲ್ಲಿ ಆತಂಕ ಹೆಚ್ಚಾಗುತ್ತಿದ್ದು, ಅದಕ್ಕಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಇಂರ‍್ಯಾಕ್ಟ್ ಕ್ಲಬ್‌ನ ಸಂಚಾಲಕರಾದ ಶಿಕ್ಷಕಿ ಶ್ರೀಮತಿ ಹರ್ಷಿತಾ ಕೆ.ಎಂ., ಇವರು ಮುಖ್ಯ ಅತಿಥಿಗಳ ಪರಿಚಯ ಮಾಡಿಕೊಟ್ಟರು. ಶಾಲೆಉ ಪ್ರಾಂಶುಪಾಲರಾದ ಸೂರ್ಯನಾರಾಯಣ್, ಇಂರ‍್ಯಾಕ್ಟ್ ಕ್ಲಬ್‌ನ ಅಧ್ಯಕ್ಷ ಕುಮಾರ್ ಎನ್., ಕಾರ್ಯದರ್ಶಿ ಗೌತಮಿ ಎಂ. ಇವರುಗಳು ಉಪಸ್ಥಿತರಿದ್ದರು.
Akhila Bharathiya Kannada Sahitya Sammelana ಕನ್ನಡಿಗರಿಗೆ ಕೈಗಾರಿಕಾಕ್ಷೇತ್ರ ಹೆಚ್ಚು ಉದ್ಯೋಗಾವಾಕಾಶ ನೀಡಬೇಕು- ಗೊರುಚ
Akhila Bharathiya Kannada Sahitya Sammelana ಮಂಡ್ಯದಲ್ಲಿ 87ನೇ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿಯಿಂದ ಚಾಲನೆಗೊಂಡಿತು. ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿರುವ ಜಾನಪದ ವಿದ್ವಾಂಸ ಹಾಗೂ ಹಿರಿಯ ಚಿಂತಕ ಶ್ರೀ ಗೊ.ರು. ಚನ್ನಬಸಪ್ಪ ಅವರನ್ನು ಸಕಲ ಗೌರವಗಳ ಮೂಲಕ ಮೆರವಣಿಗೆಯಲ್ಲಿ ಸಮ್ಮೇಳನದ ಪ್ರಧಾನ ವೇದಿಕೆಗೆ ಕರೆತರಲಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿಸರ್ಗದತ್ತ ಅಡಿಕೆ ವೃಕ್ಷದ ಇಂಗಾರವನ್ನು ತೆರೆಯುವುದರ ಮೂಲಕ ಮೂರು ದಿನಗಳ ವೈಭವದ ಸಾಹಿತ್ಯ ಕನ್ನಡ ನುಡಿ ಜಾತ್ರೆಗೆ ವಿಧ್ಯುಕ್ತ ಚಾಲನೆ ನೀಡಿದರು.
ಈ ಸಮ್ಮೇಳನದಲ್ಲಿ ಸಮಾನಾಂತರ ವೇದಿಕೆಗಳಲ್ಲಿ ವಿವಿಧ ಗೋಷ್ಠಿಗಳು ಏರ್ಪಾಡಾಗಿವೆ. ವಿಶೇಷವೆಂದರೆ ದೃಷ್ಟಿ ವಿಶೇಷ ಚೇತನ ಕವಿಗಳಿಗೆ ಗೋಷ್ಠಿಯನ್ನು ಏರ್ಪಡಿಸಲಾಗಿದೆ. ಸಾಂಪ್ರದಾಯಕವಾಗಿ ಪೂರ್ಣ ಕುಂಭವನ್ನ ಬಿಟ್ಟು ಪುಸ್ತಕಗಳನ್ನ ಹೊತ್ತು ಮಹಿಳೆಯರು ಸಾಗಿ ಬಂದರು.
ರಾಜಮಾತೆ ಕೆಂಪನಜ್ಜಂಮಣ್ಣಿ ಮತ್ತು ರಾಜರ್ಷಿ ನಾಲ್ವಡಿ ಕೃಷ್ಣ ರಾಜ ಒಡೆಯರ್ ನಾಮಾಂಕಿತ ಪ್ರಧಾನ ವೇದಿಕೆಯಲ್ಲಿ ಸಮ್ಮೇಳನ ಉದ್ಘಾಟನೆಗೊಂಡಿತು.
ಭಾಷೆಯ ಅಳಿವು ಮತ್ತು ಉಳಿವು ಆಯಾ ಭಾಷೆಯ ಸಮುದಾಯದ ಕೈಯಲ್ಲಿದೆ. ಭಾಷೆ ಬೆಳೆಯುವುದು ಮತ್ತು ಉಳಿಯುವುದು ಅದು ಬಳಕೆಯಾದಾಗ ಮಾತ್ರ. ನುಡಿ ಬಿಡಲಾಗದು ಬಿಟ್ಟರೆ ನಾಡು ಬಿಟ್ಟಂತೆ ಎಂಬ ಕುವೆಂಪು ವಾಣಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ ಸ್ಮರಿಸಿಕೊಂಡರು.
Akhila Bharathiya Kannada Sahitya Sammelana ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ ಅಗತ್ಯವಾಗಿದೆ. ಅದರ ಮೂಲಕ ನಮ್ಮ ಮಾತೃಭಾಷೆಯನ್ನು ಉಳಿಸಲು ಪ್ರಯತ್ನ ಮಾಡಬಹುದು. ಪ್ರಸ್ತುತ ವೈದಿಕ ಮಾದರಿಯ ಶಿಕ್ಷಣ ವ್ಯವಸ್ಥೆ ಉಪಯೋಗವಿಲ್ಲದಾಗಿದೆ. ಬದಲಾವಣೆ ಮಾಡಿದರೆ ಮಾತ್ರ ಕನ್ನಡದಲ್ಲಿ ವೀವೇಚಿಸುವ ಸಂಶೋಧಿಸುವ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಬಳಸುವ ಭಾಷೆಯಾಗಿ ಕನ್ನಡ ಬೆಳೆಯುತ್ತದೆ ಎಂದರು.
