Friday, March 20, 2026
Friday, March 20, 2026
Home Blog Page 467

Veterinary College Shivamogga ಪಶುವೈದ್ಯಕೀಯ ಕಾಲೇಜಿನಲ್ಲಿ ಖಾಲಿಯಿರುವ ಹುದ್ದೆಗಳಿಗೆ ಡಿ.23 ರಂದು ನೇರ ನೇಮಕಾತಿ ಸಂದರ್ಶನ

0

Veterinary College Shivamogga ಶಿವಮೊಗ್ಗದ ಪಶು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳುವ ಸಂಬಂಧ ಡಿ. 23ರಂದು ನೇರ ಸಂದರ್ಶನ ಏರ್ಪಡಿಸಲಾಗಿದೆ.

ಪ್ರಾಣಿ ಆಹಾರ ಶಾಸ್ತ್ರ ವಿಭಾಗ, ಪಶುವೈದ್ಯಕೀಯ ಔಷಧ ಹಾಗೂ ವಿಷಶಾಸ್ತ್ರ ವಿಭಾಗ, ಜಾನುವಾರು ಉತ್ಪನ್ನಗಳ ತಾಂತ್ರಿಕತೆ ವಿಭಾಗ, ಪಶುವೈದ್ಯಕೀಯ ಸಾರ್ವಜನಿಕ ಆರೋಗ್ಯ ಮತ್ತು ಸಮುದಾಯ ರೋಗ ಅಧ್ಯಯನ ಶಾಸ್ತ್ರ ವಿಭಾಗ, ಜಾನುವಾರು ಸಾಕಾಣಿಕಾ ಸಂಕೀರ್ಣ ವಿಭಾಗ, ಪಶುವೈದ್ಯಕೀಯ ಶರೀರಕ್ರಿಯಾ ಮತ್ತು ಜೀವರಸಾಯನ ಶಾಸ್ತ್ರ ವಿಭಾಗ, ಪಶುವೈದ್ಯಕೀಯ ಶಾಸ್ತ್ರ ಚಿಕಿತ್ಸೆ ಮತ್ತು ಕ್ಷ-ಕಿರಣ ಶಾಸ್ತ್ರ ವಿಭಾಗ, ಪಶು ವೈದ್ಯಕೀಯ ಚಿಕಿತ್ಸಾ ಸಂಕೀರ್ಣ ವಿಭಾಗಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ನಿಯಮಾವಳಿಯಂತೆ ಹಾಗೂ ಮಾರ್ಗಸೂಚಿಯಂತೆ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಬಹುದು.

ನೇರ ಸಂದರ್ಶನವು ಡೀನ್ ಕಚೇರಿ, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ ಇಲ್ಲಿ ಡಿ.23ರ ಬೆಳಿಗ್ಗೆ 11 ಗಂಟೆಯಿಂದ ನಡೆಯಲಿದೆ.

Veterinary College Shivamogga ಆಯ್ಕೆಯಾದ ರಾಷ್ಟ್ರೀಯ ಅರ್ಹತಾ ಪರೀಕ್ಷೆ(ಎನ್‌ಇಟಿ) ಪ್ರಮಾಣ ಪತ್ರ ಹೊಂದಿರುವ ಅಭ್ಯರ್ಥಿಗಳಿಗೆ ಮಾಸಿಕ ರೂ.26,700/- ಮತ್ತು ರಾಷ್ಟ್ರೀಯ ಅರ್ಹತಾ ಪರೀಕ್ಷೆಯ (ಎನ್‌ಇಟಿ)ಪ್ರಮಾಣ ಪತ್ರ ಹೊಂದಿರುವ ಅಭ್ಯರ್ಥಿಗಳಿಗೆ ಮಾಸಿಕ ರೂ.50,000 ವೇತನ ನೀಡಲಾಗುವುದು.

ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 08182-200872 ಹಾಗೂ ವಿಶ್ವವಿದ್ಯಾಲಯದ ಜಾಲತಾಣ ಸಂಪರ್ಕಿಸುವಂತೆ ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್ ತಿಳಿಸಿದ್ದಾರೆ.

Seema English School ಡಿಸೆಂಬರ್ 27 & 28. ಪ್ರಾಥಮಿಕ & ಪ್ರೌಢಶಾಲಾ ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆ

0

Seema English School ಕಾರ್ಯಕ್ರಮವನ್ನು ಡಿ. ೨೬ ಮತ್ತು 27 ರಂದು ಬೆಳಗ್ಗೆ 10 ಗಂಟೆಗೆ ಸೀಮಾ ಆಂಗ್ಲ ಶಾಲೆ, ಮಲ್ನಾಡ್ ಲೇಔಟ್ ಮಾಚೇನಹಳ್ಳಿಯಲ್ಲಿ ಏರ್ಪಡಿಸಲಾಗಿದೆ.

Seema English School ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪರವರು ನೆರವೆರಿಸುವರು. ಜಿಲ್ಲೆಯ ಎಲ್ಲಾ ಗೌರವಾನ್ವಿತ ಶಾಸಕರುಗಳು ಆಗಮಿಸುವರು.
ಡಿ. 26ರಂದು ಪ್ರಾಥಮಿಕ ಶಿಕ್ಷಕರ ಸಹಪಠ್ಯ ಚಟುವಟಿಕೆಗಳ 245 ಸ್ಪರ್ಧಾಳು ಹಾಗೂ ಡಿ.27ರಂದು ಪ್ರೌಡಶಾಲಾ ಶಿಕ್ಷಕರ ಸಹಪಠ್ಯ ಚಟುವಟಿಕೆಗಳ 490 ಸ್ಪರ್ಧಾಳುಗಳು ಒಟ್ಟು 07 ಸ್ಪರ್ಧೆಗಳು ಮತ್ತು 23 ಜನ ತೀರ್ಪುಗಾರರು ಮತ್ತು ಇಲಾಖೆಯ ಅಧಿಕಾರಿಗಳು ಆಗಮಿಸಲಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

