Wednesday, March 18, 2026
Wednesday, March 18, 2026
Home Blog Page 442

Indian Air Force ಜನವರಿ 29 ರಿಂದ ಫೆಬ್ರವರಿ 6 ವರೆಗೆ ಏರ್ ಮೆನ್ ನೇಮಕಾತಿ ಪ್ರಕ್ರಿಯೆ

0

Indian Air Force ಭಾರತೀಯ ವಾಯುಪಡೆಯು ಭಾರತದ/ಗೂರ್ಖಾ(ನೇಪಾಳ) ಪುರುಷ ಅಭ್ಯರ್ಥಿಗಳನ್ನು ಭಾರತೀಯ ವಾಯುಪಡೆಗೆ ಏರ್‌ಮ್ಯಾನ್ ಆಗಿ ಗ್ರೂಪ್ ‘ವೈ’(ತಾಂತ್ರಿಕವಲ್ಲದ) ವೈದ್ಯಕೀಯ ಸಹಾಯಕ ವೃತ್ತಿಗೆ ಸೇರಲು ಜ.29 ರಿಂದ ಫೆ.06 ರವರೆಗೆ ನೇಮಕ ರ‍್ಯಾಲಿ ಏರ್ಪಡಿಸಿದೆ.
ನೇಮಕಾತಿ ರ‍್ಯಾಲಿಯನ್ನು ಮಹಾರಾಜ ಕಾಲೇಜು ಮೈದಾನ, ಪಿ ಟಿ ಉಷಾ ರಸ್ತೆ, ಶೆಣೈಸ್ ಎರ್ನಾಕುಲಂ, ಕೊಚ್ಚಿ, ಕೇರಳ 682011 ಇಲ್ಲಿ ಏರ್ಪಡಿಸಲಾಗಿದೆ.
ಜ.29 ರಿಂದ 30 ರವರೆಗೆ ಗುಂಪು ವೈ/ ವೈದ್ಯಕೀಯ ಸಹಾಯಕರ ಹುದ್ದೆಗೆ, ವಿದ್ಯಾರ್ಹತೆ 10+2 ಅಭ್ಯರ್ಥಿಗಳು ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ಎಲ್ಲಾ ಜಿಲ್ಲೆಗಳ ಅಭ್ಯರ್ಥಿಗಳು ಹಾಜರಾಗಬಹುದು.
Indian Air Force ಫೆ.04 ರಿಂದ 05 ರವರೆಗೆ ಗುಂಪು ವೈ/ವೈದ್ಯಕೀಯ ಸಹಾಯಕ ಹುದ್ದೆ, ವಿದ್ಯಾರ್ಹತೆ ಫಾರ್ಮಸಿಯಲ್ಲಿ ಡಿಪ್ಲೊಮಾ/ಬಿಎಸ್‌ಸಿ ಹೊಂದಿರುವ ಅಭ್ಯರ್ಥಿಗಳು ತಮಿಳುನಾಡು, ಕೇರಳ, ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳ ಎಲ್ಲಾ ಜಿಲ್ಲೆಗಳು ಮತ್ತು ಪುದುಚೇರಿ ಹಾಗೂ ಲಕ್ಷದ್ವೀಪಗಳು ಕೇಂದ್ರಾಡಳಿತ ಪ್ರದೇಶಗಳ ಅಭ್ಯರ್ಥಿಗಳು ಹಾಜರಾಗಬಹುದು.
ವೈದ್ಯಕೀಯ ಸಹಾಯಕ ವೃತ್ತಿಗೆ 10+2 ಹೊಂದಿರುವ ಅಭ್ಯರ್ಥಿಗಳು ಅವಿವಾಹಿತರಾಗಿರೇಕು. ಮತ್ತು 2004 ರ ಜುಲೈ 03 ಮತ್ತು 2008 ಜುಲೈ 3 ರ ನಡುವೆ ಜನಿಸಿದವರಾಗಿರಬೇಕು. ವೈದ್ಯಕೀಯ ಸಹಾಯಕ ವೃತ್ತಿಗೆ ಫಾರ್ಮಸಿಯಲ್ಲಿ ಡಿಪ್ಲೊಮಾ/ಬಿಎಸ್‌ಸಿ ಹೊಂದಿರುವ ಅಭ್ಯರ್ಥಿಗಳು ಅವಿವಾಹಿತರಾಗಿದ್ದು 2001 ರ ಜುಲೈ 03 ಮತ್ತು 2006 ರ ಜುಲೈ 3 ರ ನಡುವೆ ಜನಿಸಿರಬೇಕು. ವಿವಾಹಿತ ಅಭ್ಯರ್ಥಿಗಳು 2001 ರ ಜುಲೈ 3 ಮತ್ತು 2004 ರ ಜುಲೈ 03 ರ ನಡುವೆ ಜನಿಸಿರಬೇಕು. ಹೆಚ್ಚಿನ ವಿವರಗಳಿಗೆ www.airmenselection.cdac.in ಗೆ ಲಾನ್‌ಇನ್ ಆಗಿ ಪಡೆಯಬಹುದೆಂದು ಉದ್ಯೋಗಾಧಿಕಾರಿ ತಿಳಿಸಿದ್ದಾರೆ.

Shivamogga Police ಶಿವಮೊಗ್ಗದಿಂದ ವ್ಯಕ್ತಿ ನಾಪತ್ತೆ, ದೊಡ್ಡಪೇಟೆ ಪೊಲೀಸ್ ಠಾಣೆ ಮಾಹಿತಿ ಪ್ರಕಟಣೆ

0

Shivamogga Police ಶಿವಮೊಗ್ಗ ನಗರದ ಜೆ.ಸಿ. ನಗರ ಬಡಾವಣೆಯ ಪರಮೇಶ್ವರ ಬಿನ್ ಗುಳ್ಯಪ್ಪ (41) ವರ್ಷ ವ್ಯಕ್ತಿಯು ದಿ: 10-07-2024 ರಂದು ಕೆಲಸಕ್ಕೆ ಹೋಗುತ್ತೇನೆಂದು ಹೋದವರು ಮನೆಗೆ ವಾಪಸ್ ಬಂದಿರುವುದಿಲ್ಲ.

