Department of School Education and Literacy ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಡಿ.20 ಮತ್ತು 21 ರಂದು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಪ್ರವಾಸ ಮಾಡಲಿದ್ದಾರೆ.
ಡಿ.20 ರಂದು ಬೆ.9.30ಕ್ಕೆ ಶಿಕಾರಿಪುರಕ್ಕೆ ಆಗಮಿಸಲಿರುವ ಸಚಿವರು ಶಿಕಾರಿಪುರ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಬೆ. 11.30 ಕ್ಕೆ ಸೊರಬ ಬ್ಲಾಕ್ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಸೊರಬ ಪ್ರಥಮ ದರ್ಜೆ ಕಾಲೇಜು ಹೆಚ್ಚುವರಿ ಹೊಸ ಕಟ್ಟಡ ಮತ್ತು ಗ್ರಂಥಾಲಯ ಹಾಗೂ ಇತರೆ ಕಾಮಗಾರಿಗಳ ಉದ್ಘಾಟನೆ ಸಾಮೂಹಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸೊರಬದ ಸಚಿವರ ಕಾರ್ಯಾಲಯದಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಕಚೇರಿ ಉದ್ಘಾಟನೆ ಮತ್ತು ತಾಲೂಕು ಬಗರ್ ಹುಕುಂ ಸಮಿತಿ ಕಚೇರಿ ಉದ್ಘಾಟನೆ ಮಾಡಲಿದ್ದಾರೆ. ಸೊರಬದ ರಂಗಮAದಿರದಲ್ಲಿ 2023-24ನೇ ಸಾಲಿನ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ವಿಕಲಚೇತನರಿಗೆ ಯಂತ್ರಚಾಲಿತ ಬೈಕ್ ವಿತರಣೆ ಹಾಗೂ ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿ ವಿವೀಧ ನಿಗಮಗಳ ಫಲಾನುಭವಿಗಳಿಗೆ ಬೋರ್‌ವೆಲ್ ಪಂಪ್‌ಸೆಟ್ ವಿತರಣೆ ಮತ್ತು ಕಟ್ಟಡ ಕಾರ್ಮಿಕರ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
Department of School Education and Literacy ಮ.03.30ಕ್ಕೆ ತಾಳಗುಪ್ಪ ಹೋಬಳಿಯ ಶಿರವಂತೆ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಸಾಮೂಹಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಹಾಗೂ ಸೊರಬದಲ್ಲಿ ವಾಸ್ತವ್ಯ ಮಾಡಲಿದ್ದಾರೆ.
ಡಿ. 21 ರಂದು ಆನವಟ್ಟಿ ಪಟ್ಟಣ ಪಂಚಾಯಿತಿ ಆವರಣದಲ್ಲಿ ಆನವಟ್ಟಿ ಬ್ಲಾಕ್ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಆನವಟ್ಟಿ ಬಿ.ಸಿ.ಎಂ. ಹಾಸ್ಟೇಲ್ ಕಟ್ಟಡ ಮತ್ತು ಇತರೆ ಕಾಮಗಾರಿಗಳ ಉದ್ಘಾಟನೆ ಸಾಮೂಹಿಕ ಕಾರ್ಯಕ್ರಮದಲ್ಲಿ ಭಾಗವಹಿಲಿದ್ದಾರೆ. ಮ.12.30ಕ್ಕೆ ಆನವಟ್ಟಿಯಿಂದ ರಸ್ತೆ ಮೂಲಕ ಬೆಂಗಳೂರು ತೆರಳಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Department of School Education and Literacy ಉಸ್ತುವಾರಿ ಸಚಿವ ಮಧು ಬಂಗಾರಪ್ಪನವರ ಜಿಲ್ಲಾ ಪ್ರವಾಸ ಮಾಹಿತಿ
Vishveshvaraya Iron and Steel Plant ಪ್ರತಿಯೊಬ್ಬ ಭಾರತೀಯನೂ ಒಂದು ಮರ ನೆಟ್ಟು ಬೆಳೆಸಿದರೆ 140 ಕೋಟಿ ಮರ ಬೆಳೆಯುತ್ತವೆ- ಬಿ.ಎಲ್.ಚಂದ್ವಾನಿ
Vishveshvaraya Iron and Steel Plant ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಸ್ಥಾವರದ ಪರಿಸರ ಮಾಸಾಚರಣೆ-2024ರ ಸಮಾರೋಪ ಸಮಾರಂಭ ಭದ್ರಾ ಅತಿಥಿಗೃಹದಲ್ಲಿ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮವನ್ನು ಕೆ.ಎಸ್.ಪಿ.ಸಿ.ಬಿ, ಪ್ರಾದೇಶಿಕ ಕಛೇರಿ ಶಿವಮೊಗ್ಗದ ಪರಿಸರ ಅಧಿಕಾರಿ ಶ್ರೀ ವಿ. ರಮೇಶ್ ಅವರು ಉದ್ಘಾಟಿಸಿದರು.
ವಿಐಎಸ್‌ಎಲ್‌ನ ಕಾರ್ಯಪಾಲಕ ನಿರ್ದೇಶಕರಾದ ಶ್ರೀ ಬಿ.ಎಲ್. ಚಂದ್ವಾನಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕೆ.ಎಸ್. ಸುರೇಶ್, ಮುಖ್ಯ ಮಹಾಪ್ರಬಂಧಕ (ಸ್ಥಾವರ), ಶ್ರೀ ಮುತ್ತಣ್ಣ ಸುಬ್ಬರಾವ್, ಮಹಾಪ್ರಬಂಧಕ (ಪರಿಸರ ನಿರ್ವಹಣೆ ವಿಭಾಗ ಮತ್ತು ಸಿವಿಲ್ ಇಂಜಿನಿಯರಿಂಗ್), ವಿಐಎಸ್ ಎಲ್, ಶ್ರೀ ಪಾರ್ಥಸಾರಥಿ ಮಿಶ್ರಾ, ಅಧ್ಯಕ್ಷರು, ವಿಐಎಸ್‌ಎಲ್ ಅಧಿಕಾರಿಗಳ ಸಂಘ ಶ್ರೀಮತಿ ಕೆ. ಶಿಲ್ಪಾ, ಉಪ ಪರಿಸರ ಅಧಿಕಾರಿ ಇತರ ಗಣ್ಯರು ಉಪಸ್ಥಿತರಿದ್ದರು.
