Wednesday, March 18, 2026
Wednesday, March 18, 2026
Home Blog Page 441

Jagdeep Dhankar ಬೆಂಗಳೂರಿಗೆ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಭೇಟಿ

0

Jagdeep Dhankar ಭಾರತದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಹಾಗೂ ಅವರ ಪತ್ನಿ ಶ್ರೀಮತಿ ಸುದೇಶ ಧನಖರ್ ಅವರು ಇಂದು ಬೆಂಗಳೂರಿಗೆ ಆಗಮಿಸಿದರು.

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಹಮ್ಮಿಕೊಳ್ಳಲಾಗಿರುವ ಎಲ್ಲಾ ರಾಜ್ಯಗಳ ಲೋಕಸೇವಾ ಆಯೋಗಗಳ 25ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

Jagdeep Dhankar ನಂತರ, ಬಿಇಎಲ್ ನ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಬಿಹೆಚ್ಇಎಲ್ ನಲ್ಲಿ ಹಮ್ಮಿಕೊಳ್ಳಲಾಗಿರುವ ವಿಜ್ಞಾನಿಗಳು ಮತ್ತು ಅಧಿಕಾರಿಗಳೊಂದಿಗೆ ಸಂವಾದದಲ್ಲಿ ಭಾಗವಹಿಸಿ ಇಂದು ಸಂಜೆಯೇ ಮರಳಿ ನವದೆಹಲಿಗೆ ತೆರಳಲಿದ್ದಾರೆ.

ಬೆಂಗಳೂರಿಗೆ ಆಗಮಿಸಿದ ಉಪರಾಷ್ಟ್ರಪತಿ ದಂಪತಿ ಸಮೇತರನ್ನು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಎಮ್ ಸಿ ಸುಧಾಕರ್ ಸೇರಿದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶ್ರೀಮತಿ ಶಾಲಿನಿ ರಜನೀಶ್ ಹಾಗೂ ರಾಜ್ಯದ ಹಿರಿಯ ಅಧಿಕಾರಿಗಳು ಹೆಚ್ಎಎಲ್ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.

CM Siddharamaih ಪೊಲೀಸರು ರಿಯಲ್ ಎಸ್ಟೇಟ್ ಮಾಫಿಯಾ ಜೊತೆ ಕೈ ಜೋಡಿಸಿದರೆ ಸಹಿಸಲ್ಲ- ಸಿದ್ಧರಾಮಯ್ಯ

0

CM Siddharamaih ಅಪರಾಧಿಗಳಿಗೆ ಭಯದ ವಾತಾವರಣ, ಜನ ಸಾಮಾನ್ಯರಿಗೆ ಭಯ ಮುಕ್ತ ವಾತಾವರಣ ನಿರ್ಮಿಸುವುದು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಕರ್ತವ್ಯ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.

ರಾಜ್ಯದ ಜನಸಂಖ್ಯೆ 7 ಕೋಟಿ ದಾಟಿ ಹೋಗುತ್ತಿದೆ. ಇವರೆಲ್ಲರ ರಕ್ಷಣೆ, ಆಸ್ತಿ ಪಾಸ್ತಿ, ಮಾನ, ಪ್ರಾಣ ರಕ್ಷಿಸಿ ನೆಮ್ಮದಿಯ ಬದುಕಿಗೆ ಸುರಕ್ಷಿತ ವಾತಾವರಣ ಸೃಷ್ಟಿಸುವ ಜವಾಬ್ದಾರಿ ಪೊಲೀಸ್ ಇಲಾಖೆ ಮೇಲಿದೆ. ಇದಕ್ಕಾಗಿ ಇಲಾಖೆಗೆ ಅಗತ್ಯವಾದ ಸವಲತ್ತು ಮತ್ತು ನೂತನ ಠಾಣೆಗಳನ್ನು ಒದಗಿಸಲು ಸರ್ಕಾರ ಸದಾ ಸಿದ್ಧವಿದೆ.

ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಇದ್ದಾಗ ಅಭಿವೃದ್ಧಿಯ ವೇಗ ಹೆಚ್ಚುತ್ತದೆ. ಹೀಗಾಗಿ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ರೂಪಿಸಿ ಠಾಣೆಗೆ ಬರುವವರನ್ನು ಆರೋಗ್ಯಕರವಾಗಿ ನಡೆಸಿಕೊಳ್ಳಬೇಕು ಎಂದು ಸೀಎಂ ಕರೆಕೊಟ್ಟರು.
ಬೆಂಗಳೂರು ನಗರದ ಚಾಮರಾಜಪೇಟೆ, ಕಬ್ಬನ್ ಪಾರ್ಕ್ ಮತ್ತು ಹೈಗ್ರೌಂಡ್ಸ್ ನ ನೂತನ ಪೊಲೀಸ್ ಠಾಣೆಗಳನ್ನು ಉದ್ಘಾಟಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾತನಾಡುತ್ತಿದ್ದರು.

ರಾಜ್ಯದಲ್ಲಿ ಅಪರಾಧಗಳ ಪ್ರಮಾಣ ಕಡಿಮೆ ಆಗುತ್ತಿರುವುದು ನೆಮ್ಮದಿಯ ಸಂಗತಿ. ಆದರೆ ಪೊಲೀಸರು ಚಾಪೆ ಕೆಳಗೆ ತೂರಿದರೆ ಅಪರಾಧಿಗಳು ರಂಗೋಲಿ ಕೆಳಗೆ ತೂರಿ, ಕಾನೂನಿನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಾರೆ. ಇದಕ್ಕೆ ಅವಕಾಶ ಆಗಬಾರದು.

CM Siddharamaih ಜನರಿಗೆ ಉದ್ಯೋಗ ಇಲ್ಲದಿರುವುದು, ಬದುಕಿಗೆ ಅವಕಾಶ ಇಲ್ಲದಿರುವಾಗ ಅಪರಾಧ ಜಗತ್ತಿನ ಕಡೆಗೆ ಆಕರ್ಷಿತರಾಗುತ್ತಾರೆ. ನಗರದಲ್ಲಿ ರಿಯಲ್ ಎಸ್ಟೇಟ್ ದಂಧೆ ಕಾರಣದಿಂದ ಅಪರಾಧಗಳು ಹೆಚ್ಚಾಗುತ್ತಿವೆ.
ಪೊಲೀಸರು ರಿಯಲ್ ಎಸ್ಟೇಟ್ ಮಾಫಿಯಾ ಜೊತೆ ಕೈ ಜೋಡಿಸಿದರೆ ಸಹಿಸಲ್ಲ. ಯಾವುದೇ ಕಾರಣಕ್ಕೂ ಅಕ್ರಮ ರಿಯಲ್ ಎಸ್ಟೇಟ್ ಗೆ ಬೆಂಬಲ ನೀಡುಬಾರದು. ಬೆಂಬಲ ಕೊಡುವ ಕೆಲಸ ಮಾಡಿದರೆ ಸರ್ಕಾರ ಸಹಿಸಲ್ಲ.

ಪೇದೆಗಳು, ಎಸ್.ಐ ಗಳು, ಇನ್ಸ್‌ಪೆಕ್ಟರ್‌ಗಳೇ ಹೆಚ್ಚೆಚ್ಚು ಕೆಲಸ ಮಾಡುತ್ತಾರೆ. ಇವರ ಯೋಗಕ್ಷೇಮ ಕೂಡ ನಮ್ಮ ಜವಾಬ್ದಾರಿ. ಪೊಲೀಸ್ ಸಿಬ್ಬಂದಿಯ ಗೃಹ ಯೋಜನೆಯನ್ನು ಸರ್ಕಾರ ಮುಂದುವರೆಸುತ್ತದೆ ಎಂದು ಮುಖ್ಯಮಂತ್ರಿ
ತಿಳಿಸಿದರು

Actor Kishore ಕನ್ನಡದ ನಟ ಕಿಶೋರ್, ಬೆಂಗಳೂರಲ್ಲಿನ 16 ನೇ ಚಲನ ಚಿತ್ರೋತ್ಸವಕ್ಕೆ ರಾಯಭಾರಿಯಾಗಿ ಆಯ್ಕೆ

0

Actor Kishore ದಕ್ಷಿಣ ಭಾರತ ಹಾಗೂ ಕನ್ನಡದ ಹೆಸರಾಂತ ಚಲನಚಿತ್ರ ನಟ ಶ್ರೀ ಕಿಶೋರ್ ಕುಮಾರ್. ಜಿ ಅವರು 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.