Shivamogga Police ಕಾಣೆಯಾದ ವ್ಯಕ್ತಿ ಸುಮಾರು 5.8 ಅಡಿ ಎತ್ತರ, ಢೃಡವಾದ ಮೈಕಟ್ಟು, ಎಣ್ಣೆಗೆಂಪು ಬಣ್ಣ, ದುಂಡು ಮುಖ, ಕಪ್ಪು ತಲೆ ಕೂದಲು, ಬಲ ತೋಳಿನ ಮೇಲೆ ಆಂಜನೇಯನ ಹಚ್ಚೆ ಗುರುತು ಹೊಂದಿರುತ್ತಾರೆ. ಬಿಳಿ ಕಪ್ಪು ಬಣ್ಣದ ಚಕ್ಸ್ ಶರ್ಟ್ ಮತ್ತು ಬೂದು ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಕನ್ನಡ ಮಾತನಾಡುತ್ತಾರೆ. ಈತನ ಸುಳಿವು ಯಾರಿಗಾದರೂ ಪತ್ತೆಯಾದಲ್ಲಿ ದೊಡ್ಡಪೇಟೆ ಪೊಲಿಸ್ ಠಾಣೆಯನ್ನು ಸಂಪರ್ಕಿಸಬಹುದೆಂದು ತಿಳಿಸಿದೆ

Shivamogga Institute of Medical Sciences “ಸಿಮ್ಸ್” ನಲ್ಲಿ ತೆರವಾಗಿರುವ ಕೆಲವು ಹುದ್ದೆಗಳಿಗೆ ಅರ್ಜಿ ಆಹ್ವಾನ

0

Shivamogga Institute of Medical Sciences ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ವತಿಯಿಂದ ಖಾಲಿ ಇರುವ 04 ಕ್ಯಾಥ್ ಲ್ಯಾಬ್ ಟೆಕ್ನೀಷಿಯನ್/ಎಕೊ ಕಾರ್ಡಿಯೋಗ್ರಾಫರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

Shivamogga Institute of Medical Sciences ಬಿಎಸ್‌ಸಿ, ಸಿವಿಟಿ/ಸಿಟಿಟಿ ಮತ್ತು ಎಂಎಸ್‌ಸಿ ಸಿವಿಟಿ/ ಸಿಟಿಟಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಆಕರ್ಷಕ ವೇತನ ನೀಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು ನಿರ್ದೇಶಕರು, ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಸಾಗರ ರಸ್ತೆ ಶಿವಮೊಗ್ಗ ಇಲ್ಲಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ.

Water Supply and Sewerage Management Department ನೀರಿನ ಕಂದಾಯ ಪಾವತಿಸದಿದ್ದಲ್ಲಿ ನೀರಿನ ಸಂಪರ್ಕ ಕಡಿತ- ಮಂಡಳಿ ಪ್ರಕಟಣೆ

0

Water Supply and Sewerage Management Department ಶಿವಮೊಗ್ಗ ನಗರ ನೀರು ಸರಬರಾಜು ಮತ್ತು ಒಳಚರಂಡಿ ನಿರ್ವಹಣಾ ವಿಭಾಗ ಮತ್ತು ಉಪವಿಭಾಗ ವತಿಯಿಂದ 2024-25 ನೇ ಸಾಲಿನ ನೀರಿನ ಕಂದಾಯ ಮತ್ತು ಬಾಕಿ ಕರ ವಸೂಲಾತಿಗಾಗಿ ಜ.12 ರಂದು ಕೆಳಕಂಡ ಸ್ಥಳಗಳಲ್ಲಿ ವಿಶೇಷ ಕೌಂಟರ್ ತೆರೆಯಲಾಗಿದೆ.

ಕಲ್ಲಹಳ್ಳಿ, ಅಭಿಷ್ಠವರ ಗಣಪತಿ ದೇವಸ್ಥಾನದ ಹತ್ತಿರ ವಿನೋಬನಗರ, ಅಪೂರ್ವ ಕಾಲೇಜ್ ಎದುರು ಬೊಮ್ಮನಕಟ್ಟೆ ಮುಖ್ಯ ರಸ್ತೆ, ಗಣಪತಿ ದೇವಸ್ಥಾನದ ಹತ್ತಿರ ಕೃಷಿ ನಗರ, ಶಿವನ ಪಾರ್ಕ್ ಹತ್ತಿರ ಚಿಕ್ಕಲ್, ಆದಿಚುಂಚನಗಿರಿ ಶಾಲೆ ಎದುರು ಶರಾವತಿ ನಗರ ಈ ಸ್ಥಳಗಳಲ್ಲಿ ವಿಶೇಷ ಕೌಂಟರ್ ತೆರೆಯಲಾಗಿದ್ದು, ಕಂದಾಯ ಪಾವತಿಸಬಹುದು.

Water Supply and Sewerage Management Department ನೀರಿನ ಕಂದಾಯ ಪಾವತಿಸದಿದ್ದಲಿ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗುತ್ತದೆ ಎಂದು ಕನನೀಸ ಮತ್ತು ಒಳ ಚರಂಡಿ ಮಂಡಳಿ ನಿರ್ವಹಣಾ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ತಿಳಿಸಿದ್ದಾರೆ.

Kannada literature ಮಹಿಳೆ ಕೇವಲ ಮನೆ ಕೆಲಸಕ್ಕೆ ಮಾತ್ರ ಸೀಮಿತ ಎನ್ನುವ ಕಾಲ ಮರೆಯಾಗಿದೆ- ಸುಜಾತಾ ಜೋತಾಡಿ

0

Kannada literature ಹೆಣ್ಣು ಅಲಂಕಾರ ಪ್ರಿಯೆಯಾಗಿದ್ದು, ಶುಭ ಕಾರ್ಯಗಳು ಎದುರಾದ ಸಂದರ್ಭದಲ್ಲಿ ಸೌಂದರ್ಯ ಪ್ರಜ್ಞೆ ಜಾಗೃತಗೊಳ್ಳುತ್ತದೆ ಎಂದು ಕನ್ನಡ ಸಾಹಿತ್ಯ ಸಾಂಸ್ಕೃತಿಕ ಜಗಲಿಯ ಮಹಿಳಾ ಘಟಕದ ಅಧ್ಯಕ್ಷೆ ಸುಜಾತಾ ಜೋತಾಡಿ ಹೇಳಿದರು.

