Mathura Paradise ನಾಡು ಕಂಡ ಅತ್ಯಂತ ಶ್ರೇಷ್ಠ ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಕವನಗಳು ಇಂದಿಗೂ ಪ್ರಸ್ತುತ. ಅವರ ಕವನಗಳು ಅಂತರಾಷ್ಟ್ರೀಯ ಮಟ್ಟದಲ್ಲೂ ಪ್ರಸಿದ್ಧಿಯಾಗಿವೆ ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾ ಘಟಕದ ಗೌರವಾಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.
ಮಥುರಾ ಪ್ಯಾರಾಡೈಸ್ ಸಭಾಂಗಣದಲ್ಲಿ ಚಿರಂತರ ಯೋಗ ಮತ್ತು ಸಂಗೀತ ಟ್ರಸ್ಟ್ ಶಿವಮೊಗ್ಗ, ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾ, ತಾಲೂಕು, ಹೋಬಳಿ ಘಟಕದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಗಾನಮಲ್ಲಿಗೆ ಕವಿ ಕೆ.ಎಸ್.ನರಸಿಂಹಸ್ವಾಮಿ ವಿರಚಿತ ಗೀತ ಗಾಯನ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿ, ನರಸಿಂಹಸ್ವಾಮಿ ಅವರ ಕವನಗಳಲ್ಲಿ ಜೀವನ ಮೌಲ್ಯಗಳನ್ನು ಕಾಣಬಹುದಾಗಿದೆ. ಜೀವನದ ಅರ್ಥವನ್ನು ಸರಳವಾಗಿ ಕವನಗಳಲ್ಲಿ ವಿವರಿಸುತ್ತಿದ್ದರು ಎಂದು ತಿಳಿಸಿದರು.
Mathura Paradise ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷೆ ಶಾಂತಾ ಶೆಟ್ಟಿ ಮಾತನಾಡಿ, ಸುಗಮ ಸಂಗೀತ ಕ್ಷೇತ್ರಕ್ಕೆ ಕೆ.ಎಸ್..ನರಸಿಂಹಸ್ವಾಮಿ ಕೊಡುಗೆ ಅಪಾರ. ಕವಿಯ ಭಾವ ಅರಿತುಕೊಂಡು, ಸಾಹಿತ್ಯವನ್ನು ಅರ್ಥ ಮಾಡಿಕೊಂಡು ಹಾಡಬೇಕು. ಗಾಯನವನ್ನು ಗುರುಮುಖೇನ ಕಲಿಯಬೇಕು. ಸಾಧನೆಯ ಹಾದಿ ಸುಗಮವಾಗುತ್ತದೆ ಎಂದು ತಿಳಿಸಿದರು.
ಕೆಎಸ್‌ಎನ್ ಟ್ರಸ್ಟ್ ಬೆಂಗಳೂರು ವತಿಯಿಂದ ಮುಂದಿನ ದಿನಗಳಲ್ಲಿ ಕುವೆಂಪು ರಂಗಮಂದಿರದಲ್ಲಿ ಒಂದು ದಿನದ ಗೀತ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ನಾಡಿನ ಸುಪ್ರಸಿದ್ಧ ಹಾಡುಗಾರರನ್ನು ಆಹ್ವಾನಿಸಲಾಗುವುದು ಎಂದು ಮಾಹಿತಿ ನೀಡಿದರು.
ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾ ಪ್ರಧಾನ ಸಂಚಾಲಕ ಭದ್ರಾವತಿ ವಾಸು, ಸಾಂಸ್ಕೃತಿಕ ಸಂಚಾಲಕರಾದ ಉಮಾ ದಿಲೀಪ್, ರಮೇಶ್ ಮಲ್ಲಾಪುರ, ಖಜಾಂಚಿ ಜಿ.ವಿಜಯಕುಮಾರ್, ಮಥುರಾ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.
Mathura Paradise ಕೆ.ಎಸ್.ನ.ಅವರ ಕವಿತೆಗಳಲ್ಲಿ ಜೀವನಮೌಲ್ಯ ಕಾಣಬಹುದು- ಎನ್.ಗೋಪಿನಾಥ್
Sringeri Shivaganga Mutt ಸ್ತೋತ್ರ ತ್ರಿವೇಣಿಯ ಮಹಾಸಮರ್ಪಣೆ. ಸಾರ್ಥಕ ಸುವರ್ಣ ಭಾರತಿ ಲೇ: ಪ್ರಭಾಕರ ಕಾರಂತ.
Sringeri Shivaganga Mutt ಶೃಂಗೇರಿಯಲ್ಲಿ ಸುವರ್ಣ ಸೃಷ್ಟಿಸ್ತವ ಸ್ತೋತ್ರ ತ್ರಿವೇಣಿ ಮಹಾಸಂಗಮ ಒಂದು ಐತಿಹಾಸಿಕ ಕಾರ್ಯಕ್ರಮವಾಗಿ ದಾಖಲಾಯಿತು. ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸನ್ನಿಧಾನ ಸನ್ಯಾಸ ಸ್ವೀಕರಿಸಿ ಐವತ್ತು ವರ್ಷ ಪೂರ್ಣವಾದಾಗ ಚಿಕ್ಕಮಗಳೂರು ಜಿಲ್ಲೆಯ ಭಕ್ತರು ಐವತ್ತು ಸಹಸ್ರ ಸಂಖ್ಯೆಯಲ್ಲಿ ಒಂದಾಗಿ ಏಕ ಕಂಠದಿಂದ ಶಾಂಕರ ವಿರಚಿತ ಸ್ತೋತ್ರ ಪಠಿಸಿದರು. ವಿಶೇಷ ಎಂದರೆ ಇದರಲ್ಲಿ ಮಾತೆಯರೇ ಅಧಿಕ ಸಂಖ್ಯೆಯಲ್ಲಿದ್ದರು.ಕಳೆದ ಒಂದು ದಶಕದಿಂದ ಯಾವುದೇ ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳದ ಮತ್ತು ಅನುಗ್ರಹ ಆಶೀರ್ವಚನ ನೀಡದ ಶ್ರೀ ಭಾರತೀತೀರ್ಥರು ಈ ಸಭೆಗಾದರೂ ಆಗಮಿಸಿ ಭಕ್ತರನ್ನು ಅನುಗ್ರಹಿಸುತ್ತಾರಾ ಎಂಬ ಪ್ರಶ್ನೆಯಂತೂ ಇದ್ದೇ ಇತ್ತು. ಕಾರ್ಯಕ್ರಮಕ್ಕೆ ಮೊದಲು ಮಠದ ಪಾರಂಪರಿಕ ಗೌರವಗಳೊಂದಿಗೆ ರಾಜ್ಯದ ಒಂಬತ್ತು ಯತಿಗಳೊಂದಿಗೆ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸನ್ನಿಧಾನ ಮಾತ್ರ ಆಗಮಿಸಿದಾಗ ಈ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿತ್ತು. ಆದರೆ ಕೆಲವೇ ಕ್ಷಣದಲ್ಲಿ ತೆರೆದ ವಾಹನದಲ್ಲಿ ಅಲ್ಲಿಗೆ ಶ್ರೀ ಭಾರತೀತೀರ್ಥರ ಆಗಮನವಾಯಿತು. ಅವರು ವೇದಿಕೆಯತ್ತ ಉಳಿದವರೊಂದಿಗೆ ಚಿತ್ತೈಸಿದರು. ಮಠದ ಪರಿಚಾರಕರ ಕೈಯಲ್ಲಿದ್ದ ಶ್ವೇತ ಛತ್ತರವನ್ನು ಆಗ ಮಠಾದಿಪತಿಗಳಿಬ್ಬರು ತೆಗೆದುಕೊಂಡು ತಾವೇ ಹಿಡಿಯುವ ಮೂಲಕ ಶ್ರೇಷ್ಠ ಗುರುಗಳಿಗೆ ಭಕ್ತಿ ಸಮರ್ಪಿಸಿದರು. ಜಗದ್ಗುರುಗಳಿಂದ ದೀಪ ಪ್ರಜ್ವಲನ ನಡೆಯಿತು. ಎಲ್ಲ ಸ್ವಾಮಿಗಳೂ ಮತ್ತೊಮ್ಮೆ ವೇದಿಕೆಯಲ್ಲೇ ಜಗದ್ಗುರುಗಳಿಗೆ ಪ್ರಣಾಮ ಸಲ್ಲಿಸಿದರು.