S.N. Channabasappa ಮಕ್ಕಳಲ್ಲಿ ಸಮಷ್ಠಿ ವ್ಯಕ್ತಿತ್ವ ಬೆಳೆಸಲು ಸಾಂಸ್ಕೃತಿಕ,ಕ್ರೀಡಾ ಚಟುವಟಿಕೆಗಳು ಸಹಕಾರಿ- ಶಾಸಕ ‘ಚೆನ್ನಿ’

0

S.N. Channabasappa ಶಾಲಾ ವಾರ್ಷಿಕೋತ್ಸವಗಳು ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಅಭಿವ್ಯಕ್ತಗೊಳಿಸಲು ಉತ್ತಮ ವೇದಿಕೆಯಾಗಿದ್ದು, ರೋಟರಿ ಪೂರ್ವದ, ರೋಟರಿ ಶಿವಮೊಗ್ಗ ಪೂರ್ವ ಎಜುಕೇಷನಲ್ & ಛಾರಿಟಬಲ್ ಟ್ರಸ್ಟ್ (ರಿ.,), ಇದು ರೋಟರಿ ಪೂರ್ವ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಮಕ್ಕಳಲ್ಲಿ ಸಮಷ್ಠಿ ವ್ಯಕ್ತಿತ್ವವನ್ನು ಬೆಳೆಸಲು ಎಲ್ಲಾ ವಿಧಗಳ ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ಕ್ರೀಡಾ ಚಟುವಟಿಕೆಗಳನ್ನು ನಡೆಸಿ ವಿಜೇತರಾದವರಿಗೆ ಬಹುಮಾನ ನೀಡುವುದರ ಜೊತೆಗೆ ಈ ದಿನ ನಡೆದ ಅಂಬೇಡ್ಕರ್ ಭವನದ ಮಹಾ ವೇದಿಕೆಯಲ್ಲಿ ಅವುಗಳನ್ನು ಎಲ್ಲಾ ಪೋಷಕರ ಮುಂದೆ ಅಭಿವ್ಯಕ್ತಗೊಳಿಸಿ ಅವರಿಗೆ ತಮ್ಮ ಮಕ್ಕಳು ಶಾಲೆಯಲ್ಲಿ ಕಲಿಕೆ & ಸಹಪಠ್ಯ ಚಟುವಟಿಕೆಗಳ ಪ್ರಗತಿಯನ್ನು ವೀಕ್ಷೀಸಲು ಅವಕಾಶ ಮಾಡಿಕೊಟ್ಟಿರುವುದು ಪ್ರಶಂಸನೀಯ ಸಂಗತಿ. ಇದರ ಜೊತೆಗೆ ರೋಟರಿ ಟ್ರಸ್ಟ್ ರಾಜೀವ್‌ಗಾಂಧಿ ನಗರದಲ್ಲಿರುವ ಚಿತಾಗಾರವನ್ನು ಕಳೆದ ಹಲವಾರು ವರ್ಷಗಳಿಂದ, ಅತ್ಯಂತ ಸಮರ್ಥವಾಗಿ ನಡೆಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಶಿವಮೊಗ್ಗ ನಗರದ ಶಾಸಕರಾದ ಶ್ರೀ ಎಸ್.ಎನ್. ಚನ್ನಬಸಪ್ಪ ಇವರು ಅಭಿಪ್ರಾಯ ಪಡುತ್ತಾ, ರೋಟರಿ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ಪದಾಧಿಕಾರಿಗಳ ಸೇವೆಯನ್ನು ಶ್ಲಾಘೀಸಿದರು.
ಅವರು ಇಂದು ರೋಟರಿ ಪೂರ್ವ ಆಂಗ್ಲ ಪ್ರಾಥಮಿಕ & ಪ್ರೌಢ ಶಾಲೆಗಳ ಕ್ರೀಡಾ & ಸಾಂಸ್ಕೃತಿಕ ವೈಭವಗಳ ಪ್ರದರ್ಶನ ಹಾಗೂ ಶಾಲಾ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
S.N. Channabasappa ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಿವಮೊಗ್ಗ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ರಮೇಶ್, ಕೆ.ಇ.ಎಸ್., ಇವರು ಮಾತನಾಡುತ್ತಾ, ರೋಟರಿ ಪೂರ್ವ ಆಂಗ್ಲ ಶಾಲೆಯು ಏಪ್ರಿಲ್ ೨೪ರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.೧೦೦ ಫಲಿತಾಂಶ ಪಡೆಯುವುದರ ಜೊತೆಗೆ ಉತ್ತಮ ಶೈಕ್ಷಣಿಕ ಅರ್ಹತೆಯುಳ್ಳ ಅನುಭವಿ ಶಿಕ್ಷಕರನ್ನು ನೇಮಿಸಿಕೊಂಡು ನಗರದ ಇತರ ಯಾವ ಶಾಲೆಗಳಿಗೂ ಕಡಿಮೆ ಇಲ್ಲದ ರೀತಿಯಲಿ,್ಲ ಕ್ರೀಡಾ ಹಾಗೂ ಸಾಂಸ್ಕೃತಿಕ ವೈಭವಗಳನ್ನು ಅಭಿವ್ಯಕ್ತಗೊಳಿಸುತ್ತಿರುವುದು ಅಭಿನಂದನೀಯ ಸಂಗತಿ ಎನ್ನುತ್ತಾ, ಶಿಕ್ಷಣ ಇಲಾಖೆಯಲ್ಲಿ ಅತ್ಯುನ್ನತ ಹುದ್ದೆಯಲ್ಲಿದ್ದು, ತಮಗೆ ಸದಾ ಮಾರ್ಗದರ್ಶನ ನೀಡಿ ಸಮರ್ಥ ಅಧಿಕಾರಿಯಾಗಲು ತನ್ನನ್ನು ರೂಪಿಸಿದ ನಿವೃತ್ತ ಡಿ.ಪಿ.ಐ. ಶ್ರೀ ಚಂದ್ರಶೇಖರಯ್ಯ ಎಂ., ಇವರ ಹಾಗೂ ನಗರದ ಅನೇಕ ಪ್ರತಿಷ್ಠಿತ ವ್ಯಕ್ತಿಗಳ ಸೇವೆಯು ಈ ಶಾಲೆಯ ನಿರ್ವಹಣೆಗೆ ದೊರೆಯುತ್ತಿರುವುದು ಅಭಿನಂದನೀಯ ಸಂಗತಿ ಎಂದರು.
