Tuesday, April 29, 2025
Tuesday, April 29, 2025

Akhila Bharathiya Kannada Sahitya Sammelana ಕನ್ನಡಿಗರಿಗೆ ಕೈಗಾರಿಕಾಕ್ಷೇತ್ರ ಹೆಚ್ಚು ಉದ್ಯೋಗಾವಾಕಾಶ ನೀಡಬೇಕು- ಗೊರುಚ

Date:

Akhila Bharathiya Kannada Sahitya Sammelana ಮಂಡ್ಯದಲ್ಲಿ 87ನೇ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿಯಿಂದ ಚಾಲನೆಗೊಂಡಿತು. ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿರುವ ಜಾನಪದ ವಿದ್ವಾಂಸ ಹಾಗೂ ಹಿರಿಯ ಚಿಂತಕ ಶ್ರೀ ಗೊ.ರು. ಚನ್ನಬಸಪ್ಪ ಅವರನ್ನು ಸಕಲ ಗೌರವಗಳ ಮೂಲಕ ಮೆರವಣಿಗೆಯಲ್ಲಿ ಸಮ್ಮೇಳನದ ಪ್ರಧಾನ ವೇದಿಕೆಗೆ ಕರೆತರಲಾಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿಸರ್ಗದತ್ತ ಅಡಿಕೆ ವೃಕ್ಷದ ಇಂಗಾರವನ್ನು ತೆರೆಯುವುದರ ಮೂಲಕ ಮೂರು ದಿನಗಳ ವೈಭವದ ಸಾಹಿತ್ಯ ಕನ್ನಡ ನುಡಿ ಜಾತ್ರೆಗೆ ವಿಧ್ಯುಕ್ತ ಚಾಲನೆ ನೀಡಿದರು.

ಈ ಸಮ್ಮೇಳನದಲ್ಲಿ ಸಮಾನಾಂತರ ವೇದಿಕೆಗಳಲ್ಲಿ ವಿವಿಧ ಗೋಷ್ಠಿಗಳು ಏರ್ಪಾಡಾಗಿವೆ. ವಿಶೇಷವೆಂದರೆ ದೃಷ್ಟಿ ವಿಶೇಷ ಚೇತನ ಕವಿಗಳಿಗೆ ಗೋಷ್ಠಿಯನ್ನು ಏರ್ಪಡಿಸಲಾಗಿದೆ. ಸಾಂಪ್ರದಾಯಕವಾಗಿ ಪೂರ್ಣ ಕುಂಭವನ್ನ ಬಿಟ್ಟು ಪುಸ್ತಕಗಳನ್ನ ಹೊತ್ತು ಮಹಿಳೆಯರು ಸಾಗಿ ಬಂದರು.

ರಾಜಮಾತೆ ಕೆಂಪನಜ್ಜಂಮಣ್ಣಿ ಮತ್ತು ರಾಜರ್ಷಿ ನಾಲ್ವಡಿ ಕೃಷ್ಣ ರಾಜ ಒಡೆಯರ್ ನಾಮಾಂಕಿತ ಪ್ರಧಾನ ವೇದಿಕೆಯಲ್ಲಿ ಸಮ್ಮೇಳನ ಉದ್ಘಾಟನೆಗೊಂಡಿತು.

ಭಾಷೆಯ ಅಳಿವು ಮತ್ತು ಉಳಿವು ಆಯಾ ಭಾಷೆಯ ಸಮುದಾಯದ ಕೈಯಲ್ಲಿದೆ. ಭಾಷೆ ಬೆಳೆಯುವುದು ಮತ್ತು ಉಳಿಯುವುದು ಅದು ಬಳಕೆಯಾದಾಗ ಮಾತ್ರ. ನುಡಿ ಬಿಡಲಾಗದು ಬಿಟ್ಟರೆ ನಾಡು ಬಿಟ್ಟಂತೆ ಎಂಬ ಕುವೆಂಪು ವಾಣಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ ಸ್ಮರಿಸಿಕೊಂಡರು.

Akhila Bharathiya Kannada Sahitya Sammelana ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ ಅಗತ್ಯವಾಗಿದೆ. ಅದರ ಮೂಲಕ ನಮ್ಮ ಮಾತೃಭಾಷೆಯನ್ನು ಉಳಿಸಲು ಪ್ರಯತ್ನ ಮಾಡಬಹುದು. ಪ್ರಸ್ತುತ ವೈದಿಕ ಮಾದರಿಯ ಶಿಕ್ಷಣ ವ್ಯವಸ್ಥೆ ಉಪಯೋಗವಿಲ್ಲದಾಗಿದೆ. ಬದಲಾವಣೆ ಮಾಡಿದರೆ ಮಾತ್ರ ಕನ್ನಡದಲ್ಲಿ ವೀವೇಚಿಸುವ ಸಂಶೋಧಿಸುವ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಬಳಸುವ ಭಾಷೆಯಾಗಿ ಕನ್ನಡ ಬೆಳೆಯುತ್ತದೆ ಎಂದರು.

