D.S. Arun ಮಲೆನಾಡ ಗಿಡ್ಡ ಗೋ ತಳಿ ಸಂಶೋಧನೆಯನ್ನು ಪ್ರೋತ್ಸಾಹಿಸಲು ಡಿ.ಎಸ್.ಅರುಣ್ ರವರ ಒತ್ತಾಯಿಸಿದರು.
ಮಾನ್ಯ ವಿಧಾನ ಪರಿಷತ್ ಶಾಸಕರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಡಿ.ಎಸ್.ಅರುಣ್ ರವರು ಬೆಳಗಾವಿಯ ಚಳಿಗಾಲದ ವಿಧಾನ ಪರಿಷತ್ ಅಧಿವೇಶನದಲ್ಲಿ, ಪಶು ವರ್ಗದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಮಲೆನಾಡು ಗಿಡ್ಡ ತಳಿಯ ಬಗ್ಗೆ ಅಧ್ಯಯನ ಕೈಗೊಳ್ಳಲು ಶಿವಮೊಗ್ಗದ ಪಶು ವೈದ್ಯಕೀಯ ಮಹಾವಿದ್ಯಾಲಯ ಆವರಣದಲ್ಲಿ ಸ್ಥಾಪಿಸಿದ ಮಲೆನಾಡು ಗಿಡ್ಡ ತಳಿ ಸಂಶೋಧನೆ ಹಾಗೂ ಮಾಹಿತಿ ಕೇಂದ್ರವನ್ನು ಪುನಹ ಪ್ರಾರಂಭಿಸಲು ಮಾನ್ಯ ಪಶು ಸಂಗೋಪನ ಸಚಿವರನ್ನು ಒತ್ತಾಯಿಸಿದರು.
D.S. Arun ಮಲೆನಾಡು ಗಿಡ್ಡ ಗೋವು ತಳಿ ಭೌಗೋಳಿಕ ಮಾನ್ಯತೆ ಹೊಂದಿದ್ದು, ಪ್ರಮುಖವಾಗಿ ಮಲೆನಾಡಿನ ಶಿವಮೊಗ್ಗ,ಚಿಕ್ಕಮಗಳೂರು ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಈ ತಳಿ ಹೇರಳವಾಗಿ ಕಂಡುಬರುವಂತಾಗಿದೆ ಎಂದು ಉಲ್ಲೇಖಿಸಿ,ಈ ತಳಿಯ ಹಾಲಿನಲ್ಲಿ ಎ-2 ಕೆಸಿನ್ ಅಧಿಕವಿದ್ದು ಜಗತ್ತಿನಲ್ಲಿ ಕಡಿಮೆ ಕೊಲೆಸ್ಟ್ರಾಲ್ ಅಂಶ ಹೊಂದಿರುವುದು ದೃಢಪಟ್ಟಿರುತ್ತದೆ ಎಂದು ತಿಳಿಸಿದರು.
ಮಲೆನಾಡು ಗಿಡ್ಡ ತಳಿಯ ಹಾಲು ಮತ್ತು ಅದರ ಉತ್ಪನ್ನಗಳಿಗೆ ಬೇಡಿಕೆ ಇದ್ದು, ಹಾಲಿನಲ್ಲಿರುವ ಔಷಧೀಯ ಗುಣದ ಬಗ್ಗೆ ಹಾಗೂ ರೋಗ ನಿರೋಧಕ ಶಕ್ತಿಯ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸುವ ಸಲುವಾಗಿ ಮಳೆನಾಡು ಗಿಡ್ಡೆತಳಿ ಸಂಶೋಧನೆಗೆ ಅನುಕೂಲವಾಗುವಂತೆ ಮಾಹಿತಿ ಕೇಂದ್ರವನ್ನು ಪುನರಾರಂಭಿಸಬೇಕು, ಸಂಶೋಧನೆಗೆ ಸರ್ಕಾರ ಹೆಚ್ಚಿನ ಒತ್ತುಕೊಟ್ಟು ಅಗತ್ಯವಿರುವ ಅನುದಾನವನ್ನು ಸಹ ಬಿಡುಗಡೆ ಮಾಡಬೇಕೆಂದು ಡಿ.ಎಸ್.ಅರುಣ್ ರವರು ಮಾನ್ಯ ಪಶುಸಂಗೋಪನ ಸಚಿವರನ್ನು ಶೂನ್ಯ ವೇಳೆಯಲ್ಲಿ ಒತ್ತಾಯಿಸಿದರು.
Agricultural Science Centre shivamogga ಅಣಬೆ ಒಂದು ಶಿಲೀಂದ್ರವಾಗಿದ್ದು, ಇದನ್ನು ಕೃಷಿ ತ್ಯಾಜ್ಯದಿಂದ ಬೆಳೆಯಬಹುದಾಗಿದೆ. ಈ ತಾಂತ್ರಿಕತೆ ಕುರಿತು ತರಬೇತಿಯಲ್ಲಿ ಮಾಹಿತಿ ಪಡೆದುಕೊಂಡು ಸ್ವ-ಉದ್ಯೋಗವನ್ನು ಪ್ರಾರಂಭಿಸಿ ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಆರ್. ಸಿ. ಜಗದೀಶ ಕರೆ ನೀಡಿದರು.
ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗದ ವತಿಯಿಂದ ಪರಿಶಿಷ್ಟ ಜಾತಿ ಉಪಯೋಜನೆಯಡಿ ದಿನಾಂಕ 16 ರಿಂದ 20ನೇ ಡಿಸೆಂಬರ್ 2024 ರವರೆಗೆ ಐದು ದಿನಗಳ ಕಾಲ ಏರ್ಪಡಿಸಲಾಗಿರುವ ‘ಅಣಬೆ ಬೇಸಾಯ’ ಕುರಿತ ವೃತ್ತಿ ಪರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಣಬೆ ಕುರಿತು ವಿವರಗಳನ್ನು ನೀಡಿದರು.