ಈ ಕುರಿತು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದ್ದು 2024-2025ನೇ ಸಾಲಿನಲ್ಲಿ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು 2025ರ ಮಾರ್ಚ್ 1 ರಿಂದ 8ರ ವರೆಗೆ ಬೆಂಗಳೂರಿನಲ್ಲಿ ಆಯೋಜಿಸಿದ್ದು, ಚಿತ್ರೋತ್ಸವದ ಕುರಿತು ಹೆಚ್ಚಿನ ಪ್ರಚಾರ ಸಲುವಾಗಿ ಹಿಂದಿ ಹಾಗೂ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ನಟಿಸಿ ಜನ ಮನ್ನಣೆ ಪಡೆದಿರುವ ಕನ್ನಡದ ಖ್ಯಾತ ನಟ ಶ್ರೀ ಕಿಶೋರ್ ಕುಮಾರ್, ಜಿ ಇವರನ್ನು ಚಿತ್ರೋತ್ಸವದ 16ನೇ ಆವೃತ್ತಿಗೆ ರಾಯಭಾರಿಯಾಗಿ ನೇಮಿಸಿರುವುದಾಗಿ ಆದೇಶದಲ್ಲಿ ತಿಳಿಸಿದೆ.

Actor Kishore ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಟೆಲ್ಸಿಯಂ ನ FIAPF ಅಂತಾರಾಷ್ಟ್ರೀಯ ಮನ್ನಣೆ ಪಡೆದಿರುವ ಚಿತ್ರೋತ್ಸವವಾಗಿದ್ದು, ಸುಮಾರು 8 ದಿನಗಳ ಕಾಲ ಬೆಂಗಳೂರಿನ 13 ಚಿತ್ರಮಂದಿರಗಳಲ್ಲಿ ದೇಶ-ವಿದೇಶಗಳ ಅತ್ಯುನ್ನತ ಚಿತ್ರಗಳ ಪ್ರದರ್ಶನ ಹಾಗೂ ಚಲನಚಿತ್ರಗಳಿಗೆ ಸಂಬಂಧಿಸಿದಂತೆ ಕಾರ್ಯಾಗಾರಗಳು ವಿಚಾರ ಸಂಕಿರಣ ಇನ್ನಿತರ ಚಿತ್ರರಂಗಕ್ಕೆ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಂಘಟನಾ ಸಮಿತಿಯ ಅಧ್ಯಕ್ಷರೂ ಆಗಿರುವ ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಇತ್ತೀಚೆಗಷ್ಟೆ ಸಭೆ ನಡೆಸಿ, ಚಿತ್ರೋತ್ಸವದ ದಿನಾಂಕ ಘೋಷಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ “ಸರ್ವ ಜನಾಂಗದ ಶಾಂತಿಯ ತೋಟ” ಶೀರ್ಷಿಕೆಯಡಿ ಪುಸಕ್ತ ಸಾಲಿನಲ್ಲಿ ನಡೆಯುತ್ತಿದ್ದು, ಚಿತ್ರೋತ್ಸವಕ್ಕೆ ದೇಶ-ವಿದೇಶಗಳಿಂದ ಅತ್ಯುನ್ನತ ಚಿತ್ರಗಳನ್ನು ತರುವ ಕುರಿತು ಹಾಗೂ ದೇಶ-ವಿದೇಶಗಳ ಸಿನಿಮಾ ರಂಗದ ಗಣ್ಯಾಥಿ ಗಣ್ಯರನ್ನು ಚಿತ್ರೋತ್ಸವದಲ್ಲಿ ಭಾಗವಹಿಸಲು ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದರು.

Rural Development & Panchayat Raj Department ಗ್ರಾಮೀಣ ಜನತೆ ತಮ್ಮ ಅಹವಾಲು ದಾಖಲಿಸಲು “ಪಂಚಮಿತ್ರ” ವಾಟ್ಸ್ಯಾಪ್ ಸೌಲಭ್ಯ

0

Rural Development & Panchayat Raj Department ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಗೆ ಸಂಬಂಧಿಸಿದ ಮಾಹಿತಿಗಳನ್ನು ಪಡೆಯಲು ವಾಟ್ಸಾಪ್‌ ಮೂಲಕ ಅವಕಾಶ ಕಲ್ಪಿಸಲಾಗಿದೆ.

ಗ್ರಾಮೀಣ ಜನತೆ ತಮ್ಮೆಲ್ಲಾ ಅಹವಾಲುಗಳನ್ನು ದಾಖಲಿಸಲು ಪಂಚಮಿತ್ರ ಸಹಾಯವಾಣಿ ಸಂಖ್ಯೆ 8277506000ಗೆ ಕರೆ ಮಾಡಬಹುದು. ಅಥವಾ ಅದೇ ಸಂಖ್ಯೆಯಲ್ಲಿ ವಾಟ್ಸಾಪ್ ಚಾಟ್ ಮೂಲಕವೂ ಅಹವಾಲು ಸಲ್ಲಿಸಬಹುದು.

Tiger and Lion Safari ಕೊನೆಯುಸಿರೆಳೆದ ತ್ಯಾವರೆಕೊಪ್ಪ ಸಫಾರಿಯ ಹೆಣ್ಣು ಹುಲಿ “ಅಂಜನಿ”

0

Tiger and Lion Safari ಹುಲಿ-ಸಿಂಹಧಾಮ, ತ್ಯಾವರೆಕೊಪ್ಪದಲ್ಲಿ ಸುಮಾರು 17 ವರ್ಷದ ‘ಅಂಜನಿ’ ಎಂಬ ಹೆಸರಿನ ಹೆಣ್ಣು ಹುಲಿಯು ಜ.08 ರ ರಾತ್ರಿ ವಯೋಸಹಜವಾದ ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿರುವುದಾಗಿ ಮೃಗಾಲಯದ ಪಶು ವೈದ್ಯಾಧಿಕಾರಿಗಳು ತಿಳಿಸಿರುತ್ತಾರೆ. ಈ ಬಗ್ಗೆ ಕಾನೂನು ರೀತ್ಯಾ ಮರಣೋತ್ತರ ಪರೀಕ್ಷೆಯನ್ನು ಪಶು ವೈದ್ಯಕೀಯ ಕಾಲೇಜಿನ ಪಶು ವೈದ್ಯರ ತಂಡ ಜರುಗಿಸಿ, ಹುಲಿಯ ದೇಹವನ್ನು ವಿಲೇ ಮಾಡಲಾಗಿರುತ್ತದೆ ಎಂದು ಹುಲಿ-ಸಿಂಹಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕಾರ್ಯ ನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

Tiger and Lion Safari ಸಂಕ್ರಾಂತಿ ಹಬ್ಬದಂದೂ ಹುಲಿಸಿಂಹ ಧಾಮ ಓಪನ್. ಮೃಗಾಲಯದ ಅಧಿಕೃತ ಪ್ರಕಟಣೆ

0

Tiger and Lion Safari ಹುಲಿ-ಸಿಂಹಧಾಮ, ತ್ಯಾವರೆಕೊಪ್ಪದಲ್ಲಿ ಸಾಮಾನ್ಯವಾಗಿ ಮಂಗಳವಾರದAದು ವಾರದ ರಜೆಯಾಗಿರುತ್ತದೆ. ಆದರೆ ಸಂಕ್ರಾಂತಿ ಹಬ್ಬದ ಹಿನ್ನೆಲೆ ದಿನಾಂಕ: 14-01-2025 ರ ಮಂಗಳವಾರ ಸಹ ಮೃಗಾಲಯ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.
Tiger and Lion Safari ಸಾರ್ವಜನಿಕರು ಮೃಗಾಲಯ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಕಾರಣ ಪ್ರವಾಸಿಗರಿಗೆ ಪ್ರಕೃತಿ ಶಿಕ್ಷಣ ನೀಡುವ ಸಲುವಾಗಿ ಹುಲಿ-ಸಿಂಹಧಾಮದಲ್ಲಿ ಜ.14 ರ ಮಂಗಳವಾರವೂ ಸಹ ತೆರೆದಿರುತ್ತದೆ. ಪ್ರವಾಸಿಗರು ಇದರ ಸದುಪಯೋಗ ಪಡೆಯಬೇಕೆಂದು ಹುಲಿ-ಸಿಂಹಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕಾರ್ಯ ನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

