Wednesday, March 18, 2026
Wednesday, March 18, 2026
Home Blog Page 440

Karnataka Public Service Commission ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರಿಂದ ಲೋಕಸೇವಾ ಆಯೋಗದ ಅಧ್ಯಕ್ಷರುಗಳ 25 ನೇ ರಾಷ್ಟ್ರೀಯ ಸಮ್ಮೇಳನ ಉದ್ಘಾಟನೆ

0

Karnataka Public Service Commission ಕರ್ನಾಟಕ ಲೋಕಸೇವಾ ಆಯೋಗ ಹಾಗೂ ಕೇಂದ್ರ ಲೋಕ ಸೇವಾ ಆಯೋಗದ ವತಿಯಿಂದ ನಗರದ ಖಾಸಗಿ ಹೋಟೆಲ್ ನಲ್ಲಿ ಹಮ್ಮಿಕೊಳ್ಳಲಾದ ರಾಜ್ಯ ಲೋಕ ಸೇವಾ ಆಯೋಗಗಳ ಅಧ್ಯಕ್ಷರುಗಳ 25 ನೇ ರಾಷ್ಟ್ರೀಯ ಸಮ್ಮೇಳನವನ್ನು ಭಾರತದ ಗೌರವಾನ್ವಿತ ಉಪರಾಷ್ಟ್ರಪತಿಗಳಾದ ಜಗದೀಪ್ ಧನಕರ್ ಉದ್ಘಾಟಿಸಿದರು.

Karnataka Public Service Commission ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿಗಳ ಪತ್ನಿ ಶ್ರೀಮತಿ ಸುದೇಶ ಧನಕರ್ ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ, , ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರಾದ ಪ್ರೀತಿ ಸುದಾನ್, ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರಾದ ಶಿವಶಂಕರಪ್ಪ ಸಾಹುಕಾರ್, ಹರಿಯಾಣ ಲೋಕಸೇವಾ ಆಯೋಗದ ಅಧ್ಯಕ್ಷರಾದ ಅಲೋಕ್ ವರ್ಮಾ, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಡಿಜಿ ಐಜಿಪಿ ಡಾ. ಅಲೋಕ್ ಮೋಹನ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ವಿವಿಧ ರಾಜ್ಯಗಳ ಲೋಕಸೇವಾ ಆಯೋಗದ ಅಧ್ಯಕ್ಷರುಗಳು ಉಪಸ್ಥಿತರಿದ್ದರು.