ಸೊರಬ ಪಟ್ಟಣದ ಹೊಸಪೇಟೆ ಬಡಾವಣೆಯಲ್ಲಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಜಗಲಿ ಹಾಗೂ ನೆಮ್ಮದಿ ಗ್ರೂಪ್ ಆಫ್ ಸರ್ವಿಸ್ ವತಿಯಿಂದ ಹಮ್ಮಿಕೊಂಡ ಸಂಕ್ರಾಂತಿ ಸಂಭ್ರಮ ಹಾಗೂ ಬ್ರೈಡಲ್ ಮೇಕಪ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಹಿಳೆಯರು ಸ್ವಾವಲಂಬಿಯಾಗಿ ಆರ್ಥಿಕವಾಗಿ ಸದೃಢರಾಗಲು ಅನೇಕ ಉದ್ಯೋಗವಕಾಶಗಳಿವೆ. ಇತ್ತೀಚೆಗೆ ಮದುವೆ ಮತ್ತಿತರರ ಶುಭ ಸಂದರ್ಭಗಳಲ್ಲಿ ಅಲಂಕಾರ ಮಾಡುವುದು ಸಹ ವೃತ್ತಿಯಾಗಿ ಪರಿಣಮಿಸಿದೆ. ಕಾರ್ಯಕ್ರಮದ ಸ್ಥಳಕ್ಕೆ ತೆರಳಿ ಅಲಂಕಾರ ಮಾಡುವವರು ಇದ್ದಾರೆ. ಮಹಿಳೆಯರು ಕೇವಲ ಮನೆ ಕೆಲಸಕ್ಕೆ ಮಾತ್ರ ಸೀಮಿತ ಎನ್ನುವ ಕಾಲ ಮರೆಯಾಗಿದ್ದು, ಪುರುಷರಿಗೆ ಸಮಾನರಾಗಿ ಎಲ್ಲಾ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿರುವುದು ಉತ್ತಮ ಬೆಳವಣಿಗೆ.

Kannada literature ಮಹಿಳೆಯರು ಸಹ ವ್ಯಾಪಾರ-ವಹಿವಾಟುಗಳಲ್ಲಿ ತೊಡಗಿ ಸಮಾಜದಲ್ಲಿ ಉತ್ತಮ ಸ್ಥಾನಗಳಿಸುತ್ತಿದ್ದಾರೆ. ಇದಕ್ಕೆ ಹೊಸಪೇಟೆ ಬಡಾವಣೆಯಲ್ಲಿ ನೆಮ್ಮದಿ ಸೀರೆ ಮನೆ ಸ್ಥಾಪಿಸಿ ಸ್ವಯಂ ಉದ್ಯೋಗ ಕಂಡುಕೊಂಡಿರುವ ಅನಿತಾ ನೆಮ್ಮದಿಸುಬ್ಬು ನೆಮ್ಮದೆರು ಸಾಕ್ಷಿ ಎಂದರು.
ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿದ ನೆಮ್ಮದಿ ಗ್ರೂಪ್ ಆಫ್ ಸರ್ವಿಸ್‌ನ ಮುಖ್ಯಸ್ಥೆ ಅನಿತಾ ನೆಮ್ಮದಿ ಸುಬ್ಬು ಮಾತನಾಡಿ, ಮಹಿಳೆಯರು ಸ್ವಯಂ ಉದ್ಯೋಗ ಕೈಗೊಳ್ಳುವ ಮೊದಲು ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ.

ಇವುಗಳನ್ನು ಮೆಟ್ಟಿನಿಂತು ಉದ್ಯೋಗ ಸ್ಥಾಪಿಸಿದಾಗ ಕುಟುಂಬಕ್ಕೆ ನೆರವಾಗಲು ಸಾಧ್ಯವಾಗುತ್ತದೆ ಎಂದ ಅವರು, ಸಂಸ್ಥೆಯಿಂದ ಮಹಿಳೆಯರಿಗೆ ಹಾಗೂ ಶುಭ ಕಾರ್ಯ ಕೈಗೊಳ್ಳುವವರಿಗೆ ಅನುಕೂಲವಾಗುವಂತೆ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ.

ಮಹಿಳೆಯರು ಸ್ಪರ್ಧಾತ್ಮಕ ಯುಗದಲ್ಲಿ ಮುನ್ನುಗ್ಗುತ್ತಿರಬೇಕು ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಭಾರತಿ ಭಂಡಾರಿ ಮಾತನಾಡಿದರು, ಕಾರ್ಯಕ್ರಮವನ್ನು ಕಸ್ತೂರಿ ರಾಜು ಉದ್ಘಾಟಿಸಿದರು. ಕನ್ನಡ ಸಾಹಿತ್ಯ ಸಾಂಸ್ಕೃತಿಕ ಜಗಲಿಯ ಸದಸ್ಯರಾದ ವಿನಯ ಪ್ರಶಾಂತ್ ಭಾಪಟ್, ಮಾನಸ ರಂಗನಾಥ್, ಅನುಕೃತ, ಶ್ಯಾಮಲಾ, ರತ್ನಮ್ಮ, ಸಾಹಿತಿ ರೇವಣಪ್ಪ ಬಿದರಗೇರಿ ಇತರಿದ್ದರು. ಸಿಂಧೂ ಆದರ್ಶ ಪ್ರಾರ್ಥಿಸಿ, ನಳಿನಾ ಸ್ವಾಗತಿಸಿ, ವಿನುತಾ ವಂದಿಸಿದರು. ರೂಪಾ ಮಧುಕೇಶ್ವರ್ ನಿರ್ವಹಿಸಿದರು.

Kannikaparameshwari Temple ಜೀವನದಲ್ಲಿ ಸವಾಲುಗಳನ್ನ ಸಂತೋಷದಿಂದ ಸ್ವೀಕರಿಸಬೇಕು- ಡಾ.ಎಚ್.ಬಿ.ಮಂಜುನಾಥ್.

0

Kannikaparameshwari Temple ಜೀವನದಲ್ಲಿ ಬರುವ ಸವಾಲುಗಳನ್ನು ಸಂತೋಷವಾಗಿ ಸ್ವೀಕರಿಸಿದಾಗ ಮಾತ್ರ ಸಾಧನೆಗಳನ್ನು ಮಾಡಲು ಸಾಧ್ಯ,ಶಾಲಾ ವಾರ್ಷಿಕ ಪರೀಕ್ಷೆಯನ್ನೂ ಸಂತೋಷದಿಂದ ಸ್ವೀಕರಿಸಬೇಕು ಎಂದು ಹಿರಿಯ ಪತ್ರಕರ್ತ ಡಾ.ಎಚ್ ಬಿ ಮಂಜುನಾಥ ಹೇಳಿದರು.

