Friday, March 20, 2026
Friday, March 20, 2026
Home Blog Page 465

Madhu Bangarappa ಬೆಳಗಾವಿ ಅಧಿವೇಶನಕ್ಕೆ ಸ್ವಕ್ಷೇತ್ರದ ಮಕ್ಕಳನ್ನ ಆಹ್ವಾನಿಸಿ ಮಕ್ಕಳ ಮೆಚ್ಚುಗೆ ಪಡೆದ ಸಚಿವ ಮಧು ಬಂಗಾರಪ್ಪ

0

Madhu Bangarappa ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಸುಮಾರು 350 ಕ್ಕೂ ಹೆಚ್ಚು ಪಿಯುಸಿ ವಿದ್ಯಾರ್ಥಿಗಳು ಮಂಗಳವಾರ ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನ ಮಂಡಲ ಚಳಿಗಾಲದ ಅಧಿವೇಶನವನ್ನು ವೀಕ್ಷಿಸುವ ಮೂಲಕ ಕಲಾಪದ ಬಗ್ಗೆ ವಿಶೇಷ ಜ್ಞಾನ ಪಡೆದರು.

ಮತ್ತು ವಿದ್ಯಾರ್ಥಿಗಳು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿಯೂ ಪಾಲ್ಗೊಂಡರು.

ಸೊರಬ ವಿಧಾನಸಭಾ ಕ್ಷೇತ್ರದ ಶಾಸಕರೂ ಆದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ವಿಶೇಷ ಆಹ್ವಾನದ ಮೇರೆಗೆ ಸೊರಬ ತಾಲೂಕಿನ ಸಿರಿವಂತೆ, ಸೊರಬ, ಉಳವಿ ಹಾಗೂ ಆನವಟ್ಟಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ 350ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಉಪನ್ಯಾಸಕರೊಂದಿಗೆ ವಿಶೇಷ ಬಸ್ಸಿನಲ್ಲಿ ಬೆಳಗಾವಿಗೆ ತೆರೆಳಿದ್ದರು.

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ವಿದ್ಯಾರ್ಥಿಗಳು ಆಗಮಿಸಿದ್ದು, ಸುವರ್ಣಸೌಧದಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರಾದ ಮಧು ಬಂಗಾರಪ್ಪನವರನ್ನು ಭೇಟಿ ಮಾಡಿದರು.

ಅಧಿವೇಶನದ ಕಲಾಪ ವೀಕ್ಷಣೆಯ ಜೊತೆಗೆ ಶಿಕ್ಷಣ ಸಚಿವರೊಂದಿಗಿನ ವಿಶೇಷ ಸಂವಾದ ಕಾರ್ಯಕ್ರಮಕ್ಕಾಗಿಯೇ ವಿದ್ಯಾರ್ಥಿಗಳನ್ನು ಅಲ್ಲಿಗೆ ಆಹ್ವಾನಿಸಲಾಗಿತ್ತು. ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆಯೇ ವಿದ್ಯಾರ್ಥಿಗಳು ಮೊದಲ ವಿಧಾನ ಮಂಡಲದ ವಿಧಾನ ಸಭೆಯ ಕಲಾಪವನ್ನು ವೀಕ್ಷಿಸಿದರು. ಬಳಿಕ ವಿಧಾನ ಪರಿಷತ್ ಕಲಾಪವನ್ನು ವೀಕ್ಷಿಸಿದರು. ಎರಡು ಸದನಗಳಲ್ಲಿ ವಿದ್ಯಾರ್ಥಿಗಳು ಕಲಾಪ ವೀಕ್ಷಿಸುವುದಕ್ಕೆ ವಿಧಾನ ಸಭೆಯ ಸಭಾಧ್ಯಕ್ಷರು ಮತ್ತು ಪರಿಷತ್ತಿನ ಸಭಾಪತಿಗಳಿಂದ ಸಚಿವರಾದ ಮಧು ಬಂಗಾರಪ್ಪ ಅವರು ಅನುಮತಿ ಪಡೆದಿದ್ದರು.

ಎರಡು ಸದನಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ಕಲಾಪ ವೀಕ್ಷಿಸಿ, ಪುಳಕಿತರಾದರು.
ಆ ಬಳಿಕ ಸುವರ್ಣ ಸೌಧದ ವಿಶೇಷ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಸಹಕಾರ ಸಚಿವರಾದ ಕೆ.ಎನ್. ರಾಜಣ್ಣ, ಶರಣ ಬಸಪ್ಪ ದರ್ಶನಾಪುರ, ಶಿವಾನಂದ ಪಾಟೀಲ್ ವಿಧಾನ ಪರಿಷತ್ ಸದಸ್ಯ ಸೇರಿದಂತೆ ಹಲವರು ಪಾಲ್ಗೊಂಡರು.
ಸಚಿವರು ಹಾಗೂ ಶಾಸಕರೊಂದಿಗಿನ ಸಂವಾದದಲ್ಲಿ ಆನವಟ್ಟಿ ಜೂನಿಯರ್ ಕಾಲೇಜು ವಿದ್ಯಾರ್ಥಿ ನಾಗಯ್ಯ ಸ್ವಾಮಿ “ಸಿಇಟಿ ಗೆ ಸೂಕ್ತ ಪಠ್ಯ ಪರಿಕರಗಳು ಇಲ್ಲ. ಮತ್ತು ಕೆಲವು ಮೂಲ ಭೂತ ಸೌಕರ್ಯಗಳ ಕೊರತೆಯಿದೆ. ಇದನ್ನು ಬಗೆಹರಿಸಬೇಕೆಂದು” ಸಚಿವರಲ್ಲಿ ಮನವಿ ಮಾಡಿದರು. ಹಾಗೆಯೇ ಸೊರಬ ಜೂನಿಯರ್ ಕಾಲೇಜಿನ ವಿದ್ಯಾರ್ಥಿನಿ ನಾಗವೇಣಿ “ಸೈನ್ಸ್ ಮತ್ತು ಕಾಮರ್ಸ್ ಪ್ರವೇಶಕ್ಕೆ ಸರ್ಕಾರದಿಂದ ಉಚಿತ ತರಬೇತಿ ನೀಡಲಾಗುತ್ತಿದೆ. ಅದೇ ಮಾದರಿಯಲ್ಲಿ ಕಲಾ ವಿಭಾಗದ ವಿದ್ಯಾರ್ಥಿಗಳಿಗೂ ಸಹ ಸರ್ಕಾರದ ವತಿಯಿಂದ ತರಬೇತಿ ನೀಡುವ ನಿಟ್ಟಿನಲ್ಲಿ ಸರ್ಕಾರ ಗಮನಹರಿಸಬೇಕಿದೆ” ಎಂದು ಮನವಿ ಮಾಡಿದರು.
ವಿದ್ಯಾರ್ಥಿಗಳಿಗೂ ರಾಜಕೀಯ ಜ್ಞಾನ ಬೇಕೆಂಬ ಕಾರಣಕ್ಕೆ ಕ್ಷೇತ್ರದ ವಿದ್ಯಾರ್ಥಿಗಳಿಗೆ ಅಲ್ಲಿನ ಉಪನ್ಯಾಸಕ ಸಿಬ್ಬಂದಿ, ಆಡಳಿತ ಮಂಡಳಿ ಒತ್ತಾಸೆಯ ಮೇರೆಗೆ ಈ ವ್ಯವಸ್ಥೆ ಮಾಡಲಾಗಿತ್ತು. ವಿದ್ಯಾರ್ಥಿಗಳು ಅತೀವ ಉತ್ಸಾಹದಿಂದಲೇ ಕಲಾಪವನ್ನು ವೀಕ್ಷಿಸಿ, ಅನೇಕ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದಿದ್ದು ನಿಜಕ್ಕೂ ವಿಶೇಷ ಎನಿಸಿತು. ಈ ರೀತಿಯ ಪ್ರಕ್ರಿಯೆ ಯುವಜನರಿಗೆ ಆಗಬೇಕಿದೆ. ಅವರಿಗೂ ರಾಜಕೀಯ ಜ್ಞಾನ ಬೇಕಿದೆ. ಪ್ರಜಾ ಪ್ರಭುತ್ವ ವ್ಯವಸ್ಥೆಯ ಮಹತ್ವ ಗೊತ್ತಾಗಬೇಕಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

Madhu Bangarappa ಸುವರ್ಣಸೌಧದ ಸಭಾಂಗಣದಲ್ಲಿ ಸಚಿವರಾದ ಕೆ.ಎನ್ ರಾಜಣ್ಣ, ಶರಣಬಸಪ್ಪಗೌಡ ದರ್ಶನಾಪುರ ಅವರು ಶೈಕ್ಷಣಿಕವಾಗಿ ಮಕ್ಕಳಿಗೆ ಶಿಕ್ಷಣದ ಅರಿವು ಹಾಗೂ ಅದರ ಮಹತ್ವದ ಕುರಿತು ತಿಳಿಸಿದರು. ಬಳಿಕ ನೆರೆದಿದ್ದ ವಿದ್ಯಾರ್ಥಿಗಳೊಂದಿಗೆ ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ರಾಮೋಜಿ ಗೌಡ, ಎಂ.ಆರ್ ಸೀತಾರಾಂ ಹಾಗೂ ಆರ್ಥಿಕ ಇಲಾಖೆ ಕಾರ್ಯದರ್ಶಿ ಡಾ|| ಪಿ.ಸಿ ಜಾಫರ್ ಅವರು ಮಕ್ಕಳೊಂದಿಗೆ ಸಂವಾದ ನಡೆಸಿ ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸುವರ್ಣಸೌಧದ ಸಭಾಂಗಣದಲ್ಲಿ ಇಂದಿನ ಕಾರ್ಯ ಕಲಾಪದ ಕುರಿತು ಅವರ ಅನುಭವವನ್ನು ಹಂಚಿಕೊAಡು ಸಂತಸ ವ್ಯಕ್ತಪಡಿಸಿದರು. ಬೆಳಗಾವಿಗೆ ಆಗಮಿಸಲು ಸಾರಿಗೆ ವ್ಯವಸ್ಥೆ ಹಾಗೂ ಅಧಿವೇಶನ ವೀಕ್ಷಿಸುವ ಸುವರ್ಣಾವಕಾಶವನ್ನು ಕಲ್ಪಿಸಿರುವುದಕ್ಕೆ ಸರ್ಕಾರ ಮತ್ತು ಸಚಿವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದರು.