Jagdeep Dhankar ಸಾಮರ್ಥ್ಯವೃದ್ಧಿಗೆ ಆಯೋಗಗಳು ಗಮನ ಹರಿಸ ಬೇಕು.ಉಪರಾಷ್ಟ್ರಪತಿ ಕರೆ

0

Jagdeep Dhankar ಸಾಮರ್ಥ್ಯ ವೃದ್ಧಿಗೆ ಆಯೋಗಗಳು ಗಮನ ಹರಿಸಬೇಕು. ಆಯೋಗಗಳ ಸಾಮರ್ಥ್ಯಗಳನ್ನು ಹೆಚ್ಚಿಸಲು ನಿರಂತರ ತರಬೇತಿ ಮತ್ತು ಅಭಿವೃದ್ಧಿ ಅತ್ಯಗತ್ಯ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ನುಡಿದರು. ಕರ್ನಾಟಕ ಲೋಕಸೇವಾ ಆಯೋಗ ಹಾಗೂ ಕೇಂದ್ರ ಲೋಕ ಸೇವಾ ಆಯೋಗದ ವತಿಯಿಂದ ನಗರದ ಖಾಸಗಿ ಹೋಟೆಲ್ ನಲ್ಲಿ ಹಮ್ಮಿಕೊಳ್ಳಲಾದ ರಾಜ್ಯ ಲೋಕ ಸೇವಾ ಆಯೋಗಗಳ ಅಧ್ಯಕ್ಷರುಗಳ 25 ನೇ ರಾಷ್ಟ್ರೀಯ ಸಮ್ಮೇಳನವನ್ನು ಭಾರತದ ಗೌರವಾನ್ವಿತ ಉಪರಾಷ್ಟ್ರಪತಿಗಳಾದ ಜಗದೀಪ್ ಧನಕರ್ ಉದ್ಘಾಟಿಸಿ ಮಾತನಾಡಿದರು. ಆಯೋಗದ ಸದಸ್ಯರು ಮತ್ತು ಸಿಬ್ಬಂದಿಗಳ ವೃತ್ತಿಪರ ಬೆಳವಣಿಗೆಯಲ್ಲಿ ಹೂಡಿಕೆ ಮಾಡುವುದರಿಂದ ಅವರು ಆತ್ಮವಿಶ್ವಾಸ ಮತ್ತು ಸಾಮರ್ಥ್ಯದೊಂದಿಗೆ ಉದಯೋನ್ಮುಖ ಸವಾಲುಗಳನ್ನು ನಿಭಾಯಿಸಲು ಸಾಧ್ಯವಾಗುತ್ತದೆ.
ಕಾರ್ಯಾಂಗವು ಕಾರ್ಯವನ್ನು ನಿರ್ವಹಿಸುವುದರ ಹೊರತಾಗಿ, ನೀತಿ ಬದಲಾವಣೆಗಳನ್ನು ಸಮರ್ಥಿಸುವ ಮೂಲಕ ನೀವು ಬದಲಾವಣೆಯ ಏಜೆಂಟ್‌ಗಳಾಗಿರಬೇಕು. ಈ ಸಮ್ಮೇಳನವು ರಾಜ್ಯ ಲೋಕಸೇವಾ ಆಯೋಗಗಳ ಸಾಮರಸ್ಯ ಮತ್ತು ಪರಿಣಾಮಕಾರಿ ಕಾರ್ಯನಿರ್ವಹಣೆಗೆ ಅಗತ್ಯವಾದ ತಿದ್ದುಪಡಿಗಳ ಸಂಕಲನವನ್ನು ತಯಾರಿಸಬೇಕು.ಸಂಸ್ಥೆಗಳ ದುರ್ಬಲಗೊಳ್ಳುವಿಕೆಯು ನಮ್ಮ ಪ್ರಜಾಪ್ರಭುತ್ವದ ತಳಹದಿಯನ್ನು ನಾಶಮಾಡುವ ಅಪಾಯವನ್ನುಂಟುಮಾಡುತ್ತದೆ. ಉತ್ಸಾಹಭರಿತ ಪರಿಹಾರಗಳು ಮತ್ತು ಏಕೀಕೃತ ಕ್ರಿಯೆಯ ಮೂಲಕ ಮಾತ್ರ ನಾವು ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸಬಹುದು ಮತ್ತು ನಮ್ಮ ನಾಗರಿಕರ ಆಕಾಂಕ್ಷೆಗಳನ್ನು ಪೂರೈಸಬಹುದು.
Jagdeep Dhankar ರಾಜಕೀಯದಲ್ಲಿ ಸಾಮರಸ್ಯವು ಕೇವಲ ಅಪೇಕ್ಷಣೀಯವಲ್ಲ ಆದರೆ ರಾಷ್ಟ್ರೀಯ ಪ್ರಗತಿಗೆ ಅವಶ್ಯಕವಾಗಿದೆ. ಈ ಸಾಮರಸ್ಯವು ಸೈದ್ಧಾಂತಿಕ ರೇಖೆಗಳಾದ್ಯಂತ ನಿರಂತರ ಸಂವಾದ ಮತ್ತು ರಾಷ್ಟ್ರೀಯ ಹಿತಾಸಕ್ತಿಯ ಹಂಚಿಕೆಯ ಬದ್ಧತೆಯಿಂದ ಹುಟ್ಟಿಕೊಂಡಿದೆ ಎಂದು ಉಪ ರಾಷ್ಟ್ರಪತಿ ಅಭಿಪ್ರಾಯಪಟ್ಟರು