ದಾವಣಗೆರೆ ನಗರದ ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನ ಡೈಮಂಡ್ ಜ್ಯೂಬ್ಲಿ ವಿದ್ಯಾಪೀಠದ ರಾಜನಹಳ್ಳಿ ವಿ ಗೋಪಾಲಕೃಷ್ಣ ಶೆಟ್ಟಿ ಕಾಂತ ಲಕ್ಷ್ಮಮ್ಮ ಕನ್ನಡ ಮಾಧ್ಯಮ ಪ್ರೌಢಶಾಲೆಯ 31ನೇ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ತರಗತಿಗಳಲ್ಲಿ ಅಂದಂದಿನ ಪಾಠವನ್ನು ಅಂದಂದೆ ಅರ್ಥ ಮಾಡಿಕೊಂಡವರಿಗೆ ಪರೀಕ್ಷೆ ಯಾವತ್ತೂ ಭಯವೆನಿಸುವುದಿಲ್ಲ, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದರೂ ಸಾಧ್ಯವಾದಷ್ಟು ಒಳ್ಳೆಯ ಇಂಗ್ಲೀಷನ್ನೂ ಕಲಿಯಬೇಕು, ಹೊರರಾಜ್ಯ ಹೊರದೇಶಗಳಿಗೆ ಹೋಗಿ ಅವಕಾಶಗಳನ್ನು ಪಡೆಯಲು ಆಂಗ್ಲ ಭಾಷೆಯೂ ಬೇಕಾಗುತ್ತದೆ ಎಂದರಲ್ಲದೆ ಪ್ರತಿ ವಿದ್ಯಾರ್ಥಿಯೂ ತಮ್ಮ ಅಪ್ಪ ಹಾಗೂ ಅಮ್ಮನ ದುಡಿಮೆ ಪರಿಶ್ರಮ ತ್ಯಾಗಗಳಿಂದಾಗಿಯೇ ತಾನು ಶಿಕ್ಷಣ ಪಡೆಯುತ್ತಿರುವುದು ಎಂಬುದನ್ನು ತಿಳಿದು ಶ್ರದ್ಧೆಯಿಂದ ಓದಿ ಉತ್ತಮ ಬದುಕನ್ನು ಕಟ್ಟಿಕೊಂಡಲ್ಲಿ ಅದೇ ತಂದೆ ತಾಯಿಗಳಿಗೆ ಸಲ್ಲಿಸಬಹುದಾದ ಕೃತಜ್ಞತೆ ಎಂದರು.

ಮತ್ತೋರ್ವ ಮುಖ್ಯಅತಿಥಿಗಳಾಗಿ ಮಾರಿಷಸ್ಸಿನ ಅನ್ನಾ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕಿಯಾದ ಡಾ. ಶ್ರೀಮತಿ ಆರ್ ಜಿ ಗೀತಾ ಲಕ್ಷ್ಮಿ ಅವರು ಜೀವನದಲ್ಲಿ ಸಾಧನೆ ಮಾಡಲು ಆರೋಗ್ಯ ತುಂಬಾ ಮುಖ್ಯ, ದಿನಚರಿಯನ್ನು ಶಿಸ್ತು ಬದ್ಧವಾಗಿ ನಿರ್ವಹಿಸಬೇಕು, ಶುಚಿತ್ವವೂ ಅಷ್ಟೇ ಮುಖ್ಯ, ಆಹಾರ ಸೇವಿಸುವಾಗ ಅನ್ಯ ವಿಚಾರಗಳಲ್ಲಿ ಗಮನಹರಿಸದೆ ಶ್ರದ್ಧಾ ಭಕ್ತಿಯಿಂದ ಸೇವಿಸಬೇಕು, ಕ್ರಮಬದ್ಧ ಉಸಿರಾಟಕ್ಕಾಗಿ ನಿತ್ಯವೂ ಸ್ವಲ್ಪ ಹೊತ್ತು ಪ್ರಾಣಾಯಾಮ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

ದಾವಣಗೆರೆ ತಾಲೂಕು ಪಂಚಾಯಿತಿ ಅಕ್ಷರ ದಾಸೋಹ ವಿಭಾಗದ ಸಹಾಯಕ ನಿರ್ದೇಶಕ ಕೆ ಆರ್ ವಿಶ್ವನಾಥ್ ರವರು ಮುಖ್ಯ ಅತಿಥಿಗಳಾಗಿ ವಿದ್ಯಾರ್ಥಿಗಳ ಚಿತ್ತ ಸದಾ ಓದಿನತ್ತ ಇರಬೇಕು, ಶೈಕ್ಷಣಿಕ ಸಾಧನೆಯ ಕನಸು ಕಾಣುತ್ತಾ ಅದರ ಸಾಕಾರಕ್ಕಾಗಿ ನಿರಂತರ ಅಧ್ಯಯನ ಮಾಡಬೇಕು ಎಂದರು.

Kannikaparameshwari Temple ವಿದ್ಯಾಪೀಠದ ಉಪಾಧ್ಯಕ್ಷ ಆರ್ ಎಲ್ ಪ್ರಭಾಕರ್ ವಿದ್ಯಾರ್ಥಿ ದೆಸೆಯಲ್ಲಿ ಮೊಬೈಲ್ ಮುಂತಾದ ಗೀಳಿಗೆ ಒಳಗಾಗದೆ ಓದಿನತ್ತ ಸದಾ ಗಮನ ಇರಬೇಕು ಎಂದರು.

ಕೊಲ್ಕತ್ತಾದ ಸಿಐಎಸ್ಎಫ್ ನಲ್ಲಿ ಯೋಧರಾಗಿರುವ ಶಾಲೆಯ ಹಳೆಯ ವಿದ್ಯಾರ್ಥಿ ಒ ಜಿ ಪ್ರಸಾದ್ ಹಾಗೂ ಬೆಂಗಳೂರಿನ ಪೊಲೀಸ್ ಇಲಾಖೆಯಲ್ಲಿ ಉದ್ಯೋಗಿಯಾಗಿರುವ ಕುಮಾರಿ ಎಸ್ ಹೆಚ್ ಜ್ಯೋತಿ ಸನ್ಮಾನ ಸ್ವೀಕರಿಸಿ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