ಹಿರಿಯ ತಾಂತ್ರಿಕ ಅಧಿಕಾರಿ ಡಾ.ನಾಗರಾಜ, ಆರ್ ಮಾತನಾಡಿ, ಇದು ಒಂದು ಸಸಾರಜನಕಯುಕ್ತ ಮತ್ತು ವಿವಿಧ ಅನ್ನಾಂಗಗಳನ್ನು ಹೊಂದಿದ ಹಾಗೂ ಕೊಬ್ಬಿನಾಂಶರಹಿತವಾದ ಆಹಾರ ಪದಾರ್ಥವಾಗಿದ್ದು, ಇದನ್ನು ಎಲ್ಲರೂ ಸೇವಿಸಬಹುದೆಂದು ತಿಳಿಸಿದರು.
Agricultural Science Centre shivamogga ಈ ಅಣಬೆಯಲ್ಲಿ ಸಸಾರಜನಕದ ಅಂಶ ಇರುವುದರಿಂದ ಮಕ್ಕಳಲ್ಲಿ ಮತ್ತು ಮಹಿಳೆಯರಲ್ಲಿ ಕಾಣಬರುವ ಸಸಾರಜನಕ ಅಪೌಷ್ಟಿಕತೆಯನ್ನು ನೀಗಿಸಬಹುದು ಎಂದು ತಿಳಿಸಲಾಯಿತು. ಹೃದಯ ಸಂಬಂಧಿ ಖಾಯಿಲೆಗಳಿಂದ ಬಳಲುತ್ತಿರುವವರಿಗೆ ಇದು ಉತ್ತಮ ಆಹಾರ. ಮನುಷ್ಯನಿಗೆ ಆಹಾರದಲ್ಲಿ ದಿನಕ್ಕೆ 750 ಗ್ರಾಂ ನಷ್ಟು ಸಸಾರಜನಕದ ಸೇವನೆ ಅವಶ್ಯವಾಗಿದ್ದು, ಸಸಾರಜನಕ ಅಂಶವನ್ನು ಹೊಂದಿರುವ ಬೇಳೆಕಾಳುಗಳ ಉತ್ಪಾದನೆಯೂ ಕಡಿಮೆ ಇರುವುದರಿಂದ, ಸಸಾರಜನಕ ಅಂಶವುಳ್ಳ ಆಹಾರ ಪದಾರ್ಥಗಳಿಗೆ ಪರ್ಯಾಯವಾಗಿ ಈ ಅಣಬೆಯನ್ನುಆಹಾರದಲ್ಲಿ ಬಳಸಬಹುದೆಂದು ತಿಳಿಸಿದರು.
ಈ ಐದು ದಿನಗಳ ತರಬೇತಿಯಲ್ಲಿ ಅಣಬೆಯ ಉಪಯುಕ್ತತೆ, ವಿವಿಧ ಅಣಬೆ ಪ್ರಬೇಧಗಳ ಉತ್ಪಾದನಾ ತಾಂತ್ರಿಕತೆ, ಚಿಪ್ಪು ಅಣಬೆ ಬೇಸಾಯ ಪದ್ಧತಿ ಮತ್ತು ಬೀಜೋತ್ಪಾದನೆ ವಿಧಾನವನ್ನು ಪ್ರಾಯೋಗಿಕವಾಗಿ ವಿವರಿಸಲಾಗುವುದು. ಶಿಬಿರಾರ್ಥಿಗಳನ್ನು ಅಣಬೆ ಪ್ರಯೋಗಾಲಯ, ಜೈವಿಕ ಕೇಂದ್ರ, ತೋಟಗಾರಿಕೆ ಇಲಾಖೆ, ಶಿವಮೊಗ್ಗ ಇಲ್ಲಿಗೆ ಭೇಟಿ ಮಾಡಿಸಿ, ಅಣಬೆ ಬೆಳೆಯಲು ದೊರಕುವ ಸೌಲಭ್ಯಗಳ ಬಗ್ಗೆ ಇಲಾಖಾ ಸಿಬ್ಬಂದಿಗಳಿಂದ ಮಾಹಿತಿ ನೀಡಿಸಲಾಗುವುದು. ಅಲ್ಲದೆ, ತರಬೇತಿಯ ನಂತರ ಪ್ರತಿ ಶಿಬಿರಾರ್ಥಿಗೂ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಅಣಬೆ ಬೀಜವನ್ನು ಕೊಟ್ಟು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ಕೊಡಲಾಗುವುದು.