ವಿವಿಧ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಫರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ಪ್ರಾಯೋಜಿಸುವುದರ ಜೊತೆಗೆ ಅವುಗಳನ್ನು ವಿತರಣೆ ಮಾಡಿ ಮಾತನಾಡಿದ ಎ.ಪಿ.ಎಂ.ಸಿ. ಯಾರ್ಡ್ನ ಚಿದಂಬರ್ ಅಂಡ್ ಕೋ. ಅಡಿಕೆ ಮಂಡಿಯ ವರ್ತಕರಾದ ಹಾಗೂ ಟ್ರಸ್ಟಿಗಳಾದ ರೊ. ಎಂ.ಸಿ. ಹೇಮಂತ್ ಇವರು ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅದೃಷ್ಟವಂತರಾಗಿದ್ದು, (ಶಿಕ್ಷಕರ ವೈಯಕ್ತಿಕ ಗಮನ ದೊರೆಯುತ್ತಿರುವುದರಿಂದ) ವಿದ್ಯಾರ್ಥಿಗಳು ದಿ. ರತನ್ ಟಾಟಾ ಅವರಂತೆ ತಮ್ಮ ಜೀವನದುದ್ದಕ್ಕೂ ಕಲಿಕೆಯಲ್ಲಿ ತೊಡಗಿಕೊಂಡು ಮುಂದೆ ಅವರಂತೆಯೇ ಸಮಾಜದ ಆಸ್ತಿಯಾಗಬೇಕೆಂದು ಕರೆಕೊಟ್ಟರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಿವೃತ್ತ ಡಿ.ಪಿ.ಐ. ಹಾಗೂ ಮ್ಯಾನೇಜಿಂಗ್ ಟ್ರಸ್ಟಿ ರೊ. ಚಂದ್ರಶೇಖರಯ್ಯ ಎಂ. ಇವರು, ರೋಟರಿ ಆಂಗ್ಲ ಶಾಲೆಯಲ್ಲಿ ನೇಮಕಗೊಂಡಿರುವ ಎಲ್ಲಾ ಶಿಕ್ಷಕರು ಸ್ನಾತಕೋತ್ತರ ಪದವೀಧರರಾಗುವುದರ ಜೊತೆಗೆ ಬಿ.ಎಡ್., ಪದವಿಯನ್ನು ಪಡೆದಿದ್ದು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದಾರೆ. ಹಾಗಾಗಿ ಶಿಕ್ಷಕರು ತಮ್ಮ ಮಕ್ಕಳಿಗೆ ಮನೆಯಲ್ಲಿ ಉತ್ತಮ ವಾತಾವರಣವನ್ನು ಕಲ್ಪಿಸಿಕೊಟ್ಟು ತಮ್ಮ ವೈಯಕ್ತಿಕ ಜೀವನದ ಉದಾಹರಣೆ ಹಾಗೂ ನಡವಳಿಕೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸಿ, ಆಗಿಂದ್ದಾಗ್ಗೆ ಶಿಕ್ಷಕರ ಸಂಪರ್ಕವನ್ನಿಟ್ಟುಕೊAಡು ಮಕ್ಕಳ ಶಿಕ್ಷಣದಲ್ಲಿ ತಮ್ಮ ಪಾಲಿನ ಕರ್ತವ್ಯವನ್ನು ನಿರ್ವಹಿಸಬೇಕೆಂದು ಕರೆಕೊಟ್ಟರು. ಈ ಶಾಲೆಯನ್ನು ಇಷ್ಟು ಉತ್ತಮ ರೀತಿಯಲ್ಲಿ ನಡೆಸುವಲ್ಲಿ ಸಹಕರಿಸುತ್ತಿರುವ ಆಡಳಿತ ಮಂಡಳಿಯ ಪದಾಧಿಕಾರಿಗಳ, ಟ್ರಸ್ಟಿಗಳ, ಪ್ರಾಂಶುಪಾಲರ ಹಾಗೂ ಶಿಕ್ಷಕರ ಸೇವೆಯನ್ನು ಶ್ಲಾಘೀಸಿದರು.
ಸಮಾರಂಭದಲ್ಲಿ ಇನ್ನೋರ್ವ ಮುಖ್ಯ ಅತಿಥಿಯಾದ ರೋಟರಿ ಪೂರ್ವದ ಅಧ್ಯಕ್ಷರಾದ ರೊ. ಅರುಣ್ ಎಸ್. ದೀಕ್ಷಿತ್, ಅತಿಥಿಗಳಾದ ಟ್ರಸ್ಟ್ನ ಉಪಾಧ್ಯಕ್ಷ ರೊ. ಡಾ|| ಪರಮೇಶ್ವರ್ ಡಿ. ಶಿಗ್ಗಾಂವ್, ಕಾರ್ಯದರ್ಶಿ ರೊ. ರಾಮಚಂದ್ರ ಎಸ್.ಸಿ. ಇವರು ಪೋಷಕರ ಪಾತ್ರವನ್ನು ಉದ್ದೇಶಿಸಿ ಮಾತನಾಡಿದರು.
ಸಮಾರಂಭದಲ್ಲಿ ಟ್ರಸ್ಟ್ನ ಉಪಾಧ್ಯಕ್ಷ ರೊ. ಸುರೇಶ್ ಕುಮಾರ್ ಬಿ., ಖಜಾಂಚಿ ರೊ. ವಿಜಯ್ ಕುಮಾರ್ ಜಿ., ಜಂಟಿ ಕಾರ್ಯದರ್ಶಿ ರೊ ನಾಗವೇಣಿ ಎಸ್.ಆರ್., ಪೇಟ್ರನ್ ಟ್ರಸ್ಟಿ ಡಾ. ಕಡಿದಾಳ್ ಗೋಪಾಲ್, ಬೋರ್ಡ್ ಆಫ್ ಟ್ರಸ್ಟಿಗಳಾದ ರೊ. ರವಿಶಂಕರ್ ಕೆ.ಬಿ., ರೊ. ಪ್ರವೀಶ್ ಡಿ., ಟ್ರಸ್ಟಿಗಳಾದ ರೊ. ಸೂರ್ಯನಾರಾಯಣ್ ಹೆಚ್.ಎಸ್., ರೊ. ಆದಿಮೂರ್ತಿ ಹೆಚ್.ಬಿ., ರೊ. ಮಂಜುನಾಥ್ ಎನ್.ಬಿ. ಇವರುಗಳು ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಸೂರ್ಯನಾರಾಯಣ್ ಆರ್., ಇವರು ವರದಿ ವಾಚಿಸಿದರು. ಸಮಾರಂಭದ ನಂತರ ವಿವಿಧ ಶಿಕ್ಷಕರ ಮಾರ್ಗದರ್ಶನದಲ್ಲಿ ಮೂಡಿಬಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರನ್ನು, ಸಮಾರಂಭದ ಅಂತ್ಯದವರೆಗೂ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾದವು.