Republic Day ಗಣರಾಜ್ಯೋತ್ಸವ ವಿಶೇಷವಾಗಿ ಮಹಿಳೆಯರಿಗೆ ಥ್ರೋಬಾಲ್ ಪಂದ್ಯಾವಳಿ

0

Republic Day ಗಣರಾಜ್ಯೋತ್ಸವದ ಅಂಗವಾಗಿ ಸೃಷ್ಠಿ ಮಹಿಳಾ ಸಂಘದ ವತಿಯಿಂದ ಜ.26 ರಂದು ಗಣರಾಜ್ಯೋತ್ಸವ ಕಪ್ ಥ್ರೋಬಾಲ್ ಪಂದ್ಯಾವಳಿಯನ್ನು ಹಸೂಡಿ, ಯಲವಟ್ಟಿಯ ಶ್ರೀ ಜಗದ್ಗುರು ಸಚ್ಚಿದಾನಂದ ಗ್ರಾಮೀಣ ವಸತಿ ಪ್ರೌಢ ಶಾಲೆಯಲ್ಲಿ,ಶಿವಮೊಗ್ಗ ಜಿಲ್ಲೆಯ ಮಹಿಳೆಯರಿಗಾಗಿ ಆಯೋಜನೆ ಮಾಡಲಾಗಿದೆ.
ಪಂದ್ಯಾವಳಿಯು ದಿನಾಂಕ: 26-1-2025 ರಂದು ನಡೆಸಲಾಗುವುದು. ಈ ಪಂದ್ಯಾವಳಿಯು ಜಿಲ್ಲಾ ಮಟ್ಟದಲ್ಲಿ ನಡೆಸಲಾಗುತ್ತಿದ್ದು, ಪಂದ್ಯಾವಳಿಯಲ್ಲಿ 30 ವರ್ಷ ಮೇಲ್ಪಟ್ಟ ಮಹಿಳೆಯರು ಮಾತ್ರ ಭಾಗವಹಿಸಬಹುದಾಗಿದೆ.
ನಗದು ಬಹುಮಾನ:
ಪ್ರಥಮ ಬಹುಮಾನ – 8000 ರೂ ದ್ವಿತೀಯ ಬಹುಮಾನ – 6000 ರೂ ತೃತೀಯ ಬಹುಮಾನ – 3000 ರೂ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ತಂಡಕ್ಕೆ ನಗದು ಬಹುಮಾನ ನೀಡಿ ಗೌರವಿಸಲಾಗುವುದು. ಹಾಗೂ ಆಕರ್ಷಕ ಟ್ರೋಫಿ ಹಾಗೂ ಪಾರಿತೋಷಕಗಳನ್ನು ನೀಡಲಾಗುವುದು. ಒಂದು ತಂಡಕ್ಕೆ ಪ್ರವೇಶ ಶುಲ್ಕ ೧ ಸಾವಿರ ನಿಗಧಿಮಾಡಲಾಗಿದೆ.
ಆಟಗಾರರ ಅನುಕೂಲಕ್ಕಾಗಿ ಉತ್ತಮ ಅಂಕಣಗಳನ್ನು ಸಿದ್ಧಪಡಿಸಲಾಗಿದೆ.ರಾಜ್ಯಮಟ್ಟದ ನುರಿತ ಥ್ರೋ ಬಾಲ್ ತೀರ್ಪುಗಾರರು ಆಗಮಿಸಲಿದ್ದಾರೆ. ಜಿಲ್ಲೆಯ ವಿವಿಧ ತಾಲೂಕುಗಳಿಂದ ಬರುವ ಎಲ್ಲಾ ಕ್ರೀಡಾಪಟುಗಳಿಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.
Republic Day ಒಂದು ತಂಡದಲ್ಲಿ ಆಡುವ ಆಟಗಾರ ಇನ್ನೊಂದು ತಂಡದಲ್ಲಿ ಆಡುವಂತಿಲ್ಲ. ಆಧಾರ್ ಕಾರ್ಡ್ ಕಡ್ಡಾಯವಾಗಿ ತರುವುದು. ತೀರ್ಪುಗಾರರ ಹಾಗೂ ಆಯೋಜಕರ ತೀರ್ಮಾನವೇ ಅಂತಿಮ. ಎಂದು ಶ್ರೀ ಸೃಷ್ಟಿ ಮಹಿಳಾ ಸಂಘದ ಅಧ್ಯಕ್ಷರಾದ ಶ್ರೀಮತಿ ರಾಜೇಶ್ವರಿ ಉಮಾಶಂಕರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಂಡದ ಹೆಸರನ್ನು ನೊಂದಾಯಿಸಿಕೊಳ್ಳಲು ಕೊನೆಯ ದಿನಾಂಕ : 20- 1- 2025 ರ ಒಳಗಾಗಿ, ಹೆಚ್ಚಿನ ಮಾಹಿತಿಗಾಗಿ 7483324216, 7483371127 ಗೆ ಸಂಪರ್ಕಿಸಬಹುದು.