ಪರಿಸರದ ಬಗ್ಗೆ ಕಾಳಜಿಯನ್ನು ಮೂಡಿಸುವ ಉದ್ದೇಶದಿಂದ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಪ್ರಬಂಧ ಬರೆಯುವುದು, ಪರಿಸರ ರಸಪ್ರಶ್ನೆ ಮತ್ತು ಘೋಷವಾಕ್ಯ ಬರೆಯುವ ಸ್ಪರ್ಧೆಗಳನ್ನ ಅಧಿಕಾರಿಗಳು, ಕಾರ್ಮಿಕರು, ಗುತ್ತಿಗೆ ಕಾರ್ಮಿಕರು ಮತ್ತು ಶಾಲಾ ಮಕ್ಕಳಿಗಾಗಿ ಆಯೋಜಿಸಲಾಗಿದ್ದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ವಿ. ರಮೇಶ್ ‘ಹೆಚ್ಚು ಗಿಡಗಳನ್ನು ನೆಟ್ಟು, ವೈಜ್ಞಾನಿಕವಾಗಿ ತ್ಯಾಜ್ಯವನ್ನು ಬೇರ್ಪಡಿಸಿ ಮತ್ತು ವಿಲೇವಾರಿ ಮಾಡುವ ಮೂಲಕ ನಮ್ಮ ಪರಿಸರವನ್ನು ರಕ್ಷಿಸಲು ನಾವೆಲ್ಲರೂ ಒಟ್ಟಾಗಿ ಶ್ರಮಿಸಬೇಕು’ ಎಂದು ಕರೆನೀಡಿದರು. ವಿಐಎಸ್‌ಎಲ್‌ನ ಕಾರ್ಯಪಾಲಕ ನಿರ್ದೇಶಕರಾದ ಶ್ರೀ ಬಿ.ಎಲ್. ಚಂದ್ವಾನಿ ಅವರು ‘ಪ್ರತಿಯೊಬ್ಬ ಭಾರತೀಯನೂ ಒಂದು ಮರವನ್ನು ನೆಟ್ಟು ರಕ್ಷಿಸುವ ಪ್ರತಿಜ್ಞೆ ಮಾಡಿದರೆ 140 ಕೋಟಿ ಮರಗಳನ್ನು ನೆಡಬಹುದು ಮತ್ತು ಅದು ಮಾಲೀನ್ಯವನ್ನು ತೊಡೆದುಹಾಕಲು ಮತ್ತು ಪರಿಸರ ಸಮಸ್ಯೆಗಳನ್ನು ತಗ್ಗಿಸಲು ಸಹಾಯ ಮಾಡುತ್ತದೆ’ ಎಂದು ಒತ್ತಿ ಹೇಳಿದರು.
Vishveshvaraya Iron and Steel Plant ಮುಖ್ಯ ಮಹಾಪ್ರಬಂಧಕರು (ಸ್ಥಾವರ) ಶ್ರೀ ಕೆ.ಎಸ್. ಸುರೇಶ್ ಅವರು ‘ನಾವು ಹೆಚ್ಚು ಮರಗಳನ್ನು ನೆಡಬೇಕು, ಸುಸ್ಥಿರ ಅಭಿವೃದ್ಧಿಗಾಗಿ ಸೌರ, ಪವನ ಮುಂತಾದ ನವೀಕರಿಸಬಹುದಾದ ಇಂಧನ ಮೂಲಗಳನ್ನು ಅನ್ವೇಷಿಸಬೇಕು’ ಎಂದರು.
ಈ ಸಂದರ್ಭದಲ್ಲಿ ಎಲ್ಲಾ ವಿಜೇತರಿಗೆ ಸಸಿಗಳನ್ನು ವಿತರಿಸಲಾಯಿತು ಮತ್ತು ಪರಿಸರ ಮತ್ತು ಪ್ರಕೃತಿಯ ಕುರಿತಾದ ಮೊದಲ ದಿನದ ಕವರ್‌ಗಳು ಮತ್ತು ಮಿನಿಯೇಚರ್ ಸ್ಟಾö್ಯಂಪ್‌ಗಳ ಪ್ರದರ್ಶನವನ್ನು ಆಯೋಜಿಸಲಾಗಿತ್ತು.
ಪ್ರಕೃತಿ ಕುರಿತಾದ ಹಾಡು ಮತ್ತು ಪ್ರಾರ್ಥನಾ ಗೀತೆಯನ್ನು ಶ್ರೀಮತಿ ತ್ರಿವೇಣಿ ಮತ್ತು ಶ್ರೀಮತಿ ಮಂಜುಶ್ರೀ ಸುಶ್ರಾವ್ಯವಾಗಿ ಹಾಡಿದರು. ಶ್ರೀ ವಿಕಾಸ್ ಬಸೇರ್, ಸಹಾಯಕ ಮಹಾಪ್ರಬಂಧಕರು (ಪರಿಸರ ಇಲಾಖೆ) ಕಾರ್ಯಕ್ರಮವನ್ನು ನಿರೂಪಿಸಿ, ಶ್ರೀ ಮುತ್ತಣ್ಣ ಸುಬ್ಬರಾವ್ ಸ್ವಾಗತಿಸಿ, ಶ್ರೀ ಜಿ.ಹೆಚ್. ನಂದನ, ಕಿರಿಯ ಪ್ರಬಂಧಕ (ನಗರಾಡಳಿತ) ವಂದಿಸಿದರು. ಈ ಕಾರ್ಯಕ್ರಮವನ್ನು ಸೈಲ್-ವಿಐಎಸ್‌ಎಲ್ ನ ಪರಿಸರ ನಿರ್ವಹಣಾ ವಿಭಾಗವು ಆಯೋಜಿಸಿತ್ತು.
Keladi Shivappa Nayaka Agriculture 2025 ರ ಜನವರಿ 6 ರಿಂದ ಫೆಬ್ರವರಿ 4 ವರೆಗೆ ಬೇಕರಿ ಉತ್ಪನ್ನ ತಯಾರಿಕೆ ಕೌಶಲ್ಯಾಭಿವೃದ್ಧಿ ತರಬೇತಿ
Keladi Shivappa Nayaka Agriculture ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ಶಿವಮೊಗ್ಗ ಕೃಷಿ ಮಹಾವಿದ್ಯಾಲಯ ಆವರಣದ ಬೇಕರಿ ಘಟಕದಲ್ಲಿ ದಿ:06/01/2025 ರಿಂದ ದಿ:04/02/2025 ರವರೆಗೆ 30 ದಿನಗಳು ವಿವಿಧ ಬೇಕರಿ ಉತ್ಪನ್ನಗಳ ತಯಾರಿಕೆ ಕುರಿತು ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರವನ್ನು ಆಯೋಜಿಸಿದೆ.