New Book Releases ಕೃಷ್ಣನನ್ನ ಮಹತ್ವದ ವ್ಯಕ್ತಿಯಾಗಿ ಪರಿಭಾವಿಸಿ ಕೃತಿ ಬಂದಿದೆ- ಡಾ.ಗಜಾನನ ಶರ್ಮ

0

New Book Releases ಶಿವಮೊಗ್ಗ ಶಾಸಕ ಎಸ್.ಎನ್. ಚೆನ್ನಬಸಪ್ಪ ಅವರು ಡಿ. 15ರ ನಿನ್ನೆ ಸಂಜೆ ವಾಸವಿ ಶಾಲೆ ಆವರಣದ ಚಿಗುರು ಸಭಾಂಗಣದಲ್ಲಿ ಪತ್ರಕರ್ತ ಎಂ. ಶ್ರೀನಿವಾಸನ್ ರಚಿಸಿರುವ “ನನ್ನ ಕೃಷ್ಣ” ಕೃತಿಯನ್ನು ಬಿಡುಗಡೆಗೊಳಿಸಿದರು.

ಕೃತಿಯ ಬಗ್ಗೆ ಮಾತನಾಡಿದ ಖ್ಯಾತ ಲೇಖಕ ಡಾ. ಗಜಾನನ ಶರ್ಮ, ಲೇಖಕರು ಕೃಷ್ಣನನ್ನು ಅತ್ಯಂತ ಮಹತ್ವದ ವ್ಯಕ್ತಿಯನ್ನಾಗಿ ಪರಿಭಾವಿಸಿ ಪುಸ್ತಕವನ್ನು ರಚಿಸಿದ್ದಾರೆ ಎಂದರು.

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಎನ್. ಸುಧೀಂದ್ರ ಅಧ್ಯಕ್ಷತೆ ವಹಿಸಿ ” ಪತ್ರಕರ್ತರಾಗಿ ಮಹಾಭಾರತದ ಕೃಷ್ಣನನ್ನ ವಿವರಿಸುವ ಎಂ.ಶ್ರೀನಿವಾಸನ್ ಅವರ ಬರವಣಿಗೆ ಕೌಶಲವು ಹೊಸದೃಷ್ಟಿಕೋನ ಹೊಂದಿದೆ ಎಂದರು

New Book Releases “ನನ್ನ ಕೃಷ್ಣ” ಕೃತಿಯ ಲೇಖಕ ಎಂ. ಶ್ರೀನಿವಾಸನ್ ಉಪಸ್ಥಿತರಿದ್ದರು.

ಅಜೇಯ ಸಂಸ್ಕೃತಿ ಬಳಗ ಹಾಗೂ ಸಹಚೇತನ ನಾಟ್ಯಾಲಯ ಇವುಗಳ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ನೂರಾರು ಮಂದಿ ಸಾಹಿತ್ಯಪ್ರಿಯರು ಪಾಲ್ಗೊಂಡಿದ್ದರು

Jog Falls “ಪ್ರವಾಸಿಗರೇ ಗಮನಿಸಿ!.2025 ಜನವರಿಯಿಂದ ಮಾರ್ಚ್ 15 ರವರೆಗೆ ಜೋಗ ಜಲಪಾತ ವೀಕ್ಷಣೆಗೆ ನಿರ್ಬಂಧ

0

Jog Falls ಶಿವಮೊಗ್ಗ ಡಿಸೆಂಬರ್-16 ಜಿಲ್ಲೆಯ ಸಾಗರ ತಾಲ್ಲೂಕಿನ ಜೋಗ ಜಲಪಾತದ ಮುಖ್ಯದ್ವಾರ ಕಾಮಗಾರಿ ಹಾಗೂ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯ ಒದಗಿಸಲು ಸಮಗ್ರ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದು,್ದ ಜನವರಿ 01 ರಿಂದ ಮಾರ್ಚ್ 15ರ ವರೆಗೆ 3 ತಿಂಗಳುಗಳ ಕಾಲ ಸಾರ್ವಜನಿಕರ ಮತ್ತು ಪ್ರವಾಸಿಗರ ಪ್ರವೇಶವನ್ನು ನಿರ್ಭಂದಿಸಲಾಗಿದೆ ಜಿಲ್ಲಾಧಿಕಾರಿಗಳು ತಿಳಿಸಿರುತ್ತಾರೆ.
Jog Falls ಕಾಮಗಾರಿ ಅನುಷ್ಠಾನದ ಸಂದರ್ಭದಲ್ಲಿ ಸಾರ್ವಜನಿಕರು ಮತ್ತು ಪ್ರವಾಸಿಗರಿಗೆ ತೊಂದರೆಯಾಗಬಾರದೆAಬ ಕಾರಣದಿಂದ ಪ್ರವೇಶ ನಿರ್ಭಂದಿಸಲಾಗಿದ್ದು, ಸಾರ್ವಜನಿಕರು ಮತ್ತು ಪ್ರವಾಸಿಗರು ಸಹಕರಿಸುವಂತೆ ಜಿಲ್ಲಾಧಿಕಾರಿ ಹಾಗೂ ಜೋಗ ನಿರ್ವಹಣಾ ಪ್ರಾಧಿಕಾರ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08182-251444 ನ್ನು ಸಂಪರ್ಕಿಸುವುದು.