Tirupati Stampede ತಿರುಪತಿ ಕಾಲ್ತುಳಿತ ದುರಂತ, ಮೃತರ ಕುಟುಂಬಗಳಿಗೆ ₹ 25 ಲಕ್ಷ ಪರಿಹಾರ ಘೋಷಣೆ

0

Tirupati Stampede ತಿರುಪತಿಯಲ್ಲಿ ಇಲ್ಲಿಯವರೆಗೂ ಕೇಳದ ದುರಂತ ಸಂಭವಿಸಿದೆ. ದರ್ಶನಕ್ಕೆ ಸರತಿಯಲ್ಲಿ ನಿಂತಿದ್ದ ಭಕ್ತಾದಿಗಳು ಒಮ್ಮಿಂದೊಮ್ಮೆಲೆ ಆದ ನೂಕು ನುಗ್ಗಾಟದಿಂದ ಆರು ಮಂದಿ ಅಸು ನೀಗಿದ್ದಾರೆ.
ಕಳೆದ ಬುಧವಾರ ಸಂಭವಿಸಿದ ಘಟನೆ ಬಗ್ಗೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ‌ಚಂದ್ರಬಾಬು ನಾಯ್ಡು ಗುರುವಾರವೇ ಸ್ಥಳಕ್ಕೆಭೇಟಿ ನೀಡಿ ಪರಿಶೀಲನೆ ನಡೆಸಿದರು.
Tirupati Stampede ಅಲ್ಲಿನ ಡಿವೈಎಸ್ಪಿ ರಮಣಕುಮಾರ್, ಗೋಸಂರಕ್ಷಣಾ ಶಾಲೆಯ ನಿರ್ದೇಶಕ ಕೆ.ಹರನಾಥ ರೆಡ್ಡಿ ಅವರನ್ನ ಅಮಾನತ್ತಿನಲ್ಲಿರಿಸಲು ಆದೇಶ ನೀಡಿದ್ದಾರೆ. ಕಾಲ್ತುಳಿತದ ಪ್ರಕರಣವನ್ನ ನ್ಯಾಯಾಂಗ ತನಿಖೆ ಮಾಡಲೂ ಆದೇಶಿಸಿದ್ದಾರೆ.
ಮರಣಹೊಂದಿದವರ ಕುಟುಂಬಸ್ಥರಿಗೆ ತಲಾ 25 ಲಕ್ಷ ರೂ ಮತ್ತು ಗಾಯಾಳುಗಳಿಗೆ 2 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ.
ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕಾಲ್ತುಳಿತಕ್ಕೆ ಸಿಕ್ಕು
ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿರುವವರನ್ನ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು.

Sringeri Mutt ಭಾರತೀ ತೀರ್ಥ ಮಹಾಸ್ವಾಮಿಗಳ ಸನ್ಯಾಸಾಶ್ರಮ ಸ್ವೀಕಾರ ಸುವರ್ಣ ಮಹೋತ್ಸವ, ಶೃಂಗೇರಿಯಲ್ಲಿ ಭಕ್ತವೃಂದದ ಸಂಭ್ರಮ ಲೇ: ಪ್ರಭಾಕರ ಕಾರಂತ.

