Wednesday, July 16, 2025
Wednesday, July 16, 2025

D.K. Shivakumar ಅಭಿವೃದ್ಧಿ ನಿಗಮ ಮಂಡಳಿಗಳಲ್ಲಿ‌ ಪಾರದರ್ಶಕತೆ ತರುವ ಬಗ್ಗೆ ಅಧ್ಯಕ್ಷರಿಗೆ ಹೇಳಿದ್ದೇವೆ : ಡಿಸಿಎಂ ಡಿಕೆ ಶಿವಕುಮಾರ್

Date:

D.K. Shivakumar ಅಭಿವೃದ್ಧಿ ನಿಗಮ ಮಂಡಳಿಗಳಲ್ಲಿ‌ ಪಾರದರ್ಶಕತೆ ತರುವ ಬಗ್ಗೆ ನಿಗಮ ಮಂಡಳಿಯ ಅಧ್ಯಕ್ಷರಿಗೆ ನಾವು ಈಗಾಗಲೇ ಹೇಳಿದ್ದೇವೆ. ನಮ್ಮ ಅಧಿಕಾರಿಗಳು ಬಹಳ ಖದೀಮರಿದ್ದಾರೆ. ಅಲ್ಲಿದ್ದ ಖದೀಮರು ಈಗ ಇಲ್ಲಿಗೂ ಬಂದು ಸೇರಿಕೊಂಡಿದ್ದಾರೆ. ಅಲ್ಲಿ 300-400 ಕೋಟಿ‌ ತಿಂದ‌ ಅದೇ ಅಧಿಕಾರಿಗಳು ಇಲ್ಲಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಖಜಾನೆಯಲ್ಲಿ ನಿಯಂತ್ರಣ ಇಡುವ ವ್ಯವಸ್ಥೆ ಮಾಡುತ್ತಿದ್ದೇವೆ ಎಂದರು. ಹಾಗೆಯೇ ಮುಡಾ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ‌ ಸಿಎಂ, ಡಿಸಿಎಂ ಹೆಸರು ಹೇಳುವಂತೆ ತನಿಖಾಧಿಕಾರಿಗಳ ಒತ್ತಡ ಹೇರುತ್ತಿದ್ದಾರೆ ಎಂಬ ಆರೋಪ ಸಂಬಂಧ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರರ, ನಮ್ಮ ಹೆಸರು ಹೇಳಲಿ ಬಿಡಿ, ಬೇಡ ಎಂದವರು ಯಾರು ಎಂದರು.
D.K. Shivakumar ರಾಜ್ಯದಲ್ಲಿ ದೇವರ ಕೃಪೆಯಿಂದ ಉತ್ತಮ ಮಳೆಯಾಗುತ್ತಿದೆ. ತಮಿಳನಾಡಿಗೆ ನೀರು ಬಿಡುವಂತೆ ಕೋರ್ಟ್ ಆದೇಶ ನೀಡಿತ್ತು. ಅದನ್ನ ಪಾಲನೆ ಮಾಡುವ ಸೂಚನೆಗಳು ತಮಗೆಲ್ಲ ಕಾಣುತ್ತಿದೆ. ಮುಂಜಾಗ್ರತೆಯಾಗಿ ಕೆಲವು ಕಡೆ ನೀರು ಬಿಡಬೇಕಾಗುತ್ತದೆ. ಹೆಚ್ಚು ಕಡಿಮೆ ಆಗಬಾರದು ಅಂತಾ ಪಕ್ಷಿಧಾಮ ಕಡೆ ದೋಣಿ ಎಲ್ಲವನ್ನೂ ನಿಲ್ಲಿಸಿದ್ದೀವಿ. ಎಲ್ಲೆಡೆ ಭಾರಿ ಮಳೆಯಾಗ್ತಿದೆ ಈ ಹಿನ್ನೆಲೆ ನದಿ ಪಕ್ಕದ ಮನೆಗಳಿಗೆ ಎಚ್ಚರಿಕೆ ನೀಡಿದ್ದೇವೆ ಎಂದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddaramaiah ಸಿಎಂ ಸಿದ್ಧರಾಮಯ್ಯ ಅವರ ಪತ್ರಕ್ಕೆ ಕೇಂದ್ರ ಸಚಿವ ಗಡ್ಕರಿ ಅವರ ಪತ್ರ- ಪ್ರತಿಕ್ರಿಯೆ

CM Siddaramaiah ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿ,...