ಮಕ್ಕಳು ಅವರ ಗುರಿ ಮತ್ತು ಸಾಧನೆಯ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಂಡು ಅವರ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳುವಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶಾಸಕರಾದ ಭೀಮಣ್ಣ ಟಿ ನಾಯ್ಕ್, ರಾಜು ಚಿಮ್ಮನಕಟ್ಟಿ ಸೇರಿದಂತೆ ಶಾಲಾ ಕಾಲೇಜಿನ ಸಿಬ್ಬಂದಿ ವರ್ಗವು ಉಪಸ್ಥಿತರಿದ್ದರು.

Klive Special Article ಪ್ರೇಮ, ಕಾಮನೆಗಳ ಎರಕದ “ಕಾಡುವ ಹುಡುಗನ ಹಾಡು”

0

ಕೃತಿ ಅವಲೋಕನ

Klive Special Article “ಕಾಡುವ ಹುಡುಗನ ಹಾಡು” ಇದು ಶಿವಮೊಗ್ಗದ ಕಟೀಲು ಅಶೋಕ್ ಪೈ ಕಾಲೇಜಿನ ಉಪನ್ಯಾಸಕಿ ಬಿ ಎಸ್ ಅಂಜುಂ ಅವರ ಚೊಚ್ಚಲ ಕೃತಿ. ಒಲವ ಹಾಯಿದೋಣಿ ಎಂಬ ಅಡಿಬರಹ ಹೊಂದಿರುವ, ಪ್ರೇಮವೇ ಕಾವ್ಯವಾಗಿರುವ ಕೃತಿ ಇದು. ಯುವತಿಯೊಬ್ಬಳು ತನ್ನ ಪ್ರೇಮಿಗೆ ಪ್ರೇಮವನ್ನು ನಿವೇದಿಸುವ ಪರಿ ಇದರಲ್ಲಿದೆ. ಇಲ್ಲಿನ ಚುಟುಕು ಅಥವಾ ಕವನಗಳಲ್ಲ್ಲಿ ಅಸಂಖ್ಯಾತ ಉಪಮೇಯಗಳನ್ನು ಬಳಸಲಾಗಿದೆ. ತನ್ನಲ್ಲಿರುವ ಪ್ರೀತಿಯನ್ನು ಯುವತಿ ಯಾವ್ಯಾವ ರೀತಿಯಲ್ಲಿ ವಿವರಿಸಲು ಸಾಧ್ಯವೋ ಅವೆಲ್ಲ ಮಾರ್ಗವನ್ನು ಕೃತಿಯ ಲೇಖಕಿ ತೋರಿಸಿದ್ದಾರೆ. ವಯಸ್ಸನ್ನು, ಅನುಭವವನ್ನು ಮೀರಿದ ಹರಿಹರೆಯದ ಪ್ರೇಮದ ಸಹಜ ಭಾವ ಇಲ್ಲದರಲ್ಲಿ ಚಿತ್ರಿವಾಗಿದೆ.
ಪ್ರೀತಿ ಎಂದರೇನು ಎನ್ನುವುದರ ಅರ್ಥವನ್ನು ಅವರೇ ಕೃತಿಯಲ್ಲಿ ಒಂದೆಡೆ ಬರೆದಿದ್ದಾರೆ-

  • ಪ್ರೀತಿ ಅರ್ಥ ಮಾಡಿಕೊಂಡರೆ ಅದೊಂದು ಅನುಭವ, ಕೇವಲ ನೋಡುವುದಾದರೆ ಅದೊಂದು ಸಂಬಂಧ, ಹೇಳುವುದಾದರೆ ಅದೊಂದು ಸುಂದರ ಶಬ್ದ, ಇಷ್ಟಪಟ್ಟರೆ ಅದೊಂದು ಜೀವನ, ನಿಭಾಯಿಸುವುದಾದರೆ ಅದೊಂದು ಆಣೆ, ಸಿಕ್ಕುಬಿಟ್ಟರೆ ಅದೇ ಸ್ವರ್ಗ
    ಪ್ರೀತಿ-ಪ್ರೇಮದ ಬಗ್ಗೆ ಸಾಕಷ್ಟು ಕೃತಿ ಬಂದಿದೆಯಾದರೂ ಅವುಗಳಂತೆ ಈ ಕೃತಿ ಇಲ್ಲ. ಹಾಗಾಗಿ ಒಮ್ಮೆ ಇದನ್ನು ಓದಬೇಕೆನಿಸುತ್ತದೆ. ಈ ಕೃತಿಯ ವಿಶೇಷವೆಂದರೆ, ಇಲ್ಲಿ ಒಲವನ್ನು ನಿವೇದಿಸಿರುವ ರೀತಿ ಓದುಗನನ್ನು ಸೆಳೆಯುತ್ತದೆ. ಒಂದಕ್ಕಿಂತ ಒಂದು ಹೊಸ ಉಪಮೆಗಳಿಂದ ನಮ್ಮೊಳಗೆ ಆವರಿಸಿಬಿಡುತ್ತವೆ. ಪದಲಾಲಿತ್ಯ ಮೆಚ್ಚುವಂತದ್ದು. ಕವಿತೆಯನ್ನು ಹೊಸೆದ ರೀತಿ ಮನೋಹರವಾದುದು. ಕೆಲವು ಕವಿತೆಗಳು ಎರಡು ಸಾಲಿನದ್ದಾದರೆ, ಇನ್ನು ಕೆಲವು ಮೂರು, ನಾಲ್ಕು, ಹೀಗೆ ಆರೇಳು ಸಾಲಿನವರೆಗೆ ಬೆಳೆಯುತ್ತಾ ಹೋಗಿವೆ. ಅತಿ ಸುಲಭದಲ್ಲಿ ಓದುಗ ಅರ್ಥೈಸಿಕೊಳ್ಳುವ ಸಾಲುಗಳು ಇಲ್ಲಿವೆ. ಕೃತಿಯ ತುಂಬಾ ಹೀಗೆ ಸರಳ, ಸುಂದರ ಶೈಲಿಯಲ್ಲಿ, ಪ್ರೀತಿಯ ಎರಕವಿದೆ.
    ಬೆನ್ನುಡಿ ಬರೆದ ಸುಧೀಂದ್ರ ಅವರು ಹೇಳಿರುವಂತೆ, ಓದುತ್ತ ಹೋದಂತೆ ಓದುಗನೇ ಕವಿಯಾಗಿ ಭಾವನೆಯ ಸೋನೆಮಳೆಯಲ್ಲಿ ನೆನೆಯುವಂತೆ ಮಾಡುವ ಮೋಡಿ ಇಲ್ಲಿದೆ. ಇದು ನಿಜಕ್ಕೂ ಸತ್ಯ. ಇಡೀ ಕೃತಿ ಪ್ರೀತಿಯ ಸೋನೆಮಳೆಯಲ್ಲೇ ಮಿಂದಿದೆ.
    ಇಲ್ಲಿ ಆಕರ್ಷಿಸುವ ಕೆಲವು ಸಾಲುಗಳಿವೆ: ನಿನ್ನ ಮನಸ್ಸಿನ ಪಾಸ್ ವರ್ಡ್ ಹೇಳಿಬಿಡು, ಪ್ರೀತಿಯನ್ನು ಇನ್ಸ್ಟಾಲ್ ಮಾಡಬೇಕಿದೆ

ಇಂತಹ ಸುಂದರ ಸಾಲುಗಳು ಓದುಗನನ್ನು ಆಕರ್ಷಿಸುತ್ತವೆ.

ಇನ್ನೊಂದು ಸಾಲು ಗಮನಿಸಿ:

ಆತ ಕೇಳಿದ, ಅದೆಷ್ಟು ಪ್ರೀತಿ ನಿನಗೆ ನನ್ನ ಮೇಲೆಂದು? ನಾ ಹೇಳಿದೆ, ನೀನು ನನಗೆ ಆಧಾರ್ ಕಾರ್ಡ್ ಫೋಟೋದಲ್ಲೂ ಸುಂದರವಾಗಿ ಕಾಣುವಷ್ಟು
ಆಧಾರ ಕಾರ್ಡಿನಲ್ಲಿ ಫೋಟೊ ಎಷ್ಟು ಸುಂದರವಿರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಅದರ ಫೋಟೊ ನೋಡಿದಾಗಲೂ ನಿನ್ನ ಸುಂದರ ಮುಖವೇ ಅಲ್ಲಿ ಕಾಣುವಷ್ಟು ಪ್ರೀತಿ ಇದೆ.
ಅತಿ ಚಿಕ್ಕ ಕವನ ಸಂಕಲನ ಇದಾದರೂ ಒಮ್ಮೆ ಕೈಯ್ಯಲ್ಲಿ ಪುಸ್ತಕ ಹಿಡಿದರೆ ಓದಿಸಿಕೊಂಡು ಹೋಗುವುದರ ಜೊತೆಗೆ ಪ್ರತಿ ಸಾಲುಗಳನ್ನು ಮತ್ತೆ ಮತ್ತೆ ಓದಬೇಕೆನಿಸುತ್ತದೆ.
ಇದಕ್ಕೆ ಸಾಕಷ್ಟು ಉದಾಹರಣೆ ಕೊಡಬಹುದು:

Klive Special Article ನಿನ್ನ ಪ್ರೀತಿಯ ಅಲೆಯಿಂದ ಈಜುವುದು ತಿಳಿದಿದ್ದರೂ ಮುಳುಗುವುದಷ್ಟನ್ನೇ ಇಷ್ಟಪಡುವಷ್ಟು ಪ್ರೀತಿ ಇದೆ