ಕಾರ್ಯಕ್ರಮದಲ್ಲಿ ಕುಲಸಚಿವರಾದ ಡಾ. ಕೆ.ಸಿ.ಶಶಿಧರ, ಸಹ ಸಂಶೋಧನಾ ನಿರ್ದೇಶಕರಾದ ಡಾ.ಎಸ್. ಪ್ರದೀಪ್, ಕೆ.ಶಿ.ನಾ.ಕೃ.ತೋ.ವಿ.ವಿ., ಸಹ ವಿಸ್ತರಣಾ ನಿರ್ದೇಶಕರಾದ ಡಾ. ಬಿ. ಸಿ. ಹನುಮಂತಸ್ವಾಮಿ, ಮತ್ತು ಐ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ. ಸಿ. ಸುನಿಲ್ ಇವರು ಉಪಸ್ಥಿತರಿದ್ದರು. ಒಟ್ಟು 30 ಶಿಬಿರಾರ್ಥಿಗಳು ಈ ಐದು ದಿನಗಳ ತರಬೇತಿಯಲ್ಲಿ ಭಾಗವಹಿಸಿದ್ದರು.
klive Special Article ಗೀತಾಜಯಂತಿ ಆಚರಿಸಿ ಶ್ರೀಕೃಷ್ಣನ ಸ್ಮರಿಸಿ ಕೃತಾರ್ಥರಾದ ಈ ಹೊತ್ತಿನಲ್ಲೇ ಆವರಣದಲ್ಲಿ ಶ್ರೀಕೃಷ್ಣಲೋಕದ ಅನಾವರಣ ಎಂಬ ಟ್ಯಾಗ್ ಲೈನ್ ನಲ್ಲಿ “ಅವತರಿಸು ಬಾ” ಎಂಬ ಕುವೆಂಪು ರಂಗಮಂದಿರದಲ್ಲಿನ ಕಾರ್ಯಕ್ರಮ ಮನಸೆಳೆಯಿತು.
ಆಯೋಜಕರು ಕಾರ್ಯಕ್ರಮಕ್ಕೆ ಇಟ್ಟ ಹೆಸರಿನಿಂದಲೇ ಅರ್ಧ ಗೆದ್ದರೆಂದರೆ ತಪ್ಪಾಗಲಿಕ್ಕಿಲ್ಲ. ಆವರಣದೊಳಗೆ ಕೃಷ್ಣನ ಅನಾವರಣ ಮಾಡಿದ ರೀತಿಯಂತೂ ಹೊಸದಾದ ಭಾವ ಪ್ರಪಂಚಕ್ಕೆ ನಮ್ಮೆಲ್ಲರನ್ನೂ ಕೊಂಡೊಯ್ದಿತು. ಕಲಾರಾಧಕರಿಗೆ ವಿಶಿಷ್ಟ ರಸಾನುಭೂತಿಯಾಗಿ ಅವರ ಮನಸ್ಸಿನಲ್ಲಿ ಸದಾ ಅಚ್ಚಳಿಯದೆ ಉಳಿಯುವ ಕಾರ್ಯಕ್ರಮವಾಯಿತು ಎನ್ನುವಲ್ಲಿ ಸಂಶಯವೇ ಇಲ್ಲಾ.
ನಾನು ಕಾರ್ಯಕ್ರಮಕ್ಕೆ ಬರುವ ವೇಳೆಗೆ ರಂಗಮಂದಿರದಲ್ಲಿ ಕಾಲಿಡಲೂ ಜಾಗವಿಲ್ಲದಷ್ಟು ಕಲಾರಸಿಕರು ಬಂದು ಸೇರಿದ್ದರು. ಸರಿಯಾದ ಸಮಯಕ್ಕೆ ಆರಂಭಿಸುವುದು ಶ್ರೀ ಶಾರದಾ ಸಂಗೀತ ನೃತ್ಯ ವಿದ್ಯಾಲಯದ ಶಿಸ್ತು. ಅದರಂತೆ ನಿಗದಿತ ಸಮಯದಲ್ಲಿ ಆರಂಭವಾಗಿದ್ದು, ಕೃಷ್ಣನ ಜನನದಿಂದ ಆರಂಭಗೊಂಡು ಅವನ ಅಂತ್ಯದವರೆಗಿನ ಎಲ್ಲ ಪ್ರಮುಖ ಘಟನೆಗಳನ್ನೂ ಗೀತೆ, ನೃತ್ಯ, ರೂಪಕಗಳಿಂದ ಕಟ್ಟಿಕೊಡುವಲ್ಲಿ ಬಹಳ ಚಂದದ ಪ್ರಯತ್ನ ಮಾಡಿದ್ದಾರೆ.
ಕೃಷ್ಣ ಎಂದರೆ ಆಕರ್ಷಣೆ ಎನ್ನುವ ಅರ್ಥದಂತೆ ಇಡೀ ಕಾರ್ಯಕ್ರಮ ಅತ್ಯುತ್ತಮವಾಗಿ ಆಕರ್ಷಣೀಯವಾಗಿತ್ತು. ವಿದ್ಯಾಲಯದ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯ ಪೋಷಕರವರೆಗೂ ಇದರಲ್ಲಿ ಪಾಲ್ಗೊಂಡು ಕೃಷ್ಣ ಲೋಕದಲ್ಲಿ ತಾವು ಒಂದಾಗಿ ಪುನೀತರಾಗಿ ನೋಡುಗರಾದ ನಮ್ಮನ್ನು ಪುಳಕಿತಗೊಳಿಸಿದರು.
ಈ ರೀತಿಯ ರೂಪಕ ನನಗನ್ನಿಸಿದ ಹಾಗೆ ಶಿವಮೊಗ್ಗದ ರಂಗಮಂದಿರದಲ್ಲಿ ಇದೇ ಮೊದಲು. ನ ಭೂತೋ, ನ ಭವಿಷ್ಯತಿ… ಎಂಬ ರೂಪದಲ್ಲಿ ಸೊಬಗು ತುಂಬಿ ಕಣ್ಮನಗಳಿಗೆ ಆನಂದ ನೀಡಿತು. ಅಂದಿನ ಅನೇಕ ಸಂಗತಿಗಳು ಅದ್ಭುತವಾದ ರಸಾನುಭವ ನೀಡಿದವು. ವೇದಿಕೆಗೆ ಹೊಂದಿಕೊಂಡಂತೆ ಇರುವ LED ವಾಲ್, ಅದರಲ್ಲಿ ಪ್ರದರ್ಶಿತವಾಗುತ್ತಿದ್ದ ಚಿತ್ರಗಳು, ವಿಡಿಯೋಗಳು, ಅದಕ್ಕೆ ಪೂರಕವಾದ ವಿವರಣೆ, ಅದರ ಧ್ವನಿ, ಅಲ್ಲದೇ ಅದಕ್ಕೆ ಹೊಂದಿಕೊಂಡಂತೆ ಮಾಡುತ್ತಿದ್ದ ನೃತ್ಯ ವಾಹ್ ಏನದ್ಭುತ ಎನಿಸುವಂತೆ ಮಾಡಿತು.