ಸಮ್ಮೇಳನದ ಸರ್ವಾಧ್ಯಕ್ಷ ಗೋರು ಚನ್ನಬಸಪ್ಪ ಅವರು ತಮ್ಮ ಭಾಷಣದಲ್ಲಿ 21 ಹಕ್ಕೊತ್ತಾಯಗಳನ್ನ ಅಡಕ ಗೊಳಿಸಿದ್ದಿದ್ದು, ಅವರ ನೇರ ದಿಟ್ಟ ಅಭಿಪ್ರಾಯಗಳಿಗೆ ಕನ್ನಡಿ ಹಿಡಿದಂತಿತ್ತು. ಸರ್ಕಾರಕ್ಕೆ ಈ ಹಕ್ಕೊತ್ತಾಯಗಳ ಮೂಲಕ ಕನ್ನಡ ಉಳಿಸಿ ಬೆಳೆಸಲು ಆಗ್ರಹ ಪಡಿಸಿದರು.
ಎಸ್ ಎಸ್ ಎಲ್ ಸಿ ವರೆಗೆ ಕನ್ನಡ ಭಾಷೆ ಮಾಧ್ಯಮದ ಭಾಷೆಯಾಗಲಿ ಎಂಬುವುದು ಅವರ ಭಾಷಣದ ಪ್ರಧಾನ ಅಂಶವಾಗಿತ್ತು. ಕನ್ನಡ ಶಾಸ್ತ್ರೀಯ ಭಾಷಾ ಕೇಂದ್ರವನ್ನು ಸ್ವಾಯತ್ತ ಕೇಂದ್ರವನ್ನಾಗಿ ಬಳಸಬೇಕು. ಅದರ ಉನ್ನತಿಗೆ ಉದಾರ ಧನ ಸಹಾಯ ಮಾಡಬೇಕು. ಹಂಪಿ ಕನ್ನಡ ಮತ್ತು ಜಾನಪದ ವಿವಿಗೆ ಸಾಕಷ್ಟು ಬೋಧನಾ ಸಿಬ್ಬಂದಿ ಮತ್ತು ಹಣಕಾಸು ಅನುದಾನವನ್ನು ಕೂಡಲೇ ನೀಡಬೇಕು.
ರಾಜ್ಯದ ಬಜೆಟ್ಟಿನಲ್ಲಿ ಶೇಕಡ 15ರಷ್ಟು ಭಾಗವನ್ನು ಶಿಕ್ಷಣಕ್ಕೆ ಮೀಸಲಿಡಬೇಕು. ಕೈಗಾರಿಕಾ ಕ್ಷೇತ್ರದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಹೆಚ್ಚು ಸಿಗುವಂತೆ ಕಾನೂನು ಕ್ರಮ ಕೈಗೊಳ್ಳಬೇಕು. ಗಡಿ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಸಂಬಂಧಿತ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಕರೆಯಬೇಕು.
ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಮುಂತಾಗಿ ಪ್ರಾದೇಶಿಕ ಅಸಮಾನತೆಯನ್ನು ಸರಿಪಡಿಸಬೇಕು. 12ನೇ ಶತಮಾನದ ಶರಣರ ಕ್ಷೇತ್ರಗಳ ಅಭಿವೃದ್ಧಿಗೆ ಪ್ರಾಧಿಕಾರವನ್ನು ಸ್ಥಾಪಿಸಬೇಕು. ಯಾವುದೇ ಕಾರಣಕ್ಕೂ ಪ್ರಾದೇಶಿಕ ಭಾಷೆಗಳ ಮೇಲೆ ಹಿಂದಿ ಹೇರಿಕೆಗೆ ಅವಕಾಶ ಕೊಡಕೂಡದು . ಮುಂತಾಗಿ ಅವರ ಭಾಷಣದಲ್ಲಿ ಭಾಷೆಗಳು ಪ್ರಧಾನವಾಗಿ ಕಂಡುಬಂದವು.
Nidhi Apke Nikat ಡಿಸೆಂಬರ್ 27. ದಾವಣಗೆರೆ & ಶಿವಮೊಗ್ಗ ಜಿಲ್ಲೆಗಳಲ್ಲಿ ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮ
Nidhi Apke Nikat ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ವತಿಯಿಂದ ನಿಧಿ ಆಪ್ಕೆ ನಿಕಟ್ 2.0 ಕಾರ್ಯಕ್ರಮವನ್ನು ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಡಿ. 27 ರಂದು ಆಯೋಜಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಸಾಗರ ತಾಲೂಕು ಹೊನ್ನೇಸರ ಭೀಮಕೋಣೆಯಲ್ಲಿರುವ ಚರಕ ಮಹಿಳಾ ವಿವಿಧೋದ್ಧೇಶ ಕೈಗಾರಿಕಾ ಸಹಕಾರಿ ಸಂಘ ನಿ., ದಲ್ಲಿ ಹಾಗೂ ದಾವಣಗೆರೆ ಜಿಲ್ಲೆಯ ಯಂತ್ರಪುರ ಇಂಡಸ್ಟ್ರೀಯಲ್ ಎಸ್ಟೇಟ್, ಪ್ಲಾಟ್ ನಂ. ಎನ್-7, ಪ್ರದೀಪ್ ಎಂಟರ್‌ಪ್ರೈಸಸ್ ನಲ್ಲಿ ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮ ನಡೆಯಲಿದೆ.
Nidhi Apke Nikat ಉದ್ಯೋಗದಾತರು ಮತ್ತು ಉದ್ಯೋಗಿಗಳಿಗೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆ ಹಾಗೂ ಪಿಂಚಣಿದಾರರಿಗೆ ಮಧ್ಯಾಹ್ನ 2.30 ರಿಂದ ಸಂಜೆ 4 ಗಂಟೆವರೆಗೆ ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮ ನಡೆಯಲಿದ್ದು, ಉದ್ಯೋಗದಾತರು ಮತ್ತು ಉದ್ಯೋಗಿಗಳು ಮತ್ತು ಪಿಂಚಣಿದಾರರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಪ್ರಾದೇಶಿಕ ಕಚೇರಿಯ ಸಹಾಯಕ ಭವಿಷ್ಯ ನಿಧಿ ಆಯುಕ್ತರು ತಿಳಿಸಿದ್ದಾರೆ.
