Saturday, June 21, 2025
Saturday, June 21, 2025

Madhu Bangarappa ಬೆಳಗಾವಿ ಅಧಿವೇಶನಕ್ಕೆ ಸ್ವಕ್ಷೇತ್ರದ ಮಕ್ಕಳನ್ನ ಆಹ್ವಾನಿಸಿ ಮಕ್ಕಳ ಮೆಚ್ಚುಗೆ ಪಡೆದ ಸಚಿವ ಮಧು ಬಂಗಾರಪ್ಪ

Date:

Madhu Bangarappa ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಸುಮಾರು 350 ಕ್ಕೂ ಹೆಚ್ಚು ಪಿಯುಸಿ ವಿದ್ಯಾರ್ಥಿಗಳು ಮಂಗಳವಾರ ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನ ಮಂಡಲ ಚಳಿಗಾಲದ ಅಧಿವೇಶನವನ್ನು ವೀಕ್ಷಿಸುವ ಮೂಲಕ ಕಲಾಪದ ಬಗ್ಗೆ ವಿಶೇಷ ಜ್ಞಾನ ಪಡೆದರು.

ಮತ್ತು ವಿದ್ಯಾರ್ಥಿಗಳು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿಯೂ ಪಾಲ್ಗೊಂಡರು.

ಸೊರಬ ವಿಧಾನಸಭಾ ಕ್ಷೇತ್ರದ ಶಾಸಕರೂ ಆದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ವಿಶೇಷ ಆಹ್ವಾನದ ಮೇರೆಗೆ ಸೊರಬ ತಾಲೂಕಿನ ಸಿರಿವಂತೆ, ಸೊರಬ, ಉಳವಿ ಹಾಗೂ ಆನವಟ್ಟಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ 350ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಉಪನ್ಯಾಸಕರೊಂದಿಗೆ ವಿಶೇಷ ಬಸ್ಸಿನಲ್ಲಿ ಬೆಳಗಾವಿಗೆ ತೆರೆಳಿದ್ದರು.

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ವಿದ್ಯಾರ್ಥಿಗಳು ಆಗಮಿಸಿದ್ದು, ಸುವರ್ಣಸೌಧದಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರಾದ ಮಧು ಬಂಗಾರಪ್ಪನವರನ್ನು ಭೇಟಿ ಮಾಡಿದರು.

ಅಧಿವೇಶನದ ಕಲಾಪ ವೀಕ್ಷಣೆಯ ಜೊತೆಗೆ ಶಿಕ್ಷಣ ಸಚಿವರೊಂದಿಗಿನ ವಿಶೇಷ ಸಂವಾದ ಕಾರ್ಯಕ್ರಮಕ್ಕಾಗಿಯೇ ವಿದ್ಯಾರ್ಥಿಗಳನ್ನು ಅಲ್ಲಿಗೆ ಆಹ್ವಾನಿಸಲಾಗಿತ್ತು. ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆಯೇ ವಿದ್ಯಾರ್ಥಿಗಳು ಮೊದಲ ವಿಧಾನ ಮಂಡಲದ ವಿಧಾನ ಸಭೆಯ ಕಲಾಪವನ್ನು ವೀಕ್ಷಿಸಿದರು. ಬಳಿಕ ವಿಧಾನ ಪರಿಷತ್ ಕಲಾಪವನ್ನು ವೀಕ್ಷಿಸಿದರು. ಎರಡು ಸದನಗಳಲ್ಲಿ ವಿದ್ಯಾರ್ಥಿಗಳು ಕಲಾಪ ವೀಕ್ಷಿಸುವುದಕ್ಕೆ ವಿಧಾನ ಸಭೆಯ ಸಭಾಧ್ಯಕ್ಷರು ಮತ್ತು ಪರಿಷತ್ತಿನ ಸಭಾಪತಿಗಳಿಂದ ಸಚಿವರಾದ ಮಧು ಬಂಗಾರಪ್ಪ ಅವರು ಅನುಮತಿ ಪಡೆದಿದ್ದರು.