0

Sringeri Mutt ಶೃಂಗೇರಿಯ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸನ್ನಿಧಾನ ಸನ್ಯಾಸ ಸ್ವೀಕರಿಸಿದ ಸುವರ್ಣ ಮಹೋತ್ಸವ ಅಂಗವಾಗಿ ಬೃಹತ್ತಾದ ಏನಾದರೂ ಲೋಕಕಲ್ಯಾಣ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಜಗದ್ಗುರು ಶ್ರೀ ವಿಧು ಶೇಖರ ಭಾರತಿ ಸನ್ನಿಧಾನಂಗಳಲ್ಲಿ ಯಡತೊರೆಯ ಪೂಜ್ಯ ಶ್ರೀ ಶಂಕರ ಭಾರತಿ ಸ್ವಾಮಿಗಳು ನಿವೇದಿಸಿಕೊಂಡಾಗ ಅವರು ಸೂಚಿಸಿದ್ದ ಸ್ತೋತ್ರ ಪಠನವೇ ಕಲ್ಯಾಣ ವೃಷ್ಟಿ ಸ್ತವ.ಶಂಕರಭಗವತ್ಪಾದರ ರಚನೆಯಾದ ಕಲ್ಯಾಣ ವೃಷ್ಟಿಸ್ತವ ಜಗನ್ಮಾತೆ ಯನ್ನು ಸ್ತುತಿಸುವ ಹದಿನಾರು ಶ್ಲೋಕಗಳನ್ನೊಳಗೊಂಡ ಮಹಾಮಂತ್ರ.
ಇದರ ಜೊತೆಗೆ ಶಿವ ಪಂಚಾಕ್ಷರ ನಕ್ಷತ್ರ ಮಾಲಾ ಸ್ತೋತ್ರ ಪರಶಿವನ ಸ್ತೋತ್ರ. 27 ನಕ್ಷತ್ರ ಗಳಂತೆ ಇದೂ 27 ಶ್ಲೋಕಗಳನ್ನು ಒಳಗೊಂಡಿದ್ದು ನಮ:ಶಿವಾಯ ಒಳಗೊಂಡಿರುವ ಸುಂದರ ಗೀತೆಗಳು. ಇದರ ಜೊತೆಗೆ ಲಕ್ಷ್ಮೀನರಸಿಂಹ ಕರುಣಾರಸ ಸ್ತೋತ್ರ .ಇದು ಲಕ್ಷ್ಮೀನರಸಿಂಹನನ್ನು ಸ್ತುತಿಸುವ 17 ಶ್ಲೋಕಗಳನ್ನೊಳಗೊಂಡಿದೆ. ಈ ತ್ರಿವೇಣಿ ಸ್ತೋತ್ರಗಳನ್ನು ಪ್ರತಿಯೋರ್ವ ಸನಾತನಿಯೂ ಮನೆಯಲ್ಲಿ ನಿತ್ಯ ಪಾರಾಯಣ ಸತತ ನಡೆಸಿ ಲೋಕದಲ್ಲಿ ಶಾಂತಿ ಸುಭಿಕ್ಷೆಗಾಗಿ ಭಗವಂತನಲ್ಲಿ ಪ್ರಾರ್ಥಿಸುವ ಮೂಲಕ ಸುವರ್ಣ ಮಹೋತ್ಸವ ಆಚರಿಸಬೇಕು ಎಂದು ಶ್ರೀ ವಿಧುಶೇಖರ ಭಾರತಿ ಸ್ವಾಮಿಗಳು ಸೂಚಿಸಿದರು. ಇಂತಹ ಸಂಧರ್ಭ ಒದಗಿದಾಗ ಜಗದ್ಗುರುಗಳಿಗೆ ಬಹುಮೌಲ್ಯದ ಕಿರೀಟಾದಿ ಆಭರಣ ಮತ್ತು ಹಣ ಕೊಡೋಣವಾಗಲಿ ಎಂದು ಹೇಳುವುದು ಮಾಮೂಲು.ಆದರೆ ಈ ಪುಣ್ಯ ಸಂಧರ್ಭ ಜನರು ಸನ್ಮಾರ್ಗ ಪ್ರವೃತ್ತಕರಾಗಿ ಲೋಕ ಹಿತವಾಗುವಂತಾಗಲಿ ಎಂಬ ಜಗದ್ಗುರುಗಳ ಸದಾಶಯ ಅದೆಷ್ಟು ಉನ್ನತವಾದದ್ದು. ನೈಜ ಸನ್ಯಾಸ ಎಂಬುದು ಇದಕ್ಕೇ ಇರಬೇಕು. ಲೋಕದ ಸಕಲ ಜೀವಿಗಳಲ್ಲೂ ಕರುಣೆ ತೋರುವುದೆಂದರೂ ಇದೇ.ಇದರಲ್ಲಿ ಅದ್ಭುತ ಅದ್ವೈತವೂ ಅಡಗಿದೆ. ಶೃಂಗೇರಿಯ ಮಹಾಸಂಸ್ತಾನ ಶಿವಕೇಶವ ಅಭೇದ ತತ್ವವನ್ನು ಪ್ರತಿಪಾದಿಸುತ್ತದೆ. ಶಂಕರ ಭಗವತ್ಪಾದರು ಸನಾತನಿಗಳಲ್ಲಿ ದೇವರ ಹೆಸರಿನಲ್ಲೇ ಉಂಟಾಗಿದ್ದ ಅನೈಕ್ಯತೆ ನಿವಾರಿಸಲೆಂದೇ ಪಂಚಾಯತನ ಪೂಜೆ ಜಾರಿಗೆ ತಂದು ಭಗವಂತ ವಿವಿಧ ರೂಪಗಳಲ್ಲಿ ಪೂಜಿಸಲ್ಪಟ್ಟರೂ ಅವನು ಒಬ್ಬನೇ ಎಂಬ ಸತ್ಯವನ್ನು ಲೋಕ ಮನಗಾಣುವಂತೆ ಮಾಡಿದರು. ಶಂಕರಭಗವತ್ಪಾದರು ಆರಂಭಿಸಿದ ಮಠ ಪರಂಪರೆಯಾದರೂ ಸನಾತನ ಧರ್ಮದ ಸಂರಕ್ಷಣೆಯ ಮಹೋದ್ದೇಶ ಉಳ್ಳದ್ದು. ಅವರು ದೇಶದ ನಾಲ್ಕು ಮೂಲೆಗಳಲ್ಲಿ ಆರಂಭಿಸಿದ ನಾಲ್ಕು ಮಠಗಳಲ್ಲಿ ಶೃಂಗೇರಿಯ ಧಕ್ಷಿಣಾಮ್ನಾಯ ಶಾರದಾಪೀಠ ಮೊದಲಿನದ್ದು. ತಮ್ಮ ಪ್ರಥಮ ಜೇಷ್ಠ ಶಿಷ್ಯ ಶ್ರೀ ಸುರೇಶ್ವರಾಚಾರ್ಯರನ್ನೇ ಅವರು ಶೃಂಗೇರಿಯ ಪ್ರಥಮ ಪೀಠಾದಿಪತಿಗಳಾಗಿ ನಿಯುಕ್ತಿಗೊಳಿಸಿದರು.ಶಂಕರರು ಹಾಕಿಕೊಟ್ಟ ಮಾರ್ಗದಲ್ಲೇ ಶೃಂಗೇರಿಯ ಪೀಠ ಪ್ರತಿ ಹೆಜ್ಜೆಯನ್ನೂ ಇಡುತ್ತಿದೆ. ಈ ಸ್ತೋತ್ರ ವೈಭವ ಸಹ ಅದಕ್ಕೆ ಪ್ರತ್ಯಕ್ಷ ನಿರೂಪಣೆಯಾಗಿದೆ.
Sringeri Mutt ಈ ಸ್ತೋತ್ರ ಮಾಲಿಕೆಯನ್ನು ಕೋಟ್ಯಂತರ ಭಕ್ತರು ಕಳೆದ ಒಂದು ವರ್ಷದಿಂದ ದೇಶ ವಿದೇಶದಲ್ಲಿ ತಮ್ಮ ಮನೆಯಲ್ಲಿ ಪಠಿಸುತ್ತಿದ್ದಾರೆ. ಇದೇನು ಒಂದು ವರ್ಷಕ್ಕೆ ಮುಗಿಯುವುದಲ್ಲ. ಅನುದಿನವೂ ಭಕ್ತರ ಮನೆಯಲ್ಲಿ ಸ್ತೋತ್ರ ಪಠಣ ತಲೆತಲಾಂತರವೂ ನಡೆಯುತ್ತದೆ.ಸುವರ್ಣ ಮಹೋತ್ಸವ ಒಂದು ನೆವ.ಆ ಮೂಲಕ ಭಗವಂತನತ್ತ ಲೋಕದ ಸಮಸ್ತರೂ ಸಾಗಬೇಕು ಎಂಬುದೇ ಮೂಲ ಆಶಯ.ಸನ್ಯಾಸಿ ಆದವನಿಗೆ ಯಾವುದರಲ್ಲೂ ಕಿಂಚಿತ್ತೂ ವ್ಯಾಮೋಹ ಇರಬಾರದು. ಸಮಸ್ತ ಲೋಕವು ಆಧ್ಯಾತ್ಮಿಕ ಅನುಭೂತಿ ಪಡೆಯಬೇಕು ಎಂಬ ಮಹೋದ್ದೇಶದ ಕಾರ್ಯಕ್ರಮ ಇದು.ಶೃಂಗೇರಿಯ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮಿಗಳನ್ನು ಮಾಜೀ ರಾಷ್ಟ್ರಪತಿ ಅಬ್ದುಲ್ ಕಲಾಂ ಬೇಟಿಯಾದಾಗ ನೀವು ಶೃಂಗೇರಿಯ ಪೀಠ ಏರಬೇಕು ಎಂದು ಗುರುಗಳ ಬಳಿ ಬಂದಿರಾ ಎಂಬ ಪ್ರಶ್ನೆ ಮಾಡಿದ್ದರು. ಇಲ್ಲ ನಾವು ಮೋಕ್ಷ ಸಾಧನೆಯ ಮಾರ್ಗ ಅರಿಸಿ ಗುರುಗಳ ಬಳಿ ಬಂದಿದ್ದು, ಮಠಾದಿಪತ್ಯದ ಯಾವ ಆಸೆಯೂ ಇರಲಿಲ್ಲ ಎಂದು ಜಗದ್ಗುರುಗಳು ಉತ್ತರಿಸಿದ್ದರು. ಅದು ನೈಜ ಮಾತುಗಳು ಎಂಬುದು ಶೃಂಗೇರಿಯಲ್ಲಿ ಶಿಷ್ಯ ಸ್ವೀಕಾರ ಆದ ಮೇಲೆ ಜಗಜ್ಜಾಹೀರಾಯಿತು. ಮಠದ ಸಮಸ್ತ ಜವಾಬ್ದಾರಿಯಿಂದ ಶ್ರೀ ಭಾರತೀತೀರ್ಥರು ನಿವೃತ್ತರಾದರು.ತಮ್ಮನ್ನು ತಮ್ಮಷ್ಟಕ್ಕೇ ಬಿಡಿ,ಇನ್ನು ಮುಂದೆ ನಮ್ಮ ಶಿಷ್ಯರೇ ಎಲ್ಲವನ್ನೂ ನೋಡಿಕೊಳ್ಳುತ್ತಾರೆ ಎಂದು ಹೇಳಿ ಕಳೆದ ದಶಕದಿಂದಲೂ ಅವರು ಆಧ್ಯಾತ್ಮಿಕ ಚಿಂತನೆಗೇ ಸಂಪೂರ್ಣ ಸಮಯ ಮೀಸಲಿಟ್ಟಿದ್ದಾರೆ. ಅವರೀಗ ಕಿರೀಟ ಧಾರಣೆ ಮಾಡುವುದಿಲ್ಲ. ಹೆಚ್ಚಾಗಿ ಯಾರನ್ನೂ ಬೇಟಿ ಆಗುವುದಿಲ್ಲ.ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ.ತಾವಾಯಿತು ತಮ್ಮ ಶಾರದಾ ಚಂದ್ರಮೌಳೇಶ್ವರ ಪೂಜೆಯಾಯಿತು,ಅಧ್ಯಯನ ವಾಯಿತು,ಶಂಕರ ಭಾಷ್ಯದ ಪಠಣ ವಾಯಿತು ಇಷ್ಟೇ ಅವರ ದಿನಚರಿ. ಈ ಮಠದ ಲೌಕಿಕ ವ್ಯವಹಾರವನ್ನು ಎಂದು ಕಳಚಿಕೊಂಡೇನೋ ಎಂದು ಕಾಯುತ್ತಿದ್ದಂತೆ ಅವರು ಶಿಷ್ಯ ಸ್ವೀಕಾರ ಆಗುತ್ತಿದ್ದಂತೆ ಲೌಕಿಕ ನಿವೃತ್ತಿ ಪಡೆದು ಬಿಟ್ಟರು.