Sirigere Dr. Shivamurthy Shivacharya Swamiji ಈ ಬಾರಿಯ ಭರಮಸಾಗರದ ತರಳಬಾಳು ಹುಣ್ಣಿಮೆ ವಿಶಿಷ್ಟವಾಗಿರುತ್ತದೆ- ಸಿರಿಗೆರೆ ಡಾ.ಶಿವಮೂರ್ತಿ ಶಿವಾಚಾರ್ಯಶ್ರೀ
Sirigere Dr. Shivamurthy Shivacharya Swamiji ತರಳಬಾಳು ಹುಣ್ಣಿಮೆಯಲ್ಲಿ ಉಳಿದ ಹಣ ಭರಮಸಾಗರ ಕೆರೆ ಬಾಕಿ ಇರುವ ಅಭಿವೃದ್ದಿ ಕೆಲಸಗಳನ್ನು ಅದಷ್ಟು ಬೇಗ ಮುಗಿಸಬೇಕು ಎಂದು ಸಿರಿಗೆರೆ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
ಈ ಬಾರಿ ಭರಮಸಾಗರದಲ್ಲಿ ನಡೆಯಲಿರುವ ತರಳಬಾಳು ಹುಣ್ಣಿಮೆ ವಿಶೇಷವಾಗಿರುತ್ತದೆ ಹಾಗೂ ಏತನೀರಾವರಿ ಯೋಜನೆ ವಿಶೇಷ ಆಕರ್ಷಣೆಯಾಗಿರುತ್ತದೆ ಎಂದು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
ಸಿರಿಗೆರೆಯ ಶ್ರೀ ಗುರುಶಾಂತೇಶ್ವರ ದಾಸೋಹ ಭವನದಲ್ಲಿ ಗುರುವಾರ ಸಂಜೆ ಕರೆಯಲಾಗಿದ್ದ ತರಳಬಾಳು ಹುಣ್ಣಿಮೆ ಸಮಿತಿ ರಚನೆ ಸಭೆಯಲ್ಲಿ ಅವರು ಮಾತನಾಡಿದರು.
ಕೆರೆ ಏತನೀರಾವರಿ ಹೆಚ್ಚಿನ ಆಕರ್ಷಣೆ: ಏತನೀರಾವರಿ ಯೋಜನೆ ಯಶಸ್ವಿಯಾಗುವುದಿಲ್ಲ ಎಂಬ ತಪ್ಪು ಭಾವನೆಗೆ ವಿರುದ್ದವಾಗಿ ಯಶಸ್ವಿಯಾಗಿರುವ ಭರಮಸಾಗರ ಏತನೀರಾವರಿ ಯೋಜನೆ ಉದಾಹರಣೆಯಾಗಿದೆ. ಕಾರಣ ಇದು ಹೆಚ್ಚಿನ ಪ್ರಾಶಸ್ತ್ಯ ಪಡೆದುಕೊಳ್ಳುತ್ತದೆ.
ಸಮಿತಿ ಮತ್ತು ಸಂಪನ್ಮೂಲ ಕ್ರೂಢೀಕರಣಕ್ಕಾಗಿ ತುರ್ತು ಸಭೆ
ತರಳಬಾಳು ಹುಣ್ಣಿಮೆ ನಾಡ ಹಬ್ಬವಾಗಿ ಖ್ಯಾತವಾಗಿದೆ ಕಾರಣ ತರಳಬಾಳು ಹುಣ್ಣಿಮೆಯಲ್ಲಿ ಸಂಘರ್ಷಕ್ಕೆಡೆಮಾಡದಂತೆ ಸಮನ್ವಯತೆಯಿಂದ ಎಲ್ಲರೂ ಕೆಲಸ ನಿರ್ವಹಿಸಬೇಕು ಡಿ.21 ರಿಂದ ಉತ್ತರ ಭಾರತದಲ್ಲಿಯ ಕಾರ್ಯಕ್ರಮಗಳಿಗೆ ತೆರಳಬೇಕಾಗಿರುವುದರಿಂದ ವಿವಿದ ಸಮಿತಿಗಳ ರಚನೆ ಮತ್ತು ಇತರ ಸಂಪನ್ಮೂಲ ಕ್ರೂಢೀಕರಣದ ಉದ್ದೇಶದಿಂದ ಈ ಸಭೆ ತುರ್ತಾಗಿ ಕರೆಯಲಾಗಿದೆ.
ಪರಿಸರದ ಕಾಳಜಿ, ಪ್ಲೆಕ್ಸ್ ಬ್ಯಾನರ್ ಗೆ ಕಡಿವಾಣ ಈ ಬಾರಿಯ ತರಳಬಾಳು ಹುಣ್ಣಿಮೆಯಲ್ಲಿ ಪ್ಲೆಕ್ಸ್ ಗಳನ್ನು ಸಿಡಿಮದ್ದುಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ. ಇದಕ್ಕೆ ತಗಲುವ ವೆಚ್ಚವನ್ನು ಸತ್ಕಾರ್ಯಗಳಿಗೆ ಬಳಸಬಹುದು ಹಾಗೂ ಉಚ್ಚ ನ್ಯಾಯಾಲಯದ ಆದೇಶವನ್ನು ಸಹ ಪಾಲಿಸುವುದು ನಮ್ಮ ಧರ್ಮವಾಗಿದೆ ,
ಪ್ರತಿದಿನ ಒಂದೊಂದು ವಿಷಯದ ಮೇಲೆ ಉಪನ್ಯಾಸ ಸಂವಾದ:
ಈ ಬಾರಿಯ ತರಳಬಾಳು ಹುಣ್ಣಿಮೆಯಲ್ಲಿ ಇನ್ನೊಂದು ವಿಶೇಷವೆಂದರೆ ಪ್ರತೀ ದಿನವೂ ಒಂದೊಂದು ವಿಷಯದ ಮೇಲೆ ತಜ್ಞರಿಂದ ಉಪನ್ಯಾಸ ಏರ್ಪಡಿಸಲಾಗವುದು, ಶಿಕ್ಷಣ, ಕಲೆ ಸಂಸ್ಕೃತಿ, ಮಹಿಳೆ ಮತ್ತು ಸಮಾಜ, ರಾಜಕಾರಣ, ಶರಣಸಾಹಿತ್ಯ, ನ್ಯಾಯಾಲಯ, ಆರೋಗ್ಯ, ಕೃಷಿ ಮತ್ತು ಜಲಸಂರಕ್ಷಣೆ ನಂತರ ಕೊನೆಯ ದಿನ ಹುಣ್ಣಿಮೆ ಕಾರ್ಯಕ್ರಮ ನಡೆಯುವುದು ಜೊತೆಗೆ ಕೆಲಸ ವಿಷಯಗಳ ಮೇಲೆ ಸಂವಾದವನ್ನು ಸಹ ಏರ್ಪಡಿಸಲಾಗುವುದು.ನ್ಯಾಯಾಲಯ ಮತ್ತು ಸಮಾಜಕ್ಕೆ ಸಂಬಂದಿಸಿದಂತೆ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತ್ತೋಷಕುಮಾರ್ ಹೆಗ್ಡೆ ಹಾಗೂ ನ್ಯಾಯಾಧೀಶ ಕೃಷ್ಣ ದೀಕ್ಷಿತ್ ರು ಉಪನ್ಯಾಸ ನೀಡಲಿರುವರು.