ಎರಡು ಸದನಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ಕಲಾಪ ವೀಕ್ಷಿಸಿ, ಪುಳಕಿತರಾದರು.
ಆ ಬಳಿಕ ಸುವರ್ಣ ಸೌಧದ ವಿಶೇಷ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಸಹಕಾರ ಸಚಿವರಾದ ಕೆ.ಎನ್. ರಾಜಣ್ಣ, ಶರಣ ಬಸಪ್ಪ ದರ್ಶನಾಪುರ, ಶಿವಾನಂದ ಪಾಟೀಲ್ ವಿಧಾನ ಪರಿಷತ್ ಸದಸ್ಯ ಸೇರಿದಂತೆ ಹಲವರು ಪಾಲ್ಗೊಂಡರು.
ಸಚಿವರು ಹಾಗೂ ಶಾಸಕರೊಂದಿಗಿನ ಸಂವಾದದಲ್ಲಿ ಆನವಟ್ಟಿ ಜೂನಿಯರ್ ಕಾಲೇಜು ವಿದ್ಯಾರ್ಥಿ ನಾಗಯ್ಯ ಸ್ವಾಮಿ “ಸಿಇಟಿ ಗೆ ಸೂಕ್ತ ಪಠ್ಯ ಪರಿಕರಗಳು ಇಲ್ಲ. ಮತ್ತು ಕೆಲವು ಮೂಲ ಭೂತ ಸೌಕರ್ಯಗಳ ಕೊರತೆಯಿದೆ. ಇದನ್ನು ಬಗೆಹರಿಸಬೇಕೆಂದು” ಸಚಿವರಲ್ಲಿ ಮನವಿ ಮಾಡಿದರು. ಹಾಗೆಯೇ ಸೊರಬ ಜೂನಿಯರ್ ಕಾಲೇಜಿನ ವಿದ್ಯಾರ್ಥಿನಿ ನಾಗವೇಣಿ “ಸೈನ್ಸ್ ಮತ್ತು ಕಾಮರ್ಸ್ ಪ್ರವೇಶಕ್ಕೆ ಸರ್ಕಾರದಿಂದ ಉಚಿತ ತರಬೇತಿ ನೀಡಲಾಗುತ್ತಿದೆ. ಅದೇ ಮಾದರಿಯಲ್ಲಿ ಕಲಾ ವಿಭಾಗದ ವಿದ್ಯಾರ್ಥಿಗಳಿಗೂ ಸಹ ಸರ್ಕಾರದ ವತಿಯಿಂದ ತರಬೇತಿ ನೀಡುವ ನಿಟ್ಟಿನಲ್ಲಿ ಸರ್ಕಾರ ಗಮನಹರಿಸಬೇಕಿದೆ” ಎಂದು ಮನವಿ ಮಾಡಿದರು.
ವಿದ್ಯಾರ್ಥಿಗಳಿಗೂ ರಾಜಕೀಯ ಜ್ಞಾನ ಬೇಕೆಂಬ ಕಾರಣಕ್ಕೆ ಕ್ಷೇತ್ರದ ವಿದ್ಯಾರ್ಥಿಗಳಿಗೆ ಅಲ್ಲಿನ ಉಪನ್ಯಾಸಕ ಸಿಬ್ಬಂದಿ, ಆಡಳಿತ ಮಂಡಳಿ ಒತ್ತಾಸೆಯ ಮೇರೆಗೆ ಈ ವ್ಯವಸ್ಥೆ ಮಾಡಲಾಗಿತ್ತು. ವಿದ್ಯಾರ್ಥಿಗಳು ಅತೀವ ಉತ್ಸಾಹದಿಂದಲೇ ಕಲಾಪವನ್ನು ವೀಕ್ಷಿಸಿ, ಅನೇಕ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದಿದ್ದು ನಿಜಕ್ಕೂ ವಿಶೇಷ ಎನಿಸಿತು. ಈ ರೀತಿಯ ಪ್ರಕ್ರಿಯೆ ಯುವಜನರಿಗೆ ಆಗಬೇಕಿದೆ. ಅವರಿಗೂ ರಾಜಕೀಯ ಜ್ಞಾನ ಬೇಕಿದೆ. ಪ್ರಜಾ ಪ್ರಭುತ್ವ ವ್ಯವಸ್ಥೆಯ ಮಹತ್ವ ಗೊತ್ತಾಗಬೇಕಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

