Thursday, May 7, 2026
Thursday, May 7, 2026

Ugadi ನಮ್ಮೂರಿನ ಯುಗಾದಿ.ಒಂದು ನೆನಪು…ಲೇ: ಎನ್.ಎಸ್.ಕುಮಾರ್.ನಿವೃತ್ತ ನಿರ್ದೇಶಕರು.( ಶಿಕ್ಷಣ ಇಲಾಖೆ).ಶಿವಮೊಗ್ಗ

Date:

Ugadi ಹಬ್ಬ ಎಂದರೆ ಎಲ್ಲರಿಗೂ ಸಡಗರ ಸಂಭ್ರಮ ಅದರಲ್ಲೂ ನಮ್ಮೂರಿನ ಹಬ್ಬದ ಸಂಭ್ರಮ ಇಂದು ನೆನಪಾಗುತ್ತಿದೆ. ವಿಶೇಷವಾಗಿ ಹೊಸ ವರ್ಷವನ್ನು ಹೊತ್ತು ತರುವ ಯುಗಾದಿ ಹಬ್ಬವು ಎಲ್ಲಾ ಜನರಿಗೂ ಹರುಷ ಉಲ್ಲಾಸ ಸಂತೋಷವನ್ನು ತರುವಂತದ್ದು ಹೊಸ ಬಟ್ಟೆಯನ್ನು ತೊಟ್ಟು ಪ್ರಕೃತಿಯ ಸೌಂದರ್ಯವೂ ಕಂಗೊಳಿಸುತ್ತಾ ಹೊಸ ಚಿಗುರನ್ನು ಆಹ್ವಾನಿಸುತ್ತಾ ಬಾಳಿನ ಬೆಳಕನ್ನು ಕಾಣಲು ಬಯಸುವ ಯುಗಾದಿ ಹಬ್ಬವು ವರ್ಷದುದ್ದಕ್ಕೂ ಸಂತಸವನ್ನು ತರುವಂತದ್ದಾಗಿದೆ.