ಗ್ರಾಮ ಮಟ್ಟದಲ್ಲಿ ಸಮಿತಿ ರಚನೆ :
ಎಲ್ಲಾ ಕಾರ್ಯಕ್ರಮ ನಡೆಸಲು ಸಂಪನ್ಮೂಲ ಅಗತ್ಯ ಅದಕ್ಕಾಗಿ ಗ್ರಾಮಪಂಚಾಯಿತಿ ಮಟ್ಟದಲ್ಲಿ ಸಮಿತಿ ರಚನೆ ಮಾಡಲು ಹೆಸರುಗಳನ್ನು ಕ್ರೂಢೀಕರಿಸಲಾಗಿದೆ. ನಿಧಿ ಸಂಗ್ರಹಣೆ ಸಮಿತಿ ಇರುವುದಿಲ್ಲ ತಮ್ಮ ಶಕ್ತಿ ಅನುಸಾರ ದೇಣಿಗೆ ನೀಡಬಹುದು. ತರಳಬಾಳು ಹುಣ್ಣಿಮೆಯಲ್ಲಿ ವೆಚ್ಚವಾಗಿ ಉಳಿದ ಹಣದ 50 ಭಾಗ ಭರಮಸಾಗರದ ಕೆರೆ ಅಭಿವೃದ್ದಿ ಮತ್ತು ಉಳಿದ 50 ಭಾಗ ಹಣವನ್ನು ವಿದ್ಯಾರ್ಥಿಗಳ ಊಟ ವಸತಿಗೆ. ಮೀಸಲಿರಿಸಲಾಗುವುದು ಕೆರೆ ಸುತ್ತಲೂ ವಾಯುವಿಹಾರಕ್ಕಾರಿ ರಸ್ತೆ, ಉದ್ಯಾನವನ, ವಿದ್ಯುತ್ ದೀಪ, ವಿಶ್ರಾಂತಿ ಆಸನಗಳಿಗಾಗಿ ಬಳಸಲಾಗುವುದು, ಈ ವೆಚ್ಚವನ್ನು ಸರ್ಕಾರ ಭರಿಸಿದರೆ ಆ ಹಣವನ್ನು ಆಪಧನ ಎಂದು ನಿರ್ವಹಣೆ ವೆಚ್ಚಕ್ಕೆ ಇಡಲಾಗುವುದು ಇನ್ನುಳಿದ ಅರ್ಧ ಹಣವನ್ನು ಸಿರಿಗೆರೆಯಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ವಿದ್ಯಾರ್ಥಿಗಳಿಗೆ ಊಟ ವಸತಿ ಮೀಸಲಿರಿಸಲಾಗುವುದು. ಕಾರಣ ಕಾರ್ಯಕ್ರಮದ ವೆಚ್ಚ ಮಿತವಾಗಿರಬೇಕು ಎಂದು ಸೂಚಿಸಿದರು.
Sirigere Dr. Shivamurthy Shivacharya Swamiji ರೂ 1 ಕೋಟಿ 26 ಲಕ್ಷ ದೇಣಿಗೆ ವಾಗ್ದಾನ ಸ್ಥಳದಲ್ಲಿ ಸೇರಿದ್ದ ಭರಮಸಾಗರ ಸುತ್ತಮುತ್ತಲ ಹಾಗೂ ಚಿತ್ರದುರ್ಗ ಹೊಳಲ್ಕೆರೆ ಮುಖಂಡರುಗಳು ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ಒಟ್ಟು ರೂ 1 ಕೋಟಿ 26 ಲಕ್ಷ ದೇಣಿಗೆಯ ವಾದ್ಗಾನ ಮಾಡಿದರು.
ವೇದಿಕೆ ನಿರ್ಮಾಣ ಕಾಮಗಾರಿ ತಯಾರಿ: ಈಗಾಗಲೇ ಮಠದ ಇಂಜಿನೀಯರ್ ರವಿ ಸ್ಥಳ ಪರಿಶೀಲನೆ ಮಾಡಿದ್ದು ನಕ್ಷೆ ಪ್ರಕಾರ ವೇದಿಕೆ ಸ್ಥಳ ಕಾಮಗಾರಿ ಆರಂಭವಾಗಿದೆ ಇದಕ್ಕಾಗಿ ಸ್ಥಳೀಯ ಮಟ್ಟದ ಮುಖಂಡರ ಸಮಿತಿ ರಚಿಸಲಾಗಿದೆ.