ವಿದ್ಯಾಪೀಠದ ಜಂಟಿ ಕಾರ್ಯದರ್ಶಿ ಆರ್ ಜಿ ಶ್ರೀನಿವಾಸಮೂರ್ತಿ ಶ್ರೀಮತಿ ಚೂಡಾಮಣಿ ನಾಗೇಂದ್ರ ಪ್ರಕಾಶ್ ಉಪಸ್ಥಿತರಿದ್ದರು. ದೈಹಿಕ ಶಿಕ್ಷಕ ವಿ ಸುರೇಶ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಸಹ ಶಿಕ್ಷಕಿ ಶ್ರೀಮತಿ ಶಾರದಾ ಹಾಡಿದರು. ಸಹ ಶಿಕ್ಷಕ ಕೆ ಪಿ ವಿಶ್ವನಾಥ ಸ್ವಾಗತ ಕೋರಿದರೆ ಮುಖ್ಯೋಪಾಧ್ಯಾಯ ಕೆ ಸಿ ನಿರಂಜನ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಲೆಯ ಚೇರ್ಮನ್ ಆರ್ ಜಿ ನಾಗೇಂದ್ರ ಪ್ರಕಾಶ್ ವಾರ್ಷಿಕ ವರದಿಯ ವಾಚನ ಮಾಡಿದರೆ ಸಹ ಶಿಕ್ಷಕಿ ಎಂ ಎಸ್ ಜ್ಯೋತಿಲಕ್ಷ್ಮಿ ಅತಿಥಿಗಳ ಪರಿಚಯ ಮಾಡಿದರು. ಸಹ ಶಿಕ್ಷಕ ಹೆಚ್ ಪ್ರದೀಪ್ ವಂದನೆಗಳನ್ನು ಸಲ್ಲಿಸಿದರು. ಎಸ್ ಎಸ್ ಎಲ್ ಸಿ ಯಲ್ಲಿ ಶೇಕಡ 91 ರಷ್ಟು ಅಂಕ ಪಡೆದ ವಿ.ದಿಶಾಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.

ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೆ ಜೆ ಸುನಿಲ್ ದೇವ್ ಹೆಚ್ ಕೆ ಸತೀಶ್ ವಿ ಸುರೇಶ್ ಕೆ ಜಿ ಶಶಿಧರ್ ವಿ ಶ್ರೀಧರ್ ನಿರೂಪಿಸಿದರು. ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ನೆರವೇರಿತು.

Klive Special News ಹಾಸ್ಯ ಅನ್ಯರ ಲೇವಡಿಗೆ ಮೀಸಲಾಗದೇ ಆತ್ಮ ವಿಮರ್ಶೆಯ ಸಾಧನವಾಗಬೇಕು

0

Klive Special News ಜೀವನೋತ್ಸಾಹಕ್ಕೆ ಅವಶ್ಯವಾದ ಹಾಸ್ಯವು ಅನ್ಯರ ಲೇವಡಿಗೆ ಮೀಸಲಾಗದೆ ಆತ್ಮ ವಿಮರ್ಶೆಗೂ ಸಾಧನವಾದಾಗ ಅದು ಸದಭಿ ರುಚಿಯ ಹಾಸ್ಯವೆನ್ನಲಾಗುತ್ತದೆ. ಇಂತಹ ಹಾಸ್ಯದ ಕೊಡುಕೊಳ್ಳುವಿಕೆಯಿಂದ ಮಾನಸಿಕ ಆರೋಗ್ಯ ಉತ್ತಮವಾಗುತ್ತದೆ. ಮಾನಸಿಕ ಆರೋಗ್ಯ ಉತ್ತಮವಾದಾಗ ದೈಹಿಕ ಸ್ವಾಸ್ಥ್ಯವೂ ಸುಸ್ಥಿತಿಯಲ್ಲಿರುತ್ತದೆ. ಹೀಗಾಗಿ ಹಾಸ್ಯ ಮತ್ತು ಆರೋಗ್ಯ ಇವು ಒಂದು ನಾಣ್ಯದ ಎರಡು ಮುಖಗಳು ಎನ್ನಬಹುದು.

ಹಾಸ್ಯವು ಕೇವಲ ನಗಿಸುವುದಕ್ಕಷ್ಟೇ ಎಂದು ತೀರ್ಮಾನಿಸಿದಾಗ ಇನ್ನೊಬ್ಬರ ಭಾವನೆ ವಿಶ್ವಾಸ ನಂಬಿಕೆ ಗೌರವ ಸ್ನೇಹ ಸಂಬಂಧಗಳಿಗೆ ಧಕ್ಕೆ ಬರಲೂಬಹುದು, ಹೀಗಾಗದಂತೆ ತುಸು ಎಚ್ಚರಿಕೆಯಿಂದ ಹಾಸ್ಯವನ್ನು ಹೇಳುವುದನ್ನು ಕೇಳುವುದನ್ನು ಹಾಸ್ಯ ಪ್ರಜ್ಞೆ ಅನ್ನಬಹುದಾಗಿದೆ. ಸದಭಿರುಚಿಯ ಹಾಸ್ಯವನ್ನು ಕೇಳಿದಾಗ ಓದಿದಾಗ ನೋಡಿದಾಗ ಮುಖದಲ್ಲಿ ನಗು ಹೊಮ್ಮುತ್ತದೆ, ಇಂತಹ ನಗುವು ಮುಖದ ಎಲ್ಲ ಸ್ನಾಯುಗಳಿಗೂ ಉತ್ತಮ ವ್ಯಾಯಾಮವಾಗುತ್ತದೆ.

ಹಾಸ್ಯದಿಂದ ಮನಸ್ಸು ಮುದಗೊಂಡಾಗ ದೇಹದಲ್ಲಿ ಉಂಟಾಗುವ ಅಥವಾ ಉತ್ಪತ್ತಿಯಾಗುವ ಎಂಡಾರ್ಫಿನ್ ಗ್ರಂಥಿಯು ನಮ್ಮ ದೇಹದ ಹಾಗೂ ಮನಸ್ಸಿನ ಅನೇಕ ಕಾಯಿಲೆಗಳನ್ನು ದೂರ ಮಾಡಬಲ್ಲದು. ಇದನ್ನೇ ‘LAUGHTER IS BEST BEST MEDICINE’ ಅಂದರೆ ‘ನಗುವು ದಿವ್ಯೌಷಧಿ’ ಎಂದು ಹೇಳಲಾಗುತ್ತದೆ.

Klive Special News ಹಾಸ್ಯವು ದಡ್ಡತನದ ಪರಮಾವಧಿಯಿಂದಲೂ ಸೃಷ್ಟಿಯಾಗುತ್ತದೆ ಬುದ್ಧಿವಂತಿಕೆಯ ಪರಮಾವಧಿಯಲ್ಲೂ ಸೃಷ್ಟಿಯಾಗುತ್ತದೆ, ಬುದ್ಧಿವಂತಿಕೆಯಿಂದ ಬರುವ ಹಾಸ್ಯಗಳು ಅನೇಕ ಬಾರಿ ನಮ್ಮ ಬದುಕಿನ ಸವಾಲುಗಳಿಗೆ ಪರಿಹಾರದಂತೆಯೂ ಉಪಯುಕ್ತವಾಗುತ್ತದೆ. ದುರ್ದೈವ ವಶಾತ್ ಇಂದಿನ ಬಹುತೇಕ ಪ್ರಸಿದ್ಧ ಹಾಸ್ಯ ಪ್ರಸ್ತುತಿಗಾರರು ಹರಟೆಗಾರರು ಕಳಪೆ ಗುಣಮಟ್ಟದ ಹಾಸ್ಯದಿಂದಲೇ ಜನರಂಜನೆ ನೀಡುತ್ತಿರುವುದು ಆತಂಕದ ವಿಷಯವಾಗಿದೆ.

