Monday, June 23, 2025
Monday, June 23, 2025

Klive Special Article ನಿಯೋಜನೆಯ ಶಿಕ್ಷಕರು ವೃತ್ತಿಗೆ ಸಮರ್ಪಿಸಿ ಕೊಳ್ಳಬೇಕು-ಒಂದು ಅನುಭವ

Date:

Klive Special Article ಲೇ: ಎನ್.ಎಸ್.ಕುಮಾರ್

ಸರ್ಕಾರಿ ಕೆಲಸಕ್ಕೆ ಸೇರಿದ ಮೇಲೆ ಪ್ರತಿಯೊಬ್ಬರೂ ನಾವು ನಮ್ಮ ಕೆಲಸ ಕಾರ್ಯಗಳಲ್ಲಿ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕಾಗಿರುವುದು ಅನಿವಾರ್ಯ,ನಾವು ಕೆಲಸ ಮಾಡುವ ಮೂಲ ಸ್ಥಳವಾಗಿರಲಿ ಅಥವಾ ನಿಯೋಜನಗೊಂಡಿರುವ ಸ್ಥಳದಲ್ಲಾಗಲಿ ನಮ್ಮ ಕಾರ್ಯದಕ್ಷತೆಯನ್ನ ಹೆಚ್ಚಿಸಿಕೊಂಡು ಕೆಲಸ ಮಾಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಶಿಕ್ಷಣ ಇಲಾಖೆಯಲ್ಲಿರುವ ನಾವು ಯಾವುದೇ ಕಾಗದ ಪತ್ರಗಳೊಂದಿಗೆ ವ್ಯವಹರಿಸುವುದಿಲ್ಲ ಮಾನವೀಯ ಮೌಲ್ಯಗಳನ್ನು ಹೊಂದಿರುವ ಮಕ್ಕಳೊಂದಿಗೆ ವ್ಯವಹರಿಸುತ್ತೇವೆ. ಪ್ರತಿ ಮಗು ನಮ್ಮ ಚಲನವಲನಗಳನ್ನು ಗಮನಿಸುತ್ತದೆ ಆದ್ದರಿಂದ ನಾವುಗಳು ತರಗತಿಗಳಿಗೆ ಪೂರ್ವಭಾವಿ ಸಿದ್ಧತೆಯೊಂದಿಗೆ ಕಲಿಕಾ ಸಾಮರ್ಥ್ಯಗಳೊಂದಿಗೆ ಹಾಜರಾಗುವುದು ಬಹಳ ಮುಖ್ಯ.
ಚಿತ್ರದುರ್ಗದಲ್ಲಿ ಸಹ ನಿರ್ದೇಶಕನಾಗಿದ್ದಾಗ ಒಮ್ಮೆ ಹೊಳಲ್ಕೆರೆ ತಾಲೂಕಿನ ತಾಳ್ಯ ಗ್ರಾಮಕ್ಕೆ ಕಾರ್ಯಕ್ರಮ ಒಂದಕ್ಕೆ ಹೋಗಿದ್ದು ಕಾರ್ಯಕ್ರಮ ಮುಗಿದ ನಂತರ ಅಲ್ಲಿನ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದೆನು. Klive Special Article ಭೇಟಿಯ ಸಮಯದಲ್ಲಿ 7ನೇ ತರಗತಿಯಲ್ಲಿ ಶಿಕ್ಷಕರು ಗಣಿತ ವಿಷಯದ ಬಗ್ಗೆ ಪಾಠ ಬೋಧನೆಯನ್ನು ಮಾಡುತ್ತಿದ್ದರು. ತರಗತಿಗೆ ಭೇಟಿ ನೀಡಿ ಮಕ್ಕಳ ಕಲಿಕಾ ಪ್ರಗತಿಯನ್ನು ಪರಿಶೀಲಿಸುತ್ತಾ ಭಾಗಾಕಾರದ ಲೆಕ್ಕ ಒಂದನ್ನು ಮಕ್ಕಳಿಗೆ ಬಿಡಿಸಲು ಹೇಳಿದೆನು. ಮಕ್ಕಳು ಲೆಕ್ಕ ಬಿಡಿಸುವಲ್ಲಿ ಸ್ವಲ್ಪ ಗೊಂದಲಕ್ಕೆ ಒಳಗಾದಂತೆ ಕಂಡುಬಂದರು. ನಂತರ ಶಿಕ್ಷಕರಿಗೆ ಬಿಡಿಸಲು ಹೇಳಿದನು ಆಗ ಶಿಕ್ಷಕರು ಆ ಸರಳ ಲೆಕ್ಕವನ್ನು ಬಿಡಿಸಲು ಅಸಮರ್ಥರಾಗಿರುವುದು ಕಂಡುಬಂದಿತು. ಆಗ ಶಿಕ್ಷಕರು ಸರ್ ನಾನು ಈ ಶಾಲೆಯ ಶಿಕ್ಷಕ ಅಲ್ಲ, ನಾನು ಬೇರೆ ಶಾಲೆಯಿಂದ ಈ ಶಾಲೆಗೆ ನಿಯೋಜನೆಗೊಂಡು ಬಂದಿದ್ದೇನೆ. ಈ ಶಾಲೆಯ ಮಕ್ಕಳು ಅಷ್ಟು ಬುದ್ಧಿವಂತರಲ್ಲ ಸರ್ ಎಂದರು. ಸರಿ ಹಾಗಾದ್ರೆ ನೀವೇ ಲೆಕ್ಕ ಬಿಡಿಸಬಹುದು ಅಲ್ವಾ ಅಂದೆನು. ಪುನಃ ಆ ಶಿಕ್ಷಕರು ಸಾರ್, ನಾನು ನಿಯೋಜನೆಯ ಮೇಲೆ ಬಂದಿರುವ ಶಿಕ್ಷಕ ಸರ್, ಎಂದು ಒತ್ತಿ ಹೇಳಿದರು. ಆಗ ನಾನು ನಿಯೋಜನೆ ಮೇಲೆ ಬಂದರೆ ಈ ಲೆಕ್ಕ ಮಾಡಬಾರದು ಅಂತ ಇದೆಯೇನ್ರೀ ಎಂದು ಕೇಳಿದೆ ಹಾಗೂ ನಿಮ್ಮ ಮೂಲ ಶಾಲೆಯಲ್ಲಿ ಆದರೂ ಈ ಲೆಕ್ಕ ಮಾಡಿಸಬೇಕಲ್ವೇನ್ರಿ, ಯಾವ ಶಾಲೆ ಆದ್ರೆ ಏನಂತೆ, ಆ ಶಾಲೆಗೆ ಬೇರೆ ಲೆಕ್ಕ ಈ ಶಾಲೆಗೆ ಬೇರೆ ಲೆಕ್ಕ ಅಂತ ಏನಾದರೂ ಇರುತ್ತಾ? ಎಂದೆನು. ಆಗ ಶಿಕ್ಷಕರಿಗೆ ನಾನು ನಿಯೋಜನೆ ಮೇಲೆ ಬಂದಿರುವ ಶಿಕ್ಷಕ ಅಂತ ಹೇಳುವುದು ಮುಖ್ಯ ಅಲ್ಲ, ನಮ್ಮ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳುವುದು ಬಹಳ ಮುಖ್ಯ ಒಂದು ವೇಳೆ ನಮಗೆ ಸಾಮರ್ಥ್ಯಗಳನ್ನು ಕಲಿಸುವಲ್ಲಿ ಗೊಂದಲವಿದ್ದರೆ ಡಯಟ್ ಮೂಲಕ ತರಬೇತಿಗಳನ್ನು ಪಡೆದುಕೊಳ್ಳುವುದು ಹಾಗೂ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಚರ್ಚಿಸಿ ಸಮಸ್ಯೆಗಳನ್ನ ಬಗೆಹರಿಸಿಕೊಳ್ಳಬೇಕು ತರಗತಿಗಳಿಗೆ ಪೂರ್ವಭಾವಿ ಸಿದ್ಧತೆಯೊಂದಿಗೆ ಸಾಮರ್ಥ್ಯಗಳನ್ನು ಗಳಿಸಿಕೊಂಡು ಹಾಜರಾಗಬೇಕು. ಆಗ ನಾವು ಆತ್ಮಸ್ಥೈರ್ಯದೊಂದಿಗೆ ಮಕ್ಕಳಿಗೆ ಪರಿಪೂರ್ಣವಾದ ಕಲಿಕೆಯನ್ನು ಉಂಟುಮಾಡಲು ಸಾಧ್ಯವಾಗುತ್ತಿದೆ ಆಗ ಯಾವ ಶಾಲೆಯಾದರೇನು ಎಲ್ಲಾ ಮಕ್ಕಳು ಒಂದೇ ಎಂದು ಭಾವಿಸಿ ಬೋಧನೆ ಮಾಡಬೇಕು ಆಗ ಮಕ್ಕಳು ನಮ್ಮನ್ನು ಪ್ರೀತಿಸುತ್ತಾರೆ ಒಂದು ವೇಳೆ ನಾವು ಅಸಮರ್ಥರಾದರೆ ನಮ್ಮ ವೃತ್ತಿಗೆ ತೊಂದರೆಯಾಗುವ ಸಾಧ್ಯತೆಗಳು ಇರುತ್ತದೆ. ಆದ್ದರಿಂದ ನಾನು ನಿಯೋಜನೆಯ ಮೇಲೆ ಬಂದಿದ್ದೇನೆ ಎಂದು ಅಸಡ್ಡೆ ತೋರಬಾರದು. ಎಂದು ಹೇಳಿ ಭಾಗಾಕಾರದ ಲೆಕ್ಕವನ್ನು ಬಿಡಿಸುವಲ್ಲಿ ಸಹಕರಿಸಿ ಮಾರ್ಗದರ್ಶನ ಮಾಡಿ ಬಂದೆನು . ಆದ್ದರಿಂದ ಸರ್ಕಾರಿ ನೌಕರಿಯಲ್ಲಿರುವ ನಾವುಗಳಾಗಲಿ ಅಥವಾ ಯಾರೇ ಆಗಲಿ ನಮ್ಮ ನಮ್ಮ ವೃತ್ತಿಗಳಲ್ಲಿ ಹಾಗೂ ನಮ್ಮ ಕಾರ್ಯಕ್ಷೇತ್ರಗಳಲ್ಲಿ ದಕ್ಷತೆ ಮತ್ತು ಸಾಮರ್ಥ್ಯಗಳನ್ನು ಹೆಚ್ಚಿಸಿಕೊಂಡಾಗ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಶ್ರಮ ವಹಿಸಿದವರಿಗೆ ಮಾತ್ರ ಯಶಸ್ಸುಗಳು ಸಾಧ್ಯ. ಆದ್ದರಿಂದ ನಮ್ಮ ಕಾಯಕವನ್ನು ನಿಷ್ಠೆಯಿಂದ ಮಾಡುವುದು ನಮಗೆ ಗೌರವವನ್ನು ತಂದುಕೊಡುತ್ತದೆ.