ತರಬೇತಿಯಲ್ಲಿ ಬೇಕರಿ ಉತ್ಪನ್ನಗಳಾದ ಬೆಣ್ಣೆ ಬಿಸ್ಕತ್, ಕೋಕೋನಟ್ ಕುಕಿಸ್, ಕೋಕೋನಟ್ ಬಿಸ್ಕತ್, ಮಸಾಲ ಬಿಸ್ಕತ್, ಮೆಲ್ಟಿಂಗ್ ಮೊಮೆಂಟ್ ಬಿಸ್ಕತ್, ಪೀನಟ್ ಕುಕಿಸ್, ವೆನಿಲಾ ಬಟನ್, ಬನಾನಾ ಕೇಕ್, ಕೋಕೊನಟ್ ಕ್ಯಾಸಲ್ಸ, ಫ್ರೂಟ್ ಕೇಕ್, ಸ್ಪಾಂಜ್ ಕೇಕ್, Keladi Shivappa Nayaka Agriculture ಆರೆಂಜ್ ಕೇಕ್, ಬ್ಲಾಕ್ ಫಾರೆಸ್ಟ್ ಕೇಕ್, ಸ್ವಿಸ್ ರೋಲ್, ಜೆಲ್ ಕೇಕ್, ಬಟರ್ ಐಸಿಂಗ್, ಮಸಾಲಾ ಡೋನಟ್, ಮಿಲ್ಕ್ ಬ್ರೆಡ್, ಬ್ರೌನಬ್ರೆಡ್, ಫಿಜ್ಜಾ, ಪಪ್ ಪೇಸ್ಟ್ರೀ, ಡ್ಯಾನಿಷ್ ಪೇಸ್ಟ್ರೀ, ದಿಲ್ ಪಸಂದ್, ಬಾಂಬೆ ಕಾರ ಹಾಗೂ ಇತರೆ ಉತ್ಪನ್ನಗಳ ತಯಾರಿಕೆಯ ಬಗ್ಗೆ ತರಬೇತಿ ನೀಡಲಾಗುವುದು.
ಈ ತರಬೇತಿಯಲ್ಲಿ ಭಾಗವಹಿಸಲು ಇಚ್ಚಿಸುವವರು ದಿ:02/01/2025 ರೊಳಗಾಗಿ ಡಾ. ಜಯಶ್ರೀ ಎಸ್.-9449187763, ಜಯಶಂಕರ-9686555897 ಇವರುಗಳನ್ನು ದೂರವಾಣಿ ಮೂಲಕ ಅಥವಾ ಖುದ್ದಾಗಿ ಸಂಪರ್ಕಿಸಿ ಹೆಸರನ್ನು ನೊಂದಾಯಿಸಿಕೊಳ್ಳುವುದು. ತರಬೇತಿ ಶುಲ್ಕ ರೂ. 3500/- ಆಗಿರುತ್ತದೆ ಎಂದು ತಿಳಿಸಿದೆ.
Klive Special Article ನಿಯೋಜನೆಯ ಶಿಕ್ಷಕರು ವೃತ್ತಿಗೆ ಸಮರ್ಪಿಸಿ ಕೊಳ್ಳಬೇಕು-ಒಂದು ಅನುಭವ
Klive Special Article ಲೇ: ಎನ್.ಎಸ್.ಕುಮಾರ್
ಸರ್ಕಾರಿ ಕೆಲಸಕ್ಕೆ ಸೇರಿದ ಮೇಲೆ ಪ್ರತಿಯೊಬ್ಬರೂ ನಾವು ನಮ್ಮ ಕೆಲಸ ಕಾರ್ಯಗಳಲ್ಲಿ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕಾಗಿರುವುದು ಅನಿವಾರ್ಯ,ನಾವು ಕೆಲಸ ಮಾಡುವ ಮೂಲ ಸ್ಥಳವಾಗಿರಲಿ ಅಥವಾ ನಿಯೋಜನಗೊಂಡಿರುವ ಸ್ಥಳದಲ್ಲಾಗಲಿ ನಮ್ಮ ಕಾರ್ಯದಕ್ಷತೆಯನ್ನ ಹೆಚ್ಚಿಸಿಕೊಂಡು ಕೆಲಸ ಮಾಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಶಿಕ್ಷಣ ಇಲಾಖೆಯಲ್ಲಿರುವ ನಾವು ಯಾವುದೇ ಕಾಗದ ಪತ್ರಗಳೊಂದಿಗೆ ವ್ಯವಹರಿಸುವುದಿಲ್ಲ ಮಾನವೀಯ ಮೌಲ್ಯಗಳನ್ನು ಹೊಂದಿರುವ ಮಕ್ಕಳೊಂದಿಗೆ ವ್ಯವಹರಿಸುತ್ತೇವೆ. ಪ್ರತಿ ಮಗು ನಮ್ಮ ಚಲನವಲನಗಳನ್ನು ಗಮನಿಸುತ್ತದೆ ಆದ್ದರಿಂದ ನಾವುಗಳು ತರಗತಿಗಳಿಗೆ ಪೂರ್ವಭಾವಿ ಸಿದ್ಧತೆಯೊಂದಿಗೆ ಕಲಿಕಾ ಸಾಮರ್ಥ್ಯಗಳೊಂದಿಗೆ ಹಾಜರಾಗುವುದು ಬಹಳ ಮುಖ್ಯ.
ಚಿತ್ರದುರ್ಗದಲ್ಲಿ ಸಹ ನಿರ್ದೇಶಕನಾಗಿದ್ದಾಗ ಒಮ್ಮೆ ಹೊಳಲ್ಕೆರೆ ತಾಲೂಕಿನ ತಾಳ್ಯ ಗ್ರಾಮಕ್ಕೆ ಕಾರ್ಯಕ್ರಮ ಒಂದಕ್ಕೆ ಹೋಗಿದ್ದು ಕಾರ್ಯಕ್ರಮ ಮುಗಿದ ನಂತರ ಅಲ್ಲಿನ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದೆನು. Klive Special Article ಭೇಟಿಯ ಸಮಯದಲ್ಲಿ 7ನೇ ತರಗತಿಯಲ್ಲಿ ಶಿಕ್ಷಕರು ಗಣಿತ ವಿಷಯದ ಬಗ್ಗೆ ಪಾಠ ಬೋಧನೆಯನ್ನು ಮಾಡುತ್ತಿದ್ದರು. ತರಗತಿಗೆ ಭೇಟಿ ನೀಡಿ ಮಕ್ಕಳ ಕಲಿಕಾ ಪ್ರಗತಿಯನ್ನು ಪರಿಶೀಲಿಸುತ್ತಾ ಭಾಗಾಕಾರದ ಲೆಕ್ಕ ಒಂದನ್ನು ಮಕ್ಕಳಿಗೆ ಬಿಡಿಸಲು