ಸೇರಿದ್ದ ಭಕ್ತರಿಗೆ ಜಗದ್ಗುರುಗಳೇ ಶಿವ ಪಂಚಾಕ್ಷರ ನಕ್ಷತ್ರಮಾಲಾ ಸ್ತೋತ್ರ ಪಠಣ ಆರಂಭಿಸಿ ಅನುಗ್ರಹಿಸಿದರು. ಸ್ತೋತ್ರ ಮಾಲಾ ಮುಗಿಯುತ್ತಿದ್ದಂತೆ ಜಗದ್ಗುರುಗಳ ಆಶೀರ್ವಚನಕ್ಕೆ ಕೋರಲಾಯಿತು. ತಮ್ಮ ದಶಕಗಳ ಪದ್ದತಿಯ ಹೊರತಾಗಿ ಜಗದ್ಗುರುಗಳು ಮಾತು ಆರಂಭಿಸಿದರು.ಅವರು ಹೇಳಿದ್ದು ಎರಡೇ ಮಾತು.”ಸನ್ಯಾಸ ಸ್ವೀಕರಿಸಿದ ಐವತ್ತನೇ ವರ್ಷ ಸಂಧರ್ಭ ಶ್ರೀ ಶಂಕರರು ರಚಿಸಿದ ಸ್ತೋತ್ರ ಸಮರ್ಪಣೆ ಶಿಷ್ಯ ಸ್ವಾಮಿಗಳ ಪ್ರೇರಣೆಯಿಂದ ನಡೆಯುತ್ತಿರುವುದು ನಮಗೆ ಸಂತೋಷ ಸಂದಿದೆ. ಎಲ್ಲರಿಗೂ ಪರಿಪೂರ್ಣ ಆಶೀರ್ವಾದಗಳು,ಈ ಸಭೆಯನ್ನು ಶಿಷ್ಯ ಸ್ವಾಮಿಗಳು ಮುಂದುವರೆಸುತ್ತಾರೆ ಎಂದು ಹೇಳಿ ತಾವು ಕುಳಿತ ಸುವರ್ಣ ಸಿಂಹಾಸನದಿಂದ ಕೆಳಗಿಳಿದರು. ಸೇರಿದ್ದ ಜನ ಸಮುದ್ರಕ್ಕೆ ಅಭಯ ಹಸ್ತ ತೋರುತ್ತಾ ಬಂದಂತೆ ನಿರ್ಗಮಿಸಿ ಬಿಟ್ಟರು. ಅವರೆಂದೂ ಈ ಸುವರ್ಣ ಸಿಂಹಾಸನದಲ್ಲಿ ಕುಳಿತು ಇಷ್ಟಾದರೂ ಮಾತನಾಡಿರಲಿಲ್ಲ. ತಮ್ಮ ಪ್ರಿಯ ಭಕ್ತರು ನೀಡಿದ ಈ ಸುವರ್ಣ ಸಿಂಹಾಸನವನ್ನು ನವರಾತ್ರಿಯ ದರ್ಬಾರಿನಲ್ಲಿ ಅವರು ಬಳಸುತ್ತಿದ್ದುದು ಬಿಟ್ಟು ಬೇರೆಲ್ಲೂ ಬಳಸಿದವರೇ ಅಲ್ಲ. ಅದರ ಮೇಲೆ ಅವರ ಹೊರತಾಗಿ ಈ ವರೆಗೂ ಯಾರೂ ಕುಳಿತಿಲ್ಲ. ನವರಾತ್ರಿಯ ದರ್ಬಾರಿನಲ್ಲಿ ಅಮ್ಮನವರ ಎದುರು ಕುಳಿತು ಅವರು ಜಪ ನಿರತರಾಗಿರುತ್ತಾರೇ ಹೊರತು ಮಾತನಾಡುವುದೇ ಇಲ್ಲ. ಭಕ್ತರಿಗಾಗಿ ಇಂದು ಕೆಲ ಕ್ಷಣಕ್ಕಾದರೂ ಅದರ ಮೇಲೆ ಕುಳಿತು ಒಂದೆರಡಾದರೂ ಮಾತನಾಡಿ ಅವರು ಕರುಣೆ ತೋರಿದರು.
ಈ ಸಂಗತಿಯನ್ನು ತಮ್ಮ ಆಶೀರ್ವಚನದಲ್ಲಿ ಶ್ರೀ ವಿಧುಶೇಖರ ಭಾರತಿಯವರು ಪ್ರಸ್ತಾಪಿಸಿದರು ತಮ್ಮ ಗುರುಗಳು ಅನೇಕ ವರ್ಷಗಳ ನಂತರ ಈ ಸುವರ್ಣ ಸಿಂಹಾಸನ ಏರಿದ್ದಲ್ಲದೇ ಪ್ರಥಮ ಬಾರಿ ಅಲ್ಲಿ ಕುಳಿತೇ ಎರಡು ಮಾತನ್ನಾದರೂ ಆಡಿದರು. ಗುರುಗಳ ಚರಿತ್ರೆ,ಜೀವನ ಶೈಲಿ,ಅವರ ಆಚರಣೆ ಎಲ್ಲವೂ ನಮಗೆಲ್ಲಾ ಪಾಠ.ಮಠದ ಎಲ್ಲಾ ಸಮಸ್ತ ಹೊಣೆಯ ನಡುವೆಯೂ ಅವರು ನ್ಯಾಯ,ಮೀಮಾಂಸ,ವೇದಾಂತ,ಹೀಗೆ ಸಕಲ ಶಾಸ್ತ್ರಗಳಲ್ಲೂ ಅದ್ವಿತೀಯ ಪಾಂಡಿತ್ಯ ಸಿದ್ಧಿಸಿಕೊಂಡಿದ್ದಾರೆ.ಭರತವರ್ಷದ ಪ್ರಖಾಂಡ ಪಂಡಿತರೆನಿಸಿದವರು,ಶಾಸ್ತ್ರ ಚಿಂತನೆಯಲ್ಲೇ ಇಡೀ ಬದುಕು ಕಳೆದವರು ಗುರುಗಳ ಶಾಸ್ತ್ರ ಪಾಂಡಿತ್ಯಕ್ಕೆ ಶರಣಾಗುತ್ತಾರೆ.