ನಿನಗಿಂತ ಚೆನ್ನಾಗಿರುವವರು ಇದ್ದಾರೆನೋ ಗೊತ್ತಿಲ್ಲ. ಏಕೆಂದರೆ, ನಿನ್ನ ಹೊರತು ಬೇರೆ ಯಾರನ್ನೂ ನಾ ನೋಡಿಲ್ಲ

ನನ್ನ ಕೈಬರಹ ನಿನ್ನಷ್ಟು ಸುಂದರವಾಗಿಲ್ಲ ಗೆಳೆಯ ಹೌದು, ನಾನು ನಿನ್ನನ್ನು ಪ್ರತಿದಿನ ನನ್ನ ಸಾಲುಗಳಲ್ಲಿ ಅಲಂಕರಿಸುವುದನ್ನು ನಿಲ್ಲಿಸಿಲ್ಲ

ನಿನ್ನ ಒಂದು ನೋಟಕ್ಕೆ ನನ್ನದು ಆ ಗತಿಯಾದರೆ ಇನ್ನು ನಿಮ್ಮನೆಯ ಕನ್ನಡಿಯ ಪರಿಸ್ಥಿತಿ ಏನಾಗಿದೆಯೋ ಏನೋ

ಇಂತಹ ವಿಶೇಷ ಅರ್ಥದ ಜೊತೆ ಪ್ರೀತಿ-ಪ್ರೇಮ ಹೇಗಿರಬೇಕು, ಅದನ್ನು ಹೇಗೆ ನಿವೇದಿಸಬಹುದು, ಯಾವುದೇ ಅಶ್ಲೀಲತೆ ಇಲ್ಲದೆ ಓದುಗನನ್ನು ಆಕರ್ಷಿಸುವ ಪರಿ, ಪ್ರೀತಿ ಎಷ್ಟು ಪರಿಶುದ್ಧ ಎನ್ನುವುದನ್ನು ಸರಳ, ಸುಂದರವಾಗಿ ಚಿತ್ರಿಸಿದ್ದಾರೆ. ಹುಡುಗ-ಹುಡುಗಿಯರು ಪ್ರೇಮ ಕವನ ಬರೆಯುವುದು ಸಾಮಾನ್ಯ ಎನ್ನುವುದು ಸತ್ಯವಾದರೂ ಹೊಸ ಮಾದರಿಯಲ್ಲಿ ಹೇಗೆ ಬರೆಯಬಹುದು ಎನ್ನುವುದಕ್ಕೆ ಇಲ್ಲಿನ ಸಾಲುಗಳು ಸಾಕ್ಷಿಯಾಗುತ್ತವೆ. ಜೊತೆಗೆ ಹೊಸ ಲೋಕಕ್ಕೆ ನಮ್ಮನ್ನು ಕೊಂಡೊಯ್ಯುವ ಶಕ್ತಿಯನ್ನು ಇಲ್ಲಿನ ಕವನಗಳು ಹೊಂದಿವೆ.
ಇಲ್ಲಿ ಒಲವನ್ನು ನಿವೇದಿಸಿಕೊಂಡ ಮಾದರಿ ವಿಶೇಷವೆನಿಸುತ್ತದೆ. ಕವಯಿತ್ರಿ ಪ್ರೇಮಾನುಭವವನ್ನೇ ಕಟ್ಟಿಕೊಟ್ಟಿದ್ದಾರೆ. ವಿಶೇಷ ಅನುಭೂತಿ ಕವಿತೆಯಲ್ಲಿದೆ. ಬರೆಯುವ ಶೈಲಿ ಚಂದವಿದೆ.
ಏನೇ ಆಗಲಿ, ಹೋಗಲಿ, ಇರಲಿ, ನನಗೆ ನೀನೇ ಬೇಕು, ನಿನಗಿಂತ ಒಳ್ಳೆಯವರು ಸಿಗಬಹುದು. ಆದರೂ ನೀನೇ ನನಗೆ ಸಿಕ್ಕಿದ್ದರೆ ಒಳ್ಳೆಯದು
ಎನ್ನುವ ಸಾಲಿನ ಮೂಲಕ ಉತ್ಕಟ ಪ್ರೇಮದ ಪರಿ, ತವಕವನ್ನು ಆಕರ್ಷಣೀಯವಾಗಿ ಕಟ್ಟಿಕೊಟ್ಟಿದ್ದಾರೆ. ಯುವಕ-ಯುವತಿಯರು ಹೆಚ್ಚಾಗಿ ಇಂತಹ ಕೃತಿಗಳನ್ನು ಹೆಚ್ಚು ಇಷ್ಟಪಡಬಹುದಾದರೂ ಎಲ್ಲ ಓದುಗರೂ ಪ್ರೀತಿಯನ್ನು ನಾವೆಣಿಸಿದ್ದಕ್ಕಿಂತ ಚೆನ್ನಾಗಿ ಕವಯಿತ್ರಿ ಇಲ್ಲಿ ವಿವರಿಸಿದ್ದನ್ನು ಗಮನಿಸಬಹುದು.

ದತ್ತಾತ್ರೇಯ ಹೆಗಡೆ ಶಿವಮೊಗ್ಗ

Akashvani Bhadravati ಸಾರ್ವಜನಿಕ ಸ್ಥಳಗಳಲ್ಲಿ ಪ್ರವಾಸಿತಾಣಗಳ ಚಿತ್ರ ಪ್ರದರ್ಶನ. ಪ್ರವಾಸೋದ್ಯಮಕ್ಕೆ ಬೆಂಬಲ- ಎನ್.ಹೇಮಂತ್

0

Akashvani Bhadravati ಆಕಾಶವಾಣಿ ಭದ್ರಾವತಿ 60ನೇ ವರ್ಷದ ವಜ್ರ ಮಹೋತ್ಸವ ವರ್ಷಾಚರಣೆ ಸಂದರ್ಭದಲ್ಲಿ ಆಕಾಶವಾಣಿಯಲ್ಲಿ ಸಿದ್ದಪಡಿಸಿದ ಶಿವಮೊಗ್ಗ ಜಿಲ್ಲೆಯ ಪ್ರಸಿದ್ದ ಪ್ರವಾಸಿತಾಣದ ಗೋಡೆಚಿತ್ರವನ್ನು ಶಿವಮೊಗ್ಗ ಜಿಲ್ಲೆಯ ಪ್ರಭಾರಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾಪಂಚಾಯತಿಯ ಮುಖ್ಯಕಾರ್ಯನಿರ್ಹಣಾಧಿಕಾರಿಗಳಾದ ಹೇಮಂತ್.ಎನ್ ಅವರು ರಿಬ್ಬನ್ ಕಟ್ ಮಾಡುವ ಮುಖಾಂತರ ಉದ್ಘಾಟಿಸಿದರು.

ಈ ಸಮಯದಲ್ಲಿ ಆಕಾಶವಾಣಿ ಭದ್ರಾವತಿಯ ಕಾರ್ಯಕ್ರಮ ಮುಖ್ಯಸ್ಥರಾದ ಎಸ್.ಆರ್.ಭಟ್ಟ್, ಕಾರ್ಯಕಮ ಅಧಿಕಾರಿ ಎಸ್.ಎಲ್.ರಮೇಶ್‌ಪ್ರಸಾದ್ ಹಾಗೂ ತಾಂತ್ರಿಕವಿಭಾಗ ಮತ್ತು ಆಡಳಿತ ವಿಭಾಗದ ಸಿಬ್ಬಂದಿಗಳು ಉಪಸ್ಥಿತರಿದ್ದರು. ಈ ಸಮಯದಲ್ಲಿ ಹೇಮಂತ್ ರವರು ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಚಿತ್ರಗಳನ್ನು ಹಾಕುವದರಿಂದ ಪ್ರವಾಸೋದ್ಯಮದ ಬೆಳವಣಿಗೆ ಸಾದ್ಯ ಎಂದರು.

Akashvani Bhadravati ಕಾರ್ಯಕ್ರಮ ಮುಖ್ಯಸ್ಥರಾದ ಎಸ್.ಆರ್.ಭಟ್ ಅವರು ಆಕಾಶವಾಣಿ ೬೦ರ ಸಂಭ್ರಮದಲ್ಲಿ ಇಂತಹ ಚಟುವಟಿಕೆ ಮಾಡುತ್ತಿರುವದರಿಂದ ಸಾರ್ವಜನಿಕರಿಗೆ ಕಚೇರಿ ಭೇಟಿಯ ಸಮಯದಲ್ಲಿ ಜಿಲ್ಲೆಯ ಪ್ರವಾಸಿತಾಣದ ಪರಿಚಯವೂ ಸಾದ್ಯವಾಗುತ್ತದೆ ಎಂದು ತಿಳಿಸಿದರು.