ಬೆಂಗಳೂರಿನಲ್ಲಿ ಕಲ್ಯಾಣ ವೃಷ್ಟಿಸ್ತವ ಸ್ತೋತ್ರ ಸಮರ್ಪಣೆ ಒಂದು ಲಕ್ಷ ಎಂಬತ್ತು ಸಹಸ್ರ ಭಕ್ತರಿಂದ ಏಕ ಕಂಠದಲ್ಲಿ ಪಠಣವಾಗಿ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸನ್ನಿಧಾನದೆದುರು ಸಮರ್ಪಣೆ ಆಯಿತು. ಜಗದ್ಗುರು ಶ್ರೀ ಭಾರತೀತೀರ್ಥರು ಶೃಂಗೇರಿಯನ್ನು ಬಿಟ್ಟು ಎಲ್ಲಿಗೂ ಬರಲಾರರಾದುದರಿಂದ ಅವರ ಸಮ್ಮುಖದಲ್ಲೇ ಸ್ತೋತ್ರ ಸಮರ್ಪಣೆ ಆಗಬೇಕು ಎಂಬ ಕಾರಣಕ್ಕೆ ಜನವರಿ 11 ರಂದು ಶೃಂಗೇರಿಯ ನರಸಿಂಹ ವನದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ.ಇದು ಶೃಂಗೇರಿಯ ಇತಿಹಾಸದಲ್ಲಿ ಬೃಹತ್ತಾದ ಮಹಾ ಕಾರ್ಯಕ್ರಮ ಅನಿಸಲಿದೆ. ಚಿಕ್ಕಮಗಳೂರು ಜಿಲ್ಲೆಯ ಐವತ್ತು ಸಹಸ್ರ ಭಕ್ತರು ಅಂದು ಶೃಂಗೇರಿಯಲ್ಲಿ ಸೇರಿ ಸ್ತೋತ್ರ ಸಮರ್ಪಣೆ ಮಾಡಲಿದ್ದಾರೆ. ಇದಕ್ಕಾಗೇ ಬರದ ಸಿದ್ಧತೆ ನಡೆಯುತ್ತಿದೆ. ಈ ಕಾರ್ಯಕ್ರಮ ಚಿಕ್ಕಮಗಳೂರು ಜಿಲ್ಲೆಗೇ ಎಂದು ತೀರ್ಮಾನ ಆಗಿದ್ದರೂ ಅಕ್ಕಪಕ್ಕದ ಜಿಲ್ಲೆಗಳ ಜನ ಸ್ವಯಂ ಸ್ಪೂರ್ತಿಯಿಂದ ಈ ಮಹಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೊರಟಿದ್ದಾರೆ. ಹಾಸನ,ಶಿವಮೊಗ್ಗ, ಉಡುಪಿ,ಮಂಗಳೂರು ಜಿಲ್ಲೆಗಳ ಅನೇಕ ತಾಲೂಕುಗಳಿಂದಲೂ ತಾವೇ ವಿಶೇಷ ಬಸ್ ಮಾಡಿಕೊಂಡು ಜನ ಆಗಮಿಸಲಿದ್ದಾರೆ. ಇಷ್ಟೆಲ್ಲ ಜನ ಕುಳಿತುಕೊಂಡು ಏಕ ಕಂಠದಲ್ಲಿ ಸ್ತೋತ್ರ ಪಠಣ ಮಾಡಲು ಬೃಹತ್ತಾದ ಮಂಟಪ ಆಗಲೇ ಸಿದ್ದವಾಗಿದೆ.ಉಭಯ ಜಗದ್ಗುರುಗಳು ಕುಳಿತುಕೊಳ್ಳುವ ಸುಂದರ ವೇದಿಕೆ ಸಹ ಸಿದ್ದವಾಗಿದೆ.

ಜನವರಿ ಬಂತೆಂದರೆ ಶೃಂಗೇರಿಗೆ ಬರುವ ಪ್ರವಾಸಿಗರ ಸಂಖ್ಯೆ ಏರುತ್ತಲೇ ಹೋಗುತ್ತದೆ. ಪ್ರತಿ ದಿನ ಹತ್ತಾರು ಸಹಸ್ರ ಜನ ಬೇಟಿ ನೀಡುತ್ತಾರೆ. ಶನಿವಾರ, ಭಾನುವಾರ ಮತ್ತು ರಜಾ ದಿನಗಳಂದು ಈ ಸಂಖ್ಯೆ ಇಪ್ಪತ್ತೈದು ಸಹಸ್ರ ದಾಟುತ್ತದೆ. ಎಲ್ಲರಿಗೂ ಎರಡು ಹೊತ್ತೂ ಉಚಿತ ಭೋಜನ ಪ್ರಸಾದ ನಡೆಯುತ್ತದೆ.
ಇದರ ನಡುವೆ ಈ ವರ್ಷವೇ ವಿಪರೀತ ಕಾರ್ಯಕ್ರಮ ಮಠದ ವತಿಯಿಂದ ಜನವರಿಯಲ್ಲೇ ಏರ್ಪಾಟಾಗಿದೆ .ಮಹಾರಾಷ್ಟ್ರದ ವಿಶ್ವ ವರಾಕರಿ ಸಂಘಟನೆ ಡಿಸೆಂಬರ್ 26 ರಿಂದ ಜನವರಿ 1ರ ವರೆಗೆ ದ್ಯಾನೇಶ್ವರಿ ಸಪ್ತಾಹವನ್ನು ಶೃಂಗೇರಿಯಲ್ಲಿ ಆಚರಿಸಿದರು. ಇದೊಂದು ಅಖಂಡ ಸಂಕೀರ್ತನ ಸಪ್ತಾಹ.
ಜನವರಿ 6 ರಿಂದ ಮೂರುದಿನ ಶ್ರೌತ ಮಹಾ ಸಮ್ಮೇಳನ ಶೃಂಗೇರಿಯಲ್ಲೇ ನಡೆಯಿತು. ದೇಶಾದ್ಯಂತ ವೇದ ಪಂಡಿತರು ಇದರಲ್ಲಿ ಪಾಲ್ಗೊಂಡಿದ್ದರು. ವೇದ ಪಾರಾಯಣ,ಕಲ್ಪ ಸೂಕ್ತ, ಹೋಮ ಹವನ,ವೇದ ಭಾಷ್ಯದ ಮೇಲೆ ಜಗದ್ಗುರುಗಳ ಅಧ್ಯಕ್ಷತೆಯಲ್ಲೇ ವಿದ್ವತ್ ಗೋಷ್ಠಿ.ಪಂಡಿತ ಪುರಸ್ಕಾರ ಎಂಬಿತ್ಯಾದಿ ಮೂರು ದಿನಗಳ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಈ ಕಲ್ಯಾಣ ವೃಷ್ಟಿಸ್ತವ ಸ್ತೋತ್ರ ಸಮರ್ಪಣೆಯ ಕಾರ್ಯಕ್ರಮ ಬಂದೇ ಬಿಟ್ಟಿದೆ.
ಇದರ ನಡುವೆಯೇ ಹರಿಹರನಾಮಾವೃತ ಎಂಬ ಶಿವ ಮತ್ತು ರಾಮ ನಾಮ ಬರೆಯುವ ಬೃಹತ್ತಾದ ಕಾರ್ಯಕ್ರಮ ಆರಂಭವಾಗಿ ರಾಮನವಮಿಯ ವರೆಗೂ ನಡೆಯಲಿದೆ. ಶೃಂಗೇರಿಗೆ ಬರುವ ಪ್ರತಿ ಪ್ರವಾಸಿಯಿಂದಲೂ ನಾಲ್ಕಾರು ಕಡೆ ರಾಮ,ಶಿವ ನಾಮ ಬರೆಸಲು ಹಲವು ತಿಂಗಳಿಂದಲೂ ಕಾರ್ಯಕರ್ತರು ದುಡಿಯುತ್ತಿದ್ದಾರೆ. ಆರಂಭಿಸುವಾಗ ಕೋಟಿ ನಾಮ ಗುರಿ ಹೊಂದಿದ್ದ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ಜನರ ಉತ್ಸಾಹ ನೋಡಿದರೆ ಹತ್ತು ಕೋಟಿಗೆ ಕಡಿಮೆ ಇಲ್ಲದೇ ಈ ಬರಹಯಜ್ಞ ದಾಖಲೆ ನಿರ್ಮಿಸುವ ಲಕ್ಷಣ ಗೋಚರಿಸುತ್ತಿದೆ.