ನಮ್ಮನ್ನು ಕಾಣುವ ಅನೇಕ ಭಕ್ತರು “ಗುರುಗಳು ಚೆನ್ನಾಗಿದ್ದಾರಾ “ಎಂದು ವಿಚಾರಿಸುವುದಿದೆ. ನಾವದಕ್ಕೆ ಅವರ ಅನುಗ್ರಹದಿಂದ ನಾವೆಲ್ಲಾ ಚೆನ್ನಾಗಿದ್ದೇವೆ ಎಂದು ಉತ್ತರಿಸುತ್ತೇವೆ. ತಮ್ಮ ಶಿಷ್ಯ ಕೋಠಿಯ ಒಳಿತಿಗಾಗೇ ಗುರುಗಳು ಸದಾ ಪ್ರಾರ್ಥಿಸುತ್ತಾರೆ.ಇಂದು ಪರೀಕ್ಷೆಯ ಸಮಯ ಹದಿನೈದು ಸಾವಿರ ಶಾಲಾ ಮಕ್ಕಳು ಇಲ್ಲಿ ಬಂದಿದ್ದಾರೆ.ಸಾಕ್ಷಾತ್ ಶಾರದೆಯ ಪ್ರತಿ ರೂಪವಾದ ಜಗದ್ಗುರುಗಳ ದರ್ಶನ ದೊರಕಿದ್ದರಿಂದ ಈ ಮಕ್ಕಳಿಗೆ ಒಳಿತಾಗಲಿದೆ. ಜಗದ್ಗುರುಗಳ ಶಿಷ್ಯ ಕೋಠಿಯಲ್ಲಿ ನಾವೂ ಇದ್ದೇವೆ ಎಂಬುದೇ ಪುಣ್ಯ ವಿಶೇಷ.ಅದರ ಜೊತೆಗೆ ಇಂದು ಈ ಕಾರ್ಯಕ್ರಮದಲ್ಲಿ ಪ್ರತ್ಯಕ್ಷ ಪಾಲ್ಗೊಂಡಿದ್ದೇವೆ ಎಂಬುದು ಮತ್ತೂ ಪುಣ್ಯ ಎಂದು ಶ್ರೀ ವಿಧುಶೇಖರ ಭಾರತಿಯವರು ತಿಳಿಸಿದರು. ತಮ್ಮ ಉಪನ್ಯಾಸದಲ್ಲಿ ಅವರು ಶಂಕರ ಭಗವತ್ಪಾದರು ಇಡೀ ಜಗತ್ತಿಗೆ ಮಾಡಿದ ಉಪದೇಶ ಹೇಗೆ ಸರ್ವಕಾಲಿಕ ಎಂದು ವಿವರಿಸಿದರು. “ಕಿಂ ಸಂಪಾದ್ಯಂ ಮನುಜೈ”ಎಂಬ ಪ್ರಶ್ನೆಗೆ ವಿದ್ಯಾ ವಿಥ್ಥಂ,ಭಲಂ,ಯಶ,ಪುಣ್ಯ ಎಂಬ ಉತ್ತರ ನೀಡಿದ್ದಾರೆ. ಯೋಗ್ಯ ವಿದ್ಯೆ ಗಳಿಸಿ ನ್ಯಾಯಮಾರ್ಗದಿಂದ ಸಂಪಾದಿಸಿ, ಶರೀರ,ಮನಸ್ಸು ಮಾತಿನಲ್ಲಿ ಭಲಶಾಲಿಗಳಾಗಿ, ಯಶಸ್ಸು ಸಾಧಿಸಿ ಪುಣ್ಯ ಸಂಪಾದಿಸುವುದೇ ಮನುಷ್ಯನ ಕರ್ತವ್ಯ.ಪುಣ್ಯ ಅಂದರೆ ಭಗವತಾರಾಧನೆ ಮತ್ತು ಪರೋಪಕಾರ ಎಂದು ಶ್ರೀ ವಿಧುಶೇಖರ ಭಾರತಿ ಸ್ವಾಮಿಗಳು ತಿಳಿಸಿದರು.ರಾಮಾಯಣದ ಸುಂದರ ಖಾಂಡದಲ್ಲಿ ಆಂಜನೇಯ ಸ್ವಾಮಿಯು ಸಮುದ್ರೋಲ್ಲಂಘನ ಕಥೆ ಪ್ರತಿಯೋರ್ವರ ಬದುಕಿಗೆ ಮಾರ್ಗದರ್ಶಿ ಕಥೆಯಾಗಿದೆ. ಸೀತಾ ಮಾತೆಯ ಪತ್ತೆಯಂತಹ ಒಳ್ಳೆಯ ಉದ್ದೇಶದಿಂದ ಹೊರಟ ಆಂಜನೇಯ ಸ್ವಾಮಿಗೆ ಸಮುದ್ರೋಲ್ಲಂಘನದಲ್ಲಿ ಮೂವರು ಎದುರಾದರು. ಅದರಲ್ಲಿ ಇಬ್ಬರು ತೊಂದರೆ ಕೊಡಲೇ ಬಂದಿದ್ದರೆ ಮತ್ತೋರ್ವರು ಉಪಕಾರ ಮಾಡಲು ಬಂದಿದ್ದರು. ಆಂಜನೇಯ ಸ್ವಾಮಿ ಯುಕ್ತಿಯಿಂದ ತೊಂದರೆ ನಿವಾರಿಸಿಕೊಂಡು ಹೇಳಿದ್ದ ಕಾರ್ಯಕ್ಕಿಂತ ಹೆಚ್ಚಿನ ಸಾಧನೆಯೊಂದಿಗೆ ಹಿಂತಿರುಗಿದ. ಯಾವುದೇ ಒಳ್ಳೆಯ ಕಾರ್ಯಕ್ಕೆ ತೊಂದರೆ ಕೊಡುವರು ಹೆಚ್ಚೇ ಇರುತ್ತಾರೆ.ನಾವು ಉಪಾಯದಿಂದ ಅದನ್ನು ಪರಿಹರಿಸಿ ಕಾರ್ಯ ಸಾಧನೆ ಮಾಡಬೇಕು ಎಂದವರು ತಿಳಿಸಿದರು.
ತಮ್ಮ ಅನುಗ್ರಹ ಭಾಷಣದಲ್ಲಿ ಶ್ರೀಗಳು ಶೃಂಗೇರಿಯ ಗೂರುಪರಂಪರೆಯನ್ನು ಸ್ಮರಿಸುತ್ತಾ ಶಂಕರ ಭಗವತ್ಪಾದರು ಸನಾತನ ಧರ್ಮ ಉಳಿಸಿದಂತೇ ಈ ಪೀಠದ ಹನ್ನೆರಡನೇ ಜಗದ್ಗುರು ಶ್ರೀ ವಿದ್ಯಾರಣ್ಯರೂ ಸನಾತನ ಧರ್ಮದ ಉಳಿಯುವಿಕೆಗೆ ಸಂಕಲ್ಪಿತರಾಗಿ ಯಶಸ್ವಿ ಆಗಿದ್ದನ್ನು ಸ್ಮರಿಸಿದರು.
ಜನರಲ್ಲಿ ಐಕಮತ್ಯ, ದೇವರಲ್ಲಿ ಶ್ರದ್ಧೆ,ಆಸ್ತಿಕತೆ ಉಳಿದರೆ ದೇಶ ಉಳಿಯುತ್ತದೆ ಎಂದವರು ಹೇಳಿ ನಮ: ಶಂಕರಾಯ ಮಂತ್ರವನ್ನು ಉಪದೇಶಿಸಿ ಇದರ ನಿತ್ಯಾನುಷ್ಠಾನದಿಂದ ಶ್ರೇಯಸ್ಸು ಪ್ರಾಪ್ತಿ ಮಾಡಿಕೊಳ್ಳಲು ತಿಳಿಸಿದರು.