ಯುಗಾದಿ ಹಬ್ಬದ ಬರುತ್ತಿದೆ ಎಂದು ಮನೆಯನ್ನ ಶುಭ್ರಗೊಳಿಸಿ ಸುಣ್ಣ ಬಣ್ಣ ಬಳಿದು ಮನೆ ಸುಂದರವಾಗಿ ಕಾಣುವಂತೆ ಮಾಡುತ್ತಿದ್ದರು ಅಮಾವಾಸ್ಯೆ ದಿನದಂದು ನಾವುಗಳು ಬೆಳಗ್ಗೆ ಎದ್ದು ಸ್ನಾನ ಮಾಡಿ ಬೇವು ಬೆಲ್ಲವನ್ನು ತೆಗೆದುಕೊಂಡು ಇರುವೆ ಗೂಡನ್ನು ಹುಡುಕುತ್ತಾ ಹೋಗಿ ಅವುಗಳಿಗೆ ಬೇವು ಬೆಲ್ಲದ ಮಿಶ್ರಣವನ್ನು ಹಾಕುತ್ತಿದ್ದೆವು ನಂತರ ಒಣ ಕೊಬ್ಬರಿ ಬಟ್ಟಲಿಗೆ ತೂತು ಮಾಡಿ ದಾರವನ್ನು ಕಟ್ಟಿ ಎರಡು ಕೈಗಳಿಂದ ದಾರವನ್ನು ಎಳೆದು ಕೊಬರಿ ಬಟ್ಟಲನ್ನು ತಿರುಗಿಸುತ್ತಿದ್ದೆವು . ಆನಂತರ ಮನೆಯ ಮುಂದೆ ಸಗಣಿಯಿಂದ ಅಂಗಳವನ್ನ ಬಳಿದು ಸ್ವಚ್ಛಗೊಳಿಸಿ ಮಾವಿನ ಸೊಪ್ಪಿನಿಂದ ಬಾಳೆ ಕಂಬದಿಂದ ಹಾಗೂ ಹೂವಿನ ಹಾರದಿಂದ ಮನೆಯನ್ನು ಶೃಂಗರಿಸಿ ಮನೆಯ ಮುಂದೆ ಜೋಕಾಲಿಯನ್ನ ಕಟ್ಟಿ ಕೆಲವರು ಮರದ ಕೊಂಬೆಗಳಿಗೆ ಜೋಕಾಲಿಯನ್ನು ಕಟ್ಟಿ ಹೊಸ ಬಟ್ಟೆಗಳನ್ನು ತೊಟ್ಟು ಜೋಕಾಲಿ ಆಡುತ್ತಿದ್ದೆವು. ಹೊಸ ಬಟ್ಟೆ ತೊಟ್ಟು ಮನೆ ಮನೆಗೆ ಹೋಗಿ ಬೇವುಬೆಲ್ಲವನ್ನ ಕೊಟ್ಟು ಸಂಭ್ರಮಿಸುತ್ತಿದ್ದೆವು. ಮನೆಯಲ್ಲಿ ಹಬ್ಬದ ಹಿಂದಿನ ದಿನ ಅಭ್ಯಂಜನ ಸ್ನಾನ ಮಾಡಿ ಮನೆಯಲ್ಲಿ ಶಾವಿಗೆ ಬಸಿದು ಅದಕ್ಕೆ ಬೇವು ಬೆಲ್ಲದ ಮಿಶ್ರಣವನ್ನು ಹಾಗೂ ಹಾಲನ್ನು ಹಾಕಿಕೊಂಡು ಊಟ ಮಾಡುತ್ತಿದ್ದೆವು ನಂತರ ಮಾರನೇ ದಿನ ಚಂದ್ರ ಕಾಣುತ್ತಾನೆಂದು ಹೋಳಿಗೆ ಊಟವನ್ನು ಮಾಡುತ್ತಿದ್ದರು ಏಕೆಂದರೆ ಹೋಳಿಗೆ ಊಟ ಮಾಡಿ ಚಂದ್ರನನ್ನು ನೋಡಬೇಕು ಎಂಬ ನಂಬಿಕೆ ಆ ದಿನ ಚಂದ್ರ ಕಾಣದಿದ್ದರೆ ಹೋಳಿಗೆ ಸ್ವಲ್ಪ ಊರ್ಣ ಇಟ್ಟು ಕೊಂಡು ಇರುತ್ತಿದ್ದರು ಮಾರನೇ ದಿನ ಪುನಹ ಹೋಳಿಗೆ ಮಾಡಿ ಚಂದ್ರನನ್ನು ನೋಡಲು ಸಂಜೆ ಹೊತ್ತು ರಾಂಪುರ್ ರಸ್ತೆಯಲ್ಲಿರುವ ಹಳ್ಳದ ಮೇಲೆ ಊರ ಜನರೆಲ್ಲರೂ ಹೊಸ ಬಟ್ಟೆ ತೊಟ್ಟುಕೊಂಡು ಆಕಾಶದಲ್ಲಿ ಚಂದ್ರನನ್ನು ಹುಡುಕುತ್ತಿದ್ದೆವು. ನಾನು ಮೊದಲು ನೋಡಬೇಕು. ನಾನು ಮೊದಲು ನೋಡಬೇಕು ಎಂದು ಎಲ್ಲರೂ ಹುಡುಕುತ್ತಿದ್ದೆವು. ಯಾರಾದರೂ ಮೊದಲು ನೋಡಿದರೆ ತಕ್ಷಣ ನನಗೆ ಕಾಣಿಸಿತು ಎಂದು ಜೋರಾಗಿ ಕೂಗಿ ಹೇಳುತ್ತಿದ್ದರು ಉಳಿದವರು ಎಲ್ಲಿ ಎಲ್ಲಿ ಎಂದು