Klive Special Article ಕನ್ನಡ – ಒಂದಷ್ಟು ಆತಂಕಗಳು

0

Klive Special Article ಮತ್ತೊಮ್ಮೆ ಕನ್ನಡದ ನುಡಿ ಜಾತ್ರೆ ಬಂದಿದೆ .
ಆಡುಭಾಷೆ , ಶುದ್ಧ ಗ್ರಾಮೀಣ ಸೊಗಡಿನ ಕನ್ನಡದ ಕಂಪಿನ ನೆಲ ಮಂಡ್ಯದಲ್ಲಿ ನಡೆಯುತ್ತಿರುವ
87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಈ ಕಾಲಘಟ್ಟದಲ್ಲಿ, ಸಂಗೀತಾ ಕಟ್ಟಿ ಗಾಯನದ ‘ಮಬ್ಬು ಹರಿಯುವುದೇನಾ? ಹಬ್ಬ ವಾಗುವುದೇನಾ?’ ಗೀತೆಯ ಸಾಲುಗಳು ಅದೇಕೋ ನನ್ನ ಕಿವಿಯಲ್ಲಿ ಅನುರಣಿಸುತ್ತಿವೆ . 87 ನೇ ಸಾಹಿತ್ಯ ಸಮ್ಮೇಳನದ ಈ ಸಂದರ್ಭದಲ್ಲಾದರೂ ಕನ್ನಡಿಗರ ಕಣ್ಣಿಗೆ ಕವಿದ ಮಬ್ಬು ಹರಿದೀತೇ ? ನೋಡಬೇಕಾಗಿದೆ

ಕನ್ನಡದ ಸಂದರ್ಭದಲ್ಲಿ ಹೇಳುವುದಾದರೆ ಅನೇಕ ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ. ಪದ್ಮ ಪ್ರಶಸ್ತಿ ಗಳೂ ಬಂದಿವೆ .ಕೇಂದ್ರ ಸಾಹಿತ್ಯ, ನಾಟಕ, ಲಲಿತ ಕಲಾ ಅಕಾಡೆಮಿ ಪುರಸ್ಕಾರಗಳಿಗೆ ಭಾಜನರಾದ ಬಹಳಷ್ಟು ಪ್ರತಿಭಾನ್ವಿತರಿದ್ದಾರೆ. ರಾಷ್ಟ್ರ ಪ್ರಶಸ್ತಿ ಗಳಿಸಿದ ಚಲನ ಚಿತ್ರಗಳಿವೆ . ದ್ರೋಣಾಚಾರ್ಯ,ಏಕಲವ್ಯ, ಅರ್ಜುನ ಪ್ರಶಸ್ತಿ ಪಡೆದ ಅನೇಕ ಕ್ರೀಡಾಪಟು ಗಳಿದ್ದಾರೆ . ಆದರೂ ಇವೆಲ್ಲವುಗಳಗಳ ನಡುವೆಯೂ “ಕಾನನವೇನೋ ಸುಂದೆರ ಗಹನ; ಆದರೆ ನನಗಿದೆ ವಚನ ಬಂಧನ. ನಡೆಯಲೇ ಬೇಕಿದೆ ನಿದ್ರೆಗೂ ಮುನ್ನ; ಮೈಲು ಮೈಲು ಗಳ ದಾರಿಯನ. ( The woods are lovely , dark and deep But I have promises to keep Miles to go before I sleep And miles to go before I sleep ) ಅನ್ನುವ ರಾಬರ್ಟ್ ಫ್ರಾಸ್ಟ್ ನ ಕವಿತೆಯ ಸಾಲುಗಳು ಕನ್ನಡಿಗರ ನಿರಾತಂಕ ,ನೆಮ್ಮದಿಯ ಸಹಿಷ್ಣುತಾ ಭಾವನೆಗಳಿಗೆ ಸವಾಲು ಒಡ್ಡುತ್ತವೆ ಅನಿಸುತ್ತದೆ .

ಕನ್ನಡದ ಬಳಕೆಯನ್ನು ಬಹುತೇಕ ಕೈ ಬಿಟ್ಟ ‘ನಾನ್ ಪ್ರಾಕ್ಟಿಸಿಂಗ್ ಕನ್ನಡಿಗರ ‘ ಮತ್ತು ‘ಕನ್ನಡ ಮಕ್ಕಳ’ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ . ನಮದೆ ನೆಲ, ನಮದೆ ಜಲ , ಇಲ್ಲವಾಯ್ತು ನುಡಿಯ ಬಲ ! ಅನ್ನುವಂತ ಪರಿಸ್ಥಿತಿ . ನವೆಂಬರ್ ಮಾಸದ ರಾಜ್ಯೋತ್ಸವ ಆಚರಣೆಗಳು ಕನ್ನಡಿಗರ ಅಸ್ಮಿತೆ ಮತ್ತು ಆತ್ಮಾಭಿಮಾನವನ್ನು ಬೆಳೆಸುವ, ಕಾಪಿಡುವ ದಿಕ್ಕಿನಲ್ಲಿ ಒಂದಿಷ್ಟು ಚಿಂತಿಸುವ, ಆತ್ಮ ನಿರೀಕ್ಷಣೆಯ ಕಾಲವೂ ಆಗಿದೆ.

ಹನ್ನೆರಡು ವರ್ಷಗಳ ಕಾಲ ಕರ್ನಾಟಕದ ಹೊರಗಡೆ ರಾಷ್ಟ್ರೀಯ ಸೇವಾ ಯೋಜನೆಯ ಪ್ರಾದೇಶಿಕ ಅಧಿಕಾರಿಯಾಗಿ ಕೆಲಸ ಮಾಡಿ, ದೇಶದ ಉದ್ದಗಲಕ್ಕೂ ನಡೆದ ಸಭೆ, ಶಿಬಿರ, ಸಮಾರಂಭಗಳಲ್ಲಿ ಭಾಗವಹಿಸಿದ ನನ್ನ ಅನ್ಯ ಭಾಷಿಕ ಅನುಭವಗಳನ್ನು ಮಾತ್ರ ಇಲ್ಲಿ ಹಂಚಿಕೊಳ್ಳ ಬಯಸುತ್ತೇನೆ

ಇಂದಿನ ಸಂದರ್ಭದಲ್ಲಿ ಹೇಳುವುದಾದರೆ ಇಂಗ್ಲಿಷ್ ಒಂದೇ ಸಾಲದೆಂಬಂತೆ, ಹಿಂದಿ ಸೇರಿದಂತೆ , ನೆರೆ ರಾಜ್ಯಗಳ ಭಾಷೆಗಳಾದ ಮರಾಠಿ , ತಮಿಳು ,ತೆಲುಗು ಮತ್ತು ಮಲೆಯಾಳಂ ಗಳ ದಬ್ಬಾಳಿಕೆ ಯನ್ನೂ ನಾಡು ಸಹಿಸಿಕೊಳ್ಳ ಬೇಕಾಗಿದೆ ಮತ್ತು ಎದುರಿಸಬೇಕಿದೆ . ದೈನಂದಿನ ಜೀವನಕ್ಕೆ ಅನಿವಾರ್ಯ ಅನಿಸದ ಹೊರತು ಯಾರೂ ಸ್ಥಳೀಯ ಭಾಷೆಯನ್ನು ಕಲಿಯುವ ಉತ್ಸಾಹ ತೋರುವುದಿಲ್ಲ . ಅಷ್ಟಕ್ಕೂ ನಮಗೇ ಬೇಡವಾದದ್ದು ಅವರಿಗೇಕೆ ?

Klive Special Article ಪುಣೆ ಯಲ್ಲಿ ಪಿ .ಎಂ . ಟಿ. ಅಥವಾ ಪಿ . ಸಿ. ಎಂ.ಟಿ. ಬಸ್ ಹತ್ತಿ ನಿರ್ವಾಹಕನಿಗೆ ’ ಕಾರ್ಪೋರೇಶನ್’ ಗೆ ಟಿಕೆಟ್ ಕೇಳಿ . ಆತ ನಿಮ್ಮನ್ನು ಕೆಕ್ಕರಿಸಿ ನೋಡುತ್ತಾ ನಯವಿಲ್ಲದೇ ಮ. ನ .ಪಾ . ಕಾ ? ( ಮಹಾ ನಗರ್ ಪಾಲಿಕಾ ನಾ ) ಎಂದು ಕೇಳುತ್ತಾನೆ. ನೀವು ಇಪ್ಪತ್ತರದೋ, ಐವತ್ತರದೋ ನೋಟು ಕೊಟ್ಟಿರಿ ಎಂದಿಟ್ಟುಕೊಳ್ಳಿ . ಅಷ್ಟೇ ಒರಟಾಗಿ ‘ ಸುಟ್ಟಿ ಪೈಸೆ ಧ್ಯಾ’ ಅನ್ನುತ್ತಾನೆ ಈಗ ನೀವೊಂದು ಮರಾಠಿ ಪದ ಕಲಿತಿರಿ. ನಿರ್ವಾಹಕನ ಆತಿಥ್ಯದ ಅನುಭವವೂ ಆಯಿತು !
ಮತ್ತೆ ನೀವೆಂದೂ’ ಕಾರ್ಪೋರೇಶನ್’ ಅನ್ನುವ ಧೈರ್ಯ ಮಾಡಲಾರಿರಿ.