University of Mysore ರಸ್ತೆಗೆ ನನ್ನ ಹೆಸರಿಡಲು ಯಾರಿಗೂ ಹೇಳಿಲ್ಲ, ಅದರ ಅಗತ್ಯವೂ ನನಗಿಲ್ಲ- ಸೀಎಂ ಸಿದ್ಧರಾಮಯ್ಯ

0

University of Mysore ಮೈಸೂರು ವಿಶ್ವವಿದ್ಯಾಲಯದವರು ಡಾಕ್ಟರೇಟ್‌ ನೀಡಲು ಮುಂದೆ ಬಂದಾಗ ಅದನ್ನೇ ವಿನಯವಾಗಿ ಬೇಡ ಅಂದಿದ್ದೆ ಎಂದ ಸೀಎಂ ಸಿದ್ಧರಾಮಯ್ಯ ಹೇಳಿದರು.
ನಾನೇನು ನಿನ್ನೆ ಮೊನ್ನೆ ರಾಜಕಾರಣಕ್ಕೆ ಬಂದವನಲ್ಲ, ಕಳೆದ 45 ವರ್ಷಗಳಿಂದ ಅಧಿಕಾರದ ವಿವಿಧ ಸ್ಥಾನಗಳಲ್ಲಿ ಇದ್ದೇನೆ. ಯಾವತ್ತೂ ನನ್ನ ಹೆಸರನ್ನು ರಸ್ತೆಗೋ, ಕಟ್ಟಡಗಳಿಗೋ ಇಡಿ ಎಂದು ಯಾರ ಬಳಿ ಹೇಳಿಲ್ಲ. ಅದರ ಅಗತ್ಯವೂ ನನಗಿಲ್ಲ ಎಂದು ಮುಖ್ಯಮಂತ್ರಿಗಳು “ಮೈಸೂರಿನಲ್ಲಿ‌ ರಸ್ತೆಗೆ ತಮ್ಮ ಹೆಸರಿಡುವ ವಿವಾದಕ್ಕೆ ತೆರೆಎಳೆದಿದ್ದಾರೆ.

MESCOM ಜನವರಿ 12 ಆಲ್ಕೊಳ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

0

MESCOM ಶಿವಮೊಗ್ಗ ಮಹಾನಗರಪಾಲಿಕೆ ವತಿಯಿಂದ ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್-8 ರಲ್ಲಿ ಭೂಗತ ಕೇಬಲ್ ಕಾಮಗಾರಿ ನಡೆಯತ್ತಿರುವುದರಿಂದ ಜ.12 ರಂದು ಬೆಳ್ಳಿಗೆ 9 ಗಂಟೆಯಿಂದ ಸಂಜೆ 5.30 ವರೆಗೆ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಲಕ್ಷ್ಮೀಪುರ ಬಡಾವಣೆ, ಎನ್‌ಎಂಸಿ ಕಾಂಪೌಂಡ್, ಎಸ್‌ಆರ್‌ಎಸ್ ಶಾಮಿಯಾನ, ಕೆಂಚಪ್ಪ ಬಡಾವಣೆ, ಸೂಡಾ ಕಛೇರಿ, ಪೊಲೀಸ್ ಚೌಕಿ, MESCOM ವಿನೋಬನಗರ ಮುಖ್ಯ ರಸ್ತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ನಗರ ಉಪ ವಿಭಾಗ-3ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

S.N.Chennabasappa ಚೌಡೇಶ್ವರಿ ಕಾಲೋನಿಯ 09 ಕುಟುಂಬಗಳಿಗೆ ಶಾಸಕ ಚೆನ್ನಿ ಅವರಿಂದ ಹಕ್ಕುಪತ್ರ ವಿತರಣೆ

0

S.N.Chennabasappa ಕಳೆದ 30 ವರ್ಷಗಳಿಂದ ಹಕ್ಕು ಪತ್ರದ ನಿರೀಕ್ಷೆಯಲ್ಲಿದ್ದ ಶಿವಮೊಗ್ಗ ನಗರದ ಚೌಡೇಶ್ವರಿ ಕಾಲೋನಿಯ 09 ಕುಟುಂಬಗಳಿಗೆ ಶಿವಮೊಗ್ಗ ನಗರ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರ ನೇತೃತ್ವದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಶಿವಮೊಗ್ಗ ನಗರದಲ್ಲಿ ಹಕ್ಕು ಪತ್ರವನ್ನು ವಿತರಿಸಲಾಯಿತು

Cabinet Meeting ಫೆಬ್ರವರಿ 15. ಮಲೆ ಮಹದೇಶ್ವರ ಬೆಟ್ಟದಲ್ಲಿ ರಾಜ್ಯಸಚಿವ ಸಂಪುಟ ಸಭೆ

0

Cabinet Meeting ಈಗಾಗಲೇ ರಾಜ್ಯ ಸರ್ಕಾರ ನಿರ್ಧರಿಸಿದಂತೆ ಬರುವ ಫೆಬ್ರವರಿ 15 ರಂದು ಚಾಮರಾಜ ನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಲ್ಲಿ ರಾಜ್ಯದ ಸಚಿವ ಸಂಪುಟ ಸಭೆ ಜರುಗಲಿದೆ.

ಇದರಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ ಎಂದು ಸರ್ಕಾರದ ಅಪರ ಕಾರ್ಯದರ್ಶಿ (ಸಚಿವ ಸಂಪುಟ) ಆರ್.ಚಂದ್ರಶೇಖರ್ ತಿಳಿಸಿದ್ದಾರೆ.

Cabinet Meeting ಕೆಲವು ಮಾಧ್ಯಮಗಳಲ್ಲಿ ಸಚಿವ ಸಂಪುಟ ಸಭೆಯು ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟಕ್ಕೆ ಸ್ಥಳಾಂತರಿಸಲಾಗಿದೆ ಎಂದು ಸುದ್ದಿ ಪ್ರಕಟವಾಗಿದೆ.ಆದರೆ ಯಾವುದೇ ಬದಲಾವಣೆಗಳಾಗಿಲ್ಲ ಪೂರ್ವನಿರ್ಧಾರದಂತೆ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಲ್ಲಿಯೇ ಸಚಿವ ಸಂಪುಟ ಸಭೆ ಜರುಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

VISL ಸೈಬರ್ ವಂಚನೆಗೊಳಾದಾಗ 1930 ಕ್ಕೆ ತಕ್ಷಣ ಪೊಲೀಸ್ ಸಹಾಯವಾಣಿಗೆ ಫೋನ್ ಮಾಡಿ – ಕೃಷ್ಣಮೂರ್ತಿ

0

VISL ಇತ್ತೀಚಿನ ದಿನಗಳಲ್ಲಿ ಅತ್ಯಂತ ಕಳವಳಕಾರಿಯಾಗಿರುವ ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದರ ಬಗ್ಗೆ ಜಾಗೃತಿ ಮೂಡಿಸಲು, ‘ಸೈಬರ್ ಕ್ರೈಂ ಜಾಗೃತಿ – ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು ಮತ್ತು ತಡೆಗಟ್ಟುವ ಕ್ರಮಗಳು’ ಎಂಬ ವಿಚಾರದ ಬಗ್ಗೆ ಸೈಲ್-ವಿಐಎಸ್‌ಎಲ್ ಎರಡು ಕಾರ್ಯಾಗಾರಗಳನ್ನು 11ನೇ ನವೆಂಬರ್, 2024 ಮತ್ತು 10ನೇ ಜನವರಿ 2025 ರಂದು ಹಮ್ಮಿಕೊಂಡಿತ್ತು ಇದರಲ್ಲಿ 103 ಕಾರ್ಮಿಕರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
ಶ್ರೀ ಕೆ. ಕೃಷ್ಣಮೂರ್ತಿ, ಉಪ ಪೊಲೀಸ್ ಅಧೀಕ್ಷಕರು, ಸೈಬರ್ ಕ್ರೈಂ ಮತ್ತು ನಾರ್ಕೋಟಿಕ್ಸ್ ವಿಭಾಗ, ಶಿವಮೊಗ್ಗ ಇವರು ಕಾರ್ಯಾಗಾರವನ್ನು ನಡೆಸಿಕೊಟ್ಟರು, ಶ್ರೀ ವಿರೂಪಾಕ್ಷಪ್ಪ, ಸಹಾಯಕ ಪೊಲೀಸ್ ಉಪನಿರೀಕ್ಷಕರು, ಶಿವಮೊಗ್ಗ ಇವರಿಗೆ ಸಹಕರಿಸಿದರು. ಕಾರ್ಯಕ್ರಮದಲ್ಲಿ ಪ್ರಸ್ತುತ ದಾಖಲಾಗಿರುವ ದೂರುಗಳು, ಅರಿವು ಮೂಡಿಸುವ ವೀಡಿಯೋಗಳು ಮತ್ತು ಕಾರ್ಯಾಗಾರದಲ್ಲಿ ಭಾಗವಹಿಸಿದವರೊಂದಿಗೆ ಮುಖಾಮುಖಿ ಸಂವಾದಗಳು ಮೂಡಿಬಂದವು.
VISL ಶ್ರೀ ಕೆ. ಕೃಷ್ಣಮೂರ್ತಿ ಅವರು, ಪ್ರತಿಯೊಬ್ಬರೂ ತಮ್ಮ ಎಲ್ಲಾ ವ್ಯವಹಾರಗಳಲ್ಲಿ ಜಾಗರೂಕರಾಗಿರಬೇಕು ಮತ್ತು ಸೈಬರ್ ಅಪರಾಧದ ನಿದರ್ಶನಗಳು ವರದಿಯಾದಾಗ ಪೊಲೀಸರಿಗೆ ತಿಳಿಸಲು ಅಥವಾ ಟೋಲ್ ಫ್ರೀ ಸಂಖ್ಯೆ 1930ನ್ನು ಸಂಪರ್ಕಿಸಲು ಸೂಚಿಸಿದರು. ಸೈಬರ್ ಕ್ರಿಮಿನಲ್‌ಗಳಿಂದ ವಂಚನೆಗೊಳಗಾದವರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಹಿಂಜರಿಯಬಾರದು ಮತ್ತು ‘ಗೋಲ್ಡನ್ ಅವರ್’ ಒಳಗಡೆ ಅಂದರೆ ಅಪರಾಧ ನಡೆದ ಸಮಯದಿಂದ 1 ಘಂಟೆ ಒಳಗಡೆ ಈ ಸಮಯ ಬಹಳ ಮುಖ್ಯವಾಗಿದ್ದು ಈ ಸಮಯದಲ್ಲಿ ದೂರನ್ನು ದಾಖಲಿಸಿದ್ದಲ್ಲಿ ಕಳೆದುಕೊಂಡ ಹಣವನ್ನು ಹಿಂದಿರುಗಿ ಪಡೆಯುವ ಸಾಧ್ಯತೆ ಹೆಚ್ಚೆಂದರು.
ವಿಐಎಸ್‌ಎಲ್ ನ ಮಾನವ ಸಂಪನ್ಮೂಲ – ಕಲಿಕೆ ಮತ್ತು ಅಭಿವೃದ್ಧಿ ವಿಭಾಗದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