ಪ್ರತಿಯೊಂದು ಸಣ್ಣ ಸಣ್ಣ ಸೂಕ್ಷ್ಮ ಸಂಗತಿಗಳನ್ನೂ ಸಹ ಗಮನಿಸಿ ಒಂದಿನಿತೂ ಲೋಪ ಬರದಂತೆ ನೋಡುಗನಿಗೆ ನೀಡಿದ್ದು ಆಯೋಜಕರ ಪರಿಪೂರ್ಣತೆಗೆ ಹಿಡಿದ ಕನ್ನಡಿಯಾಗಿತ್ತು.
ನಾ ನೋಡಿದ್ದು ಕೃಷ್ಣ ಕಂಸ ನನ್ನು ಸಂಹಾರ ಮಾಡುವ ಸಮಯದಿಂದ… ಆ ಮುದ್ದು ಮುಖದ ಕೃಷ್ಣನ ಪಾತ್ರಧಾರಿ ಚೆನ್ನಾಗಿ ಕಂಡರೆ, ಕಂಸನ ಅಭಿನಯ ಕೂಡ ಅಷ್ಟೇ ಚೆನ್ನಾಗಿ ಮೂಡಿ ಬಂದಿತು. ಅದಾದ ಮೇಲೆ ಕನಕದಾಸರ ಕೀರ್ತನೆಯಾದ ರಂಗನೊಲಿದಾ ನಮ್ಮ ಕೃಷ್ಣನೊಲಿದಾ… ಅಂಗನೆ ದ್ರೌಪದಿಗೆ ಅಕ್ಷಯ ವಸ್ತ್ರವನಿತ್ತು ಎನ್ನುವುದಕ್ಕೆ ಮಾಡಿದ ರೂಪಕವಂತೂ ಅದೆಷ್ಟು ಏಕಾಗ್ರವಾಗಿ ನೋಡಿದೆನೋ… ಕಣ್ತುಂಬಿ ಬರುವಷ್ಟು ಸೊಗಸಾದ ದೃಶ್ಯ ನಿರೂಪಣೆ, ಅದರಲ್ಲಿನ ಶಕುನಿ, ಭೀಮರೇ ಮೊದಲಾಗಿ ಅದ್ಭುತ ಅಭಿನಯ ಮಾಡಿದರೆ, ದ್ರೌಪದಿಯ ಪಾತ್ರಧಾರಿಯಂತೂ ಮನದಲ್ಲಿ ಅಚ್ಚಳಿಯದೆ ಉಳಿಯುವಂತಹ ಅಭಿನಯ ಮಾಡಿ ಗೆದ್ದಳು.
klive Special Article ಹಿಂದಿನ ಪರದೆಯಲ್ಲಿ ತೋರಿಸುವ ಚಿತ್ರಕ್ಕೂ ದ್ರೌಪದಿಯ ಪಾತ್ರಕ್ಕೂ ಬಹಳ ಸಾಮ್ಯತೆಗಳಿದ್ದವು. ಕಣ್ಣ ಮುಂದೆಯೇ ಎಲ್ಲವೂ ನಡೆಯುತ್ತಿದೆಯೇನೋ ಎನ್ನುವಂತ ರೀತಿಯಲ್ಲಿ ನಾವೇ ಮಹಾಭಾರತದ ಕಾಲಕ್ಕೆ ಹೋದ ಹಾಗೆ ಭಾಸವಾಯಿತು. ಅದರಂತೆ ನಂತರ ಹಾಡಿದ ‘ಧರ್ಮದಾ ಕ್ಷೇತ್ರಕ್ಕೆ ಕೌರವರ ಕರಿನೆರಳು ಧರ್ಮ ಉಳಿಸಲು ಮೊಳಗೆ ಶ್ರೀಪಾಂಚಜನ್ಯವು’ ಎನ್ನುವ ಗೀತೆಯ ಸಾಹಿತ್ಯವಂತೂ ಮನಮುಟ್ಟುವಂತೆ ಇತ್ತು.
ಕಥಕ್ ಶೈಲಿಯ ನೃತ್ಯಗಳಾದ ‘ನಾರಾಯಣ ರಮಾಧವನ’ ಹಾಗೂ ಕೊನೆಯಲ್ಲಿನ ‘ಬಾ ಇಲ್ಲಿ ಸಂಭವಿಸು ಇಂತೆನ್ನ ಹೃದಯದಲಿ ನಿತ್ಯವೂ ಅವತರಿಪ ಸತ್ಯಾವತಾರ’ಕ್ಕೆ ಮಾಡಿದ ನೃತ್ಯ ಸಂಯೋಜನೆ ಕಲಾತ್ಮಕವಾಗಿತ್ತು.