ಕೇಳುತ್ತಿದ್ದರು ಚಂದ್ರನನ್ನು ನೋಡಿದವರು ಕಪ್ಪು ಮೂಡದ ಮೇಲೆ ಕೆಳಗೆ ಅಕ್ಕ ಪಕ್ಕ ಲೈಟ್ ಕಂಬದ ಮೇಲೆ ಸೀದಾ ಎತ್ತರದಲ್ಲಿ ನೋಡಿ ಎಂದು Ugadi ಹೇಳುತ್ತಿದ್ದರು ನಾವೆಲ್ಲ ಹುಡುಕಿ ಚಂದ್ರ ಕಂಡ ತಕ್ಷಣ ಓ ನನಗೂ ಕಾಣಿಸುತ್ತೆ ಎಂದು ಚಂದ್ರನಿಗೆ ಕೈ ಮುಗಿದ ನಮಸ್ಕರಿಸಿ ಅಲ್ಲೇ ಇದ್ದ ಹಿರಿಯರಿಗೆ ಚಂದ್ರ ಕಾಣಿಸುತ್ತಾ ಎನ್ನುತ್ತಾ ಎಲ್ಲರಿಗೂ ಕಾಲಿಗೆ ನಮಸ್ಕರಿಸಿದ್ದೆವು ನಂತರ ನಮ್ಮೂರಿನ ಕಲ್ಲೇಶ್ವರ ದೇವಸ್ಥಾನಕ್ಕೆ ಹೋಗಿ ದೇವರಿಗೆ ನಮಸ್ಕರಿಸಿ ಹಣೆಗೆ ವಿಭೂತಿ ಧರಿಸಿ ಊರಿನಲ್ಲಿರುವ ಮನೆಮನೆಗೆ ಭೇಟಿ ನೀಡಿ ಅಲ್ಲಿರುವ ಹಿರಿಯರಿಗೆ ಚಂದ್ರ ಕಾಣಿಸುತ್ತಾ ಎಂದು ಕೇಳುತ್ತಾ , ಅವರ ಕಾಲಿಗೆ ನಮಸ್ಕರಿಸಿ ಅವರಿಂದ ಬೇವು ಬೆಲ್ಲವನ್ನು ಪಡೆದು ಇಡೀ ಊರೇ ಜನರೆಲ್ಲರೂ ಒಬ್ಬರ ಕಾಲಿನ ಮತ್ತೊಬ್ಬರು ಬೀಳುತ್ತಾ ಹಬ್ಬವನ್ನು ಸಂಭ್ರಮಿಸುತ್ತಿದ್ದೆವು ಊರಿನ ಕೆಲವು ಹಿರಿಯರು ಚಂದ್ರನು ಮೇಲೇರಿದ್ದಾನೆ ಕೆಳಗೆ ಇಳಿದಿದ್ದಾನೆ ಈ ವರ್ಷ ಮಳೆ ಬೆಳೆ ಚೆನ್ನಾಗಿದೆ ಚೆನ್ನಾಗಿಲ್ಲ ಮುಂಗಾರು ಮಳೆ ಹಿಂಗಾರು ಮಳೆ ಜಾಸ್ತಿ ಇದೆ ಅಥವಾ ಕಡಿಮೆ ಇದೆ ಎಂದು ಹಿರಿಯರು ನಾನು ಮಾತುಗಳನ್ನು ಆಡುತ್ತಿದ್ದರು ಆ ದಿನ ಊರಿನ ಜನರೆಲ್ಲರೂ ಊರಿನ ಎಲ್ಲಾ ಹಿರಿಯರಿಗೂ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಳ್ಳುತ್ತಿದ್ದರು ಮದುವೆ ಆಗದವರಿಗೆ ಮುಂದಿನ ಚಂದ್ರಮಾನದೊಳಗೆ ಮದುವೆಯಾಗಲಿ. ಮಕ್ಕಳಾಗದ ಜೋಡಿಗಳಿಗೆ ಮುಂದಿನ ಚಂದ್ರನನ್ನು ನೋಡುವುದರೊಳಗಾಗಿ ಸಂತಾನವಾಗಲಿ ಎಂದು. ಕೆಲಸ ಸಿಗದವರಿಗೆ ಕೆಲಸ ಸಿಗಲಿ ಎಂದು ಅವರವರ ಅವಶ್ಯಕತೆ ತಕ್ಕಂತೆ ಹಿರಿಯರು ಆಶೀರ್ವಾದ ಮಾಡುತ್ತಿದ್ದರು. ಈ ರೀತಿಯಾಗಿ ನಮ್ಮೂರಿನ ಹಬ್ಬವನ್ನು ಸಂಭ್ರಮಿಸಿದ ದಿನಗಳು ನೆನಪಾಗುತ್ತಿದೆ. ಆದರೆ ಇಂದು ನಗರ ಪ್ರದೇಶಗಳಲ್ಲಿ ಹಾಗೂ ಹಳ್ಳಿಗಳಲ್ಲಿಯೂ ಸಹ ಸಂಭ್ರಮ ಕಾಣದಂತಾಗಿದೆ. ನಮ್ಮ ಮಕ್ಕಳಿಗೆ ನಮ್ಮ ಸಂಭ್ರಮದ ದಿನಗಳನ್ನು ಕಥೆ ರೂಪದಲ್ಲಿ ಹೇಳುವಂತೆ ಆಗಿದೆ ಇಂದು ಹಬ್ಬಗಳು ಅದರ ಅರ್ಥವನ್ನು ಕಳೆದುಕೊಳ್ಳುತ್ತಿರುವುದು ಬೇಸರದ ಸಂಗತಿಯಾಗಿದೆ.