Rotary Club Shimoga ಅರ್ಧತಾಸು ಫುಟ್ ಥೆರಪಿಯಿಂದ ಐದು ಕಿಮೀ ವಾಕಿಂಗ್ ಮಾಡಿದ ಲಾಭ- ಜಿ. ಕಿರಣ್ ಕುಮಾರ್

0

Rotary Club Shimoga ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಉತ್ತಮ ಜೀವನಶೈಲಿ ರೂಪಿಸಿಕೊಳ್ಳಬೇಕು ಎಂದು ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಕಿರಣ್ ಕುಮಾರ್.ಜಿ ಹೇಳಿದರು.

ಗೋಪಾಳದಲ್ಲಿನ ರೋಟರಿ ಭವನದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ಕಂಪಾನಿಯೋ ಅವರ ಸಹಯೋಗದಲ್ಲಿ ಆಯೋಜಿಸಿದ್ದ 14 ದಿನಗಳ ಉಚಿತ ಫುಟ್ ತೆರಪಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಫುಟ್ ತೆರಪಿಂದ ರಕ್ತ ಸಂಚಾರ ಮತ್ತು ನರಗಳ ದೌರ್ಬಲ್ಯಕ್ಕೆ ಸಹಕಾರಿಯಾಗಲಿದೆ. ವಿವಿಧ ಅಂಗಗಳಲ್ಲಿ ಪಾದವು ಸಹ ಒಂದು. ಪಾದಗಳ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ ಹಾಗೂ ಪಾದಗಳಿಗೆ ಮಸಾಜ್ ಮಾಡುವುದರಿಂದ ಹಲವು ಕಾಯಿಲೆಗಳು ನಿವಾರಣೆ ಆಗುತ್ತವೆ. ಅರ್ಧ ತಾಸು ತೆರೆಪಿ ತೆಗೆದುಕೊಳ್ಳುವುದರಿಂದ ಐದು ಕಿಲೋಮೀಟರ್ ವಾಕ್ ಮಾಡಿದಂತೆ ಆಗುತ್ತದೆ ಎಂದು ತಿಳಿಸಿದರು.