ಹಾಗೇ ಬಸ್ಸಿನಲ್ಲಿ ಓಡಾಡುವಾಗ ‘ ಉತ್ರ , ಟಿಕೆಟ್ ಕಾಡಲಿ ಕಾ , ಸರ್ಕ , ಪುಡೇ ಝಾ, ಘ್ಯಾ, ಧ್ಯಾ , ಥಂಬಾ, ಮಾಘೇ , ಬಸ, ಕುಟೆ, ಕುಟೂನ್ – ಕೇಳುತ್ತಾ ಕೇಳುತ್ತಾ ಮೂರು ದಿನದ ನಿಮ್ಮ ಬಸ್ ಪ್ರಯಾಣದಲ್ಲಿ ಸಾಕಷ್ಟು ಮರಾಠಿ ಕಲಿತುಬಿಡುತ್ತೀರಿ ! ದಿನಸಿ ಅಂಗಡಿಗೆ ಹೋಗಿ ‘ ರೈಸ್ ಟೂ ಕೆ ಜಿ’ . ಅನ್ನಿ .ಅವನು ಅಕ್ಕಿಯನ್ನು ತೋರಿಸಿ ತಂಡೂಲ್ ದೋ ನ್ ಕಿಲೋ ಕಾ ? ಎಂದು ಕೇಳಿ ನಿಮಗೆ ಮರಾಠಿ ಕಲಿಸುತ್ತಾನೆ. ನಿಮಗೆ ಮತ್ತೊದು ಮರಾಟಿ ಪದ ಬಂದಂತಾಯಿತು . ಭಾಷೆಯನ್ನು ಬಳಸುವ , ಬೆಳೆಸುವ, ಉಳಿಸುವ ರೀತಿ ಇದು !
ಇನ್ನೊಂದು ಅಷ್ಟೇನೂ ಒಳ್ಳೆಯದಲ್ಲದ ಅನುಭವವನ್ನು ಕೇಳಿ . ಮುಂಬೈ ನ ಮಲಾಡ್ ನ ರಸ್ತೆಯ ಬದಿ ಅಂಗಡಿಯಲ್ಲಿ ಕಣ್ಣಿಗೆ ಬಿದ್ದ ‘ಕರ್ನಾಟಕ ಮಲ್ಲ ‘ ಕನ್ನಡ ದೈನಿಕವನ್ನು ಕೊಳ್ಳಲು ಕೇಳುತ್ತೇನೆ , ಅಂಗಡಿಯ ಮರಾಟಿ ಒಡತಿ ನನ್ನನ್ನು ನೋಡುತ್ತಾ ಅವಳ ಮಗಳಿಗೆ ಹೇಳುತ್ತಾಳೆ ‘ ತಿಥೆ ಪಹಾ. ತೇವಡಚಾ ಮದ್ರಾಸಿ ಪೇಪರ್ ಬಾಹೆರ್ ಕಾಡೂನ್ ಇಥೆ ಫೆಕೂನ್ ಧ್ಯಾ ( ಅಲ್ನೋಡು ಅಲ್ಲಿರೋ ಮದ್ರಾಸಿ ಪೇಪರ್ ನ ಹೊರಗೆ ತೆಗೆದು ಇಲ್ಲಿ ಬಿಸಾಡು ಅನ್ನುತ್ತಾ ಳೆ .) ಕನ್ನಡಿಗರ ಬಗ್ಗೆ ಅಸಹನೆ ಅಲ್ಲಿ ಬೆಳೆಸಿಕೊಂಡು ಬಂದ ಒಂದು ಪ್ರವೃತ್ತಿ ಆಗಿದೆ . ೧೯೬೬-೬೭ ರಲ್ಲಿ ಮುಂಬೈ ನ ರಸ್ತೆಗಳಲ್ಲಿ ಲುಂಗಿ ಉಟ್ಟು ಓಡಾಡಲು ಬಹಳ ಧೈರ್ಯ ಬೇಕಿತ್ತು ! .

ಮಹಾರಾಷ್ಟ್ರದಲ್ಲಿ ಯಾರೇ ಆಡಳಿತಕ್ಕೆ ಬರಲಿ ಅವರೆಲ್ಲರೂ ಹೃದಯಾಂತರಾಳದಲ್ಲಿ ಶಿವಸೈನಿಕರೇ ಆಗಿರುತ್ತಾರೆ. ಮಹಾರಾಷ್ಟ್ರದ ಅಸ್ಮಿತೆ ಮತ್ತು ಹಿತರಕ್ಷಣೆ ಅಲ್ಲಿನ ಎಲ್ಲ ಪಕ್ಷಗಳ ಅಘೋಷಿತ ‘ಅಜೆಂಡಾ’ ಆಗಿರುತ್ತದೆ .
ಮಹಾರಾಷ್ಟ್ರದಲ್ಲಿ ಅಥವಾ ಗುಜರಾತ್ ನಲ್ಲಾಗಲೀ ಅಲ್ಲಿನ ಸಾಹಿತ್ಯ ಪರಿಷತ್ ಹೊರತು ಪಡಿಸಿ ಬೇರೇ ಯಾವುದೇ ಭಾಷಾ ಅಭಿವೃದ್ಧಿ ಪ್ರಾಧಿಕಾರ ,ರಕ್ಷಣಾವೇದಿಕೆ ,ಕಾವಲು ಸಮಿತಿ , ಇಲಾಖೆ ಅಥವಾ ಶಕ್ತಿ ಕೇಂದ್ರ ವಾಗಲಿ ಇರುವುದು ನನಗೆ ತಿಳಿದಿಲ್ಲ . ಆ ಎಲ್ಲಾ ಕೆಲಸಗಳನ್ನೂ ಅಲ್ಲಿನ ಭಾಷಿಕರೇ ‘ನೋಡಿ’ ಕೊಳ್ಳುತ್ತಾರೆ !

ಕೇಂದ್ರ ಸರ್ಕಾರದ ಎನ್. ಎಸ್. ಎಸ್. ಸಲಹಗಾರನಾಗಿ ಮಹಾರಾಷ್ಟ್ರ ದಲ್ಲಿ ಕಾರ್ಯ ನಿರ್ವಹಿಸುತ್ತಿರುವಾಗ ಎಲ್ಲ ವಿಶ್ವ ವಿದ್ಯಾಲಯಗಳಲ್ಲೂ ಮರಾಠಿಯಲ್ಲಿ ಸಭೆ ನಡೆಯುತ್ತಿತ್ತು. ಹಾಗೊಂದು ಸಭೆಯಲ್ಲಿ ಪುಣೆ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಡಾ. ಶ್ರೀಧರ್ ಗುಪ್ತೆ ‘ ಅಪಣ ಅಂಚೆ ಶೇಜಾರಿಲ ರಾಜ್ಯಾತಿಲ ಅಹಾತ ತುಮ್ಹಾಲ ಮರಾಠಿ ಮಾಹಿತ ಅಸೇಲ ಪಾಯಿಜೆ’ (ನೀವು ನಮ್ಮ ನೆರೆರಾಜ್ಯದಿಂದ ಬಂದವರು. ನಿಮಗೆ ಮರಾಠಿ ಗೊತ್ತಿರಲೇ ಬೇಕು) ಎಂದು
ತೀರ್ಮಾನಿಸಿಬಿಟ್ಟರು .ಕನ್ನಡಿಗರ ಬಗ್ಗೆ ಅದೆಂಥ ಧೃಡ ವಿಶ್ವಾಸ !

ಗುಜರಾತ್ ನಲ್ಲಿಯೂ ಅಲ್ಲಿನ ಎನ್.ಎಸ್.ಎಸ್. ಪ್ರಾದೇಶಿಕ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡ ಕೂಡಲೇ ಅಂದಿನ ಶಿಕ್ಷಣ ಮಂತ್ರಿ ಶ್ರೀ ನರಹರಿ ಅಮೀನ್ ರವರನ್ನು ಭೇಟಿ ಯಾಗಲು ಹೋದಾಗ ಅವರು ಸೌಜನ್ಯದಿಂದಲೇ ’ಹೂಂ ಜಾಣೂಂಚು ಕೆ ತಮೆ ಗುಜರಾತಿ ಬೊಲಿ ಸಕತಾ ನಥಿ. ಪರಂತು ಹೂಂ ಪಕ್ತ ತಮಣೆ ಗುಜರಾತಿಮಾ ಜ ಬೋಲಿ ಸಕುಂಚು.( ನಿಮಗೆ ಗುಜರಾತಿ ಗೊತ್ತಿಲ್ಲ ಎಂದು ಗೊತ್ತಾಯಿತು. ಆದರೆ ನಾನು ನಿಮಗೆ ಗುಜರಾತಿನಲ್ಲಿ ಮಾತ್ರ ಮಾತನಾಡಬಲ್ಲೆ) ಅಂದರು. ಅಲ್ಲಿದ್ದ ನಾಲ್ಕು ವರ್ಷಗಳಲ್ಲಿ ಅಲ್ಲಿನ ‘ಗುಜರಾತ್ ಸಮಾಚಾರ್ ‘ ಓದ ಬಲ್ಲವನಾಗಿದ್ದೆ

ಆ ಎರಡೂ ರಾಜ್ಯಗಳೂ ನನಗೆ ಅಲ್ಲಿನ ಭಾಷೆಗಳನ್ನು ಕಲಿಯಬೇಕಾದ ” ಅನಿವಾರ್ಯತೆ “ ಹುಟ್ಟಿಸಿದವು.

ಆದರೆ ಕೇರಳದಲ್ಲಿನ ಅನುಭವವೇ ಬೇರೆ. ಕೇರಳ ವಿಶ್ವವಿದ್ಯಾಲಯದ ಎನ್. ಎಸ್ .ಎಸ್ . ಸಂಯೋಜಕರ ಬಳಿ ಮಲೆಯಾಳಂ ಕಲಿಯುವ ಆಸಕ್ತಿಯನ್ನ ಹೇಳಿದಾಗ ಅವರು ಹೇಳಿದ ಮಾತು ಇಂದಿಗೂ ನಮಗೊಂದು ಪಾಠವದೀತು ಅನಿಸುತ್ತದೆ
‘ ನೀವು ಇಂಗ್ಲೀಷ್ ನಲ್ಲಿಯೇ ಮಾತನಾಡಿ . ಮಲೆಯಾಳಂ ಭಾಷೆಯನ್ನು ಕಲಿಯುವ ಅಗತ್ಯ ಇಲ್ಲ. ಅದು ನಾವು ನಮಗಾಗಿ ಮಾಡಿಕೊಂಡ ಭಾಷೆ .ನಮ್ಮ ಸಂಸ್ಕೃತಿ , ನುಡಿಗಟ್ಟು, ಹಬ್ಬ ,ಉತ್ಸವ ,ನಾಟಕ, ನರ್ತನ, ಕಲೆ ಸಾಹಿತ್ಯ ಆಚಾರ, ಆಹಾರ, ವಿಚಾರ, ಗಾದೆ , ಗುಟ್ಟು, ಗೌಪ್ಯ ಗಳನ್ನು ಕಾಪಾಡಿಕೊಳ್ಳಲು ಸೃಷ್ಟಿಸಿಕೊಂಡದ್ದು. ಮಲೆಯಾಳಿ ಭಾಷೆಯನ್ನೇ ಊಟ ಹಾಗೂ ಉಸಿರಾಗಿಸಿಕೊಂಡಿರುವ ನಾವು ಕೋಟ್ಯಾಂತರ ಜನರಿದ್ದೇವೆ ಅಷ್ಟೇ ಸಾಕು.’ ಅಂದದ್ದು ಪ್ರತಿಯೊಂದು ಭಾಷಯೂ ತನ್ನ ಅರ್ಥವನ್ನ ತನ್ನದೇ ಆದ ಸಂಸ್ಕೃತಿ ಯಿಂದ ಪಡೆದುಕೊಳ್ಳುತ್ತದೆ ಅನ್ನುವ ಮಾತನ್ನು ಸಮರ್ಥಿಸುತ್ತದೆ. ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೂ ಮಲೆಯಾಳಿ ಭಾಷೆ ಮಾರ್ದನಿಸದ ಸ್ಥಳ ಹುಡುಕುವುದು ಕಷ್ಟ . ಹೋಗಲಿ ಬಿಡಿ. ಅವರೆಲ್ಲಿ, ನಾವೆಲ್ಲಿ.