ವೇದಿಕೆ ನಿರ್ಮಾಣ ಸಮಿತಿಗೆ ಎಸ್ ಎಂ ಎಲ್ ತಿಪ್ಪೇಸ್ವಾಮಿ ಡಿ.ಎಸ್.ಪ್ರವೀಣ್, ಸಿ.ಟಿ.ಮಹಂತೇಶ್, ಶೈಲೇಶ್ ಕುಮಾರ್, ಕಲ್ಲೇಶ್, ನಿರಂಜನ್, ತುರುವನೂರು ಮಲ್ಲಣ್ಣ, ಕೋಗುಂಡೆ ಮಂಜುನಾಥ್, ಸಾಮಿಲ್ ಶಿವಣ್ಣ, ಎಮ್ಮೇಹಟ್ಟಿ ರುದ್ರೇಶ್, ಪ್ರಭು, ಷಮೀಂಪಾಷಾ, ಶಶಿಪಾಟೀಲ್, ತೀರ್ಥಪ್ಪ, ಕೃಷ್ಣಮೂರ್ತಿ ಯವರನ್ನು ಆಯ್ಕೆ ಮಾಡಲಾಯಿತು.
ಶಾಸಕರಾದ ಡಾ.ಎಂ.ಚಂದ್ರಪ್ಪ, ಜಗಳೂರು ಶಾಸಕ ದೇವೇಂದ್ರಪ್ಪ, ಮಾಜಿ ಸಚಿವ ಹೆಚ್. ಆಂಜನೇಯ ಸೇರಿದಂತೆ ಹೋಬಳಿಯ ಮುಖಂಡರು ಉಪಸ್ಥಿತರಿದ್ದರು.
ಸಿರಿಗೆರೆಯ ಶ್ರೀ ಗುರುಶಾಂತೇಶ್ವರ ದಾಸೋಹ ಭವನದಲ್ಲಿ ಗುರುವಾರ ಸಂಜೆ ನಡೆದ ಭರಮಸಾಗರ ತರಳಬಾಳು ಹುಣ್ಣಿಮೆ ಪೂರ್ವಭಾವಿ ಸಭೆಯಲ್ಲಿ ಡಾ.ಶಿವಮೂರ್ತಿ ಶಿವಾಚಾರ್ಯ ಮಾತನಾಡಿದರು. ಶಾಸಕರಾದ ಡಾ.ಎಂ.ಚಂದ್ರಪ್ಪ, ದೇವೇಂದ್ರಪ್ಪ, ಮಾಜಿ ಸಚಿವ ಹೆಚ್.ಆಂಜನೇಯ, ಎಸ್ ಎಂ ಎಲ್ ತಿಪ್ಪೇಸ್ವಾಮಿ, ಶಶಿಪಾಟೀಲ್, ಸಿರಿಗೆರೆ ನಾಗರಾಜ್, ಸಾಮಿಲ್ ಶಿವಣ್ಣ, ಡಿ.ಎಸ್.ಪ್ರವೀಣ್, ತೀರ್ಥಪ್ಪ, ಕೋಗುಂಡೆ ದ್ಯಾಮಣ್ಣ, ಸಿ.ಟಿ.ಮಹಂತೇಶ್, ಶೈಲೇಶ್ ಕುಮಾರ್, ಕಲ್ಲೇಶ್, ನಿರಂಜನ್, ತುರುವನೂರು ಮಲ್ಲಣ್ಣ, ಕೋಗುಂಡೆ ಮಂಜುನಾಥ್, ಎಮ್ಮೇಹಟ್ಟಿ ರುದ್ರೇಶ್, ಪ್ರಭು, ಷಮೀಂಪಾಷಾ, ಶಶಿಪಾಟೀಲ್, ಶಾಂತಾ ಅಶೋಕ್ ಇದ್ದರು.
2 ಲಕ್ಷಕ್ಕೂ ಅಧಿಕ ಭಕ್ತ ಸಮೂಹ ಬರುವ ನಿರೀಕ್ಷೆ
- ಮುಖ್ಯವಾಗಿ ತರಳುಭಾಳು ಹುಣ್ಣಿಮೆ ಕಾರ್ಯಕ್ರಮಕ್ಕೆ 2 ಲಕ್ಷಕ್ಕೂ ಅಧಿಕ ಭಕ್ತ ಸಮೂಹ ಬರುವ ಕಾರಣ ಸುರಕ್ಷತಾ ದೃಷ್ಠಿಯಿಂದ ಸುಮಾರು 900 ಎಕರೆ ಜಾಗದಲ್ಲಿ ತುಂಬಿ ತುಳುಕುತ್ತಿರುವ ಚಿತ್ರದುರ್ಗ ಜಿಲ್ಲೆಯ ಹೆಸರಾಂತ ಬಿಚ್ಚುಗತ್ತಿ ಭರಮಣ್ಣ ನಾಯಕ ರೈತರಿಗಾಗಿ ಕಟ್ಟಿಸಿರುವ ಪುರಾತನ ಭರಮಸಾಗರದ ಭರಮಣ್ಣ ನಾಯಕರು ಕಟ್ಟಿಸಿ ಕೆರೆ ಏರಿಯಲ್ಲಿ ಈಗಾಗಲೆ ಎರಡು ಸಾವು ಸಂಬವಿಸಿದೆ ಸುರಕ್ಷತೆಗಾಗಿ ಕಾರ್ಯಕ್ರಮದ ಮುಂಚೆ ಕೆರೆಯ ಏರಿಯ ಸುತ್ತ ತಡೆ ಗೋಡೆ ನಿರ್ಮಣ ಮಾಡಬೇಕಾಗಿದೆ. ಕೆರೆ ಒತ್ತುವರಿ ತಡೆಯುವುದು ಮತ್ತು ತೆರವುಗೊಳಿಸುವುದು. ಗಡಿ ಕಂಬ ಹಾಕಿ ಸುತ್ತಲೂ ಬೇಲಿ ನಿರ್ಮಿಸುಬೇಕಾಗಿದೆ.