ಬಲರಾಮರ ಅಂತ್ಯವಾಗಿ ಕೃಷ್ಣನ ಅವಸಾನಕ್ಕೆ ಬರುವಾಗಿನ ದೃಶ್ಯ ಕಟ್ಟಿಕೊಟ್ಟದ್ದು ಮತ್ತು ಅಲ್ಲಿ ಬರುವ ಮರ, ಅವನಿಗೆ ತಾಕುವ ಬಾಣ, ನಂತರ ಅವನು ಸ್ಮರಿಸುವ ತಾಯಂದಿರು ಅಲ್ಲಿ ಪೂತನಿಗೂ ನೀಡಿದ ಸ್ಥಾನ ಇವೆಲ್ಲವೂ ಸಹೃದಯರ ಕಣ್ಣಾಲಿಗಳಲಿ ನೀರು ತರಿಸದೇ ಇರಲಿಲ್ಲ…. ಒಟ್ಟಾರೆ ಹೇಳುವುದಾದರೆ ಇಡೀ ಕಾರ್ಯಕ್ರಮ ಅದರ ಪರಿಕಲ್ಪನೆ ಹೊಸತನದ ಚಿಂತನೆ, ಕೃಷ್ಣ ಲೋಕವನ್ನೇ ಕಣ್ಣೆದುರಿಗೆ ತಂದು ನಿಲ್ಲಿಸಿತು.
ದಶಾವತಾರದಲ್ಲಿ ಬಹು ಮುಖ್ಯವಾದ ಹಾಗೂ ಪೂರ್ಣತೆಯನ್ನು ಹೊಂದಿರುವ ಅವತಾರವಾದ ಕೃಷ್ಣಾವತಾರವನ್ನು ಆರಂಭದಿಂದ ಕೊನೆಯವರೆಗೂ ಎಳೆ ಎಳೆಯಾಗಿ ನಾನಾ ರೀತಿಯಿಂದ ಬಿಚ್ಚಿಟ್ಟ ಪರಿಕಲ್ಪನೆ ಎಲ್ಲರ ಹೃದಯದಲ್ಲಿ ಒಂದು ಅದ್ಭುತದ ಪರಿಯನ್ನು ನೋಡಿ ಹಾಗೆ ಅದರ ಸವಿಯನ್ನು ಚಿರಕಾಲ ಮನದಂಗಳದಲ್ಲಿ ಹಸಿರಾಗಿ ಇಟ್ಟುಕೊಳ್ಳುವಂತೆ ಮಾಡಿತು.
ನಿಜವಾಗಿಯೂ ಹೇಳಬೇಕಂದ್ರೆ ಅದ್ಭುತವಾದ ಅನುಭೂತಿಗೆ ನಾವೆಲ್ಲ ಸಾಕ್ಷಿಯಾದೆವು. ಕಾರ್ಯಕ್ರಮದ ಶ್ರೇಷ್ಠತೆಯನ್ನು ಬಣ್ಣಿಸಲು ಪದಗಳು ಸಾಲುತ್ತಿಲ್ಲ ಎಂಬ ಭಾವದಿಂದಲೇ ಇಷ್ಟು ಸುಂದರವಾದ ಕಲಾತ್ಮಕವಾದ ಈ ಕಾರ್ಯಕ್ರಮವನ್ನು ಶಿವಮೊಗ್ಗದ ಜನತೆಗೆ ನೀಡಿದ, ಈ ಕಾರ್ಯಕ್ರಮಕ್ಕಾಗಿ ಶ್ರಮಿಸಿದ ಶ್ರೀ ಶಾರದಾ ಸಂಗೀತ ನೃತ್ಯ ವಿದ್ಯಾಲಯದ ಗುರುಗಳಾದ ವಿದ್ವಾನ್ ಅರುಣ್ ಕುಮಾರ್ ಮೊದಲಾಗಿ ಸರ್ವರಿಗೂ ಸಹ ಅನಂತಾನಂತ ಧನ್ಯವಾದಗಳು.
ಅದ್ಭುತವಾದ ನೃತ್ಯ ರೂಪಕವನ್ನು ಮಿಸ್ ಮಾಡಿಕೊಂಡವರು ಚಿಂತಿಸಬೇಕಿಲ್ಲ https://www.youtube.com/live/vidEavJPc3s?feature=shared ಈ ವೆಬ್ಸೈಟ್ನಲ್ಲಿ ಮತ್ತೆ ನೋಡಿ ಕಣ್ತುಂಬಿಸಿಕೊಳ್ಳಬಹುದು.
ನಾನಂತೂ ಅದೆಷ್ಟು ಬಾರಿ ನೋಡಿದ್ದೇನೋ… ನೀವು ನೋಡಿ ನಿಮ್ಮ ಮನೆಯ ಮಕ್ಕಳಿಗೆ ತಪ್ಪದೇ ತೋರಿಸಿ. ಭಾರತೀಯ ಸಂಗೀತ ನೃತ್ಯ ಪರಂಪರೆಯ ಶ್ರೀಮಂತಿಕೆಯನ್ನು ಅವರಿಗೂ ಪರಿಚಯಿಸಿ.