ನನ್ನ ಎಲ್ಲ ಇತಿ ಮಿತಿ ಗಳ ನಡುವೆಯೂ ನನ್ನ ಕೆಲಸ ಕಾರ್ಯಗಳಲ್ಲಿ ಈ ಮೂರೂ ರಾಜ್ಯಗಳಲ್ಲಿಯೂ ನನಗೆ ಅದ್ಭುತ ಸಹಕಾರ ಸಿಕ್ಕಿತು . ಗುಜರಾತ್, ಮಹಾರಾಷ್ಟ್ರ ಮತ್ತು ಕೇರಳ – ಈ ಮೂರೂ ರಾಜ್ಯಗಳಲ್ಲಿ ನಡೆದ ಕಾಲೇಜು ಎನ್.ಎಸ್.ಎಸ್. ಶಿಬಿರಗಳಿಗೆ ನಮ್ಮ ರಾಜ್ಯದ ಮುನ್ನೂರಕ್ಕೂ ಹೆಚ್ಚು ಶಿಬಿರಾರ್ಥಿಗಳನ್ನು ಆಹ್ವಾನಿಸಿ ಅವರಿಗೆ ಅಲ್ಲಿನ ಗ್ರಾಮ ಜೀವನದ ಅನುಭವ ಮಾಡಿಕೊಟ್ಟಿದ್ದೆವು .

ಆದರೆ ೨೦೦೧ ರಿಂದ ೨೦೦೯ ರಲ್ಲಿ ನನ್ನ ನಿವೃತ್ತಿಯವರೆಗೂ ಕರ್ನಾಟಕದ ಲ್ಲಿನ ನನ್ನ ಅನುಭವ ಮೇಲಿನ ಎಲ್ಲಕ್ಕೂ ತದ್ವಿರುದ್ಧ ವಾದದ್ದು ಬೇಸರದ ಸಂಗತಿ. ಇಲ್ಲಿ ಬರಲಿ, ಬರದಿರಲಿ ಎಲ್ಲರಿಗೂ ಇಂಗ್ಲಿಷ್ ವ್ಯಾಮೋಹ .

“ ಮಕ್ಕಳಿವರೇನಮ್ಮ ಆರು ಕೋಟಿ, ತೂರಿದರೆ ಉಳಿದಾವೇ ನಾಲ್ಕಾರು ಘಟ್ಟಿ “ ಅನ್ನುವ ಸ್ಥಿತಿ !

ಕರ್ನಾಟಕದ ನಮ್ಮ ಕಾಲೇಜುಗಳಲ್ಲಿ ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿಗಳನ್ನು ಮತ್ತು ಸ್ವಯಂ ಸೇವಕರನ್ನು ಕುರಿತು ಇಂಗ್ಲಿಷ್ ನಲ್ಲಿ ಮಾತನಾಡಬೇಕೆಂದು ಬಂದ ಕೋರಿಕೆಯನ್ನು ‘ ನನಗೆ ಅದಕ್ಕೆ ಅವಶ್ಯವಾದಷ್ಟು ಇಂಗ್ಲಿಷ್ ಬರುವುದಿಲ್ಲ’ ಎಂದು ವಿನಯ ಪೂರ್ವಕ ಹೇಳಿಬಿಡುತ್ತಿದ್ದೆ. ಮಹಾತ್ಮಾಗಾಂಧಿ ಜೀ ಅವರು ‘ನನ್ನ ದೇಶ ಬಾಂಧವರನ್ನು ಕುರಿತು ಅವರದೂ ಅಲ್ಲದ, ನನ್ನದೂ ಅಲ್ಲದ , ನನ್ನ ದೇಶದ್ದೂ ಅಲ್ಲದ ಬೇರೊಂದು ಭಾಷೆಯಲ್ಲಿ ಮಾತನಾಡ ಬೇಕಾಗಿ ಬಂದಾಗಲೆಲ್ಲಾ ನನಗೆ ಘೋರ ಅಪಮಾನ ಹಾಗೂ ಲಜ್ಜೆ ಅನಿಸುತ್ತದೆ ’ ಅನ್ನುವ ಮಾತು ಸ್ವಾತಂತ್ರ್ಯ ಬಂದು ೭೭ ವರ್ಷಗಳೇ ಕಳೆದರೂ ಬದಲಾಗದ ವ್ಯಥೆಯಾಗಿ ಯೇ ಉಳಿದಿದೆ .

ಇತ್ತೀಚಿನ ನನ್ನ ಅನುಭವ ಹೇಳುತ್ತೇನೆ

ನನ್ನ ಖಾತೆ ಇರುವುದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದ ಶಾಖೆ ಯೊಂದರಲ್ಲಿ . ಅಲ್ಲಿನ ಸಿಬ್ಬಂದಿ ಎಲ್ಲರೂ ಮಹಿಳೆಯರು ಮತ್ತು ಕನ್ನಡ ಬಾರದವರು . ಸ್ಥಳೀಯ ಭಾಷಾ ಜ್ಞಾನದ ಅಗತ್ಯತೆಯನ್ನು ಮನಗಾಣಿಸುವ ಉದ್ದೇಶದಿಂದ ನಾನು ಚೆಕ್ಕಿನಲ್ಲಿ ಬೇಕಂತಲೇ ಒಂದು ರೂ ಕಡಿಮೆ ಮಾಡಿ ‘ಸ್ವಂತಕ್ಕೆ’ ‘ ಒಂಭತ್ತು ಸಾವಿರದ ಒoಭೈನೂರಾ ತೊಂಭತ್ತ ಒಂಭತ್ತು ರೂಪಾಯಿಗಳು ಮಾತ್ರ ‘ ಎಂದು ಬರೆದು ಕೊಟ್ಟು ಕಾಯುತ್ತಾ ಕುಳಿತೆ . ಸ್ವಲ್ಪ ಸಮಯದಲ್ಲೇ ಕೌಂಟರ್ ನಲ್ಲಿ ಸಂಚಾಲನ ಉಂಟಾಯಿತು . ನನ್ನ ಚೆಕ್ ಹಿಡಿದುಕೊಂಡು ಕೌಂಟರ್ ನ ಮಹಿಳೆ ಮ್ಯಾನೇಜರ್ ಕ್ಯಾಬಿನ್ ಗೆ ಹೋದಳು. ಮ್ಯಾನೇಜರ್ ಚೆಕ್ಕನ್ನು ಹಿಂದೆ ಮುಂದೆ ತಿರುಗಿಸುತ್ತಾ “ ಏ ಕಿಸನೇ ಲಿಖಾ ಹೈ, ಸಿಗ್ನೇಚರ್ ತೋ ಅಂಗ್ರೇಜೀ ಮೇ ಕಿಯಾ ಹಾಯ್, ಚೆಕ್ ಭೀ ಅಇಸೆ ಲಿಖ್ ಸಕ್ತಾಥ ನಾ ‘ ಅಂತ ಗೊಣಗಿದಳು . ನನ್ನನ್ನು ಕ್ಯಾಬಿನ್ ಗೆ ಕರೆದು ಕೂರಿಸಿ ಕೇಳಿದಾಗ ನನ್ನ ಭಾಷಾ ಉದ್ದೇಶ ವಿವರಿಸಿದೆ. ಆಕೆ ವಿನಮ್ರವಾಗಿ ‘ ಮುಝೆ ಕನ್ನಡ್ ಸೀಖ್ನಾ ಹಯ್ ’ ಅನ್ನುತ್ತಾ ಚೆಕ್ ವಿ ವಿಲೇವಾರಿ ಮಾಡಿ ತಡವಾದ ಬಗ್ಗೆ ವಿಷಾದಿಸಿದಳು.

ನಾನು ಕ್ಯಾಬಿನ್ ನಿಂದ ಹೊರ ಬರುತ್ತಿದ್ದಂತೆ ನಾನೇನೋ ಅಪರಾಧ ಮಾಡಿದ್ದೇನೆ ಅನ್ನುವಂತೆ ಅಲ್ಲಿದ್ದ ಕೆಲವರು ‘ ಏನಾಯ್ತು ಸಾರ್ ‘ ಅಂದರು . ಕನ್ನಡಕ್ಕಾಗಿ ಹೀಗೆ ಮಾಡಬೇಕಾಗಿ ಬಂದದ್ದನ್ನು ಹೇಳಿದೆ. ಕನ್ನಡ ತಾಯಿಯ ಪುಣ್ಯ ಚೆನ್ನಾಗಿತ್ತು ಅನಿಸುತ್ತದೆ . ಮುಂದಿನ ಐದಾರು ದಿನಗಳಲ್ಲಿ ಕನ್ನಡ ಬಲ್ಲ ಕೆಲವು ಖಾತೆದಾರರು ಕನ್ನಡದಲ್ಲಿ ‘ ಚೆಕ್’ ‘ ‘ ಪೆ ಇನ್ ಸ್ಲಿಪ್’ ಆರ್. ಟಿ. ಜಿ. ಎಸ್. ಬರೆಯಲು ಪ್ರಾರಂಭಿಸಿದಾಗ ಮ್ಯಾನೇಜರ್, ತತ್ಕಾಲಕ್ಕೆ ಬೇರೆ ಶಾಖೆಯಿಂದ ಇಲ್ಲಿಗೆ ಕನ್ನಡ ಬಲ್ಲ ಒಬ್ಬರನ್ನು ಡೆಪ್ಯೂಟ್ ಮಾಡುವಂತೆ ಬರೆದ ಪರಿಣಾಮ , ಒಬ್ಬ ಕನ್ನಡಿಗ ಸ್ವಲ್ಪ ಕಾಲವಾದರೂ ಈ ಶಾಖೆಗೆ ಬರುವಂತೆ ಆಯಿತು.