- ಸಂಬಂಧಪಟ್ಟ ಇಲಾಖೆ, ಸ್ಥಳೀಯ ಸಂಸ್ಥೆ ಇಲ್ಲವೇ ಅಭಿವೃದ್ಧಿ ಪ್ರಾಧಿಕಾರಗಳ ನೆರವಿನೊಂದಿಗೆ ಕೆರೆಗಳನ್ನು ಸಂರಕ್ಷಣೆ ಮಾಡಿ ಜಲ ಮರುಪೂರಣಗೊಳಿಸಲು ಅಭಿವೃದ್ಧಿಪಡಿಸುವ ಕಾರ್ಯ ಹಾಗೆಯೇ ಉಳಿದಿದೆ.
- ಕೆರೆಗಳ ಪರಿಸರ ಹಾನಿ ಕುರಿತು ಅಧ್ಯಯನ ಕೈಗೊಳ್ಳುವುದು.
- ಜಲಾನಯನ ಇಲಾಖೆ ಸಹಾಯದಿಂದ ಕೆರೆಗಳು ಮತ್ತು ಸುತ್ತಲಿನ ಪ್ರದೇಶದ ನಕ್ಷೆ ತಯಾರಿಸುವುದು ಮತ್ತು ಅಂಕಿ ಅಂಶ ಸಂಗ್ರಹಿಸುವುದು.
- ಕೆರೆಗಳ ಅಭಿವೃದ್ಧಿಗೆ ಸಮಗ್ರ ಯೋಜನೆ ರೂಪಿಸುವುದು, ಅಂತರ್ಜಲ ಮಟ್ಟ ವೃದ್ಧಿಸಲು ಕ್ರಮಕೈಗೊಳ್ಳುವುದು.
- ವಿಷಕಾರಿ, ರಾಸಾಯನಿಕಯುಕ್ತ ಕೊಳಚೆ ನೀರು ಕೆರೆಗೆ ಹರಿಯದಂತೆ ತಡೆಯುವುದು. ಜಲ ಸಸ್ಯಗಳು, ಪಕ್ಷಿಗಳು ಮತ್ತು ಜೀವವೈವಿಧ್ಯಕ್ಕೆ ಧಕ್ಕೆಯಾಗದಂತೆ ಎಚ್ಚರವಹಿಸುವುದು.
- ಕೆರೆ ಏರಿಯ ಮಣ್ಣಿನ ಸಂರಕ್ಷಣೆ ಮಾಡಲು ಕೆರೆ ಸುತ್ತಲಿನ ಜಾಗದಲ್ಲಿ ಅರಣ್ಯೀಕರಣಗೊಳಿಸುವುದು.
- ಕೆರೆ ನೀರಿನ ಗುಣಮಟ್ಟ ನಿರ್ವಹಣೆ ಮತ್ತು ಸುಧಾರಣೆಗೆ ಕ್ರಮ ತೆಗೆದುಕೊಳ್ಳುವುದು. ಗೃಹ ಮತ್ತು ಕಾರ್ಖಾನೆಗಳ ನೀರು ಕೆರೆ ಸೇರದಂತೆ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು.
- ಕೆರೆಗಳ ಸಂರಕ್ಷಣೆ ವಿಚಾರದಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು. ಸಮುದಾಯ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಪಾಲ್ಗೊಳ್ಳುವಿಕೆ ಪ್ರೋತ್ಸಾಹಿಸುವುದು.
- ದೋಣಿ ವಿಹಾರ ಪ್ರಾರಂಬಿಸಿ ಸ್ಥಳೀಯರಿಗೆ ದುಡಿಮೆಗೆ ಅವಕಾಶ ಮಾಡಬೇಕಾಗಿದೆ.
- ಪ್ರವಾಸೋದ್ಯಮ ಇಲಾಖೆಗೆ ಹೆಚ್ಚಿನ ಒತ್ತನ್ನು ನೀಡಿ ಈ ಜಾಗವನ್ನು ಪ್ರವಾಸಿ ತಾಣವನ್ನಾಗಿ ಮಾಡಿ ಜನರ ಆಕರ್ಷಣೆ ಮಾಡುವುದು.
- ಬಹಳ ಮುಖ್ಯ ಎಂದರೆ ಈ ಕೆರೆ ಕಟ್ಟಿಸಿ ಮಾಡಿದ ಬಿಚ್ಚುಗತ್ತಿ ಭರಮಣ್ಣನ ನಾಯಕನ ಕಂಚಿನ ವಿಗ್ರಹವನ್ನು ಕೆರೆಯ ಏರಿ ಅಥವಾ ಸರ್ಕಲ್ ನಲ್ಲಿ ಮಾಡಿಸಿ ಶ್ರೀ ಶ್ರೀ ಸಿರಿಗೆರೆಯ ಗುರುಗಳ ಕೈಯಿಂದ ಅನಾವರಣ ಮಾಡಿಸುವುದು.
ವರದಿ
ಮುರುಳೀಧರ್ ನಾಡಿಗೇರ್
Guarantee scheme ಗ್ಯಾರಂಟಿ ಯೋಜನೆಗಳು ಬಡಕುಟುಂಬಗಳಿಗೆ ಆಸರೆಯಾಗಿವೆ- ಮಧು ಬಂಗಾರಪ್ಪ
Guarantee scheme ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳು ಬಡ ಕುಟುಂಬಗಳಿಗೆ ಆಸರೆಯಾಗಿ ನಿಂತಿವೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ಹೇಳಿದರು.
ಸೊರಬದ ಬ್ಲಾಕ್ ವ್ಯಾಪ್ತಿಯ ವಿವಿಧ ಇಲಾಖೆಗಳ 25 ಕಾಮಗಾರಿಗಳು ಮತ್ತು 58 ಕಾಮಗಾರಿಗಳ ಶಂಕುಸ್ಥಾಪನೆ (ಒಟ್ಟು 56.34ಕೋಟಿ ಮೊತ್ತದ)
ಹಾಗೂ ತಾಲ್ಲೂಕು ಗ್ಯಾರಂಟಿ ಅನುಷ್ಟಾನ ಸಮಿತಿ ಕಚೇರಿ , ತಾಲ್ಲೂಕು ಬಗರ್ ಹುಕುಂ ಸಮಿತಿ ಕಚೇರಿ ಹಾಗೂ ಸೊರಬ ಪ್ರಥಮ ದರ್ಜೆ ಕಾಲೇಜಿನ ಹೊಸ ಕಟ್ಟಡ ಕಾಮಗಾರಿಗಳನ್ನು ಶುಕ್ರವಾರದಂದು ಉದ್ಘಾಟಿಸಿ ಅವರು ಮಾತನಾಡಿದರು.