ಡಾ. ಮೈತ್ರೇಯಿ ಆದಿತ್ಯಪ್ರಸಾದ್ ಉಪನ್ಯಾಸಕರು, ಪೇಸ್ ಕಾಲೇಜ್ ಶಿವಮೊಗ್ಗ
Dr. BR Ambedkar Development Corporation ಡಾ|| ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮವು 2024-25 ನೇ ಸಾಲಿನಲ್ಲಿ ಸ್ವಯಂ ಉದ್ಯೋಗ ನೇರಸಾಲ-ಕುರಿ ಸಾಕಾಣಿಕೆ ಯೋಜನೆ ಹಾಗೂ ಸ್ವಾವಲಂಭಿ ಸಾರಥಿ-ಫುಡ್ ಕಾರ್ಟ್ ಯೋಜನೆಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ. ಆಸಕ್ತರು ಡಿ. 29 ರೊಳಗಾಗಿ ಶಿವಮೊಗ್ಗ ಒನ್, ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಸೇವಾಸಿಂಧು https://sevasindhu.karantaka.gov.in ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವಂತೆ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. Dr. BR Ambedkar Development Corporation ಈಗಾಗಲೇ ಅರ್ಜಿ ಸಲ್ಲಿಸಿರುವವರು ಉದ್ದೇಶ ಬದಲಾವಣೆಗೆ ಇಚ್ಛಿಸಿದ್ದಲ್ಲಿ ನೇರವಾಗಿ ವೆಬ್‌ಸೈಟ್ https://swdcorp.karnataka.gov.in/ADCLPortal ರಲ್ಲಿ ಬದಲಾವಣೆ ಮಾಡಬಹುದಾಗಿದೆ ಅಥವಾ ಸಂಬAಧಿಸಿದ ಜಿಲ್ಲಾ ಕಚೇರಿಗಳಲ್ಲಿ ಮನವಿ ಪತ್ರ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಜಿಲ್ಲಾ ಪಂಚಾಯತ್ ಕಾರ್ಯಾಲಯ, ಕುವೆಂಪು ರಸ್ತೆ, ಶಿವಮೊಗ್ಗ ಇಲ್ಲಿ ಸಂಪರ್ಕಿಸುವುದು.
Smt. Tulsi Gowda ಕರ್ನಾಟಕದ ಪರಿಸರವಾದಿ ಮತ್ತು ಪದ್ಮ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ತುಳಸಿ ಗೌಡ ಅವರ ನಿಧನ ತೀವ್ರ ದುಃಖ ತಂದಿದೆ. ಅವರು ತಮ್ಮ ಇಡೀ ಬದುಕನ್ನು ಪ್ರಕೃತಿ ಪೋಷಣೆಗಾಗಿ ಮುಡಿಪಾಗಿಟ್ಟು, ಸಾವಿರಾರು ಗಿಡಗಳನ್ನು ನೆಟ್ಟು ಬೆಳೆಸಿ ನಮ್ಮ ಪರಿಸರವನ್ನು ಸಂರಕ್ಷಿಸಿದವರು. ಪರಿಸರ ರಕ್ಷಣೆಗೆ ಸದಾ ಮಾರ್ಗದರ್ಶನ ನೀಡುವ ಬೆಳಕಾಗಿ ಅವರು ಉಳಿಯುತ್ತಾರೆ. ಅವರ Smt. Tulsi Gowda ಕೆಲಸಗಳು ನಮ್ಮ ಭೂಗ್ರಹವನ್ನು ರಕ್ಷಿಸಲು ತಲೆಮಾರುಗಳಿಗೆ ಪ್ರೇರಣೆ ನೀಡುತ್ತಿರುತ್ತವೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು ಓಂ ಶಾಂತ ಎಂದು ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ.
MESCOM ಶಿವಮೊಗ್ಗ ಎಂ.ಆರ್.ಎಸ್.220/11 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಇರುವುದರಿಂದ ಡಿ. 19 ರಂದು ಬೆಳಗ್ಗೆ 9.30 ರಿಂದ ಸಂಜೆ 6.00ರವರೆಗೆ ಕೂಡ್ಲಿ, ಚಿಕ್ಕೂಡ್ಲಿ, ಭದ್ರಾಪುರ, ಕಾಟಿಕೆರೆ, ವೆಂಕಟಾಪುರ, ಬುಕ್ಲಾಪುರ, ಹೊಳೆಬೆಳಗಲು, ಸಕ್ರೇಬೈಲು, ಹೊಳಲೂರು, ಮಡಿಕೆಚೀಲೂರು, ಹಾಡೋನಹಳ್ಳಿ, ಹೊಳೆಹಟ್ಟಿ, ಸೂಗೂರು, ಕ್ಯಾತಿನಕೊಪ್ಪ, ಬುಳ್ಳಾಪುರ, ಬೇಡರಹೊಸಳ್ಳಿ, ಹರಮಘಟ್ಟ, ಸೋಮಿನಕೊಪ್ಪ, ಆಲದಹಳ್ಳಿ, ಸುತ್ತುಕೋಟೆ, ಕೊಮ್ಮನಾಳ್, ಬಿಕ್ಕೋನಹಳ್ಳಿ, ಬೂದಿಗೆರೆ, ಬೀರನಕೆರೆ, ಬನ್ನಿಕೆರೆ, ಅಬ್ಬಲಗೆರೆ, ಹುಣಸೋಡು, ಕಲ್ಲಗಂಗೂರು, ಚಿನ್ನಮುಂಬಾಪುರ, ಮತ್ತೋಡು, MESCOM ರತ್ನಗಿರಿನಗರ, ರತ್ನಾಕರ ಲೇಔಟ್, ಇಂಜಿನಿಯರಿಂಗ್ ಕಾಲೇಜು, ಕೃಷಿ ಕಾಲೇಜು, ಗೋಂಧಿಚಟ್ನಹಳ್ಳಿ, ಹೊಳೆಹನಸವಾಡಿ, ಕುಂಚೇನಹಳ್ಳಿ, ಬೀರನಕೆರೆ, ಬಿಕೋನಹಳ್ಳಿ, ಕಲ್ಲಾಪುರ, ಬಸವನಗಂಗೂರು, ಮೇಲಿನಹನಸವಾಡಿ, ಬೆಳಲಕಟ್ಟೆ, ಮೋಜಪ್ಪ ಹೊಸೂರು, ಸುತ್ತಮುತ್ತಲಿನ ಜಲ್ಲಿ ಕ್ರಷರ್‌ಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.