ಎನ್ ಎಸ್ ಕುಮಾರ್
ನಿವೃತ್ತ ನಿರ್ದೇಶಕರು
ಶಿಕ್ಷಣ ಇಲಾಖೆ
9448337434

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ಹತ್ತು ಚಿನ್ನದ ಪದಕ ಮುಡಿಗೇರಿಸಿದ ಕುವೆಂಪು ವಿವಿಗೇ ಪ್ರಥಮ ವಿದ್ಯಾರ್ಥಿಎಂ.ಎ.(ಕನ್ನಡ) ವಿಭಾಗದ ಪ್ರತಿಭೆ, ಹೆಚ್.ಎಂ.ಅಭಿಷೇಕ್.

Kuvempu University ಕುವೆಂಪು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆಯ ಮೂಲಕ ಗಮನ...

Kuvempu university ಕುವೆಂಪು ವಿವಿಯಿಂದ ಗೌರಗ ಡಾಕ್ಟರೇಟ್ ಪಡೆದ ಮಹನಿಯರ ಮಾಹಿತಿ

Kuvempu university ಕುವೆಂಪು ವಿಶ್ವವಿದ್ಯಾಲಯದ 35ನೇ ವಾರ್ಷಿಕ ಘಟಿಕೋತ್ಸವದಲ್ಲಿ ನಾಡಿನ ಮೂವರು ಗಣ್ಯ...

Kuvempu University ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸಿನ ಎತ್ತರಗಳನ್ನ ಸಾಧಿಸಿ,ದೇಶದವಾಭಿವೃದ್ಧಿಗೆ ಕೊಡುಗೆ ನೀಡಿ- ಗೌ.ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

Kuvempu University “ಕೇವಲ ಉದ್ಯೋಗಾಕಾಂಕ್ಷಿಯಾಗಿರದೆ ಅವಕಾಶಗಳ ಸೃಷ್ಟಿಕರ್ತರಾಗಿ. ಸ್ಟಾರ್ಟ್‌ಅಪ್ ಸಂಸ್ಕೃತಿ, ನಾವೀನ್ಯತೆ...

S.N. Channabasappa ಕನ್ನಡ ಸಾಹಿತ್ಯ ಪರಿಷತ್ತಿನ 111 ವರ್ಷಗಳ ಸೇವೆ ಅಪ್ರತಿಮ- ಎಸ್.ಎನ್.ಚನ್ನಬಸಪ್ಪ

S.N. Channabasappa "ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯನ್ನು ಕಟ್ಟುವಲ್ಲಿ ಕನ್ನಡ...