ಪಂಚ ಗ್ಯಾರಂಟಿ ಯೋಜನೆಗಳು ಆರ್ಥಿಕತೆ ರೂಪದಲ್ಲಿ, ಆಹಾರವಾಗಿ, ಬಡವರ ಮನೆಗಳ ಜ್ಯೋತಿಯಾಗಿ ಬೆಳಗುತ್ತಿವೆ. ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಖಜಾನೆ ಖಾಲಿಯಾಗಲ್ಲ. ಬದಲಾಗಿ ಅದು ಅಕ್ಷಯ ಪಾತ್ರೆ. ಗೃಹಜ್ಯೋತಿಯಡಿ ಉಚಿತ ವಿದ್ಯುತ್, ಗೃಹಲಕ್ಷ್ಮಿಅಡಿಯಲ್ಲಿ ಮನೆ ಯಜಮಾನಿಗೆ ಪ್ರತಿ ತಿಂಗಳು ರೂ.2000 , ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣ, ಯುವನಿಧಿ ಯೋಜನೆಯಡಿ ೧೭ ಲಕ್ಷ ವಿದ್ಯಾರ್ಥಿಗಳು ಸೌಲಭ್ಯ ನೀಡಲಾಗಿದೆ. ಅನ್ನಭಾಗ್ಯ ಯೋಜನೆಯಡಿ ೫ ಕೆಜಿ ಅಕ್ಕಿ ಹಾಗೂ ಬಾಕಿ 5 ಕೆಜಿ ಅಕ್ಕಿ ಬದಲು ಹಣವನ್ನು ಸಂದಾಯ ಮಾಡಲಾಗುತ್ತಿದ್ದು
ರಾಜ್ಯದ ಬಡ ಜನತೆಯ ಏಳ್ಗೆಗೆ ಗ್ಯಾರಂಟಿ ಯೋಜನೆ ಸಹಕಾರಿಯಾಗಿದೆ ಎಂದರು.
ಶಂಕುಸ್ಥಾಪನೆಯಾದ ಕಾಮಗಾರಿಗಳ ಕೆಲಸವನ್ನು ನಾಳೆಯಿಂದನೇ ಆರಂಭಿಸಬೇಕು. ಗುಣಮಟ್ಟದ ಕಾಮಗಾರಿಗಳು ಆಗಬೇಕು. ಎಲ್ಲ ಗ್ರಾಮಗಳಿಗೆ ನಾನೇ ವೈಯಕ್ತಿಕ ವಾಗಿ ಭೇಟಿ ನೀಡುತ್ತೇನೆ.
ಸೊರಬ ತಾಲ್ಲೂಕಿನಲ್ಲಿ ಮುಂದಿನ ಜನವರಿ ಒಳಗೆ ರೂ. 200 ಕೋಟಿ ಮೊತ್ತದಲ್ಲಿ ಸುಮಾರು ೧೭೯ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು.
ಮಾಜಿಮುಖ್ಯಮಂತ್ರಿಗಳಾದ ಬಂಗಾರಪ್ಪನವರು ಜಾರಿ ಮಾಡಿದ ಪಂಪ್ ಸೆಟ್ ವಿತರಣೆ ಯೋಜನೆಯಡಿ ರೈತರಿಗೆ ಉಚಿತವಾಗಿ ನೀಡಲಾಗುತ್ತಿದೆ.
Guarantee scheme ಪ್ರಸ್ತುತ ಸರ್ಕಾರ ಪ್ರತಿ ಗ್ರಾ.ಪಂ ಗೆ ಅಭಿವೃದ್ದಿ ಕೆಲಸಗಳಿಗೆ ರೂ. ೮ ರಿಂದ ೯ ಕೋಟಿ ಹಣ ನೀಡುತ್ತಿದೆ.
ಸೊರಬದಲ್ಲಿ ಶೀಘ್ರದಲ್ಲೇ ಜೆಜೆಎಂ ಯೋಜನೆಯಡಿ ಶರಾವತಿ ನದಿಯಿಂದ ೨೪ ತಾಸು ಕುಡಿಯುವ ನೀರು ಒದಗಿಸಲಾಗುವುದು.
೯೬೦ ಕೋಟಿ ಕೆರೆ ತುಂಬಿಸುವ ಯೋಜನೆಯನ್ನೂ ಶೀಘ್ರದಲ್ಲೇ ಅನುಷ್ಟಾನಗೊಳಿಸಲಾಗುವುದು. ಜಿಲ್ಲೆಯಲ್ಲಿಅಭಿವೃದ್ಧಿ ಕೆಲಸಗಳು ಭರದಿಂದ ಸಾಗಲಿವೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷ ರವಿಕಯಮಾರ್ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು, ಅನೇಕ ಯೋಜನೆಗಳು ಮತ್ತು ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳು, ಹಿಂದುಳಿದ ವರ್ಗಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಂದ್ರಭೂಪಾಲ್ ಮಾತನಾಡಿ, ಜಿಲ್ಲೆಯಲ್ಲಿ ಗೃಹಲಕ್ಷ್ಮಿಯೋಜನೆಯಡಿ ರೂ.7.60 ಕೋಟಿ ಪ್ರತಿ ತಿಂಗಳು ಸಂದಾಯವಾಗುತ್ತಿದೆ. ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಯು ಶೇ.85 ಸಾಧನೆ ಮಾಡಲಾಗಿದ್ದು, ಶೇ.100 ಸಾಧನೆ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಸಚಿವರು ಕಾರ್ಮಿಕ ಕಿಟ್, ಮೀನುಗಾರಿಕೆ ಇಲಾಖೆ ಸಲಕರಣೆ ಕಿಟ್, ಹರಿಗೋಲು, ಮಕ್ಕಳಿಗೆ ಶಾಲಾ ಬ್ಯಾಗ್, ಪ.ಜಾತಿ, ಪ.ಪಂ ಗಳ ಫಲಾನುಭವಿಗಳಿಗೆ ಬೋರ್ ವೆಲ್ ಪಂಪ್ ಸೆಟ್ ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ಮುಖಂಡರು, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರ ತಾಲ್ಲೂಕು ಸಮಿತಿ ಪದಾಧಿಕಾರಿಗಳು, ಬಗರ್ ಹುಕುಂ ಸಮಿತಿ ಪದಾಧಿಕಾರಿಗಳು, ಅಧಿಕಾರಿಗಳು, ಫಲಾನುಭವಿಗಳು ಪಾಲ್ಗೊಂಡಿದ್ದರು.