ಸಮಾರಂಭದಲ್ಲಿ ಶೃಂಗೇರಿ ಶಿವಗಂಗಾ ಮಠದ ಶ್ರೀ ಪುರುಷೋತ್ತಮ ಭಾರತೀ ಸ್ವಾಮಿಗಳು,ಯಡತೋರೆ ಯೋಗಾನಂದ ಮಠದ ಶ್ರೀ ಭ್ರಹ್ಮಾನಂದ ಭಾರತೀ ಸ್ವಾಮಿಗಳು,ಶಿರಸಿ ನೆಲಮಾವು ಮಠದ ಶ್ರೀ ಮಾಧವಾನಂದ ಸ್ವಾಮಿಗಳು,ತುಮಕೂರು ರಾಮಕೃಷ್ಣಾಶ್ರಮದ ಶ್ರೀ ವೀರೇಶ್ವರಾನಂದ ಸ್ವಾಮಿಗಳು,ಹಳದೀಪುರ ಮಠದ ಶ್ರೀ ವಾಮನಾಶ್ರಮ ಸ್ವಾಮಿಗಳು,ಆನೆಗುಂದಿ ಮಠದ ಶ್ರೀ ಕಾಳಹಸ್ತಾನಂದ ಸ್ವಾಮಿಗಳು,ಕರ್ಕಿ ಮಠದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಸ್ವಾಮಿಗಳು,ತುಮಕೂರಿನ ಶ್ರೀ ಪರಮಾನಂದ ಸ್ವಾಮಿಗಳು ಪಾಲ್ಗೊಂಡಿದ್ದರು. ರಾಮಕೃಷ್ಣಮಠದ ಶ್ರೀ ವೀರೇಶ್ವರಾನಂದ ಸ್ವಾಮಿಗಳು ಈ ಸಂದರ್ಭ ಉಪನ್ಯಾಸ ಮಾಡಿದರು.
ಸುವರ್ಣ ಭಾರತಿ ವರ್ಷಾಚರಣೆಯಲ್ಲಿ ಐವತ್ತು ಸಹಸ್ರ ಸಸಿ ನೆಡಲಾಗಿದೆ. ನಾಲ್ಕು ಸಾವಿರ ಶಾಲೆಯಲ್ಲಿ ಸ್ತೋತ್ರ ವೈಭವ ನಡೆದಿದೆ.ಸಂಗೀತಗಾರರು ನಾದಾಬಿವಂದನೆ ಮೂಲಕ ಪಾಲ್ಗೊಂಡಿದ್ದಾರೆ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀನಿವಾಸ್ ತಿಳಿಸಿದರು.
ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ ತಾನು ನಲವತ್ತು ವರ್ಷಗಳಿಂದ ಈ ಮಠದ ಭಕ್ತ.ಇಲ್ಲಿ ಉಪ ಮುಖ್ಯ ಮಂತ್ರಿಯಾಗಿ ಬಂದಿಲ್ಲ.ಓರ್ವ ಭಕ್ತನಾಗಿ ಬಂದಿದ್ದೇನೆ ಎಂದರು. ನುಡಿದಂತೆ ಅವರು ವೇದಿಕೆಯ ಕೆಳಗೇ ಭಕ್ತ ಸಮೂಹದಲ್ಲೇ ಕುಳಿತು ತಾವೂ ಸ್ತೋತ್ರ ಪಠಣ ನಡೆಸಿದರು. ಮಾಜೀ ಉಪಮುಖ್ಯ ಮಂತ್ರಿ ಈಶ್ವರಪ್ಪ ದಂಪತಿಗಳು,ಮಾಜೀ ಗೃಹ ಸಚಿವ ಆರಗ ಜ್ಞಾನೇಂದ್ರ, ಮಾಜೀ ಸಚಿವ ಜೀವರಾಜ್,ಶೃಂಗೇರಿಯ ಶಾಸಕ ರಾಜೇಗೌಡ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ರಾತ್ರಿ ಇಡೀ ಕಾರ್ಯಕ್ರಮ ಸಂಯೋಜನೆಗೆ ದುಡಿದಿದ್ದ ಕಾರ್ಯಕರ್ತರು ಬೆಳಕು ಮೂಡುವ ಮೊದಲೇ ಭಾರತೀತೀರ್ಥ ನಗರದಲ್ಲಿ ಚಟುವಟಿಕೆಯಲ್ಲಿ ತೊಡಗಿದ್ದರು. ಏಳೆಂಟು ನೂರು ಬಸ್ ಗಳು,ಸಹಸ್ರಾರು ವಾಹನದಲ್ಲಿ ಬಂದ ಭಕ್ತ ಸಾಗರವನ್ನು ಶಿಸ್ತು ಬದ್ದವಾಗಿ ಅವರಿಗೇ ಮೀಸಲಾಗಿದ್ದ ಸ್ಥಳಕ್ಕೆ ಕೂರಲು ಕಳಿಸಲಾಗುತ್ತಿತ್ತು. ಪ್ರತಿಯೋರ್ವರಿಗೂ ಶಾರದಾ ಪ್ರಸಾದ ಮತ್ತು ಜಗದ್ಗುರುಗಳ ಭಾವಚಿತ್ರ ಒಳಗೊಂಡ ಚೀಲ ನೀಡಲಾಗುತ್ತಿತ್ತು. ಆಗಮಿಸುವ ಸುಮಂಗಲಿಯರಿಗೆ ಮಂಗಳ ದ್ರವ್ಯ ನೀಡಿ ಸ್ವಾಗತಿಸುತ್ತಿದ್ದ ಛೇತೋಹಾರಿ ದೃಶ್ಯ ಕಾಣಿಸಿತು.ವಾಹನಗಳ ನಿಲುಗಡೆಗೇ ಅಚ್ಚುಕಟ್ಟಾದ ವ್ಯವಸ್ತೆ ಮಾಡಲಾಗಿತ್ತಾಗಿ ಎಲ್ಲೂ ಗೊಂದಲ ಆಗಲಿಲ್ಲ. ಸಹಸ್ರ ಸಂಖ್ಯೆಯ Sringeri Shivaganga Mutt ಕಾರ್ಯಕರ್ತರು ಶೃಂಗೇರಿಯ ಭಾರತೀ ಬೀದಿ ಮತ್ತು ನರಸಿಂಹವನಕ್ಕೆ ಸಾಗುವ ಮಾರ್ಗದುದ್ದಕ್ಕೂ ಕೇಸರಿ ಪಥಾಕೆ ಕಟ್ಟಿದ್ದು ಗಮನ ಸೆಳೆಯಿತು. ವೇದಿಕೆಯ ಎದುರಿನಲ್ಲಿ ಬೃಹತ್ ರಂಗವಲ್ಲಿಯ ಚಿತ್ತಾರ ಗಮನ ಸೆಳೆಯಿತು. ಭೋಜನ ನೀಡುವಲ್ಲೂ ಮಹಿಳೆಯರ ಮುದಾಳತ್ವ ಎದ್ದು ಕಾಣುವಂತಿತ್ತು.ಪೊಲೀಸರೇ ಕಾಣದೇ ಇಡೀ ಶೃಂಗೇರಿಯಲ್ಲಿ ವಾಹನ ನಿಲುಗಡೆ,ಭಕ್ತರನ್ನು ನಿರ್ಧಿಷ್ಟ ಜಾಗದಲ್ಲಿ ಕೂರಿಸುವಿಕೆ,ಊಟ ಉಪಚಾರ,ಕುಡಿವ ನೀರಿನ ಏರ್ಪಾಟು,ಶೌಚಾಲಯ ಎಲ್ಲವನ್ನೂ ಶೃಂಗೇರಿಯ ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳ ನೆರವಿನಿಂದ ಶಿಸ್ತುಬದ್ದವಾಗಿ ಸಹಸ್ರ ಸಂಖ್ಯೆಯ ಕಾರ್ಯಕರ್ತರು ನಿರ್ವಹಿಸಿ ಮೆಚ್ಚಿಗೆ ಗಳಿಸಿದರು. ಯಾವೊಂದು ಪುಟ್ಟ ಗೊಂದಲವೂ ಎಲ್ಲೂ ಕಾಣಲಿಲ್ಲ.ಈ ವ್ಯವಸ್ಥೆಯ ಅಚ್ಚುಕಟ್ಟುತನಕ್ಕೆ ಸೇರಿದ್ದ ಭಕ್ತರ ಸ್ಪಂದನವೂ ಕಾರಣವಾಯಿತು.