ಜನವರಿ 11 ರಂದು ಪಾಲ್ಗೊಳ್ಳುವ ಐವತ್ತು ಸಾವಿರ ಜನಕ್ಕೂ ಕುಡಿವ ನೀರು,ಶಾರದಮ್ಮನ ಪ್ರಸಾದ,ಶೃಂಗೇರಿಯ ವಿರಣೆಯ ಪುಸ್ತಕ, ತಂಪು ಪಾನೀಯ,ಬಿಸ್ಕತ್ ಪೊಟ್ಟಣ ಮತ್ತು ಅವರ ಮನೆ ಬೆಳಗುತ್ತಲೇ ಇರಲಿ ಎಂಬ ಕಾರಣಕ್ಕೆ ದೀಪ ಇದನ್ನು ಕೊಡಲು ನಿರ್ಧರಿಸಲಾಗಿದ್ದು ಶೃಂಗೇರಿಯ ಸುತ್ತಲಿನ ದೊಡ್ಡ ಸಂಖ್ಯೆಯ ಮಾತೆಯರು ಪ್ರತಿ ನಿತ್ಯ ಎಲ್ಲವನ್ನೂ ಜೋಡಿಸಲು ಸ್ವಯಂಸೇವಕರಾಗಿ ದುಡಿಯುತ್ತಿದ್ದಾರೆ.
ಎಲ್ಲರಿಗೂ ಮದ್ಯಾಹ್ನ ಕಾರ್ಯಕ್ರಮ ಮುಗಿದ ಕೂಡಲೇ ಭೋಜನ ಪ್ರಸಾದ ನೀಡುವುದೂ ಸೇರಿದಂತೆ ಕಾರ್ಯಕ್ರಮ ಸ್ವಯಂಸೇವಕರಾಗಿ ಎರಡು ಸಾವಿರ ಜನ ಅಂದು ಹೊಣೆ ಹೊರಲಿದ್ದಾರೆ. ಜಿಲ್ಲೆಯ ಮೂಲೆ ಮೂಲೆಗಳಿಂದ ಭಕ್ತರನ್ನು ಕರೆತರಲು ಕರ್ನಾಟಕ ರಾಜ್ಯ ಸಾರಿಗೆಯ ಆರು ನೂರು ಬಸ್ ಗಳು ಹೊರಟು ನಿಂತಿವೆ.ವಾಹನ ನಿಲುಗಡೆಯ ಪ್ರತ್ಯೇಕ ವ್ಯವಸ್ಥೆ ಮಾಡಿ ಪ್ರತಿ ಚಾಲಕರಿಗೂ ನಿಲುಗಡೆ ವಿವರ ನೀಡುವ ಲೊಕೇಶನ್ ರವಾನಿಸಲಾಗಿದೆ. ತುರ್ತು ಅನುಕೂಲಕ್ಕೆ ವೈದ್ಯಕೀಯ ವ್ಯವಸ್ಥೆಯೂ ಏರ್ಪಾಟಾಗಿದೆ. ಶೃಂಗೇರಿಯಂತ ಸಣ್ಣ ಊರು ಒಂದು ಬೃಹತ್ತಾದ ಸಾಮೂಹಿಕ ಸ್ತೋತ್ರ ಪಠಣ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ. ಈ ಕಾರ್ಯಕ್ರಮದ ಮತ್ತೊಂದು ವಿಶೇಷ ಎಂದರೆ ಯಾವ ನಾಯಕರನ್ನೂ ಅಭ್ಯಾಗತರಾಗಿ ಕರೆದಿಲ್ಲ. ಬರುವವರೆಲ್ಲಾ ಕೇವಲ ಭಕ್ತರಾಗೇ ಬರಬೇಕು.ಸ್ತೋತ್ರ ಪಠಿಸಬೇಕು.ಸನ್ನಿಧಾನದ ಆಶೀರ್ವಾದ ಕೇಳಿ ಶ್ರೀ ಭಾರತೀತೀರ್ಥ ಮಹಾಸನ್ನಿಧಾನದ ದರ್ಶನ ಭಾಗ್ಯ ಪಡೆದು ಪುನೀತರಾಗಿ ಪುಣ್ಯ ಹೊತ್ತು ಹಿಂತಿರುಗಬೇಕು.

Swami Vivekananda ಜನವರಿ 12 ಸ್ವಾಮಿ ವಿವೇಕಾನಂದರ ಜನ್ಮದಿನ ಪ್ರಯುಕ್ತ ವಿಶೇಷ ಸ್ಪರ್ಧೆಗಳು

0

Swami Vivekananda ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಪ್ರಯುಕ್ತ ನಗರದ ಕುವೆಂಪು ರಂಗಮಂದಿರದಲ್ಲಿ ರಾಷ್ಟ್ರೀಯ ಯುವ ದಿನ ಹಾಗೂ ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮವನ್ನು ಜ.12 ರ ಬೆಳಿಗ್ಗೆ ಏರ್ಪಡಿಸಲಾಗಿದ್ದು, ಈ ಕಾರ್ಯಕ್ರಮದ ಅಂಗವಾಗಿ ಅಂದು 10 ರಿಂದ 29 ವರ್ಷದೊಳಗಿನವರಿಗೆ ಸ್ವಾಮಿ ವಿವೇಕಾನಂದರ ಕುರಿತಾದ ವೇಷಭೂಷಣ ಸ್ಪರ್ಧೆ ಮತ್ತು 15 ರಿಂದ 29 ವರ್ಷದೊಳಗಿನವರಿಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

Swami Vivekananda ಆಸಕ್ತರು ಅಂದು ಬೆಳಿಗ್ಗೆ 9.30 ಕ್ಕೆ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಪ್ರಬಂಧ ಸ್ಪರ್ಧೆಗೆ ಸ್ಥಳದಲ್ಲಿ ವಿಷಯ ನೀಡಲಾಗುವುದು. ಕಾರ್ಡ್ಬೋರ್ಡ್ ಮತ್ತು ಪೆನ್ ಸ್ಪರ್ಧಿಗಳೇ ತರಬೇಕು. ವೇಷಭೂಷಣ ಸ್ಪರ್ಧೆಯಲ್ಲಿ ಆಕರ್ಷಣೆ ಮತ್ತು ಸಂಪ್ರದಾಯಕ್ಕೆ ಆದ್ಯತೆ ನೀಡಲಾಗುವುದು. ವಿಜೇತರಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರ, ಸ್ಮರಣಿಕೆ, ಭಾಗವಹಿಸುವವರಿಗೆ ಅಭಿನಂದನಾ ಪತ್ರ ನೀಡಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

DC Shivamogga ಮಂಗನ ಕಾಯಿಲೆ ಮುಂಜಾಗ್ರತೆ ಬಗ್ಗೆ ಡೇಪಾ ತೈಲ, ಲಸಿಕೆ ಬಳಸಲು ಕ್ರಮ- ಗುರುದತ್ತ ಹೆಗಡೆ