ಕಾಮಗಾರಿಗಳ ವಿವರ:
- ಸೊರಬ ಪುರಸಭೆ ವ್ಯಾಪ್ತಿಯ ಸಂತೆ ಮೈದಾನ ಅಭಿವೃದ್ಧಿ ಕಾಮಗಾರಿಯ ಉದ್ಘಾಟನೆ (ಅಂದಾಜು ಮೊತ್ತ: 500.00 ಲಕ್ಷಗಳು)
- ಸೊರಬ ಪುರಸಭೆ ವ್ಯಾಪ್ತಿಯ ಬಂಗಾರಪ್ಪ ಕ್ರೀಡಾಂಗಣ ಅಭಿವೃದ್ಧಿ ಕಾಮಗಾರಿಯ ಉದ್ಘಾಟನೆ (ಅಂದಾಜು ಮೊತ್ತ: 250.00 ಲಕ್ಷಗಳು)
- ಸೊರಬ ಪುರಸಭೆ ವ್ಯಾಪ್ತಿಯ ರಂಗನಾಥ ದೇವಸ್ಥಾನದ ಪಕ್ಕದಲ್ಲಿ ಗಾಂಧಿ ಪಾರ್ಕ್ ಅಭಿವೃದ್ಧಿ ಕಾಮಗಾರಿಯ ಉದ್ಘಾಟನೆ (ಅಂದಾಜು ಮೊತ್ತ: 100.00 ಲಕ್ಷಗಳು)
- ಸೊರಬ ತಾಲ್ಲೂಕು ಗುಡುವಿ ಗ್ರಾಮದ ಬಳಿ ದಂಡಾವತಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾಮಗಾರಿಯ ಉದ್ಘಾಟನೆ (ಗ್ರಾಮೀಣ ರಸ್ತೆ) (ಅಂದಾಜು ಮೊತ್ತ: 450.00 ಲಕ್ಷಗಳು)
- ಸೊರಬ ತಾಲ್ಲೂಕು ಸೊರಬ ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್, ಕಾಲೇಜಿಗೆ ಎಐಸಿಟಿ ನಿಯಮ ಹೆಚ್ಚುವರಿ ಕೊಠಡಿ, ವರ್ಕಶಾಪ್ ಮತ್ತು ಪ್ರಯೋಗಾಲಯ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ (ಅಂದಾಜು ಮೊತ್ತ:400.00 ಲಕ್ಷಗಳು)
- ಸೊರಬ ತಾಲ್ಲೂಕು ಲಕ್ಕಾಪುರದಿಂದ ಅಂಕರವಳ್ಳಿ ಸೇರುವ ರಸ್ತೆ ರಾ.ಹೆ ಸಿ-22 ರಾ.ಹೆ 282 ಸರಪಳಿ: 28.40 ಕಿ.ಮೀ ನಲ್ಲಿ ಕೊರೆದ ಮೋರಿ ದುರಸ್ಥಿ ಕಾಮಗಾರಿಯ ಶಂಕುಸ್ಥಾಪನೆ (ಅಂದಾಜು ಮೊತ್ತ: 25.00 ಲಕ್ಷಗಳು)
- ಸೊರಬ ತಾಲ್ಲೂಕು ಹೆಜ್ಜೆ ಗ್ರಾಮ ಪಂಚಾಯಿತಿ ಸರ್ವೆ ನಂ.23 ರ ಪಕ್ಕ ಗೌರಿ ಹಳ್ಳಕ್ಕೆ ಸಂಪರ್ಕ ಕಲ್ಪಿಸುವ ಹಳ್ಳಕ್ಕೆ ಕಾಲುಸಂಕ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ (ಅಂದಾಜು ಮೊತ್ತ: 22.00 ಲಕ್ಷಗಳು)
- ಸೊರಬ ತಾಲ್ಲೂಕು ಭಟ್ಕಳ-ಸೊರಬ ರಾಜ್ಯ ಹೆದ್ದಾರಿ-50 ಸರಪಳಿ: 130.70 ಕಿ.ಮೀ. ಯಲ್ಲಿ ಮಳೆಯಿಂದ ಹಾನಿಯಾದ ರಸ್ತೆಗೆ ತಡೆಗೋಡೆ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ (ಅಂದಾಜು ಮೊತ್ತ: 30.00 ಲಕ್ಷಗಳು)
- ಸೊರಬ ತಾಲ್ಲೂಕು ಮಾವಲಿ-ಕಡಸೂರು ಜಿ.ಮು ರಸ್ತೆ ಸರಪಳಿ: 5.40 ಕಿ.ಮೀರಲ್ಲಿ ಡೆಕ್‌ಸ್ಟ್ರಾಬ್ ಮೋರಿ ಪುನರ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ (ಅಂದಾಜು ಮೊತ್ತ: 25.00 ಲಕ್ಷಗಳು)
- ಸೊರಬ ತಾಲ್ಲೂಕು ಸಿರ್ಸಿ-ಹೊಸನಗರ ರಾ.ಹೆ.-77 ರಸ್ತೆಯ ಸರಪಳಿ 42.65 ಕಿ.ಮೀ. ರಲ್ಲಿ ಬಾಕ್ಸ್ ಕಲ್ವರ್ಟ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ.
(ಅಂದಾಜು ಮೊತ್ತ: 45.00 ಲಕ್ಷಗಳು)