Rotary Club Shimoga ಫುಟ್ ತೆರಪಿಯು ಹಲವು ದೀರ್ಘಕಾಲದ ಸಮಸ್ಯೆಗಳಿಗೆ ಪರಿಹಾರಕ್ಕೆ ಸಹಕಾರಿಯಾಗಲಿದೆ. ಬಿಪಿ ಶುಗರ್ ಥೈರಾಯ್ಡ್ ಸ್ನಾಯುಗಳ ಎಳೆತ ಮತ್ತು ನರ ರೋಗದ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿದೆ. ರೋಟರಿ ಸಂಸ್ಥೆಯು ಅನೇಕ ಆರೋಗ್ಯ ಶಿಬಿರಗಳನ್ನು ಮಾಡುತ್ತಿದ್ದು, ಈ ಬಾರಿ ಕಂಪಾನಿಯೋ ಸಂಸ್ಥೆಯ ಉನ್ನತ್ ಅವರ ಸಹಕಾರದಲ್ಲಿ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಸಹಾಯಕ ಗವರ್ನರ್ ರವಿ ಕೋಟೊಜಿ, ಜಿ.ವಿಜಯಕುಮಾರ್, ರಮೇಶ್.ಎನ್, ಗುರುರಾಜ್, ಸ್ಪಂದನ ಹೊಳ್ಳ, ಧರ್ಮೇಂದ್ರ ಸಿಂಗ್, ಸೆಂಟ್ರಲ್ ಕ್ಲಬ್ಬಿನ ಸದಸ್ಯರು ಮತ್ತು ಕಂಪಾನಿಯೋ ಉನ್ನತ್ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

Bharat Scouts and Guides ರಾಜ್ಯ ಸ್ಕೌಟ್ಸ್ & ಗೈಡ್ಸ್ ಸಂಸ್ಥೆಯ ಚಟುವಟಿಕೆಗಳಿಗೆ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ-ಪಿ.ಜಿ.ಆರ್. ಸಿಂಧಿಯಾ

0

Bharat Scouts and Guides,ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ ರಾಜ್ಯದ ರಾಜ್ಯ ಮುಖ್ಯ ಆಯುಕ್ತರು, ಮಾಜಿ ಸಚಿವರೂ ಆದ ಮಾನ್ಯಶ್ರೀ ಪಿ. ಜಿ. ಆರ್. ಸಿಂಧ್ಯಾ ರವರು ಶಿವಮೊಗ್ಗ ಜಿಲ್ಲಾ ಸಂಸ್ಥೆಗೆ ಭೇಟಿ ನೀಡಿ ಜಿಲ್ಲಾ ಸಂಸ್ಥೆಯ ಪದಾಧಿಕಾರಿಗಳೊಂದಿಗೆ ವಿಚಾರ ವಿನಿಮಯ ಮಾಡುತ್ತ ಕರ್ನಾಟಕ ರಾಜ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ರಾಷ್ಟ್ರಮಟ್ಟದಲ್ಲಿ ಪ್ರಬಲ ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ, ಛತ್ತಿಸ್ಗಡ್ ಗಳನ್ನು ಹಿಂದಿಕ್ಕಿ ಪ್ರಥಮ ಸ್ಥಾನ ಪಡೆದಿದೆ ಎಂದು ಹೇಳಿದರು. ಗಣತಿ, ಮಕ್ಕಳ ಕಾರ್ಯಾಚಟುವಟಿಕೆ ಅಯೋಜನೆ, ವಯಸ್ಕ ನಾಯಕರ ತರಬೇತಿ ಆಯೋಜನೆಯಲ್ಲಿ ರಾಜ್ಯ ಸಂಸ್ಥೆಯು ಸಾಧಿಸಿರುವ ಪ್ರಗತಿಯ ಮಾನದಂಡದ ಮೇಲೆ ರಾಷ್ಟ್ರಸಂಸ್ಥೆಯು ಗುರುತಿಸಿ ಗೌರವಿಸಿದೆ ಎಂದರು.

ಶ್ರೀ ಎಸ್. ಜಿ. ಆನಂದ್ ಜಿಲ್ಲಾ ಆಯುಕ್ತರು (ಸ್ಕೌಟ್ ) ಸರ್ವರನ್ನು ಸ್ವಾಗತಿಸಿದರು. ಶ್ರೀ ಚಂದ್ರಶೇಖರಯ್ಯ ಜಿಲ್ಲಾ ಕಾರ್ಯದರ್ಶಿ 2024-25ನೇ ಸಾಲಿನಲ್ಲಿ ನಡೆಸಿದ ಕಾರ್ಯಾಚಟುವಟಿಕೆ ಬಗ್ಗೆ ಮಾಹಿತಿ ನೀಡಿದರು.