ಒಂದು ದಿವ್ಯಾನುಭೂತಿಯೊಂದಿಗೆ ಭಕ್ತ ಸಾಗರ ಚದುರಿತು. ನೀವು ಹೇಗೆ ಕ್ಷೇಮ ವಾಗಿ ಬಂದಿರುವಿರೋ ಹಾಗೇ ಕ್ಷೇಮವಾಗೇ ಮನೆ ತಲುಪುವುದೂ ನಮಗೆ ಮುಖ್ಯ ವಿಷಯ ಎಂಬ ಶ್ರೀ ವಿಧುಶೇಖರ ಭಾರತಿಗಳ ಮಾತನ್ನು ಜ್ಞಾಪಕದಲ್ಲಿದ್ದಂತೆ ಎಲ್ಲರೂ ಸ್ವಸ್ಥಾನದತ್ತ ಮರುಯಾನ ಆರಂಭಿಸಿದರು.
ಇನ್ನೇನು ಶೃಂಗೇರಿಯ ಜಗದ್ಗುರು ಸನ್ನಿಧಾನ ವಾರಣಾಸಿ,ಅಯೋಧ್ಯೆ,ಪ್ರಯಾಗದತ್ತ ಧರ್ಮ ವಿಜಯ ಯಾತ್ರೆ ಆರಂಭಿಸಲಿದ್ದು ವಾರಣಾಸಿಯಲ್ಲಿ ಶ್ರೀ ಅನ್ನಪೂರ್ಣೇಶ್ವರಿ ಪುನರ್ ಪ್ರತಿಷ್ಠಾ ಕುಂಬಾಬಿಶೇಕದಲ್ಲಿ ತಾವು ಪಾಲ್ಗೊಳ್ಳಲಿರುವುದಾಗಿ ಸಮಾರಂಭದಲ್ಲಿ ಪ್ರಕಟಿಸಿದರು.
Rashtrotthana Vidya Kendra ನಾನೆಂಬ ಪರಮ ಸತ್ಯದ ಅರಿವು ಹೊಂದುವುದೇ ಆಧ್ಯಾತ್ಮಿಕತೆ- ಡಾ.ಎಚ್.ಬಿ.ಮಂಜುನಾಥ್
Rashtrotthana Vidya Kendra ನಾಮ ರೂಪಾತ್ಮಕವಾದ ಈ ಶರೀರ ನಾನಲ್ಲ, ದೇಹದ ಪ್ರಾಣ ಚೇತನವಾದ ಆತ್ಮವೇ ನಾನು ಎಂಬ ಪರಮ ಸತ್ಯದ ಅರಿವನ್ನ ಹೊಂದುವುದೇ ಆಧ್ಯಾತ್ಮಿಕತೆ ಎಂದು ಹಿರಿಯ ಪತ್ರಕರ್ತ ಡಾ ಎಚ್ ಬಿ ಮಂಜುನಾಥ ಹೇಳಿದರು.
ರಾಷ್ಟ್ರೋತ್ಥಾನ ಕೇಂದ್ರದಲ್ಲಿ ರಾಷ್ಟ್ರೋತ್ಥಾನ ಸಿ ಬಿ ಎಸ್ ಇ ಶಾಲೆಗಳ ವಿದ್ಯಾರ್ಥಿಗಳಿಗಾಗಿ ಏರ್ಪಾಡಾಗಿದ್ದ ರಾಜ್ಯಮಟ್ಟದ ‘ಆಧ್ಯಾತ್ಮಿಕ ಪರ್ವ’ ಶಿಬಿರದಲ್ಲಿ ‘ಭಗವದ್ಗೀತೆ ಮತ್ತು ಆಧ್ಯಾತ್ಮಿಕತೆ’ ಎಂಬ ವಿಷಯವಾಗಿ ಉಪನ್ಯಾಸ ನೀಡುತ್ತಾ ತಿಳಿದುಕೊಳ್ಳಲು ಕ್ಲಿಷ್ಟಕರ ಎನಿಸುವ ವೇದಾಂತಗಳ ಸಾರ ಸಂಗ್ರಹವನ್ನು 18 ಅಧ್ಯಾಯಗಳಲ್ಲಿ ಏಳುನೂರು ಸರಳ ಶ್ಲೋಕಗಳ ಮೂಲಕ ಮೂಲಕ ಭಗವದ್ಗೀತೆ ಕೊಟ್ಟಿರುವುದು ಕೇವಲ ಭಾರತಕಷ್ಟೇ ಅಲ್ಲ, ಇಡೀ ಮನುಕುಲಕ್ಕಾಗಿ, ಆದ್ದರಿಂದಲೇ ಪ್ರಪಂಚದ ಬಹುತೇಕ ಭಾಷೆಗಳಿಗೆ ಭಗವದ್ಗೀತೆ ಭಾಷಾಂತರಗೊಂಡಿದೆ. ಸೇವಿಸುವ ಆಹಾರ,ನಡೆಸುವ ಚಿಂತನೆ, ಮಾಡುವ ಕಾರ್ಯ ಮುಂತಾಗಿ ಎಲ್ಲವೂ ಅರ್ಥವತ್ತಾಗಿ ನಡೆಸುವುದು ಹೇಗೆ ಎಂಬುದನ್ನು ಹೇಳಿರುವ ಭಗವದ್ಗೀತೆಯು ಪ್ರಸ್ತುತ ಮಾನವರನ್ನು ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿಗಳು ಮತ್ತು ಯುವ ಜನರನ್ನು ಕಾಡುತ್ತಿರುವ ಚಿತ್ತಚಾಂಚಲ್ಯವನ್ನು ನಿವಾರಿಸುವುದು ಹಾಗೂ ಏಗಾಗ್ರತೆಯನ್ನು ಹೊಂದುವುದು ಹೇಗೆ ಎಂಬುದನ್ನು ಭಗವದ್ಗೀತೆ ಸರಳವಾಗಿ ಹೇಳಿದೆ ಎಂಬುದನ್ನು ತತ್ಸಂಬಂಧಿ ಶ್ಲೋಕಗಳ ಮೂಲಕ ಮಂಜುನಾಥ್ ವಿವರಿಸಿದರು.
Rashtrotthana Vidya Kendra ರಾಜ್ಯದಾದ್ಯಂತದಿಂದ ರಾಷ್ಟ್ರೋತ್ಥಾನ ಸಿ ಬಿ ಎಸ್ ಇ ಶಾಲಾ ವಿದ್ಯಾರ್ಥಿಗಳು ಆಗಮಿಸಿದ್ದರು.
ಶಾಲೆಯ ಪ್ರಾಂಶುಪಾಲ ಮಂಜುನಾಥ್, ಶಶಿಧರ್, ಐಶ್ವರ್ಯಾ, ಸರಸ್ವತಿ ಬಡಾವಣೆಯ ರಾನಡೆ ಮುಂತಾದವರು ಉಪಸ್ಥಿತರಿದ್ದರು.