Madhu Bangarappa ಸುವರ್ಣಸೌಧದ ಸಭಾಂಗಣದಲ್ಲಿ ಸಚಿವರಾದ ಕೆ.ಎನ್ ರಾಜಣ್ಣ, ಶರಣಬಸಪ್ಪಗೌಡ ದರ್ಶನಾಪುರ ಅವರು ಶೈಕ್ಷಣಿಕವಾಗಿ ಮಕ್ಕಳಿಗೆ ಶಿಕ್ಷಣದ ಅರಿವು ಹಾಗೂ ಅದರ ಮಹತ್ವದ ಕುರಿತು ತಿಳಿಸಿದರು. ಬಳಿಕ ನೆರೆದಿದ್ದ ವಿದ್ಯಾರ್ಥಿಗಳೊಂದಿಗೆ ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ರಾಮೋಜಿ ಗೌಡ, ಎಂ.ಆರ್ ಸೀತಾರಾಂ ಹಾಗೂ ಆರ್ಥಿಕ ಇಲಾಖೆ ಕಾರ್ಯದರ್ಶಿ ಡಾ|| ಪಿ.ಸಿ ಜಾಫರ್ ಅವರು ಮಕ್ಕಳೊಂದಿಗೆ ಸಂವಾದ ನಡೆಸಿ ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸುವರ್ಣಸೌಧದ ಸಭಾಂಗಣದಲ್ಲಿ ಇಂದಿನ ಕಾರ್ಯ ಕಲಾಪದ ಕುರಿತು ಅವರ ಅನುಭವವನ್ನು ಹಂಚಿಕೊAಡು ಸಂತಸ ವ್ಯಕ್ತಪಡಿಸಿದರು. ಬೆಳಗಾವಿಗೆ ಆಗಮಿಸಲು ಸಾರಿಗೆ ವ್ಯವಸ್ಥೆ ಹಾಗೂ ಅಧಿವೇಶನ ವೀಕ್ಷಿಸುವ ಸುವರ್ಣಾವಕಾಶವನ್ನು ಕಲ್ಪಿಸಿರುವುದಕ್ಕೆ ಸರ್ಕಾರ ಮತ್ತು ಸಚಿವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದರು.

ಮಕ್ಕಳು ಅವರ ಗುರಿ ಮತ್ತು ಸಾಧನೆಯ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಂಡು ಅವರ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳುವಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶಾಸಕರಾದ ಭೀಮಣ್ಣ ಟಿ ನಾಯ್ಕ್, ರಾಜು ಚಿಮ್ಮನಕಟ್ಟಿ ಸೇರಿದಂತೆ ಶಾಲಾ ಕಾಲೇಜಿನ ಸಿಬ್ಬಂದಿ ವರ್ಗವು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಮಕ್ಕಳಿಗೆ ಜಾನಪದದ ಅರಿವು ಮೂಡಿಸುವುದು ಅವಶ್ಯ: ಕವಿತಾ ಸುಧೀಂದ್ರ

ಮಕ್ಕಳಲ್ಲಿ ಬಾಲ್ಯದಿಂದಲೇ ಜಾನಪದ ಸಂಸ್ಕೃತಿಯ ಮಹತ್ವದ ಕುರಿತು ಅರಿವು ಮೂಡಿಸಬೇಕು ಎಂದು...

Shivamogga District Minority Welfare Department ವಿದ್ಯಾರ್ಥಿನಿಲಯಕ್ಕೆ ಆನ್‌ಲೈನ್ ಅರ್ಜಿ ಆಹ್ವಾನ, ಅವಧಿ ವಿಸ್ತರಣೆ

Shivamogga District Minority Welfare Department ಶಿವಮೊಗ್ಗ ಜಿಲ್ಲಾ ಅಲ್ಪಸಂಖ್ಯಾತರ...

ರಾಜ್ಯ ಮಟ್ಟದ ಅಂಬೆಗಾಲು – 6 ಕಿರು ಚಿತ್ರ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

ಶಿವಮೊಗ್ಗ ನಗರದ ಸಿನಿಮೊಗೆ - ಶಿವಮೊಗ್ಗ ಚಿತ್ರ ಸಮಾಜದ ವತಿಯಿಂದ...