ಹೇಳಿದೆನು. ಮಕ್ಕಳು ಲೆಕ್ಕ ಬಿಡಿಸುವಲ್ಲಿ ಸ್ವಲ್ಪ ಗೊಂದಲಕ್ಕೆ ಒಳಗಾದಂತೆ ಕಂಡುಬಂದರು. ನಂತರ ಶಿಕ್ಷಕರಿಗೆ ಬಿಡಿಸಲು ಹೇಳಿದನು ಆಗ ಶಿಕ್ಷಕರು ಆ ಸರಳ ಲೆಕ್ಕವನ್ನು ಬಿಡಿಸಲು ಅಸಮರ್ಥರಾಗಿರುವುದು ಕಂಡುಬಂದಿತು. ಆಗ ಶಿಕ್ಷಕರು ಸರ್ ನಾನು ಈ ಶಾಲೆಯ ಶಿಕ್ಷಕ ಅಲ್ಲ, ನಾನು ಬೇರೆ ಶಾಲೆಯಿಂದ ಈ ಶಾಲೆಗೆ ನಿಯೋಜನೆಗೊಂಡು ಬಂದಿದ್ದೇನೆ. ಈ ಶಾಲೆಯ ಮಕ್ಕಳು ಅಷ್ಟು ಬುದ್ಧಿವಂತರಲ್ಲ ಸರ್ ಎಂದರು. ಸರಿ ಹಾಗಾದ್ರೆ ನೀವೇ ಲೆಕ್ಕ ಬಿಡಿಸಬಹುದು ಅಲ್ವಾ ಅಂದೆನು. ಪುನಃ ಆ ಶಿಕ್ಷಕರು ಸಾರ್, ನಾನು ನಿಯೋಜನೆಯ ಮೇಲೆ ಬಂದಿರುವ ಶಿಕ್ಷಕ ಸರ್, ಎಂದು ಒತ್ತಿ ಹೇಳಿದರು. ಆಗ ನಾನು ನಿಯೋಜನೆ ಮೇಲೆ ಬಂದರೆ ಈ ಲೆಕ್ಕ ಮಾಡಬಾರದು ಅಂತ ಇದೆಯೇನ್ರೀ ಎಂದು ಕೇಳಿದೆ ಹಾಗೂ ನಿಮ್ಮ ಮೂಲ ಶಾಲೆಯಲ್ಲಿ ಆದರೂ ಈ ಲೆಕ್ಕ ಮಾಡಿಸಬೇಕಲ್ವೇನ್ರಿ, ಯಾವ ಶಾಲೆ ಆದ್ರೆ ಏನಂತೆ, ಆ ಶಾಲೆಗೆ ಬೇರೆ ಲೆಕ್ಕ ಈ ಶಾಲೆಗೆ ಬೇರೆ ಲೆಕ್ಕ ಅಂತ ಏನಾದರೂ ಇರುತ್ತಾ? ಎಂದೆನು. ಆಗ ಶಿಕ್ಷಕರಿಗೆ ನಾನು ನಿಯೋಜನೆ ಮೇಲೆ ಬಂದಿರುವ ಶಿಕ್ಷಕ ಅಂತ ಹೇಳುವುದು ಮುಖ್ಯ ಅಲ್ಲ, ನಮ್ಮ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳುವುದು ಬಹಳ ಮುಖ್ಯ ಒಂದು ವೇಳೆ ನಮಗೆ ಸಾಮರ್ಥ್ಯಗಳನ್ನು ಕಲಿಸುವಲ್ಲಿ ಗೊಂದಲವಿದ್ದರೆ ಡಯಟ್ ಮೂಲಕ ತರಬೇತಿಗಳನ್ನು ಪಡೆದುಕೊಳ್ಳುವುದು ಹಾಗೂ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಚರ್ಚಿಸಿ ಸಮಸ್ಯೆಗಳನ್ನ ಬಗೆಹರಿಸಿಕೊಳ್ಳಬೇಕು ತರಗತಿಗಳಿಗೆ ಪೂರ್ವಭಾವಿ ಸಿದ್ಧತೆಯೊಂದಿಗೆ ಸಾಮರ್ಥ್ಯಗಳನ್ನು ಗಳಿಸಿಕೊಂಡು ಹಾಜರಾಗಬೇಕು. ಆಗ ನಾವು ಆತ್ಮಸ್ಥೈರ್ಯದೊಂದಿಗೆ ಮಕ್ಕಳಿಗೆ ಪರಿಪೂರ್ಣವಾದ ಕಲಿಕೆಯನ್ನು ಉಂಟುಮಾಡಲು ಸಾಧ್ಯವಾಗುತ್ತಿದೆ ಆಗ ಯಾವ ಶಾಲೆಯಾದರೇನು ಎಲ್ಲಾ ಮಕ್ಕಳು ಒಂದೇ ಎಂದು ಭಾವಿಸಿ ಬೋಧನೆ ಮಾಡಬೇಕು ಆಗ ಮಕ್ಕಳು ನಮ್ಮನ್ನು ಪ್ರೀತಿಸುತ್ತಾರೆ ಒಂದು ವೇಳೆ ನಾವು ಅಸಮರ್ಥರಾದರೆ ನಮ್ಮ ವೃತ್ತಿಗೆ ತೊಂದರೆಯಾಗುವ ಸಾಧ್ಯತೆಗಳು ಇರುತ್ತದೆ. ಆದ್ದರಿಂದ ನಾನು ನಿಯೋಜನೆಯ ಮೇಲೆ ಬಂದಿದ್ದೇನೆ ಎಂದು ಅಸಡ್ಡೆ ತೋರಬಾರದು. ಎಂದು ಹೇಳಿ ಭಾಗಾಕಾರದ ಲೆಕ್ಕವನ್ನು ಬಿಡಿಸುವಲ್ಲಿ ಸಹಕರಿಸಿ ಮಾರ್ಗದರ್ಶನ ಮಾಡಿ ಬಂದೆನು . ಆದ್ದರಿಂದ ಸರ್ಕಾರಿ ನೌಕರಿಯಲ್ಲಿರುವ ನಾವುಗಳಾಗಲಿ ಅಥವಾ ಯಾರೇ ಆಗಲಿ ನಮ್ಮ ನಮ್ಮ ವೃತ್ತಿಗಳಲ್ಲಿ ಹಾಗೂ ನಮ್ಮ ಕಾರ್ಯಕ್ಷೇತ್ರಗಳಲ್ಲಿ ದಕ್ಷತೆ ಮತ್ತು ಸಾಮರ್ಥ್ಯಗಳನ್ನು ಹೆಚ್ಚಿಸಿಕೊಂಡಾಗ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಶ್ರಮ ವಹಿಸಿದವರಿಗೆ ಮಾತ್ರ ಯಶಸ್ಸುಗಳು ಸಾಧ್ಯ. ಆದ್ದರಿಂದ ನಮ್ಮ ಕಾಯಕವನ್ನು ನಿಷ್ಠೆಯಿಂದ ಮಾಡುವುದು ನಮಗೆ ಗೌರವವನ್ನು ತಂದುಕೊಡುತ್ತದೆ.