B.Y. Raghavendra ಉತ್ತಮ ಸಮಾಜ ನಿರ್ಮಾಣಮಾಡುವಲ್ಲಿ ಜೆಸಿಐ ಮಹತ್ತರ ಪಾತ್ರ- ಸಂಸದ ರಾಘವೇಂದ್ರ
B.Y. Raghavendra ಯುವಜನರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ ಜತೆಯಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಜೆಸಿಐ ಸಂಸ್ಥೆ ಮಹತ್ತರ ಕಾರ್ಯ ನಿರ್ವಹಿಸುತ್ತಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ಶಿವಮೊಗ್ಗ ನಗರದಲ್ಲಿ ಜೆಸಿಐ ಶಿವಮೊಗ್ಗ ಭಾವನಾ ಸಂಸ್ಥೆ ವತಿಯಿಂದ ಆಯೋಜಿಸಿದ್ದ 25ನೇ ವರ್ಷದ ಬೆಳ್ಳಿಹಬ್ಬ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿ, ಜೆಸಿಐ ಸಂಸ್ಥೆಯು ನಿರಂತರವಾಗಿ ಯುವಜನರಿಗೆ ತರಬೇತಿ ನೀಡುವ ಕೆಲಸ ಮಾಡುತ್ತಿದ್ದು, ಯುವನಾಯಕರನ್ನು ಸೃಷ್ಟಿಸುತ್ತಿದೆ ಎಂದು ತಿಳಿಸಿದರು.
B.Y. Raghavendra ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ಜೆಸಿಐ ಸಂಸ್ಥೆಯಲ್ಲಿ ನಾನು ಕೂಡ ಅಧ್ಯಕ್ಷನಾಗಿ ಜವಾಬ್ದಾರಿ ನಿರ್ವಹಿಸಿದ್ದು, ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ಕಲಿತ ಶಿಸ್ತು, ಉತ್ತಮ ಸಂವಹನ ಕೌಶಲ್ಯ, ನಾಯಕತ್ವ ಗುಣಗಳನ್ನು ಕಲಿತಿದ್ದೇನೆ. ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯುತ್ತಿದ್ದೇನೆ ಎಂದು ಹೇಳಿದರು.
ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಜೆಸಿಐ ಸಂಸ್ಥೆಯ ಉದ್ದೇಶಗಳು ಎಲ್ಲ ಯುವಜನರನ್ನು ತಲುಪಬೇಕು. ಇನ್ನಷ್ಟು ಸಮಾಜಮುಖಿ ಕಾರ್ಯಗಳನ್ನು ಸಂಸ್ಥೆ ನಡೆಸುವಂತಾಗಲಿ, ಅದಕ್ಕೆ ಅವಶ್ಯವಿರುವ ಸಹಕಾರ ನೀಡುತ್ತೇನೆ ಎಂದು ತಿಳಿಸಿದರು.
ಜೆಸಿಐ ಭಾವನಾದ 2024ರ ಅಧ್ಯಕ್ಷೆ ಅನಿಶಾ ಕಾತರಕಿ ಅಧ್ಯಕ್ಷತೆಯಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ನಡೆಯಿತು. ಅನಿಶಾ ಕಾತರಕಿ ಅವರು ನ್ಯಾಷನಲ್ ಕೋಆರ್ಡಿನೇಟರ್ ಸಿಎಸ್‌ಆರ್ ಆಗಿ ನ್ಯಾಷನಲ್ ಗವರ್ನಿಂಗ್ ಬೋರ್ಡ್ಗೆ ಆಯ್ಕೆಯಾಗಿರುವುದಕ್ಕೆ ಅಭಿನಂದಿಸಲಾಯಿತು. ಅಧ್ಯಕ್ಷೆಯಾಗಿದ್ದ ಅವಧಿಯಲ್ಲಿ ಉತ್ತಮ ಸೇವಾ ಕಾರ್ಯ ಹಾಗೂ ಸಮಾಜಮುಖಿ ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಯಿತು. ಎಲ್ಲರ ಪ್ರೋತ್ಸಾಹದಿಂದ ಉತ್ತಮ ಕೆಲಸ ಮಾಡಲು ಸಾಧ್ಯವಾಯಿತು ಎಂದು ಅನಿಶಾ ಕಾತರಕಿ ತಿಳಿಸಿದರು.
ಜೆಸಿಐ ಸಂಸ್ಥೆ ವಲಯ 24ರ ವಲಯಾಧ್ಯಕ್ಷ ಗೌರೀಶ್ ಭಾರ್ಗವ್.ಕೆ.ವಿ., ನಿಕಟಪೂರ್ವ ವಲಯಾಧ್ಯಕ್ಷ ಚನ್ನವೀರೇಶ್ ಹಾವಣಗಿ, ಜೆಸಿಐ ಶಿವಮೊಗ್ಗ ಭಾವನಾ ಸ್ಥಾಪಕ ಅಧ್ಯಕ್ಷೆ ಅಂಜಲಿ ಕಾತರಕಿ, ಪೂರ್ವಾಧ್ಯಕ್ಷೆ ಪುಷ್ಪಾ ಶೆಟ್ಟಿ, ಸುರೇಖಾ ಮುರಳೀಧರ್, ರತ್ನಲಕ್ಷ್ಮೀ ನಾರಾಯಣ, ಸುಗುಣಾ ಸತೀಶ್, ವಲಯ 24ರ ಎಲ್ಲ ಪೂರ್ವ ವಲಯಾಧ್ಯಕ್ಷರು, ರಾಷ್ಟ್ರೀಯ ಮತ್ತು ವಲಯಾಧಿಕಾರಿಗಳು, ಹಿರಿಯ ಜೆಸಿಗಳು ಮತ್ತಿತರರು ಉಪಸ್ಥಿತರಿದ್ದರು.
Primary Agricultural Co-operative Society ಹೆಚ್ಚಿನ ಮತಗಳಿಸಿ ಬಿ.ಬೀರನಹಳ್ಳಿ ಸಹಕಾರ ಸಂಘಕ್ಕೆ ಆಯ್ಕೆಯಾದ ಜಯಶೇಖರ್ ಗೆ ಸಂಸದರಿಂದ ಅಭಿನಂದನೆ
Primary Agricultural Co-operative Society ಶಿವಮೊಗ್ಗ ತಾಲ್ಲೂಕಿನ ಬಿ.ಬೀರನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ನಿರ್ದೇಶಕರ ಚುನಾವಣೆಯಲ್ಲಿ ಅತ್ಯಂತ ಹೆಚ್ಚಿನ ಮತದಿಂದ ಆಯ್ಕೆಯಾದ ಕೆ.ಎನ್.ಜಯಶೇಖರ್ (ಅಜಯ್),ರವರಿಗೆ ಜನಪ್ರಿಯ ಸಂಸದರಾದ ಬಿ.ವೈ.ರಾಘವೇಂದ್ರರವರು ಸಿಹಿ ತಿನಿಸಿ ಅಭಿನಂದಿಸಿದರು ಸಂದರ್ಭದಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷರಾದ ಸಿಂಗೇನಹಳ್ಳ ಸುರೇಶ್, ಶಿವು, ಗಣೇಶ್, ನಿತಿನ್, ಅರಬೇನವಳ್ಳಿ ಜಗದೀಶ್, ಅಂಜನಪ್ಪ, ಉಮಾಪತಿ ರಂಗಪ್ಪ ಕಾಟೇಕೆರೆ ಉಪಸ್ಥಿತರಿದ್ದರು.
Primary Agricultural Co-operative Society ಶಿವಮೊಗ್ಗ ತಾಲ್ಲೂಕಿನ ಬಿ.ಬೀರನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪ್ರಕಾಶ್ ಬಿ.ಎಸ್. ಉಪಾಧ್ಯಕ್ಷರಾಗಿ ಗೀತಾ ವಸಂತಕುಮಾರ್ ಅವಿರೋದ ಆಯ್ಕೆ, ಸಂದರ್ಭದಲ್ಲಿ ನಿರ್ದೇಶಕರು, ಬಿಜೆಪಿ ಮುಖಂಡರಾದ ಕೆ.ಎನ್.ಜಯಶೇಖರ್ (ಅಜಯ್), ಚನ್ನಬಸಪ್ಪ(ಮನು) ಉಪಸ್ಥಿತರಿದ್ದರು.