ನಿತ್ಯ ಜೀವನದ ನಮ್ಮ ನಡುವಳಿಕೆಗಳನ್ನೇ ನಾವು ವಿಮರ್ಶಿಸಿಕೊಂಡಾಗ ನಮ್ಮ ಬಗ್ಗೆ ನಮಗೆ ನಗು ಬರುತ್ತದೆ ಇದು ನಮ್ಮನ್ನು ನಾವು ತಿದ್ದಿಕೊಳ್ಳಲು ಸಹಕಾರಿಯಾಗುತ್ತದೆ.

  • ಡಾ. ಎಚ್. ಬಿ. ಮಂಜುನಾಥ ಹಿರಿಯ ಪತ್ರಕರ್ತರು

Rotary Club Shivamogga ಅಭಿವೃದ್ದಿ ಪರ ಕೆಲಸ ಮಾಡಿದಾಗ ಮಾತ್ರ ಸಂಘ ಸಂಸ್ಥೆಗಳಿಗೆ ಸಾರ್ವಜನಿಕ ಪ್ರಶಂಸೆ, ಮನ್ನಣೆ.- ಕಿರಣ್ ಕಿಮಾರ್

0

Rotary Club Shivamogga ಸಂಘ ಸಂಸ್ಥೆಗಳಲ್ಲಿ ಸದಾಕಾಲ ಚಟುವಟಿಕೆಯಿಂದ ಇರುವ ಜತೆಯಲ್ಲಿ ಉತ್ತಮ ಕೆಲಸಗಳನ್ನು ಮಾಡಬೇಕು ಎಂದು ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಕಿರಣ್ ಕುಮಾರ್ ಹೇಳಿದರು.

ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ಸ್ಥಳೀಯ ಸಂಘ ಸಂಸ್ಥೆಗಳ ಚುನಾವಣೆಯಲ್ಲಿ ಗೆದ್ದ ಕ್ಲಬ್ ಸದಸ್ಯರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಜನತೆಗೆ ಸಹಾಯ ಸಹಕಾರ ನೀಡಬೇಕು. ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡಾಗ ಸಂಸ್ಥೆಗಳು ಸಾರ್ವಜನಿಕವಾಗಿ ಗುರುತಿಸಿಕೊಂಡು ಪ್ರಶಂಸೆಗೆ ಪಾತ್ರವಾಗಬಲ್ಲವು. ಸಂಘ ಸಂಸ್ಥೆಗಳು ಆಯಾ ಪ್ರದೇಶಗಳ ಬೆಳವಣಿಗೆಗೆ ಗುಣಾತ್ಮಕವಾದ ನಿರಂತರ ಪ್ರಯತ್ನ ಮಾಡುತ್ತಿರುತ್ತವೆ ಎಂದು ತಿಳಿಸಿದರು.

ಸಂಘ ಸಂಸ್ಥೆಗಳು ರಾಜಕೀಯ ಹೊರತಾಗಿ ಸೇವಾ ಮನೋಭಾವದಿಂದ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದೆ. ನಮ್ಮ ಕ್ಲಬ್ ಹೆಮ್ಮೆಯ ಸದಸ್ಯರಾದ ಅರುಣ್ ಕುಮಾರ್, ಚೂಡಾಮಣಿ ಪವಾರ್, ರವಿ ಕೋಟೊಜಿ ಹಾಗೂ ಗಿರೀಶ್ ಅವರಿಗೆ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಶುಭಹಾರೈಸುತ್ತದೆ ಎಂದರು.

Rotary Club Shivamogga ಅರುಣ್ ಕುಮಾರ್ ಕಾಸ್ಮೋ ಕ್ಲಬ್ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಕ್ಷತ್ರಿಯ ಮರಾಠ ಪತ್ತಿನ ಸಹಕಾರ ಸಂಘದಲ್ಲಿ ಚೂಡಾಮಣಿ ಪವರ್ ಹಾಗೂ ರವಿ ಕೋಟೊಜಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಕಾಳಿಕಾ ಪರಮೇಶ್ವರಿ ಕೋಆಪರೇಟಿವ್ ಸೊಸೈಟಿ ನಿರ್ದೇಶಕರಾಗಿ ಗಿರೀಶ್ ಆಯ್ಕೆಯಾಗಿದ್ದಾರೆ.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಕಾರ್ಯದರ್ಶಿ ಈಶ್ವರ್, ಆನಂದ್, ಧರ್ಮೇಂದ್ರ ಸಿಂಗ್, ಚಂದ್ರು ಜೆಪಿ, ರಮೇಶ್, ಜಯಶೀಲ ಶೆಟ್ಟಿ, ಬಲರಾಮ್, ಮಿಥುನ್ ಜಗದಾಳೆ, ನಿರಂಜನ್, ಧನಂಜಯ್, ನಟರಾಜ್, ಭರತ್, ರಾಜಶ್ರೀ ಬಸವರಾಜ್, ದೀಪಾ ಶೆಟ್ಟಿ ಹಾಗೂ ಕ್ಲಬ್ಬಿನ ಎಲ್ಲ ಸದಸ್ಯರು ಭಾಗವಹಿಸಿದ್ದರು. ಚುನಾವಣೆಯಲ್ಲಿ ಗೆದ್ದ ಸದಸ್ಯರುಗಳಿಗೆ ಅಭಿನಂದನೆ ತಿಳಿಸಿದರು.