Karnataka Public School Doddabathi ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳೇ ಭಾಗ್ಯವಂತರು ಏಕೆಂದರೆ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಉತ್ತಮ ಗುಣಮಟ್ಟದ ಅಧ್ಯಾಪಕ ಗಳಿದ್ದಾರೆ ಎಂದು ಹಿರಿಯ ಪತ್ರಕರ್ತ ಡಾ ಎಚ್ ಬಿ ಮಂಜುನಾಥ ಹೇಳಿದರು.
ದೊಡ್ಡಬಾತಿಯ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲಾ ವಿಭಾಗದಲ್ಲಿ ಎಸ್ ಎಸ್ ಎಲ್ ಸಿ, ಪಿ ಯು ಸಿ ವಿದ್ಯಾರ್ಥಿಗಳಿಗೆ ಏರ್ಪಾಡಾಗಿದ್ದ ಪ್ರೇರಣಾದಾಯಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಹೆಚ್ಚಿನ ವಿದ್ಯಾರ್ಹತೆ ಹೊಂದಿರುವ ಉತ್ತಮ ಗುಣಮಟ್ಟದ ಅಧ್ಯಾಪಕ ವರ್ಗದೊಂದಿಗೆ ಅಗತ್ಯ ಮೂಲಭೂತ ಸೌಕರ್ಯಗಳು ಸಹೃ ಈಗ ಉತ್ತಮವಾಗಿವೆ, ಆದ್ದರಿಂದ ವಿದ್ಯಾರ್ಥಿಗಳಲ್ಲಿ ಎಂದು ಕೀಳರಿಮೆ ಇರಬಾರದು. ಬುದ್ಧಿವಂತ ವಿದ್ಯಾರ್ಥಿಗಳನ್ನೇ ಆಯ್ದುಕೊಂಡು ಶೈಕ್ಷಣಿಕ ಸಾಧನೆ ತೋರಿಸುವುದು ದೊಡ್ಡದಲ್ಲ, ಸರ್ಕಾರಿ ಶಾಲಾ ಕಾಲೇಜುಗಳು ಸಾಮಾನ್ಯ ವಿದ್ಯಾರ್ಥಿಗಳನ್ನೂ ಸೇರಿಸಿಕೊಂಡು ಸಾಧನೆ ಮಾಡಬೇಕಾಗಿರುವುದು ಸವಾಲು ಎಂದರಲ್ಲದೆ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಸಾಮರ್ಥ್ಯವೆಂಬುದು ಇದ್ದೇ ಇರುತ್ತದೆ, ಅಂದಂದಿನ Karnataka Public School Doddabathi ಪಾಠ ಪ್ರವಚನಗಳನ್ನು ಅಂದಂದೆ ಅರ್ಥ ಮಾಡಿಕೊಂಡಲ್ಲಿ ಪರೀಕ್ಷೆಗಾಗಿ ಪ್ರತ್ಯೇಕವಾಗಿ ಓದುವ ಅವಶ್ಯಕತೆಯೂ ಬರುವುದಿಲ್ಲ, ಪರೀಕ್ಷೆಯು ಭಯವನ್ನೂ ಉಂಟುಮಾಡುವುದಿಲ್ಲ, ಸಂತೋಷದಿಂದ ಪರೀಕ್ಷೆ ಎದುರಿಸಬಹುದು ಎಂಬುದನ್ನು ಉದಾಹರಣೆಗಳ ಸಹಿತ ಮಂಜುನಾಥ್ ವಿವರಿಸಿದರು.
ರಾಜ್ಯದ ಕಳೆದ ವಾರ್ಷಿಕ ಪರೀಕ್ಷೆಯಲ್ಲಿ ಸುಮಾರು 8 ಲಕ್ಷ 60 ಸಾವಿರ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ತೆಗೆದುಕೊಂಡು ಅದರಲ್ಲಿ 6 ಲಕ್ಷ 31 ಸಾವಿರ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ ಪಿಯುಸಿಯಲ್ಲಿ 6,90,000 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡು 552,000 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ, ಉತ್ತೀರ್ಣತೆಯ ಪ್ರಮಾಣ ಈ ವರ್ಷ ಇನ್ನು ಹೆಚ್ಚಾಗಬೇಕು ಎಂದರು.
ಶಾಲಾಭಿವೃದ್ಧಿ ಸಮಿತಿಯ ಶ್ರುತಿ ಹಾಗೂ ಧರ್ಮರಾಜ್ ಉಪಸ್ಥಿತಿಯಲ್ಲಿ ಶಾಲೆಯ ಪ್ರಾಚಾರ್ಯ ಬಿ ಕೆ ಮಂಜುಳಾರವರ ಅಧ್ಯಕ್ಷತೆಯಲ್ಲಿ ಅಧ್ಯಾಪಕ ವರ್ಗದ ಶಿಲ್ಪಾಚಾರ್ ಹಾಗೂ ಸೌಮ್ಯ ನಿರೂಪಿಸಿದರೆ ಉಪಪ್ರಾಚಾರ್ಯ ಬೀರಪ್ಪನವರು ಪ್ರಾಸ್ತಾವಿಕ ನುಡಿಗಳ ನಾಡಿದರು ಭೀಮಪ್ಪನವರು ವಂದನೆಗಳನ್ನು ಸಮರ್ಪಿಸಿದರು.