Government First Class College ಶಿಕಾರಿಪುರ ಸರ್ಕಾರಿ ಕಾಲೇಜಿನಲ್ಲಿ ಯುವನಿಧಿ ನೋಂದಣಿ ಅಭಿಯಾನ
Government First Class College ಶಿಕಾರಿಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ 2023-24 ಹಾಗೂ 2024 ನೇ ಸಾಲಿನಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗಾಗಿ ಯುವನಿಧಿ ವಿಶೇಷ ನೋಂದಣಿ ಅಭಿಯಾನವನ್ನು ಕೈಗೊಂಡಿದ್ದು, ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಜ.6 ರಿಂದ ಜ.20 ವರೆಗೆ ಕಾಲೇಜಿನಲ್ಲಿ ಸಹಾಯಕೇಂದ್ರ ಸ್ಥಾಪಿಸಲಾಗಿದೆ.
ಯುವನಿಧಿ ಅರ್ಜಿ ಸಲ್ಲಿಸುವ ಯುವಕ/ ಯುವತಿಯರು 2022, 2023 ಹಾಗೂ 2024 ರಲ್ಲಿ ಪದವಿ/ ಸ್ನಾತಕೋತ್ತರ ಪದವಿ/ ಡಿಪ್ಲೋಮಾದಲ್ಲಿ ಉತ್ತೀರ್ಣರಾಗಿರಬೇಕು. ಹಾಗೂ ಕನಿಷ್ಟ 6 ತಿಂಗಳ ಅವಧಿಯವರೆಗೆ ಸರ್ಕಾರಿ/ಖಾಸಗಿ ಉದ್ಯೋಗ ಹೊಂದಿರಬಾರದು. ಉನ್ನತ ವಿದ್ಯಾಭ್ಯಾಸ ಮುಂದುವರಿಸಿರಬಾರದು, ಕರ್ನಾಟಕದಲ್ಲಿ ವಾಸವಿರಬೇಕು ಮತ್ತು ಕನಿಷ್ಟ 6 ವರ್ಷಗಳ ವರೆಗೆ ಪದವಿ/ಸ್ನಾತಕೋತ್ತರ ಪದವಿ/ಡಿಪ್ಲೋಮಾದವರೆಗೆ ಅಧ್ಯಯನ ಮಾಡಿರಬೇಕು ಎಂಬ ಅರ್ಹತೆಗಳು ಒಳಗೊಂಡಿದೆ.
Government First Class College ಇವೆಲ್ಲಾ ಅರ್ಹತೆ ಹೊಂದಿರುವ ಯುವಕ/ಯುವತಿಯರು ಕಾಲೇಜಿನ ಪ್ಲೇಸ್‌ಮೆಂಟ್ ಅಧಿಕಾರಿ, ಎಲ್ಲಾ ವಿಭಾಗದ ಮುಖ್ಯಸ್ಥರು, ಸ್ಥಳೀಯ ಸೈಬರ್ ಕೇಂದ್ರಗಳು, ಸೇವಾಸಿಂಧು ಪೋರ್ಟಲ್ ಹಾಗೂ ತಮ್ಮ ಮೊಬೈಲ್ ನಲ್ಲಿ ನೊಂದಣಿ ಮಾಡಿಕೊಳ್ಳಬಹುದು.
ನೊಂದಾಣಿ ಎಸ್‌ಎಸ್‌ಎಲ್‌ಸಿ/ಪಿಯುಸಿ/ಪದವಿ/ಸ್ನಾತಕೋತ್ತರ ಪದವಿ/ ಡಿಪ್ಲೋಮ ಪ್ರಮಾಣ ಪತ್ರ ಹಾಗೂ ಪ್ರತಿ ಮಾಹಿಗೆ ದಿ.1 ರಿಂದ 25 ರೊಳಗೆ ಮಾಸಿಕ ಸ್ವಯಂ ಫೋಷಣೆ ನೀಡುವುದು ಕಡ್ಡಾಯವಾಗಿದೆ ಎಂದು ಶಿಕಾರಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.
Klive Special Article ನಂದನ್ “ಗೆ ನುಡಿ ನಮನ
Klive Special Article ನಮ್ಮೆಲ್ಲರ ಪ್ರೀತಿಯ ನಂದನ್ ಇನ್ನಿಲ್ಲ.
ಬರೆಯಲು ಬಹಳ ದುಃಖವಾಗಿದೆ.
ನಂದನ್ …
“ಶಿವಮೊಗ್ಗ ನಂದನ್” ಆಗುವ ಮುಂಚಿನಿಂದಲೂ
ನನಗೆ ಪರಿಚಿತರು. ಆತ್ಮೀಯರು.
ಶಿವಮೊಗ್ಗದ ಗಿಡಮರಗಳ ಉಳಿವಿನ ಬಗ್ಗೆ
ಹೋರಾಟ ಮಾಡಿದವರಲ್ಲಿ
ನಂದನ್ ಮುಂಚೂಣಿಗ.
ನಗರದಲ್ಲಿ ರಸ್ತೆ ಅಗಲೀಕರಣದ ಬಗ್ಗೆ ಸಾಲುಮರಕ್ಕೆ ಆಡಳಿತವು ಕೊಡಲಿ ಬೀಸಿ, ಜೆಸಿಬಿ ತಂದಾಗ ಆತ್ಮಹತ್ಯೆ ಅಂತಹ
ಪ್ರತಿಭಟನೆಗೆ ನಿಂತವರು.
ಪರಿಸರ ಪ್ರೀತಯ ಮುಂದೆ ಸರ್ಕಾರಿ ಸಿಬ್ಬಂದಿ ಸೋತು ಹಿಂದಡಿಯಿಟ್ಟ ಪ್ರಸಂಗಗಳಿವೆ.
ಶಿವಮೊಗ್ಗದಲ್ಲಿ ಮರಕಡಿತಲೆ ಅಂದರೆ
ನಂದನ್ ಮಬ ಮನುಷ್ಯ ಬಂದಾನು ಜೋಪಾನ ಎಂಬ
ಒಳದನಿ ಸರ್ಕಾರಿ ಸಿಬ್ಬಂದಿಗೆ ಹೇಳುತ್ತಿತ್ತು.
ನಂದನ್, ತುಂಬಾ ಚಂದದ ಚಿತ್ರಗಳನ್ನ ಅದರಲ್ಲೂ ಸುದ್ದಿ ಹಿನ್ನೆಲೆಯ ಫೋಟೋಗಳನ್ನ ಅಷ್ಟೇ ತಾಜಾತನದಿಂದ ತೆಗೆಯುವ ನಿಷ್ಣಾತ.
ಮಾತುಕತೆ ಮೃದು.
Klive Special Article ಭೇಟಿಯಾದರೆ ಸಾಕು ಮಾಧ್ಯಮ ,ಸುದ್ದಿ ಫೋಟೋಜನಿಕ್ ಎಲ್ಲದರ ಬಗ್ಗೆ ಮಾತಾಡುತ್ತಿದ್ದರು.
ತಮ್ಮ ಅಮೂಲ್ಯ ಅನುಭವಗಳನ್ನ ಹಂಚಿಕೊಳ್ಳುತ್ತಿದ್ದರು.
ನನಗೆ ಭೇಟಿಯಾದಾಗಲೆಲ್ಲಾ ಹೊಸ ಅನುಭವಗಳ ನೆನಪಿನ ಬುತ್ತಿ ಹಂಚಿಕೊಳ್ಳುತ್ತಿದ್ದರು.