ಶ್ರೀ ಕೆ. ರವಿ ಜಿಲ್ಲಾ ಆಯುಕ್ತರು (ರೋವರ್ ) ರವರು ಮುಂದಿನ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಶ್ರೀ ಸಿಂಧ್ಯಾ ರವರು ಮಾತನಾಡುತ್ತಾ ಜಿಲ್ಲಾ ಸಂಸ್ಥೆಯ ಪ್ರಗತಿ, ಚಟುವಟಿಕೆ ಬಗ್ಗೆ ಪ್ರಶಂಸಿದರು. ಹಾಗೆಯೇ ತಮಿಳು ನಾಡಿನ ತಿರುಚಿಯಲ್ಲಿ ಏರ್ಪಡಿಸಿರುವ, ರಾಷ್ಟ್ರದ್ಯಂತದಿಂದ ಸುಮಾರು ೨೫೦೦೦ ಮಕ್ಕಳು ಭಾಗವಹಿಸುತ್ತಿರುವ ಅಮೃತ ಮಹೋತ್ಸವ ರಾಷ್ಟ್ರೀಯ ಜಂಬೂರೀಯಲ್ಲಿ ಶಿವಮೊಗ್ಗ ಜಿಲ್ಲೆಯೂ ಸೇರಿದಂತೆ ರಾಜ್ಯದಿಂದ ಸುಮಾರು ಎಂಟುನೂರು ಮಕ್ಕಳು ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿ, ಜಿಲ್ಲಾ ಸಂಸ್ಥೆಯ ಪದಾಧಿಕಾರಿಗಳು ಸಹ ಭೇಟಿ ಕೊಡಲು ಹೇಳಿದರು.

Bharat Scouts and Guides ಹಾಗೆಯೇ ಗಣತಿಯಲ್ಲಿ ಪ್ರಗತಿ ಸಾಧಿಸಲು ಸೂಚಿಸಿದರು. ರಾಜ್ಯ ಸಂಘಟನಾ ಆಯುಕ್ತ (ಸ್ಕೌಟ್ ) ಶ್ರೀ ಎಂ. ಪ್ರಭಾಕರ್ ಭಟ್ ರವರು ರಾಜ್ಯ ಸಂಸ್ಥೆಯ ವತಿಯಿಂದ ಮುಂದಿನ ದಿನಗಳಲ್ಲಿ ಆಯೋಜಿಸಿರುವ ಕಾರ್ಯಕ್ರಮಗಳ ಮಾಹಿತಿ ನೀಡಿ ಜಿಲ್ಲಾ ಸಂಸ್ಥೆಯೂ ಅರ್ಹ ಶಿಭಾರಾರ್ಥಿಗಳನ್ನು ನಿಯೋಜಿಸಲು ಕೋರಿದರು.

ಶ್ರೀಮತಿ ಸರಸ್ವತಿ ನಾಗರಾಜ್ ಜಿಲ್ಲಾ ಆಯುಕ್ತರು ವಯಸ್ಕ ಸಂಪನ್ಮೂಲ ( ಗೈಡ್ ) ರವರು ಮಾತನಾಡುತ್ತ ಶ್ರೀ ಸಿಂಧ್ಯಾ ರವರು ರಾಜ್ಯದ ಚುಕ್ಕಾಣಿ ಹಿಡಿದಂದಿನಿಂದ ರಾಜ್ಯವು ಬಹಳಷ್ಟು ಪ್ರಗತಿ ಸಾದಿಸಿದ್ದದ್ದಕ್ಕಾಗಿ ಅವರನ್ನು ಅಭಿನಂದಿಸಿದರು.

ಶ್ರೀ ರಾಜೇಶ್ ವಿ ಅವಲಕ್ಕಿ, ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಸರ್ವರಿಗೂ ವಂದಿಸಿದರು. ಜಿಲ್ಲಾ ಸಹಕಾರ್ಯದರ್ಶಿ ಶ್ರೀ ವೈ ಆರ್ ವೀರೇಶಪ್ಪ, ಜಿಲ್ಲಾ ಖಜಾಂಚಿ ಶ್ರೀ ಚೂಡಾಮಣಿ ಈ ಪವಾರ್, ಕೇಂದ್ರ ಸ್ಥಾನಿಕ ಆಯುಕ್ತರಾದ ಶ್ರೀ ಜಿ. ವಿಜಯ್ ಕುಮಾರ್, ಶ್ರೀ ಆರ್. ರಾಘವೇಂದ್ರ, ಕಛೇರಿ ಸಿಬ್ಬಂದಿ ಶ್ರೀ ದೇವಯ್ಯ, ಭರತ್ ಉಪಸ್ಥಿತರಿದ್ದರು.