ಎನ್ ಎಸ್ ಕುಮಾರ್
ನಿವೃತ್ತ ನಿರ್ದೇಶಕರು
Sri Sathya Sai Loka Seva Gurukulam ಶಿವಮೊಗ್ಗ ಯೋಗಾಚಾರ್ಯ ಸಿ.ವಿ.ರುದ್ರಾರಾಧ್ಯ ಅವರಿಗೆ ” ಲೋಕಶ್ರೀ” ಪ್ರಶಸ್ತಿ
Sri Sathya Sai Loka Seva Gurukulam ಶ್ರೀ ಸತ್ಯಸಾಯಿ ಲೋಕ ಸೇವಾ ಗುರುಕುಲಂ ಮುದ್ದೇನಹಳ್ಳಿಯ ಶಾಖೆಯಾದ ಶ್ರೀ ಸತ್ಯಸಾಯಿ ಸರ್ವಾನಿಕೇತನಂ ಕಮರೂರು ಶಿವಮೊಗ್ಗ ಜಿಲ್ಲೆಯಲ್ಲಿ ಏರ್ಪಡಿಸಲಾಗಿದ್ದ ಲೋಕಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸದ್ಗುರು ಶ್ರೀ ಮಧುಸೂದನ ಸಾಯಿ ಯವರು ಶ್ರೀಶಿವಗಂಗಾ ಯೋಗಕೇಂದ್ರದ ಆಚಾರ್ಯ ರಾಜ್ಯ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ
Sri Sathya Sai Loka Seva Gurukulam ಶ್ರೀ ಸಿವಿ ರುದ್ರಾರಾಧ್ಯರವರಿಗೆ ಅಪ್ರತಿಮ ಸಾಮಾಜಿಕ ಸೇವೆ ಹಾಗೂ ಸಾಧನೆಯನ್ನು ಗುರುತಿಸಿ ಈ ವಿಶೇಷ ಪ್ರಶಸ್ತಿ ಯಾದ “ಲೋಕ ಶ್ರೀ” ಪ್ರಶಸ್ತಿಯನ್ನು ಪ್ರಧಾನ ಮಾಡಿ ಗೌರವಿಸಿದ್ದಾರೆ. ಇವರಿಗೆ ಶಿವಗಂಗಾ ಯೋಗ ಕೇಂದ್ರದ ಎಲ್ಲಾ ಶಿಕ್ಷಕರು ಹಾಗೂ ಯೋಗಪಟುಗಳು ಯೋಗ ಕೇಂದ್ರದ ಟ್ರಸ್ಟಿಗಳು ಶುಭಕೋರಿದ್ದಾರೆ.
Department of Fisheries ಮತ್ಸ್ಯಸಂಪದ- ನೀಲಿಕ್ರಾಂತಿ ಯೋಜನೆಯಡಿಯಲ್ಲಿ ಸಹಾಯಧನ ಪಡೆಯಲು ಅರ್ಹರಿಂದ ಅರ್ಜಿ ಆಹ್ವಾನ
Department of Fisheries ಡಿಸೆಂಬರ್ ಮೀನುಗಾರಿಕೆ ಇಲಾಖೆ ವತಿಯಿಂದ 2022-23 ರಿಂದ 2024-25 ನೇ ಸಾಲಿನವರೆಗೆ ಮರು ಹಂಚಿಕೆಯಾಗಿರುವ ಪ್ರಧಾನ ಮಂತ್ರಿ ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ವಿವಿಧ ಘಟಕಗಳಿಗೆ ಸಹಾಯಧನ ಸೌಲಭ್ಯ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಮೀನು ಕೃಷಿಕೊಳಗಳ ನಿರ್ಮಾಣ ಒಟ್ಟು 4.90 ಹೆಕ್ಟೇರ್ ಪ್ರದೇಶಕ್ಕೆ ಸಾಮಾನ್ಯ 3.10 ಹೆ. ಮತ್ತು ಪರಿಶಿಷ್ಟ ಜಾತಿಗೆ 1.80 ಹೆಕ್ಟೇರ್.
ಮೀನು ಕೃಷಿ ಕೊಳ ನಿರ್ಮಾಣ ಮಾಡಿ ಮೀನು ಕೃಷಿ ಕೈಗೊಂಡವರಿಗೆ ಹೂಡಿಕೆಗಳ ವೆಚ್ಚದ ಮೇಲೆ ಸಹಾಯ ಒಟ್ಟು 8.60 ಹೆಕ್ಟೇರ್‌ರಲ್ಲಿ ಸಾಮಾನ್ಯ 4.80 ಹೆ., ಸಾಮಾನ್ಯ ಮಹಿಳೆ 1.80 ಹೆ., ಪರಿಶಿಷ್ಟ ಜಾತಿ 1.00 ಹೆ. ಮತ್ತು ಪರಿಶಿಷ್ಟ ಪಂಗಡ 1.00 ಹೆಕ್ಟೇರ್.
ಯಾಂತ್ರೀಕೃತ ದೋಣಿ ಖರೀದಿಗೆ ಸಹಾಯ ಘಟಕದಡಿ ಸಾಂಪ್ರದಾಯಿಕ ಮೀನುಗಾರರಿಗೆ ಎಫ್‌ಆರ್‌ಪಿ ಬದಲಿ ದೋಣಿ ನಿರ್ಮಾಣಕ್ಕಾಗಿ ಸಹಾಯ -01 ಘಟಕ, ಸಾಮಾನ್ಯ 01 ಘಟಕ.
ಮೀನುಮರಿ ಪಾಲನಾ ಘಟಕ ನಿರ್ಮಾಣದ ಬಗ್ಗೆ ಸಹಾಯ ಒಟ್ಟು 6.02 ಹೆಕ್ಟೇರ್ ಸಾಮಾನ್ಯ 2.08 ಹೆಕ್ಟೇರ್, ಮಹಿಳೆ 1.84 ಹೆಕ್ಟೇರ್ ಮತ್ತು ಪರಿಶಿಷ್ಟ ಪಂಗಡ 2.10 ಹೆಕ್ಟೇರ್.
Department of Fisheries ಸೈಕಲ್ ವಿತ್ ಐಸ್ ಬಾಕ್ಸ್ ಸಾಮಾನ್ಯ ವರ್ಗಕ್ಕೆ 1 ಗುರಿ ನೀಡಲಾಗಿದೆ.
ಮಧ್ಯಮ ವರ್ಗದ ಅಲಂಕಾರಿಕಾ ಮೀನುಸಾಕಾಣಿಕೆ ಘಟಕ ಪ.ಜಾ. 1 ಗುರಿ ನೀಡಲಾಗಿದೆ.
ಅಲಂಕಾರಿಕಾ ಮೀನು ಮಾರಾಟ ಮಳಿಗೆ ಸೇರಿದಂತೆ ಹೊಸತಾದ ಮೀನು ಮಾರಾಟದ ಕಿಯೋಸ್ಕ್ ನಿರ್ಮಾಣಕ್ಕಾಗಿ ಸಹಾಯ ಪರಿಶಿಷ್ಟ ಜಾತಿ 01 ಘಟಕ.
ಈ ಎಲ್ಲಾ ಸಹಾಯಧನ ಘಟಕಗಳ ಉಪಯೋಜನೆಗಳನ್ನು ಪಡೆಯಲು ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಶೇ.40 ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮಹಿಳಾ ಫಲಾನುಭವಿಗಳಿಗೆ ಶೇ.60 ರಷ್ಟು ಸಹಾಯಧನ ನೀಡಲಾಗುತ್ತದೆ.