ಎನ್ ಎಸ್ ಕುಮಾರ್
ನಿವೃತ್ತ ನಿರ್ದೇಶಕರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ಎಲ್ಲಾ ಸಮುದಾಯಗಳ ಸಾಮಾಜಿಕ,ಆರ್ಥಿಕ,ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆ ನಡೆಸುವ ಉದ್ದೇಶವಿದೆ – ಮಧು ಬಂಗಾರಪ್ಪ

Madhu Bangarappa ರಾಜ್ಯದಲ್ಲಿನ ವಿವಿಧ ಜಾತಿ ಜನಾಂಗಗಳ, ಅದರಲ್ಲೂ ಮುಖ್ಯವಾಗಿ ಹಿಂದುಳಿದ...

DK Shivakumar ಎತ್ತಿನಹೊಳೆ ಯೋಜನೆ ಕಾಮಗಾರಿ‌ ಪರಿಶೀಲಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

DK Shivakumar ಎತ್ತಿನ ಹೊಳೆ ಯೋಜನೆಯ ಮೂಲಕ ಕುಡಿಯುವ ನೀರನ್ನು ಬರಪೀಡಿತ...

Royal English Medium School ರಾಯಲ್ ಡೈಮಂಡ್ ಶಾಲೆಯಲ್ಲಿ‌ ನಿತ್ಯ ಯೋಗ ಮಾಡುವ ಸಂಕಲ್ಪ ಸ್ವೀಕಾರ

Royal English Medium School ಶಿವಮೊಗ್ಗ ನಗರದ ಹೆಸರಾಂತ ವಿದ್ಯಾಸಂಸ್ಥೆಯಲ್ಲಿ ಒಂದಾದ...