Dabbe Falls “ದಬ್ಬೆ ಜಲಪಾತಕ್ಕೆ” ಚಾರಣ ಹೋಗಬೇಕೆ? ಆಸಕ್ತರಿಗೆ ‌ ಮಾಹಿತಿ ಇಲ್ಲಿದೆ.

0

Dabbe Falls ಶಿವಮೊಗ್ಗ ನಗರದ ದಿಕ್ಸೂಚಿ ಅಡ್ವೆಂಚರ್ಸ್‌ ವತಿಯಿಂದ ಡಿಸೆಂಬರ್29 ರಂದು ಕಾರ್ಗಲ್ ಬಳಿ ಇರುವ ಮುಪ್ಪಾನೆ ಹತ್ತಿರ ದಬ್ಬೆ ಜಲಪಾತ ಕ್ಕೆ ಚಾರಣ ಹಮ್ಮಿಕೊಳ್ಳಲಾಗಿದೆ.
ಶಿವಮೊಗ್ಗದಿಂದ ಡಿಸೆಂಬರ್ 29 ಭಾನುವಾರ ರಂದು ಬೆಳಗ್ಗೆ 5 ಕ್ಕೆ ಚಾರಣ ಪ್ರವಾಸ ಆರಂಭಗೊಳ್ಳಲಿದ್ದು, ಬೆಳಗ್ಗೆ7 ಗಂಟೆ ಗೆ ಟ್ರೆಕ್ ಆರಂಭಿಕ ಸ್ಥಳ ತಲುಪಲಾಗುವುದು. ಬೆಳಗಿನ ಉಪಾಹಾರ ಸೇವಿಸಿದ ನಂತರ ನಿಂದ 3 ಕಿ.ಮೀ.ಜಲಪಾತ ಕ್ಕೆ ಚಾರಣ ಆರಂಭಗೊಳ್ಳಲಿದೆ. ನಂತರ ವಾಪಸ್ ಆರಂಭಿಕ ಸ್ಥಳಕ್ಕೆ ತಲುಪಿ ಊಟ ಇರಲಿದೆ. ಸಂಜೆ 4ರ ವೇಳೆಗೆ ದಬ್ಬೆ ಜಲಪಾತ ದಿಂದ ಹೊರಟು ರಾತ್ರಿ ಶಿವಮೊಗ್ಗಕ್ಕೆ ಹಿಂದಿರುಗಲಾಗುತ್ತದೆ.
Dabbe Falls ಚಾರಣದಲ್ಲಿ ಉಪಾಹಾರ, ಊಟ, ಬಸ್ ಸೌಲಭ್ಯ, ಅರಣ್ಯ ಪ್ರವೇಶದ ಅನುಮತಿ ವ್ಯವಸ್ಥೆ ಮಾಡಲಾಗುತ್ತದೆ. ಚಾರಣದಲ್ಲಿ ಭಾಗಿಯಾಗಲು ಆಸಕ್ತ ಇರುವವರು ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 8277314779 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Omar Abdullah ಇವಿಎಂ ಬಗ್ಗೆ ದೂರುವುದು ಸರಿಯಲ್ಲ- ಒಮರ್ ಅಬ್ದುಲ್ಲಾ

0

Omar Abdullah ಇವಿಎಂ ಕುರಿತು ಮಿತ್ರ ಪಕ್ಷಗಳಿಗೆ ಸಂದೇಶ ನೀಡಿದ ಜಮ್ಮು ಮತ್ತು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ
ಗೆದ್ದಾಗ ಸರಿ ಇದ್ದು, ಸೋತಾಗ ಪ್ರಶ್ನೆ ಮಾಡುವುದು ಸರಿಯಲ್ಲ. ಎಂಬ ಹೇಳಿಕೆ ನೀಡಿದ್ದಾರೆ.

Omar Abdullah ಅದೇ ಇವಿಎಂನಿಂದ ನಾನು ಗೆದ್ದು ಬಂದಿದ್ದೇನೆ ಎಂದು ಒಮರ್ ಅಬ್ದುಲ್ಲಾ ಹೇಳಿದ್ದಾರೆ.ಈ ಹೇಳಿಕೆ ಇಂಡಿ‌ ಒಕ್ಕೂಟಕ್ಕೆ‌ ಇರಿಸುಮುರಿಸಾಗುವುದಂತೂ ಖಂಡಿತ ಎಂದು ರಾಜಕೀಯ ವಲಯದಲ್ಲಿ ಸುದ್ದಿಯಾಗಿದೆ.

Datta Jayanti 2024 ಚಾಂಚಲ್ಯ ಮುಕ್ತ ಏಕಾಗ್ರಮನವು ಭಗವದ್ ಭಕ್ತಿಗೆ ಅವಶ್ಯ-ಡಾ.ಎಚ್.ಬಿ.ಮಂಜುನಾಥ್