ರಾಷ್ಟ್ರೀಕರಣಗೊಂಡ ಕೇಂದ್ರ ಸರಕಾರದ ಎಲ್ಲ ಬ್ಯಾಂಕ್ ಗಳಲ್ಲೂ ಹಿಂದಿ ಅನುಷ್ಠಾನಕ್ಕಾಗಿ ಹಿಂದಿ ಆಫೀಸರ್ ಗಳನ್ನು ತಪ್ಪದೆ ನೇಮಕ ಮಾಡಿಕೊಳ್ಳಲಾಗುತ್ತಿದೆ . ನನ್ನ ಈ ಪ್ರಯೋಗವನ್ನು ಎಲ್ಲ ಕನ್ನಡಿಗರೂ ಅಂಚೆ , ರೈಲ್ವೆ ಮತ್ತು ಬ್ಯಾಂಕ್ ಗಳಲ್ಲಿ ನಿರಂತರವಾಗಿ ಮಾಡಿದ್ದೇ ಆದರೆ ಅದರ ಪರಿಣಾಮವನ್ನು ಊಹಿಸಿಕೊಳ್ಳಿ !

ಡಾ.ಹೆಚ್. ಎಸ್. ಸುರೇಶ್ 9448027400

B.Y.Raghavendra ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ಹೈಕಮಾಂಡ್ ನೋಡಿಕೊಳ್ಳುತ್ತದೆ- ಸಂಸದ ರಾಘವೇಂದ್ರ

0

B.Y.Raghavendra ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರವನ್ನು ಹೈಕಮಾಂಡ್ ನೋಡಿಕೊಳ್ಳುತ್ತದೆ. ಸದ್ಯಕ್ಕೆ ಬಿ ವೈ ವಿಜಯೇಂದ್ರ‌ ಅಧ್ಯಕ್ಷರಾಗಿದ್ದಾರೆ. ಅವರು ದಕ್ಷ ನಾಯಕರಾಗಿ ಸಂಘಟನೆ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯತ್ B.Y.Raghavendra ಚುನಾವಣೆ ಬರುತ್ತಿದೆ. ಈ ಸಂದರ್ಭದಲ್ಲಿ ಏನೇ ಅಸಮಾಧಾನ ಇದ್ದರೂ ನಾಲ್ಕು ಗೋಡೆ ಮಧ್ಯೆ ಮಾತಾಡಬೇಕು. ಈ ದಿಕ್ಕಿನಲ್ಲಿ ನಮ್ಮ ನಾಯಕರು ಗಮನ ಹರಿಸಬೇಕು” ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

Karnataka State Commission for the Protection of Child ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗದ ಶ್ರೀಮತಿ ಅಪರ್ಣಾ ಎಂ.ಕೊಳ್ಳಾ ಅವರಿಂದ ಯಶಸ್ವಿಯಾದ ಸಂವಾದ ಕಾರ್ಯಕ್ರಮ

0

Karnataka State Commission for the Protection of Child ಶ್ರೀಮತಿ ಅಪರ್ಣಾ ಎಮ್, ಕೊಳ್ಳಾ ಮಾನ್ಯ ಸದಸ್ಯರು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಬೆಂಗಳೂರು ಇವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ಆಯೋಜಿಸಿರುವ ಮಕ್ಕಳ ಸಂವಾದ ಕಾರ್ಯಕ್ರಮದಲ್ಲಿ “ಜೆ.ಜೆ ಕಾಯ್ದೆ-2015, ಬಾಲ್ಯ ವಿವಾಹ ನಿಷೇಧ ಕಾಯ್ದೆ- 2006, ಮಕ್ಕಳ ಮೇಲಿನ ಲೈಂಗಿಕ ಅಪರಾಧ ತಡೆ ಕಾಯ್ದೆ-2012 ಹಾಗೂ ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತಾಗಿ ಒಂದು ದಿನದ ಅರಿವು /ಜಾಗೃತಿ ತರಬೇತಿ ಕಾರ್ಯಕ್ರಮವನ್ನು ದಿನಾಂಕ:13-12-2024ರAದು “ಚೈತನ್ಯ ರೂರಲ್ ಡೆವಲಪ್‌ಮೆಂಟ್ ಸೊಸೈಟಿ” ಆಲ್ಕೊಳ, ಶಿವಮೊಗ್ಗ ಇಲ್ಲಿ ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮಕ್ಕೆ ಶಿವಮೊಗ್ಗ ನಗರ ಹಾಗೂ ಗ್ರಾಮೀಣಾ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ, ಖಾಸಗಿ ಶಾಲೆ, ಮಕ್ಕಳ ಪಾಲನಾ ಸಂಸ್ಥೆಯ ಮಕ್ಕಳು ಹಾಗೂ ವಸತಿ ನಿಲಯದ 120 ಮಕ್ಕಳು ಭಾಗವಹಿಸಿದ್ದರು .

ಜಿಲ್ಲೆಯಲ್ಲಿರುವ ಶಾಲೆ ಹಾಗೂ ವಸತಿ ಶಾಲೆಗಳಲ್ಲಿನ ಆಯ್ದ ಮಕ್ಕಳಿಂದ ಪ್ರಸ್ತುತ ದಿನಮಾನಗಳಲ್ಲಿ ಮಕ್ಕಳ ಜ್ವಲಂತ ಸಮಸ್ಯೆಗಳ ಕುರಿತು ಮಾನ್ಯ ಸದಸ್ಯರು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಬೆಂಗಳೂರು ಇವರು ಮಕ್ಕಳೊಂದಿಗೆ ಸಂವಾದ ನಡೆಸಿರುತ್ತಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ಅಪರ್ಣಾ ಎಮ್, ಕೊಳ್ಳಾ, ಸದಸ್ಯರು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಬೆಂಗಳೂರು ಇವರು ನೇರವೇರಿಸಿದರು.

Karnataka State Commission for the Protection of Child ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೃಷ್ಣಪ್ಪ ಬಿ.ಹೆಚ್ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿವಮೊಗ್ಗ ಇವರು ವಹಿಸಿರುತ್ತಾರೆ ಮತ್ತು ಜಿಲ್ಲೆಯ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳೊಂದಿಗೆ ನೇರ ಸಂವಾದದಲ್ಲಿ ಭಾಗವಹಿಸಿ ಪರಿಹಾರ ಕಂಡುಕೊಳ್ಳಲು ನೆರವಾದರು.

Tourism Department  Shivamogga ಪ್ರವಾಸೋದ್ಯಮ/ಆತಿಥ್ಯ ಕೌಶಲ್ಯಾಭಿವೃದ್ಧಿ ತರಬೇತಿಗೆ ಶಿವಮೊಗ್ಗ ಪ್ರವಾಸೋದ್ಯಮ ಇಲಾಖೆ ಪ್ರಕಟಣೆ

0

Tourism Department  Shivamogga ಶಿವಮೊಗ್ಗ ಪ್ರವಾಸೋದ್ಯಮ ಇಲಾಖೆಯು 2024-25ನೇ ಸಾಲಿನಲ್ಲಿ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ. ಯೋಜನೆಯಡಿ ಪ್ರವಾಸೋದ್ಯಮ/ಆತಿಥ್ಯ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಪಡೆಯಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 20 ರಿಂದ 45 ವರ್ಷದೊಳಗಿನ ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.

ಪ.ಜಾ.ಯ 292 ಹಾಗೂ ಪ.ಪಂ.ದ 162 ಅಭ್ಯರ್ಥಿಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಆತಿಥ್ಯ ಕ್ಷೇತ್ರದ ಸಂಸ್ಥೆಗಳಾದ ಫುಡ್ ಕ್ರಾಫ್ಟ್ ಇನ್ಸಿಟ್ಯೂಟ್(ಎಫ್‌ಸಿಐ), ಮೈಸೂರು ಮತ್ತು ಇನ್ಸಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ (ಐಹೆಚ್‌ಎಂ), ಬೆಂಗಳೂರು ಇವರ ಮೂಲಕ ಆಹಾರ ಮತ್ತು ಪಾನೀಯ ಸೇವೆ ಉಸ್ತುವಾರಿ -10 ನೇ ತರಗತಿ ಉತ್ತೀರ್ಣ (Food & Beverage Service Steward), ಕೊಠಡಿ ಪರಿಚಾರಕ- 5ನೇ ತರಗತಿ ಉತ್ತೀರ್ಣ (Room Attendant), ಫ್ರಂಟ್ ಆಫೀಸ್ ಅಸೋಸಿಯೇಟ್ 2ನೇ ಪಿಯುಸಿ ಉತ್ತೀರ್ಣ (Front Office Associate), ಮಲ್ಟಿ ಕ್ಯೂಜಿನ್ ಕುಕ್ -8ನೇ ತರಗತಿ ಉತ್ತೀರ್ಣ (Multi Cuisine Cook) ವಸತಿ ಸಹಿತ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

Tourism Department  Shivamogga ಆಸಕ್ತರು ನಿಗಧಿತ ನಮೂನೆ ಅರ್ಜಿಯನ್ನು ಸಹಾಯಕ ನಿರ್ದೇಶಕರ ಕಚೇರಿ, ಜಿಲ್ಲಾ ಪ್ರವಾಸೋದ್ಯಮ ಇಲಾಖೆ, ಎ ಬ್ಲಾಕ್, 3ನೇ ತಿರುವು, ಗೋಪಾಲಗೌಡ ಬಡಾವಣೆ, ಶಿವಮೊಗ್ಗ ಇಲ್ಲಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಪೂರಕ ದಾಖಲೆಗಳನ್ನು ಲಗತ್ತಿಸಿ ಡಿ.27 ರೊಳಗಾಗಿ ಸಲ್ಲಿಸುವಂತೆ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08182-251444 ನ್ನು ಸಂಪರ್ಕಿಸಬಹುದು.