ಆಸಕ್ತರು ಡಿ.31 ರೊಳಗೆ ಆಯಾ ತಾಲ್ಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಯಿಂದ ಅರ್ಜಿಗಳನ್ನು ಪಡೆದು ಸಂಬಂಧಪಟ್ಟ ತಾಲ್ಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗೆ ಪೂರ್ಣ ದಾಖಲೆಗಳೊಂದಿಗೆ ಸಲ್ಲಿಸಬಹುದೆಂದು ಮೀನುಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.
MESCOM ಸಂತೆ ಕಡೂರು ಸುತ್ತಮುತ್ತ ಡಿಸೆಂಬರ್ 20 ರಂದು ವಿದ್ಯುತ್ ಸರಬರಾಜು ವ್ಯತ್ಯಯ
MESCOM ಶಿವಮೊಗ್ಗ ತಾಲ್ಲೂಕು, ಸಂತೇಕಡೂರು ಗ್ರಾಮದಲ್ಲಿ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮಧ್ಯಂತರ ಕಂಬಗಳನ್ನು ಅಳವಡಿಸುವ ಮತ್ತು ವಾಹಕ ಬದಲಾವಣೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಎಫ್-1 ಉಂಬ್ಳೇಬೈಲು, ಎಫ್-2 ಲಕ್ಕಿನಕೊಪ್ಪ, ಎಫ್-3 ಮತ್ತೂರು ಕುಡಿಯುವ ನೀರು, ಎಫ್-4 ಸಂತೇಕಡೂರು ಎಫ್-8 ಗಣಿದಾಳು ಮಾರ್ಗಗಳಿಂದ ವಿದ್ಯುತ್ ಸರಬರಾಜು ಪಡೆಯುವ ಕೆಳಕಂಡ ಗ್ರಾಮಗಳಲ್ಲಿ ಡಿ.20 ರಂದು ಬೆಳಗ್ಗೆ 10 ರಿಂದ ಸಂಜೆ 06 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಸಂತೇಕಡೂರು, ಶ್ರೀರಾಮನಗರ, ರಾಂಪುರ, ಕೊರಲಹಳ್ಳಿ, ಕಾಚೀನಕಟ್ಟೆ, ಜ್ಯೋತಿನಗರ, ದೊಡ್ಡಿಬೀಳು, ವಿನಾಯಕನಗರ, ಲಕ್ಕಿನಕೊಪ್ಪ, ತೋಟದಕೆರೆ, ಹುರಳಿಹಳ್ಳಿ, ಗಣಿದಾಳು, ಉಂಬ್ಳೇಬೈಲು, ಕಣಗಲಸರ, ಮರಾಠಿ ಕ್ಯಾಂಪ್, ಸಾಲಿಗೆರೆ, ಕೈತೊಟ್ಟಲು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
Klive Special Article ಬದುಕಿಗೆ ಆಸರೆಯಾದ ” ಗೃಹಲಕ್ಷ್ಮಿ”- ವಿಶೇಷ ಲೇಖನ ಲೇ: ಎಂ.ಟಿ.ಭಾಗ್ಯ.ವಾರ್ತಾ ಇಲಾಖೆ.
Klive Special Article ಬದುಕು ಕಟ್ಟಿಕೊಳ್ಳಲು ನೆರವಾದ ‘ಗೃಹಲಕ್ಷಿö್ಮ’ ಯೋಜನೆ
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ‘ಗೃಹಲಕ್ಷಿö್ಮ’ ಯೋಜನೆಯು ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ವರದಾನವಾಗಿದೆ.
ಉದ್ಯೋಗ, ಸ್ವಂತ ವೃತ್ತಿಯಲ್ಲಿ ತೊಡಗದೇ ಇರುವ ಅನೇಕ ಮಹಿಳೆಯರು ತಾವು ಬಯಸಿದ ವಸ್ತು/ಸೇವೆ ಪಡೆಯಲು ಇಂದಿಗೂ ತಂದೆ, ಗಂಡನ ಮೇಲೆ ಅವಲಂಬಿತರಾಗಿದ್ದು ಸರ್ಕಾರದ ಈ ಯೋಜನೆಯು ಅವರನ್ನು ಆರ್ಥಿಕವಾಗಿ ಸಲಬರನ್ನಾಗಿಸಿದೆ.
ಆಗಸ್ಟ್ 30 ರಂದು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಗೃಹಲಕ್ಷ್ಮಿ ಯೋಜನೆಯ ಮೊದಲ ಕಂತಿನ ಹಣ ಬಿಡುಗಡೆಗೆ ಮೈಸೂರಿನಲ್ಲಿ ಚಾಲನೆ ನೀಡಿದರು. ಅಲ್ಲಿಂದ ಇಲ್ಲಿಯವರೆಗೆ ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು ರೂ.2000 ಹಣವನ್ನು ಜಮೆ ಮಾಡುತ್ತಿದೆ ಸರ್ಕಾರ.
ಜಿಲ್ಲೆಯಲ್ಲಿ ಒಟ್ಟು 424570 ಪಡಿತರ ಚೀಟಿಗಳು ಇದ್ದು, ಇದರಲ್ಲಿ 385921 ಫಲಾನುಭವಿಗಳು ಗೃಹಲಕ್ಷ್ಮೀ ಯೋಜನೆಯಡಿ ನೊಂದಣಿಯಾಗಿರುತ್ತಾರೆ ಹಾಗೂ ಡಿಬಿಟಿ ಮೂಲಕ 384717 ಫಲಾನುಭವಿಗಳ ಖಾತೆಗೆ ಅಕ್ಟೋಬರ್ ಅಂತ್ಯದವರೆಗೂ ಭತ್ಯೆ ಜಮೆ ಮಾಡಲಾಗಿದೆ. ಇ-ಕೆವೈಸಿ ಹಾಗೂ ಎನ್.ಪಿ.ಸಿ.ಐ ಮ್ಯಾಪಿಂಗ್, ನಿಷ್ಕ್ರಿಯಗೊಂಡ ಬ್ಯಾಂಕ್ ಖಾತೆ ಮುಂತಾದ ಸಮಸ್ಯೆಗಳನ್ನು ಪರಿಹರಿಸಿ, ಅರ್ಹ ಮಹಿಳೆಯರಿಗೆ ಸಹ ಗೃಹಲಕ್ಷ್ಮೀ ಹಣ ಜಮೆ ಮಾಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕ್ರಮ ಕೈಗೊಂಡಿದೆ.