0

DC Shivamogga ಮಂಗನ ಕಾಯಿಲೆ(ಕೆಎಫ್‌ಡಿ) ಕುರಿತು ಎಲ್ಲ ಪಂಚಾಯತ್‌ಗಳಲ್ಲಿ ಅರಿವು ಮೂಡಿಸಬೇಕು. ಹಾಗೂ ಮಲೆನಾಡಿನ ಭಾಗದಲ್ಲಿ ಜನರು ಕಾಡಿಗೆ ಹೋಗುವ ವೇಳೆ ಉಣ್ಣೆಗಳಿಂದ ರಕ್ಷಣೆ ಪಡೆಯಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸಕ್ತ ಸಾಲಿನಲ್ಲಿ ಕೆಎಫ್‌ಡಿ ಪ್ರಕರಣಗಳು ವರದಿಯಾಗಿಲ್ಲ. ಆದರೆ ರೋಗ ಲಕ್ಷಣಗಳಿದ್ದಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಸಾಗರ, ಸೊರಬ, ತೀರ್ಥಹಳ್ಳಿ, ಹೊಸನಗರ ಈ ನಾಲ್ಕು ತಾಲ್ಲೂಕುಗಳಲ್ಲಿ ಇಲಾಖೆಯಿಂದ ಡೇಪಾ ತೈಲ ನೀಡಲಾಗಿದೆ. ಸಾರ್ವಜನಿಕರು ಕಾಡಿಗೆ ಹೋಗುವ ಮುನ್ನ ಇದನ್ನು ಕೈ ಕಾಲುಗಳಿಗೆ ಲೇಪಿಸಿಕೊಂಡು ಹೋಗಬೇಕು. ಹಾಗೂ ಪಶುಸಂಗೋಪನೆ ಇಲಾಖೆಯಿಂದ ಜಾನುವಾರುಗಳಿಗೆ ಉಣ್ಣೆಯಿಂದ ರಕ್ಷಿಸಿಕೊಳ್ಳಲು ಅಗತ್ಯವಾದ ಲಸಿಕೆಯನ್ನು ನೀಡಬೇಕು ಎಂದು ತಿಳಿಸಿದ ಅವರು ಎಲ್ಲ ಪಂಚಾಯ್ತಿಗಳಲ್ಲಿ ಕೆಎಫ್‌ಡಿ ಕುರಿತು ಪೋಸ್ಟರ್, ಮಾಹಿತಿ, ಶಿಕ್ಷಣದ ಮೂಲಕ ಅರಿವು ಮೂಡಿಸಬೇಕು ಎಂದರು.

ಡಿಎಸ್‌ಓ ಡಾ.ನಾಗರಾಜ್ ನಾಯ್ಕ್ ಮಾತನಾಡಿ, ಕಾಡಿನಲ್ಲಿರುವ ಸೋಂಕು ಪೀಡಿತ ಉಣ್ಣೆಗಳು ಕಚ್ಚುವುದರಿಂದ ಮಂಗನ ಕಾಯಿಲೆ ಬರುತ್ತದೆ. ಹಾಗೂ ಕಾಡಿನಲ್ಲಿ ಮಂಗಗಳು ಸಾಯುವುದೇ ಈ ಕಾಯಿಲೆಯ ಲಕ್ಷಣವಾಗಿದೆ. ಆದ್ದರಿಂದ ಮಂಗ ಸತ್ತಿರುವುದು ಕಂಡ ಬಂದರೆ ಆರೋಗ್ಯ ಇಲಾಖೆ ಅಥವಾ ಸ್ಥಳೀಯ ಗ್ರಾ.ಪಂ, ಅರಣ್ಯ ಇಲಾಖೆಗೆ ತಿಳಿಸಬೇಕು. ಹಾಗೂ ಆ ಪ್ರದೇಶಕ್ಕೆ ಸಾರ್ವಜನಿಕರು ಹೋಗಬಾರದು.

ಇಲಾಖೆಯ ವತಿಯಿಂದ ನೀಡಲಾಗುವ ಡೇಪಾ ತೈಲವನ್ನು ಕೈಕಾಲುಗಳಿಗೆ ಲೇಪಿಸಿಕೊಂಡು ಹೋಗಬೇಕು. ಮಂಗನ ಕಾಯಿಲೆ ಲಕ್ಷಣಗಳಾದ ಜ್ವರ, ವಿಪರೀತ ತಲೆನೋವು, ಕಣ್ಣು ಕೆಂಪಾಗುವುದು, ನಿಶ್ಯಕ್ತಿ, ಇತರೆ ರೋಗ ಲಕ್ಷಣ ಕಂಡು ಬಂದ ತಕ್ಷಣ ಹತ್ತಿರದ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು.
2024 ರಲ್ಲಿ ಮಂಗನ ಕಾಯಿಲೆ 12215 ಪರೀಕ್ಷೆ ನಡೆಸಲಾಗಿದ್ದು 63 ಪಾಸಿಟಿವ್ ಪ್ರಕರಣ ದಾಖಲಾಗಿ, 01 ಸಾವು ಸಂಭವಿಸಿತ್ತು. ಪ್ರಸಕ್ತ ಸಾಲಿನಲ್ಲಿ ಯಾವುದೇ ಪ್ರಕರಣ ವರದಿಯಾಗಿಲ್ಲ.
ಜಿಲ್ಲೆಯಲ್ಲಿ ನಾಯಿಕಡಿತ ಮತ್ತು ರೇಬಿಸ್ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ರೇಬಿಸ್ ಬಂದ ಮೇಲೆ ಯಾವುದೇ ಚಿಕಿತ್ಸೆ ಇಲ್ಲದ ಕಾರಣ ಮುಂಜಾಗ್ರತಾ ಕ್ರಮ ಅತ್ಯಗತ್ಯ.
ಜಿಲ್ಲೆಯಲ್ಲಿ 2024 ರಲ್ಲಿ 26950 ನಾಯಿಕಡಿತ ಪ್ರಕರಣಗಳಿದ್ದು, 4 ಸಾವು ಸಂಭವಿಸಿದೆ. ಬೀದಿ ನಾಯಿಗಳ ನಿಯಂತ್ರಣಕ್ಕೆ ಪಾಲಿಕೆ ಮತ್ತು ಸ್ಥಳೀಯ ಸಂಸ್ಥೆಗಳು ಕ್ರಮ ಕೈಗೊಳ್ಳಬೇಕು. ಹಾಗೂ ಸಾರ್ವಜನಿಕರು ತಮ್ಮ ಸಾಕು ನಾಯಿ, ಪ್ರಾಣಿಗಳಿಗೆ ಲಸಿಕೆ ಹಾಕಿಸಬೇಕು. ನಾಯಿ ಇತರೆ ಸಾಕು ಪ್ರಾಣಿ ಕಡಿತದ ತಕ್ಷಣ ಆಸ್ಪತ್ರೆಗೆ ತೆರಳಿ ಆಂಟಿ ರೇಬಿಸ್ ಲಸಿಕೆ ಮತ್ತು ಸೂಕ್ತ ಚಿಕಿತ್ಸೆ ಪಡೆಯಬೇಕೆಂದರು.

DC Shivamogga ಜಿಲ್ಲೆಯಲ್ಲಿ ಹಾವು ಕಡಿತ ತಡೆ ಮತ್ತು ನಿಯಂತ್ರಣ ಕಾರ್ಯಕ್ರಮದಡಿ ಹಾವು ಕಡಿತದಿಂದ ರಕ್ಷಣೆ ಪಡೆಯುವುದು, ಹಾವು ಕಡಿತದ ನಂತರ ಅನುಸರಿಸಬೇಕಾದ ಕ್ರಮಗಳು, ಮುನ್ನೆಚ್ಚರಿಕೆ ಚಿಕಿತ್ಸೆ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದರು.
ಜಿಲ್ಲಾಧಿಕಾರಿಗಳು ಮಾತನಾಡಿ, ನಾಯಿ ಕಡಿತದಿಂದಾಗುವ ಪರಿಣಾಮಗಳ ಕುರಿತು ಹೆಚ್ಚಿನ ಅರಿವು ಮೂಡಿಸಬೇಕು. ನಗರ ಪ್ರದೇಶದಲ್ಲಿ ಪ್ರದೇಶವಾರು ಸ್ಥಳೀಯ ಸಂಸ್ಥೆಗಳು ಬಿಡಾಡಿ ನಾಯಿಗಳ ಸಂತಾನಹರಣ ಶಸ್ತçಚಿಕಿತ್ಸೆ ಹಾಗೂ ನಾಯಿಗಳ ಹಾವಳಿಯನ್ನು ನಿಯಂತ್ರಿಸಲು ಕ್ರಮ ವಹಿಸಬೇಕು. ಹಾಗೂ ಗ್ರಾಮೀಣ ಭಾಗದಲ್ಲಿಯೂ ನಾಯಿ ಮತ್ತು ಸಾಕು ನಾಯಿ ಕಡಿತದ ಕುರಿತು ಜಾಗೃತಿ ಮೂಡಿಸಬೇಕೆಂದರು.