0

Datta Jayanti 2024 “ಚಿತ್ತ ಏಕಾಗ್ರತೆಯು ಭಕ್ತಿಗೆ ಅವಶ್ಯ” -ಶ್ರೀ ದತ್ತಾತ್ರೇಯ ಜಯಂತಿ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಡಾ.ಎಚ್ ಬಿ ಮಂಜುನಾಥ- (“ಅಸೂಯಾ ರಹಿತರು ದೇವರಿಗೆ ಪ್ರೀತಿ ಪಾತ್ರರು” ಚಿಂತಕ ಜಗನ್ನಾಥ ನಾಡಿಗೇರ್) ದಾವಣಗೆರೆ.ಡಿ.14. ಚಾಂಚಲ್ಯ ಮುಕ್ತ ಏಕಾಗ್ರ ಮನವು ಭಗವದ್ ಭಕ್ತಿಗೆ ಅವಶ್ಯ ಎಂದು ಹಿರಿಯ ಪತ್ರಕರ್ತ ಡಾ. ಎಚ್ ಬಿ ಮಂಜುನಾಥ ಹೇಳಿದರು. ಅವರಿಂದು ನಗರದ ಜಯದೇವ ವೃತ್ತದಲ್ಲಿರುವ ಶ್ರೀ ಶಿವಾನಂದ ತೀರ್ಥಗುರು ಅಧ್ಯಾತ್ಮ ಮಂದಿರದಲ್ಲಿ ನೆರವೇರಿದ ಶ್ರೀ ದತ್ತಾತ್ರೇಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಬ್ರಹ್ಮ ವಿಷ್ಣು ಶಿವ ಅಂದರೆ ಸೃಷ್ಟಿ ಸ್ಥಿತಿ ಲಯಗಳ ಸಮ್ಮಿಲನವಾಗಿರುವ ದತ್ತಾತ್ರೇಯರ ಸಂಕೇತ ವೆಂದರೆ ಸುಜ್ಞಾನವು ನಮ್ಮ ಚಿತ್ತದಲ್ಲಿ ಸದಾ ಸೃಷ್ಟಿಯಾಗುತ್ತಿರಬೇಕು ಇದು ಬ್ರಹ್ಮ ಮುಖದ ಸಂಕೇತ, ಅಂತಹ ಸುಜ್ಞಾನವು ನಮ್ಮ ಚಿತ್ತದಲ್ಲಿ ಸದಾ ಉಳಿದಿರಬೇಕು ಇದು ವಿಷ್ಣು ಮುಖದ ಸಂಕೇತ, ಅಜ್ಞಾನ ಅಸಂಬದ್ಧ ವಿಚಾರಗಳು ನಾಶವಾಗಬೇಕು ಇದು ಶಿವ ಮುಖದ ಸಂಕೇತವಾಗಿದೆ ಎಂದರು. ಚಿಂತಕ ಜಗನ್ನಾಥ ನಾಡಿಗೇರ್ ಮಾತನಾಡಿ ಅಸೂಯೆ ಇಲ್ಲದವರಿಗೆ ದೇವರು ಒಲಿಯುತ್ತಾರೆ Datta Jayanti 2024 ಎನ್ನುವುದೇ ಅನಸೂಯಾ ಅತ್ರಿಯರಿಗೆ ದತ್ತಾತ್ರೇಯರು ಮಗನಾಗಿ ಬಂದುದರ ಸಂದೇಶವಾಗಿದೆ, ಇಂತಹ ಏಕೀಕೃತ ಬಹು ದೇವತಾ ಉಪಾಸನೆ ನಮ್ಮ ಸನಾತನ ಚಿಂತನೆಯ ವಿಶೇಷತೆ ಎಂದರು. ರಾಜನಹಳ್ಳಿ ಹರಿಹರಪ್ಪ ಟ್ರಸ್ಟ್ ಹಾಗೂ ಭಕ್ತವೃಂದದವರಿಂದ ಕಾಕಡಾರತಿ ಶ್ರೀ ಗಣಪತಿ ಶ್ರೀ ವೀರಾಂಜನೇಯ ಪೂಜೆ ಶ್ರೀ ದತ್ತಾತ್ರೇಯ ಮೂರ್ತಿ ಹಾಗೂ ಶ್ರೀ ಗುರುಗಳ ಪಾದುಕೆಗೆ ಏಕಾದಶವರ್ತನ ರುದ್ರಾಭಿಷೇಕ ನೆರವೇರಿತು. ಆರ್ ಜಿ ನಾಗೇಂದ್ರ ಪ್ರಸಾದ್ ಆರ್‌ ಹೆಚ್ ಶ್ರೀಧರ ಶ್ರೇಷ್ಠಿ ಮುಂತಾಗಿ ಟ್ರಸ್ಟಿನ ಹಾಗೂ ಆಧ್ಯಾತ್ಮ ಮಂದಿರದ ಪ್ರಮುಖರು ಅಲ್ಲಿದ್ದರು. ಶ್ರೀ ದತ್ತಾತ್ರೇಯ ಮೂರ್ತಿಗೆ ಹೂವಿನ ಅಲಂಕಾರ ಸೇವೆಯನ್ನು ಡಾ.ಜಾಧವ್ ಕುಟುಂಬ ವರ್ಗದವರು ಮಾಡಿದ್ದರು. ಅಷ್ಠಾವಧಾನ,ಮಹಾ ಮಂಗಳಾರತಿ ನಂತರ ಅನ್ನಸಂತರ್ಪಣೆಯೂ ಏರ್ಪಾಡಾಗಿತ್ತು.

