Thursday, June 19, 2025
Thursday, June 19, 2025

Govt First Grade College ಸಾಹಿತ್ಯ, ಸಂಗೀತ ಕಲೆನೃತ್ಯ ನಾಟಕಾದಿಗಳು ಸುಸಂಸ್ಕೃತ ಸಮಾಜದ ಸಾಕ್ಷಿ ಪ್ರಜ್ಞೆಗಳು- ಡಾ.ಎಚ್ .ಬಿ.ಮಂಜುನಾಥ್

Date:

Govt First Grade College ಸಾಹಿತ್ಯ ಸಂಗೀತ ಕಲೆ ನೃತ್ಯ ನಾಟಕಾದಿಗಳು ಸುಸಂಸ್ಕೃತ ಸಮಾಜದ ಸಾಕ್ಷಿ ಪ್ರಜ್ಞೆಗಳಂತಿದ್ದು ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ಸ್ಥಳ ಇತಿಹಾಸ ಹಾಗೂ ದೇಶಕಾಲಗಳ ಮಾಹಿತಿಯೂ ಒಂದು ಪ್ರಕಾರವಾಗಿದೆ ಎಂದು ಹಿರಿಯ ಪತ್ರಕರ್ತ ಡಾ.ಎಚ್ ಬಿ ಮಂಜುನಾಥ ಅಭಿಪ್ರಾಯ ಪಟ್ಟರು.

ದಾವಣಗೆರೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಾಡಾಗಿದ್ದ ಸಾಹಿತಿ ಗಿರಿಜಾ ದತ್ತಿ ಉಪನ್ಯಾಸದಲ್ಲಿ ಗಿರಿಜಾರವರ ಸಾಹಿತ್ಯ ಸಾಧನೆ ಕುರಿತು ಮಾತನಾಡುತ್ತಾ ಭವಿಷ್ಯದ ಜಗತ್ತಿನ ಚಲಾವಣಾ ದ್ರವ್ಯವೆಂದರೆ ಜ್ಞಾನ ಸಾಮರ್ಥ್ಯ ಹಾಗೂ ಮಾಹಿತಿ ಆಗಲಿದ್ದು ಸ್ಥಳೀಯವಾದ ದೇಶಕಾಲಗಳ ಮಾಹಿತಿ ಗಳನ್ನು ಗ್ರಂಥ ರೂಪದಲ್ಲಿ ಒದಗಿಸಿಕೊಡುವುದು ಸುಲಭ ಸಾಧ್ಯವಲ್ಲ, ಟಿ ಗಿರಿಜಾ ರವರು ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯ ಕುರಿತಾಗಿ ಈ ಮಹತ್ಕಾರ್ಯ ಮಾಡಿದ್ದು ಆ ಗ್ರಂಥಗಳು ಇವತ್ತಿಗೂ ಎಲ್ಲರಿಗೂ ಆಕರ ಗ್ರಂಥಗಳಾಗಿವೆ ಎಂದರಲ್ಲದೆ ಕಾದಂಬರಿ ಕಥೆ ಕಾವ್ಯ ಕವನಗಳು ಮಾನುಷ ಭಾವನೆಗಳ ಮೇಲಾಟಗಳ ಪ್ರಧಾನವಾಗಿದ್ದರೆ ಇತಿಹಾಸ ಸಾಹಿತ್ಯವು ಸತ್ಯನಿಷ್ಠ ವಾಗಿರಬೇಕು, ಇತಿಹಾಸ ಸಾಹಿತ್ಯದಲ್ಲಿ ಸತ್ಯಕ್ಕೆ ಅಗ್ರ ಪೂಜೆ, ಸೌಂದರ್ಯಕ್ಕೆ ನಂತರದ ಅವಕಾಶ ಎಂಬ ಎಸ್ ಎಲ್ ಭೈರಪ್ಪನವರ ಮಾತನ್ನು ಉದಾಹರಿಸುತ್ತಾ ಇಲ್ಲಿ ಭಾಷಾ ಪ್ರೌಢಿಮೆಗಿಂತ ಅಲಂಕಾರ ಕ್ಕಿಂತ ವಸ್ತುನಿಷ್ಠ ಮಾಹಿತಿ ಮುಖ್ಯವಾಗಿರುತ್ತದೆ, ದೈನಂದಿನ ಬದುಕು ವ್ಯವಹಾರಗಳಿಗೆ ಬೇಕಾದ ಮಾಹಿತಿ ಒದಗಿಸುವ ಸಾಹಿತ್ಯವೂ ಅವಶ್ಯ, ಮಾಹಿತಿ ಇಲ್ಲದಿದ್ದರೆ ಮನುಷ್ಯ ಅಸಹಾಯಕನಾಗುತ್ತಾನೆ ಎಂಬ ಹಾ.ಮಾ. ನಾಯಕರ ಅಭಿಪ್ರಾಯವನ್ನೂ ಮಂಜುನಾಥ್ ಉಲ್ಲೇಖಿಸಿದರು. Govt First Grade College ಕಾದಂಬರಿ ಕಥೆ ನಾಟಕ ವೈಚಾರಿಕ ಲೇಖನ ವಿಮರ್ಶೆಗಳಿಗೂ ಸಿದ್ಧ ಹಸ್ತ ರಾಗಿದ್ದ ಗಿರಿಜಾ ರವರು ಮಾಹಿತಿಯುಕ್ತ ಗ್ರಂಥಗಳನ್ನು ಕೊಟ್ಟು ಸಮಾಜಕ್ಕೆ ಮಹದುಪಕಾರ ಮಾಡಿದ್ದಾರೆ ಎಂದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದತ್ತಿನಿಧಿ ಸ್ಥಾಪಕರು ಬರಹಗಾರ್ತಿಯೂ ಆದ ಟಿ ಎಸ್ ಶೈಲಜಾ ರವರು ಟಿ ಗಿರಿಜಾ ರವರ ‘ದಾವಣಗೆರೆ ಇದು ನಮ್ಮ ಜಿಲ್ಲೆ’ ಗ್ರಂಥಕ್ಕಿರುವ ಬೇಡಿಕೆ ಹಾಗೂ ಮೌಲ್ಯವನ್ನು ಗಮನಿಸಿ ಅದನ್ನು ತಾವು ಪರಿಷ್ಕರಿಸಿ ಮತ್ತಷ್ಟು ಪೂರಕ ಮಾಹಿತಿಗಳೊಂದಿಗೆ ಪುನರ್ ಪ್ರಕಟಿಸಿದ್ದಾಗಿ ಹೇಳಿದರು. ಮುಖ್ಯ ಅತಿಥಿಗಳಾಗಿ ಮಾತನಾಡಿದ ವನಿತಾ ಸಾಹಿತ್ಯ ವೇದಿಕೆ ಅಧ್ಯಕ್ಷರಾದ ಶ್ರೀಮತಿ ಮಲ್ಲಮ್ಮ ನಾಗರಾಜ ರವರು ಟಿ ಗಿರಿಜಾ ರವರ ಆಸಕ್ತಿ ಅಧ್ಯಯನ ಅವಿರತ ಪರಿಶ್ರಮ ಗಳಿಂದ ಹೊರಬಂದ ಅವರ 30ಕ್ಕೂ ಹೆಚ್ಚು ಕೃತಿಗಳು ಅವರ ಉದರದಿಂದ ಜನಿಸಿದ ಅಮೂಲ್ಯ ಶಿಶು ರತ್ನಗಳಂತೆ ಎಂದು ವರ್ಣಿಸಿದರು. ವಿದ್ಯಾರ್ಥಿ ಸೈಯದ್ ಅಲಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಕಿರಣ್ ಮತ್ತು ತಂಡದವರು ನಾಡಗೀತೆ ಹಾಡಿದರೆ ವೈಷ್ಣವಿ ಮತ್ತು ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು. ಕೀರ್ತನಾ ಸ್ವಾಗತ ಕೋರಿದರೆ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಪ್ರೊ. ಎಸ್ ಆರ್ ಆಂಜನಪ್ಪ ಪ್ರಾಸ್ತಾವಿಕ ನುಡಿಗಳ ನಾಡಿದರು. ಅತಿಥಿಗಳ ಪರಿಚಯವನ್ನು ಅಂಬಿಕಾ ಅನುಶ್ರೀ ವೈಷ್ಣವಿ ಮಾಡಿದರೆ ಪ್ರಾಂಶುಪಾಲ ಪ್ರೊ. ಕೆ ಎಂ ರುದ್ರಪ್ಪ ಅಧ್ಯಕ್ಷೀಯ ನುಡಿಗಳ ನಾಡಿದರು. ಕಾಲೇಜಿನ ಐಕ್ಯೂ ಸಂಚಾಲಕ ಡಾ. ಗುರುರಾಜ ಜೆ ಪಿ, ಕಚೇರಿ ಅಧೀಕ್ಷಕಿ ಶ್ರೀಮತಿ ಪ್ರತಿಭಾ, ವಾಣಿಜ್ಯಶಾಸ್ತ್ರ ವಿಭಾಗದ ಪ್ರೊ. ವೆಂಕಟೇಶ ಬಾಬು ಮುಂತಾದವರು ಉಪಸ್ಥಿತರಿದ್ದು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಂದನೆಗಳನ್ನು ಸಚಿನ್ ಕೊಗನೂರು ಸಮರ್ಪಿಸಿದರು. ಕಾಲೇಜು ಸಭಾಂಗಣದಲ್ಲಿ ಕಾರ್ಯಕ್ರಮ ನೆರವೇರಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

District Legal Services Authority ಯೋಗಾಭ್ಯಾಸದ ಮಹತ್ವ ಕುರಿತು ಹಿರಿಯ ನಾಗರೀಕರಿಗೆ ಮಾಹಿತಿ ಕಾರ್ಯಕ್ರಮ

District Legal Services Authority ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

MESCOM ಜೂ.20 ರಂದು ಶಿವಮೊಗ್ಗದ ವಿವಿಧೆಡೆ ವಿದ್ಯುತ್ ವ್ಯತ್ಯಯ

MESCOM ಶಿವಮೊಗ್ಗ ಎಂ ಆರ್.ಎಸ್. ವಿವಿ ಕೇಂದ್ರ ಮುಖ್ಯ ಸ್ವೀಕರಣಾ...