Canara Bank Rural Self Employment Training center ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಹೊಳಲೂರು (ಶಿವಮೊಗ್ಗ ತಾಲ್ಲೂಕು) ಇಲ್ಲಿ ಉಚಿತ ತರಬೇತಿಯನ್ನು ಹಮ್ಮಿಕೊಂಡಿದ್ದು ಆಸಕ್ತಿ ಇರುವ ರೈತರು, ಕಾರ್ಮಿಕರು, ನಿರುದ್ಯೋಗಿ ಯುವಕ ಮತ್ತು ಯುವತಿ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅಭ್ಯರ್ಥಿಯು ೧೮ ರಿಂದ ೪೫ ವರ್ಷ ವಯೋಮಿತಿ ಒಳಗಿನವರಾಗಿರಬೇಕು ಮತ್ತು ೮ನೇ ತರಗತಿ ಉತ್ತೀರ್ಣರಾಗಿರಬೇಕು. ಮತ್ತು ಗ್ರಾಮೀಣ ಭಾಗದ ಬಿಪಿಎಲ್ ಕಾರ್ಡ ಹೊಂದಿದು ಉಚಿತ ತರಬೇತಿಯನ್ನು ಪಡೆದ ನಂತರ ಸ್ವ-ಉದ್ಯೋಗವನ್ನು ಪ್ರಾರಂಭ ಮಾಡುವವರಾಗಿರಬೇಕು. ತರಬೇತಿ ಅವಧಿಯಲ್ಲಿ ಉಚಿತ ಊಟ-ವಸತಿ ವ್ಯವಸ್ಥೆ ಇರುತ್ತದೆ. ತರಬೇತಿ ಅವಧಿಯಲ್ಲಿ ಸಂಸ್ಥೆಯಲ್ಲಿ ಉಳಿದುಕೊಳ್ಳುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ಕುರಿ ಸಾಕಾಣಿಕೆ ೧0ದಿನಗಳು 23/12/2024 ತರಬೇತಿಯು ಪ್ರಾರಂಭವಾಗಲಿದ್ದು ಆಸಕ್ತರು ಹೆಸರು, ವಿಳಾಸ, ಮೊಬೈಲ್ ನಂ. ವಿದ್ಯಾರ್ಹತೆ, ಮತ್ತು ವಯಸ್ಸಿನ ವಿವರಗಳೊಂದಿಗೆ: ನಿರ್ದೇಶಕರು, ಕೆನರಾ ಬ್ಯಾಂಕ್ ಗ್ರಾಮೀಣ ಸ್ವ -ಉದ್ಯೋಗ ತರಬೇತಿ ಸಂಸ್ಥೆ, ಹೊನ್ನಾಳಿ ರಸ್ತೆ, ಹೊಳಲೂರು-೫೭೭ ೨೧೬ (ಶಿವಮೊಗ್ಗ ತಾಲ್ಲೂಕು) ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ. ೯೭೪೩೪೨೯೫೯೫, ೮೭೨೨೩೮೪೫೪೧, ೯೧೬೪೪೧೧೫೮೦, ೮೧೦೫೩೭೮೭೩೫ ೯೪೪೯೩೭೧೫೭೯, ೯೪೮೧೯೫೫೭೨೧,
Tiger and Lion Safari ತ್ಯಾವರೆಕೊಪ್ಪದ ಹುಲಿ-ಸಿಂಹಧಾಮಕ್ಕೆ ಆಗಮಿಸುವ ಪ್ರವಾಸಿಗರ ಹಾಗೂ ಡಿಸೆಂಬರ್ ಮಾಹೆಯಲ್ಲಿ ಶಾಲಾ/ಕಾಲೇಜು ವಿದ್ಯಾರ್ಥಿಗಳ ಪ್ರವಾಸದ ಅನುಕೂಲಕ್ಕಾಗಿ ಹುಲಿ-ಸಿಂಹಧಾಮದಲ್ಲಿನ ಝೂ ಮತ್ತು ಸಫಾರಿ ವೀಕ್ಷಣೆಯನ್ನು ಡಿಸೆಂಬರ್ ಮಾಹೆಯ 17, 24 ಮತ್ತು 31ರ ಮಂಗಳವಾರದಂದು ಸಹ ತೆರೆದಿರುತ್ತದೆ.
Tiger and Lion Safari ಇದರ ಸದುಪಯೋಗವನ್ನು ಪ್ರವಾಸಿಗರು ಪಡೆದುಕೊಳ್ಳಬಹುದೆಂದು ತ್ಯಾವರೆಕೊಪ್ಪದ ಹುಲಿ-ಸಿಂಹಧಾಮದ ಕಾರ್ಯ ನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.
ರಾಜ್ಯ ಮಹಿಳಾ ನಿಲಯ, ಶಿವಮೊಗ್ಗ ಸಂಸ್ಥಗೆ ಹಾವೇರಿ ಜಿಲ್ಲೆ ಶಿಗ್ಗಾಂವ್‌ನ ಶ್ರೀ ಮೃತ್ಯುಂಜಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ೪೩ ವರ್ಷದ ಹೀರಾಬಾಯಿ ಎಂಬ ಮಾನಸಿಕ ಅಸ್ವಸ್ಥೆಯನ್ನು ದಾಖಲು ಮಾಡಿದ್ದು, ಈವರೆಗೆ ಯಾವುದೇ ವಿಳಾಸ ತಿಳಿದಿರುವುದಿಲ್ಲ.
ಈ ಮಹಿಳೆಯ ಪೋಷಕರ ಪತ್ತೆಗಾಗಿ ರಾಜ್ಯ ಮಹಿಳಾ ನಿಲಯ ಅಧೀಕ್ಷಕರು ತಿಳಿಸಿದ್ದಾರೆ.