ಮಹಿಳೆಯರು ತಮ್ಮ ವೈದ್ಯಕೀಯ ಖರ್ಚು, ಮಕ್ಕಳ ಶಾಲೆ ಶುಲ್ಕ, ದಿನಸಿ ಖರೀದಿ, ಇತರೆ ಖರ್ಚುಗಳು ಹೀಗೆ ನಾನಾ ರೀತಿಯಲ್ಲಿ ಗೃಹಲಕ್ಷ್ಮೀ ಯೋಜನೆಯಡಿ ಮನೆಯ ಯಜಮಾನಿಗೆ ಪ್ರತಿ ತಿಂಗಳು ನೀಡುವ ರೂ.2000 ಸದ್ಬಳಕೆಯಾಗಿರುತ್ತಿದ್ದರೆ ಇನ್ನೂ ಕೆಲ ಮಹಿಳೆಯರು ಇದೇ ಹಣವನ್ನು ಕೂಡಿಟ್ಟು ಸ್ವಂತ ವ್ಯಾಪಾರ, ಹೈನುಗಾರಿಕೆ, ಇತರೆ ಆದಾಯ ತರುವ ಚಟುವಟಿಕೆಯನ್ನು ಆರಂಭಿಸಿ ಸಫಲರಾಗಿರುವುದು ನಿಜಕ್ಕೂ ಶ್ಲಾಘನೀಯವಾಗಿದ್ದು, ಕುಟುಂಬ ನಿರ್ವಹಣೆಯಲ್ಲಿ ಮುಖ್ಯ ಪಾತ್ರ ನಿರ್ವಹಿಸುವ ಯಜಮಾನಿಯರಿಗೆ ಸರ್ಕಾರ ನೀಡಿದ ಈ ಆರ್ಥಿಕ ಸ್ವಾವಲಂಬನೆ ಜೀವನದಲ್ಲಿ ಭರವಸೆ ಮತ್ತು ಪುಷ್ಟಿ ನೀಡಿದೆ.
ಫ್ಯಾನ್ಸಿ ಅಂಗಡಿ ತೆರೆದುಕೊಟ್ಟ ದಾಕ್ಷಾಯಿಣಿ ಪಾಟೀಲ..
ಭದ್ರಾವತಿ ತಾಲೂಕಿನ ನೀರಲಗಿ ಗ್ರಾಮದ ದಾಕ್ಷಾಯಿಣಿ ಪಾಟೀಲ ಎಂಬುವರು ಗೃಹಲಕ್ಷ್ಮಿ ಯೋಜನೆಯಡಿ ಬಂದಿದ್ದ ಹಣವನ್ನು ಕೂಡಿಟ್ಟು, ಸೊಸೆಗಾಗಿ ಮನೆಯ ಬಾಗಿಲಲ್ಲೇ ಫ್ಯಾನ್ಸಿ ಅಂಗಡಿ ತೆರೆದು ವ್ಯಾಪಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಗೃಹಲಕ್ಷ್ಮಿ ಯೋಜನೆಯಡಿ 10 ಕಂತಿನಲ್ಲಿ ಬಂದಿದ್ದ 20 ಸಾವಿರ ಹಣವನ್ನು ದಾಕ್ಷಾಯಿಣಿ ಅವರು ಬ್ಯಾಂಕ್ ಖಾತೆಯಲ್ಲಿಯೇ ಕೂಡಿಟ್ಟಿದ್ದರು. ಸ್ವಂತ ಉದ್ಯೋಗ ಆರಂಭಿಸಲು ಯೋಚಿಸಿದ್ದ ಸೊಸೆ ಕುಮಾರಿಗೆ ಅದೇ ಹಣದಲ್ಲಿ ಫ್ಯಾನ್ಸಿ ಅಂಗಡಿಯನ್ನು ತೆರೆದು ಕೊಟ್ಟಿದ್ದಾರೆ.
ಮಹಿಳೆಯರು ಸ್ವಾವಲಂಬಿಯಾಗಿ ಬದುಕಬೇಕು ಎಂಬ ಉದ್ದೇಶದಿಂದಲೇ ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯನ್ನು ಜಾರಿ ಮಾಡಿದ್ದು, ಇಂತಹ ಘಟನೆಗಳು ಯೋಜನೆಯ ಯಶಸ್ಸಿಗೆ ಸಾಕ್ಷಿಯಾಗಿವೆ.
ಸ್ವಂತ ಅಂಗಡಿ ತೆರೆದ ಕಾವ್ಯ:
ಭದ್ರಾವತಿ ತಾಲೂಕಿನ ಜಯನಗರ ಗ್ರಾಮದ ಫಲಾನುಭವಿ ಕಾವ್ಯ ಅವರು ಗೃಹಲಕ್ಷ್ಮಿ ಯೋಜನೆಯಡಿ ಬಂದಿದ್ದ ಹಣವನ್ನು ಕೂಡಿಟ್ಟು, ಸ್ವಂತ ಅಂಗಡಿಯನ್ನು ತೆರೆದು ಸಣ್ಣದಾಗಿ ವ್ಯಾಪಾರ ಮಾಡುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆಯಡಿ 10 ಕಂತಿನಲ್ಲಿ ಬಂದಿದ್ದ 20 ಸಾವಿರ ಹಣವನ್ನು ಫಲಾನುಭವಿಯವರು ಬ್ಯಾಂಕ್ ಖಾತೆಯಲ್ಲಿಯೇ ಕೂಡಿಟ್ಟಿದ್ದರು. ಸ್ವಂತ ಉದ್ಯೋಗ ಆರಂಭಿಸಲು ಯೋಚಿಸಿದ್ದ ಅವರು ತಮ್ಮ ಸಣ್ಣಪುಟ್ಟ ಇತರೆ ಉಳಿತಾಯದೊಂದಿಗೆ ಗೃಹಲಕ್ಷಿö್ಮ ಹಣವನ್ನೂ ಸೇರಿಸಿ ಅಂಗಡಿಯನ್ನು ತೆರೆದುಕೊಂಡಿದ್ದಾರೆ.
Klive Special Article ಹಸು ಖರೀದಿಸಿದ ಅನಿತಾ :
ಭದ್ರಾವತಿ ತಾಲ್ಲೂಕಿನ ತಳ್ಳಿಕಟ್ಟೆ ಗ್ರಾಮದ ಅನಿತಾ ಗೃಹಲಕ್ಷ್ಮಿ ಹಣವನ್ನು ಖರ್ಚು ಮಾಡಿದರೆ ಖಾಲಿ ಆಗುತ್ತದೆ ಎಂದು 9 ತಿಂಗಳ ಹಣ ಅಂದರೆ ರೂ.18 ಸಾವಿರ ಹಣವನ್ನು ಕೂಡಿಟ್ಟು, ಹಸುವನ್ನು ಖರೀದಿ ಮಾಡಿ ಹೈನುಗಾರಿಕೆ ನಡೆಸುತ್ತಿದ್ದಾರೆ. ಹಾಗೂ ಪ್ರತಿ ತಿಂಗಳು ಜಮೆಯಾಗುವ ಗೃಹಲಕ್ಷಿö್ಮ ಹಣದೊಂದಿಗೆ ಮತ್ತುಷ್ಟು ಸೇರಿಸಿ ಕಿಡ್ನಿ ಸಮಸ್ಯೆ ಇದ್ದ ಪತಿಗೆ ಆಪರೇಷನ್ ಮಾಡಿಸಿದ್ದಾರೆ.