ಕೆ ಲೈವ್ ಗೆ ಅವರ ವಿಶೇಷ ಮಾತುಕತೆಗೆ ಬನ್ನಿ ಎಂದು ಹೇಳೀಹೇಲಿ ಸೋತಿದ್ದೆ.
ಯಾಕೋ ಅವರು ಮನಸ್ಸು ಮಾಡಲಿಲ್ಲ.
ಇತ್ತೀಚೆಗೆ ಅಂತರ್ಮುಖಿಯಾಗಿ ಕಾಣುತ್ತಿದ್ದರು .
ಸ್ನೇಹಜೀವಿ.
ನಾನು ಭದ್ರಾವತಿ ಆಕಾಶವಾಣಿಯಲ್ಲಿ ಸೇವೆಯಲ್ಲಿದ್ದಾಗ ಯುವವಾಣಿ ಕಾರ್ಯಕ್ರಮದಲ್ಲಿ
ಯುವ ಛಾಯಾಚಿತ್ರಗ್ರಾಹಕ ಎಂದು ಸಂದರ್ಶಿಸಿದ್ದೆ.
ಅಂದಿನಿಂದ ಅವರು ನನಗೆ ಆತ್ಮೀಯರೇ ಆಗಿಬಿಟ್ಟಿದ್ದರು.
ಸುದ್ದಿ ಫೋಟೋ ಬೇಕೆಂದರೆ ತಕ್ಷಣ ಕಳಿಸುತ್ತಿದ್ದರು.
ನಂದನ್…ನೀವೀಗ ಇಲ್ಲ. ಒಂದು ಶೂನ್ಯ ಸ್ಪಷ್ಟಿಯಾಗಿದೆ.
ಆದರೆ ನೀವು ತೆಗೆದ ಸುದ್ದಿ ಫೋಟೋಗಳು ನಿಮ್ಮ ಬಗ್ಗೆ ಇನ್ನುಮುಂದೆ ಮಾತಾಡುತ್ತವೆ.
ನಿಮ್ಮ ಆತ್ಮಕ್ಕೆ
ಚಿರಶಾಂತಿ ಲಭಿಸಲಿ.
ನಮನ.
ಡಾ. ಸುಧೀಂದ್ರ ಚನ್ನಗಿರಿ
ಪ್ರಧಾನ ಸಂಪಾದಕರು ಕೆ ಲೈವ್ ನ್ಯೂಸ್ ಶಿವಮೊಗ್ಗ
B.Y. Raghavendra ಬೆಜ್ಜುವಳ್ಳಿಯಲ್ಲಿ ಸಂಸದರಿಂದ ₹10 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ
B.Y. Raghavendra ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿ – ಹಿರೇಕೆರೂರು SH-148 ರಲ್ಲಿ ಹಾಗೂ ಕವಿಶೈಲ – ಆಯನೂರು – ಮಲ್ಲೇನಹಳ್ಳಿ ಸರಪಳಿ 19.60 ಕಿ.ಮೀ ಯಿಂದ 28.40 ಕಿ.ಮೀ ವರೆಗೆ ಹಾಗೂ ಸರಪಳಿ 38.00 ಕಿ.ಮೀ ಯಿಂದ 43.00 ಕಿ.ಮೀ ವರೆಗೆ ಹಾಗೂ ಹೆದ್ದೂರು – ಮಹಿಷಿ ನಡುವಿನ ಅಯ್ದ ಭಾಗಗಳಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ಸುಮಾರು ರೂ. 10.00 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಬೆಜ್ಜವಳ್ಳಿಯಲ್ಲಿ ಚಾಲನೆ ಕೊಡಲಾಯಿತು.
B.Y. Raghavendra ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಆರಗ ಜ್ಞಾನೇಂದ್ರ ಅವರು, DCC ಬ್ಯಾಂಕ್ ಅಧ್ಯಕ್ಷರಾದ ಶ್ರೀ ಮಂಜುನಾಥ್ ಗೌಡ ಅವರು, ಬಿಜೆಪಿ ತೀರ್ಥಹಳ್ಳಿ ತಾಲ್ಲೂಕು ಅಧ್ಯಕ್ಷರಾದ ಶ್ರೀ ನವೀನ್ ಹೆದ್ದೂರು ಅವರು ಸೇರಿದಂತೆ ಮಂಡಲದ ಅನೇಕ ಹಿರಿಯರು, ಮುಖಂಡರು ಹಾಗೂ ಗಣ್ಯರು ಉಪಸ್ಥಿತರಿದ್ದರು
Breaking News ಶಿವಮೊಗ್ಗ “ನಂದನ್” ಇನ್ನಿಲ್ಲ
Breaking News ಖ್ಯಾತ ಫೋಟೋ ಜರ್ನಲಿಸ್ಟ್ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಶಿವಮೊಗ್ಗ ನಂದನ್ (57ವರ್ಷ ) ಹೃದಯಾಘಾತದಿಂದ ನಿಧನರಾಗಿದ್ದಾರೆ.ರೈಲ್ವೇ ನಿಲ್ದಾಣದ (ಬ್ಲಡ್ ಬ್ಯಾಂಕ್ ಬಳಿ) ಬಳಿ ಇರುವ ಅವರ ಮನೆಯಲ್ಲಿ ಪಾರ್ಥಿವ ಶರೀರದ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
Public TV ಪಬ್ಲಿಕ್ ಟಿವಿ ಜಿಲ್ಲಾ ವರದಿಗಾರ ಶಶಿಧರ್ ನಿಧನ
ಶಿವಮೊಗ್ಗ ಜಿಲ್ಲೆಯ ಪಬ್ಲಿಕ್ ಟಿವಿ ಜಿಲ್ಲಾ ವರದಿಗಾರರಾದ ಶಶಿಧರ್ ಅನಾರೋಗ್ಯದಿಂದ (39) ಜನವರಿ 11ರಂದು ನಿಧನರಾಗಿದ್ದಾರೆ.
ಪಬ್ಲಿಕ್ ಟಿವಿಯ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಸುಮಾರು 6 ವರ್ಷದಿಂದ ಕೆಲಸ ಮಾಡುತ್ತಿದ್ದ ಶಶಿಧರ್ ಈ ಹಿಂದೆ 8 ವರ್ಷಗಳ ಕಾಲ ಚಾಮರಾಜ ನಗರ ಜಿಲ್ಲೆಯಲ್ಲಿ ಪಬ್ಲಿಕ್ ಟಿ.ವಿ. ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. ಬಿಜಾಪುರ ಜಿಲ್ಲೆಯಲ್ಲಿ ಈ ಟಿವಿ ವರದಿಗಾರರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು.
Public TV ಮಿತ ಭಾಷಿಯಾಗಿದ್ದ ಶಶಿಧರ್ ಎಲ್ಲರೊಂದಿಗೆ ಸ್ನೇಹದಿಂದ ಇರುತ್ತಿದ್ದ ವ್ಯಕ್ತಿತ್ವದವರಾಗಿದ್ದರು. ಕಡೂರು ಬಳಿಯ ಎಸ್. ಕಲ್ಲಳ್ಳಿ ಗ್ರಾಮದವರು.
ಇವರ ನಿಧನದಿಂದಾಗಿ ರಾಜ್ಯದ ಪತ್ರಿಕೋದ್ಯಮಕ್ಕೆ ದೊಡ್ಡ ನಷ್ಟವಾಗಿದೆ.
ಶಶಿಧರ್ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಕೆ.ವಿ. ಶಿವಕುಮಾರ್, ರಾಜ್ಯ ಸಮಿತಿ ಸದಸ್ಯ ಎನ್. ರವಿಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಟಿ. ಅರುಣ್ ಹಾಗೂ ಸಂಘದ ಪದಾಧಿಕಾರಿಗಳು, ಸದಸ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.