Department of Horticulture ಝೇಂಕಾರ” ಬ್ರ್ಯಾಂಡ್ ನಲ್ಲಿ ಜೇನುತುಪ್ಪ ಉತ್ಪಾದಕರು ಮಾರುಕಟ್ಟೆ ಅವಕಾಶ ಬಳಸಿಕೊಳ್ಳಲು ಇಲಾಖೆ ಮಾಹಿತಿ

0

Department of Horticulture ತೋಟಗಾರಿಕೆ ಇಲಾಖೆಯು ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನುಕೃಷಿಕರ ಆರ್ಥಿಕ ಮಟ್ಟ ಹೆಚ್ಚಿಸಲು ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ಜೇನುತುಪ್ಪಕ್ಕೆ “ಝೇಂಕಾರ/Jhenkara“ ಎಂಬ ಬ್ರ್ಯಾಂಡ್, ಟ್ಯಾಗ್ ಲೈನ್, ಲೋಗೋ ಮತ್ತು ಪ್ಯಾಕೇಜಿಂಗ್ ವಿನ್ಯಾಸಗಳನ್ನು ಅಭಿವೃದ್ಧಿ ಪಡಿಸಿ ಟ್ರೇಡ್ ಮಾರ್ಕ್ ರಿಜಿಸ್ಟ್ರಿಯಿಂದ ಅಧಿಕೃತವಾಗಿ ಅನುಮೋದನೆ ಪಡೆಯಲಾಗಿರುತ್ತದೆ.

Department of Horticulture ಜೇನುತುಪ್ಪ ಉತ್ಪಾದಕರು ಮತ್ತು ಸಂಗ್ರಾಹಕರು ತೋಟಗಾರಿಕೆ ಇಲಾಖೆಯ ಮಾಲೀಕತ್ವದ ಈ ಬ್ರ್ಯಾಂಡ್ ಹೆಸರು ಮತ್ತು ಲೋಗೋವನ್ನು ಬಳಸಿಕೊಂಡು ಜೇನುತುಪ್ಪ ಹಾಗೂ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶವಿರುತ್ತದೆ. ಜೇನು ಕೃಷಿಕರು ಮತ್ತು ಸಂಗ್ರಾಹಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು.

MESCOM ಡಿಸೆಂಬರ್ 19 . ತ್ಯಾವರೆಚಟ್ನಳ್ಳಿ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

0

MESCOM ಶಿವಮೊಗ್ಗ ಮತ್ತು ತಾವರೆಚಟ್ನಹಳ್ಳಿ ವಿವಿ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಇರುವುದರಿಂದ ಡಿ.19 ರಂದು ಬೆಳಗ್ಗೆ 09.00 ರಿಂದ ಸಂಜೆ 5.00ರವರೆಗೆ ಕುವೆಂಪುನಗರ, ಎನ್.ಎ.ಎಸ್. ಬಡಾವಣೆ, ಶಿವಬಸವನಗರ, ವೀರಭದ್ರೇಶ್ವರ ಬಡಾವಣೆ, ಇಂದಿರಾಗಾಂಧಿ ಬಡಾವಣೆ, ಜ್ಯೋತಿನಗರ, ಜೆಎನ್‌ಎನ್‌ಸಿ ಕಾಲೇಜು, ಪರ್ಫೆಕ್ಟ್ ಅಲಾಯಿ ಪ್ಯಾಕ್ಟರಿ, ರೆಡ್ಡಿ ಬಡಾವಣೆ, ಬೊಮ್ಮನಕಟ್ಟೆ ಎ ಬ್ಲಾಕ್ ನಿಂದ ಹೆಚ್ ಬ್ಲಾಕ್‌ವರೆಗೆ, ಹಳೆ ಬೊಮ್ಮನಕಟ್ಟೆ, ವಿನಾಯಕ ಬಡಾವಣೆ, ದೇವಂಗಿ 2ನೇ ಹಂತದ MESCOM ಬಡಾವಣೆ, ಶಾಂತಿನಗರ, ನವುಲೆ, ಅಶ್ವತ್‌ನಗರ, ಎಲ್.ಬಿ.ಎಸ್.ನಗರ, ಕೀರ್ತಿನಗರ, ಬಸವೇಶ್ವರ ನಗರ, ಕೃಷಿನಗರ, ತರಳುಬಾಳು ಬಡಾವಣೆ, ಸೇವಾಲಾಲ್‌ನಗರ, ಡಾಲರ್ಸ್ ಕಾಲೋನಿ, ಪವನ ಶ್ರೀ ಬಡಾವಣೆ, ಮಲ್ಲೇಶ್ವರನಗರ, ಗುಂಡಪ್ಪಶೆಡ್, ಶಂಕರ ಮಠ ರಸ್ತೆ, ಜಯದೇವ ರೈಸ್‌ಮಿಲ್, ಶಂಕರ ಕಾಲೋನಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

D.S. Arun ಮಲೆನಾಡು ಗಿಡ್ಡ’ ತಳಿ ಸಂಶೋಧನೆ & ಮಾಹಿತಿ ಕೇಂದ್ರ ಪುನಃ ಆರಂಭಿಸಿ- ಡಿ.ಎಸ್.ಅರುಣ್.ಎಂಎಲ್ ಸಿ.

0

D.S. Arun ಮಲೆನಾಡ ಗಿಡ್ಡ ಗೋ ತಳಿ ಸಂಶೋಧನೆಯನ್ನು ಪ್ರೋತ್ಸಾಹಿಸಲು ಡಿ.ಎಸ್.ಅರುಣ್ ರವರ ಒತ್ತಾಯಿಸಿದರು.

ಮಾನ್ಯ ವಿಧಾನ ಪರಿಷತ್ ಶಾಸಕರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಡಿ.ಎಸ್.ಅರುಣ್ ರವರು ಬೆಳಗಾವಿಯ ಚಳಿಗಾಲದ ವಿಧಾನ ಪರಿಷತ್ ಅಧಿವೇಶನದಲ್ಲಿ, ಪಶು ವರ್ಗದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಮಲೆನಾಡು ಗಿಡ್ಡ ತಳಿಯ ಬಗ್ಗೆ ಅಧ್ಯಯನ ಕೈಗೊಳ್ಳಲು ಶಿವಮೊಗ್ಗದ ಪಶು ವೈದ್ಯಕೀಯ ಮಹಾವಿದ್ಯಾಲಯ ಆವರಣದಲ್ಲಿ ಸ್ಥಾಪಿಸಿದ ಮಲೆನಾಡು ಗಿಡ್ಡ ತಳಿ ಸಂಶೋಧನೆ ಹಾಗೂ ಮಾಹಿತಿ ಕೇಂದ್ರವನ್ನು ಪುನಹ ಪ್ರಾರಂಭಿಸಲು ಮಾನ್ಯ ಪಶು ಸಂಗೋಪನ ಸಚಿವರನ್ನು ಒತ್ತಾಯಿಸಿದರು.

D.S. Arun ಮಲೆನಾಡು ಗಿಡ್ಡ ಗೋವು ತಳಿ ಭೌಗೋಳಿಕ ಮಾನ್ಯತೆ ಹೊಂದಿದ್ದು, ಪ್ರಮುಖವಾಗಿ ಮಲೆನಾಡಿನ ಶಿವಮೊಗ್ಗ,ಚಿಕ್ಕಮಗಳೂರು ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಈ ತಳಿ ಹೇರಳವಾಗಿ ಕಂಡುಬರುವಂತಾಗಿದೆ ಎಂದು ಉಲ್ಲೇಖಿಸಿ,ಈ ತಳಿಯ ಹಾಲಿನಲ್ಲಿ ಎ-2 ಕೆಸಿನ್ ಅಧಿಕವಿದ್ದು ಜಗತ್ತಿನಲ್ಲಿ ಕಡಿಮೆ ಕೊಲೆಸ್ಟ್ರಾಲ್ ಅಂಶ ಹೊಂದಿರುವುದು ದೃಢಪಟ್ಟಿರುತ್ತದೆ ಎಂದು ತಿಳಿಸಿದರು.

ಮಲೆನಾಡು ಗಿಡ್ಡ ತಳಿಯ ಹಾಲು ಮತ್ತು ಅದರ ಉತ್ಪನ್ನಗಳಿಗೆ ಬೇಡಿಕೆ ಇದ್ದು, ಹಾಲಿನಲ್ಲಿರುವ ಔಷಧೀಯ ಗುಣದ ಬಗ್ಗೆ ಹಾಗೂ ರೋಗ ನಿರೋಧಕ ಶಕ್ತಿಯ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸುವ ಸಲುವಾಗಿ ಮಳೆನಾಡು ಗಿಡ್ಡೆತಳಿ ಸಂಶೋಧನೆಗೆ ಅನುಕೂಲವಾಗುವಂತೆ ಮಾಹಿತಿ ಕೇಂದ್ರವನ್ನು ಪುನರಾರಂಭಿಸಬೇಕು, ಸಂಶೋಧನೆಗೆ ಸರ್ಕಾರ ಹೆಚ್ಚಿನ ಒತ್ತುಕೊಟ್ಟು ಅಗತ್ಯವಿರುವ ಅನುದಾನವನ್ನು ಸಹ ಬಿಡುಗಡೆ ಮಾಡಬೇಕೆಂದು ಡಿ.ಎಸ್.ಅರುಣ್ ರವರು ಮಾನ್ಯ ಪಶುಸಂಗೋಪನ ಸಚಿವರನ್ನು ಶೂನ್ಯ ವೇಳೆಯಲ್ಲಿ ಒತ್ತಾಯಿಸಿದರು.