Shankara Eye Hospital ಕಣ್ಣಿನ ಕ್ಷೇಮದ ಬಗ್ಗೆ ಜನಜಾಗೃತಿ ಮೂಡಿಸಿದ ಶಂಕರ್ ಕಣ್ಣಿನ ಆಸ್ಪತ್ರೆಯ”ದೃಷ್ಟಿರಥಯಾತ್ರೆ”

0

Shankara Eye Hospital “ದೃಷ್ಟಿ ರಥ ಯಾತ್ರೆ” ಯನ್ನು ಶಂಕರ ಕಣ್ಣಿನ ಆಸ್ಪತ್ರೆ ಮತ್ತು ACOIN (ಅಸೋಸಿಯೇಶನ್‌ ಆಫ್‌ ಕಮ್ಯೂನಿಟಿ ಆಪ್ತಲ್‌ ಮೋಲೋಜಿಸ್ಟ್ಸ್‌ ಆಫ್‌ ಇಂಡಿಯಾ) ನ ಸಹಯೋಗದೊಂದಿಗೆ ಕೈಗೊಂಡಿದ್ದು, ಡಾ.ಸ್ವಪನ್ ಕುಮಾರ್‌ ಸಮಂತ ರವರು ದೇಶಾದ್ಯಂತ ನೇತ್ರ ಜಾಗೃತಿ ಜಾಥಾವನ್ನು ಭಾರತದಾದ್ಯಂತ ಕೈಗೊಂಡು, ಪ್ರತಿ ಜಿಲ್ಲೆಯಲ್ಲಿ ನೇತ್ರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಮ್ಮ ಶಿವಮೊಗ್ಗದಲ್ಲಿ 101 ನೇ ಜಾಥಾವನ್ನು ಆಯೋಜಿಸಿತ್ತು.
ಈ ಕಾರ್ಯಕ್ರಮದಲ್ಲಿ ಮೊದಲನೇಯದಾಗಿ ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ACOIN ಸಂಸ್ಥೆಯ ಕಾರ್ಯ ವೈಕರಿಯನ್ನು ಹಾಗೂ ಇಂದಿನ ಕಾರ್ಯಯೋಜನೆಯನ್ನು ರೂಪಿಸಲಾಯಿತು. ಶ್ರೀಯುತರು ತಮ್ಮ ಕಾರ್ಯವಿಧಾನವನ್ನು ಹಾಗೂ ಗುರಿಗಳನ್ನು ಸಂಸ್ಥೆಯೊಂದಿಗೆ ಹಂಚಿಕೊಂಡರು.
Shankara Eye Hospital ಡಾ.ಸ್ವಪನ್ ಕುಮಾರ್‌ ಸಮಂತ, ಡಾ|| ಮಲ್ಲಿಕಾರ್ಜುನ್‌ ಹಾಗೂ ಡಾ|| ಮಹೇಶ್‌ ಅವರು ಜಾಥಾಗೆ ಚಾಲನೆ ನೀಡಿದರು, ಜಾಥಾ ಶಂಕರ ಕಣ್ಣಿನ ಆಸ್ಪತ್ರೆಯಿಂದ ಆರಂಭವಾಗಿ ನಗರದ ಖಾಸಗಿ ಬಸ್‌ ನಿಲ್ದಾಣ ಹಾಗೂ ನಗರದ ಪ್ರಮುಖ ರಸ್ತೆಗಳಲ್ಲಿ ನೇತ್ರ ಜಾಗೃತಿಯ ಅರಿವನ್ನು ಧ್ವನಿವರ್ಧಕಗಳ ಮೂಲಕ ಸಂದೇಶವನ್ನು ಶ್ರೀಯುತರು ತಿಳಿಸುತ್ತಾ ಸಾಗಿದರು. ನಂತರ ಸಂಸ್ಕೃತ ಹಳ್ಳಿ ಮತ್ತೂರಿಗೆ ತಲುಪಿ ಶಾರದಾ ವಿಲಾಸ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಕಣ್ಣಿನ ಆರೈಕೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ನೇತ್ರದಾನದ ಮಹತ್ವ, ಮಕ್ಕಳ ಕಣ್ಣಿನ ಆರೈಕೆ, ಉತ್ತಮ ಆಹಾರ ಪದ್ದತಿ, ಸಕ್ಕರೆ ಕಾಯಿಲೆಯಿಂದಾಗುವ ತೊಂದರೆಗಳು, ಕಣ್ಣಿನ ಪೊರೆ ಹಾಗೂ ನರ ಪರೀಕ್ಷೆ ಮಹತ್ವ, ಸುರಕ್ಷಿತ ಕಣ್ಣಿನ ಆರೈಕೆಯ ಸೂತ್ರಗಳು, ದೃಷ್ಟಿ ದೋಷ ಪರಿಹಾರ ಮುಂತಾದ ಮಹತ್ವದ ವಿಷಯಗಳ ಬಗ್ಗೆ ಡಾ.ಸ್ವಪನ್ ಕುಮಾರ್‌ ಸಮಂತರವರು ತಿಳಿಸಿದರು.
ಕಾರ್ಯಕ್ರಮದಲ್ಲಿ ACOIN ಸಂಸ್ಥೆಯ ಮುಖ್ಯಸ್ಥರಾದ ಡಾ.ಸ್ವಪನ್ ಕುಮಾರ್‌ ಸಮಂತ, ಶಂಕರ ಕಣ್ಣಿನ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾ||ಮಹೇಶ್‌ ಎಸ್‌, ಹಿರಿಯ ವೈದ್ಯರಾದ ಡಾ||ಮಲ್ಲಿಕಾರ್ಜುನ, ಡಾ||ರವಿಶಂಕರ್‌, ಡಾ||ಕವಿತಾ ಹಾಗೂ ಮುಖ್ಯ ಆಡಳಿತಾಧಿಕಾರಿಗಳಾದ ಶ್ರೀಮತಿ ಗಾಯತ್ರಿ ಶಾಂತರಾಂ & ಶ್ರೀಮತಿ ಅನಿತಾ ಹಾಗೂ ವೈದ್ಯರು ಮತ್ತು ಸಿಬ್ಬಂದಿಗಳು ಹಾಗೂ ಶಾಲೆಯ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

Youth Hostel Association ಒತ್ತಡ ಜೀವನದಿಂದ ವಿಶ್ರಾಂತಿ ಪಡೆಯಲು ಚಾರಣ ಪ್ರವಾಸ ಸಹಕಾರಿ- ಎನ್.ಗೋಪಿನಾಥ್

0

Youth Hostel Association ಚಾರಣದಲ್ಲಿ ಪಾಲ್ಗೊಳ್ಳುವುದರಿಂದ ಆತ್ಮವಿಶ್ವಾಸ ವೃದ್ಧಿಸುವ ಜತೆಯಲ್ಲಿ ಮಾನಸಿಕ ಸಾಮಾರ್ಥ್ಯ ಹೆಚ್ಚಾಗುತ್ತದೆ ಎಂದು ಯೂತ್ ಹಾಸ್ಟೆಲ್ ತರುಣೋದಯ ಘಟಕದ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.