ಈ ಬಗ್ಗೆ ಅವರು ಮಾತನಾಡಿ, ಆಪರೇಷನ್ ವೆಚ್ಚವನ್ನು ಹಸುವಿನ ಹಾಲು ಮಾರಿ ಭರಿಸುತ್ತಿದ್ದೇನೆ. ಇಂಥ ಯೋಜನೆ ಕೊಟ್ಟ ಸಿಎಂ ಸಿದ್ದರಾಮಯ್ಯ ಅವರಿಗೆ ಒಳ್ಳೆಯದಾಗಲಿ. ಅವರಿಗೆ ಮತ್ತಷ್ಟು ಜಯ ಸಿಗಲಿ. ಬಡವರಿಗೆ ಇನ್ನಷ್ಟು ಯೋಜನೆಗಳನ್ನು ನೀಡಲಿ. ಗ್ಯಾರಂಟಿ ಯೋಜನೆಗಳನ್ನು ಟೀಕೆ ಮಾಡವರು ಮಾಡಲಿ. ಆದರೆ, ನಮ್ಮಂಥ ಬಡವರಿಗೆ ಅನುಕೂಲ ಆಗಿದೆ. ಗ್ಯಾರಂಟಿಗಳನ್ನು ಇದೇ ರೀತಿ ಮುಂದುವರಿಸಲಿ ಎಂದು ಮನವಿ ಮಾಡಿದ್ದಾರೆ.
ಮನೆ ರಿಪೇರಿ ಮಾಡಿಸಿದ ವಂದನ ಜೈನ್:
ಸಾಗರ ತಾಲ್ಲೂಕು, ಆವಿನಹಳ್ಳಿ ಗ್ರಾಮದ ವಂದನ ಜೈನ್ ಇವರಿಗೆ ಗಂಡ ಹಾಗೂ ಮಕ್ಕಳು ಯಾರು ಇರುವುದಿಲ್ಲ. ಇವರು ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದಾರೆ ಹಾಗೂ ಜೀವನ ನಡೆಸಲು ತುಂಬ ಕಷ್ಟಕರವಾಗಿದ್ದು ಇವರಿಗೆ ಯಾವುದೇ ಜಮೀನು ಆಸ್ತಿ ಇರುವುದಿಲ್ಲ. ಕೂಲಿ ಕಾರ್ಮಿಕರಾಗಿರುತ್ತಾರೆ. ಮತ್ತು ದುಡಿಯಲು ಕೂಡ ಅಶಕ್ತರಾಗಿರುತ್ತಾರೆ ಇವರು ವಾಸವಾಗಿರುವ ಮನೆ ಮಳೆ ಬಂದರೆ ಸೋರುತ್ತದೆ. ಮನೆಗೆ ಹೊದಿಸಿರುವ ತಗಡುಗಳು ಗಾಳಿಗೆ ಹಾರಿ ಹೋಗಿ ಜೀವನ ತುಂಬಾ ಅಸ್ತವ್ಯಸ್ತವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಗೃಹಲಕ್ಷ್ಮಿ ಯೋಜನೆ ಇವರಿಗೆ ಸಹಕಾರಿಯಾಗಿದೆ. ಗೃಹಲಕ್ಷ್ಮಿ ಹಣವನ್ನು ಒಟ್ಟುಗೂಡಿಸಿ ಮನೆಯನ್ನು ರಿಪೇರಿ ಮಾಡಿಸುತ್ತಿದ್ದು, ಸರ್ಕಾರಕ್ಕೆ ತುಂಬು ಹೃದಯದಿಂದ ಧನ್ಯವಾದಗಳನ್ನು ತಿಳಿಸಿರುತ್ತಾರೆ.
ಹೀಗೆ ಎಲ್ಲ ಮನೆಯ ಯಜಮಾನಿಯರು ಗೃಹಲಕ್ಷಿö್ಮ ಹಣವನ್ನು ತಾವು ಹಾಗೂ ತಮ್ಮ ಕುಟುಂಬಗಳ ಅಗತ್ಯ ಖರ್ಚುಗಳಿಗೆ, ಆದಾಯ ತರುವಂತಹ ಚಟುವಟಿಕೆಗಳಲ್ಲಿ ಸದ್ವಿನಿಯೋಗಪಡಿಸುತ್ತಿರುವುದು ಅಭಿನಂದನೀಯವಾಗಿದ್ದು, ಯೋಜನೆ ಅನುಷ್ಟಾನದ ಸಾರ್ಥಕತೆಗೆ ಕೈಗನ್ನಡಿಯಾಗಿದೆ.
- ಭಾಗ್ಯ ಎಂ ಟಿ
ವಾರ್ತಾ ಸಹಾಯಕರು, ವಾರ್ತಾ ಇಲಾಖೆ
Gyan Ganga English Medium School ಜ್ಞಾನ ಗಂಗಾ ಆಂಗ್ಲ ಮಾಧ್ಯಮ ಶಾಲೆಯ 30 ನೇ ವಾರ್ಷಿಕೋತ್ಸವ
Gyan Ganga English Medium School ಶಿವಮೊಗ್ಗ ನಗರದ ಜ್ಞಾನಗಂಗಾ ಅಂಗ್ಲ ಮಾಧಯಮ ಶಾಲೆಯು ತನ್ನ 30ನೇ ವಾರ್ಷಿಕೋತ್ಸವವನ್ನು ನಗರದ ಕುವೆಂಪು ರಂಗಮಂದಿರದಲ್ಲಿ ಶ್ರೀ ಗುರು ನಾಗಭೂಷಣ ಶಿವಚಾರ್ಯ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಆಚರಿಸಲಾಯಿತು.
ಈ ಸಂಧರ್ಭದಲ್ಲಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ನಿರಂಜನಮೂರ್ತಿ ಮಾತನಾಡಿದರು. ಡಾ. ಕೆ.ಬಿ. ಕಮಲಾಕ್ಷರಪ್ಪ ಉದ್ಘಾಟಿಸಿದರು.
Gyan Ganga English Medium School ಸಂಸ್ಥೆಯ ಅಧ್ಯಕ್ಷೆ ಲಲಿತಮ್ಮ ನಾಗೇಂದ್ರಪ್ಪಗೌಡ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥಾಪಕ ಬಿ. ಶೇಖರಪ್ಪ ಉಪಾಧ್ಯಕ್ಷ ಪ್ರಕಾಶ್, ಖಜಾಂಚಿ ಸಂಗೀತ ಉಪಸ್ಥಿತರಿದ್ದರು.