ಸಮ್ಮೇಳನದ ಸರ್ವಾಧ್ಯಕ್ಷ ಗೋರು ಚನ್ನಬಸಪ್ಪ ಅವರು ತಮ್ಮ ಭಾಷಣದಲ್ಲಿ 21 ಹಕ್ಕೊತ್ತಾಯಗಳನ್ನ ಅಡಕ ಗೊಳಿಸಿದ್ದಿದ್ದು, ಅವರ ನೇರ ದಿಟ್ಟ ಅಭಿಪ್ರಾಯಗಳಿಗೆ ಕನ್ನಡಿ ಹಿಡಿದಂತಿತ್ತು. ಸರ್ಕಾರಕ್ಕೆ ಈ ಹಕ್ಕೊತ್ತಾಯಗಳ ಮೂಲಕ ಕನ್ನಡ ಉಳಿಸಿ ಬೆಳೆಸಲು ಆಗ್ರಹ ಪಡಿಸಿದರು.

ಎಸ್ ಎಸ್ ಎಲ್ ಸಿ ವರೆಗೆ ಕನ್ನಡ ಭಾಷೆ ಮಾಧ್ಯಮದ ಭಾಷೆಯಾಗಲಿ ಎಂಬುವುದು ಅವರ ಭಾಷಣದ ಪ್ರಧಾನ ಅಂಶವಾಗಿತ್ತು. ಕನ್ನಡ ಶಾಸ್ತ್ರೀಯ ಭಾಷಾ ಕೇಂದ್ರವನ್ನು ಸ್ವಾಯತ್ತ ಕೇಂದ್ರವನ್ನಾಗಿ ಬಳಸಬೇಕು. ಅದರ ಉನ್ನತಿಗೆ ಉದಾರ ಧನ ಸಹಾಯ ಮಾಡಬೇಕು. ಹಂಪಿ ಕನ್ನಡ ಮತ್ತು ಜಾನಪದ ವಿವಿಗೆ ಸಾಕಷ್ಟು ಬೋಧನಾ ಸಿಬ್ಬಂದಿ ಮತ್ತು ಹಣಕಾಸು ಅನುದಾನವನ್ನು ಕೂಡಲೇ ನೀಡಬೇಕು.

ರಾಜ್ಯದ ಬಜೆಟ್ಟಿನಲ್ಲಿ ಶೇಕಡ 15ರಷ್ಟು ಭಾಗವನ್ನು ಶಿಕ್ಷಣಕ್ಕೆ ಮೀಸಲಿಡಬೇಕು. ಕೈಗಾರಿಕಾ ಕ್ಷೇತ್ರದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಹೆಚ್ಚು ಸಿಗುವಂತೆ ಕಾನೂನು ಕ್ರಮ ಕೈಗೊಳ್ಳಬೇಕು. ಗಡಿ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಸಂಬಂಧಿತ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಕರೆಯಬೇಕು.

ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಮುಂತಾಗಿ ಪ್ರಾದೇಶಿಕ ಅಸಮಾನತೆಯನ್ನು ಸರಿಪಡಿಸಬೇಕು. 12ನೇ ಶತಮಾನದ ಶರಣರ ಕ್ಷೇತ್ರಗಳ ಅಭಿವೃದ್ಧಿಗೆ ಪ್ರಾಧಿಕಾರವನ್ನು ಸ್ಥಾಪಿಸಬೇಕು. ಯಾವುದೇ ಕಾರಣಕ್ಕೂ ಪ್ರಾದೇಶಿಕ ಭಾಷೆಗಳ ಮೇಲೆ ಹಿಂದಿ ಹೇರಿಕೆಗೆ ಅವಕಾಶ ಕೊಡಕೂಡದು . ಮುಂತಾಗಿ ಅವರ ಭಾಷಣದಲ್ಲಿ ಭಾಷೆಗಳು ಪ್ರಧಾನವಾಗಿ ಕಂಡುಬಂದವು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Yadav School of Chess Institute ಯಾದವ ಸಂಸ್ಥೆಯಿಂದ ಚೆಸ್ ತರಬೇತಿ ಶಿಬಿರ

Yadav School of Chess Institute ರವೀದ್ರನಗರದ ಯಾದವ ಸ್ಕೂಲ್ ಆಫ್...

Shivaganga Yoga Center ನಗರದ ಅತಿದೊಡ್ಡ ಬಾಡಾವಣೆಗಳಿಗೆ ₹140 ಕೋಟಿ ಅನುದಾನದಿಂದ ಅಭಿವೃದ್ಧಿ- ವಿಶ್ವಾಸ್

Shivaganga Yoga Center ಶಿವಗಂಗಾ ಯೋಗ ಕೇಂದ್ರದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ...

Sarva Samriddhi Sadhana Center ರಿಪ್ಪನ್ ಪೇಟೆ ಮೂಗುಡ್ತಿ ಸರ್ವಸಮೃದ್ಧಿ ಸಾಧನಾ ಕೇಂದ್ರದಲ್ಲಿ ಮಕ್ಕಳಿಗಾಗಿ ಸಂಸ್ಕಾರ ಶಿಬಿರ

Sarva Samriddhi Sadhana Center ಹೊಸನಗರದ ರಿಪ್ಪನ್‌ಪೇಟೆ ಮೂಗುಡ್ತಿ ಸರ್ವಸಮೃದ್ಧಿ ಸಾಧನಾ...