ಶಿವಮೊಗ್ಗ ನಗರದಲ್ಲಿ ಯೂತ್ ಹಾಸ್ಟೆಲ್‌ನಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತಿ ಡಾ. ಗುರುಪಾದಪ್ಪ ದಂಪತಿಯನ್ನು ಸನ್ಮಾನಿಸಿ ಮಾತನಾಡಿ, ಒತ್ತಡದ ಜೀವನಶೈಲಿಯಲ್ಲಿ ಎಲ್ಲರೂ ಕೆಲಸ ಮಾಡುತ್ತಿದ್ದು, ವಿಶ್ರಾಂತಿ ಪಡೆಯಲು ಚಾರಣ ಪ್ರವಾಸ ತುಂಬಾ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ವಾಗೇಶ್ ಅವರು ಚೇರ್ಮನ್ ಆಗಿ ಅಧಿಕಾರ ವಹಿಸಿಕೊಂಡ ನಂತರ ನಮ್ಮ ತರುಣೋದಯ ಘಟಕ ಸದಸ್ಯತ್ವದಲ್ಲಿ ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿದೆ. ರಾಷ್ಟ್ರಮಟ್ಟದ ಚಾರಣಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕಳಿಸಲು ಸಾಧ್ಯವಾಗಿರುವುದು ಈ ರೀತಿಯ ಚಲನಶೀಲ ಸದಸ್ಯರು ಕಾರಣ. ಇದೇ ರೀತಿ ಇನ್ನು ಹೆಚ್ಚಿನ ಸದಸ್ಯರು ತಮ್ಮೊಂದಿಗೆ ಇತರರನ್ನು ಕರೆದುಕೊಂಡು ಬಂದು ರಾಜ್ಯದಲ್ಲೇ ನಮ್ಮ ಘಟಕ ಪ್ರಥಮ ಸ್ಥಾನ ಗಳಿಸಬೇಕು ಎಂದರು.
ಯೂತ್ ಹಾಸ್ಟೆಲ್ಸ್ ರಾಜ್ಯ ಮಾಜಿ ಉಪಾಧ್ಯಕ್ಷ ವಿಜಯಕುಮಾರ್ ಮಾತನಾಡಿ, ಉತ್ತಮ ಆರೋಗ್ಯಕ್ಕೆ ಚಾರಣ ಅತ್ಯುತ್ತಮ ಎಂದು ವೈದ್ಯರೂ ಸಹ ಭಾಗವಹಿಸುತ್ತಿದ್ದಾರೆ. ಇವರ ಸಮಾಜಮುಖಿ ಕಾರ್ಯ ನಿವೃತಿ ನಂತರವು ಮುಂದುವರಿಯಲಿ ಎಂದು ಆಶಿಸಿದರು.

ಸನ್ಮಾನ ಸ್ವೀಕರಿಸಿದ ಡಾ. ಗುರುಪಾದಪ್ಪ ಮಾತನಾಡಿ, ಕಾರ್ಯ ನಿಮಿತ ಶಿವಮೊಗ್ಗಕ್ಕೆ ಬಂದಾಗ, ಚಾರಣದ ಆಸಕ್ತಿಯಿದ್ದ ನಮಗೆ ತರುಣೋದಯ ಘಟಕದ ಪರಿಚಯವಾಗಿ, ಸದಸ್ಯತ್ವ ಪಡೆದು ಇವರು ಆಯೋಜಿಸುವ ಕಾರ್ಯಕ್ರಮ ಹಾಗೂ ಇವರು ತೆಗೆದುಕೊಳ್ಳುವ ಜವಾಬ್ದಾರಿ ಉತ್ತಮ ಆಹಾರ, ಸ್ನೇಹ ಬಾಂಧವ್ಯಗಳನ್ನು ಕಂಡು ಮನಸೋತು, ಸ್ನೇಹಿತರಿಗೆ, ಸಹೋದ್ಯೋಗಿಗಳಿಗೆ ತಿಳಿಸಿದಾಗ ಅವರು ಸಹ ಸದಸ್ಯತ್ವ ಪಡೆದಿದ್ದಾರೆ. ನಾವು ಮಾತ್ರ ಸಂತೋಷ ಪಡುವುದರ ಬದಲು, ನಮ್ಮ ಪರಿಚಿತರೊಂದಿಗೆ, ಹೊಸಬರನ್ನು ಪರಿಚಯ ಮಾಡಿಕೊಂಡು, ಅವರೊಂದಿಗೆ ಚಾರಣ ಮಾಡುವ ಅನುಭವ ಅನನ್ಯ. ಎಲ್ಲರೂ ಆರೋಗ್ಯ ದೃಢತೆಗೆ, ಮನಃ ಸಂತೋಷಕ್ಕೆ ತಪ್ಪದೆ ಚಾರಣದಲ್ಲಿ ಭಾಗವಹಿಸಬೇಕು ಎಂದರು.

Youth Hostel Association ಭಾರತಿ ಡಾ. ಗುರುಪಾದಪ್ಪ ದಂಪತಿ ಚಾರಣದಲ್ಲಿ ತಾವು ಪಾಲ್ಗೊಳ್ಳುವ ಜತೆಯಲ್ಲಿ ಸಂಬಂಧಿ, ಸ್ನೇಹಿತರು, ಸಹೋದ್ಯೋಗಿಗಳಿಗೂ ಭಾಗವಹಿಸುವಂತೆ ಪ್ರೊತ್ಸಾಹಿಸುವ ಕೆಲಸ ಮಾಡುತ್ತಿದ್ದು, ಸ್ಥಳೀಯ, ರಾಜ್ಯ, ರಾಷ್ಟ್ರೀಯ ಚಾರಣಗಳಿಗೆ ಕರೆದುಕೊಂಡು ಹೋಗುತ್ತಾರೆ. ವಯೋನಿವೃತಿ ಸಂದರ್ಭದಲ್ಲಿ ಯೂತ್ ಹಾಸ್ಟೆಲ್‌ನಿಂದ ವಿಶೇಷವಾಗಿ ಸನ್ಮಾನಿಸಲಾಯಿತು.
ಮಮತಾ ಪ್ರಾರ್ಥಿಸಿದರು.

ಚೇರ್ಮನ್ ಎಸ್.ಎಸ್.ವಾಗೇಶ್ ಸ್ವಾಗತಿಸಿದರು. ಕಾರ್ಯದರ್ಶಿ ಸುರೇಶ್ ಕುಮಾರ್ ನಿರೂಪಿಸಿದರು. ಮಲ್ಲಿಕಾರ್ಜುನ್ ಕಾನೂರು ವಂದಿಸಿದರು. ರವಿಕುಮಾರ್, ನಾಗಲಾಂಭಿಕ, ಬಿಂದು ವಿಜಯಕುಮಾರ್, ವಿಜಯೇಂದ್ರ ಇತರರಿದ್ದರು.