ಡಬ್ಲ್ಯೂಹೆಚ್‌ಓ ಕನ್ಸಲೆಂಟ್ ಡಾ.ಹರ್ಷಿತ್, ಮಾತನಾಡಿ ಜಿಲ್ಲೆಯಲ್ಲಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಎಂಆರ್ 1 ಮತ್ತು ಎಂಆರ್ 2 ಲಸಿಕೆ ಕೆಲವೆಡೆ ಕಡಿಮೆ ಪ್ರಗತಿ ಸಾಧಿಸಲಾಗಿದೆ. 2024 ರಲ್ಲಿ 304 ಜ್ವರ-ದದ್ದು ಪ್ರಕಣ ದಾಖಲಾಗಿದ್ದು 5 ಮೀಸಲ್ಸ್ ಮತ್ತು 6 ರುಬೆಲ್ಲಾ ಪ್ರಕರಣ ದಾಖಲಾಗಿತ್ತು ಎಂದು ಮಾಹಿತಿ ನೀಡಿದರು.

ಆರ್‌ಸಿಹೆಚ್ ಅಧಿಕಾರಿ ಡಾ.ಮಲ್ಲಪ್ಪ ಮಾತನಾಡಿ, ‘0’ ಡೋಸ್ ಮಕ್ಕಳ ಅಂದರೆ ಒಂದು ವರ್ಷದೊಳಗೆ ಯಾವುದೇ ಲಸಿಕೆ ಪಡೆಯದ ಮಕ್ಕಳಿಗೆ ಲಸಿಕೆ ನಿಡಲು ಡಿ.23 ರಿಂದ 31 ರವರೆಗೆ ವಿಶೇಷ ಅಭಿಯಾನ ಕೈಗೊಳ್ಳಲಾಗಿತ್ತು ಎಂದರು.

ಜಿಲ್ಲಾಧಿಕಾರಿಗಳು, ಸಾರ್ವತ್ರಿಕ ಲಸಿಕಾಕರಣದಲ್ಲಿ ಶೇ.100 ಗುರಿ ಸಾಧಿಸಬೇಕು. ಎಂಆರ್1 ಮತ್ತು 2 ಡೋಸ್ ಲಸಿಕೆ ಬಿಟ್ಟು ಹೋದ ಮಕ್ಕಳಿಗೆ ತಕ್ಷಣ ಲಸಿಕೆ ನೀಡಬೇಕು. ಲಸಿಕೆ ಬಿಟ್ಟು ಹೋದವರನ್ನು ಗುರುತಿಸಲು ನಗರ ಪ್ರದೇಶದಲ್ಲಿ ಸರ್ವೇ ಕೈಗೊಳ್ಳಬೇಕು. ವಿವಿಧ ಇಲಾಖೆಗಳ ಸಹಕಾರ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಕಾರ್ಮಿಕ ಅಧಿಕಾರಿಗಳ ಸಹಕಾರದಿಂದ ತಾಲ್ಲೂಕುವಾರು ವಲಸಿಗರ ಮಾಹಿತಿ ಪಡೆದು ಅವರಿಗೂ ಲಸಿಕೆ ಹಾಕಬೇಕು. ಹೆಚ್‌ಎಂಐಎಸ್ ಪೋರ್ಟಲ್‌ನಲ್ಲಿ ನಿಯಮಿತವಾಗಿ ಡೇಟಾ ಅಪ್‌ಡೇಟ್ ಆಗಬೇಕೆಂದು ಸೂಚನೆ ನೀಡಿದರು.

ಹೆಚ್‌ಎಂಪಿವಿ ನಿಯಂತ್ರಣ ಕ್ರಮಕ್ಕೆ ಸೂಚನೆ : ಹ್ಯೂಮನ್ ಮೆಟಾನ್ಯೂಮೋ ವೈರಸ್ ರೋಗದ ಬಗ್ಗೆ ಭಯ ಬೇಡ. ಆದರೆ ಕೋವಿಡ್ ಸಮಯದಲ್ಲಿ ಅನುಸರಿಸಲಾದ ಮುಂಜಾಗೃತಾ ಕ್ರಮಗಳಾದ ಸ್ಯಾನಿಟೈಸರ್, ಮಾಸ್ಕ್, ಸ್ವಚ್ಚತೆ ಬಗ್ಗೆ ಗಮನ ನೀಡಬೇಕು. ಐಎಲ್‌ಐ ಮತ್ತು ಎಸ್‌ಎಎಆರ್‌ಐ ಪ್ರಕರಣಗಳನ್ನು ಪರೀಕ್ಷೆಗೆ ಒಳಪಡಿಸಬೇಕು. ಜೊತೆಗೆ ಶೀತ, ಜ್ವರದಂತಹ ಲಕ್ಷಣಗಳಿಗೆ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕೆಂದು ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಕೋಟ್ಪಾ ಕಾಯ್ದೆಯಡಿ 48 ತಂಬಾಕು ದಾಳಿ ನಡೆಸಿ, 2140 ಪ್ರಕರಣ ದಾಖಲಿಸಿ, ರೂ.179280 ದಂಡ ಸಂಗ್ರಹಿಸಲಾಗಿದೆ ಎಂದರು.
ಜಿಲ್ಲಾ ಕ್ಷಯ/ಹೆಚ್‌ಐವಿ ನಿಯಂತ್ರಣಾಧಿಕಾರಿ ಡಾ. ನಾಗೇಶ್ ಬಿ ಪಿ ಮಾತನಾಡಿ, ಜಿಲ್ಲೆಯಲ್ಲಿ ಕ್ಷಯರೋಗ ನಿರ್ಮೂಲನೆ ಮಾಡಲು ನಿಯಮಾನುಸಾರ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲಾಗುತ್ತಿದೆ. ಕ್ಷಯರೋಗ ಮುಕ್ತ 100 ದಿನಗಳ ಅಭಿಯಾನವನ್ನು ದಿ: 07-12-2024 ರಿಂದ ಜಿಲ್ಲೆಯಾದ್ಯಂತ ಹಮ್ಮಿಕೊಂಡಿದ್ದು, ಜಾಗೃತಿ, ಪರೀಕ್ಷೆ ಮತ್ತು ಚಿಕಿತ್ಸೆ ನೀಡಲಾಗುತ್ತಿದೆ. ಕ್ಷಯರೋಗದ ಪರೀಕಷೆ ಮತ್ತು ಚಿಕಿತ್ಸೆ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ದೊರೆಯುತ್ತದೆ.
ಹೆಚ್‌ಐವಿ ನಿರ್ಮೂಲನೆ ಮಾಡಲು ಸರ್ಕಾರ ಹಾಗೂ ಎನ್‌ಜಿಓ ಗಳು ಶ್ರಮ ವಹಿಸುತ್ತಿವೆ. ಹೆಚ್‌ಐವಿ ಕಾಯ್ದೆ 2017 ಜಾರಿಗೆ ಬಂದಿದ್ದು, ಈ ಕಾಯ್ದೆ ಕುರಿತು ಅರಿವು ಮೂಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 200 ಹೆಚ್‌ಐವಿ ಪಾಸಿಟಿವ್ ಪ್ರಕರಣ ದಾಖಲಾಗಿದ್ದು, 196 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ಮರಣ ಹೊಂದಿರುತ್ತಾರೆಂದು ತಿಳಿಸಿದರು.

ಸಭೆಯಲ್ಲಿ ಜಿ.ಪಂ ಉಪ ಕಾರ್ಯದರ್ಶಿ ಸುಜಾತ, ಕೆ ಆರ್, ಅಪರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅನಿಲ್ ಕುಮಾರ್ ಭೂಮರಡ್ಡಿ, ಡಿಹೆಚ್‌ಓ ಡಾ.ನಟರಾಜ್, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಸಿದ್ದನಗೌಡ ಪಾಟಿಲ್, ವಿವಿಧ ಜಿಲ್ಲಾ ಕಾರ್ಯಕ್ರಮ ಅನುಷ್ಟಾನ ಅಧಿಕಾರಿಗಳು, ತಾಲ್ಲೂಕು ವೈದ್ಯಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.