Bharatanatyam ಬೆಂಗಳೂರಿನಲ್ಲಿ ರಾಜ್ಯಮಟ್ಟದ ಭರತನಾಟ್ಯ / ಜಾನಪದ ನೃತ್ಯ ಸ್ಪರ್ಧೆ

0

Bharatanatyam ಬೆಂಗಳೂರು,ಡಿ.14 ನಗರದ ಶ್ರೀ ನಾಟ್ಯಂ ಕಲಾ ಕೇಂದ್ರದ 15ನೇ ವಾರ್ಷಿಕೋತ್ಸವದ ಅಂಗವಾಗಿ ರಾಜ್ಯಮಟ್ಟದ ನೃತ್ಯ ಸ್ಪರ್ಧೆ – 2024 ಆಯೋಜಿಸಿದೆ . ಬೆಂಗಳೂರಿನ ಶ್ರೀನಿಧಿ ಬಡಾವಣೆಯ 8 ನೇ ಮುಖ್ಯರಸ್ತೆಯಲ್ಲಿರುವ ಶ್ರೀನಿಧಿ ಸಭಾಂಗಣದಲ್ಲಿ ಡಿ. 22ರ ಬೆಳಗ್ಗೆ 10ಕ್ಕೆ ಸ್ಪರ್ಧೆ ನಡೆಸಲಾಗುತ್ತದೆ ಎಂದು ಶಿವಮೊಗ್ಗ ಮೂಲದ ಖ್ಯಾತ ವಿದುಷಿ ಪುಷ್ಪಲತಾ ತಿಳಿಸಿದ್ದಾರೆ.
ಎರಡು ಪ್ರಾಕಾರದ ಸ್ಪರ್ಧೆ: ಭರತನಾಟ್ಯ ಮತ್ತು ಜಾನಪದ ನೃತ್ಯ – ವಿಭಾಗಗಳಲ್ಲಿ ಪ್ರತ್ಯೇಕವಾದ ಸ್ಪರ್ಧೆ ನಡೆಯಲಿದೆ . 8ವರ್ಷದ ಒಳಗಿನವರು, ಎಂಟರಿಂದ 12 ರಿಂದ ವರ್ಷದವರು, 16 ವರ್ಷ ಮೇಲ್ಪಟ್ಟವರ ಒಟ್ಟು ಮೂರು ವಿಭಾಗಗಳಲ್ಲಿ ಪ್ರತ್ಯೇಕ ಬಹುಮಾನಗಳನ್ನು ನೀಡಲಾಗುತ್ತದೆ . ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ಮತ್ತು ಸಮಾಧಾನಕರ ಬಹುಮಾನ ವಿತರಣೆಯೂ ನಡೆಯಲಿದೆ . ಆಸಕ್ತ ಸ್ಪರ್ಧಿಗಳು ಸ್ಪರ್ಧಾ ಸಂದರ್ಭದಲ್ಲಿ ತಮ್ಮ ಜನ್ಮ ದಿನಾಂಕ ಖಾತರಿ ಪಡಿಸುವ ಆಧಾರ್ ಅಥವಾ ಯಾವುದೇ ದಾಖಲೆಗಳ ಪ್ರತಿಗಳನ್ನು ತರಬೇಕು. ಹೆಸರು ನೋಂದಣಿ ಮತ್ತು ವಿವರಗಳಿಗೆ 990088983 ಮತ್ತು 9513816649 ಸಂಪರ್ಕಿಸಬಹುದು ಎಂದು ವಿದುಷಿ ಪುಷ್ಪಲತಾ ತಿಳಿಸಿದ್ದಾರೆ.
ಸಂಸ್ಥೆಯ ಹಿರಿಮೆ: ಬೆಂಗಳೂರಿನ ಕೊಣನ ಕುಂಟೆಯಲ್ಲಿ ೨೦೦೯ರಲ್ಲಿ ಶಿವಮೊಗ್ಗ ಮೂಲದ ವಿದುಷಿ ಪುಷ್ಪಲತಾ ಅವರಿಂದ ಚಾಲನೆಗೊಂಡ ಶ್ರೀ ನಾಟ್ಯಂ ಕಲಾ ಕೇಂದ್ರವು ಈವರೆಗೆ ಸಾವಿರಾರು ವಿದ್ಯಾರ್ಥಿಗಳಿಗೆ ಭರತನಾಟ್ಯ ಕಲೆಯನ್ನು ಧಾರೆ ಎರೆದಿದೆ. ಮಕ್ಕಳಿಗೆ
Bharatanatyam ಮಹತ್ವದ ಸೇವೆಯನ್ನು ಮಾಡುತ್ತ ಲೇ ರಾಜ್ಯದ ಪ್ರತಿಷ್ಠಿತ ಕರಾವಳಿ ಉತ್ಸವ , ಹಂಪಿ ಉತ್ಸವ, ಪಟ್ಟದಕಲ್ಲು ಉತ್ಸವ ಮತ್ತು ಮೈಸೂರು ದಸರಾ ಸೇರಿದಂತೆ ನೂರಾರು ಕಾರ್ಯಕ್ರಮಗಳಲ್ಲಿ ತನ್ನ ಛಾಪನ್ನು ಒತ್ತಿದೆ . ವಿದುಷಿ ಪುಷ್ಪಲತಾ ನೇತೃತ್ವದ ಈ ತಂಡ ಕಳೆದ ವರ್ಷ ಪಾಂಡಿಚೇರಿ ಮತ್ತು ಚಿದಂಬರಂನಲ್ಲಿ ಹಮ್ಮಿಕೊಂಡಿದ್ದ ಗಿನ್ನಿಸ್ ಮತ್ತು ಲಿಮ್ಕಾ ದಾಖಲೆಯ ಬೃಹತ್ ನೃತ್ಯ ಪ್ರಸ್ತುತಿಗಳಲ್ಲಿ ತನ್ನ ವಿಶೇಷತೆಯನ್ನು ಪ್ರದರ್ಶಿಸಿರುವುದು ವಿಶ್ವ ಮಾನ್ಯತೆಯನ್ನು ತಂದುಕೊಟ್ಟಿದೆ . ರಂಗ ಪ್ರವೇಶವನ್ನೂ ಮಾಡಿಸಿ ನವ, ಯುವ ಕಲಾವಿದರಿಗೆ ಶ್ರೀ ನಾಟ್ಯಂ ಸಂಸ್ಥೆ ಮನ್ನಣೆ ಒದಗಿಸಿದೆ.

S.N. Channabasappa ದೇಶದ ಸಂಸ್ಕೃತಿಯ ಪ್ರತೀಕಪ್ರತಿಭಾಕಾರಂಜಿ – ಶಾಸಕ ಚೆನ್ನಿ

0

S.N. Channabasappa ಶಿವಮೊಗ್ಗ ಡಿಸೆಂಬರ್‌ 14 ಮಕ್ಕಳಲ್ಲಿ ಪಠ್ಯೇತರ ಚಟುವಟಿಕೆಗಳ ಜೊತೆಗೆ ದೇಶದ ಸಂಸ್ಕ್ರತಿ, ಪರಂಪರೆಯನ್ನು ಬೆಳೆಸಲು, ಪ್ರೋತ್ಸಾಹಿಸುವಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ಶಿವಮೊಗ್ಗ ನಗರ ಶಾಸಕರಾದ ಎಸ್ ಎನ್ ಚೆನ್ನ ಬಸಪ್ಪ ಅವರು ಹೇಳಿದರು.

ಜಿಲ್ಲಾಡಳಿತ. ಜಿಲ್ಲಾ ಪಂಚಾಯತ್, ಉಪನಿರ್ದೇಶಕ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಮತ್ತು ರಾಷ್ಟ್ರೀಯ ಪದವಿಪೂರ್ವ ಕಾಲೇಜು ಇವರುಗಳು ಸಂಯುಕ್ತ ಆಶ್ರಯ ದಲ್ಲಿ ನಗರದ ರಾಷ್ಟ್ರೀಯ ಪದವಿಪೂರ್ವ ಕಾಲೇಜು ಪ್ರೌಢಶಾಲೆಯಲ್ಲಿ ಇಂದು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳಲ್ಲಿ ಕೇವಲ ಪಠ್ಯ ಪ್ರವೃತ್ತಿಯನ್ನು ಬೆಳೆಸುವುದು ಮಾತ್ರ ಅಲ್ಲದೆ ಅವರಲ್ಲಿ ಪ್ರತಿಭೆಯನ್ನು ಹೊರತರಲು ಮತ್ತು ನಮ್ಮ ದೇಶದ ಸಂಸ್ಕ್ರತಿ, ಪರಂಪರೆ, ಪದ್ಧತಿಯ ಯೋಚನೆಯನ್ನು ಇಟ್ಟು ಕೊಂಡು ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಆಯೊಜಿಸಲಾಗಿದೆ. ಶಿಕ್ಷಕರು ಮಕ್ಕಳಲ್ಲಿ ಒಳ್ಳೆಯ ಕಲೆಯನ್ನು ಹುಡುಕಿ ತೆಗೆಯುವ ಕೆಲಸ ಮಾಡಬೇಕು.ಮಕ್ಕಳಲ್ಲಿ ಕೇವಲ ಒಳ್ಳೆಯ ವಿಚಾರವನ್ನು ಹೊರತೆಗೆದು ಅವರಿಗೆ ಉತ್ತೆಜನ ನೀಡಿದರೆ ಮಾತ್ತ ಉತ್ತಮ ಕಲಾವಿದರಾಗಲು ಸಾಧ್ಯ ಈ ನಿಟ್ಟಿನಲ್ಲಿ ಶಿಕ್ಷಣ ಮತ್ತು ಶಿಕ್ಷಕರ ಪಾತ್ರ ಮಹತ್ವವಾದದು ಎಂದು ಹೇಳಿದರು.

S.N. Channabasappa ಡಿ.ಎಸ್ ಅರುಣ್ ಮಾತನಾಡಿ ಸರ್ಕಾರ ವು ಮಕ್ಕಳ ನಾನಾ ರೀತಿಯ ಚಟುವಟಿಕೆಗಳು ಮತ್ತು ಕಲೆ ಪ್ರದರ್ಶಿಸಲು ಒಂದು ವೇದಿಕೆಯನ್ನು ಸೃಷ್ಟಿಸಿದೆ.‌ಹಿಂದಿನ ದಿನಗಳಲ್ಲಿ ಪರೀಕ್ಷೆ ಮತ್ತು ಶಿಕ್ಷಣಕ್ಕೆ ಮಾತ್ರ ಹೆಚ್ಚು ಮನ್ನಣೆ ಇತ್ತು ಆದರೆ ಇಂದು ಪಠೇತರ ಚಟುವಟಿಕೆಗಳಿಗೆ ಮಹತ್ವ ನೀಡಿದೆ.ವೈವಿಧ್ಯಮಯ ದೇಶ ನಮ್ಮದು, ಊರಿಂದ ಊರಿಗೆ ಸಂಸ್ಕೃತಿಯು ವಿಭಿನ್ನ ರೀತಿಯಲ್ಲಿ ಇದೆ. ಅದನ್ನು ಉಳಿಸಲು ಮಕ್ಕಳಿಗೆ ಸಂಸ್ಕಾರ ಮತ್ತು ಶಿಷ್ಠಾಚಾರ ನೀಡುವ ಮೂಲಕ ಮುಂದಿನ ಪೀಳಿಗೆಗೆ ಸಂಸ್ಕೃತಿಯನ್ನು ಉಳಿಸಲು ಸಾದ್ಯ ಎಂದು ಹೇಳಿದರು.

ಉಪನಿರ್ದೇಶಕರಾದ ಎಸ್ .ಆರ್ ಮಂಜುನಾಥ್ ಮಾತನಾಡಿ ಶಾಲೆಗಳಲ್ಲಿ ಓದುವಿನ ಜೊತೆಗೆ ಅವರಲ್ಲಿ ಕಲೆ ಹೊರಹಾಕಲು ಈ ರೀತಿಯ ಕಾರ್ಯಕ್ರಮ ಪ್ರಾರಂಭಿಸಿದರು. ಓದುವಿನ ಜೊತೆ ಕ್ರಿಡೆ, ಕಲೆ, ಸಂಸ್ಕೃತಿ ಗುರುತಿಸುವಿಕೆಯಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯ. ಶಿಕ್ಷಕರು ಮಕ್ಕಳ ಕಲೆ ಗುರುತಿಸಿ ಪ್ರೊತ್ಸಾಹ ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮ ದಲ್ಲಿ ಶಿವಮೊಗ್ಗ ಕ್ಷೇತ್ರ ಶಿಕ್ಷಣಾಧಿಕಾರಿಯಾದ ರಮೇಶ್, ಭದ್ರಾವತಿ ಕ್ಷೇತ್ರ ಶಿಕ್ಷಣಾಧಿಕಾರಿಯಾದ ಎ.ಕೆ ನಾಗೇಂದ್ರ,ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಘವೇಂದ್ರ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಧರ್ಮಪ್ಪ,ರಾಷ್ಟ್ರೀಯ ಪದವಿಪೂರ್ವ ಕಾಲೇಜು ಉಪ ಪ್ರಾಂಶುಪಾಲರು, ಶಿಕ್ಷರು, ಸರ್ಕಾರಿ ಮತ್ತು ಸರ್ಕಾರೇತರ ಶಿಕ್ಷಕರು, ಸಿಬ್ಬಂದಿಗಳು ಮತ್ತು ಪೋಷಕರು ಭಾಗವಹಿಸಿದ್ದರು.